title
stringlengths
1
95
url
stringlengths
31
125
text
stringlengths
0
216k
ಶಿವರಾಮ ಕಾರಂತ
https://kn.wikipedia.org/wiki/ಶಿವರಾಮ_ಕಾರಂತ
thumb|right|200px|ಗೊಂಡಾರಣ್ಯ thumb|right|200px|ಚೋಮನ ದುಡಿ ಕೋಟಾ ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.http://www.thehindu.com/thehindu/mag/2002/10/13/storie/2002101300330300.htm ಜೀವನ ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು ೪೨೭ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು ೪೭. ತಮ್ಮ ೯೬ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು. ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೇ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ. ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (೧೯೩೧) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು. ಪರಿಸರ ಹೋರಾಟ ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು. ಸಾಲಿಗ್ರಾಮದಲ್ಲಿ ಸ್ಮಾರಕ ಡಾ. ಕಾರಂತರ ಹುಟ್ಟೂರಾದ ಸಾಲಿಗ್ರಾಮದಲ್ಲಿ (ಉಡುಪಿ ಜಿಲ್ಲೆ), ಕಾರಂತ ಸ್ಮೃತಿಚಿತ್ರ ಶಾಲೆ ಎಂಬ ಸುಂದರ ಬಹುಮಹಡಿ ಕಟ್ಟಡದಲ್ಲಿ, ಕಾರಂತರ ಕುರಿತಾದ ಹಲವಾರು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಅವರ ಕಾದಂಬರಿಗಳ ಆಶಯದ ದೊಡ್ಡ ದೊಡ್ಡ ಭಿತ್ತಿ ಚಿತ್ರಗಳು, ಯಕ್ಷಗಾನದ ದಿರಿಸುಗಳು, ಕಾದಂಬರಿಗಳ ಹಳೆಯ ಪ್ರತಿಗಳು, ಕಾರಂತರು ಬರೆದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ ಮತ್ತಿತರ ವಸ್ತುಗಳನ್ನೊಂಡ ಸುಂದರ ವಸ್ತು ಸಂಗ್ರಹಾಲಯ ಇದು. ಸಾಲಿಗ್ರಾಮದ ಪೇಟೆಯಲ್ಲಿ ಹೆದ್ದಾರಿಯ ಬದಿಯಲ್ಲೇ ಇರುವ ಈ ಕಟ್ಟಡವನ್ನು ಕಂಡರೆ, ಕಾರಂತರ ಬಗ್ಗೆ ಅಭಿಮಾನ ಉಕ್ಕುತ್ತದೆ. ಮಾಲಿನಿಮಲ್ಯ ಅವರು ನೋಡಿಕೊಳ್ಳುತ್ತಿರುವ ಈ ಸಂಗ್ರಹಾಲಯವನ್ನು ನೋಡಲು ಸದಾ ಅವಕಾಶವಿದೆ. ಬಾಲ್ಯ,ವಿದ್ಯಾಭ್ಯಾಸ ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿಯನ್ನು ಪಡೆದ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ೧೯೦೨ರ ಅಕ್ಟೋಬರ್ ೧೦ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶೇಷ ಕಾರಂತರು ,ತಾಯಿ ಲಕ್ಶ್ಮೀ ಕಾರಂತರು. ೯ ಮಕ್ಕಳ ಕುಟುಂಬದಲ್ಲಿ ಶಿವರಾಮ ಕಾರಂತರು ೪ನೇಯ ಮಗ. ಶಿವರಾಮ ಕಾರಂತರ ಅಣ್ಣ ಮದರಾಸ ಸರಕಾರದಲ್ಲಿ ಸಚಿವರಾಗಿದ್ದರು. ಇನ್ನೊಬ್ಬ ಅಣ್ಣ ವಾಸುದೇವ ಕಾರಂತರು ಲೇಖಕರೂ ,ಆದ್ಯಾತ್ಮ ವಿಷಯಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದಾರೆ. ಶೇಷ ಕಾರಂತರು ಶಾಲಾ ಶಿಕ್ಷಕರಾಗಿದ್ದು ದೊಡ್ದ ಕುಟುಂಬವನ್ನು ಸಾಕಲು ಅಸಾಧ್ಯವಾದಾಗ ಕೆಲಸ ಬಿಟ್ಟು ಜವಳಿ ಅಂಗಡಿ ಆರಂಭಿಸಿದರು.ಇಂಗ್ಲೀಷರನ್ನು ಕಂಡರೆ ಅಸಹ್ಯಪಡುತಿದ್ದ ಕಾಲದಲ್ಲಿ ಶೇಷರು ಅವರ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸಿದರು. ಕುಂದಾಪುರದ ಶಾಲೆಯಲ್ಲಿ ೧೯೨೦ ರಲ್ಲಿ ಶಿವರಾಮ ಕಾರಂತರು ತಮ್ಮ ಎಸ್.ಎಸ್.ಎಲ್.ಸಿ ಪರೀಕ್ಶೆಯನ್ನು ಬರೆದು ಮುಗಿಸಿದರು. ತಮ್ಮ ಶಾಲೆಯಲ್ಲಿ ರಂಗರಾಯರು ಕಾರಂತರ ಮೊದಲ ಗುರುಗಳಾಗಿ ಕಾರಂತರಿಗೆ ಬೆಂಬಲ ನೀಡಿದರು. ಮುದ್ದಣ ಕವಿಯ ಗುರುವಾಗಿದ್ದ ಮಳಲಿ ಸುಬ್ಬರಾಯರು ಸಹ ಶಿವರಾಮ ಕಾರಂತರಿಗೆ ಗುರುವಾಗಿದ್ದರು. ಮಳಲಿ ಸುಬ್ಬರಾಯರು ಮೂಲತ: ಯಕ್ಷಗಾನ ರಚನೆ ಮಾಡಬಲ್ಲವರಾಗಿದ್ದು ಯಕ್ಷಗಾನದ ಬಗ್ಗೆ ಶಿವರಾಮರಿಗೆ ಆಸಕ್ತಿ ಮೂಡಲು ಮುಖ್ಯ ಕಾರಣರಾದರು. ಶಿವರಾಮ ಕಾರಂತರಿಗೆ ಪರಿಸರವೆಂದರೆ ಬಹಳ ಪ್ರೀತಿ. ಅವರು ಬಾಲ್ಯದಲ್ಲಿ ಕೆರೆಗಳನ್ನು ಏರಿ,ಸಮುದ್ರತೀರ,ಮರದ ನೆರಳಿನ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು. ಆಧುನಿಕ ವಿದ್ಯಾಭ್ಯಾಸ ಕೇವಲ ಹೊಟ್ಟೆಪಾಡಿಗಾಗಿ ಎನ್ನುವುದು ಅವರ ಅಭಿಪ್ರಾಯ. ನಿಜವಾದ ವ್ಯಕ್ತಿತ್ವದ ವಿಕಸನವಾದರೆ ಅದೇ ನಿಜವಾದ ಶಿಕ್ಷಣವೆನ್ನುವುದು ಅವರ ಅಭಿಪ್ರಾಯವಾಗಿತ್ತು. ೧೯೨೦ರಲ್ಲಿ ಗಾಂಧೀಜಿಯವರು ಸ್ವತಂತ್ರ ಹೋರಾಟದಲ್ಲಿ ಶಾಲಾ ಮಕ್ಕಳು ಬಾಗವಹಿಸಬೇಕೆಂದು ಕರೆಕೊಟ್ಟಾಗ ಕಾರಂತರೂ ಚಳವಳಿಯಲ್ಲಿ ಭಾಗವಹಿಸಿದ್ದರು. ಕಾರಂತರು ಅಪ್ಪ ಹಾಕಿದ ಆಲದ ಮರಕ್ಕೆ ಎಂದೂ ಜೋತು ಬಿದ್ದವರಲ್ಲ. ಅವರ ಇಡೀ ಬದುಕು ಹಲವಾರು ಪ್ರಯೋಗಗಳಿಂದ ಕೂಡಿದೆ. ಅನುಭವ ಬೆಳೆದಂತೆಲ್ಲ ಅವರು ಹಲವು ಬಾರಿ ತಮ್ಮ ಹಿಂದಿನ ನಿಲುವುಗಳನ್ನು ಬದಲಾಯಿಸಿಕೊಂಡಿದ್ದಾರೆ. ಮನುಷ್ಯ ಎಷ್ಟು ಕಲಿತರೂ ಕಲಿಯಬೇಕಾದದ್ದೇ ಬಹಳ ಎಂದು ನಂಬಿರುವ ಕಾರಂತರಿಗೆ ಈ ಬದುಕೇ ಒಂದು ಪಾಠಶಾಲೆಯಾಗಿದೆ. ಚಿಕ್ಕಂದಿನಲ್ಲೇ ಶಾಲೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಅವರು ಮುಂದೆ ಎಲ್ಲ ಜ್ಞಾನಶಾಖೆಗಳಲ್ಲೂ ಆಸಕ್ತಿ ಬೆಳೆಸಿಕೊಂಡದ್ದು, ಸ್ವಂತವಾಗಿ ಕಲಿತದ್ದು, ಕಲಿತದ್ದನ್ನು ಸರಳವಾದ ಕನ್ನಡದಲ್ಲಿ ಮಾತನಾಡಿದ್ದು, ಬರೆದದ್ದು ಈಗ ದಾಖಲೆಯಾಗಿದೆ. ಸಹಜವಾಗಿಯೇ ಅವರಿಗೆ ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟುಗಳು, ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳು ಲಭ್ಯವಾಗಿವೆ. ಅಸಂಖ್ಯ ಗೋಷ್ಠಿಗಳ ,ಸಮ್ಮೇಳನಗಳ ಅಧ್ಯಕ್ಷ ಪಟ್ಟಗಳು, ಸನ್ಮಾನಗಳು ಕಾರಂತರನ್ನು ಹುಡುಕಿಕೊಂಡು ಬಂದೆವೆ. ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಸರ್ವಾಧಿಕಾರವನ್ನು ಧಿಕ್ಕರಿಸಿ ಕಾರಂತರು ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ವಾಪಸು ಮಾಡಿದ್ದು ಕೂಡ ಇತಿಹಾಸದಲ್ಲಿ ಸೇರಿಹೋಗಿದೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕøತಿ ಹೀಗೆ ಪಟ್ಟಿ ಬೆಳೆಯುತ್ತದೆ. ಕಾರಂತರು ‘ ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’ಗಳನ್ನು ಬರೆದಿದ್ದಾರೆ. ಸಿರಿಗನ್ನಡ ಅರ್ಥಕೋಶವನ್ನು ತಯಾರಿಸಿದ್ದಾರೆ. ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಸ್ವತಃ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಶಿಲ್ಪಕಲೆ, ಚಿತ್ರಕಲೆ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ, ಸ್ವತಃ ಚಿತ್ರಗಳನ್ನು ಬರೆದಿದ್ದಾರೆ. ಚಲನಚಿತ್ರ ನಿರ್ಮಿಸಿದ್ದಾರೆ. ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಕೃತಿಗಳು ಕವನ ಸಂಕಲನಗಳು ರಾಷ್ಟ್ರಗೀತ ಸುಧಾಕರ ಸೀಳ್ಗವನಗಳು ಕಾದಂಬರಿಗಳು ಅದೇ ಊರು, ಅದೆ ಮರ ಅಳಿದ ಮೇಲೆ ಅಂಟಿದ ಅಪರಂಜಿ ಆಳ, ನಿರಾಳ ಇದ್ದರೂ ಚಿಂತೆ ಇನ್ನೊಂದೇ ದಾರಿ ಇಳೆಯೆಂಬ ಉಕ್ಕಿದ ನೊರೆ ಒಡಹುಟ್ಟಿದವರು ಒಂಟಿ ದನಿ ಔದಾರ್ಯದ ಉರುಳಲ್ಲಿ ಕಣ್ಣಿದ್ದೂ ಕಾಣರು ಕನ್ನಡಿಯಲ್ಲಿ ಕಂಡಾತ ಕನ್ಯಾಬಲಿ ಕರುಳಿನ ಕರೆ ಕೇವಲ ಮನುಷ್ಯರು ಗೆದ್ದ ದೊಡ್ಡಸ್ತಿಕೆ ಗೊಂಡಾರಣ್ಯ ಜಗದೋದ್ಧಾರ ನಾ ಜಾರುವ ದಾರಿಯಲ್ಲಿ ದೇವದೂತರು ಧರ್ಮರಾಯನ ಸಂಸಾರ ನಷ್ಟ ದಿಗ್ಗಜಗಳು ನಂಬಿದವರ ನಾಕ, ನರಕ ನಾವು ಕಟ್ಟಿದ ಸ್ವರ್ಗ ನಿರ್ಭಾಗ್ಯ ಜನ್ಮ ಬತ್ತದ ತೊರೆ ಭೂತ ಮರಳಿ ಮಣ್ಣಿಗೆ ಮುಗಿದ ಯುದ್ಧ ಮೂಜನ್ಮ ಮೈ ಮನಗಳ ಸುಳಿಯಲ್ಲಿ ಮೊಗ ಪಡೆದ ಮನ ವಿಚಿತ್ರ ಕೂಟ ಶನೀಶ್ವರನ ನೆರಳಿನಲ್ಲಿ ಸನ್ಯಾಸಿಯ ಬದುಕು ಸಮೀಕ್ಷೆ ಸರಸಮ್ಮನ ಸಮಾಧಿ ಸ್ವಪ್ನದ ಹೊಳೆ ಹೆತ್ತಳಾ ತಾಯಿ ಚಲನಚಿತ್ರವಾಗಿರುವ ಕಾದಂಬರಿಗಳು ಕುಡಿಯರ ಕೂಸು (ಚಲನಚಿತ್ರವಾಗಿದೆ) ಚಿಗುರಿದ ಕನಸು(ಚಲನಚಿತ್ರವಾಗಿದೆ) ಚೋಮನ ದುಡಿ(ಚಲನಚಿತ್ರವಾಗಿದೆ) ಬೆಟ್ಟದ ಜೀವ(ಚಲನಚಿತ್ರವಾಗಿದೆ) ಮೂಕಜ್ಜಿಯ ಕನಸುಗಳುಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ನಾಟಕ ಅವಳಿ ನಾಟಕಗಳು ಏಕಾಂಕ ನಾಟಕಗಳು ಐದು ನಾಟಕಗಳು ಕಟ್ಟೆ ಪುರಾಣ ಕಠಾರಿ ಭೈರವ ಕರ್ಣಾರ್ಜುನ ಕೀಚಕ ಸೈರಂಧ್ರಿ ಗರ್ಭಗುಡಿ ಗೀತ ನಾಟಕಗಳು ಜಂಬದ ಜಾನಕಿ ಜ್ಯೂಲಿಯಸ್ ಸೀಸರ್ ಡುಮಿಂಗೊ ದೃಷ್ಟಿ ಸಂಗಮ ನವೀನ ನಾಟಕಗಳು ನಾರದ ಗರ್ವಭಂಗ ಬಿತ್ತಿದ ಬೆಳೆ ಬೆವರಿಗೆ ಜಯವಾಗಲಿ ಬೌದ್ಧ ಯಾತ್ರಾ ಮಂಗಳಾರತಿ ಮುಕ್ತದ್ವಾರ ಯಾರೊ ಅಂದರು ವಿಜಯ ವಿಜಯ ದಶಮಿ ಸರಳ ವಿರಳ ನಾಟಕಗಳು ಸಾವಿರ ಮಿಲಿಯ ಹಣೆ ಬರಹ ಹಿರಿಯಕ್ಕನ ಚಾಳಿ ಹೇಗಾದರೇನು? ಹೇಮಂತ ಸಣ್ಣ ಕತೆ ಕವಿಕರ್ಮ ತೆರೆಯ ಮರೆಯಲ್ಲಿ ಹಸಿವು ಹಾವು ಹರಟೆ/ವಿಡಂಬನೆ ಗ್ನಾನ ಚಿಕ್ಕ ದೊಡ್ಡವರು ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು ಮೈಗಳ್ಳನ ದಿನಚರಿಯಿಂದ ಮೈಲಿಕಲ್ಲಿನೊಡನೆ ಮಾತುಕತೆಗಳು ಹಳ್ಳಿಯ ಹತ್ತು ಸಮಸ್ತರು ಪ್ರವಾಸ ಕಥನ ಅಪೂರ್ವ ಪಶ್ಚಿಮ ಅರಸಿಕರಲ್ಲ ಅಬೂವಿನಿಂದ ಬರಾಮಕ್ಕೆ ಪಾತಾಳಕ್ಕೆ ಪಯಣ ಪೂರ್ವದಿಂದ ಅತ್ಯಪೂರ್ವಕ್ಕೆ ಯಕ್ಷರಂಗಕ್ಕಾಗಿ ಪ್ರವಾಸ ಆತ್ಮಕಥನ ಸ್ಮೃತಿಪಟಲದಿಂದ (೧,೨,೩) ಹುಚ್ಚು ಮನಸ್ಸಿನ ಹತ್ತು ಮುಖಗಳು ಜೀವನ ಚರಿತ್ರೆ ಕಲಾವಿದ ಕೃಷ್ಣ ಹೆಬ್ಬಾರರು ಕಲಾಪ್ರಬಂಧ ಕಲೆಯ ದರ್ಶನ ಕರ್ನಾಟಕದಲ್ಲಿ ಚಿತ್ರಕಲೆ ಚಾಲುಕ್ಯ ವಾಸ್ತು ಮತ್ತು ಶಿಲ್ಪ ಚಿತ್ರಶಿಲ್ಪ, ವಾಸ್ತುಕಲೆಗಳು ಜಾನಪದ ಗೀತೆಗಳು ಭಾರತೀಯ ಚಿತ್ರಕಲೆ ಭಾರತೀಯ ಶಿಲ್ಪ ಯಕ್ಷಗಾನ ಬಯಲಾಟ ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು ವೈಜ್ಞಾನಿಕ ಅದ್ಭುತ ಜಗತ್ತು (೧. ವಿಚಿತ್ರ ಖಗೋಲ, ೨. ನಮ್ಮ ಭೂಖಂಡಗಳು) ಉಷ್ಣವಲಯದ ಆಗ್ನೇಸ್ಯ ಪ್ರಾಣಿ ಪ್ರಪಂಚದ ವಿಸ್ಮಯಗಳು ಮಂಗನ ಕಾಯಿಲೆ ವಿಜ್ಞಾನ ಮತ್ತು ಅಂಧಶೃದ್ಧೆ ವಿಶಾಲ ಸಾಗರಗಳು ಹಿರಿಯ ಕಿರಿಯ ಹಕ್ಕಿಗಳು ಇತರ ಪ್ರಜಾಪ್ರಭುತ್ವವನ್ನು ಕುರಿತು ಬಾಳ್ವೆಯೇ ಬೆಳಕು ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ ಮನೋದೇಹಿಯಾದ ಮಾನವ ವಿಚಾರಶೀಲತೆ ವಿಚಾರ ಸಾಹಿತ್ಯ ನಿರ್ಮಾಣ ಸ್ವಾರ್ಥಿ ಮಾನವ ಸಂಪಾದನೆ ಐರೋಡಿ ಶಿವರಾಮಯ್ಯ ಬದುಕು, ಬರಹ ಕೌಶಿಕ ರಾಮಾಯಣ ಪಂಜೆಯವರ ನೆನಪಿಗಾಗಿ ವಿಶ್ವಕೋಶ ಕಲಾ ಪ್ರಪಂಚ ಪ್ರಾಣಿ ಪ್ರಪಂಚ ಬಾಲ ಪ್ರಪಂಚ (೧,೨,೩) ವಿಜ್ಞಾನ ಪ್ರಪಂಚ (೧,೨,೩,೪) ನಿಘಂಟು ಸಿರಿಗನ್ನಡ ಅರ್ಥಕೋಶ ಅನುವಾದ ಕೀಟನಾಶಕಗಳ ಪಿಡುಗುಗಳು ಕೋಟ ಮಹಾಜಗತ್ತು ಜನತೆಯೂ ಅರಣ್ಯಗಳೂ ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ ನಮ್ಮ ಸುತ್ತಲಿನ ಕಡಲು ನಮ್ಮೆಲ್ಲರಿಗೂ ಒಂದೇ ಭವಿಷ್ಯ ಪರಮಾಣು – ಇಂದು ನಾಳೆ ಪಂಚ ಋತು ಬೆಳೆಯುತ್ತಿರುವ ಸಮಸ್ಯೆ ಭಾರತದ ಪರಿಸರ – ದ್ವಿತೀಯ ಸಮಿಕ್ಷೆ ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ ಭಾರತ ವರ್ಷದಲ್ಲಿ ಬ್ರಿಟಿಷರು ಯಾರು ಲಕ್ಷಿಸುವರು? ಶ್ರೀ ರಾಮಕೃಷ್ಣರ ಜೀವನ ಚರಿತೆ ಮಕ್ಕಳ ಪುಸ್ತಕಗಳು ಅನಾದಿ ಕಾಲದ ಮನುಷ್ಯ ಒಂದೇ ರಾತ್ರಿ ಒಂದೇ ಹಗಲು ಗಜರಾಜ ಗೆದ್ದವರ ಸತ್ಯ ಢಂ ಢಂ ಢೋಲು ನರನೋ ವಾನರನೋ ಮರಿಯಪ್ಪನ ಸಾಹಸಗಳು ಮಂಗನ ಮದುವೆ ಸೂರ್ಯ ಚಂದ್ರ ಹುಲಿರಾಯ ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩ ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨ ಶೈಕ್ಷಣಿಕ ಕೃತಿಗಳು ಮಕ್ಕಳ ಶಿಕ್ಷಣ ಓದುವ ಆಟ ಗೃಹ ವಿಜ್ಞಾನ (೧,೨,೩) ಚಿತ್ರಮಯ ದಕ್ಷಿಣ ಕನ್ನಡ ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು ಚಿತ್ರಮಯ ದಕ್ಷಿಣ ಹಿಂದುಸ್ತಾನ ನಾಗರಿಕತೆಯ ಹೊಸ್ತಿಲಲ್ಲಿ ರಮಣ ತಾತ ಸ್ನೀತಿ (೧,೨,೩) ಸಾಮಾನ್ಯ ವಿಜ್ಞಾನ (೧,೨,೩) ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭) ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮) ವಯಸ್ಕರ ಶಿಕ್ಷಣ ಅಳಿಲ ಭಕ್ತಿ ಮಳಲ ಸೇವೆ ಕರ್ನಾಟಕದ ಜಾನಪದ ಕಲೆಗಳು ಕೋಳಿ ಸಾಕಣೆ ಜೋಗಿ ಕಂಡ ಊರು ದಕ್ಷಿಣ ಹಿಂದುಸ್ತಾನದ ನದಿಗಳು ದೇವ ಒಲಿದ ಊರು ಬೇರೆಯವರೂ ಸರಿ ಇರಬಹುದು ಹುಟ್ಟು ಸಾವು ಒಟ್ಟು ಒಟ್ಟು ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು Folk Art of Karnataka Karnataka Paintings My Concern for Life, Literature and Art Picturesque South Kanara Yakshagana ಕಾರಂತರ ಕೆಲವು ಚಿಂತನೆಗಳು ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ. ಸಾಹಿತಿಗಳಿಗೆ ಸಮಾಜದಲ್ಲಿ ಬೇರೆ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು. ಸಮಾಜ ನನ್ನನ್ನು ಹೇಗೆ ಕಂಡಿತು - ಎಂದು ನಾನು ತಿಳಿದುಕೊಳ್ಳುವ ಬಗೆ ಹೇಗೆ? ಒಂದು ಗ್ರಂಥದ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ಖರ್ಚಾದರೆ, ಅವನ್ನು ಓದಿದವರಲ್ಲಿ ಹತ್ತು ಮಂದಿ ನನಗೆ ಪತ್ರ ಬರೆದರೆ, ಅದರಿಂದ ಜನಗಳು ನನ್ನನ್ನು ಮೆಚ್ಚುತ್ತಿದ್ದಾರೆ- ಎಂದು ತಿಳಿಯಲು ಸಾಧ್ಯವೇ? ನಾವು ಬರೆಯುವುದು ಸಾಮಾಜಿಕರೊಡನೆ ಸಂಭಾಷಿಸುವುದಕ್ಕಾಗಿ. ಈ ಸಂಭಾಷಣೆ ಏಕಮುಖಿಯಾದದ್ದು. ನಾವೇನೋ ಗ್ರಂಥಗಳಲ್ಲಿ ಅನೇಕ ವಿಚಾರಗಳನ್ನು ಮಂಡಿಸುತ್ತೇವೆ; ಓದುಗರು ನಮ್ಮ ಕಣ್ಮುಂದೆ ಇರುವುದಿಲ್ಲ. ಅವರ ಮನಸ್ಸಿನಲ್ಲಿ ಓದುತ್ತ, ಓದುತ್ತ ಯಾವೆಲ್ಲ ಪ್ರತಿಕ್ರಿಯೆಗಳಾಗುತ್ತವೆ ಎಂದು ತಿಳಿಯುವ ಬಗೆ ಹೇಗೆ? ಆರಂಭದಿಂದಲೂ ನನ್ನ ಪುಸ್ತಕಗಳನ್ನು ಪತ್ರಿಕೆಗಳಿಗೆ ವಿಮರ್ಶೆಗೆ ಕಳುಹಿಸುವ ಪರಿಪಾಠವನ್ನು ನಾನು ಇರಿಸಿಕೊಳ್ಳದ್ದರಿಂದ, ವಿಮರ್ಶಕರು ಏನು ಹೇಳುತ್ತಾರೆಂಬುದು ಕೂಡಾ ನನಗೆ ತಿಳಿಯದ ಸಂಗತಿ. ಯಾರು ಏನನ್ನೇ ಹೇಳಲಿ, ನನಗೆ ತೋಚಿದಂತೆ ಬರೆಯುತ್ತೇನೆ- ಎಂದು ಬರೆಯುವ ನನಗೆ ಜನಾದರಣೆಯ ವಿಚಾರ ತಿಳಿಯುವುದು ಕಷ್ಟ. ವಿಕ್ರಯಗೊಳ್ಳುವ ಪುಸ್ತಕಗಳ ಸಂಖ್ಯೆಯಿಂದ ನಾನು ಅದನ್ನು ತರ್ಕಿಸುವುದಾದರೆ, ನನ್ನ ಜನಪ್ರಿಯತೆಗೆ ಬೇಕಾದ ಆಧಾರ ಸಿಗುವಂತಿಲ್ಲ. ಒಂದು ಕಾದಂಬರಿಯ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ವಿಕ್ರಯಗೊಳ್ಳುವ, ಅಥವಾ ಅದರ ಭರ ಒಂದಿಷ್ಟು ಹೆಚ್ಚಿಗಿದ್ದರೂ, ಒಂದು ಪುಸ್ತಕದ ಮರು ಮುದ್ರಣ ವರ್ಷಕ್ಕೆ ನೂರು ಪ್ರತಿಗಳಿಗಿಂತ ಹೆಚ್ಚಿಗೆ ವಿಕ್ರಯಗೊಳ್ಳದಾಗ, ಅಲ್ಲಿ ಇಲ್ಲಿ, ನನ್ನನ್ನು ಜನರು ಭಾಷಣಗಳ ಕಾಲದಲ್ಲಿ ಸುಪ್ರಸಿದ್ಧ ಸಾಹಿತಿ ಎಂದು ಕರೆದರೂ, ಅಂಥ ಪ್ರಸಿದ್ಧಿಯ ಗಾತ್ರ ಸಾಕಷ್ಟು ಕುಬ್ಜವಾದದ್ದು ಎಂಬ ಅಭಿಪ್ರಾಯ ನನಗೆ. ಆ ದೃಷ್ಟಿಯಿಂದ ದಿವಂಗತ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳು ನನಗಿಂತ ಎಷ್ಟೋ ಪಾಲು ಹೆಚ್ಚಿನ ಜನಾಕರ್ಷಣೆಯನ್ನು ಪಡೆದಿವೆ. ನನ್ನ, ಅವರ ಓದುಗರು ಯಾರು ಎಂಬುದನ್ನು ಕೂಡ ವಿಂಗಡಿಸಿ ತಿಳಿಯುವುದು ಕಷ್ಟ. ಅಂಥ ಓದುಗರು ಪ್ರಬುದ್ಧ ರೋ, ಅಪ್ರಬುದ್ಧರೋ, ಹೆಂಗಸರೋ, ಗಂಡಸರೋ, ತರುಣರೋ, ವೃದ್ಧರೋ, ಗಂಭೀರ ವಿಚಾರಕ್ಕೆ ಮನಸ್ಸು ಕೊಡುವವರೋ, ಅನುಭವ ಸಾಮ್ಯತೆ ಪಡೆದವರೋ, ಚಿಂತನಶೀಲರೋ, ಅಲ್ಲದವರೋ- ಇಂಥ ಯಾವೊಂದು ಸಂಗತಿಗಳನ್ನೂ ಎಣಿಸದೆ ಜನಮನ್ನಣೆಯ ತೂಕವನ್ನು ಅಳೆಯುವುದು ಅಸಾಧ್ಯ. ಆದಷ್ಟು ಕಡಿಮೆ ತಿನ್ನಿ. ನಾಲಗೆ ರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುವುದಲ್ಲ. ಮನಬಂದ ಕೆಲಸವನ್ನೆಲ್ಲಾ ಮಾಡುವುದಲ್ಲ. ಇದು ನನ್ನ ಆರೋಗ್ಯದ ರಹಸ್ಯ. ವಿಕಿಕೋಟ್‍ನಲ್ಲಿ ಶಿವರಾಮ ಕಾರಂತರ ಉಕ್ತಿಗಳು. ವಿದ್ವಾಂಸರ ಕಣ್ಣಲ್ಲಿ ಕಾರಂತರ ಸಾಹಿತ್ಯ ತೀ.ನಂ.ಶ್ರೀಕಂಠಯ್ಯ ಶ್ರೀ ಶಿವರಾಮ ಕಾರಂತರು ನಮ್ಮ ತಲೆಮಾರಿನ ಕನ್ನಡದ ಕ್ರಾಂತಿಪುರುಷರಲ್ಲಿ ಒಬ್ಬರು. ಅವರ ಪ್ರತಿಭೆಗೆ ಅಳವಡದ ಕಲೆಯಿಲ್ಲ. ಅವರ ಲೇಖನಿಯಿಂದ ಸತತವಾಗಿ ಹೊರಬೀಳುತ್ತಿರುವ ಕೃತಿಗಳಲ್ಲಿ ಹಲವನ್ನು ಓದಿ ಮೆಚ್ಚಿರುವ ಅನೇಕ ಮಂದಿ ಕನ್ನಡಿಗರಲ್ಲಿ ನಾನೂ ಒಬ್ಬ. ದೂರದಿಂದ ಮಾತ್ರ ವಲ್ಲದೆ ಹತ್ತಿರದಿಂದಲೂ ಅವರ ಬಹುಮುಖವಾದ ಕಾರ್ಯೋತ್ಸಾಹವನ್ನು ಆಗಾಗ ವೀಕ್ಷಿಸಿ ಬೆರಗಾಗಿದ್ದೇನೆ; ಅವರ ಪರಿಚಯ ಭಾಗ್ಯವನ್ನೂ ಕೆಲವು ಮಟ್ಟಿಗೆ ಪಡೆದು ನನ್ನ ಅನುಭವ ಆನಂದಗಳನ್ನೂ ಹೆಚ್ಚಿಸಿಕೊಂಡಿದ್ದೇನೆ. ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ. ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದ ಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು. ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ. ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ. ಪೂರ್ಣಚಂದ್ರ ತೇಜಸ್ವಿ ಲೋಹಿಯಾರವರ ತತ್ವ ಚಿಂತನೆ,ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ- ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದ ರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ. ಹಾ.ಮಾ.ನಾಯಕ ಯಾವ ಮಾನದಿಂದ ಅಳೆದರೂ ಕಾರಂತರು ವಿಶ್ವಲೇಖಕರ ಪಟ್ಟಿಯಲ್ಲಿ ಸೇರಬಲ್ಲವರು. ಗೋಪಾಲಕೃಷ್ಣ ಅಡಿಗ ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದೂ ಒಂದೇ, ನೇಸರನ್ನು ಸೊಡರಿನಿಂದ ತೋರಿಸುವುದೂ ಒಂದೇ. ಜಿ.ಎಸ್.ಶಿವರುದ್ರಪ್ಪ ಬೆಟ್ಟ ಕಡಲಿನ ನಡುವೆ ಹುಟ್ಟಿದ ಈ ಚೈತನ್ಯ ಕಡಲಿನಷ್ಟೇ ವಿಸ್ತಾರವಾದ ಅನುಭವಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಾರಂತರ ನಿಧನದಿಂದ ಉಜ್ವಲವಾದ ಸೃಜನ ಪರಂಪರೆಯ ಒಂದು ತಲೆಮಾರಿನ ಮುಕ್ತಾಯದ ಶೂನ್ಯದೊಳಕ್ಕೆ ನಾವು ಪ್ರವೇಶಿಸಿದ ಅನುಭವವಾಗುತ್ತಿದೆ. ಬಾಲವನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶ್ರೀ. ಕೆ. ಶಿವರಾಮ ಕಾರಂತರ ಕರ್ಮಭೂಮಿಯೇ ಬಾಲವನ. ಪುತ್ತೂರಿನ ಕಾರಂತ ಬಾಲವನ ಕಲಾ ಗ್ಯಾಲರಿ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ನಾಟ್ಯ ಶಾಲೆ, ರಂಗ ಮಂದಿರ, ಆಟದ ಮೈದಾನ ಮತ್ತು ಈಜುಕೊಳವನ್ನು ಒಳಗೊಂಡಿದೆ. ಇವುಗಳ ವೀಕ್ಷಣೆಗೆ ಸಮಯಾವಕಾಶ ಈ ರೀತಿ ಇದೆ, ಗ್ಯಾಲರಿ ಸಮಯ: 2..00 P.M – 6.00 P.M ಮತ್ತು 2..00 P.M – 6.00 P.M ಮ್ಯೂಸಿಯಂನ ಸಮಯ: 9.30 A.M – 1.00 P.M ಮತ್ತು 2.00 P.M – 6.00 P.M ಗ್ರಂಥಾಲಯದ ಸಮಯ: 10.00 A.M – 1.00 P.M ಮತ್ತು 3.30 P.M - 7.00 P.M ಬಾಲವನದಲ್ಲಿ ಕಾರಂತಜ್ಜ ಕಾರಂತರು ಕೆಲಕಾಲ ತರಂಗ ಸಾಪ್ತಾಹಿಕದ 'ಬಾಲವನ' - ಮಕ್ಕಳ ವಿಭಾಗದಲ್ಲಿ 'ಬಾಲವನದಲ್ಲಿ ಕಾರಂತಜ್ಜ' ಎಂಬ ಕಾಲಂ ನಡೆಸಿ ಕೊಡುತ್ತಿದ್ದರು. ಇದು ಬಹಳವಾಗಿ ಜನಪ್ರಿಯವಾಗಿತ್ತು. ಪುಟಾಣಿಗಳು ಕಳುಹಿಸಿದ ವಿಜ್ಞಾನ ಕುರಿತ ಪ್ರಶ್ನೆಗಳಿಗೆ ಕಾರಂತರು ಮಕ್ಕಳಿಗೆ ಅರ್ಥ ವಾಗುವಂತೆ ಸರಳ ರೀತಿಯಲ್ಲಿ ಉತ್ತರ ನೀಡುತ್ತಿದ್ದರು. ಆಗಿನ ತಲೆಮಾರಿನ ಕನ್ನಡಿಗರಿಗೆ ಕಾರಂತರು, 'ಕಾರಂತಜ್ಜ' ರೆಂದೇ ಚಿರಪರಿಚಿತ.http://www.kannadakavi.com/kavikoota/3jnanapeeta/kota_shivarama_karanth.htm ಪ್ರಶಸ್ತಿ/ಪುರಸ್ಕಾರಗಳು ಜ್ಞಾನಪೀಠ ಪ್ರಶಸ್ತಿ ಪದ್ಮಭೂಷಣ ಪ್ರಶಸ್ತಿ ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ರಾವ್ ಬಹದೂರ್ ಪ್ರಶಸ್ತಿ (೧೯೩೦ ರಲ್ಲಿ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಂಪ ಪ್ರಶಸ್ತಿ ನಿಧನ ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮಕಾರಂತರು ೧೯೯೭ http://m.rediff.com/news/dec/09kar.htm ಡಿಸೆಂಬರ್ ೦೯ ರಂದು ನಿಧನ ಹೊಂದಿದರು. ನಿಸರ್ಗದ ಚೆಲುವಿನೊಂದಿಗೆ ಅವಿರತವಾಗಿ ಸಾಹಿತ್ಯ ಸೃಷ್ಟಿಸಿದವರು ಕಾರಂತರು. ದೂರದ ಕೋಟದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದು ಪ್ರಕೃತಿಯ ಮಡಿಲಿನಲ್ಲಿ ಜೀವನದ ಹೋರಾಟದೊಂದಿಗೆ, ಸಮಗ್ರ ಕೋನವನ್ನು ಸ್ಪರ್ಷಿಸಿ ಧನ್ಯತೆಯ ಭಾವವನ್ನು ಕಾಣಲು ಸಾಧ್ಯವಾದ ದಿವ್ಯ ಕ್ಷೇತ್ರ.ಕಾರಂತರ ಬಗ್ಗೆ ನನ್ನದೊಂದು ಚಿಕ್ಕ ಬರಹ;ಗಗನಚುಕ್ಕಿ;ಲೇಖಕರು ರಾಷ್ಟ್ರಕವಿ ಕುವೆಂಪುರವರ ಮೊಮ್ಮಗಳು;GAGANACHUKKI;NOVEMBER 02, 2015 ಪತ್ರಗಳಲ್ಲಿ ಕಾರಂತ ಪತ್ರಗಳಲ್ಲಿ ಕಂಡ ಬಹುತ್ವದ ಪರಿಕಲ್ಪನೆ;;ಎಸ್. ಆರ್. ವಿಜಯಶಂಕರ Updated: 18 ಅಕ್ಟೋಬರ್ 2020 ಉಲ್ಲೇಖ ಬಾಹ್ಯಸಂಪರ್ಕಗಳು 'ನೆನಪು ಕಹಿಯಲ್ಲ',ಪರಂಜ್ಯೋತಿ,ಮಯೂರ, ಜೂನ್,೨೦೧೬,ಪು.೧೫೩-೧೩೬ . ಕಾರಂತರು ನಕ್ಕ ಸಮಯ! ಶಿವರಾಮ ಕಾರಂತರ ಆಪ್ತ ಸಹಾಯಕಿ 'ಮಾಲಿನಿ ಮಲ್ಯ' ನಿಧನ ಈ‌ ಪುಟಗಳನ್ನೂ ನೋಡಿ ಶಿವರಾಮ ಕಾರಂತರ ಕೃತಿಗಳು ವರ್ಗ:ಕವಿಗಳು ವರ್ಗ:ಸಾಹಿತಿಗಳು ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವರ್ಗ:೧೯೦೨ ಜನನ ವರ್ಗ:೧೯೯೭ ನಿಧನ ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು ವರ್ಗ:ವಿಜ್ಞಾನ ಸಾಹಿತಿಗಳು ವರ್ಗ:ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಬಿ ವಿ ಕಾರಂತರು
https://kn.wikipedia.org/wiki/ಬಿ_ವಿ_ಕಾರಂತರು
REDIRECT ಬಿ. ವಿ. ಕಾರಂತ್
ಕಾರಂತಜ್ಜ
https://kn.wikipedia.org/wiki/ಕಾರಂತಜ್ಜ
REDIRECT ಶಿವರಾಮ ಕಾರಂತ
ಗೋಕಾಕ
https://kn.wikipedia.org/wiki/ಗೋಕಾಕ
ಗೋಕಾಕ್ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಿಲ್ಲೆಯಲ್ಲಿ ಸುಪ್ರಸಿದ್ಧ ಗೋಕಾಕ ಜಲಪಾತವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ , ಗೋವಿನ ಜೊಳ ಮತ್ತು ಹತ್ತಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇತ್ತಿಚಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಮುಖ್ಯವಾಗಿ ಜವಳಿ, ಸಕ್ಕರೆ, ಮತ್ತು ಗೊವಿನ ಜೊಳ ಸಂಸ್ಕರಣೆ, ಮತ್ತು ಸಿಮೆಂಟ್ ಕೈಗಾರಿಕೆಗಳು ನೆಲೆಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ನಗರವನ್ನು ಹೊರತುಪಡಿಸಿ ಇದೆ ಅತ್ಯಂತ ಜನನಿಬಿಡ ಹಾಗೂ ದೊಡ್ಡ ನಗರವಾಗಿದೆ.Gokak Population Census 2011 ಇತಿಹಾಸ ಗೋಕಾಕ್ ನಗರವು ಐತಿಹಾಸಿಕವಾಗಿಯೂ ಪ್ರಾಮುಖ್ಯತೆ ಪಡೆದ ಸ್ಥಳವಾಗಿದೆ. ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ತದನಂತರ ಮೊಘಲರ್ ಆಡಳಿತದಲ್ಲಿ ಬಿಜಾಪುರ ಸುಲ್ತಾನರು ಗೋಕಾಕ್ ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ ಸವಣೂರಿನ ನವಾಬರು ಇದನ್ನು ಜಹಗೀರಾಗಿ ಪಡೆದುಕೊಂಡರು. ಇದಲ್ಲದೆ ಆಯಕಟ್ಟಿನ ಸ್ಥಳವಾಗಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಕೆಲಕಾಲ ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠಾ ಪೆಶ್ವೆಗಳ ಆಡಳಿತಕ್ಕೂ ಒಳಪಟ್ಟಿತ್ತು. ನಂತರದ ಬ್ರಿಟಿಷ್ ಆಡಳಿತಾವಧಿಯಲ್ಲಿ ಬೆಳಗಾವಿ ಜಿಲ್ಲೆಯ ಉಪವಿಭಾಗದ ಕೇಂದ್ರವಾಗಿತ್ತು. 1956 ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬಯಿ ಸರ್ಕಾರದಿಂದ ಬೇರ್ಪಟ್ಟು ಕರ್ನಾಟಕದೊಂದಿಗೆ ಸೇರಿಸಲ್ಪಟ್ಟಿತು.ಮತ್ತು ಸಮಿಪದ ಕಲ್ಲೋಳಿ ಗ್ರಾಮವು 1000 ಸಾವಿರ ಶತಮಾನದ ಇತಿಹಾಸ ಹೊಂದಿದೆ ಇಲ್ಲಿ 10ಕ್ಕು ಹೆಚ್ಚಿನ 1000 ಸಾವಿರ ಶತಮಾನದ ಜೈನರ ಶಾಸನಗಳು ದೊರೆತಿವೆ 100ಕ್ಕೂ ಹೆಚ್ಚು ಜೈನ ಬಸೀದಿಗಳನ್ನು ಹೊಂದಿದೆ ಎನ್ನುವ ಖ್ಯಾತಿಯನ್ನು ಈ ಗ್ರಾಮ ಪಡೆದಿದೆ. ಅದೆ ರಿತಿಯಾಗಿ ಯಾದವಾಡ ಗ್ರಾಮವು ಸುಮಾರು 5 ಶತಮಾನಗಳ ಇತಿಹಾಸ ಹೊಂದಿದೆ..... ನಗರಾಡಳಿತ ಗೋಕಾಕ್ ನಗರಸಭೆಯು ೧೮೫೩ ರಲ್ಲಿ ಸ್ಥಾಪನೆಗೊಂಡಿದೆ. ಆಗಿನ ಮುಂಬಯಿ ಸರ್ಕಾರ ( ಸದರ್ನ ಪಾಟ್ ಅಫ್ ಮಹಾರಾಷ್ಟ್ರ)ದಲ್ಲಿ ಪುಣೆ ಹಾಗು ಗೋಕಾಕ್ ದಲ್ಲಿ ಎಕಕಾಲಕ್ಕೆ ಈ ಮುನ್ಸಿಪಾಲ್ಟಿಗಳು ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಇದು ಕರ್ನಾಟಕದ ಹಳೆಯ ಮುನ್ಸಿಪಾಲ್ಟಿಗಳ ಪೈಕಿ ಒಂದೆನಿಸಿದೆ. ಈ ಹಿಂದೆ ಪುರಸಭೆ ಸ್ಥಾನ ಹೊಂದಿದ್ದ ಈ ಸ್ಥಳೀಯಾಡಳಿತವನ್ನು ಕರ್ನಾಟಕ ರಾಜ್ಯ ಸರ್ಕಾರ ೧೯೯೫ ರಲ್ಲಿ ನಗರಸಭೆಯಾಗಿ ಪರಿವರ್ತಿಸಿದೆ. ಒಟ್ಟು ೩೧ ಸದಸ್ಯರು ನಗರದ ವಿವಿಧ ವಾರ್ಡಗಳನ್ನು ಪ್ರತಿನಿಧಿಸುತ್ತಾರೆ. ಗೋಕಾಕ್ ವಿಶೇಷತೆ ಗೋಕಾಕ್ ಪಟ್ಟಣವು ಹಲವಾರು ವೈವಿದ್ಯಮಯ ವಿಷಯಗಳಿಗಾಗಿ ನಾಡಿನಲ್ಲಿ ಹೆಸರು ಮಾಡಿದೆ. ಕಟ್ಟಿಗೆಯ ಹಣ್ಣಿನ ಫಲಕ, ಗೊಂಬೆ ಮುಂತಾದ ಕರಕುಶಲ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಇನ್ನು ಪ್ರಸಿದ್ದ ಸಿಹಿ ತಿನಿಸು 'ಕರದಂಟು' ಸಹ ಇಲ್ಲಿಯೇ ತಯಾರಾಗುತ್ತದೆ. ಜೊತೆಗೆ ಇತ್ತಿಚಿಗೆ ಲಡಗಿ ಲಾಡು (ಉಂಡಿ) ಸಹ ತಯಾರಿಸಲಾಗುತ್ತಿದ್ದು ಈ ಎರಡು ಸಿಹಿ ತಿನಿಸುಗಳು ಲೋಕ ಪ್ರಸಿದ್ದವಾಗಿವೆ. ಸಾಗರದಾಚೆಗೂ ಇವು ತಮ್ಮ ಕಂಪನ್ನು ಬೀರಿವೆ. ಇನ್ನು ಪಟ್ಟಣ ಜಿಲ್ಲಾ ಕೇಂದ್ರವಾಗುವತ್ತ ದಾಪುಗಾಲಿಟ್ಟಿದೆ. ಈ ಹಿಂದೆ ಸರ್ಕಾರ ನೇಮಿಸಿದ್ದ ಹುಂಡೇಕಾರ್ ಸಮಿತಿ , ಗದ್ದಿಗೌಡರ ಸಮಿತಿಗಳು ನಗರವನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿವೆ. ಆದ್ರೆ ಬೆಳಗಾವಿ ಗಡಿ ವಿವಾದ ಇದಕ್ಕೆ ಅಡ್ಡಿಯಾಗಿದೆ. ವಿಚಿತ್ರ ಅಂದ್ರೆ ಗೋಕಾಕ್ ನಗರ ಆಯಕಟ್ಟಿನ ಸ್ಥಾನದಲ್ಲಿದ್ದರೂ ಸರ್ಕಾರ ಜಿಲ್ಲಾ ವಿಂಗಡನೆಗೆ ಮೀನಮೇಷ ಎಣಿಸುತ್ತಿದೆ. ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಇಲ್ಲಿಯ ಕೊಡುಗೆ ಅಪಾರ. ಕನ್ನಡದ ಖ್ಯಾತ ಸಾಹಿತಿಗಳಾದ, ಕೃಷ್ಣಮೂರ್ತಿ ಪುರಾಣಿಕ, ಬೇಟಗೇರಿ ಕೃಷ್ಣಶರ್ಮ, ಬಸವರಾಜ್‌ ಕಟ್ಟಿಮನಿ, ಪ್ರೊ.ಕೆ.ಜಿ.ಕುಂದಣಗಾರ್, ಮುಂತಾದ ಹಿರಿಕರು ಈ ಗೋಕಾವಿ ನಾಡಿಗೆ ಸೇರಿದವರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಪರೀಷತ್ ತಾಲ್ಲೂಕು ಘಟಕ ಗೋಕಾಕ ಗೌರವಾಧ್ಯಕ್ಷರು ಪ್ರೊ. ಚಂದ್ರಶೇಖರ ಅಕ್ಕಿ, ಅಧ್ಯಕ್ಷರು ಶ್ರೀ ಮಹಾಂತೇಶ ತಾಂವಶಿ, ನಿಕಟಪೂರ್ವ ಅಧ್ಯಕ್ಷರು ಶ್ರೀ ಬಾಲಶೇಖರ ಬಂದಿ, ಕಾರ್ಯದರ್ಶಿಗಳು ಸಿದ್ರಾಮ ದ್ಯಾಗಾನಟ್ಟಿ ಮತ್ತು ಶ್ರೀಮತಿ ರಜನಿ ಜಿರಗ್ಯಾಳ, ಕೋಶಾಧ್ಯಕ್ಷರು ಆನಂದ ಗೋಟಡಕಿ. ಸದಸ್ಯರು ಈಶ್ವರ ಬೆಟಗೇರಿ, ಪ್ರೊ. ಶಂಕರ ನಿಂಗನೂರ, ಬಸವರಾಜ ಮುರಗೋಡ, ಎಸ್.ಆರ್.ಮುದ್ದಾರ,ಸಚಿನ್ ಕಡಬಡಿ, ಡಾ. ಎಸ್.ಬಿ.ಹೊಸಮನಿ, ಬಿ.ಬಿ.ಇಟ್ಟನ್ನವರ, ಬಸವರಾಜ ಹಣಮಂತಗೋಳ, ಶೈಲಾ ಕೊಕರಿ, ಮಹಾದೇವ ಮಲಗೌಡ, ಎಸ್.ಎಸ್.ಪಾಟೀಲ,ಎಸ್.ಕೆ.ಮಠದ, ಶ್ರೀಮತಿ ರಾಜೇಶ್ವರಿ ವಡೆಯರ. ರೈಲು ನಿಲ್ದಾಣ ಗೊಕಾಕ್ ರೈಲು ನಿಲ್ದಾಣವು ಪಟ್ಟಣ ದಿಂದ ೧೦ ಕಿ.ಮಿ ಅಂತರದಲ್ಲಿ ಇದೆ...ಇದು ಬೆಳಗಾವಿ ಜಿಲ್ಲೆಯ ೫ನೇ ದೊಡ್ಡ ನಿಲ್ದ್ದಾಣ. ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಲ್ಲಿ ಈ ರೈಲು ನಿಲ್ದಾಣವು ಬರುತ್ತದೆ. ಈ ನಿಲ್ದಾಣದ ಪಕ್ಕದಲ್ಲಿ ಕೊಣ್ಣೂರು ಎಂಬ ಉಪ ನಗರವು ಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತದೆ.ನಿಲ್ದಾಣದ ಉತ್ತರಕ್ಕೆ ಘಟಪ್ರಭಾ ಮತ್ತು ದಕ್ಶಿಣಕ್ಕೆ ಪಾಶ್ಚಪೂರ ರೈಲು ನಿಲ್ದಾಣಗಳು ಬರುತ್ತವೆ.ಇದನ್ನು ಗೋಕಾಕ್ ರೋಡ್ ನಿಲ್ದಾಣವೆಂದು ಕರೆಯುತ್ತಾರೆ.ಪ್ರೆಕ್ಶಣಿಯ ಸ್ಥಳಗಳಾದ ಗೊಕಾಕ್ ಜಲಪಾತ, ಗೊಡಚನಮಲ್ಕಿ ಜಲಪಾತ, ಘಟಪ್ರಭಾ ಪಕ್ಶಿದಾಮ, ದುಪದಾಳ ಹಾಗು ಹಿಡಕಲ್ ಜಲಾಶಯ, ಯೊಗಿಕೊಳ್ಳ ನಿಸರ್ಗದಾಮ ( ಗೊಕಾಕ್ ನವಿಲುದಾಮ) ಕಲ್ಲೋಳಿಯ ಹನುಮಂತ ದೇವರ ದೇವಸ್ಥಾನ ಮತ್ತು ಕಲ್ಲೋಳಿಯ ಪಾರ್ಶ್ವಾನಾಥ ಜೈನ್ ಬಸಿದಿ ಹಾಗೂ 1000 ಶತಮಾನದ ಶಾಸನಗಳು ಇಲ್ಲಿ ಸಿಗುತ್ತವೆ, ಮುಂತಾದ ಸ್ಥಳಗಳಿಗೆ ಹೋಗುವವರು ಇಲ್ಲಿ ಇಳಿಯಬಹುದಾಗಿದೆ.http://m.etrain.info/in-ADS?STATION=GKK ನಿಲುಗಡೆ ಇರುವ ರೈಲುಗಳು ಮಿರಜ್ - ಬೆಳಗಾವಿವ ( ಪ್ಯಾಸೆಂಜರ್) ಮಿರಜ್ - ಕ್ಯಾಸಲರಾಕ್ " " ಮಿರಜ್ - ಲೋಂಡಾ " " ಮಿರಜ್ - ಬಳ್ಳಾರಿ " " ಕೊಲ್ಹಾಪುರ - ಬೆಂಗಳೂರು ( ರಾಣಿ ಚೆನ್ನಮಾ ಎಕ್ಸ್ ಪ್ರೆಕ್ಸ) ಯಶವಂತಪುರ - ದಾದರ ( ಚಾಲುಕ್ಯ ಎಕ್ಸ್ ಪ್ರೆಕ್ಸ)ಸದ್ಯಕ್ಕೆ ನಿಲುಗಡೆ ಇಲ್ಲ. ಕ್ಯಾಸಲರಾಕ್ - ಮಿರಜ್ ( ಪ್ಯಾಸೆಂಜರ್) ಲೋಂಡಾ - ಮಿರಜ್ " " ಬೆಳಗಾವಿವ - ಮಿರಜ್ " " ಬೆಳಗಾವಿವ - ಮಿರಜ್ ಪುಶ ಪುಲ್ ಬೆಂಗಳೂರು - ಕೊಲ್ಹಾಪುರ( ರಾಣಿ ಚೆನ್ನಮಾ ಎಕ್ಸ್ ಪ್ರೆಕ್ಸ) ದಾದರ - ಯಶವಂತಪುರ ( ಚಾಲುಕ್ಯ ಎಕ್ಸ್ ಪ್ರೆಕ್ಸ) ರಾಜಕೀಯ ರಮೇಶ ಜಾರಕಿಹೊಳಿ,ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಡಾ. ಮಹಾಂತೇಶ ಕಡಾಡಿ ಇಲ್ಲಿನ ರಾಜಕಾರಣಿಗಳು. ಉಲ್ಲೇಖಗಳು ಉಲ್ಲೇಖಗಳು ವರ್ಗ:ಬೆಳಗಾವಿ ಜಿಲ್ಲೆಯ ತಾಲೂಕುಗಳು
ಬೇಂದ್ರೆ
https://kn.wikipedia.org/wiki/ಬೇಂದ್ರೆ
REDIRECT ದ.ರಾ.ಬೇಂದ್ರೆ
ಶಿವರಾಮ ಕಾರ೦ತ
https://kn.wikipedia.org/wiki/ಶಿವರಾಮ_ಕಾರ೦ತ
REDIRECT ಶಿವರಾಮ ಕಾರಂತ
ಯು.ಆರ್.ಅನಂತಮೂರ್ತಿ
https://kn.wikipedia.org/wiki/ಯು.ಆರ್.ಅನಂತಮೂರ್ತಿ
thumb|right|250px|'ಡಾ.ಅನಂತಮೂರ್ತಿ, ಪತ್ನಿಯವರ ಜೊತೆ' thumbnail|ಕನ್ನಡ ವಿಕಿಪೀಡಿಯದ ೯ನೇ ವಾರ್ಷಿಕೋತ್ಸವ ಸಮಯದಲ್ಲಿ - ಯು.‌ಆರ್ ಅನಂತಮೂರ್ತಿ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು ,ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವ ಆರನೇ ಬರಹಗಾರರಾಗಿದ್ದಾರೆ. ಈ ಪ್ರಶಸ್ತಿಯು ಭಾರತದಲ್ಲಿ ನೀಡಲ್ಪಟ್ಟ ಅತ್ಯುನ್ನತ ಗೌರವವಾಗಿದೆ. ೧೯೯೮ ರಲ್ಲಿ ಇವರು ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ೧೯೮೦ ರ ದಶಕದ ಅಂತ್ಯದಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಅವರು ೨೦೧೩ ರ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಜನನ ಅನಂತಮೂರ್ತಿಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಹಳ್ಳಿಯಲ್ಲಿ, ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ, ತಾಯಿ ಸತ್ಯಮ್ಮ (ಸತ್ಯಭಾಮ). ವಿದ್ಯಾಭ್ಯಾಸ 'ದೂರ್ವಾಸಪುರ'ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು."ಋಜುವಾತು "ಪತ್ರಿಕೆಯನು ಪ್ರಾರಂಭಿಸಿದರು. ವೃತ್ತಿ ಜೀವನ ಅನಂತಮೂರ್ತಿ ೧೯೭೦ ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕ ಮತ್ತು ಬೋಧಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೧೯೮೭ ರಿಂದ ೧೯೯೧ ರವರೆಗೆ ಕೇರಳದ ಕೊಟ್ಟಾಯಂನಲ್ಲಿರುವ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.https://www.mgu.ac.in/index.php?option=com_content&view=article&id=1330&Itemid=1286 ಅವರು ೧೯೯೨ ರವರೆಗೆ ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೯೩ ರಲ್ಲಿ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಟಬಿಂಗನ್ ವಿಶ್ವವಿದ್ಯಾಲಯ, ಅಯೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ ಮತ್ತು ಶಿವಾಜಿ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಅನಂತಮೂರ್ತಿ ಎರಡು ಬಾರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೨೦೧೨ ರಲ್ಲಿ ಅವರನ್ನು ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯದ ಮೊದಲ ಕುಲಪತಿಯನ್ನಾಗಿ ನೇಮಿಸಲಾಯಿತು. ಅನಂತಮೂರ್ತಿ ದೇಶದಲ್ಲಿ ಮತ್ತು ಹೊರಗಡೆ ಹಲವಾರು ಸೆಮಿನಾರ್‌ಗಳಲ್ಲಿ ಬರಹಗಾರ ಮತ್ತು ವಾಗ್ಮಿಗಳಾಗಿ ಉಪನ್ಯಾಸಗಳನ್ನು ನೀಡಿದ್ದಾರೆ. ಅವರು ಭಾರತೀಯ ಬರಹಗಾರರ ಸಮಿತಿಯ ಸದಸ್ಯರಾಗಿದ್ದರು ಮತ್ತು ೧೯೯೦ ರಲ್ಲಿ ಸೋವಿಯತ್ ಒಕ್ಕೂಟ, ಹಂಗೇರಿ, ಫ್ರಾನ್ಸ್ ಮತ್ತು ಪಶ್ಚಿಮ ಜರ್ಮನಿಯಂತಹ ದೇಶಗಳಿಗೆ ಭೇಟಿ ನೀಡಿದರು. ಸೋವಿಯತ್ ಪತ್ರಿಕೆಯೊಂದರ ಮಂಡಳಿಯ ಸದಸ್ಯರಾಗಿ ೧೯೮೯ ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ ರಲ್ಲಿ ಚೀನಾಕ್ಕೆ ಭೇಟಿ ನೀಡಿದ ಬರಹಗಾರರ ಸಮಿತಿಯ ನಾಯಕ ಅನಂತಮೂರ್ತಿ. ಕೃತಿಗಳು ಕಥಾ ಸಂಕಲನ ಎಂದೆಂದೂ ಮುಗಿಯದ ಕತೆ (೧೯೫೫) ಪ್ರಶ್ನೆ (೧೯೬೩) ಮೌನಿ (೧೯೭೨) ಆಕಾಶ ಮತ್ತು ಬೆಕ್ಕು (೨೦೦೧) ಕ್ಲಿಪ್ ಜಾಯಿಂಟ್ ಘಟಶ್ರಾದ್ಧ ಸೂರ್ಯನ ಕುದುರೆ (೧೯೮೧) ಪಚ್ಚೆ ರೆಸಾರ್ಟ್ (೨೦೧೧) ಬೇಟೆ, ಬಳೆ ಮತ್ತು ಓತಿಕೇತ ಎರಡು ದಶಕದ ಕತೆಗಳು ಮೂರು ದಶಕದ ಕಥೆಗಳು (೧೯೮೯) ಐದು ದಶಕದ ಕತೆಗಳು (೨೦೦೨) ಕಾದಂಬರಿಗಳು ಸಂಸ್ಕಾರ (೧೯೬೫) ಭಾರತೀಪುರ (೧೯೭೩) ಅವಸ್ಥೆ (೧೯೭೮) ಭವ (೧೯೯೪) ದಿವ್ಯ (೨೦೦೧) ಪ್ರೀತಿ ಮೃತ್ಯು ಮತ್ತು ಭಯ (೨೦೧೨) ವಿಮರ್ಶೆ ಮತ್ತು ಪ್ರಬಂಧ ಸಂಕಲನ ಪ್ರಜ್ಞೆ ಮತ್ತು ಪರಿಸರ (೧೯೭1) ಪೂರ್ವಾಪರ (೧೯೮೦) ಸಮಕ್ಷಮ (೧೯೮೦) ಸನ್ನಿವೇಶ (೧೯೭೪) ಯುಗಪಲ್ಲಟ (೨೦೦೧) ವಾಲ್ಮೀಕಿಯ ನೆವದಲ್ಲಿ (೨೦೦೬) ಮಾತು ಸೋತ ಭಾರತ (೨೦೦೭) ಸದ್ಯ ಮತ್ತು ಶಾಶ್ವತ (೨೦೦೮) ಬೆತ್ತಲೆ ಪೂಜೆ ಏಕೆ ಕೂಡದು (೧೯೯೯) ಋಜುವಾತು (೨೦೦೭) ಶತಮಾನದ ಕವಿ ಯೇಟ್ಸ್ (೨೦೦೮) ಕಾಲಮಾನ (೨೦೦೯) ಮತ್ತೆ ಮತ್ತೆ ಬ್ರೆಕ್ಟ್ (೨೦೦೯) ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯) ಶತಮಾನದ ಕವಿ ರಿಲ್ಕೆ (೨೦೦೯) ರುಚಿಕರ ಕಹಿಸತ್ಯಗಳ ಕಾಲ (೨೦೧೧) ಆಚೀಚೆ (೨೦೧೧) ನಾಟಕ ಆವಾಹನೆ (೧೯೬೮) ಕವನ ಸಂಕಲನ ಹದಿನೈದು ಪದ್ಯಗಳು (೧೯೬೭) ಮಿಥುನ (೧೯೯೨) ಅಜ್ಜನ ಹೆಗಲ ಸುಕ್ಕುಗಳು (೧೯೮೯) ಅಭಾವ (೨೦೦೯) ಸಮಸ್ತ ಕಾವ್ಯ (೨೦೧೨) ಆತ್ಮಕತೆ ಸುರಗಿ (೨೦೧೨) ಮೊಳಕೆ (ಅಮಿತನ ಆತ್ಮಚರಿತ್ರೆ) ಚಲನಚಿತ್ರವಾದ ಕೃತಿಗಳು ಘಟಶ್ರಾದ್ಧ ಸಂಸ್ಕಾರ ಬರ ಅವಸ್ಥೆ ಮೌನಿ (ಸಣ್ಣಕಥೆ) ದೀಕ್ಷಾ (ಹಿಂದಿ ಚಿತ್ರ) ಪ್ರಕೃತಿ (ಸಣ್ಣಕಥೆ) ಪ್ರಮುಖ ಉಪನ್ಯಾಸಗಳು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002 ಫ್ರೆಂಚ್ ಸಾಹಿತ್ಯ ಉತ್ಸವ, 2002 ಬರ್ಲಿನ್ ಸಾಹಿತ್ಯ ಉತ್ಸವ, 2002 ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾ ವಿವಿ, 1997 ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997 'ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್' ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997 'ಟ್ರಾನ್ಸ್‌ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್' ವಿಚಾರ ಸಂಕಿರಣ, ಲಂಡನ್, 1993 ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993 ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989 'ಮಾರ್ಕ್ಸಿಸಂ ಅಂಡ್ ಲಿಟರೇಚರ್', ಅಂಗನ್‌ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976.https://www.goodreads.com/author/list/6473576.U_R_Ananthamurthy_ ಪ್ರಶಸ್ತಿ ಮತ್ತು ಪುರಸ್ಕಾರಗಳು ಕೃಷ್ಣರಾವ್ ಚಿನ್ನದ ಪದಕ (೧೯೫೮) ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ (ಕ್ರಮವಾಗಿ ೧೯೭೦, ೧೯೭೮, ೧೯೮೯) ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೩) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೪) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಾಸ್ತಿ ಪ್ರಶಸ್ತಿ (೧೯೯೪) ಜ್ಞಾನಪೀಠ ಪ್ರಶಸ್ತಿ (೧೯೯೪) ಬಷೀರ್ ಪುರಸ್ಕಾರ, ಕೇರಳ ಸರ್ಕಾರ (೨೦೧೨) ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ (೨೦೧೨) ಗಣಕ ಸೃಷ್ಟಿ ಪ್ರಶಸ್ತಿ, ಕೋಲ್ಕತ (೨೦೦೨) ಪದ್ಮಭೂಷಣ (೧೯೯೮) ಶಿಖರ್ ಸಮ್ಮಾನ್ (ಹಿಮಾಚಲ ಪ್ರದೇಶ ಸರ್ಕಾರ) (೧೯೯೫) ೬೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (ತುಮಕೂರು) ನಿಧನ ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ 'ಮಣಿಪಾಲ್ ಆಸ್ಪತ್ರೆ'ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ 2014ರ ಆಗಸ್ಟ್ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ 'ಜ್ಞಾನಭಾರತಿ ಕಲಾಗ್ರಾಮ'ದಲ್ಲಿ2014ರ ಆಗಸ್ಟ್ 23 ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು.ಪಂಚಭೂತಗಳಲ್ಲಿ ಅನಂತಮೂರ್ತಿ ಲೀನ ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ. ಒಂದಿಷ್ಟು ಹೆಚ್ಚಿನ ಮಾಹಿತಿಗಳು ೧೯೫೫ರಲ್ಲಿ ಎಂದೆಂದೂ ಮುಗಿಯದ ಕತೆ ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ೧೯೬೫ರಲ್ಲಿ ಮೊದಲ ಕಾದಂಬರಿ ಸಂಸ್ಕಾರ ಪ್ರಕಟವಾಯಿತು. ಇದು ವ್ಯಾಪಕ ಚರ್ಚೆಗೆ ಒಳಗಾದ ಕಾದಂಬರಿ. ಈ ಕಾದಂಬರಿ ಭಾರತದ ಹಲವು ಭಾಷೆಗಳಲ್ಲದೆ, ಇಂಗ್ಲಿಷ್, ರಷ್ಯನ್, ಫ್ರೆಂಚ್, ಜರ್ಮನ್, ಹಂಗೇರಿಯನ ಮತ್ತಿತರ ಭಾಷೆಗಳಿಗೆ ಅನುವಾದವಾಗಿದೆ. ಯು.ಆರ್.ಅನಂತಮೂರ್ತಿಯವರ ಮೊದಲ ಕಾದಂಬರಿ ಸಂಸ್ಕಾರ ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೂ ಮೊದಲೇ ಅನಂತಮೂರ್ತಿ ೧೯೫೮ ರಲ್ಲಿ ಬರೆದು ಪ್ರಕಟವಾಗಿರದಿದ್ದ ಪ್ರೀತಿ-ಮೃತ್ಯು-ಭಯ ಎಂಬ ಕಾದಂಬರಿ ೨೦೧೨ ಜೂನ್ ೧೦ಕ್ಕೆ ಬಿಡುಗಡೆಯಾಯಿತು. ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ. ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು ಋಜುವಾತು ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು. ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ. ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ ದೀಕ್ಷಾ ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ, ಉಪನ್ಯಾಸ ನೀಡಿದ್ದಾರೆ. ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ಬಹಳ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶ ವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ .ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ. ವಿನಾಯಕ ಕೃಷ್ಣ ಗೋಕಾಕರ ಅನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ. ಮ್ಯಾನ್ ಬುಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ೧೦ ಸಾಹಿತಿಗಳಲ್ಲಿ ಒಬ್ಬರು. ೧೯೮೦ರ ಗೋಕಾಕ್ ಚಳುವಳಿಯನ್ನು ವಿರೋಧಿಸಿದ ಅನಂತಮೂರ್ತಿ, ಅದನ್ನು ದಂಗೆ ಎಂದು ಕರೆದರು.http://www.thehindu.com/todays-paper/tp-national/tp-karnataka/writers-oppose-ananthamurthys-candidature-for-rajya-sabha/article3168762.ece ೧೯೯೭ರಲ್ಲಿ ಅವರಿಗೆ ಕರ್ನಾಟಕ ಸರ್ಕಾರದ ವತಿಯಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಮನೆ ನೀಡಲಾಯ್ತು. ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ರಿಗೆ ಅನಂತಮೂರ್ತಿಯವರು ಆಪ್ತರಾದುದರಿಂದ ಅದು ವಿವಾದಕ್ಕೆ ಕಾರಣವಾಯಿತು. ಕವಿಗಳಿಗೆ ಸರ್ಕಾರ ನೀಡುವ ನಿವೇಶನವನ್ನು ಹಿಂದಿರುಗಿಸಿದ ನಂತರ ಮನೆ ಪಡೆದದ್ದು ಎಂದು ತಮ್ಮ ಆತ್ಮ ಚರಿತ್ರೆ ಸುರಗಿಯಲ್ಲಿ ಅನಂತಮೂರ್ತಿ ವಿವರಿಸಿದ್ದಾರೆ. ಉಲ್ಲೇಖಗಳು ಹೊರಕೊಂಡಿಗಳು ಡಾ. ಯು.ಆರ್. ಅನಂತಮೂರ್ತಿಯವರ ಕಿರುಪರಿಚಯ -ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ Dr. Udupi Rajagopala Acharya Anantha Murthy - ಉಡುಪಿ ಪೇಜಸ್ ಅನಂತಮೂರ್ತಿಯವರ ಬ್ಲಾಗ್ ಅನಂತಮೂರ್ತಿಯವರ ಸಮಗ್ರ ಸಾಹಿತ್ಯ, ಕಣಜ ತಾಣ 'ಹೊಸಪ್ರಜ್ಞೆಯ ಕತೆಗಾರ ಯು.ಆರ್.ಅನಂತ ಮೂರ್ತಿ, ಮಯೂರ, ೧ ಆಗಸ್ಟ್ ೨೦೧೪, ಸಂದರ್ಶನ, ಎಚ್ಚೆಸ್ಕೆ, ಪುಟ ೮-೧೬ 'The Educated Have Lost Touch With Their Local Almanac' Aug, 20, 2001 OCTOBER 6, 2013 india facts ಯು.ಆರ್.ಅನಂತಮೂರ್ತಿ ಅವರನ್ನು ಕಾಡಿದ ವಿವಾದಗಳು, kannada.oneindia, Saturday, August 23, 2014 'ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ:ಹೃದಯಶಿವ' ಆಗಸ್ಟ್,೨೫,೨೦೧೪,ಸಂಪಾದಕ,'ಪಂಜು ಇ-ಪತ್ರಿಕೆ' 'ಅನಂತಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ ಮೋದಿ' 'One India Kannada, August 22, 2014 ವರ್ಗ:ಸಾಹಿತಿಗಳು ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವರ್ಗ:೧೯೩೨ ಜನನ ವರ್ಗ:ಲೇಖಕರು ವರ್ಗ:ಕನ್ನಡ ಕವಿಗಳು ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ ವರ್ಗ:ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು
ಅನಂತಮೂರ್ತಿ
https://kn.wikipedia.org/wiki/ಅನಂತಮೂರ್ತಿ
REDIRECT ಯು.ಆರ್.ಅನಂತಮೂರ್ತಿ
ಗಿರೀಶ್ ಕಾರ್ನಾಡ್
https://kn.wikipedia.org/wiki/ಗಿರೀಶ್_ಕಾರ್ನಾಡ್
ಗಿರೀಶ್ ಕಾರ್ನಾಡ್ (೧೯ ಮೇ ೧೯೩೮ - ೧೦ ಜೂನ್ ೨೦೧೯) ಭಾರತದ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ,ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. ಜೀವನ ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ॥ ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿಶೀಲ ಮನೋಭಾವದ ಡಾ॥ ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊಂಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ೫ ವರ್ಷದ ಮಗ ವಸಂತನ ತಾಯಿ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡು ಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಅವರ ಬೆಳವಣಿಗೆಯಲ್ಲಿ ಸಹಾಯಕವಾಯಿತು. ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ. ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು. ನಾಟಕ ರಚನೆ ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜು ಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ. ನಾಟಕಗಳು ಮಾ ನಿಷಾಧ - ಏಕಾಂಕ ನಾಟಕ ಯಯಾತಿ - ೧೯೬೧ ತುಘಲಕ್ - ೧೯೬೪ ಹಯವದನ - ೧೯೭೨(ನಾಟ್ಯರಂಗ ಪ್ರಶಸ್ತಿ ) ಅಂಜುಮಲ್ಲಿಗೆ - ೧೯೭೭ ಹಿಟ್ಟಿನ ಹುಂಜ ಅಥವಾ ಬಲಿ - ೧೯೮೦ ನಾಗಮಂಡಲ - ೧೯೯೦ ತಲೆದಂಡ - ೧೯೯೩ ಅಗ್ನಿ ಮತ್ತು ಮಳೆ - ೧೯೯೫ ಟಿಪ್ಪುವಿನ ಕನಸುಗಳು - ೧೯೯೭ ಒಡಕಲು ಬಿಂಬ - ೨೦೦೫ ಮದುವೆ ಅಲ್ಬಮ್ ಫ್ಲಾವರ್ಸ - ೨೦೧೨ ಬೆಂದ ಕಾಳು ಆನ್ ಟೋಸ್ಟ- ೨೦೧೨ ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್‍ಗಾಗಿ ಭಾರತದ ಸ್ವಾತಂತ್ರೋತ್ಸವದ ೫೦ ವರ್ಷದ ನೆನಪಿನ ಕಾರ್ಯಕ್ರಮಕ್ಕಾಗಿ ಬರೆದುಕೊಟ್ಟ ನಾಟಕ-ಟಿಪ್ಪುವಿನ ಕನಸುಗಳು. ಆತ್ಮ ಚರಿತ್ರೆ ಆಡಾಡತ ಆಯುಷ್ಯ (೨೦೧೧) ಚಿತ್ರರಂಗ 'ಸಂಸ್ಕಾರ'(೧೯೭೦) ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ-ಪ್ರಾಣೇಶಾಚಾರ್ಯರದು. ಪಿ.ಲಂಕೇಶ ಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ-ನಾರಣಪ್ಪನದು. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು ಮತ್ತು ಚಿತ್ರಕಥೆ ಗಿರೀಶ ಕಾರ್ನಾಡರದ್ದು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ(೧೯೭೨) ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ನಿರ್ಮಾಣ: ಜಿ.ವಿ.ಅಯ್ಯರ್. ಮುಂದೆ 'ತಬ್ಬಲಿಯು ನೀನಾದೆ ಮಗನೆ'(೧೯೭೭), 'ಕಾಡು'(೧೯೭೪), 'ಒಂದಾನೊಂದು ಕಾಲದಲ್ಲಿ'(೧೯೭೮) ಚಿತ್ರಗಳನ್ನು ನಿರ್ದೇಶಿಸಿದರು. 'ಕಾಡು' ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ ಉತ್ಸವ್, ಗೋಧೂಳಿ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ"(೧೯೯೯) ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಇದಲ್ಲದೆ ಕನಕ ಪುರಂದರ, ದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. ೨೦೦೭ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ. ಇತರೆ ಕಾರ್ನಾಡ್ ಅವರಿಗೆ ಪ್ರಶಸ್ತಿ ಬಂದಾಗ ಸೌಜನ್ಯದಿಂದಲೇ ಮರಾಠಿಯ ವಿಜಯತೆಂಡೂಲ್ಕರ್ ಅವರಂಥವರಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿ ದೊಡ್ಡತನ ಮೆರೆದಿದ್ದರು. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಕುವೆಂಪುರ ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಯು ಆರ್ ಅನಂತಮೂರ್ತಿಯವರ ಸಂಸ್ಕಾರ ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ. ತಮ್ಮ ೪೨ರ ವಯಸ್ಸಿನಲ್ಲಿ ಕೊಡಗಿನ ವೀರಯೋಧ ಕೋದಂಡೇರ ಗಣಪತಿಯವರ ಪುತ್ರಿ, ಡಾ. ಸರಸ್ವತಿ ಗಣಪತಿಯವರನ್ನು ಅಧಿಕೃತವಾಗಿ ಮದುವೆಯಾದ ಗಿರೀಶರಿಗೆ ೨ ಮಕ್ಕಳು, ಶಾಲ್ಮಲಿ ರಾಧಾ ಮತ್ತು ರಘು ಅಮಯ್. ೧೦ ವರ್ಷಗಳ ಕಾಲ, ಲಿವ್-ಇನ್ ಆಗಿ ಸಂಸಾರ ನಡೆಸಿದ ಹಿರಿಮೆ ಕಾರ್ನಾಡರದು.http://about-jati.blogspot.in/ ತುಘಲಕ್ ನಾಟಕವನ್ನು ತಮ್ಮ ಮಿತ್ರ ಮತ್ತು ಸಹಾಯಕ ನಿರ್ದೇಶಕ ಕೃಷ್ಣ ಬಸರೂರುರೊಡಗೂಡಿ ಬರೆದಿದ್ದಾಗಿ, ಆ ನಾಟಕದ ಅರ್ಪಣೆಯಲ್ಲಿ ಹೇಳಿದ್ದಾರೆ. ಒಂದಾನೊಂದು ಕಾಲದಲ್ಲಿ ಚಿತ್ರವನ್ನು ೧೯೭೭ರಲ್ಲಿ ನಿರ್ದೇಶಿಸುವಾಗ ಕಳರಿಪಯಟ್ಟು ಮತ್ತು ಮುಂತಾದ ಸಾಹಸಕಲೆಗಳನ್ನು ಮೊದಲ ಬಾರಿ ಕನ್ನಡ ತೆರೆಯಲ್ಲಿ ಅಳವಡಿಸಿದ ಹಿರಿಮೆ ಕಾರ್ನಾಡರದ್ದು. "ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಸೋಲು ಗೆಲುವು ಎರಡೂ ಅಡಗಿದೆ." ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ. ಕಾರ್ನಾಡರು ಅಭಿನಯಿಸಿದ ಪ್ರಮುಖ ಚಲನಚಿತ್ರಗಳು ಚಿತ್ರದ ಹೆಸರುವರ್ಷಪಾತ್ರಭಾಷೆಉಲ್ಲೇಖಟೈಗರ್ ಜಿಂದಾ ಹೆ ೨೦೧೭ ಶಿನಾಯ್ ಹಿಂದಿjdjrjrಶಿವಾಯ್ ೨೦೧೬ ಅನುಷ್ಕಾಳ ತಂದೆ ಹಿಂದಿ24೨೦೧೬ಸತ್ಯ ನ ತಂದೆತಮಿಳುಧೀರ ರಣವಿಕ್ರಮ೨೦೧೫Home Minister Of Karnatakaಕನ್ನಡರುದ್ರ ತಾಂಡವ೨೦೧೫ಚಿರಂಜೀವಿ ಸರ್ಜಾನ ತಂದೆಸವಾರಿ ೨೨೦೧೪ವಿಶ್ವನಾಥ್ಕನ್ನಡSamrat & Co.೨೦೧೪ಯಾರೇ ಕೂಗಾಡಲಿ೨೦೧೨ಕನ್ನಡಮುಗಮೂಡಿ೨೦೧೨ತಮಿಳುಏಕ್ ಥಾ ಟೈಗರ್೨೦೧೨ಡಾ.ಶೆನಾಯ್(RAW Chief)ಕೆಂಪೇಗೌಡ೨೦೧೧ಮಹಾದೇವ ಗೌಡ (ಕಾವ್ಯಾಳ ತಂದೆ)ಕನ್ನಡನರ್ತಗಿ೨೦೧೧ತಮಿಳುKomaram Puli೨೦೧೦Narasimha rao (Prime minister)ತೆಲುಗುಲೈಫ್ ಗೋಸ್ ಆನ್೨೦೦೯ಸಂಜಯ್Aashayein೨೦೦೯Parthasarthi8 x 10 ತಸ್ವೀರ್೨೦೦೯ಅನಿಲ್ ಶರ್ಮಾಆ ದಿನಗಳು೨೦೦೭ಗಿರೀಶ್ ನಾಯಕ್ಕನ್ನಡತನಮ್ ತನಮ್೨೦೦೬ಶಾಸ್ತ್ರಿಕನ್ನಡDor೨೦೦೬ರನ್ಧೀರ್ ಸಿಂಗ್ಇಕ್ಬಾಲ್೨೦೦೫ಗುರೂಜಿಶಂಕರ್ ದಾದಾ ಎಮ್.ಬಿ.ಬಿ.ಎಸ್೨೦೦೪ಸತ್ಯ ಪ್ರಸಾದ್ತೆಲುಗುChellamae೨೦೦೪ರಾಜಶೇಖರ್ತಮಿಳುಹೇ ರಾಮ್೨೦೦೦Uppilli Iyengarತಮಿಳುಪುಕಾರ್2000ಮಿಸ್ಟರ್ ರಾಜ್ ವಂಶ್Prathyartha೧೯೯೯ಶೇಶಾಂಗ್ ದೀಕ್ಷಿತ್ (Home Minister of India)AK-47೧೯೯೯ವಿಶ್ವನಾಥ್ ರಾವ್ (Shiva Rajkumar's Father)ಕನ್ನಡAakrosh: Cyclone of Anger೧೯೯೮ರಾಜ್ವಂಶ್ ಶಾಸ್ತ್ರಿಏಪ್ರಿಲ್ ಫೂಲ್೧೯೯೮ಕನ್ನಡChina Gate೧೯೯೮Forest Officer Sunder RajanMinsaara Kanavu೧೯೯೭ಅಮಲ್ ರಾಜ್ತಮಿಳುRatchagan೧೯೯೭ಶ್ರೀರಾಮ್ತಮಿಳುThe Prince೧೯೯೬ವಿಶ್ವನಾಥ್ಮಲಯಾಳಂAatank೧೯೯೬Inspector Khanಧರ್ಮ ಚಕ್ರಂ೧೯೯೬Sangeetha Sagara Ganayogi Panchakshara Gavai೧೯೯೫Hanagal Kumaraswamijiಕನ್ನಡಆಘಾತ೧೯೯೪Psychiatristಕನ್ನಡKadhalan೧೯೯೪Kakarla Satyanarayana Murtiತಮಿಳುಪ್ರಾಣ ದತ್ತ೧೯೯೩ಚೆಲುವಿ೧೯೯೨Village HeadmanGunaa೧೯೯೧Antarnaad೧೯೯೧ಬ್ರಹ್ಮ೧೯೯೧Chaitanya೧೯೯೧Nehru: The Jewel of India೧೯೯೦ಸಂತ ಶಿಶುನಾಳ ಷರೀಫ೧೯೯೦ಗುರು ಗೋವಿಂದಭಟ್ಟರುಕನ್ನಡಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟ ಗೌರವಮಿಲ್ ಗಯೀ ಮಂಜಿಲ್ ಮುಝೆ೧೯೮೯ಆಕರ್ಷಣ್೧೯೮೮ಸೂತ್ರಧಾರ್೧೯೮೭ಜಮೀನ್ದಾರನಾನ್ ಅದಿಮೈ ಇಲ್ಲೈ೧೯೮೬ರಜನೀಕಾಂತ್ರ ಮಾವತಮಿಳುನೀಲ ಕುರಿಂಜಿ ಪೋತಪ್ಪೋಳ್೧೯೮೬ಅಪ್ಪು ಮೆನನ್ಮಲಯಾಳಂಸುರ್ ಸಂಗಮ್೧೯೮೫ಪಂಡಿತ್ ಶಿವಶಂಕರ ಶಾಸ್ತ್ರಿಮೇರಿ ಜಂಗ್೧೯೮೫ದೀಪಕ್ ವರ್ಮಜಮಾನ೧೯೮೫ಸತೀಶ್ ಕುಮಾರ್ನೀ ತಂದ ಕಾಣಿಕೆ೧೯೮೫ಡಾ.ವಿಷ್ಣುವರ್ಧನ್ರ ತಂದೆಡೈವೋರ್ಸ್೧೯೮೪ತರಂಗ್೧೯೮೪ದಿನೇಶ್ಅನ್ವೇಷಣೆ೧೯೮೩ರೊಟ್ಟಿಏಕ್ ಬಾರ್ ಚಲೇ ಆವೋ೧೯೮೩ದೀನದಯಾಳ್ಆನಂದ ಭೈರವಿ೧೯೮೩ನಾರಾಯಣ ಶರ್ಮತೇರೀ ಕಸಮ್೧೯೮೨ರಾಕೇಶ್ಅಪರೂಪ್೧೯೮೨ಉಂಬರ್ಥಾ೧೯೮೨ಅಡ್ವೋಕೇಟ್ ಸುಭಾಷ್ ಮಹಾಜನ್ಮರಾಠಿಶಮಾ೧೯೮೧ನವಾಬ್ ಯೂಸುಫ್ ಖಾನ್ಅಪ್ನೇ ಪರಾಯೇ೧೯೮೦ಹರೀಶ್ಹಿಂದಿಮನ್ ಪಸಂದ್೧೯೮೦ ಖಿನಾಥ್ಆಶಾ೧೯೮೦ದೀಪಕ್ಬೇಕಸೂರ್1980ಡಾ. ಆನಂದ್ ಭಟ್ನಾಗರ್ರತ್ನದೀಪ್೧೯೭೯ಸಂಪರ್ಕ್೧೯೭೯ಹೀರಾಜೀವನ್ಮುಕ್ತ್೧೯೭೭ಅಮರಜೀತ್ಹಿಂದಿಸ್ವಾಮಿ೧೯೭೭ಘನಶ್ಯಾಮ್ಹಿಂದಿಮಂಥನ್೧೯೭೬ಡಾ. ರಾವ್ಹಿಂದಿನಿಶಾಂತ್೧೯೭೫ಸ್ಕೂಲ್ ಮಾಸ್ಟರ್ಹಿಂದಿಜಾದೂ ಕಿ ಶಂಖ್೧೯೭೪ಹಿಂದಿವಂಶವೃಕ್ಷ೧೯೭೧ಕನ್ನಡಸಂಸ್ಕಾರ೧೯೭೦ಪ್ರಾಣೇಶಾಚಾರ್ಯಕನ್ನಡ ಅಭಿನಯಿಸಿದ ತೆಲುಗು ಚಿತ್ರಗಳು ಚೈತನ್ಯ -೧೯೯೧ ಪುಲಿ - ೨೦೧೦ ಪ್ರೇಮಿಕುಡು(:te:ప్రేమికుడు) ಆನಂದಭೈರವಿ(:te:ఆనంద భైరవి) ರಕ್ಷಕುಡು(:te:రక్షకుడు) ಧರ್ಮ ಚಕ್ರಂ(:te:ధర్మచక్రం) -೧೯೯೬ ಶಂಕರ್ ದಾದಾ ಎಂ.ಬಿ.ಬಿ.ಎಸ್(:en:శంకర్ దాదా ఎం.బి.బి.ఎస్.) -೨೦೦೪ ಗುಣ - ೧೯೯೧ ಕೊಂಡೂರ - ೧೯೭೮ ಪ್ರಶಸ್ತಿ, ಸನ್ಮಾನಗಳು ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ -೧೯೭೪ ಪದ್ಮಭೂಷಣ -೧೯೯೨ ಜ್ಞಾನಪೀಠ -೧೯೯೮ ಕಾಳಿದಾಸ ಸಮ್ಮಾನ್ - ೧೯೯೮ ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ೧೯೮೮-೯೩ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ೨೦೦೮ -೦೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಡಳಿ ಘೋಷಿಸಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಗಿರೀಶ್ ಕಾರ್ನಾಡ್ ನಿರಾಕರಿಸಿದ್ದಾರೆ . ಜೀವಮಾನದ ಸಾಧನೆಗಾಗಿ ಕೆ.ಎಸ್.ಆರ್.ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿತ್ತು.(ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ "ಕೆ.ಎಸ್.ಆರ್.ದಾಸ್" ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ಭಾರ್ಗವ ನೀಡಿದ್ದರು). ಟಾಟಾ ಲಿಟರೇಚರ್ ಲೈವ ಜೀವಮಾನ ಸಾಧನೆ (ಚಿತ್ರೋದ್ಯಮ)-2017 ಡಾ.ಟಿ.ಎಂ.ಎ.ಪೈ ವಿಶಿಷ್ಟ ಕೊಂಕಣಿ ಸಾಧಕ ಪ್ರಶಸ್ತಿ (1996) ನಿಧನ ಗಿರೀಶ್ ಕಾರ್ನಾಡ್ ಅವರು ದಿನಾಂಕ ೧೦-೬-೨೦೧೯ರಂದು ಬೆಂಗಳೂರಿನಲ್ಲಿ ಮರಣ ಹೊಂದಿದರು. ಹೊರ ಸಂಪರ್ಕಕೊಂಡಿಗಳು ಹೊಸ ಪರಂಪರೆಗೆ ಮೇಲ್ಪಂಕ್ತಿ ಹಾಕಿದ ನಾಯಕ ಕಾರ್ನಾಡ- ಲೇ:ಪ್ರೊ.ಜಿ.ಕೆ. ಗೋವಿಂದರಾವ್ ಉಲ್ಲೇಖಗಳು ವರ್ಗ:ನಾಟಕಕಾರರು ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವರ್ಗ:ಚಲನಚಿತ್ರ ನಟರು ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವರ್ಗ:ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರು ವರ್ಗ:ಕಲಾವಿದರು ವರ್ಗ:ಲೇಖಕರು ವರ್ಗ:೨೦೧೯ ನಿಧನ ವರ್ಗ:೧೯೩೮ ಜನನ ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
ಡಾ. ಗಿರೀಶ್ ಕಾರ್ನಾಡ್
https://kn.wikipedia.org/wiki/ಡಾ._ಗಿರೀಶ್_ಕಾರ್ನಾಡ್
REDIRECT ಗಿರೀಶ್ ಕಾರ್ನಾಡ್
ಗೋಪಾಲಕೃಷ್ಣ ಅಡಿಗ
https://kn.wikipedia.org/wiki/ಗೋಪಾಲಕೃಷ್ಣ_ಅಡಿಗ
ಎಂ. ಗೋಪಾಲಕೃಷ್ಣ ಅಡಿಗ : - (೧೮ ಫೆಬ್ರುವರಿ ೧೯೧೮ - ೧೪ ನವೆಂಬರ ೧೯೯೨) ಗೋಪಾಲಕೃಷ್ಣ ಅಡಿಗರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬ ಹಳ್ಳಿಯಲ್ಲಿ. ಪುರೋಹಿತ ಮನೆತನಕ್ಕೆ ಸೇರಿದ ಅಡಿಗರ ತಂದೆ ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿಯ ಗೀತೆಗಳನ್ನೂ ರಚಿಸುತ್ತಿದ್ದರಂತೆ. ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನದ ತವರೂರು. ಚಿಕ್ಕಂದಿನಲ್ಲಿ ಅಡಿಗರು ಯಕ್ಷಗಾನ ಪ್ರಸಂಗಗಳು ಸುತ್ತಮುತ್ತ ಎಲ್ಲಿ ನಡೆದರೂ ತಪ್ಪಿಸಿಕೊಳ್ಳದೆ ನೋಡುತ್ತಿದ್ದರಂತೆ. ಆ ಹಾಡುಗಳ, ಮಟ್ಟುಗಳ ಕುಣಿತದ ಭಂಗಿಗಳು ಅವರ ಮನಸ್ಸಿನಲ್ಲಿ ಸದಾ ಅನುರಣನಗೊಳ್ಳುತ್ತಿತ್ತಂತೆ. "ಈ ವಾತಾವರಣದಲ್ಲಿ ನಾನು ನನ್ನ ಹದಿಮೂರನೇ ವಯಸ್ಸಿನಲ್ಲೇ ಪದ್ಯ ರಚನೆಗೆ ಕೈ ಹಾಕಿದೆನೆಂದು ತೋರುತ್ತದೆ. ಭಾಮಿನಿ ಷಟ್ಪದಿ, ವಾರ್ಧಕ ಷಟ್ಪದಿ, ಕಂದ ಪದ್ಯಗಳನ್ನು ರಚಿಸುತ್ತಿದ್ದೆ" ಎಂದು ಅವರೇ ಹೇಳಿದ್ದಾರೆ.http://www.hinduonnet.com/thehindu/mp/2002/09/26/stories/2002092600660200.htm The Hindu - 26 September 2002 Gopalakrishna Adiga remembered The Hindu - 4 October 2004 ವಿದ್ಯಾಭ್ಯಾಸ/ಶಿಕ್ಷಣ ಬೈಂದೂರುಗಳಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಅಡಿಗರು ಕುಂದಾಪುರದ ಹೈಸ್ಕೂಲಿನಲ್ಲಿ ಶಿಕ್ಷಣ ಮುಗಿಸಿದರು. ಹದಿಮೂರರ ಹರೆಯದಲ್ಲೇ ಪದ್ಯ ಬರೆಯಲಾರಂಭಿಸಿದ ಅವರಿಗೆ ಕುಂದಾಪುರದ ವಾತಾವರಣ ಇನ್ನಷ್ಟು ಬರೆಯಲು ಪ್ರೇರಣೆ ನೀಡಿತು.ಮೊದಲೇ ಇದ್ದ ಓದುವ ಹುಚ್ಚು ಇನ್ನಷ್ಟು ಬಲವಾಯಿತು. ಆ ಸಂದರ್ಭದಲ್ಲಿ ಶಿವರಾಮ ಕಾರಂತರ ಅಣ್ಣ ಕೋಟ ಲಕ್ಮೀನಾರಾಯಣ ಕಾರಂತರು ಅಡಿಗರಿಗೆ ಒಳ್ಳೆಯ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ಆಗ ಇಡೀ ದೇಶವೇ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟ, ಪರಾಕಾಷ್ಠೆಯನ್ನು ಸಮೀಪಿಸುತ್ತಿದ್ದ ಕಾಲ. ಅಡಿಗರೂ ಹುಮ್ಮಸ್ಸಿನಿಂದ ಹೋರಾಟದಲ್ಲಿ ಭಾಗಿಯಾದರು. ಹೆಂಡದಂಗಡಿಯ ಮುಂದೆ `ಪಿಕೆಟಿಂಗ್' ಮಾಡಿದರು. ದೇಶ ಭಕ್ತಿಯ ಉತ್ಸಾಹ, ಉದ್ರೇಕಗಳು ಅವರ ಕಾವ್ಯ ರಚನೆಗೆ ಪೂರಕವಾದವು. ಅವರ ಕೆಲವು ಕವನಗಳು ಬೆಂಗಳೂರಿನ `ಸುಬೋಧ', ಮಂಗಳೂರಿನ `ಬಡವರ ಬಂಧು', ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ಎಸ್.ಎಸ್.ಎಲ್.ಸಿ ಮುಗಿದ ನಂತರ ಅಡಿಗರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ತರಗತಿಗೆ ಸೇರಿ ಕೊಂಡರು. ಅಲ್ಲಿ ಕಳೆದ ಐದಾರು ವರ್ಷ ಅವರ ಬದುಕಿನ ಒಂದು ಮಹತ್ವದ ಅವಧಿಯಾಗಿತ್ತು. ಈ ಅವಧಿಯಲ್ಲಿ ಅವರಿಗೆ ಬಿ.ಎಚ್. ಶ್ರೀಧರ್, ಹೆಚ್ ವೈ.ಶಾರದಾಪ್ರಸಾದ್, ಚದುರಂಗ, ಟಿ.ಎಸ್.ಸಂಜೀವ ರಾವ್. ಎಂ.ಶಂಕರ್, ಕೆ.ನರಸಿಂಹಮೂರ್ತಿ ಮುಂತಾದವರ ಒಡನಾಟ, ಸ್ನೇಹ ಅವರಿಗೆ ಲಭ್ಯವಾಯಿತು. `ಭಾವತರಂಗ' ಸಂಕಲನದ ಹೆಚ್ಚಿನ ಕವನಗಳು ಈ ಅವಧಿಯಲ್ಲಿ ರಚಿತವಾದವು. ಅವುಗಳಲ್ಲೊಂದಾದ `ಒಳತೋಟಿ' ಎಂಬ ಕವನ ಬಿ.ಎಂ.ಶ್ರೀ ರಜತ ಮಹೋತ್ಸವದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನದ ಸುವರ್ಣ ಪದಕವನ್ನು ಪಡೆಯಿತು. ಅಡಿಗರು ತಮ್ಮ ಪ್ರಾರಂಭದ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡದಲ್ಲಿ ಮುಗಿಸಿ, ನಂತರ ಮೈಸೂರಿಗೆ ಬಂದರು. ಬಿ.ಎ.(ಆನರ್ಸ್), ಎಂ.ಎ.(ಇಂಗ್ಲೀಷ್) ಪದವಿಗಳನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಅವರು ಮೈಸೂರು ಶಾರದಾವಿಲಾಸ ಕಾಲೇಜು, ಸೆಂಟ್ ಫಿಲೋಮಿನಾ ಕಾಲೇಜು ಹಾಗೂ ಕುಮಟಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ನಂತರ ಉಡುಪಿಯ ಪೂರ್ಣಪ್ರಜ್ಞ ಕಾಲೇಜು, ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡಿದ ಅಡಿಗರು ನ್ಯಾಷನಲ್ ಬುಕ್ ಟ್ರಸ್ಟ್‌ನ ನಿರ್ದೇಶಕರಾಗಿ, ಸಿಮ್ಲಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ರಿಸರ್ಚ್ ಫೆಲೋ ಆಗಿ ಕೆಲಸ ಮಾಡಿದರು. ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ ಹಾಗೂ ಕಬೀರ್ ಸಂಮಾನ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. "ಸಾಕ್ಷಿ" ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದರು. ಒಮ್ಮೆ ಬೆಂಗಳೂರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೂ ಸ್ಫರ್ಧಿಸಿದ್ದರು. ಅಡಿಗರು ಸಾಗರದಲ್ಲಿದ್ದಾಗ ಕೇವಲ ಸಾಹಿತಿಗಳನ್ನು ಕಾಲೇಜಿಗೆ ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿದ್ದರು. ಅವರು ತಮ್ಮ ವಿದ್ಯಾರ್ಥಿಗಳಿಗೂ ವಿವಿಧ ಪುಸ್ತಕಗಳನ್ನು ಓದಲು ಪ್ರೇರೇಪಿಸುತ್ತಿದ್ದರು. ಅವರು ಕಾಲೇಜಿನ ಉಪನ್ಯಾಸಕರನ್ನು ತಮ್ಮ ಗೆಳೆಯರಂತೆಯೇ ಸ್ವೀಕರಿಸಿದ್ದರು. ಅವರು ಒಬ್ಬರೇ ಕಾಲೇಜಿನ 'ಕ್ಯಾಂಟೀನ್' ಹೋಗಿದ್ದು ತೀರಾ ಅಪರೂಪವೇ ಸರಿ. ಕೆಲವು ಬಾರಿ ಅವರು ತಮ್ಮ ವಿದ್ಯಾರ್ಥಿಗಳಿಗೂ ಶುಲ್ಕ ತುಂಬಲು, ಪುಸ್ತಕ ಕೊಳ್ಳಲು ತಮ್ಮ ಸಂಬಳದಿಂದಲೇ ಸಹಾಯ ಮಾಡುತ್ತಿದ್ದರು. ಮನೆಯಲ್ಲಿಯೂ ಒಬ್ಬಿಬ್ಬ ವಿದ್ಯಾರ್ಥಿಗಳು ಇದ್ದೇ ಇರುತ್ತಿದ್ದರು.http://www.cnn.com/profiles/manu-raju The Mysore generation The Hindu - 25 Apr 2004. - Indian Poets ಸಾಹಿತ್ಯ ಕನ್ನಡ ಸಾಹಿತ್ಯದ ನವ್ಯ ಕಾವ್ಯದ ಪ್ರವರ್ತಕರು. ಮೊಗೇರಿ ಗೋಪಾಲಕೃಷ್ಣ ಅಡಿಗರು ಕನ್ನಡದ ಸರ್ವಕಾಲಿಕ ಶ್ರೇಷ್ಠ ಕವಿಗಳಲ್ಲೊಬ್ಬರು. ಕನ್ನಡದ ಕಾವ್ಯ ಕ್ಷೇತ್ರದಲ್ಲಿ ನವ್ಯತೆ ಎಂಬ ಹೊಸ ಸಂಪ್ರದಾಯವನ್ನು ಬೆಳೆಸಿ, ಅದನ್ನು ಪರಾಕಾಷ್ಠೆಗೊಯ್ದು ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಲು ಕಾರಣರಾದ ನವ್ಯ ಕಾವ್ಯದ ಪ್ರವರ್ತಕ ಕವಿ. ಕಾವ್ಯದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಪರಿವರ್ತನೆ ಕಥೆ, ಕಾದಂಬರಿ, ನಾಟಕ, ವಿಮರ್ಶೆ ಮುಂತಾದ ಇತರ ಸಾಹಿತ್ಯ ಪ್ರಕಾರಗಳ ಮೇಲೂ ಪ್ರಭಾವ ಬೀರಿ, ಸಮಗ್ರ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು. ಅಡಿಗರು ಕನ್ನಡ ವಿಮರ್ಶೆಯಲ್ಲೂ ಪ್ರಬುದ್ಧತೆಯನ್ನು ತಂದರು. `ಸಾಕ್ಷಿ' ಎಂಬ ಉನ್ನತಮಟ್ಟದ ಸಾಹಿತ್ಯಪತ್ರಿಕೆಯನ್ನು ಸುಮಾರು ಇಪ್ಪತ್ತು ವರ್ಷ ಕಾಲ ನಡೆಸಿ, ಹೊಸ ಸಂವೇದನೆಯನ್ನು ಹೊಸ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಕಾವ್ಯ, ಗದ್ಯ, ವೈಚಾರಿಕತೆ, ವ್ಯಕ್ತಿತ್ವ, ಪ್ರಭಾವ, ಮಾರ್ಗದರ್ಶನಗಳ ಮೂಲಕ ಅಡಿಗರು ಮಾಡಿದ ಸಾರಸ್ವತ ಸಾಧನೆ ಅನನ್ಯವಾದುದು.ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ- ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರ ಎಲ್ಲಾ ವೈಚಾರಿಕ ಲೇಖನಗಳೂ ‘ಸಮಗ್ರಗದ್ಯ’(ಸಾಕ್ಷಿಪ್ರಕಾಶನ, 1977) ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಅಡಿಗರ ಮೊದಲ ಕವನ ಸಂಕಲನ ‘ಭಾವತರಂಗ’ದ ಮುನ್ನುಡಿಯಲ್ಲಿ ಬೇಂದ್ರೆಯವರು ಹೇಳಿದ್ದಾರೆ: “ನಾನು ಕವಿತೆಗಳನ್ನು ಬರೆಯಲು ಆರಂಭಿಸಿದಾಗ ಇದ್ದ ಶೈಲಿಯ ಪ್ರಾಯೋಗಿಕತೆ ಇಂದಿನ ಕನ್ನಡದಲ್ಲಿ ಅಷ್ಟುಮಟ್ಟಿಗೆ ಇಲ್ಲ. ಗೆಳೆಯ ಗೋಪಾಲಕೃಷ್ಣರಿಗೆ ಅವರ ವಯಸ್ಸಿಗಿದ್ದ ಶೈಲಿಯ ಪಾಕ ನನಗೆ ಆ ವಯಸ್ಸಿಗೆ ಇರಲಿಲ್ಲ. ಆದರೆ ನಮಗೆ ಆ ಕಾಲದಲ್ಲಿದ್ದ ನಾವಿನ್ಯದ ಅನುಕೂಲ ಈಗಿನವರಿಗಿಲ್ಲ”. ಬೇಂದ್ರೆಯವರು ಹೇಳುವಂತೆ ಆ ಕಾಲಕ್ಕಾಗಲೇ ಕನ್ನಡ ಕಾವ್ಯ ಸಂದರ್ಭ ಸಿದ್ಧಶೈಲಿಯೊಂದು ರೂಪುಗೊಂಡಿತ್ತು. ನವೋದಯ ಕಾವ್ಯ ಸಂಪ್ರದಾಯದ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿತ್ತು. 1926ರ ವೇಳೆಗೆ ಬೀ.ಎಂ.ಶ್ರೀ ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆದ ಕನ್ನಡ ಕಾವ್ಯ ಒಂದು ಸ್ಪಷ್ಟ ರೂಪ ಪಡೆದು ಮಹತ್ವದ ಸಂಕಲನಗಳು ಆ ವೇಳೆಗಾಗಲೇ ಪ್ರಕಟವಾಗಿದ್ದವು. ಹೊಸದಾಗಿ ಬರೆಯಲು ಆರಂಭಿಸುವ ತರುಣರಿಗೆ ಒಂದು ಕಾವ್ಯ ಮಾದರಿ ಕಣ್ಣೆದುರಿಗಿತ್ತು. ಈ ದಾರಿಯನ್ನು ಬಿಟ್ಟ ಹೊಸದಾರುಯನ್ನು ಕಂಡುಕೊಳ್ಳುವುದು, ತನ್ನತನವನ್ನು ರೂಪಿಸಿಕೊಳ್ಳುವುದು ಅಡಿಗರು ಕಾವ್ಯ ರಚನೆಯಲ್ಲಿ ಎದುರಿಸಿದ ಬಹುಮುಖ್ಯ ಸಮಸ್ಯೆ ಎಂದು ತೋರುತ್ತದೆ. ಅಡಿಗರ ಕವನದ ಸಾಲುಗಳು ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು, ಬಗೆಯೊಳಗನೇ ತೆರೆದು ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ ‘ಭಾವತರಂಗದ’ ಮೊದಲ ಕವಿತೆಯಲ್ಲಿಯೇ ತನ್ನತನವನ್ನು ಕಂಡುಕೊಳ್ಳುವ ಮನೋಭಾವವನ್ನು ಅಡಿಗರು ಸ್ಪಷ್ಟವಾಗಿ ಸೂಚಿಸಿದ್ದಾರೆ. ವಿಧಿಯೇ ನಿನ್ನಿದಿರು ಮಾರಾಂತು ಹೋರಾಡಿ ಕೆಚ್ಚೆದೆತನದ ಬಲ್ಮೆಯನ್ನು ಬಿತ್ತರಿಪೆನು ಪದವನಿಡುತೆನ್ನೆದೆಯ ಮೇಲೆ ತಾಮಡವವೆಸಗು ಬೆದರುವೆನೆ ಬೆಚ್ಚುವೆನೆ ನಿನಗೆ ನಾನು(ವಿಧಿಗೆ) ಈ ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು ವಿರೋಧಿಸಿದ್ದು ಇಂಥ ರೀತಿಯನ್ನೇ. ದ್ವಿತೀಯ ಪ್ರಾಸ, ಮಾರಾಂತು, ಬಿತ್ತರಿ ಪೆನು, ಎಸಗು ಮೊದಲಾದ ಪದಪ್ರಯೋಗಗಳ ನಡೆದಿದೆ. ಹೊಸಹಾದಿಯನು ಹಿಡಿದು ನಡೆಯಣ್ಣ ಮುಂದೆ ಹೊಸ ಜೀವ ಹೊಸ ಭಾವ ಹೊಸ ವೇಗದಿಂದೆ ಅಂಜದಿರು ಗೆಳೆಯ ಹೊಸಹಾದಿಯನು ಹಿಡಿಯೆ ಮಂಜುತರ ಸೃಷ್ಟಿಗಾನದಲಿ ಮೈಮರೆಯೆ ಎಂಜಲಾಗದ ಮಧುರ ಮಧುರಸವ ಸವಿಯೆ ರಂಜಿಸುವ ಕಾಡುಮೇಡುಗಳನಂಡಲೆಯೆ(ಹೊಸ ಹಾದಿ) ಇಂಥ ಬಾಲ್ಯ ಕಳೆದ ಬಳಿಕ ಬಂದಾ ಹರೆಯ ದುಲ್ಕೆಯಿದು ಥಟ್ಟನೆ ಪಳಂಚಲೆದೆಗೆ ಅಲೆಅಲೆಗಳೆದ್ದು ಬಗೆ ಕದಡಿ ಹೋದುದು ಶಾಂತ ಸರದೊಳಾವುದೋ ಕಲ್ಲು ಬಿದ್ದ ಹಾಗೆ ಹಲವು ತಾನಗಳ ಸಂತಾನವಾದುದು ಮಧುರ ನೊಳಬಾಳು; ಹರಯದೊಡ್ಡೋಲಗದಲಿ ತನಗೆಲ್ಲಿ ನೆಲೆ? ಬಾಲಹಾಡಿಗೆಲ್ಲಿಹುದು ಬೆಲೆ? ಎಂದು ಮುರುಟಿದನು ತನುಮನಗಳಲ್ಲಿ(ಒಳತೋಟಿ) ಕಂಡು ಮಾತಾಡಿ ಮೈ ದಡವಿ ನಗಿಸಿ ನಲಿವರಿಲ್ಲ ಬೆಂದ ಬಗೆಗೆ ಸೊದೆಯನೆರೆದು ಕಂಬನಿಯ ತೊಡೆವರಿಲ್ಲ ಮಾನವ ಸಹಜ ಸಂಬಂಧಗಳಿಂದ ದೊರಕಬಹುದಾಗಿದ್ದ ಪ್ರೀತಿಯಿಂದ ವಂಚಿತರಾದ ಕವಿ ಹೇಳುತ್ತಾರೆ. ಕಲ್ಲಾಗು ಕಲ್ಲಾಗು ಬಾಳ ಬಿರುಗಾಳಿಯಲಿ ಅಲ್ಲಾಡದೆಯೆ ನಿಲ್ಲು ಜೀವ( ಕಲ್ಲಾಗು ಕಲ್ಲಾಗು ) ಉದ್ಯೋಗ ಪರ್ವ ಬಿ.ಎ ಆನರ್ಸ್ ಮುಗಿಸಿದ ಬಳಿಕ ಅಡಿಗರು ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಲ್ಲಿ ಅಧ್ಯಾಪಕರಾಗಿ ದುಡಿದರು. ಸ್ವಲ್ಪ ಕಾಲ ಅಠಾರ ಕಚೇರಿಯಲ್ಲಿಯೂ ಗುಮಾಸ್ತರಾಗಿ ದುಡಿದರು. ಅನಂತರ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾದರು. (೧೯೪೮-೫೨) ಬಳಿಕ ಎರಡು ವರ್ಷ ಕುಮಟಾದ ಕೆನರಾ ಕಾಲೇಜಿನಲ್ಲೂ, ಅನಂತರ ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿಯೂ, ಇಂಗ್ಲಿಷ್ ಉಪನ್ಯಾಸಕರಾಗಿ (೧೯೫೪-೫೨) ಹತ್ತು ವರ್ಷ ದುಡಿದರು.೧೯೬೪ರಿಂದ ೬೮ರವರೆಗೆ ಸಾಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ, ಆ ಹೊಸ ಕಾಲೇಜನ್ನು ಕಟ್ಟಿದರು. ೧೯೬೮ರಲ್ಲಿ ಆ ಹುದ್ದೆಯನ್ನು ತ್ಯಜಿಸಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲರಾದರು. ೧೯೭೧ರಲ್ಲಿ ಅವರ ಬದುಕಿನಲ್ಲಿ ಒಂದು ಅನಿರೀಕ್ಷಿತ ತಿರುವು ಬಂತು. ಲೋಕಸಭಾ ಚುನಾವಣೆಯಲ್ಲಿ ೯ ಪಕ್ಷಗಳ ಒಕ್ಕೂಟದ ಪರವಾಗಿ ಜನಸಂಘದ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಸ್ಪರ್ಧಿಸಬೇಕೆಂಬ ಸ್ನೇಹಿತರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದರು. ಆಗ ವಿಜೃಂಭಿಸುತ್ತಿದ್ದ `ಇಂದಿರಾ ಅಲೆ'ಯ ಅಬ್ಬರದಲ್ಲಿ ಅವರಿಗೆ ಸೋಲಾಯಿತು. ತತ್ಪರಿಣಾಮವಾಗಿ ಪೂರ್ಣಪ್ರಜ್ಞ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಗೆ ರಾಜಿನಾಮೆ ಕೊಡಬೇಕಾಯಿತು. ಅನಂತರ ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ ನಲ್ಲಿ ಉಪನಿರ್ದೇಶಕರಾಗಿ ಸ್ವಲ್ಪ ಕಾಲ ದುಡಿದ ಬಳಿಕ ಶಿಮ್ಲಾದ `ಇಂಡಿಯನ್ ಇನ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿಸ್' ಸಂಸ್ಥೆಯಲ್ಲಿ ಮೂರು ವರ್ಷ ವಿಸಿತ್ಟಿಂಗ್ ಫೆಲೊ ಆಗಿ ಕೆಲಸ ಮಾಡಿದರು. ನವ್ಯದ ನಾಯಕತ್ವ ೧೯೫೫ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಹೊಸ ಪೀಳಿಗೆಯ ಯು.ಆರ್.ಅನಂತಮೂರ್ತಿ, ಎ.ಕೆ. ರಾಮಾನುಜನ್, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಲಂಕೇಶ್, ತೇಜಸ್ವಿ, ಲಕ್ಶ್ಮಿ ನಾರಾಯಣ ಭಟ್ಟ, ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಚಂದ್ರಶೇಖರ ಪಾಟೀಲ, ಎಂ.ಎನ್. ವ್ಯಾಸರಾವ್, ಜಯಂತ ಕಾಯ್ಕಿಣಿ, ಕ.ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ.ಎಚ್. ನಾಯಕ್, ಶ್ರೀಕೃಷ್ಣ ಆಲನಹಳ್ಳಿ ನಾ.ಮೊಗಸಾಲೆ ಮುಂತಾದ ಅನೇಕ ಲೇಖಕರು ತಮ್ಮದೇ ಆದ ರೀತಿಯಲ್ಲಿ ನವ್ಯಪ್ರಜ್ಞೆಯ ಸಾಹಿತ್ಯವನ್ನು ರಚಿಸಿದರು. ಇವರಲ್ಲಿ ಚಂಪಾ ಮತ್ತು ತೇಜಸ್ವಿ ಮುಂತಾದ ಕೆಲವರು ಕೆಲಕಾಲದ ನಂತರ ನವ್ಯ ಮಾರ್ಗದಿಂದ ಕೊಂಚ ಭಿನ್ನವಾದ ಮಾರ್ಗವನ್ನು ಹಿಡಿದರೂ ಆರಂಭದಲ್ಲಿ ಅಡಿಗರು ಪ್ರವರ್ತಿಸಿದ ನವ್ಯತೆಯ ಪ್ರಭಾವಾದಲ್ಲೇ ತಮ್ಮ ಸೃಜನಶೀಲತೆಯನ್ನು ರೂಪಿಸಿಕೊಂಡುದುದನ್ನು ಮರೆಯುವಂತಿಲ್ಲ. ಕವನ ಸಂಕಲನಗಳು ಭಾವತರಂಗ (೧೯೪೬) ಕಟ್ಟುವೆವು ನಾವು (೧೯೪೮) ನಡೆದು ಬಂದ ದಾರಿ (೧೯೫೨) ಚಂಡೆಮದ್ದಳೆ (೧೯೫೪) ಭೂಮಿಗೀತ (೧೯೫೯) ವರ್ಧಮಾನ (೧೯೭೨) ಇದನ್ನು ಬಯಸಿರಲಿಲ್ಲ (೧೯೭೫) ಮೂಲಕ ಮಹಾಶಯರು (೧೯೮೦) ಬತ್ತಲಾರದ ಗಂಗೆ (೧೯೮೩) ಮಾವೋ ಕವನಗಳು ಚಿಂತಾಮಣಿಯಲ್ಲಿ ಕಂಡ ಮುಖ (೧೯೮೭) ಸುವರ್ಣ ಪುತ್ಥಳಿ (೧೯೯೦) ಬಾ ಇತ್ತ ಇತ್ತ(೧೯೯೩) ೧೯೩೭ರಿಂದ ೧೯೭೬ರವರೆಗಿನ ಎಲ್ಲ ಸಂಕಲನಗಳನ್ನೂ ಒಳಗೊಂಡ ಅವರ ಸಮಗ್ರ ಕಾವ್ಯ (ಐ.ಬಿ.ಎಚ್. ಪ್ರಕಾಶನ, ೧೯೮೭) ಪ್ರಕಟವಾಗಿದೆ. ಅವರ ಈ ಎಲ್ಲ ವೈಚಾರಿಕ ಲೇಖನಗಳೂ "ಸಮಗ್ರ ಗದ್ಯ" (ಸಾಕ್ಷಿ ಪ್ರಕಾಶನ, ೧೯೭೭) ಎಂಬ ಸಂಪುಟವೊಂದರಲ್ಲಿ ಪ್ರಕಟವಾಗಿದೆ. ಕಾದಂಬರಿಗಳು : - ಅನಾಥೆ, ಆಕಾಶದೀಪ ಎಂಬ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕ ಅನುವಾದ ಕೃತಿಗಳೂ ಪ್ರಕಟವಾಗಿವೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ -ಹೀಗೆ ವಿವಿಧ ವಿಷಯಗಳ ಬಗ್ಗೆ ಅಡಿಗರು ಅನೇಕ ಲೇಖನಗಳನ್ನು ಬರೆದಿದ್ದಾರೆ. ೧೯೮೭ರಲ್ಲಿ ಮತ್ತೊಮ್ಮೆ ಅಡಿಗರ ಸಮಗ್ರ ಕಾವ್ಯ ಪ್ರಕಟವಾಯಿತು. ಐಬಿಎಚ್ ಪ್ರಕಾಶನ ಇದನ್ನು ಪ್ರಕಟಿಸಿತ್ತು. ೧೯೯೯ರಲ್ಲಿ ಅಡಿಗರ ಎಲ್ಲಾ ಕವನಗಳು ಇರುವ ಸಮಗ್ರ ಕವನಗಳ ಪೂರ್ಣ ಆವೃತ್ತಿಯನ್ನು ಸಪ್ನ ಬುಕ್ ಹೌಸ್ ಪ್ರಕಟಿಸಿತು. ಅಡಿಗರು ಕೆಲವು ಸಣ್ಣ ಕಥೆಗಳನ್ನೂ ಬರೆದಿದ್ದಾರೆ. ಯಕ್ಷಗಾನದ ಪ್ರಭಾವ ಅಡಿಗರ ಮನೆಯಲ್ಲಿ ಸಾಹಿತ್ಯಕ್ಕೆ ಪ್ರೇರಕವಾದ ವಾತಾವರಣ ಇತ್ತು. ಅಡಿಗರ ತಂದೆ, ಅಜ್ಜ, ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ-ಎಲ್ಲರಿಗೂ ಪದ್ಯ ರಚನೆ ಮಾಡುವ ಅಭ್ಯಾಸವಿತ್ತು. ತಂದೆ ರಾಮಪ್ಪ ಅಡಿಗರು ಸಂಸ್ಕೃತದಲ್ಲಿ ಶ್ಲೋಕಗಳನ್ನೂ, ಕನ್ನಡದಲ್ಲಿ ದೇಶಭಕ್ತಿ ಗೀತೆಗಳನ್ನೂ ರಚಿಸುತ್ತಿದ್ದರು. ಯಕ್ಶಗಾನದ ತಾಳಮದ್ದಲೆಗಳಲ್ಲಿ ಅರ್ಥ ಹೇಳುತ್ತಿದ್ದರು. ಸೋದರತ್ತೆ ಪ್ರತಿ ರಾತ್ರಿಯೂ ಗದುಗಿನ ಭಾರತ, ಜೈಮಿನಿ ಭಾರತಗಳನ್ನು ರಾಗವಾಗಿ ಹಾಡುತ್ತಿದ್ದರು. ಇವರಲ್ಲೊಬ್ಬರಾದ ಮೂಕಾಂಬು(ಮೂಕಜ್ಜಿ) ಎಂಬವರು ಸ್ವತಃ ಪದ್ಯಗಳನ್ನು ರಚಿಸುತ್ತಿದ್ದರು. ಅಜ್ಜಿಯ ತಮ್ಮ ಬವಳಾಡಿ ಹಿರಿಯಣ್ಣ ಹೆಬ್ಬಾರ ಎಂಬವರು ಹೆಸರಾಂತ ಯಕ್ಷಗಾನದ ಅರ್ಥಧಾರಿಯಾಗಿದ್ದರು. ಇವರ ವಂಶಜರಾದ ಪ್ರೊ.ಬಿ.ಎಚ್. ಶ್ರೀಧರ್ ಅವರು ಮುಂದೆ ಕನ್ನಡದಲ್ಲಿ ಓರ್ವ ಗಣ್ಯ ಕವಿಯಾಗಿ ಪ್ರಸಿದ್ಧರಾದರು. ಕರಾವಳಿಯ ಮಹಾನ್ ಕಲೆ ಯಕ್ಷಗಾನವೇ ಅಡಿಗರ ಮೇಲೆ ಗಾಢ ಪ್ರಭಾವ ಬೀರಿತ್ತು. ಅವರ ಪ್ರಸಿದ್ಧ ಕವನ `ಗೊಂದಲಒಉರ'ದಲ್ಲಿ ಗೊಂದಲಾಸುರನ ಪ್ರವೇಶದ ಸಂದರ್ಭ - ಯಕ್ಷಗಾನದಲ್ಲಿ ರಂಗಸ್ಥಳ ಪ್ರವೇಶ ಮಾಡುವ ರಾಕ್ಷಸನ ಪ್ರವೇಶ ಶೈಲಿಯಲ್ಲಿದೆ. `ಅಜ್ಞಾತ ವೇಷ' ಎಂಬ ಕವನದಲ್ಲಿ ವೇಷಭೂಷಣಗಳ ಪೆಟ್ಟಿಗೆಯನ್ನು ಹೊರುವ ಬಡ ಕೂಲಿಗಳ ಪ್ರತಿಮೆಯನ್ನು ಪ್ರಜಾಸತ್ತೆಯಲ್ಲಿ ಪುಢಾರಿಗಳ ಚಾಕರಿ ಮಾಡುವ ಜನಸಾಮಾನ್ಯರ ಪ್ರತೀಕವಾಗಿ ಬಳಸಿದ್ದಾರೆ. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು ಸಾಹಿತ್ಯ ಶೈಲಿ ಅಡಿಗರ ಸಮಗ್ರ ಕಾವ್ಯವನ್ನು ಓದಿದಾಗ "ಆಧುನಿಕ ಮಹಾಕಾವ್ಯ"ವೊಂದನ್ನು ಓದಿದ ಅನುಭವವಾಗುತ್ತದೆ. ಇವರ ಕಾವ್ಯದ ನಾಯಕ ಇಪ್ಪತ್ತನೇ ಶತಮಾನದ ಸ್ವಾತಂತ್ರ್ಯೋತ್ತರ ಭಾರತದ ಆಧುನಿಕ ಸಂವೇದನೆಯ ವ್ಯಕ್ತಿ. ಸ್ವತಂತ್ರ ಭಾರತದ ರಾಜಕೀಯ, ಸಾಮಾಜಿಕ , ಸಾಂಸ್ಕೃತಿಕ ವಾಸ್ತವ ಇವರ ಕಾವ್ಯದಲ್ಲಿ ಆಕಾರ ಪಡೆದಂತೆ ಬಹುಶಃ ಕನ್ನಡದಲ್ಲಿ ಮತ್ತೆ ಯಾರ ಕಾವ್ಯದಲ್ಲೂ ಕಾಣಿಸಿಕೊಂಡಿಲ್ಲವೆನ್ನಬಹುದು. ಅಡಿಗರ ಕಾವ್ಯನಾಯಕನ ಕೆಲವು ಲಕ್ಷಣಗಳನ್ನು ಹೀಗೆ ಗುರ್ತಿಸಬಹುದು. ಸಾಂಪ್ರದಾಯಿಕವಾದ ಒಪ್ಪಿತ ಮೌಲ್ಯಗಳ ಬಗ್ಗೆ ಈತನಿಗೆ ಆರಾಧಕ ಮನೋಭಾವವಿಲ್ಲ. ಹಾಗೆಂದು ಅವುಗಳನ್ನು ಈತ ಸಾರಾಸಗಟಾಗಿ ತಿರಸ್ಕರಿಸುವಂಥವನೂ ಅಲ್ಲ. ಚಿಕಿತ್ಸಕ ಮನೋಭಾವದ ಈತನಿಗೆ ಸಮಕಾಲೀನ ಅಗತ್ಯಕ್ಕೆ ತಕ್ಕಂತೆ ಪರಂಪರೆಯನ್ನು ಸೂಕ್ತವಾಗಿ ಒಗ್ಗಿಸಿಕೊಳ್ಳುವುದರ ಬಗ್ಗೆ ಆಸಕ್ತಿ. ಅನೇಕ ನವ್ಯ ಕೃತಿಗಳಲ್ಲಿ ಕಾಣಿಸುವಂತೆ ಅಡಿಗರ ನಾಯಕ ಸೂಕ್ಷ್ಮ ಮನಸ್ಸಿನ ದುರ್ಬಲ ವ್ಯಕ್ತಿಯಲ್ಲ. ಈತನೊಬ್ಬ ಹೋರಾಟಗಾರ, ಎಲ್ಲದರ ಬಗ್ಗೆ ಬಂಡೇಳುವಂಥ ಬಂಡಾಯಗಾರ. ಎಲ್ಲ ಬಗೆಯ ಸರ್ವಾಧಿಕಾರೀ ಶಕ್ತಿಗಳ ವಿರುದ್ಧವೂ ಈತ ಪ್ರತಿಭಟಿಸುತ್ತಾನೆ. ಈ ಪ್ರತಿಭಟನೆ ಆತ್ಮ ವಿಶ್ಲೇಷಣೆಯ ಪ್ರಕ್ರಿಯೆಯೂ ಆಗುತ್ತದೆ. ಎಲ್ಲ ರೀತಿಯ ಆಕ್ರಮಣಗಳನ್ನು ಎದುರಿಸಿ ವ್ಯಕ್ತಿವಿಶಿಷ್ಟತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಈತನ ತುಡಿತ. ಅಡಿಗರ ಆರಂಭದ ಕವಿತೆಗಳ ಮುಖ್ಯಗುಣ -ಭಾವತೀವ್ರತೆ. ಕೆಚ್ಚು, ಹೋರಾಟದ ಆಹ್ವಾನ ಅಡಿಗರ ಮನೋಭಾವಕ್ಕೆ ಸಹಜವಾದುದೆನ್ನಿಸಿದರೂ ಅದು ಪ್ರಕಟಗೊಂಡಿರುವ ಬಗೆ ಸಂಪೂರ್ಣವಾಗಿ ಭಾವಾವೇಶದಿಂದ ಬಂದದ್ದು. ಮುಂದೆ ಅಡಿಗರು ಗೆಲ್ಲಲು ಬಯಸಿದ್ದು, ವಿರೋಧಿಸಿದ್ದು, ಇಂಥ ರೀತಿಯನ್ನೇ. ಅಡಿಗರ ಆವೇಶ ಉತ್ಸಾಹ ಕ್ರಮೇಣ ವ್ಯಾವಹಾರಿಕ ಜಗತ್ತಿನ ಆಕ್ರಮಣದಿಂದಾಗಿ ಆಘಾತಕ್ಕೊಳಗಾದಂತೆ ಕಂಡು ಬರುತ್ತದೆ. ಬಾಲ್ಯದ ಮುಗ್ಧಲೋಕ, ಹದಿಹರಯದ ಹೊಂಗನಸಿನ ಜಗತ್ತು ಒಡೆದು ಛಿದ್ರವಾಗಿ ಕವಿಮನಸ್ಸು ವ್ಯಗ್ರವಾಗುತ್ತದೆ, ದಿಕ್ಕೆಡುತ್ತದೆ. ಹತಾಶೆಯ ಸ್ಥಿತಿಯಲ್ಲಿ ಕವಿ ಮನಸ್ಸು ನಿಷ್ಠುರವಾಗಲು ಪ್ರಯತ್ನಿಸುತ್ತದೆ. ಇಂಥ ಸ್ಥಿತಿಯಲ್ಲಿ ಹರಯದ ಮನಸ್ಸನ್ನು ಸಹಜವಾಗಿ ಸೆಳೆಯಬಹುದಾಗಿದ್ದ ಹೆಣ್ಣಿನ ಸ್ನೇಹ ಸಹ ಕವಿಗೆ ಕಪಟವೆನ್ನಿಸುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲ ವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರೀತಿ, ಚೆಲುವು ಒಲವುಗಳಿಗೆ ಜಡರೇನೂ ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮುಖ್ಯವಾಗಿ ಧ್ಯಾನರೂಪೀ ಮನಸ್ಸು. ಅವರದೇ ಮಾತಿನಲ್ಲಿ ಹೇಳುವುದಾದರೆ -"ಹುತ್ತಗಟ್ಟಿದ ಚಿತ್ತ". ಅಡಿಗರ ಕಾವ್ಯದುದ್ದಕ್ಕೂ ಕಂಡು ಬರುವ ಪ್ರಧಾನ ಅಂಶಗಳಲ್ಲೊಂದು ಭೂಮಿ ಆಕಾಶಗಳ ಸೆಳೆತಕ್ಕೆ ಸಿಕ್ಕ ಮಾನವನ ಸ್ಥಿತಿ. ಇದು ದೇಹ-ಮನಸ್ಸುಗಳ ಸಂಘರ್ಷವೂ ಹೌದು. ಆದರ್ಶ ವಾಸ್ತವಗಳ ನಡುವಿನ ತಿಕ್ಕಾಟವೂ ಹೌದು. ಅನೇಕ ಕವಿತೆಗಳಲ್ಲಿ ಮತ್ತೆ ಮತ್ತೆ ವ್ಯಕ್ತವಾಗುವ ಈ ಸಂಘರ್ಷ, ನೆಲ ಮುಗಿಲಿನ ಸೆಳೆತ ಸೇಂದ್ರಿಯವಾಗಿ ಅಭಿವ್ಯಕ್ತಿ ಪಡೆಯುವುದು "ಮೋಹನ ಮುರಲಿ" ಕವಿತೆಯಲ್ಲಿ. ಅಡಿಗರ ಕಾವ್ಯ ಬೆಳವಣಿಗೆಯಲ್ಲಿ ಇದು ಮುಖ್ಯ ಕವಿತೆ. ಲೌಕಿಕ ಸುಖದಲ್ಲಿ ತೃಪ್ತಿ ಪಡೆದಿದ್ದ ಮನಸ್ಸು ಅಲೌಕಿಕ ಸೆಳೆತಕ್ಕೆ ಒಳಗಾಗಿರುವ ಚಿತ್ರವನ್ನು ಈ ಕವಿತೆ ಸೊಗಸಾಗಿ ಚಿತ್ರಿಸುತ್ತದೆ. ಸ್ನೇಹ-ಪ್ರೀತಿ, ಕೋಪ-ತಾಪ, ಅಳು-ನಗು ಎಲ್ಲವನ್ನು ನಿರಾಕರಿಸಿ ಜನವಿದೂರ ಹೋಗ ಬಯಸುವ ಕಾವ್ಯ ಬದುಕನ್ನೆ ನಿರಾಕರಿಸುವಂಥದಾಗಿ ತೋರುವುದು ಮೇಲ್ನೋಟಕ್ಕೆ ಸಹಜ. ಆದರೆ ಮೇಲ್ಪಪದರದ ಈ ಆಕ್ರೋಶದ ಹಿಂದಿನ ಆಳವಾದ ವಿಷಾದ ವಾಸ್ತವ ಬದುಕಿನ ಸ್ವೀಕರಣೆಯ ಕಡೆ ಮುಖಮಾಡಿದೆ. ಬದುಕಿನಲ್ಲಿ ಹಿರಿಯಾಸೆ ಹೊತ್ತ ಮಹತ್ವಾಂಕ್ಷೆಯ ಕವಿ ಮೋಹದ ಸುಳಿಯೊಳಗೆ ಸಿಲುಕಬಾರದೆಂಬ ಎಚ್ಚರದಿಂದ ಇವೆಲ್ಲವನ್ನೂ ಮೀರಲು ಬಯಸುತ್ತಾರೆ. ಕವಿಯ ಈ ಮಹತ್ವಾಕಾಂಕ್ಷೆ ಉನ್ನತವಾದುದನ್ನು ತನ್ನದಾಗಿಸಿಕೊಳ್ಳಬೇಕೆಂಬ ಬಯಕೆ –ಇದರಿಂದಾಗಿ ಅಡಿಗರ ಕಾವ್ಯ ದೈನಿಕ ಸಹಜ ವಿವರಗಳಿಂದ, ಬದುಕಿನ ವೈವಿಧ್ಯದಿಂದ, ಕೌಟುಂಬಿಕ ಜಗತ್ತಿನಿಂದ ವಂಚಿತವಾಗುತ್ತದೆ. ದಿನನಿತ್ಯದ ನೋವು, ನಲಿವು, ಉತ್ಸಾಹ, ಚೆಲುವು ಇವೆಲ್ಲವೂ ಅವರ ಕಾವ್ಯದಲ್ಲಿ ಇಲ್ಲವೆನ್ನುವಷ್ಟು ಕಡಿಮೆ. ಕವಿ ಬದುಕಿನ ಸ್ನೇಹ, ಪ್ರಿತಿ, ಚೆಲುವು, ಒಲವುಗಳಿಗೆ ಜಡರೇನು ಅಲ್ಲ. ಅವರ ಮನಸ್ಸು ಅದರಿಂದ ಮುದಗೊಳ್ಳುತ್ತದೆ. ಆದರೆ ಒಟ್ಟು ಕಾವ್ಯದ ಸಂದರ್ಭದಲ್ಲಿ ಅಂಥ ಕವಿತೆಗಳು ಅಮುಖ್ಯವಾಗುತ್ತವೆ. ಅಡಿಗರದು ಮಖ್ಯವಾಗಿ ಧ್ಯಾನರೂಪಿ ಮನಸ್ಸು, ಅವರ ಮಾತಿನಲ್ಲೇ ಹೇಳುವುದಾದರೆ – ‘ಹುತ್ತಗಟ್ಟಿದ ಚಿತ್ತ’. ಬದುಕಿನಲ್ಲಿ ತಾನು ಅನುಭವಿಸಿದ ನೋವು, ಅಪಮಾನ, ಪ್ರೀತಿಯ ಕೊರತೆ-ಸ್ವಭಾವತಃ ಅಂತರ್ಮುಖಿಯಾಗುವಂತೆ ಮಾಡುತ್ತವೆ. ಆದರೆ ಈ ಅಂತರ್ಮುಖತೆ ಹೊರಜಗತ್ತಿನಿಂದ ಸಂಪರ್ಕ ಕಡಿದುಕೊಳ್ಳದೆ, ಅದನ್ನು ಅರ್ಥ ಮಾಡಿಕೊಳ್ಳುವ ಸಮರ್ಥ ರೀತಿಯಲ್ಲಿ ಅಡಿಗರ ಕಾವ್ಯ ರೂಪುಗೊಳ್ಳುತ್ತದೆ. ಆದ್ದರಿಂದಲೇ ಅಡಿಗರ ನಂತರದ ಕಾವ್ಯ ಏಕಕಾಲಕ್ಕೆ ವೈಯುಕ್ತಿಕವೂ, ಸಾಮಾಜಿಕವೂ ಆಗಿಬಿಡುತ್ತದೆ. ಈ ಸ್ವವಿಮರ್ಶೆ ಅಡಿಗರ ಕಾವ್ಯದ ಪ್ರಧಾನವಾದ ಅಂಶ. ತನ್ನನ್ನು ಅರ್ಥಮಾಡಿಕೊಳ್ಳುತ್ತಲೇ, ಸಮಾಜವನ್ನೂ, ಬದುಕನ್ನೂ ಅರ್ಥಮಾಡಿಕೊಳ್ಳುವ ಕ್ರಮ- ಅಡಿಗರ ಕಾವ್ಯರೀತಿ. ದರ್ಶನ ಅಡಿಗರ ಶೋಧನೆ -ಮರ್ತ್ಯದಲ್ಲಿಯೇ ಅಮರತೆಯ ಫಲ ಸಾಧಿಸುವ ಶೋಧನೆ -ಉದ್ದಕ್ಕೂ ಆತ್ಮಶೋಧನೆಯಾಗಿಯೇ ಬೆಳೆಯುತ್ತ ಹೋಗುತ್ತದೆ. ಈ ನೆಲದಲ್ಲಿಯೇ ಹುಟ್ಟಿದ ರಾಮಕೃಷ್ಣ, ಬುದ್ಧ, ಗಾಂಧಿ ದೊಡ್ಡವರಾದರು. ಮಹಾತ್ಮರಾದರು. ನಾನು ಮಾತ್ರ ಹಾಗೆಯೇ ಉಳಿದೆನೇಕೆ? ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸವಾಗಬೇಕು. ಈ ನೆಲದಲ್ಲಿಯೇ, ನೆಲದ ಪ್ರಜ್ಞೆ ಹೀರಿಯೇ ಬೆಳೆದು ದೊಡ್ಡವನಾಗಬೇಕು, ಉನ್ನತ ಚೇತನವಾಗಿ ರೂಪುಗೊಳ್ಳಬೇಕು -ಇದೇ ಅಡಿಗರ ದರ್ಶನ. ಅಡಿಗರ ದೃಷ್ಟಿಯಲ್ಲಿ ಸಮಾಜದ ಮೂಲ ಘಟಕ ವ್ಯಕ್ತಿ. ಯಾವ ಬಂಡಾಯವಾಗು ವುದಿದ್ದರೂ ಅದು ವ್ಯಕ್ತಿಯಲ್ಲಿ. ಮಾನವನ ಹೆಚ್ಚಳ ಅವನ ವ್ಯಕ್ತಿತ್ವದ ವಿಕಾಸದಲ್ಲಿದೆ. ಪ್ರತಿಯೊಬ್ಬರ ವ್ಯಕ್ತಿತ್ವ ಬದುಕಲ್ಲಿ ಪ್ರತ್ಯಕ್ಷವಾದರೆ, ಬದುಕಿಗೆ ವಿವಿಧತೆ ಬರುತ್ತದೆ. ಸಮಾಜ ಈ ವ್ಯಕ್ತಿತ್ವದ ಪ್ರತ್ಯಕ್ಷತೆಗೆ ವಿರೋಧವಾಗಿ ಅಡಚಣೆಗಳನ್ನು ಒಡ್ಡುತ್ತಲೇ ಇರುತ್ತದೆ. ಅದಕ್ಕಾಗಿ ಸತತ ಬಂಡಾಯ ಮಾಡಬೇಕು. ಅಲ್ಲದೆ, ಅಡಿಗರ ಮಾಗಿದ ದೃಷ್ಟಿಯಲ್ಲಿ ಕ್ರಾಂತಿ ವೈಯಕ್ತಿಕವಾಗಿಯೇ ಆಗಬೇಕು. ವ್ಯಕ್ತಿತ್ವ ವಿಕಾಸದ ಹಾದಿಯಲ್ಲಿ ಸಾಮಾಜಿಕವಾದ ತನ್ನ ಮುಖವನ್ನೂ ಹುಡುಕಿಕೊಳ್ಳಬೇಕಾಗುತ್ತದೆ ಎಂಬ ದರ್ಶನ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮುಖ್ಯ ಹಂತವೆನ್ನಬಹುದು. ಇಡೀ ಮಾನವ ಜನಾಂಗದ ಇತಿಹಾಸವನ್ನೂ ಸಮಕಾಲೀನ ಸ್ಥಿತಿಯನ್ನೂ ಭಿತ್ತಿಯಾಗುಳ್ಳ ಅಡಿಗರ ಕಾವ್ಯ "ವ್ಯಕ್ತಿತ್ವ ವಿಕಾಸದ ಹೋರಾಟ"ವನ್ನು ಚಿತ್ರಿಸುವ ಮಹಾಕಾವ್ಯವಾಗಿದೆ. ನವೋದಯ ಕಾವ್ಯದಲ್ಲಿ ಅನುಕರಣೆಯೇ ಹೆಚ್ಚಾಗುತ್ತಿದ್ದ ಕಾಲದಲ್ಲಿ, ಹೊಸ ಕಾಲದ ಹೊಸ ಅನುಭವಗಳಿಗೆ ಸ್ಪಂದಿಸುವ ಕಾವ್ಯವನ್ನು ರಚಿಸಿ ಹೊಸದೊಂದು ಮಾರ್ಗವನ್ನೇ ತೆರೆದ ಕವಿ ಅಡಿಗರು. ಸಂದೇಶ ಒಂದು ಕವನ ಒಂದು ಶತಮಾನದ ಮೇಲೆಯೂ ಸಂತೋಷ ಕೊಟ್ಟು ಜುಮ್ಮು ದಟ್ಟಿಸುವುದು ಸಾಧ್ಯವಾದರೆ, ಒಂದು ಶತಮಾನದ ಹಿಂದೆ ಇದ್ದ ಕಾವ್ಯಪ್ರಿಯನೊಬ್ಬ ಎದ್ದು ಬಂದು ಇದನ್ನು ಓದಿ ಮೆಚ್ಚುವುದು ಸಾಧ್ಯವಾದರೆ ಆಗ ಮಾತ್ರ ಕೃತಿ ಕೃತಾರ್ಥ. ದೇಶದ ಪರಿಸ್ಥಿತಿ ತುಂಬ ಕೆಡುತ್ತ ಬರುತ್ತಿದೆ -ಆರ್ಥಿಕವಾಗಿ, ನೈತಿಕವಾಗಿ ಯಾವ ಕಡೆ ಹೋಗುತ್ತದೆ, ಏನಾಗುತ್ತದೆ, ತಿಳಿಯುವುದಿಲ್ಲ. ಹುಡುಗನಲ್ಲಿ ಕಪಿ ಅಂಶವೂ ಇದೆ, ಆಂಜನೇಯನಂತೆ ಅದ್ಭುತವಾಗಿ ಬೆಳೆಯಬಲ್ಲ ಸಾಧ್ಯತೆಯೂ ಇದೆ -"ಹನುಮದ್ವಿಲಾಸ". ಕಾವ್ಯ ಸಂಪ್ರದಾಯಬದ್ಧವಾಗಬಾರದು, ಆಗ ಕಾವ್ಯದಲ್ಲಿ ಮುಗ್ಗಲು ವಾಸನೆ ಬರುತ್ತದೆ. ಪಂಪ ಕುಮಾರವ್ಯಾಸರನ್ನು ಓದಿ ಸಂತೋಷಪಡಲಾರದವನು, ಆಧುನಿಕ ಕಾವ್ಯವನ್ನೋದಿ ನಿಜವಾಗಿಯೂ ಪುಳಕಿತನಾಗುತ್ತಾನೆ ಎಂದು ನಂಬುವುದು ಕಷ್ಟ. ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ. ಅಡಿಗರಿಗೆ ಸಂದ ಪ್ರಶಸ್ತಿಗಳು ೧೯೬೮ರಲ್ಲಿ ಅಡಿಗರಿಗೆ ೫೦ ವರ್ಷ ತುಂಬಿದ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರೊ. ಕು.ಶಿ.ಹರಿದಾಸ ಭಟ್ಟ ಮತ್ತು ವಿಜಯನಾಥ ಶೇಣೈ ಮುಂತಾದ ಸಾಹಿತ್ಯಾಭಿಮಾನಿಗಳು ಒಂದು ಅಪೂರ್ವ ಸಮಾರಂಭವನ್ನು ಏರ್ಪಡಿಸಿದರು. ಅದರಲ್ಲಿ ಹೊಸ ಪೀಳಿಗೆಯ ಮಹತ್ವದ ಕವಿ, ಸಾಹಿತಿ, ವಿಮರ್ಶಕರುಗಳಾದ ಲಂಕೇಶ್, ಚಂದ್ರಶೇಖರ ಕಂಬಾರ,ಎಂ.ಜಿ. ಕೃಷ್ಣಮೂರ್ತಿ, ಶಾಂತಿನಾಥ ದೇಸಾಯಿ, ಜಿ. ಎಚ್. ನಾಯಕ, ಕಿ ರಂ. ನಾಗರಾಜ. ಗಿರಡ್ಡಿ ಗೋವಿಂದರಾಜ, ಬನ್ನಂಜೆ ಗೋವಿಂದಾಚರ್ಯ, ಡಿ. ಎಸ್. ರಾಯಕರ್ ಮುಂತಾದವರು ಭಾಗವಹಿಸಿದ್ದರು. ವಿಮರ್ಶಕ ನಿಸ್ಸಿಂ ಇಝೆಕಿಲ್ ಅವರು` ಅಡಿಗರು ಕನ್ನಡದಲ್ಲಿ ಬರೆಯುತ್ತಿರುವ ಒಬ್ಬ ಶ್ರೇಷ್ಠ ಭಾರತೀಯ ಕವಿ' ಎಂದು ಕೊಂಡಾಡಿದರು. ೧೯೭೪ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೫ರಲ್ಲಿ ಅಡಿಗರಿಗೆ `ವರ್ಧಮಾನ'ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಬಂತು. ೧೯೭೯ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್' ಪ್ರಶಸ್ತಿ ಲಭ್ಯವಾಯಿತು. ೧೯೮೦ರಲ್ಲಿ `ಸಮಗ್ರ ಕಾವ್ಯಕ್ಕೆ ಮೂಡಬಿದ್ರೆಯ `ವರ್ಧಮಾನ' ಪ್ರಶಸ್ತಿ ದೊರೆಯಿತು. ೧೯೮೨ರಲ್ಲಿ ಪ್ಯಾರಿಸ್, ಯುಗೋಸ್ಲಾವಿಯಗಳಲ್ಲಿ ನಡೆದ ವಿಶ್ವಕವಿ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಭಾಗವಹಿಸಿದರು. ೧೯೮೬ರಲ್ಲಿ ಮಧ್ಯಪ್ರದೇಶ ಸರಕಾರ ಆರಂಭಿಸಿದ ಪ್ರಥಮ `ಕಬೀರ್ ಸನ್ಮಾನ್' ಅಡಿಗರ ಮಡಿಲಿಗೆ ಬಂತು. ೧೯೮೮ರಲ್ಲಿ ಥ್ಯಾಲಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಜಾಗತಿಕಕವಿ ಸಮ್ಮೇಳನದಲ್ಲಿ ವರ್ಲ್ಡ್ ಅಕಾಡೆಮಿ ಆಫ್ ಆರ್ಟ್ ಎಂಡ್ ಕಲ್ಚರ್' ಸಂಸ್ಥೆ ಅವರಿಗೆ ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ ನೀಡಿತು. 'ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ' ’ವರ್ಧಮಾನ’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ' ೧೯೭೪ರಲ್ಲಿ ರಾಜ್ಯ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ೧೯೭೯ರಲ್ಲಿ ಕೇರಳದ ಪ್ರತಿಷ್ಠಿತ `ಕುಮಾರ್ ಸಮ್ಮಾನ್' ಪ್ರಶಸ್ತಿ. 'ಮಧ್ಯ ಪ್ರದೇಶ ಸರಕಾರದ "ಕಬೀರ್ ಸಮ್ಮಾನ್" ಡೊಕ್ಟರ್ ಆಫ್ ಲಿಟರೇಚರ್' ಪ್ರಶಸ್ತಿ 'ರಾಜ್ಯೋತ್ಸವ ಪ್ರಶಸ್ತಿ' 'ಪಂಪ ಪ್ರಶಸ್ತಿ'. ಹೀಗೆ ಕನ್ನಡದ ಮಹತ್ವದ ಕವಿಯಾಗಿ ಮೂರು ದಶಕಗಳ ಕಾಲ ಬೆಳಗಿದ ಅಡಿಗರು ೧೯೯೨ ನವೆಂಬರ್ ೧೪ರಂದು ಅಸ್ತಂಗತರಾದರು. ಹೆಚ್ಚಿನ ಓದಿಗೆ ಕೂಪಮಂಡೂಕತ್ವದ ಹೊಸ ಠರಾವು;ಅಕ್ಷರ ಕೆ.ವಿ.;2 Jul, 2017;ಗೋಪಾಲಕೃಷ್ಣ ಅಡಿಗರ ಜನ್ಮಶತಾಬ್ದಿಯ ಈ ಗಳಿಗೆಯಲ್ಲಿ ನನ್ನ ಮನಸ್ಸು ಅವರ ಪ್ರಸಿದ್ಧ ಪದ್ಯ ‘ಕೂಪಮಂಡೂಕ’ವನ್ನು ನೆನಪಿಸಿಕೊಳ್ಳುತ್ತಿದೆ. ಅಡಿಗರ ಕಾವ್ಯಶಕ್ತಿಯ ವಿಕಾಸ ನೋಡಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲಕೃಷ್ಣ ಅಡಿಗ, ಎಂ ಉಲ್ಲೇಖಗಳು ಹೊರಕೊಂಡಿಗಳು ಅಡಿಗ ಅಂಗಳ ವರ್ಗ:ಸಾಹಿತಿಗಳು ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು ವರ್ಗ:ಕನ್ನಡ ಕವಿಗಳುವರ್ಗ:ಕರ್ನಾಟಕ ರಾಜಕಾರಣಿಗಳು
ದೀಪಾವಳಿ
https://kn.wikipedia.org/wiki/ದೀಪಾವಳಿ
ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮ ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ. ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿ ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ. ಹಿಂದೂ ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದಿ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಸಿಖ್ ಧರ್ಮ ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿhttps://kretyanews.com/happy-diwali.html ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್‌ನ ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ. ಜೈನ ಧರ್ಮ ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ ೩ ದಿನ ಆಚರಿಸುತ್ತಾರೆ. ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸುತ್ತಾರೆ. ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ ೧೬ ಗಣ-ಚಕ್ರವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ. ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ ಮಹಾವೀರರ ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು ಮಹಾವೀರರ ನಿರ್ವಾಣ ಸ್ಠಳವಾದ ಬಿಹಾರ ರಾಜ್ಯದ ಪಾವಾಪುರಿಗೆ ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ. ಚಿತ್ರಗಳು ಉಲ್ಲೇಖಗಳು ವರ್ಗ:ಹಬ್ಬಗಳು ವರ್ಗ:ಪ್ರಮುಖ ದಿನಗಳು ವರ್ಗ:ಹಿಂದೂ ಧರ್ಮದ ಹಬ್ಬಗಳು
ಗೋಪಾಲ ಕೃಷ್ಣ ಅಡಿಗ
https://kn.wikipedia.org/wiki/ಗೋಪಾಲ_ಕೃಷ್ಣ_ಅಡಿಗ
REDIRECT ಗೋಪಾಲಕೃಷ್ಣ ಅಡಿಗ
ಎಸ್.ಎಂ.ಕೃಷ್ಣ
https://kn.wikipedia.org/wiki/ಎಸ್.ಎಂ.ಕೃಷ್ಣ
ಎಸ್ ಎಮ್ ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) (ಜನನ-೧೯೩೨) ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ ೨೦೧೭ ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು ೧೯೯೯ ರಿಂದ ೨೦೦೪ ರವರೆಗೆ ಕರ್ನಾಟಕದ ೧೬ ನೇ ಮುಖ್ಯಮಂತ್ರಿಯಾಗಿದ್ದರು ಮತ್ತು ೨೦೦೪ ರಿಂದ ೨೦೦೮ ರವರೆಗೆ ಮಹಾರಾಷ್ಟ್ರದ ೧೯ ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ ೧೯೮೯ ರಿಂದ ಜನವರಿ ೧೯೯೩ ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.https://zeenews.india.com/kannada/karnataka/karnataka-assembly-speakers-list-೬೭೨೪ ೧೯೭೧ ರಿಂದ ೨೦೧೪ ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ ೨೦೨೩ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.ಪದ್ಮವಿಭೂಷಣ ಪ್ರಶಸ್ತಿ ಘೋಷಣೆ, ಕನ್ನಡಪ್ರಭ, ೨೬ ಜನವರಿ ೨೦೨೩ ವಿದ್ಯಾಭ್ಯಾಸ ಎಸ್ ಎಂ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು. ರಾಜಕೀಯ ಜೀವನ ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ವಿಧಾನ ಸಭೆಗೆ ಮೊದಲ ಬಾರಿ ೧೯೬೨ ರಲ್ಲಿ ಚುನಾಯಿತರಾದರು. ೧೯೬೮ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೭೧ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ ೧೯೭೨ ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೧೯೮೩ರಲ್ಲು ಉದ್ಯಮ ಖಾತೆ ಮತ್ತು ೧೯೮೪ ರಲ್ಲಿ ವಿತ್ತ ಖಾತೆಯ ಸಚಿವರಾದರು. ೧೯೮೯ ರಿಂದ ೧೯೯೨ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. ೧೯೯೨ ರಿಂದ ೧೯೯೪ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. ೧೯೯೬ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, ೧೯೯೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ೧೯೯೯ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ. ಎಸ್.ಎಂ.ಕೃಷ್ಣ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಜನವರಿ ೨೮ ೨೦೧೭ಬೆಳಿಗ್ಗೆ ೧೧ ಗಂಟೆಗೆ ಎಸ್.ಎಂ.ಕೃಷ್ಣ ಅಧಿಕೃತವಾಗಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿದರು.ಕಾಂಗ್ರೆಸ್‌ನಲ್ಲಿ ಹಿರಿತನ, ಆತ್ಮಗೌರವಕ್ಕೆ ಬೆಲೆ ಕಾಣಿಸದೆ ಇದ್ದುದರಿಂದ ಪಕ್ಷ ತ್ಯಜಿಸುತ್ತಿದ್ದೇನೆ’ : ಕೃಷ್ಣ ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ‘ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ’ ಎಂದು ಎಸ್‌. ಎಂ. ಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಟಿ.ವಿ.ನೈನ್ ವರದಿ ಮಾಡಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಉಲ್ಲೇಖಗಳು ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು ವರ್ಗ:ಕರ್ನಾಟಕದ ರಾಜಕೀಯ ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು ವರ್ಗ:ಕರ್ನಾಟಕದ ಲೋಕ ಸಭೆ ಸದಸ್ಯರು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:೧೯೩೨ ಜನನವರ್ಗ:ಕರ್ನಾಟಕ ರಾಜಕಾರಣಿಗಳು
ಪು ತಿ ನ
https://kn.wikipedia.org/wiki/ಪು_ತಿ_ನ
REDIRECT ಪು. ತಿ. ನರಸಿಂಹಾಚಾರ್
ಕಡೆಂಗೋಡ್ಲು ಶಂಕರಭಟ್ಟ
https://kn.wikipedia.org/wiki/ಕಡೆಂಗೋಡ್ಲು_ಶಂಕರಭಟ್ಟ
thumb|ಶ್ರೀ ಕಡೆಂಗೋಡ್ಲು ಶಂಕರಭಟ್ಟರು ಆಂಗ್ಲರ ಆಳ್ವಿಕೆಯ ಸಂದರ್ಭ ಕನ್ನಡಕ್ಕೆ ಸಿಕ್ಕುತ್ತಿದ್ದ ಅಷ್ಟಿಷ್ಟು ಗೌರವದ ಜೊತೆಗೆ ಸಾಹಿತ್ಯ ದಿಗ್ಗಜರು ಭಾಷಾ ಪ್ರೇಮ, ಸಾಹಿತ್ಯ ಸಂಸ್ಕೃತಿ ಬಗ್ಗೆ ಆಳವಾದ ಚಿಂತನೆಗೆ ತೊಡಗಿದ್ದರು. ನವೋದಯ ಸಾಹಿತ್ಯದ ಕಾಲಘಟ್ಟದಲ್ಲಿ ಹಲವು ಸಾಹಿತಿಗಳು ಸ್ವಾತಂತ್ರ ಹೋರಾಟದಲ್ಲಿ ನೇರಭಾಗವಹಿಸಿದ್ದರು. ಕಾವ್ಯ, ಕತೆ, ಲೇಖನಗಳ ಮೂಲಕ ಜನಜಾಗೃತಿಗೆ ತೊಡಗಿದರು. ಆದರ್ಶದ ಬೆನ್ನು ಹತ್ತಿ ನಾಡು-ನುಡಿಗೆ ಚಿಂತನೆ ನಡೆಸಿದರು. ಅಂಥವರಲ್ಲಿ ಕವಿ ಕಡೆಂಗೋಡ್ಲು ಶಂಕರಭಟ್ಟರು ಪ್ರಮುಖರು. ಬಾಲ್ಯ, ಶಿಕ್ಷಣ ೧೯೦೪ ಆಗಸ್ಟ ೯ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಟ್ಲ ಸಮೀಪದ ಪೆರುವಾಯಿಯಲ್ಲಿ ಶಂಕರಭಟ್ಟರು ಜನಿಸಿದರು. ತಂದೆ ಕೃಷಿಕರು. ಶಂಕರಭಟ್ಟರ ಬಂಧು, ಹಿರಿಯ ಸಂಶೋಧಕ ಮುಳಿಯ ತಿಮ್ಮಪ್ಪಯ್ಯನವರು ಇವರ ಶಿಕ್ಷಣಕ್ಕೆ ಪ್ರೋತ್ಸಾಹ ಕೊಟ್ಟರು. ಮಂಗಳೂರಿನಲ್ಲಿ ಮುಳಿಯ ಅವರ ಮನೆಯಲ್ಲಿದ್ದುಕೊಂಡು ಓದುತ್ತಲೆ, ಸಾಹಿತ್ಯ ಪರಿಸರದಲ್ಲಿ ಬೆರೆತರು. ಸ್ವಾತಂತ್ರ್ಯ ಹೋರಾಟ ೧೯೨೦ರಲ್ಲಿಗಾಂಧೀಜಿಯವರು ಮಂಗಳೂರಿಗೆ ಬಂದು ಸಾರ್ವಜನಿಕ ಸಭೆ ಉದ್ದೇಶಿಸಿ ಸ್ವಾತಂತ್ರ ಸಂಗ್ರಾಮಕ್ಕೆ ಭಾಗವಹಿಸಲು ಕರೆಕೊಟ್ಟರು. ಶಂಕರಭಟ್ಟರು ವಿದ್ಯಾಭ್ಯಾಸ ಕುಂಠಿತಗೊಳಿಸಿ ಗಾಂಧೀಜಿಯವರುನೀಡಿದ ಕರೆಗೆ ಓಗೊಟ್ಟು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು. ಹೋರಾಟದ ಸಂದರ್ಭದಲ್ಲೇ ಪ್ರೌಢಶಿಕ್ಷಣ ಸಹಾ ಮುಗಿಸಿದರು. ನಂತರ ಧಾರವಾಡದ ಶಿಕ್ಷಣ ಸಮಿತಿಯ `ಸ್ನಾತಕ' ಪರೀಕ್ಷೆಯಲ್ಲಿ ಉಚ್ಚ ಶ್ರೇಣಿಯಲ್ಲಿ ತೇರ್ಗಡೆಯಾದರು. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಲು ವಿದ್ಯಾಭ್ಯಾಸವನ್ನು ತ್ಯಜಿಸಿದವರಿಗಾಗಿ ಕಾರ್ನಾಡ ಸದಾಶಿವರಾಯರು ಮಂಗಳೂರಿನಲ್ಲಿ ಸ್ಥಾಪಿಸಿದ್ದ ತಿಲಕ ವಿದ್ಯಾಲಯವೆಂಬ ರಾಷ್ಟ್ರೀಯ ಪಾಠಶಾಲೆಯಲ್ಲಿ ಶಂಕರಭಟ್ಟರು ಕೆಲಕಾಲ ಅಧ್ಯಾಪಕರಾದರು. ವೃತ್ತಿ ಜೀವನ ಆಬಳಿಕ ಪಂಜೆ ಮಂಗೇಶರಾಯರಪ್ರೋತ್ಸಾಹದಿಂದ ೧೯೨೯ರಿಂದ ೧೯೬೪ರ ವರೆಗೆ (೩೫ ವರ್ಷಗಳ ದೀರ್ಘಕಾಲ) ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ಒಲವು ಮೂಡಿಸಲು ಶ್ರಮಿಸಿದರು. ಪತ್ರಕರ್ತ ಅಧ್ಯಾಪಕರಾಗುವ ಮೊದಲು ಪತ್ರಿಕೋದ್ಯಮದ ಅನುಭವ ಪಡೆದರು. "ನವಯುಗ"ದಲ್ಲಿ ಪತ್ರಕರ್ತರಾಗಿ ಸೇರಿಕೊಂಡು, ೧೯೨೮ರಲ್ಲಿ "ರಾಷ್ಟ್ರಬಂಧು" ಪತ್ರಿಕೆಯ ಸಂಪಾದಕರಾದರು. ಅಲ್ಲಿಂದ ಅಧ್ಯಾಪಕ ವೃತ್ತಿ ಹಾಗೂ ಪತ್ರಿಕೋದ್ಯಮ ಎರಡರಲ್ಲೂ ಸೇವೆ ಸಲ್ಲಿಸಿದರು. ಗೌರವ ೧೯೬೪ರಲ್ಲಿ ಕನ್ನಡ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಹೊಂದಿದ ಮರುವರ್ಷ,ಕಡೆಂಗೋಡ್ಲು ಶಂಕರಭಟ್ಟರು ಕಾರವಾರದಲ್ಲಿ ನಡೆದ ೪೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಗೌರವ ಪಡೆದರು. ೧೯೬೮ರ ಮೇ ೧೭ರಂದು ತಮ್ಮ ಮನೆ ಕಡೆಂಗೋಡ್ಲುವಿನಿಂದ ಮಂಗಳೂರಿಗೆ ಪ್ರಯಾಣ ಹೊರಟಿದ್ದ ಶಂಕರಭಟ್ಟರು, ಬಸ್ಸು ಸುಮಾರು ಒಂದೆರೆಡು ಕಿ. ಮೀ. ದೂರ ಕ್ರಮಿಸಿದಾಗ ಹೃದಯಸ್ತಂಭನವಾಗಿ ಬಸ್ಸಿನಲ್ಲಿಯೇ ನಿಧನರಾದರು. ಅರವತ್ತ ನಾಲ್ಕು ವರ್ಷದ ಶಂಕರಭಟ್ಟರ ಬಹುಮುಖ ಸಾಧನೆಯ ಬದುಕು ಕೊನೆಗೊಂಡಿತು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು (ಎಂಜಿಎಂ), ಗೋವಿಂದ ಪೈ ಸ್ಮಾರಕ ಸಂಶೋಧನಾಕೇಂದ್ರದಿಂದ ಪ್ರತಿವರ್ಷ ಹಸ್ತಪ್ರತಿಯ ಕಾವ್ಯಕ್ಕೆ "ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ" ಕೊಡುತ್ತಾ ಬಂದಿದೆ. ಕಡೆಂಗೋಡ್ಲು ಅವರ ಅಧ್ಯಾಪಕ ವೃತ್ತಿ, ಪತ್ರಿಕಾ ವೃತ್ತಿ, ಸಾಹಿತ್ಯ ಸೇವೆ, ಸ್ವಾತಂತ್ರ ಹೋರಾಟಗಳೆಲ್ಲವನ್ನೂ ಇಂಥ ಪ್ರಶಸ್ತಿ ಕೊಡುವ ಮೂಲಕ ನೆನಪಿಸುತ್ತಿರುವುದು ನಿಜಕ್ಕೂ ಅಭಿನಂದನೀಯ. ಸಾಹಿತ್ಯ ಕವನ ಸಂಕಲನ ಕಾಣಿಕೆ ಘೋಷಯಾತ್ರೆ (೧೯೨೦) ಹಣ್ಣುಕಾಯಿ ಗಾಂಧಿ ಸಂದೇಶ (೧೯೨೦) ವಸ್ತ್ರಾಪಹರಣ (೧೯೨೧) ನಲ್ಮೆ (೧೯೩೨) ಪತ್ರಪುಷ್ಪ (೧೯೬೫) ಕಥಾಸಂಕಲನ ಗಾಜಿನ ಬಳೆ ದುಡಿಯುವ ಮಕ್ಕಳು ನಾಟಕ ಮಹಾಯೋಗಿ ಗುರುದಕ್ಷಿಣೆ ಅಜಾತಶತ್ರು ಹಿಡಿಂಬೆ ಕಾದಂಬರಿ ಧೂಮಕೇತು (೧೯೩೫) ದೇವತಾ ಮನುಷ್ಯ (೧೯೪೭) ಲೋಕದ ಕಣ್ಣು (೧೯೪೮) ವಿಮರ್ಶೆ ವಾಙ್ಮಯ ತಪಸ್ಸು (೧೯೬೩) ಅಭಿನಂದನ ಗ್ರಂಥ ೧. ಸಾಹಿತ್ಯ ಯೋಗಿ. ಉಲ್ಲೇಖಗಳು ವರ್ಗ:ಕನ್ನಡ ಸಾಹಿತ್ಯ ಕಡೆಂಗೋಡ್ಲು ಶಂಕರಭಟ್ಟ ಕಡೆಂಗೋಡ್ಲು ಶಂಕರಭಟ್ಟ
ಎಸ್.ಎಲ್. ಭೈರಪ್ಪ
https://kn.wikipedia.org/wiki/ಎಸ್.ಎಲ್._ಭೈರಪ್ಪ
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಜೀವನ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೬-೦೭-೧೯೩೪ ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತಿಕೆಯನ್ನು ಮೈಗೂಡಿಸಿ ಕೊಂಡರು. ಶಾಲಾ ದಾಖಲೆಗಳ ಪ್ರಕಾರ ಅವರ ಜನ್ಮದಿನ ೨೦-೦೮-೧೯೩೧ ಎಂದು ಅವರು ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಹೇಳಿಕೊಂಡಿದ್ದಾರೆ. (ಪುತ ೫೦ ಮೊದಲ ಮುದ್ರಣ). ಅವರ ೫ನೇ ವಯಸ್ಸಿನಲ್ಲಿ ಅವರ ತಾಯಿ ಬಡತನ - ಪ್ಲೇಗ್ ಗಳಿಗೆ ಜೀವವನ್ನು ತೆತ್ತಾಗ ಬದುಕಿನ ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿ ಕೊಳ್ಳ ತೊಡಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು. ಗಾಂಧೀಜಿಯವರ ಮೌಲ್ಯಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಕೇವಲ ೧೩ ವರ್ಷ! ಪ್ರೌಢ ಶಿಕ್ಷಣ ಹಾಗೂ ಕಾಲೇಜು ಓದು ಮೈಸೂರಿನಲ್ಲಿ ಮುಂದುವರೆಸಿದ ಭೈರಪ್ಪನವರು ಎಂ.ಎ.ನಲ್ಲಿ ಸುವರ್ಣ ಪದಕದೊಂದಿಗೆ ತೇರ್ಗಡೆಯಾದರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ "ಸತ್ಯ ಮತ್ತು ಸೌಂದರ್ಯ", ಎಂಬ ಇಂಗ್ಲಿಷ್‌ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು. ಹುಬ್ಬಳ್ಳಿ, ಗುಜರಾತಿನ ಸರದಾರ್ ಪಟೇಲ್ ವಿಶ್ವ ವಿದ್ಯಾಲಯ, ದೆಹಲಿಗಳಲ್ಲಿ ತಮ್ಮ ಉಪನ್ಯಾಸಕ ವೃತ್ತಿ ಕೈಗೊಂಡ ಭೈರಪ್ಪನವರು, ಶಾಸ್ತ್ರಿಯ ಶಿಸ್ತಿನ ಓದಿನ ನಡುವೆ ಮಹತ್ವದ ಕಾದಂಬರಿಗಳನ್ನು ರಚಿಸಿದ್ದಾರೆ. ೧೯೬೧ ರಲ್ಲಿ `ಧರ್ಮಶ್ರೀ' ಕಾದಂಬರಿ ಪ್ರಕಟಿಸಿ ಇದುವರೆವಿಗೆ ನಾಲ್ಕು ದಶಕಗಳಲ್ಲಿ ೨೧ ಕಾದಂಬರಿಗಳನ್ನು ಬರೆದಿದ್ದಾರೆ. ಆಯಾ ಕಾಲದಲ್ಲಿ ಬಂದ ಅವರ ಕಾದಂಬರಿಗಳೆಲ್ಲಾ ಚರ್ಚೆಗೆ ಒಳಗಾಗಿವೆ. ಇಂಗ್ಲಿಷ್ ಭಾಷೆಯೂ ಸೇರಿದಂತೆ ಭಾರತೀಯ ಹಲವು ಭಾಷೆಗಳಿಗೆ ಭೈರಪ್ಪನವರ ಕಾದಂಬರಿಗಳು ಅನುವಾದ ಗೊಂಡಿವೆ. ಗೃಹಭಂಗ ,ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ, ಮರಾಠಿಯಲ್ಲಿ ಜನಪ್ರಿಯವಾಗಿವೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮತದಾನ ಕಾದಂಬರಿಗಳು ಚಲನಚಿತ್ರವಾಗಿ ಪ್ರಶಸ್ತಿ ಗಳಿಸಿವೆ. ವಂಶವೃಕ್ಷಕ್ಕೆ ೧೯೬೬ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೭೫ ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. `ಪರ್ವ' ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿ ನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಬಿಂಬಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ವಿಶಿಷ್ಟವಾಗಿ ಮೂಡಿಸಿದ್ದಾರೆ. ಕಾದಂಬರಿಗಳಲ್ಲದೆ ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ `ಸಾಹಿತ್ಯ ಮತ್ತು ಪ್ರತೀಕ', `ಕಥೆ ಮತ್ತು ಕಥಾವಸ್ತು', `ನಾನೇಕೆ ಬರೆಯುತ್ತೇನೆ' ಎಂಬ ಕೃತಿಗಳನ್ನೂ ಭೈರಪ್ಪ ರಚಿಸಿದ್ದಾರೆ. ಪ್ರಸ್ತುತ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ. ೧೯೯೯ರಲ್ಲಿ ಕನಕಪುರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಭೈರಪ್ಪ ಆಯ್ಕೆಯಾಗಿದ್ದರು. (ಹೆಚ್ಚಿನ ಓದು : ಭೈರಪ್ಪನವರ ಬಾಲ್ಯ ಕಾಲದ ಹೃದಯಸ್ಪರ್ಶಿ ಚಿತ್ರಣಕ್ಕಾಗಿ ಬೆಳಗೆರೆ ಕೃಷ್ಣಶಾಸ್ತ್ರಿಗಳ "ಮರೆಯಲಾದೀತೇ" ವ್ಯಕ್ತಿ ಚಿತ್ರ ಸಂಗ್ರಹದಲ್ಲಿ ಭೈರಪ್ಪನವರ ಬಗೆಗಿನ ಅಧ್ಯಾಯವನ್ನು ಓದಿ. ಭೈರಪ್ಪನವರ ಜೀವನದ ಹೆಚ್ಚಿನ ಮಾಹಿತಿಗಾಗಿ ಅವರ ಆತ್ಮಚರಿತ್ರೆ ಭಿತ್ತಿಯನ್ನೂ ಓದಬಹುದಾಗಿದೆ.) ಕೃತಿಗಳು ಕಾದಂಬರಿಗಳು ಭೀಮಕಾಯ ಬೆಳಕು ಮೂಡಿತು ಧರ್ಮಶ್ರೀ - (೧೯೬೧) ದೂರ ಸರಿದರು- (೧೯೬೨) ಮತದಾನ - (೧೯೬೫) ವಂಶವೃಕ್ಷ- (೧೯೬೫) ಜಲಪಾತ (ಕಾದಂಬರಿ)- (೧೯೬೭) ನಾಯಿ ನೆರಳು- (೧೯೬೮) ತಬ್ಬಲಿಯು ನೀನಾದೆ ಮಗನೆ-(೧೯೬೮) ಗೃಹಭಂಗ-(೧೯೭೦) ನಿರಾಕರಣ-(೧೯೭೧) ಗ್ರಹಣ-(೧೯೭೨) ದಾಟು -(೧೯೭೩) ಅನ್ವೇಷಣ-(೧೯೭೬) ಪರ್ವ-(೧೯೭೯) ನೆಲೆ -(೧೯೮೩) ಸಾಕ್ಷಿ -(೧೯೮೬) ಅಂಚು-(೧೯೯೦) ತಂತು -(೧೯೯೩) ಸಾರ್ಥ-(೧೯೯೮) ಮಂದ್ರ-(೨೦೦೧) ಆವರಣ-(೨೦೦೭) ಕವಲು - (೨೦೧೦) ಯಾನ - (೨೦೧೪) ಉತ್ತರಕಾಂಡ-(೨೦೧೭) ಆತ್ಮ ಚರಿತ್ರೆ ಭಿತ್ತಿ ತತ್ತ್ವಶಾಸ್ತ್ರ ಸತ್ಯ ಮತ್ತು ಸೌಂದರ್ಯ (೧೯೬೬) - ಪಿ.ಎಚ್.ಡಿ ಪ್ರಬಂಧ ಸಾಹಿತ್ಯ ಮತ್ತು ಪ್ರತೀಕ (೧೯೬೭) ಕಥೆ ಮತ್ತು ಕಥಾವಸ್ತು (೧೯೬೯) ಸಂದರ್ಭ:ಸಂವಾದ (೨೦೧೧) ಇತರೆ ನಾನೇಕೆ ಬರೆಯುತ್ತೇನೆ? (೧೯೮೦) ಇತರ ಭಾಷೆಗಳಿಗೆ ಅನುವಾದವಾಗಿರುವ ಕಾದಂಬರಿಗಳು ಧರ್ಮಶ್ರೀ - ಸಂಸ್ಕೃತ, ಮರಾಠಿ ವಂಶವೃಕ್ಷ - ತೆಲುಗು, ಮರಾಠಿ, ಹಿಂದಿ, ಉರ್ದು, ಇಂಗ್ಲೀಷ್ ನಾಯಿ ನೆರಳು - ಗುಜರಾತಿ, ಹಿಂದಿ ತಬ್ಬಲಿಯು ನೀನಾದೆ ಮಗನೆ - ಹಿಂದಿ ಗೃಹಭಂಗ - ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ ನಿರಾಕರಣ -ಹಿಂದಿ ದಾಟು - ಇಂಗ್ಲೀಷ್, ಭಾರತದ ಹದಿನಾಲ್ಕು ಭಾಷೆಗಳಿಗೆ ಅನುವಾದವಾಗಿದೆ ಅನ್ವೇಷಣ -ಹಿಂದಿ,ಮರಾಠಿ ಪರ್ವ -ಹಿಂದಿ, ಮರಾಠಿ, ಇಂಗ್ಲೀಷ್, ತೆಲುಗು, ಬೆಂಗಾಲಿ, ತಮಿಳು ನೆಲೆ -ಹಿಂದಿ ಸಾಕ್ಷಿ - ಹಿಂದಿ, ಇಂಗ್ಲೀಷ್ ಅಂಚು -ಹಿಂದಿ, ಮರಾಠಿ ತಂತು -ಹಿಂದಿ, ಮರಾಠಿ ಸಾರ್ಥ -ಹಿಂದಿ, ಮರಾಠಿ, ಇಂಗ್ಲೀಷ್, ಸಂಸ್ಕೃತ ನಾನೇಕೆ ಬರೆಯುತ್ತೇನೆ -ಮರಾಠಿ ಸತ್ಯ ಮತ್ತು ಸೌಂದರ್ಯ -ಇಂಗ್ಲೀಷ್ ಭಿತ್ತಿ -ಹಿಂದಿ, ಮರಾಠಿ ಚಲನಚಿತ್ರವಾಗಿರುವ ಕಾದಂಬರಿಗಳು ವಂಶವೃಕ್ಷ - ೧೯೭೨ ತಬ್ಬಲಿಯು ನೀನಾದೆ ಮಗನೆ - ೧೯೭೭ ಮತದಾನ - ೨೦೦೧ ನಾಯಿ ನೆರಳು - ೨೦೦೬ ಟಿ.ವಿ. ಧಾರಾವಾಹಿಯಾಗಿರುವ ಕಾದಂಬರಿಗಳು ಗೃಹಭಂಗ ದಾಟು (ಹಿಂದಿ) ಪ್ರಶಸ್ತಿ/ಗೌರವಗಳು ೨೦೨೩ ರಲ್ಲಿ ಪದ್ಮಭೂಷಣ ಪ್ರಶಸ್ತಿ. ‌ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) -೧೯೬೬ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ದಾಟು ಕಾದಂಬರಿಗೆ)- ೧೯೭೫ ಪಂಪ ಪ್ರಶಸ್ತಿ - ೨೦೦೫ ಎಸ್ ಎಲ್ ಭೈರಪ್ಪನವರಿಗೆ ೨೦೦೫ ಸಾಲಿನ ಪಂಪ ಪ್ರಶಸ್ತಿ, ಪ್ರಜಾವಾಣಿ, ೧೧ಜವನರಿ೨೦೦೬ ಎನ್ ಟಿ ಆರ್‍ ರಾಷ್ಟ್ರೀಯ ಪ್ರಶಸ್ತಿ- ೨೦೦೭ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ , ದಿ ಹಿಂದೂ, ೨೧ಏಪ್ರಿಲ್೨೦೦೭ ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು- ೨೦೦೭ ಸರಸ್ವತಿ ಸಮ್ಮಾನ್ ಪ್ರಶಸ್ತಿ (ಮಂದ್ರ ಕಾದಂಬರಿಗೆ)- ೨೦೧೦ ನಾಡೋಜ ಪ್ರಶಸ್ತಿ - ೨೦೧೧ ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)- ೨೦೧೨ (ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತ್ತು. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು ಅವರಲ್ಲಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜರೂರ ಸುಲ್ತಾನಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರೊಬ್ಬರಿಗೆ ನೀಡುತ್ತಿರುವ ಮೊದಲ ಸಂದರ್ಭ ಇದಾಗಿದೆ) ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ - ೨೦೧೪ಭೈರಪ್ಪಗೆ-ಬೆಟಗೇರಿ-ಕೃಷ್ಣಶರ್ಮ-ಪ್ರಶಸ್ತಿ , ಕನ್ನಡಪ್ರಭ, ೨೩ಜುಲೈ೨೦೧೪ ರಾಷ್ಟ್ರೀಯ ಪ್ರಾಧ್ಯಾಪಕ (ನ್ಯಾಷನಲ್ ಪ್ರೊಫೆಸರ್)ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪ 'ರಾಷ್ಟ್ರೀಯ ಪ್ರಾಧ್ಯಾಪಕ' , ಕನ್ನಡಪ್ರಭ, ೧೧ಡಿಸೆಂಬರ್೨೦೧೪ ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ,'ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ' , ಪ್ರಜಾವಾಣಿ, 03/11/2015, ಬೆಂಗಳೂರು, ಕಾದಂಬರಿಕಾರ ಪೊ.ಎಸ್‌.ಎಲ್‌.ಭೈರಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಉದಯವಾಣಿ, ೧೮ಏಪ್ರಿಲ್೨೦೧೫ S.L.Bhairappa was cheated of Higher Padma Award, in preference. To Shri. Ravishankar, Star of Mysore, July,19,2017 'ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ', 'ಪದ್ಮಶ್ರೀ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪನವರಿಗೆ ಮತ್ತೊಂದು ಗೌರವ, ಕನ್ನಡಪ್ರಭ,೨೫, ಸೆಪ್ಟೆಂಬರ್, ೨೦೨೦ ಭೈರಪ್ಪಗೆ ಸಹೃದಯ ಓದುಗರ ಸನ್ಮಾನಗಳು ನಮ್ಮ ಭೈರಪ್ಪನವರು-ಓದುಗರ ಮನದಾಳದ ಮಾತುಗಳು ಚಿತ್ರಸಂಪುಟ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಎಸ್ ಎಲ್ ಭೈರಪ್ಪನವರ ಅಧಿಕೃತ ಅಂತರ್ಜಾಲ ತಾಣ Dr. S.L.Bhyrappa on distorting Indian history, Preksha A journal of culture and philosophy ಎಸ್.ಎಲ್.ಭೈರಪ್ಪ ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು ವರ್ಗ:ಲೇಖಕರು ವರ್ಗ:ಮೈಸೂರಿನ ಬರಹಗಾರರು
ಪುರೋಹಿತ ತಿರುನಾರಾಯಣ ನರಸಿಂಹಾಚಾರ್
https://kn.wikipedia.org/wiki/ಪುರೋಹಿತ_ತಿರುನಾರಾಯಣ_ನರಸಿಂಹಾಚಾರ್
REDIRECT ಪು. ತಿ. ನರಸಿಂಹಾಚಾರ್
ಡಾ. ಕು. ವೆ೦ ಪುಟ್ಟಪ್ಪ
https://kn.wikipedia.org/wiki/ಡಾ._ಕು._ವೆ೦_ಪುಟ್ಟಪ್ಪ
REDIRECT ಕುವೆಂಪು
ಯು. ಆರ್. ಅನ೦ತಮೂರ್ತಿ
https://kn.wikipedia.org/wiki/ಯು._ಆರ್._ಅನ೦ತಮೂರ್ತಿ
REDIRECT ಯು.ಆರ್.ಅನಂತಮೂರ್ತಿ
ಪುರಂದರದಾಸ
https://kn.wikipedia.org/wiki/ಪುರಂದರದಾಸ
ಪುರಂದರದಾಸ ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ತಂದೆ ವರದಪ್ಪನಾಯಕ, ತಾಯಿ ರುಕ್ಮಿಣಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇವರು ನಾಯಕ ಜನಾಂಗದವರಿಂದಲೇ ಮಗನಿಗೆ ಶ್ರೀನಿವಾಸ ನಾಯಕ ಎಂದು ಹೆಸರಿಟ್ಟರಂತೆ. ಜನ್ಮ ಸ್ಥಳ ಆರಗ, ತೀರ್ಥಹಳ್ಳಿ ತಾ|| ಶಿವಮೊಗ್ಗ ಜಿ|| ಈ ಮೊದಲು ಮಹಾರಾಷ್ಟ್ರದ ಪುರಂದರಗಢವು ಪುರಂದರದಾಸರ ಜನ್ಮ ಸ್ಥಳವೆಂದು ನಂಬಲಾಗಿತ್ತು. ಆದರೆ ಕರ್ನಾಟಕ ಸರ್ಕಾರವು ಹಿರಿಯ ಸಂಗೀತಗಾರ ಆರ್.ಕೆ. ಪದ್ಮನಾಭ, ಕರ್ನಾಟಕ ಸರ್ಕಾರದ ಮಾಜಿ ಮಂತ್ರಿ ಲೀಲಾದೇವಿ ಆರ್. ಪ್ರಸಾದ್, ಹಿರಿಯ ವಿದ್ವಾಂಸರಾದ ಎ.ವಿ. ನಾವಡ, ವೀರಣ್ಣ ರಾಜೂರ ಮತ್ತು ಅರಳುಮಲ್ಲಿಗೆ ಪಾರ್ಥಸಾರಥಿ ಅವರನ್ನು ಒಳಗೊಂಡ ತಂಡ ರಚಿಸಿ ಪುರಂದರದಾಸರ ಜನ್ಮಸ್ಥಳದ ಬಗ್ಗೆ ವರದಿ ನೀಡುವಂತೆ ಕೋರಿತ್ತು. ಈ ತಂಡಕ್ಕೆ ಶಿವಾನಂದ ವಿರಕ್ತಮಠರವರು ಸಂಚಾಲಕರಾಗಿದ್ದರು. ಈ ತಜ್ಞರ ವರದಿಯ ಪ್ರಕಾರ ಪುರಂದರಗಢವು ಪುರಂದರ ಎಂಬ ಹೆಸರನ್ನು ಊರಿನ ಹೆಸರಿನಲ್ಲಿ ಮಾತ್ರ ಹೊಂದಿದ್ದು ಪುರಂದರ ದಾಸರ ಕುರಿತು ಯಾವುದೇ ಐತಿಹಾಸಿಕ-ಸಾಂಸ್ಕೃತಿಕ ದಾಖಲೆ ಹೊಂದಿಲ್ಲ. ತೀರ್ಥಹಳ್ಳಿ ತಾಲೂಕಿನ ಆರಗ ಊರು ಪುರಂದರ ದಾಸರ ಕುರಿತು ಹಲವು ಐತಿಹಾಸಿಕ ಸಾಕ್ಷ್ಯಗಳನ್ನು ಹೊಂದಿದ್ದು ಆರಗವೇ ಪುರಂದರ ದಾಸರ ಜನ್ಮಸ್ಥಳವೆಂದು ಕರ್ನಾಟಕ ಸರ್ಕಾರಕ್ಕೆ ೨೦೧೮ರಲ್ಲಿ ವರದಿ ಸಲ್ಲಿಸಿದೆ. ವೈರಾಗ್ಯ ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ. ಐತಿಹ್ಯ ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು. ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆ ಆದದ್ದೆಲ್ಲ ಒಳಿತೆ ಆಯಿತು ರಚನೆ: ಶ್ರೀ ಪುರಂದರದಾಸರು ರಾಗ : ಪಂತುರಾವಳಿ ; ತಾಳ : ಆದಿತಾಳ ಆದದ್ದೆಲ್ಲ ಒಳಿತೆ ಆಯಿತು ನಮ್ಮ ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು; ದಂಡಿಗೆ ಬೆತ್ತ ಹಿಡಿಯೊದಕ್ಕೆ ಮಂಡೆ ಮಾಚಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ಗೋಪಾಳ ಬುಟ್ಟಿ ಹಿಡಿಯೊದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ ತುಳಸಿ ಮಾಲೆ ಹಾಕುವುದಕ್ಕೆ ಅರಸನಂತೆ ನಾಚುತಲಿದ್ದೆ ಸರಸಿಜಾಕ್ಷ ಪುರಂದರ ವಿಠ್ಠಲ ತುಳಸಿ ಮಾಲೆ ಹಾಕಿಸಿದನಯ್ಯ ಕವಿ ಮತ್ತು ಸಂಗೀತಗಾರ ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. "ಕುದುರೆ ಅಂದಣ ಆನೆ ಬಯಸೋದು ನರಚಿತ್ತ ಪಾದಚಾರಿ ಆಗೋದು ಹರಿ ಚಿತ್ತವಯ್ಯ" </blockquote> ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ. ಕೀರ್ತನೆಗಳು ೧. ಮಾನವ ಜನ್ಮ ದೊಡ್ಡದು,ಇದ ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರ ಹೆಚ್ಚಿನ ಕೀರ್ತನೆಗಳಿಗೆ ನೋಡಿ ಪುರಂದರದಾಸರ ಕೀರ್ತನೆ ಬಾಹ್ಯ ಸಂಪರ್ಕಗಳು ಪುರಂದರ ದಾಸರು ಪುರಂದರ ದಾಸರ ಬಗ್ಗೆ ಪು.ತಿ.ನ. ಅವರ ಲೇಖನ ರಸಿಕ ಫೋರಮ್ ವಿಕಿಯಲ್ಲಿ ಪುರಂದರ ದಾಸರ ಬಗ್ಗೆಯ ಲೇಖನ ವಿಕಿಸೋರ್ಸ್ನಲ್ಲಿ: ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ: ಪುರಂದರ ದಾಸರ ಜನ್ಮಸ್ಥಳ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ತಜ್ಞ ವರದಿ ಸಲ್ಲಿಕೆ ವರ್ಗ:ಭಾರತದ ಸಂಗೀತಗಾರರು ವರ್ಗ:ಸಂಗೀತ ವರ್ಗ:ಶಾಸ್ತ್ರೀಯ ಸಂಗೀತಗಾರರು ವರ್ಗ:ದಾಸ ಸಾಹಿತ್ಯ ವರ್ಗ:ಕನ್ನಡ ಸಾಹಿತಿಗಳು ವರ್ಗ:ಸಂತರು ವರ್ಗ:ಕನ್ನಡ ಕವಿಗಳು
ಪುರ೦ದರ ದಾಸ
https://kn.wikipedia.org/wiki/ಪುರ೦ದರ_ದಾಸ
REDIRECT ಪುರಂದರದಾಸ
ಹೆಚ್.ಡಿ.ದೇವೇಗೌಡ
https://kn.wikipedia.org/wiki/ಹೆಚ್.ಡಿ.ದೇವೇಗೌಡ
ಕರ್ನಾಟಕ ಸಂಗೀತ
https://kn.wikipedia.org/wiki/ಕರ್ನಾಟಕ_ಸಂಗೀತ
thumb|right|ಪುರಂದರದಾಸರು-ಕರ್ನಾಟಕ ಸಂಗೀತದ ಪಿತಾಮಹ thumb|right|250px|ಮುತ್ತುಸ್ವಾಮಿ ದೀಕ್ಷಿತ್, ತ್ಯಾಗರಾಜರು ಮತ್ತು ಶ್ಯಾಮಾ ಶಾಸ್ತ್ರಿ-ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಕರ್ನಾಟಕ ಸಂಗೀತ (ಸಂಸ್ಕೃತ: कर्णाटक संगीतम्) ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ. ಭಾರತದ ಶಾಸ್ತ್ರೀಯ ಸಂಗೀತದ ಇನ್ನೊಂದು ಮುಖ್ಯ ಪದ್ಧತಿಯಾದ ಹಿಂದುಸ್ತಾನಿ ಸಂಗೀತದಿಂದ ಇದರ ಮುಖ್ಯ ವ್ಯತ್ಯಾಸವೆಂದರೆ ವ್ಯವಸ್ಥಿತ ರಚನೆಗಳ ಹೆಚ್ಚಿನ ಪ್ರಾಮುಖ್ಯತೆ ಮತ್ತು ಇನ್ನೂ ಬಿಗಿಯಾದ ನಿಯಮಗಳ ಅಸ್ತಿತ್ವ. ಕರ್ನಾಟಕ ಸಂಗೀತ ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವಾದದ್ದು. ರಚನೆಗಳು ಸಾಮಾನ್ಯವಾಗಿ ಹಿಂದೂ ದೇವ-ದೇವತೆಗಳನ್ನು ಕುರಿತವು. ಜಾತ್ಯತೀತ ರಚನೆಗಳು ಸಾಮಾನ್ಯವಾಗಿ ಹಾಸ್ಯಪ್ರಧಾನ, ಮಕ್ಕಳ ಹಾಡುಗಳು, ಇಲ್ಲವೇ ಚಿತ್ರಗೀತೆಗಳು. ಭಾರತೀಯ ಸಂಗೀತದ ಎಲ್ಲ ಮುಖ್ಯ ಪದ್ಧತಿಗಳಂತೆ, ಕರ್ನಾಟಕ ಸಂಗೀತದ ಎರಡು ಪ್ರಧಾನ ಅಂಶಗಳೆಂದರೆ ರಾಗ (ಶ್ರುತಿಗೆ ಸಂಬಂಧಪಟ್ಟದ್ದು) ಮತ್ತು ತಾಳ(ಸಂಗೀತ) (ಲಯಕ್ಕೆ ಸಂಬಂಧಪಟ್ಟದ್ದು). ಚರಿತ್ರೆ ಕರ್ನಾಟಕ ಸಂಗೀತ ಹಿಂದುಸ್ತಾನಿ ಸಂಗೀತದೊಂದಿಗೆ ಪ್ರಾಚೀನ ಹಿಂದೂ ಧರ್ಮದ ಅಧ್ಯಾತ್ಮಿಕ ಸಂಗೀತವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಉತ್ತರ ಭಾರತದಲ್ಲಿ ಭಾರತೀಯ ಸಂಗೀತ ಅರಾಬಿಕ್ ಸಂಗೀತದ ಪ್ರಭಾವಕ್ಕೆ ಒಳಗಾಗಿ ಹಿಂದುಸ್ತಾನಿ ಸಂಗೀತ ಪದ್ಧತಿಗೆ ದಾರಿ ಮಾಡಿಕೊಟ್ಟಿತು. ಕರ್ನಾಟಕ ಸಂಗೀತ ಎಂಬ ಪದದ ವ್ಯುತ್ಪತ್ತಿಯ ಬಗ್ಗೆ ವಿವಿಧ ಊಹೆಗಳಿವೆ. ಕರ್ನಾಟಕ ಸಂಗೀತ ಕರ್ನಾಟಕದಲ್ಲಿ ಉಗಮಗೊಂಡಿದ್ದರಿಂದ ಈ ಹೆಸರು ಬಂದಿರಬಹುದು. ಇತರ ವ್ಯುತ್ಪತ್ತಿಗಳೂ ಸಹ ಪ್ರತಿಪಾದಿಸಲ್ಪಟ್ಟಿವೆ. "ಕರ್ಣೇ ಅಟತಿ ಇತಿ ಕರ್ಣಾಟಕಮ್" ಇವುಗಳಲ್ಲಿ ಒಂದು - ಕಿವಿಗೆ ಇಂಪಾಗಿ ಕೇಳುವ ಸಂಗೀತ ಎಂದರ್ಥ.ಪುರಂದರದಾಸರ ಸಮಕಾಲೀನನಾದ ಪುಂಡರೀಕ ವಿಠಲ ಕರ್ನಾಟಕ ಸಂಗೀತದ ಆದ್ಯ ಪ್ರವರ್ತಕಾಚಾರ್ಯನಾದ ಕನ್ನಡಿಗನು. ಶ್ರೀ ಪುರಂದರದಾಸರು (೧೪೯೪ – ೧೫೬೪) 'ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ' ಎಂದು ಹೆಸರಾದವರು. ಪುರಂದರದಾಸರು ಕರ್ನಾಟಕದವರು ಹಾಗು ದಾಸಪದ್ಧತಿಯ ಪ್ರಮುಖರು. ಮುಖ್ಯವಾಗಿ ಪುಂಡರೀಕ ವಿಠಲ, ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥ ದಾಸ, ವಿಜಯ ದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನ ಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ. ಶಾಸ್ತ್ರ thumb|ಮೈಸೂರು ದೊರೆಸ್ವಾಮಿ ಅಯ್ಯಂಗಾರ್ - ಕರ್ನಾಟಕ ಶೈಲಿಯ ವೀಣಾ ವಾದಕರು thumb|right|ಎಮ್ ಎಸ್ ಸುಬ್ಬುಲಕ್ಷ್ಮಿ - ಕರ್ನಾಟಕ ಸಂಗೀತ ಪದ್ಧತಿಯ ಸುಪ್ರಸಿದ್ಧ ಗಾಯಕಿ ಸಪ್ತ ಸ್ವರಗಳು ಕರ್ನಾಟಕ ಸಂಗೀತದಲ್ಲಿ ಏಳು ಮೂಲ ಸ್ವರಗಳಿವೆ: ಸ-ರಿ-ಗ-ಮ-ಪ-ದ-ನಿ. ಈ ಏಳು ಸ್ವರಗಳ ದೀರ್ಘ ಹೆಸರುಗಳು ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ ಮತ್ತು ನಿಷಾದ. ಸ ಮತ್ತು ಪ ಸ್ವರಗಳನ್ನು ಬಿಟ್ಟರೆ ಉಳಿದವು ಮೂರು ಬೇರೆ ಬೇರೆ ರೂಪಗಳಲ್ಲಿ ಉಂಟಾಗಬಹುದು. ಬದಲಾಗದ ಸ ಮತ್ತು ಪ ಸ್ವರಗಳನ್ನು ಪ್ರಕೃತಿ ಸ್ವರಗಳೆಂದು ಹಾಗೂ ರಿ, ಗ, ಮ, ದ ಮತ್ತು ನಿ ಸ್ವರಗಳನ್ನು ವಿಕೃತಿ ಸ್ವರಗಳೆಂದು ಕರೆಯಲಾಗುತ್ತದೆ. ಸ್ವರ ಸ್ಥಾನಗಳ ಪಟ್ಟಿ ಹೀಗಿದೆ. ಷಡ್ಜ - ಸ ಶುದ್ಧ ಋಷಭ - ರಿ೧ ಚತುಶ್ರುತಿ ಋಷಭ - ರಿ೨ ಷಟ್ಶ್ರುತಿ ಋಷಭ - ರಿ೩ ಶುದ್ಧ ಗಾಂಧಾರ - ಗ೧ ಸಾಧಾರಣ ಗಾಂಧಾರ - ಗ೨ ಅಂತರ ಗಾಂಧಾರ - ಗ೩ ಶುದ್ಧ ಮಧ್ಯಮ - ಮ೧ ಪ್ರತಿ ಮಧ್ಯಮ - ಮ೨ ಪಂಚಮ - ಪ ಶುದ್ಧ ಧೈವತ - ದ೧ ಚತುಶ್ರುತಿ ಧೈವತ - ದ೨ ಷಟ್ಶ್ರುತಿ ಧೈವತ - ದ೩ ಶುದ್ಧ ನಿಷಾದ - ನಿ೧ ಕೈಶಿಕಿ ನಿಷಾದ - ನಿ೨ ಕಾಕಳಿ ನಿಷಾದ - ನಿ೩ ಷಟ್ಶ್ರುತಿ ಋಷಭ ಮತ್ತು ಸಾಧರಣ ಗಾಂಧಾರ ಎರಡು ಸಮನಾದ ಸ್ವರಗಳು ಹಾಗೆಯೆ ಚತುಶ್ರುತಿ ಧೈವತ ಮತ್ತು ಶುದ್ಧ ನಿಷಾದ ಸಮನಾದ ಸ್ವರಗಳು. ಯಾವುದೇ ಒಂದು ರಾಗದಲ್ಲಿ ಒಂದು ಸ್ವರದ ಒಂದು ರೂಪ ಮಾತ್ರ ಉಂಟಾಗಬಹುದು. ಕೆಲವು "ಹಗುರ" ರಾಗಗಳಲ್ಲಿ (ಉದಾ: ಬೇಹಾಗ್)ಕೆಲವು ಸ್ವರಗಳು ಎರಡು ರೂಪಗಳಲ್ಲಿ ಕಾಣಿಸಿಕೊಳ್ಳಬಹುದು (ಆರೋಹಣದಲ್ಲಿ ಒಂದು ಮತ್ತು ಅವರೋಹಣದಲ್ಲಿ ಒಂದು). ಒಂದು ರಾಗದ ಆರೋಹಣ ಮತ್ತು ಅವರೋಹಣದಲ್ಲಿ ಐದು, ಆರು ಇಲ್ಲವೇ ಏಳು ಸ್ವರಗಳು ಇರಬಹುದು. right|thumb|ಕದ್ರಿ ಗೋಪಾಲನಾಥ್ - ಸ್ಯಾಕ್ಸೋಫೋನ್ ವಾದಕರು ರಾಗ ರಾಗ ಎಂಬುದು ಶ್ರುತಿಬದ್ಧವಾದ ರಚನೆಯನ್ನು ಸೃಷ್ಟಿಸಲು ಇರುವ ನಿಯಮಗಳ ವ್ಯವಸ್ಥೆ. ಪ್ರತಿ ರಾಗವೂ ಈ ಕೆಳಗಿನ ಅಂಶಗಳನ್ನು ಹೊಂದಿರುತ್ತದೆ. ಮೇಲಕ್ಕೇರುವ ಸ್ವರಗಳ ಕ್ರಮ (ಆರೋಹಣ) ಕೆಳಗಿಳಿಯುವ ಸ್ವರಗಳ ಕ್ರಮ (ಅವರೋಹಣ) ಮುಖ್ಯ ಮತ್ತು ಅಮುಖ್ಯ ಸ್ವರಗಳು ಸ್ವರಗಳನ್ನು ಅಲಂಕೃತವಾಗಿರಿಸುವ ಕ್ರಮಗಳು (ಗಮಕ) ..ಇತ್ಯಾದಿ. ಮೇಳಕರ್ತ ವ್ಯವಸ್ಥೆ ಆರೋಹಣ ಮತ್ತು ಅವರೋಹಣಗಳಲ್ಲಿ ಏಳೂ ಸ್ವರಗಳನ್ನು ಹೊಂದಿರುವ ರಾಗಗಳನ್ನು ಸಂಪೂರ್ಣ ರಾಗಗಳು ಎಂದು ಕರೆಯಲಾಗುತ್ತದೆ. ಸಂಪೂರ್ಣ ರಾಗಗಳನ್ನು ಮೇಳಕರ್ತ ವ್ಯವಸ್ಥೆಯಲ್ಲಿ ವರ್ಗೀಕರಿಸಲಾಗಿದೆ. ಒಟ್ಟು ೭೨ ಮೇಳಕರ್ತ ರಾಗಗಳಿದ್ದು, ಇವುಗಳಲ್ಲಿ ೩೬ ರಾಗಗಳಲ್ಲಿ ನಾಲ್ಕನೆಯ ಸ್ವರ "ಮ" ಶುದ್ದ ಮಧ್ಯಮವಾಗಿದ್ದು, ಇನ್ನುಳಿದ ೩೬ ಮೇಳಕರ್ತ ರಾಗಗಳಲ್ಲಿ ನಾಲ್ಕನೆಯ ಸ್ವರ "ಮ" ಪ್ರತಿ ಮಧ್ಯಮವಾಗಿರುವುದು(ಮ ಸ್ವರದ ಎರಡನೆಯ ರೂಪ). ಈ ರಾಗಗಳನ್ನು ಆರರ ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಈ ಗುಂಪುಗಳಿಗೆ ಚಕ್ರಗಳೆಂದು ಹೆಸರು. ಹೀಗೆ ಮೇಳಕರ್ತರಾಗಗಳ ೧೨ ಚಕ್ರಗಳಿವೆ. ಮೇಳಕರ್ತರಾಗಗಳ ಆರೋಹಣ ಮತ್ತು ಅವರೋಹಣಗಳಲ್ಲಿ ಪ್ರತಿ ಸ್ವರವೂ ಒಂದು ಮತ್ತು ಒಂದೇ ಒಂದು ಬಾರಿ ಕಂಡು ಬರುತ್ತದೆ. ಕೆಲವು ಸ್ವರಗಳು ಇಲ್ಲದೆ ಇರುವ ರಾಗಗಳಿಗೆ ವರ್ಜ್ಯ ರಾಗಗಳೆಂದು ಹೆಸರು. ಮೇಳಕರ್ತ ರಾಗದ ಕೆಲವು ಸ್ವರಗಳನ್ನು ಬಳಸಿಕೊಂಡು, ಕೆಲವನ್ನು ಬಿಟ್ಟು ಇರುವ ರಾಗಗಳಿಗೆ ಜನ್ಯ ರಾಗಗಳು ಎಂದು ಹೆಸರು. ಆರೋಹಣ ಮತ್ತು ಅವರೋಹಣಗಳು ವಕ್ರವಾಗಿರುವ ರಾಗಗಳು ಪೂರ್ಣ ರಾಗಗಳಾಗಿದ್ದರೆ ಅವುಗಳಿಗೆ "ವಕ್ರ ಸಂಪೂರ್ಣ" ಎಂದು ಹೆಸರು. ಮೇಳಕರ್ತ ರಾಗಗಳ ಪಟ್ಟಿ ಇಲ್ಲಿದೆ ತಾಳ ತಾಳ ಎಂಬುದು ಸಂಗೀತ ರಚನೆಗಳ ಲಯವಿನ್ಯಾಸವನ್ನು ನಿರ್ದೇಶಿಸುತ್ತದೆ. ಸಂಗೀತದಲ್ಲಿ ಸಮಯದ ಮೂಲಮಾನಕ್ಕೆ ಮಾತ್ರೆ ಎಂದು ಹೆಸರು. ಸಂಗೀತಗಾರರು ತಮ್ಮ ಕೈಯನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ತಟ್ಟುವುದರ ಮೂಲಕ (ತಾಳ ಹಾಕುವುದು) ಈ ಲಯದ ಲೆಕ್ಕವಿಟ್ಟು ಕೊಳ್ಳುತ್ತಾರೆ. ತಾಳ ಸಮಯದ ಲೆಕ್ಕವನ್ನೂ ಇಟ್ಟುಕೊಳ್ಳಲು ಉಪಯೋಗವಾಗುತ್ತದೆ. ತಾಳಗಳನ್ನು ಏಳು ಗುಂಪುಗಳಾಗಿ ವರ್ಗೀಕರಿಸಲಾಗಿದೆ: ಧ್ರುವ, ಮಠ್ಯ, ರೂಪಕ, ಝಂಪೆ, ತ್ರಿಪುಟ, ಅಟ್ಟ, ಏಕ. ಕರ್ನಾಟಕ ಸಂಗೀತದಲ್ಲಿ ತಾಳವನ್ನು ತೋರಿಸಲು ಸಾಮಾನ್ಯವಾಗಿ ಉಪಯೋಗಿಸುವ ವಾದ್ಯ ಮೃದಂಗ. ಕೃತಿಗಳು ಕರ್ನಾಟಕ ಸಂಗೀತದ ಬಹುಪಾಲು ಕೃತಿಗಳು ಕನ್ನಡ ಅಥವಾ ಸಂಸ್ಕೃತ ಭಾಷೆಯಲ್ಲಿವೆ. ತೆಲುಗು ಮತ್ತು ತಮಿಳು ಸಹ ಕೃತಿಗಳ ರಚನೆಯಲ್ಲಿ ಉಪಯೋಗಿಸಲ್ಪಟ್ಟ ಭಾಷೆಗಳು. ಕರ್ನಾಟಕ ಸಂಗೀತದ ಕೃತಿಗಳಲ್ಲಿ ಪ್ರಸಿದ್ಧವಾದ ಕೆಲವೆಂದರೆ- ತ್ಯಾಗರಾಜ ವಿರಚಿತ ಪಂಚರತ್ನ ಕೃತಿಗಳು, ಮುತ್ತುಸ್ವಾಮಿ ದೀಕ್ಷಿತರು ವಿರಚಿಸಿದ ನವಗ್ರಹ ಕೃತಿಗಳು ಮತ್ತು ಜಯದೇವನ ಅಷ್ಟಪದಿಗಳು. ಕೀರ್ತನೆ ಕೀರ್ತನೆಗಳು ಸಾಮಾನ್ಯವಾಗಿ ಮೂರು ಭಾಗಗಳನ್ನು ಹೊಂದಿರುತ್ತವೆ: ಪಲ್ಲವಿ - ಸಾಮಾನ್ಯವಾಗಿ ಎರಡು ಸಾಲುಗಳು ಅನುಪಲ್ಲವಿ - ಸಾಮಾನ್ಯವಾಗಿ ಎರಡು ಸಾಲುಗಳು ಚರಣ - ಪಲ್ಲವಿ ಮತ್ತು ಅನುಪಲ್ಲವಿಗಿಂತ ದೀರ್ಘವಾಗಿರುತ್ತದೆ ಕೆಲವು ಕೀರ್ತನೆಗಳಲ್ಲಿ ಅನುಪಲ್ಲವಿ ಮತ್ತು ಚರಣದ ನಡುವೆ ಚಿಟ್ಟೆಸ್ವರ ಎಂಬ ಭಾಗವಿರುತ್ತದೆ (ಉದಾ: "ಸಾರಸಮುಖಿ ಸಕಲ ಭಾಗ್ಯದೆ..."). ಚಿಟ್ಟೆಸ್ವರದಲ್ಲಿ ಪದಗಳಿಲ್ಲದೆ ಕೇವಲ ಸ್ವರಗಳು ಮಾತ್ರ ಇರುತ್ತವೆ. ಕೆಲವು ಬಾರಿ ಕೃತಿಯನ್ನು ರಚಿಸಿರುವ ವಾಗ್ಗೇಯಕಾರರೇ ಚಿಟ್ಟೆ ಸ್ವರವನ್ನೂ ರಚಿಸಿದ್ದರೆ, ಇನ್ನು ಕೆಲವೆಡೆ ನಂತರ ಬಂದ ಇತರ ಸಂಗೀತ ವಿದ್ವಾಂಸರು ಚಿಟ್ಟೆಸ್ವರವನ್ನು ಸೇರಿಸಿರುವುದೂ ಉಂಟು. ಇನ್ನು ಕೆಲವು ಕೀರ್ತನೆಗಳಲ್ಲಿ ಚರಣದ ನಂತರ ಮಧ್ಯಮ ಕಾಲ ಎಂಬ ಭಾಗವಿರುತ್ತದೆ. ಮಧ್ಯಮ ಕಾಲವನ್ನು ಸಾಮಾನ್ಯವಾಗಿ ದ್ವಿಗುಣ ವೇಗದಲ್ಲಿ ಹಾಡಲಾಗುತ್ತದೆ. ವರ್ಣ ವರ್ಣ ಎಂಬುದು ಒಂದು ರಾಗದ ಸಂಪೂರ್ಣ ವರ್ಣನೆಯುಳ್ಳ ವಿಶೇಷ ಕೃತಿ. ಆರೋಹಣ ಮತ್ತು ಅವರೋಹಣ, ಮುಖ್ಯ ಸ್ವರಗಳು, ಸಾಮಾನ್ಯ ಪದಪುಂಜಗಳು ಮೊದಲಾದ ಒಂದು ರಾಗದ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಕೃತಿ. ವರ್ಣದಲ್ಲಿ ಇರುವ ಭಾಗಗಳೆಂದರೆ ಪಲ್ಲವಿ, ಅನುಪಲ್ಲವಿ, ಮುಕ್ತಾಯಿ ಸ್ವರ (ಕೀರ್ತನೆಯ ಚಿತ್ತಸ್ವರದಂತೆ), ಚರಣ ಮತ್ತು ಚಿಟ್ಟೆಸ್ವರ. ಸಾಹಿತ್ಯವು ಶೃಂಗಾರವಾಗಿರಬಹುದು ಅಥವಾ ಭಕ್ತಿಪ್ರಧಾನವಾಗಿರಬಹುದು. ಪೂರ್ವಾ೦ಗ ಮತ್ತು ಉತ್ತರಾಂಗಗಳು ಪ್ರತ್ಯೇಕವಾಗಿದ್ದು, ಪೂರ್ವಾ೦ಗದಲ್ಲಿ ಪಲ್ಲವಿ, ಅನುಪಲ್ಲವಿ, ಚಿಟ್ಟೆಸ್ವರಾಗಳನ್ನು ನಿರೂಪಿಸಿ, ನಂತರ ಪಲ್ಲವಿಯ ಒಂದು ಆವರ್ತವನ್ನು ಹಾಡಿ ಪೂರ್ವಾ೦ಗವನ್ನು ಮುಗಿಸಬೇಕು. ಉತ್ತರಾಂಗದಲ್ಲಿ ಚರಣವನ್ನು ಒಂದಾವರ್ತಿ ನಿರೂಪಿಸಿ, ಎತ್ತುಗಡೆ ಸ್ವರಗಳನ್ನು ಹಾಡಬೇಕು. ಪ್ರತಿಯೊಂದು ಎತ್ತುಗಡೆಸ್ವರವನ್ನು ನಿರೂಪಿಸಿದ ನಂತರ ಚರಣ ವನ್ನು ಎತ್ತಿಕೊಳ್ಳಬೇಕು. ಕರ್ನಾಟಕ ಸಂಗೀತದಲ್ಲಿ ಉಪಯೋಗಗೊಳ್ಳುವ ಕೃತಿಗಳ ಇತರ ರೂಪಗಳಲ್ಲಿ ಸ್ವರಜತಿ ಮತ್ತು ಗೀತೆಗಳನ್ನು ಹೆಸರಿಸಬಹುದು. ಮನೋಧರ್ಮ ಸಂಗೀತ ಸಾಮಾನ್ಯವಾಗಿ ಸಂಗೀತ ಕಛೇರಿಗಳಲ್ಲಿ ಪೂರ್ವ ತಯಾರಿಯಿಲ್ಲದೆ ಸಂಗೀತಗಾರರ ಮನೋಧರ್ಮಕ್ಕನುಗುಣವಾಗಿ ಪರಿಚಯಿಸಲ್ಪಡುವ ಅಂಶಗಳಿರುತ್ತವೆ. ಸರಾಸರಿ ಒಂದು ಕಛೇರಿಯ ಶೇ.೮೦ ಭಾಗ ಈ ರೀತಿಯ ಮನೋಧರ್ಮ ಸಂಗೀತವನ್ನು ಒಳಗೊಂಡಿರುತ್ತದೆ. ನಾಲ್ಕು ಪ್ರಮುಖ ರೀತಿಯ ಮನೋಧರ್ಮ ಸಂಗೀತವನ್ನು ಗುರುತಿಸಲಾಗಿದೆ: ರಾಗ ಆಲಾಪನೆ ಇದು ಸಾಮಾನ್ಯವಾಗಿ ಒಂದು ಕೃತಿಯ ಆರಂಭದಲ್ಲಿ ಹಾಡಲಾಗುತ್ತದೆ (ವಾದ್ಯಗಳ ಸಂದರ್ಭದಲ್ಲಿ ನುಡಿಸಲಾಗುತ್ತದೆ). ಇದು ಕೇಳುಗರಲ್ಲಿ ಆ ಕೃತಿಯನ್ನು ಹಾಡಲ್ಪಡುವ ರಾಗದ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುತ್ತದೆ. ನಿಧಾನವಾಗಿ ಮುಂದೆ ಸಾಗುವ ಈ ಹಂತ, ತಾಳದ ಬದ್ಧತೆಯಿಲ್ಲದೆ ರಾಗದ ವಿವಿಧ ಗುಣಗಳನ್ನು ಪ್ರದರ್ಶಿಸುತ್ತದೆ. ಆ ರಾಗದ ಜೀವ ಸ್ವರಗಳನ್ನು ಆಧಾರವಾಗಿಟ್ಟುಕೊಂಡು, ವಿವಿಧ ಹಂತಗಳಲ್ಲಿ ವಿಸ್ತರಿಸಲ್ಪಡುತ್ತದೆ. ಸಾಮಾನ್ಯವಾಗಿ ಮಂದ್ರಸ್ಥಾಯಿಯಿಂದ ಆರಂಭವಾಗುವ ಈ ರಾಗ ಪರಿಚಯದ ಪದ್ಧತಿ ಕೆಲಕಾಲ ಅಲ್ಲಿಯೇ ನೆಲೆಸಿ ಅಲ್ಲಿಂದ ಮಧ್ಯಮಸ್ಥಾಯಿಗೆ ಬಂದು ಅಲ್ಲಿ ಪ್ರಕೃತಿ ಸ್ವರವಿದ್ದರೆ ಅದರ ಆಧಾರದ ಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿ ಮುಂದೆ ತಾರಸ್ಥಾಯಿಗೆ ಯಾವ ಅಡಚಣೆಯೂ ಇಲ್ಲದೆ ಸುಲಭವಾಗಿ ತೇಲಿದಂತೆ ಮೇಲೇರುತ್ತದೆ. ತಾರಸ್ಥಾಯಿಯಲ್ಲಿ ರಾಗದ ಎಲ್ಲಾ ಗುಣಗಳನ್ನೂ, ರೂಪಗಳನ್ನೂ ಅನಾವರಣಗೊಳಿಸಿ ನಂತರ ಮತ್ತೆ ಮಧ್ಯಮಸ್ಥಾಯಿಗೆ ಬಂದು ಅಲ್ಲಿಂದ ಜಾರಿದಂತೆ ಮಂದ್ರಕ್ಕೆ ಇಳಿಸು ಒಂದು ದೀರ್ಘ ನಿಲುಗಡೆಯೊಡನೆ ನಿಲ್ಲುತ್ತದೆ. ನೆರವಲ್ ಈ ಹಂತವನ್ನು ಹೆಚ್ಚು ಅನುಭವವುಳ್ಳ ಸಂಗೀತಗಾರರು ಮಾತ್ರ ಉಪಯೋಗಿಸುತ್ತಾರೆ. ಕೃತಿಯ ಯಾವುದಾದರೂ ಒಂದೆರಡು ಸಾಲುಗಳನ್ನು ವಿಧ ವಿಧವಾಗಿ ಪುನಃ ಪುನಃ ಆವರ್ತಿಸಿ ರಾಗ ಮತ್ತು ತಾಳದ ಗುಣಗಳನ್ನು ಮತ್ತು ವಿವಿಧ ಅಲಂಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಇದು ಪೂರ್ಣ ವಾಗಿ ಸಂಗೀತಗಾರನ ಪ್ರತಿಭೆಯನ್ನು ಪ್ರದರ್ಶಿಸುತ್ತದೆ. ಕಲ್ಪನಾ ಸ್ವರ ಎಲ್ಲಕ್ಕಿಂತ ಸರಳ ರೀತಿಯ ಮನೋಧರ್ಮ ಸಂಗೀತ; ಈ ಹಂತದಲ್ಲಿ ಅನೇಕ ಕಲ್ಪನಾ ಸ್ವರಗಳ ಪುಂಜಗಳನ್ನು ಹಾಡಲಾಗುತ್ತದೆ. ಈ ಪುಂಜಗಳಲ್ಲಿ ಸ್ವರಗಳು ಜೋಡಣೆಗೊಳ್ಳುವ ಕ್ರಮ ಆ ರಾಗದ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ರಾಗಕ್ಕೂ ಅದರದೇ ಆದ ಒಂದು ಓಟ ಮತ್ತು ವಿಧ ಇದೆ. ಯಾವುದೇ ರಾಗದ ವಿಸ್ತರಣೆಯಾದರೂ ಸರಿ, ಕಲ್ಪನಾ ಸ್ವರರಚನೆಯಾದರೂ ಸರಿ ಅದು ನಿರ್ಬಂಧಿಸಿದ ಆ ಚೌಕಟ್ಟಿನ ಒಳಗೇ ಇರಬೇಕು. ತಾನ ಈ ಹಂತವನ್ನು ಮೊಟ್ಟ ಮೊದಲು ವೀಣೆಯ ಮೇಲೆ ನುಡಿಸಲಿಕ್ಕಾಗಿ ಬೆಳೆಸಲಾಯಿತು. "ಅನಂತಮ್" ಎಂಬ ಪದವನ್ನು ಪುನಃ ಪುನಃ ವಿಶೇಷ ಅಲಂಕಾರಗಳೊಂದಿಗೆ ಆವರ್ತಿಸಲಾಗುತ್ತದೆ. "ಅನಂತಮಾನಂತಮಾನಂತ...." ಎಂಬುದು "ತಾನಮ್ತಾನಮ್ತಾನಮ್..." ಎಂದು ಪದಾಂತರವಾಗಿದೆ. ರಾಗ ತಾನ ಪಲ್ಲವಿ ಇದು ರಾಗ ಆಲಾಪನೆ, ತಾನ ಮತ್ತು ನೆರವಲ್ ಗಳನ್ನು ಒಳಗೊಂಡ ಸಂಯುಕ್ತ ಹಂತ. ನೆರವಲ್ ಹಂತದ ನಂತರ ಪಲ್ಲವಿಯನ್ನು ಎರಡು ಬಾರಿ ಪುನರಾವರ್ತಿಸಿ, ನಂತರ ಅರ್ಧ ವೇಗದಲ್ಲಿ ಆವರ್ತಿಸಿ, ಮತ್ತೆ ದ್ವಿಗುಣ ವೇಗದಲ್ಲಿ ಮತ್ತು ನಾಲ್ಕರಷ್ಟು ವೇಗದಲ್ಲಿ ಪುನರಾವರ್ತಿಸಲಾಗುತ್ತದೆ. ಕರ್ನಾಟಕ ಸಂಗೀತ ಕಛೇರಿ ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸಾಮಾನ್ಯವಾಗಿ ಇರುವ ಸಂಗೀತಗಾರರೆಂದರೆ: ಒಬ್ಬ ಹಾಡುಗಾರರು (ಇಲ್ಲವೇ ಪ್ರಧಾನ ವಾದ್ಯವನ್ನು ನುಡಿಸುವವರು), ಒಂದು ಪಕ್ಕವಾದ್ಯ (ಸಾಮಾನ್ಯವಾಗಿ ಪಿಟೀಲು), ಮತ್ತು ತಾಳಕ್ಕಾಗಿ ಒಂದು ವಾದ್ಯ (ಸಾಮಾನ್ಯವಾಗಿ ಮೃದಂಗ) ಸಾಮಾನ್ಯ. ಕಛೇರಿಗಳು ಸಾಮಾನ್ಯವಾಗಿ ಗಣಪತಿ ಸ್ತೋತ್ರದೊಂದಿಗೆ ಆರಂಭವಾಗುತ್ತವೆ. ನಂತರ ಬೇರೆ ಬೇರೆ ರಾಗಗಳಲ್ಲಿ ಅನೇಕ ಕೃತಿಗಳನ್ನು ಹಾಡಲಾಗುತ್ತದೆ. ಕಛೇರಿಯ ಅಂತ್ಯದಲ್ಲಿ ಹಗುರವಾದ ಕೃತಿಗಳು (ತಿಲ್ಲಾನ) ಅಥವಾ ಮಂಗಳವನ್ನು ಹಾಡಲಾಗುತ್ತದೆ. ವಾದ್ಯಗಳು thumb|right|ಕರ್ನಾಟಕ ಸಂಗೀತ ಕಛೇರಿಗಳಲ್ಲಿ ಸರ್ವೇಸಾಮಾನ್ಯವಾಗಿ ಉಪಯೋಗಿಸಲಾಗುವ ಪಿಟೀಲುಗಳು (ವಯೊಲಿನ್) ಶ್ರುತಿಗಾಗಿ ತಂಬೂರಿ ಉಪಯೋಗವಾಗುತ್ತದೆ. ಪ್ರಧಾನ ವಾದ್ಯ ಅಥವಾ ಪಕ್ಕವಾದ್ಯಗಳಿಗೆ ಸಾಮಾನ್ಯವಾಗಿ ಉಪಯೋಗಗೊಳ್ಳುವ ವಾದ್ಯಗಳು ವೀಣೆ, ವಯೊಲಿನ್ (ಪಿಟೀಲು). ಕೆಲವೊಮ್ಮೆ ಕೊಳಲು ಉಪಯೋಗಗೊಳ್ಳುತ್ತದೆ. ತಾಳಕ್ಕಾಗಿ ಉಪಯೋಗಿಸಲ್ಪಡುವ ವಾದ್ಯಗಳಲ್ಲಿ ಪ್ರಮುಖವಾದವು ಮೃದಂಗ ಮತ್ತು ಘಟ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೊಲಿನ್, ವಿಚಿತ್ರವೀಣೆ, ಸ್ಯಾಕ್ಸೋಫೋನ್ ಮೊದಲಾದ ವಾದ್ಯಗಳು ಜನಪ್ರಿಯಗೊಳಿಸಲ್ಪಟ್ಟಿವೆ. ಕರ್ನಾಟಕ ಸಂಗೀತದಲ್ಲಿ ಹಾಡುಗಾರಿಕೆಯ ಪ್ರಾಧಾನ್ಯ ಹೆಚ್ಚು. ವಾದ್ಯಗಳು ಸಹ ಹಾಡುಗಾರಿಕೆಯನ್ನೇ ಅನುಕರಿಸುತ್ತವೆ. ಇತ್ತೀಚೆಗೆ ಶುದ್ಧ ವಾದ್ಯ ಸಂಗೀತವೂ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದೆ. ವ್ಯವಸ್ಥೆ ಬಹುಪಾಲು ಕರ್ನಾಟಕ ಸಂಗೀತದ ಕಛೇರಿಗಳು ಈ ಕೆಳಗಿನ ವ್ಯವಸ್ಥೆಯನ್ನು ಅನುಸರಿಸುತ್ತವೆ. ವರ್ಣ - ಕಛೇರಿ ಯಾವುದಾದರೂ ವರ್ಣದ ಹಾಡುಗಾರಿಕೆಯಿಂದ (ವಾದ್ಯಗಳ ಸಂದರ್ಭದಲ್ಲಿ ನುಡಿಸುವಿಕೆಯಿಂದ) ಅರಂಭವಾಗುತ್ತದೆ. ಸಾಮಾನ್ಯವಾಗಿ ಯಾವುದಾದರೂ ಸಂಪೂರ್ಣ ರಾಗದ ವರ್ಣವನ್ನು ಆರಿಸಲಾಗುತ್ತದೆ. ಕಛೇರಿಯ ಆರಂಭವಾದದ್ದರಿಂದ ಕಲ್ಯಾಣಿ, ಧೀರ ಶಂಕರಾಭರಣ ಮೊದಲಾದ ರಾಗಗಳು ಇಲ್ಲಿ ಸಾಮಾನ್ಯ. ವರ್ಣ ಸುಮಾರು ೬-೧೨ ನಿಮಿಷಗಳಷ್ಟು ಕಾಲ ನಡೆಯುತ್ತದೆ. ಕೀರ್ತನೆಗಳು - ವರ್ಣದ ನಂತರ ವಿವಿಧ ರಾಗಗಳಲ್ಲಿ ಕೀರ್ತನೆಗಳನ್ನು ಹಾಡಲಾಗುತ್ತದೆ. ಕೆಲವೊಮ್ಮೆ ಕೀರ್ತನೆಯ ಮೊದಲು ರಾಗ ಆಲಾಪನೆ ಮತ್ತು ಕೊನೆಯಲ್ಲಿ ಕಲ್ಪನಾ ಸ್ವರ ಬರುವುದುಂಟು. ತನಿ - ಇಂದಿನ ಬಹುಪಾಲು ಕಛೇರಿಗಳಲ್ಲಿ ಒಂದು "ತನಿ ಆವರ್ತನೆ" ನಡೆಯುತ್ತದೆ. ಹಾಡುಗಾರರು ಮತ್ತು ವಯೊಲಿನ್ ನಡುವೆ ಸ್ವರ ಕಲ್ಪನೆ, ನಿರವಲ್ ಮೊದಲಾದ ಹಂತಗಳ ನಂತರ ತಾಳ ವಾದ್ಯಗಳಾದ ಮೃದಂಗ, ಘಟ ಅಥವ ಖಂಜಿರ ಮೊದಲು ಬೆರೆ ಬೆರೆಯಾಗಿ ನಂತರ ಒಟ್ಟುಗೂಡಿ ನುಡಿಸುವ ಹಂತ ತನಿ ಆವರ್ತನೆ. ರಾಗ ತಾನ ಪಲ್ಲವಿ - ಅನುಭವಿ ಸಂಗೀತಗಾರರು ಅನೇಕ ಕೀರ್ತನೆಗಳ ಬದಲು ರಾಗ ತಾನ ಪಲ್ಲವಿಯನ್ನು ನಡೆಸಬಹುದು. ದೇವರ ನಾಮಗಳು - ಹಾಡುವ ಪದ್ದತಿ ಇದೆ. ತಿಲ್ಲಾನ - ಕೆಲವೊಮ್ಮೆ ಕೊನೆಯಭಾಗದಲ್ಲಿ ತಿಲ್ಲಾನ ಹಾಡುತ್ತಾರೆ. ಮಂಗಳ - ಕಛೇರಿಯ ಕೊನೆಯಲ್ಲಿ ಹಾಡಲಾಗುವ (ಅಥವಾ ನುಡಿಸಲಾಗುವ) ಮಂಗಳ ಸಾಮಾನ್ಯವಾಗಿ ಸೌರಾಷ್ಟ್ರ ಅಥವಾ ಮಧ್ಯಮಾವತಿ ರಾಗದಲ್ಲಿರುತ್ತದೆ. ಪ್ರಸಿದ್ಧ ಸಂಗೀತಗಾರರು ಪಿತಾಮಹ ಶ್ರೀ ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರು. ಮುಂದೆ ತ್ಯಾಗರಾಜರಂಥ ಸಂಗೀತಗಾರರಿಗೆ ಸ್ಫೂರ್ತಿ ತಂದ ಪುರಂದರದಾಸರು ತಾಳ ವ್ಯವಸ್ಥೆಯ ಮೂಲಭೂತ ಸಿದ್ಧಾಂತವನ್ನೂ ಪ್ರತಿಪಾದಿಸಿದರು. ತ್ರಿಮೂರ್ತಿ ಶ್ರೀ ತ್ಯಾಗರಾಜರು (೧೭೫೯-೧೮೪೭), ಮುತ್ತುಸ್ವಾಮಿ ದೀಕ್ಷಿತರು (೧೭೭೬-೧೮೨೭) ಮತ್ತು ಶ್ಯಾಮಾ ಶಾಸ್ತ್ರಿಗಳು(೧೭೬೨-೧೮೨೭) - ಈ ಮೂವರು ವಾಗ್ಗೇಯಕಾರರನ್ನು ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದು ಪರಿಗಣಿಸಲಾಗುತ್ತದೆ. ಆಧುನಿಕ ಹಾಡುಗಾರರು ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದ ಕೆಲವರೆಂದರೆ ಎಂ.ಎಸ್.ಸುಬ್ಬುಲಕ್ಷ್ಮಿ, ಡಾ.ಬಾಲಮುರಳಿಕೃಷ್ಣ, ಡಿ.ಕೆ ಪಟ್ಟಮ್ಮಾಳ್, ಕೆ.ಜೆ.ಯೇಸುದಾಸ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮೊದಲಾದವರು. ಇನ್ನೂ ಇತ್ತೀಚಿನ ಆಧುನಿಕ ಹಾಡುಗಾರರಲ್ಲಿ ಪ್ರಸಿದ್ಧರಾದವರು ಅರುಣಾ ಸಾಯಿರಾಮ್,ಸುಧಾ ರಘುನಾಥನ್,ಬಾಂಬೆ ಜಯಶ್ರೀ, ಸಂಜಯ್ ಮೊದಲಾದವರು. ವಾದ್ಯ ವಾದ್ಯಗಳಲ್ಲಿ ಪರಿಣತಿ ಪಡೆದ ಆಧುನಿಕ ಸಂಗೀತಗಾರರಲ್ಲಿ ಮೈಸೂರು ದೊರೆಸ್ವಾಮಿ ಅಯ್ಯಂಗಾರ್ (ವೀಣೆ), ಟಿ. ಚೌಡಯ್ಯ, ಲಾಲ್‍ಗುಡಿ ಜಯರಾಮನ್, ಕೋಲಾರದ ಕೊಳ್ಳೆಗಾಲ ಗೊಪಾಲಕೃಷ್ಣ (ವಯೊಲಿನ್), ಕದ್ರಿ ಗೋಪಾಲನಾಥ್ (ಸ್ಯಾಕ್ಸೊಫೋನ್) ಮೊದಲಾದವರು ಪ್ರಸಿದ್ಧರು. ಇನ್ನೂ ಇತ್ತೀಚೆಗೆ ರವಿಕಿರಣ್ (ಚಿತ್ರವೀಣೆ), ಯು ಶ್ರೀನಿವಾಸ್ (ಮ್ಯಾಂಡೊಲಿನ್) ಮೊದಲಾದವರು ಹೆಸರು ಪಡೆದಿದ್ದಾರೆ. ಬಾಹ್ಯ ಸಂಪರ್ಕಗಳು ಕರ್ನಾಟಕ ಸಂಗೀತವನ್ನು ಕೇಳಿರಿ (ಹಾಡುಗಾರಿಕೆ) ಕರ್ನಾಟಕ ಸಂಗೀತವನ್ನು ಕೇಳಿರಿ (ವಾದ್ಯ) ಸಂಗೀತ, ಸಂಗೀತಗಾರ ಸಂಜಯ್ ಸುಬ್ರಹ್ಮಣ್ಯಮ್ ಅವರ ತಾಣ, ಕರ್ನಾಟಕ ಸಂಗೀತ ಪದ್ಧತಿಯ ಬಗ್ಗೆ ಮತ್ತು ಸಂಗೀತಗಾರರ ಬಗ್ಗೆ ಮಾಹಿತಿ Carnatica, ಕರ್ನಾಟಕ ಸಂಗೀತದ ಬಗ್ಗೆ ಮಾಹಿತಿ, ಆಡಿಯೋ ಸಿಡಿಗಳು ಕರ್ನಾಟಕ ಸಂಗೀತ portal ವರ್ಗ:ಸಂಸ್ಕೃತಿ ವರ್ಗ:ಸಂಗೀತ ವರ್ಗ:ಕರ್ನಾಟಕ ಸಂಗೀತ
ದೊರೆಸ್ವಾಮಿ ಅಯ್ಯಂಗಾರ್
https://kn.wikipedia.org/wiki/ದೊರೆಸ್ವಾಮಿ_ಅಯ್ಯಂಗಾರ್
ಮೈಸೂರು ದೊರೆಸ್ವಾಮಿ ಅಯ್ಯಂಗಾರ್ http://www.frontline.in/navigation/?type=static&page=flonnet&rdurl=fl1423/14230990.htm(ಅಕ್ಟೋಬರ್ ೨೪, ೧೯೨೦ - ಅಕ್ಟೋಬರ್, ೧೯೯೭) ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ವೈಣಿಕರು. ಅವರು ವೀಣಾ ದೊರೆಸ್ವಾಮಿ ಅಯ್ಯಂಗಾರ್ ಎಂದೇ ಪ್ರಸಿದ್ದರಾಗಿದ್ದು ಪದ್ಮವಿಭೂಷಣ ಗೌರವ ಸಮ್ಮಾನಿತರು. ಜೀವನ ಅಕ್ಟೋಬರ್ ೨೪, ೧೯೨೦ ದೊರೆಸ್ವಾಮಿ ಅಯ್ಯಂಗಾರ್ ಅವರು ಹುಟ್ಟಿದ ದಿನ. ಮೈಸೂರಿನ ವೀಣೆಗೆ ಕರ್ನಾಟಕ ಸಂಗೀತದಲ್ಲಿ ಮಹತ್ವದ ಸ್ಥಾನವಿದ್ದು, ಹಲವಾರು ಪರಿಣಿತರನ್ನು ಸಂಗೀತ ಲೋಕಕ್ಕೆ ನೀಡಿದೆ. ಮೈಸೂರು ಅರಸರು ಸಂಗೀತಕ್ಕೆ ಮಹತ್ವದ ಪೋಷಕರಾಗಿದ್ದು, ೧೬೪೫-೧೭೦೪ರ ಅವಧಿಯಲ್ಲಿ ಜೀವಿಸಿದ್ದ ಚಿಕ್ಕದೆವರಾಯರು ಸ್ವಯಂ ಪ್ರಸಿದ್ಧ ವೀಣಾಪಟುಗಳಾಗಿದ್ದರಂತೆ. ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರು ಹಿಂದೂಸ್ಥಾನಿ ಮತ್ತು ಕರ್ನಾಟಕ ಸಂಗೀತಗಳೆರಡಕ್ಕೂ ಪ್ರೋತ್ಸಾಹವನ್ನು ನೀಡಿ ಅನೇಕ ಸಂಗೀತ ವಿದ್ವಾಂಸರಿಗೆ ಆಶ್ರಯಧಾತರಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಅಯ್ಯಂಗಾರ್ ಅವರಿಗೆ ಮಹಾರಾಜರಿಂದ ಪ್ರೋತ್ಸಾಹ ದೊರೆಯಿತು. ತಮ್ಮ ಆರನೇ ವಯಸ್ಸಿನಲ್ಲೇ ಪ್ರಬುದ್ಧ ವೀಣಾವಾದಕರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ http://chowdaiahandparvati.blogspot.in/2010/03/jewel-in-mysore-crown-ashthana-vidwan.html ಅವರು ತಮ್ಮ ಹತ್ತನೇ ವಯಸ್ಸಿನಲ್ಲೇ ಮಹಾಜರೆದುರು ವೀಣೆ ನುಡಿಸಿ 50 ಬೆಳ್ಳಿರೂಪಾಯಿಗಳ ಬಹುಮಾನ ಪಡೆದಿದ್ದರು. ದೊರೆಸ್ವಾಮಿ ಅಯ್ಯಂಗಾರ್ಯರು ವೀಣೆ ಮತ್ತು ಕೊಳಲುಗಳೆರಡರಲ್ಲೂ ಪರಿಣತಿ ಹೊಂದಿದ್ದು, ರಾಜ ಕುಟುಂಬದವರಿಗೆ ವೀಣೆ ಮತ್ತು ಕೊಳಲುವಾದನದ ಪಾಠ ಹೇಳುತ್ತಿದ್ದರು. ಅವರ ಕಿರಿಯ ಸಹೋದರ ದೇಶಿಕಾಚಾರ್ ಅವರು ಪ್ರಸಿದ್ಧ ಕೊಳಲುವಾದಕರು. ದೊರೆಸ್ವಾಮಿ ಅವರು, ತಂದೆ ವೆಂಕಟೇಶ ಅಯ್ಯಂಗಾರ್ ಅವರಿಂದಲೇ ಸಂಗೀತ ಪಾಠ ಪಡೆದು ಬಹಳ ಬೇಗ ತಂದೆಯವರನ್ನೇ ಮೀರಿಸಿದರು. ತಮ್ಮ ಮಗನಲ್ಲಿರುವ ಸಂಗೀತ ಬೆಳವಣಿಗೆಯನ್ನು ಗಮನಿಸಿದ ವೆಂಕಟೇಶ ಅಯ್ಯಂಗಾರ್ಯರು ಅವನಿಗೆ ಪ್ರಸಿದ್ಧ ವೈಣಿಕ ವಿದ್ವಾಂಸ ವೀಣೆ ಶೇಷಣ್ಣನವರ ನೇರ ಶಿಷ್ಯರಾದ ವೆಂಕಟಗಿರಿಯಪ್ಪನವರ ಬಳಿ ಶಿಕ್ಷಣಕ್ಕೆ ಏರ್ಪಾಡು ಮಾಡಿದರು. ದೊರೆಸ್ವಾಮಿ ಅವರು ಹದಿನೈದು ವರ್ಷಗಳ ಕಾಲ ವೆಂಕಟಗಿರಿಯಪ್ಪನವರಿಂದ ಕಠಿಣ ಪರಿಶ್ರಮದ ಶಿಕ್ಷಣ ಪಡೆಯುವುದರ ಜೊತೆಗೆ ಗುರುಗಳ ಸಂಗೀತ ಕಚೇರಿಗಳಲ್ಲಿ ಜೊತೆಗಾರರಾಗಿರುತ್ತಿದ್ದರು. ಕಿರಿಯ ವಯಸ್ಸಿನಲ್ಲೇ ಆಸ್ಥಾನ ವಿದ್ವಾನ್ ಹದಿನಾರನೆಯ ವಯಸ್ಸಿನಲ್ಲಿಯೇ ಆಸ್ಥಾನ ವಿದ್ವಾನ್ ಸ್ಥಾನ ದೊರೆಸ್ವಾಮಿ ಅಯ್ಯಂಗಾರ್ಯರಿಗೆ ಸಂದಿತ್ತು. ಅವರಿಗೆ ಅಂದಿನ ಮಾಸಿಕ ಸಂಬಳ ರೂ. ೭೫. ಅದು ತಮಗೆ ಸಂತೃಪ್ತಿ ಮತ್ತು ಸಂತೋಷವನ್ನು ಕೊಡುತ್ತಿತ್ತು ಎಂದು ದೊರೆಸ್ವಾಮಿ ಅಯ್ಯಂಗಾರ್ ಅವರು ಹೇಳುತ್ತಿದ್ದರು. ಆಕಾಶವಾಣಿಯಲ್ಲಿ ಮೈಸೂರು ರೇಡಿಯೋ ನಿಲಯವು ಆಕಾಶವಾಣಿಯೊಂದಿಗೆ ವಿಲೀನವಾದಾಗ ದೊರೆಸ್ವಾಮಿ ಅಯ್ಯಂಗಾರ್ ಅವರಿಗೆ ಆಕಾಶವಾಣಿಯಲ್ಲಿ ಕಾರ್ಯನಿರ್ವಾಹಕರಾಗುವ ಅವಕಾಶ ಒದಗಿ ಬಂತು. ಇಪ್ಪತ್ತೊಂದು ವರ್ಷಗಳ ಕಾಲ ಆಕಾಶವಾಣಿಯಲ್ಲಿ ದುಡಿದ ಅಯ್ಯಂಗಾರ್ಯರು ರೇಡಿಯೋದಲ್ಲಿ ಸಂಗೀತ ಕಾರ್ಯಕ್ರಮಗಳಿಗೆ ಜನಪ್ರಿಯತೆ ತರುವಲ್ಲಿ ಅಪಾರವಾದ ಶ್ರಮವಹಿಸಿದವರು. ಹಲವಾರು ಉತ್ತಮ ಸಾಹಿತ್ಯಗಳಿಗೆ, ವಾದ್ಯ ಗೋಷ್ಠಿಗಳಿಗೆ ಮತ್ತು ಸಂಗೀತ ವೈವಿಧ್ಯಗಳಿಗೆ ಸಂಗೀತ ಸಂಯೋಜಕರಾಗಿ ಅಯ್ಯಂಗಾರ್ಯರು ಮಹತ್ವದ ಕಾರ್ಯ ನಿರ್ವಹಿಸಿದರು. ಅವರ ಈ ಶ್ರದ್ಧೆಯ ದುಡಿತದಿಂದ ಹಲವಾರು ಸಂಗೀತ ಪ್ರತಿಭೆಗಳು ಬೆಳಕಿಗೆ ಬರುವಂತಾಯಿತು ವಿಶ್ವದಾದ್ಯಂತ ಕಾರ್ಯಕ್ರಮಗಳು ದೊರೆಸ್ವಾಮಿ ಅಯ್ಯಂಗಾರ್ ಅವರು ತಮ್ಮ ಸಂಗೀತ ಜೀವನದಲ್ಲಿ ವೈಯಕ್ತಿಕವಾಗಿ ಕಾರ್ಯಕ್ರಮಗಳನ್ನು ನೀಡುವುದರ ಜೊತೆ ಪಿಟೀಲು ಚೌಡಯ್ಯ, ಲಾಲ್ಗುಡಿ ಜಯರಾಮನ್ ಮೊದಲಾದ ಸಂಗೀತಗಾರರ ಜೊತೆಯಲ್ಲಿ ವಾದ್ಯ ಕಛೇರಿಗಳಲ್ಲಿ ಭಾಗವಹಿಸಿದ್ದರು. ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕಛೇರಿ ನೀಡಿ ಪ್ರಸಿದ್ಧರಾದ ಇವರು ಹಿಂದೂಸ್ಥಾನಿ ಸಂಗೀತದ ದಿಗ್ಗಜರಾದ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರೊಂದಿಗೆ ಹಲವಾರು ಜುಗಲ್ ಬಂದಿ ಕಾರ್ಯಕ್ರಮಗಳನ್ನು ನೀಡಿದ್ದರು. ಚಲನಚಿತ್ರ ಸಂಗೀತ ‘ಸುಬ್ಬಾಶಾಸ್ತ್ರಿ’ ಚಲನ ಚಿತ್ರಕ್ಕೆ ದೊರೆಸ್ವಾಮಿ ಅಯ್ಯಂಗಾರ್ http://www.hindu.com/mag/2007/07/01/stories/2007070150130500.htm ಅವರು ನೀಡಿದ ಸಂಗೀತ ಸಂಯೋಜನೆಯನ್ನು ಕನ್ನಡದ ಸಿನಿಮಾ ಪ್ರೇಕ್ಷಕರು ಮರೆಯುವಂತೆಯೇ ಇಲ್ಲ. ಡಾ. ಎ. ಎನ್. ಮೂರ್ತಿರಾಯರ ‘ಆಷಾಢಭೂತಿ’ ನಾಟಕವನ್ನು ಆಧರಿಸಿ ಎಂ.ವಿ ಕೃಷ್ಣಸ್ವಾಮಿ ಅವರು ನಿರ್ದೇಶಿಸಿದ ಈ ಚಲನಚಿತ್ರಕ್ಕೆ ದೊರೆಸ್ವಾಮಿ ಅಯ್ಯಂಗಾರ್ ಅವರು ಬಾಲಮುರಳಿಕೃಷ್ಣ, ಶ್ರೀರಂಗಂ ಗೋಪಾಲರತ್ನಂ ಅಂತಹ ಶ್ರೇಷ್ಠ ಗಾಯಕರನ್ನು ಬಳಸಿ ಸಂಯೋಜಿಸಿದ ಹಾಡುಗಳು ಕನ್ನಡ ಚಿತ್ರರಂಗದ ಅತ್ಯುತ್ಕೃಷ್ಟ ಚಲನಚಿತ್ರ ಗೀತೆಗಳ ಸಾಲಿನಲ್ಲಿ ನಿರಂತರವಾಗಿ ವಿರಾಜಿಸುವಂತದ್ದಾಗಿದೆ. ಸಾಹಿತ್ಯ ಲೋಕದಲ್ಲಿ ಕವಿ ಪು. ತಿ. ನ ಅವರ ಆತ್ಮೀಯರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ ಅವರು ಕರ್ನಾಟಕ ಸರ್ಕಾರವು ಪು. ತಿ. ನ ಅವರ ಹೆಸರಿನಲ್ಲಿ ಸ್ಥಾಪಿಸಿದ್ದ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯುತ್ತಮ ಬರಹಗಾರರೂ ಆಗಿದ್ದು ‘ವೀಣೆಯ ನೆರಳಿನಲ್ಲಿ’ ಎಂಬುದು ಅವರ ಪ್ರಸಿದ್ಧ ಕೃತಿಯಾಗಿದೆ. ದೊರೆಸ್ವಾಮಿ ಅಯ್ಯಂಗಾರ್ಯರ ಲಲಿತ ಬರಹಗಳು ನಾಡಿನಾದ್ಯಂತ ಮೆಚ್ಚುಗೆ ಗಳಿಸಿದ್ದವು. ಅಂದಿನ ತಲೆಮಾರಿನ ಸಂಗೀತಜ್ಞರ ಕುರಿತು ಅವರಲ್ಲಿ ಜ್ಞಾನ ಭಂಡಾರವೇ ತುಂಬಿತ್ತು. ಸಾಮಾನ್ಯರಲ್ಲಿ ಸಾಮಾನ್ಯ ದೊರೆಸ್ವಾಮಿ ಅಯ್ಯಂಗಾರ್ ಅವರು ಅತ್ಯಂತ ಸಾಮಾನ್ಯರಲ್ಲಿ ಸಾಮಾನ್ಯರಂತೆ ತಮ್ಮ ಮಲ್ಲೇಶ್ವರದ ಮನೆಯಲ್ಲಿ ಜೀವನ ನಡೆಸಿದರು. ಪ್ರಶಸ್ತಿ ಗೌರವಗಳು ಇವರಿಗೆ ಮೈಸೂರು ವಿಶ್ವವಿದ್ಯಾಲಯವು ೧೯೭೫ರ ವರ್ಷದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿತು. ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸಹಾ ದೊರೆಸ್ವಾಮಿ ಅಯ್ಯಂಗಾರ್ ಅವರು ಕಾರ್ಯ ನಿರ್ವಹಿಸಿದ್ದರು. ೧೯೮೫ರ ವರ್ಷದಲ್ಲಿ ಅಖಿಲ ಭಾರತ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಪುತ್ರ ಬಾಲಕೃಷ್ಣ ದೊರೆಸ್ವಾಮಿ ಅಯ್ಯಂಗಾರ್ ಅವರ ಪುತ್ರ ವಿದ್ವಾನ್ ಡಿ. ಬಾಲಕ್ರಿಷ್ಣ ಅವರೂ ವೀಣಾವಾದನದಲ್ಲಿ ಪ್ರಖ್ಯಾತರಾಗಿದ್ದಾರೆ. ವಿದಾಯ ೧೯೯೭ರ ಅಕ್ಟೋಬರ್ ಮಾಸದಲ್ಲಿ ಡಾ. ದೊರೆಸ್ವಾಮಿ ಅಯ್ಯಂಗಾರ್ಯರು ನಿಧನರಾದರು. ಅವರ ಹೆಸರಿನಲ್ಲಿ ಅಕಾಡೆಮಿಯನ್ನು ತೆರೆಯಲಾಗಿದ್ದು, ಮೈಸೂರು ಶೈಲಿಯ ವೀಣಾವಾದನವನ್ನು ಉಳಿಸಿ ಬೆಳೆಸುವ ಕೆಲಸ ನಡೆಸಲಾಗುತ್ತಿದೆ. ಮಾಹಿತಿ ಆಧಾರ ಜ್ಯೋತ್ಸ್ನಾ ಕಾಮತ್ ಅವರ ದೊರೆಸ್ವಾಮಿ ಅಯ್ಯಂಗಾರ್ ಅವರ ಲೇಖನ ವರ್ಗ:ವೀಣಾ ವಾದಕರು ವರ್ಗ:ಕರ್ನಾಟಕ ಶಾಸ್ತ್ರೀಯ ಸಂಗೀತ ವರ್ಗ:ಭಾರತದ ಸಂಗೀತಗಾರರು ವರ್ಗ:ಶಾಸ್ತ್ರೀಯ ಸಂಗೀತಗಾರರು ವರ್ಗ:ಸಂಗೀತಗಾರರು ವರ್ಗ:ವಾದ್ಯ ಸಂಗೀತಗಾರರು
ಕದ್ರಿ ಗೋಪಾಲನಾಥ್
https://kn.wikipedia.org/wiki/ಕದ್ರಿ_ಗೋಪಾಲನಾಥ್
ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ. ಜೀವನ ಗೋಪಾಲನಾಥರು ೧೯೪೯ ಡಿಸೆಂಬರ್ ೬ ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಮೂಡ ಊರಿನಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ನಾಗಮ್ಮ. ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು ಇಪ್ಪತ್ತು ವರ್ಷಗಳದ್ದು. ಮಂಗಳೂರಿನ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸಂಗೀತ ಕಲಿತರು. ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ. ಎನ್. ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಟಿ. ಎನ್. ಗೋಪಾಲಕೃಷ್ಣ ಅವರಲ್ಲಿ ಸ್ಯಾಕ್ಸಫೋನ್ ವಾದನ ಕಲಿರು ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು. ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ. ವಿಶ್ವದಾದ್ಯಂತ ಕಛೇರಿಗಳು ೧೯೭೮ರಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ತಮ್ಮ ಮೊದಲ ಸಂಗೀತ ಕಛೇರಿ ನೀಡಿದರು. ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಚೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಟಿತ ಉತ್ಸವ- ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಯೂರೋಪ್, ಸ್ವಿಜರ್‌ಲ್ಯಾಂಡ್, ಯುನೈಟೆಡ್ ಕಿಂಗ್ಡಂ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಕಚೇರಿಗಳನ್ನು ನಿರಂತರವಾಗಿ ನಡೆಸಿಕೊಡುತ್ತಾಬಂದಿದ್ದಾರೆ. ಸ್ಯಾಕ್ಸೊಫೋನಿಗೆ ಮತ್ತೊಂದು ಹೆಸರು ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಕಚೇರಿಗಳಲ್ಲಷ್ಟೇ ಆಲ್ಲದೆ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ. ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೊಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಭಾರತದಲ್ಲಿ ಮತ್ತು ಹೊರಗೆ ಅನೇಕ 'ಸಂಗೀತ-ಕಛೇರಿ'ಗಳನ್ನು ನಡೆಸುತ್ತಾ ಬಂದಿರುವ 'ಕದ್ರಿ ಗೋಪಾಲನಾಥ್' ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ. right|thumb|180px|'ಡಾ.ಬಾಲಮುರಳಿಕೃಷ್ಣರವರ ಜೊತೆ' ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆ ಕೊಡುಗೆ ಚೆನ್ನೈನ ನಾರದ ಗಾನಸಭಾದಲ್ಲಿ ೪00 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದವರು. ಪ್ರಶಸ್ತಿ ಗೌರವಗಳು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, https://starsunfolded.com/kadri-gopalnath/ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, https://www.mangalorean.com/padmashri-awardee-renowned-saxaphonist-dr-kadri-gopalnath-69-passes-away/ ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ - ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ರಾಜ್ಯೋತ್ಸವ ಪ್ರಶಸ್ತಿ ಬೆಂಗಳೂರು ವಿಶ್ವವಿದ್ಯಾಲಯದ ಮತ್ತು ವಿವಿಧ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ನಿಧನ ಅಕ್ಟೋಬರ್ ೧೧ ೨೦೧೯ ರಂದು ಬೆಳಗಿನ ಜಾವ ೬೯ ನೆಯ ವಯಸ್ಸಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.https://www.deccanherald.com/state/top-karnataka-stories/saxophone-wizard-kadri-gopalnath-dies-at-69-767578.html ಉಲ್ಲೇಖಗಳು ವರ್ಗ:ಶಾಸ್ತ್ರೀಯ ಸಂಗೀತಗಾರರು ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವರ್ಗ:ಕರ್ನಾಟಕ ಸಂಗೀತಕಾರರು ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ವರ್ಗ:೧೯೪೯ ಜನನ ವರ್ಗ:೨೦೧೯ ನಿಧನ
ಗಿರೀಶ್ ಕಾಸರವಳ್ಳಿ
https://kn.wikipedia.org/wiki/ಗಿರೀಶ್_ಕಾಸರವಳ್ಳಿ
ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನ್ವಿತ ಚಲನಚಿತ್ರ ನಿರ್ದೇಶಕರಲ್ಲೊಬ್ಬರು.ಮಲೆನಾಡಿನ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿ ತಾಲೂಕಿನ ಕೆಸಲೂರಿನಲ್ಲಿ ೧೯೫೦ರಲ್ಲಿ ಜನಿಸಿದ ಇವರು ಮಣಿಪಾಲದಲ್ಲಿ ಬಿ,ಫಾರ್ಮ್ ಪದವಿ ಮುಗಿಸಿ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆ ಯಲ್ಲಿ ನಿರ್ದೇಶನ ವಿಭಾಗದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು. ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೪ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ. ವೃತ್ತಿ ಜೀವನ ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು, ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು ಸತ್ಯಜಿತ್ ರೇ( ೬ ಸ್ವರ್ಣ ಕಮಲಗಳು)(ಮೃಣಾಲ್ ಸೇನ್ ಮತ್ತು ಕಾಸರವಳ್ಳಿ) ನಂತರ ನಾಲ್ಕು ಸ್ವರ್ಣ ಕಮಲಗಳನ್ನು ಪಡೆದವರಲ್ಲಿ ಒಬ್ಬರಾಗಿದ್ದಾರೆ. ಇವರು "ಘಟಶ್ರಾದ್ಧ" ನಿರ್ದೇಶಿಸಿದಾಗ ಇವರ ವಯಸ್ಸು ಕೇವಲ ೨೭.ಸ್ವರ್ಣ ಕಮಲ ಪುರಸ್ಕಾರ ಪಡೆದ ಕಿರಿಯ ನಿರ್ದೇಶಕರೆಂದು ಹೆಸರು ಪಡೆದರು."ಘಟಶ್ರಾದ್ಧ"ಕತೆಯನ್ನು ಆಧರಿಸಿ ಅರುಣ್ ಕೌಲ್ ನಿರ್ದೇಶನದಲ್ಲಿ "ದೀಕ್ಷಾ " ಎಂಬ ಹೆಸರಿನಲ್ಲಿ ಹಿಂದಿ ಚಿತ್ರವೊಂದು ತಯಾರಾಗಿದೆ. ಖಾಸಗೀ ಜೀವನ ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿ ಕನ್ನಡ ಚಲನಚಿತ್ರ ನಟಿ ಹಾಗು ದೂರದರ್ಶನ ಧಾರಾವಾಹಿಗಳ ನಿರ್ದೇಶಕಿ. 'ನೀನಾಸಂ-ರಂಗಶಾಲೆ'ಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ. ಪ್ರಶಸ್ತಿಗಳು ದಕ್ಷಿಣ ಏಷ್ಯಾ ಫೆಡರೇಷನ್ ನ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ, ೨೦೦೯ ಪದ್ಮಶ್ರೀ, ೨೦೧೧ ಚಿತ್ರಗಳು ವರ್ಷ ಹೆಸರು ಪ್ರಶಸ್ತಿ1977 ಘಟಶ್ರಾದ್ಧ ಸ್ವರ್ಣ ಕಮಲ ಪ್ರಶಸ್ತಿimdbAkramana, 1979Mooru Daarigalu, 19811979 ಆಕ್ರಮಣ 1981 ಮೂರು ದಾರಿಗಳು 1987 ತಬರನ ಕಥೆ ಸ್ವರ್ಣ ಕಮಲ ಪ್ರಶಸ್ತಿ1988 ಬಣ್ಣದ ವೇಷ 1990 ಮನೆ 1992 ಕ್ರೌರ್ಯ 1998 ತಾಯಿ ಸಾಹೇಬಸ್ವರ್ಣ ಕಮಲ ಪ್ರಶಸ್ತಿ2002 ದ್ವೀಪ ಸ್ವರ್ಣ ಕಮಲ ಪ್ರಶಸ್ತಿ2005 ಹಸೀನಾ ಉತ್ತಮ ಕುಟುಂಬ ಕಲ್ಯಾಣ ಚಿತ್ರ2006 ನಾಯಿ ನೆರಳು ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ2008 ಗುಲಾಬಿ ಟಾಕೀಸ್ 2010 ಕನಸೆಂಬ ಕುದುರೆಯನೇರಿ 2012 ಕೂರ್ಮಾವತಾರ 2020ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆಏಳು ವರ್ಷಗಳ ಬಳಿಕ ನಿರ್ದೇಶಕನಕ್ಕೆ ಮರಳಿದ ಗಿರೀಶ್ ಕಾಸರವಳ್ಳಿ'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ನಿರ್ದೇಶಕ ಗಿರೀಶ್ ಕಾಸರವಳ್ಳಿ ಮನದಾಳ ಇವರ "ಕನಸೆಂಬ ಕುದುರೆಯನೇರಿ" ಚಿತ್ರ ಅಮರೇಶ ನುಗಡೋಣಿ ಅವರ 'ಸವಾರಿ' ಸಣ್ಣಕಥೆಯನ್ನಾಧರಿಸಿದ ಚಿತ್ರ.೨೦೧೦ರ 57ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ 'ಕನಸೆಂಬ ಕುದುರೆಯನೇರಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನು ಬಾಚಿಕೊಂಡಿದೆ. 2010ನೇ ಸಾಲಿನ ರೋಮ್ ನ ಏಷ್ಯಾಲಿಕಾ ಚಿತ್ರೋತ್ಸವ, ಶ್ರೇಷ್ಠ ಏಷ್ಯನ್ ಚಿತ್ರ NETPAC ಅವಾರ್ಡ್ ಈ ಚಿತ್ರಕ್ಕೆ ಸಂದಿದೆ. ಇವರ ನಿರ್ದೇಶನದ "ಕೂರ್ಮಾವತಾರ" ಸಿನಿಮಾ ೨೦೧೨ರ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಜತೆಗೆ ರಜತ ಕಮಲ ಪ್ರಶಸ್ತಿ ಪಡೆದುಕೊಂಡಿದೆ. ಉಲ್ಲೇಖ ವರ್ಗ:ನಿರ್ದೇಶಕರು ವರ್ಗ:ಕನ್ನಡ ಸಿನೆಮಾ ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು ವರ್ಗ:ಕಿರುತೆರೆ ನಿರ್ದೇಶಕರು ವರ್ಗ:ರಾಷ್ತ್ರ_ಪ್ರಶಸ್ತಿ_ವಿಜೇತರು
ಭೀಮಸೇನ ಜೋಷಿ
https://kn.wikipedia.org/wiki/ಭೀಮಸೇನ_ಜೋಷಿ
ಪಂಡಿತ ಭೀಮಸೇನ ಗುರುರಾಜ ಜೋಷಿ ಹಿಂದುಸ್ತಾನಿ ಸಂಗೀತ(ಜನನ: ಫೆಬ್ರವರಿ ೪, ೧೯೨೨-ಮರಣ:ಜನವರಿ ೨೪,೨೦೧೧ ) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಇವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಪದ್ಧತಿಯ ಗಾಯಕರು. 'ಬಹು-ದೊಡ್ಡ ಪರಿವಾರದಲ್ಲಿ ಜನನ' ಭೀಮಸೇನ ಜೋಷಿಯವರು, ೪, ಫೆಬ್ರವರಿ ,೧೯೨೨ ರಲ್ಲಿ, 'ರಥಸಪ್ತಮಿಯ ತಿಥಿ'ಯಂದು,(ಹಿಂದೆ ಧಾರವಾಡ ಜಿಲ್ಲೆ) ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು. ಭೀಮಸೇನರ ಪೂರ್ವಜರು, ಮೂಲತಃ ಗದಗ ಜಿಲ್ಲೆಯ ’ಹೊಂಬಳ’ ಗ್ರಾಮದವರು. ಇವರ ತಂದೆ ಗುರುರಾಜ ಜೋಶಿ ಸಂಸ್ಕೃತದಲ್ಲಿ ಪಂಡಿತರು. ಗದುಗಿನ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕರಾಗಿ, ಬಾಗಿಲುಕೋಟೆಯ ’ಬಸವೇಶ್ವರ ಹೈಸ್ಕೂಲ್’ನಲ್ಲಿ ಮುಖ್ಯೋಪಾಧ್ಯಾರರಾಗಿ ಸೇವೆಸಲ್ಲಿಸಿದ್ದರು. ಗುರುರಾಜರ ಇಬ್ಬರು ಪತ್ನಿಯರಲ್ಲಿ ಮೊದಲನೆಯವರಾದ ರಮಾಬಾಯಿಯವರಿಗೆ ೭ ಜನ ಮಕ್ಕಳು, ಹಾಗೂ ಎರಡನೆಯ ಪತ್ನಿ, ಗೋದುಬಾಯಿಯವರಿಗೆ ೯ ಜನ ಮಕ್ಕಳು. ಇಬ್ಬರನ್ನೂ 'ಗೋದುಬಾಯಿ'ಯೆಂದೇಸಂಬೋಧಿಸುತ್ತಿದ್ದರು. ಹಿರಿಯಮಗ,ಭೀಮಸೇನರ ನಂತರ, ಜನಿಸಿದವರು, ’ವನಮಾಲ’, ’ನಾರಾಯಣ’, ’ವೆಂಕಣ್ಣ’, ’ಹೇಮಕ್ಕ’, ’ಮದ್ದು’, ’ಮಾಧು’, ’ದಾಮೋದರ’, ’ಪರಿಮಳ’, ’ವಿಶಾಲ ’ಪ್ರಕಾಶ’,ಜಯತೀರ್ಥ, ಸುಶೀಲೇಂದ್ರ, ಪ್ರಾಣೇಶ, ವಾದಿರಾಜ, ಮತ್ತು ’ಜ್ಯೋತಿ.’ ’ಸುಶೀಲೆಂದ್ರ’, ಗದುಗಿನಲಿ ಅಭಿನಯ ರಂಗವೆಂಬ ಸಂಸ್ಥೆಯನ್ನು ಹುಟ್ಟುಹಾಕಿ ರಂಗಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ’ಜಯತೀರ್ಥ’ ಸಹಿತ, ರಂಗಭೂಮಿಗೆ ತಮ್ಮನ್ನು ಅರ್ಪಿಸಿಕೊಂಡು ಅದರಲ್ಲಿ ಕೃಷಿಮಾಡಿದರು. ಗುರುವಿಗಾಗಿ ಹುಡುಕಾಟ ಚಿಕ್ಕಂದಿನಲ್ಲಿ ಸೈಕಲ್ ಸವಾರಿ ಇವರ ನೆಚ್ಚಿನ ಹವ್ಯಾಸವಾಗಿತ್ತು. ಏನಾದರೂ ತರಲು ಬಝಾರಿಗೆ ಕಳಿಸಿದರೆ, ಗಂಟೆಗಟ್ಟಲೆ ಮನೆಗೆ ಬರುತ್ತಿರಲಿಲ್ಲ. ಚಿಕ್ಕಂದಿನಿಂದಲೀ ಅತಿಯಾದ ಸಂಗೀತದ ಗೀಳಿದ್ದ ಜೋಷಿಯವರು ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ಮುಂಬಯಿಗೆ ಹೋದರು.ಮುಂಬಯಿತಲುಪಿದ ಬಾಲಕ ಜೋಷಿಯವರಲ್ಲಿ ಹಣಕಾಸು ಇರಲಿಲ್ಲ. ಪುಟ್ಟ ಭೀಮಸೇನರು ಕೂಲಿ ನಾಲಿ ಮಾಡಿ, ಪುಟ್ಪಾತ್ ನಲ್ಲಿ ಮಲಗಿ ದಿನ ಕಳೆದಿದ್ದರು.ಹಸಿವು ನೀರಡಿಕೆ ಅವರನ್ನು ಮತ್ತೆ ತನ್ನ ಹುಟ್ಟೂರಿಗೆ ಬರುವಂತೆ ಮಾಡಿತು.ಸಂಗೀತ ಕಲಿಯಲೇಬೇಕೆಂಬ ಆಸೆ ಮತ್ತು ಹಠ ಅವರನ್ನು ಎರಡನೆ ಬಾರಿಗೆ ಮನೆ ಬಿಡುವಂತೆ ಮಾಡಿ ಗ್ವಾಲಿಯರ್ ಗೆ ಬರುವಂತೆ ಮಾಡಿತು.ಅಲ್ಲಿ ಗಾಯಕ ವಿನಾಯಕ್ ರಾವ್ ಪಟವರ್ಧನ್ ಇವರ ನಿರ್ದೇಶನದಂತೆ ಸವಾಯಿ ಗಂಧರ್ವರಲ್ಲಿ ಸಂಗೀತ ಸಾಧನೆಗೆ ಮರಳಿ ಬಂದರು ಧಾರವಾಡ ಜಿಲ್ಲೆಗೆ ಹಿಂದಿರುಗಿ ಕುಂದಗೋಳದ ಪ್ರಸಿದ್ಧ ಗಾಯಕರಾದ ಸವಾಯಿ ಗಂಧರ್ವರ ಅಪ್ಪಟ ಶಿಷ್ಯರಾದರು. ಹಿಂದುಸ್ತಾನಿ ಸಂಗೀತದ ಒಂದು ಪದ್ಧತಿಯಾದ ಕಿರಾಣಾ ಘರಾನಾದಲ್ಲಿ ಪರಿಣತರಾದ ಭೀಮಸೇನ ಜೋಷಿಯವರು ಕಳೆದ ಐದು ದಶಕಗಳ ಕಾಲ ಕಛೇರಿಗಳನ್ನು ನಡೆಸುತ್ತಾ ಬಂದಿದ್ದಾರೆ. 'ಗುರುರಾಜ ಜೋಶಿ ಪರಿವಾರದ ಸದಸ್ಯರು' ಪಂ.'ಭೀಮ್ ಸೆನ್ ಜೋಶಿ'ಯವರ ತಮ್ಮನ ಮಕ್ಕಳಲ್ಲೊಬ್ಬರು, 'ಭಾರತೀಯ ಕ್ರಿಕೆಟ್ ತಂಡದ ಸದಸ್ಯ'ರಲ್ಲೊಬ್ಬರಾದ ’ಸುನಿಲ್ ಜೊಶಿ’, ಮತ್ತು ’ಅನಿರುದ್ಧ ಜೋಶಿ, ಕಿರಿಯರ ಕ್ರಿಕೆಟ್ ತಂಡದ ಆಟಗಾರರು, ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’ಜಡಭರತ’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ ಲೇಖಕರು ಮತ್ತು ನಾಟಕಕಾರರು, ’ಮನೋಹರ ಗ್ರಂಥಮಾಲೆ’ಯೆಂಬ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಒಟ್ಟಾರೆ ಜೋಶಿಮನೆತನ ಸಂಗೀತ, ಸಾಹಿತ್ಯ, ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಅಜ್ಜ ಕೀರ್ತನಕಾರರು. ಮೊಮ್ಮಗ, 'ಭೀಮಸೇನ', ಭಜನಾಮೇಳದವರೊಡನೆ ಸೇರಿಕೊಂಡು ದಾಸರ ಪದಗಳನ್ನು ಕೇಳುತ್ತಾ, ಹಾಡುತ್ತಾ ಮೈಮರೆಯುತ್ತಿದ್ದರು. ಹೀಗೆ ಮುಂದುವರೆದು 'ದಾಸವಾಣಿ-ಶಾಸ್ತ್ರೀಯ ಸಂಗೀತವಲಯ'ದಲ್ಲಿ ಅಪ್ರತಿಮ ಸಾಧನೆಮಾಡಿದರು; ಸಂಗೀತವನ್ನೂ ಬೆಳೆಸಿದರು. ಭೀಮಸೇನ ಜೋಷಿಯವರ ಪರಿವಾರ ಸನ್,೧೯೪೪ ರಲ್ಲಿ, ಪಂಡಿತ್‌ಜೀಯವರ ಪ್ರಥಮ ಪತ್ನಿ, ಸುನಂದಾರವರ ಜೊತೆ ವಿವಾಹದಿಂದ ನಾಲ್ಕು ಮಕ್ಕಳು ಜನಿಸಿದರು. ಅವರೇ, ರಾಘವೇಂದ್ರ, ಉಷಾ, ಸುಮಂಗಲ, ಹಾಗೂ ಕಿರಿಯ ಮಗ ಆನಂದ. ಸುನಂದಾರವರ ನಿಧನಬಳಿಕ, ೨ನೇ ವಿವಾಹ,ವತ್ಸಲಾ ರವರೊಡನೆ ನಡೆದು, ಅವರಿಗೆ ಮೂರು ಮಕ್ಕಳು ಜನಿಸಿದರು; ಅವರೇ, ಜಯಂತ, ಶುಭದಾ ಹಾಗೂ ಶ್ರೀನಿವಾಸ. ತಂದೆಯ ಪರಮ ಶಿಷ್ಯನಾದ 'ಶ್ರೀನಿವಾಸ', ಈಗ ಪ್ರಬುದ್ಧ ಗಾಯಕರಾಗಿದ್ದಾರೆ. ಗದಗದೊಂದಿಗೆ ಅವಿನಾಭಾವ ಸಂಬಂಧ ಗದುಗಿನ ’ಖಡಕ್ ರೊಟ್ಟಿ’ ಮತ್ತು ಝುಣಕ ಬಲುಪ್ರೀತಿ. ತಮ್ಮ ಊರಿನ ಜನತೆಗೆ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ರಸದೌತಣನೀಡಿದ್ದರು. ೧೯೮೩ ರಲ್ಲಿ, ’ವೆಂಕಟೇಶ ಚಿತ್ರಮಂದಿರ’ದಲ್ಲಿ, ’ಹತ್ತಿಕಾಳ್ ಕೂಟ’ದಲ್ಲಿ, ೧೯೮೫-೮೬ ರಲ್ಲಿ ’ಕಾಟನ್ ಮಾರ್ಕೆಟ್’ ನಲ್ಲಿ, ೧೯೯೨ ರಲ್ಲಿ, ’ಅಭಿನಯರಂಗ ವಿದ್ಯಾದಾನ ಸಮಿತಿ ಹೈಸ್ಕೂಲ್’ ಅವರಣದಲ್ಲಿ, ’ಕರ್ನಾಟಕ ಚಿತ್ರಮಂದಿರ’ದಲ್ಲಿ. ಅದರಲ್ಲಿ ಶೇಖರವಾದ ಹಣದಲ್ಲಿ ನಗರದ ವಿವಿಧ ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯಗಳಿಗೆ ಮತ್ತು ದೇವಾಲಯಕ್ಕೆ ದೇಣಿಗೆ ನೀಡಿದ್ದರು. ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ದಿಗ್ಗಜರಾದರು ಕೊಲ್ಕತ್ತಾಕ್ಕೆ ಅವರು ವರ್ಷದಲ್ಲಿ ಸುಮಾರು ೨೦ ಬಾರಿಯಾದರೂ ಹೋಗಿಬರುತ್ತಿದ್ದರು. ಕೊಲ್ಕತ್ತಾದಲ್ಲಿನ ಹಲವಾರು ಹಿಂದೂಸ್ತಾನೀ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಭೀಮಸೇನರಿಗೆ ಅಲ್ಲಿಂದ ತಪ್ಪದೆ ಆಮಂತ್ರಣ ಬರುತ್ತಿತ್ತು. ಹಾಗೆಯೇ ಆ ನಗರದಲ್ಲಿ ಹಲವಾರು ಸಂಗೀತ ಸಮ್ಮೇಳನಗಳು ವರ್ಷಪೂರ್ತಿ ಆಯೋಜಿತಗೊಳ್ಳುತ್ತಿದ್ದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 'ಆಲ್ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್', 'ತಾನ್ಸೇನ್ ಮ್ಯೂಸಿಕ್ ಕಾನ್ಪರೆನ್ಸ್', 'ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್', ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಜೋಷಿಯವರು ಪ್ರಸಿದ್ಧರು.ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ. ಪಂಡಿತ್ ಜಿಯವರ ಸ್ವಭಾವ ಭೀಮಸೇನರು,ಸ್ವಭಾವತಃ ಮಹಾಮೌನಿಗಳು. ಅವರಿಂದ ಯಾವ ಪ್ರಶ್ನೆಗಳಿಗೂ ಉತ್ತರಗಳನ್ನು ನಿರೀಕ್ಷಿಸುವುದು ದುಸ್ಸಾಧ್ಯವಾಗಿತ್ತು. ಆದರೆ ಅವರ ವಾಚಾಳಿತನವನ್ನು ಶ್ರೋತೃಗಳು ಅವರು ಪ್ರಸ್ತುತಪಡಿಸುತ್ತಿದ್ದ,'ಬೃಂದಾವನ ಸಾರಂಗದಲ್ಲೋ,' ಭೀಮ ಪಲಾಸಿನಲ್ಲೋ',ಅಥವಾ ಮತ್ಯಾವುದೋ ಮುದಕೊಡುವ ರಾಗಗಳಲ್ಲಿ ಕಂಡುಕೊಳ್ಳುತ್ತಿದ್ದರು. ಅಸ್ಮಿತೆ ಅವರಲ್ಲಿ ನಿರಂತರವಾಗಿ ಹರಿಯುವ ತೊರೆಯಾಗಿತ್ತು. ಅವರ ಮೈಮನಗಳಲ್ಲಿ ಸಂಗೀತ ಉಕ್ಕಿಹರಿಯುತ್ತಿತ್ತು. ಯವತ್ತೂ ಅವರ ಮನೋಲೋಕದಲ್ಲೆಲ್ಲಾ ಆವರಿಸಿದ್ದು,'ಸಂಗೀತ'; 'ಕೇವಲ ಸಂಗೀತ,' ಹಾಗೂ ಅಪಾರ ಗುರುಭಕ್ತಿ,ಮಾತ್ರ. 'ನಾದಪುತ್ರ ಹುಟ್ಟಿದ,' ಗುರುರಾಜರು ಬರೆದ ಪುಸ್ತಕ ಭೀಮಸೇನರಬಗ್ಗೆ ಅವರ ತಂದೆ, ಗುರುರಾಜರು ಬರೆದ ಅಪರೂಪದ ಪುಸ್ತಕ, ಭೀಮಸೇನ ಜೋಷಿಯವರ ಬಾಲ್ಯದ, ಮತ್ತು ಅವರ ಸಂಗೀತದ ಹುಚ್ಚಿನ ಹತ್ತು-ಹಲವು ಮುಖಗಳನ್ನು ಪರಿಚಯಿಸುವ ಒಂದು ಸುಂದರ ಪುಸ್ತಕ. ಭೀಮಸೇನರ ಸಂಗೀತ-ಕಲೋಪಾಸನೆಗೆ ತಾವೇ ಅಡ್ಡಿಬಂದ ಸಂದರ್ಭದಲ್ಲಿ ವಿಧಿ, ಹೇಗೆ ಅವರ ನಿರ್ಧಾರಗಳನ್ನು ಬದಲಾಯಿಸಿ, ಅವರ ಮಗನನ್ನು 'ಭಾರತದ ಮಹಾನ್ ಗಾಯಕ'ನಾಗುವ ಅವಕಾಶವನ್ನು ತಂದೊಡ್ಡಿತು, ಎನ್ನುವ ವಿಚಾರ, ಅವರನ್ನು ದಿಗ್ಭ್ರಮೆಗೊಳಿಸುತ್ತದೆ. ಭೀಮಸೇನರ ಸಂಗೀತದ, ಧ್ವನಿಸುರಳಿಗಳು ಭೀಮಸೇನ ಜೋಶಿಯವರ ಸಂಗೀತದ, ಧ್ವನಿಸುರಳಿಗಳು ಮತ್ತು ಧ್ವನಿಮುದ್ರಿಕೆಗಳು, ಪ್ರತಿಯೊಬ್ಬರ ಮನೆ-ಮನವನ್ನು ತಲುಪಿವೆ. ಸಂಗೀತದಲ್ಲಿ ’ಕಲಾಶ್ರೀ' ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ 'ಸಂತವಾಣಿ ಕಾರ್ಯಕ್ರಮ' ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ. ಪುಣೆಯ ವಾಸಿ ಪುಣೆಯಲ್ಲಿ ವಾಸಿಸುವ ಭೀಮಸೇನ ಜೋಷಿ, ತಮ್ಮ ಗುರುಗಳ ನೆನಪಿನಲ್ಲಿ ೧೯೫೨ರಿಂದ ಪ್ರತಿ ವರ್ಷವೂ ಅಲ್ಲಿ "ಸವಾಯಿ ಗಂಧರ್ವ ಸಂಗೀತ ಮಹೋತ್ಸವ"ವನ್ನು ನಡೆಸುತ್ತಾ ಬ೦ದಿದ್ದಾರೆ. ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಸಂಸ್ಥೆ, ೧೨, ಅಕ್ಟೋಬರ್, ೨೦೦೭ ರಂದು, ಪಂ. ಭೀಮಸೇನ ಜೋಷಿಯವರಿಗೆ ಪುಣೆಯಲ್ಲಿ, ಡಾ. ಗಂಗೂಬಾಯಿ ಹಾನಗಲ್ ರವರ ಅಮೃತಹಸ್ತದಿಂದ, "ಸಂಗೀತಕಲಾನಿಧಿ"ಯೆಂಬ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿತು. . ಕಾರನ್ನು ವೇಗವಾಗಿ ಓಡಿಸುವ ಖಯಾಲಿ ಇವರಿಗಿತ್ತು. ಪ್ರಮುಖ ಶಿಷ್ಯರು ಪಂಡಿತ್‌ಜೀಯವರ ಶಿಷ್ಯತ್ವ ಪಡೆದವರಲ್ಲಿ, ಮಾಧವ ಗುಡಿ, ಶ್ರೀಕಾಂತ್ ದೇಶಪಾಂಡೆ, ವಿನಾಯಕ ತೊರವಿ' ಉಪೇಂದ್ರ ಭಟ್' 'ಶ್ರೀನಿವಾಸ ಜೋಶಿ, ಸ೦ಜೀವ ಜಹಗೀರದಾರ, ರಾಜೇಂದ್ರ ಕಂದಲ್ಗಾವ್ಕರ್,ಆನಂದ ಭಾಟೆ, ವಿನಾಯಕ್.ಪಿ.ಪ್ರಭು, ರಾಮಕೃಷ್ಣ ಪಟವರ್ಧನ್, ಶ್ರೀಪತಿ ಪಾಡಿಗಾರ, ಪಳಯಾರ ವರಾಜ್, ರಶೀದ ಖಾನ್, ಅಶುತೋಷ ಮುಖರ್ಜಿ ಮುಂತಾದವರು ಮುಖ್ಯರು.. ಮರಣ ದಿನಾಂಕ ೨೪-೧-೨೦೧೧ 'ಪೂನಾದ ಆಸ್ಪತ್ರೆ'ಯಲ್ಲಿ ೮೯ರ ಇಳಿವಸ್ಸಿನ 'ಭೀಮಸೇನ್ ಜೋಶಿ' ಕೊನೆಯುಸಿರೆಳೆದರು. ಜೀವನದ ಮಹತ್ವದ ಘಟನೆಗಳು ೧೯೨೨, ಫೆಬ್ರವರಿ,೪-ತಾಯಿ ರಮಾಬಾಯಿ ಅಕ್ಕನ ಮನೆ ’ರೋಣ’ದಲ್ಲಿ ಜನನ. ೧೯೩೧-ಗದುಗಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜವಹರಲಾಲ್ ನೆಹರೂ ಎದುರು ’ವಂದೇ ಮಾತರಂ ಗಾಯನ’ ೧೯೩೩-ಮನೆ ಬಿಟ್ಟು ಹೋಗಿದ್ದು, ಬಿಜಾಪುರದಿಂದ ಹಿಂದಿರುಗಿ ಬಂದದ್ದು(ಎರಡೂವರೆ ತಿಂಗಳುಗಳ ನಂತರ) ಮತ್ತೆ ಮನೆ ಬಿಟ್ಟದ್ದು. ೧೯೩೬-' ಪುಣೆ, ಮುಂಬಯಿ,ಗ್ವಾಲಿಯರ್, ಕೊಲ್ಕತ್ತಾ, ಜಲಂಧರ್, ಮುಂತಾದಕಡೆ ಸಂಗೀತಾಭ್ಯಾಸಕ್ಕಾಗಿ ಅಲೆದಾಟ. ೧೯೩೮ ರಿಂದ ೧೯೪೨ -ಕುಂದಗೋಳದ ಸವಾಯಿ ಗಂಧರ್ವರ ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ೧೯೪೧-ಸವಾಯಿ ಗಂಧರ್ವರಿಂದ "ಗಂಡಾಬಂಧನ". ೧೯೪೧-೪೨-ಲಖನೌ ಆಕಾಶವಾಣಿ ಕೇಂದ್ರ'ದಲ್ಲಿ ನೌಕರಿ. ೧೯೪೩-'ಮುಂಬಯಿ ಮತ್ತು 'ನಿಜಾಮ ರೇಡಿಯೊ'ದೊಡನೆ ಹಾಡಿನ ಒಪ್ಪಂದ. 'ಸುನಂದಾ ಕಟ್ಟಿ' ಯವರ ಜೊತೆ ಮೊದಲ ವಿವಾಹ ೧೯೪೬-'ಸವಾಯಿ ಗಂಧರ್ವರ ಷಷ್ಠ್ಯಬ್ಧ ಸಮಾರಂಭದ ನಿಮಿತ್ತ ಪುಣೆಯಲ್ಲಿ ಗಾಯನ. ೩ ನಿಮಿಷಗಳ ರಾಗ ಸಂಗೀತ ಕನ್ನಡ ಗೀತೆಗಳ ಧ್ವನಿಮುದ್ರಣ. ೧೯೪೮-ಮಂಗಳೂರಿನಲ್ಲಿ ಗಾಯನ. ಶ್ರೀಧರ ಸ್ವಾಮಿಗಳಆಶೀರ್ವಾದ ೧೯೪೮-೪೯- ಕೊಲ್ಕತ್ತಾದಲ್ಲಿ ಪ್ರಥಮಬಾರಿಗೆ ಗಾಯನ ೧೯೪೮-೫೦-ಕನ್ನಡ ಸಂಗೀತ ನಾಟಕಗಳಲ್ಲಿ ನಾಯಕನ ಪಾತ್ರ, ಯಶಸ್ವಿ ಪ್ರಯೋಗಗಳು ೧೯೫೧-'ವತ್ಸಲಾ ಮುಧೋಳ್ಕರ್'ರವರ ಜೊತೆ ಎರಡನೆಯ ಮದುವೆ ೧೯೫೩-'ಸವಾಯಿ ಗಂಧರ್ವರ ಮೊದಲನೇ ಪುಣ್ಯ ತಿಥಿ ನಿಮಿತ್ತ ಸಂಗೀತ ಕಾರ್ಯಕರ್ಮ' ೧೯೫೪- 'ಆಕಾಶವಾಣಿ ಪ್ರಥಮ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ'. 'ರಾಮೇಶ್ವರ ಮಂದಿರ' 'ಪುಣೆಯ ಬ್ರಹ್ಮವೃಂದದಿಂದ ಪಂಡಿತ ಬಿರುದು'. ೧೯೬೦- 'ಪ್ರಥಮ ಎಲ್.ಪಿ. ಮುದ್ರಿಕೆ' ೧೯೬೨ 'ಉಸ್ತಾದ್ ಬಡೇಗುಲಾಂ ಆಲೀಖಾನ್ ಪ್ರಶಸ್ತಿ ೧೯೬೪-ಗಾಯನಾಚಾರ್ಯ’ಅಖಿಲಭಾರತೀಯ ಪ್ರಶಸ್ತಿ. ಆಫ್ಘಾನೀಸ್ಥಾನಕ್ಕೆ ಪ್ರಥಮ ವಿದೇಶ ಯಾತ್ರೆ.ಭಾರತದ ಸಂಸ್ಕೃತಿಕ ತಂಡವಾಗದೇ ಹೋದರೂ ಅಲ್ಲಿಯ ರಾಜನ ವಿಶೇಷ ಆಮಂತ್ರಣವೂ ಇತ್ತು. ಗಂಧರ್ವ ಮಹಾವಿದ್ಯಾಲಯದಿಂದ ಪ್ರಶಸ್ತಿ. ೧೯೭೦-’ಸ್ವರ ಭಾಸ್ಕರ ಪ್ರಶಸ್ತಿ'’ ೧೯೭೨-'ಶ್ರೀ.ರಾಘವೇಂದ್ರ ಸ್ವಾಮಿ ಪೀಠದಿಂದ ಸಂಗೀತ ರತ್ನ ಗೌರವ', ಭಾರತ ಸರ್ಕಾರದ 'ಪದ್ಮಶ್ರೀ' ಗೌರವಕ್ಕೆ ಭಾಜನ, ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರಥಮ 'ಸಂತವಾಣಿ ಕಾರ್ಯಕ್ರಮ' ೧೯೭೪ 'ಮಿಯಾತಾನ್ ಸೇನ್ ಪ್ರಶಸ್ತಿ', ಜಯಪುರದ ಗಂಧರ್ವ ಮಹಾವಿದ್ಯಾಲಯದ ’ಸಂಗೀತಾಚಾರ್ಯ ಬಿರುದು’ ೧೯೭೫-'ನ್ಯಾಷನಲ್ ಫಿಲಂ ಫೆಸ್ಟಿವಲ್' ನಲ್ಲಿ 'ಸರ್ವೋತ್ತಮ ಪಾರ್ಷ್ವ ಗಾಯನ', ಮಹಾರಾಷ್ಟ್ರ ವಿಧಾನ ಪರಿಷತ್ ನಿಂದ ಸನ್ಮಾನ. 'ಶ್ರೀಕೋನಾ' ರವರಿಂದ 'ಸ್ಕೂಲ್ ಆಫ್ ಆನರ್ ಗೌರವ' ೧೯೭೬-ಶ್ರೀಮಾನ್ ಪ್ರಭಾಕರ್ ರಾವ್ ರವರಿಂದ ಸನ್ಮಾನ. ಗುಲ್ಬರ್ಗಾ ವಿದ್ಯಾಪೀಠದಿಂದ ಡಿ.ಲಿಟ್ ಪದವಿಪ್ರದಾನ. ೧೯೭೮-ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ,ಕೊಲ್ಕತ್ತದಿಂದ ದಕ್ಷಿಣ ಬಾರ್ತಾಸಂಸ್ಥೆಯಿಂದ ಗೌರವ. ೧೯೭೯-ಭಾರತ ಸರಕಾರದ ಪದ್ಮವಿಭೂಷಣ ಗೌರವ, ಕಾನ್ಪುರ ಮಹಾನಗರ ಪಾಲಿಕೆಇಂದ ಅಭಿನಂದನಾ ಪತ್ರ. ೧೯೯೦-ಮಹಾರಾಷ್ಟ್ರ ಸರಕಾರದಿಂದ ಗೌರವ ಪುರಸ್ಕಾರ' ೧೯೯೧-'ತಾನ್ಸೇನ್ ಪುರಸ್ಕಾರ'. 'ಸುನಂದಾ ಭೀಮಸೇನ್ ಜೋಷಿ' ಯವರ ನಿಧನ, ೧೯೯೨-'ದೀನಾನಾಥ್ ಮಂಗೆಶ್ಕರ್ ಪುರಸ್ಕಾರ' ೧೯೯೩-'ದೇಶಿಕೋತ್ತಮ ಪ್ರಶಸ್ತಿ' ೧೯೯೪-ಮಹಾರಾಷ್ಟ್ರದ ತಿಲಕ್ ವಿದ್ಯಾಪೀಠದಿಂದ ಡಿ.ಲಿಟ್ ಪದವಿ. ೧೯೯೬-ಪುಣೆ ಮಹಾನಗರ ಪಾಲಿಕೆಯಿಂದ ಸನ್ಮಾನ, ಪುಣ್ಯಭೂಷಣ ಪ್ರಶಸ್ತಿ ೧೯೯೭-’ಸ್ವರಾಧಿರಾಜ ಗ್ರಂಥದ ಬಿಡುಗಡೆ' ೧೯೯೯- ಭಾರತ ಸರಕಾರದಿಂದ ಪದ್ಮ ವಿಭೂಷಣ ಗೌರವ ೨೦೦೧-ಪುಣೆ ವಿಶ್ವ ವಿದ್ಯಾಲಯದಲ್ಲಿ 'ಭೀಮಸೇನ್ ಜೋಶಿ ಪೀಠ ಸ್ಥಾಪನೆ' ೨೦೦೨-ಮಹಾರಾಷ್ಟ್ರ ಸರಕಾರದ ಅತ್ಯುನ್ನತ ಪ್ರಶಸ್ತಿ ಮಹಾರಾಷ್ಟ್ರ ಭೂಷಣ ಗೌರವ, ಕೇರಳದ ಅತುನ್ನತ ಸ್ವಾತಿ ತಿರುನಾಳ ಪ್ರಶಸ್ತಿ ಪ್ರದಾನ , ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪ್ರಶಸ್ತಿ ಪ್ರದಾನ'. ಕರ್ನಾಟಕದ ಅತ್ಯುನ್ನತ ಪ್ರಶಸ್ತಿ,'ಕರ್ನಾಟಕ ರತ್ನ ಪ್ರದಾನ'. ೨೦೦೫ 'ವತ್ಸಲಾ ಜೋಶಿಯವರ ನಿಧನ'. ೨೦೦೭-'ಸ್ವಾಮಿ ಹರಿವಲ್ಲಭದಾಸ್ ಪುರಸ್ಕಾರ' ೨೦೦೮-ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಭಾಜನರಾದರು. ೨೦೦೯-ದೆಹಲಿ ಸರಕಾರದ, 'ಜೀವನ ಗೌರವ ಪುರಸ್ಕಾರ' ೨೦೧೦-'ರಾಮ ಸೇವಾ ಮಂಡಳಿ', ಬೆಂಗಳೂರು,ಇವರಿಂದ,'ಎಸ್.ವಿ.ನಾರಾಯಣ ಸ್ವಾಮಿ ರಾವ್, ರಾಷ್ಟ್ರೀಯ ಪುರಸ್ಕಾರ' ೨೦೧೧- ಪುಣೆಯ ಆಸ್ಪತ್ರೆಯಲ್ಲಿ ನಿಧನ ಉಲ್ಲೇಖಗಳು sankalp ’ಗಾನ ಸೂರ್ಯ ಅಸ್ತಂಗತ,’ 'ಕಾವೆಂಶ್ರೀ', 'ಸುಧಾ, ೧೦, ಫೆ, ೨೦೧೧, ಪು. ೪೦ ವರ್ಗ:ಭಾರತದ ಸಂಗೀತಗಾರರು ವರ್ಗ:ಶಾಸ್ತ್ರೀಯ ಸಂಗೀತಗಾರರು ವರ್ಗ:ಹಿಂದುಸ್ತಾನಿ ಸಂಗೀತ ವರ್ಗ:ಸಂಗೀತಗಾರರು ವರ್ಗ:ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:೧೯೨೨ ಜನನ ವರ್ಗ:೨೦೧೧ ನಿಧನ
ಕನ್ನಡ ರಾಜ್ಯೋತ್ಸವ
https://kn.wikipedia.org/wiki/ಕನ್ನಡ_ರಾಜ್ಯೋತ್ಸವ
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇತಿಹಾಸ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು. 200px|right|ಕನ್ನಡ ಧ್ಜವ ೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು. right|200px|ಆಟೋರಿಕ್ಷದ ಮೇಲೆ ಕನ್ನಡದ ಧ್ವಜ ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು. ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ ನಮಗೆಲ್ಲಾ ತಿಳಿದಿರುವಂತೆ ಭಾರತ ಸ್ವಾತಂತ್ರ್ಯಗೊಂಡ ನಂತರ ಕನ್ನಡ ಭಾಷಿಕರಿರುವ ವಿವಿಧ ಪ್ರದೇಶಗಳನ್ನು ಒಂದುಗೂಡಿಸಿ “ಮೈಸೂರು ರಾಜ್ಯʼʼವನ್ನು ರಚಿಸಲಾಗಿತ್ತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ) ಪ್ರದೇಶಗಳು ಈ ರಾಜ್ಯದಲ್ಲಿ ವಿಲೀನವಾಗಿದ್ದವು. ಆದರೆ ಈ ಪ್ರದೇಶದ ಜನರಿಗೆ ರಾಜ್ಯಕ್ಕೆ “ಮೈಸೂರು ರಾಜ್ಯʼʼ ಎಂದು ನಾಮಕರಣ ಮಾಡಿರುವುದು ಇಷ್ಟವಾಗಿರಲಿಲ್ಲ. ಈ ಹೆಸರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಈ ಕುರಿತು ಆಗ ರಾಜ್ಯದಲ್ಲಿ ಸುದೀರ್ಘ ಚರ್ಚೆಯ ಬಳಿಕ ೧೯೭೩ರ ನವೆಂಬರ್ ೧ರಂದು ರಾಜ್ಯಕ್ಕೆ “ಕರ್ನಾಟಕʼʼವೆಂದು ಪುನರ್ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದರು. ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಶುಭದಿನದಂದು ರಾಜ್ಯವನ್ನು ಉದ್ದೇಶಿಸಿದ ಮಾತನಾಡಿದ ಅರಸರು ಈ ಬೆಳವಣಿಗೆಯನ್ನು ಹೀಗೆ ವಿವರಿಸಿದ್ದರು; ಕರ್ನಾಟಕದ ಏಕೀಕರಣದ ಹಂಬಲಕ್ಕೆ ಸ್ಫುಟವಾದ ರೂಪು ದೊರೆಕಿದ್ದು ೧೯೧೬ರಲ್ಲೇ. ಧಾರವಾಡದಲ್ಲಿ ಕರ್ನಾಟಕ ಸಭೆ ಸ್ಥಾಪನೆಯಾದಾಗ, ಏಕೀಕರಣ ಸಮ್ಮೇಳನವು ಧಾರವಾಡದಲ್ಲಿ ಮೊಟ್ಟ ಮೊದಲಿಗೆ ನಡೆಯಿತು. ೧೯೨೦ರಲ್ಲಿ ನಾಗಪುರ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ್ಯರಚನೆ ಸ್ಪಷ್ಟವಾದ ರೂಪುರೇಷೆ ಪಡೆಯಿತು. ಆದರೆ ಕನ್ನಡಿಗರ ಕನಸು ನನಸಾಗಲು ಮುವತ್ತಾರು ವರ್ಷಗಳೇ ಬೇಕಾಯಿತು. ೧೯೫೬ರ ನವೆಂಬರ್ ಒಂದರಂದು ಕನ್ನಡನಾಡು ಉದಯಿಸಿತು. ಆದರೆ ಈ ನಾಡಿನ ಹಿರಿಮೆ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾದ ಹೆಸರು ಇರದೇ ಇದ್ದುದು ಜನಮನದ ಅಂತರಾಳವನ್ನು ಕಲಕಿತ್ತು. ಮತ್ತೆ ೧೭ ವರ್ಷಗಳ ನಂತರ ಕಾಲಮಾನ ಪರಿಸ್ಥಿತಿಗೆ ಅನುಗುಣವಾಗಿ ನಡೆದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈಗ ಜನತೆಯ ಮಹತ್ವಾಕಾಂಕ್ಷೆ ಈಡೇರಿದೆ. ಹಲವಾರು ದಶಕಗಳ ಕಾಲ ನಾಡು-ನುಡಿಯ ಉತ್ಕಟ ಪ್ರೇಮಿಗಳ ತ್ಯಾಗ ಶ್ರಮದ ಸಾಕ್ಷಾತ್ಕಾರ ಈ ನಾಮಕರಣ. ಆ ಪ್ರಾತಃಸ್ಮರಣೀಯರಿಗೆಲ್ಲ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು ಎಂದು ಹೇಳಿದ್ದರು. ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಮಾರ್ಪಡಿಸುವ ಕುರಿತು ಸರ್ಕಾರದ ತೀರ್ಮಾನವನ್ನು ವಿಧಾನಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಮಂಡಿಸಿದ್ದರು. ಆ ದಿನವನ್ನು ಅವರು ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ ಎಂದು ಬಣ್ಣಿಸಿದ್ದರಲ್ಲದೆ, ‘ಕರ್ನಾಟಕ’ ಎನ್ನುವ ಹೆಸರನ್ನು ಹಿಂದೆ ರಾಜ್ಯ ಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಹೆಸರು ಇಟ್ಟುಕೊಂಡಿದ್ದರು. ಹೊಯ್ಸಳರು, ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ‘ಕರ್ನಾಟಕ’ ಎಂಬ ಹೆಸರನ್ನು ಇಡಬಹುದು ಎಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ ಎಂದು ವಿವರಣೆಯನ್ನೂ ನೀಡಿದ್ದರು. ಆಚರಣೆಗಳು ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ. ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ. ಭಾರತ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ. ಆಚರಣೆಯ ತಿಂಗಳು ನವೆಂಬರ್ ೧ ರಂದು ಅಧಿಕೃತವಾಗಿ ರಾಜ್ಯೋತ್ಸವವು ಆಚರಣೆ. ನವಂಬರ್ ತಿಂಗಳ ಪೂರ್ತಿ ರಾಜ್ಯೋತ್ಸವವನ್ನು ಹಲವು ಕಡೆ ಆಚರಿಸಲಾಗುತ್ತದೆ. ನವೆಂಬರ್ ೧ ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕರ್ನಾಟಕದ ಧ್ವಜ(ಹಳದಿ-ಕೆಂಪು) ಹಲವು ಕಡೆ ಹಾರಾಡುತ್ತಿರುತ್ತದೆ. ಬಾಹ್ಯ ಸಂಪರ್ಕ ೨೦೧೦ರ ಕರ್ನಾಟಕ ರಾಜ್ಯೋತ್ಸವ ಆಚರಣೆಯ ದೃಶ್ಯಾವಳಿಗಳು ಉಲ್ಲೇಖ ವರ್ಗ:ಕರ್ನಾಟಕ ವರ್ಗ:ಕನ್ನಡ ವರ್ಗ:ದಿನಾಚರಣೆಗಳು ವರ್ಗ:ಪ್ರಮುಖ ದಿನಗಳು
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
https://kn.wikipedia.org/wiki/ಹಿಂದುಸ್ತಾನಿ_ಶಾಸ್ತ್ರೀಯ_ಸಂಗೀತ
ಹಿಂದುಸ್ತಾನಿ ಸಂಗೀತ ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು; ಉತ್ತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿದೆ. ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩-೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ಪ್ರಾರಂಭವಾದ ನಂತರ ಅನೇಕ ಸಂಗೀತಗಾರರು ಈ ರಾಜರ ಬಳಿ ಆಶ್ರಯ ಪಡೆದರು. ಮುಸ್ಲಿಮ್ ರಾಜರ ಆಸ್ಥಾನಗಳಲ್ಲಿ ಭಾರತೀಯ ಸಂಗೀತ ಪರ್ಷಿಯದ ಸಾಕಷ್ಟು ಸಂಗೀತ ತತ್ವಗಳನ್ನು ತನ್ನದಾಗಿಸಿಕೊಂಡಿತು. ಈ ಸಂಯುಕ್ತ ಸಂಪ್ರದಾಯ ಹಿಂದುಸ್ತಾನಿ ಸಂಗೀತವಾಗಿ ಬೆಳವಣಿಗೆ ಹೊಂದಿದೆ. ಮೊಘಲ್ ಕಾಲದ ಪ್ರಸಿದ್ಧ ಸಂಗೀತಗಾರ ಅಮೀರ್ ಖುಸ್ರೋ - ವೈದಿಕ ಸಂಪ್ರದಾಯದ ಸಂಗೀತ ಮತ್ತು ಪರ್ಷಿಯನ್ ಸಂಗೀತಗಳನ್ನು ಸಮಾಗಮಗೊಳಿಸಲು ಸಾಧ್ಯವಾಗುವ ಅನೇಕೆ ವಿಧಾನಗಳ ಪಿತಾಮಹ ಅಮೀರ್ ಖುಸ್ರೋ ಎಂದು ಪರಿಗಣಿಸಲಾಗಿದೆ. ಮೊಘಲ್ ಸಾಮ್ರಾಜ್ಯದ ಉನ್ನತಿಯಲ್ಲಿ ಅಕ್ಬರ್‍ನ ಆಡಳಿತದ ಕಾಲದ ಇನ್ನೊಬ್ಬ ಪ್ರಸಿದ್ಧ ಸಂಗೀತಗಾರ ತಾನ್ ಸೇನ್. thumb|ಭೀಮ್‍ಸೇನ್ ಜೋಷಿ - ಹಿಂದುಸ್ತಾನೀ ಸಂಗೀತ ಪದ್ಧತಿಯ ಸುಪ್ರಸಿದ್ಧ ಗಾಯಕರು ಪ್ರಸಿದ್ಧ ಸಂಗೀತಗಾರರು ಹಾಡುಗಾರರು ಈ ಸಂಗೀತ ಪದ್ಧತಿಯ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಗುರುರಾವ್ ದೇಶಪಾಂಡೆ, ಪಂಡಿತ್ ಭೀಮಸೇನ್ ಜೋಷಿ,ಪಂಡಿತ್ ಜಸ್ ರಾಜ್, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ನಸ್ರತ್ ಫತೇ ಅಲಿ ಖಾನ್ (ಪಾಕಿಸ್ತಾನ) ಮೊದಲಾದವರನ್ನು ಹೆಸರಿಸಬಹುದು.ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್, ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದವರಲ್ಲಿ ವಿನಾಯಕ ತೊರವಿ , ರಷೀದ್ ಖಾನ್, ಸಂಜೀವ್ ಅಭ್ಯಂಕರ್ ಮೊದಲಾದವರು ಸೇರಿದ್ದಾರೆ. thumb|ಸಂತೂರ್ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲೊಂದು ವಾದ್ಯ ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋದ್, ತಬಲಾ, ಸಾರಂಗಿ, ಸಂತೂರ್ ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸಂಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ), ಪಂಡಿತ್ ರವಿ ಶಂಕರ್ (ಸಿತಾರ್), ಶಿವಕುಮಾರ್ ಶರ್ಮಾ (ಸಂತೂರ್), ಹರಿಪ್ರಸಾದ್ ಚೌರಾಸಿಯಾ (ಕೊಳಲು), ಅಲ್ಲಾ ರಖಾ ಮತ್ತುಜಾಕಿರ್ ಹುಸೇನ್ (ಸಂಗೀತಗಾರ) (ತಬಲಾ), ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್ (ಸರೋದ್). ಸಂಗೀತ ಪ್ರಕಾರಗಳು ಹಿಂದುಸ್ತಾನಿ ಹಾಡುಗಾರಿಕೆಗೆ ಸಂಬಂಧಪಟ್ಟಂತೆ ಹೆಚ್ಚಾಗಿ ಬಳಕೆಯಲ್ಲಿರುವ ಪ್ರಕಾರಗಳೆಂದರೆ ಖಯಾಲ್, ಗಜಲ್' ಮತ್ತು ಠುಮ್ರಿ. ಬಳಕೆಯಲ್ಲಿರುವ ಇತರ ಪ್ರಕಾರಗಳಲ್ಲಿ ಧ್ರುಪದ್, ಧಮಾರ್ ಮತ್ತು ತರಾನಾ ಗಳು ಸೇರಿವೆ. ಧ್ರುಪದ್ ಧ್ರುಪದ್ ಕೃತಿಗಳು ಮುಖ್ಯವಾಗಿ ಭಕ್ತಿಪ್ರಧಾನವಾದ ಕೃತಿಗಳು. ಕೆಲವೊಮ್ಮೆ ವೀರರಸ ಪ್ರಧಾನವಾಗಿರಬಹುದು. ಬಹುಪಾಲು ಧ್ರುಪದ್ ಕೃತಿಗಳು ಮಧ್ಯಕಾಲೀನ ಹಿಂದಿ ಭಾಷೆಯಲ್ಲಿವೆ. ಪಕ್ಕವಾದ್ಯಗಳಾಗಿ ಸಾಮಾನ್ಯವಾಗಿ ತಂಬೂರಿ ಮತ್ತು ಪಖಾವಾಜ್ ಗಳು ಉಪಯೋಗಗೊಳ್ಳುತ್ತವೆ. ಭಜನೆ ಭಜನೆ ಹಿಂದೂ ಧರ್ಮದ ಧಾರ್ಮಿಕ ಸಂಗೀತ ಪ್ರಕಾರಗಳಲ್ಲಿ ಮುಖ್ಯವಾದುದು. ಭಜನೆಗಳ ಪ್ರಸಿದ್ಧ ಕವಿಗಳೆಂದರೆ ಕಬೀರ್, ತುಲಸಿದಾಸ್ ಮತ್ತು ಮೀರಾ ಬಾಯಿ. ಭಜನೆಗಳ ಉಗಮ ೯-೧೦ ನೆಯ ಶತಮಾನದ ಆಳ್ವಾರ್ ಭಕ್ತಿ ಪಂಥದ ಕಾಲದಲ್ಲಿ ಆಯಿತೆಂದು ಊಹಿಸಲಾಗಿದೆ. ಗಜಲ್ ಗಜಲ್ ಮೂಲತಃ ಪರ್ಷಿಯಾದ ಸಂಗೀತ ಪ್ರಕಾರ. ಈಗಲೂ ಸಹ ಭಾರತದ ಹೊರಗೆ ಇರಾನ್, ಮಧ್ಯ ಏಷ್ಯಾ, ಟರ್ಕಿ ಮೊದಲಾದ ದೇಶಗಳಲ್ಲಿ ಈ ಸಂಗಿತ ಪ್ರಕಾರ ಪ್ರಚಲಿತವಾಗಿದೆ. ಭಾರತದಲ್ಲಿ ಗಜಲ್ ಗಳ ಜಾನಪದ ಹಾಗೂ ಜನಪ್ರಿಯ ರೂಪಾಂತರಗಳುಂಟು. ಭಾರತದ ಪ್ರಸಿದ್ಧ ಗಜಲ್ ಗಾಯಕರು ಜಗಜೀತ್ ಸಿಂಗ್, ಪಂಕಜ್ ಉಧಾಸ್ ಮೊದಲಾದವರು. ಪಾಕಿಸ್ತಾನದ ಮೆಹದಿ ಹಸನ್ ಮತ್ತು ಗುಲಾಂ ಅಲಿ ಈ ಶೈಲಿಯ ಪ್ರಸಿದ್ದ ಗಾಯಕರು. ಈ ಹಾಡುಗಳ ವಸ್ತು ಶೃಂಗಾರದಿಂದ ಭಕ್ತಿಯವರೆಗೆ ವ್ಯತ್ಯಾಸಗೊಳ್ಳುತ್ತದೆ. ಖಯಾಲ್ ಇತ್ತೀಚಿನ ವರ್ಷಗಳಲ್ಲಿ ಹಿಂದುಸ್ತಾನಿ ಸಂಗೀತದ ಅತ್ಯಂತ ಜನಪ್ರಿಯ ಪ್ರಕಾರ ಖಯಾಲ್. ಈ ಪ್ರಕಾರದಲ್ಲಿ ಮನೋಧರ್ಮ ಸಂಗೀತದ ಪ್ರಾಮುಖ್ಯತೆ ಇತರ ಪ್ರಕಾರಗಳದ್ದಕ್ಕಿಂತ ಹೆಚ್ಚು. ೧೮ ನೆಯ ಶತಮಾನದಿಂದ ಇತ್ತೀಚೆಗೆ ಜನಪ್ರಿಯವಾದ ಈ ಪ್ರಕಾರದ ಇತ್ತೀಚಿನ ಹಾಡುಗಾರರಲ್ಲಿ ಪ್ರಸಿದ್ಧರಾದವರು ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಮತ್ತಿತರರು. ತರಾನಾ ತರಾನಾಗಳು ಕರ್ನಾಟಕ ಸಂಗೀತ ಪದ್ಧತಿಯ ತಿಲ್ಲಾನಾ ಗಳನ್ನು ಹೋಲುವಂತಹ ಕೃತಿಗಳು. ಸಂತೋಷ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕೃತಿಗಳನ್ನು ಸಾಮಾನ್ಯವಾಗಿ ಕಛೇರಿಗಳ ಕೊನೆಯಲ್ಲಿ ಹಾಡಲಾಗುತ್ತದೆ. ಲಯಬದ್ಧವಾದ ಶಬ್ದಪುಂಜಗಳು ಹೆಚ್ಚಿದ್ದು ಪದಗಳ ಬಳಕೆ ಈ ಪ್ರಕಾರದಲ್ಲಿ ಕಡಿಮೆ. ಠುಮ್ರಿ ೧೯ ನೆಯ ಶತಮಾನದಲ್ಲಿ ಬಳಕೆಗೆ ಬಂದ ಶೃಂಗಾರ ರಸ ಪ್ರಧಾನವಾದ ಕೃತಿಗಳು. ಈ ಕೃತಿಗಳ ಭಾಷೆ ಸಾಮಾನ್ಯವಾಗಿ ಹಿಂದಿಯ ಪೂರ್ವರೂಪವಾದ ಬ್ರಜಭಾಷೆ. ಈ ಪ್ರಕಾರದ ಪ್ರಸಿದ್ಧ ಹಾಡುಗಾರರಲ್ಲಿ ಕೆಲವರೆಂದರೆ ಶೋಭಾ ಗುರ್ಟು, ಬಡೆ ಗುಲಾಮ್ ಅಲಿ ಖಾನ್ ಮತ್ತು ಗಿರಿಜಾ ದೇವಿ. ಇವನ್ನೂ ನೋಡಿ ಭೀಮಸೇನ್ ಜೋಷಿ ಗಂಗೂಬಾಯಿ ಹಾನಗಲ್ ಕರ್ನಾಟಕ ಸಂಗೀತ ಬಾಹ್ಯ ಸಂಪರ್ಕಗಳು ಹಿಂದುಸ್ತಾನಿ ಸಂಗೀತ ಕಲಿಯಿರಿ ಹಿಂದುಸ್ತಾನಿ ಸಂಗೀತ ಕಛೇರಿಗಳು ವರ್ಗ:ಸಂಸ್ಕೃತಿ ವರ್ಗ:ಸಂಗೀತ
ಜವಾಹರ‌ಲಾಲ್ ನೆಹರು
https://kn.wikipedia.org/wiki/ಜವಾಹರ‌ಲಾಲ್_ನೆಹರು
thumb|right|250px|'ಮಹಾತ್ಮಗಾಂಧಿಯೊಂದಿಗೆ ನೆಹರು' thumb|right|250px|'ನೆಹರು ರಾಷ್ಟ್ರಕ್ಕೆ ಸಮರ್ಪಿಸಿದ ಅಲಹಾಬಾದಿನಲ್ಲಿರುವ ನೆಹರೂ ವಂಶದ ಮನೆ' ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 - 27 ಮೇ 1964)((ನವೆಂಬರ್ ೧೪, ೧೮೮೯ - ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ . ಕಾಶ್ಮೀರಿ ಪಂಡಿತ್ ಸಮುದಾಯದೊಂದಿಗಿನ ಅವರ ಮೂಲ ವಂಶದಿಂದಾಗಿ ಅವರು ಪಂಡಿತ್ ನೆಹರೂ ಎಂದು ಕರೆಯಲ್ಪಡುತ್ತಾರೆ, ಭಾರತೀಯ ಮಕ್ಕಳಲ್ಲಿ ಅವರು ಚಾಚಾ ನೆಹರು ("ಅಂಕಲ್ ನೆಹರು") ಎಂದು ಪ್ರಸಿದ್ಧರಾಗಿದ್ದರು. (ಇಂಗ್ಲಿಷ್ ವಿಬಾಗದ ಅನುವಾದ) "Indian National Congress". inc.in. Archived from the original on 5 March 2016. Nation pays tribute to Pandit Jawaharlal Nehru on his 124th birth anniversary;Updated: Nov 14, 2013, ಪೀಠಿಕೆ ನೆಹರುರವರ ಸಾರ್ವಜನಿಕ ಜೀವನ : ೧೮೮೯-೧೯೧೮ ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಮುಖ ನ್ಯಾಯವಾದಿ ಮತ್ತು ರಾಷ್ಟ್ರೀಯತಾವಾದಿ ರಾಜನೀತಿಜ್ಞ ಮೋತಿಲಾಲ್ ನೆಹರೂ ಮತ್ತು ಸ್ವರೂಪ್ ರಾಣಿ, ಅವರ ಮಗ. ನೆಹರು ಕೇಂಬ್ರಿಡ್ಜ್‍ನ ಟ್ರಿನಿಟಿ ಕಾಲೇಜ್ ಪದವೀಧರರಾಗಿದ್ದರು. ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ಇಂಗ್ಲೆಂಡಿಲ್ಲಿ ಅವರು ಇನ್ನರ್ ಟೆಂಪಲ್ ನಲ್ಲಿ ತರಬೇತಿ ಪಡೆದು ನ್ಯಾಯವಾದಿಯಾಗಿ/ ಬ್ಯಾರಿಸ್ಟರ್’ಆಗಿ ಭಾರತಕ್ಕೆ ಹಿಂದಿರುಗಿದ ನಂತರ, ಅವರು ಅಲಹಾಬಾದ್ ಹೈಕೋರ್ಟ್ ನಲ್ಲಿ ಸೇರಿಕೊಂಡರು. ಮತ್ತು ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿಯನ್ನು ತೋರಿದರು, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು. ಅಂತಿಮವಾಗಿ ಅವರ ಕಾನೂನು ವಿವಾದ ವಕೀಲಿ ಉದ್ಯೋಗವು ಬದಲಾಗಿ ಅವರ ಕಾರ್ಯ ರಾಷ್ರೀಯವಾದದಕಡೆ ತಿರುಗಿತು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು. ಅವರ ಹದಿಹರೆಯದ ವರ್ಷಗಳಿಂದ ಬದ್ಧ ರಾಷ್ಟ್ರೀಯತಾವಾದಿಯಾಗಿದ್ದು, 1910 ರ ಕ್ರಾಂತಿಗಳ ಸಮಯದಲ್ಲಿ ಅವರು ಭಾರತೀಯ ರಾಜಕೀಯದಲ್ಲಿ ಏರುತ್ತಿರುವ ಉನ್ನತ ವ್ಯಕ್ತಿಯಾಗಿದ್ದರು. ಅವರು 1920 ರ ದಶಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಎಡಪಂಥೀಯ ಬಣಗಳ ಪ್ರಮುಖ ನಾಯಕರಾದರು ಮತ್ತು ಅಂತಿಮವಾಗಿ ಕಾಂಗ್ರೆಸ್’ನ ಸಂಪೂರ್ಣ ಮಾರ್ಗದರ್ಶಿಯಾದ ಗಾಂಧಿಯವರ ಅನುಮತಿಯೊಂದಿಗೆ ಇಡೀ ಕಾಂಗ್ರೆಸ್’ನ ನಾಯಕರಾದರು. ಕಾಂಗ್ರೆಸ್ ಅಧ್ಯಕ್ಷರಾಗಿ 1929 ರಲ್ಲಿ, ನೆಹರೂ ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದರು ಮತ್ತು ಕಾಂಗ್ರೆಸ್’ನ ನಿರ್ಣಾಯಕ ಬದಲಾವಣೆಯಿಂದ ಎಡಪಂಥಕ್ಕೆ ತಿರುಗಿಸಿದರು. 1930- 1947 thumb|right|260px|ಜವಾಹರಲಾಲ್ ನೆಹರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ :೧೯೧೮-೧೯೩೭ ೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಉನ್ನತಿಗೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸದಲ್ಲಿದ್ದು ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು. 1930 ರ ದಶಕದಲ್ಲಿ ಭಾರತೀಯ ರಾಜಕೀಯದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪ್ರಮುಖ ಪತ್ರವಾಗಿತ್ತು. ಕಾಂಗ್ರೆಸ್ ನಾಯಕತ್ವದಲ್ಲಿ, 1937 ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು; ಮತ್ತೊಂದೆಡೆ, ಪ್ರತ್ಯೇಕತಾವಾದಿ ಮುಸ್ಲಿಂ ಲೀಗ್ ಹೆಚ್ಚು ಕ್ಷೀನ ಬೆಂಬಲವನ್ನು ಗಳಿಸಿತು. ಆದರೆ 1942 ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ನಂತರ ಈ ಸಾಧನೆಗಳು ತೀವ್ರವಾಗಿ ಹಿನ್ನಡೆ ಕಂಡು ರಾಜಿಯಾಗಿದ್ದವು, ಅದು ಬ್ರಿಟಿಷರು ಕಾಂಗ್ರೆಸ್ ಅನ್ನು ಒಂದು ರಾಜಕೀಯ ಸಂಘಟನೆಯಾಗಿ ಪರಿಗಣಿಸಿ ಅದನ್ನು ಪರಿಣಾಮಕಾರಿಯಾಗಿ ಬಗ್ಗುಬಡಿಯಿತು. ನೆಹರು ಅವರಿಗೆ ಸ್ವಾತಂತ್ರ್ಯಕ್ಕಾಗಿ ತಕ್ಷಣದ ಕರೆಕೊಡುವ ಮನಸ್ಸಿರಲಿಲ್ಲ, ಆದರೆ ಗಾಂಧಿಯವರ ಕರೆಗೆ ಬೆಂಲಿಸಿದರು. ಏಕೆಂದರೆ ಅವರು ಎರಡನೇ ವಿಶ್ವ ಸಮರ ಸಮಯದಲ್ಲಿ ಮಿತ್ರಪಕ್ಷದ ಯುದ್ಧದ ಚಟುವಟಿಕೆಯನ್ನು ಬೆಂಬಲಿಸಲು ಬಯಸಿದ್ದರು, ಅವರು ಹೆಚ್ಚು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ದೀರ್ಘವಾದ ಸೆರೆವಾಸದಿಂದ ಹೊರಬಂದರು. ಅವರ ಹಳೆಯ ಕಾಂಗ್ರೆಸ್ ಸಹೋದ್ಯೋಗಿ ಮತ್ತು ಈಗ ಎದುರಾಳಿ ಮುಹಮ್ಮದ್ ಅಲಿ ಜಿನ್ನಾ ಅವರ ಮುಸ್ಲಿಂ ಲೀಗ್, ಆಗ ಭಾರತದಲ್ಲಿ ಮುಸ್ಲಿಂ ರಾಜಕೀಯವನ್ನು ಮುಸ್ಲಿಂ ರಾಜಕೀಯ ನೀತಿಯಿಂದ ಆಳಲು ಬಂದಿತು. ಅಧಿಕಾರ ಹಂಚಿಕೆಗಾಗಿ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವಣ ಮಾತುಕತೆಗಳು ವಿಫಲವಾದವು ಮತ್ತು 1947 ರಲ್ಲಿ ಭಾರತದ ಸ್ವಾತಂತ್ರ್ಯ ಗಳಿಕೆಯು ಜೊತೆ ಭಾರತದ ರಕ್ತಸಿಕ್ತ ವಿಭಜನೆಗೆ ಕಾರಣವಾಯಿತು. ನೆಹರು ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ನೇಮಕ ಮಾಡಲು ಕಾಂಗ್ರೆಸ್’ನಿಂದ ಚುನಾಯಿತರಾದರು, ಆದರೆ ನಾಯಕತ್ವ ಪ್ರಶ್ನೆಯ ವಿಚಾರದಲ್ಲಿ ನೆಹರು ಅವರನ್ನು ರಾಜಕೀಯ ಉತ್ತರಾಧಿಕಾರಿಯಾಗಿ 1941 ರಲ್ಲಿಯೇ ಅವರ ಸ್ಥಾನಮಾನವನ್ನು ಬಗೆಹರಿಸಲಾಗಿತ್ತು. ಗಾಧಿಜಿಯವರು ತಮ್ಮ ನಂತರದ ರಾಜಕೀಯ ಉತ್ತರಾಧಿಕಾರಿಯು ನೆಹರು ಎಂದು 1941 ರಲ್ಲೇ ಒಪ್ಪಿ ಹೇಳಿಕೆ ಕೊಟ್ಟಿದ್ದರು. ಪ್ರಧಾನಿಯಾಗಿ 1947- 1964 ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪ ಪ್ರಧಾನಿಯಾಗಿ, ಅವರು ಭಾರತದ ಅವರ ದೃಷ್ಟಿಕೋನದ ರಾಷ್ಟ್ರವನ್ನು ಸಾಧಿಸಲು ಹೊರಟರು. 1950 ರಲ್ಲಿ ಭಾರತದ ಸಂವಿಧಾನವನ್ನು ಜಾರಿಗೊಳಿಸಲಾಯಿತು, ನಂತರ ಅವರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದರು. ಮುಖ್ಯವಾಗಿ, ಅವರು ಭಾರತವು ಒಂದು ವಸಾಹತು-ದೇಶದಿಂದ ಗಣರಾಜ್ಯವಾಗುದವರೆಗಿನ ರೂಪಾಂತರಕ್ಕೆ ಸಾಕ್ಷಯೂ ಕಾರಣೀಭೂತರೂ ಆದರು, ಬಹುಸಿದ್ಧಾತಗಳ ಬಹು ರಾಜಕೀಯ ಪಕ್ಷಗಳ (ಮಲ್ಟಿ-ಪಾರ್ಟಿ ಸಿಸ್ಟಮ್) ವ್ಯವಸ್ಥೆಯ ಪೋಷಣೆ ಮಾಡಿದರು.. ವಿದೇಶಿ ನೀತಿಯಲ್ಲಿ, ಅವರು ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಮುಖ್ಯ ಸಂಯೊಜಕರಾಗಿ(ಹೆಗ್’ಮನ್) ಆಗಿ ಭಾರತವನ್ನು ಯೋಜಿಸಿ ಅಲಿಪ್ತ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನೆಹರೂ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯವನ್ನು ನಿಯಂತ್ರಿಸುತ್ತಾ, 1951, 1957, ಮತ್ತು 1962 ರಲ್ಲಿ ಸತತ ಚುನಾವಣೆಯನ್ನು ಗೆದ್ದುಕೊಂಡು ಎಲ್ಲಾ ಪಕ್ಷಗಳನ್ನು ಮೀರಿಸಿದ (ಕ್ಯಾಚ್-ಆಲ್) ಪಕ್ಷವಾಗಿ ಹೊರಹೊಮ್ಮಿತು. ಅವರ ಕೊನೆಯ ವರ್ಷಗಳಲ್ಲಿ ರಾಜಕೀಯ ಸಮಸ್ಯೆಗಳ ನಡುವೆಯೂ. ಮತ್ತು 1962 ರಲ್ಲಿ ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ನಾಯಕತ್ವದ ವೈಫಲ್ಯದಲ್ಲೂ ಅವರು ಭಾರತದ ಜನತೆಗೆ ಜನಪ್ರಿಯರಾಗಿದ್ದರು. ಭಾರತದಲ್ಲಿ ಅವರ ಜನ್ಮದಿನವನ್ನು “ಬಾಲ ದಿವಸ್” (ಮಕ್ಕಳ ದಿನ) ಎಂದು ಆಚರಿಸಲಾಗುತ್ತದೆ. ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು 1947 ಆಗಸ್ಟ್ 14 ರ ಮಧ್ಯರಾತ್ರಿ (೧೨.೨೫), ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಪ್ರಸಿದ್ಧವಾಗಿದೆ. (It is considered to be one of the greatest speeches of the 20th century and to be a landmark oration that captures the essence of the triumphant culmination of the largely non-violent Indian independence struggle against the British Empire in India. (Tryst with Destiny)Great speeches of the 20th century". The Guardian. 8 February 2008. ಅದರ ಕನ್ನಡ ಅನುವಾದ -ಆರಂಭದ ವಾಕ್ಯಗಳು: "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. (ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ) ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇಇದ್ದರೂ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯ ಇಂದು ಒದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನ ಆತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ." (Long years ago, we made a tryst with destiny, and now the time comes when we shall redeem our pledge, not wholly or in full measure, but very substantially. At the stroke of the midnight hour, when the world sleeps, India will awake to life and freedom. A moment comes, which comes but rarely in history, when we step out from the old to the new, when an age ends, and when the soul of a nation, long suppressed, finds utterance. It is fitting that at this solemn moment we take the pledge of dedication to the service of India and her people and to the still larger cause of humanity.) ಆರಂಭಿಕ ಜೀವನ ಮತ್ತು ವೃತ್ತಿಜೀವನ (1889-1912) ಜನನ ಮತ್ತು ಕುಟುಂಬದ ಹಿನ್ನೆಲೆ ಜವಾಹರಲಾಲ್ ನೆಹರು ಬ್ರಿಟಿಷ್ ಭಾರತದ ಅಲಹಾಬಾದಿನಲ್ಲಿ 14 ನವೆಂಬರ್ 1889 ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರೂ (1861-1931), ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವ-ನಿರ್ಮಿತ ಶ್ರೀಮಂತ ವಕೀಲರು, 1919 ಮತ್ತು 1928 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್’ನ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ, ಸ್ವರೂಪ್ರಣಿ ಥುಸು (1868) -1938), ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು, ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದರು, ಮೊದಲ ಪತ್ನಿ ಮೊದಲ ಮಗುವಿನ ಜನನ ಸಮಯದಲ್ಲಿ ಮರಣ ಹೊಂದಿದ್ದರು. ಜವಾಹರ್’ಲಾಲ್ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು, ಉಳಿದ ಇಬ್ಬರು ಬಾಲಕಿಯರು.ಹಿರಿಯ ಮಗಳು, ವಿಜಯ ಲಕ್ಷ್ಮಿ ನಂತರ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ ಮೊದಲ ಮಹಿಳಾ ಅಧ್ಯಕ್ಷರಾದರು. ಕಿರಿಯ ಸಹೋದರಿ ಕೃಷ್ಣ ಹತೀಶಿಂಗ್ ಅವರು ಪ್ರಸಿದ್ಧ ಬರಹಗಾರರಾದರು ಮತ್ತು ಆಕೆಯು ತನ್ನ ಸಹೋದರನ ಮೇಲೆ ಹಲವಾರು ಪುಸ್ತಕಗಳನ್ನು ರಚಿಸಿದರು.Moraes 2007, p. 4.Zakaria, Rafiq A Study of Nehru, Times of India Press, 1960, p. 22Bonnie G. Smith; The Oxford Encyclopedia of Women in World History. Oxford University Press. 2008. ಬಾಲ್ಯ ನೆಹರೂ ಅವರ ಬಾಲ್ಯವನ್ನು "ಆಶ್ರಯ ಮತ್ತು ಸ್ವಾಭಾವಿಕವಾದುದು" ಎಂದು ಬಣ್ಣಿಸಿದ್ದಾರೆ. ಶ್ರೀಮಂತ ಮನೆಗಳಲ್ಲಿ ಆನಂದ್ ಭವನ ಎಂಬ ಹೆಸರಿನ ಅರಮನೆಯ ಎಸ್ಟೇಟ್ ಸೇರಿದಂತೆ ಅವರು ಸವಲತ್ತುಗಳ ವಾತಾವರಣದಲ್ಲಿ ಬೆಳೆದರು. ಅವರ ತಂದೆ ಅವರು ಖಾಸಗಿ ಗವರ್ನೆಸ್ ಮತ್ತು ಬೋಧಕರಿಂದ ಮನೆಯಲ್ಲಿ ಶಿಕ್ಷಣ ಕೊಡಿಸಿದ್ದರು. ಅವರಲ್ಲಿ ಒಬ್ಬ ಬೋಧಕ ಫರ್ಡಿನ್ಯಾಂಡ್ ಟಿ. ಬ್ರೂಕ್ಸ್ ನ ಪ್ರಭಾವದ ಅಡಿಯಲ್ಲಿ, ಅವರು ವಿಜ್ಞಾನ ಮತ್ತು ತತ್ವಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ತರುವಾಯ ಅವರು ಥಿಯಾಸಾಫಿಕಲ್ ಸೊಸೈಟಿಯಲ್ಲಿ ಹದಿಮೂರನೇ ವಯಸ್ಸಿನಲ್ಲಿ ಕುಟುಂಬ ಸ್ನೇಹಿತೆ ಅನ್ನಿ ಬೆಸೆಂಟ್ ಅವರಿಂದ ಬೋಧಿಸಲ್ಪಟ್ಟರು. ಆದಾಗ್ಯೂ, ಥಿಯಾಸಾಫಿಕಲ್ ಸೊಸೈಟಿಯ ತತ್ವಶಾಸ್ತ್ರದ ಬಗೆಗಿನ ಅವರ ಆಸಕ್ತಿಯು ಶಾಶ್ವತವಾಗಿ ಉಳಿಯಲಿಲ್ಲ. ಬ್ರೂಕ್ಸ್ ತನ್ನ ಬೋಧಕನಾಗಿ ಹೊರಟು ಸ್ವಲ್ಪ ಸಮಯದ ನಂತರ ನೆಹರು ಥಿಯಾಸಾಫಿಕಲ್ ಸಮಾಜವನ್ನು ತೊರೆದನು. ಅವರು ಹೀಗೆ ಬರೆದಿದ್ದ್ದಾರೆ: "ಸುಮಾರು ಮೂರು ವರ್ಷಗಳ ಕಾಲ [ಬ್ರೂಕ್ಸ್] ನನ್ನೊಂದಿಗೆ ಇದ್ದರು ಮತ್ತು ಅನೇಕ ವಿಧಗಳಲ್ಲಿ ಅವರು ನನ್ನ ಮೆಲೆಹೆಚ್ಚು ಪ್ರಭಾವ ಬೀರಿದರು". ನೆಹರೂ ಅವರ ತತ್ವಶಾಸ್ತ್ರದ ಈ ಆಸಕ್ತಿಗಳು ಅವರನ್ನು ಬೌದ್ಧ ಮತ್ತು ಹಿಂದೂ ಧರ್ಮಗ್ರಂಥಗಳ ಅಧ್ಯಯನಕ್ಕೆ ಪ್ರೇರೇಪಿಸಿದವು. ಬಾಲ ರಾಮ್ ನಂದರ ಪ್ರಕಾರ, ಈ ಗ್ರಂಥಗಳು ನೆಹರೂರವರಿಗೆ "ಭಾರತದ [ಭಾರತದ] ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೊದಲ ಪರಿಚಯ ಮಾಡಿಕೊಡುವುವಾಗಿತ್ತು. [ಅವರು] ನೆಹರೂ ಅವರ [ತನ್ನ] ಬೌದ್ಧಿಕ ಶೋಧನೆಗೆ ಪ್ರಾರಂಭಿಕ ಉದ್ವೇಗವನ್ನು ಒದಗಿಸಿತು. ಇದು ನಂತರ ಅವರು ಬರೆದ ‘ದಿ ಡಿಸ್ಕವರಿ ಆಫ್ ಇಂಡಿಯಾ" ದಲ್ಲಿ ಪರಿಪಾಕವಾಗಿ ಹೊಮ್ಮಿತು.Bal Ram Nanda; The Nehrus. Oxford; University Press. 1962 ಯೌವನ ನೆಹರೂ ತನ್ನ ಯೌವನದಲ್ಲಿ ತೀವ್ರವಾದ ರಾಷ್ಟ್ರೀಯತಾವಾದಿಯಾಗಿದ್ದರು. ಎರಡನೇ ಬೋಯರ್ ಯುದ್ಧ ಮತ್ತು ರುಸ್ಸೋ-ಜಪಾನೀಸ್ ಯುದ್ಧವು ಅವರ ಭಾವನೆಗಳನ್ನು ತೀವ್ರಗೊಳಿಸಿತು. ಎರಡನೆಯದರ ಬಗ್ಗೆ ಅವರು ಹೀಗೆ ಬರೆದಿದ್ದಾರೆ, "ಜಪಾನೀಯರ ಗೆಲುವುಗಳು ನನ್ನ ಉತ್ಸಾಹಕ್ಕೆ ಸಂಚಲನೆ ನೀಡಿದೆ ... ರಾಷ್ಟ್ರೀಯತಾವಾದಿ ವಿಚಾರಗಳು ನನ್ನ ಮನಸ್ಸನ್ನು ತುಂಬಿವೆ ... ನಾನು ಭಾರತೀಯ ಸ್ವಾತಂತ್ರ್ಯ ಮತ್ತು ಯುರೋಪಿನ ಅಧೀನತೆಯಿಂದ ಏಷ್ಯಾ ಸ್ವಾತಂತ್ರ್ಯದ ಬಗ್ಗೆ ಯೋಚಿಸಿದೆ". ಅವರು 1905 ರಲ್ಲಿ ಇಂಗ್ಲೆಂಡಿನ ಪ್ರಮುಖ ಶಾಲೆಯಾದ ಹ್ಯಾರೋನಲ್ಲಿ ತಮ್ಮ ಸಾಂಸ್ಥಿಕ ಶಿಕ್ಷಣವನ್ನು ಪ್ರಾರಂಭಿಸಿದರು, ಅವರು ಜಿಎಂ ಟ್ರೆವೆಲಿಯನ್’ನ ಗರಿಬಾಲ್ಡಿ ಪುಸ್ತಕಗಳಿಂದ ಪ್ರಭಾವಿತರಾಗಿದ್ದರು, ಅವರು ಶೈಕ್ಷಣಿಕ ಅರ್ಹತೆಗಾಗಿ ಬಹುಮಾನ ಪಡೆದಿದ್ದರು. ಅವರು ಗರಿಬಾಲ್ಡಿಯನ್ನು ಕ್ರಾಂತಿಕಾರಕ ನಾಯಕ ಎಂಬ ದೃಷ್ಠಿಯಿಂದ ನೋಡಿದರು. ಅವರು ಹೀಗೆ ಬರೆದಿದ್ದಾರೆ: "[ಭಾರತ]ದ ಸ್ವಾತಂತ್ರ್ಯಕ್ಕಾಗಿ ನನ್ನ ಧೈರ್ಯದ ಹೋರಾಟ ಮತ್ತು ನನ್ನ ಮನದಲ್ಲಿ ಭಾರತದ ಮತ್ತು ಇಟಲಿಯ ವಿಚಿತ್ರವಾದ ಮಿಶ್ರಣವನ್ನು ಪಡೆಯಿತು" ಎಂದು. (ಭಾರತದಲ್ಲಿ ಇದೇ ರೀತಿಯ ಕಾರ್ಯಗಳ ಕನಸುಗಳು ಬಂದವು). ಪದವಿ ಅಕ್ಟೋಬರ್ 1907 ರಲ್ಲಿ ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜ್’ಗೆ ನೆಹರು ಸೇರಿದರು ಮತ್ತು 1910 ರಲ್ಲಿ ನೈಸರ್ಗಿಕ ವಿಜ್ಞಾನದಲ್ಲಿ ಗೌರವ (ಆನರ್ಸ್) ಪದವಿ ಪಡೆದರು. ಈ ಅವಧಿಯಲ್ಲಿ ಅವರು ರಾಜಕಾರಣ, ಅರ್ಥಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯವನ್ನು ಶ್ರದ್ಧಾಪೂರ್ವಕವಾಗಿ ಅಧ್ಯಯನ ಮಾಡಿದರು. ಬರ್ನಾರ್ಡ್ ಷಾ, ಎಚ್.ಜಿ.ವೆಲ್ಸ್, ಜೆ.ಎಂ. ಕೀನ್ಸ್, ಬರ್ಟ್ರಾಂಡ್ ರಸ್ಸೆಲ್, ಲೋವೆಸ್ ಡಿಕಿನ್ಸನ್ ಮತ್ತು ಮೆರೆಡಿತ್ ಟೌನ್ಸೆಂಡ್ ಅವರ ಬರಹಗಳು ಅವರ ರಾಜಕೀಯ ಮತ್ತು ಆರ್ಥಿಕ ಚಿಂತನೆಯಿಂದಾಗಿ ರೂಪಿಸಲ್ಪಟ್ಟವು. 1910 ರಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ, ನೆಹರು ಲಂಡನ್ನಿಗೆ ತೆರಳಿ ಇನ್ನರ್ ಟೆಂಪಲ್–ಇನ್’ನಲ್ಲಿ ಕಾನೂನು ಅಧ್ಯಯನ ಮಾಡಿದರು [15] ಈ ಸಮಯದಲ್ಲಿ, ಅವರು ಬೀಟ್ರಿಸ್ ವೆಬ್ ಸೇರಿದಂತೆ ಫ್ಯಾಬಿಯನ್ ಸೊಸೈಟಿಯ ವಿದ್ವಾಂಸರ ಅಧ್ಯಯನವನ್ನು ಮುಂದುವರೆಸಿದರು. ಅವರನ್ನು 1912 ರಲ್ಲಿ ಬಾರ್’ಗೆ (ನ್ಯಾಯವಾದಿಯಾಗಿ) ಕರೆದರು.Moraes 2007 ಅಡ್ವೊಕೇಟ್ ಪದವಿ ಅಭ್ಯಾಸ ಆಗಸ್ಟ್ 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ನಂತರ, ನೆಹರು ಅಲಹಾಬಾದ್ ಹೈಕೋರ್ಟಇನಲ್ಲಿ ವಕೀಲರಾಗಿ ಸೇರಿಕೊಂಡರು ಮತ್ತು ನ್ಯಾಯವಾದಿಯಾಗಿ ನೆಲೆಸಲು ಪ್ರಯತ್ನಿಸಿದರು. ಆದರೆ, ಅವರ ತಂದೆಗಿಂತ ಭಿನ್ನವಾಗಿ, ಅವರ ವೃತ್ತಿಜೀವನದಲ್ಲಿ ಅವರು ಶ್ರದ್ಧೆಯುಳ್ಳ ಆಸಕ್ತಿಯನ್ನು ಹೊಂದಿರಲಿಲ್ಲ ಮತ್ತು ಕಾನೂನಿನ ಅಭ್ಯಾಸ ಅಥವಾ ವಕೀಲರ ಕಂಪನಿಯನ್ನು ಆನಂದಿಸಲಿಲ್ಲ. ಅವರು ಹೀಗೆ ಬರೆದಿದ್ದಾರೆ: "ವಾತಾವರಣವು ಬೌದ್ಧಿಕವಾಗಿ ಉತ್ತೇಜಿಸುವಂತಿಲ್ಲ ಮತ್ತು ಜೀವನದ ಸಂಪೂರ್ಣ ಜಡತೆಯ ರ್ಥಹೀನ ಒಂದು ಭಾವ ನನ್ನ ಮೇಲೆ ಆವರಿಸಿತು." ರಾಷ್ಟ್ರೀಯತೆಯ ರಾಜಕೀಯದಲ್ಲಿ ಅವರ ಒಳಗೊಳ್ಳುವಿಕೆಯು ಅವರ ನ್ಯಾಯವಾದಿ ಉದ್ಯೋಗವನ್ನು ಮುಂಬರುವ ವರ್ಷಗಳಲ್ಲಿ ಕ್ರಮೇಣ ಬದಲಾಯಿಸಿತು. Om Prakash Misra; Economic Thought of Gandhi and Nehru: A Comparative Analysis. M.D. Publications. 1995 Sen, Z.K.C., 1964. Jawaharlal Nehru. Civilisations, pp. 25–39 Archived 13 April 2018 at the Wayback Machine thumb|160px| ಜವಾಹರಲಾಲ್ ನೆಹರು ಅವರ ಹೆತ್ತವರೊಂದಿಗೆ ಚಿಕ್ಕ ಮಗುವಾಗಿದ್ದಾಗthumb|160px| ಜವಾಹರಲಾಲ್ ನೆಹರು ಇಂಗ್ಲೆಂಡಿನ ಹ್ಯಾರೋ ಶಾಲೆಯಲ್ಲಿ ಕೆಡೆಟ್ ಸಮವಸ್ತ್ರದಲ್ಲಿthumb|100px| ಸೇವಾ ದಳದ (ಸ್ಕೌಟ್)ಸದಸ್ಯನಾಗಿ ಜವಾಹರಲಾಲ್ ನೆಹರುಖಾಕಿ ಸಮವಸ್ತ್ರದಲ್ಲಿthumb|160px|ಜವಾಹರಲಾಲ್ ನೆಹರು ಬ್ಯಾರಿಸ್ಟರ್ -ಅಲಹಾಬಾದ್ ಹೈಕೋರ್ಟಿನಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (1912-1947) ಬ್ರಿಟನ್ನಿನಲ್ಲಿ ನೆಹರೂ ಅವರು ಬ್ರಿಟನ್ನಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಮತ್ತು ವಕೀಲರಾಗಿದ್ದಾಗ ಭಾರತೀಯ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದರು. [Moraes 2007, p. 37.] ಭಾರತಕ್ಕೆ ಮರಳಿದ ನಂತರ ಆರಂಭಿಕ ಕೊಡುಗೆ 1912 ರಲ್ಲಿ ಭಾರತಕ್ಕೆ ಹಿಂದಿರುಗಿದ ಕೆಲವೇ ತಿಂಗಳುಗಳಲ್ಲಿ, ಪಾಟ್ನಾದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಾರ್ಷಿಕ ಅಧಿವೇಶನಕ್ಕೆ ನೆಹರೂ ಹಾಜರಾಗಿದ್ದರು. ಕಾಂಗ್ರೆಸ್ 1912 ರಲ್ಲಿ ಮಧ್ಯಮವರ್ಗ ಮತ್ತು ಗಣ್ಯರ ಪಕ್ಷವಾಗಿತ್ತು ಅವರು "ಇಂಗ್ಲಿಷ್-ತಿಳಿವಳಿಕೆಯ ಉನ್ನತ-ವರ್ಗದ ವ್ಯವಹಾರ" ವನ್ನು ಅಲ್ಲಿನೋಡಿದ್ದರಿಂದ ಅವರಿಗೆ ಮುಜುಗರದ ಗೊಂದಲ ವಿಚಾರವುಂಟಾಯಿತು. ಕಾಂಗ್ರೆsಸ್ಸು ಪರಿಣಾಮಕಾರಿ ಆಗುವುದರ ಬಗ್ಗೆ ನೆಹರೂ ಅನುಮಾನಗಳನ್ನು ಹೊಂದಿದ್ದರು ಆದರೆ ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧಿಯವರು ನೇತೃತ್ವದ ಭಾರತೀಯ ನಾಗರಿಕ ಹಕ್ಕುಗಳ ಚಳವಳಿಯನ್ನು ಬೆಂಬಲಿಸಲು ಪಕ್ಷಕ್ಕೆ ಕೆಲಸ ಮಾಡಲು ಒಪ್ಪಿಕೊಂಡರು,. 1913 ರಲ್ಲಿ ಚಳುವಳಿಗೆ ಹಣವನ್ನು ಸಂಗ್ರಹಿಸಿದರು.ನಂತರ, ಅವರು ಬ್ರಿಟಿಷ್ ವಸಾಹತುಗಳಲ್ಲಿ ಭಾರತೀಯರು ಎದುರಿಸಿದ ಒಪ್ಪಂದಕ್ಕೆ ಒಳಗಾದ ಕಾರ್ಮಿಕರ ಮತ್ತು ಅಂತಹ ಇತರ ತಾರತಮ್ಯಗಳ ವಿರುದ್ಧ ಪ್ರಚಾರ ಮಾಡಿದರು. Ghose 1993, p. 25Moraes 2007, p. 49.Moraes 2007, p. 50.In Jawaharlal Nehru's autobiography, An Autobiography (1936) p. 33. ವಿಶ್ವ ಸಮರ I thumb|upright=0.9|left|ನೆಹರು 1919 ರಲ್ಲಿ ಪತ್ನಿ ಕಮಲಾ ಮತ್ತು ಮಗಳು ಇಂದಿರಾ ಅವರೊಂದಿಗೆ; ವಿಶ್ವ ಸಮರ- 1 ಆರಂಭವಾದಾಗ, ಭಾರತದಲ್ಲಿ ಸಹಾನುಭೂತಿಯು ಪರ – ವಿರೋಧವಾಗಿ ವಿಭಜಿಸಲ್ಪಟ್ಟಿತು. ಬ್ರಿಟಿಷ್ ಆಡಳಿತಗಾರರು ಶತ್ರುವಿನ ಎದುರು ಅಸಾಹಯಕರಾಗಿದ್ದನ್ನು ನೋಡಿದ ವಿದ್ಯಾವಂತ ಭಾರತೀಯರು "ಹೆಚ್ಚಿನ ಮತ್ತು ಅತೀವವಾದ ವಿನೋದದ ಸಂತಸವನ್ನು ಪಡೆದರು", ಆಡಳಿತದ ಮೇಲ್ವರ್ಗದವರು ಮಿತ್ರರಾಷ್ಟ್ರಗಳೊಂದಿಗೆ ಸಹಾನುಭೂತಿಯಿಂದ ಅವರ ಪರವಾಗಿದ್ದರು. ನೆಹರು ಅವರು ಯುದ್ಧವನ್ನು ಮಿಶ್ರಿತ ಭಾವನೆಗಳೊಂದಿಗೆ ನೋಡಿದ್ದಾಗಿ ನೆಹರೂ ಒಪ್ಪಿಕೊಂಡಿದ್ದಾರೆ. "ನೆಹರೂ ಅವರ ಸಹಾನುಭೂತಿಯು ಯಾವುದೇ ದೇಶದಪರವಾಗಿದ್ದರೆ ಅದು ಫ್ರಾನ್ಸ್’ನೊಂದಿಗೆ ಮಾತ್ರಾ, ಏಕೆಂದರ ಅದು ಅವರ ಸಂಸ್ಕೃತಿಯು ಮೆಚ್ಚುಗೆಯ ಬಹಳಷ್ಟು ಅಂಸಗಳನ್ನು ಪಡೆದಿದೆ" ಎಂದು ಲೇಖಕ ಪ್ರಾಂಕ ಮೊರೆಸ್ ಹೇಳಿದ್ದಾರೆ. ಯುದ್ಧದ ಸಮಯದಲ್ಲಿ, ನೆಹರು ಸೇಂಟ್ ಜಾನ್ ಆಂಬುಲೆನ್ಸ್ಗೆ ಸ್ವಯಂ ಸೇವಕರಾಗಿಸೇರ್ಪಡೆಗೊಂಡರು ಮತ್ತು ಪ್ರಾಂತೀಯ ಕಾರ್ಯದರ್ಶಿಯಾಗಿ ಅಲಹಾಬಾದಿನಲ್ಲಿ ಸಂಘಟನೆ ಮಾಡಿದರು. ಅವರು ಭಾರತದಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿದ ಸೆನ್ಸಾರ್ಶಿಪ್ ನಿಯಮಗಳ ವಿರುದ್ಧ ಮಾತನಾಡಿದರು. [Moraes 2007, p. 53] ಯುದ್ಧದ ವರ್ಷಗಳಲ್ಲಿ ನೆಹರೂ ಅವರ ರಾಜಕೀಯ ದೃಷ್ಟಿಕೋನವು “ತೀವ್ರಗಾಮಿ ಎಂದು ಪರಿಗಣಿಸಲ್ಪಟ್ಟ ನಾಯಕನಾಗಿ” ಹೊರಹೊಮ್ಮಿತು. ರಾಜಕೀಯ ಉಪನ್ಯಾಸದಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರು ಪ್ರಾಮುಖ್ಯತೆ ಪಡೆದಿದ್ದರೂ ನೆಹರೂ ಅವರ ರಾಜಕೀಯ ದೃಷ್ಟಿಕೋನವು ವಿಚಾರ ಧಾರೆಯು ಗಮನಿಸಲ್ಪಟ್ಟಿತು., ಈ ಮಧ್ಯದಲ್ಲಿ ಪ್ರಾಬಲ್ಯ ಹೊಂದಿದ್ದ, ಗೋಪಾಲ್ ಕೃಷ್ಣ ಗೋಖಲೆಯವರು, ತೀವ್ರಗಾಮಿಗಳನ್ನು ಕುರಿತು "ಸ್ವಾತಂತ್ರ್ಯವನ್ನು ಯೋಚಿಸುವುದು ಹುಚ್ಚುತನ" ಎಂದು ಹೇಳಿದರು, ನೆಹರು ಮಾತನಾಡುತ್ತಾ "ಸಹಕಾರ ರಹಿತ ರಾಜಕೀಯದ ಬಗೆಗೆ ಮತ್ತು ಸರ್ಕಾರದ ಅಡಿಯಲ್ಲಿರುವ ಗೌರವಾನ್ವಿತ ಸ್ಥಾನಗಳಿಗೆ ರಾಜೀನಾಮೆ ನೀಡುವ ಅಗತ್ಯವನ್ನೂ ಮತ್ತು ಕೇವಲ ಜನರ ಪ್ರಾತಿನಿಧ್ಯದ ನಿರರ್ಥಕ ರಾಜಕೀಯವನ್ನು ಮುಂದುವರೆಸದಿರುವುದರ ವಿರುದ್ಧ ಮಾತನಡಿದರು ". ಅವರು ಬ್ರಿಟಿಷ್ ನೀತಿಗಳ ಬೆಂಬಲಕ್ಕಾಗಿ ಭಾರತೀಯ ನಾಗರಿಕ ಸೇವೆಯನ್ನು ಮುಂದುವರಿಸುವುದನ್ನು ಅಪಹಾಸ್ಯ ಮಾಡಿದರು. ಭಾರತೀಯ ನಾಗರಿಕ ಸೇವೆಯನ್ನು ಯಾರೊ ಒಬ್ಬರು ಒಮ್ಮೆ ವಿವರಿಸಿದ್ದಾರೆ- "ಅವರು ಈ ದೇಶದಲ್ಲಿ ದುರದೃಷ್ಟವಶಾತ್ ನಾವು , ಭಾರತೀಯರು ಅಲ್ಲದೆ, ನಾಗರಿಕರೂ ಅಲ್ಲದೆ ಅಥವಾ ನಿಜ ಸೇವೆ ಅಲ್ಲದೆ ಪೀಡಿತರಾಗಿದ್ದೇವೆ", ಎಂದು ಅವರು ಹೇಳಿದರು. ಮೋತಿಲಾಲ್ ನೆಹರು, ಒಬ್ಬ ಪ್ರಮುಖ ಮಧ್ಯಮಮಾರ್ಗ ಅನುಸರಿಸುವ ನಾಯಕರು, ಅವರು ಸಂವಿಧಾನಾತ್ಮಕ ಆಂದೋಲನದ ಇತಿ ಮಿತಿಗಳನ್ನು ಒಪ್ಪಿಕೊಂಡರು, ಆದರೆ ಇದಕ್ಕೆ ಯಾವುದೇ "ಪ್ರಾಯೋಗಿಕ ಪರ್ಯಾಯ" ಇಲ್ಲ ಎಂದು ತನ್ನ ಮಗನಿಗೆ ಸಲಹೆ ನೀಡಿದರು. ಆದಾಗ್ಯೂ, ರಾಷ್ಟ್ರೀಯ ಚಳುವಳಿಯ ವೇಗದಲ್ಲಿ ನೆಹರು ತೃಪ್ತಿ ಹೊಂದಲಿಲ್ಲ. ಅವರು ಭಾರತೀಯರಿಗೆ ಹೋಮ್ ರೂಲ್ ಬೇಡಿಕೆಯಿರುವ ಆಕ್ರಮಣಕಾರಿ ರಾಷ್ಟ್ರೀಯತಾವಾದಿ ಮುಖಂಡರ ಜೊತೆ ತೊಡಗಿಸಿಕೊಂಡರು. Nehru, Jawaharlal Glimpses of world history: being further letters to his daughter (Lindsay Drummond Ltd., 1949), p. 94Moraes 2007, p. 56 1915 ರಲ್ಲಿ ಗೋಖಲೆ ಮೃತಪಟ್ಟ ನಂತರ ಕಾಂಗ್ರೆಸ್ ರಾಜಕೀಯದ ಮಧ್ಯಮ-ಮಾರ್ಗದವರ ಪ್ರಭಾವವು ಕ್ಷೀಣಿಸಲು ಆರಂಭಿಸಿತು. ಅನ್ನಿ ಬೆಸೆಂಟ್ ಮತ್ತು ಬಾಲ ಗಂಗಾಧರ ತಿಲಕ್ ಮುಂತಾದ ಮಧ್ಯಮಮಾರ್ಗದ ಮುಖಂಡರು ಹೋಮ್ ರೂಲ್ ಗಾಗಿ (ಸ್ವಯಂ ಆಡಳಿತ) ರಾಷ್ಟ್ರೀಯ ಚಳವಳಿಗೆ ಕರೆ ಮಾಡಲು ಈ ಅವಕಾಶವನ್ನು ಉಪಯೋಗಿಸಿದರು. ಆದರೆ, 1915 ರಲ್ಲಿ, ಪ್ರಸ್ತಾವನೆಯನ್ನು ತಿರಸ್ಕರಿಸಲಾಯಿತು ಏಕೆಂದರೆ ಮಧ್ಯಮ ಮಾರ್ಗದವರು ಇಂತಹ ಆಮೂಲಾಗ್ರ ಬದಲಾವಣೆಯ ಕ್ರಮಕ್ಕೆ ಉತ್ಸಾಹ ತೊರಲಿಲ್ಲ.. ಆದಾಗ್ಯೂ, ಬೆಸೆಂಟ್ 1916 ರಲ್ಲಿ ಹೋಮ್ ರೂಲ್ ಅನ್ನು ಸಮರ್ಥಿಸಲು ಲೀಗ್ ಅನ್ನು ರಚಿಸಿದರು; ಮತ್ತು ತಿಲಕ್ ಅವರು ಜೈಲಿನಿಂದ ಹೊರಬಂದಾಗ, ಏಪ್ರಿಲ್ 1916 ರಲ್ಲಿ ತಮ್ಮ ಸ್ವಂತ ಲೀಗ್ ಅನ್ನು ರಚಿಸಿದರು. ನೆಹರೂ ಎರಡೂ ಲೀಗ್’ ಗಳಲ್ಲಿ ಸೇರಿಕೊಂಡರು. ಆದರೆ ವಿಶೇಷವಾಗಿ ಮೊದಲು ಆರಂಭವಾದ ಬೆಸೆಂಟರ ಪರವಾಗಿ ಕೆಲಸ ಮಾಡಿದರು. ನೆಹರು ಬೆಸೆಂಟ್ ಬಗ್ಗೆ - " ಅವರು [ಬೆಸೆಂಟ್] ನನ್ನ ಬಾಲ್ಯದಲ್ಲಿ ನನ್ನ ಮೇಲೆ ತುಂಬಾ ಶಕ್ತಿಯುತವಾದ ಪ್ರಭಾವವನ್ನು ಹೊಂದಿದ್ದರು . ನಂತರ ನಾನು ರಾಜಕೀಯ ಜೀವನಕ್ಕೆ ಪ್ರವೇಶಿಸಿದಾಗ ಅವರ ಪ್ರಭಾವ ಮುಂದುವರೆದಿದೆ" ಎಂದು ಅವರು ನಂತರ ವಿವರಿಸಿದರು. ಭಾರತೀಯ ರಾಜಕೀಯದಲ್ಲಿ ತೀವ್ರಗಾಮಿ ಬದಲಾವಣೆಯನ್ನು ತಂದ ಮತ್ತೊಂದು ಬೆಳವಣಿಗೆಯು, ಡಿಸೆಂಬರ್ 1916 ರಲ್ಲಿ ಕಾಂಗ್ರೆಸ್’ನ ವಾರ್ಷಿಕ ಸಭೆಯಲ್ಲಿ ಲಖನೌ ಒಪ್ಪಂದದೊಂದಿಗೆ ಹಿಂದೂ-ಮುಸ್ಲಿಂ ಏಕತೆಗೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅಲಹಾಬಾದಿನಲ್ಲಿ ಈ ಒಪ್ಪಂದವನ್ನು ಸೂಚಿಸಲಾಯಿತು. ಇದು ಆನಂದ್ ಭವನದಲ್ಲಿ ನೆಹರು ನಿವಾಸದಲ್ಲಿ ನಡೆಯಿತು. ಇಬ್ಬರು ಭಾರತೀಯ ಸಮುದಾಯಗಳ ನಡುವಿನ ಹೊಂದಾಣಿಕೆಯನ್ನು ನೆಹರೂ ಸ್ವಾಗತಿಸಿದರು ಮತ್ತು ಪ್ರೋತ್ಸಾಹಿಸಿದರು. Moraes 2007, p. 55Ghose 1993 ಹೋಂರೂಲ್ ಚಳುವಳಿ ಹೋಂರೂಲ್ ಚಳುವಳಿ (ಸ್ವಯಮಾಡಳಿತ ಚಳುವಳಿ) ಹಲವಾರು ರಾಷ್ಟ್ರೀಯತಾವಾದಿ ಮುಖಂಡರು 1916 ರಲ್ಲಿ ಅನ್ನಿ ಬೆಸೆಂಟ್ ನಾಯಕತ್ವದಡಿಯಲ್ಲಿ ಸ್ವಯಂ-ಆಡಳಿತಕ್ಕಾಗಿ ಬೇಡಿಕೆಯನ್ನು ಇಟ್ಟರು. ಅದು ಆಸ್ಟ್ರೇಲಿಯಾ, ಕೆನಡಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ನ್ಯೂಫೌಂಡ್ಲ್ಯಾಂಡ್’ಗಳಂತೆ ಬ್ರಿಟಿಷ್ ಸಾಮ್ರಾಜ್ಯದೊಳಗೆ ಒಂದು ಪರಮಾಧಿಕಾರದ ಸ್ಥಿತಿಯನ್ನು ಪಡೆದುಕೊಳ್ಳಲು ಒಟ್ಟಿಗೆ ಸೇರಿದರು. ನೆಹರು ಈ ಚಳವಳಿಯಲ್ಲಿ ಸೇರಿಕೊಂಡರು ಮತ್ತು ಅದರಲ್ಲಿ ಬೆಸೆಂಟ್ ಅವರ ಹೋಮ್ ರೂಲ್ ಲೀಗ್‍ಗೆ ಕಾರ್ಯದರ್ಶಿಯಾಗುವ ಮಟ್ಟಕ್ಕೆ ಏರಿದರು. ಜೂನ್ 1917 ರಲ್ಲಿ ಬೆಸೆಂಟ್ ಅವರನ್ನು ಬಂಧಿಸಿ ಬ್ರಿಟಿಷ್ ಸರ್ಕಾರ ಗೃಹಬಂಧನದಲ್ಲಿ ಇರಿಸಿತು. ಕಾಂಗ್ರೆಸ್ ಮತ್ತು ಇತರ ಭಾರತೀಯ ಸಂಘಟನೆಗಳು ಅವರನ್ನು (ಬೆಸೆಂಟ್) ಬಂಧಮುಕ್ತ ಮಾಡದಿದ್ದಲ್ಲಿ ಪ್ರತಿಭಟನೆಗಳನ್ನು ಪ್ರಾರಂಭಿಸಲು ಬೆದರಿಕೆ ಹಾಕಿದರು. ತರುವಾಯ ತೀವ್ರವಾದ ಪ್ರತಿಭಟನೆ ಮತ್ತು ಒತ್ತಾಯದ ಕಾರಣ ಬ್ರಿಟಿಷ್ ಸರ್ಕಾರವು ಬೆಸೆಂಟ್’ ರನ್ನು ಬಿಡುಗಡೆ ಮಾಡಿತು ಮತ್ತು ಅದು ಸ್ವಲ್ಪ ಸಮಯದ ನಂತರ ಅವರಿಗೆ ಗಣನೀಯ ರಿಯಾಯಿತಿಗಳನ್ನು ನೀಡಬೇಕಾಯಿತು. Moraes 2007, p. 55. ಅಸಹಕಾರ ಚಳುವಳಿ 1920 ರಲ್ಲಿ ಅಸಹಕಾರ ಚಳವಳಿಯ ಆರಂಭದಲ್ಲಿ ನೆಹರು ಅವರು ಮೊದಲ ಬಾರಿಗೆ ರಾಷ್ಟ್ರೀಯ ರಾಜಕೀಯ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ತೊಡಗಿಗೊಂಡರು. ಯುನೈಟೆಡ್ ಪ್ರಾಂತ್ಯಗಳಲ್ಲಿ (ಈಗ ಉತ್ತರ ಪ್ರದೇಶ) ಚಳವಳಿಯನ್ನು ಅವರು ಮುನ್ನಡೆಸಿದರು. 1921 ರಲ್ಲಿ ನೆಹರು ಅವರನ್ನು ಸರ್ಕಾರಿ-ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಲಾಯಿತು ಮತ್ತು ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡಲಾಯಿತು. ಚೌರಿ ಚೌರಾ ಘಟನೆಯ ನಂತರ ಅಸಹಕಾರ ಚಳವಳಿಯನ್ನು ನಿಲ್ಲಿಸಿದ ನಂತರ, ಕಾಂಗ್ರೆಸ್‍ಸಿನೊಳಗೆ ರೂಪುಗೊಂಡ ಭಿನ್ನಾಭಿಪ್ರಾಯ-ಬಿರುಕುಗಳಲ್ಲಿ, ನೆಹರು ಗಾಂಧಿಗೆ ನಿಷ್ಠಾವಂತರಾಗಿದ್ದರು. ಅವರ ತಂದೆ ಮೋತಿಲಾಲ್ ನೆಹರೂ ಮತ್ತು ಸಿ.ಆರ್.ದಾಸರಿಂದ ರೂಪುಗೊಂಡ ಸ್ವರಾಜ್ ಪಕ್ಷದೊಂದಿಗೆ ನೆಹರು ಸೇರಲಿಲ್ಲ. [29] [30] ಭಾರತೀಯ ಸ್ವಾತಂತ್ರ್ಯಕ್ಕಾಗಿ ಅಂತರರಾಷ್ಟ್ರೀಕರಣದ ಹೋರಾಟ thumb|ನೆಹರು ಮತ್ತು ಅವರ ಮಗಳು ಇಂದಿರಾ ಬ್ರಿಟನ್ನಿನ ಲ್ಲಿ, - 1930 ರ ದಶಕ ಭಾರತದ ಸ್ವಾತಂತ್ರ್ಯ ಹೋರಾಟದ ಅಂತರರಾಷ್ಟ್ರೀಯ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವಲ್ಲಿ ನೆಹರು ಪ್ರಮುಖ ಪಾತ್ರ ವಹಿಸಿದರು. ಅವರು ಭಾರತಕ್ಕೆ ವಿದೇಶಿ ಮೈತ್ರಿಕೂಟಗಳನ್ನು ಕೋರಿದರು ಮತ್ತು ಪ್ರಪಂಚದಾದ್ಯಂತ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ನೆಡೆದ ಚಳುವಳಿಗಳೊಂದಿಗೆ ಸಂಪರ್ಕ ಕಲ್ಪಿಸಿದರು. 1927 ರಲ್ಲಿ ಬೆಲ್ಜಿಯಂನಲ್ಲಿ ಬ್ರಸೆಲ್ಸ್’ನಲ್ಲಿ ರಾಷ್ಟ್ರೀಯತೆಯನ್ನು ದಬ್ಬಾಳಿಕೆಗೆಒಳಗಾದ ಕಾಂಗ್ರೆಸ್’(ಸಮ್ಮೇಳನಕ್ಕೆ) ಗೆ ಹಾಜರಾಗಲು ಭಾರತದ ಕಾಂಗ್ರೆಸ್’ಗೆ ಆಹ್ವಾನ ನೀಡಲಾಯಿತು. ಸಾಮ್ರಾಜ್ಯಶಾಹಿ ವಿರುದ್ಧ ಸಾಮಾನ್ಯ ಹೋರಾಟವನ್ನು ಸಂಘಟಿಸಲು ಮತ್ತು ಯೋಜಿಸಲು ಸಭೆಯನ್ನು ಕರೆಯಲಾಯಿತು. ನೆಹರು ಭಾರತವನ್ನು ಪ್ರತಿನಿಧಿಸಿದರು ಮತ್ತು ಈ ಸಭೆಯಲ್ಲಿ ಜನಿಸಿದ ಇಂಪೀರಿಯಲ್’- ವಾದದ ವಿರುದ್ಧ ಲೀಗ್’ನ ಕಾರ್ಯನಿರ್ವಾಹಕ ಕೌನ್ಸಿಲ್ಲಿಗೆ ಆಯ್ಕೆಯಾದರು. Moraes 2007, p. 115. ಹೆಚ್ಚೂ ಕಮ್ಮಿ, ಜಗತ್ತಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ, ಸ್ವಾತಂತ್ರ್ಯಕ್ಕಾಗಿ ಸಾಮ್ರಾಜ್ಯದ ವಿವಿಧ ವಸಾಹತುಗಳು ಮತ್ತು ಅವುಗಳ ಪ್ರಾಬಲ್ಯಗಳ ವಿರುದ್ಧ ಹೋರಾಟ, ಬಹು-ರಾಷ್ಟ್ರೀಯ ಪ್ರಯತ್ನ, ಇವುಗಳನ್ನು ನೆಹರು ಕಂಡರು; ಆದಾಗ್ಯೂ, ಈ ವಿಷಯದ ಬಗ್ಗೆ ಅವರ ಕೆಲವು ಹೇಳಿಕೆಗಳು, ಹಿಟ್ಲರನ ಉದಯ ಮತ್ತು ಅವರ ಸಮರ್ಥನೆಯ ಉದ್ದೇಶಗಳೊಂದಿಗೆ ಜಟಿಲತೆಯಿಂದ ಕೂಡಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿವೆ. ಈ ಆರೋಪಗಳ ಮುಖಾಂತರ ನೆಹರು, " ನಾವು ಪ್ಯಾಲೆಸ್ಟೈನಿನಲ್ಲಿನ ಅರಬ್ಬರ ರಾಷ್ಟ್ರೀಯ ಚಳವಳಿಯ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ ಏಕೆಂದರೆ ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ನಿರ್ದೇಶಿಸಲ್ಪಟ್ಟಿತ್ತು. ಪ್ಯಾಲೆಸ್ಟೈನ್ ಬಗೆಗೆ ನಮ್ಮ ಸಹಾನುಭೂತಿ ಹಿಟ್ಲರನ ಹಿತಾಸಕ್ತಿಗಳಿಗೆ ಸರಿಹೊಂದುವ ಸಂಗತಿಯಿಂದ ನಮ್ಮ ಆ ಚಳುವಳಿಯ ಬಗ್ಗೆ ಸಹಾನುಭೂತಿಯನ್ನು ದುರ್ಬಲಗೊಳಿಸಲಾಗದು". J.Roland, Joan G. (June 2, 1998). The Jewish Communities of India: Identity in a Colonial Era (Second ed.). Routledge. p. 193 1930 ರ ಮಧ್ಯಕಾಲ 1930 ರ ದಶಕದ ಮಧ್ಯಭಾಗದಲ್ಲಿ, ನೆಹರು [[ಯುರೋಪ್‍ನಲ್ಲಿನ ಬೆಳವಣಿಗೆಗಳ ಬಗ್ಗೆ ಬಹಳ ಕಾಳಜಿಯನ್ನು ಹೊಂದಿದ್ದರು, ಅದು ಮತ್ತೊಂದು ವಿಶ್ವ ಯುದ್ಧದ ಕಡೆಗೆ ತಿರುಗುತ್ತಿತ್ತು. ಅವರು 1936 ರ ಆರಂಭದಲ್ಲಿ ಯೂರೋಪಿನಲ್ಲಿದ್ದರು. ಸ್ವಿಜರ್ಲ್ಯಾಂಡ್ನಲ್ಲಿನ ಸ್ಯಾನಿಟೇರಿಯಮ್ನಲ್ಲಿ ಅವರು ಕೆಲವೇ ದಿನಗಳಲ್ಲಿ ಸಾಯುವ ಸ್ಥಿತಿಯಲ್ಲದ್ದ, ಅವರ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡಿದರು. ಈ ಸಮಯದಲ್ಲೂ ಸಹ, ಯುದ್ಧದ ಸಂದರ್ಭದಲ್ಲಿ, ಭಾರತವು ಪ್ರಜಾಪ್ರಭುತ್ವಗಳ ಜೊತೆಯಲ್ಲಿರುವುದಾಗಿಯೂ, ಆದರೂ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್’ನ ಜೊತೆ ಸ್ವತಂತ್ರ ರಾಷ್ಟ್ರವಾಗಿ ಭಾರತವು ಮಾತ್ರ ಹೋರಾಟ ನಡೆಸಬಹುದೆಂದು ಅವರು ಒತ್ತಾಯಿಸಿದರು Students' Britannica India, Volumes 1-5 ಸುಭಾಷ್ ಚಂದ್ರ ಬೋಸ್ ಅವರಿಂದ ದೂರವಾದುದು ನೆಹರೂ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಜಗತ್ತಿನಾದ್ಯಂತ ಸ್ವತಂತ್ರ ರಾಷ್ಟ್ರಗಳ ಸರಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಆದಾಗ್ಯೂ, 1930 ರ ದಶಕದ ಅಂತ್ಯದಲ್ಲಿ ಪರಸ್ಪರ ದೂರವಾದರು., ಬೋಸರು ಬ್ರಿಟಿಷರನ್ನು ಭಾರತದ ಹೊರಗೆ ಹಾಕುವಲ್ಲಿ ಫ್ಯಾಸಿಸ್ಟರ (ಜರ್ಮನಿಯ ಹಿಟ್ಲರನ ಏಕ ಪಕ್ಷೀಯ ಆಡಳಿತ) ಸಹಾಯ ಪಡೆಯಲು ಒಪ್ಪಿಕೊಂಡಾಗ ನೆಹರೂ ಸುಭಾಷ್’ರಿಂದ ದೂರವಾದರು. ಅದೇ ಸಮಯದಲ್ಲಿ, ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ಫ್ರಾನ್ಸಿಸ್ಕೊ ಫ್ರಾಂಕೊ ಅವರ ಪಡೆಗಳ ವಿರುದ್ಧ ಹೋರಾಡಿದ ರಿಪಬ್ಲಿಕನ್ನರನ್ನು ನೆಹರೂ ಬೆಂಬಲಿಸಿದರು. ನೆಹರು ಅವರ ಸಹಾಯಕ ವಿ. ಕೆ. ಕೃಷ್ಣ ಮೆನನ್ ಅವರೊಂದಿಗೆ ಸ್ಪೇನಿಗೆ ಭೇಟಿ ನೀಡಿದರು ಮತ್ತು ರಿಪಬ್ಲಿಕನ್ ಪಕ್ಷದ ಬೆಂಬಲವನ್ನು ಘೋಷಿಸಿದರು., ಮುಸೊಲಿನಿ ನೆಹರೂ ಅವರನ್ನು ಭೇಟಿಯಾಗಲು ತನ್ನ ಆಸೆಯನ್ನು ವ್ಯಕ್ತಪಡಿಸಿದನು; .ಆದರೆ ನಂತರ ಇಟಲಿಯ ಸರ್ವಾಧಿಕಾರಿಯಾದ ಬೆನಿಟೊ ಅವರನ್ನು ಭೇಟಿಯಾಗಲು ನೆಹರೂ ನಿರಾಕರಿಸಿದರು. Moraes 2007, p.77. 266. ರಿಪಬ್ಲಿಕನ್ ಸಿದ್ಧಾಂತ ಭಾರತೀಯ ರಾಜಕುಮಾರರು ಆಳಿದ ರಾಜ್ಯಗಳಲ್ಲಿನ ಜನರ ನೋವುಗಳನ್ನು ಅರಿತುಕೊಳ್ಳುವ ಮೊದಲ ರಾಷ್ಟ್ರೀಯ ನಾಯಕರಲ್ಲಿ ನೆಹರು ಒಬ್ಬರಾಗಿದ್ದರು. ಭ್ರಷ್ಟ ಮಹಾಮಂತ್ರಿಗಳ ವಿರುದ್ಧ ಸಿಖ್ಖರು ನಡೆಸುತ್ತಿದ್ದ ಹೋರಾಟವನ್ನು ನೋಡಲು ಅವರು ಅಲ್ಲಿಗೆ ಹೋದಾಗ, ನಭಾ ಎಂಬ ರಾಜನ ಆಜ್ಞೆಯಿಂದ ಅವರು ಜೈಲು ಶಿಕ್ಷೆ ಅನುಭವಿಸಿದರು. ರಾಷ್ಟ್ರೀಯತಾವಾದಿ ಚಳವಳಿಯು ನೇರವಾಗಿ ಬ್ರಿಟಿಷ್ ಆಳ್ವಿಕೆಯ ಅಡಿಯಲ್ಲಿರುಚ ಪ್ರದೇಶಗಳಿಗೆ ಸೀಮಿತವಾಗಿತ್ತು. ಸ್ವಾತಂತ್ರ್ಯಕ್ಕಾಗಿ ರಾಷ್ಟ್ರೀಯತಾವಾದಿ ಚಳವಳಿಯ ಭಾಗವಾಗಿ ರಾಜರ ರಾಜ್ಯಗಳಲ್ಲಿ ಜನರು ಹೋರಾಟ ಮಾಡಲು ಅವರು ಸಹಾಯ ಮಾಡಿದರು. 1927 ರಲ್ಲಿ “ಆಲ್ ಇಂಡಿಯಾ ಸ್ಟೇಟ್ಸ್ ಪೀಪಲ್ಸ್ ಕಾನ್ಫರೆನ್ಸ್” (ರಾಜರ ಆಳ್ವಿಕೆಯ ಜನರ ಸಮ್ಮೇಳನ) ರಚನೆಯಾಯಿತು. ಹಲವು ವರ್ಷಗಳ ಕಾಲ ರಾಜ ಸಂಸ್ಥಾನದ ಜನರಿಗೆ ನೆರವಾಗಿದ್ದ ನೆಹರು ಅವರು 1935 ರಲ್ಲಿ ನಡೆದ ಸಮಾವೇಶದ ಅಧ್ಯಕ್ಷರಾದರು. ಅವರು ರಾಜಕೀಯ ಶ್ರೇಣಿಯಕ್ರಮದಿಂದ ಸದಸ್ಯತ್ವ ಪಡೆಯಲು ಅದರ ಶ್ರೇಣಿಯನ್ನು ತೆರೆದರು. ಭಾರತದ ರಾಜಕೀಯ ಏಕೀಕರಣದ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ, ಭಾರತೀಯ ನಾಯಕರಿಗೆ ಸಹಾಯ ಮಾಡುತ್ತದೆ ಎಂಬ ಉದ್ದೇಶವಿತ್ತು. ಭಾರತದ ವರ್ಣರಂಜಿತ ರಾಜಕೀಯ ನಾಯಕರಾದ ವಲ್ಲಭಭಾಯ್ ಪಟೇಲ್ ಮತ್ತು ವಿ. ಪಿ. ಮೆನನ್’ರಿಗೆ, "ರಾಜರ ಆಳ್ವಿಕೆಯ ಜನರ ಸಮ್ಮೇ ಳನ"ದ ಅದ್ಯಕ್ಷರಾದ ನೆಹರು ಅವರು ರಾಜಪ್ರಭುತ್ವ ರಾಜ್ಯಗಳನ್ನು ಭಾರತದೊಳಗೆ ಸಂಯೋಜಿಸುವ ಕಾರ್ಯವನ್ನು ನಿಯೋಜಿಸಿದರು (1935). ನೂರಾರು ರಾಜರುಗಳೊಂದಿಗೆ ಮಾತುಕತೆ ನಡೆಸಿ ಭಾರತದ ರಾಜಕೀಯ ಏಕೀಕರಣವನ್ನು ಸಾಧಿಸಲು ಇವರು ಪ್ರಮುಖ ಪಾತ್ರವಹಿಸಬಲ್ಲರು ಎಂದು ಅವರು ನಂಬಿದ್ದರು. (ವಿ.ಪಿ.ಮೆನನ್, ನಂತರ ಪಟೇಲರ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಬ್ರಿಟಿಷರಿಂದ ಭಾರತ ವರ್ಗಾವಣೆಯ ಮತ್ತು ವಿಭಜನೆಯ ನೀತಿನಿಯಮಗಳ ಪತ್ರವನ್ನು ಸಿದ್ಧಪಡಿಸಿದರು.)https://books.google.co.in/books?id=9- Patel: Political Ideas and Policies;edited by Shakti Sinha, Himanshu Roy"Jawaharlal Nehru – a chronological account". Archived from the original on 4 June 2012. Retrieved 23 June 2012.https://www.indiatoday.in/magazine/cover-story/story/20030818-56-events-that-changed-india-dissolution-of-princely-states-in-1950-791861-2003-08-18 56 events that changed India: Dissolution of princely states in 1950 ರಾಜರ ಆಡಳಿತದ ರಾಜ್ಯಗಳ ಸಮಸ್ಯೆಗಳು 1946 ರ ಜುಲೈನಲ್ಲಿ ಸ್ವತಂತ್ರ ಭಾರತದ ಸೈನ್ಯದ ವಿರುದ್ಧ ನಿಲ್ಲಬಲ್ಲ ಯಾವುದೇ ರಾಜಪ್ರಭುತ್ವದ ರಾಜ್ಯವು ತನ್ನ (ಬಲಿಷ್ಠ) ಸೈನ್ಯವನ್ನು ಹೊಂದಿಲ್ಲವೆಂದು ನೆಹರು ಗಮನಸೆಳೆದಿದ್ದಾರೆ. ಸ್ವತಂತ್ರ ಭಾರತವು “ರಾಜರ ದೈವಿಕ ಹಕ್ಕು” ನೀತಿನ್ನು ಒಪ್ಪುವುದಿಲ್ಲವೆಂದು 1947 ರ ಜನವರಿಯಲ್ಲಿ ಅವರು ಹೇಳಿದರು, ಮತ್ತು ಮೇ 1947 ರಲ್ಲಿ, “ಸಂವಿಧಾನ ಸಭೆಯೊಂದನ್ನು ಸೇರಲು ನಿರಾಕರಿಸಿದ ಯಾವುದೇ ರಾಜಪ್ರಭುತ್ವದ ರಾಜ್ಯವನ್ನು ಶತ್ರು ರಾಜ್ಯವೆಂದು ಪರಿಗಣಿಸಲಾಗುತ್ತದೆ”, ಎಂದರು. ಭಾರತದ ಸಂವಿಧಾನದ ಕರಡು ತಯಾರಿಸುವಾಗ, ಆ ಸಮಯದಲ್ಲಿನ ಅನೇಕ ಭಾರತೀಯ ಮುಖಂಡರು (ನೆಹರೂ ಹೊರತುಪಡಿಸಿ) ಪ್ರತಿ ರಾಜ ಸಂಸ್ಥಾನವು ಅಥವಾ ಒಡಂಬಡಿಕೆಯ ರಾಜ್ಯವು “ಫೆಡರಲ್ ರಾಜ್ಯವಾಗಿ” ಸ್ವತಂತ್ರವಾಗಿರಲು ಅನುವು ಮಾಡಿಕೊಡಬೇಕು ಎಂಬ ನೀತಿಯ ಪರವಾಗಿದ್ದರು, ಇದು ಮೂಲತಃ ಭಾರತ ಸರ್ಕಾರ ಕಾಯಿದೆ (1935) ರ ಅನುಸಾರವಾಗಿತ್ತು. ಆದರೆ ಸಂವಿಧಾನದ ಕರಡು ರಚನೆಯು ಪ್ರಗತಿಯಾದಾಗ ಮತ್ತು ಗಣರಾಜ್ಯ ರಚಿಸುವ ಕಲ್ಪನೆಯು ನಿರ್ದಿಷ್ಠ ಆಕಾರವನ್ನು ತೆಗೆದುಕೊಂಡಿತು ಅದು ನೆಹರು ಪ್ರಯತ್ನದ ಕಾರಣ, ಎಲ್ಲಾ ರಾಜರ ರಾಜ್ಯಗಳು / ಒಡಂಬಡಿಕೆಯ ರಾಜ್ಯಗಳು ಭಾರತೀಯ ಗಣರಾಜ್ಯದೊಂದಿಗೆ ವಿಲೀನಗೊಳ್ಳುತ್ತವೆ ಎಂದು ನಿರ್ಧರಿಸಲಾಯಿತು. ನೆಹರೂ ಅವರ ಪುತ್ರಿ ಇಂದಿರಾ ಗಾಂಧಿಯವರು 1969 ರಲ್ಲಿ ರಾಷ್ಟ್ರಪತಿ ಆದೇಶ ಹೊರಡಿಸಿ ಎಲ್ಲಾ ರಾಜ್ಯದ ರಾಜರ ರಾಜತ್ವದ ಅಧಿಕಾರವನ್ನು ರದ್ದುಗೊಳಿಸಿದರು. ಆದರೆ ಇದು ಭಾರತದ ಸುಪ್ರೀಂ ಕೋರ್ಟಿನಿಂದ ತಿರಸ್ಕರಿಸಲ್ಪಟ್ಟಿತು. ಅಂತಿಮವಾಗಿ, ಸಂವಿಧಾನದ 26 ನೇ ತಿದ್ದುಪಡಿಯಿಂದ ಸರ್ಕಾರವು ಭಾರತದ ರಾಜಪ್ರಭುತ್ವದ ರಾಜ್ಯಗಳನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಯಿತು. ನೆಹರು ಪ್ರಾರಂಭಿಸಿದ, ಈ ಸಂಸ್ಥಾನಗಳನ್ನು ಭಾರತದ ಪ್ರಜಾಪ್ರಭುತ್ದ ಆಡಳಿತದೊಳಗೆ ತರುವ ಪ್ರಕ್ರಿಯೆಯು' 1971 ರ ಅಂತ್ಯದ ವೇಳೆಗೆ ಅವರ ಮಗಳಿಂದ ಪೂರ್ಣಗೊಂಡಿತು. Lumby, E.W.R. (1954), The Transfer of Power in India, 1945–1947, London: George Allen and Unwin p. 228https://books.google.co.in/books?id=VWJ2DwAAQBAJ&pg=PT170&lpg=PT170 " 56 events that changed India: Dissolution of princely states in 1950" 1929ರ ಸ್ವಾತಂತ್ರ್ಯದ ಘೋಷಣೆ ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ಎಲ್ಲ ಸಂಬಂಧಗಳಿಂದ ಸಂಪೂರ್ಣ ಮತ್ತು ಸ್ಪಷ್ಟವಾದ ವಿದಾಯವನ್ನು (ಬಿಡುಗಡೆ) ಹೊಂದಲು ಕಾಂಗ್ರೆಸ್ ಪಕ್ಷವು ನಿರ್ಧರಿಸಬೇಕು ಎಂದು ಒತ್ತಾಯಿಸಿದ ಮೊದಲ ನಾಯಕರಲ್ಲಿ ನೆಹರು ಕೂಡ ಒಬ್ಬರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಅವರ ನಿರ್ಣಯವನ್ನು 1927 ರಲ್ಲಿ ಕಾಂಗ್ರೆಸ್’ನ ಮದ್ರಾಸ್ ಅಧಿವೇಶನದಲ್ಲಿ ಗಾಂಧೀಜಿಯವರ ಟೀಕೆಯ ಹೊರತಾಗಿಯೂ ಅಂಗೀಕರಿಸಲಾಯಿತು (ಪೂರ್ಣ ಸ್ವರಾಜ್ಯ ಬೇಡಿಕೆಯ ಘೋಷಣೆಗೆ ಇನ್ನೂ ಕಾಲ ಪಕ್ವವಾಗಿಲ್ಲ ಎಂಬುದು ಗಾಂದೀಜಿಯವರ ಅಭಿಪ್ರಾಯವಾಗಿತ್ತು). ಆ ಸಮಯದಲ್ಲಿ ನೆಹರು ಅವರು ಪೂರ್ಣ ಸ್ವಾತಂತ್ರದ ಬಗ್ಗೆ ಒತ್ತಡ ಹಾಕಲು ಕಾಂಗ್ರೆಸ್ಸಿನ ಒಳಗಿನ ಒಂದು ಒತ್ತಡದ ಗುಂಪನ್ನು ರಚಿಸಿದರು. ಅದು “ಸ್ವಾತಂತ್ರ್ಯಕ್ಕಾಗಿ ಇಂಡಿಯಾ ಲೀಗ್” ಎಂಬ ಎಂಬ ಕೂಟ. Dutt, R.C. (1981). Socialism of Jawaharlal Nehru. New Delhi: Shakti Malik, Abhinav Publications. pp. 54–55. [47] [48] 1928 ರಲ್ಲಿ, ಗಾಂಧೀಜಿಯವರು ನೆಹರು ಅವರ ಬೇಡಿಕೆಗಳಿಗೆ ಒಪ್ಪಿಕೊಂಡರು ಮತ್ತು ಬ್ರಿಟಿಷರಿಗೆ ಎರಡು ವರ್ಷಗಳಲ್ಲಿ ಭಾರತಕ್ಕೆ ಡೊಮಿನಿಯನ್ ಅಧಿಕಾರ ಸ್ಥಾನಮಾನ ನೀಡಲು ಕರೆಕೊಡುವ ನಿರ್ಣಯವನ್ನು ಪ್ರಸ್ತಾವಿಸಿದರು. ಗಡುವು ಪೂರೈಸಲು ಬ್ರಿಟಿಷರು ವಿಫಲವಾದರೆ, ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಎಲ್ಲಾ ಭಾರತೀಯರಿಗೆ ಕರೆನೀಡುತ್ತದೆ ಎಂಬುದಕ್ಕೆ ನೆಹರು ಒಪ್ಪ್ಪಿದರು. ಆದರೆ ಬ್ರಿಟಿಷರಿಗೆ ನೀಡಿದ ಎರಡು ವರುಷದ ಸಮಯವನ್ನು ವಿರೋಧಿಸಿದ ನಾಯಕರಲ್ಲಿ ನೆಹರೂ ಒಬ್ಬರಾಗಿದ್ದರು - ಅವರು ಬ್ರಿಟಿಷರಿಂದ ತಕ್ಷಣದ ಕ್ರಮಗಳನ್ನು ಒತ್ತಾಯಿಸಲು ಗಾಂಧಜಿಯನ್ನು ಒತ್ತಾಯಿಸಿದರು. ಗಾಂಧಿಯವರು ಎರಡು ವರ್ಷಗಳಿಂದ ಒಂದು ಅವಧಿಗೆ ಸಮಯವನ್ನು ಕಡಿಮೆ ಮಾಡಿ ಮತ್ತಷ್ಟು ರಾಜಿ ಮಾಡಿಕೊಂಡರು. ಹೊಸ ನಿರ್ಣಯಕ್ಕೆ ಮತ ಚಲಾಯಿಸಲು ನೆಹರು ಒಪ್ಪಿಕೊಂಡರು.Rajmohan Gandhi, Patel: A Life, p. 171,p. 185 ASIN: B0006EYQ0A ಡೊಮಿನಿಯನ್ ಸ್ಥಾನಮಾನದ ಬೇಡಿಕೆಗಳನ್ನು ಬ್ರಿಟಿಷರು 1929 ರಲ್ಲಿ ತಿರಸ್ಕರಿಸಿದರು. 1929 ರ ಡಿಸೆಂಬರ್ 29 ರಂದು ಲಾಹೋರ್ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯನ್ನು ನೆಹರು ವಹಿಸಿಕೊಂಡರು ಮತ್ತು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಕರೆಕೊಡುವ ಯಶಸ್ವಿ ನಿರ್ಣಯವನ್ನು ಮಂಡಿಸಿದರು. ಸ್ವಾತಂತ್ರ್ಯದ ಘೋಷಣೆಯ ಕರಡು ಪ್ರತಿ (ಡ್ರಾಫ್ಟ್) ಭಾರತದ ಸ್ವಾತಂತ್ರ್ಯದ ಘೋಷಣೆಯ ಕರಡನ್ನು ನೆಹರೂ ಮಾಡಿದರು. ಅದು ಹೀಗಿತ್ತು(ಕರಡು:ತಿದ್ದುಪಡಿ ಮಾಡದ ಮೂಲ ಪ್ರತಿ): ಸ್ವಾತಂತ್ರ್ಯವನ್ನು ಹೊಂದಲು ಮತ್ತು ಅವರ ಶ್ರಮದ ಫಲವನ್ನು ಅನುಭವಿಸಲು ಮತ್ತು ಜೀವನದ ಅಗತ್ಯತೆಗಳನ್ನು ಹೊಂದಲು, ಅವರು ಜನರಿಗೆ ಅಭಿವೃದ್ಧಿಗಾಗಿ ಪೂರ್ಣ ಅವಕಾಶಗಳನ್ನು ಹೊಂದಲು ಸಾಧ್ಯವಾಗುವಂತೆ, ಇತರ ಜನರಂತೆ, ಭಾರತೀಯ ಜನರ ಪ್ರಶ್ನಾತೀತವಾದ ಹಕ್ಕಿದೆ ಎಂದು ನಾವು ನಂಬುತ್ತೇವೆ. ಯಾವುದೇ ಸರ್ಕಾರವು ಈ ಹಕ್ಕುಗಳ ಜನರನ್ನು ಹಿಂತೆಗೆದುಕೊಂಡು ಅವರನ್ನು ದಮನಮಾಡಿದರೆ ಜನರು ಅದನ್ನು ಬದಲಾಯಿಸುವ ಅಥವಾ ಅದನ್ನು ರದ್ದುಗೊಳಿಸುವುದಕ್ಕೆ ಮತ್ತಷ್ಟು ಹಕ್ಕನ್ನು ಹೊಂದಿದ್ದಾರೆ ಎಂದು ನಾವು ನಂಬುತ್ತೇವೆ. ಭಾರತದಲ್ಲಿ ಬ್ರಿಟಿಷ್ ಸರ್ಕಾರವು ಭಾರತೀಯ ಜನರ ಸ್ವಾತಂತ್ರ್ಯವನ್ನು ವಂಚಿತಗೊಳಿಸಿದ್ದು ಮಾತ್ರವಲ್ಲದೆ ಆ ಜನಸಾಮಾನ್ಯರ ಶೋಷಣೆಯ ಮೇಲೆ ತನ್ನನ್ನು ಅವಲಂಬಿಸಿಕೊಂಡಿದೆ ಮತ್ತು ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಭಾರತವನ್ನು ನಾಶಪಡಿಸಿದೆ. ಹಾಗಾಗಿ, ಭಾರತವು ಬ್ರಿಟಿಷ್ ಸಂಪರ್ಕದಿಂದ ಬೇರ್ಪಡಬೇಕು ಮತ್ತು ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯಬೇಕು ಎಂದು ನಾವು ನಂಬುತ್ತೇವೆ. "Declaration of independence ಹೊಸ ವರ್ಷದ ಮುನ್ನಾದಿನದ 1929 ರ ಮಧ್ಯರಾತ್ರಿ, ನೆಹರು ಅವರು ಲಾಹೋರ್’ನಲ್ಲಿ ರಾವಿನದಿ ತೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. “ಸ್ವಾತಂತ್ರ್ಯದ ಪ್ರತಿಜ್ಞೆಯನ್ನು ಓದಲಾಗಿದೆ, ಇದರಲ್ಲಿ ತೆರಿಗೆಯನ್ನು ತಡೆಹಿಡಿಯುವ ಸಿದ್ಧತೆ ಸೇರಿದೆ”. ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಬೃಹತ್ ಕೂಟವನ್ನು ಅವರು ಈ ಘೋಷಣೆಯನ್ನು ಒಪ್ಪಿಕೊಂಡರೇ ಎಂದು ಕೇಳಲಾಯಿತು, ಮತ್ತು ಬಹುಪಾಲು ಜನರು ತಮ್ಮ ಕೈಗಳನ್ನು ಎತ್ತಿ ಅನುಮೋದನೆಯ ಒಪ್ಪಿಗೆಗೆ ಸಾಕ್ಷಿಯಾಗಿದ್ದರು. ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳ 172 ಭಾರತೀಯ ಸದಸ್ಯರು ಭಾರತೀಯ ಸಾರ್ವಜನಿಕರ ಭಾವನೆಗಳಿಗೆ ಅನುಗುಣವಾಗಿ ನಿರ್ಣಯಕ್ಕೆ ಬೆಂಬಲ ನೀಡಿ ರಾಜಿನಾಮೆ ಸಲ್ಲಿಸಿದರು. ಜನವರಿ 26 ರಂದು ಸ್ವಾತಂತ್ರ್ಯ ದಿನವೆಂದು ಆಚರಿಸಲು ಕಾಂಗ್ರೆಸ್ ಜನರನ್ನು ಕೇಳಿತು. ಭಾರತದ ಧ್ವಜವನ್ನು ಕಾಂಗ್ರೆಸ್’ನ ಸ್ವಯಂಸೇವಕರು, ರಾಷ್ಟ್ರೀಯವಾದಿಗಳು ಮತ್ತು ಸಾರ್ವಜನಿಕರು ಇವರಿಂದ ಸಾರ್ವಜನಿಕವಾಗಿ ಭಾರತದಾದ್ಯಂತ ಹಾರಿಸಲ್ಪಟ್ಟಿತು. ಸಾಮೂಹಿಕ ನಾಗರಿಕ ಅಸಹಕಾರಕ್ಕಾಗಿ ಯೋಜನೆಗಳು ನಡೆಯುತ್ತಿದ್ದವು. 1929 ರಲ್ಲಿ ಕಾಂಗ್ರೆಸ್ನ ಲಾಹೋರ್ ಅಧಿವೇಶನದ ನಂತರ, ನೆಹರೂ ಕ್ರಮೇಣ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಧಾನ ನಾಯಕನಾಗಿ ಹೊರಹೊಮ್ಮಿದರು. ಗಾಂಧಿಯವರು ಹೆಚ್ಚು ಆಧ್ಯಾತ್ಮಿಕ ಪಾತ್ರಕ್ಕೆ ಮರಳಿದರು. ಗಾಂಧಿಯವರು 1942 ರವರೆಗೆ ನೆಹರು ಅವರನು ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಅಧಿಕೃತವಾಗಿ ನೇಮಿಸಲಿಲ್ಲವಾದರೂ, 1930 ರ ದಶಕದ ಮಧ್ಯಭಾಗದಲ್ಲಿಯೇ ನೆಹರು ದೇಶಕ್ಕೆ ಗಾಂಧಿಯ ಸ್ವಾಭಾವಿಕ ಉತ್ತರಾಧಿಕಾರಿಯಾಗಿ ಪರಿಗಣಿಸಲ್ಪಟ್ಟಿದ್ದರು. Republic Day story: On Ravi’s banks, a pledge that shaped the course of modern India 88 years ago ಅಹಿಂಸಾತ್ಮಕ ಅಸಹಕಾರ ಚಳುವಳಿ ಉಪ್ಪಿನ ಸತ್ಯಾಗ್ರಹ: thumb|250px|ಗಾಂಧಿಯವರು 1930ರಲ್ಲಿ 'ದಂಡಿ ಮಾರ್ಚ್' ಅನ್ನು ಮುನ್ನಡೆಸಿದರು, ಇದು ಸತ್ಯಾಗ್ರಹದ ಒಂದು ಗಮನಾರ್ಹ ಉದಾಹರಣೆ. ಬ್ರಿಟಿಷ್’ರಿಂದ ಉಪ್ಪು ತೆರಿಗೆಗೆ ಗುರಿಯಾಗಿದ ಕಾರಣ ಅದರ ವಿರುದ್ಧ ಸತ್ಯಾಗ್ರಹ ಮಾಡುವದರೊಂದಿಗೆ “ನಾಗರಿಕ ಅಸಹಕಾರ ಚಳುವಳಿಯನ್ನು ಪ್ರಾರಂಭಿಸುವ ಗಾಂಧಿಯವರ ಯೋಜನೆ ಬಗ್ಗೆ ನೆಹರು ಮತ್ತು ಕಾಂಗ್ರೆಸ್ನ ಹೆಚ್ಚಿನ ನಾಯಕರು ಆರಂಭದಲ್ಲಿ ಅದರ ಪರಿಣಾಮದ ಬಗ್ಗೆ ಸಂಶಯ ಪಟ್ಟಿದ್ದರು. (ಸಮುದ್ರದಲ್ಲಿಯಾಗಲಿ ಅಥವಾ ಬೇರೆ ವಿಧದಿಂದಲಾಗಲಿ ಬಾರತೀಯರು ಉಪ್ಪು ತಯಾರಿಸುವಂತಿರಲಿಲ್ಲ. ಅದು ಅಪರಾಧವೆಂಬ ಕಾನೂನು. ಉಪ್ಪನ್ನು ತಯಾರಿಸಿ ಕಾನೂನು ಭಂಗ ಮಡುವುದು – ಜೈಲಿಗೆ ಹೋಗುವುದು ಸತ್ಯಾಗ್ರಹ.) ಪ್ರತಿಭಟನೆಯು ಬಿಸಿ ಏರಿದ ನಂತರ, “ಉಪ್ಪಿನ ಸಂಕೇತದ ಶಕ್ತಿ”ಯನ್ನು ನೆಹರು ಅವರು ಅರಿತುಕೊಂಡರು. ನೆಹರು ಈ ಪ್ರತಿಭಟನೆಯ ಅಭೂತಪೂರ್ವ ಜನಪ್ರಿಯ ಪ್ರತಿಕ್ರಿಯೆಯ ಬಗ್ಗೆ ಹೀಗೆ ಪ್ರತಿಕ್ರಿಯಿಸಿದರು: "ಒಂದು ವಸಂತಕಾಲವು ಇದ್ದಕ್ಕಿದ್ದಂತೆ ಹೊರಹೊಮ್ಮಿರುವಂತೆ ಕಾಣುತ್ತದೆ". [57] ನೆಹರು ರಾಯಪುರಕ್ಕೆ ಅಲಹಾಬಾದ್’ನಿಂದ ಬಂದ ರೈಲಿನ ಸಂದರ್ಭದಲ್ಲಿ 14 ಏಪ್ರಿಲ್ 1930 ರಂದು ಅವರನ್ನು ಬಂಧಿಸಲಾಯಿತು. ಅದಕ್ಕೆ ಮೊದಲು ಅವರು ಒಂದು ದೊಡ್ಡ ಸಭೆ ನಡೆಸಿ ದೊಡ್ಡ ಮೆರವಣಿಗೆಯನ್ನು ನಡೆಸಿದ ನಂತರ, ಸರ್ಕಾರದಿಂದ ನಿóಷೇಧಿಸಲ್ಪಟ್ಟ (ಕಾಂಟ್ರಾಬ್ಯಾಂಡ್) ಉಪ್ಪನ್ನು ಸಂಭ್ರಮೋತ್ಸವವದಿಂದ ಬಹಿರಂಗವಾಗಿ ತಯಾರಿಸಿದರು. “ಉಪ್ಪು ಕಾನೂನಿನ” ಉಲ್ಲಂಘನೆಯ ಕಾರಣ ಅವರನ್ನು ಬಂಧಿಸಲಾಯಿತು, ಜೈಲು ಗೋಡೆಗಳ ಹಿಂದೆಯೇ ಅವರನ್ನು ಸಂಕ್ಷಿಪ್ತವಾಗಿ ವಿಚಾರಣೆ ನೆಡೆದರು ಮತ್ತು ಅವರಿಗೆ ಆರು ತಿಂಗಳ ಸೆರೆವಾಸ ವಿಧಿಸಲಾಯಿತು. ನೆಹರು ಅವರು ಜೈಲಿನಲ್ಲಿ ಇದ್ದಾಗ, ಗಾಂಧೀಜಿ ಅನುಪಸ್ಥತಿಯಲ್ಲಿ ಗಾಂಧಿ ಅವರನ್ನು ತಮ್ಮ ಉತ್ತರಾದಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಿದರು, ಆದರೆ ಗಾಂಧಿಯವರು ಅದನ್ನು ನಿರಾಕರಿಸಿದರು, ಮತ್ತು ನೆಹರು ತನ್ನ ತಂದೆಯವರನ್ನು ಉತ್ತರಾಧಿಕಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ನಾಮಕರಣ ಮಾಡಿದರು. ನೆಹರೂ ಅವರ ಬಂಧನದಿಂದಾಗಿ ನಾಗರಿಕ ಅಸಹಕಾರ ಚಳುವಳಿ ಹೊಸ ಗತಿ ಪಡೆದುಕೊಂಡು ತೀವ್ರವಾಯಿತು, ಮತ್ತು ಬಂಧನಗಳು ನೆಡೆದವು, ಜನಸಮೂಹದ ಮೇಲೆ ಗುಂಡುಹಾರಿಸಲಾಯಿತು ಮತ್ತು ಲಾಠಿ ಛಾರ್ಜಗಳು ಎಲ್ಲೆಡೆಯೂ ಸಾಮಾನ್ಯ ಘಟನೆಗಳಾಗಿ ನೆಡೆಯಿತು. Gandhi, Gopalkrishna. "The Great Dandi March — eighty years after" Archived 17 July 2012 at the Wayback Machine., The Hindu, 5 April 2010 ಉಪ್ಪಿನ ಸತ್ಯಾಗ್ರಹದ ಯಶಸ್ಸು ಉಪ್ಪಿನ ಸತ್ಯಾಗ್ರಹವು ಪ್ರಪಂಚದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇಂಡಿಯನ್, ಬ್ರಿಟಿಷ್, ಮತ್ತು ಪ್ರಪಂಚದ ಅಭಿಪ್ರಾಯಗಳು ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಹಕ್ಕುಗಳ ನ್ಯಾಯಸಮ್ಮತತೆಯನ್ನು ಹೆಚ್ಚಿಸಲು ಪ್ರಾರಂಭಿಸಿವೆ. ನೆಹರು ಅವರು ಉಪ್ಪಿನ ಸತ್ಯಾಗ್ರಹವನ್ನು ಗಾಂಧಿಯವರೊಂದಿಗಿನ ಅವರ ಸಂಬಂಧದ ಉನ್ನತ-ಚಿನ್ಹೆಯ ಗುರುತು ಎಂದು ಪರಿಗಣಿಸಿದರು, [60] ಮತ್ತು ಭಾರತೀಯರ ವರ್ತನೆಗಳನ್ನು ಬದಲಿಸುವಲ್ಲಿ ಇದು ಶಾಶ್ವತವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಭಾವಿಸಿದರು: “ಖಂಡಿತ ಈ ಚಳುವಳಿ ಬ್ರಿಟಿಷ್ ಸರಕಾರದ ಮೇಲೆ ಭಾರಿ ಒತ್ತಡವನ್ನು ಬೀರಿತು ಮತ್ತು ಸರ್ಕಾರಿ ಯಂತ್ರಗಳನ್ನು ಬೆಚ್ಚಿಬೀಳಿಸಿತ್ತು. ಆದರೆ ಇದಕ್ಕೆ ನನ್ನ (ನೆಹರು) ಪ್ರಾಮುಖ್ಯತೆ, ನಮ್ಮ ಜನರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನರ ಮೇಲೆ ಬೀರಿದ ಪರಿಣಾಮ. ... ಅಸಹಕಾರ ಅವರನ್ನು ಕಿರಿದಾದಿಂದ ಕೂಪದಿಂದ ಹೊರಗೆ ಎಳೆದುಕೊಂಡು ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ನೀಡಿತು. ... ಅವರು ಧೈರ್ಯದಿಂದ ವರ್ತಿಸಿದರು ಮತ್ತು ಅನ್ಯಾಯದ ದಬ್ಬಾಳಿಕೆಗೆ ಸುಲಭವಾಗಿ ಒಪ್ಪಲಿಲ್ಲ; ಅವರ ದೃಷ್ಟಿಕೋನವು ವಿಸ್ತಾರವಾಯಿತು ಮತ್ತು ಅವರು ಭಾರತವನ್ನು ಒಂದು ಘಟಕವಾಗಿ ಸ್ವಲ್ಪಮಟ್ಟಿಗೆ ಯೋಚಿಸಲಾರಂಭಿಸಿದರು. ... ಇದು ಗಮನಾರ್ಹ ಬದಪಾವಣೆಯಾಗಿತ್ತು. ಇದರ ಕೀರ್ತಿ ಗಾಂಧಿಯವರ ನಾಯಕತ್ವದ ಕಾಂಗ್ರೆಸ್’ಗೆ ಅದರ ಕೀರ್ತಿ ಸೇರಬೇಕು. Johnson, Richard L. (2005). Gandhi's Experiments With Truth: Essential Writings By And About Mahatma Gandhi, Lexington Books ಆಧುನಿಕ ಭಾರತದ ಶಿಲ್ಪಿ (ಭಾರತದ ನಿರ್ಮಾತೃವಾಗಿ) thumb|1942 ರಲ್ಲಿ ಗಾಂಧಿ ಮತ್ತು ನೆಹರು ಭವಿಷ್ಯ ಭಾರತದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯದ ತಳಹದಿ: 1929 ರಲ್ಲಿ ಕಾಂಗ್ರೆಸ್ಸಿನ ನೀತಿಗಳನ್ನು ಮತ್ತು ಅವರ ನಾಯಕತ್ವದಲ್ಲಿ ಭವಿಷ್ಯದ ಭಾರತ-ರಾಷ್ಟ್ರವನ್ನು ನೆಹರು ವಿವರಿಸಿದರು. ಅವರು ಕಾಂಗ್ರೆಸ್ಸಿನ ಉದ್ದೇಶಗಳು ಧರ್ಮದ ಸ್ವಾತಂತ್ರ್ಯ, ಸಂಘಗಳನ್ನು ರೂಪಿಸುವ ಹಕ್ಕನ್ನು, ಆಲೋಚನೆಯ ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತಿ, ಬಣ್ಣ, ಮತ ಅಥವಾ ಧರ್ಮದ ವ್ಯತ್ಯಾಸವಿಲ್ಲದೆ ಪ್ರತಿ ವ್ಯಕ್ತಿಗೂ ಸಮಾನತೆಯ ಕಾನೂನು, ಪ್ರಾದೇಶಿಕ ಭಾಷೆಗಳು ಮತ್ತು ಸಂಸ್ಕೃತಿಗಳಿಗೆ ರಕ್ಷಣೆ, ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳು, ಅಸ್ಪೃಶ್ಯತೆ ನಿರ್ಮೂಲನೆ, ವಯಸ್ಕ ಮತದಾನದ ಪರಿಚಯ, ನಿಷೇಧ ಹೇರುವುದು, ಕೈಗಾರಿಕೆಗಳ ರಾಷ್ಟ್ರೀಕರಣ, ಸಮಾಜವಾದ, ಮತ್ತು ಜಾತ್ಯತೀತ ಭಾರತವನ್ನು ಸ್ಥಾಪಿಸುವುದು. ಈ ಎಲ್ಲಾ ಉದ್ದೇಶಗಳು 1929-31ರಲ್ಲಿ ನೆಹರುರಿಂದ ರಚಿಸಲ್ಪಟ್ಟ "ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ" ಯ ನಿರ್ಣಯದ ಮೂಲವು ರೂಪಿಸಿವೆ ಮತ್ತು ಅವು ಗಾಂಧಿಯವರ ನಾಯಕತ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಅನುಮೋದಿಸಲ್ಪಟ್ಟವು. Maheshwari, Neerja (1997). Economic Policy of Jawaharlal Nehru[Moraes 2007, p. 196.] ಸಮಾಜವಾದದ ಗುರಿಯನ್ನು ಸಾಧಿಸುವುದು ಅತ್ಯಂತ ಕಷ್ಟಕರವಾಗಿತ್ತು. ನೆಹರು ಅವರನ್ನು ಬಲಪಂಥೀಯ ಕಾಂಗ್ರೆಸ್ ಸದಸ್ಯರಾದ ವಲ್ಲಭಭಾಯಿ ಪಟೇಲ್, ರಾಜೇಂದ್ರ ಪ್ರಸಾದ್ ಮತ್ತು ಸಿ. ರಾಜಗೋಪಾಲಾಚಾರಿ ಅವರು ವಿರೋಧಿಸಿದರು. ನೆಹರು ಅವರಿಗೆ ಎಡಪಂಥೀಯ ಕಾಂಗ್ರೆಸ್ ಸದಸ್ಯರಾದ ಮೌಲಾನಾ ಆಜಾದ್ ಮತ್ತು ಸುಭಾಷ್ ಚಂದ್ರ ಬೋಸ್ ಅವರ ಬೆಂಬಲವಿತ್ತು. 1936 ರಲ್ಲಿ ಕಾಂಗ್ರೆಸ್ ಅಧ್ಯಕ್ಷತೆಯಿಂದ ಡಾ.ಪ್ರಸಾದರನ್ನು ಹೊರಗಿಡಲು ಈ ಮೂವರು ಸೇರಿಕೊಂಡರು. ನೆಹರೂ ಅವರ ಸ್ಥಾನದಲ್ಲಿ ಚುನಾಯಿತರಾದರು ಮತ್ತು ಎರಡು ವರ್ಷಗಳ ಕಾಲ (1936-37) ಅಧ್ಯಕ್ಷರಾದರು. ನಂತರ ಅವರ ಸಮಾಜವಾದಿ ಸಹೋದ್ಯೋಗಿಗಳಾದ ಬೋಸ್ (1938-39) ಮತ್ತು ಆಜಾದ್ (1940-46) ಅವರಿಂದ ಯಶಸ್ವಿಯಾದರು. ಭಾರತೀಯ ರಾಜಕೀಯದ ಮುಖ್ಯವಾಹಿನಿಯಿಂದ ಬೋಸರ ನಿರ್ಗಮನದ ನಂತರ (ಬ್ರಿಟಿಷರನ್ನು ಭಾರತದಿಂದ ಹೊರಗೆ ಓಡಿಸುವಲ್ಲಿ ಹಿಂಸಾಚಾರಕ್ಕೆ ನೀಡುವ ಬೆಂಬಲದಿಂದಾಗಿ ಬೋಸರು ಪ್ರತ್ಯೇಕವಾದರು,) ಸಮಾಜವಾದಿಗಳು ಮತ್ತು ಸಂಪ್ರದಾಯವಾದಿಗಳ ನಡುವಿನ ಅಧಿಕಾರದ ಹೋರಾಟ ಸಮತೋಲಿತವಾಗಿತ್ತು.ಆದರೆ, ಸರ್ದಾರ್ ಪಟೇಲ್ 1950 ರಲ್ಲಿ ನಿಧನರಾದರು, ಆಗ ನೆಹರೂ ಅವರು ಉಳಿದಿರುವ ಏಕೈಕ ರಾಷ್ಟ್ರೀಯ ನಾಯಕನಾಗಿದ್ದರು ಮತ್ತು ನೆಹರು ಅವರ ಹಲವು ಮೂಲಭೂತ ನೀತಿಗಳನ್ನು ಯಾರೂ ಅಡ್ಡಿಪಡಿಸದೆಯೇ ಇದ್ದುದರಿಂದ ನೆಹರೂಗೆ ಅವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು.ಭಾರತದ ಸಂಪ್ರದಾಯಶೀಲ ಬಲಪಂಥೀಯ ಕಾಂಗ್ರೆಸ್ (ಭಾರತದ ಮೇಲ್ವರ್ಗದ ಗಣ್ಯರು) ಅವರು ಸಮಾಜವಾದಿಗಳ ವಿರುದ್ಧ 1969 ರಲ್ಲಿ ನಡೆದ ದೊಡ್ಡ ಭಿನ್ನಾಭಿಪ್ರಾಯ ಕಾಂಗ್ರಸ್ಸನ್ನು ವಿಭಜಿಸಿತು. ಆಗ ನೆಹರುರ ಮಗಳು ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಪರಿಸ್ಥಿತಿಯಲ್ಲಿ ಅವರು ಭಾರತದ ಸಂವಿಧಾನದ 42 ನೇ ತಿದ್ದುಪಡಿಯಿಂದ (1976) ತನ್ನ ತಂದೆಯ ಕನಸನ್ನು ಪೂರೈಸಲು ಸಮರ್ಥರಾದರು, ಈ ಮೂಲಕ ಭಾರತವು ಅಧಿಕೃತವಾಗಿ "ಸಮಾಜವಾದಿ" "ಜಾತ್ಯತೀತ".ಎಂದು ಆಯಿತು. ಆ ನೀತಿಗೆ ಅನುಸರಿಸಿ ಭಾರತದ ಆರ್ಥಿಕ ಭದ್ರತೆಗೆ ಕಾರಣವಾದ ಬ್ಯಾಂಕ್‍ಗಳ ರಾಷ್ಟ್ರೀಕರಣ , ಜೀವವಿಮೆ ರಾಷ್ಟ್ರೀಕರಣ, ರಾಜಧನ ರದ್ದತಿ - ಬಡವರಿಗಾಗಿ 20 ಅಂಶದ ಕಾರ್ಯಕ್ರಮ ಇತ್ಯಾದಿಯನ್ನು ಜಾರಿಗೆ ತಂದರು.[Moraes 2007, p. 234-238.] "Secularism: Why Nehru dropped and Indira inserted the S-word in the Constitution". 2017-12-27. ಭಾರತದ ವಿದೇಶಾಂಗ ನೀತಿಯ ರೂವಾರಿ; 1938 ರಲ್ಲಿಯೇ ರಾಷ್ಟ್ರೀಯ ಯೋಜನಾ ಆಯೋಗ ರಚನೆ: ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯದರ್ಶಿಯಾಗಿ ನೆಹರೂ ಅವರ ಎರಡನೆಯ ಅವಧಿಯಲ್ಲಿ, ಅವರು ಭಾರತದ ವಿದೇಶಿ ನೀತಿ ಬಗ್ಗೆ ಕೆಲವು ನಿರ್ಣಯಗಳನ್ನು ಪ್ರಸ್ತಾಪಿಸಿದರು. ಆ ಕಾಲದ ನಂತರ, ಯಾವುದೇ ಭವಿಷ್ಯದ ಭಾರತೀಯ ರಾಷ್ಟ್ರದ ವಿದೇಶಾಂಗ ನೀತಿಯನ್ನು ರೂಪಿಸುವಲ್ಲಿ ಅವರಿಗೆ ಪೂರ್ಣ ಸ್ವಾತಂತ್ರ್ಯವನ್ನು (ಕಾರ್ಟೆ ಬ್ಲಾಂಚನ್ನು) ನೀಡಿದರು. ಅವರು ವಿಶ್ವದಾದ್ಯಂತ ಸರ್ಕಾರಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿದರು. ಪ್ರಪಂಚವು ಫ್ಯಾಸಿಸಮ್’ನ ಬೆದರಿಕೆಗೆ ಒಳಗಾದ ಸಮಯದಲ್ಲಿ ಅವರು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಕಡೆಗೆ ಭಾರತವನ್ನು ದೃಢವಾಗಿ ಇರಿಸಿದರು. ಭವಿಷ್ಯದ ಭಾರತದ ಆರ್ಥಿಕತೆಯನ್ನು ಯೋಜಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಇಂಥ ನೀತಿಗಳನ್ನು ರಚಿಸುವಲ್ಲಿ ಸಹಾಯ ಮಾಡಲು ಅವರು 1938 ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ನೇಮಿಸಿದರು. ಆದಾಗ್ಯೂ, ನೆಹರು ಮತ್ತು ಅವರ ಸಹೋದ್ಯೋಗಿಗಳು ರಚಿಸಿದ ಅನೇಕ ಯೋಜನೆಗಳು 1947 ರಲ್ಲಿ ಭಾರತದ ಅನಿರೀಕ್ಷಿತ ವಿಭಜನೆಯಾದಾಗ ಕೃತಿಗೆ ಬರಲಾರದೆ ಅಪೂರ್ಣವಾದವು.3rd Five Year Plan (Chapter 1)". Government of India. Archived from the original on 26 March 2012. Retrieved 16 June 2012. Students' Britannica India. 2000 1930 ರಲ್ಲಿ ಚುನಾವಣಾ ರಾಜಕೀಯ thumb|ಜವಾಹರಲಾಲ್ ನೆಹರು ಮತ್ತು ರವೀಂದ್ರನಾಥ ಠಾಗೋರ್ ಮಾರ್ಕ್ಸ್‍ವಾದದ ಬಗೆಗೆ ಭ್ರಮನಿರಸನ:1936 ರಲ್ಲಿ ನೆಹರು ಅವರು ಯೂರೋಪಿಗೆ ಭೇಟಿ ನೀಡಿದಾಗ, ತಮ್ಮ ರಾಜಕೀಯ ಮತ್ತು ಆರ್ಥಿಕ ಚಿಂತನೆಯು ನಿಂತ ನೀರಿನಂತಿದೆ ಎಂದು ಅರಿವಾಯಿತು. ಮಾರ್ಕ್ಸಿಸಮ್ ಮತ್ತು ಅವರ ಸಮಾಜವಾದಿ ಚಿಂತನೆಯ ಬಗೆಗಿನ ಅವರ ನಿಜವಾದ ಆಸಕ್ತಿ ಆ ಪ್ರವಾಸದಿಂದ ಉದ್ಭವಿಸಿತು. ಜೈಲಿನಲ್ಲಿ ಅವರು ನಂತರದ ದಿನಗಳಲ್ಲಿ ಕಳೆದ ದಿನಗಳು, ಅವರಿಗೆ ಮಾರ್ಕ್ಸ್ವಾದವನ್ನು ಹೆಚ್ಚು ಆಳವಾಗಿ ಅಧ್ಯಯನ ಮಾಡಲು ನೆರವಾದವು. ಮಾರ್ಕ್ಸ್ ವಾದದ ಚಿಂತನೆಗಳಲ್ಲಿ ಆಸಕ್ತಿ ಹೊಂದಿದರೂ, ಅದರ ಕೆಲವು ಕಾರ್ಯವಿಧಾನಗಳನ್ನು ಅನುಸರಿಸಲು ಹಿಮ್ಮೆಟ್ಟುವಂತಾಯಿತು., ಅವರು ಸ್ವತಃ ಕಾರ್ಲ್ ಮಾರ್ಕ್ಸ ಬರಹಗಳನ್ನು ಪೂಜ್ಯಗ್ರಂಥದಂತೆ ಸ್ವೀಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದರು. ಅಂದಿನಿಂದಲೂ, ಅವರ ಆರ್ಥಿಕ ಚಿಂತನೆಯ ಗಜಕಡ್ಡಿಯು ಭಾರತೀಯ ಪರಿಸ್ಥಿತಿಗಳಿಗೆ ಅಗತ್ಯವಿದ್ದಲ್ಲಿ ಹೊಂದುವಂತೆ ಮಾತ್ರಾ ಮಾರ್ಕ್ಸ್‍ವಾದಿಯಾಗಿದ್ದು, ಆ ವಾದ ಅಲ್ಲಿಯೇ ಉಳಿಯಿತು. 1935 ರ ಅಧಿಯಮದಂತೆ ಪ್ರಾಂತೀಯ ಚುನಾಯಿತ ಸರ್ಕಾರಗಳ ರಚನೆ:ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿತು ಮತ್ತು ಒಕ್ಕೂಟದ ಯೋಜನೆಯಡಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನೆಹರೂರವರ ಆಂದೋಲನದ ಬಗೆಗೆ ಗಾಂಧಿಯವರು ಅಸಮ್ಮತಿ ವ್ಯಕ್ತಪಡಿಸಲಿಲ್ಲ, ಆದರೆ ಅವರು ರಾಜೀನಾಮೆ ನೀಡಿದ್ದರಿಂದ, ಭಾರತೀಯರೊಂದಿಗಿನ ಅವರ ಜನಪ್ರಿಯತೆಯು ಚುನಾವಣೆಯಲ್ಲಿ ಪಕ್ಷದಲ್ಲಿ ತಮ್ಮ ಸದಸ್ಯತ್ವದಿಂದ ಪ್ರಭಾವಿಸುವುದನ್ನು ನಿಲ್ಲಿಸಿತು. ಪ್ರಾಂತೀಯ ಸ್ವಾಯತ್ತತೆ (1935 ರ ಭಾರತ ಸರ್ಕಾರದ ಅಧಿನಿಯಮದಡಿಯಲ್ಲಿ) ಪ್ರಾಂತ್ಯದ ಸ್ವಾಯತ್ತತೆಯನ್ನು ಜಾರಿಗೊಳಿಸಿದ ನಂತರ ಚುನಾವಣೆಗಳು ನೆಡೆದು ಅದರಲ್ಲಿ ಬಹುಪಾಲು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ, ನೆಹರುರ ಜನಪ್ರಿಯತೆ ಮತ್ತು ಅಧಿಕಾರವು ಸಾಟಿಯಿಲ್ಲದವು ಎಮದು ರುಜುವಾತಾಯಿತು. ಮುಹಮ್ಮದ್ ಅಲಿ ಜಿನ್ನಾರವರ ಅಡಿಯಲ್ಲಿ ಮುಸ್ಲಿಮ್ ಲೀಗ್ (ಜಿನ್ನಾ- ಪಾಕಿಸ್ತಾನದ ಸೃಷ್ಟಿಕರ್ತರಾಗಲು ಕಾರಣರು) ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಕಂಡಿತು. ಇದರಿಂದ ಭಾರತದಲ್ಲಿ ಮುಖ್ಯವಾಗಿ ಎರಡು ಪಕ್ಷಗಳು ಮಾತ್ರಾ ಇವೆ; ಅವು ಬ್ರಿಟಿಷ್ ರಾಜ್ ಮತ್ತು ಕಾಂಗ್ರೆಸ್ ಎಂದು ನೆಹರೂ ಘೋಷಿಸಿದರು. ಭಾರತೀಯ ರಾಜಕೀಯದಲ್ಲಿ ಮುಸ್ಲಿಂ ಲೀಗ್ ಮೂರನೆಯ ಮತ್ತು "ಸಮಾನ ಪಾಲುದಾರ" ಎಂಬ ಜಿನ್ನಾ ಹೇಳಿಕೆಗಳು ವ್ಯಾಪಕವಾಗಿ ತಿರಸ್ಕರಿಸಲ್ಪಟ್ಟವು. ಮೌಲಾನಾ ಆಜಾದರನ್ನು ಭಾರತೀಯ ಮುಸ್ಲಿಮರ ಮುಂಚೂಣಿ ಮುಖಂಡನಾಗಿ ನೇಮಕ ಮಾಡಲು ನೆಹರು ಆಶಿಸಿದರು, ಆದರೆ ಇದನ್ನು ಗಾಂಧಿಯವರು ಅಲಕ್ಷಿಸಿದರು, ಅವರು ಜಿನ್ನಾರನ್ನು ಭಾರತೀಯ ಮುಸ್ಲಿಮರ ಧ್ವನಿಯೆಂಬುದನ್ನು ಮುಂದುವರಿಸಿದರು. ವಿಶ್ವ ಸಮರ- II ಮತ್ತು ಕ್ವಿಟ್ ಇಂಡಿಯಾ ಚಳುವಳಿ 2 ನೇ ವಿಶ್ವ ಯುದ್ಧ ಪ್ರಾರಂಭವಾದಾಗ, ವೈಸ್ರಾಯ್ ಲಿನ್ಲಿತ್ಗೊವ್ ಅವರು ಏಕಪಕ್ಷೀಯವಾಗಿ ಭಾರತವು ಬ್ರಿಟನ್’ನಿನ ಪಕ್ಷದಲ್ಲಿ ಯುದ್ಧಮಾಡುವುದು ಎಂದರು. ಅವರು ಚುನಾಯಿತ ಭಾರತೀಯ ಪ್ರತಿನಿಧಿಗಳನ್ನು ಸಂಪರ್ಕಿಸದೆ ನಿರ್ಣಯ ತೆಗೆದುಕೊಂಡರು. ನೆಹರು ಚೀನಾಕ್ಕೆ ನೀಡಿದ ಭೇಟಿಯನ್ನು ಮೊಟಕುಗೊಲಿಸಿ ಬಾರತಕ್ಕೆ ಹಿಂದಿರುಗಿದರು. ನೆಹರೂ, "ಪ್ರಜಾಪ್ರಭುತ್ವ ಮತ್ತು ಫ್ಯಾಸಿಸಮ್ ನಡುವಿನ ಸಂಘರ್ಷದಲ್ಲಿ, ನಮ್ಮ ಸಹಾನುಭೂತಿಗಳು ಅನಿವಾರ್ಯವಾಗಿ ಪ್ರಜಾಪ್ರಭುತ್ವದ ಬದಿಯಲ್ಲಿರಬೇಕು .... ಭಾರತವು ಈ ವಿಷಯದಲ್ಲಿ ತನ್ನ ಸಂಪೂರ್ಣ ಪಾತ್ರವನ್ನು ತೊಡಗಿಸಲು ಮತ್ತು ತನ್ನ ಎಲ್ಲಾ ಸಂಪನ್ಮೂಲಗಳನ್ನು ಅದಕ್ಕೆ ಹಾಕಲು ನಾನು ಇಷ್ಟಪಡುತ್ತೇನೆ, ಅದು ಹೊಸ ವ್ಯವಸ್ಥೆಗೆ ದಾರಿಯಾಗಬೇಕು." ಎಂದು ಘೋಷಿಸಿದರು.[Experts, Disha (2017-08-19). CSAT Paper 1 General Studies 101 Speed Tests with 10 Practice Sets - 3rd Edition.] ಹೆಚ್ಚಿನ ವಿವೇಚನೆಯ ನಂತರ, ನೆಹರೂ ನೇತೃತ್ವದ ಕಾಂಗ್ರೆಸ್ ಪಕ್ಷವು ಬ್ರಿಟಿಷ್ ಸರ್ಕಾರಕ್ಕೆ ಸಹಕಾರ ನೀಡಲಿದೆ ಆದರೆ ಕೆಲವು ಷರತ್ತುಗಳೊಂದಿಗೆ ಎಂದು ತಿಳಿಸಿತು. ಮೊದಲನೆಯದಾಗಿ, ಯುದ್ಧದ ನಂತರ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡುವ ಭರವಸೆಯನ್ನು ಬ್ರಿಟನ್ ನೀಡಬೇಕು ಮತ್ತು ಹೊಸ ಸಂವಿಧಾನವನ್ನು ರಚಿಸುವ ಒಂದು ಸಂವಿಧಾನ ಸಭೆಯನ್ನು ರಚಿಸಲು ಚುನಾವಣೆಗೆ ಅನುಮತಿಸಬೇಕು; ಎರಡನೆಯದು, ಭಾರತೀಯ ಸೇನಾಪಡೆಯು ಬ್ರಿಟಿಷ್ ಕಮಾಂಡರ್-ಇನ್-ಚೀಫ್’ನ ಅಡಿಯಲ್ಲಿಯೇ ಇದ್ದರೂ, ಭಾರತೀಯರನ್ನು ತಕ್ಷಣವೇ ಕೇಂದ್ರ ಸರ್ಕಾರದಲ್ಲಿ ಸೇರಿಸಿಕೊಳ್ಳಬೇಕು; ಮತ್ತು ಅಧಿಕಾರ ಮತ್ತು ಜವಾಬ್ದಾರಿಯನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡಬೇಕು. ನೆಹರು ಅವರು ಲೆನ್ಲಿತ್ಗೋವ ಅವರಿಗೆ ಬೇಡಿಕೆಗಳನ್ನು ಮಂಡಿಸಿದಾಗ, ಅವರು ಅದನ್ನುನ್ನು ತಿರಸ್ಕರಿಸುವ ಆಯ್ಕೆ ಮಾಡಿದರು. ಇದರಿಂದ ಪರಿಸ್ಥತಿ ಕಗ್ಗಂಟು ಮಟ್ಟಕ್ಕೆ ತಲುಪಿತು. "ಅದೇ ಹಳೆಯ ಆಟವನ್ನು ಪುನಃ ಆಡಲಾಗುತ್ತದೆ", ಎಂದು ನೆಹರು ಗಾಂಧಿಗೆ ಕಠೋರವಾಗಿ ಬರೆದಿದ್ದಾರೆ, "ಹಿನ್ನೆಲೆ ಒಂದೇ ಆಗಿರುತ್ತದೆ, ವಿವಿಧ ಉಪಭಾಷೆಗಳು ಒಂದೇ ಆಗಿರುತ್ತವೆ ಮತ್ತು ನಟರು (ಪಾತ್ರಧಾರಿಗಳು) ಒಂದೇ ಆಗಿರುತ್ತವೆ ಮತ್ತು ಫಲಿತಾಂಶಗಳು ಒಂದೇ ಆಗಿರಬೇಕು". Bandyopadhyay, Sekhara (2004). From Plassey to Partition: A History of Modern India. India: Orient Longman. p. 412. 23 ಅಕ್ಟೋಬರ್ 1939 ರಂದು, ಕಾಂಗ್ರೆಸ್ ವೈಸ್ರಾಯ್ ಅವರ ವರ್ತನೆಗಳನ್ನು ಖಂಡಿಸಿತು ಮತ್ತು ಪ್ರತಿಭಟನೆಯಾಗಿ ರಾಜೀನಾಮೆ ನೀಡಲು ವಿವಿಧ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸಚಿವಾಲಯಗಳನ್ನು ಆಹ್ವಾನಿಸಿತು (ಅನೇಕ ಪ್ರಾಂತ್ಯಗಳಲ್ಲಿ ಕಾಂಗ್ರಸ್ಸಿನ ಚುನಾಯಿತ ಸರ್ಕಾರ ಇತ್ತು). ಈ ನಿರ್ಣಾಯಕ ಘೋಷಣೆಗೆ ಮುಂಚಿತವಾಗಿ, ಜಿನ್ನಾ ಮತ್ತು ಮುಸ್ಲಿಂ ಲೀಗ್’ನ್ನು ಪ್ರತಿಭಟನೆಯಲ್ಲಿ ಸೇರಲು ನೆಹರೂ ಆಗ್ರಹಿಸಿದರು ಆದರೆ ಅದಕ್ಕೆ ಅವರು (ಜಿನ್ನಾ ಮತ್ತು ಲೀಗ್) ನಿರಾಕರಿಸಿತು. Moraes, Frank R. "Jawaharlal Nehru". Encyclopædia Britannica. Retrieved 2 October 2018. ಪಾಕಿಸ್ತಾನ ನಿರ್ಣಯ ಮಾರ್ಚ್ 1940 ರಲ್ಲಿ ಜಿನ್ನಾ "ಪಾಕಿಸ್ತಾನದ ನಿರ್ಣಯ" ಎಂದು ಕರೆಯಲ್ಪಡುವ ನಿರ್ಣಯವನ್ನು ಜಾರಿಗೆ ತಂದರು, ‘ರಾಷ್ಟ್ರ’ ದ ಯಾವುದೇ ವ್ಯಾಖ್ಯಾನದ ಪ್ರಕಾರ ಮುಸ್ಲಿಮರು ಒಂದು ರಾಷ್ಟ್ರ, ಮತ್ತು ಅವರು ತಮ್ಮ ನಾಡನ್ನು ಹೊಂದಲೇಬೇಕು,, ಹಾಗೆಯೇ ಅವರ ಪ್ರದೇಶ ಮತ್ತು ಅವರ ರಾಜ್ಯವನ್ನು ಹೊಂದಿರಬೇಕು" ಎಂದು ಘೋಷಿಸಿದರು. ಈ ಮುಸ್ಲಿಮರ ರಾಜ್ಯವನ್ನು ಪಾಕಿಸ್ತಾನವೆಂದು ಕರೆಯಲಾಗುತ್ತಿತ್ತು, ಇದರ ಅರ್ಥ "ಶುದ್ಧ ಭೂಮಿ" ಎಂದರು. ನೆಹರು ಕೋಪದಿಂದ ಇವು "ಎಲ್ಲಾ ಹಳೆಯ ಸಮಸ್ಯೆಗಳು ... ಲಾಹೋರಿನಲ್ಲಿ ಮುಸ್ಲಿಮ್ ಲೀಗ್ ಮುಖಂಡರು ತೆಗೆದುಕೊಂಡ ಇತ್ತೀಚಿನ ನಿಲುವಿನಲ್ಲಿ ಅವಿಭಾಜ್ಯತೆಗೆ ಒಳಗಾಗಿದ್ದಾರೆ" ಎಂದು ಘೋಷಿಸಿದರು. ಲಿನ್ಲಿತ್ಗೋ ನೆಹರೂಗೆ 8 ಅಕ್ಟೋಬರ್ 1940 ರಂದು ಒಂದು ಪ್ರಸ್ತಾವನೆಯನ್ನು ನೀಡಿದರು. ಬ್ರಿಟಿಷ್ ಸರ್ಕಾರದ ಉದ್ದೇಶವು ಭಾರತಕ್ಕೆ "ಡೊಮಿನಿಯನ್ ಸ್ಥಾನಮಾನ"$ ನೀಡುವುವೆಂದು ಅದು ಹೇಳಿದೆ. ಆದರೆ, ಇದು ಒಂದು ದಿನಾಂಕ ಅಥವಾ ಸಾಧನೆಯ ವಿಧಾನವನ್ನು ಉಲ್ಲೇಖಿಸಿಲ್ಲ. ಆದರೆ ಜಿನ್ನಾಗೆ ಮಾತ್ರ ಹೆಚ್ಚು ನಿಖರವಾದದ್ದು ಸಿಕ್ಕಿತ್ತು (ವಿಭಜನೆಯ ಭರವಸೆ). ವೈಸ್‍ರಾಯ್ ಲಿನ್ಲಿತ್ಗೋ ಹೇಳಿದರು "ಬ್ರಿಟಿಷರು ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದನ್ನು ಪರಿಗಣಿಸುವುದಿಲ್ಲ, ಅದರ ಅಧಿಕಾರವನ್ನು" ಭಾರತದ ರಾಷ್ಟ್ರೀಯ ಜೀವನದಲ್ಲಿ ದೊಡ್ಡ ಮತ್ತು ಶಕ್ತಿಯುತ ಅಂಶಗಳಿಂದ ನಿರಾಕರಿಸಲಾಗಿದೆ ". (ಕಾಂಗ್ರೆಸ್-ಪ್ರಾಬಲ್ಯದ ರಾಷ್ಟ್ರೀಯ ಸರ್ಕಾರಕ್ಕೆ ಅಧಿಕಾರವನ್ನು ವರ್ಗಾವಣೆ ಮಾಡುವುದಿಲ್ಲ- ಕಾರಣ ಒಂದು ಶಕ್ತಿಯುತ ಅಂಶ ಅಡ್ಡ ಬಂದಿದೆ- ಅದು ಜಿನ್ನಾ ಮತ್ತು ಲೀಗ್- ಲೀಗ್ ಬ್ರಿಟಿಷರಿಂದ ಭರವಸೆ ಪಡೆದಿದೆ ಎಂದು ಅರ್ಥ)[80] [81] ಅಕ್ಟೋಬರ್ 1940 ರಲ್ಲಿ, ಗಾಂಧಿಯವರು ಮತ್ತು ನೆಹರೂ ಅವರು ಎರಡನೇ ಮಹಾ ಯುದ್ಧಕ್ಕೆ ಬ್ರಿಟನ್ನನ್ನು ಬೆಂಬಲಿಸುವ ತಮ್ಮ ನಿಲುವನ್ನು ಬಿಟ್ಟುಬಿಟ್ಟರು, ಒಂದು ಸೀಮಿತ ನಾಗರಿಕ ಅಸಹಕಾರ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದರು, ಇದರಲ್ಲಿ ಭಾರತದ ಸ್ವಾತಂತ್ರ್ಯದ ಪ್ರಮುಖ ವಕೀಲರು ಒಬ್ಬೊಬ್ಬರಾಗಿ ಭಾಗವಹಿಸಲು ಆಯ್ಕೆಯಾದರು. ನೆಹರುರನ್ನು ಬಂಧಿಸಿ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೈಲಿನಲ್ಲಿ ಒಂದು ವರ್ಷಕ್ಕಿಂತ ಸ್ವಲ್ಪ ಹೆಚ್ಚು ದಿನ ಕಳೆದ ನಂತರ, ಹವಾಯಿಯಲ್ಲಿನ ಪರ್ಲ್ ಹಾರ್ಬರ್ ಬಾಂಬ್ ದಾಳಿಯ ಮೂರು ದಿನಗಳ ಮುಂಚೆ, ಇತರ ಕಾಂಗ್ರೆಸ್ ಕೈದಿಗಳ ಜೊತೆಗೆ ಅವರನ್ನು ಬಿಡುಗಡೆ ಮಾಡಲಾಯಿತು. Students' Britannica India. 2000. ಪ್ರಧಾನಿ ಪಂಡಿತ ಜವಾಹರ್ ಲಾಲ್ ನೆಹರು (PM Jawahar Lal Nehru) ಅವರ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಯಾಯಿತು(POK). ನೆಹರು ಅವರ ಕೈಗೊಂಡು ಎರಡು ತಪ್ಪು ನಿರ್ಧಾರಗಳಿಂದ ಕಾಶ್ಮೀರವು (Jammu and Kashmir) ದಶಕಗಳಿಂದ ಬಳಲುವಂತಾಗಿದೆ. ಆದರೆ ಎಂದೆಂದಿಗೂ ನಮ್ಮದೇ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಬುಧವಾರ ಪ್ರತಿಪಾದಿಸಿದರು. 2023ರ ಜಮ್ಮು ಮತ್ತು ಕಾಶ್ಮೀರ ಮೀಸಲು(ತಿದ್ದುಪಡಿ) ವಿಧೇಯಕ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ(ತಿದ್ದುಪಡಿ) ವಿಧೇಯಕಗಳನ್ನು ಮಂಡಿಸಿ, ಮಾತನಾಡಿದರು(Parliament Session). ($"ಡೊಮಿನಿಯನ್ ಸ್ಥಾನಮಾನ" - ಎಂದರೆ ಕೇಂದ್ರ ಸರ್ಕಾರಕ್ಕೆ ರಾಜ್ಯಗಳನ್ನು ಶತ್ರುಗಳಿಂದ ರಕ್ಷಣೆ ಮಾಡುವ ಅಧಿಕಾರ ಮತ್ತು ಗೌರ್ನರುಗಳನ್ನು/ ರಾಜ್ಯದ ಅಧ್ಯಕ್ಷರನ್ನು ನೇಮಿಸುವ ಆಧಿಕಾರ ಮಾತ್ರಾ ಇರುತ್ತದೆ ಉಳಿದ ಎಲ್ಲಾ ವಿಷಯದಲ್ಲಿ ರಾಜ್ಯಗಳು ಸ್ವತಂತ್ರವಾಗಿರುತ್ತವೆ; ರಾಜ್ಯಗಳ ಒಳಾಡತದಲ್ಲಿ ಕೇಂದ್ರಸ್ಕಾರ ಪ್ರವೇಶಿಸುವಂತಿಲ್ಲ. ಈಗ ಇಂಗ್ಲೆಡ್ ಮತ್ತು ಆಸ್ಟ್ರೇಲಿಯಾ ಇದ್ದಂತೆ. ಬ್ರಿಟಿಷ್ ಸರ್ಕಾರ ರಾಷ್ಟ್ರಾಧ್ಯಕ್ಷರನ್ನು ನೇಮಿಸುತ್ತದೆ. ಹಾಗೆ ಭಾರತದ ೫೬೦ ಸಂಸ್ಥಾನ-ರಾಜ್ಯಗಳು ಸ್ವತಂತ್ರವಾಗಿರುವ ಡೊಮಿನಿಯನ್ ಸರ್ಕಾರನೀಡುವ ಯೋಜನೆ ಬ್ರಿಟಿಷರದಾಗಿತ್ತು. ಇದಕ್ಕೆ ಅನೇಕ ಸದಸ್ಯರು ಬೆಂಬಲಿಸಿದರೂ, ಇದನ್ನು ನೆಹರು ವಿರೋಧಿಸಿ ಎಲ್ಲಾ ರಾಜ್ಯಗಳೂ ವಿಲೀನವಾದ ಬಲಿಷ್ಠ ಕೇಂದ್ರವುಳ್ಳ ಸ್ವತಂತ್ರಭಾರತ ರಚನೆಗೆ ಒತ್ತಾಯಿಸಿದರು.) ಭಾರತದ ಮೇಲೆ ಜಪಾನಿನ ಆಕ್ರಮಣ thumb|1946 ರಲ್ಲಿ ಸಿಮ್ಲಾದಲ್ಲಿ ನೆಹರು ಮತ್ತು ಜಿನ್ನಾ ಒಟ್ಟಾಗಿ ನಡೆದ ಚಿತ್ರ 1942 ರ ವಸಂತ ಋತುವಿನಲ್ಲಿ ಜಪಾನ್ ಬರ್ಮಾದ ಮೂಲಕ (ಈಗ ಮಯನ್ಮಾರ್) ಭಾರತದ ಮೇಲೆ ಆಕ್ರಮಣವನ್ನು ನಡೆಸಿದಾಗ, ಬ್ರಿಟಿಷ್ ಸರ್ಕಾರವು ಈ ಹೊಸ ಮಿಲಿಟರಿ ಬೆದರಿಕೆ ಎದುರಿಸಬೇಕಾಯಿತು, ಅದು ನೆಹರೂ ಮೊದಲಿಗೆ ಬಯಸಿದಂತೆ, ಭಾರತಕ್ಕೆ ಕೆಲವು ಪ್ರಸ್ತಾಪಗಳನ್ನು ಮಾಡಲು ನಿರ್ಧರಿಸಿದರು. ಪ್ರಧಾನ ಮಂತ್ರಿ ವಿನ್ಸ್ಟನ್ ಚರ್ಚಿಲ್ ಯುದ್ಧಸಮಯದ ಕ್ಯಾಬಿನೆಟ್’ನ ಸದಸ್ಯರಾದ ಸರ್ ಸ್ಟಾಫರ್ಡ್ ಕ್ರಿಪ್ಸ್ ರನ್ನು ಭಾರತಕ್ಕೆ ಕಳಿಸಿದರು. ಅವರು ನೆಹರುರನ್ನು ರಾಜಕೀಯವಾಗಿ ನಿಕಟವಾಗಿ ತಿಳಿದಿದ್ದನು ಮತ್ತು ಸಾಂವಿಧಾನಿಕ ಸಮಸ್ಯೆಯ ಪರಿಹಾರಕ್ಕಾಗಿ ಪ್ರಸ್ತಾಪಿಸಲು ಜಿನ್ನಾರನ್ನೂ ತಿಳಿದಿದ್ದನು. ಅವರು ಆಗಮಿಸಿದ ತಕ್ಷಣವೇ ಅವರು ಕಲ್ಪಿಸಿಕೊಂಡಿದ್ದಕ್ಕಿಂತಲೂ ಭಾರತ ಹೆಚ್ಚು ಆಳವಾಗಿ ವಿಭಜನೆಯಾಗಿದೆ ಎಂದು ಕಂಡುಹಿಡಿದನು. ನೆಹರೂ, ರಾಜಿಗಾಗಿ ಉತ್ಸುಕನಾಗಿದ್ದರು ಮತ್ತು ರಾಜಿಯಾಗಬಹುದೆಂದು ಭರವಸೆ ಹೊಂದಿದ್ದರು.,. ಗಾಂಧಿಯವರಿಗೆ ರಾಜಿಯ ಭರವಸೆಯಿರಲಿಲ್ಲ. ಜಿನ್ನಾ ಕಾಂಗ್ರೆಸ್ ವಿರುದ್ಧ ವಿರೋಧವನ್ನು ಮುಂದುವರಿಸಿದರು. "ಪಾಕಿಸ್ತಾನ ನಮ್ಮ ಏಕೈಕ ಬೇಡಿಕೆಯಾಗಿದೆ, ಮತ್ತು ಖಂಡಿತ ದೈವಸಾಕ್ಷಿಯಾಗಿ ಅದನ್ನು ನಾವು ಪಡೆಯುತ್ತೇವೆ" ಎಂದು ಜಿನ್ನಾ ಹೇಳಿದುದನ್ನು ಮುಸ್ಲಿಂ ಲೀಗ್ ಪತ್ರಿಕೆ "ಡಾನ್" ಘೋಷಿಸಿತು. (Jinnah had continued opposing the Congress. "Pakistan is our only demand, and by God we will have it.", declared the Muslim League newspaper "Dawn".[86]) The 100 Most Influential World Leaders of All Time ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಕಡಿಮೆಯದನ್ನು ಏನನ್ನೂ ಗಾಂಧಿಯವರು ಸ್ವೀಕರಿಸುವುದಿಲ್ಲ ಎಂದಾಗ ಕ್ರಿಪ್ಸ್ನ ಮಿಷನ್ ವಿಫಲವಾಯಿತು. ಕ್ರಿಪ್ಸ್‍ರೊಂದಿಗೆ ಸಹಕರಿಸಲು ಗಾಧೀಜಿಯವರ ನಿರಾಕರಣೆಯಿಂದ ನೆಹರೂ ಮತ್ತು ಗಾಂಧಿಯವರ ನಡುವಿನ ಹಳಸಿದ ಸಂಬಂಧವು ತಂಪುಗೊಂಡಿತು, ಆದರೆ ಇಬ್ಬರೂ ನಂತರ ರಾಜಿ ಮಾಡಿಕೊಂಡರು. 15 ಜನವರಿ 1941 ರಂದು, ಗಾಂಧಿಯವರು ಹೀಗೆ ಹೇಳಿದರು: ‘ಕೆಲವರು ಜವಾಹರಲಾಲ್ ಮತ್ತು ನಾನು ಪ್ರತ್ಯೇಕಗೊಂಡಿದ್ದೇವೆ ಎಂದು ಹೇಳುತ್ತಾರೆ. ನಮ್ಮನ್ನು ಬೇರ್ಪಡಿಸಲು ಅಭಿಪ್ರಾಯದ ಬೇಧಕ್ಕಿಂತ ಹೆಚ್ಚು ದೊಡ್ಡದು ಅಗತ್ಯವಿರುತ್ತದೆ. ನಾವು ಸಹೋದ್ಯೋಗಿಗಳಾಗಿದ್ದ ಸಮಯದಿಂದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ ಮತ್ತು ಇನ್ನೂ ಕೆಲವು ವರ್ಷಗಳಿಂದ ನಾನು ಹೇಳುತ್ತಿದ್ದೇನೆ ಮತ್ತು ಈಗ ಮತ್ತೆ ಹೇಳುವುದೇನೆಂದರೆ ರಾಜಾಜಿಯಲ್ಲ ಆದರೆ ಜವಾಹರಲಾಲ್ ನನ್ನ ಉತ್ತರಾಧಿಕಾರಿಯಾಗುತ್ತಾರೆ. [87]Cripps, Nehru and Gandhi ಭಾರತವನ್ನು ಬಿಟ್ಟು ಹೋಗಲು (ಕ್ವಿಟ್ ಇಂಡಿಯಾ) ಬ್ರಿಟಿಷರಿಗೆ ಗಾಂಧಿಯವರು ಕರೆ ನೀಡಿದರು; ನೆಹರು, ಮಿತ್ರಪಕ್ಷದ (ಬ್ರಿಟಿಷರಿಗೆ) ಯುದ್ಧದ ಹೋರಾಟಕ್ಕೆ ಮುಜುಗರಕ್ಕೊಳಪಡಿಸಲು ಇಷ್ಟವಾಗದಿದ್ದರೂ, ಗಾಂಧಿಯವರ ಜೊತೆ ಸೇರದೆ ಬೇರೆ ಯಾವುದೇ ಪರ್ಯಾಯವಿಲ್ಲವಾಯಿತು. ಆಗಸ್ಟ್ 8, 1942 ರಂದು ಬಾಂಬೆ (ಈಗ ಮುಂಬೈ) ಕಾಂಗ್ರೆಸ್ ಪಕ್ಷವು “ಕ್ವಿಟ್ ಇಂಡಿಯಾ- ಭಾರತ ಬಿಟ್ಟು ತೊಲಗಿ” ನಿರ್ಣಯವನ್ನು ಅಂಗೀಕರಿಸಿತು. ಅದನ್ನು ಅನುಸರಿಸಿ, ಗಾಂಧಿ ಮತ್ತು ನೆಹರೂ ಸೇರಿದಂತೆ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಬಂಧಿಸಲಾಯಿತು. ಇದು ನೆಹರೂ ಅವರ ಒಂಭತ್ತನೇ ಮತ್ತು ಕೊನೆಯ ಬಂಧನ. ನೆಹರು ಅದರಿಂದ - 15 ಜೂನ್ 1945 ರಂದು ಹೊರಬಂದರು. ಎಲ್ಲಾ ಕಾಂಗ್ರೆಸ್ ನಾಯಕತ್ವ ಜೈಲಿನಲ್ಲಿದ್ದ ಈ ಅವಧಿಯಲ್ಲಿ, ಜಿನ್ನಾರ ಮುಸ್ಲಿಂ ಲೀಗ್ ಬಲಪಡೆದು ಬೆಳೆಯಿತು. ಏಪ್ರಿಲ್ 1943 ರಲ್ಲಿ, ಮುಸ್ಲಿಂ ಲೀಗ್ ಚುನಾವಣೆಯಲ್ಲಿ ಬಂಗಾಳ ಸರ್ಕಾರಗಳನ್ನು ವಶಪಡಿಸಿಕೊಂಡಿತು ಮತ್ತು ಒಂದು ತಿಂಗಳ ನಂತರ, ನಾರ್ತ್ ವೆಸ್ಟ್ ಫ್ರಾಂಟೀಯರ್ ಪ್ರಾಂತವನ್ನು ಅದು ಆಕ್ರಮಿಸಿತು. ಈ ಪ್ರಾಂತಗಳಲ್ಲಿ ಯಾವಾಗಲೂ ಹಿಂದೆ ಲೀಗ್ ಬಹುಮತವನ್ನು ಹೊಂದಿರಲಿಲ್ಲ - ಕಾಂಗ್ರೆಸ್ ಸದಸ್ಯರ ಬಂಧನದಿಂದ ಮಾತ್ರಾ ಇದು ಸಾಧ್ಯವಾಯಿತು. ಜಿನ್ನಾ ನಿಯಂತ್ರಣದಡಿಯಲ್ಲಿ ಪಂಜಾಬ್ ಹೊರತುಪಡಿಸಿ ಎಲ್ಲ ಮುಸ್ಲಿಮ್ ಪ್ರಾಬಲ್ಯದ ಪ್ರಾಂತ್ಯಗಳೊಂದಿಗೆ, ಪ್ರತ್ಯೇಕ ಮುಸ್ಲಿಂ ರಾಜ್ಯದ ಕೃತಕ ಪರಿಕಲ್ಪನೆಯು ಒಂದು ವಾಸ್ತವವಾಗಿ (ರಿಯಾಲಿಟಿ) ಆಗಿ ಮಾರ್ಪಟ್ಟಿತು. ಆದಾಗ್ಯೂ, 1944 ರ ಹೊತ್ತಿಗೆ, ಜಿನ್ನಾ ಅವರ ಶಕ್ತಿ ಮತ್ತು ಘನತೆಯು ಕ್ಷೀಣಿಸುತ್ತಿತ್ತು. ಕಾರಾಗೃಹದಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಸಾಮಾನ್ಯ ಸಹಾನುಭೂತಿಯು ಮುಸ್ಲಿಮರಲ್ಲಿ ಬೆಳೆಯುತ್ತಿತ್ತು ಮತ್ತು ಪ್ರಾಂತ್ಯದ ಮುಸ್ಲಿಮ್ ಲೀಗ್ ಸರಕಾರದ ಹೆಗಲ ಮೇಲೆ ಎರಡು ಮಿಲಿಯನ್ ಜನರ ಸಾವಿನ 1943-44ರ ದುರ್ಘಟನೆಯಲ್ಲಿ 20 ಲಕ್ಷ ಜನ ಸಾವನ್ನಪ್ಪಿದರು. ಹಿಂದೂ ಮುಸ್ಲಿಮ್ ದಂಗೆಯಲ್ಲಿ ಸತ್ತವರ ಜೊತೆ - ಅದರಲ್ಲಿ ಬಂಗಾಳ ಕ್ಷಾಮದ ಮೇಲೆ ಹೆಚ್ಚಿನ ಆಪಾದನೆ ಇತ್ತು. ಒಮ್ಮೆ ಜಿನ್ನಾರವರ ಸಭೆಗಳಲ್ಲಿ, ಸಾವಿರಾರು ಸಂಖ್ಯೆಯಲ್ಲಿ ಎಣಿಸಿದ ಜನರಿದ್ದರೆ ನಂತರ ಸಂಖ್ಯೆಗಳು ಕ್ಷೀಣಿಸಿ ಶೀಘ್ರದಲ್ಲೇ ಕೆಲವು ನೂರಾರು ಸಂಖ್ಯೆಯನ್ನು ಹೊಂದಿತ್ತು. ಹತಾಶೆಯಲ್ಲಿ, ಜಿನ್ನಾ ರಾಜಕೀಯ ವ್ಯವಹಾರವನ್ನು ಬಿಟ್ಟು ಕಾಶ್ಮೀರದ ವಾಸ್ತವ್ಯಕ್ಕಾಗಿ ಹೋದರು. [ಅದೇ] ಮೇ 1944 ರಲ್ಲಿ ವೈದ್ಯಕೀಯ ಕಾರಣಕ್ಕೆ ಸೆರೆಮನೆಯಿಂದ ಬಿಡುಗಡೆಗೊಂಡು ಸೆಪ್ಟೆಂಬರ್ನಲ್ಲಿ ಬಾಂಬೆಯಲ್ಲಿ ಜಿನ್ನಾವನ್ನು ಭೇಟಿಯಾದಾಗ ಗಾಂಧಿಯವರು ತಮಗೆ ಅರಿವಿಲ್ಲದಂತೆ ಅವರ ಪ್ರತಿಷ್ಠೆಯನ್ನು ಹೆಚ್ಚಿಸಿಸಿದರು. ಅಲ್ಲಿ ಅವರು ಭಾರತದ ಉಳಿದ ಭಾಗದಿಂದ ಬೇರ್ಪಡಿಸಲು ಬಯಸುತ್ತಾರೆಯೇ ಎಂದು ತಿಳಿಯಲು ಯುದ್ಧದ ನಂತರ ಮುಸ್ಲಿಂ ಪ್ರದೇಶಗಳಲ್ಲಿ ಮುಸ್ಲಿಂ ಮುಖಂಡರಿಗೆ ಜನಮತ ಸಂಗ್ರಹದ ಅವಕಾಶವನ್ನು ನೀಡಿದರು. ಮೂಲಭೂತವಾಗಿ, ಅದು ಪಾಕಿಸ್ತಾನದ ತತ್ವವನ್ನು ಸ್ವೀಕರಿಸಿದ ಹಾಗೆ ಆಗಿತ್ತು - ಆದರೆ ಅದು ಸ್ಪಷ್ಟವಾದ ಪದಗಳಲ್ಲಿ ಪಾಕಿಸ್ತಾನದ ಉದಯಕ್ಕೆ ಒಪ್ಪಿ ಹೇಳಿದ್ದು ಅಲ್ಲ. ಆದ್ದರಿಂದ ನಿಖರವಾದ ಪದಗಳಲ್ಲಿ ಹೇಳಬೇಕೆಂದು ಜಿನ್ನಾ ಒತ್ತಾಯಿಸಿದರು; ಗಾಂಧಿ ಅದಕ್ಕೆ ನಿರಾಕರಿಸಿದರು ಮತ್ತು ಅದರ ಫಲವಾಗಿ ಮಾತುಕತೆ ಮುರಿಯಿತು. ಆದಾಗ್ಯೂ, ಜಿನ್ನಾ ತನ್ನ ಸ್ಥಾನ ಮತ್ತು ಲೀಗ್’ನ ಬಲವನ್ನು ಹೆಚ್ಚು ಬಲಪಡಿಸಿಕೊಂಡಂತೆ ಆಯಿತು.. ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಶಾಲಿ ಕಾಂಗ್ರಸ್ ಸದಸ್ಯರು ಜಿನ್ನಾನೊಂದಿಗೆ ಸಮಾನ ಸ್ತರದಲ್ಲಿ ಮಾತುಕತೆ ನಡೆಸಿ ಕಾಣಿಸಿಕೊಂಡಿದ್ದರು. ಆದರ ಕಾರಣ ಜಿನ್ನಾಗೆ ಇತರ ವಿರೋದಿಗಳಾದü ಮುಸ್ಲಿಂ ಲೀಗ್ ಮುಖಂಡರು, ಮತ್ತು ಭಾರತದ ವಿಭಜನೆಗೆ ವಿರೋಧಿಸಿದವರು, ಶಕ್ತಿ ಕಳೆದುಕೊಂಡರು, ಅಥವಾ ಜಿನ್ನಾಗೆ ಸೋತರು.Sears, Stephen W. (2014-09-10). The British Empire. ಭಾರತದ ಪ್ರಧಾನಿಯಾಗಿ (1947-64) thumb|ದಿ.15 ಆಗಸ್ಟ್ 1947 ರಂದು ನಡೆದ ಸಮಾರಂಭದಲ್ಲಿ ಜವಾಹರಲಾಲ್ ನೆಹರೂ ಅವರು ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ.ಲಾರ್ಡ್ ಮೌಂಟ್ಬ್ಯಾಟನ್ ಪ್ರತಿಜ್ಜ್ಞಾವಿಧಿ ಬೋಧಿಸಿದರು. thumb|ಇಂದಿರಾ ಗಾಂಧಿ, ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ thumb|ತೀನ್‍ಮೂರ್ತಿ ಭವನ, ನೆಹರು ಅವರು ಪ್ರಧಾನಮಂತ್ರಿಯಾಗಿ ವಾಸಿಸುತ್ತಿದ್ದರು, ಈಗ ಅದು ಅವರ ಸ್ಮರಣಾರ್ಥ ವಸ್ತುಸಂಗ್ರಹಾಲಯ ಆಗಸ್ಟ್ 15, 1947 ನೆಹರು ಮತ್ತು ಅವರ ಸಹೋದ್ಯೋಗಿಗಳನ್ನು 1946 ರ ಕ್ಯಾಬಿನೆಟ್ ಮಿಷನ್’ಗೆ (ಬ್ರಿಟಿಷ್ ಮಂತ್ರಿಮಂಡಲದ ಕಾರ್ಯನಿರ್ವಣೆಯ ದೂತ) ಭಾರತಕ್ಕೆ ಅಧಿಕಾರಕ್ಕೆ ವರ್ಗಾಯಿಸುವ ಯೋಜನೆಗಳನ್ನು ಪ್ರಸ್ತಾವಿಸಲು ಬಿಡುಗಡೆ ಮಾಡಲಾಯಿತು. Meena Gaikwad, Dr. The Ideas of Modern Indian Political Thinkers on Women ಜವಾಹರಲಾಲ್ ನೆಹರೂ ಅವರು ಆಗಸ್ಟ್ 14 - 15, 1947 ರಂದು ನಡೆದ ಸಮಾರಂಭದಲ್ಲಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಲಾರ್ಡ್ ಮೌಂಟ್ಬ್ಯಾಟನ್’ ರಿಂದ ಆದೇಶ ಪಡೆದು ಶಪಥ ಮಾಡಿದರು. ನಾಯಕರಾಗಿ ಚುನಾಯಿತರಾದ, ನೆಹರು ಅವರು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿದರು (ನಡುಗಾಲ ಸರ್ಕಾರ - ಸ್ವಾತಂತ್ರ ಪೂರ್ವದ ವೈಸ್’ರಾಯ ನೇಮಿತ ಬ್ರಿಟಿಷ್ ಅಧೀನ ತಾತ್ಕಾಲಿಕ ಸರ್ಕಾರ.), ಇದು ಕೋಮು ಹಿಂಸಾಚಾರ (ಪಾಕಿಸ್ತಾನ ಬೇಡಿಕೆಯ ಈಡೇರಿಕೆಗಾಗಿ ಜಿನ್ನಾರ "ಡೈರೆಕ್ಟ್ ಆಕ್ಷನ್" ಎಂಬ ಹಿಂಸೆ ಮತ್ತು ಹತ್ಯೆ - ಲೂಟಿಗೆ ಕರೆಯಿಂದ ಕೋಮುಗಲಭೆ) ಮತ್ತು ರಾಜಕೀಯ ಅವ್ಯವಸ್ಥತೆಯಿಂದಾಗಿ ದುರ್ಬಲಗೊಂಡಿತು ಮತ್ತು ಮುಸ್ಲಿಂ ಲೀಗಿನ ಮುಖಂಡರಾದ ಮುಹಮ್ಮದ್ ಅಲಿ ಜಿನ್ನಾರವರು ಪಾಕಿಸ್ತಾನದ ಪ್ರತ್ಯೇಕ ಮುಸ್ಲಿಂ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದರು. ಲೀಗ್ ಮತ್ತು ಕಾಂಗ್ರೆಸ್ ಗಳ ಒಕ್ಕೂಟಗಳನ್ನು ರೂಪಿಸಲು ವಿಫಲವಾದ ನಂತರ, ನೆಹರೂ ಇಷ್ಟವಿಲ್ಲದೆ ಭಾರತ ವಿಭಜನೆಯನ್ನು ಬೆಂಬಲಿಸಿದರು, ದಿ.3 ಜೂನ್ 1947 ರಂದು ಬ್ರಿಟೀಷರಿಂದ ಬಿಡುಗಡೆಯಾದ ಒಂದು ಯೋಜನೆ ಪ್ರಕಾರ, ಅವರು ಆಗಸ್ಟ್ 15 ರಂದು ಸ್ವತಂತ್ರ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು, ಮತ್ತು ಅವರ "ಟ್ರೈಸ್ಟ್ ವಿತ್ ಡೆಸ್ಟಿನಿ ಎಂಬ ಸ್ವತಂತ್ರಭಾರತದ ಉದ್ಘಾಟನೆಯ ಪ್ರಸಿದ್ಧ ಭಾಷಣವನ್ನು ಮಾಡಿದರು.[ಅದೇ] [Agrawal, Lion M. G. (2008). Freedom fighters of India] “ಬಹಳ ವರ್ಷಗಳ ಹಿಂದೆ ನಾವು ಉತ್ತಮ ಭವಿಷ್ಯದ ಗುರಿಸಾಧನೆಗಾಗಿ ವಚನಬದ್ದತೆ ಹೊಂದಿದ್ದೇವೆ (tryst - ಪ್ರೊಮಿಸ್- ವಚನಬದ್ಧತೆ, with destiny -ಗುರಿ, destination), ಮತ್ತು ಈಗ ನಾವು ನಮ್ಮ ಪ್ರತಿಜ್ಞೆಯ ಗುರಿಯನ್ನು ಪೂರ್ಣವಾಗಿ ಅಥವಾ ಪೂರ್ಣ ಶಕ್ತಿಯಿಂದ ಪಡೆದುಕೊಳ್ಳುವ, ಪೂರ್ಣವಾಗಿ ಅಲ್ಲದಿದ್ದರೂ ಬಹಳ ಮಟ್ಟಿಗೆ ಆದರೆ ಗಣನೀಯವಾಗಿ ಸಾಧಿಸುವ ಸಮಯ ಬಂದಿದೆ. ಈ ದಿನ ಮಧ್ಯರಾತ್ರಿಯ ಗಂಟೆಯ ಹೊಡೆದಾಗ, ಪ್ರಪಂಚವು ನಿದ್ರಿಸುತ್ತಿರುದಾಗ, ಭಾರತ ತನ್ನ ಜೀವನಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಳ್ಳುತ್ತಿದೆ. ಒಂದು ಶುಭ ಕ್ಷಣವು ಬರುತ್ತದೆ, ಆದರೆ ಇತಿಹಾಸದಲ್ಲಿ ಇದು ಅಪರೂಪವಾಗಿ ಬರುತ್ತದೆ, ನಾವು ಹಳೆಯದರಿಂದ ಹೊಸದಕ್ಕೆ ಬಂದಾಗ, ಒಂದು ಶಕೆಯ ಕೊನೆಗೊಂಡಾಗ ಮತ್ತು ರಾಷ್ಟ್ರದ ಆತ್ಮವು ದೀರ್ಘಕಾಲ ದಮನವಾದ ನಂತರ ಈಗ ಅದು ತನ್ನ ದನಿಯನ್ನು ಕಂಡುಕೊಳ್ಳುತ್ತದೆ. ಈ ಗಂಭೀರ ಕ್ಷಣದಲ್ಲಿ ನಾವು ಭಾರತ ಮತ್ತು ಅದರ ಜನರ ಸೇವೆಗೆ ಸಮರ್ಪಣೆ ಮಾಡುವ ಮತ್ತು ಮಾನವೀಯತೆಗೆ ಇನ್ನೂ ದೊಡ್ಡ ಕೊಡಿಗೆಯನ್ನೂ ನೀಡುವ ಪ್ರತಿಜ್ಞೆಯನ್ನೂ ತೆಗೆದುಕೊಳ್ಳುವುದು ಸೂಕ್ತವಾಗಿದೆ.” - (Tryst with Destiny.Speech On the Granting of Indian Independence, August 14, 1947 ನಿಸ್ತಂತು ಧ್ವನಿಮುದ್ರಿಕೆಯ ಆಡಿಯೋ:(Americn rethoric online speech Bank) Jawaharlal Nehru-'Tryst with Destiny'14-15 August 1947; ನ್ಯೂಯಾರ್ಕ್ ಟೈಮ್ಸ್:ಚಿಂತಾಮಗ್ನ ನೆಹರು-ಗಾಂಧಿ:: thumb|left|ನೆಹರೂ ಅವರ ಸಹೋದರಿ ಮೇಡಮ್ ಪಂಡಿತ್ ಅವರೊಂದಿಗೆ ಅಧ್ಯಕ್ಷ ಹ್ಯಾರಿ ಟ್ರೂಮನ್ ಮತ್ತು ಜವಾಹರಲಾಲ್ ನೆಹರು, ನೆಹರೂ ಅವರ ಭೇಟಿ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಅಕ್ಟೋಬರ್ 1949 ಗಾಂಧೀಜಿಯವರ ಹತ್ಯೆ ಗಾಂಧೀಜಿಯವರು 1948 ರ ಜನವರಿ 30 ರಂದು, ಪ್ರಾರ್ಥನಾ ಸಭೆಗೆ ಅವರು ಪ್ರವಚನ ನೀಡಲು ವೇದಿಕೆಗೆ ಹೋಗುತ್ತಿದ್ದಾಗ ಅವರನ್ನು ನಾಥೂರಾಮ್ ಗೋಡ್ಸೆ ಗುಂಡಿಟ್ಟು ಹತ್ಯೆಗೈದನು. (ಕಾರಣ :-ಅಖಂಡ ಭಾರತವನ್ನು ಗಾಂಧಿ ಹಾಗೂ ನಹರು ಸೇರಿದ ಪ್ರಮುಖರಿಂದ ವಿಭಜನೆ ಮಾಡಿ, ಪಾಕಿಸ್ತಾನ ಮಾಡಿದ್ದಕ್ಕಾಗಿ.. ಅಲ್ಲದೇ ಗಾಂಧಿಯವರು ಬಂಗಾಳವನ್ನು, ಹೈದರಾಬಾದ್ ಪ್ರಾಂತವನ್ನು ಸಹ ಪಾಕಿಸ್ತಾನಕ್ಕೆ ವಹಿಸಲು ಮುಂದಾಗುತ್ತಿದ್ದರು.) ಭಾರತ ವಿಭಜನೆಯ ಸಮಯದಲ್ಲಿ ಆದ ಒಪ್ಪಂದದಂತೆ ಪಾಕಿಸ್ತಾನಕ್ಕೆ ಕೊಡಬೇಕಾದ ಹಣವನ್ನು ಭಾರತವು ಪಾವತಿಸುವಂತೆ ಗಾಂಧಿಯವರು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಲು ಜವಾಬ್ದಾರಿಯೆಂದು ಭಾವಿಸಿದ್ದನು. ಗಾಂಧೀಜಿಯ ಹತ್ಯೆಯ ನಂತರ ನೆಹರು ರೇಡಿಯೊದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು:Thakur, Pradeep. The Most Important People of the 20th Century (Part-I): Leaders & Revolutionaries ಸ್ನೇಹಿತರೇ ಮತ್ತು ಒಡನಾಡಿಗಳೇ, ಬೆಳಕು- ನಮ್ಮ ಜೀವಗಳ ಬೆಳಕು ಹೊರಟುಹೋಗಿದೆ, ಮತ್ತು ಎಲ್ಲೆಡೆಯೂ ಕತ್ತಲೆ ತುಂಬಿದೆ, ಮತ್ತು ನಿಮಗೆ ಏನು ಹೇಳಬೇಕೆಂದು ಅಥವಾ ಅದನ್ನು ಹೇಗೆ ಹೇಳಬೇಕೆಂದು ನನಗೆ ಸರಿಯಾಗಿ ಗೊತ್ತಾಗುತ್ತಿಲ್ಲ. ನಮ್ಮ ಪ್ರೀತಿಯ ಮುಖಂಡ, ಬಾಪು ಎಂದು ನಾವು ಕರೆಯುವ, ನಾವು ರಾಷ್ಟ್ರ ಪಿತ ಎಂದು ಕರೆಯುತ್ತಿದ್ದ ಅವರು, ಈಗ ಬದಿಕಿಲ್ಲ. ಬಹುಶಃ ನಾನು ಆ ರೀತಿ ಹೇಳುವುದು ತಪ್ಪಿರಬಹುದು ; ಆದಾಗ್ಯೂ, ನಾವು ಅವರನ್ನು ನಾವು ಈ ಹಲವು ವರ್ಷಗಳಿಂದ ನೋಡಿದಂತೆ ಮತ್ತೆ ಅವರನ್ನು ನೋಡಲಾಗುವುದಿಲ್ಲ, ನಾವು ಅವರ ಬಳಿಗೆ ಸಲಹೆಗಾಗಿ ಓಡುಲಾಗುವುದಿಲ್ಲ ಅಥವಾ ಅವರಿಂದ ಸ್ವಾಂತನವನ್ನು ಪಡೆಯಲಾರೆವು , ಅದು ನನಗೆ ಮಾತ್ರವಲ್ಲ, ಆದರೆ ಅದು ಈ ದೇಶದಲ್ಲಿ ಲಕ್ಷಾಂತರ ಮತ್ತು ಲಕ್ಷಗಟ್ಟಲೆ ಜನರಿಗೆ ಅನ್ವಯಿಸುವುದು. Janak Raj Jai (1996). 1947–1980. Regency Publications. pp. 45–47http://www.emersonkent.com/speeches/the_light_has_gone_out_of_our_lives.htm The Light Has Gone Out of Our Lives ಗಾಂಧಿಯವರ ಮರಣ ಮತ್ತು ಅಂತ್ಯಕ್ರಿಯೆಯು ನೆಹರು ಮತ್ತು ಪಟೇಲರ ಅಡಿಯಲ್ಲಿ ಹೊಸ ಭಾರತ ರಾಷ್ಟ್ರದ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡಿದೆ ಎಂದು ಯಾಸ್ಮಿನ್ ಖಾನ್ ವಾದಿಸಿದರು. ಎರಡು ವಾರಗಳ ಅವಧಿಯಲ್ಲಿ ಅಂತ್ಯಕ್ರಿಯೆ, ಶವಸಂಸ್ಕಾರದ ಆಚರಣೆಗಳು ಮತ್ತು ಹುತಾತ್ಮರ ಚಿತಾಭಸ್ಮವನ್ನು ವಿತರಿಸುವುದು-ಮಿಲಿಯನ್‍ಗಟ್ಟಲೆ ಜನರು ಭಾಗವಹಿಸಿದ ಮತ್ತು ನೂರಾರು ಮಿಲಿಯನ್ ಜನರು ವೀಕ್ಷಿಸಿದ ಈ ಐತಿಹಾಸಿಕ ಸನ್ನಿವೇಶವನ್ನು ಕಾಂಗ್ರೆಸ್ ಭಾರೀ ದುಃಖದ ಸಾರ್ವಜನಿಕ ಪ್ರದರ್ಶನಗಳನ್ನು ಬಿಗಿಯಾಗಿ -ಸಮರ್ಥವಾಗಿ ನಿಯಂತ್ರಿಸಿತು. ಈ ಸಮಯದಲ್ಲಿ ಸರ್ಕಾರವು ತನ್ನ ಅಧಿಕಾರವನ್ನು ಪ್ರತಿಪಾದಿಸುವುದು, ಕಾಂಗ್ರೆಸ್ ಪಕ್ಷದ ನಿಯಂತ್ರಣವನ್ನು ಕಾನೂನುಬದ್ಧಗೊಳಿಸುವುದು ಮತ್ತು ಎಲ್ಲಾ ಧಾರ್ಮಿಕ ಅನಧಿಕೃತ ಪ್ಯಾರಾ-ಮಿಲಿಟರಿ ಗುಂಪುಗಳನ್ನು ನಿಗ್ರಹಿಸುವುದು ಅಗತ್ಯಗುರಿಯಾಗಿತ್ತು. ನೆಹರೂ ಮತ್ತು ಪಟೇಲ್ ಅವರು ಆರ್‍ಎಸ್ಎಸ್, ಮುಸ್ಲಿಂ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಖಾಕ್ಸಾರ್ ಗುಂಪುಗಳ ಸುಮಾರು 200,000 ಜನರನ್ನು ಬಂಧನಕ್ಕೊಳಪಡಿಸಿದರು. ಗಾಂಧೀಜಿಯವರ ಮರಣ ಮತ್ತು ಶವಸಂಸ್ಕಾರವು ದೂರ ದೂರದ ಜನರನ್ನು ಭಾರತೀಯ ಜನರೊಂದಿಗೆ ಸಂಪರ್ಕ ಕಲ್ಪಿಸಿತು. ಮತ್ತು ಭಾರತದ ಜನರಿಗೆ ಸ್ವಾತಂತ್ರ್ಯದ ಪರಿವರ್ತನೆಯ ಸಮಯದಲ್ಲಿ ಧಾರ್ಮಿಕ ಪಕ್ಷಗಳನ್ನು ನಿಗ್ರಹಿಸುವ ಅಗತ್ಯವನ್ನು ಇನ್ನಷ್ಟು ಅರ್ಥವಾಗುವಂತೆ ಮಾಡಿಕೊಟ್ಟಿತು. Zachariah, Benjamin (2004-08-02). Nehru. -& -Yasmin Khan 2011 ತಂದೆಗೆ ಇಂದಿರಾ ಸೇವೆ ನಂತರದ ವರ್ಷಗಳಲ್ಲಿ, ಭಾರತದ ವಿಭಜನೆಗಾಗಿ ನೆಹರೂರನ್ನು ದೂಷಿಸಲು ಯತ್ನಿಸಿದ ಇತಿಹಾಸದ ಪರಿಷ್ಕೃತವಾದಿ ಶಾಖೆಯೊಂದು ಹೊರಹೊಮ್ಮಿತು, 1947 ರಲ್ಲಿ ಸ್ವತಂತ್ರ ಭಾರತಕ್ಕಾಗಿ ತಮ್ಮ ಹೆಚ್ಚಿನ ಕೇಂದ್ರ ಸರ್ಕಾರ ಅಧಿಕಾರವುಳ್ಳ ಭಾರತವನ್ನು ಸ್ಥಾಪಿಸುವ ಅವರ ನೀತಿಗಳನ್ನು ಉಲ್ಲೇಖಿಸಿ, ಟೀಕಿಸಿದರು. (ಕೆಲವರು ವಿರೋಧಿಸಿದರೂ ನೆಹರು ಸ್ವತಂತ್ರ ರಾಜ್ಯಗಳಿಗೆ ಅವಕಾಶವಿಲ್ಲದ, ಕೇಂದ್ರ ಪ್ರಧಾನ ಒಕ್ಕೂಟದ ಬಾರತಕ್ಕಾಗಿ ಮತ್ತು ಅದಕ್ಕೆ ಪೂರಕವಾದ ಸಂವಿಧಾನವಿರಬೇಕು ಎಂದು ಗಟ್ಟಿ ನಿಲುವು ತಾಳಿದರು. ಭಾರತವು ಇಂದು ಒಂದೇ ರಾಷ್ಟ್ರವಾಗಿ ಉಳಿಯಲು ಅವರ ನಿಲುವು ಕಾರಣವಾಗಿದೆ.) ಜಿನ್ನಾ ವಿಕೇಂದ್ರೀಕೃತ ಭಾರತಕ್ಕೆ ಪರವಾಗಿದ್ದು ಕೇಂದ್ರೀಕೃತ ಭಾರತ ನೀತಿಯನ್ನ ವಿರೋಧಿಸಿದರು. ಜಿನ್ನಾ ಪೂರ್ಣ ಸ್ವತಂತ್ರ ಪಾಕಿಸ್ತಾನದ ಬೇಡಿಕೆಯನ್ನೇ ಇಟ್ಟಿದ್ದರು. ಅವರನ್ನು ಒಲಿಸಲು ಫಡರಲ್ ವ್ಯವಸ್ಥೆಯ ಸಡಿಲವಾದ ಸುಮಾರು ೬೦೦ ಸ್ವತಂತ್ರ ಸಂಸ್ಥಾನಗಲ ಭಾರತ ಒಕ್ಕೂಟ ರಚಿಸಿದ್ದರೆ, ಇಂಗ್ಲೆಂಡಿನಿಂದ ಐರ್ಲೆಂಡ್ ಬೇರೆಯಾದಂತೆ ಎಲ್ಲಾ ಸಂಸ್ಥಾನಗಳೂ ಸ್ವತಂತ್ರವಾಗುತ್ತಿದ್ದವು. ಆ ನೀತಿಯಂತೆ ಎಲ್ಲ ಸಂಸ್ಥಾನಗಳೂ ಸ್ವತಂತ್ರವಾಗಿದ್ದು ನಂತರ ಬಿನ್ನಾಭಿಪ್ರಾಯ ಉದ್ಭವಿಸಿದಾಗ ಬೇರೆಯಾಗುತ್ತಿದ್ದವು ಮತ್ತು ಘರ್ಷಣೆಗೆ ಇಳಿಯುತ್ತಿದ್ದವು. ಭಾರತ ಅನೇಕ ರಾಜ್ಯಗಳಾಗಿ ಛಿದ್ರವಾಗುತ್ತಿತ್ತು. Thapar, Karan (17 August 2009) ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ, ನೆಹರೂ ಆಗಾಗ್ಗೆ ಅವರ ಮಗಳು ಇಂದಿರಾಗೆ ಅವಲಂಬಿಸುತ್ತಾ ತನ್ನನ್ನು ನೋಡಿಕೊಳ್ಳಲು ಮತ್ತು ಅವರ ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸಲು ಹೇಳುತ್ತಿದ್ದರು. ಅವರ ನೇತೃತ್ವದಲ್ಲಿ, ಕಾಂಗ್ರೆಸ್ 1952 ರ ಚುನಾವಣೆಯಲ್ಲಿ ಅಗಾಧವಾದ ಬಹುಮತವನ್ನು ಗಳಿಸಿತು. ಇಂದಿರಾ ನೆಹರು ಅವರ ಅಧಿಕೃತ ನಿವಾಸಕ್ಕೆ ತೆರಳಿದರು ಮತ್ತು ಅವರಿಗೆ ಸೇವೆಮಾಡಲು ನಿಂತರು. ಭಾರತ ಮತ್ತು ಪ್ರಪಂಚದಾದ್ಯಂತ ಅವರ ನಿರಂತರ ಸಹಚರರಾಗಿದ್ದರು. ಇಂದಿರಾ ವಾಸ್ತವವಾಗಿ ನೆಹರುರ ಮುಖ್ಯ (ಉಚಿತ) ಸಿಬ್ಬಂದಿಯಾಗಿದ್ದರು. [105][106] 1957 ರ ಚುನಾವಣೆಯಲ್ಲಿ ನೆಹರೂ ಕಾಂಗ್ರೆಸ್ ಗೆ ಪ್ರಮುಖ ಗೆಲುವು ನೀಡಿತು, ಆದರೆ ಅವರ ಸರ್ಕಾರವು ಏರುತ್ತಿರುವ ಸಮಸ್ಯೆಗಳು ಮತ್ತು ಟೀಕೆಗಳನ್ನು ಎದುರಿಸುತ್ತಿತ್ತು. ಆಂತರಿಕ ಪಕ್ಷದ ಭ್ರಷ್ಟಾಚಾರ ಮತ್ತು ಕಲಹದಿಂದ ನಿರಾಶೆಗೊಂಡ ನೆಹರೂ ಅವರು ರಾಜೀನಾಮೆ ನೀಡಲು ಯೋಚಿಸಿದರು ಆದರೂ ಸೇವೆಯನ್ನು ಮುಂದುವರಿಸಿದ್ದರು. 1959 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅವರ ಪುತ್ರಿ ಇಂದಿರಾ ಅವರ ಚುನಾವಣೆಯಾದಾಗ ನೆಪೋಟಿವಾದದ (ನೆಪೋಟಿಸಮ್) ಬಗ್ಗೆ ಟೀಕೆಗೊಳಗಾಯಿತು, ಆದರೆ ನೆಹರು ಇಂದಿರಾ ಅವರ ಚುನಾವಣೆಯ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದರೂ ಸಹ, ಇದು "ರಾಜವಂಶವಾದ" ವನ್ನು ಹೋಲುವುದು ಕಂಡಿದೆ ಎಂಬ ಕಾರಣದಿಂದಾಗಿ; "ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅನಪೇಕ್ಷಿತ ವಿಷಯ" ಎಂದು ಅವರು ಹೇಳಿದರು, ಮತ್ತು ಅವರ ಕ್ಯಾಬಿನೆಟ್ನಲ್ಲಿ ಇಂದಿರಾ ಅವರಿಗೆ ಸ್ಥಾನವನ್ನು ನಿರಾಕರಿಸಿದರು. ಇಂದಿರಾ ಸ್ವತಃ ತನ್ನ ತಂದೆಯೊಂದಿಗೆ ನೀತಿಯವಿಷಯದಲ್ಲಿ ವಿರೋಧಿಸುತ್ತಿದ್ದಳು; ಮುಖ್ಯವಾಗಿ, ಅವರು ತಮ್ಮ ಸ್ವಂತ ಆಕ್ಷೇಪಣೆಗಳನ್ನು ಕೇರಳ ರಾಜ್ಯದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸರಕಾರವನ್ನು ವಜಾಗೊಳಿಸಲು ಒತ್ತಡ ತಂದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಈ ಮೂಲಕ ತಮ್ಮ ವೈಯಕ್ತಿಕ ವಿರೋಧವನ್ನು ವ್ಯಕ್ತಪಡಿಸಿದರು. ನೆಹರು ಆಗಾಗ್ಗೆ ಇಂದಿರಾ ಅವರ ಹಠ ಮತ್ತು ಸಂಸತ್ತಿನ ಸಂಪ್ರದಾಯದ ಕಡೆಗಣಿಸುವಿಕೆಯಿಂದ ಮುಜುಗರಕ್ಕೊಳಗಾಗಲು ಆರಂಭಿಸಿದರು, ಮತ್ತು ತನ್ನ ತಂದೆಯಿಂದ ಬೇರೆಯಾದ ತನ್ನ ಸ್ವತಂತ್ರವಾದ ಸ್ವಭಾವವನ್ನು ತೋರಿಸಿದಾಗ ಬೇರೆ ದುರುದ್ದೇಶಗಳಿಲ್ಲದಿದ್ದರೂ ತಾನು ಹೇಳಿದ್ದನ್ನೇ ದೃಢೀಕರಿಸಿದಾಗ ನೆಹರು "ನೊಂದುಕೊಳ್ಳುತ್ತ್ತಿದ್ದರು" ಮತ್ತು "ಅಸಮಾಧಾನಗೊಳ್ಳುತ್ತಿದ್ದರು. Frank, Katherine (2002). Indira: The Life of Indira Nehru Gandhi. Houghton Mifflin Books. p. 250. 1962 ರ ಚುನಾವಣೆಗಳಲ್ಲಿ ನೆಹರೂ ಅವರು ಕಾಂಗ್ರೆಸ್ ಗೆಲುವಿನ ಬಹುಮತದೊಂದಿಗೆ ಜಯಗಳಿಸಿದರು. ಆದರೂ ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷಗಳು ಪ್ರಮುಖ ಫಲಾನುಭವಿಗಳಾಗಿದ್ದವು, ಜೊತೆಗೆ ಭಾರತೀಯ ಜನಸಂಘದಂತಹ ಕೆಲವು ಬಲಪಂಥೀಯ ಗುಂಪುಗಳು ಉತ್ತಮ ಫಲಪಡೆದವು. Mathai (1978). Reminiscences of the Nehru Age. ಹತ್ಯೆ ಯತ್ನಗಳು ಮತ್ತು ಭದ್ರತೆ ಅಧಿಕೃತವಾಗಿ ತಿಳಿದಂತೆ ನೆಹರು ಅವರ ಮೇಲೆ ನಾಲ್ಕು ಹತ್ಯೆಯ ಪ್ರಯತ್ನಗಳು ನಡೆದಿವೆ. 1947 ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ ಅವರು ನಾರ್ತ್-ವೆಸ್ಟ್ ಫ್ರಾಂಟಿಯರ್ ಪ್ರಾಂತ್ಯಕ್ಕೆ (ಈಗ ಪಾಕಿಸ್ತಾನದಲ್ಲಿದೆ) ಭೇಟಿ ನೀಡುತ್ತಿರುವಾಗ ಅವರು ಕಾರಿನಲ್ಲಿದ್ದಾಗ ಅವರ ಜೀವಹತ್ಯೆಯ ಮೊದಲ ಪ್ರಯತ್ನವು ನೆಡೆಯಿತು.Mathai (1978). Reminiscences of the Nehru Age ಎರಡನೆಯದು ಮಹಾರಾಷ್ಟ್ರದಲ್ಲಿ 1955 ರಲ್ಲಿ ರಿಕ್ಷಾ-ಎಳೆಯುವವನು ಚಾಕು-ಧಾರಿಯಾಗಿ ಆಕ್ರಮಣ ಮಾಡಿದಾಗ;"Assassination Attempt on Nehru Made in Car". Gettysburg Times. 22 March 1955.. Rickshaw Boy Arrested for Nehru Attack". Sarasota Herald Tribune. 14 March 1955. ಮೂರನೆಯದು 1956 ರಲ್ಲಿ ಬಾಂಬೆಯಲ್ಲಿ (ಈಗ ಮಹಾರಾಷ್ಟ್ರ) ಸಂಭವಿಸಿತು. Jump up ^ "Bombay Police Thwart Attempt on Nehru's Life". Oxnard Press-Courier. 4 June 1956. ನಾಲ್ಕನೆಯದು ಮಹಾರಾಷ್ಟ್ರದಲ್ಲಿ 1961 ರಲ್ಲಿ ರೈಲು ಹಳಿಗಳ ಮೇಲೆ ವಿಫಲ ಬಾಂಬು ಸ್ಪೋಟ ಪ್ರಯತ್ನವಾಗಿತ್ತು. "Bomb Explodes on Nehru's Route". Toledo Blade. 30 September 1961. ತಮ್ಮ ಜೀವಕ್ಕೆ ಬೆದರಿಕೆಗಳಿದ್ದರೂ, ನೆಹರು ತಮ್ಮ ಸುತ್ತ ಹೆಚ್ಚು ಭದ್ರತೆ ಹೊಂದಿರುವುದನ್ನು ತಿರಸ್ಕರಿಸಿದರು ಮತ್ತು ಅವರ ಚಲನ- ವಲನದ ಕಾರಣ ಜನರ ಸಂಚಾರವನ್ನು ಅಡ್ಡಿಪಡಿಸಲು ಇಷ್ಟಪಡಲಿಲ್ಲ. Mathai, M.O. (1979). My Days with Nehru. Vikas Publishing House. ನೆಹರು ಅವರ ಆರ್ಥಿಕ ನೀತಿಗಳು ವಿವರಕ್ಕೆ ನೋಡಿ:ಭಾರತ ದೇಶದ ಪಂಚ ವಾರ್ಷಿಕ ಯೋಜನೆಗಳು thumb|left|1956 ರ ಜೂನ್ನಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೆಹರು ಅವರು ಚಾನ್ಸೆಲರ್ ಕೊನ್ರಾಡ್ ಅಡೆನೌರ್ ಮತ್ತು ಡಾಯ್ಚ ಬ್ಯಾಂಕ್ ಅಧ್ಯಕ್ಷ ಹರ್ಮನ್ ಜೋಸೆಫ್ ಅಬ್ಸ್‍ರೊಡನೆ ಭೇಟಿ ನೀಡಿದರು. ಆಮದು ಬದಲಿ/ಅಮದನ್ನು ಸರಿತೂಗಿಸುವ ಕೈಗಾರೀಕರಣದ ಆಧಾರದ ಮೇಲೆ ನೆಹರು ಆರ್ಥಿಕ ನೀತಿಗಳನ್ನು ಜಾರಿಗೆ ತಂದರು ಮತ್ತು ಸರ್ಕಾರವು ನಿಯಂತ್ರಣವುಳ್ಳ ಸಾರ್ವಜನಿಕ ವಲಯದ ಮತ್ತು ಖಾಸಗಿ ನಿಯಂತ್ರಣ ವಲಯವುಳ್ಳ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತಂದರು. ಭಾರತೀಯ ಆರ್ಥಿಕತ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಮೂಲಭೂತ ಕೈಗಾರಿಕೆಗಳು (ಇತರೆ ಎಲ್ಲಾ ಕೈಗಾರಿಕೆ ಉದ್ಯಮಗಳಿಗೆ ಬೇಕಾದ ಬಿಡಿಭಾಗ ಮತ್ತು ಯಂತ್ರಗಳನ್ನು ತಯಾರಿಸುವ ಉದ್ಯಮಗಳು -ಬಿಇಎಲ್’, ಬಿಎಚ್’ಇಎಲ್’ನಂತೆ) ಮತ್ತು ಭಾರೀ ಉದ್ಯಮದ ಸ್ಥಾಪನೆ ಆಧಾರವಾಗಿದೆ ಎಂದು ಅವರು ನಂಬಿದ್ದರು. ಸರ್ಕಾರ, ಮುಖ್ಯವಾಗಿ ಮುಖ್ಯ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಾದ ಉಕ್ಕು, ಕಬ್ಬಿಣ, ಕಲ್ಲಿದ್ದಲು, ಮತ್ತು ಶಕ್ತಿಗಳಿಗೆ (ವಿದ್ಯತ್) ಬಂಡವಾಳ ಹೂಡಲು ನಿರ್ದೇಶನ ನೀಡಿತು - ಸಬ್ಸಿಡಿಗಳು ಮತ್ತು ರಕ್ಷಣಾ ನೀತಿಯೊಂದಿಗೆ ಅವುಗಳ ಅಭಿವೃದ್ಧಿಗೆ ಉತ್ತೇಜನ ನೀಡಿತು. ಪಂಚವಾರ್ಷಿಕ ಯೋಜನೆಗಳಡಿಯಲ್ಲಿ ಬರಗಾಲ ಮತ್ತು ಆಹಾರದ ಕೊರತೆ ನೀಗಲು ಅನೇಕ ಸಣ್ಣ ಮತ್ತು ದೊಡ್ಡ ನೀರಾವರಿ ಅಣೆಕಟ್ಟುದಳನ್ನು ಕಟ್ಟಲು ಮತ್ತು ಕಾಲುವೆ ನಿರ್ಮಿಸವ ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು. ಗ್ರಾಮಾಭಿವೃದ್ಧಿ ಯೋಜನೆಗಳು ಜಾರಿಯಾದವು. ನಿರಕ್ಷರತೆ ನೀಗಲು ಪ್ರಾಥಮಿಕ ಕಡ್ಡಾಯ ಶಿಕ್ಷಣ ಜಾರಿಗೆ ಬಂತು. ಅನೇಕ ಉನ್ನತ ಶಿಕ್ಷಣ ಸಂಸ್ತೆಗಳನ್ನೂ, ತಾತ್ರಿಕ ವೈದ್ಯಕೀಯ ಶಿಕ್ಷನ ಸಂಸ್ಥೆಗಳನ್ನೂ ಆರಂಬಿಸಲಾಯಿತು. ಉದ್ಯೋಗ ಸೃಷ್ಟಿಗಾಗಿ ಸಣ್ಣ ಮತ್ತು ಗುಡಿಕೈಗಾರಿಕೆಗೆ ಉತ್ತೇಜನ ಮತ್ತು ರಕ್ಷಣೆ ನೀಡಲಾಯಿತು. Ghose 1993, p. 243.Kopstein 2005, p. 364.Walsh, Judith E. (2006). A Brief History of India ಶೀತಲ ಸಮರದ ಅವಧಿಯಲ್ಲಿ ಅಲಿಪ್ತ- ನೀತಿಯ- ನೀತಿ ಅರ್ಥಾತ್ ನೆಹರೂ ಅವರು ಭಾರತದ ಕೈಗಾರಿಕಾ ತಳಹದಿಯ ಮೂಲವನ್ನು ಮೊದಲಿನಿಂದ ನಿರ್ಮಿಸಲು ವಿದ್ಯುತ್ ಶಕ್ತಿಗಳನ್ನು ವಿಶ್ವದ ಎರಡೂ ಬಣಗಳಿಂದ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಪಡೆದರು. (ಅಮೇರಿಕಾ ಮತ್ತು ರಷ್ಯಾ ಎರಡು ಶತ್ರು ಬಣ - ಶೀತಲ ಸಮರದಲ್ಲಿ ತೊಡಗಿದ್ದವು) ಸೋವಿಯೆತ್ ಯೂನಿಯನ್ ಮತ್ತು ಪಶ್ಚಿಮ ಜರ್ಮನಿಯ ಸಹಾಯದಿಂದ ಬೊಕೊರೋ ಮತ್ತು ರೂರ್ಕೆಲಾದಲ್ಲಿ ಸ್ಟೀಲ್ ಗಿರಣಿ ಸಂಕೀರ್ಣಗಳನ್ನು ನಿರ್ಮಿಸಲಾಯಿತು. ಗಣನೀಯ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಇತ್ತು. 1950 ರಿಂದ 1965 ರ ನಡುವೆ ಉದ್ಯಮವು ವಾರ್ಷಿಕವಾಗಿ 7.0 ರಷ್ಟು ಏರಿಕೆ ಕಂಡಿದೆ – ಇದರ ಫಲವಾಗಿ 21 ನೇ ಶತಮಾನದ ಆರಂಭದಲ್ಲಿ ಬಹುತೇಕವಾಗಿ ಕೈಗಾರಿಕಾ ಉತ್ಪಾದನೆಯಲ್ಲಿ ಭಾರತವನ್ನು ವಿಶ್ವದ ಏಳನೇ ಅತಿ ದೊಡ್ಡ ಕೈಗಾರಿಕಾ ದೇಶವೆನಿಸಿದೆ. ಇದು ಭಾರತದಲ್ಲಿ 1947 ರಲ್ಲಿ 35 ಕೋಟಿ ಜನಸಂಖ್ಯೆ ಇದ್ದು ಆಹಾರದ ಕೊರತೆಯನ್ನು ಅನುಭವಿಸುತ್ತಿದ್ದ ಭಾರತ 2011 ರ ಸಮಯಕ್ಕೆ 131 ಕೋಟಿಗೆ ಜನಸಂಖ್ಯೆ ಏರಿದರೂ ಅಭವೃದ್ಧಿ ದರವನ್ನು ಕಾಯ್ದು ಕೊಂಡಿದೆ ಮತ್ತ ಆಹಾರ ಧಾನ್ಯಗಳನ್ನು ರಫ್ತುಮಾಡವ ಮಟ್ಟಕ್ಕೆ ಏರಿದೆ ಆದಾಗ್ಯೂ, ನೆಹರು ಯುಗದ ನಂತರ ಭಾರತವು ಆಮದು ಬದಲಿ ಕೈಗಾರಿಕೀಕರಣವನ್ನು(import substitution industrialisation,) ಮುಂದುವರೆಸಿದೆ ಎಂದು ನೆಹರು ಅವರರ ವಿಮರ್ಶಕರು ವಾದಿಸಿದರು, ಇದು ಅದರ ಉತ್ಪಾದನಾ ಕೈಗಾರಿಕೆಗಳ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು ದುರ್ಬಲಗೊಳಿಸಿದೆ ಎಂಬುದು ವಾದ. ೧೯೯೦ ರ ವರೆಗೂ ಭಾರತ ಅಂತರರಾಷ್ಟ್ರೀಯ ಸ್ಪರ್ಧಾತ್ಮಕತೆಗೆ ಮುಕ್ತ ಅವಕಾಶ ನೀಡದೆ ಎಚ್ಚರಿಕೆಯ ಅರ್ಥನೀತಿಯನ್ನು ಅನುಸರಿಸಿತು (ನೆಹರೂ ಅವರ "ಹತೋಟಿಯ ಆರ್ಥಿಕತೆ"; "ಸಂಮಿಶ್ರ ಅರ್ಥನೀತಿ"). ನಂತರ ಬಂದ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಭಾರತವನ್ನು ಮುಕ್ತ ಮಾರುಕಟ್ಟೆಗೆ ತೆರೆದರು. ವಿಶ್ವ ವ್ಯಾಪಾರದ ಭಾರತದ ಪಾಲು 1951-1960ರಲ್ಲಿ 1.4 ಶೇಕಡದಿಂದ 1981-1990 ಕ್ಕಿಂತ 0.5 ಪ್ರತಿಶತಕ್ಕೆ ಇಳಿದಿದೆ. ಮತ್ತೊಂದೆಡೆ, ಭಾರತದ ರಫ್ತು ಕಾರ್ಯಕ್ಷಮತೆಯು ಈ ಅವಧಿಯಲ್ಲಿ ನಿರಂತರವಾದ ಸುಧಾರಣೆಯನ್ನು ತೋರಿಸಿದೆ ಎಂದು ವಾದಿಸಲಾಗಿದೆ. ರಫ್ತುಗಳ ಪ್ರಮಾಣ 1951-1960ರಲ್ಲಿ ವಾರ್ಷಿಕ 2.9 ಶೇಕಡ ಇದ್ದುದು 1971-1980ರಲ್ಲಿ 7.6 ಶೇಕಡಕ್ಕೆ ಏರಿಕೆಯಾಯಿತು.Walsh, Judith E. (2006). A Brief History of India. Infobase Publishing ಜಿಡಿಪಿ ಮತ್ತು ಜಿಎನ್ಪಿ ಯು 1950-51 ಮತ್ತು 1964-65 ರ ನಡುವೆ ವಾರ್ಷಿಕವಾಗಿ 3.9 ಮತ್ತು 4.0 ರಷ್ಟು ಏರಿಕೆ ಕಂಡವು. [ಇದು ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಒಂದು ತೀವ್ರವಾದ ವಿರಾಮವಾಗಿತ್ತು. ಆದರೆ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲಿನ ಇತರ ಕೈಗಾರಿಕಾ ಶಕ್ತಿಗಳಿಗೆ ಹೋಲಿಸಿದರೆ, ಬೆಳವಣಿಗೆಯ ದರಗಳನ್ನು ರಕ್ತಹೀನತೆ – ದುರ್ಬಲ ಎಂದು ಪರಿಗಣಿಸಲಾಗಿದೆ. ಭಾರತವು ಪವಾಡ ಆರ್ಥಿಕತೆಗಳ ದೇಶಗಳಿಗಿಂತ (ಜಪಾನ್, ಪಶ್ಚಿಮ ಜರ್ಮನಿ, ಫ್ರಾನ್ಸ್, ಮತ್ತು ಇಟಲಿ) ಹಿಂದುಳಿದಿದೆ. ರಾಜ್ಯ ಯೋಜನೆ, ನಿಯಂತ್ರಣಗಳು, ಮತ್ತು ನಿಬಂಧನೆಗಳು ಆರ್ಥಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತವೆ ಎಂದು ವಾದಿಸಲಾಯಿತು. ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡೂ ದೇಶಗಳಿಗಿಂತಲೂ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲ್ಪಟ್ಟಿದೆ - ಕಡಿಮೆ ಆರಂಭಿಕ ಆದಾಯ ಮತ್ತು ತ್ವರಿತ ಜನಸಂಖ್ಯೆ ಏರಿಕೆಯ ಮಟ್ಟಕ್ಕೆ - ಶ್ರೀಮಂತ ಆದಾಯ ರಾಷ್ಟ್ರಗಳೊಂದಿಗೆ ಹೋಲಿಸಿದಾಗ ಯಾವುದೇ ರೀತಿಯ ಕ್ಯಾಚ್-ಅಪ್’ಗೆ ಬೆಳವಣಿಗೆ ಅಸಮರ್ಪಕವಾಗಿದೆ ಎಂದು ಅರ್ಥ.Economic Development: A Regional, Institutional, and Historical Approach Chandra, Bipan; Aditya Mukherjee; Mridula Mukherjee (2008). India Since Independence. Penguin Books India. p. 449++.Kapila, Uma (2009). Indian Economic Developments Since 1947 (3Rd Ed.). Academic Foundation. p. 132+++.Kapila, Uma (2009). Indian Economic Developments Since 1947 (3Rd Ed.). Academic Foundation. p. 66.+++ ನೆಹರು ಅವರ ಕೃಷಿ ನೀತಿಗಳು ನೆಹರು ಅವರ ನಾಯಕತ್ವದಲ್ಲಿ, ಸರ್ಕಾರವು ಕೃಷಿ ಸುಧಾರಣೆ ಮತ್ತು ಕ್ಷಿಪ್ರ ಕೈಗಾರಿಕೀಕರಣವನ್ನು ಕೈಗೊಳ್ಳುವ ಮೂಲಕ ತ್ವರಿತವಾಗಿ ಭಾರತವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತು. ದೊಡ್ಡ ಭೂ ಹಿಡುವಳಿಯನ್ನು ನಿಷೇಧಿಸಲಾಯಿತು. ಪರ್ಯಾಯವಾಗಿ ಯಶಸ್ವಿ ಭೂ ಸುಧಾರಣೆಯನ್ನು ಮಾಡಲಾಯಿತು, ಆದರೆ ಭೂಮಿಯ ಮಾಲೀಕತ್ವವನ್ನು ಮಿತಿಗೊಳಿಸುವುದರ ಮೂಲಕ ಭೂಮಿಯನ್ನು ಮರುಹಂಚಿಕೊಳ್ಳುವ ಪ್ರಯತ್ನ ಕೆಲವು ಕಡೆ ವಿಫಲವಾಯಿತು. ಬೃಹತ್-ಪ್ರಮಾಣದ ಸಹಕಾರಿ ಕೃಷಿಯನ್ನು ಪರಿಚಯಿಸುವ ಪ್ರಯತ್ನಗಳು ವಿಫಲಗೊಳಿಸುವ ಗ್ರಾಮೀಣ ಗಣ್ಯರಿಂದ ನಿರಾಶೆಗೊಳಗಾದವು, ಅವರು ಕಾಂಗ್ರೆಸ್’ನ ಬಲಪಂಥೀಯ ವರ್ಗವನ್ನು ರೂಪಿಸಿದರು ಮತ್ತು ನೆಹರು ಅವರರ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಸಾಕಷ್ಟು ರಾಜಕೀಯ ಬೆಂಬಲವನ್ನು ಹೊಂದಿದ್ದರು. ಕೃಷಿ ಉತ್ಪಾದನೆಯು 1960 ರ ದಶಕದ ಆರಂಭದವರೆಗೂ ವಿಸ್ತರಿಸಿತು, ಹೆಚ್ಚುವರಿ ಭೂಮಿಯನ್ನು ಕೃಷಿ ಅಡಿಯಲ್ಲಿ ತರಲಾಯಿತು ಮತ್ತು ಕೆಲವು ನೀರಾವರಿ ಯೋಜನೆಗಳು ಪರಿಣಾಮ ಬೀರಲಾರಂಭಿಸಿದವು. ಯುನೈಟೆಡ್ ಸ್ಟೇಟ್ಸ್ನ ಲ್ಯಾಂಡ್-ಗ್ರಾಂಟ್ ಕಾಲೇಜುಗಳು ರೂಪಿಸಿದ ಕೃಷಿ ವಿಶ್ವವಿದ್ಯಾನಿಲಯಗಳ ಸ್ಥಾಪನೆಯು ಆರ್ಥಿಕತೆಯ ಅಭಿವೃದ್ಧಿಯಲ್ಲಿ ನೆರವಾಯಿತು. ಈ ವಿಶ್ವವಿದ್ಯಾಲಯಗಳು ಮೆಕ್ಸಿಕೋ ಮತ್ತು ಫಿಲಿಪೈನ್ಸ್ನಲ್ಲಿ ಆರಂಭದಲ್ಲಿ ಅಭಿವೃದ್ಧಿ ಹೊಂದಿದ ಗೋಧಿ ಮತ್ತು ಅಕ್ಕಿಯ ಉನ್ನತ-ಉತ್ಪತ್ತಿಯ ಪ್ರಭೇದಗಳ ತಳಿಗಳೊಂದಿಗೆ ಕೆಲಸ ಮಾಡಿದ್ದವು, 1960 ರ ದಶಕದಲ್ಲಿ ಹಸಿರು ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಮತ್ತು ಬೆಳೆಸುವ ಪ್ರಯತ್ನವಾಗಿ “”ಹಸಿರು ಕ್ರಾಂತಿ””ಯನ್ನು ಆರಂಭಿಸಲಾಯಿತು. ಅದೇ ಸಮಯದಲ್ಲಿ ವಿಫಲವಾದ ಮಳೆಗಾಲ- (ಮಾನ್ಸೂನ್ಗಳ) ಸರಣಿಯು ಸ್ಥಿರವಾದ ಪ್ರಗತಿಯಲ್ಲಿಯೂ ಮತ್ತು ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದ್ದ ಹೊರತಾಗಿಯೂ ದೇಶದಲ್ಲಿ ಗಂಭೀರ ಆಹಾರ ಕೊರತೆಯನ್ನು ಉಂಟುಮಾಡಿತ್ತು. Brown, Judith M. (2014-06-17). Nehru. Ashutosh Varshney (18 September 1998). Democracy, Development, and the Countryside: Urban-Rural Struggles in India. Cambridge University Press. pp. ದೇಶೀಯ ನೀತಿಗಳು thumb|ತೀನ್ ಮೂರ್ತಿ ಭವನದಲ್ಲಿ ನೆಹರು ಅವರ ಅಧ್ಯಯನ ಕೊಠಡಿ;TMstudy thumb|(ಎಡದಿಂದ ಬಲಕ್ಕೆ): ಭಾರತದ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು, ನಿಜಾಮ್ VII ಮತ್ತು ಜಯಂತ ನಾಥ್ ಚೌಧರಿ ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳನ್ನು ಒಳಗೊಂಡ ಬ್ರಿಟಿಷ್ ಇಂಡಿಯನ್ ಸಾಮ್ರಾಜ್ಯವನ್ನು ಎರಡು ವಿಧದ ಪ್ರದೇಶಗಳಾಗಿ ವಿಂಗಡಿಸಲಾಯಿತು: ಒಂದು :-ಬ್ರಿಟಿಷ್ ಭಾರತದ ಪ್ರಾಂತ್ಯಗಳು,- ಭಾರತದ ವೈಸ್ರಾಯ್’ಗೆ ಜವಾಬ್ದಾರರಾದ ಬ್ರಿಟಿಷ್ ಅಧಿಕಾರಿಗಳು ನೇರವಾಗಿ ಆಡಳಿತ ನಡೆಸಿದವು ; ಎರಡು :- ಸ್ಥಳೀಯ ಸ್ವಾಯತ್ತತೆಗೆ ಪ್ರತಿಯಾಗಿ ಬ್ರಿಟಿಷ್ ಸಾರ್ವಭೌಮತ್ವವನ್ನು ಗುರುತಿಸಿದ ಸ್ಥಳೀಯ ಆನುವಂಶಿಕ ರಾಜತ್ವದ ಆಡಳಿತಗಾರರ ಆಳ್ವಿಕೆಯ ಅಡಿಯಲ್ಲಿ ಇದ್ದ ಪ್ರದೇಶಗಳು, ಅವು ಹೆಚ್ಚಿನ ಸಂದರ್ಭಗಳಲ್ಲಿ ಒಡಂಬಡಿಕೆಯಿಂದ ಬ್ರಿಟಿಷರ ಅಧೀನದಲ್ಲಿ ಸ್ಥಾಪಿಸಲ್ಪಟ್ಟಿತ್ತು . 1947 ಮತ್ತು 1950 ರ ನಡುವೆ, ರಾಜ ಸಂಸ್ಥಾನಗಳ ಪ್ರಾಂತ್ಯಗಳು ನೆಹರು ಮತ್ತು ಸರ್ದಾರ್ ಪಟೇಲರ ಅಡಿಯಲ್ಲಿ ಭಾರತೀಯ ಒಕ್ಕೂಟಕ್ಕೆ ರಾಜಕೀಯವಾಗಿ ಸಂಯೋಜಿಸಲ್ಪಟ್ಟವು. ಹೆಚ್ಚಿನವುಗಳು ಅಸ್ತಿತ್ವದಲ್ಲಿರುವ ಪ್ರಾಂತ್ಯಗಳಲ್ಲಿ ವಿಲೀನಗೊಂಡವು; ಇತರ ಸಂಸ್ಥಾನ ಪ್ರದೇಶಗಳು ಹೊಸ ಪ್ರಾಂತ್ಯಗಳಾಗಿ ರೂಪಿಸಲ್ಪಟ್ಟವು, ಉದಾಹರಣೆಗೆ ರಜಪುತಾನ, ಹಿಮಾಚಲ ಪ್ರದೇಶ, ಮಧ್ಯಭಾರತ್, ಮತ್ತು ವಿಂಧ್ಯ-ಪ್ರದೇಶ, ಅನೇಕ ರಾಜಪ್ರಭುತ್ವದ ರಾಜ್ಯಗಳು; ಮೈಸೂರು, ಹೈದರಾಬಾದ್, ಭೋಪಾಲ್, ಮತ್ತು ಬಿಲಾಸ್ಪುರ ಸೇರಿದಂತೆ ಕೆಲವು, ಪ್ರತ್ಯೇಕ ಪ್ರಾಂತ್ಯಗಳಾಗಿ ಮಾರ್ಪಟ್ಟವು. 1935 ರ ಭಾರತ ಸರ್ಕಾರ ಕಾಯಿದೆ ಭಾರತದ ಸಂವಿಧಾನಾತ್ಮಕ ಕಾನೂನಾಗಿದ್ದು ಅದನ್ನು ಹೊಸ ಸಂವಿಧಾನವನ್ನು ಅಂಗೀಕರಿಸುವ ವರೆಗೆ ಉಳಿಸಿಕೊಳ್ಳಲಾಯಿತು.Ghosh, Bishwanath (2016-03-17). "Maps are malleable. Even Bharat Mata's". The Hindu."Five states that refused to join India after Independence". August 2017. thumb|left|260px| ಭಾರತ ಆಡಳಿತ ವಿಭಾಗಗಳು 1951thumb|center|260px|ರಾಜ್ಯ ಪುನಸ್ಸಂಘಟನೆ ಕಾಯಿದೆಯ ನಂತರ ಭಾರತೀಯ ರಾಜ್ಯಗಳು - 1953–1956 thumb|ನೆಹರು ಭಾರತೀಯ ಸಂವಿಧಾನಕ್ಕೆ 1950 ರಲ್ಲಿ ಸಹಿ ಹಾಕಿದರು 1950 ರ ಜನವರಿ 26 ರಂದು ಜಾರಿಗೊಳಿಸಲಾದ ಹೊಸ ಸಂವಿಧಾನವು ಭಾರತದ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ಮಾಡಿತು. ನೆಹರು ಹೊಸ ಗಣರಾಜ್ಯವನ್ನು "ರಾಜ್ಯಗಳ ಒಕ್ಕೂಟ" ಎಂದು ಘೋಷಿಸಿದರು. 1950 ರ ಸಂವಿಧಾನವು ಮುಖ್ಯವಾದ ಮೂರು ವಿಧದ ರಾಜ್ಯಗಳನ್ನು ಹೊಂದಿದ ವಿಶಿಷ್ಠ ರೂದ್ದಾಗಿತ್ತು: ಬ್ರಿಟಿಷ್ ಭಾರತದ ಮಾಜಿ ಗವರ್ನರ್ಗಳ ಪ್ರಾಂತ್ಯಗಳಾಗಿರುವ ಪಾರ್ಟ್ ‘ಎ’ ರಾಜ್ಯಗಳು; ಚುನಾಯಿತ ಗವರ್ನರ್ ಮತ್ತು ರಾಜ್ಯ ಶಾಸಕಾಂಗದಿಂದ ಆಳಲ್ಪಟ್ಟ ರಾಜ್ಯಗಳು. ಪಾರ್ಟ್ ಬಿ ರಾಜ್ಯಗಳು. ಹಿಂದಿನ ರಾಜವಂಶದ ರಾಜ್ಯಗಳು ಅಥವಾ ಸಂಸ್ಥಾನದ ಗುಂಪುಗಳಾಗಿದ್ದವು, ಇದು ಸಾಮಾನ್ಯವಾಗಿ ರಾಜಪ್ರಮುಖರಿಂದ ಆಳ್ವಿಕೆಯಲ್ಲಿರುವುವು. ಮತ್ತು ಒಂದು ಚುನಾಯಿತ ಶಾಸಕಾಂಗ ಹೊಂದಿದ್ದವು. ರಾಜಪ್ರಮುಖನನ್ನು ಭಾರತದ ರಾಷ್ಟ್ರಪತಿ ನೇಮಕ ಮಾಡಿದರು. ಪಾರ್ಟ್ ಸಿ ರಾಜ್ಯಗಳು ಮಾಜಿ ಮುಖ್ಯ ಆಯುಕ್ತರ ಪ್ರಾಂತ್ಯಗಳು ಮತ್ತು ಕೆಲವು ರಾಜಪ್ರಭುತ್ವ ರಾಜ್ಯಗಳನ್ನು ಒಳಗೊಂಡಿತ್ತು, ಮತ್ತು ಪ್ರತಿಯೊಂದೂ ಭಾರತದ ರಾಷ್ಟ್ರಪತಿಯಿಂದ ನೇಮಕವಾದ ಮುಖ್ಯ ಆಯುಕ್ತರ ಆಡಳಿತದಲ್ಲಿದ್ದವು. ಏಕ ಪಾರ್ಟ್ ಡಿ ರಾಜ್ಯವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಇದು ಕೇಂದ್ರ ಸರ್ಕಾರದಿಂದ ನೇಮಕವಾದ ಲೆಫ್ಟಿನೆಂಟ್ ಗವರ್ನರ್ ಆಡಳಿತಕ್ಕೆ ಒಳಪಟ್ಟಿತು. Delhi-Puducherry-but-President-word-final ಡಿಸೆಂಬರ್ 1953 ರಲ್ಲಿ, ರಾಜ್ಯಗಳ ರಚನೆಗಾಗಿ ರಾಜ್ಯಗಳ ರಚನೆಗೆ ನೆಹರು ಸಂಸ್ಥಾನ ಪುನರ್ ಸಂಘಟನೆ ಆಯೋಗವನ್ನು ನೇಮಿಸಿದರು. ಇದನ್ನು ನ್ಯಾಯಮೂರ್ತಿ ಫಜಲ್ ಅಲಿಯ ನೇತೃತ್ವದಲ್ಲಿ ಮತ್ತು ಆಯೋಗವನ್ನು ಸ್ವತಃ ಫಜಲ್ ಅಲಿ ಕಮಿಷನ್ ಎಂದು ಕರೆಯಲಾಗುತ್ತಿತ್ತು. ಈ ಆಯೋಗದ ಕಾರ್ಯಗಳನ್ನು ಡಿಸೆಂಬರ್ 1954 ರಿಂದ ನೆಹರು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಬಲ್ಲಭ್ ಪಂತ್ ಅವರು ಮೇಲ್ವಿಚಾರಣೆ ಮಾಡಿದರು. 1955 ರಲ್ಲಿ ಭಾರತದ ರಾಜ್ಯಗಳ ಮರುಸಂಘಟನೆಗಾಗಿ ಆಯೋಗವು ವರದಿಯನ್ನು ರಚಿಸಿತು. ಏಳನೇ ತಿದ್ದುಪಡಿಯಲ್ಲಿ, ಭಾಗ ಎ, ಭಾಗ ಬಿ, ಭಾಗ ಸಿ, ಮತ್ತು ಭಾಗ ಡಿ ರಾಜ್ಯಗಳ (Part A, Part B, Part C, and Part D states was abolished) ನಡುವಿನ ಅಸ್ತಿತ್ವದಲ್ಲಿರುವ ವ್ಯತ್ಯಾಸವನ್ನು ರದ್ದುಪಡಿಸಲಾಯಿತು. ಪಾರ್ಟ್ ಎ ಮತ್ತು ಪಾರ್ಟ್ ಬಿ ರಾಜ್ಯಗಳ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಲಾಯಿತು, ಇದನ್ನು "ರಾಜ್ಯಗಳು" ಎಂದು ಕರೆಯಲಾಗುತ್ತದೆ. ಒಂದು ಹೊಸ ರೀತಿಯ ಘಟಕ, ಕೇಂದ್ರಾಡಳಿತ ಪ್ರದೇಶ (ಯೂನಿಯನ್ ಪ್ರದೇಶ), ವಿಭಾಗ ಅ ಅಥವಾ ಭಾಗ ಆ ಸ್ಥಿತಿಯಂತೆ ವರ್ಗೀಕರಣವನ್ನು ಬದಲಾಯಿಸಿತು. ನೆಹರು ಭಾರತೀಯರಲ್ಲಿ ಸಾಮಾನ್ಯತೆಯನ್ನು ಮತ್ತು ಪಾನ್-ಇಂಡಿಯನಿಸಮ್ ಅನ್ನು ಉತ್ತೇಜಿಸಿದರು. ಧಾರ್ಮಿಕ ಅಥವಾ ಜನಾಂಗೀಯ ನೀತಿಗಳ ಮೇಲೆ ರಾಜ್ಯಗಳನ್ನು ಮರುಸಂಘಟಿಸಲು ಅವರು ನಿರಾಕರಿಸಿದರು. ಪಾಶ್ಚಾತ್ಯ ವಿದ್ವಾಂಸರು ನೆಹರು ಅವರನ್ನು ಆಧುನಿಕ ಗಣರಾಜ್ಯವಾಗಿ ರಾಜ್ಯಗಳ ಏಕೀಕರಣ ಮಾಡಿದ್ದಕ್ಕಾಗಿ ಪ್ರಶಂಸಿಸಿದ್ದಾರೆ ಆದರೆ ಈ ಮರುಸಂಗಟನೆಯ ಕಾನೂನು (ಆಕ್ಟ್) ಭಾರತದಲ್ಲಿ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿಲ್ಲ.STATE OF THE NATIONExpress News Service , Express News Service : Sun May 11 2008, The reorganization of states in India and why it happened;In 1953, the first linguistic state of Andhra for Telugu-speaking people was born.;Luke Koshi ಸಾಮಾಜಿಕ ನೀತಿಗಳು ಶಿಕ್ಷಣ ಜವಾಹರಲಾಲ್ ನೆಹರೂ ಭಾರತದ ಮಕ್ಕಳ ಮತ್ತು ಯುವಜನರಿಗೆ ಶಿಕ್ಷಣದ ಭಾವೋದ್ರಿಕ್ತ ವಕೀಲರಾಗಿದ್ದರು, ಇದು ಭಾರತದ ಭವಿಷ್ಯದ ಪ್ರಗತಿಗೆ ಅವಶ್ಯಕವೆಂದು ನಂಬಿದ್ದರು. ಅವರ ಸರ್ಕಾರವು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಒಳಗೊಂಡಂತೆ ಉನ್ನತ ಶಿಕ್ಷಣದ ಅನೇಕ ಸಂಸ್ಥೆಗಳ ಸ್ಥಾಪನೆಯನ್ನು ಕೈಗೊಂಡಿತು [142] ಭಾರತದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಖಾತರಿಪಡಿಸಿಕೊಳ್ಳಲು ತನ್ನ ಐದು ವರ್ಷಗಳ ಯೋಜನೆಯಲ್ಲಿ ನೆಹರೂ ಒಂದು ಬದ್ಧತೆಯನ್ನು ಕೂಡ ವಿವರಿಸಿದ್ದಾರೆ. ಈ ಉದ್ದೇಶಕ್ಕಾಗಿ, ಸಾಮೂಹಿಕ ಹಳ್ಳಿಯ ದಾಖಲಾತಿ ಕಾರ್ಯಕ್ರಮಗಳ ಸೃಷ್ಟಿ ಮತ್ತು ಸಾವಿರಾರು ಶಾಲೆಗಳ ನಿರ್ಮಾಣವನ್ನು ನೆಹರೂ ಕೈಗೊಂಡರು. ಅಪೌಷ್ಟಿಕತೆಗೆ ಹೋರಾಡಲು ಮಕ್ಕಳಿಗೆ ಉಚಿತ ಹಾಲು ಮತ್ತು ಆಹಾರವನ್ನು ಒದಗಿಸುವಂತಹ ಉಪಕ್ರಮಗಳನ್ನು ಸಹ ನೆಹರೂ ಪ್ರಾರಂಭಿಸಿದರು. ವಯಸ್ಕರಲ್ಲಿ, ವಿಶೇಷವಾಗಿ ವಯಸ್ಕರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಯಸ್ಕರ ಶಿಕ್ಷಣ ಕೇಂದ್ರಗಳು, ವೃತ್ತಿಪರ ಮತ್ತು ತಾಂತ್ರಿಕ ಶಾಲೆಗಳನ್ನು ಆಯೋಜಿಸಲಾಯಿತು. [143] ವೈವಾಹಿಕ ಕಾನೂನು ನೆಹರೂ ನೇತೃತ್ವದಲ್ಲಿ, ಭಾರತೀಯ ಸಂಸತ್ತು ಜಾತಿ ತಾರತಮ್ಯವನ್ನು ಅಪರಾಧೀಕರಿಸುವ ಮತ್ತು ಕಾನೂನು ಹಕ್ಕುಗಳು ಮತ್ತು ಮಹಿಳೆಯರ ಸಾಮಾಜಿಕ ಸ್ವಾತಂತ್ರ್ಯವನ್ನು ಹೆಚ್ಚಿಸಲು ಹಿಂದೂ ಕಾನೂನಿಗೆ ಹಲವು ಬದಲಾವಣೆಗಳನ್ನು ಜಾರಿಗೊಳಿಸಲಾಯಿತು. thumb|left|ದುರ್ಗಾಪುರ್ ಸ್ಟೀಲ್ ಪ್ಲಾಂಟ್ನಲ್ಲಿ ಶಾಲಾ ಮಕ್ಕಳೊಂದಿಗೆ ನೆಹರು. ದುರ್ಗಾಪುರ್, ರೂರ್ಕೆಲಾ ಮತ್ತು ಭಿಲಾಯಿ 1950 ರ ಉತ್ತರಾರ್ಧದಲ್ಲಿ ಭಾರತದ ಎರಡನೇ ಪಂಚವಾರ್ಷಿಕ ಯೋಜನೆ ಅಡಿಯಲ್ಲಿ ಸ್ಥಾಪಿಸಲಾದ ಮೂರು ಏಕೀಕೃತ ಉಕ್ಕು ಘಟಕಗಳಾಗಿವೆ. ನೆಹರೂ ಅವರೇ ನಿರ್ದಿಷ್ಟವಾಗಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಭಾರತೀಯ ಸಂವಿಧಾನದ “44 ನೇ ಲೇಖ”ವನ್ನು ಬರೆದಿದ್ದಾರೆ: "ರಾಜ್ಯವು ಭಾರತದ ಭೂಪ್ರದೇಶದಲ್ಲೆಲ್ಲಾ ಸಮಾನ ನಾಗರಿಕ ಸಂಹಿತೆಯನ್ನು ನೀಡಲು ಪ್ರಯತ್ನಿಸಬೇಕು". ಲೇಖವು ಭಾರತದ ಜಾತ್ಯತೀತತೆಯ ಆಧಾರವನ್ನು ರೂಪಿಸಿದೆ. ಆದಾಗ್ಯೂ, ಕಾನೂನಿನ ಅಸಮಂಜಸವಾದ ಅನ್ವಸುವಿಕೆಗಾಗಿ ನೆಹರು ಅವರನ್ನು ಟೀಕಿಸಿದ್ದಾರೆ. ಮುಖ್ಯವಾಗಿ, ನೆಹರೂ ಮುಸ್ಲಿಮರಿಗೆ ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ಮದುವೆ ಮತ್ತು ಪರಂಪರೆಯ ವಿಷಯಗಳಲ್ಲಿ ಇರಿಸಿಕೊಳ್ಳಲು ಅವಕಾಶ ನೀಡಿದರು ಎಂಬುದು ಟೀಕಕಾರರನಿಲುವು . ಗೋವಾದ ಸಣ್ಣ ರಾಜ್ಯದಲ್ಲಿ, ಹಳೆಯ ಪೋರ್ಚುಗೀಸ್ ಕುಟುಂಬ ಕಾನೂನುಗಳನ್ನು ಆಧರಿಸಿ ನಾಗರಿಕ ಸಂಹಿತೆಯು ಮುಂದುವರೆಸಲು ಅನುಮತಿ ನೀಡಲಾಯಿತು, ಮತ್ತು ಮುಸ್ಲಿಮರ ವೈಯಕ್ತಿಕ ಕಾನೂನನ್ನು ನೆಹರು ನಿಷೇಧಿಸಿದ್ದರು. 1961 ರಲ್ಲಿ ಭಾರತದಿಂದ ಗೋವಾವನ್ನು ಸ್ವಾಧೀನಪಡಿಸಿಕೊಳ್ಳುವುದರ ಪರಿಣಾಮವಾಗಿ, ನೆಹರೂ, ಜನರು ತಮ್ಮ ಕಾನೂನುಗಳನ್ನು ಹಾಗೇ ಉಳಿಸಬಹುದೆಂದು ಭರವಸೆ ನೀಡಿದರು. ಇದು ಆಯ್ದ ಜಾತ್ಯತೀತತೆಯ ಆರೋಪಕ್ಕೆ ಕಾರಣವಾಗಿದೆ ಎಂದು ಕೆಲವರು ಆಕ್ಷೇಪಿಸುತ್ತಾರೆ.Som, Reba (February 1994). "Jawaharlal Nehru and the Hindu Code: A Victory of Symbol over Substance?". Modern Asian Studies. 28 (1): 165–194[Kulke, Hermann; Dietmar Rothermund (2004). A History of India. Routledge. p. 328.] Forbes, Geraldine; Geraldine Hancock Forbes; Gordon Johnson (1999). Women in Modern India. Cambridge University Press. p. 115. ನೆಹರೂ ಅವರು ಮುಸಲ್ಮಾನರಿಗೆ ಕಾನೂನಿನ ತಿದ್ದುಪಡಿಗೆ ವಿನಾಯಿತಿ ನೀಡಿದ್ದರು ಮತ್ತು ಅವುಗಳು ಹಾಗೆಯೇ ಇದ್ದವು, ಅವರು 1954 ರಲ್ಲಿ ವಿಶೇಷ ಮದುವೆ ಕಾಯಿದೆಯನ್ನು ಮಂಜೂರು ಮಾಡಿಸಿದರು. ಈ ಕಾನೂನಿನ ಹಿಂದಿನ ಕಲ್ಪನೆಯೆಂದರೆ ಭಾರತದಲ್ಲಿ ಎಲ್ಲರಿಗೂ ವೈಯಕ್ತಿಕ ಕಾನೂನಿನ ಹೊರಗೆ ಮದುವೆಯಾಗಲು ಒಂದು ನಾಗರಿಕ ವಿವಾಹಕ್ಕೆ ಅವಕಾಶ ನೀಡುವುದು. ಎಂದಿನಂತೆ ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಕಾನೂನು ಎಲ್ಲಾ ಭಾರತಕ್ಕೂ ಅನ್ವಯಿಸುತ್ತದೆ (ಮತ್ತೆ ಆಯ್ದ ಜಾತ್ಯತೀತವಾದದ ಆರೋಪಗಳಿಗೆ ಕಾರಣವಾಯಿತು). ಅನೇಕ ವಿಷಯಗಳಲ್ಲಿ, ಹಿಂದೂ ಮದುವೆ ಕಾನೂನು 1955 ರದಕ್ಕೆ ಹೋಲುತ್ತದೆ, ಹಿಂದೂಗಳ ಬಗೆಗಿನ ಕಾನೂನು ಜಾತ್ಯತೀತವಾಗಿದೆಯೆಂಬ ಕಲ್ಪನೆಯನ್ನು ನೀಡುತ್ತದೆ. ವಿಶೇಷ ವಿವಾಹ ಕಾಯಿದೆಯಡಿ ಮುಸ್ಲಿಮರು ಅದರ ಅಡಿಯಲ್ಲಿ ಮದುವೆಯಾಗಲು ಅವಕಾಶ ಮಾಡಿಕೊಟ್ಟರು ಮತ್ತು ಅದರ ಮೂಲಕ ರಕ್ಷಣೆಗಳನ್ನು ಉಳಿಸಿಕೊಂಡರು, ಸಾಮಾನ್ಯವಾಗಿ ಮುಸ್ಲಿಮ್ ಮಹಿಳೆಯರಿಗೆ ಪ್ರಯೋಜನಕಾರಿ, ಅದು ಅವರ ವೈಯಕ್ತಿಕ ಕಾನೂನಿನಲ್ಲಿ ಕಂಡುಬಂದಿಲ್ಲ. ಈ ಕನೂನು ಅಡಿಯಲ್ಲಿ ಬಹುಪತ್ನಿತ್ವ ಕಾನೂನುಬಾಹಿರವಾಗಿತ್ತು ಮತ್ತು ಆಯಾ ಮುಸ್ಲಿಂ ವೈಯಕ್ತಿಕ ಕಾನೂನಿನ ಬದಲಾಗಿ ಭಾರತೀಯ ಉತ್ತರಾಧಿಕಾರ ಕಾಯಿದೆ ಮೂಲಕ ಉತ್ತರಾಧಿಕಾರ ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸಲಾಗುತ್ತದೆ. ವಿಚ್ಛೇದನವು ಜಾತ್ಯತೀತ ಕಾನೂನಿನಿಂದ ನಿಯಂತ್ರಿಸಲ್ಪಡುತ್ತದೆ, ಮತ್ತು ವಿಚ್ಛೇದಿತ ಹೆಂಡತಿಯ ನಿರ್ವಹಣೆ ನಾಗರಿಕ (ಸಿವಿಲ್) ಕಾನೂನಿನಲ್ಲಿ ರೂಪಿಸಲಾದ ಸಾಲುಗಳಲ್ಲಿ ಇರುತ್ತದೆ. Erckel, Sebastian (2011). India and the European Union – Two Models of Integration, GRIN Verlag, ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಮೀಸಲಾತಿ ಪರಿಶಿಷ್ಟ ಜಾತಿ ಮತ್ತು ನಿಗದಿತ ಬುಡಕಟ್ಟು ಜನರು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆಗಳನ್ನು ಮತ್ತು ದುಷ್ಪರಿಣಾಮಗಳನ್ನು ನಿರ್ಮೂಲನೆ ಮಾಡಲು ಸರ್ಕಾರಿ ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ವ್ಯವಸ್ಥೆ ರಚಿಸಲಾಗಿದೆ. ನೆಹರು ಜಾತ್ಯತೀತತೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಉತ್ತೇಜಿಸಿದರು , ಅಲ್ಪಸಂಖ್ಯಾತರು ಸರ್ಕಾರದಲ್ಲಿ ಪ್ರತಿನಿಧಿಸುವುದನ್ನು ಹೆಚ್ಚಿಸಿದರು. thumb|1948 ರಲ್ಲಿ ಲಂಡನ್ನಲ್ಲಿ ನಡೆದ ಕಾಮನ್ವೆಲ್ತ್ ಪ್ರಧಾನಿಗಳ ಮೊದಲ ಸಭೆಯಲ್ಲಿ ನೆಹರು, ಗಿರಿಜಾ ಶಂಕರ್ ಬಾಜ್ಪೈ ಅವರೊಂದಿಗೆ thumb|ಪೂರ್ವ ಜರ್ಮನಿಯ ಪ್ರಧಾನ ಮಂತ್ರಿ ಒಟ್ಟೊ ಗ್ರೋಟ್ವೊಲ್ರೊಂದಿಗೆ ನೆಹರು ಭಾಷಾ ನೀತಿ ಹಿಂದಿ ಭಾಷೆಯನ್ನು ಭಾರತೀಯ ರಾಷ್ಟ್ರದ ವ್ಯವಹಾರ ಭಾಷೆ (ಲಿಂಗ್ವಾ-ಫ್ರಾಂಕ) ಎಂದು ಪ್ರಾಮುಖ್ಯತೆ ಕೊಡುವ ಕಾಂಗ್ರೆಸ್ ಪಕ್ಷದ ನೇತೃತ್ವವನ್ನು ನೆಹರು ಅವರು ವಹಿಸಿದರು, ಇದು ಹಿಂದಿಯಲ್ಲಿ ಮಾತನಾಡದೆ ಬೇರೆ ಭಾಷೆಯವವರೊಂದಿಗಿನ ಸಮಗ್ರ ಮತ್ತು ವಿರೋಧ ವಿಚಾರದ ಚರ್ಚೆಯ ನಂತರ, ಹದಿನೈದು ವರ್ಷಗಳ ಕಾಲ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯಾಗಿ ಮುಂದುವರೆಸುವ ಷರತ್ತಿನೊಂದಿಗೆ 1950 ರಲ್ಲಿ ಭಾರತದ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಸ್ವೀಕರಿಸಲಾಯಿತು, ನಂತರ ಹಿಂದಿ ಏಕೈಕ ಅಧಿಕೃತ ಭಾಷೆಯಾಯಿತು. 1965 ರ ನಂತರ ಹಿಂದಿ ಏಕೈಕ ಅಧಿಕೃತ ಭಾಷೆಗೆ ಭಾರತೀಯ ಸರ್ಕಾರವು ಮಾಡಿದ ಪ್ರಯತ್ನಗಳು ಹಿಂದಿನದಕ್ಕಿಂತ ಹೆಚ್ಚಾಗಿ ಹಿಂದಿ ಮಾತೃಭಾಷೆಯಲ್ಲದ ಹಲವು ರಾಜ್ಯಗಳಿಗೆ ಸ್ವೀಕಾರಾರ್ಹವಾಗಲಿಲ್ಲ. ಅವರು ಇಂಗ್ಲಿಷ್ ಬಳಕೆಯನ್ನು ಮುಂದುವರಿಸಲು ಬಯಸಿದರು. ದ್ರಾವಿಡರ್ ಕಳಗಂನ ಉಪಶಾಖೆಯಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಹಿಂದಿಗೆ ವಿರೋಧವನ್ನು ಮಾಡುವ ನಾಯಕತ್ವ ವಹಿಸಿತು. ಅವರ ಭಯವನ್ನು ಕಡಿಮೆ ಮಾಡಲು,1965 ರಲ್ಲಿ, 1965 ರ ಬಳಿಕವೂ ಇಂಗ್ಲಿಷ್‍ನ್ನು ಮುಂದುವರಿದ-ಬಳಕೆಯಾಗಿ ಅಧಿಕೃತ ಭಾಷೆ ಕಾಯಿದೆಯಡಿ ನೆಹರೂ ಜಾರಿಗೆ ತಂದರು. ಕಾಯಿದೆಯ ಪಠ್ಯವು ಡಿಎಮ್’ಕೆಯ ಬೇಡಿಕೆಯನ್ನು ಪೂರೈಸಲಿಲ್ಲ ಮತ್ತು ಅವರ ಭರವಸೆಗಳನ್ನು ಭವಿಷ್ಯದ ಆಡಳಿತಗಳು ಗೌರವಿಸದೆ ಇರಬಹುದು ಎಂಬ ಅವರ ಸಂದೇಹವನ್ನು ಹೆಚ್ಚಿಸಿತು. ನೆಹರೂರ ಮಗಳು, ಇಂದಿರಾ ಗಾಂಧಿಯವರ ಹೆಚ್ಚಿನ ಒತ್ತಡದಲ್ಲಿ, ಇಂಗ್ಲಿಷ್ ಅಲ್ಲದ ಹಿಂದಿ ಮಾತನಾಡುವ ರಾಜ್ಯಗಳು ಬಯಸಿದಷ್ಟು ಕಾಲ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಅನ್ನು ಮುಂದುವರೆಸಬಹುದೆಂದು ಭರವಸೆ ನೀಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಈ ವಿವಾದವನ್ನು ಬಗೆಹರಿಸಲಾಯಿತು. ಅಧಿಕೃತ ಭಾಷೆ ಕಾಯ್ದೆ 1967 ರಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕೃತ ಭಾಷೆಯಾಗಿ ಹಿಂದಿ ಮತ್ತು ಇಂಗ್ಲಿಷ್’ಗಳನ್ನು ಅನಿರ್ದಿಷ್ಟ ಬಳಕೆಗೆ ಖಾತ್ರಿಪಡಿಸುವಂತೆ ತಿದ್ದುಪಡಿ ಮಾಡಿದೆ. ಇದು ಭಾರತೀಯ ಗಣರಾಜ್ಯದ ಪ್ರಸಕ್ತ "ದ್ವಿಭಾಷಾ ವಾಸ್ತವಿಕ ಅನಿರ್ದಿಷ್ಟ ನೀತಿ" ಯನ್ನು ಪರಿಣಾಮಕಾರಿಯಾಗಿ ಬಗೆಹರಿಸಿತು.Language issue again: the need for a clear-headed policyS. Viswanathan DECEMBER 07, 2009 ವಿದೇಶಾಂಗ ನೀತಿ ಇದನ್ನೂ ನೋಡಿ: ಭಾರತ ಮತ್ತು ಅಲಿಪ್ತ ಚಳವಳಿ ಕಾಮನ್ವೆಲ್ತ್ 1947 ರಿಂದ 1964 ರವರೆಗೂ ನೆಹರೂ ಹೊಸದಾಗಿ ಸ್ವತಂತ್ರ ಪಡೆದ ಭಾರತವನ್ನು ಮುನ್ನಡೆಸಿದರು. ಯುನೈಟೆಡ್ ಸ್ಟೇಟ್ಸ್ ಮತ್ತು ಸೋವಿಯೆತ್ ಯೂನಿಯನ್ ಎರಡೂ ಶೀತಲ ಯುದ್ಧದ ಉದ್ದಕ್ಕೂ ಭಾರತವನ್ನು ಮಿತ್ರರಾಷ್ಟ್ರನ್ನಾಗಿ ಮಾಡಲು ಸ್ಪರ್ಧಿಸಿದವು. ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ನೆಹರು ಸಹ ಉತ್ತಮ ಸಂಬಂಧವನ್ನು ಹೊಂದಿದ್ದರು. ಲಂಡನ್ನ ಘೋಷಣೆಯಡಿಯಲ್ಲಿ, ಭಾರತವು 1950 ರ ಜನವರಿಯಲ್ಲಿ ಅದು ಗಣರಾಜ್ಯವಾದಾಗ ಅದು ಕಾಮನ್ವೆಲ್ತ್ ರಾಷ್ಟ್ರಗಳನ್ನು ಸೇರಿಕೊಂಡಿತು ಮತ್ತು ಬ್ರಿಟಿಷ್ ರಾಜನನ್ನು ತನ್ನ ಸ್ವತಂತ್ರ ಸದಸ್ಯ ರಾಷ್ಟ್ರಗಳ ಮುಕ್ತ ಕಾಮನ್ವೆಲ್ತ್ ಸಂಘಟನೆಯ ಸಂಕೇತವೆಂದು ಪರಿಗಣಿಸಿತು. "ಕಾಮನ್ವೆಲ್ತ್ನ ಇತರೆ ರಾಷ್ಟ್ರಗಳು ಭಾರತದ ಈ ಸಂಘಟನೆಯ ಸದಸ್ಯತ್ವವನ್ನು ಒಪ್ಪಿದವು. “ಮರಳಿ ಮನೆಗೆ” ಈ ಕ್ರಮಕ್ಕೆ ಪ್ರತಿಕ್ರಿಯೆ ಅನುಕೂಲಕರವಾಗಿತ್ತು; ನೆಹರೂರ ನಿರ್ಧಾರವನ್ನು ಅತಿ ಎಡದವರು ಮತ್ತು ಅತಿ-ಬಲಪಂಥಿಗಳು ಟೀಕಿಸಿದರು.[154][155] ವಿದೇಶಿ ನೀತಿ - ಅಲಿಪ್ತ ಚಳುವಳಿ ಅಂತರಾಷ್ಟ್ರೀಯ ಮಟ್ಟದಲ್ಲಿ, ನೆಹರೂ ಶಾಂತಿಪ್ರಿಯರಾಗಿದ್ದರು ಮತ್ತು ವಿಶ್ವಸಂಸ್ಥೆಯ ಪ್ರಬಲ ಬೆಂಬಲಿಗರಾಗಿದ್ದರು. ಅವರು ಯುಎಸ್ ಮತ್ತು ಯುಎಸ್ಎಸ್ಆರ್ ನೇತೃತ್ವದ ರಾಷ್ಟ್ರಗಳ ಪ್ರತಿಸ್ಪರ್ಧಿ ಬ್ಲಾಕ್’ಗಳ ನಡುವಿನ ತಟಸ್ಥತೆಯನ್ನು ದೃಢಪಡಿಸುವ ಅಲಿಪ್ತ ಚಳುವಳಿಯನ್ನು, ಅಲಿಪ್ತ ನೀತಿಯನ್ನು ಅನುಸರಿಸಿದರು ಮತ್ತು ಆ ನೀತಿಯ ಸಹ-ಸಂಸ್ಥಾಪಕರಾಗಿದ್ದರು. ಅಲಿಪ್ತ ನೀತಿಯನ್ನು ಅನುಸರಿಸಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾಕ್ಕೆ ಅಲ್ಲಿ ಸರ್ಕಾರ ರಚನೆಯಾದ, ಶೀಘ್ರದಲ್ಲೇ ಮನ್ನಣೆ ನೀದಿದರು. (ಹೆಚ್ಚಿನ ಪಾಶ್ಚಿಮಾತ್ಯ ತಂಡವು ತೈವಾನ್ನೊಂದಿಗೆ ಸಂಬಂಧವನ್ನು ಮುಂದುವರೆಸಿತು), ನೆಹರೂ ಯುನೈಟೆಡ್ ನೇಷನ್ಸ್’ನಲ್ಲಿ ಅದರ ಸೇರ್ಪಡೆಗಾಗಿ ವಾದಿಸಿದರು ಮತ್ತು ಕೊರಿಯದೊಂದಿಗಿನ ಸಂಘರ್ಷದಲ್ಲಿ ಚೀನಿಯರನ್ನು ಆಕ್ರಮಣಕಾರಿ ಎಂದು ಹೇಳಲು ನಿರಾಕರಿಸಿದರು. ಅವರು 1950 ರಲ್ಲಿ ಚೀನಾದೊಂದಿಗೆ ಆದರದ ಮತ್ತು ಸೌಹಾರ್ದ ಸಂಬಂಧಗಳನ್ನು ಸ್ಥಾಪಿಸಲು ಪ್ರಯತ್ನಿಸಿದರು ಮತ್ತು ಕಮ್ಯೂನಿಸ್ಟ್ ರಾಜ್ಯಗಳು ಮತ್ತು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿ ಪಾಶ್ಚಿಮಾತ್ಯ ಬ್ಲಾಕ್’ಗಳ ನಡುವಿನ ಕಂದಕ ಮತ್ತು ಉದ್ವಿಗ್ನತೆಯನ್ನು ಕಡಿಮೆಮಾಡಲು ಪ್ರಯತ್ನಿಸಿದರು.Robert Sherrod (19 January 1963). "Nehru:The Great Awakening". The Saturday Evening Post. 236 (2): 60–67.Is it true that Nehru rejected a permanent seat offered to India in the UN Security Council by The US, ರಕ್ಷಣೆ ಮತ್ತು ಪರಮಾಣು ನೀತಿ 1947 ರಲ್ಲಿ ರಾಜಕೀಯ ಮತ್ತು ಜಾಗತಿಕ ರಾಜತಂತ್ರದ ವಾಸ್ತವತೆಗೆ ನೆಹರೂ ಕುರುಡರಾಗಿರಲಿಲ್ಲ. 1949 ರಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಅಡಿಪಾಯವನ್ನು ಹಾಕಿದಾಗ,- "ನಾವು, ತಲೆಮಾರುಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ಎಲ್ಲವನ್ನೂ ಪ್ರಯತ್ನಿಸುತ್ತಿದ್ದೇವೆ. ನಮ್ಮ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳನ್ನು ವೈಭವೀಕರಿಸುವ ಒಂದು ಅರ್ಥದಲ್ಲಿ, ಅದು ಶಾಂತಿಯುತವಾದ ರೀತಿಯಲ್ಲಿ ಮತ್ತು ಅಹಿಂಸೆಯನ್ನು ಅನುಷ್ಠಾನಗೊಳಿಸುತ್ತದೆ.ಇದು ವಿಚಿತ್ರವಾಗಿದ್ದರೂ, ಅದು ಜೀವನದ ವಿಚಿತ್ರತೆಯನ್ನು ಪ್ರತಿಬಿಂಬಿಸುತ್ತದೆ ಜೀವನವು ತಾರ್ಕಿಕವಾದರೂ ಎಲ್ಲಾ ಅನಿಶ್ಚಯತೆಗಳನ್ನು ಎದುರಿಸಬೇಕಾಗಿದೆ ಮತ್ತು ನಾವು ಅವುಗಳನ್ನು ಎದುರಿಸಲು ತಯಾರಿಲ್ಲದಿದ್ದರೆ, ನಾವು ಅಡಿಗೆ/ಕೆಳಗೆ ಹೋಗುತ್ತೇವೆ. ನಾವೆಲ್ಲರೂ ಕಳೆದುಕೊಂಡ ಮಹಾತ್ಮ ಗಾಂಧಿಯವರ ಹೊರತು ಅಹಿಂಸಾ ತತ್ವದ ಹೆಚ್ಚಿನ ರಾಜಕುಮಾರ ಮತ್ತು ಹರಿಕಾರ ಮತ್ತೊಬ್ಬ ಇಲ್ಲ. ಅವರು ಶರಣಾಗುವುದಕ್ಕಿಂತ, ವಿಫಲಗೊಳ್ಳುವುದಕ್ಕಿಂತ ಅಥವಾ ಓಡಿಹೋಗುವುದಕ್ಕಿಂತ ಕತ್ತಿಯನ್ನು ತೆಗೆದುಕೊಳ್ಳುವುದು ಉತ್ತಮವೆಂದು ನಾವು ಹೇಳುತ್ತೇವೆ. ನಾವು ಸುರಕ್ಷಿತರಾಗಿದ್ದೇವೆ ಎಂದು ನಾವು ನಿರಾತಂಕವಾಗಿ ಬದುಕಲು ಸಾಧ್ಯವಿಲ್ಲ. ಮಾನವನ ಪ್ರಕೃತಿ ಹಾಗಿದೆ. ನಾವು ಅಪಾಯಗಳನ್ನು ಬರಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ನಮ್ಮ ಪರಿಶ್ರಮದಿಂದ-ಗೆದ್ದ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಆಧುನಿಕ ರಕ್ಷಣಾ ವಿಧಾನಗಳು ಮತ್ತು ಸುಸಜ್ಜಿತ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ನಾವು ಸದಾ ಸನ್ನದ್ಧರಾಗಿರಬೇಕು". Indian Express, 6 October 1949 at Pune at the time of lying of the foundation stone of National Defence Academy. "I would rather have India resort to arms in order to defend her honour than that she should in a cowardly manner become or remain a helpless witness to her own dishonour." – All Men Are Brothers Life and Thoughts of Mahatma Gandhi as told in his own words. UNESCO. pp. 85–108. ನೆಹರೂ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ರೂಪಿಸಿದರು ಮತ್ತು 1948 ರಲ್ಲಿ ಭಾರತದ ಪರಮಾಣು ಶಕ್ತಿ ಆಯೋಗವನ್ನು ಸ್ಥಾಪಿಸಿದರು. ನೆಹರು ಅವರು ಪರಮಾಣು ಭೌತವಿಜ್ಞಾನಿಯಾದ ಡಾ. ಹೋಮಿ ಜೆ. ಭಾಭಾ ಅವರನ್ನು ಕರೆದು, ಅವರಿಗೆ ಎಲ್ಲಾ ಪರಮಾಣು-ಸಂಬಂಧಿತ ವ್ಯವಹಾರಗಳು ಮತ್ತು ಕಾರ್ಯಕ್ರಮಗಳ ಮೇಲೆ ಸಂಪೂರ್ಣ ಅಧಿಕಾರವನ್ನು ವಹಿಸಿದರು ಮತ್ತು ಅವರು ನೆಹರೂಗೆ ಮಾತ್ರ ಉತ್ತರ ನೀಡಲು ಬಾಧ್ಯರು ಎಂಬ ಅಧಿಕಾರ ನೀಡಿದರು. ಭಾರತದ ಪರಮಾಣು ನೀತಿಯನ್ನು ನೆಹರು ಮತ್ತು ಭಾಭಾ ನಡುವಿನ “ಅಲಿಖಿತ ವೈಯಕ್ತಿಕ ನಂಬುಗೆಯಿಂದ” ಸ್ಥಾಪಿಸಲಾಯಿತು. ನೆಹರು ಪ್ರಸಿದ್ಧರಾದ ಭಾಭಾಗೆ "ಪ್ರೊಫೆಸರ್ ಭಾಭಾ, ಭೌತವಿಜ್ಞಾನವನ್ನು ನೀವು ನೋಡಿಕೊಳ್ಳಿ, ಅಂತರಾಷ್ಟ್ರೀಯ ಸಂಬಂಧ ವಿಚಾರವನ್ನು ನನಗೆ ಬಿಡಿ" ಎಂದು ಹೇಳಿದರು. 1948 ರ ಆರಂಭದಿಂದಲೂ, ಕೈಗಾರಿಕೀಕರಣಗೊಂಡ ಮುಂದುವರಿದ ರಾಷ್ಟ್ರಗಳ ವಿರುದ್ಧ ನಿಲ್ಲಲು- ಈ ಯೋಜನೆಯನ್ನು ಅಭಿವೃದ್ಧಿಪಡಿಸಲು ನೆಹರೂ ಹೆಚ್ಚಿನ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅಲ್ಲದೆ ಇತರ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ, ವಿಶೇಷವಾಗಿ ಪಾಕಿಸ್ತಾನಕ್ಕೆ ಭಾರತದ ಪ್ರಾದೇಶಿಕ ಶಕ್ತಿಯ ಶ್ರೇಷ್ಠತೆಯ ಭಾಗವಾಗಿ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೊಂದಲು ನಿರ್ಧರಿಸಿದ್ದರು. ನೆಹರು ಸಹ ಭಾಭಾಗೆ ತಿಳಿಸಿದ್ದನ್ನು, ನಂತರ ಅದನ್ನು "ರಾಜಾ ರಾಮಣ್ಣನಿಗೆ ಭಾಭಾ ಅವರು ಹೇಳಿದರು; (ನೆಹರು ಮಾತು) " ನಾವು ಸಾಮರ್ಥ್ಯವನ್ನು ಹೊಂದಿರಬೇಕು, ಮೊದಲು ನಾವು ಶಕ್ತರೆಂದು ಸಾಬೀತು ಮಾಡಬೇಕು ಮತ್ತು ನಂತರ ಗಾಂಧಿ, ಅಹಿಂಸೆ ಮತ್ತು ಪರಮಾಣು ಶಸ್ತ್ರಾಸ್ತ್ರಗಳಿಲ್ಲದ ಜಗತ್ತಿನ ವಿಷಯ ಮಾತನಾಡಬೇಕು "ಎಂದು ಹೇಳಿದರು. Sublet, Carrie. "Dr. Homi Jehangir Bhabha". Nuclearweaponarchive.org. Archived from the original on 7 August 2011. Retrieved 8 August 2011. ಜಾಗತಿಕ ಉದ್ವಿಗ್ನತೆ ಮತ್ತು ಕೊರಿಯನ್ ಯುದ್ಧದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ಬೆದರಿಕೆಯನ್ನು (1950-1953) ತಗ್ಗಿಸಲು ಕೆಲಸ ಮಾಡುತ್ತಿರುವುದಕ್ಕಾಗಿ ನೆಹರು ಅವರನ್ನು ಹಲವರು ಪ್ರಶಂಸಿಸಿದರು. ಅವರು ಮಾನವನ ಆರೋಗ್ಯದ ಮೇಲೆ ಪರಮಾಣು ಸ್ಫೋಟಗಳ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ಮೊಟ್ಟ ಮೊದಲು ನಿಯೋಜಿಸಿದರು ಮತ್ತು ಅವರು ಕರೆಯುವ "ಈ ಭಯಾನಕ ಸರ್ವನಾಶದ ಎಂಜಿನ್,ಗಳ" ನಿಷೇಧವನ್ನು ನಿಲ್ಲಿಸಲು ಅವಿರತ ಪ್ರಚಾರ ಮಾಡಿದರು. ಪರಮಾಣು ಶಸ್ತ್ರಾಸ್ತ್ರ ಸ್ಪರ್ಧೆಯ ಓಟವು, ತಮ್ಮದೇ ಆದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅದರ ವೆಚ್ಚದ ಭಾರ ಹೊರಲು ಅಸಾಧ್ಯವಾಗುವಷ್ಟು ಮಿತಿಮೀರಿದ ಮಿಲಿಟರೀಕರಣಕ್ಕೆ ಕಾರಣವಾಗಬಹುದೆಂದು ಆತಂಕಗೊಂಡಿದ್ದರು. ಅದರಿಂದ ಪರಮಾಣು ನಿಶಸ್ತ್ರೀ ಕರಣವನ್ನು ಉತ್ತೇಜಿಸಲು ಅವರು ವಾಸ್ತವಿಕ ಕಾರಣಗಳನ್ನು ಹೊಂದಿದ್ದರು.Bhatia, Vinod (1989). Jawaharlal Nehru, as Scholars of Socialist Countries See Him. Panchsheel Publishers. p. 131. ಕಾಶ್ಮೀರದ ರಕ್ಷಣೆ ಲಾರ್ಡ್ ಮೌಂಟ್ಬ್ಯಾಟನ್ ಅವರು ವಿಶ್ವಸಂಸ್ಥೆ (ಯುಎನ್) ಆಶ್ರಯದಲ್ಲಿ ಕಾಶ್ಮೀರದಲ್ಲಿ ಜನಮತಸಂಗ್ರಹವನ್ನು ನಡೆಸಲು 1948 ರಲ್ಲಿ ನೆಹರು ಭರವಸೆ ನೀಡಿದರು ಎಂದು ಹೇಳಿ ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಿತ ಪ್ರದೇಶವಾಗಿದೆ ಎಂದರು., ಎರಡೂ ದೇಶಗಳೂ 1947 ರಲ್ಲಿ ಈ ರಾಜ್ಯಕ್ಕಾಗಿ ಯುದ್ಧಕ್ಕೆ ಹೋಗಿದ್ದವು. ಆದಾಗ್ಯೂ, ಯು.ಎನ್. ನಿರ್ಣಯಕ್ಕೆ ಅನುಗುಣವಾಗಿ ಪಾಕಿಸ್ತಾನವು ಆಕ್ರಮಣದಿಂದ ಪಡೆದುಕೊಂಡ ಪ್ರದೇಶವನ್ನು ತೆರವು ಗೊಳಿಸಲು ವಿಫಲವಾದ ಕಾರಣ, ಮತ್ತು ನೆಹರು ಅವರಿಗೆ ಯುಎನ್ ನಿಲುವಿನ ಬಗ್ಗೆ ಅಸಂತುಷ್ಟತೆ ಬೆಳೆಯುತ್ತಿದ್ದಂತೆ ಅವರು 1953 ರಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಲು ನಿರಾಕರಿಸಿದರು. ಕಾಶ್ಮೀರ ಮತ್ತು ಅವರ ರಾಜ್ಯವನ್ನು ಭಾರತದೊಳಗೆ ಏಕೀಕರಿಸುವ ಅವರ ನೀತಿಗಳನ್ನು ವಿಶ್ವಸಂಸ್ಥೆ ನ ಮುಂದೆ ಅವರ ಸಹಾಯಕರಾದ ವಿ.ಕೆ. ಕೃಷ್ಣ ಮೆನನ್ ಅವರ ಭಾವೋದ್ರಿಕ್ತ ಭಾಷಣಗಳಿಂದಾಗಿ ಭಾರತದಲ್ಲಿ ಖ್ಯಾತಿಯನ್ನು ಗಳಿಸಿದರು. ಭಾತರದ ಕಾಸ್ಮಿರ ನೀತಿಯನ್ನು ಆಗಾಗ್ಗೆ ಸಮರ್ಥಿಸಿಕೊಂಡರು.Nehru to the Nineties: The Changing Office of Prime Minister in Indiaedited by James Manor p. ೧೪೧ 1953 ರಲ್ಲಿ ಕಾಸ್ಮೀರ ಭಾರತದ ಒಕ್ಕೂಟದಲ್ಲಿ ಸೇರಲು ಬೆಂಬಲಸಿದ ಕಾಶ್ಮೀರಿ ರಾಜಕಾರಣಿ ಶೇಖ್ ಅಬ್ದುಲ್ಲಾರನ್ನು ಬಂಧಿಸಿದರು. ಅವರು ಹಿಂದೆ ಬೆಂಬಲಿಸಿದ್ದರು; ಆದರೆ ಈಗ ಪ್ರತ್ಯೇಕತಾವಾದಿ ಮಹತ್ವಾಕಾಂಕ್ಷೆಗಳನ್ನು ಆಶ್ರಯಿಸಿರುವುದಾಗಿ ಶಂಕಿಸಿದ್ದಾಗಿ ನೆಹರೂ ಬಂಧನದ ಆದೇಶ ನೀಡಿದರು. ನೆಹರು ನಂತರ ಬಕ್ಷಿ ಗುಲಾಮ್ ಮೊಹಮ್ಮದ್ ಅವರನ್ನು ಅಬ್ದುಲ್ಲಾರ ಬದಲಿಗೆ ಬದಲಿಸಿ ಕಾಸ್ಮಿರದ ಅಧಿಕಾರ ವಹಿಸಿಕೊಳ್ಳುವಂತೆ ಮಾಡಿದರು. 1957 ರಲ್ಲಿ ಭಾರತ ಹೊಂದಿದ ಕಾಶ್ಮೀರದ ನಿಲುವನ್ನು ಸಮರ್ಥಿಸುವ ಎಂಟು ಗಂಟೆಗಳ ಭಾಷಣವನ್ನು ನೀಡಲು ಮೆನನ್’ಗೆ ಸೂಚನೆ ನೀಡಲಾಯಿತು; ಇಲ್ಲಿಯವರೆಗೆ, ಆ ಭಾಷಣವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾರೂ ಎಂದಿಗೂ ಮಾಡದಿರುವಷ್ಟು ಉದ್ದವಾಗಿದೆ, ಇದು ಜನವರಿ 23 ರಂದು ನೆಡೆದ ಐದು ಗಂಟೆಗಳ 762 ನೆಯ ಸಭೆ ಮತ್ತು 24 ನೇ ದಿನಾಂಕ ಮುಂದುವರಿದ ಎರಡು ಗಂಟೆಗಳ ಮತ್ತು ನಲವತ್ತೆಂಟು ನಿಮಿಷಗಳನ್ನು ಒಳಗೊಂಡ ಭಾಷಣವಾಗಿರುತ್ತದೆ, ಈ ಭಾಷನದ ಅಂತ್ಯದಲ್ಲಿ ಭದ್ರತಾ ಕೌನ್ಸಿಲ್ ಸಭೆಯ ನೆಲದ ಮೇಲೆ ಮೆನನ್’ರ ಕುಸಿತದೊಂದಿಗೆ ಮುಕ್ತಾಯವಾಗುತ್ತದೆ . ಈ ದೀರ್ಘ ಕಾಲದ ಭಾಷಣದ(ಫಿಲಿಬಸ್ಟರ್) ಸಮಯದಲ್ಲಿ, . (ದೊಡ್ಡ ಅಶಾಂತಿ ಅಡಿಯಲ್ಲಿ). ನೆಹರು ಕಾಶ್ಮೀರದಲ್ಲಿ ಭಾರತೀಯ ಸೈನ್ಯ ಶಕ್ತಿಯನ್ನು ಮತ್ತು ಜನಬೆಂಬಲವನ್ನು ವೇಗವಾಗಿ ಕ್ರೋಢೀಕರಿಸಲು ಯಶಸ್ವಿಯಾದರು. ಮೆನನ್ ಕಾಶ್ಮೀರದ ಮೇಲೆ ಭಾರತೀಯ ಸಾರ್ವಭೌಮತ್ವವನ್ನು ತೀವ್ರವಾಗಿ ಸಮರ್ಥಿಸಿಕೊಂಡರು, ಭಾರತದಲ್ಲಿ ತಮ್ಮ ಬೆಂಬಲವನ್ನು ವಿಸ್ತರಿಸಿಕೊಂಡರು. ಭಾರತೀಯ ಪತ್ರಿಕೆಗಳು ಅವರನ್ನು ಸಧ್ಯದ "ಕಾಶ್ಮೀರದ ಹೀರೋ" ಎಂದು ಕರೆದವು. ನಂತರ ಭಾರತದಲ್ಲಿ ನೆಹರೂ ಅವರ ಜನಪ್ರಿಯತೆ ಉತ್ತುಂಗಕ್ಕೇರಿತು; ದೂರದ-ಬಲಪಂಥದಿಂದ ಮಾತ್ರ (ಸಣ್ಣ) ಟೀಕೆಗಳು ಬಂದವು. ["A short history of long speeches". BBC News. 25 September 2009. Archived from the original on 5 March 2016. Majid, Amir A. (2007). "Can Self Determination Solve the Kashmir Dispute?" (PDF). Romanian Journal of European Affairs. 7 (3): 38. Archived from the original (PDF) on 16 March 2012.] [164] ಚೀನಾ ನೀತಿ 1954 ರಲ್ಲಿ ನೆಹರೂ ನೆರೆ ರಾಷ್ಟ್ರ ಚೀನಾದೊಂದಿಗೆ ಶಾಂತಿಯುತ ಸಹಬಾಳ್ವೆಯ ಐದು ತತ್ವಗಳನ್ನ ಒಪ್ಪಿ ಸಹಿ ಹಾಕಿದರು, ಇದು ಭಾರತದಲ್ಲಿ ಪಂಚ ಶೀಲ (ಸಂಸ್ಕೃತ ಪದಗಳು, ಪಂಚ: ಐದು, ಶೀಲ: ಸದ್ಗುಣಗಳ ನೀತಿ), ಎರಡು ದೇಶಗಳ ನಡುವಿನ ಸಂಬಂಧಗಳನ್ನು ನಿಯಂತ್ರಿಸುವ ತತ್ವಗಳ ಒಂದು ಗುಂಪು ಎಂದು ಗುರುತಿಸಲ್ಪಟ್ಟಿತು ಅವರ ಮೊದಲ. ಒಪ್ಪಂದದ ರೂಪದ ಔಪಚಾರಿಕ ಸಂಕೇತೀಕರಣವು 1954 ರಲ್ಲಿ ಚೀನಾ ಮತ್ತು ಭಾರತ ನಡುವಿನ ಒಂದು ಒಪ್ಪಂದದಲ್ಲಿತ್ತು. ಚೀನಾ ಮತ್ತು ಭಾರತದ ಟಿಬೆಟ್ ಪ್ರದೇಶದ ನಡುವೆ ವ್ಯಾಪಾರ ಮತ್ತು ಪರಸ್ಪರ ನೆಡವಳಿಕೆಯ ಮೇಲೆ "ಒಪ್ಪಂದವನ್ನು (ಟಿಪ್ಪಣಿಗಳ ವಿನಿಮಯದೊಂದಿಗೆ) ಪೂರ್ವಭಾವಿಯಾಗಿ ಅವರು ಬೆಳೆಸಿದರು, 29 ಏಪ್ರಿಲ್ 1954 ರಂದು ಪೀಕಿಂಗ್ ನಲ್ಲಿ. ಡಿಸೆಂಬರ್ 1953 ರಿಂದ ಏಪ್ರಿಲ್ 1954 ರವರೆಗೆ ಪಿಆರ್ಸಿ (ಚೀನಾ) ಸರ್ಕಾರದ ನಿಯೋಗ ಅಕ್ಸಾಯ್ ಚಿನ್ ಮತ್ತು ದಕ್ಷಿಣದ ವಿವಾದಿತ ಪ್ರದೇಶಗಳಿಗೆ ಸಂಬಂಧಿಸಿ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳ ಮೇಲೆ, ಭಾರತೀಯ ಸರ್ಕಾರದ ನಿಯೋಗದ ನಡುವೆ ಮಾತುಕತೆಗಳು ನಡೆದವು. ಟಿಬೆಟ್. 1957 ರ ಹೊತ್ತಿಗೆ, ಚೀನೀ ಪ್ರಧಾನಿ ಝೌ ಎನ್ ಲೈ ಟಿಬೆಟ್‍ನಲ್ಲಿ ಚೀನೀಯರು ಅದರ ರಕ್ಷಣೆಯ ಸ್ಥಾನವನ್ನು ಹೊಂದಿದ್ದು ಅದರ ಪೂರ್ಣ ಹೊಣೆ ಸ್ವೀಕರಿಸಲು ನೆಹರು ಅವರಿಗೆ ಮನವೊಲಿಸುವಲ್ಲಿ ಯಶಸ್ವಿಯಾದರು, ಇದರಿಂದಾಗಿ ಟಿಬೆಟ್ ಸಂಭವನೀಯ ಮಿತ್ರರಾಷ್ಟ್ರವಾಗುವ ಸಾಧ್ಯತೆಯನ್ನು ಕಳೆದುಕೊಂಡಿತು. ಆಗ ಭಾರತವೂ ಅದಕ್ಕೆ ಮಿಲಿಟರಿ ಸಹಾಯ ಒದಗಿಸುವ ಸ್ಥಿತಿಯಲ್ಲಿ ಇರಲಿಲ್ಲ. ಈ ಒಪ್ಪಂದವು 1960 ರ ದಶಕದಲ್ಲಿ ಕಡೆಗಣಿಸಲ್ಪಟ್ಟಿತು, ಆದರೆ 1970 ರ ದಶಕದಲ್ಲಿ, ಚೀನಾ-ಭಾರತ ಸಂಬಂಧಗಳಲ್ಲಿ ಫೈವ್ ಪ್ರಿನ್ಸಿಪಲ್ಸ್ ಮತ್ತೊಮ್ಮೆ ಪ್ರಮುಖವಾಗಿ ಕಂಡಿತು, ಮತ್ತು ರಾಷ್ಟ್ರಗಳ ನಡುವಿನ ಸಂಬಂಧಗಳು ಹೆಚ್ಚು ಸಾಮಾನ್ಯವಾಗಿತ್ತು. ಇಂದಿರಾ ಗಾಂಧಿಯವರ ಪ್ರಧಾನಮಂತ್ರಿ ಮತ್ತು ಜನತಾ ಪಕ್ಷದ 3 ವರ್ಷಗಳ ಆಡಳಿತ (1977-1980) ಅವಧಿಯಲ್ಲಿ ಈ ಪ್ರದೇಶದುದ್ದಕ್ಕೂ ವ್ಯಾಪಕವಾಗಿ ಐದು ನೀತಿಗಳು ಅನುಸರಿಸಲ್ಪಟ್ಟವು ಮತ್ತು ಸ್ವೀಕರಿಸಲ್ಪಟ್ಟವು. ಶಾಂತಿಯುತ ಸಹಬಾಳ್ತೆಯ ಐದು ತತ್ವಗಳು 1954 ರ ಚೀನಾ -ಭಾರತದ ಗಡಿ ಒಪ್ಪಂದದ ಆಧಾರವಾಗಿತ್ತು, ಆದರೆ ನಂತರದ ವರ್ಷಗಳಲ್ಲಿ ನೆಹರುರ ಸಹಬಾಳ್ವೆಯ ಒಪ್ಪಂದವನ್ನು ಕಡೆಗಣಿಸಿ ಚೀನಾವು ಗಡಿ ವಿವಾದಗಳ ವಿಚಾರವಾಗಿ ಚೀನಾದ ಒತ್ತಡವನ್ನು ಹೆಚ್ಚಿಸಿತು. ನಂತರ ಚೀನಾದ ಟಿಬೆಟ್ಟಿನ ಮೇಲೆ ಪೂರ್ಣ ಆಕ್ರಮಣ ಮಾಡಿ ಅದನ್ನು ತನ್ನವಶ ಪಡಿಸಿಕೊಂಡಾಗ, 14 ನೆಯ ದಲೈಲಾಮಾ ಭಾರತಕ್ಕೆ ಸಂಗಡಿಗರೊಂದಿಗೆ ಆಶ್ರಯ ಕೋರಿ ಭಾರತಕ್ಕೆ ಗುಳೆ ಬಂದರು. ಅವರಿಗೆ ನೆಹರು ಆಶ್ರಯ ನೀಡುವ ನಿರ್ಧಾರವನ್ನು ತೆಗೆದುಕೊಂಡರು. Li, Jianglin; 1956–, 李江琳 (2016). Tibet in agony : Lhasa 1959. Wilf, Susan. Cambridge, Massachusetts: Harvard University Press. pp. 40–41. ಚೀನಾದ ಸಮಾಜವಾದಿ ಕ್ರಾಂತಿಯ ನಂತರ ಕಮ್ಯುನಿಸ್ಟ್ ಪಕ್ಷ ಮಾವೋ ನಾಯಕತ್ವದಲ್ಲಿ ಪೂರ್ಣ ಚೀನಾವನ್ನು ಆಕ್ರಮಿಸಿಕೊಂಡಿತು. ಆದರೆ ರಿಪಬ್ಲಿಕ್ ಚೈನಾ ತೈಫೆಯ ಚಿಕ್ಕ ದ್ವೀಪದಲ್ಲಿ ನೆಪಮಾತ್ರಾ ಅಸ್ತಿತ್ವದಲ್ಲಿತ್ತು. ರಿಪಬ್ಲಿಕ್ ಆಫ್ ಚೀನಾ (ROC) 1945 ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಯಾದ ನಂತರ ವಿಶ್ವಸಂಸ್ಥೆಗೆ ಸೇರಿತ್ತು. ಅದು ಅಮೆರಿಕ ಸಂ.ಸಂಸ್ಥಾನದ ಬೆಂಬಲದಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಯ ಸದಸ್ಯ ರಾಷ್ಟ್ರವಾಗಿದ್ದು ವಿಟೋ ಅಧಿಕಾರ ಹೊಂದಿತ್ತು. ಕಮ್ಯುನಿಸ್ಟ್ ಚೀನಾ ನೆಹರೂ ಅವರ ಪಂಚ ಶೀಲ ತತ್ವವನ್ನು ಒಪ್ಪಿ ಭಾರತದ ಮಿತ್ರರಾಷ್ಟ್ರವಾದ ನಂತರ ನೆಹರೂ ಅವರು ಚಿಕ್ಕ ದ್ವೀಪದಲ್ಲಿ ಮಾತ್ರಾ ಅಸ್ತಿತ್ವದಲ್ಲಿರುವ ಗಣರಾಜ್ಯ ಚೀನಾದ ಬದಲಿಗೆ ಪೂರ್ಣ ಚೀನಾ ಭೂಭಾಗದ ಒಡೆತನ ಹೊಂದಿದ ಕಮ್ಯೂನಿಸ್ಟ್ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯತ್ವವನ್ನು ಕೊಡಬೇಕೆಂದು ಹೇಳಿದರು. ಆದರೆ ರಷ್ಯಾದ ಒತ್ತಡದ ನಂತರವೇ ಅಮೇರಿಕಾ ಮತ್ತು ಇತರ ಸದಸ್ಯರಾಷ್ಟ್ರಗಳು ಕಮ್ಯುನಿಸ್ಟ್ ಚೀನಾಕ್ಕೆ ವಿಟೋ ಮಾಡುವ ಅವಕಾಶ ಹೊಂದಿದ ಭದ್ರತಾ ಸಮಿತಿಯ ಸದಸ್ಯತ್ವದ ಸ್ಥಾನವನ್ನು ಕೊಟ್ಟವು.ಅದಕ್ಕೆ ಇತರೆ ಭದ್ರತಾಸಮಿತಿ ಸದಸ್ಯರು ಮನ್ನಣೆ ಕೊಡಲಿಲ್ಲ.How did China become a permanent member of the United Nations Security Council? ರಷ್ಯಾ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್ ಮತ್ತು ಇತರ ಅಮೇರಿಕನ್ ಮೈತ್ರಿಕೂಟಗಳು ರಿಪಬ್ಲಿಕ್ ಆಫ್ ಚೀನಾ (ROC)ದಿಂದ ಕಮ್ಯೂನಿಸ್ಟ್‍ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು (PRC) ಬೆಂಬಲಿಸಿದವು. 25 ಅಕ್ಟೋಬರ್ 1971 ರಂದು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವನ್ನು ಏಕೈಕ ಕಾನೂನಿನ್ವಯ ಚೀನಾ ಎಂದು ಗುರುತಿಸಲು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ೩ನೇ ೨ ಬಹುಮತದಿಂದ ಒಪ್ಪಲಾಯಿತು.United Nations General Assembly Session 26 Resolution 2758. Restoration of the lawful rights of the People's Republic of China in the United Nationsರಾಜಕೀಯನಾಯಕರ ಕಿಡಿ ನುಡಿ; ೧೬-೩-೨೦೧೯ ಭದ್ರತಾ ಸಮಿತಿಯ ಸದಸ್ಯತ್ವ ಮತ್ತು ಭಾರತ ರಿಪಬ್ಲಿಕ್ ಚೀನಾವಿಶ್ವ ಸಂಸ್ತೆಯ ಭದ್ರತಾಮಿತಿಯ ವಿಟೋ ಪಡೆದ ರಾಷ್ಟ್ರವಾಗಿತ್ತು. ಅದರೆ ಅದು ಕಮ್ಯೂನಿಸ್ಟ್ ಚೀನಾಕ್ಕೆ ಸಂಪೂರ್ಣ ಭೂಭಾಗವನ್ನು ಸೋತು ಒಂದು ಸಣ್ಣ ದ್ವೀಪದಲ್ಲಿ ಯು.ಎಸ್.ಎ.ಯ (ಅಮೇರಿಕದ)ಬೆಂಬಲದೊಂದಿಗೆ ಅಸ್ಥಿತ್ವ ಹೊಂದಿತ್ತು. ಚೀನಾವನ್ನು ಅದರ ವಿಶ್ವಸಂಸ್ತೆಯ ಭದ್ರತಾ ಸಮಿತಿಯ ಖಾಯಂ ಸ್ಥಾನದಿಂದ ತಪ್ಪಿಸಿ ಅಮೇರಿಕಾ ಸಲಹೆಯಂತೆ ಭಾರತವು ಅದನ್ನು ಪಡೆಯಲು ಪ್ರಯತ್ನಿಸಿದರೆ ಚೀನಾದ ಸತತ ವಿರೋಧವನ್ನು ಕಟ್ಟಿ ಕೊಳ್ಳಬೇಕಾಗಿತ್ತು. ಮತ್ತು ಭದ್ರತಾ ಸಮಿತಿಯ ಎಲ್ಲಾ ಸದಸ್ಯರಾಷ್ಟ್ರಗಳು ಒಪ್ಪಬೇಕಾಗಿತ್ತು; ರಷ್ಯಾವು ಅದನ್ನು ತನ್ನ ವಿಟೋ ಮೂಲಕ ತಡೆಯುವ ಸಾಧ್ಯತೆ ಇತ್ತು. ಅದಲ್ಲದೆ ವಿಶ್ವಸಂಸ್ತೆಯ ಜನರಲ್ ಅಸೆಂಬ್ಲಿಯಲ್ಲಿ ಒಟ್ಟು ಸದಸ್ಯರ ಮೂರನೇ ಎರಡು ಬಹುಮತವನ್ನು ಭಾರತ ಪಡೆಯಬೇಕಿತ್ತು. ಅದು ರಷ್ಯಾ ಚೀನಾ ಬಣಗಳು ಒಪ್ಪದೆ ಅಸಾದ್ಯವಾಗಿತ್ತು, ಕಾರಣ ರಷ್ಯಾ, ಚೀನಾ ಮತ್ತು ಅದರ ಪರ ರಾಷ್ಟ್ರಗಳು ಬೆಂಬಲಿಸುತ್ತಿರಲಿಲ್ಲ. ಹಾಗಾಗಿ ನೆಹರೂ ಅಮೇರಿಕದ ಕಿಸಿಂಜರ್ ಸಲಹೆಯನ್ನು ಕಾರ್ಯಸಾದ್ಯವಲ್ಲ ಮತ್ತು ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರ ಇಡುವ ಅಮೆರಿಕಾ ತಂತ್ರ ಎಂದು ತಳ್ಳಿಹಾಕಿದರು.When Nehru Refused American Bait on a Permanent Seat for India at the UN ಅಮೇರಿಕ ಸಂಯುಕ್ತ ಸಂಸ್ಥಾನ (ಯುನೈಟೆಡ್ ಸ್ಟೇಟ್ಸ್) thumb|ನೆಹರೂ 1959 ರಲ್ಲಿ ಪಾರ್ಲಿಮೆಂಟ್ ಹೌಸ್ನಲ್ಲಿ ಯು.ಎಸ್. ಅಧ್ಯಕ್ಷ ಡ್ವೈಟ್ ಡಿ ಐಸೆನ್ಹೋವರ್ ಬರಮಾಡಿಕೊಂಡ ಚಿತ್ರ 1956 ರಲ್ಲಿ, ಬ್ರಿಟಿಷ್, ಫ್ರೆಂಚ್ ಮತ್ತು ಇಸ್ರೇಲಿಗಳು ಸೂಯೆಜ್ ಕಾಲುವೆಯ ಜಂಟಿ ಆಕ್ರಮಣ ನೆಡೆಸಿರುವುದನ್ನು ನೆಹರು ಟೀಕಿಸಿದರು. ಭಾರತದ ಪ್ರಧಾನಿಯಾಗಿ ಮತ್ತು ಅಲಿಪ್ತ ಚಳವಳಿಯ ನಾಯಕನಾಗಿ ನೆಹರೂ ಪಾತ್ರವು ಮಹತ್ವದ್ದಾಗಿತ್ತು; ಈಡನ್ ಮತ್ತು ಈ ಆಕ್ರಮಣದ ಸಹ-ಪ್ರಾಯೋಜಕರನ್ನು ತೀವ್ರವಾಗಿ ಖಂಡಿಸಿದ ಸಂದರ್ಭದಲ್ಲಿ, ಅವರು ಎರಡು ಕಡೆಗಳ ನಡುವೆ ಸಹ-ಸಮಾನ ದೂರವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿದರು. ಯು.ಎಸ್. ಅಧ್ಯಕ್ಷ ಡ್ವೈಟ್ ಐಸೆನ್ಹೋವರ್’ಜೊತೆ ನೆಹರು ಪ್ರಬಲ ಮಿತ್ರತ್ವ ಹೊಂದಿದ್ದರು. ಅವರು ಸಾರ್ವಜನಿಕವಾಗಿ ಮೌನವಾಗಿರುವಾಗ, ಬ್ರಿಟನ್ ಮತ್ತು ಫ್ರಾನ್ಸ್ಗಳನ್ನು ಹಿಂದೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅಮೆರಿಕದ ಪ್ರಭಾವವನ್ನು ಬಳಸಿಕೊಳ್ಳುವ ಮಟ್ಟಿಗೆ ಹೋದರು. ಈ ಘಟನೆಯು ನೆಹರು ಮತ್ತು ಭಾರತವನ್ನು ಮೂರನೆಯ-ವಿಶ್ವಬಣದಲ್ಲಿ ಪ್ರಭಾವಿ ರಾಷ್ಟ್ರವಾಗಿ ಪ್ರತಿಷ್ಠಾಪಿಸಿತು ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ, ನೆಹರುರ ಬಲಗೈ ಮನುಷ್ಯ ಮೆನನ್, ಪಶ್ಚಿಮದೊಂದಿಗೆ ರಾಜಿ ಮಾಡಿಕೊಳ್ಳಲು ಉದಾಸೀನನಾಗಿದ್ದ ಗಮಲ್ ನಾಸರ್ ಅವರನ್ನು ಮನವೊಲಿಸಲು ಪ್ರಯತ್ನಿಸಿದರು, ಪಾಶ್ಚಾತ್ಯ ಶಕ್ತಿಗಳು ನಾಸರ್ ಗೆ ರಾಜಿ ಮಾಡಲು ಸಿದ್ಧರಿದ್ದಾರೆ ಎಂಬ ಅರಿವು ಮೂಡಿಸಿತು.The Suez Crisis, 1956On July 26, 1956, Egyptian President Gamal Abdel Nasser announced the nationalization of the Suez Canal Company ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಸರ್ ಪರವಾಗಿ ನೆಹರು ತಮ್ಮ ಹಸ್ತಕ್ಷೇಪದ ನಂತರ ನೆಹರು ಅವರನ್ನು ಸಮಾಧಾನ ಪಡಿಸಲು ಯುಎಸ್ ನ ಐಸೆನ್ಹೋವರ್ ಆಶಿಸಿದ್ದರು. ಆದಾಗ್ಯೂ, ಶೀತಲ ಸಮರ, ಸಂಶಯಗಳು ಮತ್ತು ಸಮಾಜವಾದದ ನೆಹರು ಅವರ ಬಗ್ಗೆ ಅಮೆರಿಕ ಅಪನಂಬಿಕೆ, ಇದ್ದರೂ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಶಾಂತಗೊಳಿಸಿತು, ಇದು ಸೋವಿಯೆತ್ ಒಕ್ಕೂಟವನ್ನು ಧೈರ್ಯವಾಗಿ ಬೆಂಬಲಿಸುವ ನೆಹರೂ ಅವರನ್ನು ಶಂಕಿಸಿತು. ಸೂಯೆಜ್ ಬಿಕ್ಕಟ್ಟಿನ ನಂತರವೂ ನೆಹರೂ ಬ್ರಿಟನ್ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಪರ್ಶಚಮ ನದಿಗಳು ಮತ್ತು ಸಿಂಧೂ ನದಿಗಳ ಬಗೆಗೆ ನೆಹರು ಅವರು ಯುಕೆ ಮತ್ತು ವಿಶ್ವ ಬ್ಯಾಂಕ್’ನ ಮಧ್ಯಸ್ಥಿಕೆ ಯನ್ನು ಒಪ್ಪಿಕೊಂಡರು, ಪಂಜಾಬ್ ಪ್ರಾಂತ್ಯದ ಪ್ರಮುಖ ನದಿಗಳ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ ದೀರ್ಘಾವಧಿಯ ವಿವಾದಗಳನ್ನು ಪರಿಹರಿಸಲು 1960 ರಲ್ಲಿ ಸಿಂಧೂ ವಾಟರ್ಸ್ ಒಡಂಬಡಿಕೆಗೆ ಪಾಕಿಸ್ತಾನಿ ಆಡಳಿತಗಾರ ಅಯುಬ್ ಖಾನ್ ರೊಂದಿಗೆ ಸಹಿ ಹಾಕಿದರು.Indus Waters Treaty | History, Provisions, & Facts | Britannica.com ಗೋವಾ ಬಿಕ್ಕಟ್ಟು ಗೋವಾವನ್ನು ಭಾರತ ಒಕ್ಕೂಟಕ್ಕೆ ಸೇರುವ ಬಗೆಗೆ ಹಲವು ವರ್ಷಗಳ ಮಾತುಕತೆಗಳು ವಿಫಲವಾದ ನಂತರ, 1961 ರಲ್ಲಿ ಪೋರ್ಚುಗೀಸ್ ನಿಯಂತ್ರಣದ ಗೋವಾದ ಮೇಲೆ ಆಕ್ರಮಣ ಮಾಡಲು ನೆಹರು ಭಾರತೀಯ ಸೈನ್ಯಕ್ಕೆ ಅಧಿಕಾರ ನೀಡಿದರು. ನಂತರ ಅವರು ಅದನ್ನು ಔಪಚಾರಿಕವಾಗಿ ಭಾರತಕ್ಕೆ ಸೇರಿಸಿಕೊಂಡರು. ಇದು ಭಾರತದಲ್ಲಿ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು, ಆದರೆ ಮಿಲಿಟರಿ ಬಲವನ್ನು ಬಳಸಿದ್ದಕ್ಕಾಗಿ ಭಾರತದಲ್ಲಿನ ಕಮ್ಯುನಿಸ್ಟ್‘ರು ವಿರೋಧಿಸಿ ಅವರನ್ನು ಟೀಕಿಸಿದರು. ಪೋರ್ಚುಗಲ್ ವಿರುದ್ಧ ಸೇನಾಪಡೆಯ ಬಳಕೆಯಿಂದ ಬಲಪಂಥೀಯ ಮತ್ತು –ಅತಿವಾದಿ-ಬಲ ಗುಂಪುಗಳ ಸೌಹಾರ್ದತೆಯನ್ನು ಗಳಿಸಿದರು. ವಿಶ್ವಸಂಸ್ಥೆಯ ಎರಡನೆಯ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರಷೀಲ್ಡ್, ಅವರು ನೆಹರೂ ಮತ್ತು ಚೀನೀ ಪ್ರಧಾನಿ ಝೌ ಎನ್ ಲಯ್, ಅವರನ್ನು ಅಲೆಕ್ಸಾಂಡರ್ ಗ್ರಂಥಮ್ ಗೆ ಹೋಲಿಸಿ, ನೆಹರೂ ಒಂದು ನೈತಿಕ ದೃಷ್ಟಿಕೋನದಿಂದ ಅವರಿಗಿಂತ ಉತ್ತಮವಾಗಿದ್ದರೆ, ಝೌ ಎನ್ಲೈ ನೈಜ ರಾಜಕೀಯ ತಂತ್ರದಲ್ಲಿ ಹೆಚ್ಚು ಪರಿಣತರು ಎಂದು ಹೇಳಿದ್ದಾರೆ. Mihir Bose (2004). Raj, Secrets, Revolution: A Life of Subhas Chandra Bose. Grice Chapman Publishing. p. 291. 1962 ರ ಚೀನಾ ಭಾರತ ಯುದ್ಧ thumb|ಪ್ರಧಾನ ಮಂತ್ರಿ ನೆಹರೂ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಅಧ್ಯಕ್ಷ ರೊಮುಲೋ (ಅಕ್ಟೋಬರ್ 1949)ಮತ್ತು ಇತರರು. ಇದನ್ನೂ ನೋಡಿ:ಭಾರತ-ಚೀನ ಯುದ್ಧ 1959 ರಿಂದ ಆರಂಭವಾಗಿ 1961 ರಲ್ಲಿ ತೀವ್ರಗೊಂಡ ಒಂದು ಪ್ರಕ್ರಿಯೆಯಲ್ಲಿ, ಚೀನಾ - ಭಾರತ ಗಡಿ ಪ್ರದೇಶದ ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ಹೊರಠಾಣೆಗಳನ್ನು ಸ್ಥಾಪಿಸುವ "ಮುಂಚೂಣಿ ನೀತಿಯನ್ನು" ನೆಹರು ಅಳವಡಿಸಿಕೊಂಡರು, ಅದರಲ್ಲಿ ಭಾರತವು ಹಿಂದೆ ನಿಯಂತ್ರಿಸದೆ ಇದ್ದ ಪ್ರದೇಶಗಳಲ್ಲಿ 43 ಹೊರಠಾಣೆಗಳನ್ನೂ ಹೊಸದಾಗಿ ಸ್ಥಾಪಿಸುವುದೂ ಸಹ ಒಳಗೊಂಡಿತ್ತು. [168] ಚೀನಾ ಈ ಕೆಲವುಹೊರಠಾಣೆಗಳ ಮೇಲೆ ದಾಳಿ ಮಾಡಿತು, ಹೀಗಾಗಿ ಭಾರತವು ಚೀನಾ - ಭಾರತ ಯುದ್ಧ ಆರಂಭವಾಯಿತು. ಅಂತಿಮವಾಗಿ ಭಾರತ ಹಿನ್ನಡೆ ಅನುಭವಿಸಿತು., ಆದರೂ ಚೀನಾದ ಪೂರ್ವ ವಲಯದಲ್ಲಿ ಯುದ್ಧ ಪೂರ್ವದಲ್ಲಿದ್ದ ವಲಯಕ್ಕೆ ಚೀನಾ ವಾಪಸಾಯಿತು. ಆದರೆ ಬ್ರಿಟಿಷ್ ಭಾರತದಲ್ಲಿಯೇ ಇದ್ದ ಅಕ್ಸಾಯ್ ಚಿನ್ ಅನ್ನು ಸ್ವಾಧೀನಪಡಿಸಿಕೊಂಡ ಚೀನಾ ನಂತರ ಭಾರತಕ್ಕೆ ಹಸ್ತಾಂತರಿಸಿತು. . ನಂತರ, 1948 ರಿಂದ ಪಾಕಿಸ್ತಾನವು ನಿಯಂತ್ರಿಸುತ್ತಿದ್ದ ಸಿಯಾಚಿನ್ ಬಳಿಯ ಕಾಶ್ಮೀರದ ಕೆಲವು ಭಾಗವನ್ನು ಚೀನಾಕ್ಕೆ ಪಾಕಿಸ್ತಾನವು ಹಸ್ತಾಂತರಿಸಿತು. ಈ ಯುದ್ಧವು ಭಾರತದ ಮಿಲಿಟರಿಯ ಸಿದ್ಧವಿಲ್ಲದಿರುವಿಕೆಯನ್ನು ಬಹಿರಂಗಪಡಿಸಿತು, ಭಾರತವು 14,000 ಸೈನಿಕರನ್ನು ಯುದ್ಧ ವಲಯಕ್ಕೆ ಕಳುಹಿಸಿತ್ತು, ಆದರೆ ಚೀನೀ ಸೈನ್ಯವು ಅದಕ್ಕೆ ವಿರೋಧವಾಗಿ ಹಲವು ಬಾರಿ ದೊಡ್ಡದಾಗಿತ್ತು. ನೆಹರು ಸರ್ಕಾರವನ್ನು ರಕ್ಷಣಾತ್ಮಕತೆಗೆ ಸಾಕಷ್ಟು ಗಮನವನ್ನು ನೀಡದೆ ಇರುವುದನ್ನು ಮಾದ್ಯಮಗಳು ವಿರೋಧ ಪಕ್ಷದವರು ವ್ಯಾಪಕವಾಗಿ ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ರಕ್ಷಣಾ ಸಚಿವ ವಿ. ಕೆ. ಕೃಷ್ಣ ಮೆನನ್ ರನ್ನು ನೆಹರೂ ವಜಾಗೊಳಿಸಿದರು. ನೆಹರು ಅಮೆರಿಕದೊಂದಿಗೆ ಉತ್ತಮ ಸಂಬಂಧಗಳನ್ನು ಬೆಳಸಿದರು ಮತ್ತು ಯುದ್ಧಕ್ಕಾಗಿ ಅಮೆರಕದ ಸಹಾಯ ಕೇಳಿದರು. ಜಾನ್ ಎಫ್. ಕೆನಡಿಯವರು ಯುದ್ಧದ ಸಮಯದಲ್ಲಿ ಉಪಯುಕ್ತವೆಂದು ಸಾಬೀತಾಯಿತು, ಅಮೆರಕ ಸಂಸ್ಥಾನ ಪಾಕಿಸ್ತಾನದ ಅಧ್ಯಕ್ಷರು ಭಾರತಕ್ಕೆ ಸಂಬಂಧಿಸಿದಂತೆ 1962 ರಲ್ಲಿ, ತನ್ನ ತಟಸ್ಥತೆಯನ್ನು ಖಾತರಿಪಡಿಸಿಕೊಳ್ಳಲು ಅಯ್ಯಬ್ ಖಾನ್’ಗೆ ಹೇಳಿದರು. ( ಅವರು ಅಮೆರಿಕನ್ನರೊಂದಿಗೆ ನಿಕಟವಾಗಿದ್ದರು). "ರಷ್ಯಾ ಮತ್ತು ಕೆಂಪು ಚೀನಾದ ಕಮ್ಯುನಿಸ್ಟ್ ಆಕ್ರಮಣದ ಬೆದರಿಕೆ ಅಯ್ಯಬ್ ಖಾನ್’ಗೆ ಇತ್ತು". " ಮುಕ್ತ ಮಾರುಕಟ್ಟೆಯ ನೀತಿಗಳನ್ನು ಬೆಂಬಲಿಸುವ ಬಲಪಂಥೀಯ ಗುಂಪುಗಳಿಂದ ನೆಹರು ಅವರ ಸೋವಿಯತ್ ಒಕ್ಕೂಟದೊಂದಿಗಿನ ಭಾರತೀಯ ಸಂಬಂಧವೂ .ಕೂಡಾ ಟೀಕಿಸಲ್ಪಟ್ಟು ಮವಲ್ಯಮಾಪನ ಮಾಡಲ್ಪಟ್ಟಿತು. ಕೆಲವರು ಒಂದು ಶಾಶ್ವತ ಮಿತ್ರರಾಷ್ಟ್ರದ ಮೇಲೆ ನೆಲೆಗೊಳ್ಳಲು ಅಥವಾ ಅವಲಂಬಿಸಲು ಒತ್ತಡಗಳನ್ನು ಮಾಡಿದ್ದರು,. ಆದರೆ ನೆಹರುರವರು ಅಲಿಪ್ತನೀತಿಯ ಚಳುವಳಿಗೆ ತಮ್ಮ ಬದ್ಧತೆಯನ್ನು ಮುಂದುವರಿsಸಿದರು. China's Decision for War with India in 1962;John W. Garver "China's Decision for War with India in 1962 by John W. Garver" (PDF). 26 March 2009. ಸೇನಾ ಉನ್ನತೀಕರಣಕ್ಕೆ ಸಿದ್ಧತೆ ಯುದ್ಧದ ನಂತರ ಭಾರತೀಯ ಮಿಲಿಟರಿಯಲ್ಲಿ ಭವಿಷ್ಯದ ರೀತಿಯ ಘರ್ಷಣೆಗಳಿಗೆ ಸಿದ್ಧತೆಗಳನ್ನು ಮಾಡಲಾಯಿತು ಮತ್ತು ನೆಹರು ಅವರಿಗೆ ಆ ಬಗ್ಗೆ ಒತ್ತಡವನ್ನು ತಂದಿತು, ಅವರು ಭಾರತದ ಮೇಲೆ ಚೀನಾದ ಆಕ್ರಮಣವನ್ನು ನಿರೀಕ್ಷಿಸಲು ವಿಫಲವಾದ ಕಾರಣದಿಂದಾಗಿ ಜವಾಬ್ದಾರರಾಗಿದ್ದರು. ಅಮೆರಿಕಾದ ಸಲಹೆಯಡಿಯಲ್ಲಿ (ಅಮೆರಿಕಾದ ರಾಯಭಾರಿ ಜಾನ್ ಕೆನ್ನೆಥ್ ಗಾಲ್ಬ್ರೈಥ್ ಅವರು ಯು.ಎಸ್.ನ ಯುದ್ಧದ ಮತ್ತು ಇತರ ಎಲ್ಲ ಉನ್ನತ ನೀತಿಯನ್ನು ರೂಪಿಸುತ್ತಿದ್ದರು. ಕಾಕತಾಳೀಯವಾಗಿ ಕೆನಡಿ ಮತ್ತು ಇತರರು ಅಮೇರಿಕನ್ ಕ್ಯೂಬಾದ ಕ್ಷಿಪಣಿ ಪ್ರಕ್ಷುಬ್ಧತೆಯ’ನ್ನು ಮತ್ತು ನೀತಿಯನ್ನು ರೂಪಿಸುವುದನ್ನು ನೋಡಿಕೊಳ್ಳುತ್ತಿದ್ದರು- ಆ ಸಮಯದಲ್ಲಿ ರಷ್ಯಾವು ಅಮೇರಿಕಾದ ಮೇಲೆ ಧಾಳಿ ಮಾಡಲು ಕ್ಯೂಬಾಕ್ಕೆ ಉನ್ನತ ಕ್ಷಿಪಣಿಗಳನ್ನು ರವಾನಿಸಿತ್ತು.) ನೆಹರೂ ಅವರು ತಮ್ಮ ಉತ್ತಮ ಆಯ್ಕೆಗಳ ಪ್ರಕಾರ, ಭಾರತೀಯ ವಾಯುಪಡೆಯನ್ನು ಚೀನೀ ಮುನ್ನಗ್ಗುವಿಕೆಯನ್ನು ತಡೆಯಲು ಉಪಯೋಗಿಸಲು ಇಷ್ಟಪಡಲಿಲ್ಲ.. ಟಿಬೆಟ್’ನಲ್ಲಿ ತಮ್ಮ ವಾಯುಪಡೆ ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಚೀನೀಯರಿಗೆ ಇಂಧನ ಅಥವಾ ಇಳಿಯುವದಾರಿಗಳೆರಡೂ ಇರಲಿಲ್ಲ ಎಂದು ಸಿ.ಐ.ಎ ನಂತರ ಬಹಿರಂಗಪಡಿಸಿತು. ಸಾಮಾನ್ಯವಾಗಿ, ಭಾರತೀಯರು ಚೀನಾ ಮತ್ತು ಅದರ ಮಿಲಿಟರಿ ಬಗ್ಗೆ ಹೆಚ್ಚು ಸಂಶಯ ವ್ಯಕ್ತಪಡಿಸಿದ್ದಾರೆ. ಅನೇಕ ಭಾರತೀಯರು ಈ ಯುದ್ಧವನ್ನು ಚೀನಾದೊಂದಿಗೆ ದೀರ್ಘಕಾಲದ ಶಾಂತಿ ಸ್ಥಾಪಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಬಗೆದ ದ್ರೋಹವೆಂದು ಪರಿಗಣಿಸುತ್ತಾರೆ ಮತ್ತು "ಹಿಂದಿ-ಚೀನಿ ಭಾಯಿ-ಭಾಯಿ" ("ಭಾರತೀಯರು ಮತ್ತು ಚೀನಿಯರು ಸಹೋದರರು" ಎಂಬ ಅರ್ಥದ ಘೋಷಣೆಯನ್ನು ಚೌಎನ್ ಲಾಯ್ ಭಾರತದ ಭೇಟಿಯಲ್ಲಿ ಘೋಷಿಸಿಸಿದ್ದರು) ಎಂದ ನೆಹರು ಅವರ ಹೇಳಿಕೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಮಹಾಶಕ್ತಿಗಳ ಶೀತಲ-ಯುದ್ಧದ (ಕೋಲ್ಡ್ ವಾರ್ ಬ್ಲಾಕ್) ಕಾವು ಹೆಚ್ಚುತ್ತಿರುವುದರ ಪ್ರಭಾವವನ್ನು ಪ್ರತಿಭಟಿಸಲು ಭಾರತ ಮತ್ತು ಚೀನಾ ಗಳು ಬಲವಾದ “ಏಷ್ಯಾದ ಆಕ್ಸಿಸ್” ಅನ್ನು (ಏಷಿಯಾದ-ಕೇಂದ್ರ ಪ್ರಭಾವವನ್ನು)) ರೂಪಿಸುತ್ತವೆ ಎಂಬ ನೆಹರುರವರ ಹಿಂದಿನ ಆಶಯವನ್ನು ಯುದ್ಧವು ಅಂತ್ಯಗೊಳಸಿತು. "Jawaharlal Nehru pleaded for US help against China in 1962". The Times of India. 16 November 2010 ಸೈನ್ಯದ ಸನ್ನದ್ಧತೆಯು ರಕ್ಷಣಾ ಸಚಿವ ಮೆನನ್ ಅವರ ಮೇಲೆ ಆರೋಪ ಹೊರಿಸಲ್ಪಟ್ಟಿತು, ಅವರು ಭಾರತದ ಮಿಲಿಟರನ್ನು ಮತ್ತಷ್ಟು ಆಧುನಿಕಗೊಳಿಸಬಲ್ಲವರಿಗೆ ಅವಕಾಶ ನೀಡಲು ತಮ್ಮ ಸರ್ಕಾರದ ಹುದ್ದೆಗೆ "ರಾಜೀನಾಮೆ ನೀಡಿದರು". ಭಾರತದ ಸ್ವಂತ ಮೂಲಗಳು ಮತ್ತು ಸ್ವಯಂಪೂರ್ಣತೆಯನ್ನು ಶಾಧಿಸಲು ಭಾರತದ ಶಸ್ತ್ರಾಸ್ತ್ರಗಳ ನೀತಿಯ ಅನುಸಂಧಾನವು ನೆಹರುರವರ ಅಡಿಯಲ್ಲಿ ಶ್ರದ್ಧೆಯಿಂದ ಪ್ರಾರಂಭವಾಯಿತು, ಅದು ಇವರ ಮಗಳು ಇಂದಿರಾ ಗಾಂಧಿಯವರಿಂದ ಪೂರ್ಣಗೊಂಡಿತು, ನಂತರ 1971 ರಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಅದ್ಭುತ ಮಿಲಿಟರಿ ಗೆಲುವು ಸಾಧಿಸಿತು. ಯುದ್ಧದ ಅಂತ್ಯದ ವೇಳೆಗೆ ಭಾರತವು ತನ್ನ ಬೆಂಬಲವನ್ನು ಹೆಚ್ಚಿಸಿಕೊಂಡಿತು. ಟಿಬೆಟಿಯನ್ ನಿರಾಶ್ರಿತರು ಮತ್ತು ಕ್ರಾಂತಿಕಾರಿಗಳಿಗೆ ಅವರು ಬೆಂಬಲಿಸಿದರು, ಅವುಗಳಲ್ಲಿ ಕೆಲವು ಟಿಬೆಟಿಯನ್ನರು ಭಾರತದಲ್ಲಿದ್ದು ಇಬ್ಬರಿಗೂ ಒಂದೇ ಸಾಮಾನ್ಯ ಶತ್ರುವಿನ ವಿರುದ್ಧ ಹೋರಾಡುತ್ತ ಭಾರತದಲ್ಲಿ ನೆಲೆಸಿದ್ದಾರೆ. ಭಿನ್ನತೆಯನ್ನು ಹೊಂದಿದ್ದ ಟಿಬೆಟಿಯನ್ ನಿರಾಶ್ರಿತರು ಸೇರಿದ ಭಾರತೀಯ-ತರಬೇತಿ ಪಡೆದ, ನೆಹರು ಆರಂಭಿಸಿದ "ಟಿಬೆಟಿಯನ್ ಸಶಸ್ತ್ರ ಪಡೆ" 1965 ಮತ್ತು 1971 ರಲ್ಲಿ, ಪಾಕಿಸ್ತಾನದ ವಿರುದ್ಧ ಯುದ್ಧಗಳಲ್ಲಿ ಪರಿಣಾಮಕಾರಿಯಾಗಿ ಹೋರಾಡಿತು. ಪಶ್ಚಿಮ ದೇಶಗಳ ಸಹಾಯ ಪಾಕಿಸ್ತಾನದ ಸಂಘರ್ಷದ ಸಮಯದಲ್ಲಿ, ನೆಹರು ಅಮೆರಿಕ (ಯುಎಸ್) ಅಧ್ಯಕ್ಷ ಜಾನ್ ಎಫ್. ಕೆನಡಿ ಅವರಿಗೆ ಎರಡು ಹತಾಶ ಪತ್ರಗಳನ್ನು ಬರೆದರು, ಫೈಟರ್ ಜೆಟ್ಗಳ 12 ಸ್ಕ್ವಾಡ್ರನ್ಸ್ ಮತ್ತು ಆಧುನಿಕ ರಾಡಾರ್ ವ್ಯವಸ್ಥೆಯನ್ನು ಭಾರತಕ್ಕೆ ಕೊಡಲು ಕೋರಿದರು. ಈ ಜೆಟ್’ಗಳನ್ನು ಭಾರತೀಯ ವಾಯು ಬಲಕ್ಕೆ ಬಲವನ್ನು ಹೆಚ್ಚಿಸುವುದಕ್ಕೆ ಅವಶ್ಯಕವೆಂದು ಪರಿಗಣಿಸಲಾಯಿತು, ಆದ್ದರಿಂದ ವೈಮಾನಿಕ –ವಾಯುಧಾಳಿ ಪ್ರತಿ –ವಾಯುಧಾಳಿಯನ್ನು ಭಾರತೀಯ ಪಡೆ ಸಮರ್ಥವಾಗಿ ಪ್ರಾರಂಭಿಸಬಹುದು (ಚೀನಾದಮೇಲೆ ವಾಯುಪಡೆ ಧಾಳಿಯನ್ನು ಪ್ರತಿಧಾಳಿಯ ಕಾರಣದಿಂದ ಮಾಡಿರಲಿಲ್ಲ.). ಈ ವಿಮಾನಗಳನ್ನು ಅಮೆರಿಕದ ಪೈಲೆಟ್’ಗಳು ಭಾರತೀಯರು ತರಬೇತಿ ಪಡೆಯುವವರೆಗೆ ಚಲಾಯಿಸಬೇಕೆಂದು ನೆಹರೂ ಅವರು ಕೇಳಿದರು. ಈ ವಿನಂತಿಗಳನ್ನು ಕೆನೆಡಿ ಆಡಳಿತ ತಿರಸ್ಕರಿಸಿತು (ಸಿನೋ-ಇಂಡಿಯನ್ ಯುದ್ಧದ ಸಮಯದಲ್ಲಿ ಅಮೇರಿಕ ಕ್ಯೂಬನ್ ಕ್ಷಿಪಣೆ ಧಾಳಿಯ ಸಮಸ್ಯೆಯಲ್ಲಿ ಭಾಗಿಯಾಗಿತ್ತು), ಆದರೂ ಇದು ಇಂಡೋ-ಯುಎಸ್ ಸಂಬಂಧಗಳು ತಣ್ಣಗಾಗಲು ಕಾರಣವಾಯಿತು. ಮಾಜಿ ಭಾರತೀಯ ರಾಯಭಾರಿ ಜಿ ಪಾರ್ಥಸಾರಥಿ ಅವರ ಪ್ರಕಾರ, "ನಾವು ಯುಎಸ್‍ಸ್ನಿಂದ ಏನೂ ಸಿಕ್ಕದೆಹೋದ ನಂತರ ಮಾತ್ರ ಸೋವಿಯೆಟ್ ಯೂನಿಯನ್’ನಿಂದ ಭಾರತಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡಕೊಳ್ಳಲು ಆರಂಭಿಸಿದೆವು". ಎಂದಿದ್ದಾರೆ. [172] ಪರ್ ಟೈಮ್ ಮ್ಯಾಗಜೀನ್ 1962 ರ ಯುದ್ಧದ ಸಂಪಾದಕೀಯ, ಆದಾಗ್ಯೂ, ಇದು ಈ ರೀತಿ ಇರಲಾರದು ಎಂದು ಸಂಪಾದಕೀಯ ಹೇಳುತ್ತದೆ. 'ವಾಷಿಂಗ್ಟನ್ ಅಂತಿಮವಾಗಿ ಭಾರತಕ್ಕೆ ತನ್ನ ಗಮನವನ್ನು ತಿರುಗಿಸಿದಾಗ, ರಾಯಭಾರಿಯ ವಚನವನ್ನು ಗೌರವಿಸಿತು, 5,000,000 ಡಾಲರ್ ಮೌಲ್ಯದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಹೆವಿ ಮೊರ್ಟರಗಳು ಮತ್ತು ಭೂಸ್ಪೋಟಕಗಳೊಂದಿಗೆ 60 ಯು.ಎಸ್. ಸಂಪೂರ್ಣ ಹನ್ನೆರಡು ದೊಡ್ಡ ಸಿ-130 ಹರ್ಕ್ಯುಲಸ್ ಟ್ರಾನ್ಸ್ಪೋರ್ಟ್ಗಳ ವಿಮಾನಗಳನ್ನು ಭರ್ತಿಮಾಡಿಕೊಂಡು ಯುಎಸ್ ಸಿಬ್ಬಂದಿ ಮತ್ತು ನಿರ್ವಹಣಾ ತಂಡಗಳೊಂದಿಗೆ ಭಾರತೀಯ ಸೇನಾಪಡೆಗಳು ಮತ್ತು ಉಪಕರಣಗಳು ಯುದ್ಧ ವಲಯಕ್ಕೆ ಹಾರಲು ನವ ದೆಹಲಿಗೆ ಕಳಿಸಿದರು. ಬ್ರಿಟನ್ ಬ್ರೆನ್ ಮತ್ತು ಸ್ಟೆನ್ ಬಂದೂಕುಗಳನ್ನು ಇದಕ್ಕೆ ಪೂರಕ ಮಾಡಿತು, ಮತ್ತು ಭಾರತಕ್ಕೆ 150 ಟನ್ ಶಸ್ತ್ರಾಸ್ತ್ರಗಳನ್ನು ಸಾಗಿಸಿತು. ಕೆನಡಾ ಆರು ಸಾರಿಗೆ ವಿಮಾನಗಳನ್ನು ಸಾಗಿಸಲು ತಯಾರಾಯಿತು. ಆಸ್ಟ್ರೇಲಿಯಾ 1,800,000 ಡಾಲರ್ ಮೌಲ್ಯದ ಯುದ್ಧಸಾಮಗ್ರಿಗಳನ್ನು ಭಾರತಕ್ಕೆ ಸಾಲವಾಗಿ ನೀಡಿತು."Jawaharlal Nehru pleaded for US help against China in 1962"."India: Never Again the Same". Time. 30 November 1962. ಮರಣ ಯಾವುದೇ ಜನರು ನನ್ನ ಬಗ್ಗೆ ಯೋಚಿಸಲು ಬಯಸಿದರೆ, ನಾನು ಹೀಗೆ ಹೇಳಲು ಬಯಸುತ್ತೇನೆ: “ಇವನು ತನ್ನ ಮನಸ್ಸು ಮತ್ತು ಹೃದಯದಿಂದ ಭಾರತ ಮತ್ತು ಭಾರತೀಯ ಜನರನ್ನು ಪ್ರೀತಿಸುತ್ತಾನೆ. ಮತ್ತು ಅವರು ಅದೇ ಪ್ರಕಾರ ತಮ್ಮನ್ನು ಪ್ರೀತಿಸುತ್ತಿದ್ದರು, ಮತ್ತು ಜನರು ತಮ್ಮ ಪ್ರೀತಿಯನ್ನು ಹೇರಳವಾಗಿ ಮತ್ತು ಅತ್ಯತಿಶಯವಾಗಿ ಅವರಿಗೆ ಕೊಟ್ಟರು.” - ಜವಾಹರಲಾಲ್ ನೆಹರು.Special Correspondent (28 May 1964). "Jawaharlal Nehru: The Maker of Modern India". The Age Melbourne, Australia. Archived from the original on 30 March 2017. "'A Man Who, with All His Mind and Heart, Loved India'" Dasgupta, Alaka Shankar ; line sketches by Sujasha (1986). Indira Priyadarshini. New Delhi: Children's Book. pp. 80–81.https://www.nytimes.com/1964/06/04/archives/excerpts-from-the-will-of-prime-minister-nehru.html Excerpts From the Will of Prime Minister Nehru;JUNE 4, 1964 1962 ರ ನಂತರ ನೆಹರುರ ಆರೋಗ್ಯವು ಕ್ರಮೇಣವಾಗಿ ಕುಸಿಯಿತು ಮತ್ತು 1963 ರ ಹೊತ್ತಿಗೆ ಕಾಶ್ಮೀರದಲ್ಲಿ ಚೇತರಿಸಿಕೊಳ್ಳಳು ಕೆಲವು ತಿಂಗಳುಗಳನ್ನು ಕಳೆದರು. ಕೆಲವು ಇತಿಹಾಸಕಾರರು ಭಾರತ-ಚೀನಾ ಯುದ್ಧವು ಇವರ ಮೇಲೆ ಈ ಅನಿರೀಕ್ಷಿತ ಆರೋಗ್ಯದ ಕುಸಿತಕ್ಕೆ ಕಾರಣವೆಂದು ಊಹಿಸುತ್ತಾರೆ. ಅವರಿಗೆ ಚೀನಾದ ಆಕಸ್ಮಿಕ ಧಾಳಿಯನ್ನು ನಂಬಿಕೆಯ ದ್ರೋಹವೆಂದು ಭಾವಿಸಿದರು. ಮೇ 26, 1964 ರಂದು ಡೆಹ್ರಾಡೂನ್ನಿಂದ ಮರಳಿದ ನಂತರ ಅವರು ಸಾಕಷ್ಟು ಆರೋಗ್ಯಕರವಾಗಿದ್ದರು ಮತ್ತು ಸಾಮಾನ್ಯವಾಗಿ ಹಿಂದಿನಂತೆ 23:30 ಗಂಟೆಗೆ ಮಲಗುತ್ತಿದ್ದರು. ಅವರು ಬೆಳಿಗ್ಗೆ ಸ್ನಾನದ ಕೊಠಡಿಯಿಂದ ಹಿಂದಿರುಗಿದ ಕೂಡಲೇ ಸುಮಾರು 6:30 ರ ತನಕ ವಿಶ್ರಾಂತಿಯನ್ನು ಹೊಂದುತ್ತಿದ್ದರು, ನೆಹರು ಬೆನ್ನುನೋವಿನ ಸಮಸ್ಯೆಯ ದೂರು ನೀಡಿದರು. ಅವರನ್ನು ಪರೀಕ್ಷಿಸಲು ಬಂದ ವೈದ್ಯರ ಬಳಿ ಸ್ವಲ್ಪಕಾಲ ಮಾತನಾಡಿದ ನೆಹರೂ ಅವರು ತಕ್ಷಣವೇ ಕುಸಿದುಬಿದ್ದರು. ನಂತರ ಅವರು ಸಾಯುವ ತನಕವೂ ಅವರಿಗೆ ಪ್ರಜ್ಞೆ ಮರಳಲಿಲ್ಲ. ಅವರ ಮರಣವನ್ನು ಲೋಕಸಭೆಗೆ 14:00 ಸ್ಥಳೀಯ ಸಮಯಕ್ಕೆ ದಿ.27 ಮೇ 1964 ರಂದು (ಅದೇ ದಿನ) ಘೋಷಿಸಲಾಯಿತು; ಸಾವಿನ ಕಾರಣ ಹೃದಯಾಘಾತ ಎಂದು ನಂಬಲಾಗಿದೆ. ಜವಾಹರಲಾಲ್ ನೆಹರು ದೇಹವನ್ನು ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗಿತ್ತು. "ವೇದಿಕೆಯ ಮೇಲೆ ದೇಹವನ್ನು ಇಟ್ಟುಕೊಂಡಿದ್ದರಿಂದ" ರಘುಪತಿ ರಾಘವ ರಾಜರಾಮ್ "ಅನ್ನು ಪಠಿಸಿದರು. ಮೇ 28 ರಂದು, ದೆಹಲಿಯ ಬೀದಿಗಳಲ್ಲಿ ಮತ್ತು ಸಮಾಧಿ ಮೈದಾನದಲ್ಲಿ ಸೇರ್ಪಡೆಯಾದ 15 ಲಕ್ಷ ಜನಕ್ಕೂ ಹೆಚ್ಚು ಶೋಕಾಚರಣೆಗೆ ಯಮುನಾ ತೀರದಲ್ಲಿ ಸಾಕ್ಷಿಯಾಗಿದ್ದರು. ಶಾಂತಿವನದಲ್ಲಿ ಹಿಂದೂ ಧಾರ್ಮಿಕ ಕ್ರಿಯೆಗಳಿಗೆ ಅನುಸಾರವಾಗಿ ನೆಹರು ಅವರ ಅಂತ್ಯಕ್ರಿಯೆ ನೆಡಸಲಾಯಿತು.Asia Society (1988). ""Jawaharlal Nehru"". In Embree, Ainslie T. Encyclopedia of Asian History. 3. New York: Charles Scribner's Sons. pp. 98–100. 1964: Light goes out in India as Nehru diesTimes, Thomas F. Brady; Special To The New York (29 May 1964). "1.5 MILLION VIEW RITES FOR NEHRU ನೆಹರೂ, ಒಬ್ಬ ವ್ಯಕ್ತಿಯಾಗಿ ಮತ್ತು ರಾಜಕಾರಣಿಯಾಗಿ ಭಾರತದ ಮೇಲೆ ಯಾವಬಗೆಯ ಶಕ್ತಿಯುತ ಪ್ರಭಾವದ ಮುದ್ರೆಯನ್ನು ಮಾಡಿದ್ದರೆಂದರೆ, 1964 ರ ಮೇ 27 ರಂದು ಅವರ ಮರಣದ ನಂತರ ಭಾರತವು ತನ್ನ ನಾಯಕತ್ವಕ್ಕೆ ಸ್ಪಷ್ಟ ರಾಜಕೀಯ ಉತ್ತರಾಧಿಕಾರಿಯಾಗಲು ತಕ್ಕವರನ್ನು ಕಂಡುಕೊಳ್ಳುವುದು ಕಷ್ಟವಾಯಿತು. (ಆನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನಿಯಾಗಿ ಆರಿಸಲಾಯಿತು) ನೆಹರು ಅವರು ಭಾರತದಲ್ಲಿ ಅಂತಹ ಶಕ್ತಿಯುತ ನಾಯಕತ್ವವನ್ನು ಕೊಟ್ಟಿದ್ದರು. ಗಾಂಧಿಯವರ ಹತ್ಯೆಯ ಸಮಯದಲ್ಲಿ ನೆಹರು ಹೇಳಿದ ಆದೇ ಮಾತುಗಳಲ್ಲಿ ಹೇಳಿದರು; "ಬೆಳಕು ಹೊರಟುಹೋಗಿದೆ" ಎಂದು ಭಾರತೀಯ ಸಂಸತ್ತಿಗೆ ಅವರ ಮರಣವನ್ನು ಘೋಷಿಸಲಾಯಿತು."India Mourning Nehru, 74, Dead of a Heart Attack; World Leaders Honor Him ವೈಯುಕ್ತಿಕ ಜೀವನ thumb|ಎಡ್ವಿನಾ ಮೌಂಟ್ಬ್ಯಾಟನ್‍ರೊಂದಿಗೆ ನೆಹರು ನೆಹರೂ ಕಮಲಾ ಕೌಲ್’ರನ್ನು 1916 ರಲ್ಲಿ ವಿವಾಹವಾದರು. ಅವರ ಏಕೈಕ ಪುತ್ರಿ ಇಂದಿರಾ 1917 ರಲ್ಲಿ ಒಂದು ವರ್ಷದ ನಂತರ ಜನಿಸಿದಳು. ಕಮಲಾ ನವೆಂಬರ್ 1924 ರಲ್ಲಿ ಗಂಡುಮಗುವಿಗೆ ಜನ್ಮ ನೀಡಿದರು, ಆದರೆ ಅದು ಕೇವಲ ಒಂದು ವಾರದವರೆಗೆ ಮಾತ್ರಾ ಜೀವಿಸಿತ್ತು. 1942 ರಲ್ಲಿ ಇಂದಿರಾ ಫಿರೋಜ್ ಗಾಂಧಿಯವರನ್ನು ಮದುವೆಯಾದರು. ಅವರಿಗೆ ರಾಜೀವ್ (1944) ಮತ್ತು ಸಂಜಯ್ (1946) ಇಬ್ಬರು ಪುತ್ರರು ಇದ್ದರು."From years 1916 to 1964...The man and the times". The Windsor Star. 27 May 1964. Retrieved 19 January 2013. ಕಮಲಾರ ಮರಣದ ನಂತರ, ನೆಹರು, ವಿಧುರನಾಗಿ ಉಳಿದರು, ಅವರು ಕೆಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದನೆಂದು ಆರೋಪಿಸಲಾಯಿತು. ಇವುಗಳಲ್ಲಿ ಶ್ರದ್ಧಾ ಮಾತಾ, ಪದ್ಮಜಾ ನಾಯ್ಡು ಮತ್ತು ಎಡ್ವಿನಾ ಮೌಂಟ್ಬ್ಯಾಟನ್ ಸೇರಿದ್ದಾರೆ. ಎಡ್ವಿನಾ ಅವರ ಪುತ್ರಿ ಪಮೇಲಾ ಎಡ್ವಿನಾದೊಂದಿಗೆ ನೆಹರುರ ಪ್ಲ್ಯಾಟೋನಿಕ್ (ದೈಹಿಕ ಸಂಬಂಧವಿಲ್ಲದ ಪ್ರೇಮ) ಸಂಬಂಧವನ್ನು ಒಪ್ಪಿಕೊಂಡರು. "Nehru-Edwina were in deep love, says Edwina's daughter". 2007-07-15. 1960 ರಲ್ಲಿ ಎಡ್ವಿನಾ ಮೌಂಟ್ಬ್ಯಾಟನ್ ಸಮುದ್ರದ ಸಮಾಧಿಗೆ ಭಾರತೀಯ ನೌಕಾದಳದ ಸೈನ್ಯವನ್ನು ಕಳುಹಿಸಲು ವೈಯಕ್ತಿಕ ನಿರ್ಧಾರವನ್ನು ನೆಹರೂ ತೆಗೆದುಕೊಂಡರು. ನೆಹರೂ ಅವರ ಸಹೋದರಿ ವಿಜಯ ಲಕ್ಷ್ಮಿ ಪಂಡಿತ್ ಇಂದಿರಾ ಗಾಂಧಿಯವರ ಸ್ನೇಹಿತ ಮತ್ತು ಜೀವನಚರಿತ್ರೆಕಾರ ಪಪುಲ್ ಜಯಕರ್ ಅವರಿಗೆ ಸರೋಜಿನಿ ನಾಯ್ಡು ಮಗಳು ಸ್ವಾತಂತ್ರ ಹೋರಾಟಗಾರ್ತಿ ಕಾಂಗ್ರೆಸ್ ಕಾರ್ಯಕರ್ತೆ, ನೆಹರೂ ಅಭಿಮಾನಿಯಾದ ಪದ್ಮಜಾ ನಾಯ್ಡು ಅನೇಕ ವರ್ಷಗಳ ಕಾಲ ನೆಹರೂ ಇದ್ದ ತೀನ್ ಮೂರ್ತಿ ಭವನದ ಹೊರಗೃಹದಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದರು. ನೆಹರು ಅವರು ತಾಯಿಯನ್ನು ಕಳೆದುಕೊಂಡ ಮಗಳು ಇಂದಿರಾ ಮನಸ್ಸಿಗೆ ನೋವಾಗುವುದೆಂದು ಎರಡನೇ ಮದುವೆಗೆ ಮನಸ್ಸು ಮಾಡಲಿಲ್ಲ. Jayakar, Pupul (1995). Indira Gandhi, a biography (Rev. ed.). New Delhi, India: Penguin. pp. 90–92 ಶ್ರದ್ಧಾ ಮಾತಾ ಸನ್ಯಾಸಿಯಾಗಿದ್ದು ಹಿಂದೂ ಧರ್ಮದ ಬಗೆಗೆ ಅವರು ಉತ್ತಮ ಪ್ರವಚನ ಮಾಡುತ್ತಿದ್ದರು. ನೆಹರು ಮಂತ್ರಿಮಂಡಲದಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿಯವರು ತಮಗೆ ಆಪ್ತರಾಗಿದ್ದ ಮತ್ತು ದೆಹಲಿಗೆ ಬಂದಾಗ ಅವರಲ್ಲಿ ಉಳಿಯುತ್ತಿದ್ದ,ಮತ್ತು ತಮ್ಮ ಆಭಿಮಾನಿಯಾಗಿದ್ದ ಸಂನ್ಯಾಸಿನಿ ಶ್ರದ್ಧಾ ಮಾತಾರನ್ನು ಭೇಟಿಮಾಡಲು ಮತ್ತು ಹಿಂದೂಧರ್ಮದ ಬಗ್ಗೆ ಒಂದು ವಾರ ಅವರ ಪ್ರವಚನ ಕೇಳಲು, ನೆಹರೂ ಬಿಡುವಿಲ್ಲವೆಂದರೂ ಅವರನ್ನು ಮುಖರ್ಜಿ ಬಹಳ ಒತ್ತಾಯಿಸಿದರು. ಅದಕ್ಕೆ ಮಣಿದು ಅವರನ್ನು ಭೇಟಿಮಾಡಲು ನೆಹರೂ ಒಪ್ಪ್ಪಿದರು. ಹಾಗೆ ಆದ ಒಂದು ವಾರದ ನಂತರ ಪಟೇಲರು ಸನ್ಯಾಸಿನಿಯ ಭೇಟಿಯ ವದಂತಿಯ ಬಗೆಗೆ ನೆಹರೂ ಅವರಿಗೆ ಪತ್ರ ಬರೆದು ವಿಚಾರಿಸಿದಾಗ, ಸಂನ್ಯಾಸಿನಿಯು ತಮ್ಮ ಧಾರ್ಮಿಕ ಸಿದ್ದಾಂತವನ್ನು ತಮಗೆ ಹೇಳುತ್ತಿದ್ದಾರೆ – ಮತ್ತು ತಾವು ತಮ್ಮ ಸಿದ್ದಾಂತವನ್ನು ಅವರಿಗೆ ಹೇಳುತ್ತಿದ್ದೇನೆ – ಅಷ್ಟೆ ಎಂದು ಪಟೆಲರಿಗೆ ಪತ್ರ ಬರೆದರು. ಅದು ನಂತರ ಗಾಸಿಪ್ ಆಯಿತು. ಆದರೆ ನೆಹರು ತಮ್ಮ ಜೀವನದಲ್ಲಿ ಯಾವುದನ್ನೂ ಮುಚ್ಚಿಡಲು ಪ್ರಯತ್ನಿಸಲಿಲ್ಲ. ಆ ಸಂಬಂಧ ಎಲ್ಲಾ ಪತ್ರಗಳನ್ನು ದಾಖಲೆ ವಿಭಾಗಕ್ಕೆ ಕಳಿಸಿದರು.Reddy, Sheela (23 February 2004). "If I Weren't A Sanyasin, He Would Have Married Me". Outlook.Outlook. Archived from the original on 8 August 2015. Wolpert, Stanley (1996). Nehru: A Tryst with Destiny. Oxford University Press. ನೆಹರು ಪ್ರಧಾನಿಯಾಗಿದ್ದ ಬಹಳಷ್ಟು ಅವಧಿಯಲ್ಲಿ ಇಂದಿರಾ ತಮ್ಮ ತಂದೆಗೆ ಅನಧಿಕೃತವಾಗಿ ವೈಯಕ್ತಿಕ ಸಹಾಯಕರಾಗಿ ಸೇವೆ ಸಲ್ಲಿಸಿದರು. 1950 ರ ಅಂತ್ಯದ ವೇಳೆಗೆ ಇಂದಿರಾ ಗಾಂಧಿ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಆ ಅಧಿಕಾರದಲ್ಲಿ, 1959 ರಲ್ಲಿ ಕಮ್ಯುನಿಸ್ಟ್ ನೇತೃತ್ವದ ಕೇರಳ ರಾಜ್ಯ ಸರ್ಕಾರವನ್ನು ವಜಾಮಾಡುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.Upadhyaya, Prakash Chandra (1989). "Review of Marxist State Governments in India, Politics, Economics and Society by T. J. Nossiter". Social Scientist ಧರ್ಮ ಮತ್ತು ವೈಯಕ್ತಿಕ ನಂಬಿಕೆಗಳು ಹಿಂದೂ ಅಗ್ನೊಸ್ಟಿಕ್ (ಸಂದೇಹವಾದಿ) ಎಂದು ವರ್ಣಿಸಲ್ಪಟ್ಟ, ಮತ್ತು "ವೈಜ್ಞಾನಿಕ ಮಾನವತಾವಾದಿ" ಎಂದು ನೆಹರು ಅವರ ವ್ಯಕ್ತ್ತಿತ್ವ-ಸ್ವಭಾವವನ್ನು ಹೇಳಬಹುದು. ಧಾರ್ಮಿಕ ನಿಷೇಧದ ನಿಯಮಗಳು ಗಳು ಭಾರತವನ್ನು ಮುಂದೆ ಅಭಿವೃದ್ಧಿಯತ್ತ ಸಾಗಲು ಮತ್ತು ಆಧುನಿಕ ಪರಿಸ್ಥಿತಿಗಳಿಗೆ ಅಳವಡಿಸಿಕೊಳ್ಳುವುದನ್ನು ತಡೆಗಟ್ಟುತ್ತವೆ ಎಂದು ನೆಹರೂ ಅಭಿಪ್ರಾಯಪಟ್ಟರು: "ಯಾವುದೇ ತತ್ತ್ವಗಳಿಗೆ ಮತ್ತು ಧರ್ಮಪ್ರಜ್ಞೆಗೆ ಗುಲಾಮರಲ್ಲದ ಮನಸ್ಥಿತಿಯ ದೇಶ ಅಥವಾ ಜನರು ಪ್ರಗತಿ ಸಾಧಿಸಬಹುದು ಮತ್ತು ನಮ್ಮ ದೇಶ ಮತ್ತು ಜನರು ಬೇಸರಪಡುವಷ್ಟು ಅಸಾಧಾರಣವಾದ ತಾತ್ವಿಕ ಕಟ್ಟಾನಂಬಿಗೆಯವರೂ ಮತ್ತು ಸಂಕುಚಿತ ಮನಸ್ಸಿನವರಾಗಿದ್ದಾರೆ."PANDIT JAWARHARLAL NEHRU (1889-1964) Sarvepalii Gopal. Jawaharlal Nehru: A Biography, Volume 3; Volumes 1956–1964. p. 17. ಧರ್ಮವೆಂದು ಕರೆಯಲ್ಪಡುವ ಅಥವಾ ಆ ಬಗೆಯ ನಂಬುಗೆ ಯಾವುದೇ ಪ್ರಮಾಣದಲ್ಲಿರಲಿ, ಭಾರತದಲ್ಲಿ ಮತ್ತು ಬೇರೆಡೆಯಲ್ಲಿ, ಸಂಘಟಿತ ಧರ್ಮದ ಚಿತ್ರಣವು (ಇತಿಹಾಸವು) ಭೀತಿಯಿಂದ ತುಂಬಿದೆ ಮತ್ತು ನಾನು ಆಗಾಗ್ಗೆ ಅದನ್ನು ಖಂಡಿಸಿದ್ದೇನೆ. ಅದನ್ನು ಶುದ್ಧವಾಗಿ ಮಾಡಲು ಗುಡಿಸಿ ಶುದ್ಧಮಾಡಲು ಬಯಸುತ್ತೇನೆ. ಬಹುಮಟ್ಟಿಗೆ ಅದು ಯಾವಾಗಲೂ ಕುರುಡು ನಂಬಿಕೆ ಮತ್ತು ಪ್ರತಿಭಟನೆಯ ಪ್ರತಿಕ್ರಿಯೆ, ಧರ್ಮಾಂಧತೆ ಮತ್ತು ಹುಸಿ ಧರ್ಮನಿರತೆ, ಮೂಢನಂಬಿಕೆ, ಶೋಷಣೆ ಮತ್ತು ಕೆಲವರ ಹಿತಾಸಕ್ತಿಗಳ ಸಂರಕ್ಷಣೆಗಾಗಿ ನಿಂತಿದೆ. - ಸ್ವಾತಂತ್ರ್ಯದ ಕಡೆಗೆ: ಜವಾಹರಲಾಲ್ ನೆಹರುರ ಆತ್ಮಚರಿತ್ರೆ (1936); ಪುಟಗಳು 240-241.ಸ್ವಾತಂತ್ರ್ಯದ ಕಡೆಗೆ: ಜವಾಹರಲಾಲ್ ನೆಹರುರ ಆತ್ಮಚರಿತ್ರೆ (1936); ಪುಟಗಳು 240-241 Thursby, Gene R. (1975-01-01). Hindu-Muslim Relations in British India: A Study of Controversy, Conflict, and Communal Movements in Northern India 1923–1928 ಅವರ ಆತ್ಮಚರಿತ್ರೆಯಲ್ಲಿ, ಅವರು ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ, ಮತ್ತು ಭಾರತದಲ್ಲಿ ಅವುಗಳ ಪ್ರಭಾವವನ್ನು ವಿಶ್ಲೇಷಿಸಿದ್ದಾರೆ. ಅವರು ಭಾರತವನ್ನು ಜಾತ್ಯತೀತ ರಾಷ್ಟ್ರವೆಂದು ರೂಪಿಸಲು ಬಯಸಿದ್ದರು; ಅವರ ಜಾತ್ಯತೀತ ನೀತಿಗಳು ಚರ್ಚೆಯ ವಿಷಯವಾಗಿ ಉಳಿದಿವೆ. Ram Puniyani (1999). Communal Threat to Secular Democracy. p. 113. Sankar Ghose (1993). Jawaharlal Nehru, a Biography. p. 210. ಭಾರತಕ್ಕೆ ನೆಹರು ಕೊಡಿಗೆ (ಲೆಗಸಿ) ನೆಹರೂ ಒಬ್ಬ ಮಹಾನ್ ವ್ಯಕ್ತಿ ... ನೆಹರು ಭಾರತೀಯರಿಗೆ ತಮ್ಮದೇ ಆದ ವ್ಯಕ್ತಿತ್ವವನ್ನು ನೀಡಿದರು. ಇತರರು ಯಶಸ್ವಿಯಾಗಬಹುದಿತ್ತೆಂದು ನಾನು ಭಾವಿಸುವುದಿಲ್ಲ. - ಸರ್ ಯೆಶಾಯ ಬರ್ಲಿನ್ Jahanbegloo, Ramin Conversations with Isaiah Berlin (London 2000), 2000)] thumb|upright|ಲಂಡನ್‍ನಲ್ಲಿ ಆಲ್ಡ್ವಿಚ್‍ನಲ್ಲಿ ನೆಹರೂರ ಪ್ರತಿಮೆ-(ಬಸ್ಟ್) thumb|upright|ಕೊಲ್ಕತ್ತಾದ ಪಾರ್ಕ್ ಸ್ಟ್ರೀಟ್‍ನಲ್ಲಿ ನೆಹರು ಪ್ರತಿಮೆ ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಮತ್ತು ವಿದೇಶ ವ್ಯವಹಾರಗಳ ಸಚಿವರಾಗಿ ಜವಾಹರಲಾಲ್ ನೆಹರೂ ಆಧುನಿಕ ವಿದೇಶಾಂಗ ನೀತಿಯೊಂದಿಗೆ ಆಧುನಿಕ ಭಾರತ ಸರ್ಕಾರ ಮತ್ತು ರಾಜಕೀಯ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗ್ರಾಮೀಣ ಭಾರತದ ದೂರದ ಮೂಲೆಗಳಲ್ಲಿ ಮಕ್ಕಳನ್ನು ತಲುಪುವ ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ವ್ಯವಸ್ಥೆಯನ್ನು ರಚಿಸಿದ್ದಕ್ಕಾಗಿ ಅವರು ಪ್ರಶಂಸಿಸಲ್ಪಟ್ಟಿದ್ದಾನೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮುಂತಾದ ವಿಶ್ವ-ಮಟ್ಟದ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ನೆಹರೂ ಅವರ 'ಶಿಕ್ಷಣ ನೀತಿ'ಯು ಕೊಡಿಗೆ ನೀಡುತ್ತದೆ. ಆದ್ದರಿಂದ ಅವರು ಆಧುನಿಕ ಭಾರತದ ನಿರ್ಮಾಪಕ ಎಂದು ಗುರಿತಿಸಲ್ಪಟ್ಟಿದ್ದಾರೆ AIIMS The history of the IIT systemSankar Ghose (1993). Jawaharlal Nehru, a Biography. p. 210 ಅದಲ್ಲದೆ, ನೆಹರು ಅವರರ ನಿಲುವು ಒಂದು ರಾಷ್ಟ್ರೀಯತಾವಾದಿಯಾಗಿ ನಿಂತಿದ್ದು, ಪ್ರಾದೇಶಿಕ ವೈವಿಧ್ಯತೆಗಳನ್ನು ಅದು ಇರುವ ಹಾಗೆಯೇ ಮೆಚ್ಚಿ ಭಾರತೀಯರ ನಡುವೆ ಒಂದು ಸಾಮಾನ್ಯತೆಯನ್ನು ಒತ್ತಿ ಹೇಳಿದ ನೀತಿಗಳನ್ನು ಜಾರಿಗೆ ತಂದರು. ಉಪಖಂಡದಿಂದ ಬ್ರಿಟಿಷ್ ವಾಪಸಾತಿಯ ನಂತರ ಪ್ರಾದೇಶಿಕ ಮುಖಂಡರು ಪರಸ್ಪರ ಎದುರಾಳಿಗಳಾಗಿ ಪರಸ್ಪರ ವಿರುದ್ಧ ನಿಂತು ಸಂಬಂಧವಿಲ್ಲದ ಕಾರಣಗಳಿಂದ ಭಾರತದಲ್ಲಿ ಸ್ವಾತಂತ್ರ್ಯಾನಂತರದ ಭಿನ್ನಾಭಿಪ್ರಾಯಗಳು ಆವರಿಸಲ್ಪಟ್ಟಿತು. ಆದ್ದರಿಂದ ಅವರು ಭಾರತದ ಪ್ರಾದೇಶಿಕ ವೈವಿಧ್ಯತೆಗಳನ್ನು ಇರುವಹಾಗೆಯೇ ಮೆಚ್ಚಿ ಭಾರತೀಯರ ನಡುವೆ ಒಂದು ಸಾಮಾನ್ಯತೆಯನ್ನು ಒತ್ತಿ ಹೇಳಿದ ನೀತಿ ಪ್ರಮುಖವಾಗಿತ್ತು. ಸಂಸ್ಕೃತಿಯ ವ್ಯತ್ಯಾಸಗಳು ಮತ್ತು ಅದರಲ್ಲೂ ವಿಶೇಷವಾಗಿ, ಹೊಸ ರಾಷ್ಟ್ರದ ಏಕತೆಗೆ ಭಾಷೆ ಬೆದರಿಕೆ ಹಾಕಿದರೂ, (ಭಾಷಾವಾದದ ಅತಿಅಭಿಮಾನ -ಅನ್ಯ ಭಾಷಾ ದ್ವೇಷ) ಅದರ ಸಂತುಲನಕ್ಕಾಗಿ ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ನ್ಯಾಷನಲ್ ಲಿಟರರಿ ಅಕಾಡೆಮಿ ಮುಂತಾದ ಕಾರ್ಯಕ್ರಮಗಳನ್ನು ನೆಹರು ಸ್ಥಾಪಿಸಿದರು. ಇದು ಭಾಷೆಗಳ ನಡುವೆ ಪ್ರಾದೇಶಿಕ ಸಾಹಿತ್ಯದ ಅನುವಾದವನ್ನು ಪ್ರೋತ್ಸಾಹಿಸಿತು ಮತ್ತು ಪ್ರದೇಶಗಳ ನಡುವೆ ವಸ್ತು - ವಿಚಾರಗಳ ವರ್ಗಾವಣೆಯನ್ನು ಆಯೋಜಿಸಿತು. ಇವು ಒಂದು ಏಕೀಕೃತ ಭಾರತವನ್ನು ಜನರು ಅನುಸರಿಸುವಲ್ಲಿ ಸಹಕಾರಿಯಾಗಿದೆ, ನೆಹರೂ ಅವರು "ಸಮಗ್ರತೆಯಿಂದ ಸಂಯೋಜಿತರಾಗಿ ಇಲ್ಲವೇ ನಾಶವಾಗಿ" ಎಂದು ಎಚ್ಚರಿಕೆ ನೀಡಿದರು. Harrison, Selig S. (July 1956). "The Challenge to Indian Nationalism". Foreign Affairs. 34 (2): 620–636. ಇತಿಹಾಸಕಾರ ರಾಮಚಂದ್ರ ಗುಹಾ ಬರೆಯುತ್ತಾರೆ, "ನೆಹರು 1958 ರಲ್ಲಿ ನಿವೃತ್ತರಾದರು, ಅವರು ಕೇವಲ ಭಾರತದ ಅತ್ಯುತ್ತಮ ಪ್ರಧಾನಿಯಾಗಿರಲಿಲ್ಲ, ಆದರೆ ಆಧುನಿಕ ಪ್ರಪಂಚದ ಮಹಾನ್ ರಾಜಕಾರಣಿಗಳೆಂದು ನೆನಪಿಸಿಕೊಳ್ಳುತ್ತಾರೆ". ಹೀಗೆ ನೆಹರು, ಭಾರತಕ್ಕೆ ಒಂದು ಸಹಬಾಳ್ವೆಯ ಪರಂಪರೆಯನ್ನು ನೀಡಿದರು , ಅದನ್ನು, ವಿವಾದಿತ ಸಹಬಾಳ್ವೆಯ ಕೊಡಿಗೆಯನ್ನು ಬಿಟ್ಟಹೋಗಿದ್ದಾರೆ ಎಂದೂ ಹೇಳುವರು "ಭಾರತದ ಪ್ರಗತಿಗಾಗಿ ಅದನ್ನು- ಅವರ ಕೊಡಿಗೆಯನ್ನು ಮೆಚ್ಚಿ ಆರಾಧಿಸಬಹುದು ಅಥವಾ ಅದನ್ನು ಬಿಟ್ಟು ಹಿಂದೆಬೀಳಬಹುದು". {https://www.bbc.com/news/world-asia-india-19671397 Ramachandra Guha (26 September 2012). "Manmohan Singh at 80]["A legacy that Nehru left behind". Times of India. 27 May 2005] ಜ್ಞಾಪನೆ (Commemoration) thumb|upright|left|1989 ರಲ್ಲಿ ಯುಎಸ್ಎಸ್ಆರ್ನಲ್ಲಿ ಜವಾಹರಲಾಲ್ ನೆಹರು ಸ್ಮರಣಾರ್ಥ ಹೊರಡಿಸಿದ ಅಂಚೆ ಚೀಟಿ ಅವರ ಜೀವಿತಾವಧಿಯಲ್ಲಿ, ಜವಾಹರಲಾಲ್ ನೆಹರು ಭಾರತದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಪಡೆದರು ಮತ್ತು ಅವರ ಆದರ್ಶ ಮತ್ತು ನಿಷ್ಠಾವಂತತೆಗಾಗಿ ವಿಶ್ವದಾದ್ಯಂತ ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆದರು. ಅವರ ಹುಟ್ಟು ಹಬ್ಬದಂದು, ನವೆಂಬರ್‍ನಲ್ಲಿ ಬಾಲ ದಿವಸ್ ("ಮಕ್ಕಳ ದಿನ") ಎಂದು ಭಾರತದಲ್ಲಿ ಆಚರಿಸಲಾಗುತ್ತದೆ. ಅವರ ಜೀವಿತಾವಧಿಯ ದೊಡ್ಡಬಯಕೆ ಮತ್ತು ಮಕ್ಕಳ ಮತ್ತು ಯುವಜನರ ಕಲ್ಯಾಣ. ನೆಹರು ಅವರ ಶಿಕ್ಷಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಕೆಲಸವನ್ನು ಗುರುತಿಸಿ, ಭಾರತದಾದ್ಯಂತ ಮಕ್ಕಳು ಚಾಚಾ ನೆಹರೂ (ಅಂಕಲ್ ನೆಹರು) ಎಂದು ನೆನಪಿಸಿಕೊಳ್ಳುತ್ತಾರೆ. ನೆಹರು ಅವರು ಕಾಂಗ್ರೆಸ್ ಪಕ್ಷದ ಜನಪ್ರಿಯ ಚಿಹ್ನೆಯಾಗಿದ್ದಾರೆ, ಆ ಪಕ್ಷ ಅವರ ಸ್ಮರಣೆಯನ್ನು ಆಗಾಗ್ಗೆ ಆಚರಿಸುತ್ತದೆ. ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರ ಶೈಲಿಯ ಉಡುಪು, ವಿಶೇಷವಾಗಿ ಗಾಂಧಿ ಕ್ಯಾಪ್ ಮತ್ತು "ನೆಹರೂ ಜಾಕೆಟ್", ಧರಿಸಿ ಅವರ ನಡವಳಿಕೆಗಳನ್ನು ಅನುಕರಿಸುತ್ತಾರೆ. ನೆಹರು ಅವರ ಆದರ್ಶಗಳು ಮತ್ತು ನೀತಿಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮತ್ತು ಪ್ರಮುಖ ರಾಜಕೀಯ ತತ್ತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಕಾಂಗ್ರೆಸ್ ಪಕ್ಷ ಮತ್ತು ರಾಷ್ಟ್ರೀಯ ಸರಕಾರದ ನಾಯಕತ್ವಕ್ಕೆ ಅವರ ಮಗಳು ಇಂದಿರಾ ಅವರ ಉದಯದಲ್ಲಿ ಅವರ ಪರಂಪರೆಗೆ ಭಾವನಾತ್ಮಕ ಸಂಬಂಧವಿದೆ.Why November 14 celebrated as Children's Day?;TNN | Nov 14, 2018 thumb|left|ನೆಹರೂ, ನಂಗ್ಪೋಹ್'ನಲ್ಲಿ ಮೇಘಾಲಯದಲ್ಲಿ ಮಕ್ಕಳಿಗೆ ಸಿಹಿತಿಂಡಿಗಳನ್ನು ವಿತರಿಸುತ್ತಾರೆ ನೆಹರು ಅವರ ವೈಯಕ್ತಿಕ ಆದ್ಯತೆಯ ಶೆರ್ವಾನಿ ಇಂದು ಉತ್ತರ ಭಾರತದಲ್ಲಿ ಔಪಚಾರಿಕ ಉಡುಗೆ ಎಂದು ಪರಿಗಣಿಸಲಾಗಿದೆ; ತಮ್ಮ ಹೆಸರನ್ನು ಒಂದು ವಿಧದ ಕ್ಯಾಪ್’ಗೆ ನೀಡುವ ಬದಲು, ನೆಹರೂ ಜಾಕೆಟ್- ಅಥವಾ ನೆಹರೂ ಷರಟಿಗೆ ಆ ಶೈಲಿಗೆ ಅವರ ಆದ್ಯತೆಯ ಕಾರಣದಿಂದ ಅವರ ಗೌರವಾರ್ಥವಾಗಿ ಆ ಹೆಸರಿಸಲಾಗಿದೆ. 1.ಭಾರತದಾದ್ಯಂತ ಹಲವಾರು ಸಾರ್ವಜನಿಕ ಸಂಸ್ಥೆಗಳು ಮತ್ತು ಸ್ಮಾರಕಗಳು ನೆಹರೂ ಅವರ ನೆನಪಿಗಾಗಿ ಸಮರ್ಪಿಸಲಾಗಿದೆ. ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ಭಾರತದ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದೆ. ಮುಂಬೈ ನಗರದ ಸಮೀಪವಿರುವ ಜವಾಹರ್ಲಾಲ್ ನೆಹರು ಬಂದರು ಆಧುನಿಕ ಬಂದರು ಮತ್ತು ದೊಡ್ಡ ಸರಕು ಮತ್ತು ಸಂಚಾರ ಲೋಡ್ ನಿರ್ವಹಿಸಲು ವಿನ್ಯಾಸಗೊಳಿಸಿದ ಡಾಕ್/ ಬಂದರಾಗಿದೆ. ದೆಹಲಿಯಲ್ಲಿ ನೆಹರು ಅವರ ನಿವಾಸವನ್ನು ಈಗ ತೀನ್ ಮೂರ್ತಿ ಹೌಸ್ ಎಂದು ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿ ಮಾರ್ಪಡಿಸಲಾಗಿದೆ. ಮುಂಬೈ, ದೆಹಲಿ, ಬೆಂಗಳೂರು, ಅಲಹಾಬಾದ್ ಮತ್ತು ಪುಣೆಯಲ್ಲಿ ಸ್ಥಾಪಿಸಿರುವ ಐದು ನೆಹರೂ ಪ್ಲಾನೆಟೇರಿಯಂ ಗಳನ್ನು ಅವರ ಹೆಸರಿನಲ್ಲಿ ಸಂರಕ್ಷಿಸಲಾಗಿದೆ. ಜವಹರಲಾಲ್ ನೆಹರು ಸ್ಮಾರಕ ನಿಧಿಯ ಕಚೇರಿಗಳನ್ನು 1964 ರಲ್ಲಿ ಸ್ಥಾಪಿಸಿದ್ದು ಅದರ ಕಛೇರಿ ಈ ಸಂಕೀರ್ಣದಲ್ಲಿದೆ. ಅವನ್ನು ಭಾರತದ ಅಧ್ಯಕ್ಷರಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್ ನೇತೃತ್ವದಲ್ಲಿ ಸ್ಥಾಪಿಸಲಾಯಿತು. 1968 ರಲ್ಲಿ ಸ್ಥಾಪನೆಯಾದ ಪ್ರತಿಷ್ಠಿತ 'ಜವಾಹರಲಾಲ್ ನೆಹರು ಸ್ಮಾರಕ ಫೆಲೋಶಿಪ್' ಪ್ರತಿಷ್ಠಾನ ಕೂಡಾ ಹೊರಹೊಮ್ಮಿದೆ. ನೆಹರು ಕುಟುಂಬದ ಮನೆಗಳು ಆನಂದ್ ಭವನ ಮತ್ತು ಸ್ವರಾಜ್ ಭವನಗಳಲ್ಲಿ ನೆಹರು ಮತ್ತು ಅವನ ಕುಟುಂಬದ ಆಸ್ತಿಯನ್ನು ಸಂರಕ್ಷಿಸುವುದಕ್ಕಾಗಿ ಮೀಸಲಿಡಲಾಗಿದೆ.The Last Days of the Raj (2007)Drama, History | TV Movie 12 March 2007 ಜನಪ್ರಿಯ ಸಂಸ್ಕೃತಿಯಲ್ಲಿ ನೆಹರುರ ಜೀವನ ಕುರಿತು ಹಲವು ಸಾಕ್ಷ್ಯಚಿತ್ರಗಳು ನಿರ್ಮಾಣಗೊಂಡಿವೆ. ಅವರ ಬಗೆಗೆ ಕಾಲ್ಪನಿಕ ಚಿತ್ರಗಳನ್ನೂ ಚಿತ್ರಿಸಲಾಗಿದೆ. ರಿಚರ್ಡ್ ಅಟೆನ್ಬರೋ ಅವರ 1982 ರ ಚಲನಚಿತ್ರ ಗಾಂಧಿ,- ಶ್ಯಾಮ್ ಬೆನೆಗಲ್’ರ 1988 ರ ದೂರದರ್ಶನದ ಸರಣಿಯ ಭಾರತ್ ಎಕ್ ಖೋಜ್,- ನೆಹರು ಅವರ ದಿ ಡಿಸ್ಕವರಿ ಆಫ್ ಇಂಡಿಯಾ ಮತ್ತು 2007 ರ ಟಿವಿ ಚಲನಚಿತ್ರದಲ್ಲಿ ದಿ ಲಾಸ್ಟ್ ಡೇಸ್- ಎಂಬ ಶೀರ್ಷಿಕೆಯಡಿಯಲ್ಲಿ ರಚಿತವಾಗಿದೆ. ಕೇತನ್ ಮೆಹ್ತಾರ ಸರ್ದಾರ್ ಚಿತ್ರದಲ್ಲಿ, ನೆಹರು ಅವರನ್ನು ಬೆಂಜಮಿನ್ ಗಿಲಾನಿ ಚಿತ್ರತಯಾರಿಸಿದ್ದರು. ಗಿರೀಶ್ ಕಾರ್ನಾಡ್ ಅವರ ಐತಿಹಾಸಿಕ ನಾಟಕವಾದ ತುಘಲಕ್ (1962) ನೆಹರುರ ಯುಗದ ಬಗ್ಗೆ ಒಂದು ವಿಚಾರವಾಗಿದೆ. 1970 ರ ದಶಕದಲ್ಲಿ ದೆಹಲಿಯ ಪುರನಾ ಕಿಲಾದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ರೆಪರ್ಟರಿ ಯೊಂದಿಗೆ ಇಬ್ರಾಹಿಂ ಅಲ್ಕಾಝಿ ಅವರು ಇದನ್ನು ಆಯೋಜಿಸಿದರು ಮತ್ತು ನಂತರ 1982 ರಲ್ಲಿ ಲಂಡನ್’ನ ಭಾರತದ ಉತ್ಸವದಲ್ಲಿ ಪ್ರದರ್ಶಿಸಿದರು. 25 August 2017.AWARDS: The multi-faceted playwright Frontline, Vol. 16, No. 3, 30 January – 12 February 1999. Sachindananda (2006). "Girish Karnad". Authors speak. Sahitya Akademi. p. 58. ISBN 978-81-260-1945-8. [Sachindananda (2006). "Girish Karnad". Authors speak. Sahitya Akademi. p. 58.] ಬರಹಗಳು ನೆಹರು ಇಂಗ್ಲಿಷ್’ನ ಒಬ್ಬ ಸಮೃದ್ಧ ಬರಹಗಾರರಾಗಿದ್ದರು. ಅವರ ಬರಹಗಳು ಇಂದಿಗೂ ಜಗತ್‍ಪ್ರಸಿದ್ಧವಾಗಿವೆ. ಅವರ ‘ದಿ ಡಿಸ್ಕವರಿ ಆಫ್ ಇಂಡಿಯಾ’, ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಮತ್ತು ಅವರ ‘ಆತ್ಮಚರಿತ್ರೆ’, ‘ಟುವರ್ಡ್ ಫ್ರೀಡಮ್’ ಮೊದಲಾದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವರು ತಮ್ಮ ಮಗಳು ಇಂದಿರಾ ಗಾಂಧಿಯವರಿಗೆ 30 ಪತ್ರಗಳನ್ನು ಬರೆದಿದ್ದರು. ಇಂದಿರಾ ಹತ್ತು ವರ್ಷ ವಯಸ್ಸಿನವರಾಗಿದ್ದರು ಮತ್ತು ಮಸ್ಸೂರಿಯ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದರು. ಅವರು ಆ ಪತ್ರಗಳಲ್ಲಿ ನೈಸರ್ಗಿಕ ಇತಿಹಾಸ ಮತ್ತು ನಾಗರೀಕತೆಗಳ ಕಥೆ ಬಗ್ಗೆ ಬೋಧಿಸಿದರು. ಈ ಪತ್ರಗಳ ಸಂಗ್ರಹವನ್ನು ‘ಲೆಟರ್ಸ್ ಫ್ರಮ್ ಎ ಫಾದರ್ ಟು ಹಿಸ್ ಡಾಟರ್ ‘ಎಂಬ ಪುಸ್ತಕವಾಗಿ ಪ್ರಕಟಿಸಲಾಯಿತು.Balakrishnan, Anima (4 August 2006). "The Hindu : Young World : From dad with love:". Chennai, India: The Hindu. Retrieved 31 October 2008. ಪ್ರಶಸ್ತಿಗಳು 1955 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೆಹರು ಅವರಿಗೆ ನೀಡಲಾಯಿತು. ಪ್ರಧಾನ ಮಂತ್ರಿಯಿಂದ ಸಲಹೆ ಪಡೆಯದೆ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ನೆಹರು ಅವರಿಗೆ ನೀಡಿದರು. ಈ ಗೌರವ ಪ್ರದಾನ ಮಾಡಲು ಪ್ರಧಾನಿಯವರಿಂದ ಪಡೆಯಬೇಕಾಗಿದ್ದ ಸಾಮಾನ್ಯ ಸಾಂವಿಧಾನಿಕ ಕಾರ್ಯವಿಧಾನವನ್ನು ಅನುಸರಿಸಲಿಲ್ಲ. ಎಂದರೆ ನೆಹರು ಪ್ರಧಾನಿಯಾಗಿ ತಮಗೆ ತಾವೇ ನಾಗರಿಕ ಗೌರವ ಪಡೆಯಲು ಶಿಪಾರಸು ಮಾಡಿರಲಿಲ್ಲ. ವಿಶೇಷ ಅಧಿಕಾರದಲ್ಲಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ತಾವೇ ನಿರ್ಧರಿಸಿ ಆಗೌರವವನ್ನು ನೆಹರು ಅವರಿಗೆ ನೀಡಿದರು. [214] "Padma Awards Directory (1954–2007)" (PDF). Ministry of Home affairs. Archived from the original (PDF) on 10 April 2009. Prasad, Rajendra (1958). Speeches of President Rajendra Prasad 1952 - 1956. The Publication Division, Ministry of Information and Broadcasting, GOI. pp. 340–341.: "In doing so, for once, I may be said to be acting unconstitutionally, as I am taking this step on my own initiative and without any recommendation or advice from my Prime Minister ; but I know that my action will be endorsed most enthusiastically not only by my Cabinet and other Ministers but by the country as a whole." ನೆಹರೂ ಅವರ ಅಂತಿಮ ಕವನ/ಬಯಕೆ ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು. ಕಾಡೂ ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ. ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳಬೇಕಿದೆ. ನಿದ್ದೆಗೆ ಜಾರುವ ಮುನ್ನ ಮೈಲುಗಟ್ಟಲೆ ಕ್ರಮಿಸಬೇಕಿದೆ, ಮೈಲುಗಟ್ಟಲೆ ಕ್ರಮಿಸಬೇಕಿದೆ. (ಆಧಾರ:ಲೇಖಕಿ: ಪತ್ರಕರ್ತೆ ಹಾಗೂ ಮಾಧ್ಯಮ ಶಿಕ್ಷಣ ತಜ್ಞೆ) ಆರ್‌. ಅಖಿಲೇಶ್ವರಿ 03/08/2014/ ಪ್ರಜಾವಾಣಿ) (ಪ್ರಜಾವಾಣಿ)-03/08/2014 ನೆಹರು ಪ್ರಧಾನಿಯಾಗಿದ್ದ ಅವಧಿಯ ಮುಖ್ಯ ಪದಾಧಿಕಾರಿಗಳು ಹೆಸರು ಪದವಿ ಸ್ಥಾನ ಅವಧಿ ಇಂದಾ ವರೆಗೆ ಬ್ರಿಟಿಶರ ಅಧೀನದ ಭಾರತಜಾರ್ಜ್ VI (11 ಡಿಸೆಂಬರ್ 1936 - 6 ಫೆಬ್ರವರಿ 1952)ಬ್ರಿಟನ್ ಚಕ್ರವರ್ತಿ 1857 15 ಆಗಸ್ಟ್ 1947 ತಾತ್ಕಾಲಿಕ ಡೊಮಿನಿಯನ್ ರಾಜ್ಯ ಭಾರತ 15 ಆಗಸ್ಟ್ 1947 ರಿಂದ 26 ಜನವರಿ 1950 ರ ವರೆಗೆದಿ ಅರ್ಲ್ ಮೌಂಟ್ಬ್ಯಾಟನ್ - ಬರ್ಮಾ (ಬ್ರಿಟನ್ ಚಕ್ರವರ್ತಿಯಿಂದ ನೇಮಕ)ಗವರ್ನರ್15 ಆಗಸ್ಟ್ 1947 21 ಜೂನ್ 1948 ಚಕ್ರವರ್ತಿ ರಾಜಗೋಪಾಲಾಚಾರಿ (ಬ್ರಿಟನ್ ಚಕ್ರವರ್ತಿಯಿಂದ ನೇಮಕ)ಗವರ್ನರ್ 21 ಜೂನ್ 1948 ರಿಂದ 26 ಜನವರಿ 1950 ಭಾರತ ಗಣರಾಜ್ಯ ಡಾ. ರಾಜೇಂದ್ರ ಪ್ರಸಾದ್ ರಾಷ್ಟ್ರಪತಿ 26 ಜನವರಿ 1950 13 ಮೇ 1962 ಸರ್ವೆಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿ 14 ಮೇ 1962 - 13 ಮೇ 1967 ಜವಾಹರ‌ಲಾಲ್ ನೆಹರು ಪ್ರಧಾನಿ 5 ಆಗಸ್ಟ್ 1947 27 ಮೇ 1964 ವಲ್ಲಭ್‌ಭಾಯಿ ಪಟೇಲ್ ಭಾರತದ ಮೊದಲ ಉಪ ಪ್ರಧಾನಿ - ಗೃಹ ಸಚಿವ15 ಆಗಸ್ಟ್ 1947 15 ಡಿಸೆಂಬರ್ 1950 (ಮರಣ) ಬಲದೇವ್ ಸಿಂಗ್ ರಕ್ಷಣಾ ಸಚಿವ 15 ಆಗಸ್ಟ್ 1947 1952 ಕೈಲಾಶ್ ನಾಥ್ ಕಟ್ಜು ರಕ್ಷಣಾ ಸಚಿವ 1955 1957 ವಿ. ಕೆ. ಕೃಷ್ಣ ಮೆನನ್ ರಕ್ಷಣಾ ಸಚಿವ 17 ಏಪ್ರಿಲ್ 1957 31 ಅಕ್ಟೋಬರ್ 1962 ಕೈಲಾಶ್ ನಾಥ್ ಕಟ್ಜು ಗೃಹ ಸಚಿವ 25 ಅಕ್ಟೋಬರ್ 1951 - 10 ಜನವರಿ 1955 ಗೋವಿಂದ ವಲ್ಲಭ ಪಂತ್ ಗೃಹ ಸಚಿವ 17 ಏಪ್ರಿಲ್ 1957 7 ಮಾರ್ಚ್ 1961 ಲಾಲ್ ಬಹಾದುರ್ ಶಾಸ್ತ್ರಿ (ನಾಲ್ಕನೇ ನೆಹರೂ ಸಚಿವ ಸಂಪುಟ) ಗೃಹ ಸಚಿವ4 ಏಪ್ರಿಲ್ 1961 29 ಆಗಸ್ಟ್ 1963 ಗುಲ್ಜಾರಿಲಾಲ್ ನಂದಾ- (ನಾಲ್ಕನೇ ನೆಹರೂ ಸಚಿವ ಸಂಪುಟ) ಗೃಹ ಸಚಿವ 29 August 1963 14 November 1966 ನೋಡಿ ಭಾರತ ಗಣರಾಜ್ಯದ ಇತಿಹಾಸ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನೆಹರೂ, ಜವಾಹರಲಾಲ್ ಹೊರ ಸಂಪರ್ಕ (ಚರ್ಚೆ ಪುಟ ನೋಡಿ) ಗಾಂಧೀಜಿ ಚಿತ್ತ ನೆಹರೂ ಅವರತ್ತ ಸ್ಥಿರವಾಗಲು ಕಾರಣ ಏನು?ನೆಹರೂ-ಪಟೇಲ್: ಭಾರತ ರಥದ ಅಶ್ವದ್ವಯರು;ಸುಧೀಂದ್ರ ಬುಧ್ಯ: 16 ನವೆಂಬರ್ 2018, ಉಲ್ಲೇಖ ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ಭಾರತದ ಗಣ್ಯರು ವರ್ಗ:ಸ್ವಾತಂತ್ರ್ಯ ಹೋರಾಟಗಾರರು ವರ್ಗ:ಭಾರತೀಯ ಇತಿಹಾಸದ ಪ್ರಮುಖರು ವರ್ಗ:೧೮೮೯ ಜನನ ವರ್ಗ:೧೯೬೪ ನಿಧನ
ಜಿಲ್ಲೆ
https://kn.wikipedia.org/wiki/ಜಿಲ್ಲೆ
ರಾಜ್ಯದ ಹಲವು ರಾಜಕೀಯ ವಿಭಾಗಗಳು ಹಾಗೂ ನಿರ್ವಹಣಾ ವಿಭಾಗಗಳಿಗೆ ಜಿಲ್ಲೆ ಎನ್ನುತ್ತಾರೆ. ಒಂದು ದೇಶವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿದರೆ, ಒಂದು ರಾಜ್ಯವನ್ನು ಹಲವು ಜಿಲ್ಲೆಗಳಾಗಿ ವಿಂಗಡಿಸಲಾಗುತ್ತದೆ. ಆಡಳಿತ ವಿಕೇಂದ್ರೀಕರಣ, ಭೌಗೋಳಿಕ, ಭಾಷಿಕ ಮೊದಲಾದ ಅಂಶಗಳಿಗನುಗುಣವಾಗಿ, ಜಿಲ್ಲೆಗಳ ವಿಂಗಡಣೆ ನಡೆಯುತ್ತದೆ. ಒಂದು ಜಿಲ್ಲೆಯ ಭಾಗಗಳಾಗಿ ಅನೇಕ ತಾಲೂಕುಗಳು ಇರುತ್ತವೆ.<ref></ರಾಜ್ಯದ ಹಲವು ರಾಜಕೀಯ ವಿಭಾಗಗಳು ಹಾಗೂ ನಿರ್ವಹಣಾ ವಿಭಾಗಗಳಿಗೆ ಜಿಲ್ಲೆ ಎನ್ನುತ್ತಾರೆ. ಒಂದು ದೇಶವನ್ನು ಹಲವು ರಾಜ್ಯಗಳಾಗಿ ವಿಂಗಡಿಸಿದರೆ, ಒಂದು ರಾಜ್ಯವನ್ನು ಹಲವು ಜಿಲ್ಲೆಗಳಾಗಿ ವಿಂಗಡಿಸಲಾಗುತ್ತದೆ. ಆಡಳಿತ ವಿಕೇಂದ್ರೀಕರಣ, ಭೌಗೋಳಿಕ, ಭಾಷಿಕ ಮೊದಲಾದ ಅಂಶಗಳಿಗನುಗುಣವಾಗಿ, ಜಿಲ್ಲೆಗಳ ವಿಂಗಡಣೆ ನಡೆಯುತ್ತದೆ. ಒಂದು ಜಿಲ್ಲೆಯ ಭಾಗಗಳಾಗಿ ಅನೇಕ ತಾಲೂಕುಗಳು ಇರುತ್ತವೆ. ಕರ್ನಾಟಕದ ಹಲವು ಜಿಲ್ಲೆಗಳು ಲೇಖನ ಕರ್ನಾಟಕದ ಜಿಲ್ಲೆಗಳು ನೋಡಿ ಉಲ್ಲೇಖಗಳು ವರ್ಗ:ನಾಮಪದಗಳು ವರ್ಗ:ಆಡಳಿತ ವಿಭಾಗಗಳು
ಅಕ್ಟೋಬರ್
https://kn.wikipedia.org/wiki/ಅಕ್ಟೋಬರ್
thumb| ಅಕ್ಟೋಬರ್‌ನಲ್ಲಿ ಮ್ಯಾಪಲ್ ಎಲೆ (ಉತ್ತರ ಗೋಳಾರ್ಧ). ಅಕ್ಟೋಬರ್ ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್‌ಗಳಲ್ಲಿ ವರ್ಷದ ಹತ್ತನೇ ತಿಂಗಳು ಮತ್ತು ೩೧ ದಿನಗಳ ಉದ್ದವನ್ನು ಹೊಂದಿರುವ ಏಳು ತಿಂಗಳುಗಳಲ್ಲಿ ಆರನೇ ತಿಂಗಳು. ರೊಮುಲಸ್‌ನ ಹಳೆಯ ಕ್ಯಾಲೆಂಡರ್‌ನಲ್ಲಿ ಎಂಟನೇ ತಿಂಗಳು , ಅಕ್ಟೋಬರ್ ತನ್ನ ಹೆಸರನ್ನು ಈ ರೀತಿ ಬಳಸಿಕೊಂಡಿದೆ ( ಲ್ಯಾಟಿನ್ ಮತ್ತು ಗ್ರೀಕ್ನಿಂದ ôctō ಅಂದರೆ "ಎಂಟು"). ಜನವರಿ ಮತ್ತು ಫೆಬ್ರವರಿ ನಂತರ ಮೂಲತಃ ರೋಮನ್ನರು ರಚಿಸಿದ ಕ್ಯಾಲೆಂಡರ್‌ಗೆ ಸೇರಿಸಲಾಯಿತು. ಪ್ರಾಚೀನ ರೋಮ್‌ನಲ್ಲಿ, ಮೂರು ಮುಂಡಸ್ ಪ್ಯಾಟೆಟ್‌ಗಳಲ್ಲಿ ಒಂದು ಅಕ್ಟೋಬರ್ ೫ ರಂದು, ಮೆಡಿಟ್ರಿನಾಲಿಯಾ ಅಕ್ಟೋಬರ್ ೧೧, ಅಗಸ್ಟಾಲಿಯಾ ಅಕ್ಟೋಬರ್ ೧೨ ರಂದು, ಅಕ್ಟೋಬರ್ ಹಾರ್ಸ್ ಅಕ್ಟೋಬರ್ ೧೫ ರಂದು ಮತ್ತು ಆರ್ಮಿಲುಸ್ಟ್ರಿಯಮ್ ಅಕ್ಟೋಬರ್ ೧೯ ರಂದು ನಡೆಯುತ್ತದೆ. ಈ ದಿನಾಂಕಗಳು ಆಧುನಿಕ ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಹೊಂದಿಕೆಯಾಗುವುದಿಲ್ಲ. ಆಂಗ್ಲೋ-ಸ್ಯಾಕ್ಸನ್‌ಗಳಲ್ಲಿ, ಇದನ್ನು ವಿಂಟರ್‌ಫೈಲ್ಲೆತ್ ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಈ ಹುಣ್ಣಿಮೆಯಲ್ಲಿ ಚಳಿಗಾಲವು ಪ್ರಾರಂಭವಾಗಬೇಕಿತ್ತು. ಅಕ್ಟೋಬರ್ ಸಾಮಾನ್ಯವಾಗಿ ದಕ್ಷಿಣ ಗೋಳಾರ್ಧದ ಕೆಲವು ಭಾಗಗಳಲ್ಲಿ ವಸಂತ ಋತುವಿನೊಂದಿಗೆ ಸಂಬಂಧಿಸಿದೆ ಮತ್ತು ಉತ್ತರ ಗೋಳಾರ್ಧದ ಕೆಲವು ಭಾಗಗಳಲ್ಲಿ ಶರತ್ಕಾಲದ ಋತುವಿನೊಂದಿಗೆ ಸಂಬಂಧಿಸಿದೆ. ಅಲ್ಲಿ ಇದು ದಕ್ಷಿಣ ಗೋಳಾರ್ಧದಲ್ಲಿ ಏಪ್ರಿಲ್‌ಗೆ ಸಮನಾದ ಋತುಮಾನವಾಗಿದೆ. ಚಿಹ್ನೆಗಳು thumb| ಕ್ಯಾಲೆಡುಲ. alt=An opal armband. Opal is the birthstone for October.|thumb| ಓಪಲ್ ತೋಳುಪಟ್ಟಿ. ಓಪಲ್ ಅಕ್ಟೋಬರ್‌ನ ಜನ್ಮಸ್ಥಳವಾಗಿದೆ. alt=Cut tourmaline|thumb| ಟೂರ್‌ಮ್ಯಾಲಿನ್ ಅನ್ನು ಕತ್ತರಿಸಿ. ಅಕ್ಟೋಬರ್‌ನ ಜನ್ಮಗಲ್ಲುಗಳು ಟೂರ್‌ಮ್ಯಾಲಿನ್ ಮತ್ತು ಓಪಲ್. ಇದರ ಜನ್ಮ ಹೂವು ಕ್ಯಾಲೆಡುಲ. ರಾಶಿಚಕ್ರ ಚಿಹ್ನೆಗಳು ತುಲಾ (ಅಕ್ಟೋಬರ್ ೨೨ ರವರೆಗೆ) ಮತ್ತು ಸ್ಕಾರ್ಪಿಯೋ (ಅಕ್ಟೋಬರ್ ೨೩ ರಿಂದ). The Earth passes the junction of the signs at 22:59 UT/GMT October 22, 2020, and will pass it again at 04:51 UT/GMT October 23, 2021. . Signs in UT/GMT for 1950–2030. ಅಕ್ಟೋಬ್ರೆ ಎಂಬ ಫ್ರೆಂಚ್ ಪದವನ್ನು ೮ಬ್ರೆ ಎಂದು ಸಂಕ್ಷಿಪ್ತಗೊಳಿಸಲಾಗಿದೆ. ಆಚರಣೆಗಳು ಈ ಪಟ್ಟಿಯು ಅಧಿಕೃತ ಸ್ಥಿತಿ ಅಥವಾ ಸಾಮಾನ್ಯ ಆಚರಣೆಯನ್ನು ಸೂಚಿಸುವುದಿಲ್ಲ. thumb| ಅವರ್ ಲೇಡಿ ಆಫ್ ದಿ ಮೋಸ್ಟ್ ಹೋಲಿ ರೋಸರಿ, ಅವರ ಭಕ್ತಿ ಮತ್ತು ಹಬ್ಬವನ್ನು ಅಕ್ಟೋಬರ್‌ನಲ್ಲಿ ಆಚರಿಸಲಾಗುತ್ತದೆ. ಗ್ರೆಗೋರಿಯನ್ ಅಲ್ಲದ: ೨೦೨೩ ದಿನಾಂಕಗಳು (ಎಲ್ಲಾ ಬಹಾಯಿ, ಇಸ್ಲಾಮಿಕ್ ಮತ್ತು ಯಹೂದಿ ಆಚರಣೆಗಳು ಪಟ್ಟಿ ಮಾಡಲಾದ ದಿನಾಂಕದ ಮೊದಲು ಸೂರ್ಯಾಸ್ತಮಾನದಲ್ಲಿ ಪ್ರಾರಂಭವಾಗುತ್ತವೆ ಮತ್ತು ಇಲ್ಲದಿದ್ದರೆ ಗಮನಿಸದ ಹೊರತು ಪ್ರಶ್ನಾರ್ಹ ದಿನಾಂಕದ ಸೂರ್ಯಾಸ್ತಮಾನದಲ್ಲಿ ಕೊನೆಗೊಳ್ಳುತ್ತವೆ. ) ಬಹಾಯಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಚೀನೀ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಹೀಬ್ರೂ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ಇಸ್ಲಾಮಿಕ್ ಕ್ಯಾಲೆಂಡರ್ ನಿಗದಿಪಡಿಸಿದ ಆಚರಣೆಗಳ ಪಟ್ಟಿ. ಸೌರ ಹಿಜ್ರಿ ಕ್ಯಾಲೆಂಡರ್‌ನಿಂದ ಹೊಂದಿಸಲಾದ ಆಚರಣೆಗಳ ಪಟ್ಟಿ. ತಿಂಗಳ ಅವಧಿಯ ಯುನೈಟೆಡ್ ಕಿಂಗ್‌ಡಂನಲ್ಲಿ ಕಪ್ಪು ಇತಿಹಾಸದ ತಿಂಗಳು. ಕ್ಯಾಥೋಲಿಕ್ ಚರ್ಚ್ ಸಂಪ್ರದಾಯದಲ್ಲಿ, ಅಕ್ಟೋಬರ್ ಪವಿತ್ರ ರೋಸರಿಯ ತಿಂಗಳು. ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು. ಆರೋಗ್ಯ ಸಾಕ್ಷರತಾ ತಿಂಗಳು. ಇಂಟರ್ನ್ಯಾಷನಲ್ ವಾಕ್ ಟು ಸ್ಕೂಲ್ ತಿಂಗಳು. ವೈದ್ಯಕೀಯ ಅಲ್ಟ್ರಾಸೌಂಡ್ ಜಾಗೃತಿ ತಿಂಗಳು. ರೆಟ್ ಸಿಂಡ್ರೋಮ್ ಜಾಗೃತಿ ತಿಂಗಳು. ವಿಶ್ವ ಅಂಧತ್ವ ಜಾಗೃತಿ ತಿಂಗಳು. ವಿಶ್ವ ಋತುಬಂಧ ತಿಂಗಳು. ಸಸ್ಯಾಹಾರಿ ಜಾಗೃತಿ ತಿಂಗಳು. ಯುನೈಟೆಡ್ ಸ್ಟೇಟ್ಸ್ ಅಕ್ಟೋಬರ್‌ನಲ್ಲಿ ಕೊನೆಯ ಎರಡರಿಂದ ಮೂರು ವಾರಗಳು (ಮತ್ತು, ಸಾಂದರ್ಭಿಕವಾಗಿ, ನವೆಂಬರ್‌ನ ಮೊದಲ ವಾರ) ಸಾಮಾನ್ಯವಾಗಿ ಯುಎಸ್ ಮತ್ತು ಕೆನಡಾದಲ್ಲಿನ ಎಲ್ಲಾ "ಬಿಗ್ ಫೋರ್" ಪ್ರಮುಖ ವೃತ್ತಿಪರ ಕ್ರೀಡಾ ಲೀಗ್‌ಗಳು ಪಂದ್ಯಗಳನ್ನು ನಿಗದಿಪಡಿಸುವ ವರ್ಷದ ಏಕೈಕ ಸಮಯವಾಗಿರುತ್ತದೆ. ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ತನ್ನ ಪೂರ್ವ ಋತುವನ್ನು ಪ್ರಾರಂಭಿಸುತ್ತದೆ ಮತ್ತು ಸುಮಾರು ಎರಡು ವಾರಗಳ ನಂತರ ನಿಯಮಿತ ಋತುವನ್ನು ಪ್ರಾರಂಭಿಸುತ್ತದೆ. ನ್ಯಾಷನಲ್ ಹಾಕಿ ಲೀಗ್ ಅದರ ನಿಯಮಿತ ಋತುವಿಗೆ ಸುಮಾರು ಒಂದು ತಿಂಗಳು. ನ್ಯಾಷನಲ್ ಫುಟ್‌ಬಾಲ್ ಲೀಗ್ ಅದರ ನಿಯಮಿತ ಋತುವಿನ ಅರ್ಧದಾರಿಯಲ್ಲೇ ಇದೆ ಮತ್ತು ಮೇಜರ್ ಲೀಗ್ ಬೇಸ್‌ಬಾಲ್ ಅದರ ನಂತರದ ಋತುವಿನಲ್ಲಿದೆ ಲೀಗ್ ಚಾಂಪಿಯನ್‌ಶಿಪ್ ಸರಣಿ ಮತ್ತು ವಿಶ್ವ ಸರಣಿಯೊಂದಿಗೆ. ೨೦೨೦ ರಲ್ಲಿ ಕೋವಿಡ್-೧೯ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ, ಕ್ರೀಡಾ ಕ್ಯಾಲೆಂಡರ್‌ನಲ್ಲಿ ಬದಲಾವಣೆಗಳ ಅಗತ್ಯವಿತ್ತು ಮತ್ತು ನಾಲ್ಕು ಲೀಗ್‌ಗಳ ವೇಳಾಪಟ್ಟಿಗಳು ಸಾಮಾನ್ಯಕ್ಕಿಂತ ಹಿಂದಿನ ಮತ್ತು ಹೆಚ್ಚು ಆಗಾಗ್ಗೆ ಹೊಂದಿಕೆಯಾಗುವಂತೆ ಮಾಡಿತು. ಎಲ್ಲಾ ನಾಲ್ಕು ಲೀಗ್‌ಗಳು ಒಂದೇ ದಿನದಲ್ಲಿ ಆಟಗಳನ್ನು ಆಡಿದ ೧೯ ಸಂದರ್ಭಗಳಲ್ಲಿ (ಒಂದು ಈ ಘಟನೆಯನ್ನು ಜನಪ್ರಿಯವಾಗಿ ಕ್ರೀಡಾ ವಿಷುವತ್ ಸಂಕ್ರಾಂತಿ ಎಂದು ಕರೆಯಲಾಗುತ್ತದೆ). ಇವುಗಳಲ್ಲಿ ಇತ್ತೀಚಿನದು ಅಕ್ಟೋಬರ್ ೨೭, ೨೦೧೯ ರಂದು ನಡೆಯುತ್ತದೆ. ಹೆಚ್ಚುವರಿಯಾಗಿ, ಈ ಅವಧಿಯಲ್ಲಿ ಕೆನಡಿಯನ್ ಫುಟ್‌ಬಾಲ್ ಲೀಗ್ ವಿಶಿಷ್ಟವಾಗಿ ಅದರ ನಿಯಮಿತ ಋತುವಿನ ಅಂತ್ಯವನ್ನು ಸಮೀಪಿಸುತ್ತಿದೆ. ಆದರೆ ಮೇಜರ್ ಲೀಗ್ ಸಾಕರ್ ಎಮ್‌ಎಲ್‌ಎಸ್ ಕಪ್ ಪ್ಲೇಆಫ್‌ಗಳನ್ನು ಪ್ರಾರಂಭಿಸುತ್ತಿದೆ. ಅಮೇರಿಕನ್ ಆರ್ಕೈವ್ಸ್ ತಿಂಗಳು. ನ್ಯಾಶನಲ್ ಅಡಾಪ್ಟ್ ಎ ಶೆಲ್ಟರ್ ಡಾಗ್ ತಿಂಗಳು. ರಾಷ್ಟ್ರೀಯ ಕಲೆ ಮತ್ತು ಮಾನವಿಕ ತಿಂಗಳು. ರಾಷ್ಟ್ರೀಯ ಬೆದರಿಸುವ ತಡೆಗಟ್ಟುವಿಕೆ ತಿಂಗಳು. ರಾಷ್ಟ್ರೀಯ ಸೈಬರ್ ಭದ್ರತಾ ಜಾಗೃತಿ ತಿಂಗಳು. ರಾಷ್ಟ್ರೀಯ ಕೌಟುಂಬಿಕ ಹಿಂಸಾಚಾರ ಜಾಗೃತಿ ತಿಂಗಳು. ಫಿಲಿಪಿನೋ ಅಮೇರಿಕನ್ ಇತಿಹಾಸ ತಿಂಗಳು. ಇಟಾಲಿಯನ್-ಅಮೆರಿಕನ್ ಪರಂಪರೆ ಮತ್ತು ಸಂಸ್ಕೃತಿ ತಿಂಗಳು. ಪೋಲಿಷ್ ಅಮೇರಿಕನ್ ಹೆರಿಟೇಜ್ ತಿಂಗಳು. ರಾಷ್ಟ್ರೀಯ ಕೆಲಸ ಮತ್ತು ಕುಟುಂಬ ತಿಂಗಳು. ಯುನೈಟೆಡ್ ಸ್ಟೇಟ್ಸ್, ಆರೋಗ್ಯ ಸಂಬಂಧಿತ ಅಮೇರಿಕನ್ ಫಾರ್ಮಾಸಿಸ್ಟ್ ತಿಂಗಳು. ಅಕ್ಟೋಬರ್‌ನ ಎಲ್ಲಾ ಕುಬ್ಜತೆ/ಚಿಕ್ಕ ವ್ಯಕ್ತಿಗಳು/ಕಡಿಮೆ ಎತ್ತರ/ಅಸ್ಥಿಪಂಜರದ ಡಿಸ್ಪ್ಲಾಸಿಯಾ ಜಾಗೃತಿ. ಕುಬ್ಜತೆ/ಪುಟ್ಟ ಜನರ ಜಾಗೃತಿ ತಿಂಗಳು. ಎಸ್ಜಿಮಾ ಜಾಗೃತಿ ತಿಂಗಳು. ರಾಷ್ಟ್ರೀಯ ದಂತ ನೈರ್ಮಲ್ಯ ತಿಂಗಳು. ರಾಷ್ಟ್ರೀಯ ಆರೋಗ್ಯಕರ ಶ್ವಾಸಕೋಶದ ತಿಂಗಳು. ರಾಷ್ಟ್ರೀಯ ಬಂಜೆತನ ಜಾಗೃತಿ ತಿಂಗಳು. ಯಕೃತ್ತಿನ ಜಾಗೃತಿ ತಿಂಗಳು. ರಾಷ್ಟ್ರೀಯ ಲೂಪಸ್ ಎರಿಥೆಮಾಟೋಸಸ್ ಜಾಗೃತಿ ತಿಂಗಳು. ರಾಷ್ಟ್ರೀಯ ಭೌತಚಿಕಿತ್ಸೆಯ ತಿಂಗಳು .APTA | National Physical Therapy Month ರಾಷ್ಟ್ರೀಯ ಸ್ಪೈನಾ ಬಿಫಿಡಾ ಜಾಗೃತಿ ತಿಂಗಳು. ಹಠಾತ್ ಶಿಶು ಮರಣ ಸಿಂಡ್ರೋಮ್ ಜಾಗೃತಿ ತಿಂಗಳು (ಯುನೈಟೆಡ್ ಸ್ಟೇಟ್ಸ್). ಯುನೈಟೆಡ್ ಸ್ಟೇಟ್ಸ್, ಪಾಕಶಾಲೆ ರಾಷ್ಟ್ರೀಯ ಪಿಜ್ಜಾ ತಿಂಗಳು. ರಾಷ್ಟ್ರೀಯ ಪಾಪ್‌ಕಾರ್ನ್ ಪಾಪಿನ್ ತಿಂಗಳು. ರಾಷ್ಟ್ರೀಯ ಹಂದಿಮಾಂಸ ತಿಂಗಳು. ರಾಷ್ಟ್ರೀಯ ಸಮುದ್ರಾಹಾರ ತಿಂಗಳು. ಚಲಿಸಬಲ್ಲ, ೨೦೨೨ ದಿನಾಂಕಗಳು ಅಕ್ಟೋಬರ್‌ಫೆಸ್ಟ್ ಆಚರಣೆಗಳು (ಜಾಗತಿಕವಾಗಿ ಪ್ರದೇಶವನ್ನು ಆಧರಿಸಿ ಬದಲಾಗುತ್ತದೆ). ಖಗೋಳಶಾಸ್ತ್ರ ದಿನ : ಅಕ್ಟೋಬರ್ ೧ ವಿಶ್ವ ಸೆರೆಬ್ರಲ್ ಪಾಲ್ಸಿ ದಿನ : ಅಕ್ಟೋಬರ್ ೬ ವಿಶ್ವ ಕಾಲೇಜು ರೇಡಿಯೋ ದಿನ : ಅಕ್ಟೋಬರ್ ೭ ಭೂ ವಿಜ್ಞಾನ ವಾರ : ಅಕ್ಟೋಬರ್ ೯–೧೫. ಚಲಿಸಬಲ್ಲ ಪಾಶ್ಚಾತ್ಯ ಕ್ರಿಶ್ಚಿಯನ್ ಆಚರಣೆಗಳನ್ನೂ ನೋಡಿ. ಚಲಿಸಬಲ್ಲ ಪೂರ್ವ ಕ್ರಿಶ್ಚಿಯನ್ ಆಚರಣೆಗಳನ್ನು ಸಹ ನೋಡಿ. ಅಕ್ಟೋಬರ್ ೨ ವಿಪರೀತವಾದ (ಯುನೈಟೆಡ್ ಸ್ಟೇಟ್ಸ್). ಮೊದಲ ಭಾನುವಾರ: ಅಕ್ಟೋಬರ್ ೨ ಹಗಲು ಉಳಿಸುವ ಸಮಯ ಪ್ರಾರಂಭವಾಗುತ್ತದೆ (ಆಸ್ಟ್ರೇಲಿಯಾ). ತಂದೆಯ ದಿನ (ಲಕ್ಸೆಂಬರ್ಗ್). ಅಜ್ಜಿಯರ ದಿನ (ಕ್ವೀನ್ಸ್‌ಲ್ಯಾಂಡ್, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್). ಶಿಕ್ಷಕರ ದಿನ (ಬೆಲಾರಸ್, ಲಾಟ್ವಿಯಾ, ಉಕ್ರೇನ್). ಮೊದಲ ಪೂರ್ಣ ವಾರ: ಅಕ್ಟೋಬರ್ ೨–೮ ಅಲ್ಬುಕರ್ಕ್ ಇಂಟರ್ನ್ಯಾಷನಲ್ ಬಲೂನ್ ಫಿಯೆಸ್ಟಾ (ಯುನೈಟೆಡ್ ಸ್ಟೇಟ್ಸ್). ಮಾನಸಿಕ ಅಸ್ವಸ್ಥತೆಯ ಜಾಗೃತಿ ವಾರ (ಯುನೈಟೆಡ್ ಸ್ಟೇಟ್ಸ್). ಮೊದಲ ಸೋಮವಾರ: ಅಕ್ಟೋಬರ್ ೩ ಮಕ್ಕಳ ಆರೋಗ್ಯ ದಿನ (ಯುನೈಟೆಡ್ ಸ್ಟೇಟ್ಸ್). ಮಕ್ಕಳ ದಿನ (ಚಿಲಿ, ಸಿಂಗಾಪುರ). ಕಾರ್ಮಿಕರ ದಿನ (ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ, ನ್ಯೂ ಸೌತ್ ವೇಲ್ಸ್, ದಕ್ಷಿಣ ಆಸ್ಟ್ರೇಲಿಯಾ, ಕ್ವೀನ್ಸ್ಲ್ಯಾಂಡ್, ಆಸ್ಟ್ರೇಲಿಯಾ). ಪೀಟ್ ಕಟಿಂಗ್ ಸೋಮವಾರ (ಫಾಕ್ಲ್ಯಾಂಡ್ ದ್ವೀಪಗಳು). ಥ್ಯಾಂಕ್ಸ್ಗಿವಿಂಗ್ (ಸೇಂಟ್ ಲೂಸಿಯಾ). ವಿಶ್ವ ವಾಸ್ತುಶಿಲ್ಪ ದಿನ. ವಿಶ್ವ ಆವಾಸ ದಿನ. ಮೊದಲ ಮಂಗಳವಾರ: ಅಕ್ಟೋಬರ್ ೪ ನ್ಯಾಷನಲ್ ನೈಟ್ ಔಟ್ (ಫ್ಲೋರಿಡಾ ಮತ್ತು ಟೆಕ್ಸಾಸ್, ಯುನೈಟೆಡ್ ಸ್ಟೇಟ್ಸ್). ಮೊದಲ ಬುಧವಾರ: ಅಕ್ಟೋಬರ್ ೫ ಮಕ್ಕಳ ದಿನ (ಚಿಲಿ). ಮೊದಲ ಗುರುವಾರ: ಅಕ್ಟೋಬರ್ ೬ ರಾಷ್ಟ್ರೀಯ ಕಾವ್ಯ ದಿನ (ಯುಕೆ, ಐರ್ಲೆಂಡ್). ಮೊದಲ ಶುಕ್ರವಾರ: ಅಕ್ಟೋಬರ್ ೭ ಮಕ್ಕಳ ದಿನ (ಸಿಂಗಾಪೂರ್). ಲೀ ನ್ಯಾಷನಲ್ ಡೆನಿಮ್ ಡೇ (ಯುನೈಟೆಡ್ ಸ್ಟೇಟ್ಸ್). ವಿಶ್ವ ಸ್ಮೈಲ್ ಡೇ. ಎರಡನೇ ಶನಿವಾರ: ಅಕ್ಟೋಬರ್ ೮ ಅಂತರರಾಷ್ಟ್ರೀಯ ವಲಸೆ ಹಕ್ಕಿ ದಿನ (ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಾ, ಮತ್ತು ಕೆರಿಬಿಯನ್ ). ಮನೆ ಚಲನಚಿತ್ರ ದಿನ (ಅಂತರರಾಷ್ಟ್ರೀಯ ಆಚರಣೆ). ರಾಷ್ಟ್ರೀಯ ಮರ ನೆಡುವ ದಿನ (ಮಂಗೋಲಿಯಾ). ಎರಡನೇ ಭಾನುವಾರ: ಅಕ್ಟೋಬರ್ ೯ ರಾಷ್ಟ್ರೀಯ ಅಜ್ಜಿಯರ ದಿನ (ಜರ್ಮನಿ, ಹಾಂಗ್ ಕಾಂಗ್). ಅಕ್ಟೋಬರ್ ೯ ರ ವಾರ: ಅಕ್ಟೋಬರ್ ೯–೧೫ ಫೈರ್ ಪ್ರಿವೆನ್ಶನ್ ವೀಕ್ (ಕೆನಡಾ, ಯುನೈಟೆಡ್ ಸ್ಟೇಟ್ಸ್) ಅಗ್ನಿಶಾಮಕ ಸೇವೆ ಗುರುತಿಸುವಿಕೆ ದಿನ (ಕೆನಡಾ). ಅಗ್ನಿಶಾಮಕ ತಡೆಗಟ್ಟುವಿಕೆ ವಾರದ ಕೊನೆಯ ದಿನ: ಅಕ್ಟೋಬರ್ ೧೦. ಅಕ್ಟೋಬರ್ ೧೦ ರ ವಾರ: ಅಕ್ಟೋಬರ್ ೯–೧೫ ಫಿಜಿ ವೀಕ್ (ಫಿಜಿ). ಎರಡನೇ ಸೋಮವಾರ: ಅಕ್ಟೋಬರ್ ೧೦ ಕೊಲಂಬಸ್ ಡೇ (ಯುನೈಟೆಡ್ ಸ್ಟೇಟ್ಸ್). ಸ್ಥಳೀಯ ಜನರ ದಿನ (ಯುನೈಟೆಡ್ ಸ್ಟೇಟ್ಸ್‌ನ ಭಾಗಗಳು). ಸ್ಥಳೀಯ ಅಮೆರಿಕನ್ ದಿನ (ದಕ್ಷಿಣ ಡಕೋಟಾ, ಯುನೈಟೆಡ್ ಸ್ಟೇಟ್ಸ್). ಭ್ರಾತೃತ್ವ ದಿನ (ಅಲಬಾಮಾ, ಯುನೈಟೆಡ್ ಸ್ಟೇಟ್ಸ್). ಆರೋಗ್ಯ ಮತ್ತು ಕ್ರೀಡಾ ದಿನ (ಜಪಾನ್). ತಾಯಂದಿರ ದಿನ (ಮಲಾವಿ). ನಾರ್ಫೋಕ್ ದ್ವೀಪ ಕೃಷಿ ಪ್ರದರ್ಶನ ದಿನ (ನಾರ್ಫೋಕ್ ದ್ವೀಪ). ಥ್ಯಾಂಕ್ಸ್ಗಿವಿಂಗ್ (ಕೆನಡಾ). ರಾಷ್ಟ್ರೀಯ ದಿನ (ರಿಪಬ್ಲಿಕ್ ಆಫ್ ಚೀನಾ). ಎರಡನೇ ಮಂಗಳವಾರ: ಅಕ್ಟೋಬರ್ ೧೧ ಅದಾ ಲವ್ಲೇಸ್ ದಿನ ಎರಡನೇ ಬುಧವಾರ: ಅಕ್ಟೋಬರ್ ೧೨ ಬೆಲ್ಜಿಯಂ ಸಂಸತ್ತಿನ ನೀತಿ ಹೇಳಿಕೆ (ಬೆಲ್ಜಿಯಂ). ಅಕ್ಟೋಬರ್‌ನಲ್ಲಿ ಎರಡನೇ ಪೂರ್ಣ ವಾರದ ಬುಧವಾರ: ಅಕ್ಟೋಬರ್ ೧೨ ರಾಷ್ಟ್ರೀಯ ಪಳೆಯುಳಿಕೆ ದಿನ (ಯುನೈಟೆಡ್ ಸ್ಟೇಟ್ಸ್). ಎರಡನೇ ಗುರುವಾರ: ಅಕ್ಟೋಬರ್ ೧೩ ವಿಶ್ವ ದೃಷ್ಟಿ ದಿನ ಎರಡನೇ ಶುಕ್ರವಾರ: ಅಕ್ಟೋಬರ್ ೧೪ ಆರ್ಬರ್ ಡೇ (ನಮೀಬಿಯಾ). ವಿಶ್ವ ಮೊಟ್ಟೆ ದಿನ ಮೂರನೇ ಶನಿವಾರ: ಅಕ್ಟೋಬರ್ ೧೫ ಸ್ವೀಟೆಸ್ಟ್ ಡೇ (ಯುನೈಟೆಡ್ ಸ್ಟೇಟ್ಸ್). ಮೂರನೇ ಭಾನುವಾರ: ಅಕ್ಟೋಬರ್ ೧೬ ಶಿಕ್ಷಕರ ದಿನ (ಬ್ರೆಜಿಲ್). ತಾಯಿಯ ದಿನ (ಅರ್ಜೆಂಟೀನಾ). ಮೂರನೇ ಸೋಮವಾರ: ಅಕ್ಟೋಬರ್ ೧೭ ವೀರರ ದಿನ (ಜಮೈಕಾ). ತಾಯಿಯ ದಿನ (ಅರ್ಜೆಂಟೀನಾ). ನ್ಯಾನೊಮೊನೆಸ್ಟೊಟ್ಸೆ (ಸ್ಥಳೀಯ ಅಮೆರಿಕನ್ ಸಮುದಾಯಗಳು). ಬಾಸ್ ಡೇ (ಯುನೈಟೆಡ್ ಸ್ಟೇಟ್ಸ್, ಕೆನಡಾ, ಲಿಥುವೇನಿಯಾ ಮತ್ತು ರೊಮೇನಿಯಾ). ಮೂರನೇ ಗುರುವಾರ: ಅಕ್ಟೋಬರ್ ೨೦ ಅಂತರಾಷ್ಟ್ರೀಯ ಕ್ರೆಡಿಟ್ ಯೂನಿಯನ್ ದಿನ. ನಾಲ್ಕನೇ ಶನಿವಾರ: ಅಕ್ಟೋಬರ್ ೨೨ ಮಕ್ಕಳ ದಿನ (ಮಲೇಷ್ಯಾ). ಮೇಕ್ ಎ ಡಿಫರೆನ್ಸ್ ಡೇ (ಯುನೈಟೆಡ್ ಸ್ಟೇಟ್ಸ್). ನಾಲ್ಕನೇ ಬುಧವಾರದ ವಾರ: ಅಕ್ಟೋಬರ್ ೨೩–೨೯ ಮಕ್ಕಳ ವಾರ (ಆಸ್ಟ್ರೇಲಿಯಾ). ನಾಲ್ಕನೇ ಸೋಮವಾರ: ಅಕ್ಟೋಬರ್ ೨೪ ಕಾರ್ಮಿಕ ದಿನ (ನ್ಯೂಜಿಲೆಂಡ್). ನಾಲ್ಕನೇ ಬುಧವಾರ: ಅಕ್ಟೋಬರ್ ೨೬ ಮಕ್ಕಳ ದಿನ (ಆಸ್ಟ್ರೇಲಿಯಾ). ಕೊನೆಯ ಶುಕ್ರವಾರ: ಅಕ್ಟೋಬರ್ ೨೮ ರಾಷ್ಟ್ರೀಯ ಬಂದನ್ನ ದಿನ (ಆಸ್ಟ್ರೇಲಿಯಾ). ನೆವಾಡಾ ಡೇ (ನೆವಾಡಾ, ಯುನೈಟೆಡ್ ಸ್ಟೇಟ್ಸ್) (ಆದರೂ ರಾಜ್ಯವನ್ನು ಅಕ್ಟೋಬರ್ ೩೧, ೧೮೬೪ ರಂದು ಒಪ್ಪಿಕೊಳ್ಳಲಾಯಿತು). ಶಿಕ್ಷಕರ ದಿನ (ಆಸ್ಟ್ರೇಲಿಯಾ) (ಕೊನೆಯ ಶುಕ್ರವಾರ ಅಕ್ಟೋಬರ್ ೩೧ ರಂದು ಇದ್ದರೆ, ಈ ರಜಾದಿನವನ್ನು ನವೆಂಬರ್ ೭ ಕ್ಕೆ ವರ್ಗಾಯಿಸಲಾಗುತ್ತದೆ). ಕೊನೆಯ ಭಾನುವಾರ: ಅಕ್ಟೋಬರ್ ೩೦ ಯುರೋಪಿಯನ್ ಬೇಸಿಗೆ ಸಮಯ ಕೊನೆಗೊಳ್ಳುತ್ತದೆ. ಅಜ್ಜಿಯರ ದಿನ (ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯಾ). ಸ್ಜೆಕ್ಲಿ ಸ್ವಾಯತ್ತತೆ ದಿನ ( ರೊಮೇನಿಯಾ ). ಕೊನೆಯ ಸೋಮವಾರ: ಅಕ್ಟೋಬರ್ ೩೧ ಅಕ್ಟೋಬರ್ ಹಾಲಿಡೇ (ಐರ್ಲೆಂಡ್). ಸ್ಥಿರವಾಗಿದೆ. right|thumb| ಅಕ್ಟೋಬರ್, ಟ್ರೆಸ್ ರಿಚಸ್ ಹ್ಯೂರೆಸ್ ಡು ಡಕ್ ಡಿ ಬೆರ್ರಿ ಅವರಿಂದ. right|thumb| ಹ್ಯಾಲೋವೀನ್‌ಗಾಗಿ ಡೆರ್ರಿಯಲ್ಲಿರುವ ಅಂಗಡಿಯನ್ನು ಅಲಂಕರಿಸಲಾಗಿದೆ. right|thumb| ಹ್ಯಾಲೋವೀನ್ ಕುಂಬಳಕಾಯಿಗಳು. ವಿವಿಧ ಎರಿಕ್ ವಿಟಾಕ್ರೆ ಈ ತಿಂಗಳನ್ನು ಆಧರಿಸಿ ಅಕ್ಟೋಬರ್ ಎಂಬ ಶೀರ್ಷಿಕೆಯ ಒಂದು ಭಾಗವನ್ನು ರಚಿಸಿದ್ದಾರೆ. ನೀಲ್ ಗೈಮನ್ ತನ್ನ ೨೦೦೬ ರ ಫ್ರಾಗಿಲ್ ಥಿಂಗ್ಸ್ ಸಂಗ್ರಹಕ್ಕಾಗಿ "ಅಕ್ಟೋಬರ್ ಇನ್ ದಿ ಚೇರ್" ಎಂಬ ಶೀರ್ಷಿಕೆಯ ತಿಂಗಳನ್ನು ನಿರೂಪಿಸುವ ಕಥೆಯನ್ನು ಬರೆದರು. ರೇ ಬ್ರಾಡ್ಬರಿ ೧೯೫೫ ರಲ್ಲಿ ಅಕ್ಟೋಬರ್ ಕಂಟ್ರಿ ಎಂಬ ಸಣ್ಣ ಕಥೆಗಳ ಸಂಗ್ರಹವನ್ನು ಪ್ರಕಟಿಸಿದರು. ನಮಗೆ ಹೋಗುವ ಮೊದಲು ಅಕ್ಟೋಬರ್ ಡೋತ್ ಹಾಡು ವಸಂತಕಾಲದ ಪ್ರಗತಿಯನ್ನು ಆಚರಿಸುತ್ತದೆ (ದಕ್ಷಿಣ ಗೋಳಾರ್ಧದ ದೃಷ್ಟಿಕೋನದಿಂದ). ಉಲ್ಲೇಖಗಳು
ಭಾರತೀಯ ಭಾಷೆಗಳು
https://kn.wikipedia.org/wiki/ಭಾರತೀಯ_ಭಾಷೆಗಳು
thumb|ದಕ್ಷಿಣ ಏಷ್ಯಾದ ಭಾಷಾ ಕುಟುಂಬಗಳು ಭಾರತ ಗಣರಾಜ್ಯದಲ್ಲಿ ಮಾತನಾಡುವ ಭಾಷೆಗಳು ಹಲವಾರು ಭಾಷಾ ಕುಟುಂಬಗಳಿಗೆ ಸೇರಿದ್ದು, ಪ್ರಮುಖವಾದವುಗಳು 78.05% ಭಾರತೀಯರು ಮಾತನಾಡುವ ಇಂಡೋ-ಆರ್ಯನ್ ಭಾಷೆಗಳು ಮತ್ತು 19.64% ಭಾರತೀಯರು ಮಾತನಾಡುವ ದ್ರಾವಿಡ ಭಾಷೆಗಳು, ಇವೆರಡೂ ಕುಟುಂಬಗಳು ಕೆಲವೊಮ್ಮೆ ಒಟ್ಟಿಗೆ ಇರುತ್ತವೆ. ಇವುಗಳನ್ನು ಭಾರತೀಯ ಭಾಷೆಗಳು ಎಂದು ಕರೆಯಲಾಗುತ್ತದೆ. ಜನಸಂಖ್ಯೆಯ ಉಳಿದ 2.31% ಜನರು ಮಾತನಾಡುವ ಭಾಷೆಗಳು ಆಸ್ಟ್ರೋಯಾಸಿಯಾಟಿಕ್, ಸಿನೋ-ಟಿಬೆಟಿಯನ್, ತೈ-ಕಡೈ ಮತ್ತು ಕೆಲವು ಇತರ ಸಣ್ಣ ಭಾಷಾ ಕುಟುಂಬಗಳು ಮತ್ತು ಪ್ರತ್ಯೇಕತೆಗಳಿಗೆ ಸೇರಿವೆ. ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾದ ಪ್ರಕಾರ, ಭಾರತವು ಪಪುವಾ ನ್ಯೂಗಿನಿಯಾ (840) ನಂತರ ಅತಿ ಹೆಚ್ಚು ಭಾಷೆಗಳನ್ನು (780) ಹೊಂದಿದೆ. ಎಥ್ನೋಲಾಗ್ 456 ರ ಕಡಿಮೆ ಸಂಖ್ಯೆಯನ್ನು ಪಟ್ಟಿಮಾಡುತ್ತದೆ. ಭಾರತದ ಸಂವಿಧಾನದ 343 ನೇ ವಿಧಿಯು ಯೂನಿಯನ್‌ನ ಅಧಿಕೃತ ಭಾಷೆ ದೇವನಾಗರಿ ಲಿಪಿಯಲ್ಲಿ ಹಿಂದಿ ಎಂದು ಹೇಳುತ್ತದೆ, 1947 ರಿಂದ 15 ವರ್ಷಗಳ ಕಾಲ ಇಂಗ್ಲಿಷ್‌ನ ಅಧಿಕೃತ ಬಳಕೆ ಮುಂದುವರಿಯುತ್ತದೆ. ನಂತರ, ಸಾಂವಿಧಾನಿಕ ತಿದ್ದುಪಡಿ, ಅಧಿಕೃತ ಭಾಷೆಗಳ ಕಾಯಿದೆ, 1963 ರಲ್ಲಿ ಶಾಸನವನ್ನು ಬದಲಾಯಿಸಲು ನಿರ್ಧರಿಸುವವರೆಗೆ ಅನಿರ್ದಿಷ್ಟವಾಗಿ ಭಾರತ ಸರ್ಕಾರದಲ್ಲಿ ಹಿಂದಿಯೊಂದಿಗೆ ಇಂಗ್ಲಿಷ್ ಅನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿತು. ಒಕ್ಕೂಟದ ಅಧಿಕೃತ ಉದ್ದೇಶಗಳಿಗಾಗಿ ಬಳಸಬೇಕಾದ ಅಂಕಿಗಳ ರೂಪವೆಂದರೆ "ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪ", ಇವುಗಳನ್ನು ಹೆಚ್ಚಿನ ಇಂಗ್ಲಿಷ್-ಮಾತನಾಡುವ ದೇಶಗಳಲ್ಲಿ ಅರೇಬಿಕ್ ಅಂಕಿಗಳೆಂದು ಉಲ್ಲೇಖಿಸಲಾಗುತ್ತದೆ. ತಪ್ಪು ಕಲ್ಪನೆಗಳ ಹೊರತಾಗಿಯೂ, ಹಿಂದಿ ಭಾರತದ ರಾಷ್ಟ್ರೀಯ ಭಾಷೆಯಲ್ಲ; ಭಾರತದ ಸಂವಿಧಾನವು ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿರುವುದಿಲ್ಲ. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ 22 ಭಾಷೆಗಳನ್ನು ಪಟ್ಟಿ ಮಾಡುತ್ತದೆ, ಇವುಗಳನ್ನು ಅನುಸೂಚಿತ ಭಾಷೆಗಳು ಎಂದು ಉಲ್ಲೇಖಿಸಲಾಗಿದೆ ಮತ್ತು ಮಾನ್ಯತೆ, ಸ್ಥಾನಮಾನ ಮತ್ತು ಅಧಿಕೃತ ಪ್ರೋತ್ಸಾಹವನ್ನು ನೀಡಲಾಗಿದೆ. ಜೊತೆಗೆ, ಭಾರತ ಸರ್ಕಾರವು ಕನ್ನಡ, ಮಲಯಾಳಂ, ಒಡಿಯಾ, ಸಂಸ್ಕೃತ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ವಿಶಿಷ್ಟತೆಯನ್ನು ನೀಡಿದೆ. ಶ್ರೀಮಂತ ಪರಂಪರೆ ಮತ್ತು ಸ್ವತಂತ್ರ ಸ್ವಭಾವವನ್ನು ಹೊಂದಿರುವ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಲಾಗುತ್ತದೆ. 2001 ರ ಭಾರತದ ಜನಗಣತಿಯ ಪ್ರಕಾರ, ಭಾರತವು 122 ಪ್ರಮುಖ ಭಾಷೆಗಳನ್ನು ಮತ್ತು 1599 ಇತರ ಭಾಷೆಗಳನ್ನು ಹೊಂದಿತ್ತು. ಆದರೂ, ಇತರ ಮೂಲಗಳಿಂದ ಅಂಕಿಅಂಶಗಳು ಬದಲಾದರೂ, ಪ್ರಾಥಮಿಕವಾಗಿ "ಭಾಷೆ" ಮತ್ತು "ಉಪಭಾಷೆ" ಪದಗಳ ವ್ಯಾಖ್ಯಾನದಲ್ಲಿನ ವ್ಯತ್ಯಾಸಗಳಿಂದಾಗಿ 2001 ರ ಜನಗಣತಿಯು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಸ್ಥಳೀಯ ಭಾಷಿಕರು ಮಾತನಾಡುವ 30 ಭಾಷೆಗಳನ್ನು ಮತ್ತು 10,000 ಕ್ಕಿಂತ ಹೆಚ್ಚು ಜನರು ಮಾತನಾಡುವ 122 ಭಾಷೆಗಳನ್ನು ದಾಖಲಿಸಿದೆ. ಭಾರತದ ಇತಿಹಾಸದಲ್ಲಿ ಎರಡು ಸಂಪರ್ಕ ಭಾಷೆಗಳು ಪ್ರಮುಖ ಪಾತ್ರವನ್ನು ವಹಿಸಿವೆ: ಒಂದು ಪರ್ಷಿಯನ್ ಮತ್ತು ಇನ್ನೊಂದು ಇಂಗ್ಲಿಷ್.Bhatia, Tej K and William C. Ritchie. (2006) Bilingualism in South Asia. In: Handbook of Bilingualism, pp. 780-807. Oxford: Blackwell Publishing ಭಾರತದಲ್ಲಿ ಮೊಘಲರ ಕಾಲದಲ್ಲಿ ಪರ್ಷಿಯನ್ ನ್ಯಾಯಾಲಯದ ಭಾಷೆಯಾಗಿತ್ತು. ಇದು ಬ್ರಿಟಿಷ್ ವಸಾಹತುಶಾಹಿ ಯುಗದವರೆಗೆ ಹಲವಾರು ಶತಮಾನಗಳವರೆಗೆ ಆಡಳಿತ ಭಾಷೆಯಾಗಿ ಆಳ್ವಿಕೆ ನಡೆಸಿತು. ಭಾರತದಲ್ಲಿ ಇಂಗ್ಲಿಷ್ ಪ್ರಮುಖ ಭಾಷೆಯಾಗಿ ಮುಂದುವರಿದಿದೆ. ಇದನ್ನು ಉನ್ನತ ಶಿಕ್ಷಣದಲ್ಲಿ ಮತ್ತು ಭಾರತ ಸರ್ಕಾರದ ಕೆಲವು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಇಂದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಥಮ-ಭಾಷೆ ಮಾತನಾಡುವವರನ್ನು ಹೊಂದಿರುವ ಹಿಂದಿ, ಉತ್ತರ ಮತ್ತು ಮಧ್ಯ ಭಾರತದ ಬಹುಭಾಗದಾದ್ಯಂತ ಕಾರ್ಯನಿರ್ವಹಿಸುತ್ತದೆ. ಆದರೂ ದಕ್ಷಿಣ ಭಾರತದಲ್ಲಿ ಹಿಂದಿಯನ್ನು ಹೇರುವ ಬಗ್ಗೆ ಕಳವಳ ವ್ಯಕ್ತವಾಗಿದೆ, ಮುಖ್ಯವಾಗಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಹಾಗೆಯೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಪಂಜಾಬ್ ಮತ್ತು ಇತರ ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿಯ ಬಗ್ಗೆ ಕಳವಳ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಬೆಂಗಾಲಿಯು ಪೂರ್ವ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಭಾಷಿಕರನ್ನು ಹೊಂದಿರುವ ದೇಶದ ಎರಡನೇ ಅತಿ ಹೆಚ್ಚು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆಯಾಗಿದೆ. ದಕ್ಷಿಣ-ಪಶ್ಚಿಮ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದ ಭಾಷಿಗರನ್ನು ಹೊಂದಿರುವ ಮರಾಠಿಯು ದೇಶದಲ್ಲಿ ಮೂರನೇ ಅತಿ ಹೆಚ್ಚು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಭಾಷೆಯಾಗಿದೆ. ಇತಿಹಾಸ ದಕ್ಷಿಣ ಭಾರತದ ಭಾಷೆಗಳು ದ್ರಾವಿಡ ಕುಟುಂಬದಿಂದ ಬಂದವು. ದ್ರಾವಿಡ ಭಾಷೆಗಳು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿವೆ. 4 ನೇ ಸಹಸ್ರಮಾನದ ಬಿಸಿಇ ನಲ್ಲಿ ಪ್ರೊಟೊ-ದ್ರಾವಿಡ ಭಾಷೆಗಳನ್ನು ಭಾರತದಲ್ಲಿ ಮಾತನಾಡಲಾಯಿತು ಮತ್ತು 3 ನೇ ಸಹಸ್ರಮಾನ ಬಿಸಿಇ ಯಲ್ಲಿ ವಿವಿಧ ಶಾಖೆಗಳಾಗಿ ವಿಭಜನೆಯಾಗಲು ಪ್ರಾರಂಭಿಸಿತು. ದ್ರಾವಿಡ ಭಾಷೆಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿದೆ: ಉತ್ತರ, ಮಧ್ಯ (ಕೊಲಾಮಿ-ಪರ್ಜಿ), ದಕ್ಷಿಣ-ಮಧ್ಯ (ತೆಲುಗು-ಕುಯಿ), ಮತ್ತು ದಕ್ಷಿಣ ದ್ರಾವಿಡ (ತಮಿಳು-ಕನ್ನಡ). ಇಂಡೋ- ಯುರೋಪಿಯನ್ ಕುಟುಂಬದ ಇಂಡೋ-ಆರ್ಯನ್ ಶಾಖೆಯಿಂದ ಉತ್ತರ ಭಾರತೀಯ ಭಾಷೆಗಳು ಹಳೆಯ ಇಂಡೋ-ಆರ್ಯನ್‌ನಿಂದ ಮಧ್ಯ ಇಂಡೋ-ಆರ್ಯನ್ ಪ್ರಾಕೃತ ಭಾಷೆಗಳು ಮತ್ತು ಮಧ್ಯಯುಗದ ಅಪಭ್ರಂಶದ ಮೂಲಕ ವಿಕಸನಗೊಂಡಿವೆ. ಇಂಡೋ-ಆರ್ಯನ್ ಭಾಷೆಗಳು ಮೂರು ಹಂತಗಳಲ್ಲಿ ಅಭಿವೃದ್ಧಿ ಹೊಂದಿದವು ಮತ್ತು ಹೊರಹೊಮ್ಮಿದವು - ಹಳೆಯ ಇಂಡೋ-ಆರ್ಯನ್ (1500 ಬಿಸಿಇನಿಂದ 600 ಬಿಸಿಇ), ಮಧ್ಯ ಇಂಡೋ-ಆರ್ಯನ್ ಹಂತ (600 ಬಿಸಿಇಮತ್ತು 1000 ಬಿಸಿಇ), ಮತ್ತು ಹೊಸ ಇಂಡೋ-ಆರ್ಯನ್ (1000 ಬಿಸಿಇಮತ್ತು 1300 ಬಿಸಿಇ ನಡುವೆ). ಆಧುನಿಕ ಉತ್ತರ ಭಾರತದ ಇಂಡೋ-ಆರ್ಯನ್ ಭಾಷೆಗಳು ಹೊಸ ಇಂಡೋ-ಆರ್ಯನ್ ಯುಗದಲ್ಲಿ ವಿಭಿನ್ನ, ಗುರುತಿಸಬಹುದಾದ ಭಾಷೆಗಳಾಗಿ ವಿಕಸನಗೊಂಡವು. ಈಶಾನ್ಯ ಭಾರತದಲ್ಲಿ, ಸಿನೋ-ಟಿಬೆಟಿಯನ್ ಭಾಷೆಗಳಲ್ಲಿ, ಮೈಟಿ ಭಾಷೆ (ಅಧಿಕೃತವಾಗಿ ಮಣಿಪುರಿ ಭಾಷೆ ಎಂದು ಕರೆಯಲ್ಪಡುತ್ತದೆ) ಮಣಿಪುರ ಸಾಮ್ರಾಜ್ಯದ ಆಸ್ಥಾನ ಭಾಷೆಯಾಗಿ (ಮೈಟಿ) ಮಣಿಪುರವನ್ನು ಭಾರತೀಯ ಗಣರಾಜ್ಯದ ಆಡಳಿತಕ್ಕೆ ವಿಲೀನಗೊಳಿಸುವ ಮೊದಲು ದರ್ಬಾರ್ ಅಧಿವೇಶನಗಳ ಮೊದಲು ಮತ್ತು ಸಮಯದಲ್ಲಿ ಇದನ್ನು ಗೌರವಿಸಲಾಯಿತು. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುನೀತಿ ಕುಮಾರ್ ಚಟರ್ಜಿ ಸೇರಿದಂತೆ ಅತ್ಯಂತ ಶ್ರೇಷ್ಠ ವಿದ್ವಾಂಸರ ಪ್ರಕಾರ ಇದರ ಅಸ್ತಿತ್ವದ ಇತಿಹಾಸವು 1500 ರಿಂದ 2000 ವರ್ಷಗಳವರೆಗೆ ವ್ಯಾಪಿಸಿದೆ. ಒಂದು ಕಾಲದಲ್ಲಿ ಸ್ವತಂತ್ರವಾಗಿದ್ದ ಮಣಿಪುರದ "ಮಣಿಪುರ ರಾಜ್ಯ ಸಂವಿಧಾನದ ಕಾಯಿದೆ, 1947" ಪ್ರಕಾರ, ಮಣಿಪುರಿ ಮತ್ತು ಇಂಗ್ಲಿಷ್ ಅನ್ನು ಸಾಮ್ರಾಜ್ಯದ ಆಸ್ಥಾನ ಭಾಷೆಗಳಾಗಿ ಮಾಡಲಾಯಿತು (ಭಾರತೀಯ ಗಣರಾಜ್ಯಕ್ಕೆ ವಿಲೀನಗೊಳ್ಳುವ ಮೊದಲು). ಪರ್ಷಿಯನ್, ಅಥವಾ ಫಾರ್ಸಿ, ಘಜ್ನಾವಿಡ್ಸ್ ಮತ್ತು ಇತರ ತುರ್ಕೊ-ಆಫ್ಘಾನ್ ರಾಜವಂಶಗಳಿಂದ ನ್ಯಾಯಾಲಯದ ಭಾಷೆಯಾಗಿ ಭಾರತಕ್ಕೆ ತರಲಾಯಿತು. ಸಾಂಸ್ಕೃತಿಕವಾಗಿ ಪರ್ಷಿಯೀಕರಣಗೊಂಡ ಅವರು, ನಂತರದ ಮೊಘಲ್ ರಾಜವಂಶದ ( ಟರ್ಕೊ-ಮಂಗೋಲ್ ಮೂಲದ) ಸಂಯೋಜನೆಯೊಂದಿಗೆ, 500 ವರ್ಷಗಳಿಗೂ ಹೆಚ್ಚು ಕಾಲ ಈ ಪ್ರದೇಶದ ಕಲೆ, ಇತಿಹಾಸ ಮತ್ತು ಸಾಹಿತ್ಯದ ಮೇಲೆ ಪ್ರಭಾವ ಬೀರಿದರು, ಇದರ ಪರಿಣಾಮವಾಗಿ ಅನೇಕ ಭಾರತೀಯ ಭಾಷೆಗಳು ಮುಖ್ಯವಾಗಿ ಶಾಬ್ದಿಕವಾಗಿ ಪರ್ಷಿಯೀಕರಣಗೊಂಡವು. 1837 ರಲ್ಲಿ, ಬ್ರಿಟಿಷರು ಆಡಳಿತದ ಉದ್ದೇಶಗಳಿಗಾಗಿ ಪರ್ಸೋ-ಅರೇಬಿಕ್ ಲಿಪಿಯಲ್ಲಿ ಪರ್ಶಿಯನ್ ಮತ್ತು ಹಿಂದೂಸ್ತಾನಿಯನ್ನು ಪರ್ಸೋ-ಅರೇಬಿಕ್ ಲಿಪಿಯಲ್ಲಿ ಬದಲಾಯಿಸಿದರು ಮತ್ತು 19 ನೇ ಶತಮಾನದ ಹಿಂದಿ ಚಳುವಳಿಯು ಪರ್ಷಿಯನ್ ಶಬ್ದಕೋಶವನ್ನು ಸಂಸ್ಕೃತದ ವ್ಯುತ್ಪನ್ನಗಳೊಂದಿಗೆ ಬದಲಾಯಿಸಿತು ಮತ್ತು ಆಡಳಿತಾತ್ಮಕ ಉದ್ದೇಶಗಳಿಗಾಗಿ ಪರ್ಸೋ-ಅರೇಬಿಕ್ ಲಿಪಿಯ ಬಳಕೆಯನ್ನು ದೇವನಾಗರಿಯೊಂದಿಗೆ ಬದಲಾಯಿಸಿತು ಅಥವಾ ಪೂರಕವಾಗಿಸಿತು. ಉತ್ತರ ಭಾರತದ ಪ್ರತಿಯೊಂದು ಭಾಷೆಗಳು ವಿಭಿನ್ನ ಪ್ರಭಾವಗಳನ್ನು ಹೊಂದಿದ್ದವು. ಉದಾಹರಣೆಗೆ, ಹಿಂದೂಸ್ತಾನಿಯು ಸಂಸ್ಕೃತ, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಿಂದ ಬಲವಾಗಿ ಪ್ರಭಾವಿತವಾಗಿತ್ತು. ಇದು ಹಿಂದೂಸ್ತಾನಿ ಭಾಷೆಯ ರೆಜಿಸ್ಟರ್‌ಗಳಾಗಿ ಆಧುನಿಕ ಸ್ಟ್ಯಾಂಡರ್ಡ್ ಹಿಂದಿ ಮತ್ತು ಮಾಡರ್ನ್ ಸ್ಟ್ಯಾಂಡರ್ಡ್ ಉರ್ದು ಹೊರಹೊಮ್ಮಲು ಕಾರಣವಾಯಿತು. ಮತ್ತೊಂದೆಡೆ ಬಾಂಗ್ಲಾ ತನ್ನ ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡಿದೆ ಮತ್ತು ಪರ್ಷಿಯನ್, ಇಂಗ್ಲಿಷ್, ಫ್ರೆಂಚ್ ಮತ್ತು ಇತರ ವಿದೇಶಿ ಭಾಷೆಗಳ ಪದಗಳೊಂದಿಗೆ ತನ್ನ ಶಬ್ದಕೋಶವನ್ನು ಹೆಚ್ಚು ವಿಸ್ತರಿಸಿದೆ. ವಿವರಣಾ ಪಟ್ಟಿ ಭಾರತೀಯ ಉಪಖಂಡದಲ್ಲಿ ಭಾಷಾ ವೈವಿಧ್ಯತೆಯ ಮೊದಲ ಅಧಿಕೃತ ಸಮೀಕ್ಷೆಯನ್ನು ಸರ್ ಜಾರ್ಜ್ ಅಬ್ರಹಾಂ ಗ್ರಿಯರ್ಸನ್ 1898 ರಿಂದ 1928 ರವರೆಗೆ ನಡೆಸಿದರು. ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ಎಂಬ ಶೀರ್ಷಿಕೆಯಡಿ, ಇದು ಒಟ್ಟು 179 ಭಾಷೆಗಳು ಮತ್ತು 544 ಉಪಭಾಷೆಗಳನ್ನು ವರದಿ ಮಾಡಿದೆ. ಆದರೂ "ಉಪಭಾಷೆ" ಮತ್ತು "ಭಾಷೆ", ತರಬೇತಿ ಪಡೆಯದ ಸಿಬ್ಬಂದಿಗಳ ಬಳಕೆ ಮತ್ತು ಬರ್ಮಾ ಮತ್ತು ಮದ್ರಾಸ್‌ನ ಹಿಂದಿನ ಪ್ರಾಂತ್ಯಗಳಂತೆ ದಕ್ಷಿಣ ಭಾರತದ ದತ್ತಾಂಶವನ್ನು ಕಡಿಮೆ ವರದಿ ಮಾಡುವಲ್ಲಿನ ಅಸ್ಪಷ್ಟತೆಯಿಂದಾಗಿ ಫಲಿತಾಂಶಗಳು ತಿರುಚಿದವು. ಕೊಚ್ಚಿನ್, ಹೈದರಾಬಾದ್, ಮೈಸೂರು ಮತ್ತು ತಿರುವಾಂಕೂರ್ ರಾಜಪ್ರಭುತ್ವದ ರಾಜ್ಯಗಳನ್ನು ಸಮೀಕ್ಷೆಯಲ್ಲಿ ಸೇರಿಸಲಾಗಿಲ್ಲ. ವಿಭಿನ್ನ ಮೂಲಗಳು ವ್ಯಾಪಕವಾಗಿ ವಿಭಿನ್ನ ಅಂಕಿಅಂಶಗಳನ್ನು ನೀಡುತ್ತವೆ, ಪ್ರಾಥಮಿಕವಾಗಿ "ಭಾಷೆ" ಮತ್ತು "ಉಪಭಾಷೆ" ಪದಗಳನ್ನು ಹೇಗೆ ವ್ಯಾಖ್ಯಾನಿಸಲಾಗಿದೆ ಮತ್ತು ಗುಂಪು ಮಾಡಲಾಗಿದೆ ಎಂಬುದರ ಆಧಾರದ ಮೇಲೆ. ಕ್ರಿಶ್ಚಿಯನ್ ಸುವಾರ್ತಾಬೋಧಕ ಸಂಸ್ಥೆ ಎಸ್‍ಐಎಲ್ ಇಂಟರ್ನ್ಯಾಷನಲ್ ನಿರ್ಮಿಸಿದ ಎಥ್ನೋಲಾಗ್, ಭಾರತಕ್ಕೆ 461 ಭಾಷೆಗಳನ್ನು ಪಟ್ಟಿಮಾಡಿದೆ (ವಿಶ್ವದಾದ್ಯಂತ 6,912 ರಲ್ಲಿ), ಅವುಗಳಲ್ಲಿ 447 ಜೀವಂತವಾಗಿವೆ, ಆದರೆ 14 ಅಳಿವಿನಂಚಿನಲ್ಲಿವೆ. 447 ಜೀವಂತ ಭಾಷೆಗಳನ್ನು ಎಥ್ನೋಲಾಗ್‌ನಲ್ಲಿ ಈ ಕೆಳಗಿನಂತೆ ಉಪವರ್ಗೀಕರಿಸಲಾಗಿದೆ: Ethnologue : Languages of the World (Seventeenth edition) : Statistical Summaries Retrieved 17 December 2014. ಸಾಂಸ್ಥಿಕ - 63 ಅಭಿವೃದ್ಧಿ ಹೊಂದುತ್ತಿರುವ - 130 ಹುರುಪಿನ – 187 ತೊಂದರೆಯ – 54 ಸಾಯುತ್ತಿರುವ - 13 ಭಾರತದಲ್ಲಿನ ಖಾಸಗಿ ಸ್ವಾಮ್ಯದ ಸಂಶೋಧನಾ ಸಂಸ್ಥೆಯಾದ ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ ತನ್ನ ರಾಷ್ಟ್ರವ್ಯಾಪಿ ಸಮೀಕ್ಷೆಯ ಸಮಯದಲ್ಲಿ ಭಾರತದಲ್ಲಿ 66 ಕ್ಕೂ ಹೆಚ್ಚು ವಿಭಿನ್ನ ಲಿಪಿಗಳನ್ನು ಮತ್ತು 780 ಕ್ಕೂ ಹೆಚ್ಚು ಭಾಷೆಗಳನ್ನು ದಾಖಲಿಸಿದೆ, ಇದು ಭಾರತದಲ್ಲಿನ ಅತಿದೊಡ್ಡ ಭಾಷಾ ಸಮೀಕ್ಷೆ ಎಂದು ಸಂಸ್ಥೆ ಹೇಳಿಕೊಂಡಿದೆ. ಭಾರತೀಯ ಮಾನವಶಾಸ್ತ್ರದ ಸಮೀಕ್ಷೆಯ ಪೀಪಲ್ ಆಫ್ ಇಂಡಿಯಾ (ಪಿಒಐ) ಯೋಜನೆಯು 5,633 ಭಾರತೀಯ ಸಮುದಾಯಗಳಿಂದ ಗುಂಪು ಸಂವಹನಕ್ಕಾಗಿ 325 ಭಾಷೆಗಳನ್ನು ಬಳಸುತ್ತದೆ ಎಂದು ವರದಿ ಮಾಡಿದೆ. ಭಾರತದ ಜನಗಣತಿ ಅಂಕಿಅಂಶಗಳು ಭಾರತದ ಜನಗಣತಿಯು ಭಾಷೆಗಳು ಮತ್ತು ಉಪಭಾಷೆಗಳಿಗೆ ಮಾತನಾಡುವವರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾವನ್ನು ದಾಖಲಿಸುತ್ತದೆ ಮತ್ತು ಪ್ರಕಟಿಸುತ್ತದೆ. ಆದರೆ ತನ್ನದೇ ಆದ ವಿಶಿಷ್ಟ ಪರಿಭಾಷೆಯನ್ನು ಬಳಸುತ್ತದೆ, ಭಾಷೆ ಮತ್ತು ಮಾತೃಭಾಷೆಯ ನಡುವೆ ವ್ಯತ್ಯಾಸವನ್ನು ತೋರಿಸುತ್ತದೆ. ಪ್ರತಿಯೊಂದು ಭಾಷೆಯೊಳಗೆ ಮಾತೃಭಾಷೆಗಳನ್ನು ಗುಂಪು ಮಾಡಲಾಗಿದೆ. ಹೀಗೆ ವ್ಯಾಖ್ಯಾನಿಸಲಾದ ಹಲವು ಮಾತೃಭಾಷೆಗಳನ್ನು ಭಾಷಾ ಮಾನದಂಡಗಳ ಮೂಲಕ ಉಪಭಾಷೆಯ ಬದಲಿಗೆ ಭಾಷೆ ಎಂದು ಪರಿಗಣಿಸಬಹುದು. ಅಧಿಕೃತವಾಗಿ ಹಿಂದಿ ಭಾಷೆಯ ಅಡಿಯಲ್ಲಿ ಗುಂಪು ಮಾಡಲಾದ ಹತ್ತಾರು ಮಿಲಿಯನ್ ಭಾಷಿಕರನ್ನು ಹೊಂದಿರುವ ಅನೇಕ ಮಾತೃಭಾಷೆಗಳಿಗೆ ಇದು ವಿಶೇಷವಾಗಿ ಸತ್ಯವಾಗಿದೆ. 1951 ಜನಗಣತಿ ಪೂರ್ವ ಪಂಜಾಬ್, ಹಿಮಾಚಲ ಪ್ರದೇಶ, ದೆಹಲಿ, ಪೆಪ್ಸು ಮತ್ತು ಬಿಲಾಸ್‌ಪುರದಂತಹ ರಾಜ್ಯಗಳಲ್ಲಿ ಉದ್ದೇಶಪೂರ್ವಕವಾಗಿ ಸಲ್ಲಿಕೆಗಳನ್ನು ತಪ್ಪಾಗಿ ದಾಖಲಿಸಲಾಗಿದೆ ಎಂಬ ಕಾರಣದಿಂದಾಗಿ ಹಿಂದಿ, ಉರ್ದು ಮತ್ತು ಪಂಜಾಬಿಗೆ ಪ್ರತ್ಯೇಕ ಅಂಕಿಅಂಶಗಳನ್ನು ನೀಡಲಾಗಿಲ್ಲ. 1961 ಜನಗಣತಿ 1961 ರ ಜನಗಣತಿಯು 438,936,918 ಜನರು ಮಾತನಾಡುವ 1,652 ಮಾತೃಭಾಷೆಗಳನ್ನು ಗುರುತಿಸಿದೆ, ಜನಗಣತಿಯನ್ನು ನಡೆಸಿದಾಗ ಯಾವುದೇ ವ್ಯಕ್ತಿ ಮಾಡಿದ ಎಲ್ಲಾ ಘೋಷಣೆಗಳನ್ನು ಎಣಿಕೆ ಮಾಡಿದೆ. ಆದರೂ ಘೋಷಿಸುವ ವ್ಯಕ್ತಿಗಳು ಸಾಮಾನ್ಯವಾಗಿ ಅವರ ಉಪಭಾಷೆಗಳು, ಮತ್ತು ಉಪಭಾಷೆಗಳ ಸಮೂಹಗಳೊಂದಿಗೆ ಅಥವಾ ಜಾತಿಗಳು, ವೃತ್ತಿಗಳು, ಧರ್ಮಗಳು, ಪ್ರದೇಶಗಳು, ದೇಶಗಳು ಮತ್ತು ರಾಷ್ಟ್ರೀಯತೆಗಳೊಂದಿಗೆ ಭಾಷೆಗಳ ಹೆಸರುಗಳನ್ನು ಮಿಶ್ರಣ ಮಾಡುತ್ತಾರೆ. ಆದ್ದರಿಂದ ಪಟ್ಟಿಯು ಕೆಲವೇ ಕೆಲವು ಪ್ರತ್ಯೇಕ ಮಾತನಾಡುವ ಭಾಷೆಗಳನ್ನು ಮತ್ತು 530 ವರ್ಗೀಕರಿಸದ ಮಾತೃಭಾಷೆಗಳನ್ನು ಮತ್ತು 100 ಕ್ಕೂ ಹೆಚ್ಚು ಭಾಷಾವೈಶಿಷ್ಟ್ಯಗಳನ್ನು ಒಳಗೊಂಡಿದೆ, ಇವುಗಳಲ್ಲಿ "ಆಫ್ರಿಕನ್", "ಕೆನಡಿಯನ್" ಅಥವಾ "ಬೆಲ್ಜಿಯನ್" ನಂತಹ ಭಾಷಿಕವಾಗಿ ಅನಿರ್ದಿಷ್ಟ ಡೆಮೊನಿಮ್‌ಗಳು ಸೇರಿದಂತೆ ಭಾರತಕ್ಕೆ ಸ್ಥಳೀಯವಲ್ಲ. 1991 ಜನಗಣತಿ 1991 ರ ಜನಗಣತಿಯು 1,576 ವರ್ಗೀಕೃತ ಮಾತೃಭಾಷೆಗಳನ್ನು ಗುರುತಿಸಿದೆ. 1991 ರ ಜನಗಣತಿಯ ಪ್ರಕಾರ, 22 ಭಾಷೆಗಳು ಮಿಲಿಯನ್‌ಗಿಂತಲೂ ಹೆಚ್ಚು ಸ್ಥಳೀಯ ಭಾಷಿಕರು, 50 ಭಾಷೆಗಳು 100,000 ಕ್ಕಿಂತ ಹೆಚ್ಚು ಮತ್ತು 114 ಭಾಷೆಗಳು 10,000 ಕ್ಕಿಂತ ಹೆಚ್ಚು ಸ್ಥಳೀಯ ಭಾಷಿಕರನ್ನು ಹೊಂದಿದ್ದವು. ಉಳಿದವರು ಒಟ್ಟು 566,000 ಸ್ಥಳೀಯ ಭಾಷಿಕರು (1991 ರಲ್ಲಿ ಒಟ್ಟು 838 ಮಿಲಿಯನ್ ಭಾರತೀಯರಲ್ಲಿ). 2001 ಜನಗಣತಿ 2001 ರ ಜನಗಣತಿಯ ಪ್ರಕಾರ, 1635 ತರ್ಕಬದ್ಧ ಮಾತೃಭಾಷೆಗಳು, 234 ಗುರುತಿಸಬಹುದಾದ ಮಾತೃಭಾಷೆಗಳು ಮತ್ತು 22 ಪ್ರಮುಖ ಭಾಷೆಗಳಿವೆ. ಇವುಗಳಲ್ಲಿ, 29 ಭಾಷೆಗಳು ಮಿಲಿಯನ್‌ಗಿಂತಲೂ ಹೆಚ್ಚು ಮಾತೃಭಾಷೆಯನ್ನು ಹೊಂದಿವೆ, 60 ಭಾಷೆಗಳು 100,000 ಕ್ಕಿಂತ ಹೆಚ್ಚು ಮತ್ತು 122 ಭಾಷೆಗಳು 10,000 ಕ್ಕಿಂತ ಹೆಚ್ಚು ಸ್ಥಳೀಯ ಭಾಷಿಕರು ಹೊಂದಿವೆ. ಕೊಡವದಂತಹ ಕೆಲವು ಭಾಷೆಗಳು ಲಿಪಿಯನ್ನು ಹೊಂದಿಲ್ಲ ಆದರೆ ಕೂರ್ಗ್‌ನಲ್ಲಿ (ಕೊಡಗು) ಸ್ಥಳೀಯ ಭಾಷಿಕರ ಗುಂಪನ್ನು ಹೊಂದಿವೆ. 2011 ರ ಜನಗಣತಿ 2011 ರ ಇತ್ತೀಚಿನ ಜನಗಣತಿಯ ಪ್ರಕಾರ, 19,569 ಕಚ್ಚಾ ಭಾಷಾ ಸಂಬಂಧಗಳ ಮೇಲೆ ಸಂಪೂರ್ಣ ಭಾಷಾಶಾಸ್ತ್ರದ ಪರಿಶೀಲನೆ, ಸಂಪಾದನೆ ಮತ್ತು ತರ್ಕಬದ್ಧಗೊಳಿಸುವಿಕೆಯ ನಂತರ, ಜನಗಣತಿಯು 1369 ತರ್ಕಬದ್ಧ ಮಾತೃಭಾಷೆಗಳನ್ನು ಮತ್ತು 1474 ಹೆಸರುಗಳನ್ನು 'ವರ್ಗೀಕರಿಸದ ಮಾತೃಭಾಷೆ' ಎಂದು ಪರಿಗಣಿಸಲಾಗಿದೆ. ಆ ಪೈಕಿ, 10,000 ಅಥವಾ ಅದಕ್ಕಿಂತ ಹೆಚ್ಚು ಮಾತನಾಡುವವರಿಂದ ಮಾತನಾಡುವ 1369 ತರ್ಕಬದ್ಧ ಮಾತೃಭಾಷೆಗಳು, ಒಟ್ಟು 121 ಭಾಷೆಗಳಿಗೆ ಕಾರಣವಾದ ಸೂಕ್ತ ಗುಂಪಿಗೆ ವರ್ಗೀಕರಿಸಲ್ಪಟ್ಟಿವೆ. ಈ 121 ಭಾಷೆಗಳಲ್ಲಿ, 22 ಈಗಾಗಲೇ ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನ ಭಾಗವಾಗಿದೆ ಮತ್ತು ಇತರ 99 ಅನ್ನು "ಒಟ್ಟು ಇತರ ಭಾಷೆಗಳು" ಎಂದು ಕರೆಯಲಾಗುತ್ತದೆ, ಇದು 2001 ರ ಜನಗಣತಿಯಲ್ಲಿ ಗುರುತಿಸಲಾದ ಇತರ ಭಾಷೆಗಳಿಗಿಂತ ಹತ್ತಿರದಲ್ಲಿದೆ. Census Data 2001 General Notes|access-date = 29 August 2019 ಬಹುಭಾಷಿಕತೆ thumb|thumb| ಭಾರತದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಹುಭಾಷಿಕತೆ ಸಾಮಾನ್ಯವಾಗಿದೆ. ಇಂಫಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಸೈನ್ ಬೋರ್ಡ್ ಅನ್ನು ಮೈಟೆಯಿ (ಅಧಿಕೃತವಾಗಿ ಮಣಿಪುರಿ ಎಂದು ಕರೆಯಲಾಗುತ್ತದೆ), ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಭಾರತದ 2011 ರ ಜನಗಣತಿ +ಭಾರತದಲ್ಲಿ ಮಾತನಾಡುವವರ ಸಂಖ್ಯೆಯಿಂದ ಮೊದಲ, ಎರಡನೇ ಮತ್ತು ಮೂರನೇ ಭಾಷೆಗಳು (2011 ಜನಗಣತಿ) ಭಾಷೆ ಪ್ರಥಮ ಭಾಷೆ</br> ಮಾತನಾಡುವವರು Census of India: Comparative speaker's strength of Scheduled Languages-1951, 1961, 1971, 1981, 1991, 2001 and 2011 (Report). Archived on 27 June 2018. ಪ್ರಥಮ ಭಾಷೆ</br> ಶೇಕಡಾವಾರು ಭಾಷಿಕರು</br> ಒಟ್ಟು ಜನಸಂಖ್ಯೆಯ ದ್ವಿತೀಯ ಭಾಷೆ</br> ಮಾತನಾಡುವವರು (ಮಿಲಿಯನ್) ಮೂರನೇ ಭಾಷೆ</br> ಮಾತನಾಡುವವರು (ಮಿಲಿಯನ್) ಒಟ್ಟು ಮಾತನಾಡುವವರು (ಮಿಲಿಯನ್) ಒಟ್ಟು ಸ್ಪೀಕರ್‌ಗಳು</br> ಒಟ್ಟು ಶೇಕಡಾವಾರು</br> ಜನಸಂಖ್ಯೆ ಹಿಂದಿ 528,347,193 43.63 139 24 692 57.1 ಬೆಂಗಾಲಿ 97,237,669 8.30 9 1 107 8.9 ಮರಾಠಿ 83,026,680 6.86 13 3 99 8.2 ತೆಲುಗು 81,127,740 6.70 12 1 95 7.8 ತಮಿಳು 69,026,881 5.70 7 1 77 6.3 ಗುಜರಾತಿ 55,492,554 4.58 4 1 60 5.0 ಉರ್ದು 50,772,631 4.19 11 1 63 5.2 ಕನ್ನಡ 43,706,512 3.61 14 1 59 4.9 ಒಡಿಯಾ 37,521,324 3.10 5 0.03 43 3.5 ಮಲಯಾಳಂ 34,838,819 2.88 0.05 0.02 36 2.9 ಪಂಜಾಬಿ 33,124,726 2.74 0.03 0.003 36 3.0 ಅಸ್ಸಾಮಿ 15,311,351 1.26 7.48 0.74 24 2.0 ಮೈಥಿಲಿ 13,583,464 1.12 0.03 0.003 14 1.2 ಮೈತೇಯಿ ( ಮಣಿಪುರಿ ) 1,761,079 0.15 0.4 0.04 2.25 0.2 ಆಂಗ್ಲ 259,678 0.02 83 46 129 10.6 ಸಂಸ್ಕೃತ 24,821 0.00185 0.01 0.003 0.025 0.002 ವಿಶ್ವಾದ್ಯಂತದ ಎಥ್ನೋಲಾಗ್ (2019, 22 ನೇ ಆವೃತ್ತಿ) ಕೆಳಗಿನ ಕೋಷ್ಟಕವು 2019 ರ ಎಥ್ನೋಲಾಗ್ ಆವೃತ್ತಿಯಲ್ಲಿ ಕಂಡುಬರುವ ಭಾರತೀಯ ಉಪಖಂಡದ ಭಾಷೆಗಳ ಪಟ್ಟಿಯಾಗಿದ್ದು, ಇದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಗೊಂಡಿರುವ ಎಸ್‌ಐಎಲ್ ಇಂಟರ್ನ್ಯಾಷನಲ್ ಪ್ರಕಟಿಸಿದ ಭಾಷಾ ಉಲ್ಲೇಖವಾಗಿದೆ. For items below No. 26, see individual Ethnologue entry for each language. ಭಾಷೆ ಒಟ್ಟು ಮಾತನಾಡುವವರು (ಮಿಲಿಯನ್) ಹಿಂದಿ 615 ಬೆಂಗಾಲಿ 265 ಉರ್ದು 170 ಪಂಜಾಬಿ 126 ಮರಾಠಿ 95 ತೆಲುಗು 93 ತಮಿಳು 81 ಗುಜರಾತಿ 61 ಕನ್ನಡ 56 ಒಡಿಯಾ 38 ಮಲಯಾಳಂ 38 ಅಸ್ಸಾಮಿ 15 ಸಂತಾಲಿ 7 ಮೈತೇಯಿ ( ಮಣಿಪುರಿ ) 1.7 ಸಂಸ್ಕೃತ 0.025 ಭಾಷಾ ಕುಟುಂಬಗಳು ಜನಾಂಗೀಯವಾಗಿ, ದಕ್ಷಿಣ ಏಷ್ಯಾದ ಭಾಷೆಗಳು, ಪ್ರದೇಶದ ಸಂಕೀರ್ಣ ಇತಿಹಾಸ ಮತ್ತು ಭೌಗೋಳಿಕತೆಯನ್ನು ಪ್ರತಿಧ್ವನಿಸುತ್ತವೆ, ಭಾಷಾ ಕುಟುಂಬಗಳು, ಭಾಷಾ ಫೈಲಾ ಮತ್ತು ಪ್ರತ್ಯೇಕತೆಗಳ ಸಂಕೀರ್ಣ ತೇಪೆಕೆಲಸವನ್ನು ರೂಪಿಸುತ್ತವೆ. ಭಾರತದಲ್ಲಿ ಮಾತನಾಡುವ ಭಾಷೆಗಳು ಹಲವಾರು ಭಾಷಾ ಕುಟುಂಬಗಳಿಗೆ ಸೇರಿವೆ, ಪ್ರಮುಖವಾದವುಗಳು 78.05% ಭಾರತೀಯರು ಮಾತನಾಡುವ ಇಂಡೋ-ಆರ್ಯನ್ ಭಾಷೆಗಳು ಮತ್ತು 19.64% ಭಾರತೀಯರು ಮಾತನಾಡುವ ದ್ರಾವಿಡ ಭಾಷೆಗಳು. ಮಾತನಾಡುವವರ ವಿಷಯದಲ್ಲಿ ಪ್ರಮುಖ ಭಾಷಾ ಕುಟುಂಬಗಳು: INDIA STATISTICS REPORT ಶ್ರೇಣಿ ಭಾಷಾ ಕುಟುಂಬ ಜನಸಂಖ್ಯೆ (2018) 1 ಇಂಡೋ-ಯುರೋಪಿಯನ್ ಭಾಷಾ ಕುಟುಂಬ 1,045,000,000 (78.05%) 2 ದ್ರಾವಿಡ ಭಾಷಾ ಕುಟುಂಬ 265,000,000 (19.64%) 3 ಆಸ್ಟ್ರೋಯಾಸಿಯಾಟಿಕ್ ಭಾಷಾ ಕುಟುಂಬ ಅಜ್ಞಾತ 4 ಸಿನೋ-ಟಿಬೆಟಿಯನ್ ಭಾಷಾ ಕುಟುಂಬ ಅಜ್ಞಾತ 5 ತೈ-ಕಡೈ ಭಾಷಾ ಕುಟುಂಬ ಅಜ್ಞಾತ 6 ಶ್ರೇಷ್ಠ ಅಂಡಮಾನೀಸ್ ಭಾಷೆಗಳು ಅಜ್ಞಾತ ಒಟ್ಟು ಭಾರತದ ಭಾಷೆಗಳು 1,340,000,000 ಇಂಡೋ-ಆರ್ಯನ್ ಭಾಷಾ ಕುಟುಂಬ thumb|ಇಂಡೋ-ಆರ್ಯನ್ ಭಾಷೆಯ ಉಪಗುಂಪುಗಳು (ಉರ್ದು ಹಿಂದಿ ಅಡಿಯಲ್ಲಿ ಸೇರಿಸಲಾಗಿದೆ) ಭಾರತದಲ್ಲಿ ಪ್ರತಿನಿಧಿಸುವ ಭಾಷಾ ಕುಟುಂಬಗಳಲ್ಲಿ ಯುರೋಪಿಯನ್ ಭಾಷಾ ಕುಟುಂಬದ ಅತಿ ದೊಡ್ಡದು, ಮಾತನಾಡುವವರ ವಿಷಯದಲ್ಲಿ, ಇಂಡೋ-ಆರ್ಯನ್ ಭಾಷಾ ಕುಟುಂಬ, ಇಂಡೋ-ಇರಾನಿಯನ್ ಕುಟುಂಬದ ಒಂದು ಶಾಖೆ, ಸ್ವತಃ ಇಂಡೋ- ಪೂರ್ವದ, ಅಸ್ತಿತ್ವದಲ್ಲಿರುವ ಉಪಕುಟುಂಬವಾಗಿದೆ. ಈ ಭಾಷಾ ಕುಟುಂಬವು ಪ್ರಾಬಲ್ಯ ಹೊಂದಿದ್ದು, ಸುಮಾರು 1035 ರಷ್ಟಿದೆ.  2018 ರ ಅಂದಾಜಿನ ಪ್ರಕಾರ ಮಿಲಿಯನ್ ಮಾತನಾಡುವವರು ಅಥವಾ ಜನಸಂಖ್ಯೆಯ 76.5 ಕ್ಕಿಂತ ಹೆಚ್ಚು. ಈ ಗುಂಪಿನಲ್ಲಿ ವ್ಯಾಪಕವಾಗಿ ಮಾತನಾಡುವ ಭಾಷೆಗಳು ಹಿಂದಿ,Although linguistically Hindi and Urdu are the same language called Hindustani, the government classifies them as separate languages instead of different standard registers of same language. ಬೆಂಗಾಲಿ, ಮರಾಠಿ, ಉರ್ದು, ಗುಜರಾತಿ, ಪಂಜಾಬಿ, ಕಾಶ್ಮೀರಿ, ರಾಜಸ್ಥಾನಿ, ಸಿಂಧಿ, ಅಸ್ಸಾಮಿ (ಅಸಾಮಿಯಾ), ಮೈಥಿಲಿ ಮತ್ತು ಒಡಿಯಾ. ಇಂಡೋ-ಆರ್ಯನ್ ಭಾಷೆಗಳ ಹೊರತಾಗಿ, ಇತರ ಇಂಡೋ-ಯುರೋಪಿಯನ್ ಭಾಷೆಗಳನ್ನು ಸಹ ಭಾರತದಲ್ಲಿ ಮಾತನಾಡುತ್ತಾರೆ, ಅವುಗಳಲ್ಲಿ ಇಂಗ್ಲಿಷ್ ಪ್ರಮುಖ ಭಾಷೆಯಾಗಿದೆ. ದ್ರಾವಿಡ ಭಾಷಾ ಕುಟುಂಬ ಎರಡನೇ ಅತಿದೊಡ್ಡ ಭಾಷಾ ಕುಟುಂಬವೆಂದರೆ ದ್ರಾವಿಡ ಭಾಷಾ ಕುಟುಂಬ, ಇದು ಸುಮಾರು 277 ಮಿಲಿಯನ್ ಮಾತನಾಡುವವರನ್ನು ಹೊಂದಿದೆ, ಅಥವಾ 2018 ರ ಅಂದಾಜಿನ ಪ್ರಕಾರ ಸರಿಸುಮಾರು 20.5%. ದ್ರಾವಿಡ ಭಾಷೆಗಳಲ್ಲಿ ಮುಖ್ಯವಾಗಿ ದಕ್ಷಿಣ ಭಾರತ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮತ್ತು ಈಶಾನ್ಯ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದ ಭಾಗಗಳಲ್ಲಿ ಮಾತನಾಡುತ್ತಾರೆ. ಹೆಚ್ಚು ಮಾತನಾಡುವ ದ್ರಾವಿಡ ಭಾಷೆಗಳು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ. ಮುಖ್ಯವಾಹಿನಿಯ ಜನಸಂಖ್ಯೆಯ ಜೊತೆಗೆ, ಓರಾನ್ ಮತ್ತು ಗೊಂಡ ಬುಡಕಟ್ಟುಗಳಂತಹ ಸಣ್ಣ ಪರಿಶಿಷ್ಟ ಬುಡಕಟ್ಟು ಸಮುದಾಯಗಳಿಂದ ದ್ರಾವಿಡ ಭಾಷೆಗಳನ್ನು ಮಾತನಾಡುತ್ತಾರೆ. ಕೇವಲ ಎರಡು ದ್ರಾವಿಡ ಭಾಷೆಗಳನ್ನು ಮಾತ್ರ ಭಾರತದ ಹೊರಗೆ ಮಾತನಾಡುತ್ತಾರೆ, ಬಲೂಚಿಸ್ತಾನ್, ಪಾಕಿಸ್ತಾನದಲ್ಲಿ ಬ್ರಾಹುಯಿ ಮತ್ತು ನೇಪಾಳದಲ್ಲಿ ಕುರುಖ್ ಉಪಭಾಷೆಯಾದ ಧಂಗರ್. ಆಸ್ಟ್ರೋಯಾಸಿಯಾಟಿಕ್ ಭಾಷಾ ಕುಟುಂಬ ಕಡಿಮೆ ಸಂಖ್ಯೆಯ ಭಾಷಿಕರನ್ನು ಹೊಂದಿರುವ ಕುಟುಂಬಗಳಲ್ಲಿ ಆಸ್ಟ್ರೋಯಾಸಿಯಾಟಿಕ್ ಮತ್ತು ಸಿನೋ-ಟಿಬೆಟಿಯನ್ ಭಾಷೆಗಳಾಗಿವೆ, ಒಟ್ಟು ಜನಸಂಖ್ಯೆಯ 3%. ಈ ಭಾಷೆಗಳನ್ನು ಅನುಕ್ರಮವಾಗಿ ಸುಮಾರು 10 ಮತ್ತು 6 ಮಿಲಿಯನ್ ಜನರು ಮಾತನಾಡುತ್ತಾರೆ. ಆಸ್ಟ್ರೋಯಾಸಿಯಾಟಿಕ್ ಭಾಷಾ ಕುಟುಂಬ ( ಆಸ್ಟ್ರೋ ಅರ್ಥ ದಕ್ಷಿಣ) ಆಗ್ನೇಯ ಏಷ್ಯಾದಲ್ಲಿ ಸ್ವ ನಿಯಂತ್ರಿ ಭಾಷೆಯಾಗಿದ್ದು, ಇದು ವಲಸೆಯ ಮೂಲಕ ಬಂತು. ಭೂಮಿಜ್ ಮತ್ತು ಸಂತಾಲಿ ಸೇರಿದಂತೆ ಖಾಸಿ ಮತ್ತು ಮುಂಡಾ ಭಾಷೆಗಳು ಭಾರತದ ಮುಖ್ಯ ಭೂಭಾಗದ ಆಸ್ಟ್ರೋಯಾಸಿಯಾಟಿಕ್ ಭಾಷೆಗಳಾಗಿವೆ. ನಿಕೋಬಾರ್ ದ್ವೀಪಗಳ ಭಾಷೆಗಳು ಸಹ ಈ ಭಾಷಾ ಕುಟುಂಬದ ಭಾಗವಾಗಿದೆ. ಖಾಸಿ ಮತ್ತು ಸಂತಾಲಿ ಹೊರತುಪಡಿಸಿ, ಭಾರತೀಯ ಭೂಪ್ರದೇಶದ ಎಲ್ಲಾ ಆಸ್ಟ್ರೋಯಾಸಿಯಾಟಿಕ್ ಭಾಷೆಗಳು ಅಳಿವಿನಂಚಿನಲ್ಲಿವೆ. ಟಿಬೆಟೋ-ಬರ್ಮನ್ ಭಾಷಾ ಕುಟುಂಬ ಟಿಬೆಟೋ-ಬರ್ಮನ್ ಭಾಷಾ ಕುಟುಂಬವು ಭಾರತದಲ್ಲಿ ಉತ್ತಮವಾಗಿ ಪ್ರತಿನಿಧಿಸಲ್ಪಟ್ಟಿದೆ. ಆದರೂ ಅವರ ಪರಸ್ಪರ ಸಂಬಂಧಗಳು ಸ್ಪಷ್ಟವಾಗಿಲ್ಲ, ಮತ್ತು ಕುಟುಂಬವನ್ನು ವಂಶವೃಕ್ಷದ ಸಾಂಪ್ರದಾಯಿಕ ರೂಪಕಕ್ಕಿಂತ ಹೆಚ್ಚಾಗಿ ಕಾಡಿನ ನೆಲದ ಮೇಲಿನ ಎಲೆಗಳ ತೇಪೆ ಎಂದು ವಿವರಿಸಲಾಗಿದೆ. ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಭಾರತೀಯ ಬಂಗಾಳಿ ವಿದ್ವಾಂಸ ಸುನೀತಿ ಕುಮಾರ್ ಚಟರ್ಜಿ ಅವರು, "ವಿವಿಧ ಟಿಬೆಟೋ-ಬರ್ಮನ್ ಭಾಷೆಗಳಲ್ಲಿ, ನೇವಾರಿಗಿಂತಲೂ ಅತ್ಯಂತ ಪ್ರಮುಖ ಮತ್ತು ಸಾಹಿತ್ಯದಲ್ಲಿ ಖಂಡಿತವಾಗಿಯೂ ಹೆಚ್ಚಿನ ಪ್ರಾಮುಖ್ಯತೆ ಇದೆ, ಇದು ಮೈತೆಯಿ ಅಥವಾ ಮಣಿಪುರಿ ಭಾಷೆಯಾಗಿದೆ ". ಭಾರತದಲ್ಲಿ, ಟಿಬೆಟೊ-ಬರ್ಮನ್ ಭಾಷೆಗಳನ್ನು ಅರುಣಾಚಲ ಪ್ರದೇಶ, ಅಸ್ಸಾಂ (ಬೆಟ್ಟಗಳು ಮತ್ತು ಸ್ವಾಯತ್ತ ಮಂಡಳಿಗಳು), ಹಿಮಾಚಲ ಪ್ರದೇಶ, ಲಡಾಖ್, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದ ಪ್ರದೇಶಗಳಲ್ಲಿ ಮತ್ತು ಹಿಮಾಲಯದಾದ್ಯಂತ ಮಾತನಾಡುತ್ತಾರೆ. ಭಾರತದಲ್ಲಿ ಮಾತನಾಡುವ ಸೈನೋ-ಟಿಬೆಟಿಯನ್ ಭಾಷೆಗಳು ಎರಡು ಸಾಂವಿಧಾನಿಕವಾಗಿ ಮಾನ್ಯತೆ ಪಡೆದ ಅಧಿಕೃತ ಭಾಷೆಗಳನ್ನು ಒಳಗೊಂಡಿವೆ, ಮೈತೆಯ್ (ಅಧಿಕೃತವಾಗಿ ಮಣಿಪುರಿ ಎಂದು ಕರೆಯಲಾಗುತ್ತದೆ) ಮತ್ತು ಬೋಡೋ ಮತ್ತು ಕರ್ಬಿ, ಲೆಪ್ಚಾ, ಮತ್ತು ಹಲವಾರು ಸಂಬಂಧಿತ ಟಿಬೆಟಿಕ್, ಪಶ್ಚಿಮ ಹಿಮಾಲಯ್, ತಾನಿ, ಬ್ರಹ್ಮಪುತ್ರನಂತಹ ಅನುಸೂಚಿತವಲ್ಲದ ಭಾಷೆಗಳು., ಅಂಗಾಮಿ-ಪೋಚುರಿ, ತಂಗ್ಖುಲ್, ಝೆಮ್, ಕುಕಿಶ್ ಉಪ ಭಾಷಾ ಶಾಖೆಗಳು, ಇರತ ಅನೇಕ ಭಾಷೆಗಳಿವೆ. ತೈ-ಕಡೈ ಭಾಷಾ ಕುಟುಂಬ ಅಹೋಮ್ ಭಾಷೆ, ನೈಋತ್ಯ ತೈ ಭಾಷೆ, ಒಂದು ಕಾಲದಲ್ಲಿ ಆಧುನಿಕ ಅಸ್ಸಾಂನಲ್ಲಿ ಅಹೋಮ್ ಸಾಮ್ರಾಜ್ಯದ ಪ್ರಬಲ ಭಾಷೆಯಾಗಿತ್ತು, ಆದರೆ ನಂತರ ಅಸ್ಸಾಮಿ ಭಾಷೆಯಿಂದ ಬದಲಾಯಿಸಲಾಯಿತು. (ಪ್ರಾಚೀನ ಯುಗದಲ್ಲಿ ಕಾಮ್ರೂಪಿ ಎಂದು ಕರೆಯಲಾಗುತ್ತಿತ್ತು ಇದು ಇಂದಿನ ಕಾಮರೂಪಿ ಉಪಭಾಷೆಯ ಪೂರ್ವ ರೂಪವಾಗಿದೆ) ಇತ್ತೀಚಿನ ದಿನಗಳಲ್ಲಿ, ಸಣ್ಣ ತೈ ಸಮುದಾಯಗಳು ಮತ್ತು ಅವರ ಭಾಷೆಗಳು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾ-ಟಿಬೆಟಿಯನ್ನರೊಂದಿಗೆ ಉಳಿದಿವೆ. ಉದಾ: ಮ್ಯಾನ್ಮಾರ್‌ನ ಶಾನ್ ರಾಜ್ಯದ ಶಾನ್ ಭಾಷೆಯನ್ನು ಹೋಲುವ ತೈ ಫಾಕೆ, ತೈ ಐಟನ್ ಮತ್ತು ತೈ ಖಮ್ತಿ ; ಚೀನಾದ ಯುನ್ನಾನ್‌ನ ಡೈ ಭಾಷೆ ; ಲಾವೋಸ್‌ನ ಲಾವೋ ಭಾಷೆ ; ಥೈಲ್ಯಾಂಡ್‌ನ ಥಾಯ್ ಭಾಷೆ ; ಮತ್ತು ಚೀನಾದ ಗುವಾಂಗ್ಸಿಯಲ್ಲಿ ಝುವಾಂಗ್ ಭಾಷೆ . ಅಂಡಮಾನೀಸ್ ಭಾಷಾ ಕುಟುಂಬಗಳು ಅಂಡಮಾನ್ ದ್ವೀಪಗಳ ಭಾಷೆಗಳು ಮತ್ತೊಂದು ಗುಂಪನ್ನು ರೂಪಿಸುತ್ತವೆ: ಗ್ರೇಟ್ ಅಂಡಮಾನೀಸ್ ಭಾಷೆಗಳು, ಅಳಿವಿನಂಚಿನಲ್ಲಿರುವ ಹಲವಾರು ಮತ್ತು ಹೆಚ್ಚು ಅಳಿವಿನಂಚಿನಲ್ಲಿರುವ ಭಾಷೆ ಅಕಾ-ಜೆರುವನ್ನು ಒಳಗೊಂಡಿವೆ. ದಕ್ಷಿಣ ಅಂಡಮಾನ್ ದ್ವೀಪಗಳ ಒಂಗನ್ ಕುಟುಂಬವು ಎರಡು ಅಸ್ತಿತ್ವದಲ್ಲಿರುವ ಭಾಷೆಗಳನ್ನು ಒಳಗೊಂಡಿದೆ, ಒಂಗೆ ಮತ್ತು ಜರಾವಾ ಮತ್ತು ಒಂದು ಅಳಿವಿನಂಚಿನಲ್ಲಿರುವ ಭಾಷೆ, ಜಂಗಿಲ್ . ಇದರ ಜೊತೆಗೆ, ಸೆಂಟಿನೆಲೀಸ್ ಮೇಲಿನ ಭಾಷೆಗಳಿಗೆ ಸಂಬಂಧಿಸಿದೆ ಎಂದು ಭಾವಿಸಲಾಗಿದೆ. ಪರಿಗಣಿಸದ ಭಾಷೆ ಭಾರತೀಯ ಮುಖ್ಯಭೂಮಿಯಲ್ಲಿ ಕಂಡುಬರುವ ಏಕೈಕ ಭಾಷೆ ನಿಹಾಲಿ ಎಂದು ಪರಿಗಣಿಸಲಾಗಿದೆ. ನಿಹಾಲಿಯ ಸ್ಥಿತಿಯು ಅಸ್ಪಷ್ಟವಾಗಿದೆ, ಇದು ಒಂದು ವಿಶಿಷ್ಟವಾದ ಆಸ್ಟ್ರೋಯಾಸಿಯಾಟಿಕ್ ಭಾಷೆಯಾಗಿ, ಕೊರ್ಕು ಉಪಭಾಷೆಯಾಗಿ ಮತ್ತು ಕಾನೂನುಬದ್ಧ ಭಾಷೆಗಿಂತ "ಕಳ್ಳರ ಆರ್ಗೋಟ್" ಎಂದು ಪರಿಗಣಿಸಲ್ಪಟ್ಟಿದೆ. ದಕ್ಷಿಣ ಏಷ್ಯಾದ ಉಳಿದ ಭಾಗಗಳಲ್ಲಿ ಕಂಡುಬರುವ ಇತರ ಭಾಷಾ ಪ್ರತ್ಯೇಕತೆಗಳಲ್ಲಿ ಬುರುಶಾಸ್ಕಿ, ಗಿಲ್ಗಿಟ್-ಬಾಲ್ಟಿಸ್ತಾನ್ (ಪಾಕಿಸ್ತಾನದ ಆಡಳಿತ), ಕುಸುಂದ (ಪಶ್ಚಿಮ ನೇಪಾಳದಲ್ಲಿ) ಮತ್ತು ವೆಡ್ಡಾ (ಶ್ರೀಲಂಕಾದಲ್ಲಿ) ಸೇರಿವೆ. ಒಂದು ಭಾಷಾ ಕುಟುಂಬವಾಗಿ ಗ್ರೇಟ್ ಅಂಡಮಾನೀಸ್ ಭಾಷಾ ಗುಂಪಿನ ಸಿಂಧುತ್ವವನ್ನು ಪ್ರಶ್ನಿಸಲಾಗಿದೆ ಮತ್ತು ಕೆಲವು ಅಧಿಕಾರಿಗಳು ಅದನ್ನು ಪ್ರತ್ಯೇಕ ಭಾಷೆ ಎಂದು ಪರಿಗಣಿಸಿದ್ದಾರೆ. Greenberg, Joseph (1971). "The Indo-Pacific hypothesis." Current trends in linguistics vol. 8, ed. by Thomas A. Sebeok, 807.71. The Hague: Mouton. Abbi, Anvita (2006). Endangered Languages of the Andaman Islands. Germany: Lincom GmbH. ಇದರ ಜೊತೆಗೆ, ಬಂಟು ಭಾಷೆ, ಸಿಡಿ, 20 ನೇ ಶತಮಾನದ ಮಧ್ಯಭಾಗದವರೆಗೆ ಗುಜರಾತ್‌ನಲ್ಲಿ ಸಿದ್ದಿಯರು ಮಾತನಾಡುತ್ತಿದ್ದರು. ಅಧಿಕೃತ ಭಾಷೆಗಳು thumb|364x364px| ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಾಗಿ ಮಾತನಾಡುವ (L1) ಮೊದಲ ಭಾಷೆಗಳು. thumb| ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಭಾರತದ ಅಧಿಕೃತ ಭಾಷೆಗಳು. ಈ ನಕ್ಷೆಯಲ್ಲಿ ಹಿಂದೂಸ್ತಾನಿ ಹಿಂದಿ ಮತ್ತು ಉರ್ದು ಎರಡನ್ನೂ ಉಲ್ಲೇಖಿಸಲಾಗಿದೆ. ಸಂಯುಕ್ತ ಮಟ್ಟ ಸ್ವಾತಂತ್ರ್ಯದ ಮೊದಲು, ಬ್ರಿಟಿಷ್ ಭಾರತದಲ್ಲಿ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಮತ್ತು ಉನ್ನತ ಶಿಕ್ಷಣ ಉದ್ದೇಶಗಳಿಗಾಗಿ ಇಂಗ್ಲಿಷ್ ಅನ್ನು ಏಕೈಕ ಭಾಷೆಯಾಗಿ ಬಳಸಲಾಗುತ್ತಿತ್ತು. 1946 ರಲ್ಲಿ, ಭಾರತದ ಸಂವಿಧಾನ ಸಭೆಯ ಕಲಾಪದಲ್ಲಿ ರಾಷ್ಟ್ರೀಯ ಭಾಷೆಯ ವಿಚಾರವು ವಿವಾದಿತ ವಿಷಯವಾಗಿತ್ತು, ನಿರ್ದಿಷ್ಟವಾಗಿ ಭಾರತದ ಸಂವಿಧಾನವನ್ನು ಬರೆಯಲಾದ ಭಾಷೆ ಮತ್ತು ಸಂಸತ್ತಿನ ಕಲಾಪಗಳ ಸಮಯದಲ್ಲಿ ಮಾತನಾಡುವ ಮತ್ತು ಅದಕ್ಕೆ ಅರ್ಹವಾದ "ರಾಷ್ಟ್ರೀಯ" ಎಂಬ ವಿಶೇಷಣದ ಭಾಷೆ ಯಾವುದು? ಭಾರತದ ಉತ್ತರ ಭಾಗಗಳಿಗೆ ಸೇರಿದ ಸದಸ್ಯರು ಸಂವಿಧಾನವನ್ನು ಇಂಗ್ಲಿಷ್‌ನಲ್ಲಿ ಅನಧಿಕೃತ ಅನುವಾದದೊಂದಿಗೆ ಹಿಂದಿಯಲ್ಲಿ ರಚಿಸಬೇಕೆಂದು ಒತ್ತಾಯಿಸಿದರು. ಸಾಂವಿಧಾನಿಕ ವಿಷಯಗಳ ಮೇಲೆ ಸೂಕ್ಷ್ಮವಾದ ಗದ್ಯವನ್ನು ರೂಪಿಸಲು ಇಂಗ್ಲಿಷ್ ಹೆಚ್ಚು ಉತ್ತಮವಾಗಿದೆ ಎಂಬ ಕಾರಣಕ್ಕಾಗಿ ಕರಡು ಸಮಿತಿಯು ಇದನ್ನು ಒಪ್ಪಲಿಲ್ಲ. ಹಿಂದಿಯನ್ನು ಅಗ್ರಮಾನ್ಯ ಭಾಷೆಯನ್ನಾಗಿ ಮಾಡುವ ಪ್ರಯತ್ನಗಳನ್ನು ಭಾರತದಲ್ಲಿ ಸ್ಥಳೀಯವಾಗಿ ಮಾತನಾಡದ ಭಾಗಗಳ ಸದಸ್ಯರು ಕಟುವಾಗಿ ವಿರೋಧಿಸಿದರು. ಅಂತಿಮವಾಗಿ, ರಾಷ್ಟ್ರೀಯ ಭಾಷೆಯ ಯಾವುದೇ ಉಲ್ಲೇಖವನ್ನು ಸೇರಿಸದಿರುವಂತೆ ರಾಜಿ ಮಾಡಿಕೊಂಡು ದೇವನಾಗರಿ ಲಿಪಿಯಲ್ಲಿ ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆ ಎಂದು ಘೋಷಿಸಲಾಯಿತು. ಆದರೆ "ಸಂವಿಧಾನದ ಪ್ರಾರಂಭದ ಹದಿನೈದು ವರ್ಷಗಳವರೆಗೆ, ಒಕ್ಕೂಟದ ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಇಂಗ್ಲಿಷ್ ಭಾಷೆ ಬಳಸುವುದನ್ನು ಮುಂದುವರಿಸಲಾಯಿತು."Guha, Ramachandra (10 February 2011). "6. Ideas of India (section IX)". India After Gandhi: The History of the World's Largest Democracy. Pan Macmillan. pp. 117–120. ISBN 978-0-330-54020-9. Retrieved 3 January 2015. ಭಾರತದ ಸಂವಿಧಾನದ 343 (1) ವಿಧಿಯಲ್ಲಿ "ಕೇಂದ್ರ ಸರ್ಕಾರದ ಅಧಿಕೃತ ಭಾಷೆಯು ದೇವನಾಗರಿ ಲಿಪಿಯ ಹಿಂದಿಯಾಗಿರಬೇಕು" ಎಂದು ಹೇಳಲಾಗಿದೆ.</ref>"Constitution of India as of 29 July 2008" (PDF). The Constitution Of India. Ministry of Law & Justice. Archived from the original (PDF) on 21 June 2014. Retrieved 13 April 2011. ಸಂಸತ್ತು ಬೇರೆ ರೀತಿಯಲ್ಲಿ ನಿರ್ಧರಿಸದ ಹೊರತು, ಸಂವಿಧಾನವು ಜಾರಿಗೆ ಬಂದ 15 ವರ್ಷಗಳ ನಂತರ ಎಲ್ಲಾ ಒಕ್ಕಟದ ಅಧಿಕೃತ ಉದ್ದೇಶಗಳಿಗಾಗಿ ಬಳಸಲಾದ ಇಂಗ್ಲಿಷ್ ಭಾಷೆಯನ್ನು ನ26 ಜನವರಿ 1965 ರಂದು ತಡೆ ಹಿಡಿಯಲಾಯಿತು."Constitution of India as of 29 July 2008" (PDF). The Constitution Of India. Ministry of Law & Justice. Archived from the original (PDF) on 21 June 2014. Retrieved 13 April 2011. ಭಾಷೆಯ ಬದಲಾವಣೆಯ ದಿನಾಂಕವು ಸಮೀಪಿಸುತ್ತಿದ್ದಂತೆ, ಭಾರತದ ಹಿಂದಿ ಮಾತನಾಡದ ಪ್ರದೇಶಗಳಲ್ಲಿ, ವಿಶೇಷವಾಗಿ ಕೇರಳ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಪಶ್ಚಿಮ ಬಂಗಾಳ, ಕರ್ನಾಟಕ, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರಂತೆ, ಜವಾಹರಲಾಲ್ ನೆಹರು ಅವರು ಅಧಿಕೃತ ಭಾಷೆಗಳ ಕಾಯಿದೆ, 1963, ಜಾರಿಗೊಳಿಸುವುದನ್ನು ಖಚಿತಪಡಿಸಿದರು. ಇದರಿಂದಾಗಿ 1965 ರ ನಂತರವೂ ಅಧಿಕೃತ ಉದ್ದೇಶಗಳಿಗಾಗಿ ಹಿಂದಿಯೊಂದಿಗೆ ಇಂಗ್ಲಿಷ್ ಅನ್ನು ಇನ್ನೂ ಬಳಸಬಹುದೆಂಬ ಖಚಿತತೆಯನ್ನು ಒದಗಿಸಿತು.Guha, Ramachandra (10 February 2011). "6. Ideas of India (section IX)". India After Gandhi: The History of the World's Largest Democracy. Pan Macmillan. pp. 117–120. ISBN 978-0-330-54020-9. Retrieved 3 January 2015. ಈ ಸಂದರ್ಭದಲ್ಲಿ, 1965 ಸಮೀಪಿಸುತ್ತಿದ್ದಂತೆ, ಭಾರತದ ಹೊಸ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 26 ಜನವರಿ 1965 ರಿಂದ ಜಾರಿಗೆ ಬರುವಂತೆ ಹಿಂದಿಯನ್ನು ಪ್ರಧಾನವಾಗಿಸಲು ಸಿದ್ಧರಾದರು. ಇದು ತಮಿಳುನಾಡಿನಲ್ಲಿ ವ್ಯಾಪಕವಾದ ಆಂದೋಲನ, ಗಲಭೆಗಳು, ಸ್ವಯಂ ಅಗ್ನಿಸ್ಪರ್ಶ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಯಿತು. ತಮ್ಮ ಪಕ್ಷದ ನಿಲುವಿನಿಂದ ದಕ್ಷಿಣದ ಕಾಂಗ್ರೆಸ್ ರಾಜಕಾರಣಿಗಳ ವಿಭಜನೆ, ದಕ್ಷಿಣದ ಇಬ್ಬರು ಕೇಂದ್ರ ಮಂತ್ರಿಗಳ ರಾಜೀನಾಮೆ ಮತ್ತು ದೇಶದ ಏಕತೆಗೆ ಹೆಚ್ಚುತ್ತಿರುವ ಬೆದರಿಕೆ ಶಾಸ್ತ್ರಿ ಅವರನ್ನು ಒಪ್ಪಿಕೊಳ್ಳುವಂತೆ ಮಾಡಿತು.Guha, Ramachandra (10 February 2011). "6. Ideas of India (section IX)". India After Gandhi: The History of the World's Largest Democracy. Pan Macmillan. pp. 117–120. ISBN 978-0-330-54020-9. Retrieved 3 January 2015. Hardgrave, Robert L. (August 1965). The Riots in Tamilnad: Problems and Prospects of India's Language Crisis. Asian Survey. University of California Press. ಇದರ ಪರಿಣಾಮವಾಗಿ, ಪ್ರಸ್ತಾವನೆಯನ್ನು ಕೈಬಿಡಲಾಯಿತು. 1967 ರಲ್ಲಿ ಕಾಯಿದೆಗೆ ತಿದ್ದುಪಡಿ ಮಾಡಿ, ಆ ಪರಿಣಾಮದ ನಿರ್ಣಯವನ್ನು ಪ್ರತಿ ರಾಜ್ಯದ ಶಾಸಕಾಂಗವು ಅಂಗೀಕರಿಸುವವರೆಗೆ ಇಂಗ್ಲಿಷ್ ಬಳಕೆಯನ್ನು ಕೊನೆಗೊಳಿಸುವುದಿಲ್ಲ ಎಂದು ತೀರ್ಮಾನಿಸಿತು. ಹಿಂದಿಯನ್ನು ತನ್ನ ಅಧಿಕೃತ ಭಾಷೆಯಾಗಿ ಮತ್ತು ಭಾರತೀಯ ಸಂಸತ್ತಿನ ಪ್ರತಿ ಸದನದಲ್ಲಿ ಅಳವಡಿಸಿಕೊಳ್ಳಲಿಲ್ಲ."Official Languages Act, 1963 (with amendments)" (PDF). Indian Railways. 10 May 1963. Retrieved 3 January 2015. ಭಾರತದ ಸಂವಿಧಾನವು ಯಾವುದೇ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿಲ್ಲ.Khan, Saeed (25 January 2010). "There's no national language in India: Gujarat High Court". The Times of India. Retrieved 5 May 2014. Press Trust of India (25 January 2010). "Hindi, not a national language: Court". The Hindu. Ahmedabad. Retrieved 23 December 2014. ಹಿಂದಿ thumb| ಹಿಂದಿ-ಸಂಬಂಧಿತ ಭಾಷೆಗಳಾದ ರಾಜಸ್ಥಾನಿ ಮತ್ತು ಭೋಜ್‌ಪುರಿ ಸೇರಿದಂತೆ ಹಿಂದಿ-ಬೆಲ್ಟ್. 2001 ರ ಜನಗಣತಿಯಲ್ಲಿ, ಭಾರತದಲ್ಲಿ 422 ಮಿಲಿಯನ್ (422,048,642) ಜನರು ಹಿಂದಿಯನ್ನು ತಮ್ಮ ಸ್ಥಳೀಯ ಭಾಷೆ ಎಂದು ವರದಿ ಮಾಡಿದ್ದಾರೆ. ಈ ಅಂಕಿ ಅಂಶವು ಕೇವಲ ಹಿಂದೂಸ್ತಾನಿ ಹಿಂದಿ ಮಾತನಾಡುವವರನ್ನು ಒಳಗೊಂಡಿಲ್ಲ, ಆದರೆ ತಮ್ಮ ಭಾಷಣವನ್ನು ಹಿಂದಿ ಬೆಲ್ಟ್‌ನ ಉಪಭಾಷೆ ಎಂದು ಪರಿಗಣಿಸುವ ಸಂಬಂಧಿತ ಭಾಷೆಗಳ ಸ್ಥಳೀಯ ಭಾಷಿಕರು ಎಂದು ಗುರುತಿಸುವ ಜನರನ್ನು ಸಹ ಒಳಗೊಂಡಿದೆ. ಹಿಂದಿ (ಅಥವಾ ಹಿಂದೂಸ್ತಾನಿ) ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಚಂಡೀಗಢ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ವಾಸಿಸುವ ಹೆಚ್ಚಿನ ಜನರ ಸ್ಥಳೀಯ ಭಾಷೆಯಾಗಿದೆ. "ಮಾಡರ್ನ್ ಸ್ಟ್ಯಾಂಡರ್ಡ್ ಹಿಂದಿ", ಪ್ರಮಾಣೀಕೃತ ಭಾಷೆಯು ಭಾರತದ ಒಕ್ಕೂಟದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಜೊತೆಗೆ, ಸಂಸತ್ತಿನಲ್ಲಿ ವ್ಯವಹಾರಕ್ಕಾಗಿ ಬಳಸುವ ಎರಡು ಭಾಷೆಗಳಲ್ಲಿ ಇದು ಒಂದಾಗಿದೆ. ಆದರೆ ರಾಜ್ಯಸಭೆಯು ಈಗ ಎಂಟನೇ ಶೆಡ್ಯೂಲ್‌ನಲ್ಲಿರುವ ಎಲ್ಲಾ 22 ಅಧಿಕೃತ ಭಾಷೆಗಳನ್ನು ಮಾತನಾಡಲು ಅನುಮತಿಸುತ್ತದೆ. ಹಿಂದೂಸ್ತಾನಿ, ಮೊಘಲ್ ಕಾಲದ ಪ್ರಮುಖ ಭಾಷೆಯಾದ ಖಾರಿ ಬೋಲಿ (खड़ी बोली) ಯಿಂದ ವಿಕಸನಗೊಂಡಿತು. ಇದು ಸ್ವತಃ ಅಪಭ್ರಂಶದಿಂದ ವಿಕಸನಗೊಂಡು ಪ್ರಾಕೃತದಿಂದ ಮಧ್ಯವರ್ತಿ ಪರಿವರ್ತನೆಯ ಹಂತವಾಗಿ ಉತ್ತರ ಭಾರತದ ಇಂಡೋ-ಆರ್ಯನ್ ಭಾಷೆಗಳೆಂದು ವಿಕಸನಗೊಂಡಿವೆ. ಭಾರತದಲ್ಲಿ ಮಾತನಾಡುವ ಹಿಂದಿಯ ವೈವಿಧ್ಯಗಳಲ್ಲಿ ರಾಜಸ್ಥಾನಿ, ಬ್ರಜ್ ಭಾಷಾ, ಹರ್ಯಾನ್ವಿ, ಬುಂದೇಲಿ, ಕನೌಜಿ, ಹಿಂದೂಸ್ತಾನಿ, ಅವಧಿ, ಬಾಘೇಲಿ ಮತ್ತು ಛತ್ತೀಸ್‌ಗಢಿ ಸೇರಿವೆ. ಆದರೆ ಸಂಪರ್ಕ ಭಾಷೆಯ ಕಾರಣದಿಂದ, ಹಿಂದಿ ಮುಂಬೈನಲ್ಲಿ ಬಂಬಯ್ಯ ಹಿಂದಿಯಂತಹ ಪ್ರಾದೇಶಿಕ ಉಪಭಾಷೆಗಳನ್ನು ಸಹ ಅಭಿವೃದ್ಧಿಪಡಿಸಿದೆ. ಇದರ ಜೊತೆಗೆ, ಅಂಡಮಾನ್ ಕ್ರಿಯೋಲ್ ಹಿಂದಿ ಕೂಡ ಅಂಡಮಾನ್ ದ್ವೀಪಗಳಲ್ಲಿ ವ್ಯಾಪಾರ ಭಾಷೆಯಾಗಿ ಅಭಿವೃದ್ಧಿಗೊಂಡಿದೆ. ಹಾಡುಗಳು ಮತ್ತು ಚಲನಚಿತ್ರಗಳಂತಹ ಜನಪ್ರಿಯ ಸಂಸ್ಕೃತಿಯಲ್ಲಿ ಬಳಸುವುದರಿಂದ, ಹಿಂದಿ ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಸಂಪರ್ಕ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ. ಹಿಂದಿಯನ್ನು ಪ್ರಾಥಮಿಕ ಭಾಷೆ, ಬೋಧನಾ ಭಾಷೆ ಮತ್ತು ಎರಡನೇ ಭಾಷೆಯಾಗಿ ವ್ಯಾಪಕವಾಗಿ ಹೆಚ್ಚಿನ ರಾಜ್ಯಗಳಲ್ಲಿ ಕಲಿಸಲಾಗುತ್ತದೆ. ಆಂಗ್ಲ   ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತ, ವ್ಯವಹಾರ ಮತ್ತು ಶಿಕ್ಷಣಕ್ಕಾಗಿ ಇಂಗ್ಲಿಷ್ ಭಾಷೆ ಮಾರ್ಪಟ್ಟಿತು. ಸಂಸತ್ತಿನಲ್ಲಿ ವ್ಯವಹಾರಕ್ಕಾಗಿ ಭಾರತದ ಸಂವಿಧಾನದಲ್ಲಿ ಅನುಮತಿಸಲಾದ ಎರಡು ಭಾಷೆಗಳಲ್ಲಿ ಹಿಂದಿ ಜೊತೆಗೆ ಇಂಗ್ಲಿಷ್ ಕೂಡ ಒಂದು. ಹಿಂದಿಯು ಅಧಿಕೃತ ಸರ್ಕಾರಿ ಪ್ರೋತ್ಸಾಹವನ್ನು ಹೊಂದಿದೆ ಮತ್ತು ಭಾರತದ ಹೆಚ್ಚಿನ ಭಾಗಗಳಲ್ಲಿ ಸಂಪರ್ಕ ಭಾಷೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ವಾಸ್ತವದ ಹೊರತಾಗಿಯೂ, ಭಾರತದ ದಕ್ಷಿಣ ರಾಜ್ಯಗಳಲ್ಲಿ ಹಿಂದಿಯ ಬಳಕೆಗೆ ಸಾಕಷ್ಟು ವಿರೋಧವಿತ್ತು ಮತ್ತು ಭಾರತದ ಇಂಗ್ಲಿಷ್ ಬಹುಪಾಲು ವಾಸ್ತವಿಕ ಸಂಪರ್ಕ ಭಾಷೆಯಾಗಿ ಹೊರಹೊಮ್ಮಿದೆ.Guha, Ramachandra (10 February 2011). "6. Ideas of India (section IX)". India After Gandhi: The History of the World's Largest Democracy. Pan Macmillan. pp. 117–120. ISBN 978-0-330-54020-9. Retrieved 3 January 2015. Hardgrave, Robert L. (August 1965). The Riots in Tamilnad: Problems and Prospects of India's Language Crisis. Asian Survey. University of California Press.ಪತ್ರಕರ್ತ ಮನು ಜೋಸೆಫ್, ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ 2011 ರ ಲೇಖನದಲ್ಲಿ, ಭಾಷೆಯ ಪ್ರಾಮುಖ್ಯತೆ ಮತ್ತು ಬಳಕೆ ಮತ್ತು ಇಂಗ್ಲಿಷ್-ಭಾಷೆಯ ಶಿಕ್ಷಣದ ಬಯಕೆಯಿಂದಾಗಿ, "ಇಂಗ್ಲಿಷ್ ಭಾರತದ ವಾಸ್ತವಿಕ ರಾಷ್ಟ್ರೀಯ ಭಾಷೆಯಾಗಿದೆ. ಇದು ಕಹಿ ಸತ್ಯ." ನಗರವಾಸಿಗಳು, ಶ್ರೀಮಂತ ಭಾರತೀಯರು, ಉನ್ನತ ಮಟ್ಟದ ಶೈಕ್ಷಣಿಕ ಸಾಧನೆ ಹೊಂದಿರುವ ಭಾರತೀಯರು, ಕ್ರಿಶ್ಚಿಯನ್ನರು, ಪುರುಷರು ಮತ್ತು ಕಿರಿಯ ಭಾರತೀಯರಲ್ಲಿ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯು ಅತ್ಯಧಿಕವಾಗಿದೆ. 2017 ರಲ್ಲಿ, ಗ್ರಾಮೀಣ ಹದಿಹರೆಯದವರಲ್ಲಿ ಶೇಕಡಾ 58 ಕ್ಕಿಂತ ಹೆಚ್ಚು ಜನರು ಇಂಗ್ಲಿಷ್ ಅನ್ನು ಓದಬಲ್ಲರು ಮತ್ತು ಹದಿನಾಲ್ಕು ವರ್ಷ ವಯಸ್ಸಿನವರಲ್ಲಿ 53 ಪ್ರತಿಶತ ಮತ್ತು 18 ವರ್ಷ ವಯಸ್ಸಿನ ಅರುವತ್ತು ಪ್ರತಿಶತದಷ್ಟು ಜನರು ಇಂಗ್ಲಿಷ್ ವಾಕ್ಯಗಳನ್ನು ಓದಬಲ್ಲರು. ಪರಿಚ್ಛೇದ ಭಾಷೆಗಳು thumb| ಭಾರತದ ಮುಖ್ಯ ಭಾಷೆಗಳು ಮತ್ತು ಪ್ರತಿಯೊಂದೂ ಎಷ್ಟು ಭಾಷಿಕರನ್ನು ಹೊಂದಿದೆ ಎಂಬುದರ ಪ್ರಕಾರ ಅವುಗಳ ಸಾಪೇಕ್ಷ ಗಾತ್ರ 1967 ರಲ್ಲಿ ಭಾರತದ ಸಂವಿಧಾನದ ಇಪ್ಪತ್ತೊಂದನೇ ತಿದ್ದುಪಡಿಯ ತನಕ, ದೇಶವು 14 ಅಧಿಕೃತ ಪ್ರಾದೇಶಿಕ ಭಾಷೆಗಳನ್ನು ಗುರುತಿಸಿತು. ಎಂಟನೇ ಪರಿಚ್ಛೇದ ಮತ್ತು ಎಪ್ಪತ್ತೊಂದನೇ ತಿದ್ದುಪಡಿಯು ಸಿಂಧಿ, ಕೊಂಕಣಿ, ಮೈತೆಯ್ ಮತ್ತು ನೇಪಾಳಿಗಳನ್ನು ಸೇರಿಸಲು ಅನುಮತಿಸಿತು. ಇದರಿಂದಾಗಿ ಭಾರತದ ಅಧಿಕೃತ ಪ್ರಾದೇಶಿಕ ಭಾಷೆಗಳ ಸಂಖ್ಯೆಯನ್ನು 18 ಕ್ಕೆ ಹೆಚ್ಚಿಸಲಾಯಿತು. 1 ಡಿಸೆಂಬರ್ 2007 ರಂತೆ ಭಾರತದ ಸಂವಿಧಾನದ ಎಂಟನೇ ಪರಿಚ್ಛೇದವು 22 ಭಾಷೆಗಳನ್ನು ಪಟ್ಟಿ ಮಾಡಿದೆ. (PDF). The Constitution Of India. Ministry of Law & Justice. Archived from the original (PDF) on 21 June 2014. Retrieved 13 April 2011. ಅವುಗಳನ್ನು ಬಳಸಿದ ಪ್ರದೇಶಗಳೊಂದಿಗೆ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ."Statement 1 – Abstract of Speakers' Strength of Languages and Mother Tongues – 2001". Government of India. Archived from the original on 14 October 2013. Retrieved 11 December 2014. ಭಾಷೆ ಕುಟುಂಬ ISO 639 ಕೋಡ್ ಅಸ್ಸಾಮಿ ಇಂಡೋ-ಆರ್ಯನ್as ಬೆಂಗಾಲಿ (ಬಾಂಗ್ಲಾ) ಇಂಡೋ-ಆರ್ಯನ್bn ಬೋಡೋ ಸೈನೋ-ಟಿಬೆಟಿಯನ್brx ಡೋಗ್ರಿ ಇಂಡೋ-ಆರ್ಯನ್doi ಗುಜರಾತಿ ಇಂಡೋ-ಆರ್ಯನ್gu ಹಿಂದಿ ಇಂಡೋ-ಆರ್ಯನ್hi ಕನ್ನಡ ದ್ರಾವಿಡkn ಕಾಶ್ಮೀರಿ ಇಂಡೋ-ಆರ್ಯನ್ks ಕೊಂಕಣಿ ಇಂಡೋ-ಆರ್ಯನ್gom ಮೈಥಿಲಿ ಇಂಡೋ-ಆರ್ಯನ್mai ಮಲಯಾಳಂ ದ್ರಾವಿಡml ಮೈತೆಯಿ (ಮಣಿಪುರಿ) ಸೈನೋ-ಟಿಬೆಟಿಯನ್mni ಮರಾಠಿ ಇಂಡೋ-ಆರ್ಯನ್mr ನೇಪಾಳಿ ಇಂಡೋ-ಆರ್ಯನ್ne ಒಡಿಯಾ ಇಂಡೋ-ಆರ್ಯನ್or ಪಂಜಾಬಿ ಇಂಡೋ-ಆರ್ಯನ್pa ಸಂಸ್ಕೃತ ಇಂಡೋ-ಆರ್ಯನ್sa ಸಂತಾಲಿ ಆಸ್ಟ್ರೋಯಾಸಿಯಾಟಿಕ್sat ಸಿಂಧಿ ಇಂಡೋ-ಆರ್ಯನ್sd ತಮಿಳು ದ್ರಾವಿಡta ತೆಲುಗು ದ್ರಾವಿಡte ಉರ್ದು ಇಂಡೋ-ಆರ್ಯನ್ur ಪ್ರತ್ಯೇಕ ರಾಜ್ಯಗಳು, ಅವುಗಳಲ್ಲಿ ಹೆಚ್ಚಿನವುಗಳ ಗಡಿಗಳು ಸಾಮಾಜಿಕ-ಭಾಷಾ ರೇಖೆಗಳ ಮೇಲೆ ಚಿತ್ರಿಸಲ್ಪಟ್ಟಿವೆ, ಅವುಗಳ ಭಾಷಾ ಜನಸಂಖ್ಯೆಯನ್ನು ಅವಲಂಬಿಸಿ ತಮ್ಮದೇ ಆದ ಅಧಿಕೃತ ಭಾಷೆಗಳ ಕಾನೂನುಗಳನ್ನು ಮಾಡಬಹುದಾಗಿದೆ. ಆಯ್ಕೆಮಾಡಿದ ಅಧಿಕೃತ ಭಾಷೆಗಳು ಆ ರಾಜ್ಯದಲ್ಲಿ ಮಾತನಾಡುವ ಪ್ರಧಾನ ಮತ್ತು ರಾಜಕೀಯ ಮಹತ್ವದ ಭಾಷೆಗಳನ್ನು ಪ್ರತಿಬಿಂಬಿಸುತ್ತವೆ. ಭಾಷಿಕವಾಗಿ ವ್ಯಾಖ್ಯಾನಿಸಲಾದ ಪ್ರದೇಶವನ್ನು ಹೊಂದಿರುವ ಕೆಲವು ರಾಜ್ಯಗಳು ಆ ರಾಜ್ಯದಲ್ಲಿ ಪ್ರಧಾನ ಭಾಷೆಯನ್ನು ಮಾತ್ರ ತನ್ನ ಅಧಿಕೃತ ಭಾಷೆಯಾಗಿ ಹೊಂದಿರಬಹುದು, ಉದಾಹರಣೆಗೆ ಕರ್ನಾಟಕ ಮತ್ತು ಗುಜರಾತ್, ಇವು ಅನುಕ್ರಮವಾಗಿ ಕನ್ನಡ ಮತ್ತು ಗುಜರಾತಿಯನ್ನು ತಮ್ಮ ಏಕೈಕ ಅಧಿಕೃತ ಭಾಷೆಯಾಗಿ ಹೊಂದಿವೆ. ತೆಲಂಗಾಣ, ಗಣನೀಯ ಪ್ರಮಾಣದಲ್ಲಿ ಉರ್ದು ಮಾತನಾಡುವ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ ಮತ್ತು ಆಂಧ್ರ ಪ್ರದೇಶ ಎರಡು ಭಾಷೆಗಳನ್ನು ಹೊಂದಿದೆ, ತೆಲುಗು ಮತ್ತು ಉರ್ದು, ಅದರ ಅಧಿಕೃತ ಭಾಷೆಗಳು. ಕೆಲವು ರಾಜ್ಯಗಳು ಅಲ್ಪಸಂಖ್ಯಾತ ಭಾಷೆಗಳನ್ನು ಅಧಿಕೃತ ಭಾಷೆಯಾಗಿ ಬಳಸುವ ಮೂಲಕ ಪ್ರವೃತ್ತಿಯನ್ನು ತಡೆ ಮಾಡುತ್ತವೆ. ಜಮ್ಮು ಮತ್ತು ಕಾಶ್ಮೀರವು ಉರ್ದುವನ್ನು ಹೊಂದಿದ್ದು ಅಲ್ಲಿನ ಜನಸಂಖ್ಯೆಯ 1% ಕ್ಕಿಂತ ಕಡಿಮೆ ಜನರು ಮಾತನಾಡುತ್ತಿದ್ದು, ಇದು 2020 ರವರೆಗೆ ಏಕೈಕ ಅಧಿಕೃತ ಭಾಷೆಯಾಗಿದೆ. ಮೇಘಾಲಯ ಜನಸಂಖ್ಯೆಯ 0.01% ಮಾತನಾಡುವ ಜನರು ಇಂಗ್ಲಿಷನ್ನು ಬಳಸುತ್ತಾರೆ. ಈ ವಿದ್ಯಮಾನವು ಬಹುಪಾಲು ಭಾಷೆಗಳನ್ನು ಕ್ರಿಯಾತ್ಮಕ ಅರ್ಥದಲ್ಲಿ "ಅಲ್ಪಸಂಖ್ಯಾತ ಭಾಷೆಗಳಾಗಿ" ಪರಿವರ್ತಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ, ಭಾರತವು ಸ್ವಾಯತ್ತ ಆಡಳಿತ ಪ್ರದೇಶಗಳನ್ನು ಹೊಂದಿದೆ, ಅದು ತಮ್ಮದೇ ಆದ ಅಧಿಕೃತ ಭಾಷೆಯನ್ನು ಆಯ್ಕೆ ಮಾಡಲು ಅನುಮತಿಸಬಹುದು - ಅಸ್ಸಾಂನಲ್ಲಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಆಗಿರುವ ಒಂದು ನಿದರ್ಶನ, ಇದು ಈಗಾಗಲೇ ಬಳಕೆಯಲ್ಲಿರುವ ಅಸ್ಸಾಮಿ ಮತ್ತು ಇಂಗ್ಲಿಷ್ ಜೊತೆಗೆ ಬೋಡೋ ಭಾಷಾ ಪ್ರದೇಶಕ್ಕೆ ಅಧಿಕೃತವೆಂದು ಘೋಷಿಸಿದೆ. ಮತ್ತು ಬರಾಕ್ ಕಣಿವೆಯಲ್ಲಿ ಬಂಗಾಳಿANI (10 September 2014). "Assam government withdraws Assamese as official language in Barak Valley, restores Bengali". DNA India. Retrieved 25 December 2014. ಅದರ ಅಧಿಕೃತ ಭಾಷೆ. ಭಾರತದ ಪ್ರಮುಖ ಭಾಷೆಗಳು ಹಿಂದಿ thumb| ಬೆಂಗಳೂರಿನ ಪ್ರವಾಸಿ ತಾಣದಲ್ಲಿ – ಮೇಲಿನಿಂದ ಕೆಳಕ್ಕೆ, ಭಾಷೆಗಳು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ . ಇಂಗ್ಲಿಷ್ ಮತ್ತು ಇತರ ಹಲವು ಯುರೋಪಿಯನ್ ಭಾಷೆಗಳನ್ನು ಸಹ ಇಲ್ಲಿ ಗುರುತಿಸಲಾಗಿದೆ. ಬ್ರಿಟಿಷ್ ಭಾರತದಲ್ಲಿ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಮತ್ತು ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ ಇಂಗ್ಲಿಷ್ ಏಕೈಕ ಭಾಷೆಯಾಗಿದೆ. 1947 ರಲ್ಲಿ ಭಾರತವು ಸ್ವತಂತ್ರವಾದಾಗ, ಭಾರತೀಯ ಶಾಸಕರು ಅಧಿಕೃತ ಸಂವಹನಕ್ಕಾಗಿ ಮತ್ತು ಭಾರತದಾದ್ಯಂತ ವಿವಿಧ ಭಾಷಾ ಪ್ರದೇಶಗಳ ನಡುವಿನ ಸಂವಹನಕ್ಕಾಗಿ ಭಾಷೆಯನ್ನು ಆಯ್ಕೆ ಮಾಡುವ ಸವಾಲನ್ನು ಹೊಂದಿದ್ದರು. ಲಭ್ಯವಿರುವ ಆಯ್ಕೆಗಳೆಂದರೆ: ಬಹುಸಂಖ್ಯಾತ ಜನರ (41%) ಅಧಿಕೃತ ಭಾಷೆ"Statement 1 – Abstract of Speakers' Strength of Languages and Mother Tongues – 2001". Government of India. Archived from the original on 14 October 2013. Retrieved 11 December 2014. ಎಂದು ಗುರುತಿಸಲಾದ "ಹಿಂದಿ"ಯು ಅವರ ಸ್ಥಳೀಯ ಭಾಷೆ. ಹಿಂದಿಯೇತರ ಭಾಷಿಗರು, ವಿಶೇಷವಾಗಿ ಕನ್ನಡಿಗರು ಮತ್ತು ತಮಿಳರು ಮತ್ತು ಮಿಜೋರಾಂ ಮತ್ತು ನಾಗಾಲ್ಯಾಂಡ್‌ನವರು ಅಧಿಕೃತ ಭಾಷೆಯಾಗಿ ಇಂಗ್ಲಿಷ್‌ನ್ನು ಬಳಸಿರುವುದು. ನೋಡಿ:ಹಿಂದಿ ವಿರೋಧಿ ಆಂದೋಲನಗಳು. ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಅಧಿಕೃತ ಭಾಷೆಗಳಾಗಿ ಘೋಷಿಸಿ ಮತ್ತು ಪ್ರತಿ ರಾಜ್ಯಕ್ಕೂ ರಾಜ್ಯದ ಅಧಿಕೃತ ಭಾಷೆಯನ್ನು ಆಯ್ಕೆ ಮಾಡಲು ಸ್ವಾತಂತ್ರ್ಯವನ್ನು ನೀಡಲಾಗಿದೆ. 1950 ರಲ್ಲಿ ಭಾರತೀಯ ಸಂವಿಧಾನವು ದೇವನಾಗರಿ ಲಿಪಿಯಲ್ಲಿ ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆಯೆಂದು ಘೋಷಿಸಿತು. ಸಂಸತ್ತು ಬೇರೆ ರೀತಿಯಲ್ಲಿ ನಿರ್ಧರಿಸದಿದ್ದರೆ, ಅಧಿಕೃತ ಉದ್ದೇಶಗಳಿಗಾಗಿ ಇಂಗ್ಲಿಷ್ ಬಳಕೆಯನ್ನು ಸಂವಿಧಾನವು ಜಾರಿಗೆ ಬಂದ 15 ವರ್ಷಗಳ ನಂತರ, ಅಂದರೆ 26 ಜನವರಿ 1965 ರಂದು ನಿಲ್ಲಿಸಬೇಕಾಗಿತ್ತು. ಆದರೆ ಬದಲಾವಣೆಯ ನಿರೀಕ್ಷೆಯು ಭಾರತದ ಹಿಂದಿ-ಮಾತನಾಡುವ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅವರ ಸ್ಥಳೀಯ ಭಾಷೆಗಳು ಹಿಂದಿಗೆ ಸಂಬಂಧಿಸಿಲ್ಲದಿರುವಲ್ಲಿ ಹೆಚ್ಚಿನ ಎಚ್ಚರಿಕೆಗೆ ಕಾರಣವಾಯಿತು. ಇದರ ಪರಿಣಾಮವಾಗಿ, ಸಂಸತ್ತು 1963 ರಲ್ಲಿ ಅಧಿಕೃತ ಭಾಷೆಗಳ ಕಾಯಿದೆಯನ್ನು ಜಾರಿಗೊಳಿಸಿತು. ಇದು 1965 ರ ನಂತರವೂ ಹಿಂದಿಯೊಂದಿಗೆ ಅಧಿಕೃತ ಉದ್ದೇಶಗಳಿಗಾಗಿ ಇಂಗ್ಲಿಷಅನ್ನು ಮುಂದುವರೆಸಲು ಅವಕಾಶ ಒದಗಿಸಿತು. ಬೆಂಗಾಲಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಅಸ್ಸಾಂನ ಬರಾಕ್ ಕಣಿವೆ ಪ್ರದೇಶ ರಾಜ್ಯಗಳನ್ನು ಒಳಗೊಂಡಿರುವ ಬಂಗಾಳ ಪ್ರದೇಶಕ್ಕೆ ಸ್ಥಳೀಯವಾಗಿದೆ. ಪ್ರಪಂಚದಲ್ಲಿ ಬೆಂಗಾಲಿ ( ಬಾಂಗ್ಲಾ : বাংলা ಎಂದು ಸಹ ಉಚ್ಚರಿಸಲಾಗುತ್ತದೆ) ಅತಿಹೆಚ್ಚು ಮಾತನಾಡುವ ಆರನೇ ಭಾಷೆಯಾಗಿದೆ. ಭಾರತದ ವಿಭಜನೆಯ ನಂತರ (1947), ಪೂರ್ವ ಪಾಕಿಸ್ತಾನದಿಂದ ನಿರಾಶ್ರಿತರು ತ್ರಿಪುರಾ, ಮತ್ತು ಜಾರ್ಖಂಡ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೇಂದ್ರಾಡಳಿತ ಪ್ರದೇಶದಲ್ಲಿ ನೆಲೆಸಿದರು. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಹೆಚ್ಚಿನ ಸಂಖ್ಯೆಯ ಬಂಗಾಳಿ ಮಾತನಾಡುವ ಜನರಿದ್ದು, ಅಲ್ಲಿ ಅವರು ಆಭರಣ ಉದ್ಯಮಗಳಲ್ಲಿ ಕುಶಲಕರ್ಮಿಗಳಾಗಿ ಕೆಲಸ ಮಾಡುತ್ತಾರೆ. ಬಂಗಾಳಿ ಮಾಗಧಿ ಪ್ರಾಕೃತದಿಂದ ಹುಟ್ಟಿಕೊಂಡು, ಅಪಭ್ರಂಶ ವ್ಯುತ್ಪನ್ನವಾದ ಅಬಹತ್ತದಿಂದ ಅಭಿವೃದ್ಧಿಗೊಂಡಿತು. ಆಧುನಿಕ ಬಂಗಾಳಿ ಶಬ್ದಕೋಶವು ಮಾಗಧಿ ಪ್ರಾಕೃತ ಮತ್ತು ಪಾಲಿ ಶಬ್ದಕೋಶದ ಮೂಲವನ್ನು ಒಳಗೊಂಡಿದೆ. ಸಂಸ್ಕೃತದಿಂದ ಎರವಲು ಮತ್ತು ಇತರ ಪ್ರಮುಖ ಎರವಲುಗಳು ಪರ್ಷಿಯನ್, ಅರೇಬಿಕ್, ಆಸ್ಟ್ರೋಸಿಯಾಟಿಕ್ ಭಾಷೆಗಳು ಮತ್ತು ಇತರ ಭಾಷೆಗಳೊಂದಿಗೆ ಸಂಪರ್ಕದಲ್ಲಿದೆ. ಹೆಚ್ಚಿನ ಭಾರತೀಯ ಭಾಷೆಗಳಂತೆ, ಬೆಂಗಾಲಿಯು ಹಲವಾರು ಉಪಭಾಷೆಗಳನ್ನು ಹೊಂದಿದೆ. ಇದು ದ್ವಿಭಾಷಿಕತೆಯನ್ನು ಪ್ರದರ್ಶಿಸುತ್ತದೆ, ಸಾಹಿತ್ಯಿಕ ಮತ್ತು ಪ್ರಮಾಣಿತ ರೂಪವು ಭಾಷೆಯೊಂದಿಗೆ ಗುರುತಿಸುವ ಪ್ರದೇಶಗಳ ಆಡುಮಾತುಗಳಿಂದ ಹೆಚ್ಚು ಭಿನ್ನವಾಗಿರುತ್ತದೆ. ಬೆಂಗಾಲಿ ಭಾಷೆ ಕಲೆ, ಸಂಗೀತ, ಸಾಹಿತ್ಯ ಮತ್ತು ಧರ್ಮವನ್ನು ವ್ಯಾಪಿಸಿರುವ ಶ್ರೀಮಂತ ಸಾಂಸ್ಕೃತಿಕ ನೆಲೆಯನ್ನು ಅಭಿವೃದ್ಧಿಪಡಿಸಿದೆ. ಬೆಂಗಾಲಿಯು ಎಲ್ಲಾ ಆಧುನಿಕ ಇಂಡೋ-ಆರ್ಯನ್ ಭಾಷೆಗಳ ಕೆಲವು ಹಳೆಯ ಸುಮಾರು 10 ರಿಂದ 12 ನೇ ಶತಮಾನದವರೆಗೆ (' ಚಾರ್ಗಪದ ' ಬೌದ್ಧ ಹಾಡುಗಳು) ಸಾಹಿತ್ಯವನ್ನು ಹೊಂದಿದೆ. ಈ ಭಾಷೆಯ ರಕ್ಷಣೆಗಾಗಿ ಅನೇಕ ಚಳುವಳಿಗಳು ನಡೆದಿವೆ ಮತ್ತು 1999 ರಲ್ಲಿ ಯುನೆಸ್ಕೋ 1952 ರಲ್ಲಿ ಬಂಗಾಳಿ ಭಾಷಾ ಚಳುವಳಿಯ ಸ್ಮರಣಾರ್ಥವಾಗಿ ಫೆಬ್ರವರಿ 21 ಅನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವೆಂದು ಘೋಷಿಸಿತು. ಅಸ್ಸಾಮಿ thumb| ದಖಿನ್ಪತ್ ಸತ್ರದಿಂದ ಆರಂಭಿಕ ಅಸ್ಸಾಮಿಯಲ್ಲಿ ಬರೆಯಲಾದ ಭಾಗವತ ಹಸ್ತಪ್ರತಿ. ಅಸ್ಸಾಮಿಯಾ ಅಥವಾ ಅಸ್ಸಾಮಿ ಭಾಷೆಯು ಅಸ್ಸಾಂ ರಾಜ್ಯದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದು ಪೂರ್ವ ಇಂಡೋ-ಆರ್ಯನ್ ಭಾಷೆಯಾಗಿದ್ದು, ಮಿಲಿಯನ್  2011 ರ ಭಾರತದ ಜನಗಣತಿಯ ಪ್ರಕಾರ ಎರಡು ಭಾಷೆ ಮಾತನಾಡುವವರು 15 ಕ್ಕಿಂತ ಹೆಚ್ಚು ಸ್ಥಳೀರು ಮತ್ತು 7 ಮಿಲಿಯನ್‌ಗಿಂತ ಹೆಚ್ಚು ಭಾಷಿಕರು ಸೇರಿದಂತೆ ಒಟ್ಟು 23 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುತ್ತಾರೆ. ಇದರ ಜೊತೆಗೆ ಅಸ್ಸಾಮಿಯು ಕನಿಷ್ಟ 7 ನೇ ಶತಮಾನದ CE Sen, Sukumar (1975), Grammatical sketches of Indian languages with comparative vocabulary and texts, Volume 1, P 31 ಗಿಂತ ಮೊದಲು ಪೂರ್ವ ಇಂಡೋ-ಆರ್ಯನ್ ಭಾಷೆಗಳು, ಮಧ್ಯ ಇಂಡೋ-ಆರ್ಯನ್ ಮಾಗಧಿ ಪ್ರಾಕೃತದಿಂದ ವಿಕಸನಗೊಂಡಿತು. ಪೂರ್ವ ಇಂಡೋ-ಆರ್ಯನ್ ಭಾಷೆಗಳಲ್ಲಿ ಅಸ್ಸಾಮಿಯು ಅಸಾಮಾನ್ಯವಾಗಿದೆ (ಇದು, ಧ್ವನಿಮಾತ್ಮಕವಾಗಿ ಕಂಠ್ಯಧ‍ವನಿ ( [ x ] ) ಮತ್ತು ಉರೂಟಾದ ( [ χ ] ) ಉಚ್ಚಾರಣೆಗಳ ನಡುವೆ ಬದಲಾಗುತ್ತದೆ). ಎಂಟನೇ ಮತ್ತು ಹನ್ನೆರಡನೆಯ ಶತಮಾನದ ನಡುವೆ ರಚಿತವಾದ ಚಾರ್ಯಪದಗಳಲ್ಲಿ ಈ ಭಾಷೆಯ ಮೊದಲ ಲಕ್ಷಣಗಳು ಕಂಡುಬರುತ್ತವೆ. ಹದಿನಾಲ್ಕನೆಯ ಶತಮಾನದಲ್ಲಿ ಆಸ್ಥಾನ ಕವಿಗಳ ಬರಹಗಳಲ್ಲಿ ಮೊದಲ ಉದಾಹರಣೆಗಳು ಹೊರಹೊಮ್ಮಿದವು, ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಮಾಧವ್ ಕಂದಲಿಯ ಸಪ್ತಕಾಂಡ ರಾಮಾಯಣ, ಇದು 14 ನೇ ಶತಮಾನದ CE ಸಮಯದಲ್ಲಿ ರಾಮಾಯಣವನ್ನು ಇಂಡೋ-ಆರ್ಯನ್ ಭಾಷೆಗೆ ಅನುವಾದಿಸಿದ ಮೊದಲ ರಚನೆಯಾಗಿದೆ. ಮರಾಠಿ ಮರಾಠಿ ಇಂಡೋ-ಆರ್ಯನ್ ಭಾಷೆ. ಇದು ಕ್ರಮವಾಗಿ ಪಶ್ಚಿಮ ಭಾರತದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಅಧಿಕೃತ ಭಾಷೆ ಮತ್ತು ಸಹ-ಅಧಿಕೃತ ಭಾಷೆಯಾಗಿದೆ ಮತ್ತು ಇದು ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. 2011 ರಲ್ಲಿ 83 ಮಿಲಿಯನ್ ಜನರು ಈ ಭಾಷೆಯನ್ನು ಮಾತನಾಡುತ್ತಿದ್ದರು. ಮರಾಠಿಯು ಭಾರತದಲ್ಲಿ ಮೂರನೇ ಅತಿ ದೊಡ್ಡ ಸ್ಥಳೀಯ ಭಾಷಿಕರನ್ನು ಹೊಂದಿದೆ ಮತ್ತು ವಿಶ್ವದ ಹೆಚ್ಚು ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ಮರಾಠಿಯು ಎಲ್ಲಾ ಆಧುನಿಕ ಇಂಡೋ-ಆರ್ಯನ್ ಭಾಷೆಗಳ ಕೆಲವು ಹಳೆಯ ಸಾಹಿತ್ಯವನ್ನು ಹೊಂದಿದೆ; 8 ನೇ ಶತಮಾನದ ಅತ್ಯಂತ ಹಳೆಯ ಶಿಲಾ ಶಾಸನಗಳು ಮತ್ತು ಸುಮಾರು 1100 AD ಯ ಸಾಹಿತ್ಯ (ಮುಕುಂದರಾಜ್ ಅವರ ವಿವೇಕ ಸಿಂಧು 12 ನೇ ಶತಮಾನಕ್ಕೆ ಸೇರಿದೆ). ಮರಾಠಿಯ ಪ್ರಮುಖ ಉಪಭಾಷೆಗಳೆಂದರೆ ಸ್ಟ್ಯಾಂಡರ್ಡ್ ಮರಾಠಿ ಮತ್ತು ವರ್ಹಾಡಿ ಉಪಭಾಷೆ. ಖಂಡೇಶಿ, ಡಾಂಗಿ, ವಡ್ವಾಲಿ, ಸಾಮವೇದಿ ಮುಂತಾದ ಇತರ ಸಂಬಂಧಿತ ಭಾಷೆಗಳಿವೆ. ಮಾಲ್ವಾಣಿ ಕೊಂಕಣಿಯು ಮರಾಠಿ ಪ್ರಭೇದಗಳಿಂದ ಹೆಚ್ಚು ಪ್ರಭಾವಿತವಾಗಿದೆ. ಮಹಾರಾಷ್ಟ್ರಿ ಪ್ರಾಕೃತದಿಂದ ಬಂದ ಹಲವಾರು ಭಾಷೆಗಳಲ್ಲಿ ಮರಾಠಿಯೂ ಒಂದು. ಮುಂದೆ ಈ ಬದಲಾವಣೆಯು ಹಳೆಯ ಮರಾಠಿಯಂತಹ ಅಪಭ್ರಂಶ ಭಾಷೆಗಳಿಗೆ ಕಾರಣವಾಯಿತು. ಮರಾಠಿ ಭಾಷಾ ದಿನವನ್ನು (ಮರಾಠಿ ದಿನ/ಮರಾಠಿ ದಿವಸ್ (ಅನುವಾದ. ಮರಾಠಿ ದಿನ/ಮರಾಠಿ ದಿವಾಸ) ಪ್ರತಿ ವರ್ಷ ಫೆಬ್ರವರಿ 27 ರಂದು ಭಾರತದ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ರಾಜ್ಯ ಸರ್ಕಾರವು ನಿಯಂತ್ರಿಸುತ್ತದೆ. ಇದನ್ನು ಪ್ರಖ್ಯಾತ ಮರಾಠಿ ಕವಿ ಕುಸುಮಾಗ್ರಜ ಎಂದೇ ಖ್ಯಾತರಾದ ವಿ.ವಾ.ಶಿರವಾಡಕರ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಮರಾಠಿ ಮಹಾರಾಷ್ಟ್ರದ ಅಧಿಕೃತ ಭಾಷೆ ಮತ್ತು ದಾದ್ರಾ, ನಾಗರ ಹವೇಲಿ, ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ-ಅಧಿಕೃತ ಭಾಷೆಯಾಗಿದೆ. ಗೋವಾದಲ್ಲಿ, ಕೊಂಕಣಿ ಏಕೈಕ ಅಧಿಕೃತ ಭಾಷೆಯಾಗಿದೆ; ಆದರೂ ಮರಾಠಿಯನ್ನು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿಯೂ ಬಳಸುತ್ತಾರೆ.The Goa, Daman, and Diu Official Language Act, 1987 makes Konkani the official language, but provides that Marathi may also be used "for all or any of the official purposes". The Government also has a policy of replying in Marathi to correspondence received in Marathi. Commissioner Linguistic Minorities,, pp. para 11.3 ಹಲವು ಶತಮಾನಗಳ ಅವಧಿಯಲ್ಲಿ ಮರಾಠಿ ಭಾಷೆ ಮತ್ತು ಜನರು ಅನೇಕ ಇತರ ಭಾಷೆಗಳು ಮತ್ತು ಉಪಭಾಷೆಗಳೊಂದಿಗೆ ಸಂಪರ್ಕಕ್ಕೆ ಬಂದರು. ಪ್ರಾಕೃತ, ಮಹಾರಾಷ್ಟ್ರ, ಅಪಭ್ರಂಶ ಮತ್ತು ಸಂಸ್ಕೃತದ ಪ್ರಾಥಮಿಕ ಪ್ರಭಾವವು ಅರ್ಥವಾಗುವಂತಹದ್ದಾಗಿದೆ. ಮರಾಠಿಯು ಆಸ್ಟ್ರೋಯಾಸಿಯಾಟಿಕ್, ದ್ರಾವಿಡ ಮತ್ತು ವಿದೇಶಿ ಭಾಷೆಗಳಾದ ಪರ್ಷಿಯನ್ ಮತ್ತು ಅರೇಬಿಕ್ ಭಾಷೆಗಳಿಂದ ಕೂಡ ಪ್ರಭಾವಿತವಾಗಿದೆ . ಮರಾಠಿಯು ಪರ್ಷಿಯನ್, ಅರೇಬಿಕ್, ಇಂಗ್ಲಿಷ್ ಮತ್ತು ಸ್ವಲ್ಪ ಫ್ರೆಂಚ್ ಮತ್ತು ಪೋರ್ಚುಗೀಸ್‌ನಿಂದ ಎರವಲು ಪದಗಳನ್ನು ಪಡಕೊಂಡಿದೆ. ಮೈತೇಯಿ ಮೈತೇಯಿ ಭಾಷೆ (ಅಧಿಕೃತವಾಗಿ ಮಣಿಪುರಿ ಭಾಷೆ ಎಂದು ಕರೆಯಲಾಗುತ್ತದೆ) ಅತ್ಯಂತ ವ್ಯಾಪಕವಾಗಿ ಮಾತನಾಡುವ ಟಿಬೆಟೊ-ಬರ್ಮನ್ ಭಾಷಾ ಉಪ ಶಾಖೆಯ ಭಾರತೀಯ ಸೈನೋ-ಟಿಬೆಟಿಯನ್ ಭಾಷೆಯಾಗಿದೆ . ಇದು ಮಣಿಪುರದ ಏಕೈಕ ಅಧಿಕೃತ ಭಾಷೆಯಾಗಿದೆ ಮತ್ತು ಇದು ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಇದು ಬೋಡೋ ಜೊತೆಗೆ ಭಾರತದಲ್ಲಿ ಅಧಿಕೃತ ಸ್ಥಾನಮಾನವನ್ನು ಹೊಂದಿರುವ ಎರಡು ಸೈನೋ-ಟಿಬೆಟಿಯನ್ ಭಾಷೆಗಳಲ್ಲಿ ಒಂದಾಗಿದೆ. ಇದನ್ನು ಶ್ರೀಮಂತ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಸಾಹಿತ್ಯ ಅಕಾಡೆಮಿಯಿಂದ ಭಾರತದ ಮುಂದುವರಿದ ಆಧುನಿಕ ಭಾಷೆಗಳಲ್ಲಿ ಒಂದೆಂದು ಗುರುತಿಸಲಾಗಿದೆ. ಇದು ಬರವಣಿಗೆಗಾಗಿ ಮೈತೇಯಿ ಲಿಪಿ ಮತ್ತು ಬಂಗಾಳಿ ಲಿಪಿ ಎರಡನ್ನೂ ಬಳಸುತ್ತದೆ. ಪ್ರಸ್ತುತವಾಗಿ ಮೈತೇಯಿ ಭಾಷೆಯನ್ನು ಭಾರತದ " ಶಾಸ್ತ್ರೀಯ ಭಾಷೆಗಳ " ಗಣ್ಯ ವರ್ಗದಲ್ಲಿ ಸೇರಿಸಲು ಪ್ರಸ್ತಾಪಿಸಲಾಗಿದೆ. ಇದಲ್ಲದೆ, ಇದನ್ನು ಪ್ರಸ್ತುತ ಅಸ್ಸಾಂ ಸರ್ಕಾರದ ಸಹವರ್ತಿ ಅಧಿಕೃತ ಭಾಷೆಯಾಗಲು ಪ್ರಸ್ತಾಪಿಸಲಾಗಿದೆ. ಮಣಿಪುರದ ಪ್ರಸ್ತುತ ಪಟ್ಟದ ರಾಜ ಮತ್ತು ಮಣಿಪುರ ರಾಜ್ಯದ ರಾಜ್ಯಸಭಾ ಸದಸ್ಯರಾಗಿರುವ ಲೀಶೆಂಬಾ ಸನಜಯೋಬಾ ಅವರ ಪ್ರಕಾರ, ಮೈತೇಯಿಯನ್ನು ಅಸ್ಸಾಂನ ಸಹವರ್ತಿ ಅಧಿಕೃತ ಭಾಷೆಯಾಗಿ ಗುರುತಿಸುವ ಮೂಲಕ, ಅಸ್ಸಾಂನಲ್ಲಿ ನೆಲೆಸಿರುವ ಮಣಿಪುರಿಯರ ಗುರುತು, ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸಬಹುದು ಎಂಬ ಅಭಿಪ್ರಾಯವಿದೆ. ಮಣಿಪುರ, ಅಸ್ಸಾಂ ಮತ್ತು ತ್ರಿಪುರಾ ರಾಜ್ಯಗಳಾದ್ಯಂತ ಮಣಿಪುರಿಗಳು ಪ್ರತಿ ವರ್ಷ ಆಗಸ್ಟ್ 20 ರಂದು ಮೈತೇಯಿ ಭಾಷಾ ದಿನ ( ಮಣಿಪುರಿ ಭಾಷಾ ದಿನ ) ಆಚರಿಸುತ್ತಾರೆ. ಈ ದಿನವನ್ನು ಮಣಿಪುರ ಸರ್ಕಾರವು ಆಚರಿಸುತ್ತದೆ. 20 ಆಗಸ್ಟ್ 1992 ರಂದು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮೈತೀಯನ್ನು ಸೇರಿಸಿದ ದಿನದ ಸ್ಮರಣಾರ್ಥವಾಗಿದೆ. ತೆಲುಗು ತೆಲುಗು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಹೆಚ್ಚು ವ್ಯಾಪಕವಾಗಿ ಮಾತನಾಡುವ ದ್ರಾವಿಡ ಭಾಷೆಯಾಗಿದೆ. ತೆಲುಗು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಯಾನಂನಲ್ಲಿ ಅಧಿಕೃತ ಭಾಷೆಯಾಗಿದೆ, ಇದು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕೃತ ಸ್ಥಾನಮಾನವನ್ನು ಹೊಂದಿರುವ ಕೆಲವೇ ಭಾಷೆಗಳಲ್ಲಿ (ಹಿಂದಿ, ಬಂಗಾಳಿ ಮತ್ತು ಉರ್ದು ಜೊತೆಗೆ) ಒಂದಾಗಿದೆ. ಇದನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್‌ಗಢ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಗುಜರಾತ್ ಮತ್ತು ಶ್ರೀಲಂಕಾದ ಜಿಪ್ಸಿ ಜನರು ಗಮನಾರ್ಹ ಸಂಖ್ಯೆಯ ಜನರು ಮಾತನಾಡುತ್ತಾರೆ. ಇದು ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಆರು ಭಾಷೆಗಳಲ್ಲಿ ಒಂದಾಗಿದೆ. ಭಾರತದಲ್ಲಿ ಸ್ಥಳೀಯ ಮಾತನಾಡುವವರ ಸಂಖ್ಯೆಯಿಂದ ತೆಲುಗು ನಾಲ್ಕನೇ ಸ್ಥಾನದಲ್ಲಿದೆ (2011 ರ ಜನಗಣತಿಯಲ್ಲಿ 81 ಮಿಲಿಯನ್), ಪ್ರಪಂಚದಾದ್ಯಂತ ಹೆಚ್ಚು ಮಾತನಾಡುವ ಭಾಷೆಗಳ ಎಥ್ನೋಲಾಗ್ ಪಟ್ಟಿಯಲ್ಲಿ ಹದಿನೈದನೆಯದು ಮತ್ತು ಹೆಚ್ಚು ವ್ಯಾಪಕವಾಗಿ ಮಾತನಾಡುವ ದ್ರಾವಿಡ ಭಾಷೆಯಾಗಿದೆ. ತಮಿಳು thumb|15ನೇ ಶತಮಾನದ ತಮಿಳು ಧಾರ್ಮಿಕ ಕವನ ಸಂಕಲನವನ್ನು ಗಣೇಶನಿಗೆ ಸಮರ್ಪಿಸಲಾಗಿದೆ ತಮಿಳುನಾಡು, ಪುದುಚೇರಿ ಮತ್ತು ಶ್ರೀಲಂಕಾದ ಹಲವು ಭಾಗಗಳಲ್ಲಿ ಪ್ರಧಾನವಾಗಿ ಮಾತನಾಡುವ ದ್ರಾವಿಡ ಭಾಷೆ ತಮಿಳು. ಇದನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಲೇಷ್ಯಾ, ಸಿಂಗಾಪುರ್, ಮಾರಿಷಸ್ ಮತ್ತು ಪ್ರಪಂಚದಾದ್ಯಂತ ದೊಡ್ಡ ಅಲ್ಪಸಂಖ್ಯಾತರು ಮಾತನಾಡುತ್ತಾರೆ. ಭಾರತದಲ್ಲಿ ಸ್ಥಳೀಯ ಮಾತನಾಡುವವರ ಸಂಖ್ಯೆಯಲ್ಲಿ ತಮಿಳು ಐದನೇ ಸ್ಥಾನದಲ್ಲಿದೆ (2001 ರ ಜನಗಣತಿಯಲ್ಲಿ 61 ಮಿಲಿಯನ್) ಮತ್ತು ಹೆಚ್ಚು ಮಾತನಾಡುವ ಭಾಷೆಗಳ ಪಟ್ಟಿಯಲ್ಲಿ 20 ನೇ ಸ್ಥಾನದಲ್ಲಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಸಾಕ್ಷ್ಯಾಧಾರ ಬೇಕಾಗಿದೆ] ಇದು ಭಾರತದ 22 ಅನುಸೂಚಿತ ಭಾಷೆಗಳಲ್ಲಿ ಒಂದಾಗಿದೆ ಮತ್ತು 2004 ರಲ್ಲಿ ಭಾರತ ಸರ್ಕಾರವು ಶಾಸ್ತ್ರೀಯ ಭಾಷೆಯಾಗಿ ಘೋಷಿಸಿದ ಮೊದಲ ಭಾರತೀಯ ಭಾಷೆಯಾಗಿದೆ. ಪ್ರಪಂಚದಲ್ಲಿ ಬಹುಕಾಲ ಉಳಿದಿರುವ ಶಾಸ್ತ್ರೀಯ ಭಾಷೆಗಳಲ್ಲಿ ತಮಿಳು ಕೂಡ ಒಂದು. ಇದನ್ನು "ಶಾಸ್ತ್ರೀಯ ಭೂತಕಾಲದೊಂದಿಗೆ ಗುರುತಿಸಬಹುದಾದ ನಿರಂತರವಾದ ಸಮಕಾಲೀನ ಭಾರತದ ಏಕೈಕ ಭಾಷೆ" ಎಂದು ವಿವರಿಸಲಾಗಿದೆ. 1997 ಮತ್ತು 2005 ರಲ್ಲಿ ಯುನೆಸ್ಕೋ ಮೆಮೊರಿ ಆಫ್ ದಿ ವರ್ಲ್ಡ್ ರಿಜಿಸ್ಟರ್‌ನಿಂದ ಅಂಗೀಕರಿಸಲ್ಪಟ್ಟ ಮತ್ತು ನೋಂದಾಯಿಸಲ್ಪಟ್ಟ ಭಾರತದ ಎರಡು ಆರಂಭಿಕ ಹಸ್ತಪ್ರತಿಗಳು, ತಮಿಳು ಭಾಷೆಯಲ್ಲಿವೆ. ತಮಿಳುನಾಡು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಶ್ರೀಲಂಕಾ ಮತ್ತು ಸಿಂಗಾಪುರದ ಅಧಿಕೃತ ಭಾಷೆ ತಮಿಳು. ಇದು ಕೆನಡಾ, ಮಲೇಷಿಯಾ, ಮಾರಿಷಸ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಅಲ್ಪಸಂಖ್ಯಾತ ಭಾಷೆಯಾಗಿ ಗುರುತಿಸಲ್ಪಟ್ಟಿದೆ. ಉರ್ದು ಸ್ವಾತಂತ್ರ್ಯದ ನಂತರ, ಮಾಡರ್ನ್ ಸ್ಟ್ಯಾಂಡರ್ಡ್ ಉರ್ದು, ಹಿಂದೂಸ್ತಾನಿಯ ಪರ್ಷಿಯನ್ ರಿಜಿಸ್ಟರ್ ಪಾಕಿಸ್ತಾನದ ರಾಷ್ಟ್ರೀಯ ಭಾಷೆಯಾಯಿತು. ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ, ಅಧಿಕಾರಿಗಳಿಗೆ ಹಿಂದೂಸ್ತಾನಿ ಅಥವಾ ಉರ್ದು ಜ್ಞಾನವು ಅತ್ಯಗತ್ಯವಾಗಿತ್ತು. ಇಂಗ್ಲಿಷ್ ನಂತರ ಹಿಂದೂಸ್ತಾನಿಯನ್ನು ಬ್ರಿಟಿಷ್ ಭಾರತೀಯ ಸಾಮ್ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡಲಾಯಿತು ಮತ್ತು ಆಡಳಿತದ ಭಾಷೆ ಎಂದು ಪರಿಗಣಿಸಲಾಯಿತು. ಸಾಕ್ಷ್ಯಾಧಾರ ಬೇಕಾಗಿದೆ] ಬ್ರಿಟಿಷರು ಹಿಂದೂಸ್ತಾನಿ ಮತ್ತು ಇತರ ಭಾಷೆಗಳಿಗೆ ರೋಮನ್ ಲಿಪಿಯ ಬಳಕೆಯನ್ನು ಪರಿಚಯಿಸಿದರು. ಭಾರತದಲ್ಲಿ ಉರ್ದು 70 ಮಿಲಿಯನ್ ಭಾಷಿಗರನ್ನು ಹೊಂದಿತ್ತು (2001 ರ ಜನಗಣತಿಯ ಪ್ರಕಾರ), ಮತ್ತು ಹಿಂದಿಯೊಂದಿಗೆ, ಭಾರತದ ಅಧಿಕೃತವಾಗಿ ಗುರುತಿಸಲ್ಪಟ್ಟ 22 ಪ್ರಾದೇಶಿಕ ಭಾಷೆಗಳಲ್ಲಿ ಒಂದಾಗಿದೆ ಮತ್ತು ಆಂಧ್ರಪ್ರದೇಶದ"Urdu second official language in Andhra Pradesh". Deccan Chronicle (in ಇಂಗ್ಲಿಷ್). 2022-03-24. Retrieved 2022-03-26., ಜಮ್ಮುವಿನ ಭಾರತೀಯ ರಾಜ್ಯಗಳಲ್ಲಿ ಮತ್ತು ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕಾಶ್ಮೀರ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ತೆಲಂಗಾಣ ಅಧಿಕೃತ ಭಾಷೆಯಾಗಿದೆ. ಗುಜರಾತಿ ಗುಜರಾತಿ ಇಂಡೋ-ಆರ್ಯನ್ ಭಾಷೆ . ಇದು ಗುಜರಾತ್‌ನ ಪಶ್ಚಿಮ ಭಾರತದ ಪ್ರದೇಶಕ್ಕೆ ಸ್ಥಳೀಯವಾಗಿದೆ. ಗುಜರಾತಿ ಹೆಚ್ಚಿನ ಇಂಡೋ-ಯುರೋಪಿಯನ್ ಭಾಷಾ ಕುಟುಂಬದ ಭಾಗವಾಗಿದೆ. ಗುಜರಾತಿಯು ಹಳೆಯ ಗುಜರಾತಿಯಿಂದ ವಂಶಸ್ಥರು (ಸುಮಾರು 1100 - 1500 CE), ರಾಜಸ್ಥಾನಿ ಮೂಲದ ಅದೇ ಮೂಲ. ಗುಜರಾತಿ ಭಾರತದ ಗುಜರಾತ್ ರಾಜ್ಯದಲ್ಲಿ ಮುಖ್ಯ ಮತ್ತು ಅಧಿಕೃತ ಭಾಷೆಯಾಗಿದೆ. ಇದು ದಮನ್ ಮತ್ತು ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕೃತ ಭಾಷೆಯಾಗಿದೆ. ಕೇಂದ್ರೀಯ ಗುಪ್ತಚರ ಸಂಸ್ಥೆ (CIA) ಪ್ರಕಾರ, ಭಾರತದ ಜನಸಂಖ್ಯೆಯ 4.5% (1.21) 2011 ರ ಜನಗಣತಿಯ ಪ್ರಕಾರ ಬಿಲಿಯನ್) ಗುಜರಾತಿ ಮಾತನಾಡುತ್ತಾರೆ. ಇದು 54.6 ರಷ್ಟಿದೆ ಭಾರತದಲ್ಲಿ ಮಿಲಿಯನ್ ಜನರು ಮಾತನಾಡುತ್ತಾರೆ. ಕನ್ನಡ ದ್ರಾವಿಡ ವಿದ್ವಾಂಸ ಜ್ವೆಲೆಬಿಲ್ ಪ್ರಕಾರ ಕನ್ನಡವು ದ್ರಾವಿಡ ಭಾಷೆಯಾಗಿದ್ದು, ಇದು ಸುಮಾರು ಕ್ರಿ.ಪೂ.500ರಲ್ಲಿ ಕನ್ನಡ-ತಮಿಳು ಉಪ ಗುಂಪಿನಿಂದ ಕವಲೊಡೆಯಿತು.Zvelebil in H. Kloss & G.D. McConnell; Constitutional languages, p.240, Presses Université Laval, 1 Jan 1989, ಇದು ಕರ್ನಾಟಕದ ಅಧಿಕೃತ ಭಾಷೆಯಾಗಿದೆ. ದ್ರಾವಿಡ ವಿದ್ವಾಂಸರಾದ ಸ್ಟೀವರ್ ಮತ್ತು ಕೃಷ್ಣಮೂರ್ತಿಯವರ ಪ್ರಕಾರ, ಕನ್ನಡ ಭಾಷೆಯ ಅಧ್ಯಯನವನ್ನು ಸಾಮಾನ್ಯವಾಗಿ ಮೂರು ಭಾಷಾ ಹಂತಗಳಾಗಿ ವಿಂಗಡಿಸಲಾಗಿದೆ: ಹಳೆಯ (450ರಿಂದ-1200ರ ವರೆಗೆ), ಮಧ್ಯ (1200ರಿಂದ-1700ರ ವರೆಗೆ) ಮತ್ತು ಆಧುನಿಕ (1700ರಿಂದ-ಇಂದಿನವರೆಗೆ)Steever, S. B., The Dravidian Languages (Routledge Language Family Descriptions), 1998, p.129, London, Routledge, Krishnamurti, Bhadriraju, The Dravidian Languages (Cambridge Language Surveys), 2003, p.23, Cambridge and London: Cambridge University Press, . ಆರಂಭಿಕ ಲಿಖಿತ ದಾಖಲೆಗಳು 5 ನೇ ಶತಮಾನದಿಂದ ಬಂದವುH. Kloss & G.D. McConnell, Constitutional languages, p.239, Presses Université Laval, 1 Jan 1989, , ಮತ್ತು ಶ್ರೀಮಂತ ಹಸ್ತಪ್ರತಿಯಲ್ಲಿ ( ಕವಿರಾಜಮಾರ್ಗ ) ಲಭ್ಯವಿರುವ ಆರಂಭಿಕ ಸಾಹಿತ್ಯವು ಕ್ರಿ,ಶ.850Narasimhacharya R; History of Kannada Literature, p.2, 1988, Asian Educational Services, New Delhi, Sastri, Nilakanta K.A.; A history of South India from prehistoric times to the fall of Vijayanagar, 1955, 2002, India Branch of Oxford University Press, New Delhi, . ಕನ್ನಡ ಭಾಷೆಯು ಭಾರತದ ಎಲ್ಲಾ ಭಾಷೆಗಳಲ್ಲಿ ಎರಡನೆಯ ಹಳೆಯ ಲಿಖಿತ ಪ್ರಾಚೀನತೆಯನ್ನು ಹೊಂದಿದೆas, Sisir Kumar; A History of Indian Literature, 500–1399: From Courtly to the Popular, pp.140–141, Sahitya Akademi, 2005, New Delhi, R Zydenbos in Cushman S, Cavanagh C, Ramazani J, Rouzer P, The Princeton Encyclopedia of Poetry and Poetics: Fourth Edition, p.767, Princeton University Press, 2012, . ಕರ್ನಾಟಕದಲ್ಲಿ ಪ್ರಸ್ತುತ ಇರುವ ಒಟ್ಟು ಶಿಲಾಶಾಸನಗಳ ಸಂಖ್ಯೆಯು 25,000 ರಿಂದ 30,000 ಕ್ಕೂ ಹೆಚ್ಚು ಸಾಹಿತ್ಯ ಅಕಾಡೆಮಿಯಿಂದ 30,000 ವರೆಗೆ ಇರುತ್ತದೆ ಎಂದು ವಿದ್ವಾಂಸ ಶೆಲ್ಡನ್ ಪೊಲಾಕ್ಅಭಿಪ್ರಾಯ ಪಟ್ಟಿದ್ದಾರೆ.Datta, Amaresh; Encyclopaedia of Indian literature – vol 2, p.1717, 1988, Sahitya Akademi, ಗಾರ್ಗ್ ಮತ್ತು ಶಿಪೆಲಿ ಅವರ ಪ್ರಕಾರ, ಇದು ಕರ್ನಾಟಕ ರಾಜ್ಯವನ್ನು "ವಿಶ್ವದ ರಿಯಲ್ ಎಸ್ಟೇಟ್‌ನ ಅತ್ಯಂತ ದಟ್ಟವಾಗಿ ಕೆತ್ತಲಾದ ತುಣುಕುಗಳಲ್ಲಿ ಒಂದಾಗಿದೆ"Sheldon Pollock in Dehejia, Vidya; The Body Adorned: Sacred and Profane in Indian Art, p.5, chapter:The body as Leitmotif, 2013, Columbia University Press, ಸಾವಿರಕ್ಕೂ ಹೆಚ್ಚು ಪ್ರಸಿದ್ಧ ಬರಹಗಾರರು ಭಾಷೆಯ ಸಂಪತ್ತಿಗೆ ಕೊಡುಗೆ ನೀಡಿದ್ದಾರೆ.Garg, Gaṅgā Rām; Encyclopaedia of the Hindu World, Volume 1, p.68, Concept Publishing Company, 1992, New Delhi, Shipley, Joseph T.; Encyclopedia of Literature – Vol I, p.528, 2007, READ BOOKS, ಮಲಯಾಳಂ ಒಡಿಯಾ ಸಂತಾಲಿ ಪಂಜಾಬಿ ಮೈಥಿಲಿ ಮೈಥಿಲಿ / / ˈmaɪtɪli / ; [ 1 ಮೈಥಿಲಿ ) ಭಾರತ ಮತ್ತು ನೇಪಾಳದ ಸ್ಥಳೀಯ ಇಂಡೋ-ಆರ್ಯನ್ ಭಾಷೆಯಾಗಿದೆ. ಭಾರತದಲ್ಲಿ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಇದನ್ನು ವ್ಯಾಪಕವಾಗಿ ಮಾತನಾಡುತ್ತಾರೆ."मैथिली लिपि को बढ़ावा देने के लिए विशेषज्ञों की जल्द ही बैठक बुला सकते हैं प्रकाश जावड़ेकर". NDTVIndia. "मैथिली को भी मिलेगा दूसरी राजभाषा का दर्जा". Hindustan. ಸ್ಥಳೀಯ ಭಾಷಿಕರು ಭಾರತದ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷವಾಗಿ ಉತ್ತರ ಪ್ರದೇಶ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದಲ್ಲಿ ಕಂಡುಬರುತ್ತಾರೆ."BJP trying to influence Maithil voters in delhi | मैथिल मतदाताओं को मोहने की कोशिश में है बीजेपी, दिल्ली में हैं कुल 40 लाख वोटर्स| Hindi News, बिहार एवं झारखंड". zeenews.india.com. ಭಾರತದ 2011 ರ ಜನಗಣತಿಯಲ್ಲಿ, 13,583,464 ಜನರು ತಮ್ಮ ಮಾತೃಭಾಷೆ ಎಂದು ವರದಿ ಮಾಡಿದ್ದಾರೆ. ಇದು ಭಾರತದ ಒಟ್ಟು ಜನಸಂಖ್ಯೆಯ 1.12% ರಷ್ಟಿದೆ.Rise in Hindi language speakers, Statement-4 Retrieved on 22 February 2020 ನೇಪಾಳದಲ್ಲಿ, ಇದನ್ನು ಪೂರ್ವ ಟೆರೈನಲ್ಲಿ ಮಾತನಾಡುತ್ತಾರೆ ಮತ್ತು ನೇಪಾಳದ ಎರಡನೇ ಅತ್ಯಂತ ಪ್ರಚಲಿತ ಭಾಷೆಯಾಗಿದೆ.Sah, K. K. (2013). "Some perspectives on Maithili". Nepalese Linguistics (28): 179–188. ತಿರ್ಹುತವು ಹಿಂದೆ ಲಿಖಿತ ಮೈಥಿಲಿಯ ಪ್ರಾಥಮಿಕ ಲಿಪಿಯಾಗಿತ್ತು.Brass, P. R. (2005). Language, Religion and Politics in North India. Lincoln: iUniverse. ISBN 0-595-34394-5. Retrieved 1 April 2017. ಸಾಮಾನ್ಯವಾಗಿ, ಇದನ್ನು ಕೈಥಿಯ ಸ್ಥಳೀಯ ರೂಪಾಂತರದಲ್ಲಿ ಬರೆಯಲಾಗಿದೆ. ಇಂದು ಇದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ.Yadava, Y. P. (2013). Linguistic context and language endangerment in Nepal. Nepalese Linguistics 28: 262–274. 2003 ರಲ್ಲಿ, ಮೈಥಿಲಿಯನ್ನು ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಭಾರತದ ಮಾನ್ಯತೆ ಪಡೆದ ಪ್ರಾದೇಶಿಕ ಭಾಷೆಯಾಗಿ ಸೇರಿಸಲಾಯಿತು, ಇದರಿಂದಾಗಿ ಶಿಕ್ಷಣ, ಸರ್ಕಾರ ಮತ್ತು ಇತರ ಅಧಿಕೃತ ಸಂದರ್ಭಗಳಲ್ಲಿ ಬಳಸಲು ಅನುಮತಿಯಿದೆ.Singh, P., & Singh, A. N. (2011). Finding Mithila between India's Centre and Periphery. Journal of Indian Law & Society 2: 147–181. ಸಹ ನೋಡಿ ಕೆರಿಬಿಯನ್ ಹಿಂದೂಸ್ತಾನಿ ಫಿಜಿ ಹಿಂದಿ ಇಂಡೋ-ಪೋರ್ಚುಗೀಸ್ ಕ್ರಿಯೋಲ್ಗಳು ಬಾಂಗ್ಲಾದೇಶದ ಭಾಷೆಗಳು ಭೂತಾನ್ ಭಾಷೆಗಳು ಚೀನಾದ ಭಾಷೆಗಳು ಫಿಜಿ ಭಾಷೆಗಳು ಗಯಾನಾ ಭಾಷೆಗಳು ಮಲೇಷಿಯಾದ ಭಾಷೆಗಳು ಮಾಲ್ಡೀವ್ಸ್ ಭಾಷೆಗಳು ಮಾರಿಷಸ್ ಭಾಷೆಗಳು ಮ್ಯಾನ್ಮಾರ್ ಭಾಷೆಗಳು ನೇಪಾಳದ ಭಾಷೆಗಳು ಪಾಕಿಸ್ತಾನದ ಭಾಷೆಗಳು ರಿಯೂನಿಯನ್ ಭಾಷೆಗಳು ಸಿಂಗಾಪುರದ ಭಾಷೆಗಳು ಶ್ರೀಲಂಕಾದ ಭಾಷೆಗಳು ಟ್ರಿನಿಡಾಡ್ ಮತ್ತು ಟೊಬಾಗೊದ ಭಾಷೆಗಳು ಭಾರತದಲ್ಲಿ ಅಳಿವಿನಂಚಿನಲ್ಲಿರುವ ಭಾಷೆಗಳ ಪಟ್ಟಿ ಭಾರತದಲ್ಲಿ ಸ್ಥಳೀಯ ಮಾತನಾಡುವವರ ಸಂಖ್ಯೆಯ ಪ್ರಕಾರ ಭಾಷೆಗಳ ಪಟ್ಟಿ ರಾಷ್ಟ್ರೀಯ ಅನುವಾದ ಮಿಷನ್ ಸಿಂಧಿಯ ರೋಮನೀಕರಣ ತಮಿಳು ಡಯಾಸ್ಪೊರಾ ತೆಲುಗು ಡಯಾಸ್ಪೊರಾ ಟಿಪ್ಪಣಿಗಳು ಉಲ್ಲೇಖಗಳು ಬಾಹ್ಯ ಕೊಂಡಿಗಳು ಸೆವೆನ್ ಸಿಸ್ಟರ್ ಸ್ಟೇಟ್ಸ್ (ಭಾರತ) ವಿವರವಾದ ನಕ್ಷೆಯೊಂದಿಗೆ ಭಾರತದ ಭಾಷಾ ನಕ್ಷೆ ಭಾರತದ ಭಾಷೆಗಳು ಮತ್ತು ಲಿಪಿಗಳು ಭಾರತದಲ್ಲಿನ ಭಾಷೆಗಳ ವೈವಿಧ್ಯ ಭಾರತೀಯ ಭಾಷೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಸಮಗ್ರ ಫೆಡರಲ್ ಸರ್ಕಾರಿ ಸೈಟ್ ಭಾರತೀಯ ಭಾಷೆಗಳಿಗೆ ತಂತ್ರಜ್ಞಾನ ಅಭಿವೃದ್ಧಿ, ಭಾರತ ಸರ್ಕಾರ ಹಿಮಾಚಲ ಪ್ರದೇಶದಲ್ಲಿ ಮಾತನಾಡುವ ಭಾಷೆಗಳು – ಹಿಮಾಚಲ ಪರೀಕ್ಷೆ ವರ್ಗ:ಭಾಷೆಗಳು ವರ್ಗ:ಭಾಷೆ ವರ್ಗ:ಭಾಷಾ ಕುಟುಂಬಗಳು ವರ್ಗ:ಭಾಷಾ ವಿಜ್ಞಾನ ವರ್ಗ:ಭಾರತ ವರ್ಗ:ಭಾರತದ ಸಂವಿಧಾನ ವರ್ಗ:ಭಾರತೀಯ ಭಾಷೆಗಳು
ದ್ರಾವಿಡ ಭಾಷೆಗಳು
https://kn.wikipedia.org/wiki/ದ್ರಾವಿಡ_ಭಾಷೆಗಳು
middle|250px|ಡ್ರಾವಿಡ ಭಾಷೆಗಳ ಭೌಗೋಳಿಕ ವ್ಯಾಪಕತೆ ದ್ರಾವಿಡ ಭಾಷೆಗಳು ಭಾರತೀಯ ಉಪಖಂಡದ ಒಂದು ಭಾಷಾ ಕುಟುಂಬವಾಗಿದೆ. ದ್ರಾವಿಡ ಭಾಷೆಗಳು ದಕ್ಷಿಣ ಭಾರತ, ಮಧ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಯಾವುದೇ ಬೇರೆಯ ಭಾಷಾಕುಟುಂಬಕ್ಕೆ ಸೇರಿದೆಯೇ ಎಂದು ತಿಳಿದುಕೊಳ್ಳಲು ಬಹಳ ಸಂಶೋಧನೆಗಳು ನಡೆದಿವೆಯಾದರೂ, ಖಚಿತವಾದ ಸಂಬಂಧವು ಈವರೆಗೂ ದೊರೆತಿಲ್ಲ. ಹೀಗಾಗಿ ಇದನ್ನು ಒಂದು ಸ್ವತಂತ್ರ ಭಾಷಾ ಕುಟುಂಬವೆಂದೇ ಪರಿಗಣಿಸಲಾಗಿದೆ. ದ್ರಾವಿಡ ಭಾಷೆಗಳ ಮೂಲ ಭಾಷೆಯಾದ ಪೂರ್ವ ದ್ರಾವಿಡಭಾಷೆಯು ಇತಿಹಾಸ ಪೂರ್ವಕಾಲದಲ್ಲಿ, ಅನೇಕ ವರ್ಷಗಳ ಹಿಂದೆಯೇ ಭಾರತದಲ್ಲೇ ಜನಿಸಿತು ಎಂದು ಹೇಳಲಾಗುತ್ತದೆ.ದ್ರಾವಿಡಭಾಷೆಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳಿದ್ದು ಜಗತ್ತಿನ ಬೇರೆ ಯಾವುದೇ ಭಾಷಾವಂಶದ ಜೊತೆ ಸಂಬಂಧವಿರುವಂತೆ ತೋರುವುದಿಲ್ಲ. ದ್ರಾವಿಡ ಭಾ‌ಷಾ ವರ್ಗವು ಸುಮಾರು ೮೫ ಭಾಷೆಗಳನ್ನು ಒಳಗೊಂಡಿದ್ದು ಸುಮಾರು ೨೧೭ ದಶಲಕ್ಷ ಜನರು ಮಾತನಾಡುತ್ತಾರೆ. ಇವು ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮತ್ತು ಈಶಾನ್ಯ ಶ್ರೀಲಂಕ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನ್, ಮಲೇಷಿಯಾ, ಸಿಂಗಪುರಗಳಲ್ಲಿ ಬಳಕೆಯಲ್ಲಿವೆ. ಉಗಮ ದ್ರಾವಿಡ ಜನಾಂಗದ ಭಾಷೆ ದ್ರಾವಿಡ ಭಾಷೆ. ದ್ರಾವಿಡರು ಭಾರತದ ಮೂಲ ನಿವಾಸಿಗಳು ಎಂದು ಹೇಳಲಾಗುತ್ತದೆ. ಕಾಲ ಕಳೆದಂತೆ ಅವರಲ್ಲೇ ಗುಂಪುಗಳುಂಟಾದವು. ಭೌಗೋಳಿಕ ಸಾಮಾಜಿಕ ಭಾಷಿಕ ಕಾರಣಗಳಿಂದಾಗಿ ಅವರು ಆಡುತ್ತಿದ್ದ ಭಾಷೆಯಲ್ಲಿ ಪ್ರಭೇದಗಳುಂಟಾದುವು. ಮೊದಲು ಬಂದ ದ್ರಾವಿಡ ಜನಾಂಗದವರು ಆಡುತ್ತಿದ್ದ ದ್ರಾವಿಡ ಭಾಷೆಯನ್ನು ಮೂಲ ದ್ರಾವಿಡ ಭಾಷೆಯೆಂದು ನಿರ್ದೇಶಿಸುವುದು ವಾಡಿಕೆ. ಮೂಲಜನಾಂಗ ಪಂಗಡ ಪಂಗಡಗಳಾಗಿ ವಿಂಗಡವಾದಂತೆ ಮೂಲಭಾಷೆಯೂ ಭಿನ್ನಭಿನ್ನ ಭಾಷೆ-ಉಪಭಾಷೆಗಳಾಗಿ ಒಡೆದುಕೊಂಡವು. ಮೂಲಬೇರಿನಿಂದ ಹೀಗೆ ಬೇರೆಯಾಗಿ ಕವಲಾದ ಭಾಷೆಗಳೇ ದ್ರಾವಿಡ ಭಾಷೆಗಳು. ದ್ರಾವಿಡ ಗುಂಪುಗಳಲ್ಲಿ ಸಂಪರ್ಕ ತಗ್ಗಿದಂತೆ, ತಪ್ಪಿದಂತೆ ವ್ಯತ್ಯಾಸಗಳೂ ಹೆಚ್ಚತೊಡಗಿದುವು. ವೈವಿಧ್ಯತೆ ಈಗಿನ ಭಾಷಾ ಸಮೀಕ್ಷೆಯ ಲೆಕ್ಕದಂತೆ ಇಂಥ ಇಪ್ಪತ್ತೈದು ದ್ರಾವಿಡ ಭಾಷೆಗಳು ಇಂದು ಪ್ರಚಾರದಲ್ಲಿವೆ. ಇವಿಷ್ಟೇ ದ್ರಾವಿಡಭಾಷೆಗಳೆಂದು ಕಡೆಯ ಮಾತಾಗಿ ಹೇಳುವುದು ಸಾಧ್ಯವಿಲ್ಲ. ಕನ್ನಡ ನಾಡಿನ ಆಗುಂಬೆ, ಬಾಳೆಬರೆ ಬೆಟ್ಟಗಳಲ್ಲಿ ಬಾಳುತ್ತಿರುವ ಬಾಳೇರರ ಸ್ವರೂಪ ಮತ್ತು ಮಧ್ಯಭಾರತದ ಬಸ್ತಾರ ಪ್ರದೇಶದ ದೊರ್ಲಿ ಮತ್ತು ಕೊರಾಪುತ್ ಪ್ರದೇಶದ ಸವರ್ ಭಾಷೆಗಳ ಸ್ವರೂಪ ಇನ್ನೂ ನಿರ್ಧಾರವಾಗಿಲ್ಲ. ದ್ರಾವಿಡ ಭಾಷಾ ಪರಿವಾರದಲ್ಲಿ ಅವುಗಳ ಸ್ಥಾನವೇನೆಂಬುದನ್ನು ಈಗ ಹೇಳಲು ಸಾಧ್ಯವಾಗಿಲ್ಲವಾದರೂ ಅವು ದ್ರಾವಿಡ ಪಂಗಡಕ್ಕೆ ಅಳವಡುತ್ತವೆಂದು ಸ್ಥೂಲವಾಗಿ ಅವಕಾಶವಿದೆ. ಈಗ ಖಚಿತವಾಗಿ ತಿಳಿದುಬಂದಿರುವ 25 ದ್ರಾವಿಡ ಭಾಷೆಗಳಲ್ಲಿ ಒಂದೊಂದು ಭಾಷೆಗೆ ಸೇರಿದ ಉಪಭಾಷೆಗಳೂ ಇವೆ. ಸುಮಾರು ಹದಿಮೂರುವರೆ ಕೋಟಿ ಜನ ದ್ರಾವಿಡ ಭಾಷೆಗಳನ್ನಾಡುತ್ತಾರೆ. ಪ್ರಪಂಚದಲ್ಲಿನ ಹಿರಿಯ ಭಾಷಾ ಪರಿವಾರಗಳ ಶ್ರೇಣಿಯಲ್ಲಿ ಇದಕ್ಕೆ 5ನೆಯ ಸ್ಥಾನವಿದೆ. ಈ ದ್ರಾವಿಡ ಭಾಷೆಗಳು ಒಂದು ಸ್ವತಂತ್ರ ಭಾಷಾ ಪರಿವಾರದವೆಂದು ಪರಿಗಣಿತವಾಗಿದೆ. ಭಾರತದ ಅಥವಾ ಪ್ರಪಂಚದ ಬೇರೆ ಯಾವುದೇ ಭಾಷಾ ಪರಿವಾರದೊಡನೆ ಈ ದ್ರಾವಿಡ ಭಾಷಾ ಪರಿವಾರವನ್ನು ಸಮೀಕರಿಸುವ ಪ್ರಯತ್ನಗಳನ್ನು ಭಾಷಾವಿಜ್ಞಾನಿಗಳು ಸಂಪೂರ್ಣವಾಗಿ ಮಾನ್ಯಮಾಡಿಲ್ಲ. ದ್ರಾವಿಡ ಭಾಷೆಗಳು ಪ್ರಮುಖವಾಗಿ ಒಟ್ಟಿಗೆ ಒತ್ತಾಗಿ ಕಾಣಿಸುವುದು ದಕ್ಷಿಣ ಭಾರತದಲ್ಲಿ. ಮಧ್ಯ ಮತ್ತು ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲೂ ಕೆಲವು ದ್ರಾವಿಡ ಭಾಷೆಗಳು ವ್ಯವಹಾರದಲ್ಲಿವೆ. ಈಗ ಗೊತ್ತಾಗಿರುವ ೨೫ ದ್ರಾವಿಡ ಭಾಷೆಗಳು ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು, ಕೊಡಗು, ಮಾಲ್ತೊ, ಬ್ರಾಹುಇ, ಕುರುಖ್, ಒಲ್ಲಾರಿ, ಗದಬ, ಪೆಂಗೂ, ಕೊಯ, ಬಡಗ, ಗೋಂಡಿ, ಕೊಂಡ, ಕುಯಿ, ಕುವಿ, ಪಾರ್ಜಿ, ಕೋಲಾಮಿ, ಕೊರಗ, ನಾಯ್ಕಿ, ತೊದ, ಕೋತ, ಮಂಡ, ಇವುಗಳಲ್ಲಿ ಮೊದಲ ನಾಲ್ಕು ಭಾಷೆಗಳು ಸಾಹಿತ್ಯಿಕ ಭಾಷೆಗಳು. ಈ ಭಾಷೆಗಳಿಗೆ ಸಾಕಷ್ಟು ಪ್ರಾಚೀನವಾದ ಲಿಖಿತ ಸಾಹಿತ್ಯವಿದೆ. ಇವುಗಳಿಗೆ ಮೊದಲಿಂದಲೂ ತಮ್ಮದೇ ಆದ ಲಿಪಿ ಕೂಡ ಇದೆ. ತುಳು ಮತ್ತು ಕೊಡಗು ಭಾಷೆಗಳು ಅಲಿಪಿ ಭಾಷೆಗಳಾದರು ಶ್ರುರೂಪಿಯಾದ ಶ್ರವ್ಯ ಸಾಹಿತ್ಯ ಉಳಿದುಬಂದಿರುವುದರಿಂದ ಇವನ್ನು ಸಾಹಿತ್ಯಿಕ ದ್ರಾವಿಡ ಭಾಷೆಗಳ ಜೊತೆಗೆ ಸೇರಿಸುವುದು ರೂಢಿ.ಇನ್ನುಳಿದ ಹತ್ತೊಂಬತ್ತು ಭಾಷೆಗಳನ್ನು ಶ್ರವಣ ಭಾಷೆಗಳೆಂದು ನಿರ್ದೇಶಿಸಿದ್ದಾರೆ. ಇವನ್ನು ಅಸಂಸ್ಕತ ಅಥವಾ ಅಲಿಪಿ ಭಾಷೆಗಳೆಂದೂ ಕರೆಯುತ್ತಾರೆ. ಮೂಲದ್ರಾವಿಡದಿಂದ ಈ ೨೫ ದ್ರಾವಿಡ ಭಾಷೆಗಳು ಯಾವಾಗ ಬೇರೆಯಾದುವೆಂಬುದು ಖಚಿತವಾಗಿ ತಿಳಿಯದು. ಸ್ಥೂಲವಾಗಿ ಅದನ್ನು ಗುರುತಿಸುವ ಪ್ರಯತ್ನಗಳು ನಡೆದಿವೆ, ಭಾಷಾಕಾಲಕ್ರಮವಿಜ್ಞಾನ ಪದ್ಧತಿ ಆಧಾರದಿಂದ ಬಹುಮಟ್ಟಿಗೆ ದ್ರಾವಿಡ ಭಾಷೆಗಳು ಮೂಲದ್ರಾವಿಡದಿಂದ ಕ್ರಿಸ್ತಶಕದ ಅರಂಭದ ವೇಳೆಗೆ ಬೇರ್ಪಟ್ಟಿದ್ದವು.ಮೂಲದ್ರಾವಿಡದಿಂದ ಮೊದಲು ತೆಲಗು ಬೇರೆಯಾಯಿತೆಂದು ಕೆಲವರೂ ತುಳು ಬೇರೆಯಾಯಿತೆಂದು ಕೆಲವರು ಕುಯಿ ಬೇರೆಯಾಯಿತೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವರ್ಗೀಕರಣ ದ್ರಾವಿಡ ಭಾಷೆಗಳನ್ನು ಅವು ಭಾರತದ ಯಾವ ಯಾವ ಭಾಗದಲ್ಲಿ ಬಳಕೆಯಲ್ಲಿವೆ ಎಂಬ ಭೌಗೋಳಿಕ ಆಧಾರದಿಂದ ಉತ್ತರ, ಮಧ್ಯ ಮತ್ತು ದಕ್ಷಿಣದವೆಂದು ವರ್ಗೀಕರಿಸಿದ್ದಾರೆ. ಭಾಷಿಕ ಆಧಾರದಿಂದ ಮಾಡಿದ ದ್ರಾವಿಡ ಭಾಷೆಗಳ ವರ್ಗೀಕರಣವನ್ನು ಭಾಷಾವಿಜ್ಞಾನಿಗಳು ಮಾನ್ಯ ಮಾಡಿದ್ದಾರೆ. ಅದರ ಪ್ರಕಾರ ಕೂಡ ಉತ್ತರ, ಮಧ್ಯ ಮತ್ತು ದಕ್ಷಿಣ ಎಂಬ ತ್ರಿಭಜನೆಯಿದೆಯಾದರೂ ಇಲ್ಲಿ ಭೌಗೋಳಿಕ ಆಧಾರ ಗೌಣ. ಭೌಗೋಳಿಕವಾಗಿ ದಕ್ಷಿಣದಲ್ಲಿರುವ ಭಾಷೆಗಳು ಭಾಷಾಸಾಮ್ಯ ಅಥವಾ ವೈಷಮ್ಯದಿಂದಾಗಿ ಮಧ್ಯ ಅಥವಾ ಉತ್ತರದ ಶಾಖೆಗೆ ಸೇರಬಹುದು. ಉದಾಹರಣೆಗೆ ತೆಲಗು ಭೌಗೋಳಿಕವಾಗಿ ದಕ್ಷಿಣದಲ್ಲಿದ್ದರೂ ಭಾಷಿಕವಾಗಿ ಮಧ್ಯ ದ್ರಾವಿಡ ಶಾಖೆಗೆ ಅಳವಡುತ್ತದೆ. ಕೊರಗ ಭಾಷೆಯೂ ಇದೇ ರೀತಿ ದಕ್ಷಿಣದಲ್ಲಿ ಪ್ರಚಾರದಲ್ಲಿದ್ದರೂ ಉತ್ತರ ದ್ರಾವಿಡ ಶಾಖೆಗೆ ಹೊಂದಿಕೊಳ್ಳುತ್ತದೆ. ಈ ವರ್ಗೀಕರಣ, ಬಹುಶಃ ಭಾರತವನ್ನು ಪ್ರವೇಶಿಸಿದ ಮೇಲೆ ದ್ರಾವಿಡ ಜನಾಂಗ ಪಂಗಡಗಳಾಗಿ ವಿಂಗಡವಾದ ಮೂರು ಮುಖ್ಯ ಶಾಖೆಗಳನ್ನು ತೋರಿಸುತ್ತದೆ. ಈ ಬಗೆಯಾದ ವರ್ಗೀಕರಣದ ಹಿಂದಿರುವ ಉದ್ದೇಶ ಭಾಷಿಕ ವ್ಯಾಸಂಗಕ್ಕೆ ಸಿಗುವ ಸೌಕರ್ಯ. ಭಾಷೆಗಳು ಅವುಗಳಲ್ಲಿನ ಧ್ವನಿ ಹಾಗೂ ಆಕೃತಿಕ ರಚನೆಯ ದೃಷ್ಟಿಯಿಂದ ಕೆಲವು ಸಮಾನ ಲಕ್ಷಣಗಳನ್ನು ಹಂಚಿಕೊಂಡಿರುತ್ತವೆ. ಒಂದೊಂದು ದ್ರಾವಿಡ ಭಾಷೆಗಳಲ್ಲೂ ಧ್ವನಿಗಳಲ್ಲಿ, ಶಬ್ದಗಳಲ್ಲಿ ವ್ಯತ್ಯಾಸಗಳು ಸ್ವತಂತ್ರವಾಗಿ ಪ್ರತ್ಯೇಕವಾಗಿ ನಡೆದಿವೆಯಾದರೂ 25 ದ್ರಾವಿಡ ಭಾಷೆಗಳಲ್ಲೂ ಸ್ಥೂಲವಾಗಿ ರಾಚನಿಕ ಸಮಾನತೆಯಿದೆ. ಹಾಗೆ ಇರುವುದರಿಂದಲೇ ಅವೆಲ್ಲಾ ಒಂದು ಮೂಲಕ್ಕೆ ಸೇರಿದ ಭಾಪೆಗಳೆಂದು ಹೇಳುತ್ತಿರುವುದು. ದ್ರಾವಿಡ ಭಾಷಾ ಪರಿವಾರದ ಉತ್ತರ, ಮಧ್ಯ ಮತ್ತು ದಕ್ಷಿಣ ಎಂಬ ಮೂರು ಶಾಖೆಗಳಲ್ಲಿ ಮತ್ತೆ ಕೆಲಕೆಲವು ಭಾಷೆಗಳು ತಮ್ಮ ತಮ್ಮಲ್ಲೇ ತೋರುವ ಹೆಚ್ಚಿನ ಇಲ್ಲವೆ ಕಡಿಮೆ ಹೊಂದಾಣಿಕೆ ಇಲ್ಲವೇ ವ್ಯತ್ಯಾಸದ ದೃಷ್ಟಿಯಿಂದ ಉಪಶಾಖೆಗಳಾಗಿ ವಿಂಗಡವಾಗುತ್ತವೆ. ದ್ರಾವಿಡ ಭಾಷಾ ಶಾಸ್ತ್ರಜ್ಞರು ಮಾನ್ಯ ಮಾಡಿರುವ ದ್ರಾವಿಡ ಭಾಷೆಗಳ ವರ್ಗೀಕರಣ ಈ ರೀತಿ ಇದೆ : ಮೊದಲು ಒಂದೇ ಆಗಿದ್ದ ಮೂಲ ದ್ರಾವಿಡ ಭಾಷೆಯಿಂದ ಮೂಲ ಕುಯಿ ಭಾಷೆ ಬೇರ್ಪಟ್ಟಿತು. ಅನಂತರ ಕಾಲಾನುಕಾಲಕ್ಕೆ ಈತರ ದ್ರಾವಿಡ ಭಾಷೆಗಳು ಬೇರ್ಪಟ್ಟವು. ದ್ರಾವಿಡ ಭಾಷೆಗಳ ಪಟ್ಟಿ ದಕ್ಷಿಣ ದ್ರಾವಿಡ ಭಾಷೆಗಳ ಉಪ ಕುಟುಂಬ: ಕನ್ನಡ ತುಳು ತಮಿಳು ಮಲಯಾಳಂ ಬಡಗ ಕೊಡವ ಥಕ್ ಕುರುಂಬ ಪಳಿಯನ್ ಕೋಟ ಬೆಳ್ಳಾರಿ ಮಧ್ಯ ದಕ್ಷಿಣ ದ್ರಾವಿಡ ಭಾಷೆಗಳ ಉಪ ಕುಟುಂಬ: ತೆಲುಗು ಗೊಂಡಿ ಮರಿಯ ಉತ್ತರ ದ್ರಾವಿಡ ಭಾಷೆಗಳ ಉಪ ಕುಟುಂಬ: ಬ್ರಾಹುಯಿ ಮಾಲ್ತೊ ಕುರುಖ್ ಮಧ್ಯ ದ್ರಾವಿಡ ಭಾಷೆಗಳ ಉಪ ಕುಟುಂಬ: ಕೊಲಮಿ-ನಾಯ್ಕಿ ಪರ್ಜಿ-ಗಡಬ ಧ್ವನಿ ವ್ಯವಸ್ಥೆ ಇಂದಿನ ದ್ರಾವಿಡ ಭಾಷೆಗಳ ಧ್ವನಿವ್ಯವಸ್ಥೆಯಲ್ಲಿ ವ್ಯತ್ಯಾಸಗಳು ಸಾಕಷ್ಟಿವೆ. ಅವನ್ನು ಮೂಲ ದ್ರಾವಿಡ ಧ್ವನಿವ್ಯವಸ್ಥೆಯೊಡನೆ ಹೋಲಿಸಿ ನೋಡಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. ಮೂಲ ದ್ರಾವಿಡ ಧ್ವನಿ ವ್ಯವಸ್ಥೆಯಲ್ಲಿ, ಅದರಲ್ಲೂ ಸ್ವರ ವ್ಯವಸ್ಥೆಯಲ್ಲಿ ಹೆಚ್ಚು ಭಿನ್ನಾಭಿಪ್ರಾಯಗಳಿಲ್ಲ. ಮೂಲ ದ್ರಾವಿಡ ಸ್ವರ ವ್ಯವಸ್ಥೆ ಹೀಗಿದೆ : ಇ ಉ ಎ ಒ ಅ ದೀರ್ಘತ್ವ :- ಈ ಸ್ವರವ್ಯವಸ್ಥೆ ಸರಳವಾಗಿತ್ತು. ಇದರಲ್ಲಿ ಸಂಧ್ಯಕ್ಷರಗಳು ಇರಲಿಲ್ಲ. ಮೂಲ ದ್ರಾವಿಡದಲ್ಲಿ ಇದ್ದ ಸ್ವರಗಳು ಹತ್ತು. ಐದು ಹ್ರಸ್ವ, ಐದು ದೀರ್ಘ, ಈ ಹತ್ತು ಸ್ವರಗಳು ಮೂಲದ್ರಾವಿಡಕ್ಕೆ ಆರೋಪಿಸಿ ವಿವರಿಸುವಾಗ 5 ಸ್ವರಗಳು ಮತ್ತು ದೀರ್ಘತ್ವವೆಂಬ ಒಂದು ಯೋಗವಾಹ-ಹೀಗೆ ಆರು ಸ್ವರಗಳೆಂದು ಹೇಳಬಹುದು. ಈ ಸ್ವರವ್ಯವಸ್ಥೆಗೆ ಅಯ್ ಅವ್ ಎಂಬ ಸ್ವರವ್ಯಂಜನ ವರ್ಣಗುಚ್ಛವನ್ನು ಪುನರ್‍ರಚಿಸಿಕೊಳ್ಳುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ. ದ್ರಾವಿಡ ಭಾಷೆಗಳ ಸ್ವರಗಳಲ್ಲಿ ಅ-ಆ ನಿಮ್ನ ಸ್ವರಗಳು, ಇ-ಈ ಪೂವೋಚ್ಚ ಸ್ವರಗಳು, ಎ-ಏ ಪೂರ್ವ ಮಧ್ಯಸ್ವರಗಳು, ಉ-ಊ ಪಶ್ಚೋಚ್ಚ ಸ್ವರಗಳು, ಒ-ಓ ಪಶ್ಚ ಮಧ್ಯ ಸ್ವರಗಳು. ಹೀಗೆ ಒಟ್ಟು ಸ್ವರಗಳು ಹತ್ತು. ಧ್ವನಿಗಳು ಬರಬಹುದಾದ ಪರಿಸರದ ದೃಷ್ಟಿಯಿಂದ ಈ ಹತ್ತೂ ಸ್ವರಗಳು ಶಬ್ದದ ಆದಿಯಲ್ಲಿ ಬರಬಹುದು. ಈ ಹತ್ತು ಸ್ವರಗಳು ಸ್ವರ ಸ್ಥಾನದಲ್ಲಿ ಬಂದಾಗಲೂ ಅವಕ್ಕೆ ಆದಿ ಇಲ್ಲವೇ ಅಂತ್ಯದ ಸ್ಥಾನದಲ್ಲಿ ಅಥವಾ ಪರವಾಗಿ ಬರುವ ವ್ಯಂಜನ ವರ್ಣಗಳನ್ನು ಆಧರಿಸಿ ಕೆಲವು ನಿರ್ಬಂಧಗಳು ಏರ್ಪಡುತ್ತವೆ. (ವ1) ಸ1 ವ2 ಸ2 .... ಈ ಮಾದರಿಯಲ್ಲಿ ಸ2 ಮೂಲದ್ರಾವಿಡ ಶಬ್ದರಚನೆಯಲ್ಲಿ ಅ ಇ ಉ ಸ್ವರಗಳು ಮಾತ್ರ ಬರಬಹುದೆಂಬ ಒಂದು ಅಭಿಪ್ರಾಯವಿದೆ. ಇದಕ್ಕೆ ಅಪವಾದಗಳನ್ನು ಗುರುತಿಸಿರುವುದರಿಂದ ಈ ಅಭಿಪ್ರಾಯದಲ್ಲಿ ಚರ್ಚೆಗೆ ಅವಕಾಶವಿದೆ. ದ್ರಾವಿಡ ಭಾಷೆಗಳ ಶಬ್ದಗಳಲ್ಲಿ ಎರಡು ಸ್ವರಗಳು ಅಕ್ಕಪಕ್ಕದಲ್ಲಿ ಬರುವುದಿಲ್ಲವೆಂಬುದನ್ನು ಗಮನಿಸಬಹುದು. ಇಂದಿನ ದ್ರಾವಿಡ ಭಾಷೆಗಳಲ್ಲಿ ಪರಿಸರಬದ್ಧವಾಗಿ ಈ ಸ್ವರಗಳು ವ್ಯತ್ಯಾಸಗಳನ್ನು ಪಡೆದಿವೆ. ಕನ್ನಡ ಪಾರ್ಜಿ ತೊದ ಬ್ರಾಹುಇ ಮೊದಲಾದ ಭಾಷೆಗಳಲ್ಲಿ ಇಂಥ ವ್ಯತ್ಯಾಸಗಳನ್ನು ಕಾಣಬಹುದು. ಆದ್ಯಕ್ಷರದಲ್ಲಿ ದೀರ್ಘಸ್ವರವಿದ್ದು ಪರವಾಗಿ ಸ್ವರಾದಿಯಾದ ಪ್ರಕೃತಿಸಾಧಕ ಪ್ರತ್ಯಯ ಬಂದರೆ ಆದಿಸ್ವರ (ವ) ಸ ಹ್ರಸ್ವವಾಗುತ್ತದೆ. ಪರಿಣಾಮವಾಗಿ ದೀರ್ಘಸ್ವರಯುಕ್ತಧಾತುಗಳಿಗೆ ಎರಡೆರಡು ರೂಪಗಳು ಸಿದ್ಧಿಸುವುದುಂಟು. ಈ ದೀರ್ಘಸ್ವರಗಳು ಕನ್ನಡ ಮೊದಲಾದ ಕೆಲವು ಭಾಷೆಗಳಲ್ಲಿ ವ್ಯಂಜನಗುಚ್ಚಗಳೆದುರೂ ಹ್ರಸ್ವವಾಗುವುದುಂಟು, ಇಲ್ಲವೆ ಪರವಾದ ವ್ಯಂಜನಗಳಲ್ಲೊಂದು ಲೋಪವಾಗುವುದೂ ಉಂಟು. ದ್ರಾವಿಡ ಭಾಷೆಗಳಲ್ಲಿ ಶಬ್ದದ ನಡುವಣ ಸ್ವರ ದುರ್ಬಲವಾದುದು. ಅದರಿಂದ ಸ್ವರವ್ಯತ್ಯಾಸಗಳು ಸಹಜ. ಮೂಲ ದ್ರಾವಿಡ ವ್ಯಂಜನ ವ್ಯವಸ್ಥೆ : ಪ್ ತ್ ತ್ ಟ್ ಚ್ ಕ್ ¾õï ಮ್ ನ್ ಣ್ ಞï ಲ್ ಳ್ ರ್ ವ್ ಯ್ ಈ ಧ್ವನಿಮಾಗಳ ಜೊತೆಗೆ ಆಯ್ದಂ ಎಂಬುದು ಮೂಲದ್ರಾವಿಡ ಭಾಷೆಯಲ್ಲಿದ್ದಿರಬಹುದೆಂಬ ಅಭಿಪ್ರಾಯವೂ ಇದೆ. ಇದನ್ನು ಒಪ್ಪಿಕೊಂಡರೆ ಕೆಲವು ಶಬ್ದಯುಗ್ಮಗಳಲ್ಲಿ ವ್ಯಕ್ತವಾಗುವ ಹ್ರಸ್ವದೀರ್ಘ ಸ್ವರಪಲ್ಲಟದ ವಿವರಣೆ ಸುಲಭವಾಗುತ್ತದೆ. ಮುಖ್ಯವಾಗಿ ಭಾಷಾಸ್ವೀಕರಣ ಕಾರಣದಿಂದ ಮೂಲದ್ರಾವಿಡ ಈ ವ್ಯಂಜನ ವ್ಯವಸ್ಥೆ ಸ್ವರವ್ಯವಸ್ಥೆಗಿಂತ ಅಧಿಕವಾಗಿ ಆಧುನಿಕ ದ್ರಾವಿಡ ಭಾಷೆಗಳಲ್ಲಿ ವ್ಯತ್ಯಾಸಗಳನ್ನು ಪಡೆದಿದೆ. ಇವುಗಳಲ್ಲಿ ಬಹು ಮುಖ್ಯವಾದ ಕೆಲವು ಮಾರ್ಪಾಟುಗಳನ್ನು ಮಾತ್ರ ಇಲ್ಲಿ ನಿರೂಪಿಸಿದೆ. ಕನ್ನಡ ತೆಲಗು ಮೊದಲಾದ ಕೆಲವು ದ್ರಾವಿಡ ಭಾಷೆಗಳು ಮೂಲ ದ್ರಾವಿಡದಲ್ಲಿ ಇದ್ದುದಕ್ಕಿಂತ ಹೆಚ್ಚು ವ್ಯಂಜನಗಳನ್ನು ಅಳವಡಿಸಿಕೊಂಡಿವೆ-ಮಹಾಪ್ರಾಣ ವರ್ಣಗಳು, ಊಷ್ಮ ವರ್ಣಗಳು ಇತ್ಯಾದಿ. ಈ ಹೆಚ್ಚಿನ ವರ್ಣಗಳನ್ನು ಸಂಸ್ಕøತ, ಪ್ರಾಕೃತ ಮೊದಲಾದ ಆರ್ಯ ಭಾಷೆಗಳಿಂದ ಸ್ವೀಕರಿಸಿರುವ ಸಾಧ್ಯತೆಯಿದೆ. ಮೂಲದ್ರಾವಿಡದಲ್ಲಿ ಸ್ವರ್ಶ ವ್ಯಂಜನ ವರ್ಣಗಳು ಘೋಷಾಘೋಷ ಭೇದವನ್ನು ಪಡೆದಿದ್ದುವಾದರೂ ಆ ಭೇದ ಸನ್ನಿವೇಶ ಬದ್ಧವಾಗಿತ್ತು. ಘೋಷ-ಅಘೋಷಗಳು ಪ್ರತ್ಯೇಕ ಸ್ವತಂತ್ರ ಧ್ವನಿಮಾಗಳಾಗಿರಲಿಲ್ಲ. ಒಂದೇ ಧ್ವನಿಯ ಉಪಧ್ವನಿಗಳಾಗಿದ್ದವು. ಶಬ್ದಾದಿಯಲ್ಲಿ ಅಘೋಷ ಧ್ವನಿಗಳು ಮಾತ್ರ ಬರುತ್ತಿದ್ದುವು. ಶಬ್ದದ ನಡುವೆ ಬಿಡಿಯಾದ ಘೋಷಧ್ವನಿಗಳು ದ್ವಿತ್ವ ಸ್ಪರ್ಶಗಳೂ ಬರುತ್ತಿದ್ದುವು. ಇದನ್ನು ಕ್-, ಗ್-, -ಕ್- ಎಂಬಂತೆ ತೋರಿಸಬಹುದು. ಇವನ್ನು ಬರೆಯಲು ಒಂದೊಂದೇ ಲಿಪಿಸಂಕೇತ ಸಾಕಿತ್ತು. ಸ್ವರ್ಶ ವರ್ಣಗಳ ಸಂಖ್ಯೆ ಕ್ ಚ್ ಟ್ ತ್ ಪ್ ಎಂದು ಐದು ಮಾತ್ರ. ಇಂದಿಗೂ ತಮಿಳು ಮುಂತಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಈ ವ್ಯತ್ಯಾಸಯಿದೆ. ಇದರ ಜೊತೆಗೆ ಮೂಲ ದ್ರಾವಿಡದಲ್ಲಿ ವತ್ಸ್ರ್ಯ ಸ್ಪರ್ಶಧ್ವನಿಯೊಂದು | ¿õï| ಇತ್ತು. ಮತ್ತು ಉಳಿದ ಸ್ವರ್ಶ ಧ್ವನಿಗಳಿರುವಂತೆ ಇದಕ್ಕೂ ಘೋಷ-ಅಘೋಷ ಪ್ರಭೇದಗಳನ್ನು ಕಲ್ಪಿಸಬಹುದು. ಕನ್ನಡವೇ ಮೊದಲಾದ ಹಲವು ಆಧುನಿಕ ದ್ರಾವಿಡ ಭಾಷೆಗಳಲ್ಲಿ ಈ ಆರು ಸ್ವರ್ಶ ವರ್ಣಗಳು ಕೆಲವು ವ್ಯತ್ಯಾಸಗಳನ್ನು ಪಡೆದಿವೆ. ಕನ್ನಡ, ತೆಲಗು, ತುಳು ಮೊದಲಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಘೋಷ-ಅಘೋಷ ವ್ಯತ್ಯಾಸ ಅರ್ಥಾಭಿವ್ಯಕ್ತಿಯಲ್ಲಿ ಉಪಯುಕ್ತ ವ್ಯತ್ಯಾಸವಾಗಿ ಪರಿಣಮಿಸಿದುದರಿಂದ ಕ್, ಗ್, ಚ್, ಜ್, ತ್, ದ್, ಪ್, ಬ್, ಎಂಬ ಸ್ವತಂತ್ರ ಧ್ವನಿಮಾಗಳು ಏರ್ಪಟ್ಟಿವೆ. ಇವುಗಳಿಗೆ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಪ್ರತ್ಯೇಕ ಲಿಪಿಗಳಿವೆ. ಇಂಥದೊಂದು ಧ್ವನಿ ಮಾರ್ಪಾಟಿಗೂ ದ್ರಾವಿಡೇತರ ಆರ್ಯ ಭಾಷೆಗಳ ಪ್ರಭಾವ ಕಾರಣವಿರಬಹುದು. ಕೆಲವು ದ್ರಾವಿಡ ಭಾಷೆಗಳಲ್ಲಿ ಚ್-ಸ್ಪರ್ಶವರ್ಣ ಸ್-ಧ್ವನಿಯಾಗಿ ಪರಿವರ್ತಿತವಾಗಿದೆ. ಚ್ ( ಸ್- ಧ್ವನಿವ್ಯತ್ಯಾಸ ಯಾವ ಪರಿಸರದಲ್ಲಿ ನಡೆದಿದೆಯೆಂಬುದರ ನಿಯಮ ಇನ್ನೂ ಸ್ಪಷ್ಟವಾಗಿಲ್ಲ. ಕನ್ನಡ ಮೊದಲಾದ ಕೆಲವು ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಶಬ್ದಾದಿಯ ಸ್ಪರ್ಶವರ್ಣ ಚ್-ಹಲವು ಶಬ್ದಗಳಲ್ಲಿ ಲೋಪವಾಗಿದೆ ; ಇಲ್ಲಿಯೂ ಯಾವ ಪರಿಸರದಲ್ಲಿ ಚ್-ಧ್ವನಿಲೋಪ ಘಟಿಸಿದೆಯೆಂಬ ನಿಯಮವೂ ಸರಿಯಾಗಿ ತಿಳಿಯದು. ಕನ್ನಡ ತೆಲಗು ಮೊದಲಾದ ಕೆಲವು ದ್ರಾವಿಡ ಭಾಷೆಗಳಲ್ಲಿ ಮಾತ್ರ ಶಬ್ದಾದಿಯ ವ್-ಧ್ವನಿ ಹಲವು ಶಬ್ದಗಳಲ್ಲಿ ಉಭಯೋಷ್ಠ್ಯ ಘೋಷ ಸ್ವರ್ಶ ವರ್ಣ ಬ್-ಆಗಿ ಪರಿವರ್ತಿತವಾಗಿದೆ. ಮೂಲ ದ್ರಾವಿಡದಲ್ಲಿ ಮ್ ನ್ ಣ್ ಞï ಎಂಬ ನಾಲ್ಕು ಅನುನಾಸಿಕ ವರ್ಣಗಳಿದ್ದುವು. ಕೆಲವು ಪ್ರಕೃತಿ ಸಾಧಕ ಪ್ರತ್ಯಯಗಳು ಪರವಾಗಿ ಬಂದಾಗ ಅನುನಾಸಿಕ ಹಾಗೂ ಸಮಾನ ಸ್ಥಾನೀಯ ಸ್ಪರ್ಶವರ್ಣಗಳಿರುವ ವ್ಯಂಜನ ಗುಚ್ಛಗಳು ಸ್ಪರ್ಶಗಳಿಗೆ ಸಮವಾದ ದ್ವಿವ್ಯಂಜನಗಳನ್ನು ಪಡೆಯುತ್ತದೆ. ಮೂಲ ದ್ರಾವಿಡಕ್ಕೆ ಕಲ್ಪಿತವಾಗಿರುವ ಅಘೋಷ ಓಷ್ಕ್ಯ ಸ್ವರ್ಶ ಪ್-ಶಿಷ್ಯ ಕನ್ನಡದಲ್ಲಿ ಹ್-ಆಗಿದೆ. ಮತ್ತು ಶಿಷ್ಟೇತರ ಕನ್ನಡದಲ್ಲಿ ಅದೂ ಲೋಪವಾಗಿದೆ : ಪ್( ಹ್--(. ಮೂಲ ದ್ರಾವಿಡದಲ್ಲಿದ್ದ ಧ್ವನಿ ಕನ್ನಡದಲ್ಲಿ ಪರಿಸರಬದ್ಧವಾಗಿ ಳ್ ಇಲ್ಲವೇ ರ್ ಆಗೂ ¿õï ಧ್ವನಿ ರ್ ಆಗೂ ಪರಿವರ್ತನೆ ಪಡೆದಿದೆ. ಕನ್ನಡೇತರ ಉಳಿದ ದ್ರಾವಿಡ ಭಾಷೆಗಳಲ್ಲೂ ಹಲವು ಬಗೆಯ ಧ್ವನಿವ್ಯತ್ಯಾಸಗಳು ಮೂಲ ದ್ರಾವಿಡದಿಂದ ಪ್ರತ್ಯೇಕವಾದ ಮೇಲೆ ಸಂಭವಿಸಿವೆ. ಪ್ರತಿವೇಷ್ಟಿತ ಧ್ವನಿಗಳು ದ್ರಾವಿಡ ಭಾಷೆಗಳಲ್ಲಿ ಶಬ್ದದ ಪ್ರಾರಂಭದಲ್ಲಿ ಬರುವುದಿಲ್ಲವೆಂಬುದು ಮತ್ತೊಂದು ದ್ರಾವಿಡ ಧ್ವನಿನಿಯಮ. ಆಧುನಿಕ ದ್ರಾವಿಡ ಭಾಷೆಗಳಲ್ಲಿ ಏಕಾಕ್ಷರಿಗಳೂ ಬಹ್ವಕ್ಷರಿಗಳೂ ಆದ ಕ್ರಿಯಾ ಧಾತುಗಳಿವೆ. ಆದರೆ ಮೂಲ ದ್ರಾವಿಡ ಭಾಷೆಯ ಧಾತುಗಳು ಏಕಾಕ್ಷರಿಗಳಾಗಿದ್ದುವು. ಇಂದಿನ ದ್ವ್ಯಕ್ಷರಿ ಹಾಗೂ ತ್ರ್ಯಕ್ಷರಿ ಕ್ರಿಯಾಧಾತುಗಳಲ್ಲಿ ಕೆಲವು ಪ್ರಕೃತಿ ಸಾಧಕ ಪ್ರತ್ಯಯಗಳಿಂದ ಘಟಕವಾಗಿರುವುದನ್ನು ಚಾರಿತ್ರಿಕ ಹಾಗೂ ವರ್ಣನಾತ್ಮಕ ಅಧ್ಯಯನದಿಂದ ಶ್ರುತಪಡಿಸಬಹುದು. ವ್ಯಂಜನಾಂತ ಶಬ್ದಗಳು ಸ್ವರಾಂತಗಳಾಗಿ ಮಾರ್ಪಾಟು ಪಡೆದಾಗ ಕೆಲವು ಏಕಾಕ್ಷರಿ ಕ್ರಿಯಾಧಾತುಗಳು ದ್ವ್ಯಕ್ಷರಿಗಳಾಗಿವೆ. ದ್ರಾವಿಡ ಭಾಷೆಗಳು ಅಂಟು ಭಾಷೆಗಳು. ಇಲ್ಲಿ ಪ್ರಕೃತಿ ಪ್ರತ್ಯಯಗಳು ಅಂಟಿಕೊಂಡಿದ್ದರೂ ಸುಲಭವಾಗಿ ಗುರುತಿಸಿ ಬಿಡಿಸಿ ತೋರಿಸಬಹುದು. ಮೂಲ ದ್ರಾವಿಡದಲ್ಲಿ ಸಕರ್ಮಕ ಅಕರ್ಮಕ ಪ್ರಕೃತಿಗಳಿದ್ದವು. ಆಧುನಿಕ ದ್ರಾವಿಡ ಭಾಷೆಗಳಲ್ಲೂ ಇದು ಬಹುಮಟ್ಟಿಗೆ ಉಳಿದುಬಂದಿದೆ. ಮೂಲದ್ರಾವಿಡ ಕ್ರಿಯಾ ಪದಗಳಿಗೆ ಎರಡಕ್ಕಿಂತ ಹೆಚ್ಚು ಕಾಲವಾಚಕ ಪ್ರತ್ಯಯಗಳಿವೆ. ಉತ್ತಮ, ಮಧ್ಯಮ, ಮತ್ತು ಪ್ರಥಮ ಎಂಬ ಮೂರು ಪುರುಷಗಳಿವೆ. ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳಿವೆ. ಉತ್ತಮ ಪುರುಷ ಬಹುವಚನದಲ್ಲಿ ವ್ಯಾವರ್ತಕ ಮತ್ತು ಅಭಿವ್ಯಾಪಕ ರೂಪಗಳು ಹೆಚ್ಚಿನ ದ್ರಾವಿಡ ಭಾಷೆಗಳಲ್ಲಿವೆ. ಪ್ರಥಮ ಪುರುಷದಲ್ಲಿ ಮಾನವರು ಹಾಗೂ ಇತರರು ಎಂಬಂತೆಯೂ ಲಿಂಗಭೇದ ಮೂಲ ದ್ರಾವಿಡದಲ್ಲಿದ್ದಿರಬೇಕೆಂಬ ಅಭಿಪ್ರಾಯವಿದೆ. ಕನ್ನಡದಂಥ ಕೆಲವು ದ್ರಾವಿಡ ಭಾಷೆಗಳಲ್ಲಿ ಈ ವ್ಯವಸ್ಥೆ ಕಂಡುಬರುತ್ತದೆ. ಆದರೆ ಈ ಹೇಳಿಕೆಗೆ ಪ್ರತಿಕೂಲವಾದ ಆಧಾರಗಳು ಕುಯಿ, ಗೋಂಡಿ ಮುಂತಾದ ಭಾಷೆಗಳಲ್ಲಿವೆ. ಕುರುಖ್ ನಂಥ ಕೆಲವು ಭಾಷೆಗಳಲ್ಲಿ ಮಾತ್ರ ಮಧ್ಯಮ ಮತ್ತು ಉತ್ತಮ ಪುರುಷಗಳಲ್ಲೂ ಕರ್ತೃವಿನ ಲಿಂಗವಿಕ್ಷೆಯಿದೆ. ಮೂಲದ್ರಾವಿಡದಲ್ಲಿ ಎರಡೇ ಲಿಂಗಗಳಿದ್ದಿರಬಹುದು. ತೊದ, ಬ್ರಾಹೂಇ ಭಾಷೆಗಳಲ್ಲಿ ಲಿಂಗವಿಕ್ಷೆಯೇ ಇಲ್ಲ. ದ್ರಾವಿಡ ಭಾಷೆಗಳಲ್ಲಿ ಶಬ್ದರೂಪವನ್ನು ಅನುಸರಿಸಿ ಲಿಂಗಭೇಧವಿಲ್ಲ. ಆದರೆ ಸಂಸ್ಕøತದಲ್ಲಿದೆ. ಇಲ್ಲಿ ಲಿಂಗ ಅರ್ಥಾನುಸಾರಿ. ಮೂಲದ್ರಾವಿಡದಲ್ಲಿ ಬಾಂಧವ್ಯ ವಾಚಕ ಶಬ್ದಗಳು ಆ ಸಂಬಂಧ ಯಾರೊಂದಿಗೆ ಎಂಬುದನ್ನೂ ಸೂಚಿಸುತ್ತಿದ್ದವು. ಇಂದು ಕುರುಖ್, ಕೋಲಾಮಿಯಂಥ ಕೆಲವೇ ದ್ರಾವಿಡ ಭಾಷೆಗಳಲ್ಲಿ ಈ ವಿಧಾನವಿದೆ. ಸರ್ವನಾಮ ರೂಪಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ವಿಭಕ್ತಿಗಳ ಮತ್ತು ಇತರ ಪ್ರತ್ಯಯಗಳಲ್ಲಿ ಕೆಲವು ವ್ಯತ್ಯಾಸಗಳಾಗಿವೆ. ಕೆಲವು ಮುಕ್ತ ಆಕೃತಿಮಾಗಳು ಬದ್ಧ ಆಕೃತಿಮಾಗಳಾಗಿವೆ. ದ್ರಾವಿಡ ಭಾಷೆಗಳಲ್ಲಿ ಕರ್ಮಣಿ ಪ್ರಯೋಗಕ್ಕೆ ಅವಕಾಶ ಕಡಿಮೆ. ಒಂದರಿಂದ ಹತ್ತು ಮತ್ತು ನೂರು ಎಂಬ ಸಂಖ್ಯಾವಾಚಕಗಳಿವೆ. ಈ ರೂಪಗಳಿಂದ 999 ರ ವರೆಗೂ ಸಂಖ್ಯೆಯನ್ನು ಹೇಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾವಿರ, ಲಕ್ಷ, ಕೋಟಿ ಮೊದಲಾದ ಸಂಖ್ಯಾವಾಚಕಗಳು ಸಂಸ್ಕøತದಿಂದ ಬಂದ ಶಬ್ದಗಳು. ಕೆಲವು ದ್ರಾವಿಡ ಭಾಷೆಗಳಲ್ಲಿ ಹತ್ತಕ್ಕಿಂತ ಕಡಿಮೆ ಸಂಖ್ಯೆ ಹೇಳುವ ಶಬ್ದಗಳಲ್ಲಿ ಕೆಲವು ಲೋಪವಾಗಿದೆ. ಗೋಂಡಿ, ಕುಯಿ, ಪಾರ್ಜಿಯಂಥ ಕೆಲವು ಭಾಷೆಗಳಷ್ಟೇ ಐದು ಮತ್ತು ಆರು ಎಂಬ ಸಂಖ್ಯಾವಾಚಕಗಳಲ್ಲಿ ಅವುಗಳ ಮೂಲರೂಪಗಳಲ್ಲಿದ್ದ ಶಬ್ದಾದಿಯ ಚ್-ಧ್ವನಿಯನ್ನುಳಿಸಿಕೊಂಡಿದೆ. ಮನೋಭಾವವಿರಲಿಲ್ಲವಲ್ಲದೆ ಅವು ಮಿಶ್ರಿತವಾದ ಗುಂಪುಗಳೇ ಆಗಿದ್ದವು. ಆದ್ದರಿಂದ ಭಾರತದ ಇತಿಹಾಸದ ಪ್ರಾರಂಭದಿಂದಲೂ ಇಂಥ ಜನಾಂಗದ ಮಿಶ್ರಣವನ್ನು ಕಾಣಬಹುದಾಗಿದೆ. ಭಾಷೆಯೇ, ಜನಾಂಗದ ಜೀವಾಳವಾದುದರಿಂದ, ಆದರಿಂದಲೇ ಒಂದು ಜನಾಂಗದ ಸಂಸ್ಕøತಿಯನ್ನು ಅಳೆಯಬೇಕೇ ಹೊರತು, ಬುಡಕಟ್ಟಿನ ಆಧಾರದ ಮೇಲಲ್ಲ. ಮೇಲೆ ಪಟ್ಟಿ ಮಾಡಿದ ಆರು ಗುಂಪುಗಳು ಒಂದು ಜನಾಂಗವಾಯಿತಲ್ಲದೆ ಅದು ನಾಲ್ಕು ಭಾಷೆಗಳನ್ನು ಹೊಂದಿತ್ತು. ಅದರಲ್ಲಿ ದ್ರಾವಿಡ ಮತ್ತು ಇಂಡೊ -ಯೂರೋಪಿಯನ್ (ಆರ್ಯ) ಭಾಷೆಗಳು ಸೇರಿವೆ. ದ್ರಾವಿಡ ಭಾಷೆಗಳು ವಿಶೇಷವಾಗಿ ದಕ್ಷಿಣದಲ್ಲಿ ಕೇಂದ್ರೀಕೃತವಾದರೂ ಉತ್ತರ ಭಾರತದ ಛೋಟನಾಗಪುರದಲ್ಲಿ, ದ್ರಾವಿಡ ಭಾಷೆಯನ್ನು ಬಳಸುವ ಓರಾಯನರಲ್ಲಿ ಮತ್ತು ಕೋಲ್ ಭಾಷೆಯನ್ನು ಬಳಸುವ ಮುಂಡರಲ್ಲಿ ಬಲೂಚಿಸ್ಥಾನದ ಬ್ರಾಹುಇ ಭಾಷೆಯಲ್ಲಿ ದ್ರಾವಿಡ ಭಾಷೆಗಳ ಪ್ರಭಾವವನ್ನು ಕಾಣಬಹುದಾಗಿದೆ. ಮುಖ್ಯವಾಗಿ ಭಾರತಕ್ಕೆ ಬಂದು ನೆಲಸಿದ ವಿವಿಧ ಜನಾಂಗಗಳು ತಮ್ಮ ಸಂಸ್ಕøತಿಯನ್ನು ಬೆಳಸಿ, ಅವೆಲ್ಲವನ್ನೂ ಒಂದುಗೂಡಿಸಿ, ಭಾರತೀಯ ಸಂಸ್ಕøತಿಯನ್ನು ರೂಪಿಸಿಕೊಂಡಿದ್ದು ಇತಿಹಾಸದ ಮುಖ್ಯ ಘಟನೆಯಾಗಿದೆ. ಈ ಸಂಸ್ಕøತಿಯ ಸಾಗರದಲ್ಲಿ ಗುಂಪುಗಳ ಕೊಡುಗೆಯನ್ನು ಬೇರ್ಪಡಿಸುವುದು ಸುಲಭದ ಕೆಲಸವಾಗದಿದ್ದರೂ ಅವುಗಳ ಮುಖ್ಯ ಲಕ್ಷಣಗಳು ತೋರಿಸುವುದು ಕಷ್ಟದ ಕೆಲಸವಾಗದು. ಭೌಗೋಳಿಕ ಹರಡುವಿಕೆ right|300px|ದ್ರಾವಿಡ ಭಾಷೆಗಳ ಹರಡುವಿಕೆ ದ್ರಾವಿಡರು ನಾಗರಿಕರಾಗಿದ್ದು ಭಾರತದಲ್ಲಿ ಪಟ್ಟಣಗಳನ್ನು ಕಟ್ಟಿ ನಗರ ನಾಗರಿಕತೆಯನ್ನು ರೂಪಿಸಿದರು. ವ್ಯಾಪಾರ ಮತ್ತು ವಾಣಜ್ಯ ಸಂಬಂಧಗಳನ್ನು ಬೆಳೆಸಿದರು. ಭಾರತದ ಎಲ್ಲ ಕಡೆಗಳಲ್ಲೂ ನೆಲೆಸಿದರು. ಬಲೂಚಿಸ್ತಾನದಲ್ಲಿ ಬಳಕೆಯಲ್ಲಿರುವ ಬ್ರಾಹುಇ ಭಾಷೆ ದ್ರಾವಿಡ ಭಾಷೆಯ ಛಾಯೆಯನ್ನು ಹೊಂದಿರುವುದರಿಂದ, ದ್ರಾವಿಡರು ಸಿಂಧ್, ರಜಪುಟಾಣ ಮತ್ತು ಮಾಳವದ ಮೂಲಕ ಈಗಿನ ಮಹಾರಾಷ್ಟ್ರ ಪ್ರದೇಶ ಮತ್ತು ದಕ್ಷಿಣ ಭಾರತದ ಇತರ ಪ್ರದೇಶಗಳಿಗು ಪ್ರಸರಿಸಿದರೆಂದು ಹೇಳಬಹುದಾಗಿದೆ. ಅಲ್ಲದೆ ಸುಪ್ರಸಿದ್ಧವಾದ ಸಿಂಧೂಕಣಿವೆ ನಾಗರಿಕತೆ ಪಟ್ಟಣದಲ್ಲಿ ಕೇಂದ್ರೀಕೃತವಾಗಿದ್ದು, ಅಲ್ಲಿನ ಭಾಷೆ ದ್ರಾವಿಡ ಭಾಷೆಯನ್ನು ಹೋಲುವುದರಿಂದ ಸಿಂಧೂಕಣಿವೆಯ ಜನ ದ್ರಾವಿಡ ಗುಂಪಿಗೆ ಸೇರಿದವರೆಂದು ಹೇಳವುದು ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ ಹೀರಾಸ್ ಮತ್ತು ಎಸ್.ಆರ್.ರಾವ್ ಅವರು ಇದೇ ತೀರ್ಮಾನಕ್ಕೆ ಬಂದಿದ್ದಾರೆ. ಪ್ರಭಾವ ಆರ್ಯರು ಭಾರತಕ್ಕೆ ಬಂದಾಗ ಇಲ್ಲಿ ಎರಡು ಗುಂಪುಗಳನ್ನು ಕಂಡರು. ಅವರನ್ನು ದಾಸ ಅಥವಾ ದಸ್ಯು ಮತ್ತು ನಿಷಾದರೆಂದು ಕರೆದರು. ಶತ್ರುಗಳಾದ ಅವರು ಆರ್ಯರಿಗೆ ದಾಸರೆನಿಸಿಕೊಂಡರು, ಕಳ್ಳರೆನಿಸಿಕೊಂಡರು. ಆದರೆ ದಾಸ ಅಥವಾ ದಸ್ಯು ಎಂಬ ಪದಗಳು ಪ್ರಾಚೀನ ಇರಾನಿನಲ್ಲೇ ಬಳಕೆಯಲ್ಲಿದ್ದುವು. ಅದು ಗುಂಪಿನ ನಾಮವಾಗಿತ್ತೇ ಹೊರತು ಸೇವಕನೆಂಬ ಅರ್ಥದಲ್ಲಿರಲಿಲ್ಲ. ಅಲ್ಲದೆ ಭಾರತದ ತತ್ತ್ವಶಾಸ್ತ್ರ, ಸಾಹಿತ್ಯ, ಧರ್ಮ ಮತ್ತು ಸಂಸ್ಕತಿಯಲ್ಲಿಯ ಉದಾತ್ತ ಮತ್ತು ಒಳ್ಳೆಯ ಭಾವನೆಗಳೆಲ್ಲ ಆರ್ಯರಿಂದಲೇ ರೂಪಿತವಾಯಿತೆಂದೂ ಇಲ್ಲಿನ ಕಂದಾಚಾರ ಪದ್ಧತಿ ಮತ್ತು ಹಿಂದೂ ಧರ್ಮದಲ್ಲಿ ಕಂಡು ಬರುವ ಮೂಢನಂಬಿಕೆಗಳು, ಕೆಟ್ಟ ಲಕ್ಷಣಗಳು ದ್ರಾವಿಡರಿಂದ ಬಂತೆಂದೂ ಹೇಳುವುದು ವಾಡಿಕೆ. ಆದರೆ ಈ ಅಭಿಪ್ರಾಯ ಈಗ ತಿರಸ್ಕರಿಸಲ್ಪಟ್ಟಿದೆ. ಆರ್ಯ ಮತ್ತು ದ್ರಾವಿಡ ಲಕ್ಷಣಗಳನ್ನು ಅಳವಾಗಿ ಪಾಂಡಿತ್ಯಪೂರ್ಣವಾಗಿ ವಿವೇಚಿಸಿರುವ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಭಾರತದ ನಾಗರಿಕತೆ ಮತ್ತು ಸಂಸ್ಕತಿಯ ಬೆಳವಣಿಗೆಯಲ್ಲಿ ದ್ರಾವಿಡರ ಪಾತ್ರ ಹಿರಿದಾದುದೆಂದೂ ಸಿಂಧೂ ಕಣಿವೆಯ ಸಂಸ್ಕತಿ ಆರ್ಯರಿಗಿಂತ ಉತ್ತಮವಾದುದೆಂದೂ ತಿಳಿದು ಬಂದಿದೆ. ಹಿಂದೂಧರ್ಮದ ಅನೇಕ ದೇವತೆಗಳು ದ್ರಾವಿಡರ ಕೊಡುಗೆಯೇ ಶಿವಾರಾಧನೆ, ಮಾತೃದೇವತೆಯ ಪೂಜೆ, ನಂದಿ, ಶಿವ ಉಮೆಯರ ಪೂಜೆ, ಯೋಗ - ಇವು ದ್ರಾವಿಡ ಲಕ್ಷಣಗಳು. ದೇವರನ್ನು ಪೂಜಿಸುವ ಪದ್ಧತಿ ದ್ರಾವಿಡರದೇ ಆಗಿದೆ. ಹಿಂದೂಧರ್ಮದಲ್ಲಿ ಶ್ರೇಷ್ಠಸ್ಥಾನ ಪಡೆದ ಶಿವ, ಉಮೆ, ವಿಷ್ಣು, ಹನುಮಂತ ಮತ್ತು ಗಣೇಶ ದ್ರಾವಿಡ ದೇವರುಗಳು ಹಿಂದೂ ಧರ್ಮದಲ್ಲಿ ಸೇರಿಹೋಗಿವೆ. ದ್ರಾವಿಡರ ಪ್ರಭಾವವನ್ನು ಭಾರತೀಯರ ಸಂಸ್ಕತಿಯ ನಾನಾ ಪ್ರಕಾರಗಳಲ್ಲಿ ಕಾಣಬಹುದಾಗಿದೆ. ಉತ್ತರ ಭಾರತದ ಊರುಗಳ ಹೆಸರಿನಲ್ಲಿ, ವೇದ ಮತ್ತು ಭಾರತದ ಸಾಹಿತ್ಯದಲ್ಲಿ, ಆರ್ಯರ ಭಾಷೆಗಳಲ್ಲಿ. ಮತಪದ್ಧತಿಯಲ್ಲಿ ಸಂಪ್ರದಾಯದಲ್ಲಿ ಪುರಾಣ ಇತಿಹಾಸದಲ್ಲಿ, ದ್ರಾವಿಡ ಲಕ್ಷಣಗಳನ್ನು ಗುರುತಿಸಲಾಗಿದೆ. ಆರ್ಯ ಸಂಸ್ಕøತಿಯ ಬಹುಭಾಗ ದ್ರಾವಿಡರದೇ ಆಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆ, ಭಾರತೀಯ ಭಾಷೆಗಳು, ಸಮಾಜಿಕ ಸಂಸ್ಥೆಗಳು ಮತ್ತು ಸಂಪ್ರದಾಯ ಮದುವೆ ಮುಂತಾದ ಪದ್ಧತಿಗಳು - ಇವುಗಳಲ್ಲಿ ದ್ರಾವಿಡರ ಪ್ರಭಾವವಿದೆ. ನಡೆ ನುಡಿಗಳಲ್ಲಿ ದ್ರಾವಿಡ ಛಾಯೆಯಿದೆ.ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದ್ರಾವಿಡ ಭಾಷೆಗಳುBritannica. 2008. Encyclopædia Britannica Online. 30 Jun. 2008 ಬಾಹ್ಯ ಸಂಪರ್ಕಗಳು ದ್ರಾವಿಡ ಭಾಷೆಗಳ ಪದಕೋಶ ಎಥ್ನೋಲಾಗ್‍ನಲ್ಲಿ ದ್ರಾವಿಡ ಭಾಷೆಗಳ ಪುಟ. ದ್ರಾವಿಡ ಭಾಷಾ ಕುಟುಂಬಕ್ಕೆ 4,500 ವರ್ಷಗಳು!-28 May, 2018 ಉಲ್ಲೇಖ ವರ್ಗ:ಭಾರತೀಯ ಭಾಷೆಗಳು ವರ್ಗ:ಭಾಷಾ ಕುಟುಂಬಗಳು
ಬಸವಣ್ಣ
https://kn.wikipedia.org/wiki/ಬಸವಣ್ಣ
REDIRECT ಬಸವೇಶ್ವರ
ಬಸವೇಶ್ವರ
https://kn.wikipedia.org/wiki/ಬಸವೇಶ್ವರ
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ, ಅವರು ಅನುಭವ ಮಂಟಪ (ಅಥವಾ, "ಆಧ್ಯಾತ್ಮಿಕ ಅನುಭವದ ಭವನ), ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು.ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.Basava Encyclopædia Britannica (2012), Quote: "Basava, (flourished 12th century, South India), Hindu religious reformer, teacher, theologian, and administrator of the royal treasury of the Kalachuri-dynasty king Bijjala I (reigned 1156–67)."Fredrick Bunce (2010), Hindu deities, demi-gods, godlings, demons, and heroes, , page 983   ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯತ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ.ಕನ್ನಡ ಕವಿ ಹರಿಹರರಿಂದ ರಚಿತ (c.1180) ಬಸವರಾಜದೇವರ ರಗಳೆ (ಸಿ.ಎಸ್ .8080 ರಲ್ಲಿ 25 ವಿಭಾಗಗಳು ಲಭ್ಯವಿದೆ) ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ.ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ.ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ (ಅಕ್ಷರಶಃ, ಭಕ್ತಿಯ ಖಜಾಂಚಿ),ಬಸವಣ್ಣ (ಹಿರಿಯ ಸಹೋದರ ಬಸವ) ಅಥವಾ ಬಸವೇಶ್ವರ. ವಿಶೇಷ ಮಾಹಿತಿ:- ಬಸವಣ್ಣನವರನ್ನು "ಕರ್ನಾಟಕದ ಮಾರ್ಟಿನ್ ಲೂಥರ್" ಎಂದು ಕರೆಯುತ್ತಾರೆ. ಹೀಗೆ ಕರೆದವರು "ಸರ್ ಅರ್ಥರ್ ಮೈಲರ್". ಬಾಲ್ಯ ಜೀವನ ಬಸವಣ್ಣನವರು ಮೇ ೩ ರನ್ದು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾರೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಎಂದು ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.Jan Peter Schouten (1995), Revolution of the Mystics: On the Social Aspects of Vīraśaivism, Motilal Banarsidass, , page 4SK Das (2005), A History of Indian Literature, 500–1399: From Courtly to the Popular, Sahitya Akademi, , page 163 ಬಸವಣ್ಣ ಹನ್ನೆರಡು ವರ್ಷಗಳ ಕಾಲ ಕುಂಡಲಸಂಗಮದಲ್ಲಿ ಅಧ್ಯಯನ ಮಾಡಿದರು . ನಂತರ ಲಕುಲಿಶಾ-ಪಶುಪಾಟ ಸಂಪ್ರದಾಯದ ಒಂದು ಶೈವ ಕಲಿಕೆಯ ಕಲಿಕೆಯಲ್ಲಿ ಸಂಗಮೇಶ್ವರದಲ್ಲಿ ಮುಗಿಸಿದರು. ಬಸವಣ್ಣ ತನ್ನ ತಾಯಿಯ ಕಡೆಯಿಂದ ಸೋದರ ಸಂಬಂಧಿಯನ್ನು ಮದುವೆಯಾದ. ಅವರ ಪತ್ನಿ ಗಂಗಾಂಬಿಕೆ ಕಲಚುರಿ ರಾಜ ಬಿಜ್ಜಳ ಪ್ರಧಾನ ಮಂತ್ರಿಯ ಮಗಳು, ಧಾರ್ಮಿಕ ಬೆಳವಣಿಗೆಗಳು ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವರಲಿದ್ದಾನೆಯೇ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧ. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗ ಬಹುದು ಎಂದು ಬಸವಣ್ಣವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ ಎಂದೂ ಕರೆಯಲಾಗುತ್ತದೆ. ಮಾನವಿಯತೆ. ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದರು. ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೂ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾ ವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ. ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ಅನುಲೋಮ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು. ಇವರು ಷಟ್ ಸ್ಥಲ ವಚನ, ಕಾಲಜ್ಞಾನ ವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಇವರನ್ನು ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ. ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾವಿ ಜಿಲ್ಲೆಯ ಅರ್ಜುನವಾಡದ ಶಿಲಾಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗಣಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ. ಸಾಮಾಜಿಕ ಸಮಾನತೆ thumb|ಅಣ್ಣ ಬಸವಣ್ಣ ಇವನಾರವ ಇವನಾರವ ಇವನಾರವ ನೆಂದೆನಿಸದಿರಯ್ಯಾ ಇವ ನಮ್ಮವ ಇವ ನಮ್ಮವ ಇವ ನಮ್ಮವ ನೆಂದೆನಿಸಯ್ಯಾ ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ. ಶೂದ್ರರಾದ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು. ಇವರು ಮಾತ್ರ ಜನಿವಾರ ಧರಿಸುವ ಹಕ್ಕನ್ನು ಪಡೆದಿದ್ದರು. ಜನಿವಾರ ಧರಿಸುವ ಬ್ರಾಹಣ ಓದಿರಬಹುದು, ಬರೆದಿರಬಹುದು ಆದರೆ ಕಾಯಕಜೀವಿಯಾಗಿ ಉತ್ಪಾದನೆಯಲ್ಲಿ ತೊಡಗಿಲ್ಲ. ಉತ್ಪಾದನೆಯ ಅನುಭವದಿಂದ ಬರುವ ಜ್ಞಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆಯಲಿಲ್ಲ. ಕ್ಷತ್ರಿಯ ನಾಗಿರಬಹುದು ಆದರೆ ಉತ್ಪಾದನೆಯಲ್ಲಿ ತೊಡಗಲಿಲ್ಲ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು, ಕೃಷಿಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತಃ ಉತ್ಪಾದನೆ ಮಾಡಲಿಲ್ಲ. ಈ ಮೂರೂ ವರ್ಣದವರಿಗೂ ಜನಿವಾರ ಇದೆ. ಆದರೆ ಉತ್ಪಾದನೆಯಲ್ಲಿ ಕಾಯಕ ಜೀವಿಗಳಿಗೆ ಮತ್ತು ಪಂಚಮರಿಗೆ ಜನಿವಾರ ಇಲ್ಲ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೆ ಸುಖ ಜೀವನವನ್ನು ಅನುಭವಿಸಿದರು. ಯಾರಿಗೆ ಜನಿವಾರ ಇದ್ದಿದ್ದಿಲ್ಲವೂ ಅವರು ದುಡಿದೂ ಕಷ್ಟ ಜೀವನವನ್ನು ಅನುಭವಿಸಿದರು. ಅಂತೆಯೆ ಬಸವಣ್ಣನವರು ಕಟ್ಟ ಕಡೆಗೆ ಮನುಷ್ಯನ ಕಡೆಗೆ ಬಂದರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. "ಜಾತಿ ಸಂಕರವಾದ ಬಳಿಕ ಕುಲವನರಸುವರೆ ?" ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಶರಣ ಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿ ವಿಷವನ್ನು ಹೊರ ಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು. thumb|right ಸಂಕ್ಷಿಪ್ತ ಪರಿಚಯ ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು. ಇಂಗಳೇಶ್ವರ ಬಾಗೇ ವಾಡಿಯಲ್ಲಿ ಶೈವ ಬ್ರಾಹ್ಮಣ ದಂಪತಿಗಳಾದ ಮಾದರಸ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖಮಾಸದ ಅಕ್ಷಯ ತೃತೀಯದಂದು (ದಿ. ಎಪ್ರಿಲ್ ೩೦ ೧೧೩೪) ರೋಹಿಣಿ ನಕ್ಷತ್ರದಲ್ಲಿ ಜನಿಸಿದರು. ಇವರು ಯಾವುದೇ ಅಂಧಶ್ರದ್ಧೆ ಜಡ ಸಂಪ್ರದಾಯಗಳನ್ನೊಪ್ಪದ ಸತ್ಯಾನ್ವೇಷಕರಾಗಿ ಹೆತ್ತವರನ್ನು, ಬಂಧು ಬಾಂಧವರನ್ನು ತೊರೆದು ವಿದ್ಯಾಕಾಂಕ್ಷಿಯಾಗಿ ಕೂಡಲ ಸಂಗಮದ ಗುರುಕುಲಕ್ಕೆ ಬಂದರು. ಶಾಸ್ತ್ರಾಧ್ಯಯನ, ಯೋಗಾಭ್ಯಾಸಗಳಲ್ಲಿ ಬಾಲ್ಯವನ್ನು ಕಳೆದು ತಾರುಣ್ಯಕ್ಕೆ ಕಾಲಿರಿಸಿದರು. ಜನರಲ್ಲಿ ಮನೆ ಮಾಡಿಕೊಂಡಿದ್ದ ಮೌಢ್ಯತೆ, ಕಂದಾಚಾರ, ಜಾತೀಯತೆಗಳನ್ನು ಕಂಡು ಮನನೊಂದು ಪರಿಹಾರವನ್ನು ಅರಸತೊಡಗಿದರು. ಒಂದು ದಿನ (ದಿ. ೧೪ನೇ ಜನವರಿ ೧೧೫೫) ಪರಮಾತ್ಮನ ದಿವ್ಯ ದರ್ಶನವಾಯಿತು; ಅನುಗ್ರಹಿತರಾದರು. ಬ್ರಹ್ಮ-ವಿಷ್ಣು-ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ಮೀರಿದ ಸೃಷ್ಟಿಕರ್ತನೇ ಶ್ರೇಷ್ಠವೆಂದು ಘೋಷಿಸಿ ಆ ದೇವನನ್ನು ಲಿಂಗದೇವ ಎಂದು ಕರೆದರು. ನಿರಾಕಾರ ದೇವನಿಗೆ ಮನುಷ್ಯರ, ಪ್ರಾಣಿಗಳ ಆಕಾರ ಕೊಡುವುದು ಸರಿಯಲ್ಲ ಎಂಬ ಭಾವ ತಳೆದು, ದೇವನ ಸಾಕಾರ ಕೃತಿಯೇ ಬ್ರಹ್ಮಾಂಡ, ಇದು ಗೋಲಾಕಾರದಲ್ಲಿದೆ. ಆದ್ದರಿಂದ ಲಿಂಗದೇವನನ್ನು ವಿಶ್ವದಾಕಾರದಲ್ಲಿ ಪೂಜಿಸುವುದು ಸರಿ ಎಂದು ಇಷ್ಟಲಿಂಗದ ಪರಿಕಲ್ಪನೆ ಕೊಟ್ಟರು. ದೇವರ ಕುರುಹಾದ ಇಷ್ಟಲಿಂಗವು ಮಾನವನ ಜಾತಿ, ವರ್ಣ, ವರ್ಗ ಭೇದಗಳನ್ನು ಕಳೆದು ಶರಣನನ್ನಾಗಿ ಮಾಡುವ ಸಾಧನವಾಗಬೇಕೆಂದು ಅದನ್ನು ಗಣ ಲಾಂಛನವನ್ನಾಗಿ ಮಾಡಿದರು. ಪರಮಾತ್ಮನ ದಿವ್ಯಾನುಭವ ಪಡೆದು, ನವ ಸಮಾಜ ನಿರ್ಮಾಣದ ರೂಪುರೇಷೆಗಳನ್ನು ತಮ್ಮ ಮನದಲ್ಲಿ ಹೊಂದಿ ಕಲ್ಯಾಣದ ಕಾರ್ಯಕ್ಷೇತ್ರವನ್ನು ಪ್ರವೇಶಿಸಿದರು. ಸೋದರ ಮಾವನ ಮಗಳು ನೀಲಾ೦ಬಿಕೆಯನ್ನು ವಿವಾಹವಾಗಿ ಕರಣಿಕ ಕಾಯಕ ಕೈಗೊಂಡರು. ಅಲ್ಲಿಂದ ಮುಂದೆ ಭಂಡಾರಿಯಾಗಿ, ಪ್ರಧಾನಿ(ದಂಡನಾಯಕ)ಯಾಗಿ ಕಾಯಕ ನಿರ್ವಹಿಸಿದರು. ಅನುಭವ ಮಂಟಪ ಸ್ಥಾಪಿಸಿ ಧರ್ಮ ಪ್ರಚಾರ ಮಾಡಿದರು. ಎಲ್ಲರ ಮನೆ, ಮನಗಳ ಬಾಗಿಲಿಗೂ ಧರ್ಮಗಂಗೆ ಹರಿಯುವಂತೆ ಮಾಡಿದರು. ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿ ಲಿಂಗಾಯತರಾದ ಎಲ್ಲ ಶರಣ ಬಂಧುಗಳನ್ನು ಸಮಾನ ಭಾವದಿಂದ ಕಂಡರು. ಹುಟ್ಟಿನಿಂದ ಬ್ರಾಹ್ಮಣರಾಗಿ, ಸಂಸ್ಕಾರದಿಂದ ಶರಣರಾದ ಮಧುವರಸರ ಮಗಳನ್ನು ಹುಟ್ಟಿನಿಂದ ಸಮಗಾರರಾಗಿ ಸಂಸ್ಕಾರದಿಂದ ಶರಣರಾದ ಹರಳಯ್ಯನವರ ಮಗನಿಗೆ ಕೊಟ್ಟು ವಿವಾಹ ಮಾಡಲು ಪ್ರೇರಣೆ ನೀಡಿದರು. ಈ ವಿವಾಹದಿಂದ ಸಂಪ್ರದಾಯವಾದಿಗಳು ಸಿಡಿದೆದ್ದು ಬಿಜ್ಜಳ ಮಹಾರಾಜನನ್ನು ಬಸವಣ್ಣನವರ ವಿರುದ್ದ ಪ್ರೇರೇಪಿಸಿ ಧರ್ಮಗುರು ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ನೀಡುವಂತೆ ಮಾಡಿದರು. ಧರ್ಮಪಿತರು ಗಡಿಪಾರು ಶಿಕ್ಷೆ ಸ್ವೀಕರಿಸಿ ಕಲ್ಯಾಣದಿಂದ ಹೊರಟ ನಂತರ ಹರಳಯ್ಯ, ಮಧುವರಸ, ಶೀಲವಂತರ ಬಂಧನವಾಗಿ ಅವರು ವರ್ಣಾಂತರ ವಿವಾಹದಲ್ಲಿ ಭಾಗಿಯಾದುದ ಕ್ಕಾಗಿ ಕಣ್ಣು ಕೀಳಿಸುವ ಶಿಕ್ಷೆ, ಎಳೆ ಹೊಟ್ಟೆ ಶಿಕ್ಷೆಗೆ ಒಳಗಾಗಿ ಪ್ರಾಣ ಬಿಡಬೇಕಾಯಿತು. ಜಾತಿವಾದಿಗಳು ವಚನ ಸಾಹಿತ್ಯವನ್ನು ನಾಶ ಮಾಡಲು ಸನ್ನದ್ಧರಾದಾಗ, ವೀರಮಾತೆ ಅಕ್ಕನಾಗಲಾಂಬಿಕೆ, ಚಿನ್ಮಯಜ್ಞಾನಿ ಚೆನ್ನಬಸವಣ್ಣ, ವೀರ ಗಣಾಚಾರಿ ಮಡಿವಾಳ ಮಾಚಯ್ಯನವರು ವೀರಾಗ್ರಣಿಗಳಾಗಿ ಕಾದಾಡಿ ವಚನ ವಾಙ್ಮಯ ನಿಧಿಯನ್ನು ಉಳಿಸಿಕೊಟ್ಟರು. ಅದಿಂದು ನಮ್ಮೆಲ್ಲರ, ಕರ್ನಾಟಕದ, ಭಾರತದ, ವಿಶ್ವದ ಹೆಮ್ಮೆಯ ಆಸ್ತಿಯಾಗಿದೆ. ಇಂತಹ ಮಹಾನ್ ನೇತಾರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕರು; ಧರ್ಮಪಿತರು, ಮಂತ್ರಪುರುಷರು. ೬೨ ವರ್ಷ ೩ ತಿಂಗಳು ೨ ದಿವಸಗಳ ಕಾಲ ಇಳೆಯಲ್ಲಿ ಬಾಳಿದ ಬಸವಣ್ಣನವರು ನಳನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿಯಂದು (ದಿ. ಜುಲೈ ೭ ೧೧೯೬) ಉರಿಯುಂಡ ಕರ್ಪುರದಂತೆ ಲಿಂಗೈಕ್ಯರಾದರು. ಮಂಗಳವೇಡದ ರಾಜ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಸವಣ್ಣ ಹಲವಾರು ಜನಪರ ಮತ್ತು ಸಮಾಜ ಸುಧಾರಣೆ ಕ್ರಮಗಳನ್ನು ಕೈಗೊಂಡರು. ಕಾಯಕವೇ ಕೈಲಾಸ ವೆಂದು ಸಾರಿ, ಜನರನ್ನು ದುಡಿದು ಬದುಕುವ ಪಥದಲ್ಲಿ ಮುನ್ನೆಡೆಸಿದರು. ಜಾತಿ, ಲಿಂಗ, ಭಾಷೆ ಭೇದವಿಲ್ಲದೆ, ಶರಣ ತತ್ವದಲ್ಲಿ, ಸಮಾನತೆಯಲ್ಲಿ ಮತ್ತು ಕಾಯಕ ನಿಷ್ಠೆಯಲ್ಲಿ ನಂಬಿಕೆಯುಳ್ಳವರನ್ನು ನಿಜವಾದ " ಶಿವಶರಣ " ರೆಂದು ಕರೆದರು. ದಂಪತಿಗಳನ್ನು ಮತ್ತು ನವ ವಧುವರಾರಾದ ಶೀಲವಂತ-ಲಾವಣ್ಯರನ್ನು ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ಕೊಲ್ಲುತ್ತಾನೆ. ಬಿಜ್ಜಳನ ಸೇನೆ ಶಿವಶರಣರನ್ನು ಕಂಡಲ್ಲಿ ಕೊಲ್ಲ ತೊಡಗಿ, ರಕ್ತದ ಹೊಳೆ ಹರಿಸುತ್ತದೆ. ಬಸವಣ್ಣನವರು ೧೧೯೬ ರಲ್ಲಿ ಕೂಡಲಸಂಗಮಕ್ಕೆ ಮರಳಿ ಅಲ್ಲೇ ಲಿಂಗೈಕ್ಯರಾದರು. ಅವರ ಸಮಾಧಿಯು ಅಲ್ಲಿಯೇ ಇದೆ. ಅವರ ಸಮಾಧಿಯನ್ನು ಕರ್ನಾಟಕ ಸರಕಾರದಿಂದ ಬಸವ ಸಾಗರ ಹಿನ್ನಿರಿನಲ್ಲಿ ಮುಳಗದಂತೆ ರಕ್ಷಿಸಿಲ್ಪಟ್ಟಿದೆ. ಬಸವಣ್ಣನವರ ಕಾಯಕದ ಮಹತ್ವ ಮತ್ತು ಕಾಯಕ ಸಮಾನತೆ "ದೇವ ಸಹಿತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡಡೆ ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ." ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ. "ಮನೆ ನೋಡಾ ಬಡವರು, ಮನ ನೋಡಾ ಘನ ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು. ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು. ಕೂಡಲಸಂಗನ ಶರಣರು ಸ್ವತಂತ್ರ ಧೀರರು." ಎಂದು ಬಸವಣ್ಣನವರು ಕಾಯಕಜೀವಿಗಳಾದ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯನವರ ವ್ಯಕ್ತಿತ್ವವನ್ನು ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧ ರೂ ಸ್ವತಂತ್ರ ಧೀರರೂ ಆಗಿದ್ದಾರೆ. "ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ" ಎಂದು ಆಯ್ದಕ್ಕಿ ಲಕ್ಕಮ್ಮ ಕಾಯಕದ ಮಹತ್ವ ವ್ಯಕ್ತಪಡಿಸುತ್ತಾಳೆ. "ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು ಜಂಗಮವಾದರೂ ಕಾಯಕದಿಂದಲೇ ವೇಷ ಪಾಶ ಹರಿವುದು ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು" ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನ ತುಂಬುಗುವಂತೆ ಹೇಳಿದ್ದಾರೆ. "ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರೂ ಮರೆಯಬೇಕು ಲಿಂಗಪೂಜೆಯಾದರೂ ಮರೆಯಬೇಕು ಜಂಗಮ ಮುಂದೆ ನಿಂದಿದ್ದರೂ ಹಂಗು ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು." ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ. "ಆವ ಕಾಯಕವಾದರೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ." ಹುಲ್ಲಿನ ಹೊರೆ ಹೊರುವ ಕಾಯಕದ ಸೋಮಯ್ಯ ಬದುಕೆಂಬುದು ಜೈವಿಕ ಪ್ರಕ್ರಿಯೆ ಎಂದು ಹೀಗೆ ಸೂಚಿಸುತ್ತಾನೆ. ಆ ಮೂಲಕ ಸಾವನ್ನು ಗೆಲ್ಲುತ್ತಾನೆ. ದೇವರ ಹಂಗಿಗೆ ಒಳಗಾಗದೆ ದೇವರನ್ನು ಆರಾಧಿಸುವ ಕ್ರಮವನ್ನು ನಮಗೆ ಕಲಿಸಿಕೊಟ್ಟಿದ್ದಾನೆ. ಜನಸಾಮಾನ್ಯರು ಶರಣಸಂಕುಲ ಸೇರಿ ಹೀಗೆ ಆತ್ಮಸ್ಥೈರ್ಯ ಪಡೆದು ಅಸಾಮಾನ್ಯರಾಗುವಲ್ಲಿ ಬಸವಣ್ಣನವರ ಅಪಾರ ಶ್ರಮ ಅಡಗಿದೆ. ಅಂತೆಯೆ ಶರಣರಿಗೆ ಬದುಕೆಂಬುದು ದುಃಖದ ಆಗರವೆಂದು ಅನಿಸುವುದಿಲ್ಲ. ಶರಣರು ಸವಾಲನ್ನು ಎದುರಿಸುತ್ತ ಆನಂದವನ್ನು ಅನುಭವಿಸುವವರು. "ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ ಸತ್ಯಶುದ್ಧವಿಲ್ಲದುದು ಕಾಯಕವಲ್ಲ ಆಸೆಯೆಂಬುದು ಭವದ ಬೀಜ ನಿರಾಸೆಯೆಂಬುದು ನಿತ್ಯಮುಕ್ತಿ ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ." ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ. ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವ ರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ. ಕಾಯಕದ ವಸ್ತುಗಳು ಹೀಗೆ ಕಾವ್ಯ ಪ್ರತಿಮೆಗಳಾಗುತ್ತಲೇ ತತ್ತ್ವವನ್ನು ಸ್ಫುರಿಸತೊಡಗುತ್ತವೆ. ಬಸವಣ್ಣನವರ ಅಂಚೆ ಚೀಟಿ ಮತ್ತು ನಾಣ್ಯ thumb|ಗುರು ಬಸವಣ್ಣನವರ ಚಿತ್ರವನ್ನೊಳಗೊಂಡ ಅಂಚೆಚೀಟಿಗಳು ೧೧ನೇ ಮೇ ೧೯೬೭ರಂದು, ಗುರು ಬಸವಣ್ಣವರ ೮೦೦ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ತ ಭಾರತ ಸರಕಾರದ ಅಂಚೆ ಇಲಾಖೆಯು, ೧೫ ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿ ಯನ್ನು ಮುದ್ರಿಸಿತು.ref>https://lingayatreligion.com/GuruBasava/Basava_On_Stamp</ref> ೧೯೯೭ರಲ್ಲಿ ೨ ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು, ಅಂಚೆ ಇಲಾಖೆಯು ಮತ್ತೆ ಮುದ್ರಿಸಿತು. https://www.mintageworld.com/media/detail/3215-commemorative-5-rupee-coin-of-mahatma-basaveshwar/ ಗುರು ಬಸವಣ್ಣವರ ಭಾವಚಿತ್ರವುಳ್ಳ ೫ ರೂಪಾಯಿ ಮತ್ತು ೧೦೦ ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟವರಲ್ಲಿ ಪ್ರಥಮ ಕನ್ನಡಿಗ ರಾಗಿದ್ದಾರೆ. ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ್ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು. https://timesofindia.indiatimes.com/india/PM-Modi-unveils-12th-century-social-reformer-Basavannas-statue-in-London/articleshow/49784040.cms ವಚನಗಳು ಚಿತ್ರಗಳು ಉಲ್ಲೇಖಗಳು ಬಾಹ್ಯ ಸಂಪರ್ಕಗಳು ವಿಶ್ವಗುರು ಬಸವಣ್ಣ ವಿಶ್ವಗುರು ಬಸವಣ್ಣ ವಿಶ್ವಗುರು ಬಸವಣ್ಣ ವಿಶ್ವಗುರು ಬಸವಣ್ಣ ವಿಶ್ವಗುರು ಬಸವಣ್ಣನವರ ಸಂಕ್ಷಿಪ್ತ ಜೀವನ ಚರಿತ್ರೆ ವಿಚಾರಮಂಟಪ.ನೆಟ್ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರ ವಚನಗಳು ಲಿಂಗಾಯತ ಲಿಂಗಾಯತ: ವರ್ಗ:ಲಿಂಗಾಯತ ವರ್ಗ:ತತ್ತ್ವಶಾಸ್ತ್ರ ವರ್ಗ:ವೀರಶೈವ ಮತ ವರ್ಗ:ಕನ್ನಡ ಕವಿಗಳು ವರ್ಗ:ವಚನಕಾರರು
ಬಿ. ಜಿ. ಎಲ್. ಸ್ವಾಮಿ
https://kn.wikipedia.org/wiki/ಬಿ._ಜಿ._ಎಲ್._ಸ್ವಾಮಿ
ಡಾ. ಬಿ. ಜಿ. ಎಲ್. ಸ್ವಾಮಿ (ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ) ಕರ್ನಾಟಕದ ಹಿರಿಯ ವಿಜ್ಞಾನಿ ಮತ್ತು ಸಾಹಿತಿ. ಹಿರಿಯ ವಿದ್ವಾಂಸ, ಚಿಂತನಶೀಲ ಬರಹಗಾರ. ಜೀವನ 'ಬಿ.ಜಿ.ಎಲ್.ಸ್ವಾಮಿ'ಯವರು ಕನ್ನಡದ ಪ್ರಸಿದ್ಧ ಸಾಹಿತಿ ಡಿ. ವಿ. ಗುಂಡಪ್ಪನವರ ಏಕಮಾತ್ರ ಪುತ್ರರು. ಮನೆಯಲ್ಲಿ ಸಾಹಿತ್ಯ, ಸಂಗೀತ, ಚಿಂತನಶೀಲತೆ ಗಾಳಿಯಲ್ಲೇ ಬೆರೆತುಹೋಗಿದ್ದವು. ಆದರೆ ಹಣಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಸ್ವಾಮಿಗೆ ಐದು ವರ್ಷವಾಗಿದ್ದಾಗ ಅವರ ತಾಯಿ ತೀರಿಕೊಂಡರು. ಬೆಂಗಳೂರಿನ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಸ್ವಾಮಿ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೩೯ರಲ್ಲಿ ಸಸ್ಯ ಶಾಸ್ತ್ರವನ್ನು ಅಧ್ಯಯನ ಮಾಡಿ ಬಿಎಸ್‌ಸಿ (ಆನರ್ಸ್) ಪರೀಕ್ಷೆಯಲ್ಲಿ ಮೊದಲ ತರಗತಿ ಪಡೆದರು. ಮನೆಯನ್ನೇ ಸಂಶೋಧನಾಲಯವನ್ನಾಗಿ ಮಾಡಿಕೊಂಡು ಸಾಧಾರಣವಾದ ಉಪಕರಣಗಳನ್ನು ಬಳಸಿಕೊಂಡು, ಸಂಶೋಧನಾ ಲೇಖನಗಳನ್ನು ಬರೆದರು. ಇವು ಹೊರದೇಶಗಳಲ್ಲೂ ಪ್ರಕಟವಾದವು. ೧೯೪೭ ರಲ್ಲಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಡಿ.ಎಸ್ಸಿ ಪದವಿ ಬಂದಿತು. ಅದೇವರ್ಷ ಅಮೆರಿಕದಲ್ಲಿ ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜಗತ್ಪ್ರಸಿದ್ಧ ಸಸ್ಯವಿಜ್ಞಾನಿ ಪ್ರೊಫೆಸರ್ ಇರ್ವಿಂಗ್ ಬೈಲಿಯ ಹತ್ತಿರ ಸಸ್ಯಶಾಸ್ತ್ರ ಅಧ್ಯಯನಕ್ಕೆ ಹೋಗಲು ಭಾರತ ಸರ್ಕಾರದ ನೆರವು ದೊರೆಯಿತು. ಹತ್ತು ತಿಂಗಳ ಅಧ್ಯಯನದ ನಂತರ ಅವರು ಭಾರತಕ್ಕೆ ಹಿಂದಿರುಗಿದಾಗ ಬೈಲಿ, ನನ್ನ ನಲವತ್ತು ವರ್ಷಗಳ ಅನುಭವದಲ್ಲಿ ಪೂರ್ವದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಮರ್ಥರು ಡಾ. ಸ್ವಾಮಿ' ಎಂದು ಬರೆದರು. ಆವರೆಗೆ ಆತ ಯಾರ ಹೆಸರನ್ನೂ ತನ್ನ ಸಂಶೋಧನೆಗಳೊಂದಿಗೆ ಸೇರಿಸಿರಲಿಲ್ಲ, ಆದರೆ ಸ್ವಾಮಿಯ ಹೆಸರನ್ನು ಸೇರಿಸಿದರು. ಮುಂದೆ ಇವರು ಮದ್ರಾಸಿನ (ಈಗಿನ ಚೆನ್ನೈ) ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು. ಡಾ.ಸ್ವಾಮಿಯವರ ಸಂಶೋಧನೆಗಳು thumb|180px|'ಬಿ ಜಿ ಎಲ್ ಸ್ವಾಮಿಯವರ ಮೈಸೂರು ಡೈರಿ' ಸಸ್ಯದ ಬೇರಿಗೂ ಕಾಂಡಕ್ಕೂ ಜೋಡಣೆಯ ಭಾಗವನ್ನು ಕುರಿತು ಒಂದು ನೂರು ವರ್ಷ ಎಲ್ಲ ಸಸ್ಯ ವಿಜ್ಞಾನಿಗಳೂ ಒಪ್ಪಿಕೊಂಡಿದ್ದ ಸಿದ್ಧಾಂತವೂ ಸ್ವಾಮಿಯವರ ಸಂಶೋಧನೆಯಿಂದ ತಲೆಕೆಳಗಾಯಿತು. ಇಂತಹ ಹಲವುಗ್ಗ ಎಂದು ಮಾತ್ರ ಕಾಣಸಿಗುವ ಅಪೂರ್ವ ಸಸ್ಯ ಇದು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಗುರು ಸ್ಥಾನದಲ್ಲಿಯೂ ಪಿತೃಸ್ಥಾನದಲ್ಲಿಯೂ ಇದ್ದ ಪ್ರೊ. ಇರವಿಂಗ್ ಡಬ್ಲ್ಯೂ ಬೈಲಿ ಯವರ ಗೌರವಾರ್ಥ ಈ ಗಿಡದ ಹೆಸರಿನಲ್ಲಿ ಅವರ ಹೆಸರು ಅಡಕಗೊಳಿಸಿದ್ದಾರೆ. ೧೯೫೦ರಲ್ಲಿ ಸ್ವಾಮಿ ಭಾರತಕ್ಕೆ ಹಿಂದಿರುಗಿದರು. ೧೯೫೩ರಲ್ಲಿ ಮದರಾಸಿನ ಪ್ರೆಸಿಡೆಸ್ಸಿ ಕಾಲೇಜಿನಲ್ಲಿ ಪ್ರಾಧಾಪಕರಾಗಿ ಇಪ್ಪತ್ತೈದು ವರ್ಷ ಕಾಲ ಅಲ್ಲಿ ಕೆಲಸ ಮಾಡಿದರು. ಸಸ್ಯ ಶಾಸ್ತ್ರದಲ್ಲಿ ಸಂಶೋಧನೆಯನ್ನು ಮುಂದುವರೆಸಿ ಅಮೆರಿಕ, ರಷ್ಯ ಮೊದಲಾದ ದೇಶಗಳಲ್ಲೂ ಕೀರ್ತಿ ಪಡೆದರು. ಮೂರು ವರ್ಷ ಪ್ರಿನ್ಸಿಪಾಲರಾಗಿದ್ದರು. ನೂರಾರು ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಆದರ್ಶ ಪ್ರಾಧ್ಯಾಪಕ, ಸಂಶೋಧಕ ಎನ್ನಿಸಿಕೊಂಡರು. ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿದ ಮೇಲೂ ಬಿಡುವು ಇಲ್ಲದೆ ಸಂಶೋಧನೆಯನ್ನು ಕೈಗೊಂಡರು. ೧೯೭೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋದರು. ಸ್ವಾಮಿ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ವಿಜ್ಞಾನದ ಸಂಶೋಧನೆಗಳನ್ನು ಕುರಿತು ಅತ್ಯಂತ ಪ್ರೌಢವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವೆಲ್ಲಾ ಹಲವಾರು ಪ್ರಸಿದ್ಧ ನಿಯತಕಾಲಿಕೆ ಹಾಗೂ ಪತ್ರಿಕೆಗಳಲ್ಲಿ ದಾಖಲಾಗಿವೆ. 'Proccedings of the National Institute of Sciences, Journal of the Bombay Natural history Society, ಇತ್ಯಾದಿಗಳಲ್ಲಿ ಪ್ರಕಟವಾದವು. ಅವುಗಳ ವಿಷಯಗಳು: Annals of Botony-ನಿಯಿತಕಾಲಿಕದಲ್ಲಿ ಪ್ರಕಟಿಸಲ್ಪಟ್ಟಿದೆ. Endosperm in Hypericum mysorensis Homologies of embryosacs in Angiosperms. Inverted Polarity of Embryosacs in Angiosperms and its relation to the Archegoniate theory. Botanical Gazzette-ನಿಯಿತಕಾಲಿಕದಲ್ಲಿ ಪ್ರಕಟಿಸಲ್ಪಟ್ಟಿದೆ. Embryosac and Fertilization in Cypripedium spectabilis. New Phylologist-ನಿಯತಕಾಲಿಕದಲ್ಲಿ ಪ್ರಕಟಿಸಲ್ಪಟ್ಟಿದೆ. Embryosac of Zexuine sulcata. ನಿಭಾಯಿಸಿದ ಪ್ರಮುಖ ಹುದ್ದೆಗಳು ಸ್ವಾಮಿಯವರು ಆಗಿನ ಕಾಲದ, ಭಾರತದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು. ೧೯೭೬ರಲ್ಲಿ ಅವರಿಗೆ ಬೀರಬಲ್ ಸಾಹನಿ ಸುವರ್ಣಪದಕ ದ ಗೌರವ ಲಭಿಸಿತು. ೧೯೭೪ರಲ್ಲಿ ರಷ್ಯದ 'ಲೆನಿನ್‌ಗ್ರಾಡ್‌ನ ಅಂತರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನ'ದ ಉಪಾಧ್ಯಕ್ಷರು. ಹಾರ್ವರ್ಡ್ ವಿಶ್ವವಿದ್ಯಾನಿಲಯದ `ಅಸೋಸಿಯೇಟ್ ಪ್ರೊಫೆಸರ್'. ಸಾಹಿತ್ಯ ಹಾಗೂ ಬಹುಮುಖಿ ವ್ಯಕ್ತಿತ್ವ thumb|right|180px|'ಬಿ ಜಿ ಎಲ್ ಸ್ವಾಮಿಯವರ ಪಂಚಕಲಶಗೋಪುರ' ಅವರ ಆಸಕ್ತಿ ವಿಜ್ಞಾನಕ್ಕೇ ಸೀಮಿತವಾಗಿರಲಿಲ್ಲ. ಸಂಗೀತ, ಚಿತ್ರಕಲೆಗಳಲ್ಲಿ ಆಳವಾದ ಪರಿಶ್ರಮ. ಸ್ವತಃ ಚಿತ್ರಗಳನ್ನು ಬರೆಯುತ್ತಿದ್ದರು. ಅವರ `ಹಸುರು ಹೊನ್ನು' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಈ ಪುಸ್ತಕದ ವಿನೋದ ಚಿತ್ರಗಳನ್ನು ಅವರೇ ಬರೆದರು. ಕನ್ನಡ ಸಾಹಿತ್ಯ ಪರಿಷತ್ತಿನ ವಾರಪತ್ರಿಕೆ, ಕನ್ನಡನುಡಿ, ಯಲ್ಲಿ ವಿಜ್ಞಾನಲೇಖನ. ವಿಜ್ಞಾನ ವಿಹಾರ, ಶೀರ್ಷಿಕೆಯಡಿಯಲ್ಲಿ, ದಾಖಲಾಗಿರುವ, ೪ ಲೇಖನಗಳು ಇಲ್ಲಿ ಉದ್ಧರಿಸಲು ಯೋಗ್ಯವಾಗಿವೆ. 'ಪ್ರಣಯ ಪ್ರಸಂಗ' (ಕನ್ನಡ ನುಡಿ, ಸೆಪ್ಟೆಂಬರ್ ೯, ೧೯೪೧) 'ಪ್ಲಾಟಿಪಸ್' (ಕನ್ನಡ ನುಡಿ, ಅಕ್ಟೋಬರ್, ೩, ೧೯೪೧) 'ಜೇಡನ ಚರಕ' (ಕನ್ನಡ ನುಡಿ, ಅಕ್ಟೋಬರ್ ೩೧, ೧೯೪೧) 'ಹಸಿವಿನ ಬಳ್ಳಿ' (ಕನ್ನಡ ನುಡಿ, ನವೆಂಬರ್, ೨೮, ೧೯೪೧)@ ವಿಜ್ಞಾನಿಯಾಗಿ ಅವರ ಸಂಶೋಧನೆಯ ಸಾಕಷ್ಟು ಭಾಗ ಸಾಹಿತ್ಯ, ಸಂಸ್ಕೃತಗಳೊಂದಿಗೆ ಸಂಬಂಧವಿದ್ದದ್ದು, ಉದಾಹರಣೆಗೆ, ಉಪನಿಷತ್ತುಗಳಲ್ಲಿ ಪ್ರಸ್ತಾಪವಾದ ಸಸ್ಯಗಳು, ಕನ್ನಡ ಕವಿಗಳು ವರ್ಣಿಸಿರುವ ಸಸ್ಯಗಳು ಇವನ್ನು ಅಧ್ಯಯನ ಮಾಡುತ್ತಿದ್ದರು. `[ಹಸುರು ಹೊನ್ನು]' ಪುಸ್ತಕದುದ್ದಕ್ಕೂ ಅವರು ಪ್ರಸ್ತಾಪಿಸಿದ ಮರಗಿಡಗಳು ಹಣ್ಣು ಹೂಗಳನ್ನು ಬೇರೆ ಬೇರೆ ಭಾಷೆಗಳ ಸಾಹಿತ್ಯಗಳಲ್ಲಿ ಕವಿಗಳು ಹೇಗೆ ವರ್ಣಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ. ಕನ್ನಡದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವಂತೆ ಮತ್ತು ಅವರ ಬದುಕಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಷಯಗಳನ್ನು ತಿಳಿಸಿಕೊಟ್ಟರು. `ಹಸುರು ಹೊನ್ನು' ಇಂಥ ಪುಸ್ತಕ. ಇದಲ್ಲದೆ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ'ದಲ್ಲಿ ತುಂಬ ಸ್ವಾರಸ್ಯವಾಗಿ ಆ ದೇಶದಿಂದ ಬಂದ ಸಸ್ಯಗಳನ್ನು ಕುರಿತು ಬರೆದಿದ್ದಾರೆ. `ಸಾಕ್ಷಾತ್ಕಾರದ ದಾರಿಯಲ್ಲಿ' ವೀಳ್ಯದೆಲೆ,ಅಡಿಕೆ, ಆಫೀಮು ಮೊದಲಾದವುಗಳ ಬಳಕೆಯನ್ನು ಕುರಿತ ಸ್ವಾರಸ್ಯವಾದ ಪುಸ್ತಕ. `ಕಾಲೇಜು ರಂಗ', `ಪ್ರಾಧ್ಯಾಪಕನ ಪೀಠದಲ್ಲಿ', `ತಮಿಳು ತಲೆಗಳ ನಡುವೆ' ಮೊದಲಾದ ಪುಸ್ತಕಗಳಲ್ಲಿ ಪ್ರಾಧ್ಯಾಪಕರಾಗಿ ಅವರ ಅನುಭವಗಳನ್ನು ನಿರೂಪಿಸಿದ್ದಾರೆ. ವಸ್ತು ದೃಷ್ಟಿಯೆರಡೂ ಗಂಭೀರ, ಅದರಲ್ಲಿ ಹಾಸ್ಯ ಹಾಸುಹೊಕ್ಕಾಗಿದೆ. `ಕಾಲೇಜು ರಂಗ' ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಲನಚಿತ್ರವೂ ಆಯಿತು. ಸ್ವಾಮಿಯವರ ತಂದೆ ಡಿ. ವಿ. ಗುಂಡಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು. ಸ್ವಾಮಿಗೂ ಇದು ಸಂದಿತು; ತಂದೆ ಮಕ್ಕಳಿಬ್ಬರೂ ಪ್ರಶಸ್ತಿಯನ್ನು ಪಡೆದ೦ತಾದದ್ದು ಅದೇ ಭಾರತದಲ್ಲಿ ಪ್ರಥಮ ಬಾರಿ. thumb|180px|'ಬಿ ಜಿ ಎಲ್ ಸ್ವಾಮಿಯವರ ಕೃತಿ'- 'ದೌರ್ಗಂಧಿಕಾಪಹರಣ' ಅಸಾಧಾರಣ ಜ್ಞಾನದ ಹಸಿವು, ಅಸಾಧಾರಣ ಪ್ರತಿಭೆ, ಶಿಷ್ಯರಿಗೆ ಮಾರ್ಗದರ್ಶನ ಮಾಡುವುದರಲ್ಲಿ ಅಸಾಧಾರಣ ಶ್ರದ್ಧೆ, ಆಸಕ್ತಿಗಳ ವ್ಯಾಪ್ತಿಯೂ ಅಸಾಧಾರಣ. ಹಲವು ರೀತಿಗಳಲ್ಲಿ ಬಿ. ಜಿ. ಎಲ್. ಸ್ವಾಮಿ ಅಸಾಧಾರಣ ವ್ಯಕ್ತಿ. ಡಾ| ಬಿ. ಜಿ. ಎಲ್. ಸ್ವಾಮಿ ಅವರ ಬಗ್ಗೆ ಡಾ| ಹಾ. ಮಾ. ನಾಯಕರ ಅನಿಸಿಕೆ: "ಬಿ. ಜಿ. ಎಲ್. ಸ್ವಾಮಿಯವರ ಕ್ಷೇತ್ರ ಸಸ್ಯಶಾಸ್ತ್ರವಾಗಿದ್ದರೂ, ವಿಜ್ಞಾನ ಬೋಧನೆ ಅವರ ವೃತ್ತಿಯಾಗಿದ್ದರೂ, ಅವರೊಬ್ಬ ಗದ್ಯ ಲೇಖಕರಾಗಿದ್ದರೂ, ಅವರಲ್ಲೊಬ್ಬ ನಿಜವಾದ ಕವಿಯಿದ್ದ" ಎಂಬುದನ್ನು ಅವರನ್ನು ಓದುವ ಯಾರೇ ಆದರೂ ಕಂಡುಕೊಳ್ಳಬಹುದು. ಅವರೊಡನೆ ಮಾತನಾಡುತ್ತಿರುವಾಗಂತೂ ಇದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತಿತ್ತು. ಅವರ ವರ್ಣನೆಗಳು, ಅವರ ವ್ಯಕ್ತಿ ಚಿತ್ರಗಳು, ಅವರ ನಿರೂಪಣೆ, ಶೈಲಿ - ಇವೆಲ್ಲ ಇದನ್ನು ದೃಢಪಡಿಸುತ್ತವೆ. ಒಟ್ಟಿನಲ್ಲಿ ಅವರ ಯಾವುದೇ ಬರಹವಾದರೂ ಓದುಗರಿಗೆ ಸಾಹಿತ್ಯದ ಅನುಭವವನ್ನು ಕೊಡುತ್ತದೆ ಎಂಬುದು ಮುಖ್ಯವಾದ ಮಾತು. ತಮ್ಮ ಪ್ರಸಿದ್ಧವಾದ 'ಹಸುರು ಹೊನ್ನು' ಪುಸ್ತಕದಲ್ಲಿ ಸ್ವಾಮಿಯವರು ಮಾಡಿಕೊಡುವ ಗಿಡಮರಗಳ ಪರಿಚಯ ಅನ್ಯಾದೃಶವಾದ ರೀತಿಯಿಂದಲೇ ಸಸ್ಯಶಾಸ್ತ್ರ ಸಾಹಿತ್ಯವಾಗಿ ಮಾರ್ಪಟ್ಟಿದೆ. ವ್ಯಂಗ್ಯ, ವಿಡಂಬನೆ ಹಾಗೂ ತಿಳಿಯಾದ ಹಾಸ್ಯ ಇವುಗಳ ಚೌಕಟ್ಟಿನಲ್ಲಿ ಲೇಖಕರು ಒಂದು ವಾತಾವರಣವನ್ನು ಸೃಷ್ಟಿಸುತ್ತಾರೆ. ಈ ಸೃಷ್ಟಿಯಲ್ಲಿ ಕವಿ, ಕಥೆಗಾರ, ವ್ಯಕ್ತಿ ಚಿತ್ರಕಾರ ಮತ್ತು ಪ್ರಬಂಧಕಾರ ಇವರೆಲ್ಲ ಸೇರಿಕೊಳ್ಳುತ್ತಾರೆ. ಫಲವಾಗಿ ಸಸ್ಯಶಾಸ್ತ್ರ ಬುದ್ಧಿಯ ಬಲವನ್ನು ಅವಲಂಬಿಸದೆ ಹೃದಯದ ಮಾಧುರ್ಯಕ್ಕೆ ಒಲಿಯುತ್ತದೆ". ಅವರ ಸಂಶೋದನೆಗಳೆಲ್ಲಾ ಕ್ಲಾಸಿಕಲ್ ರಿಸರ್ಚ್ ಆದ ಅಂಗರಚನಾಶಾಸ್ತ್ರ', 'ಹೊರರಚನಾಶಾಸ್ತ್ರ','ವರ್ಗೀಕರಣಶಾಸ್ತ್ರ', 'ಭ್ರೂಣವಿಜ್ಞಾನಕ್ಕೆ ಸೀಮಿತವಾಗಿವೆ. ಆಧುನಿಕ ವಿಭಾಗಗಳಾದ,'Cytology', 'Genetics', 'Plant Phisiology',ಶಾಸ್ತ್ರಗಳಲ್ಲಿ ಅವರು ಹೆಚ್ಚಿನ ಆಸಕ್ತಿತೋರಿಸಲು ಸಾಧ್ಯವಾಗಲಿಲ್ಲ. ಕಾರಣವಿಷ್ಟೆ. ತಮಗೆ ಮನೆಯಲ್ಲಿ ಸಿಕ್ಕ ಅನುಕೂಲತೆಗಳು ಕಷ್ಟಸಾಧ್ಯವಾದ್ದರಿಂದ, ಸಾಧ್ಯವಾದ್ದಷ್ಟರಲ್ಲೇ, ಸಿಕ್ಕಿದ್ದಷ್ಟರಲ್ಲೇ, ಉನ್ನತ ಸಂಶೋಧನೆಮಾಡಿದರು. ಕೃತಿಗಳು ಸಾಕ್ಷಾತ್ಕಾರದ ಹಾದಿಯಲ್ಲಿ ಸಸ್ಯಪುರಾಣ ತಮಿಳು ತಲೆಗಳ ನಡುವೆ ಕಾಲೇಜು ರಂಗ ಕಾಲೇಜು ತರಂಗ ಪಂಚಕಲಶಗೋಪುರ ಹಸುರು ಹೊನ್ನು ಅಮೇರಿಕಾದಲ್ಲಿ ನಾನು ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕ ಪ್ರಾಧ್ಯಾಪಕನ ಪೀಠದಲ್ಲಿ ದೌರ್ಗಂಧಿಕಾಪಹರಣ ಮೈಸೂರು ಡೈರಿ ಬೆಳದಿಂಗಳಲ್ಲಿ ಅರಳಿದ ಮೊಲ್ಲೆ (ತಮಿಳು ಮೂಲ: ಉ.ವೇ.ಸ್ವಾಮಿನಾಥ ಅಯ್ಯರ್) ಜ್ಞಾನರಥ (ತಮಿಳು ಮೂಲ: ಸುಬ್ರಹ್ಮಣ್ಯ ಭಾರತಿ) ಬೃಹದಾರಣ್ಯಕ ಫಲಶ್ರುತಿ ಶಾಸನಗಳಲ್ಲಿ ಗಿಡಮರಗಳು ಸಸ್ಯಜೀವಿ ಪ್ರಾಣಿಜೀವಿ ಮೀನಾಕ್ಷಿಯ ಸೌಗಂಧ ನಡೆದಿಹೆ ಬಾಳೌ ಕಾವೇರಿ (ಅನು.) ಪ್ರಶಸ್ತಿ ಗೌರವಗಳು ಸಸ್ಯಕ್ಷೇತ್ರದ ಕೊಡುಗೆಗಾಗಿ ಭಾರತ ಸರ್ಕಾರದಿಂದ 'ಬೀರ್ಬಲ್ ಸಾಹ್ನಿ ಸ್ವರ್ಣ ಪದಕ' ಹಸುರುಹೊನ್ನು ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೭೮(1978) ನಿಧನ ಬಿ. ಜಿ. ಎಲ್. ಸ್ವಾಮಿ ೧೯೮೦ರ ನವೆಂಬರ್ ೨ರಂದು ಇಹ ಜಗತ್ತನ್ನು ತ್ಯಜಿಸಿದರು. ಹೆಚ್ಚಿನ ಓದು ‘ಸ್ವಾಮಿಯಾನ’ ಪುಸ್ತಕದಲ್ಲಿ ಹಲವಾರು ಕ್ಷೇತ್ರದ ಗಣ್ಯರು ಸ್ವಾಮಿಯವರ ಬಗ್ಗೆ ಬರೆದ ಲೇಖನಗಳಿವೆ.ಬಿ.ಜಿ.ಎಲ್. ಸ್ವಾಮಿಯವರ ಕುರಿತಾದ ‘ಸ್ವಾಮಿಯಾನ’ ಪುಸ್ತಕ , -ಪ್ರಶಾಂತ್ ಭಟ್, ನಿಲುಮೆ.ಕಾಂ ಉಲ್ಲೇಖಗಳು ಹೊರಸಂಪರ್ಕಗಳು ಡಾ. ಬಿ.ಜಿ.ಎಲ್. ಸ್ವಾಮಿ, nammakannadanaadu.com ಸ್ಮರಣೆ - ಬಿ.ಜಿ.ಎಲ್. ಸ್ವಾಮಿ- ಕನ್ನಡ ಸಾಹಿತ್ಯ ಪರಿಷತ್ತು ಡಾ. ಬಿ.ಜಿ.ಎಲ್. ಸ್ವಾಮಿ - ಕಣಜ ಅಂತರಜಾಲ ಜ್ಞಾನಕೋಶ ವರ್ಗ:ಕನ್ನಡ ಸಾಹಿತಿಗಳು ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:೧೯೧೮ ಜನನ ವರ್ಗ:೧೯೮೦ ನಿಧನ ವರ್ಗ:ವಿಜ್ಞಾನ ಸಾಹಿತಿಗಳು
ಬಿ. ಎಂ. ಶ್ರೀಕಂಠಯ್ಯ
https://kn.wikipedia.org/wiki/ಬಿ._ಎಂ._ಶ್ರೀಕಂಠಯ್ಯ
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ನವೋದಯದ ಪ್ರವರ್ತಕ ಮತ್ತು ಕವಿ ,ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ. ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ ನಡೆಯುತ್ತಿತ್ತು. ಕನ್ನಡಕ್ಕೆ ಯಾವುದೇ ಉನ್ನತ ಸ್ಥಾನ-ಮಾನಗಳಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡವನ್ನು ಅದಕ್ಕಿರುವ ಒಂದು ನ್ಯಾಯವಾದ ಸ್ಥಾನವನ್ನು ದೊರಕಿಸಿ ಕೊಡಲೇಬೇಕು ಎಂದು ಆಶಿಸಿ, ತಮ್ಮ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟವರು ಬಿ. ಎಂ. ಶ್ರೀಕಂಠಯ್ಯನವರು. ಧಾರವಾಡದಲ್ಲಿ ೧೯೧೧ ರಲ್ಲಿ ಶ್ರೀ ಯವರು ಕನ್ನಡ ಮಾತು ತಲೆಯೆತ್ತುವ ಬಗ್ಗೆ ಎಂಬ ಯುಗ ಪ್ರವರ್ತಕ ಕನ್ನಡ ಭಾಷಣವನ್ನು ಮಾಡಿದರು. ಜನವಾಣಿ ಬೇರು ಕವಿವಾಣಿ ಹೂವು ಎಂದು ಗರತಿಯ ಹಾಡುಗಳು ಕೃತಿಯ ಮುನ್ನುಡಿಯಲ್ಲಿ ಪ್ರಸಿದ್ಧಿ ಹೇಳಿಕೆ ಇದೆ. ಬಾಲ್ಯ ಜೀವನ ಬಿ.ಎಂ.ಶ್ರೀಯವರು ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಎಂಬ ಹಳ್ಳಿಯಲ್ಲಿ ೧೮೮೪ರ ಜನವರಿ ೩ ರಲ್ಲಿ ಜನಿಸಿದರು. ಅವರ ತಂದೆ ಮೈಲಾರಯ್ಯನವರು, ತಾಯಿ ಭಾಗೀರಥಮ್ಮ. ಶ್ರೀಕಂಠಯ್ಯನವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಳ್ಳೂರಿನಲ್ಲಿ ಕಲಿತರು. ೧೯೦೬ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ, ೧೯೦೭ರಲ್ಲಿ ಮದರಾಸು ವಿವಿಯಲ್ಲಿ ಬಿ.ಎಲ್. ಪದವಿ, ೧೯೦೯ರಲ್ಲಿ ಎಂ.ಎ. ಪದವಿ ಪಡೆದರು. ಅದೇ ವರ್ಷ ಮೈಸೂರು ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ೧೯೩೦ರಲ್ಲಿ ಪ್ರಾಧ್ಯಾಪಕರಾಗಿದ್ದ ಅವರು, ೧೯೨೬-೧೯೩೦ ರವರೆಗೆ ನಾಲ್ಕು ವರ್ಷಗಳ ಕಾಲ ಕುಲಸಚಿವರಾಗಿದ್ದರು. ೧೯೩೮-೧೯೪೨ ರವರೆಗೆ ಕನ್ನಡ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಜೀವನ right|thumb|ಮಹಾರಾಜ ಕಾಲೇಜು, ಮೈಸೂರು right|thumb|250px|ಸೆಂಟ್ರಲ್ ಕಾಲೇಜು, ಬೆಂಗಳೂರು ಆಗಲೇ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ೨೫ ವರ್ಷ ಸೇವೆ ಸಲ್ಲಿಸಿ ೧೯೩೦ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಗೆ ವರ್ಗವಾದರು.ಅನಂತರ ಅವರು ೧೯೪೨ರ ವರೆಗೆ ಈ ಕಾಲೇಜಿನ ಏಳಿಗೆಗಾಗಿ ದುಡಿದು ೧೯೪೪ರಲ್ಲಿ 'ಧಾರವಾಡದ ಕೆ.ಇ.ಬೋರ್ಡ್‌'ನ ಮುಖ್ಯಸ್ಥರಾಗಿ ನೇಮಕಗೊಂಡು ಅವರ 'ಆರ್ಟ್ಸ್ ಕಾಲೇಜ್' ಗೆ 'ಪ್ರಾಂಶುಪಾಲಕ'ರಾಗಿ ಕೊನೆಯವರೆಗೆ ಅಲ್ಲಿಯೇ ಕೆಲಸ ಮಾಡಿದರು. 'ಬಿ.ಎಂ.ಶ್ರೀಕಂಠಯ್ಯನವರು' ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ದುಡಿದರು. ಹಾಗೂ ಅವರ ಪ್ರೀತಿಯ ವಿದ್ಯಾರ್ಥಿಗಳಾದ 'ಮಾಸ್ತಿ', 'ಕುವೆಂಪು', 'ಎಸ್.ವಿ.ರಂಗಣ್ಣ', 'ತೀ.ನಂ. ಶ್ರೀಕಂಠಯ್ಯ', 'ಜಿ.ಪಿ.ರಾಜರತ್ನಂ', 'ಡಿ.ಎಲ್. 'ನರಸಿಂಹಚಾರ್' ಮುಂತಾದವರಿಗೆ ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೋತ್ಸಾಹಿದರು. ಅವರು ಕನ್ನಡದಲ್ಲಿ ಕೆಲವು ಉತ್ತಮ ನಾಟಕಗಳನ್ನು ಬರೆದರು. ಅಶ್ವತ್ಥಾಮನ್ ನಾಟಕ ಅಶ್ವತ್ಥಾಮನ್:- ಕನ್ನಡ ಸಾಹಿತ್ಯದ ಮೊಟ್ಟಮೊದಲ ರುದ್ರ ನಾಟಕ. rangamahotsava, Ashwatthaman ಗ್ರೀಸ್ ದೇಶದ ಅನೇಕ ನಾಟಕಗಳ ಕಥೆ ಪುರಾಣ ಪುರುಷರನ್ನು ಕುರಿತದ್ದು. ಅಂಥ ನಾಟಕಗಳಲ್ಲಿ ಏಜಾಕ್ಸ್ ಎಂಬುದು ಒಂದು ಪ್ರಸಿದ್ಧ ನಾಟಕ. ಆ ನಾಟಕವನ್ನು ಬರೆದವನು ಸಾಫೋಕ್ಲೀಸ್; ಗ್ರೀಸ್ ದೇಶದ ಮಹಾ ನಾಟಕಕಾರರಲ್ಲಿ ಒಬ್ಬ. ಸುಮಾರು ೨,೪೦೦ ವರ್ಷಗಳ ಹಿಂದೆ ಇದ್ದ. ನಮ್ಮ ಮಹಾಭಾರತದಲ್ಲಿ ಬರುವ ಅನೇಕ ಸಂದರ್ಭಗಳು, ಘಟನೆಗಳು ಆ ನಾಟಕದಲ್ಲೂ ಬರುತ್ತವೆ. ಆ ನಾಟಕವನ್ನು ಓದಿ ಮೆಚ್ಚಿಕೊಂಡಿದ್ದ ’ಶ್ರೀ’ ಅವರು, ಅದನ್ನು ಆಧರಿಸಿಕೊಂಡು ’ಅಶ್ವತ್ಥಾಮನ್’ ನಾಟಕವನ್ನು ರಚಿಸಿದರು. ಮಹಾಭಾರತದ ಪ್ರಸಿದ್ಧ ವ್ಯಕ್ತಿಗಳಲ್ಲಿ ಅಶ್ವತ್ಥಾಮ ಒಬ್ಬ. ಈತನನ್ನು ಕುರಿತದ್ದು ಈ ನಾಟಕದ ಕಥೆ. ಅಶ್ವತ್ಥಾಮ ಪರಾಕ್ರಮಿ ಮತ್ತು ಪ್ರಾಮಾಣಿಕ. ಮಹಾಭಾರತದ ಯುದ್ಧದಲ್ಲಿ ತನ್ನ ನಾಯಕ ದುರ್ಯೋಧನನ ಮರಣದಿಂದ ಪಾಂಡವರ ಮೇಲೆ ಈತನಿಗೆ ಬಹಳ ಕೋಪವುಂಟಾಗುತ್ತದೆ. ಆ ಕೋಪದಲ್ಲಿಯೇ ಅರ್ಧರಾತ್ರಿ ಸಮಯದಲ್ಲಿ ಪಾಂಡವರ ಪಾಳಯಕ್ಕೆ ನುಗ್ಗಿ, ನಿದ್ರೆಯಲ್ಲಿದ್ದ ಅನೇಕ ಪಶುಗಳು, ಮಕ್ಕಳು ಮತ್ತು ಹೆಂಗಸರನ್ನೂ ಕೊಂದು, ತನ್ನ ಮನೆಗೆ ಹೋಗುತ್ತಾನೆ. ಅನಂತರ ನಿದ್ರೆಯಲ್ಲಿದ್ದ ಪ್ರಾಣಿಗಳನ್ನು, ಮಕ್ಕಳನ್ನು, ಹೆಂಗಸರನ್ನು ತನ್ನಂಥ ವೀರ ಕೊಂದದ್ದು ಹೇಡಿತನ ಎನಿಸುತ್ತದೆ. ಇದೊಂದು ಪಾಪದ ಕೆಲಸ ಎಂದೂ ತಿಳಿಯುತ್ತಾನೆ. ಇದರಿಂದ ಅಶ್ವತ್ಥಾಮ ಬಹಳ ಪಶ್ಚಾತ್ತಾಪ ಪಡುತ್ತಾನೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಹೀಗಾಗಿ ’ಅಶ್ವತ್ಥಾಮನ್’ ನಾಟಕವೂ ಒಂದು ರುದ್ರನಾಟಕವೇ. ಇಂಗ್ಲೀಷ್ ಗೀತಗಳು ಬಿ.ಎಂ.ಶ್ರೀ.ರವರು ಇಂಗ್ಲಿಷ್ ಗೀತಗಳು ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ಇದು ಹಲವು ಇಂಗ್ಲೀಷ್ ಕವಿತೆಗಳ ಸೊಗಸಾದ ಕನ್ನಡ ಅನುವಾದ. ಸಂಗ್ರಹದ ೬೩ ಕವಿತೆಗಳಲ್ಲಿ ೦೩ ಮಾತ್ರ ಶ್ರೀಯವರ ಸ್ವಂತಕವಿತೆಗಳು. ಕಾಣಿಕೆ ಸ್ವಂತ ಕವಿತೆ. ಅವರು ನ್ಯೂಮನ್ ಕವಿ ಬರೆದ 'Lead Kindly Light' ಎಂಬ ಕವಿತೆಯನ್ನು ಕನ್ನಡದಲ್ಲಿ ಅನುವಾದ ಮಾಡಿದ `ಕರುಣಾಳು ಬಾ ಬೆಳಕೆ' ಎಂಬ ಕವನ ತುಂಬಾ ಜನಪ್ರಿಯವಾಯಿತು. ಕರುಣಾಳು, ಬಾ, ಬೆಳಕೆ,- ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ; ಕೈ ಹಿಡಿದು ನಡೆಸೆನ್ನನು.- ಇತ್ಯಾದಿ ಕಾಣಿಕೆ -ಶ್ರೀಯವರ ಸ್ವಂತ ರಚನೆಯಾಗಿದೆ.ಪದ್ಯ ಇವಳ ಸೊಬಗನವಳು‌ ತೊಟ್ಟು ನೋಡ ಬಯಸಿದೆ ಅವಳ ತೊಡಿಗೆ ಇವಳಿಗಿಟ್ಟು ಹಾಡು ಬಯಸಿದೆ. ಕವನ ಸಂಕಲನಗಳು ಇಂಗ್ಲೀಷ್ ಗೀತಗಳು (೧೯೨೬) ಹೊಂಗನಸುಗಳು (೧೯೪೩). ನಾಟಕಗಳು ಗದಾಯುದ್ಧ ನಾಟಕಂ(೧೯೨೬). ಅಶ್ವತ್ಥಾಮನ್(೧೯೨೯). ಪಾರಸಿಕರು(೧೯೩೫) ಸಂಪಾದಿತ ಕೃತಿ ಕನ್ನಡದ ಬಾವುಟ(೧೯೩೬) ಇತರೆ ಕೃತಿಗಳು ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ. ಕನ್ನಡ ಛಂದಸ್ಸಿನ ಚರಿತ್ರೆ. ಕನ್ನಡ ಸಾಹಿತ್ಯ ಚರಿತ್ರೆ. ಕನ್ನಡ ಮಾತು ತಲೆ ಎತ್ತುವ ಬಗ್ಗೆ. ಇಸ್ಲಾಂ ಸಂಸ್ಕೃತಿ. A Hand book of Rhetoric. Miscellaneous. ಅಭಿನಂದನ ಗ್ರಂಥ ಸಂಭಾವನೆ. ಪ್ರಶಸ್ತಿಗಳು ಬಿ.ಎಂ.ಶ್ರೀಯವರಿಗೆ ೧೯೩೮ರಲ್ಲಿ ಅವರ ಅವಿಸ್ಮರಣೀಯ ಕೆಲಸಕ್ಕಾಗಿ ಮೈಸೂರಿನ ಮಹಾರಾಜರು `ರಾಜ ಸೇವಾಸಕ್ತ' ಎಂಬ ಬಿರುದನ್ನು ನೀಡಿ ಗೌರವಿಸಿದರು. ೧೯೨೮ರಲ್ಲಿ 'ಗುಲಬರ್ಗಾ'ದಲ್ಲಿ ನಡೆದ '೧೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿದ್ದರು. ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಅದರ ಏಳಿಗೆಗಾಗಿ ಶ್ರಮಿಸಿದರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.http://kannadasahithyaparishattu.in/?p=417 ನಿಧನ ೧೯೪೬ರಲ್ಲಿ 'ಪ್ರೊ.ಬಿ.ಎಂ.ಶ್ರೀ'ರವರು, 'ಧಾರವಾಡ'ದಲ್ಲಿ ಕೆಲಸ ಮಾಡುತ್ತಿರುವ ಸಮಯದಲ್ಲಿಯೇ ನಿಧನರಾದರು. ಹೆಚ್ಚಿನ ಓದಿಗೆ ಕನ್ನಡ ಸಾಹಿತ್ಯಕ್ಕೆ ಬಿ.ಎಂ.ಶ್ರೀಯವರ ಕೊಡುಗೆ ಎಷ್ಟು ದೊಡ್ಡದು ಎಂಬ ಬಗ್ಗೆ ತಿಳಿಯಲು 'ಡಾ. ಎ.ಎನ್.ಮೂರ್ತಿರಾಯರ' 'ಸಮಗ್ರ ಲಲಿತ ಪ್ರಬಂಧಗಳು' ಪುಸ್ತಕದಲ್ಲಿ'ಬಿ.ಎಂ.ಶ್ರೀ' ಎಂಬ ಶೀರ್ಷಿಕೆಯಲ್ಲಿ ಪುಟ. ೩೩೭ ರಲ್ಲಿ ಅವರು ದಾಖಲಿಸಿದ ಸಮಗ್ರ ಚಿತ್ರಣ ಬಿ.ಎಂ.ಶ್ರೀಕಂಠಯ್ಯನವರ ಸಂಪೂರ್ಣವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಅಲ್ಲಿ ಡಾ. ಮೂರ್ತಿರಾಯರು ೧೯೨೬ ರಲ್ಲಿ ಪ್ರಕಟವಾದ ಇಂಗ್ಲೀಷ್ ಗೀತಗಳು, ಎಂದು ಬರೆದಿದ್ದಾರೆ. ಬಿ.ಎಂ.ಶ್ರೀ.ರವರ ಪ್ರಕಟಿತ ಪುಸ್ತಕದ ಮಾರಾಟದ ವೆಬ್ಸೈಟ್ ನಲ್ಲಿಯೂ ಇಂಗ್ಲೀಷ್ ಗೀತಗಳು ಎಂತಲೇ ಇದೆ. ಆದರೆ 'ಕರ್ನಾಟಕ ಸಂಸ್ಕೃತಿ ಇಲಾಖೆಯವರ ಸೈಟ್' ನಲ್ಲಿ ಇಂಗ್ಲೀಷ್ ಗೀತೆಗಳು ಎಂದು ಕೊಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಕಂಠಯ್ಯ, ಬಿ.ಎಂ ಉಲ್ಲೇಖ ಬಾಹ್ಯ ಸಂಪರ್ಕಗಳು ‘ಕನ್ನಡದ ಕಣ್ವ’ನ ನೆನೆಯುತ್ತಾ ... ಕಾರಿಹೆಗ್ಗಡೆ ಮಗಳಿಗೊಂದು ಹನಿ.. March 13, 2002 -Rohini Philly ಶ್ರೀಕಂಠಯ್ಯ ಬಿ.ಎಂ.೧೮೮೪-೧೯೪೬ ಶ್ರೀಕಂಠಯ್ಯ ವರ್ಗ:ಕನ್ನಡ ಸಾಹಿತ್ಯ ವರ್ಗ:ಕನ್ನಡ ಕವಿಗಳು ವರ್ಗ:ಸಾಹಿತ್ಯ ವರ್ಗ:ಕನ್ನಡ ಸಾಹಿತ್ಯ ಪ್ರಕಾರಗಳು ವರ್ಗ:೧೮೮೪ ಜನನ ವರ್ಗ:೧೯೪೬ ನಿಧನ ವರ್ಗ:ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು
ಜಿ.ಪಿ.ರಾಜರತ್ನಂ
https://kn.wikipedia.org/wiki/ಜಿ.ಪಿ.ರಾಜರತ್ನಂ
ಬಾಲ್ಯ 'ಜಿ. ಪಿ. ರಾಜರತ್ನಂ'(೧೯೦೯-೧೯೭೯) ರವರು ಮೂಲತಃ ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯವರು. ಇವರ ಪೂರ್ವಜರು ತಮಿಳುನಾಡಿನ "ನಾಗಪಟ್ಟಣ"ಕ್ಕೆ ಸೇರಿದ ತಿರುಕ್ಕಣ್ಣಾಪುರ ಎಂಬ ಅಗ್ರಹಾರದಿಂದ ೧೯೦೬ ರಲ್ಲಿ ಮೈಸೂರಿಗೆ ಬಂದರು. ಹೆಸರಾಂತ ಗುಂಡ್ಲು ಪಂಡಿತ ವಂಶ ದಲ್ಲಿ ಡಿಸೆಂಬರ್ ೦೫, ೧೯೦೯ರಂದು ರಾಮನಗರದಲ್ಲಿ ಜನಿಸಿದರು. ಮೊದಲಿಗೆ ಇವರ ಹೆಸರು ಜಿ.ಪಿ.ರಾಜಯ್ಯಂಗಾರ್ ಎಂದಿತ್ತು. ಇವರು ಲೋಯರ್ ಸೆಕೆಂಡರಿ ಓದುತ್ತಿದ್ದಾಗ ಚೇಷ್ಟೆಗಾಗಿ ಶಾಲೆಯ ಗುಮಾಸ್ತರನ್ನು ಪುಸಲಾಯಿಸಿ ತಮ್ಮ ಹೆಸರನ್ನು ಜಿ.ಪಿ.ರಾಜರತ್ನಂ ಎಂದು ತಿದ್ದಿಕೊಂಡಿದ್ದರು. ತಂದೆ ಆ ಭಾಗದಲ್ಲಿ ಉತ್ತಮ ಶಿಕ್ಷಕರೆಂದು ಹೆಸರು ಮಾಡಿದ್ದ ಜಿ.ಪಿ.ಗೋಪಾಲಕೃಷ್ಣ ಅಯ್ಯಂಗಾರ್.. ತಾಯಿಯ ಪ್ರೀತಿ ಇಲ್ಲದೆ ಬೆಳೆದ ರಾಜರತ್ನಂಗೆ, ತಂದೆಯೇ ಎಲ್ಲವೂ ಆಗಿದ್ದರು. ಅಜ್ಜಿಯ ಅಕ್ಕರೆಯಲ್ಲೂ ರಾಜರತ್ನಂ ಬೆಳೆದರು. ತಂದೆ ಬಡ ಮೇಸ್ಟ್ರು. ಸ್ವಾತಂತ್ರ್ಯ ಪೂರ್ವದಲ್ಲೇ (೧೯೩೧ರಲ್ಲಿ) ರಾಜರತ್ನಂ ಎಂ.ಎ (ಕನ್ನಡ)ದಲ್ಲಿ ಮುಗಿಸಿ, ಶಿಶು ವಿಹಾರ ಹಾಗೂ ತಂದೆಯ ಶಾಲೆಯಲ್ಲಿ ಆರಂಭಿಕ ಮೇಸ್ಟ್ರು ಆದರು. ಇದರ ಅನುಭವದ ಫಲವೇ ಮಕ್ಕಳ ಕುರಿತು ಬರೆದ `ತುತ್ತೂರಿ' ಶಿಶುಗೀತೆ ಸಂಕಲನ '. ಕ್ರಮೇಣ ಆ ಕೆಲಸ ತೃಪ್ತವಾಗದೆ ಹೈದರಾಬಾದಿಗೂ ಕೆಲಸ ಹುಡುಕಿ ಹೋಗಿದ್ದುಂಟು. ಅಲ್ಲಿಂದ ನಿರಾಶರಾಗಿ ಬೆಂಗಳೂರಿಗೆ ಬಂದು ಜನಗಣತಿ ಕಛೇರಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು ರಾಜರತ್ನಂರವರಿಗೆ 'ಸಾಹಿತ್ಯ ಸೇವೆ' ಮುಂದುವರೆಸಲು ಉಪದೇಶಿಸಿದರು. ಅದರ ಫಲವೇ ಮುಂದೆ 'ರಾಜರತ್ನಂ' ಅವರಿಂದ 'ಉತ್ತಮ ಸಾಹಿತ್ಯ ನಿರ್ಮಾಣ'ಕ್ಕೆ ದಾರಿಯಾಯಿತು. ಬೌದ್ಧ ಸಾಹಿತ್ಯ ಇಂಥ ಉಪಯುಕ್ತ ಸಾಹಿತ್ಯದಲ್ಲೊಂದು 'ಮಿಂಚು'. ಮಡದಿಯ ಸಾವಿನಿಂದ ಧೃತಿಗೆಟ್ಟರು ರಾಜರತ್ನಂ ಅವರಿಗೆ ವೈವಾಹಿಕ ಜೀವನದಲ್ಲಿ ಸಾಕಷ್ಟು ನೋವುಂಟಾಯಿತು. ಪತ್ನಿ ಲಲಿತಮ್ಮ ಕಾಯಿಲೆ ಬಿದ್ದವರು ಹುಷಾರಾಗಲೇ ಇಲ್ಲ, ವಿಧಿವಶರಾದರು. ಅವರ ನೆನಪು ಹಸಿರಾಗಿದ್ದಾಗಲೇ ಸೀತಮ್ಮ ಅವರ 'ಬಾಳನಂದಾದೀಪ'ವಾಗಿ ಬಂದರು. ಬದುಕು ಸ್ಥಿರವಾಯಿತು. ಕಷ್ಟ ಕಾರ್ಪಣ್ಯಗಳ ನಡುವೆ ೧೯೩೮ರಲ್ಲಿ 'ಕನ್ನಡ ಪಂಡಿತ ಹುದ್ದೆ', ರಾಜರತ್ನಂ ಅವರನ್ನು ಹುಡುಕಿ ಬಂತು. ಮೈಸೂರು, ಬೆಂಗಳೂರು, ಶಿವಮೊಗ್ಗ, ತುಮಕೂರುಗಳಲ್ಲಿ ಅಧ್ಯಾಪಕರಾಗಿ, ಮೆಚ್ಚಿನ ಮೇಸ್ಟ್ರು ಆಗಿ ಖ್ಯಾತರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ವಿದ್ಯಾರ್ಥಿಗಳ ಲೇಖನಗಳ ಸಂಕಲನ ವಿದ್ಯಾರ್ಥಿ ವಿಚಾರ ವಿಲಾಸ ಪ್ರಕಟಿಸುವುದರ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಾಹಿತ್ಯ ಸೃಷ್ಟಿಯಲ್ಲಿ ಪ್ರೇರಕ ಶಕ್ತಿಯಾದರು. ಪ್ರೊ| ಎ.ಆರ್.ಕೃಷ್ಣಶಾಸ್ತ್ರಿ ಸ್ಥಾಪಿಸಿದ್ದ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಿ ಅದಕ್ಕೊಂದು ಘನತೆ ತಂದರು. ಜಿ.ಪಿ.ರಾಜರತ್ನಂ, ೧೯೭೬ರಲ್ಲಿ ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ೧೯೬೯ರಲ್ಲೇ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ೧೯೭೭ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿತು. ೧೯೭೮ರಲ್ಲಿ 'ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ', ೧೯೭೯ರಲ್ಲಿ ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ರಾಜರತ್ನಂ ಅವರ ಸಾಹಿತ್ಯ ಸೇವೆಗೆ ಎರಡು ಮುಖ. ಒಂದು ಸಾಹಿತ್ಯ ಸೃಷ್ಟಿ, ಎರಡು ಸಾಹಿತ್ಯ ಪರಿಚಾರಿಕೆ. ಕಾವ್ಯನಾಮ "ಭ್ರಮರ" ಎಂಬುದು ಇವರ ಕಾವ್ಯನಾಮವಾಗಿತ್ತು. ಕೃತಿಗಳು ಪುಸ್ತಕವರ್ಷಪ್ರಕಾಶಕರುRefಸೂರ್ಯಮಿತ್ರ ಮೊದಲಾದ ಜೈನರ ಕಥೆಗಳು (ಅರ್ಥ: ಸೂರ್ಯಮಿತ್ರ ಮತ್ತು ಇತರ ಜೈನರ ಕಥೆಗಳು) 1975 ಸಪ್ನಾ ಬುಕ್ ಹೌಸ್, ಬೆಂಗಳೂರು ಹತ್ತು ವರುಷ (ಅರ್ಥ: ಹತ್ತು ವರ್ಷಗಳು) 1939 ಮನೋಹರ ಗ್ರಂಥ ಪ್ರಕಾಶನ ಸಮಿತಿ ಧಾರವಾಡ ನಮ್ಮ ಒಡೆಯರ ಕಥೆಗಳು (ಅರ್ಥ: ನಮ್ಮ ರಾಜರ ಕಥೆಗಳು) 1974 ಸ್ಟಾಂಡರ್ಡ ಪುಸ್ತಕ ಡಿಪೋ ಬೆಂಗಳೂರು ಚಕ್ರವರ್ತಿ ವಜ್ರ (ಅರ್ಥ: ಚಕ್ರವರ್ತಿಯ ವಜ್ರ) 1974 ಶ್ರೀ ರಾಜರತ್ನಂ ಬಳಗ, ಬೆಂಗಳೂರು ನಾಗನ ಪದಗಳು 1952 ಕರ್ಣಾಟಕ ಸಂಘ, ಬೆಂಗಳೂರು ರತ್ನನ ಪದಗಳು 1945 ಸತ್ಯಶೋಧನ ಪ್ರಕಾಶನ ಮಂದಿರ, ಬೆಂಗಳೂರು Śānti(Meaning: Female saint) 1934 Rāma Mōhana Kampeni,Bengaluru Śrīmān Ḍi. Vi. Ji. avaru citrisiruva Śrī Rāmacandra Prabhu(Meaning: Sri Ramachandra Prabhu as pictured by D. V. Gundappa (DVG)) 1977 Videha,Bengaluru Hanigaḷu(Meaning: Drops) 1933 Karṇāṭaka Saṅgha,Śivamogga Kailāsaṃ nenapu mattu Kailāsa kathana(Meaning: Kailasam memories and kailasa stories) 1948 Ji. Pi. Rājaratnaṃ,Bengaluru Mahākavi puruṣa Sarasvati(Meaning: Great poet Sarasvathi) 1940 Satyaśōdhana Prakaṭaṇa Mandiraivaru idannu māruvaru,Bengaluru Svatantrabhāratada Aśōkacakra dhvaja(Meaning: Independent India's Ashoka Chakra flag) 1948 Hind Kitābs,Bombāyi Śrī Harṣa 1936 Satyaśōdhana Prakaṭana Mandira,Bengaluru Nanna Jainamatadharmasāhityasēve(Meaning: My literature work on Jain religion) 1994 Śākya Sāhitya Maṇṭapa,Bengaluru Gautama Buddha 1936 Satyaśōdhana Prakaṭana Mandira,Bengaluru Yēsu Krista(Meaning: Jesus Christ) 1941 Bi. Bi. Ḍi. Pavar Pres,Bengaluru Gaṇḍugoḍali mattu Sambhavāmi yugē yugē 1968 -NA- Narakada nyāya modalāda nālku nāṭakagaḷu(Meaning: Justice of hell and four other dramas) 2008 Sapna book house,Bengaluru Vīramārtaṇḍa Cāvuṇḍarāya 1974 Śākya Sāhitya Maṇṭapa,Bengaluru Pampabhārata sāra emba Pampana Vikramārjuna vijayasaṅgrahada Hosagannaḍa gadyānuvāda(Meaning: Pampa's Vikramarjuna vijaya collection's prosetranslation called Pampabharatha's essence) 1948 Hind Kitābs,Bombāyi Ratnana dōsti ratna, atava, Bēvārsiya barāvu(Meaning: Ratna's friend ratna (gem) or orphan's sweat) 1934 Rāma Mōhana Kampeni,Bengaluru Dharma, sāhitya, dr̥ṣṭi(Meaning: Religion, literature, view) 1937 Śākya Sāhitya Maṇṭapa, Bengaluru Sarvadēvanamaskāra(Meaning: Salutations to all gods) 1970 -NA- Saṃsa kaviya Vigaḍa Vikrama carita(Meaning: Samsa's sarcastic courage epic) 1948 Mārāṭagāraru SatyaśōdhanaPustaka Bhaṇḍāra in Beṇgaḷūru Vicārataraṅga(Meaning: Creepy shape wave) 1967 -NA- Rannana rasaghaṭṭa emba Rannana Gadāyuddha kāvyasaṅgrahada hosagannada gadyānuvāda(Meaning: Ranna’s Gadhayuddha poetry collection(in new-kannada) prose translation called, Ranna's juicy time) 1948 Hind Kitābs,Bombāyi Dharmadāni Buddha(Meaning: Religion donator Buddha) 1933 Rāma Mōhana Kampeni, Beṇgaḷūru Cuṭaka 1940 Prōgres Buk Sṭāl,Maisūru .Vicāra raśmi(Meaning: Creepy shaped rays) 1985 Śākya Sāhitya Maṇṭapa,Beṅgaḷūru Śrī Sāyicintana(Meaning: Sathya Sai Baba thoughts) 1969 Vidēha,Beṅgaḷūru Svārasya(Meaning: Interesting) 1993 Śākya Sāhitya Maṇṭapa,Beṅgaḷūru Kailāsa kathana, athavā, Guṇḍū bhaṇḍāra mathana(Meaning: Kailasa story or Gundu repository thinking) 1945 Bi. Bi. Ḍi. Pavar Pres,Beṅgaḷūru Śr̥ṅgāravallari(Meaning: Decorated Vallari) 1973 -NA- Namma nagegāraru(Meaning: Our comedians) -NA- Satyaśōdhana Prakaṭana Mandira,Bengaluru Mātina malli(Meaning: Lady speech expert) 1951 Ānand Bradars,Bengaluru Śri Kailāsam avara Ēkalavya(Meaning: Kailasam's novel Ekalavya) 1969 -NA- Kariya kambaḷi mattu itara kategaḷu(Meaning: Black blanket and other stories) 1951 Ānand Bradars,Bengaluru Apakathā vallari 1939 Satyaśōdhana Prakaṭana Mandira,Bengaluru Kavi Gōvinda Pai(Meaning: Poet Govinda Pai) 1949 Jīvana Kāryālaya,Bengaluru Boppaṇa Paṇḍita racisiruva Gommaṭajinastuti(Meaning: Boppaṇa Paṇḍita structured Gommaṭa Jain praise) 1974 s.n.,Bengaluru Tuttūri(Meaning: Trumpet) 1940 Prōgres Buk SṭālMaisūru Nanna Śrīvaiṣṇava kaiṅkarya(Meaning: My Vaishnava infrastructure) 1971 -NA- Kandana kāvyamāle(Meaning: Baby's poem garland) 2008 Sapna book house,Bengaluru Kannaḍada sētuve(Meaning: Kannada's bridge) 1971 Videha,Bengaluru Nanna nenapina bīru(Meaning: My memories cupboard) 1998 Kannaḍa Saṅgha, Bengaluru Cīnādēśada Bauddha yātrikaru(Meaning: China country's Buddhist travellers) 1932 Kannaḍa Saṅgha,Bengaluru Nītiratnakaraṇḍa 1971 -NA- Nūru puṭāṇi(Meaning: 100 child) 1940 Bi. Bi. Ḍi. Pavar Pres,Bengaluru Snēhada dīpa(Meaning: Friendship's lamp) 1972 -NA- Śrī Bāhubali vijayaṃ (Meaning: Baahubali's triumph) 1953 Gōkhale SārvajanikaVicārasaṃstheya VyāsaṅgaGōnsṭhi,Beṅgaḷūru Citrāṅgadā citrakūṭa 1949 -NA- Kallina kāmaṇṇa(Meaning: Stone's kamanna ) 1952 Ānand Bradars,Bengaluru Kallusakkare(Meaning: Sugarstones) 1935 Satyaśōdhana Prakaṭana Mandira,Bengaluru Buddhana kālada tīrthakarū tīrthakararū(Meaning: Buddha era's monks) 1937 Śākya Sāhitya Maṇṭapa,Bengaluru Nūru varṣaṣagaḷa accumeccu(Meaning: 100 years’ favourite) 1971 -NA- Śrī Gōmaṭēśvara(Meaning: Gommateshwara) 1938 Śākya Sāhitya Maṇṭapa,Bengaluru Nakkaḷā tāyi(Meaning: Smiled that mother) 1944 Manōhara Grantha Prakāśana SamitiDhāravāḍa Śakārana śārōṭu mattu itara dr̥śyagaḷu(Meaning: Sankara's carriage and other views) 1943 Kannaḍa Saṅgha,Bengaluru Japānina Himagiri mattu itara kavanagaḷu(Meaning: Japan’s mist mountains and other poems) 1971 -NA- ತುತ್ತೂರಿ ರತ್ನನ ಪದಗಳು ಎಂಡಕುಡುಕ ರತ್ನ ನಾಗನ ಪದಗಳು ಬುದ್ಧನ ಜಾತಕಗಳು ಧರ್ಮದಾನಿ ಬುದ್ಧ ಭಗವಾನ್ ಮಹಾವೀರ ಮಹಾವೀರನ ಮಾತುಕತೆ ಕಡಲೆಪುರಿ ಗುಲಗಂಜಿ ಕಂದನ ಕಾವ್ಯ ಮಾಲೆ ರಾಜರತ್ನಂ ತಮ್ಮನ್ನು ತಾವೇ 'ಸಾಹಿತ್ಯ ಪರಿಚಾರಕ' ಎಂದು ಕರೆದುಕೊಳ್ಳುತ್ತಿದ್ದರು. ಇದರಿಂದ ಅವರ ಉದ್ದೇಶ ಸ್ಪಷ್ಟವಾಗಿತ್ತು- ಭಾಷಣದ ಮತ್ತು ಕೃತಿ ಪ್ರಕಟಣೆ ಮೂಲಕ ಜನರ ಬಳಿಗೆ ಸಾಹಿತ್ಯ ಕೊಂಡೊಯ್ಯುವುದಾಗಿತ್ತು. ಹೀಗಾಗಿ 'ಜಿ.ಪಿ.ರಾಜರತ್ನಂ,' ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸಂವೇದನೆಯನ್ನುಂಟು ಮಾಡಿದವರು. ಇವರು ೧೯೭೯ರ ಮಾರ್ಚ್ ತಿಂಗಳ ೧೩ ರಂದು ನಿಧನರಾದರು. ಅಮಾವಾಸ್ಯೆಗೊಂದ್ ಸಾರ್ತಿ, ಪೌರ್ಣಾಮಿಗೊಂದ್ ಸಾರ್ತಿ.... ಹೆಚ್ಚಿಗೆ ಓದಲು ಹೆಚ್.ಆರ್.ನಾಗೇಶರಾವ್ ವಿದ್ಯಾರ್ಥಿ ವಿಚಾರ ವಿಲಾಸ ಕೆಲವು ಪದ್ಯದ ಸಾಲುಗಳು ಮಕ್ಕಳ ಕವನ ನಾಯಿಮರಿ ನಾಯಿಮರಿ ತಿಂಡಿ ಬೇಕೆ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು.. ನಾಯಿಮರಿ ನಿನಗೆ ತಿಂಡಿ ಏಕೆ ಬೇಕು? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ? ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ ಜಾಣಮರಿ ತಾಳು ಹೋಗಿ ತಿಂಡಿ ತರುವೆನು ತಾ ನಿನ್ನ ಮನೆಯ ನಾನು ಕಾಯುತಿರುವೆನು. ಕನ್ನಡ ಪದಗೊಳ್ bharatha ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ! ಪದಗೊಳ್ ಬಾಣ! ಬಗವಂತ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತ್ ಅನ್ನು; ಪರ್ ಗಿರೀಕ್ಸೆ ಮಾಡ್ತಾನ್ ಔನು ಬಕ್ತನ್ ಮೇಲ್ ಔನ್ ಕಣ್ಣು! --@-- ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು ತಲೇಮೇಗ್ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ ---. --- ಬಾಹ್ಯಸಂಪರ್ಕಗಳು ಉಲ್ಲೇಖ ಜಿ.ಪಿ.ರಾಜರತ್ನಂ ಕೃತಿಗಳು ಜಿ.ಪಿ.ರಾಜರತ್ನಂ ವರ್ಗ:ಲೇಖಕರು ವರ್ಗ:ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಡಿ. ವಿ. ಗುಂಡಪ್ಪ
https://kn.wikipedia.org/wiki/ಡಿ._ವಿ._ಗುಂಡಪ್ಪ
REDIRECT ಡಿ.ವಿ.ಗುಂಡಪ್ಪ
ಸೆಪ್ಟೆಂಬರ್
https://kn.wikipedia.org/wiki/ಸೆಪ್ಟೆಂಬರ್
ನವೆಂಬರ್ ೧೪
https://kn.wikipedia.org/wiki/ನವೆಂಬರ್_೧೪
ನವೆಂಬರ್ ೧೪ - ನವೆಂಬರ್ ತಿಂಗಳ ಹದಿನಾಲ್ಕನೆ ದಿನ, ಮತ್ತು ವರ್ಷದ ೩೧೦ನೇ ದಿನ(ಅಧಿಕ ವರ್ಷದಲ್ಲಿ ೩೧೧ನೇ ದಿನ). ಈ ದಿನವನ್ನು ಭಾರತದಲ್ಲಿ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಇದು ಜವಾಹರಲಾಲ್ ನೆಹರುರವರು ಹುಟ್ಟಿದ ದಿನ. ಪ್ರಮುಖ ಘಟನೆಗಳು ಜನನ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ನಿಧನ ರಜೆಗಳು/ಆಚರಣೆಗಳು ಭಾರತದಲ್ಲಿ ಮಕ್ಕಳ ದಿನಾಚರಣೆ ವಿಶ್ವ ಮಧುಮೇಹ ದಿನ ಹೊರಗಿನ ಸಂಪರ್ಕಗಳು ಇತಿಹಾಸದಲ್ಲಿ ಈ ದಿನ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ ವರ್ಗ:ದಿನಾಚರಣೆಗಳು ವರ್ಗ:ದಿನಗಳು ವರ್ಗ:ನವೆಂಬರ್
ಓಪನ್ ಸೌರ್ಸ್
https://kn.wikipedia.org/wiki/ಓಪನ್_ಸೌರ್ಸ್
REDIRECT ಮುಕ್ತ ತಂತ್ರಾಂಶ
ಮುಕ್ತ ತಂತ್ರಾಂಶ
https://kn.wikipedia.org/wiki/ಮುಕ್ತ_ತಂತ್ರಾಂಶ
ಮುಕ್ತ ತಂತ್ರಾಂಶ ಅಥವಾ ಮುಕ್ತ ಆಕರ ತಂತ್ರಾಂಶ ಎಂಬುದು ಕಂಪ್ಯೂಟರ್ ತಂತ್ರಾಂಶಗಳು ಲಭ್ಯವಾಗಬಹುದಾದ ಒಂದು ರೀತಿಯ ಪರವಾನಗಿ. ಈ ರೀತಿಯ ಪರವಾನಿಗೆಯ ಅಡಿ ಲಭ್ಯವಾಗಿರುವ ತಂತ್ರಾಂಶಗಳಲ್ಲಿನ ಸಾಮಾನ್ಯ ಗುಣಗಳೆಂದರೆ ತಂತ್ರಾಂಶದ ಮೂಲ ಆಕರವನ್ನು ತಂತ್ರಾಂಶದೊಂದಿಗೆ ಲಭ್ಯಗೊಳಿಸಲಾಗುವುದು ಗ್ರಾಹಕರು ಈ ಮೂಲ ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಪಡೆದಿರುತ್ತಾರೆ (ಕೆಲವೊಮ್ಮೆ ಸಣ್ಣ ನಿರ್ಬಂಧನೆಗಳು ಇರಬಹುದು) ಯಾವುದೇ ಮುಕ್ತ ತಂತ್ರಾಂಶ ಉಚಿತವಾಗಿ ಲಭ್ಯವಾಗಬೇಕೆಂಬ ನಿಯಮವೇನಿಲ್ಲ; ಆದರೂ ಬಹುಪಾಲು ಮುಕ್ತ ತಂತ್ರಾಂಶಗಳು ಉಚಿತವಾಗಿ ಲಭ್ಯವಾಗಿವೆ. ಅನೇಕ ಬಾರಿ ಆಕರ ಲಭ್ಯವಾಗಿರುವ ತಂತ್ರಾಂಶಗಳೆಲ್ಲಕ್ಕೂ ಮುಕ್ತ ತಂತ್ರಾಂಶ ಎಂದು ಕರೆಯಲಾಗುತ್ತದೆ - ನಿಜವಾಗಿ ಈ ತಂತ್ರಾಂಶಗಳು "ಪ್ರಕಟಿತ ಆಕರ ತಂತ್ರಾಂಶಗಳು" (disclosed source software). ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಗ್ರಾಹಕರಿಗೆ ನೀಡಿದಲ್ಲಿ ಮಾತ್ರ ಅದು ಮುಕ್ತ ತಂತ್ರಾಂಶವಾಗುತ್ತದೆ. ಮುಕ್ತ ತಂತ್ರಾಂಶ ಪರವಾನಗಿಗಳಲ್ಲಿ ಅತ್ಯಂತ ಜನಪ್ರಿಯ ಪರವಾನಗಿಗಳಲ್ಲಿ ಒಂದು ಜಿಎನ್‍ಯು ಸಾಮಾನ್ಯ ಸಾರ್ವಜನಿಕ ಪರವಾನಗಿ (GNU General Public License). ಮುಕ್ತ ಆಕರ ತಂತ್ರಾಂಶ - ಚರ್ಚೆ ಇತ್ತೀಚಿನ ವರ್ಷಗಳಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಮತ್ತು ಗ್ರಾಹಕರು ಅನೇಕರು ಮುಕ್ತ ತಂತ್ರಾಂಶಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಪಂಥದ ಮುಖ್ಯ ನಂಬಿಕೆಗಳೆಂದರೆ: ಅನೇಕ ಜನರ ಪ್ರಯತ್ನಗಳಿಂದ ವೃದ್ಧಿಯಾದ ತಂತ್ರಾಂಶದ ಗುಣಮಟ್ಟ ಹೆಚ್ಚಾಗಿರುತ್ತದೆ ತಂತ್ರಾಂಶದ ಸ್ಥಿರತೆ ಮತ್ತು ಸುರಕ್ಷತೆ ಮೊದಲಾದವು ಮುಕ್ತವಾಗಿ ವೃದ್ಧಿಯಾದ ತಂತ್ರಾಂಶದಲ್ಲಿ ಹೆಚ್ಚಾಗಿರುತ್ತದೆ ಇವು ನಿಜವಲ್ಲದ ಸ೦ದರ್ಭದಲ್ಲೂ, ಆಕರವನ್ನು ಬದಲಾಯಿಸಲು ಇರುವ "ಸ್ವಾತಂತ್ರ್ಯ" ತಾತ್ವಿಕವಾಗಿ ಮುಖ್ಯವಾದದ್ದು ಮುಕ್ತ ತಂತ್ರಾಂಶ ತತ್ವದ ವಿರೋಧಿಗಳ ಮುಖ್ಯ ವಾದ ಬೌದ್ಧಿಕ ಆಸ್ತಿ ಹಕ್ಕುಗಳನ್ನು (intellectual property rights) ಕುರಿತದ್ದು. ಅನೇಕ ಸಂಸ್ಥೆಗಳ ತಂತ್ರಾಂಶ ಆ ಸಂಸ್ಥೆಯ ಹೆಸರಿನಲ್ಲಿ ಕೃತಿಸ್ವಾಮ್ಯವನ್ನು ಹೊಂದಿರುತ್ತದೆ. ಈ ತಂತ್ರಾಂಶದ ಕೃತಿಸ್ವಾಮ್ಯದ ಮೂಲಕ ಬರುವ ಆದಾಯವೇ ಅನೇಕ ಸಂಸ್ಥೆಗಳ ಮುಖ್ಯ ಆದಾಯ. ಮೂಲ ಆಕರವನ್ನು ಪ್ರಕಟಗೊಳಿಸಿ ಬದಲಾಯಿಸುವ ಹಕ್ಕು ನೀಡಿದಲ್ಲಿ ಇಂಥ ಸಂಸ್ಥೆಗಳ ಮುಖ್ಯ ಆದಾಯವೇ ಇಲ್ಲವಾದಂತಾಗುತ್ತದೆ ಎಂಬ ವಾದವಿದೆ. ಮುಕ್ತ ತಂತ್ರಾಂಶದ ವಿರುದ್ಧ ಇರುವ ಇನ್ನೊಂದು ವಾದವೆಂದರೆ ಸಂಸ್ಥೆಗಳಲ್ಲಿ ವೃದ್ಧಿಗೊಳಿಸಲ್ಪಟ್ಟ ತಂತ್ರಾಂಶಗಳಲ್ಲಿ ಅಂತಿಮ ಉತ್ಪಾದನೆಯ ಮೇಲೆ ಹೆಚ್ಚಿನ ನಿಯಂತ್ರಣವಿರುತ್ತದೆ. ಇದರ ಹಿಂದಿನ ವಿಚಾರವೆಂದರೆ ಮುಕ್ತ ತಂತ್ರಾಂಶಗಳು ಹೆಚ್ಚಾಗಿ ಸ್ವಯಂಸೇವಾ ಮನೋಭಾವದಿ೦ದ ಕೆಲಸ ಮಾಡುವವರಿ೦ದ ವೃದ್ಧಿಯಾಗಿರುತ್ತವೆಯೇ ಹೊರತು ಅವುಗಳಿಗಾಗಿಯೇ ಕೆಲಸ ಮಾಡುವ ಸಂಬಳದಾರಿ ಕೆಲಸಗಾರರಿಂದಲ್ಲ. ಸಂಸ್ಥೆಗಳಲ್ಲಿ ತಂತ್ರಾಂಶದ ವೃದ್ಧಿಗೆ ಹಣದ ಅವಕಾಶ ಮತ್ತು ಸಮಯ ಹೆಚ್ಚಿರುತ್ತದೆ ಎಂಬುದು ಈ ವಾದದ ಮುಖ್ಯ ಆಲೋಚನೆ. ಮುಕ್ತ ತಂತ್ರಾಂಶಗಳಲ್ಲಿ ಹಲವು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಗಳು ಇವೆ. ಉಬುಂಟು ಕಾರ್ಯಾಚರಣ ವ್ಯವಸ್ಥೆ ಹಾಗೆಯೇ ವಿಕಿಪೀಡಿಯ ಸಹ ಮುಕ್ತ ತಂತ್ರಾಂಶ ಪರವಾನಗಿಯ ಅಡಿಯಲಿಯೇ ಅಸ್ತಿತ್ವದಲ್ಲಿದೆ. ವರ್ಗ:ತಂತ್ರಜ್ಞಾನ ವರ್ಗ:ಲಿನಕ್ಸ್_ವಿತರಣೆಗಳು ವರ್ಗ:ಮುಕ್ತ_ತಂತ್ರಾಂಶಗಳು
ಹೊಯ್ಸಳ
https://kn.wikipedia.org/wiki/ಹೊಯ್ಸಳ
thumb|250px|ಸುಮಾರು ೧೩ನೇ ಶತಮಾನದ ಪ್ರಾರಂಭದಲ್ಲಿ ಹೊಯ್ಸಳ ಸಾಮ್ರಾಜ್ಯದ ವಿಸ್ತಾರ ಹೊಯ್ಸಳ ವಂಶ ಸುಮಾರು ಕ್ರಿ.ಶ. ೧೦೦೦ ದಿಂದ ಕ್ರಿ.ಶ. ೧೩೪೬ ರ ವರೆಗೆ ದಕ್ಷಿಣ ಭಾರತದ ಕೆಲ ಭಾಗಗಳನ್ನು ಆಳಿದ ರಾಜವಂಶ. ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರ (ಇಂದಿನ ಹಳೇಬೀಡು), ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ, ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ವ್ಯುತ್ಪತ್ತಿಯಾದದ್ದು. ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಎಂದು ಊಹಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವನ್ನು ವಿಸ್ತರಿಸಿದ ಅರಸರಲ್ಲಿ ಮೊದಲಿಗ ವಿನಯಾದಿತ್ಯ (ಆಡಳಿತ: ೧೦೪೭-೧೦೯೮). ಹೊಯ್ಸಳ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ. ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಗುಣಗಳನ್ನೂ ತನ್ನದಾಗಿಸಿಕೊಂಡಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ. ವೀರ ಬಲ್ಲಾಳನ (ಆಡಳಿತ: ೧೧೭೩-೧೨೨೦) ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠವಾದುದೆಂದು ಹೆಸರಾಯಿತು. ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮತ್ತು ದೆಹಲಿಯ ಸುಲ್ತಾನೇಟ್‍ಗಳೊಂದಿಗೆ ಪೈಪೋಟಿಗೆ ಸಿಲುಕಿತು. ಅಂತಿಮವಾಗಿ ಹೊಯ್ಸಳ ವಂಶದ ಆಡಳಿತ ಕ್ರಿ.ಶ. ೧೩೪೬ ರಲ್ಲಿ ಕೊನೆಗೊಂಡಿತು. ಇತಿಹಾಸ ದಂತಕತೆಯ ಪ್ರಕಾರ ಜೈನ ಗುರು ಸುದತ್ತನು , ಸೊಸೆವೂರಿನ ವಾಸಂತಿಕಾ ದೇವಿಯ ಮಂದಿರದಲ್ಲಿ ಹುಲಿಯು ಬರಲು, ಅದನ್ನು ಹೊಡೆಯಲು ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಙಾಪಿಸಿದನು. ಇದು ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆ. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಷಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ. ೧೦೭೮ ಮತ್ತು ೧೭೯೦ರ ಶಾಸನಗಳು ಹೊಯ್ಸಳರನ್ನು ಯಾದವ ವಂಶದವರು ಎಂದು ಸಂಬೋಧಿಸಿವೆ. ಆದರೆ ಹೊಯ್ಸಳರಿಗೂ ಉತ್ತರದ ಯಾದವರಿಗೂ ಸಂಬಂಧ ಕಲ್ಪಿಸುವ ಯಾವುದೇ ದಾಖಲೆಗಳಿಲ್ಲ. ಅರ್ಥವ್ಯವಸ್ಥೆ ಹೊಯ್ಸಳ ಆಡಳಿತದ ಮುಖ್ಯ ಆದಾಯ ಮೂಲ ಕೃಷಿ ಆಧಾರಿತ ಅರ್ಥವ್ಯವಸ್ಥೆಯಾಗಿತ್ತು. ತಮಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ರಾಜರುಗಳು ಜಮೀನುಗಳನ್ನು ಜಹಗೀರು ನೀಡುತ್ತಿದ್ದರು. ಈ ಜಹಗೀರದಾರರು ಆ ಜಮೀನಿನ ಒಕ್ಕಲುಗಳು ಉತ್ಪಾದಿಸಿದ ಕೃಷಿ ಮತ್ತು ವನೋತ್ಪನ್ನಗಳ ಒಡೆತನ ಗಳಿಸಿಕೊಳ್ಳುತ್ತಿದ್ದರು. ಈ ಜಮೀನುದಾರರಲ್ಲಿ ಎರಡು ವಿಧಗಳಿದ್ದವು. ಪ್ರಜಾ ಗವುಂಡರು ಅಂತಸ್ತಿನಲ್ಲಿ , ಧನಾಡ್ಯ ಪ್ರಭು ಗವುಂಡರಿಗಿಂತ ಕೆಳಗಿದ್ದರು. ಮಲೆನಾಡು ಪ್ರದೇಶದಲ್ಲಿ , ಸೂಕ್ತ ಹವಾಮಾನದ ಕಾರಣ, ಪಶುಪಾಲನೆ, ತೋಟಗಾರಿಕೆ ಮತ್ತು ಸಾಂಬಾರ ಪದಾರ್ಥಗಳ ಕೃಷಿ ನಡೆಯುತ್ತಿತ್ತು. ಬಯಲುನಾಡಿನಲ್ಲಿ ಭತ್ತ ಮತ್ತು ಜೋಳವನ್ನು ಬೆಳೆಯಲಾಗುತ್ತಿತ್ತು. ಸ್ಥಳೀಯರ ಖರ್ಚಿನಲ್ಲಿ ಕಟ್ಟಿ , ದುರಸ್ತಿ ಮಾಡಲಾಗುತ್ತಿದ್ದ ಕೆರೆ ಕಟ್ಟೆಗಳು, ಕಾಲುವೆಗಳು , ಬಾವಿಗಳು ಇವುಗಳ ಮೇಲೆ ಹೊಯ್ಸಳ ರಾಜರು ಸುಂಕ ವಿಧಿಸಿದ್ದರು. ದೊಡ್ಡ ನೀರಾವರಿಗೆ ವಿಷ್ಣುಸಾಗರ,ಶಾಂತಿಸಾಗರ, ಬಲ್ಲಾಳರಾಯಸಾಗರ ಇತ್ಯಾದಿ ಕೆರೆಗಳನ್ನು ರಾಜ್ಯದ ಖರ್ಚಿನಲ್ಲಿ ಕಟ್ಟಿಸಲಾಗಿತ್ತು. ಪಶ್ಚಿಮ ಕರಾವಳಿಯಲ್ಲಿ , ಜನಸಾಮಾನ್ಯರ ಪ್ರಯಾಣಕ್ಕೆ ಮತ್ತು ಅಶ್ವಸೇನೆಗಳಿಗೆ , ಕುದುರೆಗಳನ್ನು ಆಮದು ಮಾಡಿ ಸರಬರಾಜು ಮಾಡುವುದು ದೊಡ್ಡ ವ್ಯಾಪಾರೋದ್ಯಮವಾಗಿತ್ತು. ಕಾಡುಗಳಲ್ಲಿನ ಬೆಲೆಬಾಳುವ ತೇಗವೇ ಮೊದಲಾದ ಮರಗಳ ನಾಟಾ ತಯಾರಿಸಿ , ಇಂದಿನ ಕೇರಳದಲ್ಲಿದ್ದ ಬಂದರುಗಳ ಮೂಲಕ ರಫ್ತು ಮಾಡಲಾಗುತ್ತಿತ್ತು. ಚೀನಾದಲ್ಲಿ ದೊರೆತ ಶುಂಗ ಸಾಮ್ರಾಜ್ಯದ ದಾಖಲೆಗಳ ಪ್ರಕಾರ, ಉತ್ತರ ಚೀನಾದಲ್ಲಿ ಭಾರತದ ವ್ಯಾಪಾರಿಗಳು ಕಾಣಸಿಗುತ್ತಿದ್ದು , ಇದು ಸಮುದ್ರದಾಚೆಯ ಪ್ರದೇಶಗಳೊಂದಿಗೆ ಸಕ್ರಿಯ ವ್ಯಾಪಾರ ಸಂಪರ್ಕವಿದ್ದುದನ್ನು ಸೂಚಿಸುತ್ತದೆ. ದಕ್ಷಿಣ ಭಾರತದಿಂದ ಜವಳಿ, ಸಾಂಬಾರ ಪದಾರ್ಥಗಳು, ಔಷದೀಯ ಸಸ್ಯಗಳು, ರತ್ನಗಳು, ಮಣ್ಣಿನ ಸಾಮಗ್ರಿಗಳು, ಉಪ್ಪು, ಆಭರಣಗಳು, ಬಂಗಾರ, ದಂತ, ಖಡ್ಗಮೃಗದ ಕೊಂಬು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಕರ್ಪೂರ ಮೊದಲಾದ ವಸ್ತುಗಳು ಚೀನಾ, ಧೋಫರ್, ಏಡನ್ ಮತ್ತು ಸಿರಾಫ್ ( ಈಜಿಪ್ಟ್, ಅರೇಬಿಯಾ ಮತ್ತು ಪರ್ಶಿಯಾ ದೇಶಗಳಿಗೆ ಹೋಗಲು ಪ್ರವೇಶಬಂದರು)ಗಳಿಗೆ ರಫ್ತಾಗುತ್ತಿತ್ತು. ವಾಸ್ತುತಜ್ಞರು (ವಿಶ್ವಕರ್ಮರು), ಶಿಲ್ಪಿಗಳು, ಕಲ್ಲು ಕಡೆಯುವವರು, ಚಿನಿವಾರರು ಇತ್ಯಾದಿ ದೇವಾಳಯಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಕುಶಲಕರ್ಮಿಗಳು, ಬಿರುಸಿನಿಂದ ನಡೆಯುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯದಿಂದ , ಸಾಕ್ಡು ಸ್ಥಿತಿವಂತರಾಗಿದ್ದರು. ನೆಲಗಂದಾಯವನ್ನು ಒಟ್ಟುಮಾಡುವ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದಾಗಿತ್ತು. ಸಿದ್ಧಾಯ ಎಂದು ಕರೆಯಲಾಗುತ್ತಿದ್ದ ನೆಲಗಂದಾಯದಲ್ಲಿ ಕುಲ ಎಂಬ ಮೂಲತಃ ಬೆಲೆಕಟ್ಟಿದ್ದಲ್ಲದೇ, ವಿವಧ ಮೇಲುಗಂದಾಯವೂ ಅಡಕವಾಗಿತ್ತು. ವಿವಿಧ ವ್ಯವಸಾಯಗಳು, ವಿವಾಹಗಳು, ಗಾಡಿ ಅಥವಾ ರಥಗಳ ಮೇಲೆ ಒಯ್ಯಲಾಗುತ್ತಿದ್ದ ಸರಕುಗಳು, ಸಾಕುಪ್ರಾಣಿಗಳು ಇವೆಲ್ಲದರ ಮೇಲೂ ಸುಂಕ ಹೇರಲಾಗಿತ್ತು. ಬಂಗಾರ, ರತ್ನಗಳು, ಸುವಾಸನಾ ದ್ರವ್ಯಗಳು, ಶ್ರೀಗಂಧ, ಹಗ್ಗಗಳು, ನಾರು, ಮನೆ, ಕುಲುಮೆ, ಅಂಗಡಿ, ಪಶುಮಂದೆಗಳು, ಕಬ್ಬಿನ ಗಾಣಗಳು ಇಂಥಾ ಪದಾರ್ಥಗಳಲ್ಲದೆ ಕರಿಮೆಣಸು, ವೀಳ್ಯದೆಲೆ, ತುಪ್ಪ, ಭತ್ತ,ಸಾಂಬಾರ ದಿನಸಿಗಳು, ತಾಳೆಗರಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ಕೃಷ್ಯುತ್ಪನ್ನಗಳ ಮೇಲೂ ಸುಂಕ ವಸೂಲಿ ಮಾಡಿದ ಹಳ್ಳಿ ದಾಖಲೆಗಳು ದೊರೆಯುತ್ತವೆ. ಕೆರಗಳ ನಿರ್ಮಾಣ ಮೊದಲಾದ ನಿರ್ದಿಷ್ಟ ಕೆಲಸಗಳಿಗಾಗಿ ಗ್ರಾಮ ಪಂಚಾಯತಿಗೆ ಸುಂಕ ವಿಧಿಸುವ ಹಕ್ಕಿತ್ತು. ಸಂಸ್ಕೃತಿ ಧರ್ಮ ಇವನ್ನೂ ನೋಡಿ : ರಾಮಾನುಜಾಚಾರ್ಯ, ಬಸವಣ್ಣ, ಮಧ್ವಾಚಾರ್ಯ ೧೧ನೆಯ ಶತಮಾನದ ಮೊದಲಭಾಗದಲ್ಲಿ ಚೋಳರಿಂದ ಜೈನಧರ್ಮೀಯರಾಗಿದ್ದ ಪಶ್ಚಿಮ ಗಂಗರ ಪರಾಭವ ಹಾಗೂ ೧೨ನೆಯ ಶತಮಾನದಲ್ಲಿ ವೀರಶೈವ ಮತ್ತು ವೈಷ್ಣವ ಮತಗಳಲ್ಲಿ ಅನುಯಾಯಿಗಳ ಏರುತ್ತಿದ್ದ ಸಂಖ್ಯೆ , ಇವುಗಳಿಂದಾಗಿ ಜೈನಧರ್ಮದಲ್ಲಿ ಆಸಕ್ತಿ ಇಳಿಮುಖವಾಯಿತು. ಕಂಬದಹಳ್ಳಿ ಮತ್ತು ಶ್ರವಣಬೆಳಗೊಳ ಹೊಯ್ಸಳ ರಾಜ್ಯದ ಎರಡು ಉಲ್ಲೇಖನಾರ್ಹ ಜೈನ ಧರ್ಮಕೇಂದ್ರಗಳು. 8ನೆಯ ಶತಮಾನದಲ್ಲಿ ಆದಿ ಶಂಕರರ ಅದ್ವೈತ ಮತ ಪ್ರಸಾರದೊಂದಿಗೆ ದಕ್ಷಿಣ ಭಾರತದಲ್ಲಿ ಬೌದ್ಧಧರ್ಮದ ಅವನತಿ ಪ್ರಾರಂಭವಾಯಿತು. ಹೊಯ್ಸಳರ ಕಾಲದಲ್ಲಿ ಬಳ್ಳಿಗಾವಿ ಮತ್ತು ಡಂಬಳ ಇವೆರಡೇ ಬೌದ್ಧರ ಧಾರ್ಮಿಕ ಸ್ಥಳಗಳಾಗಿದ್ದವು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ,ಸ್ವತಃ ಜೈನಧರ್ಮೀಯಳಾಗಿದ್ದರೂ , ವಿಷ್ಣುವಿನ ಕಪ್ಪೆ ಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು , ರಾಜಮನೆತನದ ಪರಮತ ಸಹಿಷ್ಣುತೆಗೆ ಉದಾಹರಣೆಯಾಗಿದೆ. ಬಸವಣ್ಣ, ಮಧ್ವಾಚಾರ್ಯ ಮತ್ತು ರಾಮಾನುಜಾಚಾರ್ಯರಿಂದ ಪ್ರೇರಿತರಾದ ಮೂರು ಮುಖ್ಯ ಧಾರ್ಮಿಕ ಬೆಳವಣಿಗೆಗಳು ಹೊಯ್ಸಳರ ಆಡಳಿತದ ಕಾಲದಲ್ಲಿ ಘಟಿಸಿದವು. ವೀರಶೈವ ಮತದ ಉಗಮ ಚರ್ಚಾಸ್ಪದವಾಗಿದ್ದರೂ, ೧೨ನೆಯ ಶತಮಾನದಲ್ಲಿ ಬಸವಣ್ಣನವರ ಆಗಮನದೊಂದಿಗೆ ಇದು ಪ್ರವರ್ಧಮಾನಕ್ಕೆ ಬಂದಿತು. ಬಸವಣ್ಣಮತ್ತು ಇತರ ವೀರಶೈವ ಶರಣರು ಜಾತಿರಹಿತ ಸಮಾಜವನ್ನು ಪ್ರತಿಪಾದಿಸಿದರು. "ಕಾಯಕವೇ ಕೈಲಾಸ" ಎಂದು ಬೋಧಿಸಿದ ಬಸವಣ್ಣನವರು ಸರಳರೀತಿಯಲ್ಲಿ ವಚನಗಳನ್ನು ಜನಸಾಮಾನ್ಯರಿಗಾಗಿ ಬರೆದರು. ಆದಿ ಶಂಕರರ ಬೋಧನೆಗಳನ್ನು ಒಪ್ಪದ ಮಧ್ವಾಚಾರ್ಯರು ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆ ಎಂದು ಪ್ರತಿಪಾದಿಸಿದರು (ದ್ವೈತ ಸಿದ್ಧಾಂತ). ಈ ಸಿದ್ಧಾಂತವು ಜನಪ್ರಿಯವಾಗಿ, ಮುಂದೆ ಮಧ್ವಾಚಾರ್ಯರು ಉಡುಪಿಯಲ್ಲಿ ಎಂಟು ಮಠಗಳನ್ನು ಸ್ಥಾಪಿಸಿದರು. ಶೀರಂಗದ ವೈಷ್ಣವ ಮಠದ ಗುರುಗಳಾಗಿದ್ದ ರಾಮಾನುಜಾಚಾರ್ಯರು ಭಕ್ತಿ ಮಾರ್ಗವನ್ನು ಬೋಧಿಸಿ, ಆದಿ ಶಂಕರರ ಅದ್ವೈತ ಸಿದ್ಧಾಂತದ ಮೇಲೆ ಶ್ರೀಭಾಷ್ಯ ಎಂಬ ಭಾಷ್ಯವನ್ನು ಬರೆದರು. ಈ ಧಾರ್ಮಿಕ ಸಿದ್ಧಾಂತಗಳು ಆ ಕಾಲದ ದಕ್ಷಿಣ ಭಾರತದ ಸಂಸ್ಕೃತಿ, ಸಾಹಿತ್ಯ, ಕಾವ್ಯ ಮತ್ತು ಶಿಲ್ಪಕಲೆಗಳ ಮೇಲೆ ಅಪಾರ ಪ್ರಭಾವ ಬೀರಿದವು. ಈ ತತ್ವಜ್ಞಾನಿಗಳ ಬೋಧನೆಯನ್ನು ಆಧರಿಸಿ ಮುಂದಿನ ಶತಮಾನಗಳಲ್ಲಿ ಮಹತ್ವದ ಸಾಹಿತ್ಯ ಮತ್ತು ಕಾವ್ಯ ಕೃತಿಗಳನ್ನು ರಚಿಸಲಾಯಿತು. ವಿಜಯನಗರದ ಸಾಳ್ವ, ತುಳುವ ಮತ್ತು ಅರವೀಡು ರಾಜಮನೆತನಗಳು ವೈಷ್ಣವರಾಗಿದ್ದವು. ವಿಜಯನಗರದ ವಿಠ್ಠಲಪುರ ಪ್ರದೇಶದ ವೈಷ್ಣವ ದೇವಾಲಯವೊಂದರಲ್ಲಿ ರಾಮಾನುಜಾಚಾರ್ಯರ ವಿಗ್ರಹವಿದೆ.ಮುಂದೆ ಮೈಸೂರು ಸಂಸ್ಥಾನದಲ್ಲಿದ್ದ ವಿದ್ವಾಂಸರುಗಳು ರಾಮಾನುಜಾಚಾರ್ಯರ ಸಿದ್ಧಾಂತಗಳನ್ನು ಎತ್ತಿ ಹಿಡಿಯುವ ಗ್ರಂಥಗಳನ್ನು ಬರೆದರು. ಜೈನಧರ್ಮದಿಂದ ಮತಾಂತರ ಹೊಂದಿ ವೈಷ್ಣವನಾದ ಮೇಲೆ ಹೊಯ್ಸಳ ರಾಜ ವಿಷ್ಣುವರ್ಧನನು ಅನೇಕ ವೈಷ್ಣವ ದೇವಾಲಯಗಳನ್ನು ಕಟ್ಟಿಸಿದನು. ಮಧ್ವಾಚಾರ್ಯರ ಪರಂಪರೆಯಲ್ಲಿ ಅವರ ನಂತರ ಬಂದ ಜಯತೀರ್ಥ, ವ್ಯಾಸತೀರ್ಥ, ಶ್ರೀಪಾದರಾಯ, ವಾದಿರಾಜತೀರ್ಥ ಮತ್ತು ದಾಸ ಪರಂಪರೆಯ ವಿಜಯದಾಸ, ಗೋಪಾಲದಾಸ ಮತ್ತಿತರರು ಮಧ್ವಾಚಾರ್ಯರ ಬೋಧನೆಗಳನ್ನು ದೂರದೂರಕ್ಕೆ ಪ್ರಸಾರ ಮಾಡಿದರು. ನಂತರದ ತತ್ವಜ್ಞಾನಿಗಳಾದ ಗುಜರಾತಿನ ವಲ್ಲಭಾಚಾರ್ಯ ಮತ್ತು ಬಂಗಾಳದ ಚೈತನ್ಯ ಇವರೂ ಕೂಡ ಮಧ್ವಾಚಾರ್ಯರ ತತ್ವಗಳಿಂದ ಪ್ರಭಾವಿತರಾಗಿದ್ದರು. ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತವಾದ ಮತ್ತೊಂದು ಭಕ್ತಿ ಮಾರ್ಗದ ಅಲೆ ೧೭-೧೮ನೆಯ ಶತಮಾನದಲ್ಲಿ ಬಂದಿತು. ಸಮಾಜ ಆ ಕಾಲದಲ್ಲಿ ಕುಡಿಯೊಡೆಯುತ್ತಿದ್ದ ಧಾರ್ಮಿಕ , ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಹೊಯ್ಸಳ ಸಮಾಜ ಪ್ರತಿಬಿಂಬಿಸುತ್ತಿತ್ತು. ಈ ಕಾಲದಲ್ಲಿ ಸಮಾಜ ಹೆಚ್ಚು ಹೆಚ್ಚು ಸುಸಂಸ್ಕೃತವಾಗುತ್ತಾ ಹೋಯಿತು.ಸ್ತ್ರೀಯರ ಸ್ಥಾನಮಾನದಲ್ಲಿ ವ್ಯತ್ಯಾಸಗಳಿತ್ತು. ರಾಜಮನೆತನದ ಕೆಲವು ಸ್ತ್ರೀಯರು ರಾಜ್ಯಾಡಳಿತದಲ್ಲಿ ಪಾಲುಗೊಳ್ಳುತ್ತಿದ್ದರು. ಎರಡನೆಯ ವೀರಬಲ್ಲಾಳನ ದೀರ್ಘ ಕಾಲ ನಡೆದ ಉತ್ತರದ ಪ್ರದೇಶಗಳ ಮೇಲಿನ ಧಾಳಿಯ ಕಾಲದಲ್ಲಿ , ಅವನ ರಾಣಿ ಉಮಾದೇವಿಯು ಹಳೇಬೀಡಿನ ಆಡಳಿತವ್ಯವಸ್ಥೆಯನ್ನು ನೋಡಿಕೊಂಡಿದ್ದರ ಬಗ್ಯೆ ತತ್ಕಾಲೀನ ದಾಖಲೆಗಳು ಸಿಕ್ಕಿವೆ. ಆಕೆ ಕೆಲವು ವಿರೋಧೀ ಸಾಮಂತರರೊಡನೆ ಹೋರಾಡಿ ಅವರನ್ನು ಮಟ್ಟಹಾಕಿದ್ದೂ ಇದೆ.ಲಲಿತಕಲೆಗಳಲ್ಲಿ ಸ್ತ್ರೀಯರ ಭಾಗವವಹಿಸುವಿಕೆಯ ಬಗ್ಯೆ ದಾಖಲೆಗಳಿವೆ. ಸ್ವತಃ ರಾಣಿ ಶಾಂತಲಾದೇವಿಯು ನೃತ್ಯ ಮತ್ತು ಸಂಗೀತದಲ್ಲಿ ಬಲ್ಲಿದಳಾಗಿದ್ದಳು. 12ನೆಯ ಶತಮಾನದ ಅಕ್ಕಮಹಾದೇವಿಯ ವಚನಗಳು ಒಂದಿಗೂ ಮನೆಮಾತಾಗಿವೆ. ದೇವಾಲಯ ನರ್ತಕಿಯರು (ದೇವದಾಸಿಗಳು) ಸಾಮಾನ್ಯವಾಗಿದ್ದು, ಅವರಲ್ಲನೇಕರು ಸುಶಿಕ್ಷಿತರೂ ಕಲಾಪಾರಂಗತರೂ ಆಗಿದ್ದರು. ಈ ಕಾರಣದಿಂದಲೇ ಅವರಿಗೆ, ದೈನಂದಿನ ಗೃಹಕೃತ್ಯಕ್ಕೆ ಸೀಮಿತವಾದ ಪಾತ್ರದ ಇತರೆ ಹಳ್ಳಿ ಮತ್ತು ಪಟ್ಟಣಗಳ ಹೆಣ್ಣುಮಕ್ಕಳಿಗಿಂತ , ಹೆಚ್ಚು ಸ್ವಾತಂತ್ರ್ಯವಿತ್ತು. ಸತಿ ಪದ್ಧತಿ ಜಾರಿಯಲ್ಲಿತ್ತು. ವೇಶ್ಯಾವೃತ್ತಿ ಗೆ ಸಮಾಜದ ಅನುಮತಿಯಿತ್ತು. ಭಾರತದ ಇತರೆಡೆಗಳಲ್ಲಿಯಂತೆ, ಇಲ್ಲಿಯೂ ಜಾತಿಪದ್ಧತಿ ಪ್ರಮುಖವಾಗಿ ಕಾಣಬರುತ್ತಿತ್ತು. ಪಶ್ಚಿಮ ಕಡಲ ತೀರದ ಮೂಲಕ ನಡೆಯುತ್ತಿದ್ದ ವ್ಯಾಪಾರೋದ್ಯಮದ ಕಾರಣ ಅರಬರು, ಯಹೂದಿಗಳು, ಪರ್ಷಿಯನ್ನರು, ಚೀನಾದವರು ಮತ್ತು ಮಲಯಾ ದ್ವೀಪಗಳಿಂದ ಪರದೇಶಿಗರು ಭಾರತಕ್ಕೆ ಬಂದರು. ಹೊಯ್ಸಳ ರಾಜ್ಯ ವಿಸ್ತರಿಸಿದಂತೆ, ದಕ್ಷಿಣ ಭಾರತದ ಇತರೆಡೆಗಳಿಂದ ವಲಸೆ ಬಂದ ಜನಸಮುದಾಯದಿಂದ ಹೊಸ ಕುಶಲಕಲೆಗಳೂ, ಸಂಸ್ಕೃತಿಯೂ ತಲೆಎತ್ತಿದವು. ದೊಡ್ಡ ಊರುಗಳಿಗೆ ಪಟ್ಟಣ ಎಂದೂ, ಊರಿನ ಕೇಂದ್ರಸ್ಥಾನವಾಗಿದ್ದ ಮಾರುಕಟ್ಟೆಗೆ ನಗರ ಅಥವಾ ನಗರಮ್ ಎಂದು ಕರೆಯಲಾಗುತ್ತಿತ್ತು. ಶ್ರವಣಬೆಳಗೊಳದಂಥಾ ಕೆಲವು ಪಟ್ಟಣಗಳು ಏಳನೆಯ ಶತಮಾನದಲ್ಲಿ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧವಾದರೂ, ಹೊರಗಿನಿಂದ ಬಂದ ಶ್ರೀಮಂತ ವ್ಯಾಪಾರಿಗಳ ದೆಸೆಯಿಂದ , 12ನೆಯ ಶತಮಾನದ ವೇಳೆಗೆ , ಪ್ರಮುಖ ವ್ಯಾಪಾರ ಕೇಂದ್ರವಾಗಿಯೂ ಬೆಳೆದವು. ವಿಷ್ಣುವರ್ಧನ ಚನ್ನಕೇಶವ ದೇವಾಲಯವನ್ನು ಕಟ್ಟಿಸಿದಾಗಿನಿಂದ , ಬೇಲೂರು ರಾಜವರ್ಚಸ್ಸನ್ನು ಗಳಿಸಿಕೊಂಡಿತು. ಬೃಹತ್ ದೇವಾಲಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ರಾಜಾಶ್ರಯ ಇವು ಧಾರ್ಮಿಕ , ಸಾಮಾಜಿಕ ಮತ್ತು ನ್ಯಾಯಿಕ ಮಹತ್ವವನ್ನೂ ಹೊಂದಿದ್ದು , "ರಾಜಾ ಪ್ರತ್ಯಕ್ಷ ದೇವತಾ" ಎಂಬ ನಾಣ್ಣುಡಿಯನ್ನು ಜನ ನಂಬುವಂತಾಯಿತು. ದೇವಾಲಯ ನಿರ್ಮಾಣ ಬರಿ ಧಾರ್ಮಿಕವಷ್ಟೇ ಅಲ್ಲದೆ, ವಾಣಿಜ್ಯ ಚಟುವಟುಕೆಯೂ ಆಗಿದ್ದು , ಇದು ಸಮಾಜದ ಯಾವುದೇ ವಿಶಿಷ್ಟವಾದ ಬಣಕ್ಕೆ ಸೀಮಿತವಾಗಿರಲಿಲ್ಲ. ಬೇಲೂರಿನ ವೈಷ್ಣವ ಪಂಥದ ಚೆನ್ನಕೇಶವ ದೇವಾಲಯಕ್ಕೆ ಪ್ರತಿಯಾಗಿ ಹಳೇಬೀಡಿನ ಶೈವ ವ್ಯಾಪಾರಿಗಳು ಹೊಯ್ಸಳೇಶ್ವರ ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿ , ಹಳೇಬೀಡಿನ ಅಂತಸ್ಥನ್ನು ಏರಿಸುವುದಕ್ಕೆ ಕಾರಣರಾದರು. ಆದರೆ ಹೊಯ್ಸಳ ದೇವಾಲಯಗಳು ಜಾತ್ಯಾತೀತವಾಗಿದ್ದು ಎಲ್ಲಾ ಹಿಂದೂ ಉಪಶಾಖೆಗಳ ಅನುಯಾಯಿಗಳಿಗೂ ಇವುಗಳಲ್ಲಿ ಪ್ರೋತ್ಸಾಹವಿತ್ತು. ಕೇವಲ ವೈಷ್ಣವ ಪಂಥಕ್ಕೆ ಸಂಬಂಧಿಸಿದ ಶಿಲ್ಪಕಲೆಯಿರುವ ಸೋಮನಾಥಪುರ ದೇವಾಲಯ ಮಾತ್ರ ಇದಕ್ಕೆ ಅಪವಾದ. ಧನಾಡ್ಯ ಜಮೀನುದಾರರುಗಳು ಕಟ್ಟಿಸಿದ ದೇವಾಲಯಗಳು ಅಂದಿನ ಕೃಷಿ ಪ್ರಧಾನ ಸಮಾಜದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತಿತ್ತು. ಪ್ರೋತ್ಸಾಹದ ಹೊರತಾಗಿಯೂ, ಬೃಹತ್ ದೇವಾಲಯಗಳು ವಿವಿಧ ರೀತಿಯ ಕಸಬಿನ ನೂರಾರು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದ್ದವು. ಈ ಮೂಲಕ ಹಿಂದಿನ ಶ್ರೀಮಂತ ಬೌದ್ಧ ವಿಹಾರಗಳಂತೆ , ಈ ದೇವಾಲಯಗಳು ಸ್ಥಳೀಯ ಸಮಾಜದ ಆಧಾರ ಸ್ಥಂಭಗಳಾಗಿದ್ದವು. ಸಾಹಿತ್ಯ ಹೊಯ್ಸಳ ಆಡಳಿತದ ಕಾಲದಲ್ಲಿ ಸಂಸ್ಕೃತ ಸಾಹಿತ್ಯ ಜನಪ್ರಿಯವಾಗಿದ್ದರೂ, ಕನ್ನಡ ವಿದ್ವಾಂಸರಿಗೆ ರಾಜಾಶ್ರಯ ಹೆಚ್ಚಾಯಿತು. ೧೨ನೆಯ ಶಶತಮಾನದಲ್ಲಿ ಕೆಲ ಸಾಹಿತ್ಯ ಕೃತಿಗಳು ಚಂಪೂ ಶೈಲಿಯಲ್ಲಿ ಬರೆಯಲ್ಪಟ್ಟರೂ , ಇತರ ವಿಶಿಷ್ಟ ಶೈಲಿಗಳೂ ಜನಪ್ರಿಯವಾಗಿದ್ದವು. ಸಾಂಗತ್ಯ, ಷಟ್ಪದಿ, ತ್ರಿಪದಿ ಮತ್ತು ರಗಳೆ ಶೈಲಿಗಳು ಆಧುನಿಕವೆನಿಸಿದ್ದವು. ತೀರ್ಥಂಕರರ (ಜೈನ ಮುನಿಗಳು)ಮಹಿಮೆಯನ್ನು ಎತ್ತಿಹಿಡಿಯುವುದನ್ನು ಜೈನ ಕೃತಿಗಳು ಮುಂದುವರಿಸಿದವು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ,ರುದ್ರಭಟ್ಟ,ನಾಗಚಂದ್ರ,ಹರಿಹರ ಮತ್ತು ,ಅವನ ಸೋದರಸಂಬಂಧಿ, ರಾಘವಾಂಕ ಇವರೆಲ್ಲರಿಗೂ ಹೊಯ್ಸಳ ರಾಜಾಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು. ೧೨೦೯ರಲ್ಲಿ ಜೈನ ಕವಿ ಜನ್ನನು ಯಶೋಧರಚರಿತೆ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದನು. ಊರ ದೇವರು ಮಾರಿಗೆ ಇಬ್ಬರು ಬಾಲಕರನ್ನು ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು. ಆ ಬಾಲಕರ ಮೇಲೆ ಕನಿಕರ ಬಂದು , ರಾಜನು ಅವರಿಬ್ಬರನ್ನೂ ಬಿಡುಗಡೆ ಮಾಡಿ , ನರಬಲಿಯ ಪದ್ಧತಿಗೆ ವಿದಾಯ ಹೇಳುತ್ತಾನೆ. ಈ ಕೃತಿಗಾಗಿ ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಯಿತು. ಎರಡನೆಯ ವೀರಬಲ್ಲಾಳನ ಆಸ್ಥಾನದಲ್ಲಿಯ ಮಂತ್ರಿ ಚಂದ್ರಮೌಳಿಯ ಆಶ್ರಯದಲ್ಲಿದ್ದ ಸ್ಮಾರ್ಥ ಬ್ರಾಹ್ಮಣ ರುದ್ರಭಟ್ಟನು ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವನು. ಆತನ ಪ್ರಸಿದ್ಧ ಚಂಪೂ ಶೈಲಿಯ ಜಗನ್ನಾಥ ವಿಜಯ ಕೃತಿಯು ವಿಷ್ಣು ಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು ಶ್ರೀಕ್ರಷ್ಣನಿಂದ ಬಾಣಾಸುರನ ಸಂಹಾರ. ಒಂದನೆಯ ನರಸಿಂಹನ ಆಸ್ಥಾನದಲ್ಲಿದ್ದ ವೀರಶೈವ ಕವಿ ಹರಿಹರ , (ಹರೀಶ್ವರ ಎಂದೂ ಕರೆಯುವುದುಂಟು ) ಹಳೆಯ ಜೈನ ಚಂಪೂ ಶೈಲಿಯಲ್ಲಿ ಗಿರಿಜಾಕಲ್ಯಾಣ ಕೃತಿಯನ್ನು ರಚಿಸಿದನು. ಹತ್ತು ಭಾಗಗಳಿರುವ ಇದರ ಕಥಾವಸ್ತು ಶಿವ ಪಾರ್ವತಿಯರ ಪರಿಣಯ. ವಚನ ಸಾಹಿತ್ಯ ಪರಂಪರೆಯ ಭಾಗವಾಗಿರದಿದ್ದ ಮೊದಮೊದಲ ವೀರಶೈವ ಕವಿಗಳಲ್ಲಿ ಇವನೂ ಒಬ್ಬ. ಹಳೇಬೀಡಿನ ಕರಣಿಕರ ಕುಟುಂಬದಿಂದ ಬಂದ ಹರಿಹರನು ಹಂಪೆಯಲ್ಲಿ ಅನೇಕ ವರ್ಷಗಳನ್ನು ಕಳೆದು , ನೂರಕ್ಕೂ ಹೆಚ್ಚು ರಗಳೆಗಳನ್ನು ರಚಿಸಿದನು. ಇವು ವಿರೂಪಾಕ್ಷ ದೇವರ ಗುಣಗಾನ ಮಾಡುವ ರಗಳೆಗಳಾಗಿವೆ. ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಪದಿಯ ಬಳಕೆಯನ್ನು ಮೊಟ್ಟಮೊದಲ ಬಾರಿಗೆ ಮಾಡಿದ. ಕನ್ನಡ ವ್ಯಾಕರಣದ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘಿಸಿದ್ದರೂ, ಇದು ಕನ್ನಡ ಸಾಹಿತ್ಯದ ಅತಿಶ್ರೇಷ್ಟ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ. ಇನ್ನು ಸಂಸ್ಕೃತದಲ್ಲಿ , ಮಧ್ವಾಚಾರ್ಯರು , ಬ್ರಹ್ಮಸೂತ್ರಗಳಿಗೆ ಋಗ್ಭಾಷ್ಯವನ್ನು ಬರೆದರು. ಇದಲ್ಲದೇ, ಇತರ ವೈದಿಕ ಶಾಖೆಗಳನ್ನು ಟೀಕಿಸುವ ವಿಮರ್ಶೆಗಳನ್ನೂ ಅವರು ಬರೆದರು. ತಮ್ಮ ತತ್ವಗಳಿಗೆ ಪ್ರಮಾಣಗ್ರಂಥಗಳಾಗಿ , ವೇದಗಳ ಬದಲಾಗಿ , ಪುರಾಣಗಳನ್ನು ಆರಿಸಿಕೊಂಡರು. ವಿದ್ಯಾತೀರ್ಥ ಬರೆದ ರುದ್ರಪ್ರಶ್ಣಾಭಾಷ್ಯವು ಆ ಕಾಲದ ಮತ್ತೊಂದು ಪ್ರಸಿದ್ಧ ಗ್ರಂಥ. ಶಿಲ್ಪಕಲೆ thumb|ಸೋಮನಾಥಪುರದಲ್ಲಿ ಹೊಯ್ಸಳ ಶಿಲ್ಪಕಲೆ ಹೊಯ್ಸಳರ ಸಾಮ್ರಾಜ್ಯ ವಿಸ್ತರಣೆಗಿಂತಲೂ , ಕಲೆ ಮತ್ತು ಶಿಲ್ಪಕೆಲಗಳಿಗೆ ಅವರಿತ್ತ ಪ್ರೋತ್ಸಾಹಕ್ಕಾಗಿ ಈ ಸಾಮ್ರಾಜ್ಯದ ಬಗ್ಯೆ ಆಧುನಿಕ ಸಂಶೋಧನೆ ಬಹು ಮುಖ್ಯವಾಗುತ್ತದೆ. ದಕ್ಷಿಣದಿಂದ ಪಾಂಡ್ಯರು ಮತ್ತು ಉತ್ತರದ ಸೇವುಣರಿಂದ ಸದಾ ದಾಳಿಯ ಅಪಾಯವಿದ್ದರೂ, ಹೊಯ್ಸಳ ರಾಜ್ಯದಾದ್ಯಂತ ದೇವಾಲಯನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿತ್ತು. ಪಷ್ಚಿಮ ಚಾಲುಕ್ಯರ ಶಿಲ್ಪಕಲಾಶೈಲಿಯ ಶಾಖೆಯಾಗಿ ಬೆಳೆದ ಈ ಕಾಲದ ಶೈಲಿಯಲ್ಲಿ ದ್ರಾವಿಡ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತದೆ. ಸಾಂಪ್ರದಾಯಿಕ ದ್ರಾವಿಡ ಶೈಲಿಗಿಂತಲೂ ವಿಶಿಷ್ಟವಾಗಿದ್ದ ಈ ಶೈಲಿಯನ್ನು ಕರ್ನಾಟ ದ್ರಾವಿಡ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಹೊಯ್ಸಳರ ದೇವಸ್ಥಾನ ಶಿಲ್ಪಕಲೆಯಲ್ಲಿ ಕುಶಲತೆಗೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ದೇಗುಲದ ಗೋಪುರದ ವಿಮಾನಗಳಲ್ಲಿ ಎತ್ತರ ಮತ್ತು ಗಾತ್ರಕ್ಕಿಂತ ಅತ್ಯಂತ ನೈಪುಣ್ಯಶೀಲ ಕಲೆಯನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಾಗುತ್ತಿತ್ತು. ಮೃದುವಾದ ಕಲ್ಲಾಗಿದ್ದ ಬಳಪದ ಕಲ್ಲನ್ನು (Soapstone - Chloritic schist) ದೇಗುಲಗಳನ್ನು ಕಟ್ಟಲು ಉಪಯೋಗಿಸಲ್ಪಡುತ್ತಿತ್ತು. ಬೇಲೂರಿನ ಚೆನ್ನಕೇಶವ ದೇವಸ್ಥಾನ (೧೧೧೭), ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ (೧೧೨೧), ಸೋಮನಾಥಪುರದ ಚೆನ್ನಕೇಶವ ದೇವಸ್ಥಾನ (೧೨೭೯), ಅರಸೀಕೆರೆ (೧೨೨೦), ಅಮೃತಪುರ (೧೧೯೬), ಬೆಳವಾಡಿ (೧೨೦೦) ಮತ್ತು ನುಗ್ಗೇಹಳ್ಳಿ (೧೨೪೬) ದೇವಸ್ಥಾನಗಳು ಹೊಯ್ಸಳ ಶಿಲ್ಪಕಲೆಯ ಪ್ರಮುಖ ಉದಾಹರಣೆಗಳು. ಇವೇ ಅಲ್ಲದೆ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಶ್ಮಿಯ ದೇವಾಲಯ, ಕೋರವಂಗಲದ ಬೂಚೇಶ್ವರ, ಹಾರನಹಳ್ಳಿಯ ಲಕ್ಷ್ಮೀನರಸಿಂಹ,ಮೊಸಳೆಯ ಚೆನ್ನಕೇಶವ-ನಾಗೇಶ್ವರ ಜೋಡಿ ದೇವಾಲಯ ಮತ್ತು ಮಂಡ್ಯ ಜಿಲ್ಲೆಯ ಹೊಸಹೊಳಲಿನಲ್ಲಿರುವ ದೇವಾಲಯ ಹೊಯ್ಸಳರ ಕಾಲದ ಕಲಾಕೌಶಲಕ್ಕೆ ನಿದರ್ಶನವಾಗಿವೆ.ಅನೇಕ ದೇವಾಲಯಗಳ ಹೊರಗಿನ ಗೋಡೆಗಳಲ್ಲಿ ಹಿಂದೂ ಪುರಾಣಗಳ ಕಥನಗಳನ್ನು ನಿರೂಪಿಸಲಾಗಿದೆ. ಪ್ರದಕ್ಷಣೆಯ ದಿಕ್ಕಿನಲ್ಲಿ ಈ ಕಥನಗಳ ನಿರೂಪಣೆ ಸಾಗುತ್ತದೆ. ಭಾಷೆ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಪಾಠಶಾಲೆಗಳಾಗಿಯೂ ಉಪಯೋಗಿಸಲಾಗುತ್ತಿದ್ದ ದೇವಾಲಯಗಳಲ್ಲಿ ಬ್ರಾಹ್ಮಣ ಪಂಡಿತರು ಸಂಸ್ಕೃತದಲ್ಲಿ ಕಲಿಸಿದರೆ, ಜೈನ ಮತ್ತು ಬೌದ್ಡ ವಿಹಾರಗಳಲ್ಲಿ, ಮುನಿಗಳು ಶಿಷ್ಯರಿಗೆ ವಿದ್ಯೆ ಕಲಿಸುತ್ತಿದ್ದರು. ಉಚ್ಚ ವಿದ್ಯಾಕೇಂದ್ರಗಳಿಗೆ ಘಟಿಕಾ ಎಂದು ಹೆಸರಿತ್ತು. ಪ್ರವರ್ಧಮಾನಕ್ಕೆ ಬರುತ್ತಿದ್ದ ಭಕ್ತಿ ಪಂಥವು ವಚನಗಳು ಮತ್ತು ದೇವರನಾಮಗಳಿಗೆ ಕನ್ನಡ ಭಾಷೆಯನ್ನು ಬಳಸಿತು. ಸಾಹಿತ್ಯ ಕೃತಿಗಳನ್ನು ತಾಳೆಗರಿಯ ಮೇಲೆ ರಚಿಸಲಾಗುತ್ತಿತ್ತು. ಹಿಂದಿನ ಶತಮಾನಗಳಲ್ಲಿ ಜೈನ ಸಾಹಿತ್ಯ ಕೃತಿಗಳು ಪ್ರಧಾನವಾಗಿದ್ದರೂ, ಹೊಯ್ಸಳರ ಕಾಲದಲ್ಲಿ ಶೈವ ಮತ್ತು ಬ್ರಾಹ್ಮಣ ಕೃತಿಗಳು ಹೆಚ್ಚು ಹೆಚ್ಚಾಗಿ ಬರಲಾರಂಭಿಸಿದವು. ಸಂಸ್ಕೃತ ಸಾಹಿತ್ಯದಲ್ಲಿ ಕಾವ್ಯ, ವ್ಯಾಕರಣ , ವಿಶ್ವಕೋಶ , ಕೈಪಿಡಿಗಳು , ಹಿಂದಿನ ಕೃತಿಗಳ ಮೇಲೆ ಭಾಷ್ಯಗಳು, ನಾಟಕಗಳು, ಗದ್ಯ ಕಥೆಗಳು ಇತ್ಯಾದಿಗಳು ರಚನೆಯಾದವು. ತಾಮ್ರ ಮತ್ತು ಶಿಲಾಶಾಸನಗಳು ಕನ್ನಡ, ಸಂಸ್ಕೃತ ಅಥವಾ ಇವೆರಡೂ ಭಾಷೆಯಲ್ಲಿರುತ್ತಿದ್ದವು. ಹಿನ್ನೆಲೆ , ರಾಜರ ಬಿರುದು ಬಾವಲಿಗಳು ಇತ್ಯಾದಿಗಳು ಸಂಸ್ಕೃತದಲ್ಲಿದ್ದರೆ, ಉಂಬಳಿಯ ವಿವರಗಳು, ಭೂಮಿಯ ತಪಶೀಲು, ಸರಹದ್ದು, ಸ್ಥಳೀಯ ಆಡಳಿತಾಧಿಕಾರಿಗಳು, ಕಂದಾಯ , ಉಂಬಳಿ ಪಡೆದವನ ಹಕ್ಕು ಮತ್ತು ಕರ್ತವ್ಯಗಳು, ಸಾಕ್ಷಿಗಳು ಈ ವಿವರಗಳು ಕನ್ನಡದಲ್ಲಿರುತ್ತಿದ್ದವು.ಈ ಮೂಲಕ ಶಾಸನದ ವಿವರಗಳು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೋಡಿಕೊಳ್ಳಲಾಗುತ್ತಿತ್ತು. ಬಾಹ್ಯ ಸಂಪರ್ಕಗಳು ಹೊಯ್ಸಳ ಶಿಲ್ಪಕಲೆಯ ಚಿತ್ರಗಳು ವರ್ಗ:ಕರ್ನಾಟಕದ ರಾಜಮನೆತನಗಳು ವರ್ಗ:ಕರ್ನಾಟಕದ ಇತಿಹಾಸ
ಸ್ವಾಮಿ ವಿವೇಕಾನಂದ
https://kn.wikipedia.org/wiki/ಸ್ವಾಮಿ_ವಿವೇಕಾನಂದ
thumb|ಸ್ವಾಮಿ ವಿವೇಕಾನಂದ rahmenlos|235 px|right ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ. ಜನನ ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ 'ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ತ್ವಶಾಸ್ತ್ರ ಅಧ್ಯಯನ ಮಾಡಿದರು. ‍ ರಾಮಕೃಷ್ಣರ ಒಡನಾಟ : ನರೇಂದ್ರರಿಗೆ ರಾಮಕೃಷ್ಣರ ಮೊದಲ ಪರಿಚಯ ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಹೆಸ್ಟಿಯವರು ವಿಲಿಯಮ್ ವರ್ಡ್ಸ್ವವರ್ತ್ ಅವರ "ದ ಎ‍ಕ್ಸಕರ್ಶನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಿ ಎಂದು ಸಲಹೆ ಇತ್ತರು. ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಆವರಲ್ಲಿ ನರೇಂದ್ರರೂ ಒಬ್ಬರು. ೧೮೮೧ನೇ ಇಸವಿ ನವೆಂಬರದಲ್ಲಿ ಎಫ್.ಎ(ಲಲಿತಕಲೆ)ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದಾಗ, ರಾಮಚಂದ್ರದತ್ತರು ರಾಮಕೃಷ್ಣರು ಪ್ರವಚನ ನಡೆಸುತ್ತಿದ್ದರು ಸುರೇಂದ್ರನಾಥ ಮಿತ್ರರ ಮನೆಗೆ ಕರೆದರು. ಅಲ್ಲಿ ರಾಮಕೃಷ್ಣರು ನರೇಂದ್ರನಿಗೆ ಹಾಡಲು ಕೇಳಿಕೊಂಡರು. ಅವರ ಗಾಯನ ಪ್ರತಿಭೆಯನ್ನು ಮೆಚ್ಚಿ ರಾಮಕೃಷ್ಣರು ನರೆಂದ್ರನನ್ನು ದಕ್ಷಿಣೇಶ್ವರಕ್ಕೆ ಬರಲು ಆಮಂತ್ರಿಸಿದರು. ಆದರೆ ನರೇಂದ್ರರು ಅದರ ಬಗ್ಗೆ ಉತ್ಸಾಹ ತೊರಿಸಲಿಲ್ಲ. ೧೮೮೨ ರಲ್ಲಿ ನರೇಂದ್ರರು ತನ್ನ ಇಬ್ಬರು ಗೆಳೆಯರೊಂದಿಗೆ ರಾಮಕೃಷ್ಣರನ್ನು ಭೇಟಿ ಮಾಡಲು ದಕ್ಷಿಣೇಶ್ವರಕ್ಕೆ ಹೋದರು. ರಾಮಕೃಷ್ಣರ ಆ ಭೇಟಿ ಅವರ ಜೀವನಕ್ಕೆ ಮಹತ್ವದ ತಿರುವನ್ನು ಕೊಟ್ಟಿತು. ಆದರೂ ನರೇಂದ್ರರು ರಾಮಕೃಷ್ಣರನ್ನು ಗುರುಗಳನ್ನಾಗಿ ಒಪ್ಪಿಕೊಳ್ಳಲಿಲ್ಲ. ರಾಮಕೃಷ್ಣರ ಆಲೋಚನೆಗಳನ್ನು ಒಪ್ಪಿಕೊಳ್ಳದಿದ್ದರೂ, ಅವರ ಮಗುವಿನಂಥ ವ್ಯಕ್ತಿತ್ವ ಅವರನ್ನು ಪದೇ ಪದೇ ದಕ್ಷಿಣೀಶ್ವರಕ್ಕೆ ಭೇಟಿ ನೀಡಲು ಪ್ರೇರೇಪಿಸಿತು. ಮೊದಮೊದಲಿಗೆ ರಾಮಕೃಷ್ಣರ ಭಾವಪರವಶತೆಯ ಮತ್ತು ದೂರದೃಷ್ಟಿಯನ್ನು ಕೇವಲ ಕಾಲ್ಪನಿಕ ಬರಿ ಭ್ರಮೆ ಎಂದು ಭಾವಿಸಿದ್ದರು. ೧೮೮೪ ಇಸವಿಯಲ್ಲಿ ಅನಿರೀಕ್ಷಿತವಾಗಿ ನರೇಂದ್ರರ ತಂದೆಯವರು ಇಹಲೋಕ ತ್ಯಜಿಸಿದರು. ಅವರ ಮರಣಾ ನಂತರ ಕುಟುಂಬ ದಿವಾಳಿಯಾಯಿತು, ಸಾಲಗಾರರ ಬಾಧೆ ಶುರುವಾಯಿತು.ಅವರ ಕುಟುಂಬದವರು ಪೂರ್ವಜರ ಮನೆಯಿಂದ ಹೊರಗೆ ಹಾಕಿದರು. ಅವರು ಕೆಲಸ ಹುಡುಕುವುದರಲ್ಲಿ ವಿಫಲರಾದಾಗ, ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹಪಟ್ಟರು. ಆದರೆ ರಾಮಕೃಷ್ಣರ ಸಾನಿಧ್ಯ ಅವರಿಗೆ ಸಾಂತ್ವನ ನೀಡುತಿತ್ತು. ಒಂದು ದಿನ ನರೇಂದ್ರರು ಅವರ ಕುಟುಂಬದ ಅಭ್ಯುದಯಕ್ಕೋಸ್ಕರ ಕಾಳಿ ದೇವಿಯನ್ನು ಪ್ರಾರ್ಥಿಸುವಂತೆ ರಾಮಕೃಷ್ಣರನ್ನು ಕೇಳಿಕೊಂಡರು. ಅದಕ್ಕೆ ಅವರು ನೀನೊಬ್ಬನೇ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸು ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಎರಡು, ಮೂರು ಸಲ ದೇವಸ್ಥಾನಕ್ಕೆ ಹೋದರು. ಆದರೆ ಅವರು ಯಾವುದೇ ರೀತಿಯ ಲೌಕಿಕ ಅವಶ್ಯಕತೆಗಳನ್ನು ಪೂರೈಸಲು ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸುವುದರಲ್ಲಿ ವಿಫಲರಾದರು. ಆದರೆ ಪ್ರತಿ ಬಾರಿಯು ಮುಕ್ತಿಗಾಗಿ ಕೇಳಿಕೊಳ್ಳಲಷ್ಟೇ ಶಕ್ತರಾದರು. ಕೊನೆಗೆ ಅವರು ಸರ್ವಸಂಗ ಪರಿತ್ಯಾಗ ಮಾಡಿ ರಾಮಕೃಷ್ಣರನ್ನು ಗುರುಗಳನ್ನಾಗಿ ಸ್ವೀಕಾರ ಮಾಡಿದರು. ೧೮೮೫ ರಲ್ಲಿ ರಾಮಕೃಷ್ಣರು ಕಲ್ಕತ್ತಾದ ಕೊಸ್ಸಿಪುರದಲ್ಲಿ ಇರುವ ಅವರ ತೋಟದ ಮನೆಯಲ್ಲಿ ಗಂಟಲಿನ ಹುಣ್ಣಿನಿಂದ ಬಳಲುತಿದ್ದರು. ನರೇಂದ್ರರು ತಮ್ಮ ಆಧ್ಯಾತ್ಮಿಕ ವಿಧ್ಯಾಭ್ಯಾಸವನ್ನು ಮುಂದುವರಿಸಿದರು. ಅವರು ಕೊಸ್ಸಿಪುರದಲ್ಲಿ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದರು. ನರೇಂದ್ರ ಮತ್ತು ರಾಮಕೃಷ್ಣರ ಇತರ ಶಿಷ್ಯರು ಗುರುಗಳ ಅದೇಶದಂತೆ ಅವರಂತೆ ನಿಲುವಂಗಿ ಮತ್ತು ಕಾವಿ ತೊಟ್ಟುಕೊಂಡರು. ಜನ ಸೇವೆಯೇ ಜನಾರ್ದನನ ಸೇವೆ ಎಂದರು. ರಾಮಕೃಷ್ಣರು ನರೇಂದ್ರರನ್ನು ತಮ್ಮ ಶಿಷ್ಯವೃಂದದ ನಾಯಕರನ್ನಾಗಿ ನೇಮಿಸಿದರು. ರಾಮಕೃಷ್ಣರು ೧೮೮೬, ಆಗಸ್ಟ ೧೬ ರಂದು ನಿಧನ ಹೊಂದಿದರು. ರಾಮಕೃಷ್ಣ ಮಠದ ಸ್ಥಾಪನೆ ರಾಮಕೃಷ್ಣರ ಮರಣಾ ನಂತರ ಅವರ ಮಠಕ್ಕೆ ಬರುವ ಆದಾಯವು ಕಡಿಮೆಯಾಯಿತು. ಇದರಿಂದಾಗಿ ಅವರು ಬೇರೆ ಜಾಗವನ್ನು ಹುಡುಕಬೇಕಾಯಿತು. ಬಾರನಗರದಲ್ಲಿ ನರೇಂದ್ರರು ಶಿಥಿಲವಾದ ಮನೆಯನ್ನು ಖರೀದಿಸಿ, ಆ ಮನೆಯನ್ನು ಅವರು ಮಠವನ್ನಾಗಿ ಪರಿವರ್ತಿಸಲು ಆಲೋಚಿಸಿದರು. ಆ ಮನೆಯ ಬಾಡಿಗೆಯನ್ನು ಭಿಕ್ಷಾಟನೆ ಮೂಲಕ ತುಂಬುತಿದ್ದರು. ಈ ಮನೆಯೆ ರಾಮಕೃಷ್ಣರ ಮಠದ ಮೊದಲ ಶಾಖೆಯಾಯಿತು. ಅಲ್ಲಿ ನರೇಂದ್ರ ಮತ್ತು ಅವರ ಶಿಷ್ಶರು ಹೆಚ್ಚಿನ ಸಮಯವನ್ನು ಧ್ಯಾನ ಮತ್ತು ಧಾರ್ಮಿಕ ವಿಷಯಗಳನ್ನು ಅಭ್ಯಾಸ ಮಾಡುವಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ಮುಂದಿನ ಆ ದಿನಗಳನ್ನು ನೆನೆಸುತ್ತಾ "ಪ್ರತಿದಿನ ಬೆಳಿಗ್ಗೆ ೩ ರಿಂದ ರಾತ್ರಿಯವರೆಗು ನಾವು ಧ್ಯಾನದಲ್ಲೆ ಕಳೆಯುತ್ತಿದ್ದೆವು. ಜಗತ್ತಿನ ಪರಿವೆಯೆ ಇಲ್ಲದೆ, ನಮ್ಮ ಸಾಧನಾ ಪ್ರಪಂಚದಲ್ಲಿ ಮುಳುಗಿದ್ದೆವು" ೧೮೮೧ ನೇ ಇಸವಿಯಲ್ಲಿ ನರೇಂದ್ರರು ವೈಷ್ಣವ ಚರಣ್ ಬಾಸ್ಕರವರ ಜೊತೆ ಬಂಗಾಳಿ ಭಾಷೆಯ ಕವಿತೆಗಳನ್ನೊಳಗೊಂಡ "ಸಂಗೀತ ಕಲ್ಪತರು "ಎಂಬ ಪುಸ್ತಕವನ್ನು ಸಂಗ್ರಹಿಸಿದರು. ಆದರೆ ಹಲವು ಸಮಸ್ಯೆಗಳಿಂದ ಅದನ್ನು ಪ್ರಕಟಿಸಲಾಗಲಿಲ್ಲ.. ವಿವೇಕಾನಂದರ ಭಾರತ ಪರ್ಯಟನೆ ೧೮೮೮ ನರೇಂದ್ರರು ಭಾರತ ಪರ್ಯಟನೆಗೆ ಹೊರಟರು. ಅವರು ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ "ದಿ ಇಮಿಟೆಶ್ನ್ ಆಫ್ ಕ್ರೈಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು. ನರೇಂದ್ರರು ಸತತವಾಗಿ ಐದು ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಉತ್ತರ ಭಾರತ ೧೮೮೮ ರಲ್ಲಿ ಗೌತಮ ಬುದ್ಧ ಮತ್ತು ಆದಿ ಶಂಕರಾಚಾರ್ಯರು ಧರ್ಮ ಪ್ರಚಾರ ಮಾಡಿದ ವಾರಣಾಸಿಗೆ ಭೇಟಿ ನೀಡಿದರು. ಅಲ್ಲಿ ಅವರು ಬಂಗಾಳಿ ಬರಹಗಾರ ಭೂದೇವ ಮುಖ್ಯೋಪಾಧ್ಯಾಯ ಮತ್ತು ಹಿಂದು ಸಂತ ತ್ರ್ಯೆಲಂಗರನ್ನು ಭೇಟಿ ಮಾಡಿದರು. ಭೂದೇವ ಮುಖ್ಯೋಪಾಧ್ಯಾಯರು "ಇಂತಹ ದೂರದೃಷ್ಟಿ ಮತ್ತು ವಿಚಾರವಾದವನ್ನು ಇಷ್ಟು ಕಿರಿಯ ಪ್ರಾಯದಲ್ಲಿ ಪಡೆದುಕೊಂಡ ನೀನು ಮುಂದೊಂದು ದಿನ ದೊಡ್ಡ ವ್ಯಕ್ತಿಯಾಗುವೆ" ಎಂದು ಪ್ರಶಂಸಿಸಿದರು. ನಂತರ ಸಂಸ್ಕ್ರತ ಮತ್ತು ವ್ಯೆದಿಕ ವಿದ್ವಾಂಸರಾದ ಬಾಬು ಪರಮದಾಸ್ ಮಿತ್ರ ಅವರನ್ನು ಭೇಟಿ ಮಾಡಿದರು. ನಂತರ ಅವರು ಅಯೋಧ್ಯಾ, ಲಕ್ನೋ ವೃಂದಾವನ ಮತ್ತು ಋಷಿಕೇಶಕ್ಕೆ ಭೇಟಿ ನೀಡಿದರು. ಅದ್ವೈತ ಸಿದ್ಧಾಂತದ ಉಪಯುಕ್ತತೆ ಕೇವಲ ರಾಮಕೃಷ್ಣ ಪರಮಹಂಸರ ಶಿಷ್ಯರಾಗದೆ ತಮ್ಮದೇ ಶೈಲಿಯಲ್ಲಿ ದೊಡ್ಡ ಚಿಂತಕರಾಗಿ ವಿವೇಕಾನಂದರು ಹೆಸರು ಪಡೆದಿದ್ದಾರೆ. ಅವರ ಮುಖ್ಯ ಕಾಣಿಕೆಯೆಂದರೆ ಕೇವಲ ತಾತ್ವಿಕವಾಗಿ ಉಚ್ಚ ತತ್ತ್ವಜ್ಞಾನ ಮಾತ್ರವಲ್ಲದೆ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಯಿಂದಲೂ ಉಪಯುಕ್ತ ಎಂಬುದನ್ನು ತೋರಿಸಿಕೊಟ್ಟರು. ಅವರ ಅಭಿಪ್ರಾಯದಂತೆ, ರಾಮಕೃಷ್ಣರಿಂದ ಅವರು ಪಡೆದ ಮುಖ್ಯ ಬೋಧನೆಗಳಲ್ಲಿ ಒಂದೆಂದರೆ ಎಲ್ಲರಲ್ಲಿಯೂ ದೇವರಿದ್ದಾನೆ ಎಂಬುದು. ಇದೇ ಅವರ ಮಂತ್ರವಾಯಿತು ಮತ್ತು ಅವರ "ದರಿದ್ರ ನಾರಾಯಣ ಸೇವೆ' ಎಂಬ ತತ್ತ್ವಕ್ಕೆ ದಾರಿ ಮಾಡಿ ಕೊಟ್ಟಿತು. ಈ ತತ್ತ್ವದಂತೆ ಬಡ ಜನರ ಸೇವೆಯಲ್ಲಿಯೇ ದೇವರ ಸೇವೆಯನ್ನು ಮಾಡುವ ದಾರಿಯನ್ನು ಅವರು ಪಾಲಿಸಿದರು. ಎಲ್ಲರಲ್ಲಿಯೂ ದೇವರಿದ್ದು ಎಲ್ಲರೂ ಸಮಾನರೆಂದಾದ ಮೇಲೆ ಕೆಲವರಿಗೆ ಮಾತ್ರ ಏಕೆ ಹೆಚ್ಚು ಬೆಲೆ ಬರಬೇಕು ಎಂಬ ಪ್ರಶ್ನೆಯನ್ನು ವಿವೇಕಾನಂದರು ಕೇಳಿಕೊಂಡರು. ಅವರ ಅಂತಿಮವಾದ ತೀರ್ಮಾನವೆಂದರೆ ಭಕ್ತನು ಮೋಕ್ಷವನ್ನು ಅನುಭವಿಸಿದಾಗ ನಮ್ಮಲ್ಲಿರುವ ಎಲ್ಲ ಭೇದಗಳೂ ಮಾಯವಾಗಿ, ಉಳಿಯುವುದೆಂದರೆ ಬ್ರಹ್ಮನೊಂದಿಗೆ ತಮ್ಮ ಐಕ್ಯವನ್ನು ಅರಿಯದ ಮತ್ತು ಕೆಳತುಳಿಯಲ್ಪಟ್ಟಿರುವ ಜನರ ಬಗೆಗೆ ಸಂತಾಪ ಮತ್ತು ಅವರಿಗೆ ಸಹಾಯ ಮಾಡುವ ಸದೃಢ ನಿಶ್ಚಯ. ವಿವೇಕಾನಂದರ ವಿಶ್ವಪರ್ಯಟನೆ thumb|left|ವಿವೇಕಾನಂದ 1893- ದಿ ಈಸ್ಟ್ ಇಂಡಿಯನ್/ ಪೂರ್ವಭಾರತದ ತಂಡದೊಂದಿಗೆ ವಿವೇಕಾನಂದರು ಭಾರತದ ತತ್ವಜ್ಞಾನ, ಯೋಗ, ವೇದಾಂತ ಇವೆಲ್ಲವನ್ನು ಪಾಶ್ಚಿಮಾತ್ಯದೇಶಗಳಲ್ಲಿ ಪ್ರಚಾರ ಮಾಡಿದರು. ಅವರು ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು. ಅವರು ಸನ್ಯಾಸಿಯಾಗಿ ದೇವರಸೇವೆ ಹೇಗೆ ಮಾಡಬಹುದೆಂದು ನಿರೂಪಿಸಿದರು. ಗುರು ರಾಮಕೃಷ್ಣರ ಮರಣಾ ನಂತರ ವಿವೇಕಾನಂದರು ಭಾರತ ಪ್ರವಾಸ ಕೈಗೊಂಡರು. ಭಾರತದ ಉಪಖಂಡದಲ್ಲಿ ಬ್ರಿಟೀಷರ ಷರತ್ತುಗಳನ್ನು ಆಧ್ಯಯನ ಮಾಡಿದರು. ನಂತರ ಅವರು ಅಮೇರಿಕಾ ಪ್ರವಾಸ ಕೈಗೊಂಡರು. ೧೮೯೩ರಲ್ಲಿ ಚಿಕಾಗೋದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು. ವಿವೇಕಾನಂದರು ನೂರಕ್ಕು ಹೆಚ್ಚು ಖಾಸಗಿ ಹಿಂದೂಸಂಸ್ಥೆಗಳಲ್ಲಿ ತಮ್ಮ ವಿಚಾರಧಾರೆಯನ್ನು ಹರಿಸಿದರು. ದೇಶ ವಿದೇಶಗಳಲ್ಲಿ ಹಿಂದೂಧರ್ಮದ ತತ್ವವನ್ನು ಭೋಧಿಸಿದರು. ಅವರು ಪ್ರಪಂಚದಾದ್ಯಂತ ಪ್ರಯಾಣ ಮಾಡಿ, ಅಲ್ಲಿನ ಭಕ್ತರನ್ನುದ್ದೇಶಿಸಿ ಮಾಡಿದ ಭಾಷಣಗಳನ್ನು ಒಟ್ಟುಗೂಡಿಸಿ ಬರೆಯಲ್ಪಟ್ಟ ಅವರ ನಾಲ್ಕು ಪುಸ್ತಕಗಳು ಹಿಂದೂ ಧರ್ಮದ ಯೋಗ ಸಿದ್ಧಾಂತವನ್ನು ತಿಳಿಯ ಬಯಸುವವರಿಗೆ, ಮೂಲಭೂತ ಪಠ್ಯಗಳೆಂದೇ ಪರಿಗಣಿತವಾಗಿವೆ. *ವಿವೇಕಾನಂದರ ನಂಬಿಕೆಗಳಲ್ಲಿ ಮುಖ್ಯವಾದುದು ನಮ್ಮಲ್ಲಿ ಎಲ್ಲರೂ ಮುಕ್ತರಾಗುವವರೆಗೆ ಯಾರೊಬ್ಬರೂ ಮುಕ್ತರಾಗಲಾರರೆಂಬುದು. ವೈಯಕ್ತಿಕ ಮುಕ್ತಿಯ ಆಸೆಯನ್ನು ಬಿಟ್ಟು ಎಲ್ಲರ ಮುಕ್ತಿಗಾಗಿ ಶ್ರಮಿಸುವವನೇ ಅವರ ದೃಷ್ಟಿಯಲ್ಲಿ ಪ್ರಬುದ್ಧ ವ್ಯಕ್ತಿ. ವಿವೇಕಾನಂದರು, ಧರ್ಮ ಮತ್ತು ಸರ್ಕಾರ ದ ನಡುವೆ ಕಟ್ಟುನಿಟ್ಟಾದ ದೂರವಿಡುವಂತೆ ಮನವಿ ಮಾಡಿದರು. ಸಾಮಾಜಿಕ ಕಟ್ಟಲೆಗಳು ಧರ್ಮದ ಮೂಲಕ ರೂಪುಗೊಂಡಿರುತ್ತವೆಯಾದರೂ, ಸರ್ಕಾರಿ ಕೆಲಸಗಳಲ್ಲಿ ಯಾವುದೇ ಒಂದು ಧರ್ಮಕ್ಕೆ ಪ್ರಾಶಸ್ತ್ಯವಿರಬಾರದು ಎಂದು ಅವರ ನಂಬಿಕೆಯಾಗಿತ್ತು. ಅವರ ಕಲ್ಪನೆಯ ಆದರ್ಶ ಸಮಾಜವೆಂದರೆ ಬ್ರಾಹ್ಮಣ ಜ್ಞಾನ, ಕ್ಷತ್ರಿಯ ಸಂಸ್ಕೃತಿ, ವೈಶ್ಯ ದಕ್ಷತೆ ಮತ್ತು ಶೂದ್ರರ ಸಮಾನತೆಯ ಮೇಲೆ ನಿಂತಿರುವಂಥ ಸಮಾಜ. ಯಾವುದೇ ಒಂದು ವರ್ಗದ ಪ್ರಾಶಸ್ತ್ಯ ಸಮಾಜದಲ್ಲಿ ಸಮಾನತೆಯನ್ನು ಹಾಳುಗೆಡವುತ್ತದೆ ಎಂಬುದು ಅವರ ಸಾಮಾಜಿಕ ದೃಷ್ಟಿ. ಆಳವಾಗಿ ಸಮಾಜವಾದಿಯಾಗಿದ್ದರೂ, ಧರ್ಮದ ಮೂಲಕ ಸಮಾಜವಾದವನ್ನು ಹೇರುವುದು ತಪ್ಪೆಂದೂ, ಸಮಾಜವಾದ ಎಂಬುದು ವೈಯಕ್ತಿಕವಾಗಿ ಸಂದರ್ಭ ಸರಿಯಿದ್ದಾಗ ಜನರು ಕೈಗೊಳ್ಳಬೇಕಾದ ನಿರ್ಧಾರವೆಂದೂ ಅವರ ದೃಷ್ಟಿ. ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ಭಾಷಣ thumb|200px |alt=Swami Vivekananda, World Parliament of Religion, 1893, Addresses at the Parliament of Religions, 1, Speech |ವಿವೇಕಾನಂದರ ಚಿಕಗೊ ಸ್ವಾಗತ ಭಾಷಣ thumb|260px|ವೀರ್‍ಚಂದ್ ಗಾಂಧಿ, ಹೆವಿವಿಟಾರ್ನೆ ಧರ್ಮಪಾಲ(Hewivitarne Dharmapala) ಅವರೊಂದಿಗೆ ಧರ್ಮ ಸಂಸತ್ತಿನಲ್ಲಿ ವಿವೇಕಾನಂದ ಸರ್ವಧರ್ಮಸಮ್ಮೇಳನ, ದ ಭಾಷಣದಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮದ ಸಿದ್ಧಾಂತಗಳು, ಮಿಂಚಿನಂತೆ ಅಲ್ಲಿನ ಜನರನ್ನು ಆಕರ್ಶಿಸಿದವು. ವಿವೇಕಾನಂದರ ಅತಿ ಪ್ರಸಿದ್ಧ ಯಶಸ್ಸು೧೮೯೩ ರಲ್ಲಿ ಶಿಕಾಗೊ ನಗರದಲ್ಲಿ ನಡೆದ ಪ್ರಪಂಚ ಮತಗಳ ಸಂಸತ್ತಿನಲ್ಲಿ ಬಂದಿತು. ಅವರ ಭಾಷಣದಲ್ಲಿ ಮೊದಲ ವಾಕ್ಯವಾಗಿದ್ದ "ಅಮೆರಿಕದ ಸಹೋದರ ಸಹೋದರಿಯರೇ" ಎಂಬ ವಾಕ್ಯ ಚಿರಸ್ಮರಣೀಯವಾಗಿದೆ.ವಿಶ್ವದ ಧರ್ಮಗಳ ಸಂಸತ್ತು' ಸೆಪ್ಟೆಂಬರ್ 11, 1893 ರಂದು ವಿಶ್ವದ ಕೊಲಂಬಿಯನ್ ಪ್ರದರ್ಶನದ ಭಾಗವಾಗಿ ಈಗ ಚಿಕಾಗೋದ, "ಆರ್ಟ್ ಇನ್ಸ್ಟಿಟ್ಯೂಟ್ನ ಶಾಶ್ವತ ಸ್ಮಾರಕ ಕಲಾ ಭವನ" ದಲ್ಲಿ (ವಿಶ್ವದ ಕಾಂಗ್ರೆಸ್ ಸಹಾಯಕ ಕಟ್ಟಡ ಎಂದೂ ಗುರುತಿಸಲ್ಪಟ್ಟಿದೆ) ಪ್ರಾರಂಭವಾಯಿತು. ವಿವೇಕಾನಂದರು ಆ ದಿನ ತಮ್ಮ ಮೊದಲ ಉಪನ್ಯಾಸವನ್ನು ನೀಡಿದರು. ಇವರ ಸರದಿಯನ್ನು ತುಂಬಾ ಮುಂದೂಡುವಿಕೆಯ ನಂತರ ಮಧ್ಯಾಹ್ನದ ಹೊತ್ತಿಗೆ ಇವರ ಸರದಿ ಬಂದಿತು. ಆರಂಭದಲ್ಲಿ ಅವರು ಆತಂಕಕ್ಕೊಳಗಾಗಿದ್ದರೂ, ಅವರು ಹಿಂದೂ ವಿದ್ಯಾ ದೇವತೆಯಾದ ಸರಸ್ವತಿಗೆ ನಮಸ್ಕರಿಸಿದರು, ಮತ್ತು ಅವರು ತಮ್ಮ ದೇಹದಲ್ಲಿ ಹೊಸ ಶಕ್ತಿಯನ್ನು ಪಡೆದುಕೊಂಡಿರವುದಾಗಿ ಭಾವಿಸಿದರು; ಯಾರೋ ಅಥವಾ ಇನ್ನೊಬ್ಬರು ತಮ್ಮ ದೇಹವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಭಾವಿಸಿದರು- (ಅದು"ದಿ ಸೋಲ್ ಆಫ್ ಇಂಡಿಯಾ, ಋಷಿಯ ಪ್ರತಿಧ್ವನಿ, ರಾಮಕೃಷ್ಣರ ಧ್ವನಿ, ಪುನರುತ್ಥಾನಗೊಂಡ ಸಮಯದ ಚೈತನ್ಯದ ಮುಖವಾಣಿ") ನಂತರ "ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ!" ಎಂದು ಸಂಬೋಧಿಸಿ ಮಾತು ಆರಂಭಿಸಿದರು. ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ 'ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ' ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು. ಮೌನವನ್ನು ಪುನಃಸ್ಥಾಪಿಸಿದಾಗ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು. "ವಿಶ್ವದ ಅತ್ಯಂತ ಪ್ರಾಚೀನ ವೈದಿಕ ಕ್ರಮ ಅನುಸರಿಸಿದ ಸನ್ಯಾಸಿಗಳ, ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರ ಎರಡನ್ನೂ ಕಲಿಸಿದ ಧರ್ಮದ ಪರವಾಗಿ ಅವರು ಯುವ ರಾಷ್ಟ್ರಗಳನ್ನು ಅಭಿನಂದಿಸಿದರು.!" (ಭಾರತಕ್ಕಿಂತ ಅವು ಕಿರಿಯ/ ಯುವ ರಾಷ್ಟ್ಟ್ರಗಳು)'' ಈ ಸಂದರ್ಭದಲ್ಲಿಯೇ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂ ಧರ್ಮದ ಬಗೆಗೆ ಆಸಕ್ತಿಯನ್ನೂ ಕೆರಳಿಸಿದರು. 'ಪೂರ್ವ ದೇಶದ ವಿಚಿತ್ರ ಧರ್ಮ' ಎಂದು ಪರಿಗಣಿತವಾಗಿದ್ದ ಹಿಂದೂ ಧರ್ಮದ ತಾತ್ವಿಕ ಹಾಗೂ ಧಾರ್ಮಿಕ ಮೂಲಭೂತ ಮಹತ್ವವುಳ್ಳ ಸಂಪ್ರದಾಯಗಳು, ಪಾಶ್ಚಾತ್ಯ ರಾಷ್ಟ್ರಗಳಲ್ಲಿಯೂ ಗುರುತಿಸಲ್ಪಟ್ಟವು. ಈ ಸಂದರ್ಭದ ಕೆಲವೇ ವರ್ಷಗಳಲ್ಲಿ 'ನ್ಯೂಯಾರ್ಕ್' ಮತ್ತು 'ಲಂಡನ್' ನಗರಗಳಲ್ಲಿ ವೇದಾಂತ ಕೇಂದ್ರಗಳನ್ನು ಸ್ಥಾಪಿಸಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಭಾಷಣಗಳನ್ನು ಮಾಡಿದರು. ಇದರ ನಂತರ ಭಾರತಕ್ಕೆ ಮರಳಿ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ಸ್ಥಾಪಿಸಿದರು. ಇದು ಈಗ ಭಾರತದ@ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಿತ ಸಂಸ್ಥೆಯಾಗಿದೆ. 'ಸ್ವಾಮಿ ವಿವೇಕಾನಂದ'ರು ದಿವಂಗತರಾದಾಗ ಕೇವಲ ೩೯ ವರ್ಷದವರಾಗಿದ್ದರು. ಯುವಕರಿಗೆ ದಾರಿ ದೀಪವಾಗಿದ್ದರು. ಸ್ವಾಮಿ ಅವರ ಭಾಷಣದ ಆಯ್ದ ಭಾಗ ಹೀಗಿದೆ:-"ನಾನು ಮಾಡಿರುವ ಅಲ್ಪ ಕಾರ್ಯ ಕೇವಲ ನನ್ನಲ್ಲಿರುವ ಶಕ್ತಿಯಿಂದಲ್ಲ. ನನ್ನ ಪರಮಮಿತ್ರ ಪ್ರಿಯತಮ ಮಾತೃಭೂಮಿಯಿಂದ ಹೊರಟ ಉತ್ತೇಜನ ಶುಭಾಶಯ ಆಶೀರ್ವಾದಗಳು". ಸ್ವದೇಶ ಮಂತ್ರ ಹೋ ಜಂಬೂದ್ವೀಪದ ಮೂಲ ನಿವಾಸಿಗಳೇ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ ಬರಿಯ ಇಂದ್ರಿಯ ಭೋಗಕ್ಕಲ್ಲ, ವ್ಯಕ್ತಿಗತ ಸುಖಕ್ಕಲ್ಲ. ಮರೆಯದಿರಿ, ನಿಮ್ಮ ಜನ್ಮವಿರುವುದೇ ಜಗನ್ಮಾತೆಯ ಅಡಿದಾವರೆಗಳಲ್ಲಿ ಬಲಿದಾನಕ್ಕಾಗಿ! ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು. ಸಾರಿ ಹೇಳಿ, ಮೂರ್ಖ ಭಾರತೀಯರೂ ನಮ್ಮ ಸಹೋದರರು, ಬ್ರಾಹ್ಮಣ ಭಾರತೀಯರೆಮ್ಮ ಸಹೋದರರು, ಪಂಚಮ ಭಾರತೀಯರೆಮ್ಮ ಸಹೋದರರು. ನೀವು ಒಂದು ಚಿಂದಿಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿದ್ದರೂ ಕೂಡ, ಅಭಿಮಾನಪೂರ್ವಕವಾಗಿ ದಿಕ್‌ತಟಗಳು ಅನುರಣಿತವಾಗುವಂತೆ ತಾರಸ್ವರದಿಂದ ಸಾರಿ ಹೇಳಿ "ಭಾರತೀಯರು ನಮ್ಮ ಸಹೋದರರು, ಭಾರತೀಯರು ನಮ್ಮ ಪ್ರಾಣ. ಭಾರತೀಯ ದೇವ ದೇವತೆಗಳೆಲ್ಲರೂ ನಮ್ಮ ದೇವರು. ಭಾರತೀಯ ಸಮಾಜ, ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ, ವೃದ್ಧಪ್ಯದ ವಾರಾಣಸಿ". ಸಹೋದರರೆ, ಹೀಗೆ ಸಾರಿ "ಭಾರತ ಭೂಮಿಯೆ ನಮ್ಮ ಪರಂಧಾಮ. ಭಾರತದ ಶುಭವೆ ನಮ್ಮ ಶುಭ." ಹಗಲೂ ರಾತ್ರಿಯೂ ಇದು ನಿಮ್ಮ ಪ್ರಾರ್ಥನೆಯಾಗಲಿ, "ಹೇ ಗೌರೀನಾಥ, ಹೇ ಜಗನ್ಮಾತೆ, ಪೌರುಷವನ್ನು ಎಮಗೆ ದಯಪಾಲಿಸು. ಹೇ ಸರ್ವಶಕ್ತಿಶಾಲಿನಿ, ನಮ್ಮ ದೌರ್ಬಲ್ಯವನ್ನು ದಹಿಸು. ಕ್ಲೈಬ್ಯವನ್ನು ಹೋಗಲಾಡಿಸು. ನಮ್ಮ ಷಂಡತನವನ್ನು ಹೋಗಲಾಡಿಸಿ, ನಮ್ಮಲ್ಲಿ ವೀರತ್ವವನ್ನು ತುಂಬು. ಚಿಕಾಗೋದಲ್ಲಿ ಒಬ್ಬ ಕ್ರಿಶ್ಚನ್ನ ಯುವಕರು ತಮ್ಮಗ್ರಂಥವನ್ನು ಭಗವದ್ಗೀತೆಯ ಕೆಳಗಿಟ್ಟು‌ ತಮ್ಮ‌ಧರ್ಮ ಶ್ರೇಷ್ಠ ಎಂಬ ಮಂಡುವಾದ ಮಾಡಿದರು. ಆ ಪುಸ್ತಕ ಸರಿಸಿದ ವಿವೇಕಾನಂದರು ಕೆಳಗಿದ್ದ ಪುಸ್ತಕ ವನ್ನು ಕುರಿತು ಎಲ್ಲಾಧರ್ಮಗಳಿಗಿಂತ ಮೂಲ ಧರ್ಮ‌ ನಮ್ಮಧರ್ಮ.ಎಲ್ಲಾ ಧರ್ಮವು ಒಂದೇ ಎಂದು ಹೇಳಿದರು. /books.google. ಕುವೆಂಪುರವರ 'ಸ್ವಾಮಿ ವಿವೇಕಾನಂದ' ನಮ್ಮ ರಾಷ್ಟ್ರ ಕವಿ ಕುವೆಂಪುರವರು 'ಸ್ವಾಮಿ ವಿವೇಕಾನಂದ'ರನ್ನು ಕುರಿತು ಒಂದು ಕೃತಿ ರಚಿಸಿದ್ದಾರೆ. ಈ ಕೃತಿಯು ಅವರ ಜೀವನದ ಪರಿಚಯವನ್ನು ಮಾಡಿಸುತ್ತದೆ.ಬೇಲೂರಿನ ರಾಮಕೃಷ್ಣ ಮಠಕ್ಕೆ ಆಗಿಂದಾಗ ಭೇಟಿಯನ್ನು ನೀಡುತ್ತಿದ್ದರು. ಆಸಕ್ತಿಕರ ಮಾಹಿತಿ ಸ್ವಾಮಿ ವಿವೇಕಾನಂದ: ವೀರಸನ್ಯಾಸದ ತ್ಯಾಗರೂಪ;ಎಸ್‌. ಸೂರ್ಯಪ್ರಕಾಶ ಪಂಡಿತ್‌;12 ಜನವರಿ 2019 ಹಾರ್ವರ್ಡ್ ಮತ್ತು ಕೊಲಂಬಿಯಾ ಪ್ರಾಧ್ಯಾಪಕ ಹುದ್ದೆ;(ಸ್ವಾಮಿ ವಿವೇಕಾನಂದ : ಕಪ್ಪು-ಬಿಳುಪು ಪುಸ್ತಕದ ಆಯ್ದ ಭಾಗ ) ವಿವೇಕಾನಂದರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪೌರ್ವಾತ್ಯ ತತ್ತ್ವಜ್ಞಾನದ ಗೌರವ ಪ್ರಾಧ್ಯಾಪಕರಾಗಿ ಆಯ್ಕೆಯಾದ ಮೊದಲ ಏಷ್ಯಾ ಖಂಡದ ವ್ಯಕ್ತಿ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ವಿವೇಕಾನಂದರ ಸೂಚನೆಯ ಮೇರೆಗೇ ಪ್ರಾರಂಭವಾದದ್ದು. ಬಾಹ್ಯ ಸಂಪರ್ಕಗಳು ವಿವೇಕಾನಂದ ರಾಮಕೃಷ್ಣ ಮಿಷನ್ ಬೆಳಗಾವಿಯ ಸ್ವಾಮಿ ವಿವೇಕಾನಂದ ಮೆಮೊರಿಯಲ್ ಹಾಲ್‌ ವಿವೇಕಾನಂದರ ಫೋಟೋಗಳು ಉಲ್ಲೇಖಗಳು ವರ್ಗ:ಭಾರತೀಯ ಇತಿಹಾಸದ ಪ್ರಮುಖರು ವರ್ಗ:ಯೋಗಿಗಳು ಮತ್ತು ಸನ್ಯಾಸಿಗಳು ವರ್ಗ:ಸಂತರು ವರ್ಗ:ಹಿಂದೂ ಧರ್ಮ ವರ್ಗ:ತತ್ವಶಾಸ್ತ್ರಜ್ಞರು ವರ್ಗ:ಆಧ್ಯಾತ್ಮ ಚಿಂತಕರು
ವಿವೇಕಾನಂದ
https://kn.wikipedia.org/wiki/ವಿವೇಕಾನಂದ
REDIRECT ಸ್ವಾಮಿ ವಿವೇಕಾನಂದ
ಮಹಾತ್ಮ ಗಾ೦ಧಿ
https://kn.wikipedia.org/wiki/ಮಹಾತ್ಮ_ಗಾ೦ಧಿ
REDIRECT ಮಹಾತ್ಮ ಗಾಂಧಿ
ವಿಶ್ವೇಶ್ವರಾಯ
https://kn.wikipedia.org/wiki/ವಿಶ್ವೇಶ್ವರಾಯ
REDIRECT ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಮೋಕ್ಷಗುಂಡಂ ವಿಶ್ವೇಶ್ವರಯ್ಯ
https://kn.wikipedia.org/wiki/ಮೋಕ್ಷಗುಂಡಂ_ವಿಶ್ವೇಶ್ವರಯ್ಯ
ಸರ್ ಎಂ.ವಿ (ಸೆಪ್ಟೆಂಬರ್ ೧೫, ೧೮೬೧ - ಏಪ್ರಿಲ್ ೧೨, ೧೯೬೨) ಎಂದು ಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ ದಿನ ಎಂದು ಆಚರಿಸುತ್ತಾರೆ. ಬಾಲ್ಯ, ವಿದ್ಯಾಭ್ಯಾಸ ವಿಶ್ವೇಶ್ವರಯ್ಯನವರು ಸೆಪ್ಟೆಂಬರ್ ೧೫,೧೮೬೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಜನಿಸಿದರು. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂಧ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿದ್ದಾಗಲೇ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರು ತಮ್ಮ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು[]ಮುಗಿಸಿದರು . ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು. ವೃತ್ತಿಜೀವನ ನಂತರ ವಿಶ್ವೇಶ್ವರಯ್ಯನವರು ೧೮೮೪ರಲ್ಲಿ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು ಇದಾದ ನಂತರ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೂಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್. ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಮ್ ೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು ವೃತ್ತಿ ಜೀವನ thumb|right|250px|'ಕೃಷ್ಣರಾಜಸಾಗರ ಅಣೆಕಟ್ಟು' ವಿಶ್ವೇಶ್ವರಯ್ಯನವರು ನಂತರ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ೧೮೮೪ರಲ್ಲಿ ಸೇರಿದರು. ಇದಾದ ಮೇಲೆ ಭಾರತೀಯ ನೀರಾವರಿ ಕಮಿಷನ್ ಇಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್ ಅನ್ನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು [ಗ್ರಾಂಡ್ ಅಣಿಕಟ್] ನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ 'ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ' ವೊಂದನ್ನು ಕಂಡು ಹಿಡಿದು ಅದಕ್ಕಾಗಿ 'ಪೇಟೆಂಟ್' ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ. ಇವರ ಮುಖ್ಯ ಸೇವಕ ಪ್ರಶಾಂತ್. thumb|right|250px|'ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಮ್' ದಿವಾನ ೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು. 120px|thumb|right| ದಿ ನೈಟ್ ಕಮಾಂಡರ್ ಆ ಇಂಡಿಯನ್ ಎಂಪೈರ್ ಪದಕ 120px|thumb|right|ಭಾರತ ರತ್ನ ಪದಕ ವೃತ್ತಿ ಜೀವನದ ಘಟ್ಟಗಳು ೧೮೮೫ - ಬಾಂಬೆಯಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ನೇಮಕ, ನಾಸಿಕ್ ಮತ್ತು ಪುಣೆಯಲ್ಲಿ ಕಾರ್ಯ ನಿರ್ವಹಣೆ. ೧೮೯೪ - ಸಿಂಧ್ ಪ್ರಾಂತದ ಸುಕ್ಕೂರ್ ಪುರಸಭೆಯಲ್ಲಿ ನೀರು ಸರಬರಾಜಿಗೆ ಸಂಭಂದಪಟ್ಟ ವಿನ್ಯಾಸ ಹಾಗು ಕಾರ್ಯನಿರ್ವಹಣೆ. ೧೮೯೬ - ಸೂರತ್ ನಲ್ಲಿ ಎಸ್ಎಕ್ಯುಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ. ೧೮೯೭ - ೯೯ :ಪುಣೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ. ೧೮೯೮ - ಚೀನಾ ಹಾಗು ಜಪಾನ್ ಭೇಟಿ ೧೮೯೯ - ಪುಣೆಯಲ್ಲಿ ವ್ಯವಸಾಯ ಕಾರ್ಯನಿರ್ವಾಹಕ ಇಂಜಿನಿಯರ್ ೧೯೦೧ - ಬಾಂಬೆಯಲ್ಲಿಒಳಚರಂಡಿ ಕಾಮಗಾರಿ ಇಂಜಿನಿಯರ್ ಹಾಗು ಒಳಚರಂಡಿ ಮಂಡಳಿಯ ಸದಸ್ಯ ೧೯೦೧ - ಭಾರತೀಯ ವ್ಯವಸಾಯ ಆಯೋಗಕ್ಕೆ ದಾಖಲೆಗಳ ಸಲ್ಲಿಕೆ. ೧೯೦೩ - ಫೈಫ್ ಕೆರೆಗೆ ತಾವೇ ಪೇಟೆಂಟ್ ಪಡೆದುಕೊಂಡ ಅತ್ಯಾಧುನಿಕ ವಿಧಾನ ಬಳಸಿ ಸ್ವಯಂಚಾಲಿತ ಆಣೆಕಟ್ಟು ದ್ವಾರಗಳನ್ನು ಅಭಿವೃದ್ಧಿ ಪಡಿಸಿ ಅಳವಡಿಸುವ ಮೂಲಕ ಭಾರತ ನೀರಾವರಿ ಕ್ಷೇತ್ರದಲ್ಲಿ ಹೊಸ ಭಾಷ್ಯ. ೧೯೦೩ - ವ್ಯವಸಾಯ ದಲ್ಲಿ 'ಬ್ಲಾಕ್ ಸಿಸ್ಟಮ್' ಎಂಬ ಹೊಸ ವಿಧಾನ ಪರಿಚಯಿಸಿದ್ದು. ೧೯೦೪ - ಶಿಮ್ಲಾ ವ್ಯವಸಾಯ ಆಯೋಗದಲ್ಲಿ ಬಾಂಬೆ ಸರ್ಕಾರವನ್ನು ಪ್ರತಿನಿಧಿಸಿದ್ದು. ೧೯೦೭ - ಸುಪೆರಿಂಡೆಂಟ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ. ೧೯೦೮ - ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿಕೊಟ್ಟಿದ್ದು. ೧೯೦೯ - ಮೂಸಿ ನದಿ ಪ್ರವಾಹದಿಂದ ತತ್ತರಿಸಿದ ಹೈದೆರಾಬಾದ್ ನಗರಕ್ಕೆ ವಿಶೇಷ ನಿರ್ದೇಶಕ ಇಂಜಿನಿಯರ್ ಆಗಿ ನೇಮಕ, ಪ್ರವಾಹದಿಂದ ಹಾಳಾದ ಎಲ್ಲ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಭಂದಿಸಿದ ವಿಚಾರಗಳ ಪುನರ್ ನಿರ್ಮಾಣಕ್ಕೆ ಒತ್ತು. ೧೯೦೯ - ಬ್ರಿಟೀಷ್ ಸೇವೆಯಿಂದ ನಿವೃತ್ತಿ. ೧೯೦೯ - ಮೈಸೂರು ಸರ್ಕಾರದ ಮುಖ್ಯ ಇಂಜಿನಿಯರ್ ಹಾಗು ಕಾರ್ಯದರ್ಶಿಯಾಗಿ ನೇಮಕ. ೧೯೧೩ - ಮೈಸೂರು ದಿವಾನರಾಗಿ ನೇಮಕ , ಸಾರ್ವಜನಿಕ ಕಾಮಗಾರಿ ಹಾಗು ರೈಲ್ವೆ ಇಲಾಖೆ ಮೇಲ್ವಿಚಾರಣೆ. ೧೯೨೭ - ೧೯೫೫ : ಟಾಟಾ ಸ್ಟೀಲ್ ನ ನಿರ್ದೇಶಕರ ಮಂಡಳಿಯಲ್ಲಿ ಒಬ್ಬ ನಿರ್ದೇಶಕರಾಗಿ ಸೇವೆ . ಗೌರವಗಳು ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟೀಷ ಸರ್ಕಾರ ಅವರಿಗೆ "ಸರ್" ಪದವಿಯನ್ನು ನೀಡಿತು. ೧೯೫೫ ರಲ್ಲಿ ಭಾರತ ಸರ್ಕಾರದ ಅತ್ಯುಚ್ಚ ಗೌರವವಾದ ಭಾರತ ರತ್ನ ಲಭಿಸಿತು. ಸರ್. ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು. ಕರ್ನಾಟಕದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟು ಗೌರವಿಸಲಾಗಿದೆ. ಭಾರತ ದೇಶದಲ್ಲಿ ಮೊದಲ EDUSAT ತರಗತಿಗಳನ್ನು ಆರಂಭಿಸಿದ ಕೀರ್ತಿ ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಇದರ ಮುಖ್ಯ ಉದ್ದೇಶ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವುದು. ಕರ್ನಾಟಕದಲ್ಲಿನ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗವಾಗಿವೆ. ಇಂಜಿನಿಯರ್ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಅಪಾರ ಸೇವೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು(ಸೆಪ್ಟೆಂಬರ್ ೧೫) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್್ಸ ದಿನವಾಗಿ ಆಚರಿಸಲಾಗುತ್ತದೆ. ಪುಸ್ತಕಗಳು Memoirs of my working life (ನನ್ನ ವೃತ್ತಿ ಜೀವನದ ನೆನಪುಗಳು - ಕನ್ನಡಕ್ಕೆ ಡಾ. ಗಜಾನನ ಶರ್ಮ) Reconstructing India(ಭಾರತವನ್ನು ಪುನರ್ನಿರ್ಮಿಸುವುದು) in the year 1920 (translated by suresh.H choyal seervi) Nation building(ರಾಷ್ಟ್ರ ಕಟ್ಟಡ) In the year 1937 (written and translated by suresh.H choyal seervi) ಹೊರಗಿನ ಸಂಪರ್ಕಗಳು ಇನ್ಸ್ಟಿಟ್ಯುಟ್ ಆಫ್ ಇಂಜಿನಿಯರರ್ಸ್(ಭಾರತ) ಸಂಪಾದಿಸಿರುವ ವಿಶ್ವೇಶ್ವರಯ್ಯ ಕುರಿತ ಕೆಲವು ಪುಸ್ತಕಗಳ ಪಟ್ಟಿ Sir Mokshagundam Visvesvaraya – A Visionary Engineer par Excellence ವಿಶ್ವೇಶ್ವರಯ್ಯನವರ ಕುರಿತ ಇನ್ನೊಂದು ವ್ಯಕ್ತಿ ಚಿತ್ರಣ ವಿಶ್ವೇಶ್ವರಯ್ಯನವರ ಕುರಿತ ಇನ್ನೊಂದು ವ್ಯಕ್ತಿ ಚಿತ್ರಣ ಹಲವು ಆಶ್ಚರ್ಯಕರ ಮಾಹಿತಿಗಳೊಂದಿಗೆ ವಿಜ್ಞಾನ ಪ್ರಸಾರದಲ್ಲಿ ಮಾಹಿತಿ ಮೈಸೂರ್ ಬ್ಯಾಂಕ್ ತಾಣದಲ್ಲಿ ಸ್ಥಾಪಕರ ನೆನೆಕೆ ವಿಶ್ವೇಶ್ವರಯ್ಯನವರ ಫೋಟೋಗಳು ಸರ್ ಎಂ.ವಿ-ಐತಿಹ್ಯ ಮತ್ತು ವಾಸ್ತವ- ಉಲ್ಲೇಖ ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ಮೈಸೂರು ಸಂಸ್ಥಾನದ ದಿವಾನರು ವರ್ಗ:೧೮೬೧ ಜನನ ವರ್ಗ:೧೯೬೨ ನಿಧನ ವರ್ಗ:ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು
ವಿಶ್ವೇಶ್ವರಯ್ಯ
https://kn.wikipedia.org/wiki/ವಿಶ್ವೇಶ್ವರಯ್ಯ
REDIRECT ಮೋಕ್ಷಗುಂಡಂ ವಿಶ್ವೇಶ್ವರಯ್ಯ
ವೀರೇಂದ್ರ ಹೆಗ್ಗಡೆ
https://kn.wikipedia.org/wiki/ವೀರೇಂದ್ರ_ಹೆಗ್ಗಡೆ
thumb|ವೀರೇಂದ್ರ ಹೆಗ್ಗಡೆ ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಕ್ಷೇತ್ರದಲ್ಲಿರುವ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳು. ಸಮಾಜ ಸೇವೆಗೆ ಇವರು ಪ್ರಸಿದ್ಧರಾಗಿದ್ದಾರೆ. ವಿದ್ಯಾಭ್ಯಾಸ ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಉಜಿರೆಯಲ್ಲಿ ಪ್ರೌಢ ಶಿಕ್ಷಣ. ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ, ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ. ೧೯೬೩ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ. ಬೆಂಗಳೂರಿನ ಸೈಂಟ್ ಜೋಸೆಫ್ ಜೂನಿಯರ್ ಕಾಲೇಜಿನಲ್ಲಿ ಕಾಮರ್ಸ್ ಶಿಕ್ಷಣ. ಕಾಮರ್ಸ್ ಬೇಡ ಅನ್ನಿಸಿ, ಪಿಯುಸಿ ಬಳಿಕ ಕಲಾ ವಿಭಾಗವನ್ನು ಅವರು ಪ್ರವೇಶಿಸಿದರು. ನಂತರ ಬಿ.ಎ ಪದವೀಧರರಾದರು. ಕಾನೂನು ಪದವಿ ಪಡೆವ ಅವರ ಆಸೆಗೆ ಅರ್ಧಕ್ಕೆ ತೆರೆ ಬಿತ್ತು. ಅವರ ಬದುಕಿನಲ್ಲಿ ಅದು ಮಹತ್ವದ ತಿರುವು. ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೆ ಗುರಿಯಾದರು. ಅವರ ಆರೈಕೆಯಲ್ಲಿ ವೀರೇಂದ್ರ ಹೆಗ್ಗಡೆ ತೊಡಗಿಸಿಕೊಂಡರು. ೧೯೬೮ರಲ್ಲಿ ರತ್ನವರ್ಮ ಹೆಗ್ಗಡೆ ನಿಧನರಾದರು. ಆಮೇಲೆ ಇದೇ ವರ್ಷ ಅ.೨೪ರಂದು ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಯಾಗಿ ನೇಮಕಗೊಂಡರು. ತಮ್ಮ ೨೦ನೇ ವಯಸ್ಸಿನಲ್ಲಿಯೇ ಅವರು ಧರ್ಮಸ್ಥಳ ಶ್ರೀಕ್ಷೇತ್ರದ ೨೧ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಪರಿಚಯ ವೀರೇಂದ್ರ ಹೆಗ್ಗಡೆಯವರು ನವೆಂಬರ್ ೨೫, ೧೯೪೮ ರಂದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮಂಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ನಿರ್ವಹಿಸುವ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ.ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದಲ್ಲಿ ಪ್ರತಿ ದಿನ ಆಗಮಿಸುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆಯುಂಟು. ಪ್ರತಿ ದಿನವೂ ಸುಮಾರು ೩೦೦೦ ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಪರಿಹಾರ ಕಾರ್ಯಕ್ರಮಗಳು ನಂತರ ಧರ್ಮಸ್ಥಳ ಮತ್ತು ಇತರ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕ್ಷಾಮ ಬಂದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೯೭೪ ರ ಪ್ರವಾಹ ಮತ್ತು ಗದಗ್ ನಲ್ಲಿ ೧೯೯೨ ರಲ್ಲಿ ಪ್ರವಾಹ ಉಂಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದರು. ಮಂಗಳೂರಿನಲ್ಲಿ ಇತ್ತೀಚಿನ ಪ್ರವಾಹದ ಸಮಯದಲ್ಲೂ ಸುಮಾರು ೨ ಲಕ್ಷ ಇಟ್ಟಿಗೆಗಳನ್ನು ಪುನರ್ನಿರ್ಮಾಣಕ್ಕಾಗಿ ಒದಗಿಸಿಕೊಟ್ಟರು. ಗ್ರಾಮೀಣಾಭಿವೃದ್ಧಿ ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ೧೯೮೨ ರಲ್ಲಿ ಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬೆಳ್ತಂಗಡಿಯ ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿಂದ ಆರಂಭಗೊಂಡು ಧರ್ಮಸ್ಥಳದಲ್ಲಿ "ಸಾಮೂಹಿಕ ವಿವಾಹ"ಗಳನ್ನು ಆರಂಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದಂಪತಿಗಳು ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ. ಈಗ 28 ಜಿಲ್ಲೆಗಳಲ್ಲಿ ಯೋಜನೆ ಇದೆ. ನಮ್ಮ ರಾಜ್ಯ ಅಲ್ಲದೇ ಪಕ್ಕದ ಕೇರಳ ರಾಜ್ಯಕ್ಕೂ ಯೋಜನೆ ವಿಸ್ತರಣೆಯಾಗಿದೆ. ಆರೋಗ್ಯ ಆರೋಗ್ಯ ವಿಕಾಸಕ್ಕಾಗಿ ವೀರೇಂದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸಂಚಾರಿ ಆಸ್ಪತ್ರೆಗಳು, ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಸಂಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮಂಗಳೂರು), ಉಡುಪಿ ಮತ್ತು ಹಾಸನಗಳಲ್ಲಿ ಆಯುರ್ವೇದ ಆಸ್ಪತ್ರೆ, ಮಂಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದಂತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸಂಸ್ಥೆ-ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಶಿಕ್ಷಣ ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಶ್ರೀ ಮಂಜುನಾಥೇಶ್ವರ ಸಾಂಸ್ಕೃತಿಕ ಸಂಶೋಧನಾ ಕೇಂದ್ರವು ಧರ್ಮ, ಸಾಹಿತ್ಯ ಮತ್ತು ಕಲೆಯ ವಿಷಯಗಳ ಬಗ್ಗೆ ಸಂಶೋಧನೆಯನ್ನು ನಡೆಸುತ್ತಾ ಬಂದಿದೆ. ಅನೇಕ ಸಮಕಾಲೀನ ಮತ್ತು ಪ್ರಾಯೋಗಿಕ ಶೈಕ್ಷಣಿಕ ಸಂಸ್ಥೆ - ಕಾರ್ಯಕ್ರಮಗಳನ್ನೂ ಹೆಗ್ಗಡೆಯವರು ನಡೆಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.... ಸಂಸ್ಕೃತಿ ಕರ್ನಾಟಕದ ವಿಶಿಷ್ಟ ನೃತ್ಯ ಪದ್ಧತಿಯಾದ ಯಕ್ಷಗಾನದ ಬೆಳವಣಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗೆಯೇ ಇತರ ಕುಶಲ ಕಲೆಗಾರಿಕೆಗಳಿಗೆ ಸಂಬಂಧಪಟ್ಟಂತೆ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಧರ್ಮೋತ್ಥಾನ ಟ್ರಸ್ಟ್‌ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆ, ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು ೧೯೯೧ರಿಂದ ಧರ್ಮೋತ್ಥಾನ ಟ್ರಸ್ಟ್‌ನಿಂದ ಕೈಗೊಳ್ಳಲಾಗುತ್ತಿದೆ. ಧರ್ಮೋತ್ಥಾನ ಟ್ರಸ್ಟ್ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕೈಗೆತ್ತಿಕೊಂಡಿದೆ. ಪೂಜೆ ನಡೆಯುವ ದೇವಸ್ಥಾನಕ್ಕೆ ಮೊದಲ ಆದ್ಯತೆ. ಈಗ ಈ ಸಂಖ್ಯೆ ೧೭೧ ದಾಟಿದೆ. ಇವುಗಳಲ್ಲಿ ೧೫೪ ದೇವಸ್ಥಾನಗಳ ಕೆಲಸ ಪೂರ್ಣಗೊಂಡಿದೆ. ೧೬ ದೇವಸ್ಥಾನಗಳಲ್ಲಿ ಪೂಜಾವಿಧಿ ಪ್ರಾರಂಭವಾಗಬೇಕು. ೧೧೨ ದೇವಸ್ಥಾನಗಳ ಕೆಲಸಕ್ಕೆ ಪ್ರಾಚ್ಯವಸ್ತು ಇಲಾಖೆ ಸಹಭಾಗಿತ್ವ ಸಿಕ್ಕಿದೆ. ಈವರೆಗೆ ಟ್ರಸ್ಟ್ ರು. ೧೪೯೪ ಲಕ್ಷ ವೆಚ್ಚ ಮಾಡಿದ್ದು, ರು. ೫೬೧ ಲಕ್ಷ ಟ್ರಸ್ಟ್‌ನಿಂದ, ರು. ೪೪೯ ಲಕ್ಷ ಸರ್ಕಾರಿ ಅನುದಾನದಿಂದ, ರು. ೪೮೪ ಲಕ್ಷ ದೇವಸ್ಥಾನ ಸಮಿತಿಯಿಂದ ಭರಿಸಲಾಗಿದೆ. ೨೫ ಜಿಲ್ಲೆಗಳಲ್ಲಿ ಧರ್ಮೋತ್ಥಾನ ಟ್ರಸ್ಟ್ ಕೆಲಸ ನಡೆಯುತ್ತಿದೆ. ಗೌರವ, ಪ್ರಶಸ್ತಿಗಳು ವೀರೇಂದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ಇತ್ತಿವೆ. ೨೦೧೫ರಲ್ಲಿ ಭಾರತ ಸರಕಾರದಿಂದ ಪದ್ಮವಿಭೂಷಣ ಪ್ರಶಸ್ತಿ. ೧೯೮೫ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಮತ್ತು ೧೯೯೩ ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ "ರಾಜರ್ಷಿ" ಗೌರವ ಇವರಿಗೆ ಸಂದಿವೆ. ಅನೇಕ ಧಾರ್ಮಿಕ ಮಠಗಳು ಇವರಿಗೆ "ಧರ್ಮರತ್ನ", "ಧರ್ಮಭೂಷಣ". "ಅಭಿನವ ಚಾವುಂಡರಾಯ", "ಪರೋಪಕಾರ ಧುರಂಧರ" ಮೊದಲಾದ ಬಿರುದುಗಳು ಇವರಿಗೆ ಸಂದಿವೆ. ೧೯೯೪ ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ ದೊರಕಿತು. ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿದೆ. ಇತ್ತೀಚೆಗೆ ೨೦೦೪ ರ "ವರ್ಷದ ಕನ್ನಡಿಗ" ಗೌರವ ವೀರೇಂದ್ರ ಹೆಗ್ಗಡೆಯವರಿಗೆ ಲಭಿಸಿದೆ. ಸನ್.೨೦೧೩ ರ, ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪುರಸ್ಕಾರ. ಮಧ್ಯಪ್ರದೇಶದ ಇಂದೂರ್ ನಗರದ ಶ್ರೀ ಅಹಿಲೋತ್ಸವ ಸಮಿತಿ ನೀಡುವ ಗೌರವ ಪ್ರಶಸ್ತಿಯಿದು. ೨೦೧೧ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ ೨೦೦೯ನೇ ಸಾಲಿನ ಕರ್ನಾಟಕ ಸರಕಾರ ಕೊಡಮಾಡುವ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ "ಕರ್ನಾಟಕ ರತ್ನ" ನೀಡಿ ಪುರಸ್ಕರಿಸಲಾಗಿದೆ. ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್.ಯಡಿಯೂರಪ್ಪನವರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ವತಿಯಿಂದ ಪ್ರತಿವರ್ಷ ನೀಡುವ ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ೨೦೧೧ನೇ ಸಾಲಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ದೊರೆತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಲಂಡನ್‌ನ ಪ್ರತಿಷ್ಠಿತ ‘ಆಶ್ಡೆನ್ ಸಂಸ್ಥೆಯು ನೀಡುವ "ಜಾಗತಿಕ ಹಸಿರು ಆಸ್ಕರ್ "ಎಂದೇ ಪರಿಗಣಿಸಲಾದ ೨೦೧೨ರ "ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ’ಗೆ ಪಾತ್ರವಾಗಿದೆ. ಖಾಸಗಿ ವಾಹಿನಿಯಾದ ಜೀ ಕನ್ನಡ ವಾಹಿನಿಯಲ್ಲಿ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ಈ ವರ್ಷದ "ಹೆಮ್ಮೆಯ ಕನ್ನಡಿಗ" ಪ್ರಶಸ್ತಿ ಇವರ ದೊರೆತಿದೆ. (ಪೂರಕ ಮಾಹಿತಿ : ಜೀ ಕನ್ನಡ ವಾಹಿನಿ ) ಏಷ್ಯಾ ವನ್ ಸಂಸ್ಥೆ ಕೊಡಮಾಡುವ ಆರನೇ ಆವೃತ್ತಿಯ '2020-21 ರ ಸಾಲಿನ ಏಷ್ಯಾದ ಶ್ರೇಷ್ಠ ನಾಯಕರು' ಎಂಬ ಗೌರವ ಬಾಹ್ಯ ಸಂಪರ್ಕ ಹೆಗ್ಗಡೆಯವರ ಬಗ್ಗೆ ಪ್ರಜಾವಾಣಿಯಲ್ಲಿನ ಲೇಖನ ಉಲ್ಲೇಖಗಳು ವರ್ಗ:ಸಮಾಜಸೇವಕರು ವರ್ಗ:ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಜೋನ್ ಆಫ್ ಆರ್ಕ್
https://kn.wikipedia.org/wiki/ಜೋನ್_ಆಫ್_ಆರ್ಕ್
right|thumb|೧೪೫೦ ರಿಂದ ೧೫೦೦ ರ ನಡುವೆ ರಚಿಸಿದ ಜೋನಳ ಚಿತ್ರ (Centre Historique des Archives Nationales, Paris, AE II 2490) ಜೋನ್ ಆಫ್ ಆರ್ಕ್ (ಜನವರಿ ೬, ೧೪೧೨ - ಮೇ ೩೦, ೧೪೩೧) (ಫ್ರೆಂಚ್‌ನಲ್ಲಿ Jeanne d'Arc, Jehanne la Pucelle, ಹಾಗೂ ಆರ್ಲಿಯನ್ಸ್‌ನ ಕೆಲಸಗಾತಿ ಫ್ರಾನ್ಸ್‌ನ ರಾಷ್ಟ್ರೀಯ ನಾಯಕಿ, ವೀರಾಂಗನೆ .ಸುಮಾರು ಐದು ಶತಮಾನಗಳ ಅನಂತರ ಸಂತಳೆಂದು ಪರಿಗಣಿತೆ. ದೈವಿಕ ಸ್ಫೂರ್ತಿಯಿಂದ ಪ್ರವೃತ್ತಳಾಗಿರುವುದಾಗಿ ನಂಬಿ ಆರ್ಲೀಯನ್ಸ್ ಕದನದಲ್ಲಿ ಫ್ರೆಂಚರಿಗೆ ಜನ ದೊರಕಿಸಿಕೊಟ್ಟ, 7ನೆಯ ಚಾಲ್ರ್ಸ್ ದೊರೆ ರೀಮ್ಸ್‍ನಲ್ಲಿ ಪಟ್ಟಾಭಿಷಿಕ್ತನಾಗುವುದನ್ನು ಸಾಧ್ಯವಾಗಿಸಿದ, ಅನಂತರ ಸೆರೆಯಾಗಿ ಷಾಷಂಡಿನಿಯೆಂದು ಇಂಗ್ಲಿಷರಿಂದ ಸುಡಲ್ಪಟ್ಟ ಗ್ರಾಮೀಣ ತರುಣಿ. ಜೀವನ ಷಾóನ್ ಡಾರ್ಕ್ ಎಂಬುದು ಈಕೆಯ ಫ್ರೆಂಚ್ ನಾಮ. ಆರ್ಲೀಯನ್ಸ್ ಕೊಡಗೂಸು (ಫ್ರೆಂಚ್ : ಲಾ ಪ್ರಸೆಲ್ ಡಾರ್ಲೇಲಯಾನ್) ಎಂದೂ ಖ್ಯಾತಳಾಗಿದ್ದಾಳೆ. ಫ್ರಾನ್ಸಿನ ಬಾರ್ ಸಂಸ್ಥಾನದ ಮ್ಯೂಸ್ ನದೀತೀರದ ಡಾನ್ರೇಮೀ ಗ್ರಾಮದಲ್ಲಿ 1412ರ ಜನವರಿ 6ರಂದು ಜನಿಸಿದಳು. ತಂದೆ ಷಾóಕ್ ಡಾರ್ಕ್, ತಾಯಿ ಈಸಾಬೆಲ್ ರೊಮಿ. ಜೋನ್ ದೇವರಲ್ಲಿ ನಂಬಿಕೆಯನ್ನೂ ಪ್ರಾರ್ಥನೆಯ ಅಭ್ಯಾಸವನ್ನೂ ತಾಯಿಯಿಂದ ಕಲಿತಳು. ಈಕೆ ಕಷ್ಟಪಟ್ಟು ಕೆಲಸಮಾಡುತ್ತಿದ್ದಳು. ಮನೆಗೆಲಸದಲ್ಲಿ ಇವಳಿಗೆ ವಿಶೇಷ ಆಸಕ್ತಿ. ಆಗಾಗ್ಗೆ ದನ ಕಾಯಲು ಹೋಗುತ್ತಿದ್ದಳು. ಸಮವಯಸ್ಕರೊಡನೆ ಗ್ರ್ರಾಮದ ಗಂಧರ್ವವೃಕ್ಷದ ಬಳಿ ಆಟಪಾಟಗಳಲ್ಲಿ ನೃತ್ಯ ವಿನೋದಗಳಲ್ಲಿ ಭಾಗವಹಿಸುತ್ತಿದ್ದಳು. ಫ್ರಾನ್ಸಿನ 6ನೆಯ ಚಾಲ್ರ್ಸ್ ದೊರೆಯ ಮರಣಾನಂತರ ಅವನ ಮಗ ಡಾಫಿನ್ ಚಾರ್ಲ್ಸ್ (ಅನಂತರ 7ನೆಯ ಚಾರ್ಲ್ಸ್) ಉತ್ತರಾಧಿಕಾರವನ್ನು ಇಂಗ್ಲಿಷ್ ದೊರೆ 6ನೆಯ ಹೆನ್ರಿ ಪ್ರಶ್ನಿಸಿದ್ದರಿಂದ ಆ ಬಗ್ಗೆ ವಿವಾದ ಉದ್ಭವಿಸಿತ್ತು. ಅವನ ಸೈನ್ಯಗಳು ಬರ್ಗಂಡಿಯವರ ಮೈತ್ರಿ ಸಾಧಿಸಿ ಅವರ ನೆರವಿನಿಂದ ಉತ್ತರ ಫ್ರಾನ್ಸನ್ನೆಲ್ಲ ಆಕ್ರಮಿಸಿಕೊಂಡಿದ್ದುವು. ಫ್ರೆಂಚ್ ಅರಸನ ಪಟ್ಟಾಭಿಷೇಕವಾಗಬೇಕಾಗಿದ್ದ ಅರಮನೆ ಇದ್ದ ರೀಮ್ಸ್ ಎಂಬ ಸ್ಥಳ ಇಂಗ್ಲಿಷರ ಅಧೀನದಲ್ಲಿತ್ತು. ಪಟ್ಟಾಭಿಷೇಕವಾಗದೆ ಫ್ರೆಂಚ್ ಪ್ರಜೆಗಳು ಚಾರ್ಲ್ಸ್ ನನ್ನು ಅರಸನೆಂದು ಸ್ವೀಕರಿಸಲು ಹಿಂಜರಿಯುತ್ತಿದ್ದರು. 1421ರಲ್ಲಿ 6ನೆಯ ಚಾಲ್ರ್ಸ್ ಮರಣಹೊಂದಿದ್ದರೂ, 1427ರಲ್ಲಿ ಕೂಡ ಅವನ ಮಗನ ಪಟ್ಟಾಭಿಷೇಕವಾಗಿಲ್ಲದು ಆತಂಕಕಾರಿಯಾಗಿತ್ತು. ಜೋನಳಿಗೆ ಇಂತ ಪರಿಸ್ಥಿತಿಯಲ್ಲಿ ಆಕೆಯ 13ನೆಯ ವಯಸ್ಸಿನಲ್ಲೇ ದೇವವಾಣಿ ಕೇಳಿಸಿತ್ತು; ಆತ್ಮಸಂಯಮವನ್ನು ಬೋಧಿಸಿತ್ತು. ಅನಂತರ ಆ ವಾಣಿ ಅವಳು ಫ್ರಾನ್ಸಿಗೆ ಹೋಗಿ ಅರ್ಲೀಯನ್ಸ್ ಆಕ್ರಮಣವನ್ನು ತೆರವು ಮಾಡಬೇಕೆಂದು ಆದೇಶ ನೀಡಿತು. ಸೇಂಟ್ ಮೈಕೇಲ್, ಸೇಂಟ್ ಕ್ಯಾದರೀನ್, ಸೇಂಟ್ ಮಾರ್ಗರೆಟರ ದರ್ಶನ ತನಗೆ ಪದೇಪದೇ ಆಗುತ್ತಿತ್ತೆಂದು ಅವಳು ಹೇಳಿದಳು. ಈ ವಾಣಿಗಳು ಇಡೀ ಜೀವಮಾನಪರ್ಯಂತ ಮಾರ್ಗದರ್ಶನ ಮಾಡಲಿದ್ದುವು. ಈ ವಾಣಿಗಳ ಒತ್ತಾಯದ ಮೇರೆಗೆ ಕೊನೆಗೂ ಆಕೆ ಚಾಲ್ರ್ಸನನ್ನು ನೋಡಲು ಹೊರಟಳು. ಆಗ ಆಕೆ ಪುರುಷವೇಷ ಧರಿಸಿದಳು. ಅನಂತರ ಕೊನೆಯವರೆಗೂ ಆ ಉಡುಪನ್ನು ಆಕೆ ಬದಲಿಸಿ ಸ್ತ್ರೀಯರ ಉಡುಪು ಧರಿಸಲಿಚ್ಚಿಸಲಿಲ್ಲ. ಮೊದಮೊದಲು ಆಕೆಯ ಯತ್ನಗಳು ಫಲಿಸಲಿಲ್ಲ. ಆದರೂ ಆಕೆ ನಿರಾಸೆ ಹೊಂದಿದೆ. 1429ರಲ್ಲಿ ಷೀನಾನ್‍ನಲ್ಲಿ ಚಾಲ್ರ್ಸನನ್ನು ಕಂಡಳು. ತನ್ನ ಆಸ್ಥಾನಿಕರ ನಡುವೆ ಅಡಗಿದ್ದ ಆತನ ಬಳಿಗೆ ನೇರವಾಗಿ ಹೋಗಿ, ತಾನು ಹೋಗಿ ಯುದ್ಧ ಮಾಡುವುದಾಗಿಯೂ ಆತನಿಗೆ ಪಟ್ಟಾಭಿಷೇಕ ಮಾಡಿಸುವುದಾಗಿಯೂ ಹೇಳಿದಳು. ಅವಳು ಕ್ರೈಸ್ತಮತ ಪಂಡಿತರ ವಿವಿಧ ಪರೀಕ್ಷೆಗಳಿಗೊಳಗಾಗಿ, ಕೊನೆಗೊಮ್ಮೆ ಅವರ ಶಿಫಾರಸನ್ನು ಪಡೆದು ಏಪ್ರಿಲ್ ತಿಂಗಳಲ್ಲಿ ಸಣ್ಣ ಸೈನ್ಯವೊಂದರ ನೇತೃತ್ವ ವಹಿಸಿ ಮೊದಲು ಆರ್ಲೀಯನ್ಸ ಅಭಿಮುಖವಾಗಿ ಹೊರಟಳು. ದೈವಪ್ರೇರಣೆಯಂತೆ 1429ರ ಮೇ 4ರಂದು ಒಮ್ಮಿಂದೊಮ್ಮೆ ಇಂಗ್ಲಿಷರನ್ನು ಮುತ್ತಿ, ಆರ್ಲೀಯನ್ಸ್ ನಗರವನ್ನು ವಶಪಡಿಸಿಕೊಂಡಳು. ಮುಂದೆ ಅವಳ ಗುರಿ ರೀಮ್ಸ್ ಅಲ್ಲಿದ್ದ ಶತ್ರುಗಳನ್ನು ಅವಳು ಹೊರದೂಡಿದಳು. ಅಲ್ಲಿ ಪಟ್ಟಾಭಿಷೇಕ ಮಾಡಿಕೊಳ್ಳಲು ಚಾರ್ಲ್ಸ್ ನನ್ನು ಶ್ರಮಪಟ್ಟು ಒಪ್ಪಿಸಿದಳು. ಜುಲೈ 17ರಂದು ಅವನ ಪಟ್ಟಾಭಿಷೇಕವಾಯಿತು. ಆಗ ಆಕೆ ಅರಸನಿಗೆ ಅತ್ಯಂತ ಸಮೀಪದಲ್ಲಿ ತನ್ನದೇ ಆದ ಧ್ವಜವನ್ನು ಹಿಡಿದು ನಿಂತಳು. ಎಲ್ಲರಿಗಿಂತ ಮೊದಲು ಅವಳು ಆತನನ್ನು ದೊರೆಯೆಂದು ಸಂಭೋಧಿಸಿ ತನ್ನ ವಿಧೇಯತೆಯನ್ನು ಸೂಚಿಸಿದಳು. ಅಲ್ಲಿಂದ ಮುಂದೆ ಪ್ಯಾರಿಸ್ ನಗರವನ್ನು ವಶಪಡಿಸಿಕೊಳ್ಳಬೇಕೆಂದು ಆಕೆಯ ಮಹದಾಸೆಯಾಗಿತ್ತು. ಅದರೆ ದೊರೆ ಕೂಡಲೇ ಅದಕ್ಕಾಗಿ ಕಾರ್ಯೋನ್ಮುಖನಾಗದಿರುವಂತೆ ಅವನ ಇತರ ಹಿತೈಷಿಗಳು ಅವನ್ನು ತಡೆದರು. ಸೆಪ್ಟಂಬರ್ ತಿಂಗಳಲ್ಲಿ ಮತ್ತೊಮ್ಮೆ ಯತ್ನಿಸಿದರೂ ಯಶಸ್ಸು ಲಭಿಸಲಿಲ್ಲ. ಅರಸನನ್ನು ಇತರರು ಕೈಬಿಟ್ಟರೂ ಜೋನ್ ಆತನ ಬೆಂಬಲಕ್ಕೆ ನಿಂತಳು. ಈ ಮಧ್ಯೆ ರೀಮ್ಸ್ ನಗರ ಬರ್ಗಂಡಿಯನರ ದಾಳಿಗೆ ತುತ್ತಾಗಲು, ಅವರ್ನು ಓಡಿಸಲು ಜೋನ್ಸ್ ಶ್ರಮಿಸಿದಳು. ಆದರೆ ಕೋಂಪ್ಯೇನ್ ಎಂಬಲ್ಲಿ 1430ರ ಮೇ 23ರಂದು ಜೋನ್ ತನ್ನ ಇಬ್ಬರು ಸೋದರರೊಂದಿಗೆ ಬರ್ಗಂಡಿಯನರಿಗೆ ಸೆರೆ ಸಿಕ್ಕಳು. ಆಕೆ ಸೆರೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಯತ್ನಗಳು ಫಲಿಸಲಿಲ್ಲ. ಇಂಗ್ಲಿಷರ ಕೋರಿಕೆಯಂತೆ ಲುಕ್ಸೆಂಬರ್ಗಿನ ಜಾನ್ ಆಳ್ವಿಕೆಯನ್ನು 10,000 ಫ್ರಾಂಕ್‍ಗಳಿಗೆ ಪ್ರತಿಯಾಗಿ ಇಂಗ್ಲಿಷರಿಗೆ ಒಪ್ಪಿಸಿದ. 1431ರ ಜನವರಿ 13ರಿಂದ ಆಕೆ ಧಾರ್ಮಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಳು. ವಿಚಾರಣಾಕರ್ತರು ಚಾಲ್ರ್ಸನ ಶತ್ರಗಳಾಗಿದ್ದುದರಿಂದ ತಾನು ಅವರಿಗೆ ನಿಜ ಸಂಗತಿಯನ್ನೆಲ್ಲ ಹೇಳಬೇಕೆಂಬ ಷರತ್ತಿಗೆ ಬದ್ಧವಾಗುವುದಿಲ್ಲವೆಂದು ಆಕೆ ಸ್ಪಷ್ಟಪಡಿಸಿದಳು. ಮಾರ್ಚ್ 24ರಂದು ಆಕೆಯ ಮೇಲೆ ಆಪಾದನೆಗಳನ್ನು ಹೊರಿಸಲಾಯಿತು. ಈಕೆ ಷಾಷಂಡಿನಿ ಮಾಟಗಾರ್ತಿ, ದೇವರ ಹೆಸರಿನಲ್ಲಿ ದ್ರೋಹ ಮಾಡಿದವಳು; ಭವಿಷ್ಯವನ್ನು ನುಡಿಯುವುದಾಗಿ ಘೋಷಿಸಿಕೊಂಡು, ದೇವರಿಂದ ನೇರವಾಗಿ ಆದೇಶಗಳನ್ನು ಸ್ವೀಕರಿಸಿದುದಾಗಿ ಸಾರಿಕೊಂಡು, ಕ್ರೈಸ್ತ ಚರ್ಚ್ ನಿಯಮಗಳನ್ನು ಉಲ್ಲಿಂಘಿಸಿದಳು. ತನ್ನ ಹಲವಾರು ಕಾಗದಗಳಲ್ಲಿ ಜೀಸಸ್ ಮತ್ತು ಮೇರಿಯ ಅಂಕಿತ ಹಾಕಿದಳು. ಲಜ್ಜೆ ಗೇಡಿಯಾಗಿ ಗಂಡುಡುಪು ಧರಿಸಿದಳು. ತನ್ನ ಸಂತರು ತನ್ನನ್ನು ಫ್ರೆಂಚ್ ಭಾಷೆಯಲ್ಲಿ ಮಾತಾಡಿಸಿದರೆಂದೂ ಇಂಗ್ಲಿಷಿನಲ್ಲಲ್ಲವೆಂದೂ ಸಾಧಿಸಿದಳು. ಚರ್ಚಿನಲ್ಲಿ ನಂಬುಗೆಯಿಡದೆ ಈಕೆ ಧರ್ಮಕ್ಕೂ ದೇವರಿಗೂ ದ್ರೋಹ ಬಗೆದಿದ್ದಾಳೆ. ಇವು ಆಕೆಯ ಮೇಲಣ ಕೆಲವು ಮುಖ್ಯ ಆಪಾದನೆಗಳು. ಆದರೂ ಆಕೆ ತಪ್ಪೊಪ್ಪಿಕೊಳ್ಳಲಿಲ್ಲ. ತಾನು ಮೊದಲು ನೀಡಿದ ಹೇಳಿಕೆಗಳೆ ಸತ್ಯವೆಂದೂ ಅವನ್ನು ಬದಲಿಸಲಾರನೆಂದೂ ದೇವರೇ ತನ್ನ ರಕ್ಷಕನೆಂದೂ ನುಡಿದಳು. ಕೊನೆಗೆ ಧಾರ್ಮಿಕ ನ್ಯಾಯಾಲಯ ಆಕೆಯನ್ನು ಇಂಗ್ಲಿಷ್ ಸೈನ್ಯಾಧಿಕಾರಿಗಳಿಗೆ ಒಪ್ಪಿಸಿತು. 1431ರ ಮೇ 20ರಂದು ಆಕೆಯನ್ನು ಜೀವಸಹಿತ ಸುಡಲಾಯಿತು. ಸುಮಾರು 20ವರ್ಷಗಳ ಅನಂತರ 7ನೆಯ ಚಾರ್ಲ್ಸ್ ಈ ಪ್ರಕರಣವನ್ನು ಕುರಿತು ವಿಚಾರಣೆ ನಡೆಸಲು ಆಜ್ಞಾಪಿಸಿದ. ಎರಡು ವರ್ಷಗಳ ಅನಂತರ ಪೋಪನ ಮುಖ್ಯ ರಾಯಭಾರಿ ಗಿಲಾಮ್ ಡಿ ಎಸ್ಟೌಟ್‍ವಿಲ್ ಈ ಬಗ್ಗೆ ಸಮಗ್ರ ತನಿಖೆ ನಡೆಸಿದ. ಪೋಪ್ 3ನೆಯ ಕ್ಯಾಲಿಕ್ಟಸನ ಆದೇಶದ ಮೇರೆಗೆ 1431ರಲ್ಲಿ ಆಕೆಗೆ ವಿಧಿಸಿದ ಶಿಕ್ಷೆಯನ್ನು ರದ್ದುಮಾಡಿ ವರ್ಜಿಸುವ ಕ್ರಮ ಕ್ಯಗೊಳ್ಳಲಾಯಿತು. 1920ರ ಮೇ16ರಂದು ಪೋಪ್ 5ನೆಯ ಬೆನೆಡಿಕ್ಟ್ ಆಕೆಯನ್ನು ವಿಧಿಪೂರ್ವಕವಾಗಿ ಸಂತರ ಪಟ್ಟಿಗೆ ಸೇರಿಸಿದ, ಪ್ರತಿವರ್ಷದ ಮೇ 30ರಂದು ಚರ್ಚ್ ಆಕೆಯ ಹಬ್ಬ ಆಚರಿಸುತ್ತದೆ. 1920ರಲ್ಲಿ ಫ್ರೆಂಚ್ ಪಾರ್ಲಿಮೆಂಟ್ ಕೈಗೊಂಡ ನಿರ್ಣಯದ ಮೇರೆಗೆ ಪ್ರತಿವರ್ಷವೂ ಮೇ ಎರಡನೆಯ ಭಾನುವಾರ ರಾಷ್ಟ್ರೀಯ ಉತ್ಸವದಿನ. ಜೋನಳಿಗೆ ಕಾಣಿಸಿಕೊಂಡ ದೇವತೆಗಳೂ ಕೇಳಿಸಿದ ಧ್ವನಿಗಳೂ ಎಷ್ಟರಮಟ್ಟಿಗೆ ಸತ್ಯ ಎಂಬುದು ಪರಿಹರಿಸಲಾಗದ ಪ್ರಶ್ನೆಯಾಗಿ ಉಳಿದುಬಂದಿದೆ. ಆದರೆ ಆಕೆ ಫ್ರಾನ್ಸ್ ದೇಶಕ್ಕೆ ಮಹೋಪಕಾರ ಮಾಡಿದಳೆಂಬುದಂತೂ ನಿಜ. ತನ್ನ ವಿಜಯದಿಂದ ಆಕೆಗೆ ಆಗ ನಡೆಯುತ್ತಿದ್ದ ನೂರು ವರ್ಷಗಳ ಯುದ್ಧಕ್ಕೆ ಒಂದು ಹೊಸ ತಿರುವನ್ನೇ ಕೊಟ್ಟಳು. ಆಕೆ ಬರೆದ, ಬರೆಸಿದ ನೂರಾರು ಪತ್ರಗಳು ಉಳಿದು ಬಂದಿವೆ. ಅವು ಆಕೆಯ ರಾಷ್ಟ್ರಪ್ರೇಮ ಮತ್ತು ದೈವಭಕ್ತಿಗಳಿಗೆ ಸಾಕ್ಷಿಗಳಾಗಿವೆ. ಜೋನಳ ಜೀವನ ಅನೇಕ ಲೇಖಕರ ಸಾಹಿತ್ಯಕೃತಿಗಳಿಗೆ ವಸ್ತುವಾಗಿದೆ. ಜರ್ಮನ್ ಕವಿ-ನಾಟಕಕಾರ ಷಿಲರನೂ ಇಂಗ್ಲಿಷ್ ನಾಟಕಕಾರ ಜಾರ್ಜ್ ಬರ್ನಾಡ್ ಷಾನೂ ಆಕೆಯ ಬಗ್ಗೆ ನಾಟಕಗಳನ್ನು ಬರೆದಿದ್ದಾರೆ. ಆನಟೋಲ್ ಫ್ರಾನ್ಸ್, ಮಾರ್ಕ್ ಟ್ವೇನ್, ಆಂಡ್ರ್ಯೂ ಲ್ಯಾಂಗ್ ಇವರು ಬರೆದ ಜೀವನಚರಿತ್ರೆಗಳು ಪ್ರಖ್ಯಾತವಾಗಿವೆ.thumb|right ಬಾಹ್ಯ ಸಂಪರ್ಕಗಳು Jeanne d´Arc Centre Joan of Arc Archive St. Joan of Arc ವರ್ಗ:ಫ್ರಾನ್ಸ್‌ನ ಇತಿಹಾಸ
ಕೃಷ್ಣದೇವರಾಯ
https://kn.wikipedia.org/wiki/ಕೃಷ್ಣದೇವರಾಯ
thumb|right|upright|ಶ್ರೀ ಕೃಷ್ಣ ದೇವರಾಯರು ಪಟ್ಟಕ್ಕೇರಿದ ಹಾಗು ವಿಶಾಲ ಮುಕ್ತ ಮಂಟಪ ನಿರ್ಮಾಣ ಮಾಡಿಸಿದ ವಿಚಾರಗಳನ್ನೊಳಗೊಂಡ, ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ಕ್ರಿ.ಶ ೧೫೦೯ರ ಕನ್ನಡ ಶಾಸನ thumb|upright| ಈಗಿನ ಒಡಿಶಾ ಪ್ರಾಂತ್ಯದ ಗಜಪತಿ ಮಹಾರಾಜನ ಸಂಸ್ಥಾನವನ್ನು ಗೆದ್ದ ಬಗೆಗಿನ ಕ್ರಿ.ಶ ೧೫೧೩ರ ಕನ್ನಡ ಶಾಸನ. ಹಂಪಿ ವಿಜಯ ವಿಠ್ಠಲ ದೇವಾಲಯದ ಪ್ರಾಂಗಣದಲ್ಲಿದೆ. thumb|right|250px|ವಿಜಯಸ್ಥಂಬ,ಪೊಟ್ನೂರು,ವಿಶಾಖ,ಆಂಧ್ರ ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ. ಹಿನ್ನೆಲೆ ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ.https://books.google.co.in/books?id=740AqMUW8WQC&q=Tulu#v=snippet&q=Tuluva&f=false ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ ಕೃಷ್ಣಜನ್ಮಾಷ್ಟಮಿಯಂದು ಪಟ್ಟವೇರಿದ ಕೃಷ್ಣದೇವರಾಯನು ರಾಜಧಾನಿಯಾದ ವಿಜಯನಗರದ ಉಪನಗರವಾಗಿ ನಾಗಲಾಪುರ ಎಂಬ ಸುಂದರ ನಗರವನ್ನು ಕಟ್ಟಿಸಿದನು. ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ ತಿಮ್ಮರಸು(ವಿಜಯನಗರದ ಪ್ರಧಾನ ಮಂತ್ರಿಗಳು) ಆತನು ಪಟ್ಟವೇರಲು ಕಾರಣೀಭೂತರಾಗಿದ್ದರಷ್ಟೇ ಅಲ್ಲ, ಅವನ ರಾಜ್ಯಭಾರದ ಕಾಲದಲ್ಲಿ ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು. ಮಟ್ಟಸ ಎತ್ತರವಾಗಿದ್ದ ಕೃಷ್ಣದೇವರಾಯನಿಗೆ, ದಿನವೂ ವ್ಯಾಯಾಮ, ತಾಲೀಮು ಮಾಡಿದ್ದರ ಪರಿಣಾಮವಾಗಿ ಕಲ್ಲಿನಂತಹ ದೇಹಧಾರ್ಡ್ಯವಿತ್ತು. ಹಸನ್ಮುಖಿಯಾದರೂ, ಶೀಘ್ರಕೋಪಿಯೂ ಆಗಿದ್ದ ಎಂದೂ ಹೇಳಲಾಗಿದೆ. ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ಯಾತ್ರಿಕರಾದ ಡೊಮಿಂಗೋ ಪಾಯಸ್ ಮತ್ತು ಫೆರ್ನಾವ್ ನೂನೀಜ್ ಅವರ ಬರಹಗಳಿ೦ದ ತಿಳಿದುಬರುತ್ತದೆ. ರಾಜ್ಯವಿಸ್ತಾರ ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು ಬೀದರಿನ ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ ರಾಯಚೂರು ಮುತ್ತಿಗೆ ಹಾಕಿ ಗುಲ್ಬರ್ಗಾ ಮತ್ತು ಬೀದರ್ ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ ಶ್ರೀರಂಗಪಟ್ಟಣದ ಕೇಂದ್ರವಾದ ರಾಜ್ಯಭಾಗವನ್ನು ಸೃಷ್ಟಿಸಿದ. ನಂತರ ಪೂರ್ವಕ್ಕೆ ತಿರುಗಿ ಪ್ರತಾಪರುದ್ರ ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ ಬಿಜಾಪುರದ ಇಸ್ಮಾಯಿಲ್ ಆದಿಲ್ ಷಾನಿ೦ದ ರಾಯಚೂರುನ್ನು ಗೆದ್ದಾಗ. ಒಟ್ಟು ಸಾವಿರಾರು ಸೈನಿಕರು, ೩೨,೬೦೦ ಕುದುರೆ ಸವಾರರು ಮತ್ತು ೫೫೧ ಆನೆಗಳು ಪಾಲ್ಗೊಂಡ ಯುದ್ಧದಲ್ಲಿ ಸುಮಾರು ೧೬,೦೦೦ ವಿಜಯನಗರದ ಸೈನಿಕರು ಮೃತಪಟ್ಟರು. ಕೊನೆಯ ಯುದ್ಧದಲ್ಲಿ ಬಹಮನಿ ಸುಲ್ತಾನರು ಮೊದಲ ರಾಜಧಾನಿಯಾದ ಗುಲ್ಬರ್ಗಾದ ಕೋಟೆ ನೆಲಸಮವಾಯಿತು. ಡೊಮಿಂಗೋ ಪಯಸ್ ನ ವಿವರಣೆಯಂತೆ ಅಂದಿನ ವಿಜಯನಗರ ರೋಮ್ ನಗರದಷ್ಟಾದರೂ ದೊಡ್ಡದಿದ್ದು ಐದು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದಿತು. ತಾನು ಕಂಡ ಅತ್ಯಂತ ಶ್ರೀಮಂತ ನಗರವೆಂದೂ ಪಯಸ್ ವಿಜಯನಗರವನ್ನು ವರ್ಣಿಸಿದ್ದಾನೆ. ವಿದೇಶಾಂಗ ವ್ಯವಹಾರಗಳು ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ. ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ ಬಹಮನಿ ಸುಲ್ತಾನರು , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ ಒಡಿಶಾದ ಗಜಪತಿ, ಹಾಗೂ ತಮ್ಮ ಪ್ರಬಲ ನೌಕಾಪಡೆಯ ಕಾರಣದಿಂದ ಕಡಲ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ, ಹಾಗೂ ದಿನೇ ದಿನೇ ಬಲಕಾಯಿಸುತ್ತಿದ್ದ ಪೋರ್ಚುಗೀಸರು. ಇವರಲ್ಲದೇ, ಉಮ್ಮತ್ತೂರು ಪಾಳೆಯಗಾರ, ಕೊಂಡವೀಡಿನ ರೆಡ್ಡಿರಾಜು ಮತ್ತು ಭುವನಗಿರಿಯ ವೇಲಮರೊಂದಿಗೂ ಆಗಾಗ ಕಾಳಗಗಳಾಗುತ್ತಿದ್ದವು. ದಕ್ಖನಿನಲ್ಲಿ ಜಯ ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ ವಿಜಯನಗರದ ಹಳ್ಳಿ ಪಟ್ಟಣಗಳ ಮೇಲಿನ ದಾಳಿ ಲೂಟಿ ಇತ್ಯಾದಿಗಳು ಈತನ ಕಾಲದಲ್ಲಿ ಕೊನೆಗೊಂಡವು. ೧೫೦೯ರಲ್ಲಿ ದಿವಾನಿ ಎಂಬಲ್ಲಿ ನಡೆದ ಯುದ್ಧದಲ್ಲಿ ಬಿಜಾಪುರದ ಸುಲ್ತಾನ್ ಮೊಹಮ್ಮದ್ ತೀವ್ರವಾಗಿ ಗಾಯಗೊಂಡು ಸೋಲೊಪ್ಪಿದನು. ಯೂಸುಫ್ ಆದಿಲ್ ನನ್ನು ಕೊಂದು ಅವನ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು ಬಹಮನಿ ಸುಲ್ತಾನರ ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು ಬೀದರ್, ಗುಲ್ಬರ್ಗಾ ಮತ್ತು ಬಿಜಾಪುರಗಳ ಮೇಲೆ ದಾಳಿ ಮಾಡಿದನು. ಅಲ್ಲಿ ಸುಲ್ತಾನ್ ಮೊಹಮ್ಮದ್ ನನ್ನು ಬಿಡುಗಡೆ ಮಾಡಿ ಆತನನ್ನು ಅಲ್ಲಿಯ ವಸ್ತುತಃ ಆಡಳಿತಗಾರನಾಗಿ ಮಾಡಿ "ಯವನ ಸಾಮ್ರಾಜ್ಯ ಪ್ರತಿಷ್ಠಾಪಕ" ಎಂಬ ಬಿರುದನ್ನು ಗಳಿಸಿದನು. ಗೊಲ್ಕೊಂಡಾ ಸುಲ್ತಾನ ಕುಲಿ ಕುತ್ಬ್ ಷಾನನ್ನು ಕೃಷ್ಣದೇವರಾಯನ ಮಂತ್ರಿ ತಿಮ್ಮರಸ ಸೋಲಿಸಿದನು. ಸಾಮಂತರ ಜೊತೆ ಯುದ್ಧ ಸ್ಥಳೀಯ ಪಾಳೆಯಗಾರರು ಮತ್ತು ಭುವನಗಿರಿಯ ವೇಲಮನ ಮೇಲೆ ಆಕ್ರಮಣ ಮಾಡಿ ಗೆದ್ದು ತನ್ನ ರಾಜ್ಯವನ್ನು ಕೃಷ್ಣಾನದಿಯವರೆಗೂ ವಿಸ್ತರಿಸಿದನು. ಕಾವೇರಿ ದಡದಲ್ಲಿ ನಡೆದ ಯುದ್ಧದಲ್ಲಿ ಉಮ್ಮತ್ತೂರಿನ ದೊರೆ ಗಂಗರಾಜನನ್ನು ಸೋಲಿಸಿದನು. ೧೫೧೨ರಲ್ಲಿ ಗಂಗರಾಜನು ಕಾವೇರಿಯಲ್ಲಿ ಮುಳುಗಿ ಅಸುನೀಗಿದ. ಈ ಪ್ರದೇಶ ಶ್ರೀರಂಗಪಟ್ಟಣ ಪ್ರಾಂತ್ಯದ ಒಂದು ಭಾಗವಾಯಿತು. ೧೫೧೬-೧೭ರಲ್ಲಿ ಅವನ ರಾಜ್ಯ ದ ಗಡಿಯು ಗೋದಾವರಿ ನದಿಯನ್ನು ದಾಟಿತು. ಕಳಿಂಗ ಯುದ್ಧ ಗಜಪತಿಗಳ ರಾಜ್ಯ ವಿಶಾಲವಾಗಿದ್ದು ಇಂದಿನ ಆಂಧ್ರ ಮತ್ತು ತೆಲಂಗಾಣ ಪ್ರದೇಶ ಹಾಗೂ ಸಂಪೂರ್ಣ ಒರಿಸ್ಸಾವನ್ನು ಒಳಗೊಂಡಿತ್ತು. ಉಮ್ಮತ್ತೂರಿನ ಯಶಸ್ಸಿನಿಂದ ಉತ್ತೇಜಿತನಾದ ಕೃಷ್ಣದೇವರಾಯನು ಗಜಪತಿ ಪ್ರತಾಪ ರುದ್ರದೇವನ ಸ್ವಾಧೀನದಲ್ಲಿದ್ದ ತೆಲಂಗಾಣ ಪ್ರದೇಶದತ್ತ ತನ್ನ ದೃಷ್ಟಿಯನ್ನು ತಿರುಗಿಸಿದನು. ವಿಜಯನಗರ ಸೈನ್ಯವು ೧೫೧೨ರಲ್ಲಿ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕಿತು. ಒಂದು ವರ್ಷದವರೆಗೂ ನಡೆದ ಈ ಮುತ್ತಿಗೆಯಲ್ಲಿ ಕೊನೆಗೂ ಗಜಪತಿಯ ಸೈನ್ಯ ಹಸಿವಿನಿಂದ ಶಿಥಿಲವಾಗತೊಡಗಿತು. ಇದೇ ಸಮಯದಲ್ಲಿ ಕೃಷ್ಣದೇವರಾಯನು ಪತ್ನಿಯರಾದ ತಿರುಮಲಾ ದೇವಿ ಮತ್ತು ಚಿನ್ನಮ ದೇವಿಯರೊಂದಿಗೆ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿದನು. ಇದರ ನಂತರ ಗಜಪತಿಯ ಸೇನೆ ಕೊಂಡವೀಡುರಾಜು ಎಂಬಲ್ಲಿ ವಿಜಯನಗರ ಸೇನೆಗೆ ಎದುರಾಯಿತು. ಕೆಲವು ತಿಂಗಳುಗಳಿಂದ ಮುತ್ತಿಗೆ ಹಾಕಿದ್ದರೂ, ಕೆಲವು ಮೊದಮೊದಲ ಸೋಲುಗಳ ನಂತರ ವಿಜಯನಗರ ಸೇನೆ ರಣರಂಗದಿಂದ ಹಿಂದೆಗೆಯಲಾರಂಭಿಸಿತು. ಅದೇ ಸಮಯದಲ್ಲಿ ತಿಮ್ಮರಸು ಕಂಡುಹಿಡಿದ ಕಾವಲಿಲ್ಲದ ಪೂರ್ವದ ದ್ವಾರದ ರಹಸ್ಯಒಳದಾರಿಯ ಮೂಲಕ ಒಳನುಗ್ಗಿದ ವಿಜಯನಗರದ ಸೇನೆ ಕೋಟೆಯನ್ನು ಗೆದ್ದು, ಆಕಾಲದ ಅತಿಸಮರ್ಥ ಕತ್ತಿವರಸೆಗಾರ ಎಂದು ಹೆಸರಾಗಿದ್ದ , ಪ್ರತಾಪರುದ್ರದೇವನ ಮಗ, ಯುವರಾಜ ವೀರಭದ್ರನನ್ನು ಸೆರೆಹಿಡಿಯಿತು. ಈ ವಿಜಯದ ನಂತರ ತಿಮ್ಮರಸು ಕೊಂಡವೀಡು ಪ್ರಾಂತದ ಮಾಂಡಲೀಕನಾಗಿ ನೇಮಕಗೊಂಡ. ಮುಂದೆ ವಿಜಯನಗರ ಸೇನೆಯು ಕೊಂಡಪಲ್ಲಿ ಪ್ರದೇಶದಲ್ಲಿ ಗಜಪತಿ ಸೇನೆಯನ್ನು ಮತ್ತೊಮ್ಮೆ ಮುತ್ತಿತು. ಉತ್ಕಲ-ಕಳಿಂಗದ ಮೇಲೆ ನೇರ ದಾಳಿ ಮಾಡಿ ವಶಪಡಿಸಿಕೊಳ್ಳಬೇಕೆಂದಿದ್ದ ಕೃಷ್ಣದೇವರಾಯನ ರಣತಂತ್ರಕ್ಕೆ ಪ್ರತಿಯಾಗಿ ಪ್ರತಾಪರುದ್ರದೇವನು ಕೃಷ್ಣದೇವರಾಯನನ್ನು ಅವನ ಸೇನೆಯೊಂದಿಗೆ ಹೀನಾಯವಾಗಿ ಸೋಲಿಸುವ ಪ್ರತಿಯೋಜನೆ ಹಾಕಿದನು. ಈ ಯೋಜನೆಯ ಪ್ರಕಾರ ಇವೆರಡು ಸೇನೆಗಳು ಕಳಿಂಗನಗರದಲ್ಲಿ ಸಂಧಿಸಬೇಕಾಗಿತ್ತು. ಆದರೆ , ಈ ಮಾಹಿತಿಯನ್ನು ಚಾಣಾಕ್ಷ ತಿಮ್ಮರಸು ಪ್ರತಾಪರುದ್ರದೇವನ ಪಕ್ಷ ತ್ಯಜಿಸಿದ ತೆಲುಗು ಭಾಷಿಕನೊಬ್ಬನಿಗೆ ಲಂಚ ಕೊಟ್ಟು ಸಂಪಾದಿಸಿದನು. ಪ್ರತಾಪರುದ್ರನ ಯೋಜನೆ ನಡೆಯದೆ, ಆತ ತನ್ನ ರಾಜಧಾನಿಯತ್ತ ಹಿಮ್ಮೆಟ್ಟಬೇಕಾಯಿತು. ಕೊನೆಗೂ ಆತ ವಿಜಯನಗರ ಸೇನೆಗೆ ಶರಣಾಗಿ, ತನ್ನ ಮಗಳನ್ನು ಕೃಷ್ಣದೇವರಾಯನಿಗೆ ಕೊಟ್ಟು ಮದುವೆಮಾಡಿದ. ಇದರ ನಂತರ ಭಾರತದ ಎರಡು ಪ್ರಬಲ ಹಿಂದೂ ಸಾಮ್ರಾಜ್ಯಗಳ ನಡುವೆ ಶಾಂತಿ ಸಾಮರಸ್ಯ ನೆಲೆಸಿ ಸನಾತನ ಧರ್ಮ ಸುರಕ್ಷಿತವಾಯಿತು. ೧೫೧೦ರಲ್ಲಿ ಗೋವಾದಲ್ಲಿ ಡೊಮಿನಿಯನ್ ಸ್ಥಾಪಿಸಿದ ಪೋರ್ಚುಗೀಸರೊಂದಿಗೆ ಶ್ರೀಕೃಷ್ಣದೇವರಾಯನು ಸ್ನೇಹ ಸಂಬಂಧಗಳನ್ನು ಬೆಳೆಸಿದನು. ಪೋರ್ಚುಗೀಸ್ ವ್ಯಾಪಾರಿಗಳಿಂದ ಬಂದೂಕು ಮತ್ತು ಅರಬ್ಬೀ ಕುದುರೆಗಳನ್ನು ಪಡೆದುಕೊಂಡದ್ದಷ್ಟೇ ಅಲ್ಲದೆ . ಪೋರ್ಚುಗೀಸ್ ಪರಿಣತಿಯನ್ನು ಉಪಯೋಗಿಸಿಕೊಂಡು ವಿಜಯನಗರ ನಗರಕ್ಕೆ ನೀರು ಸರಬರಾಜು ಯೋಜನೆಯ ಸುಧಾರಣೆ ಮಾಡಿದನು. ಅಂತಿಮ ಸಂಘರ್ಷ ಐವರು ದಖ್ಖನ್ ಸುಲ್ತಾನರೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕಿದ್ದ ಸಂಬಂಧ ದಿನಗಳೆದಂತೆ ಹಳಸಲು ಶುರುವಾದ ಕಾರಣ ವಿಜಯನಗರ ಸಾಮ್ರಾಜ್ಯ ದಖ್ಖನ್ ಸುಲ್ತಾನರ ವಿರುದ್ಧ ಸಿಟ್ಟಿಗೆದ್ದು ನಿಂತಿತು. ಇದೇ ಸಂಧರ್ಭದಲ್ಲಿ ಕೃಷ್ಣದೇವರಾಯನು ಗೋಲ್ಕೊಂಡವನ್ನು ಗೆದ್ದು ಅದರ ಸಾಮಂತನಾಗಿದ್ದ ಮುದುರುಲ್-ಮುಲ್ಕ್ ನನ್ನು ಸೆರೆ ಹಿಡಿದನು. ಇನ್ನೂ ಮುಂದುವರೆದು ಬಹಮನಿ ಸುಲ್ತಾನರ ಪರವಾಗಿ ಬಿಜಾಪುರದ ಮೇಲೆ ದಾಳಿ ನಡೆಸಿ ಅಲ್ಲಿ ರಾಜ್ಯವಾಳುತ್ತಿದ್ದ ಸುಲ್ತಾನ್ ಇಸ್ಮಾಯಿಲ್ ಆದಿಲ್ ಷಾ ನನ್ನು ಸೋಲಿಸಿ ಗೆದ್ದ ರಾಜ್ಯವನ್ನು ಬಹಮನಿ ಸುಲ್ತಾನ ಮುಹಮ್ಮದ್ ಷಾ ನಿಗೆ ವಹಿಸಿ ತಾನು ವಿಜಯನಗರಕ್ಕೆ ಹಿಂದಿರುಗುತ್ತಾನೆ. ದಖ್ಖನ್ ಸುಲ್ತಾನರೊಂದಿಗಿನ ಕಾಳಗದಲ್ಲಿ ಮುಖ್ಯವೆನಿಸುವ ಘಟನೆಯೆಂದರೆ ೧೫೨೦ರ ಮೇ ೧೯ ರಂದು ಬಿಜಾಪುರವನ್ನು ಆಳುತ್ತಿದ್ದ ಇಸ್ಮಾಯಿಲ್ ಆದಿಲ್ ಷಾ ನಿಂದ ರಾಯಚೂರು ಕೋಟೆಯನ್ನು ವಶಪಡಿಸಿಕೊಂಡಿದ್ದು. ಅತಿ ಪ್ರಯಾಸದಿಂದ ನಡೆದ ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ತನ್ನ ೧೬,೦೦೦ ಸೈನಿಕರನ್ನು ಕಳೆದುಕೊಂಡು ರಾಯಚೂರು ಕೋಟೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಯುದ್ಧದಲ್ಲಿ ಚತುರತೆ ಮೆರೆದು ಗೆಲುವಿಗೆ ಕಾರಣನಾದ ವಿಜಯನಗರದ ಮುಖ್ಯ ಸೇನಾಧಿಕಾರಿ ಪೆಮ್ಮಸಾನಿ ರಾಮಲಿಂಗ ನಾಯ್ಡು ಅರಸರ ಪ್ರೀತ್ಯಾದರಗಳನ್ನು ಗಳಿಸಿದ, ಶ್ರೀ ಕೃಷ್ಣದೇವರಾಯರು ಆತನನ್ನು ಸೂಕ್ತ ಸನ್ಮಾನದೊಂದಿಗೆ ಗೌರವಿಸಿದರು. ಒಂದು ಅಂದಾಜಿನ ಪ್ರಕಾರ ರಾಯಚೂರಿಗಾಗಿ ನಡೆದ ಕಾಳಗದಲ್ಲಿ ಸುಮಾರು ೭೦೩,೦೦೦ ಪದಾತಿ ದಳದ ಸೈನಿಕರು, ೩೨,೬೦೦ ಅಶ್ವದಳದ ಸೈನಿಕರು ಹಾಗು ೫೫೧ ಗಜ ಪಡೆಯ ಸೈನಿಕರು ಆಹುತಿಯಾದರೆಂದು ತಿಳಿದುಬರುತ್ತಿದೆ(ರಾಯಚೂರು ಯುದ್ಧದ ಬಗ್ಗೆ ನೋಡಿ). ಕಟ್ಟ ಕಡೆಯದಾಗಿ ತನ್ನ ಕೊನೆಯ ಯುದ್ಧದಲ್ಲಿ ಕೃಷ್ಣದೇವರಾಯನು ಹಿಂದೆ ಬಹಮನಿ ಸುಲ್ತಾನರ ಕೇಂದ್ರ ಸ್ಥಾನವಾಗಿದ್ದ ಗುಲ್ಬರ್ಗಾ ಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಭಾರತದಾದ್ಯಂತ ತನ್ನ ವಿಜಯ ಪತಾಕೆ ಹಾರಿಸಿ ಇಡೀ ದಕ್ಷಿಣ ಭಾರತವನ್ನು ತನ್ನ ಸಾಮ್ರಾಜ್ಯದ ಅಡಿಯಲ್ಲಿ ತಂದನು. ೧೫೨೪ರಲ್ಲಿ ಶ್ರೀ ಕೃಷ್ಣದೇವರಾಯನು ತನ್ನ ಪುತ್ರ ತಿರುಮಲರಾಯನಿಗೆ ಪಟ್ಟ ಕಟ್ಟುವ ಮೂಲಕ ಅರಸನ ಪಟ್ಟಕ್ಕೇರಿಸಿದನು. ಇನ್ನೂ ಬಾಲ್ಯಾವಸ್ಥೆಯಲ್ಲಿದ್ದ ತಿರುಮಲರಾಯನಿಗೆ ಪಿತೂರಿ ನಡೆಸಿ ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿಸಿ ಕೊಂದುಬಿಟ್ಟರು. ಆದ ಕಾರಣ ಕೃಷ್ಣದೇವರಾಯನ ಪುತ್ರ ಸಿಂಹಾಸನದಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. ತನ್ನ ಪುತ್ರನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಕೃಷ್ಣದೇವರಾಯನು ಬಹಳ ಕುಸಿದು ಹೋದನು ಹಾಗು ದಿನೇ ದಿನೇ ಕೃಶವಾಗುತ್ತಾ ಹೋದನು. ತಿರುಮಲರಾಯನ ಕಗ್ಗೊಲೆಯ ವಿಚಾರವಾಗಿ ಈ ನ್ಯಾಯಸ್ಥಾನದಲ್ಲಿ ವಿಚಾರಣೆ ನಡೆಸಿ ವಿಜಯನಗರದ ಪ್ರಧಾನಮಂತ್ರಿ ತಿಮ್ಮರಸುವಿಗೆ ತಪ್ಪಾಗಿ ಕಣ್ಣು ಕೀಳಿಸುವ ಶಿಕ್ಷೆ ವಿಧಿಸಲಾಯಿತು. ಇದನ್ನು ತಡೆಯಲು ಶ್ರೀ ಕೃಷ್ಣದೇವರಾಯರು ಬಹಳ ಪ್ರಯತ್ನ ಪಟ್ಟರಾದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಶ್ರೀ ಕೃಷ್ಣ ದೇವರಾಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಲು ಅವಿರತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದ ತಿಮ್ಮರಸು ವಿಜಯನಗರ ಸಾಮ್ರಾಜ್ಯದ ಹಿತೈಷಿಯಾಗಿದ್ದರೇ ಹೊರತು ದ್ವೇಷಿಯಾಗಿರಲಿಲ್ಲ. ತಿಮ್ಮರಸುವಿನ ಕಣ್ಣುಗಳನ್ನು ಕಿತ್ತ ಸುದ್ದಿ ತಿಳಿದಂತೆಯೇ ಶ್ರೀ ಕೃಷ್ಣದೇವಾರಾಯರು ಕುಸಿದು ಹೋದರು.ಅದೇ ಸಮಯದಲ್ಲಿ ಬಹಮನಿ ಸುಲ್ತಾನರ ವಶದಲ್ಲಿದ್ದ ಬೆಳಗಾವಿಯನ್ನು ವಶಪಡಿಸಿಕೊಳ್ಳುವ ಕನಸು ಕೃಷ್ಣದೇವರಾಯರಿಗಿದ್ದರೂ ಅದು ಸಾಧ್ಯವಾಗದೆ ಆಘಾತಗಳ ಮೇಲೆ ಆಘಾತ ಬಂದೆರಗಿ ಅನಾರೋಗ್ಯಕ್ಕೆ ತುತ್ತಾದರು. ಆದರೆ ಕೃಷ್ಣ ದೇವರಾಯರು ಅನಾರೋಗ್ಯದಿಂದ ಹೊರಬರಲಾಗದೆ ೧೫೨೯ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿದರು. ಸಾವಿಗೆ ಮುನ್ನವೇ ಕೃಷ್ಣದೇವರಾಯ ತನ್ನ ಸಹೋದರ ಅಚ್ಯುತ ರಾಯನಿಗೆ ತನ್ನ ಸಾಮ್ರಾಜ್ಯಾಧಿಕಾರಗಳನ್ನು ವಹಿಸಿಕೊಟ್ಟನು ಹಾಗು ವಿಜಯನಗರದ ಇತಿಹಾಸದ ಪುಟದಲ್ಲಿ ಕೃಷ್ಣದೇವಾರಾಯನು ತನ್ನ ಸುಭೀಕ್ಷ ಆಳ್ವಿಕೆಯಿಂದಲೇ ಅಜರಾಮರನಾದನು.ಇಂದಿಗೂ ಕರ್ನಾಟಕದ ಹಂಪಿಯಲ್ಲಿರುವ ಅವಶೇಷಗಳು ವಿಜಯನಗರದ ಗತ ವೈಭವವನ್ನು ಸಾರಿ ಹೇಳುತ್ತಿವೆ. ಆಂತರಿಕ ವ್ಯವಹಾರಗಳು ಪೇಸ್ ಶಿಕ್ಷೆಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳಿಗೆ ರಾಜ ಧೋರಣೆಯನ್ನು ಸಂಕ್ಷಿಪ್ತವಾಗಿ, "ರಾಜ ಕೊಲ್ಲುವ ಮೂಲಕ ಕಾನೂನು ನಿರ್ವಹಿಸುತ್ತದೆ." ಆಸ್ತಿ (ಸ್ಥಿರತೆಯನ್ನು ಉಳಿಸಿಕೊಳ್ಳುವ ವಿನ್ಯಾಸ) ವಿರುದ್ಧ ಮತ್ತು ಕೊಲೆಯ ಅಪರಾಧಗಳು ಕಳ್ಳತನ ಮತ್ತು ಕೊಲೆಯ ಶಿರಚ್ಛೇದವು (ದ್ವಂದ್ವ ಪರಿಣಾಮವಾಗಿ ಸಂಭವಿಸುವ ಹೊರತುಪಡಿಸಿ) ಒಂದು ಕಾಲು ಮತ್ತು ಕೈ ಕತ್ತರಿಸುವ ರಷ್ಟಿದೆ. ಅವರ ದೃಷ್ಟಿಕೋನ ಅಸ್ಪಷ್ಟವಾಗಿದೆ ಆದರೆ ನಗರದ ರೋಮ್ ಕಡೇಪಕ್ಷ ದೊಡ್ಡ ಎಂದು ಅಂದಾಜಿಸಲಾಗಿದೆ ಎಂದು ಪೇಸ್ (Vijaynagar)ವಿಜಯನಗರದ ಗಾತ್ರವು ಅಂದಾಜು ಮಾಡಲಾಗಿಲ್ಲ. ಇದಲ್ಲದೆ, ಅವರು ಅರ್ಧ ಮಿಲಿಯನ್ ಕಡಿಮೆ ಮಾಡುವ ಜನಸಂಖ್ಯೆ ವಿಜಯನಗರ "ವಿಶ್ವದ ಅತ್ಯುತ್ತಮ ನಗರ" ಎಂದು ಪರಿಗಣಿಸಲಾಗಿದೆ. ಸಾಮ್ರಾಜ್ಯವು ಹೆಚ್ಚಾಗಿ ರಾಯಲ್ ಕುಟುಂಬದ ಸದಸ್ಯರ ಅಡಿಯಲ್ಲಿ ಮತ್ತು ಮತ್ತಷ್ಟು ಉಪವಿಭಾಗಗಳು ಆಗಿ ಪ್ರಾಂತ್ಯಗಳ ಅನೇಕ ವಿಭಜಿಸಲಾಗಿದೆ. ನ್ಯಾಯಾಲಯದ ಅಧಿಕೃತ ಭಾಷೆ ಕನ್ನಡ ಇತ್ತು. ನಾನು ಕೃಷ್ಣದೇವರಾಯ ಕಾನೂನುರೀತ್ಯಾ ಕೇವಲ ಒಬ್ಬ ರಾಜ, ಆದರೆ ಅವರ ವ್ಯಾಪಕ ಅಧಿಕಾರಗಳು ಮತ್ತು ಬಲವಾದ ವೈಯಕ್ತಿಕ ಪ್ರಭಾವ ಒಂದು ವಸ್ತುತಃ ಸಾರ್ವಭೌಮ . ಮಂತ್ರಿ ತಿಮ್ಮರಸು ಅವರ ಸಕ್ರಿಯ ಸಹಕಾರದೊಂದಿಗೆ ಕೃಷ್ಣದೇವರಾಯ ಚೆನ್ನಾಗಿ ರಾಜ್ಯದ ಆಡಳಿತ, ಭೂಮಿ ಉಳಿಸಿಕೊಳ್ಳುವುದು, ಶಾಂತಿ ಮತ್ತು ಜನರ ಅಭ್ಯುದಯ ಹೆಚ್ಚಳ, ಸಾಮ್ರಾಜ್ಯದ ಆಡಳಿತ ತನ್ನ ಅಮುಕ್ತಮಾಲ್ಯದ ಸೂಚಿಸಿರುವ ಹಳಿಗಳ ಮೇಲೆ ನಡೆಸಲಾಯಿತು ಎಂದು ಬರೆದುಕೊಂಡಿದ್ದಾನೆ. ಕೃಷ್ಣದೇವರಾಯ ಯಾವಾಗಲೂ ಧರ್ಮ ಕಡೆಗೆ ಒಂದು ಕಣ್ಣಿಡಬೇಕೆಂದು ಅಭಿಪ್ರಾಯವಾಗಿತ್ತು. ಜನರ ಕ್ಷೇಮಕ್ಕಾಗಿ ತನ್ನ ಕಾಳಜಿ, ವ್ಯಾಪಕವಾಗಿ ಎಲ್ಲಾ ಸಾಮ್ರಾಜ್ಯದ ಮೇಲೆ ತಮ್ಮ ವ್ಯಾಪಕ ವಾರ್ಷಿಕ ಪ್ರವಾಸಗಳನ್ನು ನೀಡಿದರು. ಇದೇ ಅವಧಿಯಲ್ಲಿ ಅವರು ವೈಯಕ್ತಿಕವಾಗಿ ಎಲ್ಲವನ್ನೂ ಅಧ್ಯಯನ ಮಾಡಿ ಜನರ ಕುಂದುಕೊರತೆಗಳನ್ನು ನಿವಾರಿಸಲು ಮತ್ತು ದುಷ್ಟರನ್ನು ಶಿಕ್ಷಿಸಲು ಪ್ರಯತ್ನಿಸಿದರು. ಪೋರ್ಚುಗೀಸ್ ಚರಿತ್ರೆ ಡೊಮಿಂಗೊ ಪೇಸ್ "ಅತ್ಯಂತ ಗಾಂಭೀರ್ಯ ಮತ್ತು ಪರಿಪೂರ್ಣ ರಾಜ. ಹೆಚ್ಚು ನ್ಯಾಯ ಪಕ್ಷಪಾತಿ ಮತ್ತು ಶ್ರೇಷ್ಠ ರಾಜ.", ಎಂದು ಕೃಷ್ಣದೇವರಾಯನನ್ನು ಹೊಗಳುತ್ತಾನೆ. ವೈಷ್ಣವ ಅನುಯಾಯಿ ಆದರೂ ಎಲ್ಲ ಪಂಥಗಳು ಸಂಬಂಧಿಸಿದಂತೆ ತೋರಿಸಿತು, ಮತ್ತು ಸಣ್ಣ ಧಾರ್ಮಿಕ ಪೂರ್ವಾಗ್ರಹ ಉಡುಗೊರೆಗಳನ್ನು ನೀಡುವ ಅಥವಾ ಸಹಚರರು ಮತ್ತು ಅಧಿಕಾರಿಗಳ ಆಯ್ಕೆಯ ರೂಪದಲ್ಲಿ ಅವನ ಪ್ರಭಾವ ಇಲ್ಲ. ಬಾರ್ಬೋಸಾ ಪ್ರಕಾರ, "ರಾಜ ಯಾವುದೇ ಕಿರಿಕಿರಿಗೆ ಬಳಲುತ್ತಿರುವ ಇಲ್ಲದೆ, ಪ್ರತಿ ವ್ಯಕ್ತಿ ಬಂದು ಹೋಗಿ, ತನ್ನ ಮತ ಪ್ರಕಾರ ಜೀವಿಸಬಹುದಾಗಿದೆ ಅಂದರೆ ಸ್ವಾತಂತ್ರ್ಯ ನೀಡುತ್ತದೆ" ಎಂದಾಗಿದೆ. ಕಲೆ ಮತ್ತು ಸಾಹಿತ್ಯದಲ್ಲಿ ಕೃಷ್ಣದೇವರಾಯನ ಆಡಳಿತವು ಅನೇಕ ಭಾಷೆಗಳಲ್ಲಿ ಸಮೃದ್ಧ ಸಾಹಿತ್ಯದ ಕಾಲವಾಗಿತ್ತು ಹಾಗೂ ತೆಲುಗು ಸಾಹಿತ್ಯದ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅನೇಕ ತೆಲುಗು, ಸಂಸ್ಕೃತ, ಕನ್ನಡ ಮತ್ತು ತಮಿಳು ಕವಿಗಳು ಚಕ್ರವರ್ತಿಯ ಪ್ರೋತ್ಸಾಹವನ್ನು ಅನುಭವಿಸಿದರು. ಕೃಷ್ಣದೇವರಾಯ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದ. ಅವನ ವಂಶಾವಳಿಯ ಭಾಷೆ ಕನ್ನಡ, ತೆಲುಗು ಅಥವಾ ತುಳುವ (Tuluva) ಎಂಬ ಒಂದು ಚರ್ಚೆ ಉಳಿದಿದೆ. ಕೃಷ್ಣದೇವರಾಯನ ತೆಲುಗು ಭಾಷೆಯ ಮೇಲಿನ ಪಾಂಡಿತ್ಯ ಮತ್ತು ಪ್ರೀತಿಯಿಂದಾಗಿ ಅವನ ಆಸ್ಥಾನದಲ್ಲಿ ಅನೇಕ ಕವಿಗಳು ಮತ್ತು ಸೈನ್ಯದಲ್ಲಿ ಅನೇಕ ಸೈನಿಕರು ಆಶ್ರಯವನ್ನು ಪಡೆದುಕೊಂಡಿದ್ದರು.ಅನೇಕ ಕವಿಗಳು ಕೃಷ್ಣದೇವರಾಯನ ಬಗ್ಗೆ ವಿವಿಧ ರೀತಿಯಲ್ಲಿ ಹಾಡಿ ಹೊಗಳಿದ್ದಾರೆ. ಕನ್ನಡ ಸಾಹಿತ್ಯ ಕೃಷ್ಣದೇವರಾಯ ಅನೇಕ ಕನ್ನಡ ಕವಿಗಳನ್ನು ಪ್ರೋತ್ಸಾಹಿಸಿದನು. ಮಲ್ಲನಾರ್ಯ ಬರೆದ ಕೃತಿಗಳು ವೀರ-ಶೈವಾಮೃತ, ಭವ-ಚಿಂತಾ-ರತ್ನ ಮತ್ತು ಸತ್ಯೇಂದ್ರ ಚೋಳ-ಕಥೆ, ಚಟ್ಟು ವಿಟ್ಟಲನಾಥ ಬರೆದ ಭಾಗವತ ಪ್ರಸಿದ್ಧವಾಗಿವೆ. ತಿಮ್ಮಣ್ಣ ಕವಿಯು ಬಹು ಪ್ರಸಿದ್ಧನಾಗಿದ್ದನು. ಶ್ರೀ ವ್ಯಾಸತೀರ್ಥರು, ಉಡುಪಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೇಷ್ಠ ಸಂತರು ಕೃಷ್ಣದೇವರಾಯನ ರಾಜಗುರುವಾಗಿದ್ದರು. "ಕೃಷ್ಣದೇವರಾಯನ ದಿನಚರಿ" ಇತ್ತೀಚೆಗೆ ಪತ್ತೆಹಚ್ಚಲ್ಪಟ್ಟ ದಾಖಲೆ. ದಾಖಲೆಯು ಕೃಷ್ಣದೇವರಾಯನ ಕಾಲದ ಸಮಕಾಲೀನ ಸಮಾಜವನ್ನು ತೋರಿಸುತ್ತದೆ. ದಾಖಲೆಯು ರಾಜ ಸ್ವತಃ ಬರೆದನೇ ಎಂಬುದು ಸಂದೇಹವಾಗಿ ಉಳಿದಿದೆ. ತಮಿಳು ಸಾಹಿತ್ಯ ಕೃಷ್ಣದೇವ ರಾಯ ತಮಿಳು ಕವಿ ಹರಿದಾಸರನ್ನು ಪೋಷಿಸಿದರು ಮತ್ತು ತಮಿಳು ಸಾಹಿತ್ಯ ಬೇಗ ವರ್ಷ ಜಾರಿಗೆ ಅಭಿವೃದ್ದಿ ಆರಂಭಿಸಿತು. ಸಂಸ್ಕೃತ ಸಾಹಿತ್ಯ ಸಂಸ್ಕೃತದಲ್ಲಿ, ಶ್ರೀವ್ಯಾಸತೀರ್ಥರು ತಾತ್ಪಾರ್ಯ-ಚಂದ್ರಿಕಾ, ನ್ಯಾಯಮಿತ್ರ (ಅದ್ವೈತ ತತ್ತ್ವದ ವಿರುದ್ಧ ನಿರ್ದೇಶನದ ಕೆಲಸ) ಮತ್ತು ತರ್ಕ-ತಾಂಡವ ಬರೆದಿದ್ದಾರೆ. ಕೃಷ್ಣದೇವರಾಯ ಸ್ವತಃ ಒಬ್ಬ ನಿಪುಣ ವಿದ್ವಾಂಸನಾಗಿದ್ದ ಮತ್ತು ಮದಾಲಸ ಚರಿತ, Satyavadu Parinaya ಮತ್ತು ರಸಮಂಜರಿ ಮತ್ತು ಜಾಂಬವತಿ ಕಲ್ಯಾಣ ಎಂಬ ಕೃತಿಗಳನ್ನು ರಚಿಸಿದ್ದಾರೆ. ಆಂಧ್ರ ವಿಷ್ಣು ದೇವಾಲಯಕ್ಕೆ ಭೇಟಿ ವಿಜಯನಗರದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ತನ್ನ ಕಳಿಂಗ ಪ್ರಚಾರ (c. ೧೫೧೬) ಸಂದರ್ಭದಲ್ಲಿ ವಿಜಯವಾಡ ಮೂಲಕ ಪ್ರಯಾಣಿಸುತ್ತಿದ್ದ. ಅವರು ವಿಜಯವಾಡ, ಕೊಂಡಪಲ್ಲಿ ಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಶಪಡಿಸಿಕೊಂಡರು. ಅವರು ಶ್ರೀ ಆಂಧ್ರ ವಿಷ್ಣುವಿನ ಪವಿತ್ರ ದೇವಾಲಯದ ಬಗ್ಗೆ ತಿಳಿದು ಬಂದು ಕೆಲವು ದಿನಗಳ ಶ್ರೀಕಾಕುಲಂ ಹಳ್ಳಿಗೆ ಭೇಟಿ ನೀಡಿದರು. ಆ ಸಮಯದಲ್ಲಿ ಏಕಾದಶಿ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ವ್ರತ ಪ್ರದರ್ಶನ. ಎಲ್ಲಾ ಅವರ ವೈಭವ ಶ್ರೀ ಆಂಧ್ರ ವಿಷ್ಣು ಒಂದು ಬೆಳಗಿನ ಡ್ರೀಮ್ ("ನೀಲ mEGhamu DAlu Deelu sEyaga jAlu ....") ಚಕ್ರವರ್ತಿಯ ಕಾಣಿಸುತ್ತಿದ್ದವು ಇಲ್ಲಿದೆ. ಅಮುಕ್ತಮಾಲ್ಯದ ಒಳಗೆ ಸ್ವತಃ [8] ಉಲ್ಲೇಖಿಸಲಾಗಿದೆ ಒಂದು Harivāsara, ಶ್ರೀ ಕೃಷ್ಣದೇವರಾಯ ಮೇಲೆ ಶ್ರೀ ಆಂಧ್ರ ವಿಷ್ಣುವಿನ Darsan ಹೊಂದಿತ್ತು. Harivāsara ಏಕಾದಶಿ ಕೊನೆಯ 4 ಮಹೂರ್ತಗಳಲ್ಲಿ ಒಂದಾಗಿದೆ ಮತ್ತು Dwadasi, ಅಂದರೆ, 6 ಗಂಟೆ 24 ನಿಮಿಷ ಮೊದಲ 4 ಮಹೂರ್ತಗಳಲ್ಲಿ ಒಂದಾಗಿದೆ ದೇವಸ್ಥಾನಕ್ಕೆ ಭೇಟಿ ಈ ಘಟನೆ Ahobilam Śaasanam (ಡಿಸೆಂಬರ್ 1515 ರ) ಮತ್ತು ಸಿಂಹಾಚಲಂ Śaasanam (ಮಾರ್ಚ್ 1515 ರ 30) ನಡುವೆ ಇರಬೇಕು. ಬಹುಶಃ ಜನವರಿ 1516, ಅವರು Dvadasi ದಿನ ದೇವಾಲಯಕ್ಕೆ ಭೇಟಿ ಮಾಡಿರಬಹುದು. ಈ ಮೀರಿ ಯಾವುದೇ ಮಾನ್ಯ ಉಲ್ಲೇಖಗಳು ಭೇಟಿ ನಿಖರವಾದ ದಿನಾಂಕ ಲಭ್ಯವಿವೆ. [9] ಶ್ರೀ ಕೃಷ್ಣದೇವರಾಯ ಸ್ವತಃ ಈ ಕೆಲಸ ಸಂಯೋಜನೆಯು ಸನ್ನಿವೇಶ ಸ್ಮರಿಸುತ್ತಾರೆ. ಕೆಲವೊಮ್ಮೆ ಹಿಂದೆ, ನಾನು ಕಳಿಂಗದ ಪ್ರದೇಶವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದರು. ದಾರಿಯಲ್ಲಿ ನಾನು ವಿಜಯವಾಡ ನನ್ನ ಸೈನ್ಯವು ಕೆಲವು ದಿನಗಳ ಕಾಲ ಇದ್ದರು. ನಂತರ ನಾನು Srikakula ವಾಸಿಸುವ ಆಂಧ್ರ ವಿಷ್ಣು, ಭೇಟಿ ಹೋದರು. ಆ ದೇವರ ರಾತ್ರಿ (Harivaasaram) ನಾಲ್ಕನೆಯ ಹಾಗೂ ಕೊನೆಯ ವೀಕ್ಷಣಾ, ವಿಷ್ಣು ಡೇ (Dvadasi) ವೇಗದ ಗಮನಿಸಿದ ಆಂಧ್ರ ವಿಷ್ಣು ನನ್ನ ಕನಸಿನಲ್ಲಿ ನನ್ನ ಬಳಿ ಬಂದು. ಬುದ್ಧಿವಂತ ಮತ್ತು ಹೊಳೆಯುವ ಅವನ ಕಣ್ಣುಗಳು, ಅವಮಾನ ಕಮಲದ ಪುಟ್. ಆತ ಅದನ್ನು ತನ್ನ ಹದ್ದಿನ ರೆಕ್ಕೆಗಳು ಬದಲಾಗಿ ಈಗಲೂ ಅತ್ಯುತ್ತಮ ಗೋಲ್ಡನ್ ರೇಷ್ಮೆ, ಅಪ್ಪಟವಾದ ಧರಿಸಿರುತ್ತಾಳೆ ಮಾಡಲಾಯಿತು. ಕೆಂಪು ಸೂರ್ಯೋದಯ ಮಸುಕಾದ ತನ್ನ ಎದೆಯ ಮೇಲೆ ಮಾಣಿಕ್ಯ ಹೋಲಿಸಲಾಗುತ್ತದೆ. [10] ತೆಲುಗು ಕೆಲಸ ಪ್ರಾರಂಭಿಸಬೇಕು [ಬದಲಾಯಿಸಿ] ಲಾರ್ಡ್ಸ್ ಶಿಕ್ಷಣ ಶ್ರೀ ಆಂಧ್ರ ವಿಷ್ಣು ಶ್ರೀರಂಗಮ್ನಲ್ಲಿನ ಅಂಡಾಲ್ನಿಂದ ("rangamandayina penDili seppumu ..") ತಮ್ಮ ಮದುವೆಯ ಕಥೆಯನ್ನು ಸಂಯೋಜಿಸಲು ಕೇಳಿಕೊಂಡರು. *ಈ ಕೃತಿಯ 14 ಕವನದ ನಾವು, ಲಾರ್ಡ್ ಕೂಡ ತೆಲುಗು ಕಥೆಯನ್ನು ಹೇಳಲು ಚಕ್ರವರ್ತಿ ಆದೇಶ Telugus ರಾಜ (ತೆಲುಗು Vallabhunḍa) ತನ್ನನ್ನು ಉಲ್ಲೇಖಿಸಲಾಗುತ್ತದೆ ಮತ್ತು ಕನ್ನಡ ಕಿಂಗ್ (ಕನ್ನಡ ರಾಯ) ಎಂದು ಶ್ರೀ ಕೃಷ್ಣದೇವರಾಯ ಸೂಚಿಸುತ್ತದೆ ಎಂದು ನೋಡಬಹುದು. (... NEnu delugu raayanDa, ಕನ್ನಡ raaya!, Yakkodunangappu ....). ಲಾರ್ಡ್ "telugadElayanna, dESambu ತೆಲುಗು. YEnu ತೆಲುಗು vallaBhunDa. Telugo ಕಂದ ..... yerugavE ಬಸದಿ, dESa BhAShalandu ತೆಲುಗು lessa!" ಸಮರ್ಥನೆಯ ಚಕ್ರವರ್ತಿ ನಿರ್ಬಂಧಕ್ಕೆ ಮತ್ತು ಇಡೀ ತೆಲುಗು ಸಾಹಿತ್ಯದ ಅತ್ಯಂತ ಪ್ರಸಿದ್ಧ ಕಾವ್ಯಾತ್ಮಕ ಕೃತಿಗಳ ಒಂದು ಇದು ಅಮುಕ್ತಮಾಲ್ಯದ ಸಂಯೋಜಿಸಿದರು. [11] "తెలుఁగ దేల నన్న దేశంబు దెలుఁగేను తెలుఁగు వల్లభుండఁ దెలుఁ గొకండ యెల్ల నృపులగొలువ నెరుఁగ వే బాసాడి దేశభాషలందుఁ తెలుఁగు లెస్స " - శ్రీ ఆంధ్ర విష్ణు "TelugadElayanna, dESambu telugEnu ತೆಲುಗು vallaBhunDa telugokanDa yella nRpulu golva nerugavE ಬಸದಿ dESa BhAShalandu ತೆಲುಗು lessa " ಏಕೆ ಅಮುಕ್ತಮಾಲ್ಯದ ಆನ್ ಶ್ರೀ ಆಂಧ್ರ ವಿಷ್ಣುವಿನ ಕಾರಣಕ್ಕಾಗಿ ಶ್ರೀ ಕೃಷ್ಣದೇವರಾಯ ಮೂಲಕ ತೆಲುಗು ಬರೆದ ಮಾಡಬೇಕು ಉದ್ಧರಣ ಅರ್ಥ: "ತೆಲುಗು ಒಂದು ಕೆಲಸವನ್ನು ಏಕೆ ನೀವು ಕೇಳಲು ವೇಳೆ; ನಾನು ತೆಲುಗು (ಅಂದರೆ, Teluguland ಸೇರಿರುವ) ಮತ್ತು Telugus ರಾಜ ತೆಲುಗು ಸ್ಟಫ್ (TelugO ಕಂದ) ಅಭಿನಯಿಸುವುದರೊಂದಿಗೆ ಭಾಷೆ ಆದ್ದರಿಂದ, ನೀವು ಅಡಿಯಲ್ಲಿ ಸೇವೆ ಎಲ್ಲಾ ರಾಜರು, ಅದಕ್ಕೆ.. ನೀವು ಎಲ್ಲಾ ರಾಷ್ಟ್ರೀಯ ಭಾಷೆಗಳಲ್ಲಿ ತೆಲುಗು ಉತ್ತಮ ಎಂದು ತಿಳಿಯುವುದಿಲ್ಲ ಮಾತನಾಡುವುದು. " ಧರ್ಮ ಮತ್ತು ಸಂಸ್ಕೃತಿ ತಿರುಮಲ ದೇವಸ್ಥಾನ ಮತ್ತು ವೈಕುಂಠಂ ಸರದಿಗೆ ಕಾಂಪ್ಲೆಕ್ಸ್ (ಮುನ್ನೆಲೆಯಲ್ಲಿ ಅರ್ಧವೃತ್ತಾಕಾರದ ಕಟ್ಟಡ) ಎಂದು ನಾರಯಣಗಿರಿ ಬೆಟ್ಟದ ಮೇಲೆ ಶ್ರೀವಾರಿ ರ್ಪಾದಾಲು ಕಂಡಂತೆ ಕೃಷ್ಣದೇವ ರಾಯ ಹಿಂದೂ ಧರ್ಮ ಎಲ್ಲ ಪಂಥಗಳು ಗೌರವವನ್ನು ಮತ್ತು ವಜ್ರ ಲೇಪಿತ ಕಿರೀಟಗಳು ನಿಂದ ಚಿನ್ನದ ಖಡ್ಗಗಳನ್ನು ಹಿಡಿದು ಅಮೂಲ್ಯವಾದ ಮೌಲ್ಯದ ತಿರುಮಲ ವೆಂಕಟೇಶ್ವರ ದೇವಸ್ಥಾನ ಹಲವಾರು ವಸ್ತುಗಳ ಮೇಲೆ ಯಥೇಚ್ಛವಾಗಿ ಸುರಿದ. ಜೊತೆಗೆ, ಆತ ಮತ್ತು ದೇವಾಲಯದ complex.These ಪ್ರತಿಮೆಗಳು ಅವರ ಪತ್ನಿಯರು ಪ್ರತಿಮೆಗಳ ತಯಾರಿಕೆ ಕಾರ್ಯಾರಂಭ ಹೇಳಲಾಗುತ್ತದೆ ಇನ್ನೂ ನಿರ್ಗಮನ ದೇವಸ್ಥಾನವನ್ನು ಕಾಣಬಹುದಾಗಿದೆ. ಕೃಷ್ಣದೇವ ರಾಯ ಔಪಚಾರಿಕವಾಗಿ ವ್ಯಸತಿರ್ಥ ಅದಕ್ಕೆ ವೈಷ್ಣವ ಸಂಪ್ರದಾಯದ ಅನ್ನು ಪ್ರಾರಂಭಿಸಿದರು. [17] ಅವರು ಕನ್ನಡ, ತೆಲುಗು, ತಮಿಳು ಮತ್ತು ಸಂಸ್ಕೃತ ಕವಿಗಳು ಮತ್ತು ವಿದ್ವಾಂಸರು ಪೋಷಿಸಿದರು. ಶ್ರೀ ವ್ಯಾಸತಿರ್ಥ ತಮ್ಮ ಕುಲ-ಗುರುವಾಗಿದ್ದರು. ಅಂತ್ಯ ರಾಜ ಮತ್ತು ತನ್ನನ್ನು ಹುದ್ದೆಯಿಂದ ಕೈಗೆತ್ತಿಕೊಂಡು ತಮ್ಮ ಜೀವಿತಾವಧಿಯಲ್ಲಿ ಕೃಷ್ಣದೇವರಾಯ ತನ್ನ ಆರು ವರ್ಷದ ಮಗ ತಿರುಮಲರಾಯನನ್ನು ಪಟ್ಟಕ್ಕೆ ಏರಿಸಿದರು ಎಂದು ಹೇಳಲಾಗಿದೆ. ಆದರೆ ತಿರುಮಲರಾಯ ಅನಾರೋಗ್ಯಕ್ಕೊಳಗಾದರು ಸಾಲುವ ತಿಮ್ಮ(ಮುಖ್ಯಮಂತ್ರಿ) ಮಗ ಮೂಲಕ ವಿಷ ನಿಧನರಾದರು. ಅವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಹಾಗು ಶೀಘ್ರವೇ ಅಂದರೆ ೧೫೨೯ ರ ನಂತರ ನಿಧನ ಏತನ್ಮಧ್ಯೆ ಕೃಷ್ಣದೇವರಾಯ ಆದಿಲ್ ಶಾನ ಸ್ವಾಮ್ಯದಲ್ಲಿ ನಂತರ, ಬೆಳಗಾವಿ ಮೇಲೆ ದಾಳಿಗೆ ತಯಾರಿ ನಡೆಸುತ್ತಿದೆ. ಅವರ ಸಾವಿಗೆ ಮುನ್ನ, ಅವರ ಉತ್ತರಾಧಿಕಾರಿಯಾಗಿ ತನ್ನ ಸಹೋದರ, ಅಚ್ಯುತರಾಯ ನಾಮನಿರ್ದೇಶನಗೊಂಡಿರುತ್ತಾರೆ. ಕೃಷ್ಣದೇವರಾಯರ ಆಳ್ವಿಕೆಯ ಕಾಲ ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ಒಂದು ಅಮೋಘ ಅಧ್ಯಾಯವಾಗಿ ಉಳಿದಿದೆ. ಉಲ್ಲೇಖ ವರ್ಗ:ಅರಸರು ವರ್ಗ:ಕರ್ನಾಟಕದ ಇತಿಹಾಸ ವರ್ಗ:ವಿಜಯನಗರ ಸಾಮ್ರಾಜ್ಯ
ಕೆ ಆರ್ ಎಸ್
https://kn.wikipedia.org/wiki/ಕೆ_ಆರ್_ಎಸ್
REDIRECT ಕೃಷ್ಣರಾಜಸಾಗರ
ಕೃಷ್ಣರಾಜಸಾಗರ
https://kn.wikipedia.org/wiki/ಕೃಷ್ಣರಾಜಸಾಗರ
thumb|right|ರಾತ್ರಿಯಲ್ಲಿ ಬೃಂದಾವನ ಕಾರಂಜಿ thumb|ಬೃಂದಾವನ ಉದ್ಯಾನ thumb|ಬೃಂದಾವನ ಉದ್ಯಾನದಲ್ಲಿ ಕಾರಂಜಿ thumb|right|ಬೃಂದಾವನ ಉದ್ಯಾನವನ, ಮಂಡ್ಯ ಕೃಷ್ಣರಾಜಸಾಗರ ಮೈಸೂರಿನ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಈ ಅಣೆಕಟ್ಟಿನ ಜೊತೆಗೇ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮವಾದ ಪ್ರವಾಸಿ ಆಕರ್ಷಣೆ. ಕಣ್ವಪುರ ಕನ್ನಂಬಾಡಿಯಾಗಿದ್ದು ಹೇಗೆ ಕನ್ನಂಬಾಡಿ ಎನ್ನುವುದು ಕಾವೇರಿನದಿ ತೀರದ ಒಂದು ಗ್ರಾಮ. ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರು ಎಂಬ ಐತಿಹ್ಯವಿದೆ. ಕಣ್ವರಿಂದಾಗಿಯೇ ಈ ಗ್ರಾಮಕ್ಕೆ ಕಣ್ವಪುರಿ, ಕಣ್ಣಂಬಾಡಿ, ಕನ್ನಂಬಾಡಿ ಎಂಬ ಹೆಸರು ಬಂತು ಎನ್ನಲಾಗುತ್ತದೆ. ಈ ಕನ್ನಂಬಾಡಿಯನ್ನು ದೊಡ್ಡಯ್ಯ ಪ್ರಭು ಎಂಬ ಪಾಳೇಗಾರ ಆಳುತ್ತಿದ್ದನು. ಕ್ರಿ.ಶ.೧೬೦೦ ರಲ್ಲಿ ಮೈಸೂರು ದೊರೆ ರಾಜ ಒಡೆಯರ್ ಅವರು ಇದನ್ನು ಗೆದ್ದುಕೊಂಡರು. ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ನಿರ್ಮಾಣವಾಗಿದ್ದು ಕಾವೇರಿ ನದಿಗೆ. ಚೋಳ ಸಾಮ್ರಾಜ್ಯದ ಕರಿಕಾಲ ಚೋಳ ಎಂಬ ಅರಸು ಪ್ರಥಮ ಬಾರಿಗೆ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿದ. ಕ್ರಿ.ಶ. ೧೦೬೮ ರಲ್ಲಿ ತಮಿಳುನಾಡಿನ ಕಲ್ಲಣೈ ಎಂಬಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟೆ ನಿರ್ಮಿಸಿದ ಎಂದು ಇತಿಹಾಸ ಹೇಳುತ್ತದೆ. ಅಣೆಕಟ್ಟು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಇದನ್ನು ಸ್ವತಂತ್ರ ಪೂರ್ವದಲ್ಲಿ ನಿರ್ಮಿಸಲಾಯಿತು ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು. ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು. ಕೃಷ್ಣರಾಜ ಸಾಗರಕ್ಕೆ ಮೂರು ಪ್ರಮುಖ ನಾಲೆಗಳಿವೆ. ಅದರಲ್ಲಿ ಮುಖ್ಯವಾಗಿದ್ದು ವಿಶ್ವೇಶ್ವರಯ್ಯ ನಾಲೆ ೪೫ ಕಿ.ಮೀ.ನಷ್ಟಿದೆ. ೩೨ ಕಿ.ಮೀ.ಗಳ ಬಲದಂಡೆ ಮತ್ತು ೨೧ ಕಿ.ಮೀ.ನ ಎಡದಂಡೆ ನಾಲೆ ಇದೆ. ೧೨೪ ಅಡಿ ನೀರು ನಿಲ್ಲಿಸಲು ೧೩೦ ಅಡಿ ಎತ್ತರದ ಅಣೆಕಟ್ಟು ನಿರ್ಮಿಸಲಾಗಿದೆ. ಇಷ್ಟೊಂದು ಎತ್ತರದ ಅಣೆಕಟ್ಟಿಗಾಗಿ ೧೧೧ ಅಡಿ ಆಳದಲ್ಲಿ ತಳಪಾಯ ಹಾಕಲಾಗಿದೆ. ಅಂದರೆ ಈ ಅಣೆಕಟ್ಟು ೪೧೦೦ ಚದರ ಮೈಲಿಯಷ್ಟು ಜಲಾನಯನ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಬೃಂದಾವನ ಉದ್ಯಾನವನ ಬೃಂದಾವನ ಉದ್ಯಾನವನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಹೊಂದಿಕೊಂಡಂತೆ ಕಟ್ಟಲಾದ ಸುಂದರ ಉದ್ಯಾನ. ಇದರ ತುಂಬ ಆಕರ್ಷಕವಾದ ನೀರಿನ ಕಾರಂಜಿಗಳಿವೆ. ಇಲ್ಲಿನ ಪ್ರಸಿದ್ಧ ಸಂಗೀತ ಕಾರಂಜಿ ಪ್ರವಾಸಿಗಳನ್ನು ಅನೇಕ ದಶಕಗಳಿಂದ ಆಕರ್ಷಿಸಿದೆ. ಇದಲ್ಲದೆ ಅನೇಕ ಜೀವಶಾಸ್ತ ಸಂಶೋಧನಾ ಇಲಾಖೆಗಳು ಇಲ್ಲಿಯೇ ಕೆಲಸ ನಡೆಸುತ್ತವೆ. ಪ್ರವಾಸಿಗಳಿಗೆ ಒಂದು ತಂಗುದಾಣವನ್ನು ಬೃಂದಾವನ ಉದ್ಯಾನದಲ್ಲಿ ಕಟ್ಟಿಸಲಾಗಿದೆ. ಹೀಗೆ ಬೃಹದಾಕಾರವಾಗಿ ಬೆಳೆದು ನಿಂತ ಕನ್ನಂಬಾಡಿ ಕಟ್ಟೆ ೧.೨೫ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಿದೆ. ಬರಡಾಗಬೇಕಾಗ್ದಿದ ಈ ಪ್ರದೇಶದ್ಲಲಿ ಹಸಿರು ನಳನಳಿಸುವಂತೆ ಮಾಡಿದೆ. ಈ ಅಣೆಕಟ್ಟು ಲಕ್ಷಾಂತರ ರೈತರ ಪಾಲಿಗೆ ದೇವತೆಯಾದರೂ ಪ್ರವಾಸಿಗರು ಮಾತ್ರ ಇಲ್ಲಿಗೆ ಬರತೊಡಗಿದ್ದು ಇಲ್ಲಿ ಬೃಂದಾವನ ಉದ್ಯಾನ ನಿರ್ಮಾಣವಾದ ಮೇಲೆ. ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸಾದ ಬೃಂದಾವನದ ಸಂಗೀತ ಕಾರಂಜಿ, ವಿವಿಧ ಕಾರಂಜಿಗಳು, ವಿದ್ಯುದೀಪಾಲಂಕಾರದ ಬೆಳಕಿನ್ಲಲಿ ಕಣ್ಮನ ಸೆಲೆಯುತ್ತವೆ. ಮೈಸೂರಿಗೆ ಬಂದವರೆಲ್ಲರು ಕೃಷ್ಣರಾಜ ಸಾಗರಕ್ಕೆ ಹೋಗಲೇ ಬೇಕು ಎನ್ನುವ ವಾತಾವರಣವನ್ನು ಸೃಷ್ಟಿಸಿದೆ. ೭೫ರ ಹರೆಯದ ಕನ್ನಂಬಾಡಿ ಕಟ್ಟೆ ನಮ್ಮ ರಾಜ್ಯದ ಹಾಗೂ ದೇಶದ ಇತರ ಅಣೆಕಟ್ಟುಗಳು ನಾಚುವಂತೆ ಎದೆಯುಬ್ಬಿಸಿ ನಿಂತಿದೆ. ಚರಿತ್ರೆ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನವನ್ನು ಕಟ್ಟುವ ಯೋಜನೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಆರಂಭವಾದದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಅಣೆಕಟ್ಟೆಯ ಕೆಲಸವನ್ನು ಪೂರ್ತಿಗೊಳಿಸಿದರು. ಅಣೆಕಟ್ಟನ್ನು ೧೯೩೨ ರಲ್ಲಿ ಕಟ್ಟಿ ಮುಗಿಸ ಲಾಯಿತು. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಮುಂತಾದ ಪ್ರಾಂತ್ಯಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಇರುವ ಕಾಲದಲ್ಲಿ ಹಸಿರು ಎನ್ನುವುದು ಇಲ್ಲಿ ಮರೀಚಿಕೆಯಾದ ಸಂದರ್ಭ ರೂಪುಗೊಂಡಿದ್ದು ಈ ಮಹಾನ್ ಯೋಜನೆ. ಅದನ್ನು ಸಾಕಾರಗೊಳಿಸಲು ಮುಖ್ಯ ಇಂಜಿನಿಯರ್ ಮ್ಯಾಕ್ ಹಚ್, ಕ್ಯಾ.ಡೇವಿಸ್, ಸರ್ ಎಂ.ವಿಶ್ವೇಶ್ವರಯ್ಯ, ಸರ್ದಾರ್ ಎಂ.ಕಾಂತರಾಜ ಅರಸ್, ಆಲ್ಬಿಯನ್ ರಾಜಕುಮಾರ್ ಬ್ಯಾನರ್ಜಿ, ಎಂ.ಇಸ್ಮಾಯಿಲ್, ಕರ್ಪೂರ ಶ್ರೀನಿವಾಸರಾವ್, ಕೆ.ಕೃಷ್ಣ ಅಯ್ಯಂಗಾರ್, ಬಿ.ಸುಬ್ಬಾರಾವ್,ಸಿ.ಕಡಾಂಬಿ, ಜಾನ್ ಬೋರ್, ಕೆ.ಆರ್.ಶೇಷಾಚಾರ್, ಎಚ್.ಪಿ.ಗಿಬ್ಸ್ ಮುಂತಾದವರು ಶ್ರಮಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣರಾಜ ಸಾಗರ ನಿಮಾ೯ಣದಲ್ಲಿ ದುಡಿದ ೧೦ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಮಿಕರು ಹಾಗೂ ಮುಳುಗಡೆಯಲ್ಲಿ ತಮ್ಮ ಆಸ್ತಿ ಪಾಸ್ತಿ ಕಳೆದುಕೊಂಡ ಜನರು ಸ್ಮರಣೀಯರು. ಯೋಜನೆಯ ಹಂತಗಳು ಮುಂಬೈಯಲಿ ಎಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೦೯ ರಲ್ಲಿ ಮೈಸೂರಿಗೆ ಕರೆಸಿಕೊಂಡರು. ಅಷ್ಟರಲ್ಲಾಗಲೆ ಕೃಷ್ಣರಾಜ ಸಾಗರ ಅರ್ಥಾತ್ ಕನ್ನಂಬಾಡಿ ಕಟ್ಟೆಯ ಕೆಲಸ ಶುರುವಾಗಿ ಮೂರು ವರ್ಷವಾಗಿತ್ತು. ವಿಶ್ವೇಶ್ವರಯ್ಯ ಅವರು ಬರುವುದಕ್ಕಿಂತ ಮೊದಲು ಇಂಜಿನಿಯರ್ ಆಗಿದ್ದ ಕ್ಯಾ.ಡೇವಿಸ್ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಬಂದರು . ಇದರ ಪ್ರಕಾರ ಮೈಸೂರಿನಿಂದ ೧೨ ಮೈಲಿ ಮತ್ತು ಶ್ರೀರಂಗಪಟ್ಟಣದಿಂದ ೯ ಮೈಲಿ ದೂರದಲ್ಲಿರುವ ಕನ್ನಂಬಾಡಿಯಲ್ಲಿ ಜಲಾಶಯ ನಿರ್ಮಿಸಲು ಯೋಜಿಸಲಾಯಿತು. ಈ ಯೋಜನೆಯಿಂದ ೨೫ ಹಳ್ಳಿಗಳು, ೯೨೫೦ ಎಕರೆ ನೀರಾವರಿ ಪ್ರದೇಶ, ೧೩,೨೯೩ ಎಕರೆ ಖುಷ್ಕಿ ಪ್ರದೇಶ, ೮೫೦೦ ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಗುತ್ತದೆ ಎಂದು ಅಂದಾಜಿಸಲಾಯಿತು. ಮೊದಲ ಹಂತಕ್ಕೆ ೯೫ ಲಕ್ಷ ರೂಪಾಯಿ ಬೇಕು ಎಂದು ಅಂದಾಜಿಸಲಾಗಿತ್ತು. ೯೭ ಅಡಿ ಎತ್ತರದ ಅಣೆಕಟ್ಟು ಕಟ್ಟಿ ೮೦ ಅಡಿ ನೀರು ನಿಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ ಅಪಾರ ಪ್ರಮಾಣದ ಹಣ ವ್ಯಯವಾಗುವುದು ಹಾಗೂ ಮದ್ರಾಸ್ ಸರ್ಕಾರದ ಆಕ್ಷೇಪದಿಂದಾಗಿ ಈ ಯೋಜನೆಯ ಬಗ್ಗೆ ಆಗಿನ ದಿವಾನರಾಗಿದ್ದ ಟಿ.ಆನಂದರಾಯರು ಹೆಚ್ಚಿನ ಗಮನ ಕೊಡಲಿಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಣೆಕಟ್ಟಯ ಕೆಲಸಕ್ಕೆ ವೇಗವನ್ನು ನೀಡಲು ವಿಶ್ವೇಶ್ವರಯ್ಯ ಅವರನ್ನು ಕರೆಸಿಕೊಂಡು ಸಮಾಲೋಚನೆ ನಡೆಸಿ ಯೋಜನೆಯನ್ನು ಮುಂದುವರೆಸಿದರು. ತಮ್ಮ ಬಳಿ ಇದ್ದ ನಾಲ್ಕು ಮೂಟೆ ಚಿನ್ನದ ಆಭರಣ, ಬೆಳ್ಳಿ ನಾಣ್ಯಗಳನ್ನು ಮಾರಾಟ ಮಾಡಿ ೮೦ ಲಕ್ಷ ರೂಪಾಯಿ ಒದಗಿಸುವುದರೊಂದಿಗೆ೧೯೧೧ ಅಣೆಕಟ್ಟೆಯ ಯೋಜನೆ ಯಶಸ್ವಿಯಾಗಿ ಮುಂದುವರೆಯಿತು. ಮೂರು ಹಂತದ ಯೋಜನೆ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು. ಮೊದಲ ಹಂತದಲ್ಲಿ ಕಟ್ಟೆ ನಿರ್ಮಾಣ,ಎರಡನೇ ಹಂತದಲ್ಲಿ ಕಾಲುವೆ ನಿರ್ಮಾಣ, ಮೂರನೇ ಹಂತದಲ್ಲಿ ಜಲ ವಿದ್ಯುತ್ ಘಟಕ ಸ್ಥಾಪನೆ. ಸುಮಾರು ೧೦ ಸಾವಿರ ಕಾರ್ಮಿಕರು ನಿರಂತರ ದುಡಿದ ಕಾರಣ ೧೯೧೫ರಲ್ಲಿ ೬೫ ಅಡಿ ಕಟ್ಟೆ ನಿರ್ಮಿಸಲಾಯಿತು. ೧೯೧೯ರಲ್ಲಿ ೧೦೭ ಅಡಿ ಕಟ್ಟೆ ನಿರ್ಮಾಣವಾಯಿತು. ಅಲ್ಲಿಯವರೆಗೆ ಸುಮಾರು ೧೫೫ ಲಕ್ಷ ರೂಪಾಯಿ ವೆಚ್ಚವಾಗಿತ್ತು. ಮೊದಲ ಹಂತದ ಯೋಜನೆ ಮುಗಿದಿದ್ದು ೧೯೨೧ರಲ್ಲಿ. ಆ ವೇಳೆಗಾಗಲೇ ೨೧೧ ಲಕ್ಷ ರೂಪಾಯಿ ಖರ್ಚಾಗಿತ್ತು. ೧೯೨೪ ರಲ್ಲಿ ಕಟ್ಟೆಯ ಜೊತೆಗೇ ಕಾಲುವೆ ನಿರ್ಮಾಣ ಕಾರ್ಯ ಕೂಡ ಆರಂಭವಾಯಿತು. ೧೯೨೮ ರಲ್ಲಿ ಯೋಜಿಸಿದಂತೆ ಅಣೆಕಟ್ಟೆಯ ಎತ್ತರ ೧೩೦ ಅಡಿಗೆ ಮುಟ್ಟಿತು.೧೯೧೧ರಲ್ಲಿ ಆರಂಭಿಸಿದ ಕಾಮಗಾರಿ ೧೯೩೨ರಲ್ಲಿ ಮುಕ್ತಾಯವಾದಾಗ ಒಟ್ಟು ಖರ್ಚಾದ ಹಣ ೩ ಕೋಟಿ, ೨೩ ಲಕ್ಷ ೪೭ ಸಾವಿರ ರೂಪಾಯಿಗಳು. ಸಮುದ್ರಮಟ್ಟದಿಂದ ೨೩೪೪ ಅಡಿ ಎತ್ತರದಲ್ಲಿರುವ ಈ ಅಣೆಕಟ್ಟೆಯಲ್ಲಿ ೪೮.೩೩ ಟಿ‌ಎಂಸಿ ನೀರನ್ನು ಸಂಗ್ರಹಿಸಬಹುದು. ೮೬೦೦ ಅಡಿ ಉದ್ದದ ಈ ಕಟ್ಟೆ ತಳಪಾಯದಿಂದ ೧೪೦ ಅಡಿ ಎತ್ತರದಲ್ಲಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ೧೪.೫ ಅಡಿ ಅಗಲದ ರಸ್ತೆ ಇದು ಹಿನ್ನೀರಿನ ಸರಾಸರಿ ಉದ್ದ ೨೫ ಮೈಲಿ. ಅಗಲ ೫ ಮೈಲಿ. ಮದ್ರಾಸ್ ಸರ್ಕಾರದ ಕಿರಿಕಿರಿಯನ್ನು ಸಹಿಸಿಕೊಂಡು ಧೈರ್ಯ ಮಾಡಿ ಅಂದು ಈ ಕಟ್ಟೆಯನ್ನು ಕಟ್ಟದೇ ಹೋಗಿದ್ದರೆ ಹಳೆ ಮೈಸೂರು ಪ್ರಾಂತ್ಯ ಈಗಲೂ ಕುಗ್ರಾಮಗಳಿಂದಲೇ ತುಂಬಿರುತ್ತಿತ್ತು. ಊರುಗಳ ಮುಳುಗಡೆ ಕೃಷ್ಣರಾಜ ಸಾಗರ ಜಲಾಶಯ ಕಟ್ಟಿದ್ದರಿಂದ 13,923 ಎಕರೆ ಖುಷ್ಕಿ ಭೂಮಿ, 9,520 ಎಕರೆ ತರೀ ಭೂಮಿ ಹಾಗೂ 8,500 ಎಕರೆ ಸರ್ಕಾರಿ ಭೂಮಿ ಮುಳುಗಡೆಯಾಯಿತು. 25 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾದವು. ಇದರಿಂದ 15 ಸಾವಿರ ಮಂದಿ ನಿರ್ವಸತಿಗರಾದರು. ಸಂತ್ರಸ್ತರಿಗೆ ಮೈಸೂರು ಸರ್ಕಾರವು ಮನೆ ನಿರ್ಮಿಸಿಕೊಳ್ಳಲು ಮುಫತ್ತಾಗಿ ನಿವೇಶನ ಒದಗಿಸಿತಲ್ಲದೆ ರಸ್ತೆ, ಬಾವಿ, ಪಾಠಶಾಲೆ, ಮಂದಿರಗಳನ್ನು ಕಟ್ಟಿಸಿಕೊಡಲಾಯಿತು. ಸಮಸ್ಯೆ ಈ ಅಣೆಕಟ್ಟೆ ನಿರ್ಮಾಣ ಕಾಮಗಾರಿ 1906ರಲ್ಲಿ ಆರಂಭವಾಯಿತಾದರೂ ನೀರಿನ ಹಂಚಿಕೆ ವಿಷಯದಲ್ಲಿ ಮೈಸೂರು ಮತ್ತು ಮದರಾಸು ಸರ್ಕಾರಗಳ ನಡುವೆ ವಿವಾದ ಉಂಟಾಗಿ ಕಾಮಗಾರಿಗೆ ತೊಡಕಾಗಿತ್ತು. 1924ರ ಅಖೈರು ಒಪ್ಪಂದದೊಡನೆ ವಿವಾದ ಬಗೆಹರಿದು ಕಾಮಗಾರಿ ಪುನಾರಂಭಗೊಂಡಿತು. 1924ರಲ್ಲಿ ಮದರಾಸು ಮತ್ತು ಮೈಸೂರು ಸರ್ಕಾರಗಳ ನಡುವೆ ನಡೆದ ಕಾವೇರಿ ನದಿ ನೀರು ಹಂಚಿಕೆ ಒಪ್ಪಂದದ ಪ್ರಕಾರ ಪ್ರತಿ ವರ್ಷ ಮೇ ತಿಂಗಳ 28ನೇ ತಾರೀಖಿನಿಂದ ಅದರ ಮುಂದಿನ ಜನವರಿ 27ರವರೆಗೆ ಪ್ರತಿ ದಿನ ಜಲಾಶಯಕ್ಕೆ ಬರುವ ನೀರಿನಲ್ಲಿ ದಿನವಹಿ ಫಲಾನಾ ಪರಿಮಾಣವೆಂದು ಗೊತ್ತಾಗಿರುವಷ್ಟು ಜಲಾಶಯದಿಂದ ಹರಿದು ಹೋಗಲು ಅವಕಾಶ ಮಾಡಿಕೊಟ್ಟು ಹೆಚ್ಚಾಗಿ ಬಂದ ನೀರನ್ನು ಜಲಾಶಯದಲ್ಲಿ ಶೇಖರಿಸಿಟ್ಟುಕೊಳ್ಳುವ ತೀರ್ಮಾನವಾಯಿತು. ಆದರೆ ಅದೇ ವರ್ಷ ನದಿಯಲ್ಲಿ ಭಾರಿ ಪ್ರವಾಹ ಬಂದು ಕೆಲವು ವಾರಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತ್ತು.[೨] ನೀರಾವರಿ ಉತ್ತರ ದಡದ ಮೇಲ್ಮಟ್ಟದ ನಾಲೆಗೆ ಜಲಾಶಯದಿಂದ ನೀರು ಹರಿಯಬಿಡಲು ನದಿ ಮಟ್ಟದಿಂದ 60 ಅಡಿ ಎತ್ತರದಲ್ಲಿ 6 ಅಡಿ ಅಗಲ, 12 ಅಡಿ ಎತ್ತರವುಳ್ಳ ಮೂರು ತೂಬುಗಳನ್ನು ಅಳವಡಿಸಲಾಗಿದ್ದು, 1.20ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸುವಂತೆ ಯೋಜಿಸಲಾಗಿದ್ದು, ಈಗ ಅದರ ವಿಸ್ತಾರ ಹೆಚ್ಚಿದೆ. ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲೇ ದೊಡ್ಡದಾದ, ಆರಂಭದಲ್ಲಿ ‘ಆರ್ವಿನ್‌ ನಾಲೆ’ ಎಂದು ಕರೆಯಲಾಗುತ್ತಿದ್ದ ಈ ನಾಲೆಗೆ ನಂತರ ‘ವಿಶ್ವೇಶ್ವರಯ್ಯ ನಾಲೆ’ ಎಂದು ನಾಮಕರಣ ಮಾಡಲಾಗಿದೆ. ದಿವಾನ್‌ ಬಹದ್ದೂರ್‌ ಕೆ.ಆರ್‌. ಶೇಷಾಚಾರ್ಯ ಈ ನಾಲೆಯ ಯೋಜನೆ ರೂಪಿಸಿದ್ದು, ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷಿ ಭೂಮಿಗೆ ನೀರುಣಿಸುತ್ತದೆ. ಎಡದಂಡೆ ನಾಲೆ 1,500 ಹಾಗೂ ಬಲದಂಡೆ ನಾಲೆ 3,500 ಎಕರೆಗೆ ನೀರು ಒದಗಿಸುತ್ತವೆ. ಅಣೆಕಟ್ಟೆ ನಿರ್ಮಾಣಕ್ಕೆ ರೂ. 2.5 ಕೋಟಿ ಹಾಗೂ ಬಲದಂಡೆ (ಸರ್‌.ಎಂ. ವಿಶ್ವೇಶ್ವರಯ್ಯ) ಮತ್ತು ಎಡದಂಡೆ ನಾಲಾ ಕಾಮಗಾರಿಗಳಿಗೆ ಒಟ್ಟು ರೂ. 1.6 ಕೋಟಿ ಹಣವನ್ನು ಮೈಸೂರು ಸರ್ಕಾರ ಖರ್ಚು ಮಾಡಿದೆ.[೨] ವಿವಿಧ ತೂಬುಗಳು ಜಲಾಶಯದ ಬೇರೆ ಬೇರೆ ಮಟ್ಟದಲ್ಲಿ ವಿವಿಧ ಅಳತೆಯ ಒಟ್ಟು 171 ತೂಬುಗಳನ್ನು ಅಳವಡಿಸಲಾಗಿದೆ. ಪ್ರವಾಹದ ನೀರು ಹೊರ ಹರಿಯಲು, ಕೆಸರು ಕೊಚ್ಚಿ ಹೋಗುವಂತೆ ಮಾಡಲು ಹಾಗೂ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ನೀರು ಹರಿಸಲು ಪ್ರತ್ಯೇಕ ತೂಬುಗಳನ್ನು ಅಳವಡಿಸಲಾಗಿದೆ. ದಕ್ಷಿಣ ದ್ವಾರದ ಆಚೆಗೆ 8 ಅಡಿ ಅಗಲ7 ಮತ್ತು 12 ಅಡಿ ಎತ್ತರ ಇರುವ 40 ತೂಬುಗಳಿವೆ. ನೆಲಮಟ್ಟದಿಂದ 106 ಅಡಿ ಎತ್ತರದಲ್ಲಿ ಈ ತೂಬುಗಳನ್ನು ಅಳವಡಿಸಲಾಗಿದೆ. ಈ ತೂಬುಗಳ ಆಚೆಗೆ 10 ಅಡಿ ಅಗಲ ಮತ್ತು 8 ಅಡಿ ಎತ್ತರದ 48 ತೂಬುಗಳಿದ್ದು, ನದಿ ಪಾತ್ರದ 103 ಅಡಿಗಳ ಮಟ್ಟದಲ್ಲಿ ಇವುಗಳನ್ನು ಇಡಲಾಗಿದೆ. ಈ ತೂಬು ಬಾಗಿಲುಗಳ ಮೇಲೆ 10 ಅಡಿ ಅಗಲ ಮತ್ತು 10 ಅಡಿ ಎತ್ತರದ 48 ತೂಬುಗಂಡಿಗಳಿವೆ. ನೆಲಮಟ್ಟದಿಂದ 114 ಅಡಿಗಳ ಎತ್ತರದಲ್ಲಿರುವ ಈ ತೂಬುಗಂಡಿಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಜೋಡಿಸಲಾಗಿದೆ. ಈ ತಂತ್ರಜ್ಞಾನಕ್ಕೆ ಸರ್‌.ಎಂ. ವಿಶ್ವೇಶ್ವರಯ್ಯ ಅವರು ಹಕ್ಕುಸ್ವಾಮ್ಯ ಪಡೆದಿದ್ದರು. ಜಲಾಶಯದ ಮಟ್ಟ 124 ಅಡಿಗೆ ಮುಟ್ಟುತ್ತಿದ್ದಂತೆ ಇವು ತಾವಾಗಿಯೇ ತೆರೆದುಕೊಳ್ಳುತ್ತವೆ. ಈ ತೂಬುಗಳ ಜತೆಗೆ 80 ಅಡಿ ಎತ್ತರದಲ್ಲಿ 10 ಅಡಿ ಅಗಲ ಮತ್ತು 20 ಅಡಿ ಎತ್ತರವಿರುವ 16 ತೂಬುಗಳಿವೆ. ಇವುಗಳಲ್ಲದೆ ಅಣೆಕಟ್ಟೆಯ ಮಧ್ಯಭಾಗದಲ್ಲಿ 6 ಅಡಿ ಅಗಲ ಮತ್ತು 15 ಅಡಿ ಎತ್ತರದ 11 ತೂಬುಗಳಿದ್ದು, ಕ್ರ್ಯಾಬ್‌ವಿಂಚ್‌ ಸಾಧನ ಬಳಸಿ ಮೇಲಕ್ಕೇರಿಸುವ ಮತ್ತು ಕೆಳಕ್ಕೆ ಇಳಿಸುವ ಮೂಲಕ ಜಲಾಶಯದ ಕೆಸರನ್ನು ಹೊರ ಹಾಕಬಹುದಾಗಿದೆ. ಜಲಾಶಯದ ಈ ಎಲ್ಲ ತೂಬುಗಳನ್ನು ಒಮ್ಮೆಲೇ ತೆರೆದರೆ 3.50 ಲಕ್ಷ ಕ್ಯೂಸೆಕ್‌ (ಒಂದು ಸೆಕೆಂಡ್‌ಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್‌ ಆಗುತ್ತದೆ) ಹೊರ ಹರಿಯುತ್ತದೆ. 80 ಅಡಿ ಮಟ್ಟದ 31 ತೂಬುಗಳ ಬಾಗಿಲುಗಳು ಇಂಗ್ಲೆಂಡ್‌ನ ರಾನ್‌ಸಮ್ಸ ಕಂಪೆನಿಯಿಂದಲೂ, ಉಳಿದ ತೂಬುಗಳ ಬಾಗಿಲುಗಳು ಭದ್ರಾವತಿಯ ಕಬ್ಬಿಣದ ಕಾರ್ಖಾನೆಯಲ್ಲಿ ಬೀಡು ಕಬ್ಬಿಣದಿಂದಲೂ ತಯಾರಿಸಲಾಗಿದೆ.[೨] ಕೆ.ಆರ್.ಎಸ್.ಅಣೆಕಟ್ಟೆಯ ವಿವರ ವಿಷಯ ವಿವರ[೨]ಅಣೆಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು 1906 ಕಾಮಗಾರಿ ಪ್ರಾರಂಭ 1906 ಕಾಮಗಾರಿ ಪೂರ್ಣಗೊಂಡಿದ್ದು 1932 ಜಲಾನಯನ ಪ್ರದೇಶದ ವಿಸ್ತೀರ್ಣ 14100ಮೈಲಿಗಳು ಅಣೆಕಟ್ಟೆ ಬಳಿನದಿಯ ಅಗಲ 910ಅಡಿಗಳು ಅಣೆಕಟ್ಟೆ ಏರಿಯ ಉದ್ದ 8800 ಅಡಿಗಳು ಅಣೆಕಟ್ಟೆಯ ಪರಮಾವಧಿ ಎತ್ತರ 140 ಅಡಿಗಳು ಅಣೆಕಟ್ಟೆಯ ತಳಪಾಯದ ಅಗಲ 111 ಅಡಿಗಳು ಜಲಾಶಯದ ಆಳ 124 ಅಡಿಗಳು.ಜಲಾಶಯದ ನೀರು ಹರವಿನ ವಿಸ್ತೀರ್ಣ 124 ಅಡಿಗಳುಗರಿಷ್ಟ ಮಟ್ಟದಲ್ಲಿ ನೀರು ನಿಲ್ಲುವ ಉದ್ದ 25 ಮೈಲಿಗಳುಜಲಾಶಯದ ನೀರುಸಂಗ್ರಹ ಸಾಮರ್ಥೈ4,83,350ಲಕ್ಷ ಘನ ಅಡಿಗಳು ಬಾಹ್ಯ ಸಂಪರ್ಕಗಳು ೧. ಮಾಹಿತಿ ನೆರವು ಪ್ರಜಾವಾಣಿ, ಲೇಖಕರು : ರವೀಂದ್ರ ಭಟ್ಟ ೨.ಮಾಹಿತಿ ನೆರವು ಪ್ರಜಾವಾಣಿ.೧೦-೨-೨೦೧೫ ಕೃಷ್ಣರಾಜಸಾಗರ ಶತಮಾನದ ನಾಲೆಯಲಿ ಉಕ್ಕುತಿದೆ ನೀರು...(ಚಿಕ್ಕದೇವರಾಯ ಸಾಗರ ನಾಲೆ) ತುಂಗಭದ್ರಾ ಅಣೆಕಟ್ಟು ಉಲ್ಲೇಖ ವರ್ಗ:ಭೂಗೋಳ ವರ್ಗ:ಪ್ರವಾಸೋದ್ಯಮ ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಕರ್ನಾಟಕದ ಅಣೆಕಟ್ಟುಗಳು ವರ್ಗ:ಜಲಾಶಯಗಳು
ಮೈಸೂರು ಮಹಾರಾಜರು
https://kn.wikipedia.org/wiki/ಮೈಸೂರು_ಮಹಾರಾಜರು
REDIRECT ಒಡೆಯರ್
ಒಡೆಯರ್
https://kn.wikipedia.org/wiki/ಒಡೆಯರ್
thumb|Mysore Palace is the traditional seat of the Wadiyar thumb|HH Sri Chamarajendra Wadiyar X thumb|Chamarajendra Wadiyar X with his children thumb|Marriage of H.H Sri Krishnaraja Wadiyar IV and Rana Prathap Kumari of Kathiawar thumb|Maharani Vani Vilasa with grandson Jayachamarajendra Wadiyar thumb|Jayachamrajendra Wadiyar with Elizabeth II thumb|Srikanta Wadiyar thumb|Gold pagoda of Krishnaraja Wadiyar III (1799-1868). The coin depicts Siva seated, holding his attributes of a trident and a deer, with his consort Parvati seated on his lap. The reverse reads: Sri Krishnaraja ಒಡೆಯರ್ ವಂಶ ೧೩೯೯ ರಿಂದ ೧೯೪೭ ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯಕ್ಕೆ ಮೈಸೂರು ಸಂಸ್ಥಾನ ಸೇರಿದ ನಂತರ ಒಡೆಯರ್ ವಂಶದ ಆಡಳಿತ ಕೊನೆಗೊಂಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ. ಒಡೆಯರ್ ದೊರೆಗಳು ಯದುವಂಶ ಅಥವಾ ಯಾದವ ವಂಶಕ್ಕೆ ಸೇರಿದವರು. ಪ್ರಾಥಮಿಕ ಚರಿತ್ರೆ ಒಡೆಯರ್ ವಂಶದ ಸ್ಥಾಪಕ ವಿಜಯ, ದ್ವಾರಕೆಯಿಂದ ಮೈಸೂರಿಗೆ ಬಂದನೆಂದು ಹೇಳಲಾಗುತ್ತದೆ. ವಿಜಯ ನಂತರ ದೇವರಾಯ ಎಂಬ ಹೆಸರನ್ನು ಪಡೆದು ೧೩೯೯ ರಿಂದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಮುಂದಿನ ಎರಡು ಶತಮಾನಗಳ ಕಾಲ ಮೈಸೂರು ಸಂಸ್ಥಾನ ಒಡೆಯರ್ ವಂಶದ ಅನೇಕ ಅರಸರಿಂದ ಆಳಲ್ಪಟ್ಟಿತು. ಆದರೆ ಆಗಿನ ಕಾಲದಲ್ಲಿ ಮೈಸೂರು ಸಂಸ್ಥಾನ ಸ್ವತಂತ್ರ ರಾಜ್ಯವಾಗಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮಂತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಚಿಕ್ಕಮಗಳೂರು ಮೂಲದ ಗಜಪಡೆಯ ಸೇನಾಧಿಪತಿ ಹೂವಾಡಿಗ ಮಲ್ಲಣ್ಣ ನವರು ದೇವರಾಯ ಒಡೆಯರ್ ಅವರಿಗೆ ಸೈನ್ಯ ಬಲವನ್ನು ತುಂಬುವ ಮೂಲಕ ಸಹಾಯಕರಾದರು.ಅದರ ಜೊತೆಗೆ ಅಲಅಮೇಲಮ್ಮನ ಶಾಪವಿತ್ತು. ವಿಸ್ತರಣೆ ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊಂಡಿತು. ಆಗ ಉಂಟಾದ ಅವಕಾಶಗಳ ಲಾಭ ಪಡೆದು ಅಂದಿನ ಮೈಸೂರು ಅರಸನಾದ ರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಹಿಗ್ಗಿಸಿ ೧೫೭೮ ರಿಂದ ೧೬೧೭ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ ಕಾವೇರಿ ನದಿಯ ನಡುವೆ ಇರುವುದರಿಂದ ಶ್ರೀರಂಗಪಟ್ಟಣಕ್ಕೆ ದೊರೆಯವ ನೈಸರ್ಗಿಕ ರಕ್ಷಣೆ. ನಂತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ ರಣಧೀರ ಕಂಠೀರವ ನರಸರಾಜ ಒಡೆಯರ್ (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸಂಸ್ಥಾನ ಚಿಕ್ಕದೇವರಾಜ ಒಡೆಯರ್ (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ಒಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸಂಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಒಡೆಯರ್ ವಂಶ ೧೮ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊಂಡಿತು. ಹೈದರ್ ಅಲಿ ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರಂಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನಂತರ, ಮೈಸೂರಿ ನ ಅರಸರ ಪ್ರಭಾವ ಇಳಿದು ಸರ್ವಾಧಿಕಾರಿಯಾದ. ಹೈದರ್ ಅಲಿ ಸ್ವತಃ ಸಿಂಹಾಸನವನ್ನೇರದಿದ್ದರೂ ರಾಜ್ಯಭಾರದ ಸಂಪೂರ್ಣ ಅಧಿಕಾರ ಆತನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರನ ನಂತರ ಅವನ ಮಗ ಟಿಪ್ಪು ಸುಲ್ತಾನ್ ಸ್ವತಃ ಸಿಂಹಾಸನವನ್ನೇರಿ ೧೭೮೨ ರಿಂದ ೧೭೯೯ ರಲ್ಲಿ ಅವನ ಮರಣದವರೆಗೆ ಮೈಸೂರನ್ನು ಆಳಿದ. ಬ್ರಿಟಿಷ್ ಆಡಳಿತ ೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷರು ಒಡಯರ್ ವಂಶದ ಅರಸರನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು. ೧೯ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಸರು ಪಡೆದಿದೆ. ಅನೇಕ ಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬಂದರು. ಒಡೆಯರ್ ವಂಶದ ಕೊನೆಯ ಮಹಾರಾಜರು ಜಯಚಾಮರಾಜ ಒಡೆಯರ್, ೧೯೪೦ ರಿಂದ ಭಾರತದ ಸ್ವಾತಂತ್ರ್ಯದ ವರೆಗೆ ಇವರ ಆಡಳಿತ ನಡೆಯಿತು. ಒಡೆಯರ್ ವಂಶದ ಅರಸರು ದೇವ ರಾಯ (1399 - 1423). ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459) ತಿಮ್ಮರಾಜ ಒಡೆಯರ್ (1459 - 1479) ಹಿರಿಯ ಚಾಮರಾಜ ಒಡೆಯರ್ (1479 - 1513) ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಇಮ್ಮಡಿ) (1513 - 1553) ಬೋಳ ಚಾಮರಾಜ ಒಡೆಯರ್ (1572 - 1576) ಬೆಟ್ಟದ ಚಾಮರಾಜ ಒಡೆಯರ್ (ಮುಮ್ಮಡಿ) (1576 - 1578) ರಾಜ ಒಡೆಯರ್ (1578 - 1617) ಚಾಮರಾಜ ಒಡೆಯರ್ (1617 - 1637). ಇಮ್ಮಡಿ ರಾಜ ಒಡೆಯರ್ (1637 - 1638) ರಣಧೀರ ಕಂಠೀರವ ನರಸರಾಜ ಒಡೆಯರ್ (1638 - 1659) ದೊಡ್ಡ ದೇವರಾಜ ಒಡೆಯರ್ (1659 - 1673) ಚಿಕ್ಕ ದೇವರಾಜ ಒಡೆಯರ್ (1673 - 1704) ಕಂಠೀರವ ನರಸರಾಜ ಒಡೆಯರ್ (1704 - 1714) ದೊಡ್ಡ ಕೃಷ್ನರಾಜ ಒಡೆಯರ್ (1732 - 1734) ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766) ಬೆಟ್ಟದ ಚಾಮರಾಜ ಒಡೆಯರ್ (1770 - 1776) ಖಾಸಾ ಚಾಮರಾಜ ಒಡೆಯರ್ (1766 - 1796) ಮುಮ್ಮಡಿ ಕೃಷ್ಣರಾಜ ಒಡೆಯರು (1799 - 1868) ಮುಮ್ಮಡಿ ಚಾಮರಾಜ ಒಡೆಯರ್ (1868 - 1895) ನಾಲ್ವಡಿ ಕೃಷ್ಣರಾಜ ಒಡೆಯರು (1895 - 1940) ಜಯಚಾಮರಾಜ ಒಡೆಯರ್ (1940 - 1947) ದತ್ತು ದೊರೆಗಳು ಒಡೆಯರ್ ರಾಜಮನೆತನವು ಹಲವು ಬಾರಿ ದತ್ತು ಮಕ್ಕಳನ್ನು ಸ್ವೀಕರಿಸಿದೆ. ಅದರಲ್ಲಿ ನಾಲ್ಕು ಮಂದಿ ಯದುವಂಶದವರೇ ಆಗಿದ್ದು ಮೂರು ಬಾರಿ ಹೊರಗಿನವರಾಗಿದ್ದಾರೆ. ರಣಧೀರ ಕಂಠೀರವ -1617 ಇಮ್ಮಡಿ ಚಿಕ್ಕದೇವರಾಜ ಒಡೆಯರ್ - 1638 ದೊಡ್ಡಕೃಷ್ಣರಾಜ ಒಡೆಯರ್ -1714 ಮುಮ್ಮಡಿ ಕೃಷ್ಣರಾಜ ಒಡೆಯರ್ (ರಾಣಿ ಲಕ್ಷ್ಮಮ್ಮಣ್ಣಿ ಆಡಳಿತ, ಬೆಟ್ಟದಕೋಟೆ)-1776 ಹತ್ತನೇ ಚಾಮರಾಜ ಒಡೆಯರ್ -1868 ಜಯಚಾಮರಾಜ ಒಡೆಯರ್ -1940 srikantadatta narasimharaja wodeyer- ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್-2015 ಬಾಹ್ಯ ಸಂಪರ್ಕಗಳು The Wodeyars of Mysore (1578 A.D. to 1947 A.D.) History of Mysore Wodeyars Mysore - Imperial City of Karnataka Genealogy of the Wodeyar Dynasty Curse on Wodeyars: Documenting a Legend Curse on Wodeyars: ORAL TRADITIONS -Legend and history Coins of the Wodeyars Sri Kanteerava Narasimharaja Wadiyar The Wodeyar / Wadiyar Dynasty (Official Website of Mysore Palace) ವರ್ಗ:ಇತಿಹಾಸ the two datta king's names joined by itihasa
ರಾಮಕೃಷ್ಣ ಮಿಷನ್
https://kn.wikipedia.org/wiki/ರಾಮಕೃಷ್ಣ_ಮಿಷನ್
thumb ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸ ರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು. ರಾಮಕೃಷ್ಣ ಮಠ (ಬಂಗಾಳಿ: রামকৃষ্ণ মঠ) ಮತ್ತು ರಾಮಕೃಷ್ಣ ಮಿಷನ್ (ಬಂಗಾಳಿ: রামকৃষ্ণ মিশন) ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ. ರಾಮಕೃಷ್ಣ ಮಿಷನ್ ಮೇ 1, 1897 ರಂದು ಶ್ರೀ ರಾಮಕೃಷ್ಣರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಲೋಕೋಪಯೋಗಿ, ಸ್ವಯಂಸೇವಕ ಸಂಸ್ಥೆ. ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ. ಇದರ ಪ್ರಧಾನ ಕಛೇರಿಯ ಅಸ್ತಿತ್ವ ಹೌರಾ ದ ಬೇಲೂರು ಮಠ, ಕೋಲ್ಕತಾ, ಭಾರತದಲ್ಲಿದೆ. ಭಾರತದ ಸನಾತನ ಹಿಂದೂ ಧರ್ಮ ಮತ್ತು ವೇದಾಂತ ಆಧಾರ ಸ್ತಂಭಗಳು. ಮುನ್ನುಡಿ ರಾಮಕೃಷ್ಣ ಮಹಾಸಂಘದ ಕಾರ್ಯಕ್ರಮಗಳನ್ನು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ತನ್ನ ಕಾರ್ಯಭಾರದಲ್ಲಿ ನಿರ್ವಹಿಸುತ್ತದೆ, 19 ನೇ ಶತಮಾನದ ಸಂತರಾದ ಶ್ರೀರಾಮಕೃಷ್ಣ ಪರಮಹಂಸ ರ ಪ್ರಭಾವ ಮತ್ತು ಅವರ ಮುಖ್ಯ ಅನುಯಾಯಿ ಸ್ವಾಮಿ ವಿವೇಕಾನಂದರು ರೂಪಿಸಿದ ಒಂದು ಸಾಮಾಜಿಕ -ಧಾರ್ಮಿಕ ಕ್ಷೇತ್ರದ ಎರಡು ಪ್ರಮುಖ ಸಂಸ್ಥೆಗಳು. [3] ಕರ್ನಾಟಕದಲ್ಲಿ ರಾಮಕೃಷ್ಣ ಮಠ ಕರ್ನಾಟಕದಲ್ಲಿ ರಾಮಕೃಷ್ಣ ಮಠದ ಶಾಖೆಗಳು ಕೆಳಕಂಡಲ್ಲಿವೆ: ಮೈಸೂರು ಆಶ್ರಮವು ಮುಖ್ಯವಾಗಿ ಪುಸ್ತಕ ಪ್ರಕಟಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ೭೫ ವರ್ಷಗಳಿಗೂ ದೀರ್ಘವಾದ ಇತಿಹಾಸವಿರುವ ಈ ಸಂಸ್ಥೆಯು ಕನ್ನಡ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ. ಮಠವು ಬಾಲಕರಿಗಾಗಿ 'ಶ್ರೀರಾಮಕೃಷ್ಣ ವಿದ್ಯಾಶಾಲೆ' ಎಂಬ ಆವಾಸಿಕ ಪದವೀಪೂರ್ವ ಮಧ್ಯಮಿಕ ಶಾಲೆಯನ್ನು ನಡೆಸುತ್ತಿದೆ. 'ವೇದಾಂತ ಕಾಲೇಜು' ಎಂಬ ಪುರುಷರ ಬಿ.ಎಡ್. ಕಾಲೇಜನ್ನೂ ಇದು ನಡೆಸುತ್ತದೆ. ಸುತ್ತಮುತ್ತಲ ಹಳ್ಳಿಗಳಲ್ಲಿ, ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟ, ಹೆಗ್ಗಡದೇವನ ಕೋಟೆ ಮೊದಲಾದ ಸ್ಥಳಗಳಲ್ಲಿ ಗಿರಿಜನ ಕಲ್ಯಾಣಕೇಂದ್ರಗಳನ್ನು ನಡೆಸುತ್ತಿದೆ. 'ವಿವೇಕ ಪ್ರಭ' ಆಶ್ರಮದಿಂದ ಪ್ರಕಟಗೊಳ್ಳುವ ಸಾಂಸ್ಕೃತಿಕ ಮಾಸಪತ್ರಿಕೆ. ಸ್ವಾಮಿ ನಿತ್ಯಸ್ಥಾನಂದರು ಆಶ್ರಮದ ಈಗಿನ ಅಧ್ಯಕ್ಷರು. ರಾಮಕೃಷ್ಣ ಮಿಶನ್, ಬಸವನಗುಡಿ,ಬೆಂಗಳೂರು ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ.ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ. ಬೆಂಗಳೂರು (ಹಲಸೂರು ) ಇದು ಬೆಂಗಳೂರಿನಲ್ಲಿರುವ ಇನ್ನೊಂದು ಆಶ್ರಮ. ಹಲವಾರು ಕಾರ್ಯಾಗಾರಗಳನ್ನು, ಶೀಲಸಂವರ್ಧನಾ ಶಿಬಿರಗಳನ್ನು ಇದು ನಡೆಸುತ್ತಿದೆ. ಬಡಜನರಿಗಾಗಿ ಸಂಚಾರಿ ಅಸ್ಪತ್ರೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ವೀತಭಯಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಪೊನ್ನಂಪೇಟೆ ಕೊಡಗಿನ ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರವಾದ ಆಶ್ರಮ, 'ರಾಮಕೃಷ್ಣ ಸೇವಾಶ್ರಮ' ಎಂಬ ಸುಸಜ್ಜಿತ ಆಧುನಿಕ ಆಸ್ಪತ್ರೆಯ ಮೂಲಕ ಆರೋಗ್ಯಸೇವೆಯನ್ನು ಒದಗಿಸುತ್ತಿದೆ. 'ಬದುಕಲು ಕಲೆಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಅಧ್ಯಕ್ಷರು. ಮಂಗಳೂರು ಅನಾಥಾಶ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ತನ್ನ ಹಾಸ್ಟೆಲ್ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ಪೂರ್ಣಕಾಮಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಬೆಳಗಾವಿ ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ. ರಾಮಕೃಷ್ಣ ಮಿಷನ್ ರಾಮಕೃಷ್ಣ ಮಠವು ಪಕ್ಕಾ ಸಂನ್ಯಾಸ ಸಂಸ್ಥೆಯಾದರೆ, ರಾಮಕೃಷ್ಣ ಮಿಷನ್ ಸನ್ಯಾಸಿಗಳಿಗೂ, ಗೃಹಸ್ಥರಿಗೂ ಮುಕ್ತವಾಗಿ ತೆರೆದುಕೊಂಡ ಸಾರ್ವಜನಿಕ ಸಂಸ್ಥೆಯಾಗಿದೆ . ಶ್ರೀರಾಮಕೃಷ್ಣರಲ್ಲಿ ಮತ್ತು ಸಂದೇಶದಲ್ಲಿ ಶ್ರದ್ಧೆಯುಳ್ಳ ಮತ್ತು ರಾಮಕೃಷ್ಣ ಮಿಷನ್ನಿನ ಅದರ್ಶ ಹಾಗೂ ಚಟುವಟಿಕೆಗಳಲ್ಲಿ ಒಲವು ಉಳ್ಳ ಯಾರು ಬೇಕಾದರೂ ಇದಕ್ಕೆ ಸದಸ್ಯರಾಗಬಹುದು. ಶೈಕ್ಷಣಿಕ, ವೈದ್ಯಕೀಯ ಹಾಗೂ ಇತರ ರೀತಿಯ ಸಂಸ್ಥೆಗಳನ್ನು ನಡೆಸುವುದರಲ್ಲಿ ಸಂನ್ಯಾಸೇತರ ಜನರು ಸಂನ್ಯಾಸಿಗಳಿಗೆ ನೆರವಾಗುತ್ತಾರೆ. ರಾಮಕೃಷ್ಣ ಮಿಷನ್ 1901ರ ಮೇ 4ರಂದು ಒಂದು ಸಂಘವಾಗಿ ನೊಂದಾವಣೆಗೊಂಡಿದ್ದು , ಭಾರತದಾದ್ಯಂತ ಮತ್ತು ಇತರೆ ಕೆಲವು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಆಡಳಿತ ರಾಮಕೃಷ್ಣ ಮಠವು ಆಡಳಿತವನ್ನು ಒಂದು ವಿಶ್ವಸ್ತ ಮಂಡಳಿಯು ನೋಡಿಕೊಳ್ಳುತ್ತದ್ದೆ. ಈ ಮಂಡಳಿಗೆ ಚುನಾಯಿತರಾದ ಅಧ್ಯಕ್ಷರು, ಒಬ್ಬರು ಅಥವಾ ಹೆಚ್ಚು ಮಂದಿ ಉಪಾಧ್ಯಕ್ಷರು, ಒಬ್ಬರು ಮಹಾಕಾರ್ಯದರ್ಶಿಗಳು, ಒಬ್ಬರು ಅಥವಾ ಹೆಚ್ಚು ಮಂದಿ ಸಹಾಯಕ ಕಾರ್ಯದರ್ಶಿಗಳು ಮತ್ತು ಒಬ್ಬರು ಖಜಾಂಚಿ ಇರುತ್ತಾರೆ. ರಾಮಕೃಷ್ಣ ಮಿಷನ್ನಿನ ಆಡಳಿತವನ್ನು ಒಂದು ಆಡಳಿತ ಮಂಡಳಿಯು ನೋಡಿಕೊಳ್ಳುತ್ತದೆ. ಅದರಲ್ಲಿ ರಾಮಕೃಷ್ಣ ಮಠದ ಧರ್ಮದರ್ಶಿಗಳೂ ಇರುತ್ತಾರೆ. ಬೇಲೂರಿನಲ್ಲಿ-ಜನಪ್ರಿಯವಾದ ಹೆಸರು ಬೇಲೂರು ಮಠ-ಇರುವ ರಾಮಕೃಷ್ಣ ಮಠದ ಮುಖ್ಯಸ್ತಾನವೇ ರಾಮಕೃಷ್ಣ ಮಿಷನ್ನಿನ ಮುಖ್ಯಸ್ತಾನವೂ ಹೌದು. ಮಠದ ಅಥವಾ ಮಿಷನ್ನಿನ ಆಡಳಿತಕ್ಕೆ ಸಂಬಂಧಿಸಿದ ಎಲ್ಲ ಪತ್ರಗಳನ್ನೂ ಅವುಗಳ ಮುಖ್ಯ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವ ಮಹಾಕಾರ್ಯದರ್ಶಿಗಳಿಗೆ ಸಂಭೋಧಿಸಿ ಬರೆಯಬೇಕು. ರಾಮಕೃಷ್ಣ ಮಠದ ಶಾಖಾಕೇಂದ್ರದ ಮುಖ್ಯಸ್ಥರನ್ನು ಅಧ್ಯಕ್ಷರೆಂದು ಕರೆಯುತ್ತಾರೆ; ವಿಶ್ವಸ್ತ ಮಂಡಳಿಯು ಅವರನ್ನು ನೇಮಕ ಮಾಡುತ್ತದೆ. ರಾಮಕೃಷ್ಣ ಮಿಷನ್ನಿನ ಆಡಳಿತ ಸಂಸ್ಥೆಯು ನೇಮಿಸುವ ನಿರ್ವಹಣಾ ಸಮಿತಿಯೊಂದು ರಾಮಕೃಷ್ಣ ಮಿಷನ್ನಿನ ಶಾಖಾ ಕೇಂದ್ರವನ್ನು ನೋಡಿಕೊಳ್ಳುತ್ತದೆ. ಈ ಸಮಿತಿಯು ಕಾರ್ಯದರ್ಶಿಗಳು ಆ ಶಾಖೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಾರೆ. ವಿಚಾರಪ್ರಣಾಳಿ ರಾಮಕೃಷ್ನ್ಣ ಮಠದ ಮತ್ತು ಮಿಷನ್ನಿನ ವಿಚಾರಪ್ರಣಾಳಿಯು, ಶ್ರೀರಾಮಕೃಷ್ಣರು ಬದುಕಿ ಬಾಳಿದ ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ವೇದಾಂತದ ಶಾಶ್ವತ ತತ್ತ್ವಗಳನ್ನೊಳಗೊಂಡಿದೆ. ಈ ವಿಚಾರಪ್ರಣಾಳಿಗೆ ಮೂರು ಲಕ್ಷಣಗಳಿವೆ: ವೇದಾಂತದ ಪ್ರಾಚೀನ ತತ್ವಗಳು ಆಧುನಿಕ ಪರಿಭಾಷೆಯಲ್ಲಿ ಅಭಿವ್ಯಕ್ತವಾಗಿವೆ ಎ೦ಬ ಅರ್ಥದಲ್ಲಿ ಅದು ಆಧುನಿಕ; ಅದು ವಿಶ್ವಸಾರ್ವತ್ರಿಕ-ಎಂದರೆ, ಇಡೀ ಮನುಕುಲಕ್ಕೇ ಅದು ಉದ್ದಿಷ್ಟವಾದುದು; ಅದು ವ್ಯಾವಹರಿಕ-ಬದುಕಿನ ಸಮಸ್ಯೆಗಳನ್ನು ಪರಿಹರಿಸಲು ಅದರ ತತ್ತ್ವಗಳನ್ನು ದೈನಂದಿನ ಜೀವನಕ್ಕೆ ಅನ್ವಯಿಸುವುದು ಸಾಧ್ಯ ಎಂಬ ಅರ್ಥದಲ್ಲಿ . ಈ ವಿಚಾರಪ್ರಣಾಳಿಯ ಮೂಲಭೂತ ತತ್ವಗಳನ್ನು ಕೆಳಗೆ ಕೊಟ್ಟಿದೆ: 1 . ಬದುಕಿನ ಅಂತಿಮ ಧ್ಯೇಯ ಭಗವತ್ ಸಾಕ್ಷಾತ್ಕಾರ : ಪ್ರಾಚೀನ ಭಾರತವು ಕಂಡುಕೊಂಡ ಪ್ರಮೂಖ ಆವಿಷ್ಕಾರವೆಂದರೆ-ಬ್ರಹ್ಮ ಎಂಬ ಅನಂತ ಪ್ರಜ್ಞೆಯಿಂದ ಜಗತ್ತು ಹುಟ್ಟುತ್ತದೆ ಮತ್ತು ಪೋಷಿತವಾಗುತ್ತದೆ. ಅದಕ್ಕೆ ನಿರ್ಗುಣ ಹಾಗೂ ಸಗುಣ ಮುಖಗಳೆರಡೂ ಉಂಟು. ಸಗುಣ ಮುಖಕ್ಕೆ ಈಶ್ವರ, ದೇವರು, ಜೆಹೋವ ಮುಂತಾದ ಬೇರೆ ಬೇರೆ ಹೆಸರುಗಳಿವೆ. ಈ ಅಂತಿಮ ಸತ್ಯದ ಸಾಕ್ಷಾತ್ಕಾರವೇ ಬದುಕಿನ ನಿಜವಾದ ಗುರಿ; ಏಕೆಂದರೆ, ಅದೊಂದೇ ನಮಗೆ ಶಾಶ್ವತ ಸಿದ್ಧಿ ಹಾಗು ಶಾಂತಿಯನ್ನು ನೀಡಬಲ್ಲುದು. 2 . ಆತ್ಮನಲ್ಲಿ ಅಂತಸ್ಥವಾಗಿರುವ ದಿವ್ಯತೆ: ಬ್ರಹ್ಮವು ಎಲ್ಲ ಜೀವಿಗಳಲ್ಲೂ ಆತ್ಮವಾಗಿ ನೆಲೆಗೊಂಡಿದೆ; ಅದು ಮನುಷ್ಯನ ನೈಜ ಸ್ವರೂಪ ಹಾಗೂ ಎಲ್ಲ ಸುಖದ ಆಕರ. ಆದರೆ, ಅಜ್ಞಾನದ ಕಾರಣದಿಂದ ಜೀವಿಯು ತನ್ನನ್ನು ಮನಸ್ಸುಗಳೊಡನೆ ಸಮೀಕರಿಸಿಕೊಂಡು, ವಿಷಯಸುಖಗಳ ಬೆನ್ನು ಹತ್ತುತ್ತಾನೆ. ಇದು ಎಲ್ಲ ಕೆಡುಕಿನ ಮತ್ತು ದುಃಖದ ಮೂಲ ಕಾರಣ. ಅಜ್ಞಾನ ನಿವಾರಣೆಯಾದಂತೆಲ್ಲ ಆತ್ಮಸ್ವರೂಪವು ಹೆಚ್ಚುಹೆಚ್ಚಾಗಿ ಪ್ರಕಟಗೊಳ್ಳುತ್ತ ಹೋಗುತ್ತದೆ. ಈ ಅಂತಸ್ಥ ದಿವ್ಯತೆಯ ಅಭಿವ್ಯಕ್ತಿಯೇ ನಿಜವಾದ ಧರ್ಮದ ಸಾರ. 3. ಯೋಗ ಸಮನ್ವಯ : ಅಜ್ಞಾನ ನಿವಾರಣೆ ಹಾಗೂ ದೈವಸಾಕ್ಷಾತ್ಕಾರಕ್ಕೊಯ್ಯುವ ಆಂತರಿಕ ದೈವಿಕತೆಯ ಅಭಿವ್ಯಕ್ತಿಯು ಯೋಗದ ಮೂಲಕ ಸಾಧಿತವಾಗುತ್ತದೆ. ಪ್ರಮುಖವಾದ ಯೋಗಗಳು ನಾಲ್ಕು: ಜ್ಗಾನಯೋಗ, ಭಕ್ತಿಯೋಗ, ರಾಜಯೋಗ ಮತ್ತು ಕರ್ಮಯೋಗ. ಪ್ರತಿಯೊಂದು ಯೋಗವೂ ದೈವ ಸಾಕ್ಷಾತ್ಕಾರದ ಸ್ವತಂತ್ರ ಮಾರ್ಗ. ಆದರೆ ವಿಚಾರ, ಭಾವ ಅಥವಾ ಸಂಕಲ್ಪದಂತಹ ಶಕ್ತಿಗಳ ಬೆಳವಣಿಗೆಯಲ್ಲಿ ಒಂದೊಂದು ಯೋಗವೂ ಯಾವುದೋ ಒಂದು ಶಕ್ತಿಗೆ ಹೆಚ್ಚು ಒತ್ತು ನೀಡುವುದರಿಂದ, ಒಂದು ಸಂತುಲಿತ, ”ಸಂಪೂರ್ಣ ಕ್ರಿಯಾಶೀಲ" ವ್ಯಕ್ತಿತ್ವದ ವಿಕಾಸಕ್ಕೆ ಈ ಎಲ್ಲ ನಾಲ್ಕು ಯೋಗಗಳ ಸಮನ್ವಯ ಅಗತ್ಯ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಆದರ್ಶವೆಂದು ಪರಿಗಣಿಸಿದ್ದು ಈ ಯೋಗಸಮನ್ವಯವನ್ನೆ. ಇಲ್ಲಿ ಕೊಟ್ಟಿರುವ ಅವಳಿ ಸಂಸ್ಥೆಗಳ ಲಾಂಛನದಲ್ಲಿ ಈ ಆದರ್ಶವು ಅಭಿವ್ಯಕ್ತವಾಗಿದೆ; ಅದು ಸ್ವಾಮಿಜಿಯೇ ರೂಪಿಸಿದ್ದು. ಈ ಲಾಂಛನದಲ್ಲಿನ ನೀರಿನ ಅಲೆ ಕರ್ಮಯೋಗವನ್ನು ಕಮಲವು ಭಕ್ತಿಯೋಗವನ್ನು, ಉದಯಾಸುರ್ಯನು ಜ್ಞಾನಯೋಗವನ್ನು, ಸುರುಳಿಗೊಂಡಿರುವ ಸರ್ಪವು ರಾಜಯೋಗವನ್ನು, ಹಂಸವು ಪರಮಾತ್ಮನನ್ನು ಸೂಚಿಸುತ್ತದೆ. ಒಟ್ಟಿನ ಅರ್ಥವೆಂದರೆ: ನಾಲ್ಕೂ ಯೋಗಗಳ ಸಮಗ್ರ ಅನುಷ್ಠಾನದಿಂದ ಪರಮಾತ್ಮನ ಸಾಕ್ಷಾತ್ಕಾರ ಉಂಟಾಗುತ್ತದೆ. 4 . ಶಕ್ತಿಯನ್ನು ಆಧರಿಸಿದ ನೈತಿಕತೆ: ಸ್ವಾಮಿ ವಿವೇಕಾನಂದರ ಪ್ರಕಾರ, ಬದಕಿನ ಎಲ್ಲ ಅನೈತಿಕತೆ, ಕೆಡುಕು, ದುಃಖಗಳಿಗೆ ವ್ಯಕ್ತಿಯ ದೌರ್ಬಲ್ಯವೇ ಮುಖ್ಯ ಕಾರಣ; ಆತ್ಮನೆಂಬ ತನ್ನ ನೈಜ ಸ್ವರೂಪವನ್ನು ಕುರಿತ ಅಜ್ಞಾನವೇ ಈ ದೌರ್ಬಲ್ಯದ ಕಾರಣ. ನಮ್ಮ ದೌರ್ಬಲ್ಯವನ್ನು ಗೆಲ್ಲಲು ಮತ್ತು ಶೀಲಸಂಪನ್ನವಾದ ಬದುಕನ್ನು ನಡೆಸಲು ಅತ್ಮಜ್ಞಾನ ಅಗಾಧ ಶಕ್ತಿಯನ್ನೀಯುತ್ತದೆ. ಪ್ರತಿಯೊಬರಲ್ಲೂ ಹಲವಾರು ಸುಪ್ತ ಶಕ್ತಿಗಳಿರುತ್ತವೆ; ಆದರೆ ಅವುಗಳಲ್ಲಿ ಬಹುಪಾಲು, ನಮ್ಮ ಭಯ ದೌರ್ಬಲ್ಯಗಳಿಂದಾಗಿ ವಾಸ್ತವ ರೂಪ ತಳೆಯುವುದಿಲ್ಲ. ಆತ್ಮಜ್ಞಾನದ ಮೂಲಕ ಭಯ, ದೌರ್ಬಲ್ಯಗಳನ್ನು ಗೆದ್ದಾಗ, ಈ ಸುಪ್ತ ಶಕ್ತಿಗಳು ಹೊರಹೊಮ್ಮುತ್ತವೆ. ಈ ಪ್ರಕ್ರಿಯೆಯನ್ನು ಸ್ವಾಮೀಜಿ "ಪುರುಷ ನಿರ್ಮಾಪಕ" ಶಿಕ್ಷಣವೆಂದು ಕರೆದರು . 5. ಧರ್ಮಸಾಮರಸ್ಯ : “ಒಂದೇ ಸತ್ಯಕ್ಕೆ ಹಲವು ಹೆಸರುಗಳು" ( ವೇದ ) ಮತ್ತು "ವಿಭಿನ್ನ ಆಧ್ಯಾತ್ಮಿಕ ಪಥಗಳು ಒಂದೇ ಗುರಿಗೊಯ್ಯುತ್ತವೆ" (ಗೀತೆ) ಎಂಬ ವಿಚಾರಗಳು ಹಿಂದೂ ಶಾಸ್ತ್ರಗ್ರಂಥಗಳಲ್ಲಿ ಮತ್ತು ಅನೇಕ ಸಂತರ ಬೋಧನೆಗಳಲ್ಲಿ ಕಂಡುಬರುತ್ತವೆಯಾದರೂ, ಎಲ್ಲ ಧರ್ಮಗಳ ಆತ್ಯಂತಿಕ ಐಕಮತ್ಯವನ್ನು ಅಪರೋಕ್ಷಾನುಭವದ ಮೂಲಕ ತೋರಿಸಿಕೊಟ್ಟವರಲ್ಲಿ ಶ್ರೀರಾಮಕೃಷ್ಣರು ಚಾರಿತ್ರಿಕವಾಗಿ ಮೊದಲಿಗರು. ಅವರ ಸಂದೇಶ ಎರಡು ರೀತಿಯ ಧಾರ್ಮಿಕ ಸಮನ್ವಯವನ್ನು ಸೂಚಿಸುತ್ತದೆ: ಒಂದು, ಹಿಂದೂಧರ್ಮದೊಳಗಿನ ಸಮನ್ವಯ; ಇನ್ನೊoದು, ಜಾಗತಿಕ ಧರ್ಮಗಳ ನಡುವಣ ಸಮನ್ವಯ. ಅ . ಹಿಂದೂಧರ್ಮದೊಳಗಿನ ಸಾಮರಸ್ಯ : ಶ್ರೀರಾಮಕೃಷ್ಣರು ಹಿಂದೂಧರ್ಮದ ಯಾವುದೇ ನಿರ್ದಿಷ್ಟ ಪಂಥದೊಡನೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ; ಆದರೆ ಹಿಂದೂಧರ್ಮವನ್ನು ಇಡಿಯಾಗಿ ಒಪ್ಪಿಕೊಂಡರು. ಹಿಂದು ತತ್ವಶಾಸ್ತ್ರದ ದ್ವೈತ, ಅದ್ವೈತ ಮತ್ತಿತರ ತತ್ವಗಳು ಒಂದೇ ಸತ್ಯದ ಸಮಗ್ರ ಅನುಭವದ ವಿಭಿನ್ನ ಘಟ್ಟಗಳನ್ನು ಪ್ರತಿನಿಧಿಸುತ್ತವೆಯೆಂದೂ, ಎಲ್ಲ ದೇವತೆಗಳೂ ಒಂದೇ ಪರಬ್ರಹ್ಮದ ವಿವಿಧ ಮುಖಗಳೆಂದು ಅವರು ತೋರಿಸಿಕೊಟ್ಟರು. ಅವರ ಸಂದೇಶ ಹಿಂದೂ ಪಂಥಗಳ ನಡುವೆ ಸಾಕಷ್ಟು ಸಾಮರಸ್ಯವನ್ನು ಉಂಟುಮಾಡಿದೆ; ಸ್ವತಃ ಶ್ರೀರಾಮಕೃಷ್ಣರು ಹಿಂದೂಧರ್ಮದ ಐಕ್ಯದ ಸಂಕೇತವಾಗಿದ್ದಾರೆ. ಆ. ಜಾಗತಿಕ ಧರ್ಮಗಳ ನಡುವಣ ಸಾಮರಸ್ಯ: ಶ್ರೀರಾಮಕೃಷ್ಣರು ಧರ್ಮಗಳ ನಡುವಣ ಭಿನ್ನತೆಗಳನ್ನು ಗುರುತಿಸಿದರು, ಆದರೆ ಈ ಭಿನ್ನತೆಗಳಿದ್ದೂ ಕೂಡ ಅವು ಒಂದೇ ಅಂತಿಮ ಗುರಿಗೆ ನಮ್ಮನ್ನು ಕರೆದೊಯ್ಯುತ್ತವೆಯೆಂದು ಹೇಳಿದ್ದು ಅತ್ಯಂತ ಗಮನಾರ್ಹ. ಯತೋ ಮತ್, ತತೋ ಪಥ್ (ಎಷ್ಟು ಮತಗಳೋ ಅಷ್ಟು ಪಥಗಳು) ಎಂಬ ಪ್ರಸಿದ್ಧ ಸೂತ್ರದ ಅರ್ಥ ಇದೇ. ಇದಲ್ಲದೆ, ಸ್ವಾಮಿ ವಿವೇಕಾನಂದರು ಜಗತ್ತಿನ ಎಲ್ಲ ಧರ್ಮಗಳೂ ಏಕೈಕ ಶಾಶ್ವತ ವಿಶ್ವಧರ್ಮದ ಅಭಿವ್ಯಕ್ತಿಗಳೆಂದು ಪ್ರತಿಪಾದಿಸಿದರು, ಆಧ್ಯಾತ್ಮಿಕ ಜಗತ್ತಿನ ಎಲ್ಲ ಮೂಲಭೂತ ತತ್ವಗಳೂ, ನಿಯಮಗಳೂ ವೇದಾಂತದಲ್ಲಿ ಕಂಡುಬರುವುದರಿಂದ ವೇದಾಂತವನ್ನು ಶಾಶ್ವತ ವಿಶ್ವಸಾರ್ವತ್ರಿಕ ಧರ್ಮವೆಂದು ಸ್ವಾಮೀಜಿ ಪರಿಗಣಿಸಿದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ವೇದಾಂತವು ಎಲ್ಲ ಧರ್ಮಗಳಿಗೂ ಸಮಾನವಾದ ತಳಹದಿಯಾಗಬಲ್ಲುದು. 6. ಶ್ರೀರಾಮಕೃಷ್ಣರ ಅವತಾರತ್ವ: ಹಿಂಧೂ ಧಾರ್ಮಿಕ ಸಂಪ್ರದಾಯದ ಪ್ರಕಾರ, ಆಯಾ ಯುಗದ ಅಗತ್ಯಕ್ಕೆ ಅನುಗುಣವಾಗಿ ಮನುಕುಲಕ್ಕೆ ನೂತನ ಸಂದೇಶ ನೀಡುವ ಸಲುವಾಗಿ ದೇವರು ಪ್ರತಿಯೊಂದು ಯುಗದಲ್ಲೂ ಅವತರಿಸುತ್ತಾನೆ. ರಾಮಕೃಷ್ಣ ಪಂಥದ ಆಂದೋಲನದಲ್ಲಿ ಶ್ರೀರಾಮಕೃಷ್ಣರನ್ನು 'ಆಧುನಿಕ ಯುಗದ ಅವತಾರ'ವೆಂದು ಪೂಜಿಸಲಾಗುತ್ತದೆ. ಇದರ ಅರ್ಥವೇನೆಂದರೆ, ಅವರ ಬದುಕು, ಬೋಧನೆಗಳು ಮನುಕುಲಕ್ಕೆ ಮುಕ್ತಿಯ ಹೊಸ ದಾರಿಯೊಂದನ್ನು ತೆರೆದಿಟ್ಟಿವೆ. ಶ್ರೀರಾಮಕೃಷ್ಣರ ಅವತಾರತ್ವದ ವೈಶಿಷ್ಟ್ಯವೆಂದರೆ, ಅದು ಹಿಂದೂತೆಕ್ಕೆಯಿಂದಾಚೆಯವರೂ ಸೇರಿದಂತೆ ಎಲ್ಲ ಹಿಂದಿನ ಅವತಾರಗಳು ಮತ್ತು ಪ್ರವಾದಿಗಳ ಅಧ್ಯಾತ್ಮಿಕ ಪ್ರಜ್ಞೆಯನ್ನೊಳಗೊಂಡಿದೆ ಮತ್ತು ಎಲ್ಲ ಧಾರ್ಮಿಕ ಪರಂಪರೆಗಳೊಡನೆ ಸಮರಸಗೊಂಡಿದೆ ಎನ್ನುವುದು. ರಾಮಕೃಷ್ಣ ಸಂಘದ ಸಂಸ್ಥೆಗಳಲ್ಲಿ ಎಲ್ಲ ಧರ್ಮಗಳ ಸ್ಥಾಪಕರಿಗೆ ಪೂಜಾರ್ಹವಾದ ಗೌರವವನ್ನು ನೀಡಲಾಗುತ್ತಿದೆ. 7. ಒಂದು ಹೊಸ ಕಾರ್ಯತತ್ವ: ಸ್ವಾಮಿ ವಿವೇಕಾನಂದರು ಆಧುನಿಕ ಜಗತ್ತಿನ ಹೊಸ ಕಾರ್ಯತತ್ವವೊಂದನ್ನು ಕೊಟ್ಟಿದ್ದಾರೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಎಲ್ಲ ಕೆಲಸಗಳೂ ಈ ತತ್ವದ ಚೌಕಟ್ಟಿನ ಅನುಗುಣವಾಗಿ ನಡೆಯುತ್ತವೆ; ಅದು ಮುಂದಿನ ಅಂಶಗಳನ್ನು ಆಧರಿಸಿದೆ: ಅ . ಎಲ್ಲ ಕೆಲಸವೂ ಪವಿತ್ರ : ವೇದಾಂತದ ಪ್ರಕಾರ ಭೌತಿಕ ವಿಶ್ವ ಎಂಬುದು ಎನಿಸಿದ ಭಗವಂತನ ವಿರಾಟ್ ರೂಪದ ಅಭಿವ್ಯಕ್ತಿ. ಆದ್ದರಿಂದ, ಸೋದರಿ ನಿವೇದಿತಾ ಹೇಳಿದ್ದಂತೆ, “ಅಧ್ಯಾತ್ಮಿಕತೆಗೂ ಲೌಕಿಕತೆಗೂ ಏನೂ ಭೇದವಿಲ್ಲ” ಈ ಹೇಳಿಕೆಯ ಅರ್ಥವೇನೆಂದರೆ, ಎಲ್ಲ ದುಡಿಮೆಯೂ ಪವಿತ್ರವೇ ಆಗಿದೆ. ನೆಲ ಗುಡಿಸುವ ಅಥವಾ ಚಪ್ಪಲಿ ಹೊಲಿಯುವ ಸೇವಾ ಕಾರ್ಯವನ್ನು ಕೂಡ ದೇವರ ಕೆಲಸಗಳಂತೆಯೇ ಶ್ರದ್ಧಾಭಕ್ತಿಗಳಿಂದ ಮಾಡಬೇಕು. ಆ. ಕೈಂಕರ್ಯ ಭಾವದಿಂದ ದುಡಿಮೆ : ಭಗವದ್ಗೀತೆಯು ಸರ್ವವ್ಯಾಪಿಯಾದ ಭಗವಂತನೇ ಎಲ್ಲ ದುಡಿಮೆಯ ಅಂತಿಮ ಆಕರ ಮತ್ತು ಎಲ್ಲ ಯಜ್ಞಗಳ ಫಲಾನುಭವಿ ಎನ್ನುತ್ತದೆ . (9.24, 18.46). ಆದ್ದರಿಂದ, ಎಲ್ಲ ದುಡಿಮೆಯನ್ನು ಕೈಂಕರ್ಯವನ್ನಾಗಿ ಕೈಗೊಳ್ಳಬೇಕು ಮತ್ತು ಕರ್ಮಫಲಗಳನ್ನು ಭಗವಂತನಿಗೆ ಸಮರ್ಪಿಸಬೇಕು. ಇ . ಮಾನವ ಸೇವೆಯೇ ದೇವರ ಸೇವೆ : ಸ್ವಾಮಿ ವಿವೇಕಾನಂದರು ತಮ್ಮ ಗುರುವಿನಿಂದ ಕಲಿತ ಮುಖ್ಯ ತತ್ವಗಳಲ್ಲೊಂದೆಂದರೆ: ಶಿವಜ್ಞಾನೇ ಜಿವಸೇವಾ (ಶಿವನೆಂದು ಭಾವಿಸಿ ಜೀವನಿಗೆ ಸೇವೆ ಸಲ್ಲಿಸುವುದು). ಮನುಷ್ಯನಲ್ಲಿ ದೈವಿಕತೆ ಅಂತರ್ನಿಹಿತವಾಗಿ ಇರುವುದರಿಂದ, ನಾವು ಮಾಡುವ ಮಾನವಸೇವೆ ವಾಸ್ತವವಾಗಿ ದೇವರ ಸೇವೆಯೇ ಆಗುತ್ತದೆ. ಸೇವೆಯ ಅಗತ್ಯವಿರುವ ವ್ಯಕ್ತಿಯನ್ನು ಕನಿಕರದ ವಸ್ತುವನ್ನಾಗಿ ಕಾಣುವುದರ ಬದಲು ಪೂಜೆಯ ವಸ್ತುವನ್ನಾಗಿ ಕಾಣಬೇಕು. ಇಂತಹ ದೃಷ್ಟಿಯು ಕೊಡುವವನು, ಪಡೆಯುವವನು ಇಬ್ಬರನ್ನೂ ದೊಡ್ಡವರನ್ನಾಗಿ ಮಾಡುತ್ತದೆ. ಈ. ದೀನದಲಿತರ ಸೇವೆಯ ಮೇಲೆ ಒತ್ತು: ಭಾರತದಲ್ಲಿ ಬಡವರ ಮತ್ತು ದಲಿತರ ಪರವಾಗಿ ದನಿಯೆತ್ತಿ ಹೀಗೆ ಧೈರ್ಯವಾಗಿ ಮತನಾಡಿದ ಮೊತ್ತಮೊದಲನೆಯ ಧಾರ್ಮಿಕ ನಾಯಕರು ಸ್ವಾಮಿ ವಿವೇಕಾನಂದರು: “ಬಡವರಲ್ಲಿ, ದುರ್ಬಲರಲ್ಲಿ ಮತ್ತು ರೋಗಿಗಳಲ್ಲಿ ಶಿವನನ್ನು ಕಾಣುವವನು ನಿಜವಾದ ಅರ್ಥದಲ್ಲಿ ಶಿವನನ್ನು ಪೂಜಿಸುತ್ತಾನೆ ... ದೇಗುಲಗಳಲ್ಲಿ ಮಾತ್ರ ಶಿವನನ್ನು ಕಾಣುವವನಿಗಿಂತ ಇಂಥ ಮನೋಭಾವದ ವ್ಯಕ್ತಿಯನ್ನು ಶಿವ ಮೆಚ್ಚಿಕೊಳ್ಳುತ್ತಾನೆ". ಬಡವರಿಗೆ ಅನ್ವಯಿಸುವಂತೆ ದರಿದ್ರನಾರಾಯಣ ಎಂಬ ಶಬ್ಧವನ್ನು ಟಂಕಿಸಿದವರು ಸ್ವಾಮೀಜಿ. ಬಡವರ ಬಗೆಗಿನ ಸ್ವಾಮಿಜಿಯ ಪ್ರೀತಿ ಮತ್ತು ಕಳಕಳಿ ರಾಮಕೃಷ್ಣ ಮಿಷನ್ನಿನ ಸೇವಾಕಾರ್ಯಾಕ್ರಮಗಳಲ್ಲಿ ಒಂದು ನಿರ್ದೇಶಕ ತತ್ತ್ವವಾಗಿ ಮುಂದುವರಿದುಕೊಂಡು ಬಂದಿದೆ. ಉ . ದುಡಿಮೆಯೊಂದು ಅಧ್ಯಾತ್ಮಿಕ ಸಾಧನೆ : ಮೇಲಿನ ನಿಬಂದನೆಗಳನ್ನು ಪೂರೈಸುತ್ತ ಮಾಡುವ ಯಾವುದೇ ಕೆಲಸ ಆಧ್ಯಾತ್ಮಿಕ ಸಾಧನೆಯಾಗಿ ಪರಿಣಮಿಸುತ್ತದೆ, ಅದರಿಂದ ಮನಸ್ಸು ಶುದ್ಧಿಗೊಳ್ಳುತ್ತದೆ ಮತ್ತು ಜೀವನದಲ್ಲಿ ಸುಪ್ತವಾಗಿರುವ ದೈವಿಕತೆ ಹೆಚ್ಚು ಹೆಚ್ಚಾಗಿ ಪ್ರಕಟವಾಗುತ್ತದೆ. ಹೀಗಾಗಿ, ಪೂಜಾತ್ಮಕ ಸೇವೆಯೆಂದು ಭಾವಿಸಿ ಮಾಡಿದ ಇಂಥ ಕೆಲಸದಿಂದ ಮಾಡಿದವನಿಗೇ ಅಧ್ಯಾತ್ಮಿಕವಾಗಿ ಲಾಭ ದೊರೆಯುತ್ತದೆ; ಅದೊಂದು ಆಧ್ಯಾತ್ಮಿಕ ಶಿಸ್ತು ಅಥವಾ ಯೋಗವಾಗುತ್ತದೆ. ಬಡವರಿಗೆ ಅನ್ನ, ಬಟ್ಟೆಗಳನ್ನು ಕೊಡುವುದು, ರೋಗಿಗಳ ಆರೈಕೆ ಮಾಡುವುದು ಮುಂತಾದ ರಾಮಕೃಷ್ಣ ಮಿಷನ್ನಿನ ಸೇವಾ ಚಟುವಟಿಕೆಗಳೆಲ್ಲ ನಡೆಯುವುದು ಕಾಯಕವನ್ನು ಅಧ್ಯಾತ್ಮಿಕ ಶಿಸ್ತಾಗಿ ಕಾಣುವ (ಕರ್ಮಯೋಗದ) ಈ ಗ್ರಹಿಕೆಯಿಂದಲೇ . ಹೀಗಾಗಿ, ಮನುಷ್ಯನಲ್ಲಿರುವ ಭಗವಂತನ ಪೂಜೆಯಾಗಿ ಕೈ ಕೊಳ್ಳುವ ಸೇವೆ ಇಬ್ಬಗೆಯಲ್ಲಿ ಫಲ ನೀಡುತ್ತದೆ : ಸೇವೆ ಪಡೆಯುವ ವ್ಯಕ್ತಿಗೆ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅನುಕೂಲವಾಗುತ್ತದೆ ಮತ್ತು ಸೇವೆ ಮಾಡುವ ವ್ಯಕ್ತಿಗೆ ಅಧ್ಯಾತ್ಮಿಕವಾಗಿ ಅನುಕೂಲವಾಗುತ್ತದೆ. ಧ್ಯೇಯವಾಕ್ಯ : ಸೇವಾಚಟುವಟಿಕೆಗಳ ಈ ದ್ವಿಮುಖ ಉದ್ದೇಶವನ್ನು, ವಾಸ್ತವವಾಗಿ ಶ್ರೀರಾಮಕೃಷ್ಣ ಮಠ ಮತ್ತು ಮಿಷನ್ನಿನ ಇಡೀ ವಿಚಾರಪ್ರಣಾಳಿಯನ್ನು ಸ್ವಾಮಿ ವಿವೇಕಾನಂದರು ರೂಪಿಸಿದ ಅತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ-ಸ್ವಂತ ಮುಕ್ತಿಗಾಗಿ ಮತ್ತು ಲೋಕಹಿತಕ್ಕಾಗಿ-ಎಂಬ ಧ್ಯೇಯವಾಕ್ಯದಲ್ಲಿ ಅಡಕಗೊಳಿಸಲಾಗಿದೆ. ಬದುಕಿನ ಒಂದು ವಿಧಾನವಾಗಿ ಸೇವೆ ಹಿಂದೆ ವಿವರಿಸಿರುವ ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಿಚಾರ ಪ್ರಣಾಳಿಗಳು ಅವುಗಳ ಬಹುಮಖ ಚಟುವಟಿಕೆಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಈ ಚಟುವಟಿಕೆಗಳು ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ, ಸ್ವ-ಉದ್ಯೋಗ, ಮಹಿಳಾ ಯೋಗಕ್ಷೇಮ, ಅಂತರ್-ಧರ್ಮೀಯ ಅರಿವು, ನೈತಿಕ ಜೀವನ, ಅಧ್ಯಾತ್ಮಿಕ ಮಾರ್ಗದರ್ಶನ ಮತ್ತು ನೈಸರ್ಗಿಕ ಪ್ರಕೋಪಗಳಿಗೆ ಬಲಿಯಾದವರಿಗೆ ಪರಿಹಾರ ನೀಡುವ ಮಾನವೀಯ ಅಗತ್ಯ ಹಾಗೂ ಸಾಮಾಜಿಕ ಹಿತದಂತಹ ವಿಭಿನ್ನ ಕ್ಷೇತ್ರಗಳಲ್ಲಿ ಹರಡಿರುತ್ತವೆ. ಈ ಎಲ್ಲ ಚಟುವಟಿಕೆಗಳೂ ಸೇವೆಯಾಗಿ, ಮನುಷ್ಯನಲ್ಲಿ ಅಂತರ್ಗತನಾಗಿರುವ ದೇವರ ಸೇವೆಯಾಗಿ ನಡೆಯುತ್ತವೆ. ಸೇವೆ ಎಂಬುದು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಯಾವುದೋ ಒಂದು ನಿರ್ದಿಷ್ಟ ಕಾಲದಲ್ಲಿ ನಡೆಯುವ ನಿರ್ದಿಷ್ಟ ಚಟುವಟಿಕೆಯ ಪ್ರಕಾರಕ್ಕೆ ಸೀಮಿತವಾದುದಲ್ಲ; ಅದು ಒಂದು ಜೀವನವಿಧಾನ. ಸಂನ್ಯಾಸಿಗಳು ಹೊರಗಿನ ಸಮಾಜದಲ್ಲಿ ಯಾವುದೇ ಸೇವೆ ಸಲ್ಲಿಸದಿರುವ ಸಂದರ್ಭಗಳಲ್ಲಿ ಸಂನ್ಯಾಸಿವರ್ಗದೊಳಗೇ ಸೇವೆ ಸಲ್ಲಿಸುತ್ತಿರುತ್ತಾರೆ. ಇದಕ್ಕೆ ಯಾವುದೇ ಕಾಲದ, ವಯಸ್ಸಿನ ಮಿತಿ ಇರುವುದಿಲ್ಲ. ಅತೀವ ಅನಾರೋಗ್ಯ ಇಲ್ಲವೆ ವೃದ್ಧಾಪ್ಯದಿಂದ ಅಸಮರ್ಥರಾಗುವವರೆಗೂ ಸಂನ್ಯಾಸಿಗಳು ವಿವಿಧ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಹಿಂದಿನ ಮಹಾಧ್ಯಕ್ಷರಾದ ಸ್ವಾಮಿ ರಂಗನಾಥಾನಂದಜಿಯವರು 98ರ ಇಳಿವಯಸ್ಸಿನಲ್ಲೂ ವಿವಿಧ ಬಗೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾಮಕೃಷ್ನ್ಣ ಮಠದಲ್ಲಿ ಪಾಲಿಸುವ "ಜೀವನವಿಧಾನವಾಗಿ ಸೇವೆ"ಯಲ್ಲಿ ಕೆಲವು ವಿಶಿಷ್ಟ ಲಕ್ಷಣಗಳಿವೆ; ಅವುಗಳಲ್ಲಿ ಕೆಲವನ್ನು ಮುಂದೆ ಉಲ್ಲೇಖಿಸಲಾಗಿದೆ : 1. ನಿಸ್ವಾರ್ಥ, ತ್ಯಾಗ, ಪ್ರೇಮ: ನಿಸ್ವಾರ್ಥತೆಯ ತತ್ವ 'ದಿವ್ಯತ್ರಯ'ರ ಒಂದು ಪ್ರಮುಖ ಬೋಧನೆಯಾಗಿದ್ದು, ಕರ್ಮ, ಭಕ್ತಿ, ಜ್ಞಾನಗಳ ಮೂರು ಪ್ರಮುಖ ಆಧ್ಯಾತ್ಮಿಕ ಪಥಗಳಲ್ಲಿ ಅದೇ ಮೊದಲ ಹೆಜ್ಜೆಯಾಗಿದೆ. ರಾಮಕೃಷ್ಣ ಪಂಥದ ಸಂನ್ಯಾಸಿಗಳು ತಮ್ಮ ಸಂಘವನ್ನು ಶ್ರೀರಾಮಕೃಷ್ಣರ 'ಆನುಭಾವಿಕ ಶರೀರ'ವೆಂದು ಭಾವಿಸುತ್ತಾರೆ ಮತ್ತು ತಮ್ಮ ವೈಯಕ್ತಿಕ ಅಹಂಗಳನ್ನು ಸಂಘದ ಸಾಮೂಹಿಕ ಸಂಕಲ್ಪದಲ್ಲಿ ವಿಲೀನಗೊಳಿಸಲು ಕಲಿಯುತ್ತಾರೆ. ಅಲ್ಲದೆ, ಅವರು ಮಾಡುವ ಎಲ್ಲ ಕಾರ್ಯಗಳು ಮತ್ತು ಅವುಗಳ ಫಲ ಭಗವಂತನಿಗೆ ಪೂಜೆಯಾಗಿ ಸಮರ್ಪಿತವಾಗುತ್ತವೆ. ರಾಮಕೃಷ್ಣ ಮಠದ ಮತ್ತು ಮಿಷನ್ನಿನ ಸದಸ್ಯರು ತಮ್ಮ ಕಾರ್ಯಗಳಿಗೆ ವೈಯಕ್ತಿಕವಾಗಿ ಯಾವುದೇ ಗೌರವವನ್ನು ಬಯಸುವುದಿಲ್ಲ : ಎಲ್ಲ ಗೌರವವೂ ಸಂಘಕ್ಕೆ ಸಲ್ಲುತ್ತದೆ. ಅವರು ಸೇವಾ ಚಟುವಟಿಕೆಗಳಲ್ಲಿ ತೊಡಗುವುದು 'ಸ್ವಯಂಕೀರ್ತಿ'ಗಾಗಿ ಅಲ್ಲ, ಭಗವಂತನಿಗೆ ಮುಡಿಪಾಗಿರುವ 'ಉನ್ನತತರ' ಕೀರ್ತಿಗಾಗಿ. ರಾಮಕೃಷ್ಣ ಸಂನ್ಯಾಸಿಗಳು ಜ್ಞಾನಮಾರ್ಗವನ್ನೂ ಅನುಸರಿಸುತ್ತಾರೆ ಮತ್ತು ಅತ್ಮವಿಶ್ಲೇಷಣೆಯ ಅನುಷ್ಠಾನದಿಂದ ಎಲ್ಲ ಆಲೋಚನೆ, ಕ್ರಿಯೆಗಳ ಶಾಶ್ವತ ಅಂತರಿಕ ಸಾಕ್ಷಿಯಾದ 'ಪ್ರತ್ಯಗಾತ್ಮ'ನೊಡನೆ ತಮ್ಮನ್ನು ಗುರುತಿಸಿಕೊಳ್ಳಲು ಕಲಿಯುತ್ತಾರೆ. ಈ ಎಲ್ಲ ವಿಧಾನಗಳ ಮೂಲಕ ಇಲ್ಲಿನ ಸಂನ್ಯಾಸಿಗಳು ನಿಸ್ವಾರ್ಥ, ನಿರಹಂಕಾರಗಳನ್ನು ಕಲಿಯುತ್ತಾರೆ. ಮೊದಲೇ ಹೇಳಿದಂತೆ, ಶ್ರೀರಾಮಕೃಷ್ಣ ಆಂದೋಲನದಲ್ಲಿ ಅನುಸರಿಸುತ್ತಿರುವ ಸೇವಾದರ್ಶ, “ಶಿವಜ್ಞಾನೇ ಜೀವಸೇವಾ", ಎಂದರೆ, ಮನುಷ್ಯನೇ ಭಗವದ್ರೂಪವೆಂದು ತಿಳಿದು ಅವನಿಗೆ ಸೇವೆ ಸಲ್ಲಿಸುವುದು. ಆದರೂ ಎಲ್ಲರಿಗೂ-ಅದರಲ್ಲೂ ದರಿದ್ರರು ಮತ್ತು ರೋಗಿಗಳಗೆ-ಪೂಜಾ ಮನೋಭಾವದಿಂದ ಸೇವೆ ಸಲ್ಲಿಸುವುದು ಹೇಳಿದಷ್ಟು ಸುಲಭವಲ್ಲ. ಕಾಲ, ಶಕ್ತಿ, ಸುಖ ಇತ್ಯಾದಿ ಬಹಳಷ್ಟು ವಿಷಯಗಳ ತ್ಯಾಗವನ್ನು ಅಪೇಕ್ಷಿಸುತ್ತದೆ, ಈ ಸೇವಾದರ್ಶ, ಪ್ರತಿಫಲ, ಮನ್ನಣೆ ಅಥವಾ ಕೀರ್ತಿಯಾ ಯಾವುದೇ ನಿರೀಕ್ಷೆಯಿಲ್ಲದೆ ರಾಮಕೃಷ್ಣ ಆಂದೋಲನದ ಸದಸ್ಯರು ಕೈಗೊಳ್ಳುವ ಈ ತ್ಯಾಗಗಳೆ ಅವರ ಸೇವಾದರ್ಶನವನ್ನು ಯಥಾರ್ಥಗೊಳಿಸುವಂಥವು. ಸೇವೆ ಮತ್ತು ತ್ಯಾಗಗಳ ಹಿಂದಿನ ಪ್ರೇರಕಶಕ್ತಿಯೇ, ‘ಪ್ರೇಮ’.ರಾಮಕೃಷ್ಣ ಮಠ ಮತ್ತು ಮಿಷನ್ನಿನ ಮೂಲಕ ಪ್ರವಹಿಸುವ ಪ್ರೇಮ ದೈವಿಕ ಪ್ರೇಮ-ಮನುಕುಲಕ್ಕೆ ಶ್ರೀರಾಮಕೃಷ್ಣ, ಶ್ರೀಮಾತೆ ಹಾಗೂ ಸ್ವಾಮಿ ವಿವೇಕಾನಂದರು ತೋರಿದ ಪರಿಶುದ್ಧವೂ, ಅವಿನಾಶಿಯೂ ಆದ ಪ್ರೇಮ. ಈ ದೈವಿಕ ಪ್ರೇಮವೇ ಸನ್ಯಾಸಿ ಸೋದರರನ್ನೂ, ಸಾಮಾನ್ಯ ಭಕ್ತರನ್ನೂ ಒಗ್ಗೂಡಿಸಿ, ಸಂಘವನ್ನು ಒಟ್ಟಾಗಿ ಹಿಡಿದಿಟ್ಟಿದೆ. 2. ಸ್ವಾತಂತ್ರ್ಯ, ಸಮಾನತೆ, ಸೋದರತೆ : ಪ್ರಜಾಪ್ರಭುತ್ವದ ಈ ಮೂರು ಮಹಾನ್ ಆದರ್ಶಗಳು - ಅವುಗಳ ಬಗೆಗೆ ಮನುಕುಲ ಶತಶತಮಾನಗಳ ಕಾಲ ಕನಸು ಕಾಣುತ್ತ ಮತ್ತು ಮಾತನಾಡುತ್ತ ಬಂದಿದೆ – ರಾಮಕೃಷ್ಣ ಮಠ ಮತ್ತು ಮಿಷನ್ನಿನ ವಲಯಗಳಲ್ಲಿ ನಿಶ್ಯಬ್ಧವಾದ. ಸಹಜವಾದ ಒಂದು ಸಮಾಜಿಕ ವಾಸ್ತವತೆಯಾಗಿ ಸಂಭವಿಸುತ್ತಿವೆ. ಸ್ವಾಮಿ ವಿವೇಕಾನಂದರು ಮತ್ತೆ ಮತ್ತೆ ಹೇಳಿದ್ದಾರೆ. “ಬಿಡುಗಡೆಯೇ ಬೆಳವಣಿಗೆಯ ಮೊದಲ ಷರತ್ತು” ಮತಾಂಧತೆ, ಅಸಹನೆ, ದ್ವೇಷ, ಮೂಢ ನಂಬಿಕೆಗಳಿಂದ ಬಿಡುಗಡೆ, ಧಾರ್ಮಿಕ, ಸಾಮಾಜಿಕ ಮತ್ತು ಜನಾಂಗಿಕ ಪೂರ್ವಗ್ರಹಗಳಿಂದ ಬಿಡುಗಡೆ - ಒಂದೇ ಮಾತಿನಲ್ಲಿ ಹೇಳುವುದಾದರೆ ವಿಚಾರ, ನಂಬಿಕೆಗಳ ಸ್ವಾತಂತ್ರ್ಯ ಎಂಬುದು ರಾಮಕೃಷ್ಣ ಆಂದೋಲನದಲ್ಲಿ ಕಂಡುಬರುವ ಕೇಂದ್ರ ಸಂಗತಿ. ರಾಮಕೃಷ್ಣ ಮಠ ಮತ್ತು ಮಿಷನ್ನಿನ ಚಟುವಟಿಕೆಗಳು, ಜತಿ, ಪಂಥ, ಜನಾಂಗಗಳ ಯಾವುದೇ ಭೇದಗಳಿಲ್ಲದೆ ಸೃಷ್ಟಿಯ ಯೋಗಕ್ಷೇಮವನ್ನು ಗುರಿಯಾಗಿಟ್ಟುಕೊಂಡಿವೆ. ಬಡವ – ಬಲ್ಲಿದ, ಬ್ರಾಹ್ಮಣ – ಹರಿಜನ, ಹಿಂದುಗಳು, ಮುಸ್ಲಿಮರ, ಕ್ರೈಸ್ತರು - ಎಲ್ಲರೂ ಇಲ್ಲಿ ಒಬ್ಬರೆ ದೈವೀ ತಂದೆತಾಯಿಯರ ಮಕ್ಕಳಾಗಿ ಪರಿಗಣಿಸಲ್ಪಡುತ್ತಾರೆ. ಸಾಮಾಜಿಕ ಸಮಾನತೆಯನ್ನು ಉಂಟುಮಾಡುವುದು "ಕೆಳಮಟ್ಟಕ್ಕೆ ಇಳಿಸುವ" ಪ್ರಕ್ರಿಯೆಯಿಂದಲ್ಲ, “ಮೇಲ್ಮಟ್ಟಕ್ಕೆ ಏರಿಸುವ" ಪ್ರಕ್ರಿಯೆಯಿಂದ, ಎಂದರೆ ಈಗಾಗಲೇ ಮೇಲಿರುವವರನ್ನು ಕೆಳಕ್ಕೆಳೆಯುವುದರಿಂದಲ್ಲ, ಕೆಳಗಿರುವವರನ್ನು ಮೇಲಕ್ಕೆತ್ತುವುದರಿಂದ ಎಂಬ ವಿವೇಕಾನಂದರ ನಿಲುವನ್ನು ಈ ಸಂಸ್ಥೆಗಳು ಅನುಸರಿಸುತ್ತವೆ. 3. ಪರಿಣತಿ, ದಕ್ಷತೆ, ಸಮೂಹಕಾರ್ಯ: ಸಾಮಾನ್ಯವಾಗಿ ವಾಣಿಜ್ಯೋದ್ಯಮ ಕ್ಷೇತ್ರದ ಬಗೆಗೆ ಮಾತನಾಡುವಾಗ ಈ ಮೂರೂ ಗುಣಗಳ ಪ್ರಸ್ತಾಪ ಆಗುತ್ತಿರುತ್ತದೆ; ಆದರೆ, ವಾಸ್ತವವಾಗಿ ಅವು ರಾಮಕೃಷ್ಣ ಮಠ ಮತ್ತು ಮಿಷನ್ನಿನ ಎಲ್ಲ ಚಟುವಟಿಕೆಗಳ ನಿಯಂತ್ರಕ ತತ್ವಗಳಾಗಿವೆ. ಎಲ್ಲ ಕಾರ್ಯವೂ ಇಲ್ಲಿ ಪೂಜೆಯಾಗಿ ನಡೆಯುವುದರಿಂದ ಮತ್ತು ಅತ್ಯುತ್ತಮ ವಸ್ತುಗಳನ್ನು ಮಾತ್ರವೇ ಭಗವಂತನಿಗೆ ಸಮರ್ಪಿಸುವುದರಿಂದ, ರಾಮಕೃಷ್ಣ ಮಠ ಮತ್ತು ಮಿಷನ್ನಿನ ಸದಸ್ಯರು ತಮಗೆ ವಹಿಸಿದ ಕಾರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸುತ್ತಾರೆ. ಯಾವುದೇ ಬಗೆಯ ಪೋಲು ಅಥವಾ ನಷ್ಟವನ್ನು ತಡೆಗಟ್ಟಲು ಎಲ್ಲ ರೀತಿಯ ಎಚ್ಚರ ವಹಿಸಲಾಗುತದೆ. ಸಂಸ್ಥೆಗಳು ಮತ್ತು ಅಲ್ಲಿ ಇರುವವರ ಕನಿಷ್ಠ ಅಗತ್ಯಗಳನ್ನು ಹೊರತುಪಡಿಸಿ ಎಲ್ಲ ಸಂಪನ್ಮೂಲಗಳೂ ಸಮಾಜದ ಯೋಗಕ್ಷೇಮಕ್ಕಾಗಿ ಬಳಕೆಯಾಗುತ್ತವೆ ಮತ್ತು ಎಲ್ಲ ಸಂನ್ಯಾಸಿಗಳೂ ಸಂನ್ಯಾಸಭ್ರಾತೃತ್ವದ ಪ್ರಬಲವಾದ ಬಾಂಧವ್ಯದಿಂದ ಒಟ್ಟಾಗಿರುವುದರಿಂದ, ಅವರು ಒಂದು ತಂಡವಾಗಿ ಕೆಲಸ ಮಾಡುವುದು ಸುಲಭ ಹಾಗೂ ಸಹಜವಾಗಿ ಕಾಣುತ್ತದೆ; ರಾಮಕೃಷ್ಣ ಮಿಷನ್ನಿನ ಯಶಸ್ವಿಗೆ ಬಹಳಮಟ್ಟಿಗೆ ಈ ಗುಣವು ಕಾರಣವಾಗಿದೆ. 4. ಸತ್ಯಸಂಧತೆ, ಪ್ರಾಮಾಣಿಕತೆ, ಪಾರದರ್ಶಕತೆ : ಸಾರ್ವಜನಿಕ ದೇಣಿಗೆಗಳು ಮತ್ತು ಸರ್ಕಾರದ ಅನುದಾನಗಳ ಮೂಲಕ ಬರುವ ಬಹುಪಾಲು ನಿಧಿಗಳನ್ನು ಸ್ವೀಕರಿಸುವಲ್ಲಿ ಮತ್ತು ಖರ್ಚುಮಾಡುವಲ್ಲಿ ರಾಮಕೃಷ್ಣ ಮಿಷನ್ ಎಲ್ಲ ಶಾಸನಬದ್ಧ ಹಾಗೂ ಸಂಬಂಧಿತ ನಿಯಮ, ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಅದರ ಆಯವ್ಯಯಗಳು ಕಾಲಕಾಲಕ್ಕೆ ಲೆಕ್ಕಪರಿಶೋಧನೆಗೆ ಒಳಪಡುತ್ತವೆ ಮತ್ತು ಸಾರ್ವಜನಿಕರಿಗೆ ಲಭ್ಯವಾಗುತ್ತವೆ. ಆರ್ಥಿಕ ವಿಷಯಗಳಲ್ಲಿ ಪಾರದರ್ಶಕತೆ ಎಂಬುದು ರಾಮಕೃಷ್ಣ ಮಿಷನ್ನಿನ ಒಂದು ವಿಶಿಷ್ಟವಾದ ಲಕ್ಷಣವೇ ಆಗಿದೆ. 5. ರಾಜಕೀಯರಹಿತ ಸಾಮಾಜಿಕ ಬದ್ಧತೆ : “ಸುಖೀ ರಾಜ್ಯ"ದ ತತ್ವವನ್ನನುಸರಿಸುವ ಪ್ರಜಾಪ್ರಭುತ್ವದ ರಾಷ್ತ್ರವೊಂದರಲ್ಲಿ ಯಾವುದೇ ಬಗೆಯ ಸಾಮಾಜಿಕ ಸೇವೆಯೂ ಅನಿವಾರ್ಯವಾಗಿ ಸರ್ಕಾರದ ಜೊತೆ ಸಂಬಂಧವನ್ನು ಒಳಗೊಳ್ಳುತ್ತದೆ ಆದರೂ, ರಾಮಕೃಷ್ಣ ಮಿಷನ್ ಮನುಕುಲದ ಆಧ್ಯಾತ್ಮಿಕ ಪುನರುಜ್ಜೀವನವನ್ನು ಗುರಿಯಾಗಿಸಿಕೊಂಡಿರುವ ಒಂದು ಆಧ್ಯಾತ್ಮಿಕ ಸಂಸ್ಥೆಯಾಗಿರುವುದರಿಂದ ತನ್ನ ಸ್ಥಾನವನ್ನು ಸಕ್ರಿಯ ರಾಜಕಾರಣ ಹಾಗೂ ರಾಜಕೀಯ ಸಂಬಂಧಗಳಿಗೆ ಅತೀತವಾಗಿ ಉಳಿಸಿಕೊಂಡಿದೆ. ಕನ್ನಡನಾಡಿನಲ್ಲಿ ಸೇವೆಸಲ್ಲಿಸಿದ ರಾಮಕೃಷ್ಣ ಮಠದ ಪ್ರಮುಖ ಸನ್ಯಾಸಿಗಳು ಸ್ವಾಮಿ ಶಾಂಭವಾನಂದ ಸ್ವಾಮಿ ಸೋಮನಾಥಾನಂದ ಸ್ವಾಮಿ ಯತೀಶ್ವರಾನಂದ ಸ್ವಾಮಿ ಶಾಸ್ತ್ರಾನಂದ ಸ್ವಾಮಿ ಆದಿದೇವಾನಂದ ಸ್ವಾಮಿ ತ್ಯಾಗೀಶಾನಂದ ಸ್ವಾಮಿ ಸುಂದಾನಂದ ಸ್ವಾಮಿ ಸಿದ್ದೇಶ್ವರಾನಂದ ಸ್ವಾಮಿ ಜಗದಾತ್ಮಾನಂದ ಉಲ್ಲೇಖಗಳು swami purushottamanandaji ವರ್ಗ:ಸಾಮಾಜಿಕ ಸಂಸ್ಥೆಗಳು ವರ್ಗ:ಧಾರ್ಮಿಕ ಸಂಸ್ಥೆಗಳು ವರ್ಗ:ಹಿಂದೂ ಧರ್ಮ ವರ್ಗ:ಶೈಕ್ಷಣಿಕ ಸಂಸ್ಥೆಗಳು ವರ್ಗ:ಸಮಾಜಸೇವಕರು
ಚಂದ್ರಶೇಖರ ಕಂಬಾರ
https://kn.wikipedia.org/wiki/ಚಂದ್ರಶೇಖರ_ಕಂಬಾರ
thumb|ಚಂದ್ರಶೇಖರ  ಕಂಬಾರರಿಗೆ ಎಲ್ ಬಿ ಕಾಲೇಜಿನಿಂದ ಬೀಳ್ಕೊಡುಗೆ ನೀಡಿದ ದಿನದ ಚಿತ್ರ ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನ್ ಮುಂತಾದೆಡೆಗಳ ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಮತ್ತು ರಂಗಭೂಮಿ ಕುರಿತ ಉಪನ್ಯಾಸಗಳನ್ನು ನೀಡಿರುವ ಹೆಗ್ಗಳಿಕೆ ಇವರದು. ಜನನ ವಿದ್ಯಾಭ್ಯಾಸ ಡಾ. ಚಂದ್ರಶೇಖರ ಕಂಬಾರ (ಜನನ - ಜನವರಿ ೨, ೧೯೩೭) ಬೆಳಗಾವಿ ಜಿಲ್ಲೆ ಘೋಡಿಗೇರಿ ಗ್ರಾಮದಲ್ಲಿ ಬಸವಣ್ಣೆಪ್ಪ ಕಂಬಾರ ಹಾಗೂ ಚೆನ್ನಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಗೋಕಾಕ್ ನ ಮುನ್ಸಿಪಲ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಬಳಿಕ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಬಿಎ ಪದವಿ, ೧೯೬೨ರಲ್ಲಿ 'ಕರ್ನಾಟಕ ವಿವಿ'ಯಿಂದ ಎಂ.ಎ ಪದವಿ ಹಾಗೂ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ವೃತ್ತಿಜೀವನ ಕಂಬಾರರು ಯುವಕರಾಗಿದ್ದಾಗ ಧಾರವಾಡದ ಕವಿ ಸಮ್ಮೇಳನದಲ್ಲಿ ಕವಿತೆಯೊಂದನ್ನು ಓದಿದ್ದರಂತೆ, ಖ್ಯಾತ ಕವಿಗಳೊಬ್ಬರು ಕಂಬಾರರ ಕವಿತೆ ಅಲ್ಲಿ ಓದಿದ ಎಲ್ಲ ಕವಿಗಳಿಗಿಂತ ಭಿನ್ನವಾಗಿದ್ದದ್ದು ಎಲ್ಲರ ಗಮನಕ್ಕೆ ಬಂದಿದ್ದರೂ, ಅದ್ಯಕ್ಷರು ಕಂಬಾರರ ಬಗ್ಗೆ ಕುಹಕದ ಮಾತು ಹೇಳಿದ್ದರು. "ಕಬ್ಬಿಣ ಕಾಸುವವರೂ ಈಗ ಕಾವ್ಯ ಬರೆಯುತ್ತಿದ್ದಾರೆ " ಎಂಬ ಅಧ್ಯಕ್ಷರ ಮಾತು ಕಂಬಾರರ ಸ್ವಾಭಿಮಾನವನ್ನೇ ಬಡಿದೆಬ್ಬಿಸಿತು.   ಅಂದೇ ಕಂಬಾರ ಕಾವ್ಯವನ್ನು ಪಳಗಿಸಿಕೊಳ್ಳಲು ನಿರ್ಧರಿಸಿದರಂತೆ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಸಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ೨೦೦೪-೨೦೧೦ರವರೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ಇತ್ಯಾದಿ. ಕಂಬಾರರು ಸ್ನಾತಕೋತ್ತರ ಶಿಕ್ಷಣದ ನಂತರ ಅವರ ಸಾಹಿತ್ಯದ ಗುರು ಎಂದೇ ಗುರುತಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಅಡಿಗರು ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಾಗರದ ಲಾಲ್ ಬಹದೂರ್ ಕಲಾ, ವಿಜ್ಞಾನ ಮತ್ತು ಎಸ್ ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ  ಮಹಾವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ೨೦೧೯ ನೇ ಸಾಲಿನ ವಿದ್ಯಾಕಾಶಿ ಧಾರವಾಡದಲ್ಲಿ ನಡೆದ ೮೪ ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕವಿ/ನಾಟಕಕಾರ ಮುಖ್ಯವಾಗಿ ಕವಿ-ನಾಟಕಕಾರರಾಗಿ ಕಂಬಾರ ಜನಪ್ರಿಯರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಉಪನ್ಯಾಸಕ ವೃತ್ತಿಯಿಂದ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಈಗ ಬೆಂಗಳೂರಿನ ಬನಶಂಕರಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಈ ನಡುವೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿಯೂ ಮೂರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಮ್ಮ ಊರಿನ ವಾತಾವರಣದಲ್ಲಿನ ಜಾನಪದ ಹಾಡು, ಕುಣಿತ, ನಾಟಕಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳ ಸಂಗ್ರಹ, ಬರವಣಿಗೆಯನ್ನು ರೂಢಿಸಿಕೊಂಡರು. ಉತ್ತರ ಕರ್ನಾಟಕದ ಅದರಲ್ಲೂ ಗೋಕಾಕ, ಬೆಳಗಾವಿ, ಧಾರವಾಡದ ಗಂಡು ಭಾಷೆಯನ್ನು ಕನ್ನಡ ಸಾಹಿತ್ಯಕ್ಕೆ ಹೊತ್ತು ತಂದರು. ಧಾರವಾಡದ ವರಕವಿ ಡಾ. ದ.ರಾ.ಬೇಂದ್ರೆ ಅವರ ನಂತರ ಭಾಷೆಯನ್ನು ಪರಿಣಾಮಕಾರಿಯಾಗಿ ದುಡಿಸಿ ಕೊಂಡವರಲ್ಲಿ ಕಂಬಾರರು ಒಬ್ಬರು. ಕಂಬಾರರು ತಾವೇ ಬರೆದ ಕಾದಂಬರಿಗಳನ್ನು ಚಲನಚಿತ್ರ ಗಳಾಗಿಸಿದರು. "ಕರಿಮಾಯಿ, ಸಂಗೀತಾ, ಕಾಡುಕುದುರೆ ಸಿಂಗಾರವ್ವ ಮತ್ತು ಅರಮನೆ" ಇವುಗಳಲ್ಲಿ ಪ್ರಮುಖವಾದುವು. ಕಂಬಾರರು ತಮ್ಮ ಚಿತ್ರಗಳಿಗೆ ತಾವೇ ಸಂಗೀತ ನೀಡಿದ್ದಾರೆ. ಕಾಡುಕುದುರೆಯ ಹಿನ್ನೆಲೆ ಸಂಗೀತದ ``ಕಾಡು ಕುದುರೆ ಓಡಿಬಂದಿತ್ತಾsss.." ಹಾಡಿಗೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರಪತಿಗಳ ಫಲಕ ಕೂಡ ಸಿಕ್ಕಿತು. `ಜೀಕೆ ಮಾಸ್ತರ ಪ್ರಣಯ ಪ್ರಸಂಗ' ಕಾದಂಬರಿಯನ್ನು ಕಿರುತೆರೆಗೂ ಅಳವಡಿಸಿದ್ದಾರೆ. ಹತ್ತಾರು ಸಾಕ್ಷ್ಯ ಚಿತ್ರಗಳನ್ನೂ ನಿರ್ಮಿಸಿರುವ ಕಂಬಾರರು ಉತ್ತಮ ನಾಟಕಕಾರರು. ಜೊತೆಗೆ ಜಾನಪದ ಶೈಲಿಯ ಹಾಡುಗಳಿಂದ ಜನಪ್ರಿಯರು. ಅವರು ತಾವೇ ಸ್ವತಃ ಹಾಡುಗಾರರೂ ಆಗಿದ್ದಾರೆ. ಕೃತಿಗಳು ಕಂಬಾರು ಬರೆದ ಪುಸ್ತಕಗಳು ತುಂಬ. ಅವರ ೧೦ಕಾವ್ಯ ಪುಸ್ತಕ, ೨೫ ನಾಟಕ ಪುಸ್ತಕ, ೧ ಮಹಾಕಾವ್ಯ, ೫ ಕಾದಂಬರಿ ಅಲ್ಲದೆ ೧೭ ಬೇರೆಬೇರೆ ಗದ್ಯ ಸಂಪಾದನೆಗಳು, ಸಂಗ್ರಹಗಳು, ಪ್ರಬಂಧ ಸಂಕಲನಗಳು, ಸಂಶೋಧನ ಪುಸ್ತಕಗಳು ಬಂದಿವೆ.ಅಭಿನಂನ ಗ್ರಂಥ:-ಸಿರಿಸಂಪಿಗೆ. ಕಾವ್ಯಗಳು ಮುಗುಳು ೧೯೫೮ ಹೇಳತೇನ ಕೇಳ ೧೯೬೪ ತಕರಾರಿನವರು ೧೯೭೧ ಸಾವಿರಾರು ನೆರಳು ೧೯೭೯ (ಕುಮಾರ ಆಶನ್ ಪ್ರಶಸ್ತಿ ೧೯ ಬೆಳ್ಳಿ ಮೀನು ೧೯೮೯ ಅಕ್ಕಕ್ಕು ಹಾಡುಗಳೆ ೧೯೯೩ ಈ ವರೆಗಿನ ಹೇಳತೇನ ಕೇಳ ೧೯೯೩ ಹಂಪಿಯ ಕಲ್ಲುಗಳು (ಈ ಕಾವ್ಯ ಪುಸ್ತಕವನ್ನು ಓ.ಎಲ್. ನಾಗಭೂಷಣ ಸ್ವಾಮಿಯವರು ಸಾಹಿತ್ಯ ಅಕಾಡೆಮಿಗಾಗಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ) ೨೦೦೪ ಎಲ್ಲಿದೆ ಶಿವಾಪುರ ೨೦೦೯ ನಾಟಕಗಳು ಬೆಂಬತ್ತಿದ ಕಣ್ಣು ೧೯೬೧ ನಾರ್ಸಿಸ್ಸ್ ೧೯೬೯ ಋಷ್ಯಶೃಂಗ ೧೯೭೦ (ಸಿನಿಮಾ ಆಗಿದೆ) ಜೋಕುಮಾರಸ್ವಾಮಿ ೧೯೭೨ (ನಾಟ್ಯ ರಂಗ ಪ್ರಶಸ್ತಿ). ಚಾಲೇಶ ೧೯೭೩ (ಮದ್ರಾಸ್ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ವತಿಯಿಂದ ಈ ಪುಸ್ತಕವು ಹಿಂದಿ ಇಂಗ್ಲಿಷ್ ಭಾಷೆಗೆ ೧೯೭೩ರಲ್ಲಿ ಅನುವಾದ ಆಗಿದೆ) ಸಂಗ್ಯಾಬಾಳ್ಯಾ ಅನ್ಬೇಕೊ ನಾಡೊಳಗ ೧೯೭೫ ಕಿಟ್ಟಿಯ ಕಥೆ ೧೯೭೪ ಜೈಸಿದ್ದನಾಯಕ ೧೯೭೫ (ಈ ಪುಸ್ತಕಕ್ಕೆ ೧೯೮೪ರ ನವದೆಹಲಿದ ಸರಸ್ವತಿ ವಿಹಾರಕ್ಕೆ ಹಿಂದಿ ಮತ್ತು ಇಂಗ್ಲಿಷ್ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಮಾಡಿದ್ದಾರೆ). (ಹಾಗೇ ಕೆಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿಗೆ ಆಯ್ಕೆ ಆಗಿದೆ.) ಆಲಿಬಾಬ ೧೯೮೦ (ಸಾಹಿತ್ಯ ಅಕಾಡೆಮಿದ ಭಾರತೀಯ ಸಾಹಿತ್ಯಕ್ಕೆ ಅನುವಾದ ಆಗಿದೆ) ಕಾಡುಕುದುರೆ ೧೯೭೯ ಸಿನಿಮಾ ಆಗಿದೆ. ಮತ್ತು ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ನಾಯಿಕಥೆ ೧೯೮೦ (ಸಂಗೀತ ಸಿನಿಮಕ್ಕೆ ಆಯ್ಕೆ ಮತ್ತು ೫ ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ ಬಂದಿದೆ. ಖಾರೋಖಾರ ೧೯೭೭ ಮತಾಂತರ ೧೯೭೮ ಹರಕೆಯ ಕುರಿ ೧೯೮೩ (ಸಿನಿಮಾ ಆಗಿದೆ. ರಾಷ್ಟ್ರಪ್ರಶಸ್ತಿ ಬಂದಿದೆ. ಹಾಗೇ ೧೯೮೯ರಲ್ಲಿ ನವದೆಹಲಿಯ ಜ್ಞಾನಭಾರತಿಯಿಂದ ಹಿಂದಿ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗಿದೆ) ಕಂಬಾರ ಅವರ ನಾಟಕಗಳು ೧೯೮೪ ಸಾಂಬಶಿವ ಪ್ರಹಸನ ೧೯೮೭ (೧೯೯೧ರಲ್ಲಿಇ ಕಲ್ಕತ್ತದ ಸೀಗಲ್ ಬೂಕ್‍ ಪ್ರಕಾಶಕರು ಈ ಪುಸ್ತಕವನ್ನು ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಬಾಸೆಗ್ ಅನುವಾದ ಮಾಡಿ ಪ್ರಕಟಿಸಿದ್ದಾರೆ) ಸಿರಿಸಂಪಿಗೆ ೧೯೯೧ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ) ಹುಲಿಯ ನೆರಳು ೧೯೮೦ (ಸಿನೆಮ ಆಗಿದೆ) ಬೋಳೆ ಶಂಕರ ೧೯೯೧ ಪುಷ್ಪರಾಣಿ ೧೯೯೧ ತಿರುಕನ ಕನಸು ೧೯೮೯ ಮಹಾಮಾಯಿ ೧೯೯೯ (೨೦೦೦ನೇ ವರ್ಷದಲ್ಲಿ ದೆಹಲಿಯ ಎನ್.ಎಸ್.ಡಿ. ಸಂಸ್ಥೆಯಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಅನುವಾದ ಆಗಿದೆ. ನೆಲಸಂಪಿಗೆ ೨೦೦೪ (ಈ ಪುಸ್ತಕವನ್ನು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರ ಪ್ರಕಟ ಮಾಡಿದೆ) ಜಕ್ಕಣ ೨೦೦೮ ಶಿವರಾತ್ರಿ ೨೦೧೧ ಮಹಾಕಾವ್ಯ ಚಕೋರಿ೧೯೯೬ (೧೯೯೯ರಲ್ಲಿ ಪ್ರಕಟವಾದ ಈ ಪುಸ್ತಕವು ಭಾರತದ ಪೆಂಗ್ವಿನ್ ಪ್ರಕಾಶನದಿಂದ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ) ಕಾದಂಬರಿ ಅಣ್ಣತಂಗಿ ೧೯೫೬ ಕರಿಮಾಯಿ ೧೯೭೫ - ಸಿನಿಮಾ ಆಗಿದೆ ಜಿ.ಕೆ.ಮಾಸ್ತರ್ ಪ್ರಣಯ ಪ್ರಸಂಗ ೧೯೮೬ (ದೂರದರ್ಶನ ಸಿನೆಮಾ ಆಗಿದೆ. ಹಾಗೇ ದೆಹಲಿಯ ವಿದ್ಯಾ ಪ್ರಕಾಶನ ಮಂದಿರದಿಂದ ಹಿಂದಿ ಭಾಷೆಗೆ ಅನುವಾದ ಆಗಿದೆ) ಸಿಂಗಾರವ್ವ ಮತ್ತು ಅರಮನೆ ೧೯೮೨(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ೨೦೦೨ರಲ್ಲಿ ನವದೆಹಲಿಯಿಂದ ಕಥಾಪುಸ್ತಕ ರೂಪದಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದ ಆಗಿದೆ. ೧೯೮೪ರಲ್ಲಿ ನವದೆಹಲಿಯ ರಾಧಾಕೃಷ್ಣ ಪ್ರಕಾಶನದಿಂದ ಹಿಂದಿ ಭಾಷೆಗೆ ಅನುವಾದ ಆಗಿದೆ. ೧೯೯೯ರಲ್ಲಿ ಕೇರಳದ ಕೊಟ್ಟಾಯಂನಿಂದ ಕುಲೊಥೆ ಚಿಂಗಾರಮ್ಮ ಹೆಸರಲ್ಲಿ ಡಿ.ಸಿ. ಪುಸ್ತಕವಾಗಿ ಮಲಯಾಳಿ ಭಾಷೆಗೆ ಅನುವಾದವಾಗಿದೆ.) ಶಿಖರ ಸೂರ್ಯ ೨೦೦೭ ಅಕ್ಷರ ಪ್ರಕಾಶನ ಪ್ರಕಟ ಶಿವನ ಡಂಗುರ ಸಂಶೋಧನಾ ಗ್ರಂಥ ಉತ್ತರ ಕರ್ನಾಟಕ ಜಾನಪದ ರಂಗಭೂಮಿ ೧೯೮೦ ಸಂಗ್ಯಾ ಬಾಳ್ಯಾ ೧೯೬೬ ಬನ್ನಿಸಿ ಹಾಡುವ ನನ ಬಳಗ ೧೯೬೮ ಬಯಲಾಟಗಳು ೧೯೭೩ ಮಾತಾಡೊ ಲಿಂಗವೆ ೧೯೭೩ ನಮ್ಮ ಜನಪದ ೧೯೮೦ ಬಂದಿರೆ ನನ್ನ ಜೈಯೊಳಗೆ ೧೯೮೧ ಜಾನಪದ ವಿಶ್ವಕೋಶ ೧೯೮೫ (ಗ್ರಂಥದ ೨ ಸಂಪುಟವನ್ನು ಕನ್ನಡದಲ್ಲಿ ತಂದಿದ್ದಾರೆ) ಬೇಡರ ಹುಡುಗ ಮತ್ತು ಗಿಳಿ ೧೯೮೯ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ) ಲಕ್ಷಪತಿ ರಾಜನ ಕಥೆ ೧೯೮೬ ಕಾಸಿಗೊಂದು ಸೇರು ೧೯೮೯ ನೆಲದ ಮರೆಯ ನಿಧಾನ ೧೯೯೩ ಬೃಹದ್ಧೇಸಿಯ ಚಿಂತನ ೨೦೦೧ An Anthology of Modern India Plays for the National School of Drama – ೨೦೦೦ ದೇಶಿಯ ಚಿಂತನ ೨೦೦೪ (ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿ ಅಂಕಿತ ಪುಸ್ತಕ ಪ್ರಕಾಶನದ ಸಂಗ್ರಹ ಪುಸ್ತಕವಾಗಿ ಪ್ರಕಟ ಆಗಿದೆ) ಮರವೆ ಮರ್ಮರವೆ ೨೦೦೭ ಇದು ದೇಸಿ ೨೦೧೦ ಸ್ಥಾನಮಾನ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ನವದೆಹಲಿದ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ೨೦೦೪-೨೦೧೦ರ ವರೆಗೆ ಕಾಂಗ್ರೆಸ್ ಪಕ್ಷದ ಕರ್ನಾಟಕ ವಿಧಾನ ಪರಿಷತ್ನ ಸದಸ್ಯ ಹಂಪಿ ಕನ್ನಡ ವಿವಿದ ಮೊದಲ ಉಪಕುಲಪತಿ (ಎರಡು ಅವಧಿಗೆ) ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು. ಪ್ರಶಸ್ತಿಗಳು ಮತ್ತು ಸನ್ಮಾನಗಳು ಅಕಾಡೆಮಿ ರತ್ನ ಪ್ರಶಸ್ತಿ ೨೦೧೧(ಕೇಂದ್ರ ಸಂಗೀತ ನಾಟಕ ಅಕಾಡೆಮಿ) ಜ್ಞಾನಪೀಠ ಪ್ರಶಸ್ತಿ ೨೦೧೦ ದೇವರಾಜ ಅರಸ್ ಪ್ರಶಸ್ತಿ ೨೦೦೭ ಜೋಶು ಸಾಹಿತ್ಯ ಪುರಸ್ಕಾರಂ ೨೦೦೫ (ಆಂದ್ರಪ್ರದೇಶ ಸರಕಾರ) ನಾಡೋಜ ಪ್ರಶಸ್ತಿ ೨೦೦೪ (ಹಂಪಿ ಕನ್ನಡ ವಿಶ್ವವಿದ್ಯಾಲಯ) ಪಂಪ ಪ್ರಶಸ್ತಿ ೨೦೦೪ ಸಂತ ಕಬೀರ್ ಪ್ರಶಸ್ತಿ ೨೦೦೨ ೨೦೦೬ರ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷರು ೨೦೦೪ ರಿಂದ ೨೦೧೦ರ ವರೆಗೆ ವಿಧಾನ ಪರಿಷತ್ ಸದಸ್ಯ ಪದ್ಮಶ್ರೀ ಪ್ರಶಸ್ತಿ ೨೦೦೧ ಮಾಸ್ತಿ ಪ್ರಶಸ್ತಿ ೧೯೯೭ (ಕರ್ನಾಟಕ ಸರಕಾರ) ಜಾನಪದ ಮತ್ತು ಯಕ್ಷಗಾನೊ ಅಕಾಡೆಮಿ ಪ್ರಶಸ್ತಿ ೧೯೯೩ ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೧ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೮೯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೮೮ ನಂದಿಕರ್ ಪ್ರಶಸ್ತಿ ೧೯೮೭ (ಕಲ್ಕತ್ತ) ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ೧೯೮೭ ಸಂಗೀತ ನಾಟಕ ಅಕಾಡೆಮಿ ೧೯೮೩ ಕುಮಾರ ಆಶನ್ ಪ್ರಶಸ್ತಿ ೧೯೮೨ (ಕೇರಳ ಸರಕಾರ) ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ೧೯೭೫ ಮಧ್ಯಪ್ರದೇಶ ಸರ್ಕಾರ ಕೊಡುವ ಕಾಳಿದಾಸ ಸಮ್ಮಾನ್ ಪ್ರಶಸ್ತಿ "ಜೋ ಕುಮಾರಸ್ವಾಮಿ" ನಾಟಕಕ್ಕೆ ೧೯೭೫ದ ಭಾರತೀಯ ಭಾಷೆಯ ಅತ್ಯುತ್ತಮ ನಾಟಕ - ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಶಿಖರ ಸೂರ್ಯ ಪುಸ್ತಕಕ್ಕೆ ಟ್ಯಾಗೋರ್‌ ಪ್ರಶಸ್ತಿ, ಹುದ್ದೆಗಳು/ಗೌರವ ಹುದ್ದೆಗಳು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ೨೦೦೪-೨೦೧೦ರವರೆಗೆ ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು ಹಂಪಿ ಕನ್ನಡ ವಿವಿಯ ಮೊದಲ ಉಪಕುಲಪತಿ (ಎರಡು ಅವಧಿ) ಕೇಂದ್ರ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸಾಹಿತಿ ಕಂಬಾರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಪ್ರಜಾವಾಣಿ ವಾರ್ತೆ; 12 Feb, 2018 ೨೦೨೧ರ ಭಾರತ ಸರ್ಕಾರದ ಮೂರನೆಯ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ.https://www.thehindu.com/news/national/list-of-padma-awardees-2021/article33661766.ece ಹೊರಗಿನ ಸಂಪರ್ಕಗಳು ಸಂಪದದಲ್ಲಿ ಮೂಡಿಬಂದ ಚಂದ್ರಶೇಖರ ಕಂಬಾರರ ಸಂದರ್ಶನ (ಶ್ರಾವ್ಯ - ಆಡಿಯೋ) ಚಂದ್ರಶೇಖರ ಕಂಬಾರ-ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಚಂದ್ರಶೇಖರ ಕಂಬಾರ ಉಲ್ಲೇಖ ವರ್ಗ:ಕನ್ನಡ ಸಾಹಿತ್ಯ ಚಂದ್ರಶೇಖರ ಕಂಬಾರ ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು ವರ್ಗ:ಕನ್ನಡ ಕವಿಗಳು ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
ಕೆ. ಎಸ್. ನರಸಿಂಹಸ್ವಾಮಿ
https://kn.wikipedia.org/wiki/ಕೆ._ಎಸ್._ನರಸಿಂಹಸ್ವಾಮಿ
ಕೆ. ಎಸ್. ನರಸಿಂಹಸ್ವಾಮಿ, ಕನ್ನಡಿಗರ ಪ್ರೇಮಕವಿ,ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, ಮೈಸೂರು ಮಲ್ಲಿಗೆಯ ಕರ್ತೃ.(ಜನವರಿ ೨೬ ೧೯೧೫-ಡಿಸೆಂಬರ್ ೨೮ ೨೦೦೩) 'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರ್ತಿಸಿದ್ದಾರೆ. ಜನನ,ವೃತ್ತಿಜೀವನ ಕೆಎಸ್‌ನ,{"ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ"}, ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ ಜನಿಸಿದರು. ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಹಾಗೂ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ; (ಅಪೂರ್ಣ) ವ್ಯಾಸಂಗ ಮಾಡಿದರು ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು. ಮೈಸೂರು ಮಲ್ಲಿಗೆಯ ಕವಿತೆಗಳನ್ನು ಭಾವಗೀತೆಗಳ ಮೂಲಕ ಹಾಡಿ ಜನಪ್ರಿಯ ಮಾಡಿದಂತೆ ಆ ಕೃತಿಯನ್ನು ಅಪಾರ ಸಂಖ್ಯೆಯ ಓದುಗರೂ ಕೊಂಡು ಓದಿರುವುದು ಹೆಗ್ಗಳಿಕೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ನಾನು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ, ದಾಂಪತ್ಯ ಕವಿತೆಗಳೆಂದು ಕೆಎಸ್‌ನ ಹೇಳಿಕೊಂಡಿದ್ದಾರೆ. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳೇ ಆಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮಣ್ಣಿನ ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನಗಳು ಹೊರಬಂದಿವೆ. "ಮಲ್ಲಿಗೆಯ ಮಾಲೆ" ಸಮಗ್ರ ಕವಿತೆಯ ಸಂಕಲನ. ಸಮಗ್ರ ಸಂಕಲನ ಬಂದರೂ ಈಚೆಗೆ `ಸಂಜೆ ಹಾಡು' ಎಂಬ ಹೊಸ ಕಾವ್ಯ ಹೊರಬಂದಿದೆ. ಕಾವ್ಯ ಇವರ ಪ್ರಮುಖ ಕೃಷಿ ಆದರೂ ಗದ್ಯದಲ್ಲೂ ಕೃಷಿ ಮಾಡಿದ್ದಾರೆ. ಮಾರಿಯಕಲ್ಲು, ಉಪವನ, ದಮಯಂತಿ ಪ್ರಮುಖ ಕೃತಿಗಳು. ಅಲ್ಲದೆ ಹಲವು ಅನುವಾದಿತ ಕೃತಿಗಳೂ ಬಂದಿವೆ. ಮೋಹನ ಮಾಲೆ, ನನ್ನ ಕನಸಿನ ಭಾರತ, ಪ್ರಪಂಚದ ಬಾಲ್ಯದಲ್ಲಿ, ಮೀಡಿಯಾ, ಸುಬ್ರಮಣ್ಯ ಭಾರತಿ, ಮಾಯಾಶಂಖ ಮತ್ತು ಇತರ ಕತೆಗಳು, ಅನುವಾದಿತ ಕೃತಿಗಳು. ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು ೧೯೩೩ - ಕಬ್ಬಿಗನ ಕೂಗು ಮೊದಲ ಕವನ. ೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ. ೧೯೪೩- ದೇವರಾಜ್ ಬಹದ್ದೂರ್ ಬಹುಮಾನ. ೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ ೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ . ೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ. ೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ . ೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ. ೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ. ೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ . ೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್. ೧೯೯೬- ಮಾಸ್ತಿ ಪ್ರಶಸ್ತಿ . ೧೯೯೭- ಪಂಪ ಪ್ರಶಸ್ತಿ . ೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್. ೨೦೦೦- ಗೊರೂರು ಪ್ರಶಸ್ತಿ . ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಮುಖ ಕೃತಿಗಳು ಕವನ ಸಂಕಲನಗಳು ೧೯೪೨- ಮೈಸೂರು ಮಲ್ಲಿಗೆ. ೧೯೪೫- ಐರಾವತ ೧೯೪೭- ದೀಪದ ಮಲ್ಲಿ ೧೯೪೯- ಉಂಗುರ ೧೯೫೪- ಇರುವಂತಿಗೆ ೧೯೫೮- ಶಿಲಾಲತೆ ೧೯೬೦- ಮನೆಯಿಂದ ಮನೆಗೆ ೧೯೭೯- ತೆರೆದ ಬಾಗಿಲು ೧೯೮೯- ನವ ಪಲ್ಲವ ೧೯೯೩- ದುಂಡುಮಲ್ಲಿಗೆ ೧೯೯೯- ನವಿಲದನಿ ೨೦೦೦- ಸಂಜೆ ಹಾಡು ೨೦೦೧- ಕೈಮರದ ನೆಳಲಲ್ಲಿ ೨೦೦೨- ಎದೆ ತುಂಬ ನಕ್ಷತ್ರ ೨೦೦೩- ಮೌನದಲಿ ಮಾತ ಹುಡುಕುತ್ತ ೨೦೦೩- ದೀಪ ಸಾಲಿನ ನಡುವೆ ೨೦೦೩- ಮಲ್ಲಿಗೆಯ ಮಾಲೆ ೨೦೦೩- ಹಾಡು-ಹಸೆ ಗದ್ಯ ಮಾರಿಯ ಕಲ್ಲು ದಮಯಂತಿ ಉಪವನ ಅನುವಾದಗಳು ಮೋಹನಮಾಲೆ ( ಗಾಂಧೀಜಿ ) ನನ್ನ ಕನಸಿನ ಭಾರತ (ಗಾಂಧೀಜಿ) ಮೀಡಿಯಾ ( ಯುರಿಪೀಡಿಸ್ ನಾಟಕ) ಪುಷ್ಕಿನ್ ಕವಿತೆಗಳು ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು ಆಯ್ದ ಕವನಗಳು ಚೆಲುವು ಮಾತು ಮುತ್ತು ನಿಲ್ಲಿಸದಿರೆನ್ನ ಪಯಣವನು ಅಂಥಿಂಥ ಹೆಣ್ಣು ನೀನಲ್ಲ!! ದೀಪದ ಮಲ್ಲಿ ಅಕ್ಕಿ ಆರಿಸುವಾಗ ... ನಿನ್ನೊಲುಮೆಯಿಂದಲೆ ಬಾರೆ ನನ್ನ ಶಾರದೆ ನಿನ್ನ ಹೆಸರು ರಾಯರು ಬಂದರು ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು ನಮ್ಮುರು ಚೆಂದವೋ ನಿಮ್ಮೂರು ಚೆಂದವೋ ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ ನಿನ್ನ ಪ್ರೇಮದ ಪರಿಯೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ಉಲ್ಲೇಖ ಬಾಹ್ಯಸಂಪರ್ಕಗಳು ಡಾ.ಕೆ.ಎಸ್.ನ.ಕಾವ್ಯದಲ್ಲಿ ಶ್ರೇಷ್ಠತೆ ಮತ್ತು ಜನಪ್ರಿಯತೆಯಿತ್ತು. ಮುಂಬಯಿನ ಮೈಸೂರು ಅಸೋಸಿಯೇಷನ್ ನಲ್ಲಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಉಪನ್ಯಾಸದಲ್ಲಿ, ಉದಯವಾಣಿ, ೩೧-೦೩-೨೦೧೫, p.10 udayavani 31,-03-2015 ವರ್ಗ:ಕನ್ನಡ ಸಾಹಿತ್ಯ ಕೆ.ಎಸ್.ನರಸಿಂಹಸ್ವಾಮಿ ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು
ಚದುರಂಗ
https://kn.wikipedia.org/wiki/ಚದುರಂಗ
thumb|ಮಂಡ್ಯದಲ್ಲಿ (1994) ನಡೆದ 63ನೇ ಸಮ್ಮೇಳನದ ಅಧ್ಯಕ್ಷ ಚದುರಂಗ ಮೆರವಣಿಗೆ ''</center> thumb|ಶ್ರೀ ಚದುರಂಗರು ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು. ಜನ್ಮವೃತ್ತಾಂತ ೧೯೧೬ರ ಜನವರಿ ೧ರಂದು ಹುಣಸೂರು ತಾಲೂಕು, ಕಲ್ಲಹಳ್ಳಿಯಲ್ಲಿ ಜನಿಸಿದ ಚದುರಂಗರು ಮೈಸೂರು ರಾಜಮನೆತನದ ಸಂಬಂಧಿ. ಇತರ ವಂಶದ ಪೂರ್ವಿಕರಲ್ಲಿ ಒಬ್ಬನಾದ ಮಂಗರಸ ಕವಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಿತನಾಗಿದ್ದಾನೆ. ಮೈಸೂರಿನ ಮಹಾರಾಜ ಜಯ ಚಾಮರಾಜ ಒಡೆಯರ ಓರಗೆಯವರಾಗಿದ್ದ ಚದುರಂಗ ಮೈಸೂರಿನ ರಾಯಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಬೆಂಗಳೂರಿನ ಮೀಡಿಯಟ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. ಪುಣೆಯಲ್ಲಿ ಕಾನೂನು ಮತ್ತು ಎಂ.ಎ. ಕಲಿಯಲು ಹೋಗಿ ಕಾರಣಾಂತರಗಳಿಂದ ಓದು ನಿಲ್ಲಿಸಿದರು. ಬಾಲ್ಯ ಬಾಲ್ಯದಲ್ಲೇ ಕತೆ ಕೇಳುವ ಹಾಗೂ ಆ ನಿಟ್ಟಿನಲ್ಲಿ ಯೋಚಿಸಿ ಬರೆಯುವ ಆಸಕ್ತಿ ಇದ್ದುದರಿಂದ ತಮ್ಮ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ, ಪುರಾಣ ಕತೆಗಳನ್ನು ರಾಜ ಮನೆತನದ ಹುಡುಗರಿಗೆ ಹೇಳುತ್ತಿದ್ದರು. ಗಾಂಧೀ ವಿಚಾರಧಾರೆಗೆ ಮನಸೋತು, ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿದ್ದರು. ಎಡಪಂಥೀಯ ವಿಚಾರಧಾರೆಗೆ ಮನಸೋತಿದ್ದ ಚದುರಂಗ ಎಂ. ಎನ್. ರಾಯ್ ಅವರ ವಿಚಾರಗಳನ್ನು ತಲೆ ತುಂಬಿಸಿಕೊಂಡಿದ್ದರು. ರಾಜ ಮನೆತನದ ಸಿರಿ ಸಂಪತ್ತು, ಅಲ್ಲಿನ ಆಡಂಬರ ಚದುರಂಗರಿಗೆ ಇಷ್ಟವಾಗಲಿಲ್ಲವಾದ್ದರಿಂದ ಶ್ರೀಮಂತ ಹೆಣ್ಣು ತಂದು ಮದುವೆ ಮಾಡಬೇಕೆಂಬ ಮನೆಯವರ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ತಮ್ಮಿಷ್ಟವಾದವರನ್ನು ಮದುವೆಯಾದರು. ಸಂಪ್ರದಾಯ ಹಾಗೂ ಸಾಮಾಜಿಕ ಕಟ್ಟು ಪಾಡುಗಳನ್ನು ಮುರಿದು ಸಂಗಾತಿ ಆಯ್ಕೆ ಮಾಡಿಕೊಂಡ ಚದುರಂಗ ಬದುಕನ್ನು ಹೋರಾಟವಾಗಿ ಸ್ವೀಕರಿಸಿ ನೋವುಂಡರು. ಮೈಸೂರು ತೊರೆದು ಹುಟ್ಟೂರು ಕಲ್ಲಹಳ್ಳಿಯಲ್ಲಿ ಬೇಸಾಯಕ್ಕೆ ತೊಡಗಿದರು. ಅಲ್ಲಿನ ಅನುಭವಗಳೇ ಮುಂದೆ ಕತೆ, ಕಾದಂಬರಿಗಳಲ್ಲಿ ಮೈತಾಳಿದವು. ಹಳ್ಳಿಯಲ್ಲೇ ಬರಹ ಆರಂಭಿಸಿ ಸಾಹಿತ್ಯದ ಒಡನಾಟವಿಟ್ಟುಕೊಂಡ ಚದುರಂಗರಿಗೆ ಕುವೆಂಪು, ಮಾಸ್ತಿ, ಗೊರೂರು ಪ್ರಭಾವ ಬೀರಿದರು. ಅನಕೃ, ತರಾಸು ಅವರ ಒಡನಾಟದಲ್ಲಿ ಪ್ರಗತಿಶೀಲ ಸಾಹಿತ್ಯ ಚಳುವಳಿಗೂ ಪಾಲ್ಗೊಂಡರು. ಚಿತ್ರರಂಗದೊಡನೆ ಚದುರಂಗರ ನಂಟು ಪದವಿ ಅಧ್ಯಯನಕ್ಕೆಂದು ಪುಣೆಗೆಹೋದ ಚದುರಂಗರಿಗೆ ಚಿತ್ರರಂಗದ ಸಂಪರ್ಕವಾಯಿತು. ಆಗಿನ ಪ್ರಖ್ಯಾತ ಸಿನಿಮಾ ಪತ್ರಿಕೆ Motion pictures magazineಯಲ್ಲಿ Random shots ಎಂಬ ಅಂಕಣವನ್ನು ಬರೆಯಲು ಪ್ರಾರಂಭಿಸಿದರು. ಮಾಯಾ ಎಂಬ ಇಂಗ್ಲಿಷ್ ಚಿತ್ರಕ್ಕೆ ಸಹನಿರ್ದೇಶನ ಮಾಡಿದರು. ೧೯೪೮ ರಲ್ಲಿ ಸೋದರ ಸಂಬಂಧಿ ಕೆಂಪರಾಜ್ ಅರಸ್ ಅವರಿಗಾಗಿ ಭಕ್ತ ರಾಮದಾಸ ಎಂಬ ಚಿತ್ರವನ್ನು ನಿರ್ದೇಶಿದರು. ಈ ಚಿತ್ರಕ್ಕೆ ಚಿತ್ರಕಥೆ , ಸಂಭಾಷಣೆಗಳಲ್ಲದೆ ಎರಡು ಗೀತೆಗಳನ್ನು ರಚಿಸಿದರು. ೧೯೬೮ರಲ್ಲಿ ತಮ್ಮ ಕಾದಂಬರಿಯನ್ನು ಆಧರಿಸಿದ ಸರ್ವಮಂಗಳ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಚದುರಂಗರ ಕಾದಂಬರಿ ಉಯ್ಯಾಲೆ ಅದೇ ಹೆಸರಿನಿಂದ ಚಲನಚಿತ್ರವಾಯಿತು. ಉಯ್ಯಾಲೆ ಚಲನಚಿತ್ರವನ್ನು ಲಕ್ಷ್ಮೀ ನಾರಾಯಣ್ ನಿರ್ದೇಶಿಸಿದರು. ಇದಕ್ಕೆ ಚದುರಂಗರು ಸಂಭಾಷಣೆ ಬರೆದಿದ್ದರು. ಅದರಲ್ಲಿ ರಾಜಕುಮಾರ್, ಕಲ್ಪನಾ ಪ್ರಮುಖ ಪಾತ್ರವಹಿಸಿದ್ದರು. ಇದು ರಾಜ್ಯ ಪ್ರಶಸ್ತಿ ಪಡೆಯಿತು. ಇದು ಹೊಸ ಅಲೆಯ ಚಿತ್ರಗಳ ಗುಂಪಿಗೆ ಸೇರಿ ಕಲಾತ್ಮಕ ಚಿತ್ರವೆನಿಸಿತು. ಇದಲ್ಲದೆ, ಕುವೆಂಪು ಮತ್ತು ನೃತ್ಯ ಕಲಾವಿದೆ ವೆಂಕಟಲಕ್ಷ್ಮಮ್ಮ ಅವರ ಕುರಿತಾಗಿ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕೃತಿಗಳು ಚದುರಂಗರು ರಚಿಸಿದ ಕೃತಿಗಳು ಕೆಲವು ಹೀಗಿವೆ : ಕಾದಂಬರಿಗಳು : ಸರ್ವಮಂಗಳಾ(೧೯೫0), ಉಯ್ಯಾಲೆ(೧೯೬0), ವೈಶಾಖ (೧೯೮೧), ಹೆಜ್ಜಾಲ(೧೯೯೮) ಕಥಾಸಂಕಲನಗಳು : ಸ್ವಪ್ನ ಸುಂದರಿ(೧೯೪೮), ಶವದ ಮನೆ(೧೯೫0), ಇಣುಕು ನೋಟ(೧೯೫0), ಬಂಗಾರದ ಹೆಜ್ಜೆ(೧೯೫೧), ಮೀನಿನ ಹೆಜ್ಜೆ(೧೯೫೮), ಕ್ವಾಟೆ(೧೯೯೨), ಮೃಗಯಾ(೧೯೯೮), ಬಣ್ಣದಬೊಂಬೆ ಇತ್ಯಾದಿ ಕೃತಿಗಳು. `ನಾಲ್ಕುಮೊಳಭೂಮಿ' ಕನ್ನಡದ ಉತ್ತಮ ಕತೆಗಳಲ್ಲಿ ಒಂದು. ಕಥೆಯೊಳಗೊಂದು ಕಥಾ ತಂತ್ರದ ಬಳಕೆಯಿಂದ ಗ್ರಾಮ ಹಾಗೂ ನಗರ ಬದುಕಿನ ಅನ್ಯಾಯಗಳನ್ನು ಸಾಂಕೇತಿಸುವ ಈ ಕತೆ ಭೂವಿವಾದಕ್ಕೆ ಪರಿಹಾರ ಸೂಚಿಸುತ್ತದೆ. ನಾಟಕಗಳು : ಕುಮಾರರಾಮ(೧೯೬೬), ಇಲಿಬೋನು(೧೯೭೨), ಬಿಂಬ(೧೯೯0). ಕವನ ಸಂಕಲನ: ಅಲೆಗಳು ಚಲನಚಿತ್ರಗಳು: ಭಕ್ತ ಕುಂಬಾರ ಚಿತ್ರಕ್ಕೆ ಕಥಾ ಲೇಖಕರಾಗಿದ್ದರು. ಇಂಗ್ಲಿಷಿನ ‘ಮಾಯಾ’ ಚಿತ್ರದ ಸಹ ನಿರ್ದೇಶಕರಾಗಿದ್ದರು. ಪ್ರಶಸ್ತಿ ವಿಜೇತ ಚಿತ್ರ ‘ಸರ್ವಮಂಗಳಾ’ವನ್ನು ನಿರ್ಮಿಸಿದರು. ಮತ್ತು ‘ಉಯ್ಯಾಲೆ’ ಚಿತ್ರಕ್ಕೆ ಚಿತ್ರಕಥೆಯನ್ನು ಬರೆದರು. ರಾಷ್ಟ್ರಕವಿ ಕುವೆಂಪು ಮತ್ತು ನಾಟ್ಯವಿಶಾರದೆ ವೆಂಕಟಲಕ್ಷ್ಮಮ್ಮನವರನ್ನು ಕುರಿತು ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಿದ್ದಾರೆ. ಪ್ರಶಸ್ತಿಗಳು ಇವರೇ ತಯಾರಿಸಿದ ‘ಸರ್ವಮಂಗಳಾ’ ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ‘ಉಯ್ಯಾಲೆ’ ಚಿತ್ರಕ್ಕೆ ಉತ್ತಮ ಚಿತ್ರಕಥಾ ಲೇಖಕ ಪ್ರಶಸ್ತಿ ಬಂದಿದೆ. ಇವರ 'ವೈಶಾಖ' ಕಾದಂಬರಿಗೆ ೧೯೮೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇವರ ಸಾಹಿತ್ಯ ಸಾಧನೆಗೆ ಹತ್ತಾರು ಪ್ರಶಸ್ತಿ ಗೌರವ, ಸನ್ಮಾನಗಳು ಲಭಿಸಿವೆ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿhttp://www.sahitya-akademi.gov.in/old_version/awa10307.htm#kannada , ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ,(೧೯೭೮ ಮತ್ತು ೧೯೯೪ರಲ್ಲಿ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೨ರಲ್ಲಿ ವೈಶಾಖ ಕಾದಂಬರಿಗೆ), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್(೧೯೯೩) ಇವರಿಗೆ ದೊರೆತಿದೆ. ೧೯೯೪ರಲ್ಲಿ ಮಂಡ್ಯದಲ್ಲಿ ಜರುಗಿದ ೬೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಭಾಗ್ಯ ಇವರದಾಗಿತ್ತು.http://kannadasahithyaparishattu.in/?page_id=1710 ನಿಧನ ಚದುರಂಗ ಅವರು ತಮ್ಮ ಎಂಭತ್ತೆರಡನೇ ವಯಸ್ಸಿನಲ್ಲಿ ೧೯೯೮, ಅಕ್ಟೋಬರ್ ೧೯ರಂದು ಮೈಸೂರಿನಲ್ಲಿ ನಿಧನ ಹೊಂದಿದರು. ಉಲ್ಲೇಖಗಳು ಚದುರಂಗ ವರ್ಗ:ಕನ್ನಡ ಸಾಹಿತ್ಯ ವರ್ಗ:೧೯೧೬ ಜನನ ವರ್ಗ:೧೯೯೮ ನಿಧನ ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಮೈಸೂರಿನ ಬರಹಗಾರರು
ಕೆ ಎಸ್ ನ
https://kn.wikipedia.org/wiki/ಕೆ_ಎಸ್_ನ
REDIRECT ಕೆ. ಎಸ್. ನರಸಿಂಹಸ್ವಾಮಿ
ಪ್ರಕಾಶ್ ಪಡುಕೋಣೆ
https://kn.wikipedia.org/wiki/ಪ್ರಕಾಶ್_ಪಡುಕೋಣೆ
ಪ್ರಕಾಶ್ ಪಡುಕೋಣೆ ಭಾರತ ಕಂಡ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲೊಬ್ಬರು. ಇವರು ಕರ್ನಾಟಕದವರು. ಇವರು ತಮ್ಮ ಜೀವಮಾನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇವುಗಳಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ ಮಿಂಟನ್ ಪ್ರಶಸ್ತಿ ಎಲ್ಲದಕ್ಕಿಂತ ದೊಡ್ಡದು. ಈ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯ. ಪ್ರತಿಶ್ಟಿತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಠಿ ಜೊತೆಗೆ ಸೇರಿ ಒಲಂಪಿಕ್ ಗೋಲ್ಡ್ ಕ್ವೆಸ್ಟ್ ಫೌಂಡೇಷನ್ ಅನ್ನು ಸ್ಥಾಪಿಸಿದ್ದಾರೆ. ಇದನ್ನು ಭಾರತದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಇವರಿಗೆ ೧೯೮೨ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ದೇವ್ ಎಸ್. ಕುಮಾರ್ ರವರು ಪ್ರಕಾಶ್ ಪಡುಕೋಣೆಯವರ ಜೀವನ ಚರಿತ್ರೆ "ಟಚ್ ಪ್ಲೇ" ಯನ್ನು ರಚಿಸಿದ್ದಾರೆ. ಇದು ಬ್ಯಾಡ್ ಮಿಂಟನ್ ಆಟಗಾರರ ಎರಡನೇ ಜೀವನ ಚರಿತ್ರೆ. frame|ಪ್ರಕಾಶ್ ಪಡುಕೋಣೆ ವೃತ್ತಿ ಜೀವನ ಪಡುಕೋಣೆ ೧೯೫೫, ಜೂನ್ ೧೦ ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಮೈಸೂರು ಬ್ಯಾಡ್ಮಿಂಟನ್ ಒಕ್ಕೂಟದ ಕಾರ್ಯದರ್ಶಿಗಳಾಗಿದ್ದರು. ಪ್ರಕಾಶ್ ಪಡುಕೋಣೆ ೧೯೬೨ ರಲ್ಲಿ ತಮ್ಮ ಮೊದಲ ಅಧಿಕೃತ ಟೂರ್ನಿಯಲ್ಲಿ ಆಡಿದರು. ಆ ಬಾರಿ ಮೊದಲ ಸುತ್ತಿನಲ್ಲಿಯೇ ಸೋಲನ್ನನುಭವಿಸಿದರೂ ಎರಡು ವರ್ಷಗಳ ನಂತರ ಕರ್ನಾಟಕ ರಾಜ್ಯ ಜೂನಿಯರ್ ಚಾಂಪಿಯನ್ ಆದರು. ೧೯೭೧ ರಲ್ಲಿ ತಮ್ಮ ಆಟದ ಶೈಲಿಯನ್ನು ಮತ್ತಷ್ಟು ಸುಧಾರಿಸಿದ ಪ್ರಕಾಶ್ ೧೯೭೨ ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‍ಶಿಪ್ ಎರಡನ್ನೂ ಗೆದ್ದರು. ೧೯೭೯ ರ ವರೆಗೆ ಸತತವಾಗಿ ಭಾರತದ ರಾಷ್ಟ್ರೀಯ ಚಾಂಪಿಯನ್‍ಶಿಪ್ ಇವರದಾಯಿತು. ಇದರಿಂದಾಗಿ ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರ ಎನಿಸಿಕೊಂಡರು. ೧೯೭೨ ರಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿತು. ೧೯೭೯ ರಲ್ಲಿ ಅವರು ಗೆದ್ದ ಕಾಮನ್ವೆಲ್ತ್ ಒಕ್ಕೂಟದ ಚಾಂಪಿಯನ್‍ಶಿಪ್ ಅವರ ಮೊದಲ ಮುಖ್ಯ ಅಂತಾರಾಷ್ಟ್ರೀಯ ಯಶಸ್ಸು. ನಂತರ ಲಂಡನ್ ನ ಮಾಸ್ಟರ್ಸ್ ಓಪನ್, ಡ್ಯಾನಿಷ್ ಓಪನ್ ಮತ್ತು ಸ್ವೀಡಿಷ್ ಓಪನ್ ಗಳನ್ನು ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದರು. ಅವರ ಅತ್ಯಂತ ಪ್ರಸಿದ್ಧ ಯಶಸ್ಸು ಬಂದದ್ದು ಬ್ಯಾಡ್ಮಿಂಟನ್ ನ ಎಲ್ಲಕ್ಕಿಂತ ಪ್ರತಿಷ್ಠಿತ ಟೂರ್ನಿಯಾದ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಗೆದ್ದಾಗ. ನಂತರ ೧೯೮೦ ರಲ್ಲಿ ಮತ್ತೊಮ್ಮೆ ಸ್ವೀಡಿಷ್ ಓಪನ್ ಹಾಗು ಡ್ಯಾನಿಶ್ ಓಪನ್ ಅನ್ನು ಗೆದ್ದರು. ಅವರು ತಮ್ಮ ವೃತ್ತಿ ಜೀವನದ ಬಹಳ ಕಾಲವನ್ನು ಡೆನ್ಮಾರ್ಕ್ನಲ್ಲಿ ತರಬೇತಿ ಪಡೆಯುವಲ್ಲಿ ಕಳೆದರು. ಈ ಸಮಯದಲ್ಲಿ ಅವರು ಅನೇಕ ಯುರೋಪಿನ ಆಟಗಾರರ ಜೊತೆ ನಿಕಟ ಸಂಬಂದ ಹೊಂದಿದ್ದರು. ಇವರಲ್ಲಿ ಡೆನ್ಮಾರ್ಕ್ ನ ಖ್ಯಾತ ಆಟಗಾರ ಮಾರ್ಟಿನ್ ಫ್ರಾಸ್ಟ್ ಒಬ್ಬರು. ೧೯೯೧ ರಲ್ಲಿ ನಿವೃತ್ತಿಯನ್ನು ಘೋಷಿಸಿದ ನಂತರ ಸ್ವಲ್ಪ ಕಾಲ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ೧೯೯೩ ಮತ್ತು ೧೯೯೬ರಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ತೆರಬೇತುದಾರರಾಗಿ ಕಾರ್ಯ ನಿರ್ವಹಿಸಿದ ಪ್ರಕಾಶ್, ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ "ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ"ಯನ್ನು ನಡೆಸುತ್ತಾ ಬಂದಿದ್ದಾರೆ. ಕೌಟುಂಬಿಕ ಜೀವನ ಪ್ರಕಾಶ್ ರವರು ಕೊಂಕಣಿ ಮಾತನಾಡುವ ಚಿತ್ರಾಪುರ ಸಾರಸ್ವಥ ಬ್ರಾಹಣ ಕುಟುಂಬದಲ್ಲಿ ಜನಿಸಿದರು. ಪ್ರಸ್ಥ್ಹುತ ಬೆಂಗಳೂರಿನಲ್ಲಿ ಪತ್ನಿ ಉಜ್ವಲರ ಜೊತೆ ಜೀವಿಸುತ್ತಿದ್ದಾರೆ. ಇವರು ಪ್ರಕಾಶ್ ಪಡುಕೋಣೆ ಬ್ಯಾಡ್ ಮಿಂಟನ್ ಅಕಾಡೆಮಿ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು. ಮೊದಲ ಪುತ್ರಿ ದೀಪಿಕಾ ಪಡುಕೋಣೆ ಖ್ಯಾತ ನಟಿ ಹಾಗು ರೂಪದರ್ಶಿ. ಇವರ ಎರಡನೇ ಪುತ್ರಿ ಗೋಲ್ಫ್ ಆಟಗಾರ್ತಿ. ೨೦೦೬ರಲ್ಲಿ ದೇವ್ ಸುಕುಮಾರ್ ವಿರಚಿತ ಪ್ರಕಾಶ್ ಜೀವನ ಚರಿತ್ರೆ 'ಟಚ್‌ಪ್ಲೇ' ಬಿಡುಗಡೆ ಹೊಂದಿತು. ಪ್ರಮುಖ ಸಾಧನೆಗಳು ಶ್ರೇಣಿಕ್ರೀಡಾ ಕೂಟದಿನಾಂಕಸ್ಥಳಐಬಿಎಫ್ ವರ್ಲ್ಡ್ ಚಾಂಪಿಯನ್ ಶಿಪ್3ಸಿಂಗಲ್ಸ್1983ಕೂಪನ್ ಹೇಗನ್, ಡೆನ್ಮಾರ್ಕ್ಕಾಮನ್ ವೆಲ್ತ್ ಕ್ರೀಡಾಕೂಟ1ಸಿಂಗಲ್ಸ್1978ಎಡ್ಮೊಂಟನ್, ಕೆನಡಾಬ್ಯಾಡ್ ಮಿಂಟನ್ ವರ್ಲ್ಡ್ ಕಪ್1ಸಿಂಗಲ್ಸ್1981ವರ್ಲ್ಡ್ ಗ್ರಾಂಡ್ ಪ್ರಿ1ಸಿಂಗಲ್ಸ್1979ಡೆನ್ಮಾರ್ಕ್ ಒಪನ್1ಸಿಂಗಲ್ಸ್1980ಆಲ್ ಇಂಗ್ಲೆಂಡ್ ಒಪನ್ ಉಲ್ಲೇಖ ವರ್ಗ:ಭಾರತದ ಕ್ರೀಡಾಪಟುಗಳು ವರ್ಗ:ಕರ್ನಾಟಕದ ಕ್ರೀಡಾಪಟುಗಳು ವರ್ಗ:ಬ್ಯಾಡ್ಮಿಂಟನ್
ರಾಜ್‌ಕುಮಾರ್
https://kn.wikipedia.org/wiki/ರಾಜ್‌ಕುಮಾರ್
ಡಾ. ರಾಜ್‌ಕುಮಾರ್, ಅಣ್ಣಾವ್ರು ಎಂದೇ ಖ್ಯಾತರಾದ ಕನ್ನಡ ಚಲನಚಿತ್ರರಂಗ ಮತ್ತು ರಂಗಭೂಮಿಯ ಮೇರುನಟ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ನಟನೆ, ಗಾಯನ ಮತ್ತು ಚಿತ್ರ ನಿರ್ಮಾಣದ ಮೂಲಕ. ವರನಟ,ನಟಸಾರ್ವಭೌಮ ಮೊದಲಾದ ಬಿರುದುಗಳು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದ ಮೊದಲ ನಟ ಇವರು.https://kannada.boldsky.com/insync/life/2014/dr-rajkumar-birthday-special-remembering-annavru-on-his-86t-007370-pg1.htmlಡಾ.ರಾಜ್‌ಕುಮಾರ್‌ಗೆ ಗೂಗಲ್‌ ಡೂಡಲ್‌ ಮೂಲಕ ಗೌರವ ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ. ಜೀವನ ನಟಸಾರ್ವಭೌಮ ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ೧೯೫೪-೨೦೦೫ರವರೆಗೆ ೫ ದಶಕದಗಳ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ಹೆಗ್ಗಳಿಕೆ ಡಾ. ರಾಜ್ ರದ್ದು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು, ೧೯೭೩ರಲ್ಲಿಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಪಡೆದ ಎರಡನೆಯ ವ್ಯಕ್ತಿ ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‌ನಿಂದ ಅಪಹರಣವಾಗಿದ್ದ ರಾಜ್‌ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು. ಹಿನ್ನೆಲೆ thumb|ಡಾ. ರಾಜ್‌ಕುಮಾರ್ ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ ೧೯೨೯ರ ಏಪ್ರಿಲ್ ೨೪ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ). ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. ೧೯೫೩ ಜೂನ್ ೨೫ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‌ಕುಮಾರ್. ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, ಶಿವರಾಜ್‌ಕುಮಾರ್ ಪುತ್ರಿಯಾದ ನಿವೇದಿತಾ, ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಡಾ. ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‌ಕುಮಾರ್ ಅವರ ಪತ್ನಿ. ಅಪಹರಣ ೩೦ ಜುಲೈ ೨೦೦೦ರಂದು, ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನಿಂದ ಡಾ. ರಾಜ್ ಅವರು ಗಾಜನೂರಿನಲ್ಲಿರುವ ತಮ್ಮ ತೋಟದ ಮನೆಯಿಂದ ಅಪಹರಣವಾದರು. ಡಾ. ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾದರು. ಅಪಹರಣದ ನಂತರದ ದಿನಗಳಲ್ಲಿ, ಕ್ಯಾಸೆಟ್ಟುಗಳ ಮೂಲಕ, ಪತ್ರಗಳ ಮೂಲಕ ಕರ್ನಾಟಕ ಹಾಗು ತಮಿಳುನಾಡು ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ವೀರಪ್ಪನ್ ಡಾ. ರಾಜ್ ಅವರನ್ನು ಒತ್ತೆಯಾಳಗಿಟ್ಟುಕೊಂಡು, ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದನು. ನೂರೆಂಟು ದಿನಗಳ ಕಾಲ ಅಪಹೃತರಾಗಿ, ಅರಣ್ಯವಾಸ ಅನುಭವಿಸಿದ್ದ ಡಾ. ರಾಜ್, ೧೫ ನವೆಂಬರ್ ೨೦೦೦ರಂದು ಬಿಡುಗಡೆಗೊಂಡರು. ಅಪಹರಣದ ಅವಧಿಯಲ್ಲಿ ಕರ್ನಾಟಕದ ಪೋಲಿಸ್ ಮಹಾನಿರ್ದೇಶಕರಾದ(ಡಿಜಿಪಿ) ಪಿ. ದಿನಕರ್ ಅವರು ಅಪಹರಣದ ಬಗ್ಗೆ "Veerappan's Prize Catch: Dr.Rajkumar" ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ರವಿ ಬೆಳಗೆರೆ ಯವರು "ರಾಜ ರಹಸ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ನಿಧನ thumb|right|200px|ಮಾಧ್ಯಮಗಳಿಂದ "ಅಂತಿಮ ನಮನ, ಅಣ್ಣಾವ್ರೆ" ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, ೧೨ ಏಪ್ರಿಲ್, ೨೦೦೬ ಬುಧವಾರದಂದು ಮಧ್ಯಾಹ್ನ ೧:೪೫ರ ಸುಮಾರಿಗೆ, ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು. ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯೆಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು. ೧೩ ಏಪ್ರಿಲ್ ೨೦೦೬ರಂದು, ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ. ರಾಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಡೆಯಿತು. ಇವೆರಡು ದಿನ (ಏಪ್ರಿಲ್ ೧೨ ಮತ್ತು ೧೩), ಬೆಂಗಳೂರಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು. ಬಣ್ಣದ ಬದುಕು ರಂಗಭೂಮಿ ಮತ್ತು ತಂದೆಯ ಪ್ರಭಾವ ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ. ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯhttps://kannada.news18.com/photogallery/entertainment/what-are-the-real-names-of-sandalwood-these-famous-actors-hg-402775.html ರವರು ಎಂದರೆ ೧೯೩೦-೧೯೫೦ ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರ ಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯರವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು. ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತು ರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರ ನಿರ್ವಹಿಸುತ್ತಿದ್ದರು. ಡಾ. ರಾಜ್‌ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ.ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ:"ಇಂತಹ ಸಾಧನೆ ನಿನ್ನಿಂದ ಸಾಧ್ಯ" ಎಂದು ಪುಟ್ಟಸ್ವಾಮಯ್ಯ ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು. "ನನ್ನ ತಂದೆ ರಂಗದ ಮೇಲೆ ಹುರಿ ಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು" ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲುಪ್ರಿಯ. "ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ" ಎಂದು ಹೇಳಿದ್ದಾರೆ. ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ "ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ "ಅಂಬರೀಷ" ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು. ಅನಂತರ "ಕುರುಕ್ಷೇತ್ರ" ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್‌ಕುಮಾರ್‌ಗೆ ಇದು ರಂಗ ತಾಲೀಮು. ೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ "ಭೂ ಕೈಲಾಸ" ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ೧೯೪೨ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಟನಾಗಿಯೂ, ೧೯೫೨ರಲ್ಲಿ ಬಿಡುಗಡೆಯಾದ ಶಂಕರ್‌ಸಿಂಗ್ ನಿರ್ದೇಶನದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತು ರಾಜ್‌ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು. ಸಿಂಹ ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್‌ರವರನ್ನು ಕಂಡ ತಕ್ಷಣ "ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು" ಎಂಬ ಭಾವನೆ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭ ಕೋರಿ ಸಿಂಹ ಬೀಳ್ಕೊಟ್ಟಿದ್ದರು. ಮೇಲಿನ ಘಟನೆ ನಡೆದ ಕೆಲ ದಿನಗಳಲ್ಲಿ ಮೈಸೂರಿನ ಟೌನ್‌ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. * ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್‌ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷ ಪಟ್ಟರು. ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು. ನಂತರ ಮುತ್ತುರಾಜ್ ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು 'ಸ್ಕ್ರೀನ್ ಟೆಸ್ಟ್' ಗೆ ಮದರಾಸಿಗೆ ಬರಲು ಆಹ್ವಾನಿಸಿದರು.ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್‌ಗೆ-ರಾಜ‌ಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು. ಚಿತ್ರವು ೧೯೫೪ರ ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು. ಮದರಾಸು 'ಸ್ಕ್ರೀನ್ ಟೆಸ್ಟ್' ನೋಡಿದ ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರು ಹೆಚ್.ಎಲ್.ಎನ್.ಸಿಂಹ ಅವರ ಬಳಿ ಹೋಗಿ " ಈ ಉದ್ದ ಮೂಗಿನ ಮತ್ತು ಹಲ್ಲು ಹುಬ್ಬು ಇರುವವರನ್ನು ಹಾಕಿಕೊಂಡು ಏನು ಚಿತ್ರ ಮಾಡುತ್ತೀಯ ಎಂದು ಕೇಳಿದ್ದರಂತೆ. ಆದರೆ ಹೆಚ್.ಎಲ್.ಎನ್.ಸಿಂಹ ಅವರು ನಿರ್ಮಾಪಕರಿಗೆ ಎ.ವಿ.ಎಂ.ಚೆಟ್ಟಿಯಾರ್, ಇವರೇ ಸರಿಯಾದ ವ್ಯಕ್ತಿಗಳು ಎಂದು ಹೇಳಿ ಒಪ್ಪಿಸಿದ್ದರು. ಬಣ್ಣದ ಬದುಕಿನ ಪಕ್ಷಿನೋಟ ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. ೨೦೦ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ ಕನ್ನಡದ ಏಕೈಕ ಕಲಾವಿದರು. ೧೯೬೦ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು. ೧೯೬೬ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‌ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರ ಬದುಕಿನಲ್ಲಿ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ೧೯೬೮ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯) ಅಭಿನಯಿಸಿದರು. ಈ ಸರಣಿಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಹಾಗು ಆಪರೇಷನ್ ಡೈಮಂಡ್ ರಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ. ರಾಜ್‌ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ (ನಟಸಾರ್ವಭೌಮ) ಕೂಡ ತಯಾರಾಯಿತು. ಈ ಚಿತ್ರವು ರಾಜ್‌ಕುಮಾರ್ ಅವರ ಹಿಂದಿನ ನೂರು ಚಿತ್ರಗಳ ತುಣುಕು ದೃಶ್ಯಗಳನ್ನು ಜೊತೆಗೂಡಿಸಿ ತಯಾರಿಸುವ ಯೋಜನೆಯೊಂದಿಗೆ ಪ್ರಾರಂಭವಾದರೂ, ಸ್ಥಳಾವಕಾಶದ ಕೊರತೆಯಿಂದ ಕೆಲವು ಚಿತ್ರಗಳ ತುಣುಕುಗಳನ್ನು ಕೈಬಿಡಲಾಗಿದೆ. ೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಳಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ. ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು. ರಾಜ್‌ಕುಮಾರ್ ಅವರ ನೂರೈವತ್ತನೇ ಚಿತ್ರ, ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ. ೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ. ಇದೇ ವರ್ಷ ಬಿಡುಗಡೆ ಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು. ೧೯೭೫ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ೧೯೭೭ರಲ್ಲಿ ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ, ಡಾ. ರಾಜ್ ಶಹನಾಯಿ ವಾದಕರಾಗಿ ಅಭಿನಯಿಸಿದರು. ಈ ಚಿತ್ರಕ್ಕೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ನುಡಿಸಿದವರು ಭಾರತದ ಪ್ರಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ ಡಾ. ರಾಜ್ ಅಭಿನಯಿಸಿದ್ದಾರೆ. ೧೯೮೦ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆ ಕಂಡವು. ಇದೇ ಅವಧಿಯಲ್ಲಿ ಡಾ. ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್ ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ. ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ. ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ. ೧೯೮೩ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ. ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವ ತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ. ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ. ಡಾ. ರಾಜ್ ಅವರ ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿ ಯವರು ಡಾ. ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ. ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ. ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು. ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದರು. ಡಾ. ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ ೨೦೦೦ರಲ್ಲಿ ತೆರೆಕಂಡ ಶಬ್ದವೇದಿ. ಭಕ್ತ ಅಂಬರೀಶ ಎಂಬ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲವನ್ನು ರಾಜ್ ಹಲವಾರು ಬಾರಿ ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ಬೆಳ್ಳಿತೆರೆಯ ಮೇಲೆ ಡಾ. ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‌ಕುಮಾರ್ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ. ಸುಮಾರು ೨೦೬ ಚಿತ್ರಗಳಲ್ಲಿ ನಾಯಕನಟರಾಗಿ ನಟಿಸಿರುವ ರಾಜ್ ಕುಮಾರ್ ಬೆರಳೆಣಿಕೆಯ ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆಂದರೆ "ಅಣ್ಣ ತಂಗಿ","ಮುರಿಯದ ಮನೆ" ,"ವಾತ್ಸಲ್ಯ", "ಮನಸಾಕ್ಷಿ", "ಬಾಳ ಬಂಧನ" ,"ನನ್ನ ತಮ್ಮ", "ಭಾಗ್ಯವಂತರು", "ಅಪೂರ್ವ ಸಂಗಮ" ಮುಂತಾದವುಗಳು. ಅಲ್ಲಿಯೂ ಅವರು ಮೂಲ ನಟರನ್ನು ಅನುಕರಿಸದೆ ತಮ್ಮದೇ ಶೈಲಿಯಲ್ಲಿ ಅಭಿನಯಿಸಿದ್ದಾರೆ. "ಬೇಡರ ಕಣ್ಣಪ್ಪ" ತೆಲುಗಿನಲ್ಲಿ ‘ಶ್ರೀ ಕಾಳಹಸ್ತಿ ಮಹಾತ್ಮಂ’ ಎಂಬ ಹೆಸರಲ್ಲಿ ತಯಾರಾಯಿತು. ಅದರಲ್ಲಿ ಕೂಡ ಡಾ. ರಾಜ್ ಕುಮಾರ್ ಹೀರೊ ಆಗಿ ನಟಿಸಿದರು. ಇದು ಬೇರೆ ಭಾಷೆಯಲ್ಲಿ ರಾಜ್ ಕುಮಾರ್ ನಟಿಸಿದ ಏಕೈಕ ಚಿತ್ರ. ಡಾ. ರಾಜ್ ಕುಮಾರ್ ಅವರು ಅಂದಿನ ಬಹುತೇಕ ಎಲ್ಲ ಜನಪ್ರಿಯ ನಾಯಕಿಯರೊಂದಿಗೆ ನಟಿಸಿದ್ದಾರೆ. ಎಂ.ವಿ.ರಾಜಮ್ಮ, ಪಂಡರೀಬಾಯಿ, ಪ್ರತಿಮಾದೇವಿ, ಹರಿಣಿ, ಸಾಹುಕಾರ್ ಜಾನಕಿ , ಕೃಷ್ಣಕುಮಾರಿ, ರಾಜಸುಲೋಚನ, ಬಿ.ಸರೋಜದೇವಿ, ಸಂಧ್ಯಾ,ಆದವಾನಿ ಲಕ್ಷ್ಮಿ ದೇವಿ, ಮೈನಾವತಿ, ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ವಂದನಾ, ಚಂದ್ರಕಲಾ, ಉದಯಚಂದ್ರಿಕಾ, ಬಿ.ವಿ.ರಾಧ, ಶೈಲಶ್ರೀ, ರಾಜಶ್ರೀ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದಾ, ಗಾಯತ್ರಿ, ಸರಿತಾ, ಜಯಚಿತ್ರಾ, ಕಾಂಚನಾ, ವಾಣಿಶ್ರೀ, ಜಿ.ವಿ.ಲತಾ, ಮಾಧವಿ, ಗೀತಾ, ಅಂಬಿಕಾ, ರೂಪಾದೇವಿ, ಊರ್ವಶಿ ಮುಂತಾದವರೊಂದಿಗೆ ನಟಿಸಿದ್ದಾರೆ. ರಾಜ್-ಭಾರತಿ, ರಾಜ್-ಲೀಲಾವತಿ, ರಾಜ್-ಜಯಂತಿ, ರಾಜ್-ಕಲ್ಪನಾ ಜೋಡಿ ಆ ಕಾಲದಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿತ್ತು. ಅವರ ನಟನೆಯ ಐತಿಹಾಸಿಕ ಚಿತ್ರಗಳು ಮಯೂರ ಶ್ರೀ ಕೃಷ್ಣದೇವರಾಯ ರಣಧೀರ ಕಂಠೀರವ ಇಮ್ಮಡಿ ಪುಲಿಕೇಶಿ ಕಿತ್ತೂರು ಚೆನ್ನಮ್ಮ ಕವಿರತ್ನ ಕಾಳಿದಾಸ ಬಭ್ರುವಾಹನ ವೀರ ಕೇಸರಿ ಭಕ್ತಿ ಪ್ರಧಾನ ಚಿತ್ರಗಳು ಭಕ್ತನ ಪಾತ್ರದಲ್ಲಿ ಭಕ್ತ ಕನಕದಾಸ ನವಕೋಟಿ ನಾರಾಯಣ (ಭಕ್ತ ಪುರಂದರದಾಸ) ಸರ್ವಜ್ಞಮೂರ್ತಿ ಮಹಾತ್ಮ ಕಬೀರ್ ಸಂತ ತುಕಾರಾಮ ವಾಲ್ಮೀಕಿ ಭೂಕೈಲಾಸ ಹರಿಭಕ್ತ ಭಕ್ತ ವಿಜಯ ಭಕ್ತ ಚೇತ ಭಕ್ತ ಕುಂಬಾರ ಮಂತ್ರಾಲಯ ಮಹಾತ್ಮೆ ದೇವರ ಪಾತ್ರದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಶ್ರೀ ರಾಮಾಂಜನೇಯ ಯುದ್ಧ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಶಿವ ಮೆಚ್ಚಿದ ಕಣ್ಣಪ್ಪ ಮೂರೂವರೆ ವಜ್ರಗಳು ಕೃಷ್ಣ ಗಾರುಡಿ ಪತ್ತೇದಾರ/ಗೂಢಚಾರಿ ಪಾತ್ರದಲ್ಲಿ ಜೇಡರ ಬಲೆ ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯ ಗೋವಾದಲ್ಲಿ ಸಿ.ಐ.ಡಿ. ೯೯೯ ಸಿ.ಐ.ಡಿ. ರಾಜಣ್ಣ ಬೆಂಗಳೂರು ಮೈಲ್ ಆಪರೇಷನ್ ಡೈಮಂಡ್ ರಾಕೆಟ್ ಭಲೇ ಹುಚ್ಚ ಚೂರಿಚಿಕ್ಕಣ್ಣ ಜೇಡರ ಬಲೆ, ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಮತ್ತು ಆಪರೇಷನ್ ಡೈಮಂಡ್ ರಾಕೆಟ್ ಚಿತ್ರಗಳು ಜೇಮ್ಸ್‌ಬಾಂಡ್ ಮಾದರಿಯಲ್ಲಿ ಬಂದಂತಹ ಸರಣಿ ಚಲನಚಿತ್ರಗಳು. ಈ ನಾಲ್ಕೂ ಚಿತ್ರಗಳಲ್ಲಿ 'ಪ್ರಕಾಶ್' ಎಂಬ ಹೆಸರಿನ ಸಿ.ಐ.ಡಿ ೯೯೯ ಪಾತ್ರದಲ್ಲಿ ಡಾ. ರಾಜ್ ಅಭಿನಯಿಸಿದ್ದಾರೆ. ಖಳ/ಪ್ರತಿನಾಯಕನ ಪಾತ್ರದಲ್ಲಿ ಮಹಿಷಾಸುರ ಮರ್ದಿನಿ - ಮಹಿಷಾಸುರ ಕರುಣೆಯೇ ಕುಟುಂಬದ ಕಣ್ಣು ಸಾಕು ಮಗಳು ಸತಿ ಶಕ್ತಿ - ರಕ್ತಾಕ್ಷ ದಾರಿ ತಪ್ಪಿದ ಮಗ - ಪ್ರಕಾಶ್ ದಶಾವತಾರ ಭಕ್ತ ಪ್ರಹ್ಲಾದ - ಹಿರಣ್ಯಕಶ್ಯಪು ತುಂಬಿದ ಕೊಡ ಶ್ರೀ ಕೃಷ್ಣಗಾರುಡಿ - ಅರ್ಜುನ ಶ್ರೀ ಕನ್ನಿಕಾಪರಮೇಶ್ವರಿ ಕಥೆ - ರಾಜಾ ವಿಷ್ಣು ವರ್ಧನ ಡಾ. ರಾಜ್ ಅತಿಥಿನಟನಾಗಿ ಕಾಣಿಸಿಕೊಂಡ ಚಿತ್ರಗಳು ಭಕ್ತ ಪ್ರಹ್ಲಾದ (೧೯೪೨) ಶ್ರೀ ಶ್ರೀನಿವಾಸ ಕಲ್ಯಾಣ (೧೯೫೨) ನಾಡಿನ ಭಾಗ್ಯ ಭಾಗ್ಯವಂತ ಶಿವ ಮೆಚ್ಚಿದ ಕಣ್ಣಪ್ಪ ಗಂಧದಗುಡಿ ಭಾಗ ೨ ಜೋಗಿ ರಾಜ್ ನಾಯಕನಾಗಿ ಅಭಿನಯಿಸಿದ ಚಲನಚಿತ್ರಗಳ ಸಂಪೂರ್ಣ ಪಟ್ಟಿ (ಫಿಲ್ಮೋಗ್ರಾಫಿ) #ವರ್ಷಚಿತ್ರಪಾತ್ರನಾಯಕಿ(ನಾಯಕಿಯರು)೧೧೯೫೪ಬೇಡರ ಕಣ್ಣಪ್ಪಕಣ್ಣಪ್ಪಪಂಢರೀಬಾಯಿ೨೧೯೫೫ಸೋದರಿವಿಜಯಪಂಢರೀಬಾಯಿ೩೧೯೫೬ಭಕ್ತ ವಿಜಯಪಂಢರೀಬಾಯಿ, ಮೈನಾವತಿ೪೧೯೫೬ಹರಿಭಕ್ತಪಂಢರೀಬಾಯಿ, ಮೈನಾವತಿ೫೧೯೫೬ಓಹಿಲೇಶ್ವರ_(ಚಲನಚಿತ್ರ)ಓಹಿಲೇಶ್ವರಶ್ರೀರಂಜಿನಿ೬೧೯೫೭ಸತಿ ನಳಾಯಿನಿಪಂಢರೀಬಾಯಿ೭೧೯೫೭ರಾಯರ ಸೊಸೆಪಂಢರೀಬಾಯಿ೮೧೯೫೮ಭೂಕೈಲಾಸರಾವಣಜಮುನಾ೯೧೯೫೮ಶ್ರೀ ಕೃಷ್ಣಗಾರುಡಿಅರ್ಜುನರೇವತಿ, ಸಂಧ್ಯಾ೧೦೧೯೫೮ಅಣ್ಣ ತಂಗಿಬಿ.ಸರೋಜಾ ದೇವಿ೧೧೧೯೫೯ಜಗಜ್ಯೋತಿ ಬಸವೇಶ್ವರಕಳಚೂರಿ ಚಾಲುಕ್ಯ ಅರಸ ಬಿಜ್ಜಳಸಂಧ್ಯಾ೧೨೧೯೫೯ಧರ್ಮ ವಿಜಯಹರಿಣಿ, ಲೀಲಾವತಿ೧೩೧೯೫೯ಮಹಿಷಾಸುರ ಮರ್ಧಿನಿದಾನವ ದೊರೆ ಮಹಿಷಾಸುರಸಾಹುಕಾರ್ ಜಾನಕಿ೧೪೧೯೫೯ಅಬ್ಬಾ ಆ ಹುಡುಗಿಮೈನಾವತಿ, ಲೀಲಾವತಿ೧೫೧೯೬೦ರಣಧೀರ ಕಂಠೀರವಮೈಸೂರು ದೊರೆ ಕಂಠೀರವ ನರಸರಾಜ ಒಡೆಯರ್ಲೀಲಾವತಿ, ಸಂಧ್ಯಾ೧೬೧೯೬೦ರಾಣಿ ಹೊನ್ನಮ್ಮಲೀಲಾವತಿ೧೭೧೯೬೦ಆಶಾಸುಂದರಿಕೃಷ್ಣಕುಮಾರಿ, ಹರಿಣಿ೧೮೧೯೬೦ದಶಾವತಾರಲೀಲಾವತಿ೧೯೧೯೬೦ಭಕ್ತ ಕನಕದಾಸ ತಿಮ್ಮಪ್ಪ ನಾಯಕ/ಕನಕದಾಸ ಕೃಷ್ಣಕುಮಾರಿ೨೦೧೯೬೧ಶ್ರೀಶೈಲ ಮಹಾತ್ಮೆಕೃಷ್ಣಕುಮಾರಿ, ಸಂಧ್ಯಾ೨೧೧೯೬೧ಕಿತ್ತೂರು ಚೆನ್ನಮ್ಮಕಿತ್ತೂರು ಸಂಸ್ಥಾನದ ದೊರೆ ಮಲ್ಲಸರ್ಜ ದೇಸಾಯಿಬಿ.ಸರೋಜಾ ದೇವಿ೨೨೧೯೬೧ಕಣ್ತೆರೆದು ನೋಡುಅಂಧ ಗಾಯಕ ಗೋಪಿಲೀಲಾವತಿ೨೩೧೯೬೧ಕೈವಾರ ಮಹಾತ್ಮೆಕೈವಾರ ನಾರಾಯಣಪ್ಪಲೀಲಾವತಿ೨೪೧೯೬೧ಭಕ್ತ ಚೇತಚೇತಪ್ರತಿಮಾದೇವಿ೨೫೧೯೬೧ನಾಗಾರ್ಜುನಜಿ.ವರಲಕ್ಷ್ಮಿ, ಹರಿಣಿ೨೬೧೯೬೨ಗಾಳಿಗೋಪುರಲೀಲಾವತಿ೨೭೧೯೬೨ಭೂದಾನಲೀಲಾವತಿ೨೮೧೯೬೨ಸ್ವರ್ಣಗೌರಿಕೃಷ್ಣಕುಮಾರಿ, ರಾಜಶ್ರೀ೨೯೧೯೬೨ದೇವಸುಂದರಿಬಿ.ಸರೋಜಾ ದೇವಿ೩೦೧೯೬೨ಕರುಣೆಯೇ ಕುಟುಂಬದ ಕಣ್ಣುಲೀಲಾವತಿ೩೧೧೯೬೨ಮಹಾತ್ಮ ಕಬೀರ್ ಸಂತ ಕಬೀರಕೃಷ್ಣಕುಮಾರಿ೩೨೧೯೬೨ವಿಧಿವಿಲಾಸಲೀಲಾವತಿ, ಹರಿಣಿ೩೩೧೯೬೨ತೇಜಸ್ವಿನಿಪಂಢರೀಬಾಯಿ೩೪೧೯೬೩ವಾಲ್ಮೀಕಿವಾಲ್ಮೀಕಿಲೀಲಾವತಿ, ರಾಜಸುಲೋಚನಾ೩೫೧೯೬೩ನಂದಾದೀಪಹರಿಣಿ೩೬೧೯೬೩ಸಾಕು ಮಗಳುಸಾಹುಕಾರ್ ಜಾನಕಿ೩೭೧೯೬೩ಕನ್ಯಾರತ್ನಲೀಲಾವತಿ, ಸಾಹುಕಾರ್ ಜಾನಕಿ೩೮೧೯೬೩ಗೌರಿಸಾಹುಕಾರ್ ಜಾನಕಿ೩೯೧೯೬೩ಜೀವನ ತರಂಗಲೀಲಾವತಿ೪೦೧೯೬೩ಮಲ್ಲಿ ಮದುವೆಸಾಹುಕಾರ್ ಜಾನಕಿ೪೧೧೯೬೩ಕುಲವಧುಲೀಲಾವತಿ೪೨೧೯೬೩ಕಲಿತರೂ ಹೆಣ್ಣೇಲೀಲಾವತಿ೪೩೧೯೬೩ವೀರಕೇಸರಿನರಸಿಂಹಲೀಲಾವತಿ೪೪೧೯೬೩ಮನ ಮೆಚ್ಚಿದ ಮಡದಿಲೀಲಾವತಿ೪೫೧೯೬೩ಸತಿ ಶಕ್ತಿದ್ವಿಪಾತ್ರ: ರಾಜ ವಿರೂಪಾಕ್ಷ ಮತ್ತು ಆತನ ತಮ್ಮ ದುಷ್ಟ ರಕ್ತಾಕ್ಷ ಸಾಹುಕಾರ್ ಜಾನಕಿ೪೬೧೯೬೩ಚಂದ್ರಕುಮಾರಕೃಷ್ಣಕುಮಾರಿ೪೭೧೯೬೩ಸಂತ ತುಕಾರಾಮತುಕಾರಾಮ್ಲೀಲಾವತಿ೪೮೧೯೬೩ಶ್ರೀರಾಮಾಂಜನೇಯ ಯುದ್ಧರಾಮಆದವಾನಿ ಲಕ್ಷ್ಮಿ ದೇವಿ೪೯೧೯೬೪ನವಕೋಟಿ ನಾರಾಯಣಪುರಂದರದಾಸಸಾಹುಕಾರ್ ಜಾನಕಿ೫೦೧೯೬೪ಚಂದವಳ್ಳಿಯ ತೋಟಜಯಂತಿ೫೧೧೯೬೪ಶಿವರಾತ್ರಿ ಮಹಾತ್ಮೆಲೀಲಾವತಿ೫೨೧೯೬೪ಅನ್ನಪೂರ್ಣಪಂಢರೀಬಾಯಿ, ಮೈನಾವತಿ೫೩೧೯೬೪ತುಂಬಿದ ಕೊಡಲೀಲಾವತಿ೫೪೧೯೬೪ಶಿವಗಂಗೆ ಮಹಾತ್ಮೆಲೀಲಾವತಿ೫೫೧೯೬೪ಮುರಿಯದ ಮನೆಜಯಂತಿ೫೬೧೯೬೪ಪ್ರತಿಜ್ಞೆವೈದ್ಯಜಯಂತಿ೫೭೧೯೬೪ನಾಂದಿಶಾಲಾ ಮೇಷ್ಟ್ರು ಮೂರ್ತಿಹರಿಣಿ, ಕಲ್ಪನಾ೫೮೧೯೬೫ನಾಗಪೂಜಲೀಲಾವತಿ೫೯೧೯೬೫ಚಂದ್ರಹಾಸಚಂದ್ರಹಾಸಲೀಲಾವತಿ೬೦೧೯೬೫ಸರ್ವಜ್ಞಮೂರ್ತಿಸರ್ವಜ್ಞಹರಿಣಿ, ಮೈನಾವತಿ೬೧೧೯೬೫ವಾತ್ಸಲ್ಯಲೀಲಾವತಿ, ಜಯಂತಿ೬೨೧೯೬೫ಸತ್ಯ ಹರಿಶ್ಚಂದ್ರಸತ್ಯ ಹರಿಶ್ಚಂದ್ರಪಂಢರೀಬಾಯಿ೬೩೧೯೬೫ಮಹಾಸತಿ ಅನುಸೂಯಮಹರ್ಷಿ ಅತ್ರಿಪಂಢರೀಬಾಯಿ೬೪೧೯೬೫ಇದೇ ಮಹಾ ಸುದಿನಲೀಲಾವತಿ೬೫೧೯೬೫ಬೆಟ್ಟದ ಹುಲಿಡಕಾಯತ ರಾಜಜಯಂತಿ೬೬೧೯೬೫ಸತಿ ಸಾವಿತ್ರಿಕೃಷ್ಣಕುಮಾರಿ೬೭೧೯೬೫ಮದುವೆ ಮಾಡಿ ನೋಡುಲೀಲಾವತಿ೬೮೧೯೬೫ಪತಿವ್ರತಾಹರಿಣಿ೬೯೧೯೬೬ಮಂತ್ರಾಲಯ ಮಹಾತ್ಮೆರಾಘವೇಂದ್ರ ಸ್ವಾಮಿಜಯಂತಿ೭೦೧೯೬೬ಕಠಾರಿವೀರಉದಯಚಂದ್ರಿಕಾ೭೧೧೯೬೬ಬಾಲನಾಗಮ್ಮರಾಜಶ್ರೀ೭೨೧೯೬೬ತೂಗುದೀಪಲೀಲಾವತಿ೭೩೧೯೬೬ಪ್ರೇಮಮಯಿಲೀಲಾವತಿ೭೪೧೯೬೬ಕಿಲಾಡಿ ರಂಗಜಯಂತಿ೭೫೧೯೬೬ಮಧುಮಾಲತಿಭಾರತಿ೭೬೧೯೬೬ಎಮ್ಮೆ ತಮ್ಮಣ್ಣಭಾರತಿ, ಜಿ.ವಿ.ಲತಾ೭೭೧೯೬೬ಮೋಹಿನಿ ಭಸ್ಮಾಸುರಲೀಲಾವತಿ೭೮೧೯೬೬ಶ್ರೀ ಕನ್ನಿಕಾಪರಮೇಶ್ವರಿ ಕಥೆಕಲ್ಪನಾ, ಪಂಢರೀಬಾಯಿ೭೯೧೯೬೬ಸಂಧ್ಯಾರಾಗಭಾರತಿ೮೦೧೯೬೭ಪಾರ್ವತಿ_ಕಲ್ಯಾಣ_(ಚಲನಚಿತ್ರ)ಚಂದ್ರಕಲಾ೮೧೧೯೬೭ಸತಿಸುಕನ್ಯಹರಿಣಿ೮೨೧೯೬೭ಗಂಗೆ ಗೌರಿಲೀಲಾವತಿ೮೩೧೯೬೭ರಾಜಶೇಖರಭಾರತಿ, ವಂದನಾ೮೪೧೯೬೭ಲಗ್ನಪತ್ರಿಕೆಜಯಂತಿ೮೫೧೯೬೭ರಾಜದುರ್ಗದ ರಹಸ್ಯಭಾರತಿ೮೬೧೯೬೭ದೇವರ ಗೆದ್ದ ಮಾನವಜಯಂತಿ೮೭೧೯೬೭ಬೀದಿ ಬಸವಣ್ಣಭಾರತಿ೮೮೧೯೬೭ಮನಸ್ಸಿದ್ದರೆ ಮಾರ್ಗಜಯಂತಿ೮೯೧೯೬೭ಬಂಗಾರದ ಹೂವುಕಲ್ಪನಾ, ಶೈಲಶ್ರೀ೯೦೧೯೬೭ಚಕ್ರತೀರ್ಥಜಯಂತಿ೯೧೧೯೬೭ ಇಮ್ಮಡಿ ಪುಲಿಕೇಶಿಇಮ್ಮಡಿ ಪುಲಿಕೇಶಿಜಯಂತಿ೯೨೧೯೬೮ಜೇಡರ ಬಲೆಜಯಂತಿ, ಶೈಲಶ್ರೀ೯೩೧೯೬೮ಗಾಂಧಿನಗರಕಲ್ಪನಾ, ಬಿ.ವಿ.ರಾಧ೯೪೧೯೬೮ಮಹಾಸತಿ ಅರುಂಧತಿಕಲ್ಪನಾ೯೫೧೯೬೮ಮನಸ್ಸಾಕ್ಷಿಭಾರತಿ೯೬೧೯೬೮ಸರ್ವಮಂಗಳಕಲ್ಪನಾ೯೭೧೯೬೮ಭಾಗ್ಯದೇವತೆಲೀಲಾವತಿ, ಬಿ.ವಿ.ರಾಧ, ಉದಯಚಂದ್ರಿಕಾ೯೮೧೯೬೮ಬೆಂಗಳೂರು ಮೈಲ್ಜಯಂತಿ೯೯೧೯೬೮ಹಣ್ಣೆಲೆ ಚಿಗುರಿದಾಗಕಲ್ಪನಾ೧೦೦೧೯೬೮ಭಾಗ್ಯದ ಬಾಗಿಲುವಂದನಾ, ಬಿ.ವಿ.ರಾಧ೧೦೧೧೯೬೮ನಟಸಾರ್ವಭೌಮ೧೦೨೧೯೬೮ರೌಡಿ ರಂಗಣ್ಣಜಯಂತಿ. ಚಂದ್ರಕಲಾ೧೦೩೧೯೬೮ಧೂಮಕೇತು (ಚಲನಚಿತ್ರ)ಉದಯಚಂದ್ರಿಕಾ೧೦೪೧೯೬೮ಅಮ್ಮಭಾರತಿ೧೦೫೧೯೬೮ಸಿಂಹಸ್ವಪ್ನಜಯಂತಿ೧೦೬೧೯೬೮ಗೋವಾದಲ್ಲಿ ಸಿ.ಐ.ಡಿ. ೯೯೯ಲಕ್ಷ್ಮಿ೧೦೭೧೯೬೮ಮಣ್ಣಿನ ಮಗಕಲ್ಪನಾ೧೦೮೧೯೬೯ಮಾರ್ಗದರ್ಶಿಚಂದ್ರಕಲಾ೧೦೯೧೯೬೯ಗಂಡೊಂದು ಹೆಣ್ಣಾರುಭಾರತಿ೧೧೦೧೯೬೯ಮಲ್ಲಮ್ಮನ ಪವಾಡಬಿ.ಸರೋಜಾ ದೇವಿ೧೧೧೧೯೬೯ಚೂರಿ ಚಿಕ್ಕಣ್ಣಜಯಂತಿ೧೧೨೧೯೬೯ಪುನರ್ಜನ್ಮಜಯಂತಿ, ಚಂದ್ರಕಲಾ೧೧೩೧೯೬೯ಭಲೇ ರಾಜಜಯಂತಿ೧೧೪೧೯೬೯ಉಯ್ಯಾಲೆಕಲ್ಪನಾ೧೧೫೧೯೬೯ಚಿಕ್ಕಮ್ಮಜಯಂತಿ೧೧೬೧೯೬೯ಮೇಯರ್ ಮುತ್ತಣ್ಣಮುತ್ತಣ್ಣಭಾರತಿ೧೧೭೧೯೬೯ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯ರೇಖಾ, ಸುರೇಖಾ೧೧೮೧೯೭೦ಶ್ರೀ ಕೃಷ್ಣದೇವರಾಯ ರಾಜ ಕೃಷ್ಣದೇವರಾಯಭಾರತಿ, ಜಯಂತಿ೧೧೯೧೯೭೦ಕರುಳಿನ ಕರೆಕಲ್ಪನಾ೧೨೦೧೯೭೦ಹಸಿರು ತೋರಣಭಾರತಿ೧೨೧೧೯೭೦ಭೂಪತಿ ರಂಗರಂಗಾಉದಯಚಂದ್ರಿಕಾ೧೨೨೧೯೭೦ಮಿಸ್ಟರ್ ರಾಜ್‍ಕುಮಾರ್ರಾಜ್ ಕುಮಾರ್ರಾಜಶ್ರೀ೧೨೩೧೯೭೦ಭಲೇ ಜೋಡಿಭಾರತಿ, ಬಿ.ವಿ.ರಾಧ೧೨೪೧೯೭೦ಸಿ.ಐ.ಡಿ. ರಾಜಣ್ಣರಾಜಣ್ಣರಾಜಶ್ರೀ೧೨೫೧೯೭೦ನನ್ನ ತಮ್ಮಜಯಂತಿ೧೨೬೧೯೭೦ಬಾಳು ಬೆಳಗಿತುಭಾರತಿ, ಜಯಂತಿ೧೨೭೧೯೭೦ದೇವರ ಮಕ್ಕಳುಜಯಂತಿ೧೨೮೧೯೭೦ಪರೋಪಕಾರಿಜಯಂತಿ೧೨೯೧೯೭೧ಕಸ್ತೂರಿ ನಿವಾಸಉದ್ಯಮಿ ರವಿವರ್ಮಜಯಂತಿ, ಆರತಿ೧೩೦೧೯೭೧ಬಾಳ ಬಂಧನಜಯಂತಿ೧೩೧೧೯೭೧ಕುಲಗೌರವಜಯಂತಿ, ಭಾರತಿ೧೩೨೧೯೭೧ನಮ್ಮ ಸಂಸಾರಭಾರತಿ೧೩೩೧೯೭೧ಕಾಸಿದ್ರೆ ಕೈಲಾಸವಾಣಿಶ್ರೀ೧೩೪೧೯೭೧ತಾಯಿದೇವರುಭಾರತಿ೧೩೫೧೯೭೧ಪ್ರತಿಧ್ವನಿ (ಚಲನಚಿತ್ರ)ಆರತಿ೧೩೬೧೯೭೧ಸಾಕ್ಷಾತ್ಕಾರಜಮುನಾ೧೩೭೧೯೭೧ನ್ಯಾಯವೇ ದೇವರುಬಿ.ಸರೋಜಾ ದೇವಿ೧೩೮೧೯೭೧ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮಕೃಷ್ಣಬಿ.ಸರೋಜಾ ದೇವಿ, ಭಾರತಿ೧೩೯೧೯೭೨ಜನ್ಮರಹಸ್ಯಭಾರತಿ೧೪೦೧೯೭೨ಸಿಪಾಯಿರಾಮು ರಾಮುಲೀಲಾವತಿ, ಆರತಿ೧೪೧೧೯೭೨ಬಂಗಾರದ ಮನುಷ್ಯ ರಾಜೀವಭಾರತಿ೧೪೨೧೯೭೨ಹೃದಯ ಸಂಗಮದ್ವಿಪಾತ್ರ ಭಾರತಿ೧೪೩೧೯೭೨ಕ್ರಾಂತಿವೀರದೊರೆ ಚಂದ್ರಕುಮಾರ್ಜಯಂತಿ೧೪೪೧೯೭೨ಭಲೇ_ಹುಚ್ಚ_(ಚಲನಚಿತ್ರ)ಆರತಿ೧೪೫೧೯೭೨ನಂದಗೋಕುಲಜಯಂತಿ೧೪೬೧೯೭೨ಜಗಮೆಚ್ಚಿದ ಮಗಭಾರತಿ೧೪೭೧೯೭೩ದೇವರು ಕೊಟ್ಟ ತಂಗಿಜಯಂತಿ, ಬಿ.ವಿ.ರಾಧ೧೪೮೧೯೭೩ಬಿಡುಗಡೆ (ಚಲನಚಿತ್ರ)ಪತ್ರಕರ್ತಭಾರತಿ೧೪೯೧೯೭೩ಸ್ವಯಂವರ (ಚಲನಚಿತ್ರ)ಗಣಿ ಕಾರ್ಮಿಕ ನಟರಾಜಭಾರತಿ೧೫೦೧೯೭೩ಗಂಧದ ಗುಡಿರೇಂಜ್ ಅರಣ್ಯ ಅಧಿಕಾರಿ ಕುಮಾರ್ಕಲ್ಪನಾ೧೫೧೧೯೭೩ದೂರದ ಬೆಟ್ಟಭಾರತಿ೧೫೨೧೯೭೩ಮೂರೂವರೆ ವಜ್ರಗಳುದ್ವಿಪಾತ್ರ ನಾರದ, ಶ್ರೀ ಕೃಷ್ಣಆರತಿ, ಮಂಜುಳಾ೧೫೩೧೯೭೪ಬಂಗಾರದ ಪಂಜರಆರತಿ೧೫೪೧೯೭೪ಎರಡು ಕನಸುಇಂಗ್ಲೀಷ್ ಪ್ರೊಫೆಸರ್ ರಾಮಚಂದ್ರರಾವ್ಮಂಜುಳಾ, ಕಲ್ಪನಾ೧೫೫೧೯೭೪ಸಂಪತ್ತಿಗೆ ಸವಾಲ್ವೀರಭದ್ರಮಂಜುಳಾ೧೫೬೧೯೭೪ಭಕ್ತ ಕುಂಬಾರಗೋರಾ ಕುಂಬಾರಲೀಲಾವತಿ, ಮಂಜುಳಾ೧೫೭೧೯೭೪ಶ್ರೀ ಶ್ರೀನಿವಾಸ ಕಲ್ಯಾಣವೆಂಕಟೇಶ್ವರಬಿ.ಸರೋಜಾ ದೇವಿ, ಮಂಜುಳಾ೧೫೮೧೯೭೪ದಾರಿ ತಪ್ಪಿದ ಮಗದ್ವಿಪಾತ್ರ ಇಂಗ್ಲೀಷ್ ಪ್ರೊಫೆಸರ್ ಪ್ರಸಾದ್, ಕಳ್ಳಸಾಗಣೆದಾರ ಪ್ರಶಾಂತ್, ಕಲ್ಪನಾ, ಆರತಿ, ಮಂಜುಳಾ, ಜಯಮಾಲ೧೫೯೧೯೭೫ಮಯೂರ ಕದಂಬ ವಂಶದ ದೊರೆ ಮಯೂರ ಶರ್ಮಮಂಜುಳಾ೧೬೦೧೯೭೫ತ್ರಿಮೂರ್ತಿ ವಿಜಯ್, ಕುಮಾರ್, ನರಹರಿ, ಶ್ರೀಧರಜಯಮಾಲ೧೬೧೧೯೭೬ಪ್ರೇಮದ ಕಾಣಿಕೆ ಮನೋಹರ್ಆರತಿ೧೬೨೧೯೭೬ಬಹದ್ದೂರ್ ಗಂಡು ಬಂಕಾಪುರದ ಪಂಜುಜಯಂತಿ, ಆರತಿ೧೬೩೧೯೭೬ರಾಜ ನನ್ನ ರಾಜ ಅರಸುಮಗ ಚಂದ್ರವರ್ಮ, ಬ್ಯಾಂಕ್ ಅಧಿಕಾರಿ ರಾಜುಆರತಿ೧೬೪೧೯೭೬ನಾ ನಿನ್ನ ಮರೆಯಲಾರೆ ಬ್ಯಾಂಕ್ ಅಧಿಕಾರಿ ಆನಂದ್ಲಕ್ಷ್ಮಿ೧೬೫೧೯೭೬ಬಡವರ ಬಂಧು ಹೋಟೆಲ್ ಮಾಣಿ ರಂಗನಾಥ್ಜಯಮಾಲ೧೬೬೧೯೭೭ಬಬ್ರುವಾಹನ (ಚಲನಚಿತ್ರ) ಅರ್ಜುನಬಬ್ರುವಾಹನಬಿ.ಸರೋಜಾ ದೇವಿ, ಕಾಂಚನಾ, ಜಯಮಾಲ೧೬೭೧೯೭೭ಭಾಗ್ಯವಂತರು ಬಿ.ಸರೋಜಾ ದೇವಿ೧೬೮೧೯೭೭ಗಿರಿಕನ್ಯೆ_(ಚಲನಚಿತ್ರ) ಜಯಮಾಲ೧೬೯೧೯೭೭ಸನಾದಿ ಅಪ್ಪಣ್ಣ ಸನಾದಿ ಅಪ್ಪಣ್ಣಜಯಪ್ರದಾ೧೭೦೧೯೭೭ಒಲವು ಗೆಲವು ಲಕ್ಷ್ಮಿ೧೭೧೧೯೭೮ಶಂಕರ್ ಗುರು ತ್ರಿಪಾತ್ರ ಉದ್ಯಮಿ ರಾಜಶೇಖರ್ ಪೋಲಿಸ್ ಸಿ.ಐ.ಡಿ. ಅಧಿಕಾರಿ ಶಂಕರ್ ವಿದ್ಯಾರ್ಥಿ ಗುರುಮೂರ್ತಿಕಾಂಚನಾ, ಜಯಮಾಲ, ಪದ್ಮಪ್ರಿಯ೧೭೨೧೯೭೮ಆಪರೇಷನ್ ಡೈಮಂಡ್ ರ್ಯಾಕೆಟ್ ಸಿ.ಐ.ಡಿ ಏಜೆಂಟ್ 999 ಪ್ರಕಾಶ್ಪದ್ಮಪ್ರಿಯ೧೭೩೧೯೭೮ತಾಯಿಗೆ ತಕ್ಕ ಮಗ ಪದ್ಮಪ್ರಿಯ೧೭೪೧೯೭೯ಹುಲಿಯ ಹಾಲಿನ ಮೇವು ಕೊಡಗು ಸಂಸ್ಥಾನದ ರಾಜರ ಅಂಗರಕ್ಷಕ ಚಂಗುಮಣಿಜಯಪ್ರದಾ, ಜಯಚಿತ್ರಾ೧೭೫೧೯೭೯ನಾನೊಬ್ಬ ಕಳ್ಳ ಪೋಲಿಸ್ ಸೂಪರಿಂಟೆಂಡೆಂಟ್ ಮುತ್ತುರಾಜು ಕಳ್ಳ ರಾಜಲಕ್ಷ್ಮಿ, ಕಾಂಚನಾ೧೭೬೧೯೮೦ರವಿಚಂದ್ರ ರವಿಚಂದ್ರಲಕ್ಷ್ಮಿ೧೭೭೧೯೮೦ವಸಂತಗೀತ ಇನ್ಷೂರೆನ್ಸ್ ಏಜೆಂಟ್ ವಸಂತ್ ಕುಮಾರ್ಗಾಯತ್ರಿ೧೭೮೧೯೮೧ಹಾವಿನ ಹೆಡೆ ಸುಲಕ್ಷಣಾ೧೭೯೧೯೮೧ನೀ ನನ್ನ ಗೆಲ್ಲಲಾರೆ ಮಂಜುಳಾ೧೮೦೧೯೮೧ಕೆರಳಿದ ಸಿಂಹ ಪೋಲಿಸ್ ಇನ್ಸ್ಪೆಕ್ಟರ್ ಶಂಕರ್ಸರಿತಾ೧೮೧೧೯೮೨ಹೊಸಬೆಳಕು ರವಿಸರಿತಾ೧೮೨೧೯೮೨ಹಾಲು ಜೇನು ರಂಗಮಾಧವಿ, ರೂಪಾದೇವಿ೧೮೩೧೯೮೨ಚಲಿಸುವ ಮೋಡಗಳು ವಕೀಲ ಮೋಹನ್ಸರಿತಾ, ಅಂಬಿಕಾ೧೮೪೧೯೮೩ಕವಿರತ್ನ ಕಾಳಿದಾಸ ಕಾಳಿದಾಸಜಯಪ್ರದಾ೧೮೫೧೯೮೩ಕಾಮನಬಿಲ್ಲು ಅರ್ಚಕ ಮತ್ತು ರೈತ ಸೂರ್ಯನಾರಾಯಣ ಶಾಸ್ತ್ರಿಸರಿತಾ೧೮೬೧೯೮೩ಭಕ್ತ ಪ್ರಹ್ಲಾದ ಹಿರಣ್ಯಕಶಿಪುಸರಿತಾ೧೮೭೧೯೮೩ಎರಡು ನಕ್ಷತ್ರಗಳು ಸೇನಾಧಿಕಾರಿಯ ಮಗ ರಾಜಅಂಬಿಕಾ೧೮೮೧೯೮೪ಸಮಯದ ಗೊಂಬೆ ಅನಿಲ್/ಚಾಲಕ ಗುರುಮೂರ್ತಿರೂಪಾದೇವಿ, ಮೇನಕಾ೧೮೯೧೯೮೪ಶ್ರಾವಣ ಬಂತು ಪಾಪ್ ಗಾಯಕ ಕುಮಾರ್/ಪೀಟರ್ ಫ್ರಂ ಪೀಟರ್ಸ್ ಬರ್ಗ್/ಆಶುಕವಿಊರ್ವಶಿ೧೯೦೧೯೮೪ಯಾರಿವನು ಇನ್ಸ್ ಪೆಕ್ಟರ್ರೂಪಾದೇವಿ೧೯೧೧೯೮೪ಅಪೂರ್ವ ಸಂಗಮ ಗೋಪಿ/ಪೋಲಿಸ್ ಸೂಪರಿಂಟೆಂಡೆಂಟ್ ಸಂತೋಷ್ ಕುಮಾರ್ಅಂಬಿಕಾ೧೯೨೧೯೮೫ಅದೇ ಕಣ್ಣು ದ್ವಿಪಾತ್ರದಲ್ಲಿ ಗಾಯತ್ರಿ, ವಿಜಯರಂಜಿನಿ೧೯೩೧೯೮೫ಜ್ವಾಲಾಮುಖಿ ಪ್ರೊಫೆಸರ್ ಮತ್ತು ಪತ್ರಕರ್ತ ಜಯಸಿಂಹಗಾಯತ್ರಿ೧೯೪೧೯೮೫ಧ್ರುವತಾರೆ ವಕೀಲ ಸಾಗರ್ ಗೀತಾ_(ನಟಿ)೧೯೫೧೯೮೬ಭಾಗ್ಯದ ಲಕ್ಷ್ಮಿ ಬಾರಮ್ಮ ಪಾಂಡುರಂಗಮಾಧವಿ೧೯೬೧೯೮೬ಅನುರಾಗ ಅರಳಿತು ಮೆಕ್ಯಾನಿಕ್ ಶಂಕರ್ಮಾಧವಿ, ಗೀತಾ_(ನಟಿ)೧೯೭೧೯೮೬ಗುರಿ ಕಸ್ಟಂಸ್ ಅಧಿಕಾರಿ ಕಾಳೀಪ್ರಸಾದ್ಅರ್ಚನಾ೧೯೮೧೯೮೭ಒಂದು ಮುತ್ತಿನ ಕಥೆ ಮೀನುಗಾರ ಐತುಅರ್ಚನಾ೧೯೯೧೯೮೭ಶ್ರುತಿ ಸೇರಿದಾಗ ವೈದ್ಯ ಮತ್ತು ಗಾಯಕ ಡಾ. ಮೂರ್ತಿ ಗೀತಾ_(ನಟಿ), ಮಾಧವಿ೨೦೦೧೯೮೮ದೇವತಾ ಮನುಷ್ಯ ಚಾಲಕ ಮೂರ್ತಿ ಗೀತಾ_(ನಟಿ)೨೦೧೧೯೮೯ಪರಶುರಾಮ್ ಭಾರತೀಯ ಭೂಸೇನೆ ಮೇಜರ್ ಪರಶುರಾಮ್ವಾಣಿ ವಿಶ್ವನಾಥ್, ಮಹಾಲಕ್ಷ್ಮಿ೨೦೨೧೯೯೨ಜೀವನ ಚೈತ್ರ ಸಿಂಹಾದ್ರಿ ಜೋಡಿದಾರ್ ವಿಶ್ವನಾಥ ರಾವ್ಮಾಧವಿ೨೦೩೧೯೯೩ಆಕಸ್ಮಿಕ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿಮಾಧವಿ. ಗೀತಾ_(ನಟಿ)೨೦೪೧೯೯೪ಒಡಹುಟ್ಟಿದವರು ರಾಮಣ್ಣಮಾಧವಿ೨೦೫೨೦೦೦ಶಬ್ದವೇಧಿ ಇನ್ಸ್ಪೆಕ್ಟರ್ ಸಂದೀಪ್ಜಯಪ್ರದಾ ಅತಿಥಿ ನಟನಾಗಿ ಅಭಿನಯಿಸಿದ ಚಿತ್ರಗಳು ಶ್ರೀನಿವಾಸ ಕಲ್ಯಾಣ ೧೯೫೧ ಗಂಧದ ಗುಡಿ ಭಾಗ ೨ ಜೋಗಿ ಗಾಯಕರಾಗಿ ಡಾ. ರಾಜ್ ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ. ೧೯೭೪ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ,ಊರೇ ಹೋರಾಡಲಿ (ಎಮ್ಮೆ ಹಾಡೆಂದೇ ಪ್ರಸಿದ್ಧಿ) ಎಂಬ ಹಾಡಿನಿಂದ ಅವರು ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. ಇದಕ್ಕೂ ಮುಂಚೆ ೧೯೫೬ರಲ್ಲೇ ಓಹಿಲೇಶ್ವರ_(ಚಲನಚಿತ್ರ) ಚಿತ್ರದಲ್ಲಿ "ಶರಣು ಶಂಭೋ" ಎಂಬು ಗೀತೆಯೊಂದನ್ನು ಹಾಗೂ ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್.ಜಾನಕಿಯವರೊಡನೆ "ತುಂಬಿತು ಮನವ ತಂದಿತು ಸುಖವ" ಎಂಬ ಯುಗಳ ಗೀತೆಯನ್ನು ಹಾಡಿದ್ದರು. ಈ ಮೂರು ಚಿತ್ರಗಳು ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು. ಜಿ.ಕೆ.ವೆಂಕಟೇಶ್ ಹಾಗೂ ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ೧೯೬೨ರಲ್ಲಿ, ದೇವಸುಂದರಿ ಚಿತ್ರದಲ್ಲಿ ಹಾಸ್ಯರತ್ನ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಡಾ. ರಾಜ್ ಅವರು ಬೇರೊಬ್ಬರ ಅಭಿನಯಕ್ಕೆ ಹಿನ್ನೆಲೆ ಗಾಯನ ಮಾಡಿದ ಮೊದಲ ಚಿತ್ರಗೀತೆಯಿದು. ೧೯೬೪ರಲ್ಲಿ, ನವಕೋಟಿನಾರಾಯಣ (ಭಕ್ತ ಪುರಂದರದಾಸ) ಚಲನಚಿತ್ರದಲ್ಲಿ ಕೆಲವು ಕೀರ್ತನೆ ಗಳನ್ನು ಹಾಡಿದ್ದಾರೆ. ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ೨೦೦೩ರಲ್ಲಿ ಬಿಡುಗಡೆಯಾದ ಅಭಿ ಚಿತ್ರದ "ವಿಧಿ ಬರಹ ಎಂಥ ಘೋರ" ಹಾಗು ಅದೇ ವರ್ಷದ ಚಿಗುರಿದ ಕನಸು ಚಿತ್ರದ "ಬಂಧುವೇ ಓ ಬಂಧುವೇ" ಇವರು ಹಾಡಿದ ಇತ್ತೀಚಿನ ಚಿತ್ರಗೀತೆಗಳಾಗಿರುತ್ತವೆ. ಚಿತ್ರಗೀತೆಗಳಷ್ಟೇ ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ಹಾಡಿರುವರು. ಕನ್ನಡವೇ ಸತ್ಯ, ಅನುರಾಗ, ಮಂಕುತಿಮ್ಮನ ಕಗ್ಗ - ರಾಜ್ ಕಂಠದಲ್ಲಿ ಮೂಡಿ ಬಂದ ಭಾವಗೀತೆ ಸಂಕಲನಗಳು. ರಾಜ್ ಕುಮಾರ್ ಅವರು ತಮ್ಮ ಹೆಚ್ಚಿನ ಹಾಡುಗಳನ್ನು ಎಸ್. ಜಾನಕಿ ಮತ್ತು ವಾಣಿ ಜಯರಾಂ ಅವರೊಂದಿಗೆ ಹಾಡಿದ್ದಾರೆ. ಅಲ್ಲದೆ, ಪಿ. ಸುಶೀಲ, ಬೆಂಗಳೂರು ಲತಾ, ರತ್ನಮಾಲ ಪ್ರಕಾಶ್, ಮಂಜುಳಾ ಗುರುರಾಜ್, ಬಿ. ಆರ್. ಛಾಯಾ, ಕಸ್ತೂರಿ ಶಂಕರ್, ಚಿತ್ರಾ, ಸುಲೋಚನಾ ಅವರೊಂದಿಗೂ ಯುಗಳಗೀತೆಗಳನ್ನು ಹಾಡಿದ್ದಾರೆ. ಹುಟ್ಟಿದರೇ ಕನ್ನಡನಾಡ್ನಲ್ ಹುಟ್ಟಬೇಕು, ಮೆಟ್ಟಿದರೇ, ಕನ್ನಡ ಮಣ್ಣನ್ ಮೆಟ್ಟಬೇಕು ಗೀತೆಯನ್ನು ಸಾಮಾನ್ಯವಾಗಿ ಹೋದೆಡೆಯಲ್ಲೆಲ್ಲಾ ಹಾಡುತ್ತಿದ್ದರು. ತಮ್ಮ 'ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ', ವನ್ನು ದೆಹಲಿಯಲ್ಲಿ ಪಡೆದ ಬಳಿಕ, ಮುಂಬಯಿ ಗೆ ಭೇಟಿಕೊಟ್ಟಾಗ, 'ಕರ್ನಾಟಕ ಸಂಘ' ದ ರಂಗಮಂಚದ ಮೇಲೆ, ಮೇಲಿನ ಗೀತೆಯನ್ನು ಅವರ ಮಕ್ಕಳ ಸಮೇತ ಕುಣಿದು-ಕುಪ್ಪಳಿಸಿ ಹಾಡಿದ ಸಡಗರ ಇನ್ನೂ ಮುಂಬಯಿ ನಗರದ, ಕನ್ನಡ ರಸಿಕರ ಮನದಲ್ಲಿ ಹಸಿರಾಗಿ ಉಳಿದಿದೆ. ರಾಷ್ಟ್ರಕವಿ ಕುವೆಂಪು ರಚಿಸಿದ 'ಕನ್ನಡವೇ ಸತ್ಯ' ಹಾಡನ್ನು ಡಾ. ರಾಜಕುಮಾರ್‌ ಭಾವಗೀತೆಯ ಮೇರು ಕಲಾವಿದ ಡಾ. ಸಿ.ಅಶ್ವತ್ಥ್‌ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು. ಕನ್ನಡಪರ ಚಳುವಳಿಗಳಲ್ಲಿ ಡಾ. ರಾಜ್ thumb|right|ಗೋಕಾಕ್ ಚಳುವಳಿಯಲ್ಲಿ ಡಾ. ರಾಜ್ ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. ೧೯೮೧ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು. ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು. ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು. ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿತು. ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು. ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ. ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು. ಗುಂಡೂರಾವ್ ನೇತೃತ್ವದ ಆಗಿನ ಕರ್ನಾಟಕ ಸರ್ಕಾರವು ಚಳುವಳಿಯ ತೀವ್ರತೆಗೆ ಸ್ಪಂದಿಸಿ, ಗೋಕಾಕ್ ವರದಿಯನ್ನು ಜಾರಿಗೊಳಿಸಿತು. ಪ್ರಶಸ್ತಿ/ ಪುರಸ್ಕಾರಗಳು/ಬಿರುದುಗಳು thumb|right|ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‌ಕುಮಾರ್ ಪ್ರಶಸ್ತಿಗಳು ಪದ್ಮಭೂಷಣ (ಭಾರತ ಸರ್ಕಾರದಿಂದ) ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (೧೯೯೫ರಲ್ಲಿ ಭಾರತ ಸರ್ಕಾರದಿಂದ) ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ) ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ) ಅತ್ಯುತ್ತಮ ನಟ - ಫಿಲ್ಮ್‌ಫೇರ್ ಪ್ರಶಸ್ತಿ (ಹತ್ತು ಬಾರಿ) ಅತ್ಯುತ್ತಮ ನಟ - ರಾಜ್ಯಪ್ರಶಸ್ತಿ (ಒಂಭತ್ತು ಬಾರಿ) ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ ೧೯೮೫ರಲ್ಲಿ ಬೆಂಗಳೂರಲ್ಲಿ ನೀಡಿದರು) ನಾಡೋಜ ಪ್ರಶಸ್ತಿ (ಕನ್ನಡ ವಿಶ್ವವಿದ್ಯಾಲಯ, ಹಂಪಿ) ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ) ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ) ಪದವಿಗಳು ಗೌರವ ಡಾಕ್ಟರೇಟ್(ಮೈಸೂರು ವಿಶ್ವವಿದ್ಯಾಲಯ) ಬಿರುದುಗಳು ಅಭಿನಯ ಕಲಾಶ್ರೀ ಅಭಿನಯ ಕೇಸರಿ ಅಭಿನಯ ಚಕ್ರೇಶ್ವರ ಅಭಿನಯ ನೃಪತುಂಗ ಅಭಿನಯ ಬ್ರಹ್ಮ ಅಭಿನಯ ಭಗೀರಥ ಅಭಿನಯ ಭಾರ್ಗವ ಅಭಿನಯ ರತ್ನ ಅಭಿನಯ ವಾಲ್ಮೀಕಿ ಅಭಿನಯ ಶಿರೋಮಣಿ ಅಭಿನಯ ಸಂಜಾತ ಅಭಿನಯ ಸವ್ಯಸಾಚಿ ಅಭಿನಯ ಸಿಂಹ ಅಭಿನಯ ಸೃಷ್ಟಿಕರ್ತ ಅಮರ ಜೀವಿ ಅಮರ ಜ್ಯೋತಿ ಕನ್ನಡ ಕಂಠೀರವ ಕನ್ನಡ ಕಲಾ ಕಿರೀಟ ಕನ್ನಡ ಕಲಾ ಕುಸುಮ ಕನ್ನಡ ಕಲಾ ತಿಲಕ ಕನ್ನಡ ಕುಲ ರತ್ನ ಕನ್ನಡ ಕೇಸರಿ ಕನ್ನಡ ಗಾನ ಕೌಸ್ತುಭ ಕನ್ನಡ ಜನಕೋಟಿಯ ಪ್ರೀತಿಯ ಪುತ್ಥಳಿ ಕನ್ನಡ ತಾಯಿಯ ಹೆಮ್ಮೆಯ ಮಗ ಕನ್ನಡದ ರಕ್ಷಕ ಕನ್ನಡದ ಕಣ್ಮಣಿ ಕನ್ನಡದ ಕಂದ ಕನ್ನಡದ ಕಲಿ ಕನ್ನಡದ ಕಳಶ ಕನ್ನಡದ ಕುಲ ದೇವ ಕನ್ನಡದ ಚೇತನ ಕನ್ನಡದ ಜೀವ ಕನ್ನಡದ ಧ್ರುವತಾರೆ ಕನ್ನಡದ ನಂದಾ ದೀಪ ಕನ್ನಡದ ಬಂಧು ಕನ್ನಡದ ಭೂ ಪಟ ಕನ್ನಡದ ಮಾಣಿಕ್ಯ ಕನ್ನಡದ ಮೇಷ್ಟ್ರು ಕನ್ನಡದ ವಿಧಾತ ಕನ್ನಡಿಗರ ಆರಾಧ್ಯ ದೈವ ಕನ್ನಡಿಗರ ಕಣ್ಮಣಿ ಕನ್ನಡಿಗರ ಹೃದಯ ಸಿಂಹಾಸಾನಾಧೀಶ್ವರ ಕರುನಾಡ ಅಧಿಪತಿ ಕರುನಾಡ ಕಲಾ ನಿಧಿ ಕರುನಾಡ ಹುಲಿ ಕರ್ನಾಟಕ ಕೀರ್ತಿವರ್ಮ ಕರ್ನಾಟಕ ರತ್ನ ಕರ್ನಾಟಕ ಸಾಂಸ್ಕೃತಿಕ ರಾಯಭಾರಿ ಕಲಾ ಆರಾಧಕ ಕಲಾ ಕಮಲ ರಾಜಹಂಸ ಕಲಾ ಕರ್ಮಯೋಗಿ ಕಲಾ ಕುಸುಮ ಕಲಾ ಕೌಸ್ತುಭ ಕಲಾ ಜ್ಯೋತಿ ಕಲಾ ತಪಸ್ವಿ ಕಲಾ ತೇಜ ಕಲಾ ದಾಹಿ ಕಲಾ ದೀವಿಗೆ ಕಲಾ ಪುಂಗವ ಕಲಾ ಪುರುಷೋತ್ತಮ ಕಲಾ ಪೋಷಕ ಕಲಾ ಭಕ್ತ ಕಲಾ ಭೂಷಣ ಕಲಾ ಯೋಗಿ ಕಲಾ ವಿನೀತ ಕಲಾ ಶ್ರೇಷ್ಠ ಕಲಾ ಸಿರಿ ರತ್ನ ಕಾಯಕ ಯೋಗಿ ಕಾಯಕ ರತ್ನ ಕೃಷ್ಣಾನುಗ್ರಹಿ ಕೆಂಟಕಿ ಕರ್ನಲ್ ಗಾಜನೂರು ಗಂಡು ಗಾನ ಕಲಾಶ್ರೀ ಗಾನ ಕೋಗಿಲೆ ಗಾನ ಗಂಗೆ ಗಾನ ಗಂಧರ್ವ ಗಾನ ಗಾರುಡಿಗ ಗಾನ ಜ್ಯೋತಿ ಗಾನ ತರಂಗ ಗಾನ ಯೋಗಿ ಗಾನ ರಸಿಕ ಗಾನ ಲಹರಿ ಗಾನ ವಾರಿಧಿ ಗಾನ ವಿಭೂಷಣ ಗಾನ ಸಿಂಧು ಗಿರಿ ನಟ ಗೆಲುವಿನ ಹಮ್ಮೀರ ಗೌರವ ಡಾಕ್ಟರಟ್ ಪುರಸ್ಕೃತ ಚಿತ್ರರಂಗದ ಧ್ರುವತಾರೆ ಜಗ ಮೆಚ್ಚಿದ ಮಗ ಜ್ಞಾನದಾಹಿ ದಾದ ಸಾಹೇಬ್ ಪಾಲ್ಕೇ ಪುರಸ್ಕ್ರುತ ದೇವತಾ ಮನುಷ್ಯ ದೇವರ ದೇವ ಕಲಾ ದೇವ ನಕ್ಷತ್ರಗಳ ರಾಜ ನಗುವಿನ ಸರದಾರ ನಟ ಭಯಂಕರ ನಟ ರತ್ನಾಕರ ನಟ ವೈಭವೇಶ್ವರ ನಟ ಶೇಖರ ನಟ ಸಾರ್ವಭೌಮ ನವರಸ ಮಂಜೂಷ ನಾಡೋಜ ನೇತ್ರದಾನದ ಸ್ಪೂರ್ತಿ ರತ್ನ ಪದ್ಮ ಭೂಷಣ ಪದ್ಮ ವಿಭೂಷಣ ಪ್ರಾತಃ ಸ್ಮರಣಿಯ ಬೆಳ್ಳಿ ತೆರೆಯ ಬಂಗಾರ ಭಕ್ತ ಕಲಾ ರತ್ನ ಭಾಗ್ಯವಂತ ಮಧುರ ಕಂಠಶ್ರೀ ಮಹಾ ತಪಸ್ವಿ ಮಹಾ ಪುರುಷ ಮಹಾ ಮಹಿಮ ಮಹಾ ಯೋಗಿ ಮೇರು ನಟ ಯೋಗ ಕಲಾ ರತ್ನ ರತ್ನ ದೀಪ ರಸಿಕರ ರಾಜ ರಾಜಕೀರ್ತಿ ಮೆರೆದ ಗಂಡುಗಲಿ ಲೋಕ ಪೂಜಿತ ವರ ನಟ ವಿನಯ ಶೀಲ ವಿಶ್ವ ಮಾನವ ವಿಶ್ವ ಶಾಂತಿ ಪ್ರಿಯ ವೀರಾಧಿ ವೀರ ಶತಮಾನದ ಯುಗ ಪುರುಷ ಶುದ್ಧ ಮನಸ್ಸಿನ ಹಿಮಶಿಖರ ಸಂಗೀತ ರತ್ನ ಸಮಾಜ ಭೂಷಣ ಸರಸ್ವತಿ ಪುತ್ರ ಸರಳತೆಯ ಸಂತ ಸರಳತೆಯ ಸಾಕಾರಮೂರ್ತಿ ಸೋಲಿಲ್ಲದ ಸರದಾರ ಡಾ. ರಾಜ್‌ಕುಮಾರ್ ರಸ್ತೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಯಶವಂತಪುರ ಮೇಲ್ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದುಹೋಗುವ ಮುಖ್ಯರಸ್ತೆಗೆ ಡಾ. ರಾಜ್‌ಕುಮಾರ್ ರಸ್ತೆ ಎಂದು ಹೆಸರಿಸಲಾಗಿದೆ. ಗೂಗಲ್‌ ಡೂಡಲ್‌ ಗೌರವ ಗೂಗಲ್‌ ಸರ್ಚ್‌‌ನ ಡೂಡಲ್‌ ವಿಭಾಗದವರು ಡಾ. ರಾಜ್‌ಕುಮಾರ್‌ ಅವರ ೮೮ನೇ ಹುಟ್ಟು ಹಬ್ಬದ ದಿನ ( ೨೪ ಏಪ್ರಿಲ್‌ ೨೦೧೭ ) ರಾಜ್‌ ಅವರ ಡೂಡಲ್‌ ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದರು. ಈ ಡೂಡಲ್‌ ದೇಶಾದ್ಯಂತ ( google.co.in ) ಎಲ್ಲಾ ರಾಜ್ಯಗಳಲ್ಲೂ ಪ್ರದರ್ಶಿತಗೊಂಡು ಪರ ರಾಜ್ಯದವರಿಗೂ ರಾಜ್‌ ಅವರ ಬಗ್ಗೆ ಕುತೂಹಲ ಮೂಡುವಂತೆ ಮಾಡಿತು. ತೆಂಕಣ ಭಾರತದ ನಟರಿಗೆ ಗೂಗಲ್‌ ಈ ರೀತಿಯ ಗೌರವ ಸಲ್ಲಿಸಿರುವುದು ಇದೇ ಮೊದಲು. ಇದಕ್ಕಾಗಿ ಕನ್ನಡಿಗರು ಗೂಗಲ್‌ನವರಿಗೂ ಅಭಿನಂದನೆ ಸಲ್ಲಿಸಿದರು. ಪುಸ್ತಕಗಳು ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ. ರಾಜ್ ಕೊಡುಗೆ (ಪಿ.ಹೆಚ್.ಡಿ ನಿಬಂಧ) ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಿ. ಗುರುಮೂರ್ತಿ ಹಾರೋಹಳ್ಳಿ ಅವರು "ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ. ರಾಜ್ ಕೊಡುಗೆ" ಕುರಿತ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಶೋಧನೆಯ ಸಮಯದಲ್ಲಿ, ಡಾ. ರಾಜ್ ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದಾರೆ. ೧೯೯೭ರಲ್ಲಿ ಪ್ರಾರಂಭಿಸಿದ ಸಂಶೋಧನೆಯನ್ನು ನಾಲ್ಕುವರ್ಷಗಳ ಕಾಲ ಡಾ. ಮಳಲಿ ವಸಂತಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಗುರುಮೂರ್ತಿ ೨೦೦೧ರಲ್ಲಿ ಪಿ.ಹೆಚ್.ಡಿ ಪದವಿ ಪಡೆದರು. ಪ್ರಾಣಪದಕ ಪ್ರಾಣಪದಕ ಡಾ. ರಾಜಕುಮಾರ್ ಅವರನ್ನು ಕುರಿತ 2013ರ ಅಕ್ಟೋಬರ್ ತಿಂಗಳಿನಲ್ಲಿ ಅ. ನಾ. ಪ್ರಹ್ಲಾದರಾವ್ ಬರೆದ ಸ್ವಾರಸ್ಯಕರ ಸಂಗತಿಗಳ ಮತ್ತೊಂದು ಪುಸ್ತಕ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ನೆನಪಿನಾಳದಲ್ಲಿನ ಡಾ. ರಾಜಕುಮಾರ್ ಸಂಗತಿಗಳನ್ನು ಅನಾವರಣಗೊಳಿಸುವ, ವಸಂತ ಪ್ರಕಾಶನ ಪ್ರಕಾಶನಗೊಳಿಸಿರುವ ಅ. ನಾ. ಪ್ರಹ್ಲಾದರಾವ್ ಬರೆದ ವಿಶಿಷ್ಟ ಪುಸ್ತಕ 'ಪ್ರಾಣಪದಕ'. ಸುಮಾರು 120 ಪುಟಗಳ ಈ ಪುಸ್ತಕದ ಲೇಖನಗಳು `ಮಂಗಳ` ವಾರಪತ್ರಿಕೆಯಲ್ಲಿ ಪ್ರಕಟಿಗೊಂಡಿದ್ದವು. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಲೇಖಕ ರೊಂದಿಗೆ ಹಲವು ವಿಷಯ ಗಳನ್ನು ನೆನಪು ಮಾಡಿಕೊಂಡರು. 'ಪ್ರಾಣಪದಕ' ಹೆಸರಿನಲ್ಲಿ 'ಮಂಗಳ' ವಾರಪತ್ರಿಕೆ ಈ ಲೇಖನಗಳನ್ನು ಪ್ರಕಟಿಸಿತ್ತು. ಬಂಗಾರದ ಮನುಷ್ಯ ಕನ್ನಡದ ವರನಟ ಡಾ. ರಾಜಕುಮಾರ್ ಅವರ ಜೀವನ ಹಾಗೂ ಸಾಧನೆ ಕುರಿತು ಕರ್ನಾಟಕ ಸರ್ಕಾರಕ್ಕಾಗಿ ಅ. ನಾ. ಪ್ರಹ್ಲಾದರಾವ್ ಬರೆದ ಬಂಗಾರದ ಮನುಷ್ಯ ಅತ್ಯಂತ ಜನಪ್ರಿಯ ಪುಸ್ತಕ. ಈ ಪುಸ್ತಕ ಇಂಗ್ಲಿಷ್ ಭಾಷೆಗೆ `ಡಾ. ರಾಜಕುಮಾರ್ ಇನ್ಮಿಟಬಲ್ ಆಕ್ಟರ್ ವಿಥ್ ಗೋಲ್ಡನ್ ವಾಯ್ಸ್` ಹೆಸರಿನಲ್ಲಿ ಭಾಷಾಂತರಗೊಂಡು ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಬಿಡುಗಡೆಗೊಂಡಿತು.https://web.archive.org/web/20230111120122/https://openlibrary.org/books/OL22530456M/Dr._Rajkumar_the_inimitable_actor_with_a_golden_voice ಕನ್ನಡದ ನಟರೊಬ್ಬರನ್ನು ಕುರಿತ ಇಂಗ್ಲಿಷ್ ಪುಸ್ತಕವೊಂದು ಭಾರತದ ಹೊರಗಡೆ ಬಿಡುಗಡೆಗೊಂಡ ಮೊದಲ ಪುಸ್ತಕ ಇದೆಂಬ ದಾಖಲೆಯನ್ನೂ ಮಾಡಿತು. ಕನ್ನಡ ಪುಸ್ತಕ ಬಿಡುಗಡೆ ಗೊಂಡ ಸಂದರ್ಭದಲ್ಲಿ ಡಾ. ರಾಜಕುಮಾರ್ ಹಾಗೂ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ತಮ್ಮ ಮನೆಗೆ ಲೇಖಕರ ಕುಟುಂಬವನ್ನು ಬರಮಾಡಿಕೊಂಡು ಆತಿಥ್ಯ ನೀಡಿದ್ದರು. ೨೨೦ ಪುಟಗಳ ಈ ಪುಸ್ತಕ ಡಾ. ರಾಜಕುಮಾರ್ ಅವರಿಂದಲೇ ಪ್ರಶಂಸೆಗೆ ಒಳಗಾಯಿತು. ಇದು ಡಾ. ರಾಜಕುಮಾರ್ ಅವರನ್ನು ಕುರಿತಾದ ಮೊದಲ ಇಂಗ್ಲಿಷ್ ಪುಸ್ತಕವೇ ಅಲ್ಲದೆ, ದೇಶದ ಹೊರಗಡೆ ಬಿಡುಗಡೆ ಆದ ಡಾ. ರಾಜಕುಮಾರ್ ಕುರಿತಾದ ಮೊದಲ ಪುಸ್ತಕವೂ ಹೌದು. ಈ ಪುಸ್ತಕದಲ್ಲಿ ಡಾ. ರಾಜಕುಮಾರ್ ಚಲನಚಿತ್ರಗಳ ಬಗ್ಗೆ ವಿವರಗಳಷ್ಟೆ ಅಲ್ಲದೆ, ಅವರ ಸಾಮಾಜಿಕ ಬದುಕು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯ ವಿವರಗಳನ್ನು ದಾಖಲಿಸಲಾಗಿದೆ. ಕನ್ನಡ ಪುಸ್ತಕ ೨೦೦೬ರಲ್ಲಿ ಅಮೆರಿಕದ ವಾಷಿಂಗ್ಟನ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನ, ೨೦೦೬ರಲ್ಲಿ ಕುವ್ಯೆತ್ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಇಂಗ್ಲಿಷ್ ಪುಸ್ತಕ ಬೆಂಗಳೂರಿನಲ್ಲಿ ಶ್ರೀಮತಿ ಪಾವ೯ತಮ್ಮ ರಾಜಕುಮಾರ್ ಅವರಿಂದ ಬಿಡುಗಡೆಗೊಂಡಿತಲ್ಲದೆ, ಲಂಡನ್ ನಗರದಲ್ಲಿ ೨೦೦೮ರ ಆಗಸ್ಟ್ ತಿಂಗಳಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಅಲ್ಲಿನ ಸೆನೆಟರ್ ಬಿಡುಗಡೆ ಮಾಡಿದರು. ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಡಾ. ರಾಜ್‌ಕುಮಾರ್ ಕನ್ನಡ ವಿಕಿಸೊರ್ಸನಲ್ಲಿ ಡಾ. ರಾಜ್‌ಕುಮಾರ ಗಾಯನ ಹೊರಗಿನ ಸಂಪರ್ಕಗಳು ದಟ್ಸ ಕನ್ನಡ.ಕಾಂ - ಡಾ. ರಾಜ್ ಲೇಖನಗಳ ಸಂಗ್ರಹ ವಿಶ್ವಕನ್ನಡ.ಕಾಂ - ಡಾ. ರಾಜ್ ವಿಶೇಷ ಪರಿಚಯ (ಕೃಪೆ:"ಕನ್ನಡ ಸಿನಿಮಾ ಇತಿಹಾಸ ಪುಟಗಳಲ್ಲಿ" ಪುಸ್ತಕ) ಬೇಡರಕಣ್ಣಪ್ಪ ಚಿತ್ರಕ್ಕೆ ಆಯ್ಕೆ ವಿವರಗಳು - ಹೆಚ್.ಎಲ್.ಎನ್.ಸಿಂಹರವರ ಪುತ್ರ ಹೆಚ್.ಎಲ್.ಶೇಷಚಂದ್ರ ಲೇಖನ (ಕನ್ನಡಪ್ರಭ) ಡಾ ರಾಜಕುಮಾರ್ ಗಾಯನ http://members.tripod.com/~arvintripod/raj.html http://www.rajkumarmemorial.com http://www.gandhadagudi.com/forum/viewforum.php?f=18 ಉಲ್ಲೇಖಗಳು ‌‌ ರಾಜಕುಮಾರ್ ರಾಜಕುಮಾರ್ ರಾಜಕುಮಾರ್ ರಾಜಕುಮಾರ್ ರಾಜಕುಮಾರ್ ವರ್ಗ:ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ವರ್ಗ:ರಾಜಕುಮಾರ್ ಚಲನಚಿತ್ರಗಳು ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು en:Rajkumar
ಬನ್ನೇರು ಘಟ್ಟ
https://kn.wikipedia.org/wiki/ಬನ್ನೇರು_ಘಟ್ಟ
REDIRECT ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
https://kn.wikipedia.org/wiki/ಬನ್ನೇರುಘಟ್ಟ_ರಾಷ್ಟ್ರೀಯ_ಉದ್ಯಾನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಭಾರತದ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಭಾತದ ಕರ್ನಾಟಕದಲ್ಲಿರುವ ಬೆಂಗಳೂರಿನಲ್ಲಿದೆ. ಇದನ್ನು ೧೯೭೦ ರಲ್ಲಿ ಸ್ಥಾಪಿಸಲಾಯಿತು."Bannerghatta National Park" Karnataka.com Accessed 23 May 2014. ಇದನ್ನು ೧೯೭೪ ರಲ್ಲಿ ರಾಷ್ಟ್ರೀಯ ಉದ್ಯಾನವನವೆಂದು ಘೋಷಿಸಲಾಯಿತು. ೨೦೦೨ ರಲ್ಲಿ, ಉದ್ಯಾನದ ಒಂದು ಸಣ್ಣ ಭಾಗವು ಬನ್ನೇರುಘಟ್ಟ ಜೈವಿಕ ಉದ್ಯಾನವನವಾಗಿ ಪ್ರಾಣಿಶಾಸ್ತ್ರದ ಉದ್ಯಾನವಾಯಿತು."Bannerghatta Biological Park" Park website Accessed 23 May 2014. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಟ್ರೆಕ್ಕಿಂಗ್ ಮತ್ತು ಹೈಕಿಂಗ್‌ಗೆ ಒಂದು ತಾಣವಾಗಿದೆ. ರಾಷ್ಟ್ರೀಯ ಉದ್ಯಾನವನದ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರು ಸಾಕಣೆಗಾಗಿ ಮೂರು ದೊಡ್ಡ ಆವರಣಗಳಲ್ಲಿ ಸುತ್ತುವರಿದ ಆರು ಗ್ರಾಮೀಣ ಹಳ್ಳಿಗಳಿವೆ.https://books.google.co.in/books?id=Iim0baRlWzcC&dq=bannerghatta+national+park&pg=PA131&redir_esc=y#v=onepage&q=bannerghatta%20national%20park&f=false ೨೫ ಸಾವಿರ ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಈ ಮೀಸಲು ಪ್ರದೇಶ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ, ಕರಡಿಗಳು, ಪಕ್ಷಿಗಳು ಮತ್ತು ವಿವಿಧ ಜಾತಿಯ ಚಿಟ್ಟೆಗಳ ನೆಲೆಯಾಗಿದೆ. ಪ್ರವಾಸಿಗರು ಸಫಾರಿ ಮಾಡುವಾಗ ಚಿರತೆಗಳು, ಬಿಳಿ ಹುಲಿಗಳು, ಬಂಗಾಳದ ಹುಲಿ, ಮತ್ತು ಕಾಡಿನ ರಾಜ ಸಿಂಹ ಅರಣ್ಯದಲ್ಲಿ ಸುತ್ತಾಡುವುದನ್ನು ನೋಡಬಹುದು. ಇಲ್ಲಿರುವ ಕೆಲವು ಪ್ರಾಣಿಗಳು ಸರ್ಕಸ್‌ಗಳಿಂದ ರಕ್ಷಿಸಲ್ಪಟ್ಟವುಗಳು. ಇನ್ನು ಕೆಲವು ದೇಶದ ಇತರೆಡೆಗಳಿಂದ ಕೂಡ ತರಿಸಿಕೊಳ್ಳಲಾಗಿದೆ. ಸಂಪೂರ್ಣ ರಕ್ಷಣೆಯಲ್ಲಿರುವ ಈ ಪ್ರಾಣಿಗಳು ನಾಡಿಗೆ ಬರದಂತೆ ಅರಣ್ಯದ ಸೂಕ್ಷ್ಮ ಸ್ಥಳಗಳಲ್ಲಿ ಬೇಲಿಯನ್ನು ಹಾಕಲಾಗಿದೆ. ಭೂಗೋಳಶಾಸ್ತ್ರ ೬೫,೧೨೭.೫ ಎಕರೆ (೨೬೦.೫೧ ಚದರ ಕಿಲೋಮೀಟರ್)Karnataka Government Gazette Notification vide No:FEE302 FWL2011-(11), Bangalore, dated:27-12-2011 ಇರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವು ಬೆಂಗಳೂರಿನಿಂದ ದಕ್ಷಿಣಕ್ಕೆ ೨೨ ಕಿಮೀ ದೂರದಲ್ಲಿ ಆನೇಕಲ್ ಶ್ರೇಣಿಯ ಬೆಟ್ಟಗಳಲ್ಲಿ ೧೨೪೫ - ೧೬೩೪ ಮೀ ಎತ್ತರದಲ್ಲಿದೆ."Bannerghatta National Park" Bengaloorutourism.com Accessed 24 May 2014. ಈ ಉದ್ಯಾನವನವು ತೇವಾಂಶವುಳ್ಳ ಎಲೆಯುದುರುವ ಅರಣ್ಯ ಕಣಿವೆಗಳು ಮತ್ತು ಎತ್ತರದ ಪ್ರದೇಶಗಳಲ್ಲಿ ಕುರುಚಲು ಪ್ರದೇಶದ ಅಡಿಯಲ್ಲಿ ಗ್ರಾನೈಟ್ ಹಾಳೆಗಳ ಗುಡ್ಡಗಾಡು ಪ್ರದೇಶವನ್ನು ಹೊಂದಿದೆ."Bannerghatti national park" Arocha organisation website. Accessed 23 May 2014. thumb|ಬನ್ನೇರುಘಟ್ಟ ಮೃಗಾಲಯದಲ್ಲಿ ಚಿರತೆ ಹುಲಿ ಮತ್ತು ಸಿಂಹಧಾಮ thumb|ಬನ್ನೇರುಘಟ್ಟದಲ್ಲಿರುವ ಮಲಗಿರುವ ಹುಲಿ ಬನ್ನೇರುಘಟ್ಟ ಹುಲಿ ಮತ್ತು ಸಿಂಹಧಾಮ ಹುಲಿ, ಇಂಡಿಯನ್ ಹುಲಿಗಳನ್ನು ,ಸಿಂಹಗಳನ್ನು ಮತ್ತು ಇತರೆ ಸಸ್ತನಿಗಳನ್ನು ಹೊಂದಿದೆ. ಇಲ್ಲಿ ಹುಲಿ, ಸಿಂಹಗಳನ್ನು ನೋಡಲು ಮಿನಿ-ಸಫಾರಿಯ ವ್ಯವಸ್ಥೆ ಕೂಡ ಇದೆ. ಮೃಗಾಲಯ thumb|ಬನ್ನೇರುಘಟ್ಟ ಮೃಗಾಲಯದಲ್ಲಿರುವ ಮೊಸಳೆಗಳು ಮೃಗಾಲಯದಲ್ಲಿ ಮೃಗಾಲಯದಲ್ಲಿ ಒಂದು ವಸ್ತು ಸ೦ಗ್ರಹಾಲಯವೂ ಸಹ ಇದೆ. ಅದರಲ್ಲಿ ಪ್ರಾಣಿಶಾಸ್ತ್ರಕ್ಕೆ ಸ೦ಬ೦ಧಪಟ್ಟ ವಸ್ತುಗಳ ಪ್ರದರ್ಶನ ಮಾಡಲಾಗಿದೆ. ಈ ಮೃಗಾಲಯದಲ್ಲಿ ಸರೀಸೃಪ ಉದ್ಯಾನ ಮತ್ತು ಒಂದು ಸಣ್ಣ ರ೦ಗಮ೦ದಿರವನ್ನೂ ಸಹ ಇದು ಹೊಂದಿದೆ. ಜಂಗಲ್ ಸಫಾರಿ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಕೂಡ ಮಾಡಬಹುದು. ಪ್ರವಾಸಿಗರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾಡುತ್ತ ಕಾಡಾನೆಗಳು, ಕಾಡುಹಂದಿ, ಮಚ್ಚೆಯುಳ್ಳ ಜಿಂಕೆ ಸೇರಿದಂತೆ ವಿವಿಧ ಜಾತಿ ಜಿಂಕೆ, ಸಾಂಬಾರ್, ಗುಳ್ಳೆನರಿ, ಕರಡಿ, ಕಾಡು ಹಂದಿ, ಲಂಗೂರ್ ಗಳು ಮತ್ತು ಕೋತಿಗಳನ್ನು ನೋಡಬಹುದು. ಜಂಗಲ್ ಸಫಾರಿಯೊಂದಿಗೆ ಆನೆ ಸವಾರಿಯನ್ನು ಸಹ ಮಾಡಬಹುದು. ಬನ್ನೇರಘಟ್ಟ ಅರಣ್ಯ ಪ್ರದೇಶದಲ್ಲಿಯೇ ಹುಟ್ಟಿದ ಸ್ವರ್ಣಮುಖಿ ಹೊಳೆಯು ಅರಣ್ಯದುದ್ದಕ್ಕೂ ಹರಿಯುತ್ತದೆ. ಅಲ್ಲಿ ಚಂಪಕ ಧಾಮ ಸ್ವಾಮಿಯ ದೇವಸ್ಥಾನ ಇದೆ. ಭಗವಾನ್ ವಿಷ್ಣು ಮತ್ತು ಅವನ ಪತ್ನಿಯರಾದ, ಶ್ರೀ ದೇವಿ ಮತ್ತು ಭೂದೇವಿಯರಮೂರ್ತಿಗಳಿವೆ. ಮೃಗಾಲಯವು ವಾರದ ದಿನಗಳಲ್ಲಿ ಹಾಗೂ ವಾರದ ಕೊನೆಯ ದಿನಗಳಲ್ಲಿ (ರಜಾದಿನಗಳಲ್ಲಿ) ಬೇರೆ ಬೇರೆ ಪ್ರವೇಶ ಶುಲ್ಕವನ್ನು ಹೊಂದಿರುತ್ತದೆ. ಬಟರ್‌ಫ್ಲೈ ಪಾರ್ಕ್ thumb|200px|left|ಬಟರ್‌ಫ್ಲೈ ಪಾರ್ಕ್‌ನಲ್ಲಿ ಅರ್ಥವಿವರಣೆಯ ಕೇಂದ್ರ ಈ ಉದ್ಯಾನವನದಲ್ಲಿ ದೇಶದಲ್ಲೇ ಮೊಟ್ಟ ಮೊದಲನೇಯದಾದ ಚಿಟ್ಟೆಗೆಂದೇ ಇರುವ ಉದ್ಯಾನವನವಿದೆ. ಇದು ೭.೫ ಎಕರೆ ವಿಸ್ತೀರ್ಣದಲ್ಲಿದೆ. ಈ ಚಿಟ್ಟೆ ಉದ್ಯಾನವನವನ್ನು ೨೦೦೬ ರಲ್ಲಿ ಕೇಂದ್ರ ಸಚಿವ ಕಪಿಲ ಸಿಬಲ್ ಉದ್ಘಾಟಿಸಿದ್ದಾರೆ. ಸುಮಾರು ೨೦ ರೀತಿಯ ವಿವಿಧ ಜಾತಿಯ ಚಿಟ್ಟೆಗಳನ್ನು ಬಟರ್‌ಫ್ಲೈ ಪಾರ್ಕ್‌ನಲ್ಲಿ ಕಾಣಬಹುದು.ಪ್ರತಿ ಮಂಗಳವಾರ ವಾರದ ರಜೆ ಇರುತ್ತದೆ. ಬಟರ್‌ಫ್ಲೈ ಸಂರಕ್ಷಣೆ ಮಾಡುವ ಸ್ಥಳವು ಒಂದು ಪಾಲಿಕಾರ್ಬೊನೇಟ್ ಮೇಲ್ಛಾವಣಿಯನ್ನು ಹೊಂದಿದೆ. ಇದು ಸುಮಾರು ೧೦,೦೦೦ ಚದರ ಅಡಿ (೧,೦೦೦ ಚದರ ಮೀಟರ್) ವಿಸ್ತಾರವಾಗಿದೆ. ಇದು ಗೋಳಾಕೃತಿಯ ಸುತ್ತುವರಿಕೆ ಇದ್ದು, ಒಳಭಾಗದಲ್ಲಿ ಸುಮಾರು ೨೦ ತಳಿಗಳ ಬಟರ್‌ಫ್ಲೈಗಳು ವಾಸಿಸಲು ಬೇಕಾದ ವಾತಾವರಣವನ್ನು ವಿನ್ಯಾಸಗೊಳಿಸಿದ್ದಾರೆ. ನೀರಿನ ಮೂಲಗಳು ಉದ್ಯಾನವನದಲ್ಲಿ ಮಳೆಯು ವರ್ಷಕ್ಕೆ ಸುಮಾರು ೭೦೦ ಮಿಮೀನಷ್ಟು ಸುರಿಯುತ್ತದೆ. ಸುವರ್ಣಮುಖಿ ಹೊಳೆಯು ಈ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದು ಹೋಗುತ್ತದೆ. ೧೫ ಮೇ ೨೦೧೪ ರಂದು ಒಣ(ಬೇಸಿಗೆ) ಸಮಯದಲ್ಲಿ ನೀರು ಒದಗಿಸಲು ನಾಲ್ಕು ಕೊಳವೆ ಬಾವಿಗಳನ್ನು ತೆರೆಯಲಾಯಿತು."Bannerghatta National Park gets four bore wells to quench thirst of animals." The Hindu 15 May 2014. Accessed 24 May 2014. ಸಸ್ಯವರ್ಗ‌ಗಳು, ಪ್ರಾಣಿಸಂಕುಲಗಳು ಮತ್ತು ಸರೀಸೃಪಗಳು thumb|ಕಾಡು ಕರಡಿ ನಾರ್ಸಿಸಸ್ ಲ್ಯಾಟಿಫೋಲಿಯಾ ಕುಸುಮ ಮರ ಕರಿಮತ್ತಿ ಶ್ರೀಗಂಧದ ಮರ ಬೇವು ಅರ್ಜುನ, ಬಿಳಿಮತ್ತಿ ಗ್ರೆವಿಯಾ ಟಿಲೆಫೋಲಿಯಾ ಚಂದನ ಹುಣಸೆಹಣ್ಣು ಬಿದಿರು ನೀಲಗಿರಿ ಬಸವನಪಾದ ಮಳೆಮರ ಪೆಲ್ಟ್ಫೋರಮ್ ಪ್ಟೆರೋಕಾರ್ಪಮ್ ಭಾರತದ ಆನೆಗಳು ಕಾಡುಕೋಣ ಭಾರತೀಯ ಚಿರತೆ ಗುಳ್ಳೆನರಿ ನರಿ ಕರಡಿ ಭಾರತೀಯ ಗಸೆಲ್ ಚಿತಾಲ್ ಜಿಂಕೆ ಮುಸುವ ಬಾನೆಟ್ ಮಕಾಕ್ ಮುಳ್ಳುಹಂದಿ ಮೊಲ ಕಾಡು ಹಂದಿ ಚಿಪ್ಪುಹಂದಿ ಭಾರತೀಯ ಹುಲಿಗಳು ಕಾಡು ಪಾಪ ಮಾನಿಟರ್ ಹಲ್ಲಿ ನಾಗರಹಾವುಗಳು ಹೆಬ್ಬಾವು ಮಂಡಲ ಹಾವು ಕಟ್ಟುಹಾವು ನವಿಲು ಮೊಸಳೆ ಭಾರತೀಯ ಸಿಂಹ ರಾಜ ಹಂಸ ನೀಲ್‍ಗಾಯ್ ಕೃಷ್ಣಮೃಗ ನೀರಹಕ್ಕಿ ತೋಳ ಪಟ್ಟೆ ಕತ್ತೆಕಿರುಬ ಹಿಮಾಲಯದ ಕಪ್ಪು ಕರಡಿ ಇತರ ದೇಶಗಳ ಪ್ರಾಣಿಗಳು ಜಿರಾಫೆ ಹಮಾದ್ರಿಯಾಸ್ ಬಬೂನ್ ಗ್ಯಾಲರಿ ಸಹ ನೋಡಿ ಬಯಲುಸೀಮೆ ತ್ಯಾವರೆಕೊಪ್ಪ ವನ್ಯಧಾಮ ಉಲ್ಲೇಖಗಳು ಬಾಹ್ಯ ಸಂಪರ್ಕಗಳು Bannerghatta National Park travel guide from Wikivoyage Criticisms of the National Park, The Hindu Lions’ club grows at Bannerghatta park Butterfly Park, The Hindu Rangers in India capture tiger that killed girl, 5. Orlando Sentinel, 15 September 1992. Travel Guide to Bannerghatta National Park , Onebangalore.com. Bannerghatta National Park, Karnataka Tourism Official Website. ವರ್ಗ:ಭಾರತದ ರಾಷ್ಟ್ರೀಯ ಉದ್ಯಾನಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ en:Bannerghatta National Park
ಜಾವಗಲ್ ಶ್ರೀನಾಥ್
https://kn.wikipedia.org/wiki/ಜಾವಗಲ್_ಶ್ರೀನಾಥ್
ಜಾವಗಲ್ ಶ್ರೀನಾಥ್ (ಜನನ: ಆಗಸ್ಟ್ ೩೧, ೧೯೬೯) ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು. ೨೦೦೩ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು. ಕ್ರೀಡಾಭಿಮಾನಿಗಳ ಪಾಲಿಗೆ 'ಮೈಸೂರು ಎಕ್ಸ್‌ಪ್ರೆಸ್' ಎಂದೇ ಖ್ಯಾತರಾದವರು. ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಇವರು, ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ೧೯೯೧ ರಲ್ಲಿ ಆಡಿದರು. ತಮ್ಮ ಮೊದಲ ಏಕದಿನ ಪಂದ್ಯವನ್ನೂ ಅದೇ ವರ್ಷದಲ್ಲಿ ಆಡಿದರು. ಭಾರತದ ಪಿಚ್‍ಗಳು ಮುಖ್ಯವಾಗಿ ಸ್ಪಿನ್‍ಗೆ ಸಹಾಯ ಮಾಡುವುದರ ಕಾರಣ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆಯಾಗಿದೆ. ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ ೨೩೬ ಮತ್ತು ಏಕದಿನ ಪಂದ್ಯಗಳಲ್ಲಿ ೩೧೫ ವಿಕೆಟ್‍ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದಿದ್ದಾರೆ. ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ. ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ "ಪಿಂಚ್ ಹಿಟರ್" ಕೆಲಸವನ್ನು ನಿರ್ವಹಿಸಿರುವುದೂ ಉಂಟು! ಪ್ರಶಸ್ತಿ /ಪುರಸ್ಕಾರಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 'ಮ್ಯಾಚ್ ರೆಫರಿ' ಎಂದು ಮಾನ್ಯ ಮಾಡಿದೆ. ಅರ್ಜುನ ಪ್ರಶಸ್ತಿ. ಬಾಹ್ಯ ಸಂಪರ್ಕಗಳು ಕ್ರಿಕ್ ಇನ್ಫೋ ತಾಣದಲ್ಲಿ ಜಾವಗಲ್ ಶ್ರೀನಾಥ್ ಬಗ್ಗೆ ಮಾಹಿತಿ ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು ವರ್ಗ:ಭಾರತ ಕ್ರಿಕೆಟ್ ತಂಡ ವರ್ಗ:ಭಾರತದ ಕ್ರೀಡಾಪಟುಗಳು ವರ್ಗ:ಕರ್ನಾಟಕದ ಕ್ರೀಡಾಪಟುಗಳು ವರ್ಗ:ಕ್ರಿಕೆಟ್ ಆಟಗಾರ
ಪ್ರಸನ್ನ
https://kn.wikipedia.org/wiki/ಪ್ರಸನ್ನ
ಪ್ರಸನ್ನ ( ಮಾರ್ಚ್ ೨೩, ೧೯೫೧) ಕನ್ನಡ ರಂಗಭೂಮಿ ನಿರ್ದೇಶಕರು ಮತ್ತು ಕ್ರಿಯಾಶೀಲ ರಂಗ ಕಾರ್ಯಕರ್ತರು. ಜೀವನ ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡದ್ದು ಆಗಲೇ. ಈ ಸಂದರ್ಭದಲ್ಲಿ ರಂಗಭೂಮಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಪ್ರಮುಖರ ಸಾಲಿಗೆ ಸೇರುವ ಪ್ರಸನ್ನ ಅವರು ಹುಟ್ಟಿದ್ದು ಮಾರ್ಚ್ 23, 1951ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದರೂ ಅವರಿಗೆ ರಂಗಭೂಮಿಯಲ್ಲಿ ಅಪಾರವಾದ ಆಸಕ್ತಿ ತುಂಬಿಕೊಂಡಿತ್ತು. ರಂಗ ಅಧ್ಯಯನ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಸಂಪಾದಿಸಿದ ಕೀರ್ತಿ ಅವರದು. ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ರಷ್ಯ, ಜರ್ಮನಿ ಮುಂತಾದ ಕಡೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ರಂಗಭೂಮಿಯಿಂದ ಜನಾಂದೋಲನ ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಎಡಪಂಥೀಯ ವಿಚಾರ ಧಾರೆಗೆ ಪ್ರಾಶಸ್ತ್ಯ ನೀಡಿದ ಪ್ರಸನ್ನರಿಂದ ಮೂಡಿಬಂದದ್ದು ‘ಸಮುದಾಯ’ ತಂಡ. ರಾಜ್ಯಾದ್ಯಂತ ಅದರ ಶಾಖೆಗಳು ಮೂಡಿದವು. ನಾಟಕ, ಜಾಥಾ, ಕಲಾ ಮೇಳಗಳ ಮೂಲಕ ಅವರು ಜನಾಂದೋಲನವನ್ನು ಕೈಗೊಂಡರು. ಕಾರ್ಮಿಕರು, ಪ್ರಗತಿಪರ ಚಿಂತಕರು, ಸಾಹಿತಿ-ಕಲಾವಿದರನ್ನು ಒಗ್ಗೂಡಿಸಲು ವೇದಿಕೆ ಸ್ಥಾಪಿಸಿದ್ದೇ ಅಲ್ಲದೆ, ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯ ಪರಿವರ್ತನೆಗೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದರು. ಪ್ರಸಿದ್ಧ ನಾಟಕಗಳು ಪ್ರಸನ್ನರು ನಿರ್ದೇಶಿಸಿದ ನಾಟಕಗಳಲ್ಲಿ ತುಘಲಕ್, ಗೆಲಿಲಿಯೋ, ಹುತ್ತವ ಬಡಿದರೆ, ತದ್ರೂಪಿ, ಕದಡಿದ ನೀರು, ತಾಯಿ, ದಂಗೆಯ ಮುಂಚಿನ ದಿನಗಳು, ಹ್ಯಾಮ್ಲೆಟ್,ಮಹಿಮಾಪುರ ಮುಂತಾದವು ಪ್ರಮುಖವೆನಿಸಿವೆ. ತಮಿಳುನಾಡು, ಕೇರಳ, ಮಧ್ಯಪ್ರದೇಶ, ಬಿಹಾರಗಳಲ್ಲಿ ರಂಗಭೂಮಿ ಅಧ್ಯಯನಕ್ಕಾಗಿ ಅವರು ವ್ಯಾಪಕವಾಗಿ ಪ್ರವಾಸ ಕೈಗೊಂಡಿದ್ದರು. ವಾರ್ತಾಪತ್ರ ಪ್ರಸನ್ನರು ಸೈದ್ಧಾಂತಿಕ ತಿಳುವಳಿಕೆಗಾಗಿ 'ಸಮುದಾಯ ವಾರ್ತಾಪತ್ರ'ವನ್ನು ಸ್ಥಾಪಿಸಿದರು. ಬರಹಗಳು ನೌಟಂಕಿ, ಸ್ವಯಂವರ, ನಾಶವಾಯ್ತೆ ಲಂಕಾದ್ರಿಪುರ ಮುಂತಾದ ಕಾದಂಬರಿಗಳನ್ನು ಕೂಡಾ ರಚಿಸಿದ್ದಾರೆ. ಇಂಡಿಯನ್ ಮೆಥಡ್ ಇನ್ ಆಕ್ಟಿಂಗ್ ದೂರದರ್ಶನದಲ್ಲಿ ಪ್ರಸನ್ನರು ಭೀಷ್ಮ ಸಾಹ್ನಿಯವರ ‘ತಮಸ್’ ಕಾದಂಬರಿಯನ್ನು ದೂರದರ್ಶನಕ್ಕೆ ಅಳವಡಿಸಿದರಲ್ಲದೆ, ರಂಗಾಯಣ ಮೈಸೂರಿನ ರಂಗಾಯಣದ ನಿರ್ದೇಶಕರ ಜವಾಬ್ದಾರಿಯನ್ನೂ ಹೊತ್ತಿದ್ದ ಪ್ರಸನ್ನರು ಅಲ್ಲಿ ಹಲವಾರು ನಾಟಕಗಳ ನಿರ್ದೇಶನ ಮಾಡಿದರು. ರಂಗಾಯಣದಲ್ಲಿ ಅವರು ನಿರ್ವಹಿಸಿದ ಕಾರ್ಯಗಳು ರಂಗಭೂಮಿಗೆ ಹೊಸ ಆಯಾಮವನ್ನು ಸೃಷ್ಟಿಸಿಕೊಟ್ಟವು. ಪ್ರಸನ್ನರು ಸ್ವಯಂ ರಚಿಸಿದ ನಾಟಕಗಳು ಉಳಿ, ದಂಗೆಯ ಮುಂಚಿನ ದಿನಗಳು, ಒಂದು ಲೋಕದ ಕಥೆ, ಹದ್ದು ಮೀರಿದ ಹಾದಿ, ಜಂಗಮದ ಬದುಕು. ಕ್ರಿಯಾಶೀಲ ವ್ಯಕ್ತಿತ್ವ ಸಂಘಟನಾ ಚತುರತೆ, ಹೊಸ ಚಿಂತನೆ ಮತ್ತು ಸೃಜನಶೀಲತೆಗಳಿಗಾಗಿ ಪ್ರಸನ್ನರು ಹೆಸರಾಗಿದ್ದಾರೆ. ಪ್ರಸನ್ನರ ಚತುರತೆಯಲ್ಲಿ ‘ಭೂಮಿಗೀತ’ವು ರಂಗ ಪರೀಕ್ಷೆಗಳ ನೂತನ ಅಪೇಕ್ಷೆಗಳಿಗನುಗುಣವಾಗಿ ಹೊಸವಿನ್ಯಾಸವನ್ನು ಗಳಿಸಿತು; ‘ವನರಂಗ’ ಹೊಸ ರೂಪ ಪಡೆಯಿತು; ಶ್ರೀರಂಗ ಸ್ಟುಡಿಯೋ ನಿರ್ಮಾಣಗೊಂಡಿತು; ಲಂಕೇಶ್ ಆರ್ಟ್ ಗ್ಯಾಲರಿ ಕಲಾ ಪ್ರದರ್ಶನಗಳಿಗಾಗಿ ತೆರೆದುಕೊಂಡಿತು; ರಾಷ್ಟ್ರೀಯ ನಾಟಕೋತ್ಸವ ‘ಬಹುರೂಪಿ’ ಚಾಲನೆಗೊಂಡಿತು; ವಾರಾಂತ್ಯದ ರಂಗಪ್ರದರ್ಶನಗಳು ಪ್ರಾರಂಭಗೊಂಡವು; ಹವ್ಯಾಸಿ ರಂಗತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರೀಷ್ಮ ರಂಗೋತ್ಸವ ಹುಟ್ಟಿಕೊಂಡಿತು; ರಂಗಶಿಕ್ಷಣಕ್ಕಾಗಿ ಭಾರತೀಯ ರಂಗ ಶಿಕ್ಷಣ ಕೇಂದ್ರದ ಚಿಂತನೆಗೊಂದು ರೂಪ ಸಿಕ್ಕಿತು. ರಂಗಭೂಮಿಯ ಕುರಿತಾದ ಮಾಹಿತಿ ಸಂಶೋಧನಾ ಚಟುವಟಿಕೆಗಳ ಸಲುವಾಗಿ ಶ್ರೀರಂಗ ಮಾಹಿತಿ ಕೇಂದ್ರದ ನಕಾಶೆ ರೂಪುಗೊಂಡಿತು. ಪ್ರಸನ್ನ ಅವರು ಹೆಗ್ಗೋಡಿನಲ್ಲಿ ನೆಲೆಸಿ ಕವಿ-ಕಾವ್ಯ ಟ್ರಸ್ಟ್ ಆಶ್ರಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿದರಲ್ಲದೆ. ಋಜುವಾತು ಪತ್ರಿಕೆಗೆ ಹೊಸರೂಪ ನೀಡಿದರು. ಗುಡಿ ಕೈಗಾರಿಕೆಗೆ ಪ್ರೋತ್ಸಾಹ, ಗ್ರಾಮೀಣ ಕುಶಲ ಕರ್ಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಜಯನಗರ ಸೌತ್ ಎಂಡ್ ಸರ್ಕಲ್, ಗಿರಿನಗರದ ಪ್ರವೇಶ ದ್ವಾರದ ಬಳಿ ‘ದೇಸಿ’ ಅಂಗಡಿ ಪ್ರಾರಂಭಿಸಿದರಲ್ಲದೆ, ಗ್ರಾಮೀಣ ಕುಶಲ ಕರ್ಮಿಗಳಿಗೆ ಕಲ್ಯಾಣನಿಧಿಯನ್ನು ಸ್ಥಾಪಿಸಿದರು. ಪ್ರಶಸ್ತಿ ಗೌರವಗಳು ಈ ಬಹುರೂಪಿ ಪ್ರಸನ್ನರಿಗೆ ಸಂದ ಪ್ರಶಸ್ತಿ ಗೌರವಗಳು ಹಲವಾರು. ಸಂಗೀತ ನಾಟಕ ಅಕಾಡಮಿ ಫೆಲೋಷಿಪ್, ರಂಗಭೂಮಿ ಅಧ್ಯಯನಕ್ಕಾಗಿ ಭಾರತ ಭವನ್ ಫೆಲೋಷಿಪ್, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಬಹುಮಾನ, ಪು.ತಿ.ನ. ಟ್ರಸ್ಟ್ ಪುರಸ್ಕಾರ, ಚದುರಂಗ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಇವುಗಳಲ್ಲಿ ಪ್ರಮುಖವಾದವು. ಮಾಹಿತಿ ಆಧಾರ ಪ್ರಸನ್ನ ಕಣಜ (ಜಾಲತಾಣ) ಉಲ್ಲೇಖಗಳು ವರ್ಗ: ಕನ್ನಡ ರಂಗಭೂಮಿ
ಇ ಎ ಎಸ್ ಪ್ರಸನ್ನ
https://kn.wikipedia.org/wiki/ಇ_ಎ_ಎಸ್_ಪ್ರಸನ್ನ
ಎರಂಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ (ಜನನ: ಮೇ ೨೨, ೧೯೪೦) ವಿಶ್ವದ ಶ್ರೇಷ್ಠ ಆಫ್ ಸ್ಪಿನ್ ಬೌಲರ್‍ಗಳಲ್ಲಿ ಒಬ್ಬರು. ಜನನ ಮತ್ತು ವಿದ್ಯಾಭ್ಯಾಸ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿರುವ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅವರು ಮೇ ೨೨, ೧೯೪೦ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರಿನ ಎನ್ ಐ ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು. ಓದಿಗಾಗಿ ಕ್ರಿಕೆಟ್ ಮುಂದೂಡಿಕೆ ಪ್ರಸನ್ನರು ೧೯೬೧ರ ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ "ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ" ಎಂದು ನಿರ್ಧರಿಸಿ ಇಂಜಿನಿಯರಿಂಗ್ ಮುಗಿಸಿ ಪುನಃ ೧೯೬೭ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು. ದೇಶಕ್ಕೆ ಗಣ್ಯತೆ ತಂದವರು ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುಧ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು. ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ ಕಷ್ಟಕರವಾದ ಮೈದಾನಗಳಲ್ಲಿ ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟುyijh9jgihu9iijhhdtokbcxs6ol ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ. ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ. ಶ್ರೇಷ್ಠ ಬೌಲರ್ ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್, ಬಿಲ್ ಓ ರ್ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ ಎ ಎಸ್ ಪ್ರಸನ್ನ. ಗಾಳಿಯಲ್ಲಿ ಅವರು ಸ್ಪಿನ್ ಮಾಡುತ್ತಿದ್ದ ವೈಖರಿ, ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ ಶಾರ್ಟ್ ಪಿಚ್ ಡೆಲಿವರಿಗಳು ಇವೆಲ್ಲವುಗಳ ಜೊತೆಗೆ ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು ಕುಶಲತೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು. ಪ್ರಸನ್ನರು ಆಡಿದ್ದು ಕೇವಲ ೪೯ ಟೆಸ್ಟ್ ಪಂದ್ಯಗಳು ಮಾತ್ರ. ಅವರು ಗಳಿಸಿದ್ದು ೧೮೯ ವಿಕೆಟ್. ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು. ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ, ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ. ಅವರು ಆಡಿದ ೨೩೫ ಪ್ರಥಮ ದರ್ಜೆ ಪಂದ್ಯಗಳಲ್ಲಿ ೨೪೭೬ರನ್ನುಗಳನ್ನೂ, ೯೫೭ವಿಕೆಟ್ಟುಗಳನ್ನೂ ಸಂಪಾದಿಸಿದ್ದರು. ಕರ್ನಾಟಕಕ್ಕೆ ದೊರಕಿಸಿಕೊಟ್ಟ ಹಿರಿಮೆ ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬಯಿನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ. ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬಯಿ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ. ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು. ಭಾರತ ತಂಡದ ನಾಯಕರಾಗುವುದಕ್ಕೆ ಸಹಾ ಅವರು ತುಂಬಾ ಸಮೀಪದಲ್ಲಿದ್ದರು. ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್, ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ ರೂಪುಗೊಂಡಿದ್ದರು. ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ ಪ್ರಸನ್ನ ಆಗಿದ್ದರು. ನಿವೃತ್ತಿಯನಂತರದಲ್ಲಿಯೂ ಶ್ರೇಷ್ಠತೆ ೧೯೮೫ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ. ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ "ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಹನ್ನೊಂದು ಜನರ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಪ್ರಚೋದನೆಗೊಂಡು ಬಿಡುತ್ತಿದ್ದೆ. ಬಹುಶಃ ಕ್ಷೇತ್ರ ರಕ್ಷಣೆ ಎಂಬ ಅಂಶ ಅಡ್ಡಬರದಿದ್ದರೆ, ನಾನು ಹಾಗೆ ಮಾಡಿಯೇ ಬಿಡುತ್ತಿದ್ದೆ ಎನಿಸುತ್ತದೆ" ಎಂದು ನುಡಿದಿದ್ದರು. ನಿವೃತ್ತಿಯ ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ. ಪ್ರಸನ್ನ ರು ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದರು. ಮಹಾನ್ ತಂತ್ರಜ್ಞರಾಗಿ ಇ ಎ ಎಸ್ ಪ್ರಸನ್ನ ಅವರು ಕ್ರಿಕೆಟ್ಟಿನಲ್ಲಿ ಅಷ್ಟೇ ಅಲ್ಲದೆ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಸರುವಾಸಿಯಾಗಿದ್ದರು. ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ ಕಬ್ಬಿಣ ಅದಿರು ಕಾರ್ಖಾನೆ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಅವರು ಹೆಸರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿನ ಅಂಕಿ ಸಂಖ್ಯೆಗಳು ಪ್ರಸನ್ನರ ಟೆಸ್ಟ್ ಸಾಧನೆಒಟ್ಟು ಎಸೆತಗಳುವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ನಲ್ಲಿ ೫ ವಿಕೆಟ್ ಪಂದ್ಯದಲ್ಲಿ ೧೦ ವಿಕೆಟ್ ಕ್ಯಾಚುಗಳು ೧೪,೩೫೩ ೧೮೯ ೩೦.೩೮ ೮/೭೬ ೧೦ ೨೧೮ ಪ್ರಶಸ್ತಿಗಳು ೧೯೭೦ - ಪದ್ಮಶ್ರೀ ೨೦೦೬ - ಕ್ಯಾಸ್ಟ್ರೋಲ್ ಜೀವಮಾನದ ಸಾಧನೆ ಪ್ರಶಸ್ತಿ ಬೆಂಗಳೂರಿನ ದೊಮ್ಮಲೂರಿನ ಇ.ಎಸ್.ಐ. ಆಸ್ಪತ್ರೆಯ ೩ ಅಡ್ಡರಸ್ತೆಗೆ ಪ್ರಸನ್ನರ ಹೆಸರು ಇಡಲಾಗಿದೆ.thumb|EAS Prasanna Cross, ESI Hospital Road, Dommaluru Ward, Bengaluru ಬಾಹ್ಯ ಸಂಪರ್ಕಗಳು ಕ್ರಿಕ್ ಇನ್ಫೋ ತಾಣದಲ್ಲಿ ಪ್ರಸನ್ನ ಬಗ್ಗೆ ಮಾಹಿತಿ ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು ವರ್ಗ:ಭಾರತ ಕ್ರಿಕೆಟ್ ತಂಡ ವರ್ಗ:ಭಾರತದ ಕ್ರೀಡಾಪಟುಗಳು ವರ್ಗ:ಕರ್ನಾಟಕದ ಕ್ರೀಡಾಪಟುಗಳು ವರ್ಗ:ಕ್ರಿಕೆಟ್ ವರ್ಗ:ಕ್ರಿಕೆಟ್ ಆಟಗಾರ
ಎಸ್ ಪಿ ಬಾಲಸುಬ್ರಹ್ಮಣ್ಯಂ
https://kn.wikipedia.org/wiki/ಎಸ್_ಪಿ_ಬಾಲಸುಬ್ರಹ್ಮಣ್ಯಂ
REDIRECTಎಸ್.ಪಿ.ಬಾಲಸುಬ್ರಹ್ಮಣ್ಯಂ
ಸರ್ವಜ್ಞ
https://kn.wikipedia.org/wiki/ಸರ್ವಜ್ಞ
thumb|ಸರ್ವಜ್ಞ Sarvajna ಜನನ ಮತ್ತು ಬಾಲ್ಯ ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ . ಇದು ಈಗ ಸರ್ವಜ್ಞನ ಅಬಲೂರು ಎಂದೇ ಪ್ರಸಿದ್ಧಿ ಪಡೆದಿದೆ. ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ. ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು. ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು. ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೇ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು. ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ. ಸರ್ವಜ್ಞ - ತನ್ನ ಬಗೆಗೆ ೧. ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ ೨. ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ ೩. ಮಕ್ಕಳಿಲ್ಲವು ಎಂದು | ಅಕ್ಕಮಲ್ಲಮ್ಮನು ದುಕ್ಕದಿ ಬಸವ | ಗರಿಪಲ್ಲವ | - ಕಾಶಿಯ ಮುಕ್ಕಣ್ಣಗೆ ಹೋದ ಸರ್ವಜ್ಞ ೪. ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ ೫. ಗಂಡಾಗಬೇಕೆಂದು | ಪಿ0ಡವ ನುಂಗಲು ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು ಕಂಡುದನೆ ಪೇಳ್ವೆ ಸರ್ವಜ್ಞ ೬. ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ ೭. ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ ೮. ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ ೯. ಹೆತ್ತವಳು ಮಾಳಿ ಎನ್ನ | ನೊತ್ತಿ ತೆಗೆದವಳು ಕೇಶಿ ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ ಬತ್ತಲಿರಿಸಿದಳು ಸರ್ವಜ್ಞ ೧೦. ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ ತಿಳಿದವರರೆಗು ಸರ್ವಜ್ಞ ೧೧. ಗಂಡ ತನ್ನಯದೆಂಬ | ಲಂಡೆ ತನ್ನಯದೆಂಬ ಖಂಡಪರಶುವಿನ ವರಪುತ್ರ - ನಾನು ನೆರೆ ಕಂಡುದನೆ ಪೇಳ್ವೆ ಸರ್ವಜ್ಞ ೧೨. ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ ಕೇಳೆ ನೀನಾರ ಮಗನೆಂದು - ನಾ ಶಿವನ ಮೇಳದಣುಗೆಂಬೆ ಸರ್ವಜ್ಞ (ವಿಕಿಸೋರ್ಸ್) ತ್ರಿಪದಿಗಳು ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ. ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು: ಮಾಸೂರ ಬಸವರಸ । ಕೂಸನೀಶನ ಕೇಳೆ। ಕಾಶಿಯ ಅಭವನೊಳು । ಪಡೆದ ವರವದುವೇ । ಸೂಸಿತೆಂತೆನಲು ಸರ್ವಜ್ಞ ॥ ಸರ್ವಜ್ಞನೆಂಬುವನು ಗರ್ವದಿಂದಾದವನೇ? ಸರ್ವರೊಳು ಒಂದೊಂದು ನುಡಿಗಲಿತು ವಿದ್ಯೆಯ ಪರ್ವತವೆ ಆದ ಸರ್ವಜ್ಞ. ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು ಗೋರ್ಕಲ್ಲಮೇಲೆ ಮಳೆಗರೆದರೆ ಆಕಲ್ಲು ನೀರುಕುಡಿವುದೆ ಸರ್ವಜ್ಞ? ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗರು ಕೊಂಡು ಎಳೆವಾಗ ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ. ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ ಏಳು ಸಾವಿರದ ಎಪ್ಪತ್ತು ವಚನಗಳ ಹೇಳಿದನು ಕೇಳ ಸರ್ವಜ್ಞ." ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಇತರ ಮಾಹಿತಿ ಸರ್ವಜ್ಞನನ್ನು ಕುರಿತು ಸರ್ವಜ್ಞಮೂರ್ತಿ ಎಂಬ ಕನ್ನಡ ಚಲನಚಿತ್ರವು ೧೯೬೫ರಲ್ಲಿ ತೆರೆಕಂಡಿತು. ಬಾಹ್ಯ ಸಂಪರ್ಕಗಳು ಸರ್ವಜ್ಞನ ವಚನಗಳು (ವಿಚಾರಮಂಟಪ.ನೆಟ್) ಇದರ ಮೂಲ 'ನುಡಿ'ಲಿಪಿಯಲ್ಲಿದ್ದು ಅದನ್ನು, ಯೂನಿಕೋಡಿಗೆ ಪರಿವರ್ತಿಸಿ ಚರ್ಚೆಪುಟದಲ್ಲಿ ಹಾಕಿದೆ. ಸರ್ವಜ್ಞನ ವಚನಗಳು (೧೪೨೦ ವಚನಗಳಿವೆ;(ವಿಕಿಸೋರ್ಸ್: ಉಲ್ಲೇಖಗಳು https://en.wikiquote.org/wiki/Sarvajna https://thinkbangalore.blogspot.com/2015/10/sarvagna-vachana-tripadi-kannada-poems.html ವರ್ಗ: ವಚನ ಸಾಹಿತ್ಯ ವರ್ಗ: ಲಿಂಗಾಯತ
ಕನಕದಾಸರು
https://kn.wikipedia.org/wiki/ಕನಕದಾಸರು
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ಧವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ. ಜೀವನ ಜನನ ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಹಿಂದೂ ಕುರುಬ/ನಾಯಕ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಒಂದು ಜಾತಿಗೇ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15 - 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಐತಿಹ್ಯ ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು. ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ. ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋಗಿದ್ದರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು. ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ಬಂಕಾಪುರದ ಶ್ರೀನಿವಾಸಾಚಾರ್ಯರ ಬಳಿ ವಿದ್ಯಾಭ್ಯಾಸವಾಗಿ, ವ್ಯಾಕರಣ, ತರ್ಕ, ಮೀಮಾಂಸೆ, ಸಾಹಿತ್ಯಗಳಲ್ಲಿ ಪಾರಂಗತನಾದನು. ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ. ಕನಕ ದಾಸರು ತಮ್ಮನ್ನು ತಾವೇ ಸಾವಿನ ದೇವತೆಯಾದ ಯಮನೆಂದು ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ. ಸಾಧನೆ ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ ಎಂಬುದು ಕನಕ ದಾಸರ ಸಾಹಿತ್ಯ ರಚನೆ ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316 ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ: ಮೋಹನತರಂಗಿಣಿ ನಳಚರಿತ್ರೆ ರಾಮಧಾನ್ಯ ಚರಿತೆ ಹರಿಭಕ್ತಿಸಾರ ನೃಸಿಂಹಸ್ತವ (ದೊರೆತಿಲ್ಲ) ಮೋಹನತರಂಗಿಣಿ ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದು ಸಾಂಗತ್ಯದಲ್ಲಿ ರಚಿತವಾಗಿರುವ 2798 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿ ವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಹಂಪಿಯ ಪತನವನ್ನು (೧೫೬೫) ಸಹ ಕನಕ ನೋಡಿದ್ದರು. ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ. ಸೋಮಸೂರಿಯ ವೀಥಿಯ ಇಕ್ಕೆಗಳಲಿ ಹೇಮ ನಿರ್ಮಿತ ಸೌಧದೋಳಿ ರಮಣೀಯತೆವೆತ್ತ ಕಳಸದಂಗಡಿಯಿರ್ದುಂ ವಾ ಮಹಾ ದ್ವಾರಕಾಪುರದೇ ಓರಂತೆ ಮರಕಾಲರು ಹಡಗಿನ ವ್ಯವ ಹಾರದಿ ಗಳಿಸಿದ ಹಣವ ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು ಬೇರಂಗೆ ಕಡವ ಕೊಡುವರು ನಳಚರಿತ್ರೆ ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ. ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: ಲಲಿತ ಹೇಮದ ತೂಗಮಂಚದ ಹೊಳೆವ ಮೇಲ್ವಾಸಿನಲಿ ಮಲಗು ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨) ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ. ರಾಮಧಾನ್ಯಚರಿತೆ ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ? ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು.. ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು. ಹರಿಭಕ್ತಿಸಾರ ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ. ಕೀರ್ತನೆಗಳು ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ. ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು. 'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು. ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣ ಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂ ವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . ತೀರ್ಥವನು ಪಿಡಿದವರು ತಿರುನಾಮಧಾರಿಗಳೇ ಜನ್ಮ ಸಾರ್ಥಕವಿರದವರು ಭಾಗವತರಹುದೇ ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು. ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ ನೀ ದೇಹದೊಳಗೊ, ನಿನ್ನೊಳು ದೇಹವೂ ಬಯಲು ಆಲಯದೊಳಗೊ, ಆಲಯವು ಬಯಲೊಳಗೊ ಬಯಲು ಆಲಯವೆರಡು ನಯನದೊಳಗೊ ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ ಕುಸುಮ ಗಂಧಗಳೆರಡು ಘ್ರಾಣದೊಳಗೊ ಅಸಮಭವ ಕಾಗಿನೆಲೆಯಾದಿಕೇಶವರಾಯ ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ‌ ಬರಿದೇ ಮಾತೇಕಿನ್ನೂ ಅರಿತು ಪೇಳುವೆನಯ್ಯ... ||ಪ|| ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು ದಾಯಾದಿ ಬಂಧುಗಳ ಬಿಡಲುಬಹುದು ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು ಕಾಯಜಾ ಪಿತನಿನ್ನ ಅಡಿಯ ಬಿಡಲಾಗದು... ||೧|| ಒಡಲು ಹಸಿದರೆ ಮತ್ತೆ ಅನ್ನವನೆ ಬಿಡಬಹುದು ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು...||೨|| ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು ಮಾನಾಭಿಮಾನವ ತಗ್ಗಿಸಲುಬಹುದು ಪ್ರಾಣದಾಯಕಾನಾದ ಆದಿಕೇಶವರಾಯ‌ ಜಾಣ ಶ್ರೀ ಕೃಷ್ಣ ನಿನ್ನಡಿಯ‌ ಬಿಡಲಾಗದು....||೩|| ಕನಕದಾಸರನ್ನು ಕುರಿತ ಕೃತಿಗಳು ಇಂಗ್ಲಿಷಿಗೆ ಅನುವಾದ ವಾಗಿದೆ. J.Aravinda Raman - ಕುಲ ಕುಲ ಸಂಸ್ಕೃತಕ್ಕೆ ಹರಿಭಕ್ತಿಸಾರ, ಆರ್. ಗಣೇಶ್, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನ್ನಡದಲ್ಲಿ ಕನಕವಾಣಿ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಶ್ರೀ ಕನಕದಾಸರ ಜೀವನ ಸಂದೇಶ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಶ್ರೀ ಕನಕದಾಸರ ಸಾಹಿತ್ಯ ದರ್ಶನ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಶ್ರೀ ಕನಕದಾಸರ ಪಾರಂಪರಿಕ ಸ್ಥಳಗಳು, ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸ, ಕಾ.ತ. ಚಿಕ್ಕಣ್ಣ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ರಾಮಧಾನ್ಯ (ನಾಟಕ), ರಾಮಕೃಷ್ಣ ಮರಾಠೆ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕ ಶತಕ (ಕಾವ್ಯ), ಮಂಜುನಾಥ ಬೆಳವಾಡಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ, ನರಸಿಂಹಮೂರ್ತಿ ಹೂವಿನಹಳ್ಳಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ನಳಚರಿತ್ರೆ: ಒಂದು ಹೊಸನೋಟ, ಬಿರಾದಾರ ಬಿ.ಬಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರು ಮತ್ತು ಆಧುನಿಕ ಚಿಂತನೆಗಳು: ಮುಖಾಮುಖಿ, ಶಿರೂರ ಬಿ.ವಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಭಕ್ತಿ ಪರಂಪರೆ ಮತ್ತು ಕನಕದಾಸರು, ಸಂ: ಯಕ್ಕುಂಡಿಮಠ ಬಿ.ವಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕ ಸಾಹಿತ್ಯ ಸೂಚಿ, ಸಂ: ಕೆ. ಮಲ್ಲಿಕಾರ್ಜುನ ಮತ್ತು ದೊಡ್ಡಮನಿ ಸಿ.ಡಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರ ಸಾಹಿತ್ಯ ಅಧ್ಯಯನ, ಹರಿಲಾಲ ಪವಾರ ಮತ್ತು ಚಂದ್ರಶೇಖರ ರೊಟ್ಟಿಗವಾಡ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಮೋಹನ ತರಂಗಿಣಿ: ಸಾಂಸ್ಕೃತಿಕ ಸಂವಾದ, ರವಿರಾಜ ಶೆಟ್ಟಿ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ರಾಮಧಾನ್ಯ ಚರಿತೆ: ಸಂಘರ್ಷದ ನೆಲೆ, ಸರೋಜಿನಿ ಸಿ. ಹಿರೇಮಠ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಆತ್ಮ ಆವ ಕುಲ (ಕವನ ಸಂಕಲನ), ಸಂ: ಬಾಳಣ್ಣ ಶೀಗೀಹಳ್ಳಿ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಎಲ್ಲಿರುವನೋ ರಂಗ (ನಾಟಕ), ಶಶಿಧರ ನರೇಂದ್ರ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-1: ರಾಮಧಾನ್ಯ ಚರಿತೆ, ರವಿ ಬಿ.ಕೆ. ಮತ್ತು ಸರೋಜಿನಿ ಸಿ. ಹಿರೇಮಠ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-2: ನಳಚರಿತ್ರೆ, ರವಿ ಬಿ.ಕೆ. ಮತ್ತು ಡಾ. ಎಚ್.ಎಚ್. ನದಾಫ್, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕ ವಿಜಯ (ಕಾವ್ಯ), ಶ್ರೀ ನಿರುಪಾದೀಶ್ವರ ಮಹಾಸ್ವಾಮಿಗಳು, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹರಿಭಕ್ತಿಸಾರ, ಎನ್. ರಂಗನಾಥ ಶರ್ಮ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕೋಪನಿಷತ್ತು, ಬನ್ನಂಜೆ ಗೋವಿಂದಾಚಾರ್ಯ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕ ಕಾವ್ಯ ಸಂಪುಟ, ಎ.ವಿ. ನಾವಡ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ರಾಮಧಾನ್ಯ ಚರಿತೆ (ನಾಟಕ), ಅಂಬಾತನಯ ಮುದ್ರಾಡಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ದಾಸ-ಕನಕ ಪ್ರಭೆ, ಹೇರಂಜೆ ಕೃಷ್ಣಭಟ್ಟ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕ ಮುಂಡಿಗೆ: ಅರ್ಥಾನುಸಂಧಾನ, ಮಾಧವಿ ಭಂಡಾರಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕ ಚಿಂತನ 2007-08 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕ ಚಿಂತನ 2009-10 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕ ಚಿಂತನ 2011-12 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸರ ಕೀರ್ತನೆಗಳ ಶಬ್ದ ಪ್ರಯೋಗ ಕೋಶ, ಸಂ: ಶ್ರೀನಿವಾಸ ಹಾವನೂರ ಮತ್ತು ವಿ. ಕೃಷ್ಣ, ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸರ ಕೀರ್ತನೆಗಳು, ಸಂ: ಪಾವಂಜೆ ಗುರುರಾವ್, ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ, ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ (ಕನಕದಾಸ ಅಧ್ಯಯನ ಸಮಗ್ರ ಸಂಪುಟ ಭಾಗ: 1), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ಸಂತಕವಿ ಕನಕದಾಸರು, ಡಾ. ಚಿಕ್ಕಮಗಳೂರು ಗಣೇಶ, ಪ್ರ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಕಾಲಜ್ಞಾನಿ ಕನಕ (ನಾಟಕ), ಕಿ.ರಂ. ನಾಗರಾಜ ಇಂಗ್ಲಿಷಿನಲ್ಲಿ Kanakadas Ramadhanya Charite, Shashidhara G. Vaidya, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Heritage Sites Associated with the Saint-Poet Kanakadas, Jagannath R. Genannavar, Tr: Shankar D.A., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Kanakadasaru, Chikkanna K.T., Tr: Prakash H.S.M., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Kanakadas: An Ardent Devotee of Lord Adikeshava, Basavaraj Naikar, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ Kanakadasa's Revolution: A Radical Reading, K. Raghavendra Rao, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ Kanakadasa and the Tradition of Religious Humanism in Karnataka, K. Raghavendra Rao, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಿಂದಿಯಲ್ಲಿ ಕನಕದಾಸ, ಕಾ.ತ. ಚಿಕ್ಕಣ್ಣ, ಅನು: ಶ್ರೀನಿವಾಸ ಮೂರ್ತಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನ್ನಡ ಸಂತ ಕವಿ ಕನಕದಾಸ, ಸಂ: ಜಗನ್ನಾಥ ಆರ್. ಗೇನಣ್ಣವರ, ಅನು: ಶೋಭಾ ನಾಯಕ, ಚಂದ್ರಕಾಂತ ಪೋಕಾಣೆ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಸಂತ ಕವಿ ಕನಕದಾಸ, ಶಶಿ ಶ್ಯಾಮ್‍ಸಿಂಗ್, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸ್: ಏಕ್ ಅನುಶೀಲನ್, ನಂದಿನಿ ಗುಂಡೂರಾವ್, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ತೆಲುಗಿನಲ್ಲಿ ಭಕ್ತ ಶ್ರೀ ಕನಕದಾಸರು ಸಂದರ್ವಿನ ಪವಿತ್ರ ಸ್ಥಳಂ, ಜಗನ್ನಾಥ ಆರ್. ಗೇನಣ್ಣವರ, ಅನು: ಪದ್ಮಾ ಸಿ., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ರಾಮಧಾನ್ಯ (ನಾಟಕ), ರಾಮಕೃಷ್ಣ ಮರಾಠೆ, ಅನು: ಲಕ್ಷ್ಮೀದೇವಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕದಾಸ, ಕಾ.ತ. ಚಿಕ್ಕಣ್ಣ, ಅನು: ಪುಟ್ಟಮರಾಜ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಚಲನಚಿತ್ರ ಡಾ. ರಾಜ್‍ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು 1960ರಲ್ಲಿ ತೆರೆಕಂಡಿದೆ. ನಿರ್ದೇಶಕರು ವೈ.ಆರ್.ಸ್ವಾಮಿ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ. ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರಗಳು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು ಕನಕದಾಸ ಜಯಂತಿ ಕರ್ನಾಟಕ ಸರ್ಕಾರವು 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ. ಆ ದಿನ ಸರ್ಕಾರಿ ರಜೆ ಇರುತ್ತದೆ. ಸರ್ಕಾರದಿಂದ ದೊರೆಯುವ ಉಚಿತ ಇ-ಪುಸ್ತಕಗಳು ಕರ್ನಾಟಕ ಸರ್ಕಾರವು ಕನಕದಾಸರು ರಚಿಸಿರುವ ಮತ್ತು ಹೆಸರಾಂತ ಸಾಹಿತಿಗಳು ಸಂಪಾದಿಸಿರುವ ಕೃತಿಗಳನ್ನು ಕಣಜ.ಇನ್/ಇಬುಕ್(www.kanaja.in/ebook) ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಅವುಗಳಲ್ಲಿ ಕೆಲವುಗಳು ಈ ಕೆಳಗಿನಂತಿವೆ... ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-07-07-09-51-48 ) ಕನಕಾವಲೋಕನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-07-07-09-53-11 ) ಕನಕದಾಸ ನಾಟಕ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-40-03) ಕನಕ-ಮರುದರ್ಶನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-55-27 ) ಕನಕ ಓದು (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-12-22-05-59-36 ) ಕನಕ ತರಂಗಿಣಿ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-54-15 ) ಕನಕದಾಸರ ಕಾವ್ಯ ಮತ್ತು ಸಂಗೀತ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-52-32 ) ಕನಕ ಸಾಹಿತ್ಯ ಅಧ್ಯಯನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-50-41) ಬಯಲು ಆಲಯದೊಳಗೊ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-49-34) ವರ್ಗ:ಸಂತರು
ಕನಕದಾಸ
https://kn.wikipedia.org/wiki/ಕನಕದಾಸ
REDIRECT ಕನಕದಾಸರು
ಸಹ್ಯಾದ್ರಿ
https://kn.wikipedia.org/wiki/ಸಹ್ಯಾದ್ರಿ
REDIRECT ಪಶ್ಚಿಮ ಘಟ್ಟಗಳು
ಪುಟ್ಟಣ್ಣ ಕಣಗಾಲ್
https://kn.wikipedia.org/wiki/ಪುಟ್ಟಣ್ಣ_ಕಣಗಾಲ್
ಎಸ್.ಆರ್.ಪುಟ್ಟಣ್ಣ ಕಣಗಾಲ್ (ಡಿಸೆಂಬರ್ ೧, ೧೯೩೩ - ಜೂನ್ ೫, ೧೯೮೫) ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕ ರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು.ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ 'ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ' ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು. ಆರಂಭದ ದಿನಗಳು ಕರ್ನಾಟಕದ ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ.ಇವರ ಮೊದಲ ಹೆಸರು "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು. ಚಿತ್ರರಂಗ ಪುಟ್ಟಣ್ಣರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರು ಪುಟ್ಟಣ್ಣರವರು ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದಿದ್ದರು. ನಾಟಕ ಕಂಪೆನಿ,ಡ್ರೈವರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್. ಪಂತುಲು ಅವರ ಬಳಿ ೧೯೫೪ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ " ಪದ್ಮಿನಿ ಪಿಕ್ಚರ್ಸ್"ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು. ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ'ಸ್ಕೂಲ್‍ಮಾಸ್ಟರ್' (೧೯೬೪). ಪುಟ್ಟಣ್ಣನವರು ರಷ್ಯಾ ಪ್ರವಾಸ ಮಾಡಿ ಸಾಕಷ್ಟು ದೇಶಗಳನ್ನು ಸುತ್ತಿ ಕೋಶಗಳನ್ನು ಓದಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ, ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕ. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್ ಶ್ರೀಧರ್ ಮೊದಲಾದವರು ಇದ್ದಾರೆ. ಪ್ರಶಸ್ತಿಗಳು ಮತ್ತು ಗೌರವಗಳು ಕಣಗಲ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು.ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಚಲನಚಿತ್ರ ನಿರ್ದೇಶಕರು ಮತ್ತು ವಿವಿಧ ವ್ಯಕ್ತಿಗಳನ್ನು ಪುಟ್ಟಣ್ಣ ಕಣಗಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ. ವೃತ್ತಿ ಪ್ರಚಾರದ ಹುಡುಗನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕಣಗಲ್, ರಂಗಭೂಮಿಯಲ್ಲಿ ಕೆಲಸ ಮಾಡಿದ ನಂತರ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಆಕರ್ಷಿತರಾದರು ಮತ್ತು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಆರ್. ಪಂತುಲು ಅವರ ಸಹಾಯಕರಾಗಿ ಕೆಲಸ ಮಾಡಿದರು. ನಿರ್ದೇಶಕರಾಗಿ ಕಣಗಲ್ ಅವರು ಮೊದಲು ನಿರ್ದೇಶಿಸಿದ ಸಿನೆಮಾ ೧೯೬೪ರ ಮಲಯಾಳಂ ಚಲನಚಿತ್ರ ಸ್ಕೂಲ್ ಮಾಸ್ಟರ್.ಅದು ಅವರ ಮಾರ್ಗದರ್ಶಕ ಬಿ.ಆರ್.ಪಂತುಲು ಅವರ ಸಿನೆಮಾದ ರಿಮೇಕ್.ನಂತರ ಅವರು ತ್ರಿವೇಣಿಯವರ ಕನ್ನಡ ಕಾದಂಬರಿ ಬೆಕ್ಕಿನ ಕಣ್ಣು ಆಧಾರಿತ ಎಂಬ ಮತ್ತೊಂದು ಮಲಯಾಳಂ ಚಿತ್ರ ಪೂಚಕ್ಕನ್ನಿ ಅನ್ನು ನಿರ್ದೇಶಿಸಿದರು. ನಿರ್ದೇಶಕರಾಗಿ ಪುಟ್ಟಣ್ಣ ಅವರ ಮೊದಲ ಕನ್ನಡ ಚಿತ್ರ ೧೯೬೭ ರಲ್ಲಿ ಮೂಡಿಬಂದ ಬೆಳ್ಳಿಮೋಡ.ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು ಮುಂತಾದ ಅನೇಕ ಮೇರುಕೃತಿಗಳನ್ನು ಅವರು ನಿರ್ದೇಶಿಸಿದರು. ಅವರ ಕೊನೆಯ ಚಿತ್ರ ಸಾವಿರ ಮೆಟ್ಟಿಲು, ಇದು ಅವರ ಜೀವಿತಾವಧಿಯಲ್ಲಿ ಬಿಡುಗಡೆಯಾಗಲಿಲ್ಲ. ನಿಧನ ಮಸಣದ ಹೂವು ಚಿತ್ರವು ತಯಾರಿಕೆ ಹಂತದಲ್ಲಿದ್ದಾಗ ಜೂನ್ ೫, ೧೯೮೫ ರಂದು ಚೆನ್ನೈ ನಲ್ಲಿ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಮಸಣದ ಹೂವು ಚಿತ್ರದ ಉಳಿದ ಭಾಗವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ತಿಗೊಳಿಸಿದರು. ಎಪ್ಪತ್ತರ ದಶಕದಲ್ಲಿ ಅವರು ತೊಡಗಿಸಿಕೊಂಡಿದ್ದ "ಸಾವಿರ ಮೆಟ್ಟಿಲು"ಚಿತ್ರವನ್ನು ಅದರ ನಿರ್ಮಾಪಕರಾದ ಡಿ.ಬಿ. ಬಸವೇಗೌಡರು ಪೂರ್ಣಗೊಳಿಸಿ ಬಿಡುಗಡೆ ಮಾಡಿದರು. ಒಬ್ಬ ನಿರ್ದೇಶಕನ ಎರಡು ಅಪೂರ್ಣ ಚಿತ್ರಗಳು ಅವರ ನಿಧನಾ ನಂತರ ಪೂರ್ಣಗೊಂಡಿದ್ದು ಒಂದು ದಾಖಲೆಯೇ. ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಜಯನಗರದಲ್ಲಿ ಸ್ಥಾಪಿಸಲಾಗಿದ್ದ ಪುಟ್ಟಣ್ಣ ಥಿಯೇಟರ್ ನವೀಕರಣದ ಹೆಸರಿನಲ್ಲಿ ೨೦೦೪ ರಿಂದ ಈ ಥಿಯೇಟರ್ ಬಾಗಿಲು ಹಾಕಿಕೊಂಡಿದ್ದ ಈ ಥಿಯೇಟರ್‌ನ ಜಾಗದಲ್ಲಿ ಈಗ ಕಾಂಪ್ಲೆಕ್ಸ್ ಒಂದು ತಲೆಯೆತ್ತಿ ನಿಂತಿದೆ. ಪುಟ್ಟಣ್ಣ ಪುತ್ರ ರಾಮು ಕಣಗಾಲ್ ರವರು "ಕಣಗಾಲ್ ನೃತ್ಯಾಲಯ" ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ. ಕರ್ನಾಟಕ ಸರಕಾರವು ಪ್ರತಿ ವರ್ಷವೂ ಚಿತ್ರ ರಂಗದಲ್ಲಿ ಹೆಸರು ಮಾಡಿದವರಿಗೆ ಪುಟ್ಟಣ್ಣರ ಹೆಸರಿನಲ್ಲಿ "ಪುಟ್ಟಣ್ಣ ಕಣಗಾಲ್" ಪ್ರಶಸ್ತಿ ನೀಡಲಾಗುತ್ತಿದೆ.ಪುಟ್ಟಣ್ಣನವರ ಜೀವನ ಚರಿತ್ರೆಯ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ಎಂಬ ಪುಸ್ತಕವನ್ನು ಡಿ.ಬಿ.ಬಸವೇಗೌಡ ಬರೆದಿದ್ದಾರೆ. ಕನ್ನಡದ ಖ್ಯಾತ ಕಾದಂಬರಿಕಾರ್ತಿ ದಿ. ಎಂ.ಕೆ. ಇಂದಿರಾ ರವರು "ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್" ಎಂಬ ಪುಸ್ತಕ ಬರೆದಿದ್ದಾರೆ. ಪುಟ್ಟಣ್ಣ ನಿರ್ದೇಶನದ ಚಲನಚಿತ್ರಗಳು ಕನ್ನಡ ನಾಗರ ಹಾವು (೧೯೭೨) ಸಾವಿರ ಮೆಟ್ಟಿಲು (೧೯೬೮) ಮಲ್ಲಮ್ಮನ ಪವಾಡ (೧೯೬೯) ಕಪ್ಪು ಬಿಳುಪು (೧೯೬೯) ಗೆಜ್ಜೆ ಪೂಜೆ (೧೯೭೦) ಕರುಳಿನ ಕರೆ (೧೯೭೦) ಶರಪಂಜರ (೧೯೭೧) ಸಾಕ್ಷಾತ್ಕಾರ (೧೯೭೧) ಎಡಕಲ್ಲು ಗುಡ್ಡದ ಮೇಲೆ (೧೯೭೩) ಉಪಾಸನೆ (೧೯೭೪) ಶುಭಮಂಗಳ (೧೯೭೫) ಬಿಳಿ ಹೆಂಡ್ತಿ (೧೯೭೫) ಕಥಾಸಂಗಮ (೧೯೭೬) ಕಾಲೇಜು ರಂಗ (೧೯೭೬) ಫಲಿತಾಂಶ (೧೯೭೬) ಪಡುವಾರಳ್ಳಿ ಪಾಂಡವರು (೧೯೭೮) ಧರ್ಮಸೆರೆ (೧೯೭೯) ರಂಗನಾಯಕಿ (೧೯೮೧) ಮಾನಸ ಸರೋವರ (೧೯೮೨) ಧರಣಿ ಮಂಡಲ ಮಧ್ಯದೊಳಗೆ (೧೯೮೩) ಅಮೃತ ಘಳಿಗೆ (೧೯೮೪) ಋಣಮುಕ್ತಳು (೧೯೮೪) ಮಸಣದ ಹೂವು (೧೯೮೫) ಬೆಳ್ಳಿಮೋಡ - (1966) ಹಿಂದಿ ಹಮ್ ಪಾಂಚ್ (೧೯೮೧) ಜಹ್ರೀಲಾ ಇನ್ಸಾನ್ (೧೯೭೪) ಮಲಯಾಳಂ ಸ್ಕೂಲ್‍ಮಾಸ್ಟರ್ ೧೯೬೪ ಕಳಜ್ಞು ಕಿಟ್ಟಿಯ ತಂಗಂ ೧೯೬೪ ಮೇಯರ್ ನಾಯರ್ ೧೯೬೬ ಪೂಚಕಣ್ಣಿ ೧೯೬೬ ಸ್ವಪ್ನ ಭೂಮಿ.೧೯೬೮ ಹೊರಗಿನ ಸಂಪರ್ಕಗಳು ಪುಟ್ಟಣ್ಣರವರ ಬಗ್ಗೆ ದಿ ಹಿಂದೂ ಪತ್ರಿಕೆಯಲ್ಲಿ ಮೂಡಿಬಂದ ಲೇಖನ ವರ್ಗ:ಪುಟ್ಟಣ್ಣ ಕಣಗಾಲ್ ಚಿತ್ರಗಳು ವರ್ಗ:ನಿರ್ಮಾಪಕರು ವರ್ಗ:ಕನ್ನಡ ಸಿನೆಮಾ ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು ವರ್ಗ:ಕನ್ನಡ ಚಲನಚಿತ್ರ ನಿರ್ಮಾಪಕರು ವರ್ಗ:ಮೈಸೂರಿನ ಬರಹಗಾರರು
ವಿಷ್ಣುವರ್ಧನ್ (ನಟ)
https://kn.wikipedia.org/wiki/ವಿಷ್ಣುವರ್ಧನ್_(ನಟ)
ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೦ | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.Dr Vishnuvardhan to be cremated with state honours ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ ಹುಟ್ಟು, ವಿದ್ಯಾಭ್ಯಾಸ, ಬಾಲ್ಯ ಡಾ. ವಿಷ್ಣುವರ್ಧನ್ ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು. ನಟನೆ/ಕಲಾಜೀವನ thumb|ವಿಷ್ಣು ಅಭಿನಯದ "ಸಾಮ್ರಾಟ್" ಚಿತ್ರದ ಭಿತ್ತಿ ಪತ್ರ|alt= ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು. ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು. ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ ೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು.ವಿಷ್ಣುವರ್ಧನ್ ಒಂದಿಷ್ಟು ಹೆಚ್ಚಿನ ಮಾಹಿತಿಗಳು ಸಿನಿಮಾರಂಗಕ್ಕೆ ನಡೆದು ಬಂದ ಹಾದಿ: ವಿಷ್ಣು 1955ರಲ್ಲಿ "ಶಿವಶರಣ ನಂಬೆಯಕ್ಕ" ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ "ಕೋಕಿಲವಾಣಿ" ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು. 1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಇವರ ಮೊದಲ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು . ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು) ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರಿಗೆ ಸಲ್ಲುತ್ತದೆ. ಬನ್ನಂಜೆ ಗೋವಿಂದಾಚಾರ್ಯರು ಇವರ ಆದ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು. ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ. ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳು ಕನ್ನಡ ವರ್ಷ ಸಂಖ್ಯೆ ಚಿತ್ರದ ಹೆಸರು ಪಾತ್ರದ ಹೆಸರು ನಾಯಕಿ(ಯರು) ಸೆನ್ಸಾರ್ ಪ್ರಮಾಣಪತ್ರ೧೯೭೨ ೧ ವಂಶವೃಕ್ಷ ಬಾಲ ನಟ ೨ ನಾಗರಹಾವು ರಾಮಾಚಾರಿಆರತಿ, ಶುಭಾ೧೯೭೩ ೩ ಸೀತೆಯಲ್ಲ ಸಾವಿತ್ರಿ ಜಯಲಕ್ಷ್ಮಿ ೪ ಮನೆ ಬೆಳಗಿದ ಸೊಸೆ ಭಾರತಿ ೫ ಗಂಧದ ಗುಡಿ ಆನಂದ್೧೯೭೪ ೬ ಬೂತಯ್ಯನ ಮಗ ಅಯ್ಯು ಗುಳ್ಳಭವಾನಿ ೭ ಪ್ರೊಫೆಸರ್ ಹುಚ್ಚುರಾಯ ಮಂಜುಳಾ ೮ ಅಣ್ಣ ಅತ್ತಿಗೆ ಭಾರತಿ೧೯೭೫ ೯ ದೇವರಗುಡಿ ಭಾರತಿ ೧೦ ಕೂಡಿ ಬಾಳೋಣ ಭವಾನಿ ೧೧ ಕಳ್ಳ ಕುಳ್ಳ ಮಹೇಶಭವಾನಿ ೧೨ ಭಾಗ್ಯಜ್ಯೋತಿ ಭಾರತಿ, ಶುಭಾ ೧೩ ನಾಗಕನ್ಯೆ ಭವಾನಿ ೧೪ ಒಂದೇ ರೂಪ ಎರಡು ಗುಣ ಭವಾನಿ ೧೯೭೬ ೧೫ ದೇವರು ಕೊಟ್ಟ ವರ ಜಯಂತಿ ೧೬ ಹೊಸಿಲು ಮೆಟ್ಟಿದ ಹೆಣ್ಣು ಆರತಿ ೧೭ ಮಕ್ಕಳ ಭಾಗ್ಯ ಭಾರತಿ ೧೮ ಬಂಗಾರದ ಗುಡಿ ಮಂಜುಳಾ ೧೯೭೭ ೧೯ ಬಯಸದೇ ಬಂದ ಭಾಗ್ಯ ಮಂಜುಳಾ ೨೦ ಸೊಸೆ ತಂದ ಸೌಭಾಗ್ಯ ಮಂಜುಳಾ ೨೧ ನಾಗರಹೊಳೆ (ಚಲನಚಿತ್ರ) ಭಾರತಿ ೨೨ ಚಿನ್ನಾ ನಿನ್ನ ಮುದ್ದಾಡುವೆ ಜಯಂತಿ ೨೩ ಸಹೋದರರ ಸವಾಲ್ ಕವಿತಾ ೨೪ ಶ್ರೀಮಂತನ ಮಗಳು ಜಯಂತಿ ೨೫ ಶನಿ ಪ್ರಭಾವ ಭವಾನಿ ೨೬ ಕಿಟ್ಟು ಪುಟ್ಟು ಕಿಟ್ಟುಮಂಜುಳಾ ೨೭ ಗಲಾಟೆ ಸಂಸಾರ ಸುಬ್ರಮಣ್ಯ(ಸುಬ್ಬು) ಮಂಜುಳಾ ೧೯೭೮ ೨೮ ಹೊಂಬಿಸಿಲು ಡಾ.ನಟರಾಜ್ಆರತಿ ೨೯ ಸಂದರ್ಭ ಭಾರತಿ ೩೦ ಕಿಲಾಡಿ ಕಿಟ್ಟು ಕಿಟ್ಟುಕವಿತಾ ೩೧ ವಂಶಜ್ಯೋತಿ ಕಲ್ಪನಾ, ಜಯಂತಿ ೩೨ ಮುಯ್ಯಿಗೆ ಮುಯ್ಯಿ ಆರತಿ ೩೩ ಸಿರಿತನಕ್ಕೆ ಸವಾಲ್ ಮಂಜುಳಾ ವಿಜಯಕುಮಾರ್ ೩೪ ಪ್ರತಿಮಾ (ಚಲನಚಿತ್ರ) ಭಾರತಿ ೩೫ ನನ್ನ ಪ್ರಾಯಶ್ಚಿತ್ತ ರೆಹನಾ ಸುಲ್ತಾನ್ ೩೬ ಸ್ನೇಹ ಸೇಡು ಮಂಜುಳಾ ೩೭ ಕಿಲಾಡಿ ಜೋಡಿ ಲಕ್ಷ್ಮಿ ೩೮ ವಸಂತ ಲಕ್ಷ್ಮಿ ಮಂಜುಳಾ ೩೯ ಅಮರನಾಥ್ (ಚಲನಚಿತ್ರ) ೪೦ ಭಲೇ ಹುಡುಗ ಮಂಜುಳಾ ೪೧ ಮಧುರ ಸಂಗಮ ಕುಮಾರ ರಾಮಭಾರತಿ ೪೨ ಸಿಂಗಾಪುರದಲ್ಲಿ ರಾಜಾಕುಳ್ಳ ರಾಜಾಮಂಜುಳಾ ೧೯೭೯ ೪೩ ಅಸಾಧ್ಯ ಅಳಿಯ ಪದ್ಮಪ್ರಿಯ ೪೪ ವಿಜಯ್ ವಿಕ್ರಮ್ ವಿಜಯ್,ವಿಕ್ರಮ್ಜಯಂತಿ, ದೀಪಾ ೪೫ ನಾನಿರುವುದೆ ನಿನಗಾಗಿ (ಚಲನಚಿತ್ರ) ಆರತಿ ೪೬ ಮಾನಿನಿ ಆರತಿ ೪೭ ನೆಂಟರೋ ಗಂಟು ಕಳ್ಳರೋ ಆರತಿ ೧೯೮೦ ೪೮ ನನ್ನ ರೋಷ ನೂರು ವರುಷ ಪದ್ಮಪ್ರಿಯ ೪೯ ರಾಮ ಪರಶುರಾಮ ರಾಮಮಂಜುಳಾ ೫೦ ಕಾಳಿಂಗ (ಚಲನಚಿತ್ರ) ಪ್ರಭಾಕರ, ಕಾಳಿಂಗರತಿ ಅಗ್ನಿಹೋತ್ರಿ, ಗೀತಾ ೫೧ ಡ್ರೈವರ್ ಹನುಮಂತು ಸಂಗೀತದ ಗುರುಗಳು ೫೨ ಹಂತಕನ ಸಂಚು ಆರತಿ, ಜಯಮಾಲ ೫೩ ಮಕ್ಕಳ ಸೈನ್ಯ ಸುಮಿತ್ರಾ ೫೪ ಬಿಳಿಗಿರಿಯ ಬನದಲ್ಲಿ ಪಾರ್ವತಿ ೫೫ ಸಿಂಹಜೋಡಿ ಮಂಜುಳಾ ೫೬ ರಹಸ್ಯರಾತ್ರಿ ಭಾರತಿ ೫೭ ಬಂಗಾರದ ಜಿಂಕೆ ಚಾರುಭಾರತಿ, ಆರತಿ ೧೯೮೧ ೫೮ ಮದುವೆ ಮಾಡು ತಮಾಷೆ ನೋಡು ಗಣೇಶಆರತಿ ೫೯ ಮನೆ ಮನೆ ಕಥೆ ಸುಬ್ಬುಜಯಚಿತ್ರಾ ೬೦ ನಾಗ ಕಾಳ ಭೈರವ ಜಯಂತಿ, ಜಯಮಾಲ ೬೨ ಗುರು ಶಿಷ್ಯರು ರಾಜ ನಂದಿವರ್ಧನಮಂಜುಳಾ ೬೩ ಸ್ನೇಹಿತರ ಸವಾಲ್ ಮಂಜುಳಾ ೬೪ ಅವಳ ಹೆಜ್ಜೆ ಲಕ್ಷ್ಮಿ ೬೫ ಪ್ರೀತಿಸಿ ನೋಡು ಆರತಿ ೧೯೮೨ ೬೬ ಪೆದ್ದ ಗೆದ್ದ ಲಾಯರ್ಭಾರತಿ ೬೭ ಸಾಹಸ ಸಿಂಹ ಕಾಜಲ್ ಕಿರಣ್ ೬೮ ಕಾರ್ಮಿಕ ಕಳ್ಳನಲ್ಲ ಆರತಿ ೬೯ ಊರಿಗೆ ಉಪಕಾರಿ ಶ್ರೀಕಾಂತ್ಪದ್ಮಪ್ರಿಯ ೭೦ ಜಿಮ್ಮಿಗಲ್ಲು ಕೆರೆಏರಿ/ಜಿಮ್ಮಿಶ್ರೀಪ್ರಿಯಾ ೭೧ ಸುವರ್ಣ ಸೇತುವೆ ಆರತಿ ೭೨ ಒಂದೇ ಗುರಿ ಮಾಧವಿ ೭೩ ಕಲ್ಲು ವೀಣೆ ನುಡಿಯಿತು ಜಯಂತಿ, ಆರತಿ, ಪದ್ಮಪ್ರಿಯ ೧೯೮೩ ೭೪ ಮುತ್ತೈದೆ ಭಾಗ್ಯ ೭೫ ಗಂಧರ್ವ ಗಿರಿ ಆರತಿ ೭೬ ಸಿಡಿದೆದ್ದ ಸಹೋದರ ಆರತಿ, ಜಯಮಾಲ ೭೭ ಗಂಡುಗಲಿ ರಾಮ ರಾಮ, ಗಂಡುಗಲಿ, ಕುಮಾರ್ಮಾಧವಿ ೭೮ ಚಿನ್ನದಂತ ಮಗ ಮಾಧವಿ ೭೯ ಸಿಂಹ ಘರ್ಜನೆ ವಿಜಯಶಾಂತಿ ೧೯೮೪ ೮೦ ಇಂದಿನ ರಾಮಾಯಣ ಗಾಯತ್ರಿ ೮೧ ಪ್ರಚಂಡ ಕುಳ್ಳ ಶಿವಗೀತಾ ೮೨ ರುದ್ರನಾಗ ಮಾಧವಿ ೮೩ ಖೈದಿ ಆರತಿ, ಮಾಧವಿ ೮೪ ಬೆಂಕಿ ಬಿರುಗಾಳಿ ಜಯಮಾಲ ೮೫ ಬಂಧನ ಡಾ.ಹರೀಶ್ಸುಹಾಸಿನಿ ೮೬ ಹುಲಿ ಹೆಜ್ಜೆ ವಿಜಯಲಕ್ಷ್ಮಿ ಸಿಂಗ್ ೮೭ ಚಾಣಕ್ಯ ಮಾಧವಿ ೧೯೮೫ ೮೮ ಆರಾಧನೆ ಗೀತಾ ೮೯ ಕರ್ತವ್ಯ ಪವಿತ್ರಾ ೯೦ ಮಹಾಪುರುಷ ಗಾಯತ್ರಿ ೯೧ ವೀರಾಧಿವೀರ ಗೀತಾ ೯೨ ನೀ ಬರೆದ ಕಾದಂಬರಿ ಭವ್ಯ ೯೩ ಮರೆಯದ ಮಾಣಿಕ್ಯ ಗೀತಾ ೯೪ ನನ್ನ ಪ್ರತಿಜ್ಞೆ ಚಂದನಾ ೯೫ ಜೀವನ ಚಕ್ರ ರಾಧಿಕಾ ೯೬ ನೀ ತಂದ ಕಾಣಿಕೆ ರವಿಜಯಸುಧಾ ೧೯೮೬ ೯೭ ಕರ್ಣ (ಚಲನಚಿತ್ರ) ಕರ್ಣಸುಮಲತಾ ೯೮ ಕಥಾನಾಯಕ ರಂಗಸುಮಲತಾ ೯೯ ಈ ಜೀವ ನಿನಗಾಗಿ ಚಂದ್ರುಊರ್ವಶಿ ೧೦೦ ಸತ್ಯಜ್ಯೋತಿ ಸುಮಲತಾ, ಊರ್ವಶಿ ೧೦೧ ಕೃಷ್ಣ ನೀ ಬೇಗನೆ ಬಾರೋ ಕೃಷ್ಣಭವ್ಯ, ಕಿಮ್ ಶರ್ಮ ೧೦೨ ಮಲಯ ಮಾರುತ ವಿಶ್ವನಾಥಮಾಧವಿ, ಸರಿತಾ ೧೯೮೭ ೧೦೩ ಪ್ರೇಮಲೋಕ ಕಾಲೇಜ್ ಲೆಕ್ಚರರ್ ೧೦೪ ಸೌಭಾಗ್ಯ ಲಕ್ಷ್ಮಿ ಲಕ್ಷ್ಮಿ, ರಾಧಾ ೧೦೫ ಕರುಣಾಮಯಿ ಭವ್ಯ ೧೦೬ ಜಯಸಿಂಹ ಜಯಸಿಂಹಮಹಾಲಕ್ಷ್ಮಿ ೧೦೭ ಆಸೆಯ ಬಲೆ ನಳಿನಿ ೧೦೮ ಜೀವನ ಜ್ಯೋತಿ ಅಂಬಿಕಾ, ನಳಿನಿ ೧೦೯ ಶುಭ ಮಿಲನ ಅಂಬಿಕಾ ೧೧೦ ಸತ್ಯಂ ಶಿವಂ ಸುಂದರಂ (ಚಲನಚಿತ್ರ) ಸುಮಿತ್ರಾ, ರಾಧಿಕಾ ೧೯೮೮ ೧೧೧ ಡಿಸೆಂಬರ್ ೩೧ (ಚಲನಚಿತ್ರ) ಊರ್ವಶಿ ೧೧೨ ಒಲವಿನ ಆಸರೆ ರೂಪಿಣಿ ೧೧೩ ನಮ್ಮೂರ ರಾಜ ಮಂಜುಳಾ ಶರ್ಮ ೧೧೪ ಜನನಾಯಕ ಭವ್ಯ ೧೧೫ ಸುಪ್ರಭಾತ (ಚಲನಚಿತ್ರ) ವಿಜಯ್ಸುಹಾಸಿನಿ ೧೧೬ ಕೃಷ್ಣ ರುಕ್ಮಿಣಿ ಕೃಷ್ಣರಮ್ಯಾ ಕೃಷ್ಣ ೧೧೭ ಮಿಥಿಲೆಯ ಸೀತೆಯರು ಗೀತಾ ೧೧೮ ದಾದಾ ದಾದಾಗೀತಾ, ಸುಪರ್ಣ ೧೧೯ ಒಂದಾಗಿ ಬಾಳು ಮಂಜುಳಾ ಶರ್ಮ ೧೨೦ ಹೃದಯಗೀತೆ ಅಶೋಕ್ಭವ್ಯ, ಖುಷ್ಬೂ ೧೨೧ ರುದ್ರ ರುದ್ರಖುಷ್ಬೂ ೧೨೨ ದೇವ ದೇವರೂಪಿಣಿ ೧೨೩ ಡಾಕ್ಟರ್ ಕೃಷ್ಣ ಡಾ.ಕೃಷ್ಣತಾರಾ, ಸುಮನ್ ರಂಗನಾಥ್ ೧೯೯೦ ೧೨೪ ಶಿವಶಂಕರ್ ಶಿವು,ಶಂಕರ್ಶೋಭನಾ ೧೨೫ ಮುತ್ತಿನ ಹಾರ ಅಚ್ಚಪ್ಪ ಸುಹಾಸಿನಿ ೧೨೬ ಮತ್ತೆ ಹಾಡಿತು ಕೋಗಿಲೆ ಭವ್ಯ, ರೂಪಿಣಿ ೧೯೯೧ ೧೨೭ ಲಯನ್ ಜಗಪತಿರಾವ್ ಲಯನ್ ಜಗಪತಿರಾವ್, ಕುಮಾರ್ಲಕ್ಷ್ಮಿ, ಭವ್ಯ ೧೨೮ ನೀನು ನಕ್ಕರೆ ಹಾಲು ಸಕ್ಕರೆ ಸುಬ್ಬುರೂಪಿಣಿ, ರಜನಿ, ವಿನಯಾ ಪ್ರಸಾದ್, ಚಂದ್ರಿಕಾ, ಅಂಜಲಿ ೧೨೯ ಜಗದೇಕ ವೀರ ತ್ರಿವೇಣಿ ೧೩೦ ಪೋಲಿಸ್ ಮತ್ತು ದಾದಾ ರೂಪಾ ಗಂಗೂಲಿ, ಸಂಗೀತಾ ಬಿಜಲಾನಿ ೧೯೯೨ ೧೩೧ ರಾಜಾಧಿರಾಜ ರೂಪಿಣಿ ೧೩೨ ರವಿವರ್ಮ ರವಿವರ್ಮಭವ್ಯಾ, ರೂಪಿಣಿ ೧೩೩ ಹರಕೆಯ ಕುರಿಗೀತಾ ೧೩೪ ನನ್ನ ಶತ್ರು ರೇಖಾ ೧೯೯೩ ೧೩೫ ಸಂಘರ್ಷ (ಚಲನಚಿತ್ರ) ಮಹೇಶ್ಗೀತಾ, ಶಿವರಂಜನಿ ೧೩೬ ವೈಶಾಖದ ದಿನಗಳು ವಿಷ್ಣುಮೂನ್ ಮೂನ್ ಸೇನ್, ವನಿತಾ ವಾಸು ೧೩೭ ನಾನೆಂದೂ ನಿಮ್ಮವನೆ ಶ್ರೀಶಾಂತಿ ೧೩೮ ರಾಯರು ಬಂದರು ಮಾವನ ಮನೆಗೆ ವಿಷ್ಣುಡಾಲಿ ಮಿನ್ಹಾಸ್, ಫರ್ಹೀನ್ ೧೩೯ ವಿಷ್ಣು ವಿಜಯ ವಿಷ್ಣುಅಶ್ವಿನಿ ಭಾವೆ ೧೪೦ ಮಣಿಕಂಠನ ಮಹಿಮೆ ಅಯ್ಯಪ್ಪತಾರಾ ೧೪೧ ನಿಷ್ಕರ್ಷ ಅಜಯ್ಅಂಜನಾ, ಸುಮನ್ ನಗರ್ ಕರ್ ೧೯೯೪ ೧೪೨ ಟೈಂಬಾಂಬ್ ಶ್ರುತಿ ೧೪೩ ಕುಂತಿಪುತ್ರ ಸೋನಾಕ್ಷಿ ೧೪೪ ಸಾಮ್ರಾಟ್ ಸೌಮ್ಯ ಕುಲಕರ್ಣಿ ೧೪೫ ಮಹಾ ಕ್ಷತ್ರಿಯ ಸುಧಾರಾಣಿ, ಸೋನು ವಾಲಿಯಾ ೧೪೬ ಹಾಲುಂಡ ತವರು ಸಿದ್ದಾರ್ಥಸಿತಾರ ೧೪೭ ಕಿಲಾಡಿಗಳು ಸುವರ್ಣ ಮಾಥ್ಯೂಸ್ ೧೯೯೫ ೧೪೮ ಕೋಣ ಈದೈತೆ ಅಡ್ವೋಕೇಟ್ ವಿಷ್ಣುವಿನಯಾ ಪ್ರಸಾದ್ ೧೪೯ ಯಮ ಕಿಂಕರ ಕಿಂಕರಸೋನಾಕ್ಷಿ ೧೫೦ ಮೋಜುಗಾರ ಸೊಗಸುಗಾರ ವಿಜಯ್ ಮತ್ತು ವಿನೋದ್ ಶ್ರುತಿ, ಸೋನಾಕ್ಷಿ ೧೫೧ ದೀರ್ಘ ಸುಮಂಗಲಿ ಆದಿತ್ಯಸಿತಾರ ೧೫೨ ಬಂಗಾರದ ಕಳಶ ಸಿತಾರ, ಅಂಜನಾ ೧೫೩ ತುಂಬಿದ ಮನೆ ರಾಮವಿನಯಾ ಪ್ರಸಾದ್ ೧೫೪ ಕರುಳಿನ ಕುಡಿ ಸಿತಾರ ೧೫೫ ಹಿಮಪಾತ ಅರವಿಂದ್/ಗೌತಮ್ಸುಹಾಸಿನಿ, ಜಯಪ್ರದಾ ೧೯೯೬ ೧೫೬ ಅಪ್ಪಾಜಿ ಆಮನಿ ೧೫೭ ಹಲೋ ಡ್ಯಾಡಿ ಸೋನಾಕ್ಷಿ, ಸುರಭಿ U ೧೫೮ ಕರ್ನಾಟಕ ಸುಪುತ್ರ ಸೌಮ್ಯ ಕುಲಕರ್ಣಿ U ೧೫೯ ಧಣಿ ಗೋಪಿನಾಥ್ವಿನೀತಾ U ೧೬೦ ಜೀವನದಿ ಸಾಗರ್ಖುಷ್ಬೂ U ೧೬೧ ಬಾಳಿನ ಜ್ಯೋತಿ U ೧೯೯೭ ೧೬೨ ಮಂಗಳ ಸೂತ್ರ (೧೯೯೭) ವಿನಯಾ ಪ್ರಸಾದ್, ಪ್ರಿಯಾ ರಾಮನ್ U ೧೬೩ ಎಲ್ಲರಂಥಲ್ಲ ನನ್ನ ಗಂಡ ಸೂರ್ಯಪ್ರೇಮಾ U ೧೬೪ ಶೃತಿ ಹಾಕಿದ ಹೆಜ್ಜೆ ಡಾ.ಕುಮಾರ್ಶ್ರುತಿ U ೧೬೫ ಜನನಿ ಜನ್ಮಭೂಮಿ ಡಾ.ಯಶವಂತ್ ಭಾರತಿ U ೧೬೬ ಲಾಲಿ ಕೃಷ್ಣಕುಮಾರ್ಮೋಹಿನಿ, ಶಾಂತಿಕೃಷ್ಣ U ೧೯೯೮ ೧೬೭ ನಿಶ್ಯಬ್ಧ ರೇವತಿ, ಮೋಹಿನಿ U ೧೬೮ ಯಾರೇ ನೀನು ಚೆಲುವೆ ಆಟೋ ಡ್ರೈವರ್ ವಿಷ್ಣುಸಂಗೀತಾ U ೧೬೯ ಸಿಂಹದ ಗುರಿ ಚಾರುಲತಾ U ೧೭೦ ಹೆಂಡ್ತಿಗೇಳ್ತೀನಿ ಜಯರಾಮ್ಸುಹಾಸಿನಿ U ೧೯೯೯ ೧೭೧ ವೀರಪ್ಪನಾಯ್ಕ ವೀರಪ್ಪನಾಯ್ಕಶ್ರುತಿ U ೧೭೨ ಹಬ್ಬ ವಿಷ್ಣು ಜಯಪ್ರದಾ U ೧೭೩ ಸೂರ್ಯವಂಶ ಸತ್ಯಮೂರ್ತಿ & ಕನಕ ಮೂರ್ತಿಇಷಾ ಕೊಪ್ಪಿಕರ್, ವಿಜಯಲಕ್ಷ್ಮಿ U ೧೭೪ ಪ್ರೇಮೋತ್ಸವ ಭರತ್ರೋಜಾ, ದೇವಯಾನಿ U ೨೦೦೦ ೧೭೫ ದೀಪಾವಳಿ ರವೀಂದ್ರನಾಥ್ ಚಾಂದಿನಿ U ೧೭೬ ನನ್ ಹೆಂಡ್ತಿ ಚೆನಾಗಿದಾಳೆ ಎ.ಸಿ.ಪಿ. ರಾಜೀವ್ ವಿಜಯ್ ರಾಘವ್ U ೧೭೭ ಸೂರಪ್ಪ ಸೂರಪ್ಪಶ್ರುತಿ U ೧೭೮ ಯಜಮಾನ ಶಂಕರ,ಗಣೇಶ ಪ್ರೇಮಾ, ಅರ್ಚನಾ U ೨೦೦೧ ೧೭೯ ದಿಗ್ಗಜರು ದೊಡ್ಡ,ಚಿಕ್ಕಯ್ಯಸಾಂಘವಿ U ೧೮೦ ಕೋಟಿಗೊಬ್ಬ ನಂಜುಂಡಪ್ರಿಯಾಂಕ U ೨೦೦೨ ೧೮೧ ಪರ್ವ (ಚಲನಚಿತ್ರ) ಸಾಗರ್ಪ್ರೇಮಾ, ರೋಜಾ U ೧೮೨ ಜಮೀನ್ದಾರ್ರು ಬೆಟ್ಟಪ್ಪ,ಬಿಳಿಗಿರಿಪ್ರೇಮಾ, ರಾಶಿ U ೧೮೩ ಸಿಂಹಾದ್ರಿಯ ಸಿಂಹ ಮೀನಾ, ಭಾನುಪ್ರಿಯಾ U ೨೦೦೩ ೧೮೪ ರಾಜ ನರಸಿಂಹ ರಾಜ ನರಸಿಂಹರಮ್ಯ ಕೃಷ್ಣ. ರಾಶಿ U ೧೮೫ ಹೃದಯವಂತ ಶಿವಪ್ಪನಗ್ಮಾ U ೨೦೦೪ ೧೮೬ ಕದಂಬ (ಚಲನಚಿತ್ರ) ಮಧುಕೇಶ್ವರ ಕದಂಬಭಾನುಪ್ರಿಯಾ U ೧೮೭ ಆಪ್ತಮಿತ್ರ ಡಾ.ವಿಜಯ್ಸೌಂದರ್ಯ, ಪ್ರೇಮ U/A ೧೮೮ ಸಾಹುಕಾರ ಸಾವ್ಕಾರ್ರು-ರಾಜಾ ರವಿವರ್ಮ U ೧೮೯ ಜ್ಯೇಷ್ಠ ಅಶಿಮಾ ಬಲ್ಲಾ U ೨೦೦೫ ೧೯೦ ವರ್ಷ(ಚಲನಚಿತ್ರ) ವರ್ಷಮಾನ್ಯಾ U ೧೯೧ ವಿಷ್ಣುಸೇನಾ ಪ್ರೊ.ಜಯಸಿಂಹಲಕ್ಷ್ಮಿ ಗೋಪಾಲಸ್ವಾಮಿ U ೨೦೦೬ ೧೯೨ ನೀನೆಲ್ಲೋ ನಾನಲ್ಲೆ ವೀರುರಕ್ಷಿತಾ U ೧೯೩ ಸಿರಿವಂತ ನಾರಾಯಣಮೂರ್ತಿಶ್ರುತಿ U ೨೦೦೭ ೧೯೪ ಏಕದಂತ ವಿಜಯ್ (ಬಸ್ ಕಂಡಕ್ಟರ್) ಪ್ರೇಮಾ U ೧೯೫ ಕ್ಷಣ ಕ್ಷಣ ಡಿ.ಸಿ.ಪಿ. ವಿಷ್ಣುಕಿರಣ್ ರಾಥೋಡ್ U ೧೯೬ ಮಾತಾಡ್ ಮಾತಾಡು ಮಲ್ಲಿಗೆ ಹೂವಯ್ಯಸುಹಾಸಿನಿ U ೧೯೭ ಈ ಬಂಧನ ಹರೀಶ್ ರಾಜ್ಜಯಪ್ರದಾ U೨೦೦೯ ೧೯೮ ನಮ್ಮೆಜಮಾನ್ರು ಶಶಾಂಕ್ಲಕ್ಷ್ಮಿ ಗೋಪಾಲಸ್ವಾಮಿ U ೧೯೯ ಬಳ್ಳಾರಿ ನಾಗ ನಾಗ ಮಾಣಿಕ್ಯಮಾನಸಿ U/A೨೦೧೦ ೨೦೦ ಸ್ಕೂಲ್ ಮಾಸ್ಟರ್ ಜಗನ್ನಾಥ್ಸುಹಾಸಿನಿ U/A ೨೦೧ಆಪ್ತ ರಕ್ಷಕ ಡಾ.ವಿಜಯ್ - ವಿಜಯ ರಾಜೇಂದ್ರ ಬಹದ್ದೂರ್ ವಿಮಲಾ ರಾಮನ್ U/A ಹಿಂದಿ ಸಂಖ್ಯೆ ಚಿತ್ರದ ಹೆಸರು ೧ ಏಕ್ ನಯಾ ಇತಿಹಾಸ್ ೨ ಇನ್ಸ್ ಪೆಕ್ಟರ್ ಧನುಷ್ ೩ ಖಾಖಿ ವರ್ಧಿ ೪ ಜಾಲೀಮ್ ತಮಿಳು ಸಂಖ್ಯೆ ಚಿತ್ರದ ಹೆಸರು ೧ ಮಳಲೈ ಪಟ್ಟಾಳಂ ೨ ವಿಡುದಲೈ ೩ ಅಲೈಗಳ್ ೪ ಗುರು ರಾಘವೇಂದ್ರರ್ ೫ ಮರುದ ನಾಯಗನ್೬ಈಟಿ ತೆಲುಗು ಸಂಖ್ಯೆ ಚಿತ್ರದ ಹೆಸರು ೧ ಸರ್ದಾರ್ ಧರ್ಮನ್ನ ೨ ಲಕ್ಷ್ಮಿ ನಿರ್ದೋಷಿ ೩ ಒಕ್ಕಡು ಚಾಲು ೪ಕಂಕಣಂ ಮಲಯಾಳಂ ಸಂಖ್ಯೆ ಚಿತ್ರದ ಹೆಸರು ೧ ಅಡಿಮೈ ಚಂಗಲ ೨ ಕೌರವರ್ ೩ ಈಟಿ ಹೊರಗಿನ ಕೊಂಡಿಗಳು ವಿಷ್ಣುವರ್ಧನ್ ವೆಬ್ ಸೈಟ್ ಚಿತ್ರಲೋಕದಲ್ಲಿ ವಿಷ್ಣುವರ್ಧನ್ ಬಗ್ಗೆ ಮಾಹಿತಿ ಕನ್ನಡದ ಮೇರು ನಟ ವಿಷ್ಣುವರ್ಧನ್ ಡಿಸೆಂಬರ್ ೩೦,೨೦೦೯ ರಂದು ದೈವಾಧೀನರಾದರು ಗಿರೀಶ್ ಕಾಸರವಳ್ಳಿ ಅಂತಿಮ ನಮನ ಉಲ್ಲೇಖಗಳು ವರ್ಗ:ಕನ್ನಡ ಚಿತ್ರರಂಗದ ನಟರು ವರ್ಗ:ಸಿನಿಮಾ ತಾರೆಗಳು ವರ್ಗ:ಕನ್ನಡ ಸಿನೆಮಾ
ಭಾರತ ರತ್ನ
https://kn.wikipedia.org/wiki/ಭಾರತ_ರತ್ನ
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಛ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೬೬ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೭ ರಲ್ಲಿ). ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು. ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ + Key +ಭಾರತರತ್ನ ಪ್ರಶಸ್ತಿ ಪುರಸ್ಕೃತರು ವರ್ಷ ಚಿತ್ರ ಸಮ್ಮಾನಿತರುರಾಜ್ಯ / ರಾಷ್ಟ್ರ 1954 100px ಸಿ. ರಾಜಗೋಪಾಲಾಚಾರಿ ತಮಿಳುನಾಡು100px ಸರ್ವೆಪಲ್ಲಿ ರಾಧಾಕೃಷ್ಣನ್ಆಂಧ್ರಪ್ರದೇಶ 100px ಚಂದ್ರಶೇಖರ ವೆಂಕಟರಾಮನ್ ತಮಿಳುನಾಡು 1955 100px ಭಗವಾನ್ ದಾಸ್ಉತ್ತರ ಪ್ರದೇಶ 100px ಮೋಕ್ಷಗುಂಡಂ ವಿಶ್ವೇಶ್ವರಯ್ಯಕರ್ನಾಟಕ 100px ಜವಾಹರಲಾಲ್ ನೆಹರುಉತ್ತರ ಪ್ರದೇಶ 1957 100px ಜಿ. ಬಿ. ಪಂತ್ಉತ್ತರ ಪ್ರದೇಶ 1958 100px ಧೊಂಡೊ ಕೇಶವ ಕರ್ವೆಮಹಾರಾಷ್ಟ್ರ 1961 100px ಬಿಧಾನ್‌ ಚಂದ್ರ ರಾಯ್‌ಪಶ್ಚಿಮ ಬಂಗಾಳ 100px ಪುರುಷೋತ್ತಮ್ ದಾಸ್ ಟಂಡನ್ಉತ್ತರ ಪ್ರದೇಶ 1962 100px ರಾಜೇಂದ್ರ ಪ್ರಸಾದ್ಬಿಹಾರ 1963 100px ಜಾಕಿರ್ ಹುಸೇನ್ಉತ್ತರ ಪ್ರದೇಶ ಪಿ. ವಿ. ಕಾಣೆಮಹಾರಾಷ್ಟ್ರ 1966 100px ಲಾಲ್ ಬಹದ್ದೂರ್ ಶಾಸ್ತ್ರಿಉತ್ತರ ಪ್ರದೇಶ 1971 100px ಇಂದಿರಾ ಗಾಂಧಿಉತ್ತರ ಪ್ರದೇಶ 1975 100px ವಿ. ವಿ. ಗಿರಿ ಒಡಿಶಾ 1976 100px ಕೆ. ಕಾಮರಾಜ್ ತಮಿಳುನಾಡು 1980 100px ಮದರ್ ತೆರೇಸಾ ಪಶ್ಚಿಮ ಬಂಗಾಳ 1983 100px ವಿನೋಬಾ ಭಾವೆಮಹಾರಾಷ್ಟ್ರ 1987 100px ಖಾನ್ ಅಬ್ದುಲ್ ಗಫಾರ್ ಖಾನ್ 1988100px ಎಂ. ಜಿ. ರಾಮಚಂದ್ರನ್ತಮಿಳುನಾಡು 1990 100px ಬಿ. ಆರ್. ಅಂಬೇಡ್ಕರ್ಮಹಾರಾಷ್ಟ್ರ 100px ನೆಲ್ಸನ್ ಮಂಡೇಲಾ 1991 100px ರಾಜೀವ್ ಗಾಂಧಿಉತ್ತರ ಪ್ರದೇಶ 100px ವಲ್ಲಭ್‌ಭಾಯಿ ಪಟೇಲ್ಗುಜರಾತ್ 100px ಮೊರಾರ್ಜಿ ದೇಸಾಯಿಗುಜರಾತ್ 1992 100px ಮೌಲಾನಾ ಅಬುಲ್ ಕಲಾಂ ಆಜಾ಼ದ್ಪಶ್ಚಿಮ ಬಂಗಾಳ 100px ಜೆ. ಆರ್. ಡಿ. ಟಾಟಾಮಹಾರಾಷ್ಟ್ರ 100px ಸತ್ಯಜಿತ್ ರೇಪಶ್ಚಿಮ ಬಂಗಾಳ 1997 100px ಗುಲ್ಜಾರಿಲಾಲ್ ನಂದಾಪಂಜಾಬ್ 100px ಅರುಣಾ ಅಸಫ್ ಅಲಿಪಶ್ಚಿಮ ಬಂಗಾಳ100px ಎ. ಪಿ. ಜೆ. ಅಬ್ದುಲ್ ಕಲಾಂತಮಿಳುನಾಡು 1998 100px ಎಂ. ಎಸ್. ಸುಬ್ಬುಲಕ್ಷ್ಮೀತಮಿಳುನಾಡು 100px ಸಿ. ಸುಬ್ರಹ್ಮಣ್ಯಂತಮಿಳುನಾಡು 1999100px ಜಯಪ್ರಕಾಶ್ ನಾರಾಯಣ್ಬಿಹಾರ 100px ಅಮರ್ತ್ಯ ಸೇನ್ಪಶ್ಚಿಮ ಬಂಗಾಳ 100px ಗೋಪಿನಾಥ್ ಬೋರ್ಡೊಲೋಯಿಅಸ್ಸಾಂ 100px ರವಿಶಂಕರ್ಪಶ್ಚಿಮ ಬಂಗಾಳ 2001 100px ಲತಾ ಮಂಗೇಶ್ಕರ್ಮಹಾರಾಷ್ಟ್ರ 100px ಬಿಸ್ಮಿಲ್ಲಾ ಖಾನ್ಉತ್ತರ ಪ್ರದೇಶ 2008 100px ಭೀಮಸೇನ ಜೋಶಿಕರ್ನಾಟಕ 2014 100px ಸಿ. ಎನ್. ಆರ್. ರಾವ್ಕರ್ನಾಟಕ 100px ಸಚಿನ್ ತೆಂಡೂಲ್ಕರ್ಮಹಾರಾಷ್ಟ್ರ 2015 100px ಮದನ ಮೋಹನ ಮಾಳವೀಯಉತ್ತರ ಪ್ರದೇಶ 100px ಅಟಲ್ ಬಿಹಾರಿ ವಾಜಪೇಯಿಮಧ್ಯಪ್ರದೇಶ 2019100pxಪ್ರಣಬ್ ಮುಖರ್ಜಿಪಶ್ಚಿಮ ಬಂಗಾಳ100px ಭೂಪೇನ್ ಹಜಾರಿಕಾಅಸ್ಸಾಂ100px ನಾನಾಜಿ ದೇಶಮುಖ್ಮಹಾರಾಷ್ಟ್ರ ಉಲ್ಲೇಖಗಳು ಹೊರಸಂಪರ್ಕ ಕೊಂಡಿಗಳು ಭಾರತ ರತ್ನ ಎಂದರೇನು, ಮಾನದಂಡಗಳೇನು, ಅರ್ಹತೆಗಳೇನು?, ಪ್ರಜಾವಾಣಿ ವರ್ಗ:ಪ್ರಶಸ್ತಿಗಳು *
ಜೆ.ಆರ್.ಡಿ. ಟಾಟ
https://kn.wikipedia.org/wiki/ಜೆ.ಆರ್.ಡಿ._ಟಾಟ
ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿ http://www.britannica.com/EBchecked/topic/584078/JRD-Tata ಬೃಹತ್ ಟಾಟಾ ಸಂಸ್ಥೆಯನ್ನು ೫೩ ವರ್ಷಗಳ ಕಾಲ ಸಮರ್ಥವಾಗಿ ನಡೆಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು. ಟಾಟಾರವರ ಉತ್ಪಾದನೆ, ಉಕ್ಕಿನಿಂದ ಪ್ರಾರಂಭಿಸಿ, ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂತ್ರಜ್ಞಾನ, ದಿನನಿತ್ಯದ ಬಳಕೆಯ, ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗಳೆಯರ ಸೌಂದರ್ಯವರ್ಧಕ ಪರಿಕರಗಳು, ಇತ್ಯಾದಿಗಳ ವರೆಗೆ ಇದೆ. ಜೆ.ಆರ್.ಡಿ ಟಾಟಾ ಅವರು, ಆರ್.ಡಿ ಟಾಟಾ ಅವರ ಪುತ್ರರು. 'ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ' ಅವರು ತಮ್ಮ ಮಕ್ಕಳಾದ 'ಸರ್ ದೊರಾಬ್ ಟಾಟ 'ಹಾಗೂ 'ಸರ್ ರತನ್ ಟಾಟಾ' ಅವರಷ್ಟೇ ಪ್ರಾಮುಖ್ಯತೆಯನ್ನು 'ಆರ್.ಡಿ.ಟಾಟಾ' ರವರಿಗೂ, ಕೊಡುತ್ತಿದ್ದರು. ಆರ್.ಡಿ.ಯವರ ವ್ಯವಹಾರಜ್ಞಾನ, ಮೇಧಾವಿತನ, ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಪ್ರಗತಿ ಸಾಧಿಸುತ್ತಿದ್ದ ಪರಿ, ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟರಿಗೆ ಪ್ರಿಯವಾಗಿತ್ತು. ತಮ್ಮ ತರುವಾಯ, ಟಾಟಾ ಉದ್ಯಮದ ಜವಾಬ್ದಾರಿಯನ್ನು ಹೊರಬಲ್ಲ ಒಬ್ಬ ಸಮರ್ಥ ಪ್ರವರ್ತಕನಂತೆ ಅವರಿಗೆ ಗೋಚರಿಸಿದರು. ಜೆ.ಆರ್.ಡಿ ಅವರಿಗೆ ತಂದೆಯವರ ಗುಣಗಳೆಲ್ಲ ರಕ್ತಗತವಾಗಿ ಬಂದಿತ್ತು. ಜನನ ಹಾಗೂ ಬಾಲ್ಯ thumb|left|350px|'ಕೇನ್'-'ಜೆ' ರವರ ಬಾಡಿಗೆಮನೆ 'ಜೆಹಾಂಗೀರ್ ರತನ್ ಜಿ ದಾದಾಭಾಯ್ ಟಾಟಾ,' ಅವರು ಪಾರ್ಸಿ, ' ಝೊರಾಸ್ಟ್ರಿಯನ್ ಮತ,' ಕ್ಕೆ ಸೇರಿದವರು. ತಂದೆ ಬಹಳ ಮಡಿವಂತರು. ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ ೫ ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ ೨೯ ಜುಲೈ ೧೯೦೪ ರಲ್ಲಿ ಪ್ಯಾರಿಸ್ ನಲ್ಲಿ ಹುಟ್ಟಿದರು. ಇವರ ಅಕ್ಕ, 'ಸಿಲ್ಲ', ೧೯೦೩ ರಲ್ಲಿ ಜನಿಸಿದರು. 'ರೋಡಾಬೆ,' (೧೯೦೯ ), 'ದರಾಬ್,' (೧೯೧೨) ಮತ್ತು 'ಜಿಮ್ಮಿ,' (೧೯೧೬) ಇವರ ಇತರ ಒಡಹುಟ್ಟಿದವರು. ಜೆಹಾಂಗೀರ್ (ಎಲ್ಲರು ಅವರನ್ನು 'ಜೆ' ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಷಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವುದು ಹತ್ತಿರದ ಅರ್ಥ. 'ಆರ್.ಡಿ.ಟಾಟಾ, ' 'ಜೆಮ್ ಸೆಟ್ ಜಿ ಟಾಟಾ' ಅವರ ಸೋದರಮಾವ, 'ದಾದಾಭಾಯ್' ಅವರ ಮಗ. ಜೆಮ್ ಸೆಟ್ ಜಿಯವರು ಭಾರತದ ಪ್ರಪ್ರಥಮ ಔದ್ಯೋಗಿಕ ಕ್ಷೇತ್ರಗಳನ್ನು ಪ್ರಾರಂಭಿಸಿದ್ದೇ ಅಲ್ಲದೆ ಅದಕ್ಕೆ ಭದ್ರವಾದ ಬುನಾದಿಯನ್ನು ಹಾಕಿದವರು. ಅದಕ್ಕಾಗಿ ಜಮ್ ಸೆಟ್ ಜಿಯವರನ್ನು, " ಭಾರತದ ಕೈಗಾರಿಕಾ ಕ್ಷೇತ್ರದ ಜನಕ " ನೆಂದು ಕರೆಯುತ್ತಾರೆ. ೧೮೯೫ ರಿಂದಲೂ ಆರ್. ಡಿ, ಅವರು, ಜಮ್ ಸೆಟ್ ಜಿ ಮತ್ತು ದೊರಬ್ ಟಾಟಾ ರವರ ಜೊತೆಗೆ ಪಾಲುದಾರರಾಗಿದ್ದರು. ಒಳ್ಳೆಯ ನಂಬಿಕಸ್ತರು ಹಾಗೂ ಕೆಲಸದಲ್ಲಿ ಅತ್ಯಂತ ದಕ್ಷರು. ಜೆಮ್ ಸೆಟ್ ಜಿ ಅವರು ಸ್ಥಾಪಿಸಿದ ಮೂಲಭೂತ ತಂತ್ರಜ್ಞಾನಗಳು ಹಾಗೂ ಮೂಲ ಉತ್ಪಾದನಾ ಘಟಕಗಳು ಅತ್ಯಂತ ಮಹತ್ವದ ದೈನಂದಿನ ಜೀವನಾವಶ್ಯಕ ವಸ್ತುಗಳನ್ನೊಳಗೊಂಡಿವೆ. ಉದಾಹರಣೆಗೆ : ಕಬ್ಬಿಣ ಮತ್ತು ಉಕ್ಕು, ಜವಳಿ, ವಿದ್ಯುತ್ , ಸಿಮೆಂಟ್, ಚಹಾ ಇತ್ಯಾದಿ. ಜಮ್ ಸೆಟ್ ಜಿಯವರು ಮೂಲಪುರುಷರಾದರೆ, ಜೆ.ಆರ್.ಡಿ ಯವರು http://www.zoroastrian.org.uk/vohuman/Article/JRD%20Tata%20--%20On%20the%20Islands%20of%20Tata,%20In%20the%20Ocean%20of%20India.htm ಅದರ ಸಮಕ್ಷಮ ಸಂರಕ್ಷಕರು, ಹಾಗೂ ಪ್ರವರ್ತಕರು. ಸುಮಾರು ೫೩ ವರ್ಷಗಳ ತಮ್ಮ ಸುದೀರ್ಘ ಯಜಮಾನಿಕೆಯಲ್ಲಿ, ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಚೆನ್ನಾಗಿ ಅಭ್ಯಸಿಸಿ ತೆಗೆದುಕೊಂಡು, ಅದರಲ್ಲಿ ಅತ್ಯಂತ ಭಾರಿ ಪ್ರಮಾಣದ ಯಶಸ್ಸನ್ನು ಪಡೆದರು. ಮೂಲ ಟಾಟಾ ಅವರ ಹೆಸರನ್ನು ಅಮರಗೊಳಿಸಿದ ಟಾಟಾಸಂಸ್ಥೆಯ ಹಲವು ನಿಷ್ಠ ಕಾರ್ಯಶೀಲರಲ್ಲಿ ಅಗ್ರಗಣ್ಯರು. 'ಕೇನ್ ಬಂಗಲೆಯ ವಾಸಿ' ಜೆ.ಆರ್.ಡಿ. ಅಲ್ಟಾಮೌಂಟ್ ರೋಡಿನ ಕೇನ್, ಎಂಬ ಬಂಗಲೆಯಲ್ಲಿ ಪತ್ನಿ, ಥೆಲ್ಮಾರೊಡನೆ ವಾಸವಾಗಿದ್ದರು. ಇದು ಬಾಡಿಗೆ ಮನೆಯಾಗಿತ್ತು.http://www.financialexpress.com/old/ie/daily/19990817/ige17034p.html ವಿದ್ಯಾಭ್ಯಾಸ 'ಜೆ.ಆರ್.ಡಿಯವರ http://www.slideshare.net/kavithapat/jrd-tata-personal-life ವಿದ್ಯಾಭ್ಯಾಸ ಮೊದಲು ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಜೆ ಅವರಿಗೆ ಮಾತೃ ಭಾಷೆ ಫ್ರೆಂಚ್ ಭಾಷೆ ಬಿಟ್ಟರೆ ಬೇರೆಯೇನೂ ಬರುತ್ತಿರಲಿಲ್ಲ. ಜೆ ಅವರ ಇಂಗ್ಲೀಷ್ ಭಾಷೆಯನ್ನು ಉತ್ತಮ ಪಡಿಸಲು, ಒಂದು ವರ್ಷ ಇಂಗ್ಲೆಂಡಿನಲ್ಲಿ 'ಕ್ರಾಮರ್' ಶಾಲೆಯಲ್ಲಿ ಭರ್ತಿಮಾಡಲಾಗಿತ್ತು. ಕ್ರಾಮರ್ ಶಾಲೆ, ಸಫೊಕ್ ಉತ್ತರ ಸಮುದ್ರದ ಬಳಿಯಿತ್ತು. ಅತ್ಯಂತ ಶೀತ ಪ್ರದೇಶ. ಸೌತ್ ವೊಲ್ಡ್, ಸ್ಕೂಲಿನ ತರುವಾಯ ಅವರಿಗೆ, ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ, ರೆಜಿಮೆಂಟ್ ಡಿ ಸ್ಪಾಹಿಸ್ ಗೆ ಸೇರಿದರು. ಇನ್ನು ೬ ತಿಂಗಳು ಅಲ್ಲೇ ಕೆಲಸಮಾಡಿದ್ದರೆ, ಸೈನ್ಯದಲ್ಲಿ ಆಫೀಸರ್ ಕೆಲಸ ಸಿಕ್ಕುವುದು ಖಂಡಿತವಾಗಿತ್ತು. ಕೇಂಬ್ರಿಡ್ಜ್ ನಲ್ಲಿ ಇಂಜಿನಿಯರಿಂಗ್ ಓದಲು ಏರ್ಪಾಟು ಮಾಡಿದ್ದರು. ಆರ್.ಡಿ.ಟಾಟಾ ಅವರು, ಬೊಂಬಾಯಿನಲ್ಲಿ ಸೂನಿಯ ಆಸೆಗೆ ತಕ್ಕಂತಹ " ಸುನಿತ," ಎಂಬ ಬಂಗಲೆಯೊಂದನ್ನು ಬೊಂಬಾಯಿನ ಮಲಬಾರ್ ಹಿಲ್ಸ್ ನಲ್ಲಿ ಖರೀದಿಸಿದರು. ೧೯೨೦ ರಲ್ಲಿ ಬೊಂಬಾಯಿನ ನೇರಳ್ ರೈಲ್ವೆ ನಿಲ್ದಾಣದ ಬಳಿ ಇದ್ದ ಗಿರಿಧಾಮ 'ಮಾಥೆರಾನ್' ನಲ್ಲಿ 'ದಿನ್ ಶಾ ಪೆಟಿಟ್' ಅವರ ಬಂಗಲೆಯಲ್ಲಿ ಸ್ವಲ್ಪ ಕಾಲ ತಂಗಲು ವ್ಯವಸ್ಥೆಯಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ದಿಢೀರನೆ ಕೆಲವೊಂದು ಬದಲಾವಣೆಗಳಾದವು. ತಂದೆಯವರು ಮನಸ್ಸು ಬದಲಾಯಿಸಿ, 'ಜೆ' ರವರನ್ನು ಬೊಂಬಾಯಿಗೆ ಹೋಗಲು ಆಗ್ರಹ ಮಾಡಿದರು. ೧೯೨೩ ರಲ್ಲಿ ಸೂನಿಯವರ ಆರೋಗ್ಯದಲ್ಲಿ ಏರುಪೇರು ಆಗಿ, ಭಾರತಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ. ೧೯೨೩ ನೆಯ ಇಸವಿಯಲ್ಲಿ, ಸೂನಿಯವರು ತಮ್ಮ ೪೩ ನೆ ವಯಸ್ಸಿನಲ್ಲೇ, ಇಹಲೋಕವನ್ನು ತ್ಯಜಿಸಿದರು. ಈ ಸುದ್ದಿಯನ್ನು ತಂತಿಮೂಲಕ ತಿಳಿದ ಆರ್. ಡಿ ಯವರು, ಪ್ಯಾರಿಸ್ ತಲುಪುವ ವೇಳೆಗೆ ಸೂನಿಯವರ ಅಂತಿಮ ಸಂಸ್ಕಾರಗಳೆಲ್ಲಾ ಮುಗಿದಿದ್ದವು. ಭಾರತದಲ್ಲಿ ಸರ್. ದೊರಾಬ್ ಟಾಟಾ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು. ಆರ್. ಡಿಯವರೂ ಸಹಿತ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವಷ್ಟು ಶಕ್ತರಾಗಿರಲಿಲ್ಲ. 'ಸೂನಿ 'ಯವರ ಮರಣದ ನಂತರ, ಅಜ್ಜಿ, 'ಮಿಸೆಸ್. ಬ್ರೈರ್', ಅವರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. 'ಅಪ್ರೆಂಟಿಸ್' ಆಗಿ ತಂದೆಯವರ ಆದೇಶದಂತೆ, ನವ ಯುವಕ 'ಜೆ',ಭಾರತದ ಏವಿಯೇಷನ್ ಪಿತಾಮಹ 'ಟಾಟಾ ಸನ್ಸ್ ಕಂಪೆನಿ' ಯ ಅಪ್ರೆಂಟಿಸ್ ಆಗಿ, ಬೊಂಬಾಯಿಗೆ ಪಾದಾರ್ಪಣೆ ಮಾಡಿದರು. "ಜೆ " ೧೯೨೫ ರಲ್ಲಿ, ಬೊಂಬಾಯಿಗೆ ಬಂದು ಟಾಟ ಕಂಪೆನಿಯಲ್ಲಿ 'ಅಪ್ರೆಂಟಿಸ್,' ಆಗಿ ಭರ್ತಿಯಾದರು. ಆಗ ತಾನೆ ಬಂದು ಸೇರಿದ ಜೆ,ಯವರಿಗೆ, ದೇಶ-ಭಾಷೆಗಳೆಲ್ಲಾ ಹೊಸದು. ಗುಜರಾತಿ, ಹಿಂದಿ ಸರಿಯಾಗಿ ಬರುತ್ತಿರಲಿಲ್ಲ. ಅವರು ವಿಮಾನಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು. ಬೇರೆ ಕೆಲಸಗಳಿಗೆ ಇನ್ನೂ ಅವರಿಗೆ ಬಹಳ ತರಭೇತಿಯ ಅಗತ್ಯವಿತ್ತು. ಜೆ.ಎನ್ ಅವರ ವಿಲ್ ನಂತೆ, ದೊರಾಬ್ ಅವರಿಗೆ, ೩ ಲಕ್ಷರೂಪಾಯಿ, ವಾರ್ಷಿಕ ವೇತನ, ಆರ್. ಡಿಯವರಿಗೆ, ೨ ಲಕ್ಷರೂ. ಜೆ ಅವರಿಗೆ, ೩,೦೦೦, ದುರಾಬ್, ೨,೦೦೦ ಜಿಮ್ಮಿ ೧೦೦೦, ಮತ್ತು ಕೊನೆಯವರಿಗೆ, ೫ ರಲ್ಲಿ ಒಂದು ಭಾಗ ಹಣ ಸಂದಾಯವಾಗುತ್ತಿತ್ತು. ಆದರೆ, ಜೆ ಎಲ್ಲರಿಗೂ ಸಮಭಾಗ ಕೊಡಲು ಆಶಿಸಿದರು. ಟಾಟಾ ಕಂಪೆನಿ ಅವರಿಗೆ ಮಾಸಿಕ ೭೫೦/- ರೂ ವೇತನವನ್ನು ನಿರ್ಧರಿಸಿತ್ತು. ೧೯೨೬-೧೯೩೧ ರವರೆಗೆ, ಬರ್ದೋರ್ಜಿ ಪದ್ ಶ ರವರು ಡೈರೆಕ್ಟರ್. ಆಗ ಟಾಟಾ ಹೌಸ್ ನಲ್ಲಿ, ಒಬ್ಬ ನಿವೃತ್ತ ಐ. ಸಿ. ಎಸ್ ಅಧಿಕಾರಿ, ಟಾಟಸಂಸ್ಥೆಯ ಕಾರ್ಯಭಾರವನ್ನು ನೋಡಿಕೊಳ್ಳುತ್ತಿದ್ದರು. ಅವರೇ ಸ್ಕಾಟ್ ಮನ್, 'ಜಾನ್ ಪೀಟರ್ ಸನ್'. ಜೆ ಅವರ ಆತ್ಮಕಥೆಯಲ್ಲಿ ಹಲವು ಬಾರಿ ಪೀಟರ್ ಸನ್ ರನ್ನು ನೆನೆಯುತ್ತಾರೆ. ಪ್ರಾರಂಭಿಕ ಹಂತದಲ್ಲಿ ಟಾಟಾ ಕಂಪೆನಿಯಂತಹ ಒಂದು ಬೃಹತ್ ಉದ್ಯಮ ಸಂಸ್ಥೆಯ ವೈವಿಧ್ಯಮಯ ಉತ್ಪಾದನಾ ಸಾಮರ್ಥ್ಯವನ್ನೂ, ಕಾರ್ಯಕ್ಷೇತ್ರಗಳ ವಹಿವಾಟುಗಳನ್ನೂ, ಅರ್ಥ ಮಾಡಿಕೊಳ್ಳಲು, ಆಳದಲ್ಲಿ ಹೋಗಿ, ಅಂತರಂಗವನ್ನು ಹೊಕ್ಕು ತಿಳಿದುಕೊಳ್ಳಲು ಅವರಿಗೆ ಸಹಾಯವಾಯಿತು. ಆರ್. ಡಿ ಟಾಟಾ ಅವರು, ಪೀಟರ್ ಸನ್ ರನ್ನು ಮಗ, 'ಜೆ'ಗೆ ಪರಿಚಯಿಸಿ, ಅವರ ಕೊಠಡಿಯಲ್ಲಿ ಒಂದು ಮೂಲೆಯಲ್ಲಿ ಡೆಸ್ಕ್ ಒಂದನ್ನು ಹಾಕಿಸಿಕೊಟ್ಟರು. ಪೀಟರ್ ಸನ್, ಪತ್ರಗಳಿಗೆ ಸಹಿ ಹಾಕುವ ಮೊದಲು, ಜೆ ಆಫೀಸಿನ ಪ್ರತಿ ಪತ್ರವನ್ನೂ ಓದಿ ಅವುಗಳನ್ನು ಪೀಟರ್ ಸನ್ ಅವಗಾಹನೆಗೆ ಮಂಡಿಸುತ್ತಿದ್ದರು. ಹೀಗೆ ಜೆ. ಆರ್. ಡಿ ಯವರಿಗೆ ಕಂಪೆನಿಯಲ್ಲಿ ನಡೆಯುವ ಪತ್ರ ವ್ಯವಹಾರಗಳು ಮತ್ತು ಅದಕ್ಕೆ ಸ್ಪಂದಿಸುವ ಬಗೆ ಹೇಗೆ ಎನ್ನುವ ಸ್ಥೂಲ ಪರಿಚಯವಾಯಿತು. ಇದಾದ ಬಳಿಕ, ರತನ್ ತಮ್ಮ ಮಗನಿಗೆ, 'ಟಾಟ ಸ್ಟೀಲ್ ಪ್ಲಾಂಟ್ ' ನಲ್ಲಿ ಕೆಲಸ ಕಲಿಯಲು 'ಜಮ್ ಶೆಟ್ ಪುರ' ಕ್ಕೆ, ಅಪ್ರೆಂಟಿಸ್ ಆಗಿ ಕಳಿಸಿಕೊಟ್ಟರು. ಅದೇ ವರ್ಷ, ಅಂದರೆ ೧೯೨೫ ರಲ್ಲಿ ಜೆ, ಯವರ ತಂದೆ ಆರ್. ಡಿಟಾಟಾ, ಪ್ಯಾರಿಸ್ ನಲ್ಲಿ ತೀರಿಕೊಂಡರು. ಸರ್ ದೊರಾಬ್, ಮಧುಮೇಹದ ಕಾಯಿಲೆಯಿಂದ ನರಳಿ ಕೃಶರಾದರು. ಟಾಟ ಕಂಪೆನಿಯ ಜವಬ್ದಾರಿ ದಿನೇ-ದಿನೇ ಹೆಚ್ಚಾಗುತ್ತಿತ್ತು. ವಯಸ್ಸು ಅವರನ್ನು ಹಣ್ಣುಮಾಡಿತ್ತು. ತಮಗಿಂತ ಕೇವಲ ೩ ವರ್ಷಹಿರಿಯರಾದ ಆರ್.ಡಿಯವರ ಮರಣ, ದೊರಾಬ್ ಟಾಟಾ ಮತ್ತು ಟಾಟಾ ಪರಿವಾರಕ್ಕೆ ಒಂದು ಅಘಾತದಂತೆ, ಅನುಭವವಾಯಿತು. ಸಾಲದ ಹೊರೆಯ ಆತಂಕ ತಂದೆ, 'ಆರ್.ಡಿ.ಟಾಟಾ' ಅವರು ಮಾಡಿದ, ಸಾಲದ ಹೊರೆ ತೀರಿಸುವುದು 'ಜೆ.ಆರ್.ಡಿ.' ಯವರ ಆದ್ಯ ಕರ್ತವ್ಯವಾಗಿತ್ತು. ೨೨ ವರ್ಷದ ಜೆ ಮನೆಯ ಹಾಗೂ ಟಾಟಾ ಸನ್ಸ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಪಾರಂಪರಿಕವಾಗಿ ತಂದೆಯವರು ನಿಭಾಯಿಸುತ್ತಿದ್ದ ಟಾಟಾ ಸನ್ಸ್ ನ ನಿರ್ದೇಶಕ ಪದವಿಯನ್ನು' ಜೆ' ಒಪ್ಪಿಕೊಂಡು ಕಂಪೆನಿಯ ಜವಾಬ್ದಾರಿಯನ್ನು ಕೂಡಲೆ ತೆಗೆದುಕೊಳ್ಳಬೇಕಾಯಿತು. ತಂದೆಯವರು ಮಾಡಿಕೊಂಡ ಸಾಲ ಹೆಚ್ಚಾಗಿತ್ತು ; ಅಲ್ಲದೆ, ಅವರು ಟಾಟಾ ಕಂಪೆನಿಯಿಂದಲೂ ಬಹಳ ಸಾಲ ಪಡೆದಿದ್ದರು. ಹಾಗೂ ಸರ್ ದೊರಾಬ್ ರವರ ಬಳಿ ಕೂಡ ಸಾಲ ಮಾಡಿಕೊಂಡಿದ್ದರು. ಮೇಲಾಗಿ ಹಣ-ಕಾಸಿನ ವಿಷಯದಲ್ಲಿ ಸರ್. ದೊರಾಬ್ ಟಾಟ ಬಹಳ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದ್ದರು. ಸ್ವಲ್ಪ ದುಂದು ವೆಚ್ಚದ ಸ್ವಭಾವದ ಆರ್. ಡಿ, ಹೆಂಡತಿಯ ಅನಾರೋಗ್ಯಕ್ಕೆ, ಮತ್ತು ವಿದೇಶದಲ್ಲಿ ಮನೆಯನ್ನು ಬಾಡಿಗೆ ಪಡೆದು ಮಾಡಿದ ವ್ಯವಸ್ಥೆಗಳಿಗೆ ಬಹಳ ಹಣಸಾಲಮಾಡಬೇಕಾಯಿತು. ಇವೆಲ್ಲಾ ಸಾಲದ ಹಣವನ್ನು ತೀರಿಸುವುದು ಜೆ ಅವರಿಗೆ ವಿಪರೀತ ಕಷ್ಟವಾಯಿತು. ಸರ್. ದೊರಾಬ್ ಎಷ್ಟೋ ಪಾಲು ಹಣ ಮಾಫಿಮಾಡಿದಾಗ್ಯೂ ಸಾಲದ ಹೊರೆ ಹೆಚ್ಚಾಗಿತ್ತು. ಜೆ ಯೋಚಿಸಿ, ಕೊನೆಗೆ, ತಮ್ಮ ಪ್ಯಾರಿಸ್ ನ 'ಹಾರ್ಡ್ ಲಾಟ್', ನಲ್ಲಿದ್ದ ಸ್ವಂತ ಮನೆ, ಹಾಗೂ ಅಲ್ಲಿನ ವ್ಯವಹಾರಗಳನ್ನೆಲ್ಲಾ ಮಾರಿದರು. ಬೊಂಬಾಯಿನ 'ಸುನಿತ', ಮತ್ತು ಇನ್ನೊಂದು ಮನೆಯನ್ನೂ ಮಾರಿ, ಬಂದ ಹಣದಿಂದ ಸಾಲವನ್ನೆಲ್ಲಾ ತೀರಿಸಿ, 'ತಾಜ್ ಮಹಲ್ ಹೋಟೆಲ್', ನಲ್ಲಿ ಸ್ವಲ್ಪ ದಿನ ವಾಸ್ತವ್ಯಕ್ಕೆ ಏರ್ಪಾಡು ಮಾಡಿ ಕೊಂಡರು. ಜೆ ತಮ್ಮ ೧೫ ನೆಯ ವರ್ಷದಲ್ಲೇ ಪ್ಯಾರಿಸ್ ನಗರದಲ್ಲಿ ಒಂದು ಸುತ್ತು ಸುತ್ತಿಸುವ ವಿಮಾನದಲ್ಲಿ ಸುತ್ತಿ ಅದರ ಸ್ಥೂಲ ಅನುಭವವನ್ನು ಪಡೆದು ಆನಂದಿಸಿದ್ದರು. ಅವರಿಗೆ ವಿಮಾನಯಾನದಲ್ಲಿ ತೀವ್ರವಾದ ಆಸಕ್ತಿ. ಅಂದಿನ ದಿನಗಳಲ್ಲಿ ಜೆ ಭಾರತದಲ್ಲಿ, ಪೈಲೆಟ್ ಲೈಸೆನ್ಸ್ ಪಡೆದ ಪ್ರಥಮ ಭಾರತೀಯರಾಗಿದ್ದರು. ಪೈಲೆಟ್ ಆಗುವ ಕನಸು ನನಸಾದಾಗ ೧೯೩೦ ರಲ್ಲಿ ನೆವಿಲ್ ವಿನ್ಸೆಂಟ್ ಎಂಬ ಅಂಗ್ಲ ಪೈಲೆಟ್, ಭಾರತದ ಸ್ಥಳೀಯ ಜನರನ್ನು ತಮ್ಮ ಪುಟ್ಟ ವಿಮಾನದಲ್ಲಿ ಕುಳ್ಳಿರಿಸಿ ಕೊಂಡು ನಗರ ಪ್ರದಕ್ಷಿಣೆ ಮಾಡಿಸುವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಸಾಹಸಿ, ಹಾಗೂ ಮಹತ್ವಾಕಾಂಕ್ಷಿಯಾಗಿದ್ದ ಅವರು, ವಿಮಾನಾಸಕ್ತ ಜೆ ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರು. 'ಜೆ' ಆಗಿನ್ನೂ ತಮ್ಮ ಅಸ್ಪಷ್ಟ ಹೆಜ್ಜೆಗಳನ್ನು ಟಾಟಾ ಸಾಮ್ರಾಜ್ಯದಲ್ಲಿ ಇಡುತ್ತಿದ್ದ ಕಾಲವದು. ಟಾಟಾ ಸಂಸ್ಥೆಯ ಆಗಿನ ಡೈರೆಕ್ಟರ್ ಆಗಿದ್ದ 'ಸರ್ ದೊರಾಬ್ ಟಾಟಾ' ಅವರಿಗೆ ವಿಮಾನಯಾನದ ಸೌಕರ್ಯಗಳ ಬಗ್ಗೆ, ಮುಂದಿನ ದಿನಗಳಲ್ಲಿ ಅದರ ಬೆಳವಣಿಗೆಯ ಅಗಾಧ ಸಾಧ್ಯತೆಗಳ ವಿಚಾರಗಳನ್ನು ಪೀಟರ್ ಸನ್ ಮುಖಾಂತರ ದೊರಾಬ್ ಟಾಟರವರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿದರು. ಒಂದು ವಿಮಾನಯಾನ ಕಂಪೆನಿಯನ್ನು ಸ್ಥಾಪಿಸಲು ಕರೆಯಿತ್ತರು. ಪೈಲೆಟ್ ಆಗುವ ಕನಸು, ಹಾಗೂ "ಸಾರ್ವಜನಿಕ-ವಿಮಾನಯಾನ", ಬಾಲ್ಯದಲ್ಲೇ ಮನಸ್ಸಿನಲ್ಲಿ ಹುದುಗಿದ್ದ ಆಸೆ, ಮೂರ್ತರೂಪು ಪಡೆಯಿತು. ಹೀಗೆ, "ಟಾಟಾ ಏರ್ಲೈನ್ಸ್", ಅಸ್ತಿತ್ವಕ್ಕೆ ಬಂತು. ಈ ಹೊಸ ಸಂಸ್ಥೆ, ಮೊದಲಿಗೆ, 'ಟಾಟಾ ಸನ್ಸ್' ಸಂಸ್ಥೆಯ ಒಂದು ಚಿಕ್ಕ ಅಂಗವಾಗಿ ಪ್ರಾರಂಭವಾಗಿತ್ತು. ೧೫, ಅಕ್ಟೋಬರ್ ೧೯೩೨ ಭಾರದ ವಿಮಾನಯಾನದ ಇತಿಹಾಸದಲ್ಲಿ ಒಂದು ಅವಿಸ್ಮರಣೀಯದಿನ. ಆ ದಿನ ಜೆರವರು ತಾವೊಬ್ಬರೇ ಕರಾಚಿಯಿಂದ ಅಹ್ಮದಾಬಾದ್ ಮುಖಾಂತರವಾಗಿ ಬೊಂಬಾಯಿಗೆ ಪುಸ್ ವಿಮಾನದ ಹಾರಾಟದ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮಮತಿ, ಸಮಯಪ್ರಜ್ಞೆ ಹಾಗೂ ದೂರದೃಷ್ಟಿ ಯನ್ನು ಹೊಂದಿದ್ದ ಜೆಯವರು, ವಿಮಾನಯಾನದ ಬಹುಮುಖ ಸವಲತ್ತುಗಳನ್ನು ಗ್ರಹಿಸಿದ್ದರು. ಸರ್. ದೊರಾಬ್ ಟಾಟಾ ಮತ್ತು ತಂದೆಯವರು ಆಗಲೇ ಭಾರಿ ಉದ್ಯಮಗಳನ್ನು ಸ್ಥಾಪಿಸಿದ್ದರು. ತಮಗೆ ಅವುಗಳಲ್ಲಿ ಪೂರ್ಣಕ್ಷಮತೆ ಇರಲಿಲ್ಲ. ತಮ್ಮ ಕ್ಷೇತ್ರವೇನಿದ್ದರೂ ವಿಮಾನಯಾನಕ್ಕೆ ಸಂಬಂಧಿಸಿದ್ದು. ಅದರಲ್ಲಿ ಅತಿ ಹೆಚ್ಚಿನ ಯೋಗದಾನ ಮಾಡುವ ಆಸೆ ಅವರಿಗೆ ಗೋಚರಿಸಿತು. 'ಥೆಲ್ಮಿಯವರ ಭೇಟಿ' ಯುವ ಜೆ.ಆರ್.ಡಿ.ಯವರಿಗೆ, 'ಸ್ಪೋರ್ಟ್ಸ್ ಕಾರು 'ಗಳನ್ನು ವೇಗವಾಗಿ ಓಡಿಸುವ ಒಂದು ಹುಚ್ಚಿತ್ತು. ೧೯೨೦ ರಲ್ಲಿ ಅವರ ತಂದೆ "ಬ್ಯುಗಾಟ" ಕಾರನ್ನು ಹುಟ್ಟು ಹಬ್ಬದ ಬಳುವಳಿಯಾಗಿ ಕೊಟ್ಟರು. ಜೆ' ತಮ್ಮ ಬ್ಯುಗೋಟ ದಲ್ಲಿ ಬೊಂಬಾಯಿನ ರಸ್ತೆಗಳಲ್ಲಿ ಭರ್ರನೆ ಓಡಾಡುವುದನ್ನು ಬ್ರಿಟಿಷ್ ಪೋಲಿಸ್ ಅಧಿಕಾರಿಗಳು ಸಹಿಸಲಿಲ್ಲ. ಕಾರಿನ ವೇಗದ ಎಲ್ಲೆ ಮೀರಿದರೆಂಬ ಸುಳ್ಳು-ಆಪಾದನೆಯನ್ನು 'ಜೆ' ಮೇಲೆಹಾಕಿ, ಕೇಸ್ ಬುಕ್ ಮಾಡಿದರು. ಆಗ, 'ಜೆ' ಅವರಿಗೆ ತಿಳಿದ ಆಗಿನ ಕಾಲದ ಅತ್ಯಂತ ಹೆಸರುವಾಸಿಯಾದ ಲಾಯರ್, 'ಜ್ಯಾಕ್ ವೈಕೆಜಿ' ಯವರನ್ನು ಭೇಟಿಯಾಗಿ, ಅವರ ಸಹಾಯದಿಂದ ಕೇಸ್ ಗೆದ್ದರು. ಅವರ ಮನೆಗೆ ಹೋದಾಗ ಒಬ್ಬ ಸುಂದರ ಅತ್ಯಾಕರ್ಷಕ ಆಧುನಿಕ ತರುಣಿಯ ಭೇಟಿಯಾಯಿತು. ಈಕೆಯ ಚಿಕ್ಕಪ್ಪನೇ 'ವೈಕೆಜಿ'ಯವರು. ಹೀಗೆಯೇ ಅವರ ಭೇಟಿ ಪ್ರೇಮದಲ್ಲಿ ತಿರುಗಿ, ೧೯೩೦ ರಲ್ಲಿ ಜೆ, 'ಥೆಲ್ಮ' ಅವರನ್ನು ಮದುವೆಯಾದರು. ತಂದೆಯವರು ಬಹುಮಾನವಾಗಿ ಕೊಟ್ಟ 'ಬ್ಯುಗಾಟೊ ವೇಗಿಕಾರ್','ಥೆಲ್ಮಾ ವೈಕೆಜಿ,'ಯವರ ಮಿಲನಕ್ಕೆ ಕಾರಣವಾಯಿತು. 'ಥೆಲ್ಲಿ,' ಅಮೆರಿಕದಲ್ಲಿ ಜನಿಸಿದ್ದರು. ಆಕೆಯ ಪ್ರಾಥಮಿಕ ಶಾಲೆಯ ಕಲಿಕೆ ಇಟಲಿಯಲ್ಲಾಗಿತ್ತು. ತಾಯಿ, 'ಮುರೆಲ್,' ಅಕ್ಕ,'ಕಿಟ್ಟಿ', ಥೆಲ್ಲಿ ಗಿಂತ ಕೆಲವೇ ವರ್ಷ ದೊಡ್ಡವಳು. ಬೊಂಬಾಯಿನ,'ಜೆ. ಜೆ. ಸ್ಕೂಲ್ ಆಫ್ ಅರ್ಟ್' ನಲ್ಲಿ ಕಲಿಕೆ. ಬಣ್ಣದ ಚಿತ್ರಗಳು, ' ಪೋರ್ಟ್ರೇಟ್ಸ್' ಬರೆಯಲು ವಿಶೇಷ ಆಸಕ್ತಿ. ಈಜುವುದು ಹಾಗೂ ನೃತದಲ್ಲಿ ಪರಿಣತಿ ಇತ್ತು. 'ಸ್ಕರ್ಟ್' ಅಥವಾ 'ಸಾಡಿ'ಯಲ್ಲಿ ಆಕೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಳು. 'ಜೆ'ಸಹಜವಾಗಿ ಮನಸೋತರು. ಟಾಟಾ ಸಂಸ್ಥೆಗೆ ಪಾದಾರ್ಪಣೆ thumb|right|'ಜೆ.ಆರ್.ಡಿ.ರವರ ವ್ಯಕ್ತಿಸಂಗತಿ' ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದ, ಅನುಭವಿ, 'ಸರ್ ನವರೊಸ್ ಜಿ ಸಕ್ಲಾಟ್ ವಾಲ', ರವರು ೧೯೩೮ ರಲ್ಲಿ ಲಂಡನ್ ನಲ್ಲಿ ಮರಣ ಹೊಂದಿದರು. ಸರ್. ದೊರಾಬ್ಜಿ ಅವರ ನಂತರ ಟಾಟಾ ಸನ್ಸ್ ಕಂಪೆನಿಯ ಡೈರೆಕ್ಟರ್ ಆಗಿದ್ದರು. ಅವರ ಮರಣದ ನಂತರ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದ ಟಾಟಾ ಸನ್ಸ್ ಕಂಪೆನಿಯನ್ನು ನಡೆಸಲು ಒಬ್ಬ ಸಮರ್ಥ ವ್ಯಕ್ತಿಯ ಅವಶ್ಯಕತೆಯಿತ್ತು. ಟಾಟ ಸನ್ಸ್, ಡೈರೆಕ್ಟರ್ ಗಳೆಲ್ಲಾ ಸಮಾಲೋಚಿಸಿ, ಜೆ ರವರನ್ನು ಟಾಟಾ ಸನ್ಸ್ ನ ಪ್ರಧಾನ ಡೈರೆಕ್ಟರ್ , ಆಗಿ ಚುನಾಯಿಸಿದರು. ಹಾಗೆ ೨೬, ಜುಲೈ, ೧೯೩೮ ರಂದು ಶುರುವಾದ ಟಾಟಾ ಸಂಸ್ಥೆಯ ನಂಟು, ೨೫, ಮಾರ್ಚ್, ೧೯೯೧ ರ ವರೆಗೆ ಸತತವಾಗಿ ಮುಂದುವರೆಯಿತು. ತಮ್ಮ ಕೊನೆಯ ದಿಗಳವರೆಗೆ 'ಟಾಟಾಸಂಸ್ಥೆ' ಯ ಏಳಿಗೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರು. 'ಟಾಟಾ ಏರ್ಲೈನ್ಸ್',ಸ್ಥಾಪನೆ ೧೯೪೬ ರಲ್ಲಿ, ಜೆ. ಆರ್. ಡಿ. ಟಾಟಾರವರ, ಪ್ರೀತಿಯ ಕಂಪೆನಿ ,ಟಾಟಾ ಏರ್ಲೈನ್ಸ್ ಸ್ವತಂತ್ರ ಕಂಪೆನಿಯಾಯಿತು. ೨ ವರ್ಷಗಳ ನಂತರ, ಜೆ 'ಟಾಟಾ ಏರ್ ಲೈನ್ಸ್ (ಇಂಟರ್ನ್ಯಾಷನಲ್)', ಸ್ಥಾಪಿಸಿದರು. ೧೯೫೩ ರಲ್ಲಿ ಭಾರತದ ಉದ್ಯಮಗಳು ರಾಷ್ಟ್ರೀಕರಣ ವಾದಾಗ ಜೆ ಎರಡು ಕಂಪೆನಿಗಳ ನಿರ್ದೇಶಕತ್ವಕ್ಕೆ ರಾಜೀನಾಮೆ ಕೊಟ್ಟರು. ಜೆ, ಒಬ್ಬ ಸಾಹಸಿ, ವಾಣಿಜ್ಯೋದ್ಯಮಿ, ತಾಂತ್ರಿಕ ವಿಷಯಗಳನ್ನು ಚೆನ್ನಾಗಿ ಅರಿತವರು, ಮೇಲಾಗಿ ಅದರ ಆಡಳಿತದಲ್ಲಿ ಚೆನ್ನಾಗಿ ನುರಿತವರು. ವಿಮಾನಯಾನದ ಬಗ್ಗೆ, ಕಾರ್ ರೇಸ್ ಬಗ್ಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು, ಆಧುನಿಕ ಮ್ಯಾಗಜೈನ್ ಗಳನ್ನು ಓದಿ ವಿಷಯ ಸಂಗ್ರಹಿಸಿದ್ದರು. ೧೯೮೨ ರಲ್ಲಿ ತಮ್ಮ '೭೮ ನೇ ಹುಟ್ಟುಹಬ್ಬ' ದ ದಿನದಂದು, ಟಾಟಾ ತಮ್ಮ (೧೯೩೨ ರಲ್ಲಿ ನಡೆಸಿದ ಸೋಲೋ ವಿಮಾನ ಹಾರಾಟದಂತಹ) ಚಾರಿತ್ರ್ಯಿಕ ಹಾರಾಟವನ್ನು ಇನ್ನೊಮ್ಮೆ, ಮಾಡಿ ತೋರಿಸಿದರು. ಇದು ಅಂದಿನ ನವ ಯುವಕರನ್ನು ಹುರಿದುಂಬಿಸಲು, ಹಾಗೂ ಅವರಿಗೆ ವಿಮಾನಯಾನದಲ್ಲಿ ಆಸಕ್ತಿ ಮೂಡಿಸಲು ತೆಗೆದುಕೊಂಡ ಒಂದು ಕ್ರಮವಾಗಿತ್ತು. ಆಗ ಟಾಟಾ ಕಂಪೆನಿಯ ಸುಪರ್ದಿನಲ್ಲಿ ಒಟ್ಟು ೧೪ ಕಂಪೆನಿಗಳಿದ್ದವು. ವಾಣಿಜ್ಯ ವಾಹನಗಳು, ಇಂಜಿನಿಯರಿಂಗ್, ಹೋಟೆಲ್ಗಳು, ಏರ್ ಕಂಡೀಶನರ್ ಹಾಗೂ ರೆಫ್ರಿಜರೇಟರ್ಗಳು, ಕನ್ಸಲ್ ಟೆನ್ಸಿ ಸರ್ವಿಸಸ್, ಇನ್ ಫರ್ಮೇಶನ್ ಟೆಕ್ನೊಲೊಜಿ, ಕನ್ಸುಮರ್ಸ್ ಸರ್ವಿಸಸ್, ಕನ್ಸೂಮರ್ಸ್ ಡ್ಯುರಬಲ್ಸ್, ಟಿ. ಸಿ. ಎಸ್ ಇತ್ಯಾದಿ. ಜೆ ಈಗಿನವರೆಗೆ ಮಂಚೂಣಿಯಲ್ಲಿ ಹಿರಿಯ ಹಲವು ಪ್ರಮುಖ ಸಂಸ್ಥೆಗಳನ್ನು ಪೋಷಿಸಿ ಕೊಂಡು ಬಂದರು. ಅದರಲ್ಲಿ ಅನೇಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಉತ್ಪಾದನೆಯಲ್ಲಿ ಮತ್ತು ಗುಣಮಟ್ಟದಲ್ಲಿ ಅಧಿಕ ಪ್ರಗತಿಯನ್ನು ತರಲು ಸದಾ ಪ್ರಯತ್ನಿಸಿದರು. ಭಾರತದ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಅಂತ್ಯಗೊಳಿಸಲು ತಾವು ಸ್ವತಃ ಕಂಕಣಬದ್ಧರಾಗಿ ಕೆಲಸಮಾಡಿದ್ದು. ಭಾರತದ ಸ್ತ್ರೀಯರ ವಿದ್ಯಾಭ್ಯಾಸ ಹಾಗೂ ಅವರನ್ನು ಪೋಷಿಸುವ ಸೇವಾ ಸಂಸ್ಥೆಗಳ ಸುವ್ಯಸ್ಥಿತ ಕೆಲಸ ಕಾರ್ಯಗಳ ಮಹತ್ವದ ಬಗ್ಗೆ ಒತ್ತು ಕೊಟ್ಟರು. 'ಜೆ.ಅರ್.ಡಿ.ಟಾಟಾ' ಟಾಟಾ ಕಂಪೆನಿಯ ಡೈರೆಕ್ಟರ್ ಆಗಿ ಭಾರತದ ಅತ್ಯಂತ ದೊಡ್ಡ ಕಂಪೆನಿಯ ೪ ನೆಯ ಡೈರೆಕ್ಟರ್, ಆಗಿ ಜೆ. ಚುನಾಯಿಸಲ್ಪಟ್ಟರು. ೧೯೩೯ ರಲ್ಲಿ ಇದ್ದ ಆಸ್ತಿ -೬೨ ಕೋಟಿ ಅಥವಾ ೬೨೦. ಮಿಲಿಯ ರುಪಾಯಿಗಳು. ೧೯೬೦ ರಲ್ಲಿ ೧೦,೦೦೦ ಕೋಟಿ ಅಥವಾ, ೧೦೦ ಬಿಲಿಯನ್. ೧೪ ಕಂಪೆನಿಗಳಿಂದ, ಮಾರಾಟ ೨೮೦ ಕೋಟಿ, ೨.೮ ಬಿ. ೧೯೯೩ ರಲ್ಲಿ ೧೫,೦೦೦ ಕೋಟಿ -೧೫೦ ಬಿ.೫೦ ಕ್ಕಿಂತ ಹೆಚ್ಚು ಸಂಸ್ಥೆಗಳು ಹಾಗೂ ಲೆಕ್ಕವಿಲ್ಲದಷ್ಟು ಚಿಕ್ಕಪುಟ್ಟ ಕಂಪೆನಿಗಳು. ಏರ್ ರ್ಲೈನ್ಸ್ ನಿಂದ ಹೋಟೆಲ್, ಟ್ರಕ್ ನಿಂದ ಲೋಕೋಮೋಟಿವ್, ಸೋಡ ಅಶ್, ಔಷಧಿ, ಐರ್ ಕಂಡೀಶನ್, ಲಿಪ್ಸ್ಟಿಕ್, ಕಲೋನ್, ಸಿಮೆಂಟ್ ಕಂ ಸೇರಿ, ಎ. ಸಿ. ಸಿ. ಕಂಪೆನಿಯವರೆಗ. ಈಗಿರುವ ಕಂಪೆನಿಗಳನ್ನು ಧೃಢಪಡಿಸಿ, ಹೊಸ ಉದ್ಯೋಗಗಳನ್ನು ಪ್ರಾರಂಭಿಸಿದರು. ಅಡುಗೆ ಉಪ್ಪು, ಮೊದಲಾದವುಗಳು. ೧೯೬೪-೧೯೯೧, ವೇಳೆಯಲ್ಲಿ, ಭಾರತ ಸರ್ಕಾರದ ಕಂಟ್ರೋಲ್ ನೀತಿಯಿಂದ ಟಾಟಾ ಸಂಸ್ಥೆ ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಬೆಳೆಯಲು ಸಹಾಯವಾಗಲಿಲ್ಲ. ಜೆ.ಆರ್.ಡಿ.ಟಾಟಾರವರಿಗೆ, ಇದರ ಬಗ್ಗೆ ಸ್ವಲ್ಪ ಅಸಮಧಾನವಿತ್ತು. ಸರ್ಕಾರದ ಅನುಕೂಲವಿದ್ದಿದ್ದರೆ, ಇನ್ನೂ ಹೆಚ್ಚಿನದನ್ನು ಸಾಧಿಸಬಹುದಾಗಿತ್ತು, ಎಂದು ಜೆ.ಆರ್.ಡಿ ಹೇಳುತ್ತಿದ್ದರು. ಟಾಟ ಉದ್ಯಮದಲ್ಲಿ ಉತ್ಕರ್ಷ ಜೆ.ಆರ್.ಡಿ.ಯವರು, ಟಾಟಾ ಉದ್ಯಮ ಕ್ಷೇತ್ರದ ಬೇರೆ ಪ್ರಮುಖ ಡೈರೆಕ್ಟರ್ ಗಳ ಕಾರ್ಯವನ್ನು ಪರಿಶೀಲಿಸಿ, ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳಿಗೆ ಪ್ರೋತ್ಸಾಹ ಕೊಟ್ಟು, ಅವರಿಗೆ ಮುಂದುವರೆಯಲು ಅಗತ್ಯವಾದ ಸಹಾಯವನ್ನು ಮಾಡುತ್ತಿದ್ದರು. ತಮ್ಮ ಕಾರ್ಯಾವಧಿಯಲ್ಲಿ ಅನೇಕ ಪ್ರತಿಷ್ಠಿತ ಪ್ರತಿಭೆಗಳನ್ನು ಗುರುತಿಸಿದರು. ಕೆಲವರು ಟಾಟಾ ಸಂಸ್ಥೆಯಲ್ಲಿ ದಶಕಗಳಿಂದ ಕೆಲಸ ಮಾಡಿದ ನಿಷ್ಠಾವಂತ ಅಧಿಕಾರಿಗಳು. ಅವರಲ್ಲಿ 'ಸರ್ ಹೋಮಿ ಮೋದಿ', 'ಸರ್ ಅರ್ದೆಶಿರ್ ಜಲಾಲ್', 'ಸರ್ ಜೆಹಾಂಗೀರ್ ಘಾಂಧಿ', 'ರೂಸ್ಸಿಮೋಡಿ', ವಿಜ್ಞಾನಿಗಳಾದ 'ಹೋಮಿ ಭಾಭ', ಲಾಯರ್, 'ಜೆ. ಡಿ. ಚೋಕ್ಸಿ', 'ನಾನಿ ಪಾಲ್ಕಿವಾಲ', 'ಜೆ. ಎನ್. ಮಥಾಯ್', ಎಕೋನೊಮಿಸ್ಟ್ಸ್, 'ಏ. ಡಿ. ಶ್ರಾಫ್', 'ಡಿ. ಆರ್. ಪೆಂಡ್ಸೆ', 'ಫ್ರೆಡ್ಡಿಮೆಹ್ತ', ಮುಂತಾದವರು ಮುಖ್ಯರು. ಅವರಲ್ಲಿ ಕೆಲವರು ರೋಲ್ ಮಾಡೆಲ್ ಆಗಿ ಮೆರೆದರು. 'ದರ್ಬಾರಿ ಸೇಠ್ ', 'ಸುಮಂತ್ ಮೂಲ್ಗಾಂವ್ ಕರ್ ' ಮುಂತಾದವರು, ಅತ್ಯಂತ ಪ್ರಭಾವೀ ಕುಶಲಕರ್ಮಿಗಳು. ಟಾಟಾ ಕಂಪೆನಿಗಳನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಈ ಮಹಾರಥಿಗಳ ಪಾತ್ರ , ಅತಿಮುಖ್ಯವಾಗಿತ್ತು. ಟಾಟಾ ಅಡ್ಮಿನಿಸ್ಟ್ರೆಟಿವ್ ಸರ್ವಿಸೀಸ್, ಟಾಟಾ ಮ್ಯಾನೆಜ್ಮೆಂಟ್ ಸೆಂಟರ್, ಪ್ರೊಫೆಶನಲ್ಸ್, ಮುಂದೆ ಮುಂದೆ ಹೋಗಲು ಇಂತಹ ನಿಸ್ವಾರ್ಥ ವ್ಯಕ್ತಿಗಳು ಕಾರಣರಾದರು. ಹೌರಸೇತುವೆಗೆ ಬೇಕಾದ ಅತಿ ಗಟ್ಟಿಯಾದ ಉಕ್ಕು, 'ಟಿಸ್ಕ್ರೋಮ್', ತಯಾರು ಮಾಡಲಾಯಿತು. 'ಟಿಸ್ಕೊರ್', (ಎನ್ನುವ ಅತಿ ಗಟ್ಟಿಯಾದ ಉಕ್ಕಿನ ಅಲಾಯ್) ನ್ನು ಭಾರತೀಯ ರೈಲ್ವೆ ಕೋಚ್ ಗಳಿಗೆ ಬಳಸುವ, ಸ್ಟೀಲ್,ಟಾಟಾ ಕಂಪೆನಿ ತಯಾರು ಮಾಡಿತು. ಬೇರೆ ಕಂಪೆನಿಗಳಿಗೆ ಹೋಲಿಸಿದರೆ, ಟಾಟಾ ಸಂಸ್ಥೆ ಪ್ರಾರಂಭದಲ್ಲೇ ಕೆಲಸಗಾರರಿಗೆ ಅನೇಕ ಸೌಕರ್ಯಗಳನ್ನು ಕಲ್ಪಿಸಿದ್ದರು. ೧೯೧೨ ರಲ್ಲೆ ಟಾಟಾ ಸಂಸ್ಥೆಯವರು, ತಮ್ಮ ಕಾರ್ಮಿಕರಿಗೆ, ೮ ಗಂಟೆ ಕೆಲಸದ ಶಿಫ್ಟ್ ನ್ನು ಆಯೋಜಿಸಿದ್ದರು. ಆದರೆ, ಆ ದಿನಗಳಲ್ಲಿ ಯೂರೋಪ್ ನಲ್ಲೂ ೧೨ ಗಂಟೆ ಕಾಲದ ಕೆಲಸದ ನಿಯಮವಿತ್ತು. ೧೯೨೦ ರಲ್ಲೇ ತಮ್ಮ ಕರ್ಮಚಾರಿಗಳಿಗೆ 'Leave with pay', 'Provident fund', ಮುಂತಾದ ಸೌಲಭ್ಯಗಳನ್ನು ಕೊಟ್ಟಿದ್ದರು. ಇನ್ನಿತರ ಕಂಪೆನಿಗಳು ಇಂತಹ ಸೌಲಭ್ಯಗಳ ಬಗ್ಗೆ, ಯೋಚಿಸಲೂ ಸಾಧ್ಯವಿಲ್ಲದ ಕಾಲವದು. ಆದ್ದರಿಂದ ಟಾಟಾ ಸಂಸ್ಥೆ, ನಮ್ಮದೇಶದ ಅತ್ಯಂತ ಭಾರಿ ಉದ್ಯಮಗಳನ್ನು ಪ್ರ ಪ್ರಥಮವಾಗಿ ಸ್ಥಾಪಿಸುವದರ ಜೊತೆಗೆ, ಅನೇಕ ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಜನತೆಗೆ ಕೊಟ್ಟು, ಭಾರತದ ಉದ್ಯಮ ವಲಯದಲ್ಲಿ ಮಂಚೂಣಿಯಲ್ಲಿ ಮುಂದುವರೆಯಲು ಸಹಾಯವಾಯಿತು. ಕಟ್ಟಿಬೆಳೆಸಿದ ಸಂಸ್ಥೆಗಳು T.I.F.R, Mumbai N.C.P.A, Mumbai ೧೯೮೦ ಭಾರತದ ಭವಿತವ್ಯಕ್ಕೆ ನಾಗರಿಕ-ವಿಮಾನಯಾನದ ಶುಭಾರಂಭ ಅತ್ಯಂತ ಆಶಾದಾಯಕವೂ, ಅವಶ್ಯಕವೂ ಆಗಿತ್ತು. ಜೆ ನಾಗರಿಕ ವಿಮಾನಯಾನದ ಐತಿಹಾಸಿಕ ಪುರುಷರು ಅವರಿಗೆ, 'Indian Airlines' ಮತ್ತು , 'Air India', ಎರಡಕ್ಕೂ ಚೆರ್ಮನ್ ಆಗಲು ಕರೆ ಬಂತು. ಅವರು ೧೯೭೮ ರ ವರೆಗೆ ಹೇಗೋ ಏರ್ ಇಂಡಿಯದಲ್ಲಿ ಇದ್ದರು. ೧೯೮೦ ರಲ್ಲಿ ಅವರಿಗೆ ಪುನಃ ಕೇಳಿ ಕೊಳ್ಳಲಾಯಿತು. ಅವರೊಬ್ಬ " ಐತಿಹಾಸಿಕ ಪುರುಷರು ". ಅಷ್ಟುಹೊತ್ತಿಗೆ ಭಾರತದಲ್ಲಿ ವಿಮಾನಯಾನದ ಶಕೆ, ಪ್ರಾರಂಭವಾಗಿದ್ದರೂ ರಾಜಕೀಯದಿಂದಾಗಿ,' ಜೆ' ಯವರ ಆಸಕ್ತಿಯ ತೀವ್ರತೆಯನ್ನು ಕಳೆದು ಕೊಂಡಿತ್ತು. ಜೆ ರವರಿಗೇನೋ, ವಿಮಾನಯಾನ ಹಾಗೂ ವಾಯು ಸಾಗಾಣಿಕೆಯ ಪ್ರಕ್ರಿಯೆಗಳ ಪ್ರತಿ ಹಂತದಲ್ಲೂ ಕಳಕಳಿಯಿತ್ತು. ಏಕೆಂದರೆ ಅವರಿಗೆ ಪ್ರತಿ ವಿಚಾರಗಳು ಚೆನ್ನಾಗಿ ತಿಳಿದಿದ್ದವು. ೧೯೮೨ ರಲ್ಲಿ, "ಭಾರತದಲ್ಲಿ ವಾಯುಯಾನದ ಬಂಗಾರದ ಹಬ್ಬ" ವನ್ನು ಆಚರಿಸಲು ಅವರು ಕೈಗೊಂಡ ಕಾರ್ಯವೆಂದರೆ, ಪುನಃ ೧೯೩೨ ರ ಕಾರ್ಯವನ್ನು ಪುನರಾಚರಣೆ ಮಾಡುವುದರಿಂದ. ಕರಾಚಿಯಿಂದ ಅಹಮದಾಬಾದ್ ಮೂಲಕ, ಮುಂಬಯಿ ಯಾನ-ಯುವ ಜನರಿಗೆ ಪ್ರೇರಣೆ ಸಿಗಲೆಂದು. 'ಸುಮಂತ್ ಮೂಲ್ಗಾಂವ್ ಕರ್'ಜೊತೆ ೧೯೧೨ ರಲ್ಲಿಯೇ, ದೊರಾಬ್ ಟಾಟಾ ಮತ್ತು, ಆರ್. ಡಿ. ಟಾಟಾರವರು, ಪ್ರಥಮ ಸೆಮೆಂಟ್ ಕಂಪೆನಿಯನ್ನು ತೆರೆದರು. ೧೯೨೧ ರಲ್ಲಿ ಎರಡನೆಯ, ಸೆಮೆಂಟ್ ಫ್ಯಾಕ್ಟರಿಯನ್ನು ಕರ್ನಾಟಕದ ಶಹಾಬಾದ್ ನಲ್ಲಿ ಪ್ರಾರಂಬಿಸಿದರು. ೧೯೩೬ ರಲ್ಲಿ, ಮತ್ತೆ ೩ ಕಂಪೆನಿಗಳು ಇವಕ್ಕೆ ಸೇರ್ಪಡೆಯಾಗಿ ಅದರ ಹೆಸರು 'ACC', (Associated Cement Co;) ಆಯಿತು. ಬಾಯ್ಲರ್, ರೈಲ್ವೆ ಎಂಜಿನ್ ಗಳ ತಯಾರಿಕೆ, ಬಿಟ್ಟು, ಮೋಟರ್ ಕಾರ್, ಟ್ರಕ್ಸ್ ಗಳ ತಯಾರಿಕೆಯಲ್ಲಿ ತಮ್ಮ ಗಮನ ಹರಿಸಿದರು. ಆಗ, ಸುಮಂತ್ ಮೂಲ್ಗಾಂವ್ ಕರ್ ಎಂಬ ಯುವಕ, 'Imperial College of Science & Technology', ಲಂಡನ್, ನಿಂದ 'Mechanical Engineering' ನಲ್ಲಿ, ಪದವಿ ಪಡೆದು, ೧೯೨೯ ರಲ್ಲಿ ಭಾರತಕ್ಕೆ ವಾಪಸ್ ಬಂದಿದ್ದರು. ಅವರು, ಗುಜರಾತ್ ರಾಜ್ಯದ ದ್ವಾರಕದಲ್ಲಿ, 'C. P Cement Works', ಎಂಬ ಸಂಸ್ಥೆ ಯಲ್ಲಿ ೨೫೦ ರೂ. ಸಂಬಳ ಕ್ಕೆ ದುಡಿಯುತ್ತಿದ್ದರು. ೨ ನೆಯ World war ನಿಂದಾಗಿ ವಿದೇಶಗಳಿಂದ ಆಮದು ಬಂದಾಗಿತ್ತು ಆಗ ಮೂಲ್ಗಾಂಕರ್, Chaibasa,Cement ಕಂ ಯಲ್ಲಿ ತಾವೇ, ತಮಗೆ ಬೇಕಾದ ಸಿಮೆಂಟ್ ಯಂತ್ರಗಳನ್ನು ನಿರ್ಮಿಸಿ, ಕೆಲಸವನ್ನು ಚಾಲನೆಯಲ್ಲಿಟ್ಟರು. 'ಸುಮಂತ್ ಮೂಲ್ಗಾಂಕರ್' ರವರ ಪ್ರಾಮಾಣಿಕತೆ, ಉನ್ನತ ವ್ಯಾಸಂಗ, ಮತ್ತು ಕೆಲಸದಲ್ಲಿ ದಕ್ಷತೆಗಳು 'ಜೆ.ಆರ್.ಡಿ' ಯವರನ್ನು ಆಕರ್ಷಿಸಿದವು. ಇಂತಹ ವ್ಯಕ್ತಿತ್ವವನ್ನು ಹೊಂದಿದ ಸುಮಂತ್, ತುಂಬ ಹಿಡಿಸಿದರು. ಜೆ.ಆರ್.ಡಿ, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿದರು. ಸುಮಂತ್, ಜೆ.ಆರ್.ಡಿಯವರ ಬಗ್ಗೆ ಕೇಳಿದ್ದರು. ಇದು ಅವರಿಬ್ಬರ ಸ್ನೇಹವನ್ನು ಬೆಸೆಯಲು ಸಹಾಯಕವಾಯಿತು ಜೆ. ಆರ್. ಡಿ ರವರ ಕೆಲಸ ಮಾಡಿಸುವ ವೈಖರಿ ಎಲ್ಲರಿಗೂ ಬೆರಗುಗೊಳಿಸುವಂತಿತ್ತು. ಮೊದಲು, ತಕ್ಕ ಮನುಷ್ಯರನ್ನು ಹುಡುಕುವುದು, ಅವರಲ್ಲಿ ಆಸಕ್ತಿ ಮನಗಂಡ ನಂತರ, ಅವರಿಗೆ, ಹಣಸಹಾಯ, ಪದವಿಗಳನ್ನು ಕೊಟ್ಟು, ವಿದೇಶದಲ್ಲಿ ಪ್ರಶಿಕ್ಷಣ ಕೊಡಿಸಿ, ಅವರಿಗೆ ಅಧಿಕಾರವನ್ನು ಒಪ್ಪಿಸಿ ದೂರದಲ್ಲಿ ನಿಂತು ಅವರ ಪ್ರಗತಿಯನ್ನು ಗಮನಿಸುವ ಸ್ವಭಾವ,ಜೆ ರವರದು. ತಾವು ಕಾಲೇಜ್ ವಿದ್ಯಾಭ್ಯಾಸವನ್ನು ಮಾಡದೆ ಇದ್ದರೂ, ತಮ್ಮದೇ ಆದ ಶೈಲಿಯಲ್ಲಿ ಕಾರ್ಯ-ಸಾಧಿಸುವ ಕಲೆ ಅವರಿಗೆ ಕರಗತವಾಗಿತ್ತು. ಅವರ ನಿಕಟದಲ್ಲಿ ದುಡಿದು, ಹಾಗೆ ಮುಂದೆ ಬಂದ ವ್ಯಕ್ತಿಗಳಿಗೇನು ಕಡಿಮೆಯಿಲ್ಲ. ಮೂಲ್ಗಾಂಕರ್ ಕೂಡಲೇ ಟಾಟಾ ಸಿಮೆಂಟ್ ಕಂಪೆನಿಯ 'Executive Director', ಆದರು. ಅವರನ್ನು , USA ಮತ್ತು England ಗೆ ಹೆಚ್ಚಿನ ಪ್ರಶಿಕ್ಷಣಕ್ಕಾಗಿ ಕಳಿಸಿಕೊಟ್ಟರು. ೧೯೪೯ ರಲ್ಲಿ, 'TELCO' ಪಾದಾರ್ಪಣೆ ಮಾಡಿತು. ಮೊದಲು Boilers ಮತ್ತು ನಂತರದಲ್ಲಿ 'Locomotives', ಮಾಡಲು ಮೊದಲುಮಾಡಿದರು. ಮೂಲ್ಗಾವ್ಕರ್ 'Director and Incharge', ಆಗಿ ನೇಮಿಸಲ್ಪಟ್ಟರು. 'ಟೆಲ್ಕೊ ಕಂಪೆನಿಯ ಸ್ಥಾಪನೆ' ೧೯೫೦ ರಲ್ಲಿ Germany ಯ, Daimler-Benz, ಕಂಪೆನಿಯ ಜೊತೆ ಸೇರಿ, Tata Locomotive and Engineering Co;(TELCO) ಸ್ಥಾಪಿಸಿದರು. ೧೫ ವರ್ಷಗಳ ಇದರ ಕಾರ್ಯ ಚಟುವಟಿಕೆಗಳು ಬದಲಾಗಿ, ನಂತರ, TELCO, Tata Engineering & Locomotive Co; ಎಂದು ೨೪, ಸೆಪ್ಟೆಂಬರ್, ೧೯೬೦ ಯಲ್ಲಿ ಹೆಸರಿಸರಾಯಿತು. ಮೊದಲು, ೨೫,೦೦೦ ಮಿಲಿಯನ್ ರೂಪಾಯಿಗಳ, ಹಾಗೂ ,TISCO, ಕಂಪೆನಿಯ ೨೧,೦೦೦ ಮಿ. ರೂಪಾಯಿಗಳ ಟರ್ನ್ ಓವರ್, ಆಯಿತು. ೧೯೬೦ ರಲ್ಲಿ ಪುಣೆಯಲ್ಲಿನ TELCO ಫ್ಯಾಕ್ಟೊರಿ ಯನ್ನು ಆಧುನಿಕರಿಸಲಾಯಿತು. ೧೯೮೮ ರಲ್ಲಿ, ಸುಮಂತ್ ಮೂಲ್ಗಾಂವ್ ಕರ್ ರವರು, ಹೊಸದಾಗಿ ನೇಮಿಸಲ್ಪಟ್ಟ ಟಾಟಾ ಡೈರೆಕ್ಟರ್, ರತನ್ ಟಾಟಾ, ರವರಿಗಾಗಿ ತಮ್ಮ ಸ್ಥಳವನ್ನು ತೆರೆವು ಮಾಡಿಕೊಟ್ಟು, ನಿವೃತ್ತರಾದರು. ಕೆಲವೇ ತಿಂಗಳುಗಳಲ್ಲಿ ಮೃತರಾದರು. ಸುಮಂತ್ ಮೂಲ್ಗವ್ ಕರ್ ರನ್ನು ಜೆ. ಆರ್.ಡಿ ಯವರು, ತಮ್ಮ ೬೮ ನೆ ವಯಸ್ಸಿನಲ್ಲಿ ಟೆಲ್ಕೊ ಚೇರ್ಮನ್ ಶಿಪ್ ನಿಂದ ಕೆಳಗಿಳಿದು, ಛೇರ್ಮನ್ ಆಗಿ ನೇಮಿಸಿದ್ದರು. ದರ್ಬಾರಿ ಸೇಠ್ ರವರಿಗೆ ತಮ್ಮ ೭೮ ನೆಯ ವಯಸ್ಸಿನಲ್ಲಿ, ಟಾಟಾ ಕೆಮಿಕಲ್ಸ್ ಛೇರ್ ಮನ್ ಅಗಿ ಜವಾಬ್ದಾರಿಯ ಅಧಿಕಾರವನ್ನು ವಹಿಸಿ ಕೊಟ್ಟಿದ್ದರು. ಹಾಗೆಯೇ ರುಸ್ಸಿಯವರಿಗೆ ತಮ್ಮ ೮೦ ನೆಯ ವಯಸ್ಸಿನಲ್ಲಿ, ಟಾಟಾ ಸ್ಟೀಲ್ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಟ್ಟರು. ೧೯೮೧ ರಲ್ಲಿ ರತನ್ ಟಾಟಾ ರವರನ್ನು Chairman of Tata Industries ಆಗಿ ನೇಮಕ ಮಾಡಿ ತಾವು ಹೊರಗಡೆಯಿದ್ದು ಗಮನಿಸುತ್ತಿದ್ದರು. ೧೯೯೧-೧೯೯೩ ಟಾಟಾ ಡೈರೆಕ್ಟರ್, 'ಸರ್ ನವರೋಜಿ ಸಕ್ಲಾಟ್ ವಾಲ' ತೀರಿಕೊಂಡ ಮೇಲೆ, ಟಾಟಾ ಸನ್ಸ್ ಗೆ ನೇಮಿಸಲ್ಪಟ್ಟ ಸಮಯ, ಜುಲೈ ೨೬, ೧೯೩೮ ನಲ್ಲಿ. ಜೆ ಶುರು ಮಾಡಿದಾಗ ೧೪ ಕಂಪೆನಿಗಳು Tata & Sons; ನಲ್ಲಿದ್ದವು. ಅವರ ಮುಂದಾಳತ್ವದಲ್ಲಿ ಅನೇಕ ಮೊಟ್ಟ ಮೊದಲ ಚಟುವಟಿಕೆಗಳಿಗೆ ನಾಂದಿಯಾಯಿತು. ಕಮರ್ಷಿಯಲ್ ವಾಹನಗಳು, ವೆಹಿಕಲ್ಸ್ , ಇಂಜಿನಿಯರಿಂಗ್, ಹೋಟೆಲ್, ಏರ್ ಕಂಡಿಶನಿಂಗ್ ಮತ್ತು ರೆಫ್ರಿಜರೇಶನ್, ಕನ್ಸೂಮರ್ ಸರ್ವೀಸಸ್ ಮತ್ತು ಐ.ಟಿ, ಕನ್ಸೂಮರ್ ಪದಾರ್ಥಗಳು, ಡ್ಯೂರಬಲ್ಸ್, ಇಂಡಸ್ಟ್ರಿಯಲ್ ಪ್ರಾಡಕ್ಟ್ಸ್. ಟಿ.ಸಿ.ಎಸ್. ಮೊದಲು, ಟಾಟ ಮತ್ತು ಸನ್ಸ್ ಗೆ ಸಾಫ್ಟ್ ವೇರೆ ಒದಗಿಸಲು ಪ್ರಾರಂಭವಾದದ್ದು, ೧೯೬೮ ಈಗ ದೇಶದ ಅತಿ ಭಾರಿ ಸಂಸ್ಥೆಯಾಗಿ ರೂಪುಗೊಂಡಿದೆ. ಜೆ, ದೇಶದ ಹಲವರು ಸಮಸ್ಯೆಗಳಿಗೆ ಸ್ಪಂದಿಸಿ ತಮ್ಮ ಯೋಗದಾನ ಮಾಡಿದ್ದಾರೆ. 'ಫ್ಯಾಮಿಲಿ ಪ್ಲಾನಿಂಗ್ , ಅಂಡ್ ಪಾಪ್ಯುಲೇಶನ್ ಕಂಟ್ರೋಲ್'. ವಿಶ್ವಸಂಸ್ಥೆ, ಅವರಿಗೆ ಸೆಪ್ಟೆಂಬರ್, ೧೯೯೨ ರಲ್ಲಿ ಪ್ರಶಸ್ತಿ ಪ್ರದಾನ ಮಾಡಿದೆ. ದೇಶದಾದ್ಯಂತ ವಿದ್ಯಾಪ್ರಸಾರ, ಅನಕ್ಷರತೆಯ ನಿರ್ಮೂಲನೆ ಅವರ ಗುರಿಯಾಗಿತ್ತು. ಮಕ್ಕಳು ಹಾಗೂ ಅಬಲ ಸ್ತ್ರೀಯರ ಯೋಗಕ್ಷೇಮ, ಮತ್ತು ಅವರ ಜೀವನಸ್ತರದಲ್ಲಿ ಆದಾಯ ಹೆಚ್ಚಿಸುವ ಕಾರ್ಯಗಳು. 'NCPA', 'TIFR' ಗಳ ಸ್ಥಾಪನೆ. 'National Institute for Advanced Studies', ಬೆಂಗಳೂರಿನಲ್ಲಿ. ಭಾರತದ ಪ್ರಥಮ ಕ್ಯಾನ್ಸರ್ ಆಸ್ಪತ್ರೆಯ ಸ್ಥಾಪನೆ. Tata Memorial Hospital for Cancer Research & Treatment, ತಮ್ಮ ೪೦ ನೆಯ ವಯಸಿನಲ್ಲಿ ವಿವಿಧೋದ್ದೇಶಗಳ ಪೂರೈಕೆಗಾಗಿ, 'JRD Tata Trust', ಸ್ಥಾಪನೆಯಾಯಿತು. ತಮ್ಮ ಟಾಟಾ ಸನ್ಸ್ ನಲ್ಲಿದ್ದ ,ಮತ್ತು ಇತರ ಟಾಟಾ ಕಂಪೆನಿಗಳಲ್ಲಿದ, ಶೇರ್ ಗಳನ್ನು ಮಾರಿ, ಮಕ್ಕಳು , ಹಾಗೂ ಸ್ರೀಯರಿಗಾಗಿ, ಒಂದು ಸ್ವಂತ ಟ್ರಸ್ಟ್, 'JRD Tata Trust & Thelma Tata Trust' ಮಾಡಿದರು. ನೆಹರು ರವರ ಸ್ನೇಹ ಅವರಿಗೆ ದೊರೆಯಿತು. 'ಜೆ.ಆರ್.ಡಿ' ತಯಾರಿಸಿದ ಚಾರಿತ್ರ್ಯಿಕ "ಬಾಂಬೆ ಪ್ಲಾನ್" ಎರಡನೆಯ ವಿಶ್ವಯುದ್ಧದ ತರುವಾಯ, ಭಾರತ ದೇಶದಲ್ಲಿ ಯಂತ್ರೀಕರಣದಿಂದ ಉತ್ಪಾದನೆ ಹೆಚ್ಚಿಸಲು, 'ಜೆ ' ರವರ ಮನಸ್ಸು ಹಾತೊರೆಯುತ್ತಿತ್ತು. ತಮ್ಮ ಜೊತೆಗೆ, ಆಗಿನ ಭಾರತದ ಸುಪ್ರಸಿದ್ಧ ಉದ್ಯಮಿಗಳಾದ, 'ಜಿ.ಡಿ.ಬಿರ್ಲ, 'ಕಸ್ತುರ್ ಭಾಯ್ ಲಾಲ್ ಭಾಯ್' ಮುಂತಾದವರನ್ನು ಸೇರಿಸಿ ಕೊಂಡರು. ಟೆಕ್ನೋಕ್ರಾಟ್, 'ಜಾನ್ ಮಥಾಯ್', ಅರ್ದೇಶಿರ್ ದಲಾಲ್, ಎ.ಡಿ.ಶ್ರಾಫ್, ೧೯೪೪ ರ ಜನವರಿಯಲ್ಲಿ ಬಾಂಬೆ ಪ್ಲಾನ್, ತಯಾರಿಸಿದರು. ಇದು "Plan of Economic Development for India ", ಎಂದು ಪ್ರಸಿದ್ಧಿಯಾಗಿದೆ. ಜನವರಿ ೧೯೪೪ ರಲ್ಲಿ ಒಂದು ರಿಪೊರ್ಟ್, ಮತ್ತೊಂದು ೧೯೪೪ ರಲ್ಲಿ ಮತ್ತೊಂದು ವರದಿ ತಯಾರಾಯಿತು. ಜೆ. ಆರ್. ಡಿ. ಯವರಿಗೆ ಸಂದ ಪ್ರಶಸ್ತಿಗಳನ್ನು ಪ್ರತ್ಯೇಕವಾಗಿ ದಾಖಲಿಸಲಾಗಿದೆ. ಅವರಿಗೆ ಭಾರತ ಸರ್ಕಾರದ ಅತಿಹೆಚ್ಚಿನ ಬಹುಮಾನ, "ಭಾರತರತ್ನ ಪ್ರಶಸ್ತಿ", ೧೯೯೨ ರಲ್ಲಿ ದೊರೆಯಿತು. ನಿಧನ ೧೯೯೩ ಯಲ್ಲಿ, 'ಜೆ.ಆರ್.ಡಿ' ಯವರು, ಹವಾ ಬದಲಾವಣೆಗೆ ಜಿನಿವಾ ನಗರಕ್ಕೆ ಹೋಗಿದ್ದರು. ಅಲ್ಲಿ, ಅವರ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾಗಿ, ಅಲ್ಲಿನ ಆಸ್ಪತ್ರೆಯೊಂದರಲ್ಲಿ ತೀರಿಕೊಂಡರು. ಅವರ ಅಂತಿಮ ಸಮಯದಲ್ಲಿ ಅವರ ಬಳಿ ಆಪ್ತರ್ಯಾರೂ ಇರಲಿಲ್ಲ. ಅವರ ಪ್ರೀತಿಯ ಮಡದಿ, ಥೆಲ್ಲಿ ಟಾಟಾ ಯವರು ಮುಂಬಯಿನಲ್ಲಿ, 'ಸತತವಾಗಿ Coma ಸ್ತಿತಿಯಲ್ಲಿದ್ದು', ಭಾರತದ ಸಂಪತ್ತನ್ನು ಹೆಚ್ಚಿಸಿ ಔದ್ಯೋಗಿಕರಣಕ್ಕೆ ನಾಂದಿಯನ್ನು ಹಾಕಿ, ಉದ್ಯೋಗಕ್ಷೇತ್ರಕ್ಕೆ ಮಾದರಿಯಾದ ಮಾರ್ಗದರ್ಶನ ಮಾಡಿದ ಬಹುತೇಕ ಟಾಟಾ ಡೈರೆಕ್ಟರ್ ಗಳಂತೆ, 'ಜೆ.ಆರ್.ಡಿ 'ಯವರೂ, ಯೂರೋಪ್ ನಲ್ಲಿ ಮರಣಹೊಂದಿದರು . 'ಭಾರತೀಯ ಸಂಸತ್ತು', ಶೋಕಾಚರಣೆಯ ಪ್ರಯುಕ್ತ, ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿತ್ತು. ಜೆ.ಆರ್.ಡಿ.ನಡೆದು ಬಂದ ಹಾದಿ ೧೯೦೪ ಪ್ಯಾರಿಸ್ ನಲ್ಲಿ ಜನನ. ೧೯೦೯ ಫ್ರಾನ್ಸಿನಲ್ಲಿ ವಾಸಿಸುತ್ತಿದ್ದಾಗ ನೆರೆಯ ವೈಮಾನಿಕ Louis Bleriotರವರಿಂದ ವಿಮಾನದ ಬಗ್ಗೆ ಆಸಕ್ತಿ ಹುಟ್ಟಿತು. ೧೯೦೯-೧೭ ಮುಂಬಯಿಯ ಕೆಥೆಡ್ರೆಲ್ ಶಾಲೆಯಲ್ಲಿ ವಿದ್ಯಾಭ್ಯಾಸ. ೧೯೧೭-೧೮ ಜಪಾನಿನ ಯಾಕೋಹಾಮದಲ್ಲಿ ವಾಸ. ಇಂಗ್ಲೆಂಡ್ ನ ಕ್ರಾಮರ್ ಶಾಲೆಯಲ್ಲಿ ಒಂದು ವರ್ಷ ವಾಸ್ತವ್ಯ. ತಾಯಿ ಸೂನಿಮರಣ. ೧೯೨೪ ಫ್ರೆಂಚ್ ಸೈನ್ಯದಲ್ಲಿ ಒಂದು ವರ್ಷ ದುಡಿಮೆ. ೧೯೨೫ ಭಾರತಕ್ಕೆ ಬರಲು ಕರೆ ; ಅಪ್ರೆಂಟಿಸ್ ಅಗಿ ಟಾಟಾ ಸಂಸ್ಥೆಯಲ್ಲಿ ಸೇರ್ಪಡೆ. ೧೯೨೬ ಜಮ್ ಸೆಟ್ ಪುರದಲ್ಲಿ ಒಂದು ವರ್ಷ. ತಂದೆ ಫ್ರಾನ್ಸ್ ನಲ್ಲಿ ಮರಣ. ಟಾಟಾ ಕಂಪೆನಿಗೆ ಡೈರೆಕ್ಟರ್ ಆಗಿ ನೇಮಕ. ೧೯೨೯ ಭಾರತದ ಪ್ರಥಮ ಪೈಲೆಟ್ ಅಗಿ ಲೈಸೆನ್ಸ್ ಪ್ರಾಪ್ತಿ ೧೯೩೦'ಅಗಾಖಾನ್ ಏವಿಯೆಷನ್' ಪ್ರತಿನಿಧಿಸಿದ ಎರಡನೆಯ ಪೈಲೆಟ್, ಇಂಡಿಯ ಮತ್ತು ಯು.ಕೆ ಮಧ್ಯೆ. ೧೯೩೦ ಥೆಲ್ಮ ವಿಕಾಜಿಯವರ ಜೊತೆ ಮದುವೆ. ೧೯೩೨ ಟಾಟಾ ಎರ್ ಲೈನ್ಸ್ ಸ್ಥಾಪನೆ- ಕರಾಚಿ- ಮುಂಬಯಿ ಮಧ್ಯೆ ಪ್ರಥಮ ಹಾರಾಟ. ೧೯೩೮ ಟಾಟಾ ಸನ್ಸ್ ಸಂಸ್ಥೆಯ ಅಧ್ಯಕ್ಶರಾಗಿ ನೇಮಕ. ೧೯೪೪ Bombay Planತಯಾರಿ. ೧೯೪೫, "Tata Institute of Fundamental Research," ಸ್ಥಾಪಿಸಲು ಪ್ರಯತ್ನ. ಭಾರತದ nuclear programmes, leads the first delegation of industrialists to the UK and USA. ೧೯೪೭ " Doctor of Science, " (Honoris Causa), ಅಲಹಾಬಾದ್ ವಿಶ್ವ ವಿದ್ಯಾಲಯ. ೧೯೪೮, Air India ಒಟ್ಟಾಗಿ ಪರಿವರ್ತನೆ. ೧೯೫೩ "International Management Man" by ''The National Association of Foremen", Milwaukee ಚುನಾಯಿತರಾದರು. ೧೯೫೩ "Air India," nationalised, ಜೆ. ಆರ್. ಡಿ. ಟಾಟಾ ಚೇರ್ ಮನ್ ಆಗಿ ಆಯ್ಕೆ. ೧೯೫೪ Officer of the Legion of Honour ಫ್ರೆಂಚ್ ಸರ್ಕಾರದ ಪ್ರಶಸ್ತಿ. ೧೯೫೫ ಭಾರತ ಸರ್ಕಾರದ , ಪದ್ಮವಿಭೂಷಣ ಪ್ರಶಸ್ತಿ. ೧೯೫೮-೫೯ IATA ಅಧ್ಯಕ್ಷ ರಾಗಿ ಆಯ್ಕೆ. ೧೯೬೨, 30 ನೆಯ ವರ್ಷದ civil aviation in India ದಿನದಂದು " Re-enacted flight Karachi-Bombay " ಜ್ಞಾಪಕಾರ್ಥವಾಗಿ. ೧೯೬೪ Knight Commander of the Order of Gregory the Great, (Papal Honour) ೧೯೬೬ ಗೌರವ " Air Commodore, Indian Air Force " ೧೯೭೪ ಗೌರವ "Air Vice-Marshal, Indian Air Force," ಆಗಿ ನೇಮಕಾತಿ. ೧೯೭೫ "Sir Jehangir Ghandy Medal for Industrial Peace", ಪ್ರಶಸ್ತಿ. ೧೯೭೮ Morarji ದೇಸಾಯ್,"Chairmanship of Air India", ವಜಾ ಮಾಡಿದರು. ೧೯೭೮ ಗೌರವ, "Knight Commander's Cross of the Order of Germany." ೧೯೭೯ 'Tony Jannus' ಪ್ರಶಸ್ತಿ." ೧೯೮೧ "Doctor of Laws" (Honoris Causa), ಬಾಂಬೆ ವಿಶ್ವವಿದ್ಯಾಲಯ. ೧೯೮೨, Karachi-Bombay flight " Golden Jubilee of Indian civil aviation," ಜ್ಞಾಪಕಾರ್ಥವಾಗಿ ೧೯೮೩ "Commander of the Legion of Honour" ಪ್ರಶಸ್ತಿ. ೧೯೮೫. " Gold Air Medal, by the Federation Aeronautique Internationale" ಪ್ರಶಸ್ತಿ. ೧೯೮೬ "Bessemer Medal of the Institute of Metals, London" ಪ್ರಶಸ್ತಿ . ೧೯೮೬ "Edward Warner Award by the International Civil Aviation Organisation, ಪ್ರಶಸ್ತಿ ಪಡೆದರು. ೧೯೮೮ " Daniel Guggenheim Medal Award " ಪಡೆದರು. ೧೯೮೮ "Dadabhai Naoroji Memorial" ಪ್ರಶಸ್ತಿ. ೧೯೯೧ "Chairmanship of Tata Sons Limited", ನಿಂದ ನಿವೃತ್ತಿ. ರತನ್ ಟಾಟಾ ರವರಿಗೆ ಯಜಮಾನಿಕೆ ಒಪ್ಪಿಸಿದರು. ೧೯೯೨ " ಭಾರತರತ್ನ ಪ್ರಶಸ್ತಿ. " ೧೯೯೨ " UN Population ಪ್ರಶಸ್ತಿ". ೧೯೯೨ " Doctor of Engineering " (Honoris Causa), ರೂರ್ಕಿ ವಿಶ್ವವಿದ್ಯಾಲಯ. ೧೯೯೩ "Doctor of Literature" (Honoris Causa), Tata Institute of Social Sciences ನ ವತಿಯಿಂದ. ೧೯೯೩, ಜಿನಿವಾ ದಲ್ಲಿ ನಿಧನ. ಬಾಹ್ಯ ಸಂಪರ್ಕಗಳು "Beyond The Last Blue Mountain"-A Life of J.R.D.Tata By : Shri. R. M. Lala ಹಿಂದೂಸ್ಥಾನ್ ಟೈಮ್ಸ್ JRD Tata: The father of commercial aviation in India J. R. D. Tata (1904-1993): On the Islands of Tata, In the Ocean of India ಉಲ್ಲೇಖಗಳು ವರ್ಗ:ಭಾರತದ ಗಣ್ಯರು ವರ್ಗ:ಭಾರತರತ್ನ ಪುರಸ್ಕೃತರು ವರ್ಗ:ಭಾರತೀಯ ಉದ್ಯಮಿಗಳು ವರ್ಗ:ಬೊಂಬಾಯಿನ ಪ್ರಮುಖ ಪಾರ್ಸಿಗಳು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ವಿಶ್ವನಾಥನ್ ಆನಂದ್
https://kn.wikipedia.org/wiki/ವಿಶ್ವನಾಥನ್_ಆನಂದ್
thumb|250px|ವಿಶ್ವನಾಥನ್ ಆನಂದ್ ವಿಶ್ವನಾಥನ್ ಆನಂದ್ (ಜನನ: ಡಿಸೆಂಬರ್ ೧೧, ೧೯೬೯) ಭಾರತದ ಪ್ರಸಿದ್ಧ ಚದುರಂಗದ (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, ೨೦೦೪ ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು (ಗ್ಯಾರಿ ಕ್ಯಾಸ್ಪರೋವ್ ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್‍ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ. ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು! ವಿಶ್ವ ಚಾಂಪಿಯನ್‍ಶಿಪ್ ೧೯೯೫ ೧೯೯೫ ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಆಗಿನ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್‍ರ ವಿರುದ್ಧ ವಿಶ್ವ ಚಾಂಪಿಯನ್‍ಶಿಪ್ ಸರಣಿಯನ್ನು ಆಡಿದರು. ಮೊದಲ ಎಂಟು ಪಂದ್ಯಗಳು ಡ್ರಾ ಆದವು. ವಿಶ್ವ ಚಾಂಪಿಯನ್‍ಶಿಪ್ ಸರಣಿಯಲ್ಲಿ ಹಿಂದೆಂದೂ ಪ್ರಾರಂಭದಲ್ಲೇ ಇಷ್ಟು ಡ್ರಾ ಗಳು ನಡೆದಿರಲಿಲ್ಲ. ಒಂಬತ್ತನೆಯ ಪಂದ್ಯವನ್ನು ಆನಂದ್ ಗೆದ್ದರೂ ಮುಂದಿನ ಐದು ಪಂದ್ಯಗಳಲ್ಲಿ ನಾಲ್ಕನ್ನು ಸೋತರು. ಒಟ್ಟು ಸರಣಿಯನ್ನು ೭.೫ - ೧೦.೫ ರಿಂದ ಸೋತರು. ವಿಶ್ವ ಚಾಂಪಿಯನ್‍ಶಿಪ್ ೨೦೦೦ ೨೦೦೦ ದಲ್ಲಿ ಫಿಡೆ (ಚೆಸ್ ಸರಣಿಗಳನ್ನು ಆಯೋಜಿಸುವ ಅಂತಾರಾಷ್ಟ್ರೀಯ ಸಂಸ್ಥೆ) ಯಿಂದ ಆಯೋಜಿತ ವಿಶ್ವ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ರಷ್ಯದ ಅಲೆಕ್ಸೀ ಶಿರೋವ್ ರನ್ನು ೩.೫-೦.೫ ರಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರು. ವಿಶ್ವ ರಾಪಿಡ್ ಚೆಸ್ ಚಾಂಪಿಯನ್‍ಶಿಪ್ ೨೦೦೩ ಅಕ್ಟೋಬರ್ ೨೦೦೩ ರಲ್ಲಿ ಪ್ರಪಂಚದ ಹನ್ನೆರಡು ಅತ್ಯುತ್ತಮ ಆಟಗಾರರಲ್ಲಿ ಹತ್ತು ಜನರು ಪಾಲ್ಗೊಂಡ ವೇಗದ ಚೆಸ್ ಚಾಂಪಿಯನ್‍ಶಿಪ್ ನಲ್ಲಿ ಗೆದ್ದರು. (ವೇಗದ ಚೆಸ್ ಆಟಗಳಲ್ಲಿ ಆಟಗಾರರು ತಮ್ಮ ನಡೆಗಳನ್ನು ನಡೆಸಲು ಕಡಿಮೆ ಸಮಯ ಹೊಂದಿರುತ್ತಾರೆ. ಈ ಸರಣಿಯಲ್ಲಿ ಪ್ರತಿ ಪಂದ್ಯದ ಆರಂಭದಲ್ಲಿ ಆಟಗಾರರಿಗೆ ೨೫ ನಿಮಿಷಗಳ ಸಮಯವಿದ್ದು, ಪ್ರತಿ ನಡೆಯ ನಂತರ ೧೦ ಸೆಕೆಂಡುಗಳಷ್ಟು ಹೆಚ್ಚುವರಿ ಸಮಯ ಸಿಕ್ಕುತ್ತಿತ್ತು.) ವಿಶ್ವ ಪಂದ್ಯಾವಳಿ ೨೦೦೭ ಮೆಕ್ಸಿಕೊ ನಗರದಲ್ಲಿ ನಡೆದ ೨೦೦೭ರ ಚದುರಂಗ ವಿಶ್ವ ಪಂದ್ಯಾವಳಿಯಲ್ಲಿ ಆನಂದ್ ಒಂದು ಪಂದ್ಯವನ್ನೂ ಸೋಲದೆ ಗೆದ್ದು, ಸೆಪ್ಟೆಂಬರ್ ೨೯ರಂದು ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದರು. ಇತರ ಸರಣಿಗಳು ಆನಂದ್ ಗೆದ್ದಿರುವ ಇತರ ಕೆಲವು ಪ್ರಸಿದ್ಧ ಸರಣಿಗಳು: ಕೋರಸ್ ಸರಣಿ (೨೦೦೩) ಕೋರಸ್ ಸರಣಿ (೨೦೦೪) ಡಾರ್ಟ್‍ಮಂಡ್ ಸರಣಿ (೨೦೦೪) ಕಳೆದ ಹತ್ತು ವರ್ಷಗಳ ಉದ್ದಕ್ಕೂ ಪ್ರಪಂಚದ ಐದು ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ಆನಂದ್ ಇದ್ದಾರೆ. ಇದರಲ್ಲಿ ಬಹುಕಾಲ ಪ್ರಪಂಚದ ಮೂರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಬಾಹ್ಯ ಸಂಪರ್ಕಗಳು ಫಿಡೆ ತಾಣದಲ್ಲಿ ಆನಂದ್‍ರ ರೇಟಿಂಗ್ ಆನಂದ್‍ರ ಕೆಲವು ಪ್ರಸಿದ್ಧ ಪಂದ್ಯಗಳನ್ನು ನೋಡಿ ವರ್ಗ:ಭಾರತದ ಚದುರಂಗ ಕ್ರೀಡಾಪಟುಗಳು ವರ್ಗ:ಕ್ರೀಡಾಪಟುಗಳು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಕ್ರಿಸ್ಮಸ್
https://kn.wikipedia.org/wiki/ಕ್ರಿಸ್ಮಸ್
thumb|ಬ್ರಾಂಜಿನೋ ಕೃತಿ: ಕುರುಬರ ಆರಾಧನೆ ಕ್ರಿಸ್ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಕ್ರೈಸ್ತ ಸುವಾರ್ತೆ(ಗಾಸ್ಪೆಲ್)ಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. ಜುಡಾಯಿಸಮ್ನ (ಯಹೂದ್ಯ ಧರ್ಮ) ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್ನ ವಂಶದಲ್ಲಿ ಮೆಸ್ಸಾಯ (ದೇವರ ದೂತ / ರಕ್ಷಕ) ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ. ದಿನಾಂಕ ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ಜಪಾನ್ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ ಎರಡನೆ ಶತಮಾನದಿಂದ ಆರಂಭವಾಯಿತು. ಕ್ರೈಸ್ತ ಚರ್ಚ್ ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ ಡಿಸೆಂಬರ್ ೨೫ ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್ಮಸ್ ನಂತರದ ಹನ್ನೆರಡನೆ ದಿನವನ್ನು ಎಪಿಫನಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. thumb|right|ಯೇಸುಕ್ರಿಸ್ತ ಹುಟ್ಟಿದ ಹನ್ನೆರಡನೆಯ ದಿನದಂದು ಮೂರು ವಿವೇಕಿಗಳು ನೋಡಲು ಬಂದಿರುವುದು. ಹೊರನಾಡಿಗರಿಗೆ ಯೇಸು ಪ್ರಕಟಗೊಂಡ ಈ ಬಗೆಯನ್ನು ’ಎಪಿಫನಿ’ ಎನ್ನುತ್ತಾರೆ. ಕ್ರಿಸ್ಮಸ್ ಹೊಸ ವರ್ಷದ ಸಮೀಪ ಬರುವುದರಿಂದ ಕ್ರಿಸ್ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು. ನಂಬಿಕೆಗಳು ಮತ್ತು ಆಚರಣೆಗಳು ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್ಮಸ್ಸಿನೊಂದಿಗೆ ಸಂಬಂಧ ಹೊಂದಿವೆ. ಕ್ರಿಸ್ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ. ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು ಸಾಂಟಾ ಕ್ಲಾಸ್ ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. "ಸಾಂಟಾ ಕ್ಲಾಸ್" ಎಂಬುದು "ಸಂತ ನಿಕೋಲಾಸ್" ಎಂಬುದರ ಅಪಭ್ರಂಶ. thumb|ಸಾಂಟಾ ಕ್ಲಾಸ್ ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ. ಅಲಂಕಾರಗಳು thumb|ಕ್ರಿಸ್ಮಸ್ ಮರ ಎಲ್ಲ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ "ಹಿಮದ ಮನುಷ್ಯ" ಮೊದಲಾದ ಅಲಂಕಾರಗಳೂ ಸಾಮಾನ್ಯ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ. ಸಾಮಾಜಿಕ ಆಚರಣೆಗಳು ಕ್ರಿಸ್ಮಸ್ಗೆ ಸಂಬಂಧಪಟ್ಟ ಆಚರಣೆಗಳು ಡಿಸೆಂಬರ್ ತಿಂಗಳ ಆರಂಭದಲ್ಲಿ ಅಡ್ವೆಂಟ್ ನಿಂದ ಆರಂಭವಾಗುತ್ತವೆ - ಇದು ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬ. ಯೇಸುಕ್ರಿಸ್ತನನ್ನು ಬರಮಾಡಿಕೊಳ್ಳುವ ಪ್ರಕ್ರಿಯೆಯಾಗಿ ಮನೆಮನೆಗೂ ತೆರಳಿ ಹಾಡುಗಳನ್ನು ಹಾಡಲಾಗುತ್ತದೆ (ಕ್ರಿಸ್ಮಸ್ ಕ್ಯಾರಲ್). ಕ್ರಿಸ್ಮಸ್ ಔತಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಅನೇಕ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ವಿಶಿಷ್ಟವಾದ ತಿನಿಸುಗಳುಂಟು. ಈ ತಿನಿಸುಗಳನ್ನು ಪರಸ್ಪರ ಹಂಚಿಕೊಳ್ಳುವುದರಲ್ಲಿ ಒಂದಿ ವಿಶಿಷ್ಟ ಅನುಭೂತಿ ಇದೆ. ಧಾರ್ಮಿಕ ಆಚರಣೆಗಳು ಅಡ್ವೆಂಟ್ ಶುರುವಾಗುತ್ತಿದ್ದಂತೆ ಚರ್ಚುಗಳು ಕ್ರಿಸ್ಮಸ್ಸಿಗೆ ತೆರೆದುಕೊಳ್ಳುತ್ತವೆ. ಕ್ರಿಸ್ಮಸ್ ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಕ್ರಿಸ್ಮಸ್ ಈವ್ ಮತ್ತು ಕ್ರಿಸ್ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್ಗಳಲ್ಲಿ ನಡೆಯುತ್ತವೆ. ಕ್ರಿಸ್ಮಸ್ ನಂತರ ಹನ್ನೆರಡನೆ ದಿನದಂದು "ಎಪಿಫನಿ" ಆಚರಣೆಗಳ ನಂತರ ಕ್ರಿಸ್ಮಸ್ ಕಾಲ ಮುಗಿಯುತ್ತದೆ. ಹೊರಗಿನ ಸಂಪರ್ಕಗಳು ಅಂತರ ಜಾಲದಲ್ಲಿ ಕ್ರಿಸ್ಮಸ್ ಕ್ರಿಸ್ಮಸ್ ಮೂಲ ಕ್ರಿಸ್ಮಸ್ - ಬೈಬಲ್ ಉತ್ತರ ಜಪಾನ್ನಲ್ಲಿ ಕ್ರಿಸ್ಮಸ್ ಕ್ರಿಸ್ಮಸ್ನ ಇತಿಹಾಸ ಬೆಳಕಿನೊಂದಿಗೆ ಆಚರಿಸುವ ಸಂಪ್ರದಾಯದ ಬಗ್ಗೆ ವಿಲಿಯಮ್ ಟಿ ಟಿಘೆಯವರ "Calculating Christmas" ಕ್ರಿಸ್ಮಸ್ ಉಡುಗೊರೆಗಳ ಕಥೆ ಕ್ರಿಸ್ಮಸ್ ಗ್ರಾಫಿಕ್ಸ್ ಕ್ಯಾಥೊಲಿಕ್ ಕ್ರಿಸ್ಮಸ್ ಅಂತರಜಾಲ ಕ್ರಿಸ್ಮಸ್ ಕೌಂಟ್ಡೌನ್ ವರ್ಗ:ಕ್ರೈಸ್ತ ಧರ್ಮ ವರ್ಗ:ಹಬ್ಬಗಳು ವರ್ಗ:ಪ್ರಮುಖ ದಿನಗಳು
ತುಳಸಿ ಪೂಜೆ
https://kn.wikipedia.org/wiki/ತುಳಸಿ_ಪೂಜೆ
ತುಳಸಿ ಪೂಜೆ - ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡವನ್ನೂ ನೆಟ್ಟು ಪೂಜಿಸುವ ರೂಢಿ ಇದೆ. ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ. ಈ ದಿನದಂದು ತುಳಸಿ ಕಟ್ಟೆಯನ್ನು ರಂಗೋಲೆ, ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಕೃಷ್ಣನ ಮೂರ್ತಿಯಿರಿಸಿ ಪೂಜಿಸಲಾಗುತ್ತದೆ. ದೀಪಾವಳಿಯಂತೆ ಈ ದಿನವೂ ಪಟಾಕಿಯ ಮಹಾಪೂರವೇ ಜರುಗುತ್ತದೆ. ತುಳಸಿ ಪುರಾಣ ತುಳಸಿ, ಜಲಂಧರನ ಹೆಂಡತಿಯಾದ ವೃಂದ. ರಾಕ್ಷಸನಾದ ಜಲಂಧರನ ಕಿರುಕುಳ ತಾಳಲಾಗದೆ ದೇವತೆಗಳು ವಿಷ್ಣುವಿನ ಸಹಾಯಕ್ಕೆ ಮೊರೆ ಹೋದರಂತೆ. ಪತಿವ್ರತೆಯಾದ ವೃಂದಳ ತಪೋಶಕ್ತಿಯಿಂದ ಜಲಂಧರನು ಅತ್ಯಂತ ಶಕ್ತಿಶಾಲಿಯಾದನಂತೆ. ವಿಷ್ಣು ಜಲಂಧರನ ವೇಷ ಧರಿಸಿ ವೃಂದಳ ಪಾತಿವ್ರತ್ಯ ಶಕ್ತಿಯನ್ನು ಭಂಗ ಮಾಡಿದನಂತೆ. ಜಲಂಧರನು ರಣಭೂಮಿಯಲ್ಲಿ ಮಡಿದನಂತೆ. ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಬೂದಿಯಾದಳಂತೆ. ಮುಂದೆ ಆ ವೃಂದಳೇ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ. ನಂತರ ಇವಳು ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಲನೆ(ಹೋಲಿಕೆ) ಇಲ್ಲವಾದ್ದರಿಂದ,ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಣುವು ಮದುವೆಯಾದನು. ಭಗವಂತೋತ್ಥಾನ ಆಷಾಢಮಾಸ ಶುಕ್ಲ ಪಕ್ಷದ ಏಕಾದಶಿಯಲ್ಲಿ ಕ್ಷೀರಸಾಗರದಲ್ಲಿ ಶೇಷಶಾಯಿಯಾದ ಭಗವಂತನನ್ನು ಈ ದಿನ ರಾತ್ರಿಯಲ್ಲಿ ಏಳಿಸುವುದರಿಂದ ಈ ದ್ವಾದಶಿಗೆ ಭಗವಂತೋತ್ಥಾನ ರೂಪವಾದ ಉತ್ಥಾನದ್ವಾದಶೀ ಎಂದು ಹೆಸರು ಬಂದಿದೆ. ಆಷಾಢ ಶುಕ್ಲಪಕ್ಷದಲ್ಲಿ ಪ್ರಾರಂಭಿಸಿದ ಚಾತುರ್ಮಾಸ್ಯ ವ್ರತವನ್ನು ಈ ದಿವಸ ಮುಕ್ತಾಯಗೊಳಿಸಬೇಕು. ವ್ರತಾಚರಣೆ ಈ ದ್ವಾದಶಿಯಲ್ಲಿ ಕ್ಷೀರಾಬ್ಧಿಶಯನ ವ್ರತವನ್ನು ಆಚರಿಸುತ್ತಾರೆ. ತುಲಸೀ ಸಹಿತ ಧಾತ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥವಾಗಿ ಈ ವ್ರತವನ್ನು ಮಾಡುವುದು ಇಂದಿಗೂ ರೂಢಿಯಲ್ಲಿದೆ. ಇದರ ದ್ಯೋತಕವಾಗಿ ಉತ್ಥಾನ ದ್ವಾದಶೀ ದಿವಸ ಬೆಳಗ್ಗೆ ಬೃಂದಾವನದಲ್ಲಿ ಧಾತ್ರಿಯನ್ನು (ಕಾಯಿಸಹಿತವಾದ ನೆಲ್ಲಿಗಿಡವನ್ನು) ನೆಟ್ಟು ಅಲ್ಲಿ ಭಗವಂತನನ್ನು ಕೂರಿಸಿ ನೀರಾಜನಾದಿಗಳಿಂದ ಪುಜಿಸುತ್ತಾರೆ. ರಾತ್ರಿಯಲ್ಲಿ ಬೃಂದಾವನವನ್ನು ಪುಷ್ಪಾದಿಗಳಿಂದಲಂಕರಿಸಿ ಭಗವಂತನನ್ನು ಆ ಬೃಂದಾವನ ದಲ್ಲಿಟ್ಟು ಉತ್ಸವಮಾಡುತ್ತಾರೆ. ಮನೆಗಳಲ್ಲಿ ಬೃಂದಾವನವನ್ನು ಪುಜಿಸಿ ದೀಪಗಳಿಂದ ಅಲಂಕರಿಸಿ ಪುಜಿಸುತ್ತಾರೆ. ರಾತ್ರಿ ಭಗವಂತನಿಗೆ ಕ್ಷೀರಾನ್ನನಿವೇದನ ಒಂದು ವಿಶೇಷ. ಹೊಸ ನೆಲ್ಲಿಕಾಯನ್ನು ಈ ದ್ವಾದಶಿಯಿಂದ ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ಷೀರಾಬ್ಧಿ ಯಲ್ಲಿ ಶಯನಿಸಿದ ಭಗವಂತ ಈ ದ್ವಾದಶಿಯಲ್ಲಿ ತುಲಸೀ ಆವಾಸವಾದ ಬೃಂದಾವನದಲ್ಲಿ ತುಲಸೀ ಲಕ್ಷ್ಮಿಯರೊಡನೆ ಏಳುವುದರ ಸಂಕೇತವಾಗಿ ಈ ಪೂಜೆ ಇಂದಿಗೂ ನಡೆಯುವ ರೂಢಿಯಿದೆ. ಈ ದಿವಸದಲ್ಲಿ ದೀಪೋತ್ಸವ ವಿಶೇಷ ಪುಣ್ಯಪ್ರದ. ಈ ದ್ವಾದಶಿಯಲ್ಲಿ ಧಾತ್ರೀ ತುಲಸೀ ಸಹಿತ ಲಕ್ಷ್ಮೀನಾರಾಯಣನನ್ನು ಪುಜಿಸುವುದರಿಂದ ಸರ್ವವಿಧವಾದ ಪಾತಕಗಳೂ ನಶಿಸುತ್ತವೆ-ಎಂದು ವ್ರತಮಹಾತ್ಮ್ಯೆ ತಿಳಿಸುತ್ತದೆ. ವರ್ಗ:ಹಿಂದೂ ಧರ್ಮದ ಹಬ್ಬಗಳು
ಕೆಂಪು ಕೋಟೆ
https://kn.wikipedia.org/wiki/ಕೆಂಪು_ಕೋಟೆ
ಕೆಂಪು ಕೋಟೆ ದೆಹಲಿಯ ಸಮೀಪ ಆಗ್ರಾ ನಗರದಲ್ಲಿ ಇದೆ. ಪ್ರಸಿದ್ಧ ತಾಜ್ ಮಹಲ್ ಇಂದ ೨.೫ ಕಿಮೀ ದೂರದಲ್ಲಿದೆ. ಕೆಂಪು ಕೋಟೆ ನಿಜವಾಗಿ ಕೋಟೆಯಿಂದ ಸುತ್ತುವರಿದ ಅರಮನೆಗಳ ನಗರ ಎನ್ನಬಹುದು. ಚರಿತ್ರೆ ೧೬ ನೆಯ ಶತಮಾನದ ಕೊನೆಯಲ್ಲಿ ಅಕ್ಬರನ ಕಾಲದಲ್ಲಿ ಮೊಘಲರು ಈ ಕೋಟೆಯನ್ನು ಲೋದಿ ವಂಶದಿಂದ ಪಡೆದರು. ಅಕ್ಬರ್ ತನ್ನ ಆಡಳಿತದ ಸಮಯದಲ್ಲಿ ರಾಜಧಾನಿಯನ್ನು ದೆಹಲಿಯಿಂದ ಆಗ್ರಾಕ್ಕೆ ವರ್ಗಾಯಿಸಿದನು. ಇದರಿಂದಾಗಿ ಆಗ್ರಾ ನಗರ ಹೆಚ್ಚು ಸಮೃದ್ಧವಾಯಿತೆನ್ನಬಹುದು. ಅಕ್ಬರ್ ಸಾಮಾನ್ಯವಾಗಿ ಕೋಟೆ-ಕಟ್ಟಡಗಳನ್ನು ಕಟ್ಟಿಸುತ್ತಿದ್ದದ್ದು ಕೆಂಬಣ್ಣದ ಕಲ್ಲಿನಿಂದ, ಮತ್ತು ಕೆಂಪು ಕೋಟೆಯಲ್ಲಿಯೂ ಇದೇ ಪ್ರಭಾವವನ್ನು ಕಾಣಬಹುದು. ಕೆಂಪು ಕೋಟೆ ಕೇವಲ ಕೋಟೆಯಾಗಿ ಉಳಿಯದೆ ರಾಜ-ರಾಣಿಯರ ನಿವಾಸವಾಗಿಯೂ ಉಪಯೋಗಗೊಳ್ಳಲಾರಂಭಿಸಿತು. ಕೆಂಪು ಕೋಟೆ ತನ್ನ ಇಂದಿನ ರೂಪ ಪಡೆದದ್ದು ಅಕ್ಬರನ ಮೊಮ್ಮಗ ಷಾ ಜಹಾನನ ಕಾಲದಲ್ಲಿ. ಷಾ ಜಹಾನ್ ನ ಕಾಲದ ಶಿಲ್ಪಕಲೆ ಶ್ವೇತ ಅಮೃತಶಿಲೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿತ್ತು (ಉದಾಹರಣೆಗೆ ತಾಜ್ ಮಹಲ್). ಷಾ ಜಹಾನ್ ಇಲ್ಲಿದ್ದ ಕೆಲವು ಕಟ್ಟಡಗಳನ್ನು ಉರುಳಿಸಿ ತನ್ನದೇ ಆದ ಹೊಸ ಕಟ್ಟಡಗಳನ್ನು ನಿರ್ಮಿಸಲು ಆರಂಭಿಸಿದ. ನಂತರದ ವರ್ಷಗಳಲ್ಲಿ ಷಾ ಜಹಾನ್ ನ ಮಗ ಔರಂಗಜೇಬ್ ಷಾ ಜಹಾನನನ್ನು ಇದೇ ಕೆಂಪು ಕೋಟೆಯಲ್ಲಿ ಬಂಧನದಲ್ಲಿರಿಸಿದ. ನಂಬಿಕೆಯಂತೆ, ಷಾ ಜಹಾನ್ ನಿಧನನಾಗಿದ್ದು ಕೆಂಪು ಕೋಟೆಯ ಮುಸಮ್ಮನ್ ಬುರ್ಜ್ ಎಂಬ ಗೋಪುರದಲ್ಲಿ - ಇದು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದ್ದು ತಾಜ್ ಮಹಲ್ ನ ಅದ್ಭುತ ದೃಶ್ಯ ಇಲ್ಲಿಗೆ ಕಾಣುತ್ತದೆ. ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಯುದ್ಧ ಇದೇ ಸ್ಥಳದಲ್ಲಿ ಜರುಗಿತು. ವಿನ್ಯಾಸ ಇಡೀ ಕೋಟೆ ಅರ್ಧಚಂದ್ರಾಕಾರವಾಗಿದ್ದು, ಕೋಟೆ ಗೋಡೆಗಳು ೨೧ ಮೀ ಎತ್ತರ ಇವೆ. ಕೋಟೆಯ ಸುತ್ತಲೂ ಒಂದು ಕಾಲುವೆ ಹರಿಯುತ್ತದೆ. ಮುಖ್ಯ ದ್ವಾರ (ದೆಹಲಿ ದ್ವಾರ) ಯಮುನಾ ನದಿಯ ಕಡೆಗಿದೆ. ಕೋಟೆಯ ಸುತ್ತಳತೆ ೨.೪ ಕಿಮೀ. ಕೋಟೆಯಲ್ಲಿ ಎರಡು ದ್ವಾರಗಳಿವೆ - ದೆಹಲಿ ದ್ವಾರ ಮತ್ತು ಲಾಹೋರ್ ದ್ವಾರ (ಅಥವಾ ಅಮರ್ ಸಿಂಗ್ ದ್ವಾರ). ದೆಹಲಿ ದ್ವಾರ ಹೆಚ್ಚು ವೈಭವದಿಂದ ಕೂಡಿದೆ. ಇಂದಿಗೂ ಭಾರತೀಯ ಭೂಸೈನ್ಯ (ಮುಖ್ಯವಾಗಿ ರಜಪುಟಾಣಾ ರೈಫಲ್ಸ್ ತುಕಡಿ) ಕೋಟೆಯ ಈ ಭಾಗವನ್ನು ಉಪಯೋಗಿಸುವುದರಿಂದ ಈ ದ್ವಾರ ಸಾರ್ವಜನಿಕರಿಗೆ ತೆರೆದಿರುವುದಿಲ್ಲ. ಪ್ರವಾಸಿಗಳು ಸಾಮಾನ್ಯವಾಗಿ ಉಪಯೋಗಿಸುವುದು ಲಾಹೋರ್ ದ್ವಾರವನ್ನು (ಲಾಹೋರ್ ನ ಕಡೆ ಮುಖ ಮಾಡಿರುವುದರಿಂದ ಈ ಹೆಸರು). ಶಿಲ್ಪಕಲೆ ಶಿಲ್ಪಕಲೆಯ ದೃಷ್ಟಿಯಿಂದ ಈ ಕೋಟೆಯಲ್ಲಿ ಹಿಂದೂ ಮತ್ತು ಮುಸ್ಲಿಮ್ ಶೈಲಿಗಳ ಸಮಾಗಮವನ್ನು ಕಾಣಬಹುದು. ಒಟ್ಟಾರೆ ಶಿಲ್ಪಕಲೆ ಮುಸ್ಲಿಮ್ ಶೈಲಿಗಳಿಂದ ಸ್ಫೂರ್ತಿ ಪಡೆದಿದ್ದರೂ, ಕೆಲವು ಅಲಂಕಾರಗಳಲ್ಲಿ ಹಿಂದೂ ಶಿಲ್ಪಕಲೆಯ ಪ್ರಭಾವವನ್ನು ಕಾಣಬಹುದು. ಮುಖ್ಯ ಭಾಗಗಳು ಅಂಗೂರಿ ಬಾಗ್: ಸುಂದರ ವಿನ್ಯಾಸವುಳ್ಳ ಉದ್ಯಾನಗಳು ದಿವಾನ್-ಎ-ಆಮ್: ಸಾರ್ವಜನಿಕರ ಸಭೆ ಸೇರುತ್ತಿದ್ದ ಸ್ಥಳ; ಪ್ರಸಿದ್ಧ ನವಿಲು ಸಿಂಹಾಸನ ಇದ್ದದ್ದು ಈ ಸಭಾಮಂಟಪದಲ್ಲಿ ದಿವಾನ್-ಎ-ಖಾಸ್: ಮುಖ್ಯ ಜನರನ್ನು ರಾಜ ಬರಮಾಡಿಕೊಳ್ಳುತ್ತಿದ್ದ ಸ್ಥಳ - ಜಹಾಂಗೀರನ ಕಪ್ಪು ಸಿಂಹಾಸನ ಇಲ್ಲಿದೆ ಚಿನ್ನದ ಪಡಸಾಲೆಗಳು: ಬೆಂಗಾಲಿ ಗುಡಿಸಲುಗಳ ಮಾದರಿಯ ಛಾವಣಿಗಳಿರುವ ಹೊಂಬಣ್ಣದ ಪಡಸಾಲೆಗಳು ಜಹಾಂಗೀರಿ ಮಹಲ್: ಅಕ್ಬರ್ ತನ್ನ ಮಗ ಜಹಾಂಗೀರನಿಗೆ ಕಟ್ಟಿಸಿಕೊಟ್ಟ ಅರಮನೆ ಖಾಸ್ ಮಹಲ್: ಅಮೃತಶಿಲೆಯ ಅರಮನೆ, ಅಮೃತಶಿಲೆಯ ಮೇಲಿನ ಚಿತ್ರಕಲೆಯ ಅತ್ಯುತ್ತಮ ನಿದರ್ಶನ ಮಚ್ಛಿ ಭವನ್: ಒಂದು ಕಾಲದಲ್ಲಿ ಕೊಳ ಮತ್ತು ಕಾರಂಜಿಗಳನ್ನು ಹೊಂದಿದ್ದು ಉತ್ಸ್ವಗಳಿಗೆ ಉಪಯೋಗವಾಗುತ್ತಿತ್ತು ಮೀನಾ ಮಸೀದಿ: ಸಣ್ಣ ಮಸೀದಿ, ಸಾರ್ವಜನಿಕರಿಗೆ ಪ್ರವೇಶವಿಲ್ಲ ಮೋತಿ ಮಸೀದಿ: ಷಾ ಜಹಾನನ ವೈಯಕ್ತಿಕ ಉಪಯೋಗಕ್ಕಾಗಿ ಮಸೀದಿ ಮುಸಮ್ಮನ್ ಬುರ್ಜ್: ಅಷ್ಟ ಮುಖವಾದ ಮಂಟಪ - ತಾಜ್ ಮಹಲ್ ಇಲ್ಲಿಂದ ಕಾಣುತ್ತದೆ ನಗೀನಾ ಮಸೀದಿ: ಆಸ್ಥಾನದ ಮಹಿಳೆಯರಿಗಾಗಿ ಮಸೀದಿ ಜನಾನಾ ಮೀನಾ ಬಜಾರ್: ಮಹಿಳಾ ವರ್ತಕರು ಮಾತ್ರ ಅಂಗಡಿಗಳನ್ನು ತೆರೆದಿದ್ದ ಮಾರುಕಟ್ಟೆ ನೌಬತ್ ಖಾನಾ: ರಾಜನಿಗಾಗಿ ಸಂಗೀತ ಕಛೇರಿಗಳು ನಡೆಯುತ್ತಿದ್ದ ಸ್ಥಳ ರಂಗ್ ಮಹಲ್: ರಾಣಿಯರು ವಾಸಿಸುತ್ತಿದ್ದ ಅರಮನೆ ಶಾಹಿ ಬುರ್ಜ್: ಷಾ ಜಹಾನನ ಕಛೇರಿ ಶೀಶ್ ಮಹಲ್: ಗೋಡೆಗಳ ಪೂರ ಸಣ್ಣ ಕನ್ನಡಿಗಳಿರುವ ಕೋಣೆ ಇತರ ಮಾಹಿತಿ ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿಗಳ ಭಾಷಣ ನಡೆಯುವುದು ಕೆಂಪು ಕೋಟೆಯಲ್ಲಿಯೇ. ಇದೇ ದಿನ ಭಾರತೀಯ ಸೈನ್ಯದ ಅನೇಕ ತುಕಡಿಗಳು ಇಲ್ಲಿ ಪ್ರಭಾತಭೇರಿ (ಪೆರೇಡ್) ನಡೆಸುತ್ತವೆ. ಹಾಗೆಯೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಸಾಂಸ್ಕೃತಿಕ ಪ್ರದರ್ಶನಗಳ ಮೆರವಣಿಗೆ ನಡೆಯುತ್ತದೆ. ಇದೇ ಸಂದರ್ಭದಲ್ಲಿಯೇ ಭಾರತದ ರಕ್ಷಣೆಗೆ ಅತ್ಯುನ್ನತ ಸೇವೆ ನೀಡಿದ ಸೈನಿಕರಿಗೆ ಪರಮ್ ವೀರ್ ಚಕ್ರ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ. ೧೯೮೩ ರಲ್ಲಿ ಯುನೆಸ್ಕೋ ಈ ಕೋಟೆಯನ್ನು ಪ್ರಪಂಚ ಸಂಸ್ಕೃತಿ ಕ್ಷೇತ್ರ ಎಂದು ಘೋಷಿಸಿತು. ಬಾಹ್ಯ ಸಂಪರ್ಕಗಳು ಕೆಂಪು ಕೋಟೆಯ ನಕ್ಷೆ ಭಾರತ ಸರ್ಕಾರದ ತಾಣದಲ್ಲಿ ಕೆಂಪು ಕೋಟೆಯ ಬಗ್ಗೆ ಮಾಹಿತಿ ಆಕರಗಳು http://whc.unesco.org/sites/251.htm http://www.aviewoncities.com/agra/fort.htm http://www.webindia123.com/monuments/forts/agra.htm http://whc.unesco.org/whreview/article1.html ವರ್ಗ:ಇತಿಹಾಸ ವರ್ಗ:ಪ್ರವಾಸೋದ್ಯಮ ವರ್ಗ:ವಿಶ್ವ ಪರಂಪರೆಯ ತಾಣಗಳು ವರ್ಗ:ಪ್ರವಾಸಿ ತಾಣಗಳು
ಮಹಾತ್ಮ ಗಾಂಧಿ
https://kn.wikipedia.org/wiki/ಮಹಾತ್ಮ_ಗಾಂಧಿ
ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು. ಆರಂಭಿಕ ಜೀವನ ಮತ್ತು ಹಿನ್ನೆಲೆ right|thumb|ಸಬರಮತಿ ಆಶ್ರಮದಲ್ಲಿನ ಮಹಾತ್ಮ ಗಾಂಧಿಯವರ ಕೋಣೆ thumb|left|ಸಬರಮತಿ ಆಶ್ರಮ, ಗುಜರಾತ್‌‌ನಲ್ಲಿರುವ ಗಾಂಧಿಯವರ ಮನೆ thumb|upright|ನ್ಯೂಯಾರ್ಕ್‌ನ ಯೂನಿಯನ್ ಸ್ಕ್ವೇರ್‌ನಲ್ಲಿ ಗಾಂಧಿಯ ಪ್ರತಿಮೆ.|link=Special:FilePath/Gandhi-snow-net.jpg upright|thumb|ಯುವ ಗಾಂಧಿ ಸನ್.೧೮೮೬. left|thumb|ಗಾಂಧಿ ಮತ್ತು ಕಸ್ತೂರಬಾ (೧೯೦೨) ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಗಾಂಧಿ ಎಂದರೆ ಗುಜರಾತಿಯಲ್ಲಿ "ಕಿರಾಣಿ ವರ್ತಕ" (L.R.ಗಾಲಾ, ಪ್ರಸಿದ್ಧ ಕಂಬೈನಡ್ ಡಿಕ್ಷನರಿ, ಇಂಗ್ಲೀಷ್-ಇಂಗ್ಲೀಷ್-ಗುಜರಾತಿ & ಗುಜರಾತಿ-ಗುಜರಾತಿ-ಇಂಗ್ಲೀಷ್, ನವ್‌ನೀತ್‌), ಅಥವಾ ಹಿಂದಿಯಲ್ಲಿ "ಸುಗಂಧಕಾರ" (ಭಾರ್ಗವರ ಸ್ಟ್ಯಾಂಡರ್ಡ್ ಇಲ್ಲ್ಯೂಸ್ಟ್ರೇಟೆಡ್‌ ಡಿಕ್ಷನರಿ ಹಿಂದಿ-ಇಂಗ್ಲೀಷ್ ). ಯವರು ೧೮೬೯ರ ಅಕ್ಟೋಬರ್ ೨ ರಂದು ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು. ಅವರ ತಂದೆ ಕರಮ್‌ಚಂದ್ ಗಾಂಧಿ(೧೮೨೨-೧೮೮೫)ಯವರು, ಹಿಂದೂ ಮೋಧ್‌ ಸಮುದಾಯದವರಾಗಿದ್ದು, ಬ್ರಿಟಿಷ್‌ ಭಾರತದ ಕಾಠೀಯಾವಾಡ್ ನಿಯೋಗದಲ್ಲಿನ ಒಂದು ಸಣ್ಣ ರಾಜಾಡಳಿತದ ರಾಜ್ಯವಾದ ಪೋರ ಬಂದರ್ ರಾಜ್ಯದ ದಿವಾನ್‌ (ಪ್ರಧಾನ ಮಂತ್ರಿ) ಆಗಿದ್ದರು. ಅವರ ತಾಯಿ ಪುತಲೀಬಾಯಿಯವರು ಹಿಂದೂ ಪ್ರಣಾಮಿ ವೈಷ್ಣವ ಸಮುದಯದವರಾಗಿದ್ದು, ಕರಮ್‌ಚಂದ್‌ರ ನಾಲ್ಕನೆಯ ಪತ್ನಿಯಾಗಿದ್ದರು; ಮೊದಲ ಮೂರು ಪತ್ನಿಯರು ಮೇಲುನೋಟಕ್ಕೆ ವ್ಯಕ್ತವಾಗುವಂತೆ ಶಿಶುಜನನದ ಸಮಯದಲ್ಲಿ ಮೃತರಾಗಿದ್ದರು. ಧರ್ಮನಿಷ್ಠ ತಾಯಿಯೊಂದಿಗೆ ಮತ್ತು ಆ ಪ್ರಾಂತ್ಯದ ಜೈನ್‌ ಸಂಪ್ರದಾಯಗಳೊಂದಿಗೆ ಬೆಳೆದ ಬಾಲಕ ಮೋಹನ್‌ದಾಸ್‌ ತಮ್ಮ ಮುಂದಿನ ಪ್ರೌಢ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಬಹುದಾದಂತಹ ಪ್ರಭಾವಗಳನ್ನು ಸಾಕಷ್ಟು ಮುಂಚಿತವಾಗಿಯೇ ಅರಗಿಸಿ ಕೊಂಡರು; ಚೇತನಾತ್ಮಕ ಜೀವಿಗಳಿಗಾಗಿ ಸಹಾನುಭೂತಿ, ಸಸ್ಯಾಹಾರ, ಸ್ವಶುದ್ಧೀಕರಣಕ್ಕಾಗಿ ಉಪವಾಸ ಮತ್ತು ವಿವಿಧ ಮತಗಳಿಗೆ ಸೇರಿರುವ ಜನರ ನಡುವೆ ಪರಸ್ಪರ ಸಹನೆ ಇವುಗಳಲ್ಲಿ ಸೇರಿದ್ದವು. ಭಾರತೀಯ ಮೇರುಕಥೆಗಳು, ಅದರಲ್ಲೂ ವಿಶೇಷವಾಗಿ, ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು. ಪುರಾತನ ಭಾರತೀಯ ರಾಜ ಮತ್ತು ಸತ್ಯವಂತ ನಾಯಕನಾಗಿದ್ದ ಹರಿಶ್ಚಂದ್ರನ ಕಥೆಯು ಬಾಲಕ ಗಾಂಧಿಯ ಮನವನ್ನು ಪದೇಪದೇ ಕಾಡುತ್ತಿತ್ತು. ಅದು ತಮ್ಮ ಮನದಲ್ಲಿ ಅಳಿಸಲಾಗದ ಛಾಪನ್ನು ಒತ್ತಿತೆಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಒಪ್ಪಿಕೊಂಡಿದ್ದಾರೆ. "ಅದು ನನ್ನ ನ್ನು ಕಾಡಿಸಿದ ಪರಿಣಾಮವಾಗಿ ನಾನೇ ಸ್ವತ: ಎಣಿಸಲಾಗದಷ್ಟು ಬಾರಿ ಹರಿಶ್ಚಂದ್ರನಂತೆ ವರ್ತಿಸಿದ್ದುಂಟು" ಎಂದು ಅವರು ಬರೆದುಕೊಂಡಿದ್ದಾರೆ. ಸತ್ಯ ಮತ್ತು ಪ್ರೇಮದಂತಹ ಸರ್ವೋಚ್ಚ ಮೌಲ್ಯಗಳೊಂದಿಗೆ ಗಾಂಧಿಯವರು ತಮ್ಮನ್ನು ಗುರುತಿಸಿಕೊಂಡಿದ್ದರ ಹಿಂದಿನ ಕಾರಣ ಈ ಮಹಾಕೃತಿಗಳ ಪಾತ್ರಗಳೊಂದಿಗೆ ಅವರ ಗುರುತಿಸಿ ಕೊಳ್ಳುವಿಕೆಯೇ ಆಗಿತ್ತು.ಪಿಟಿರಿಮ್‌ ಅಲೆಗ್ಸಾಂಡ್ರೊವಿಚ್‌ ಸೊರೊಕಿನ್‌, ದ ವೇಸ್‌ ಅಂಡ್‌ ಪವರ್ ಆಫ್ ಲವ್‌, ೨೦೦೨[14] ^ ಲಾಯ್ಡ್‌ I. ರುಡಾಲ್ಫ್‌ , ಗಾಂಧಿ, ದಿ ಟ್ರೆಡಿಷನಲ್‌ ರೂಟ್ಸ್ ಆಫ್ ಕರಿಜ್ಮಾ, ೧೯೮೩ ಮೇ ೧೮೮೩ ರಲ್ಲಿ, ಆ ಪ್ರಾಂತ್ಯದಲ್ಲಿದ್ದ ಪದ್ಧತಿಯಂತೆ, ಒಂದು ವ್ಯವಸ್ಥೆಗೊಳಿಸಲಾದ ಒಂದು ಬಾಲ್ಯ ವಿವಾಹಸಮಾರಂಭದಲ್ಲಿ, ೧೩ ವರ್ಷದ ಮೋಹನ್‌ದಾಸ್‌ ಅವರು ೧೪ ವರ್ಷದ ಕಸ್ತೂರ ಬಾಯಿ ಮಖಾಂಜಿ ಅವರನ್ನು ಮದುವೆಯಾದರು. (ಅವರ ಮೊದಲ ಹೆಸರನ್ನು ಸಾಮಾನ್ಯವಾಗಿ "ಕಸ್ತೂರಬಾ" ಎಂದು ಮೊಟಕುಗೊಳಿಸಿ, ಪ್ರೇಮಪೂರ್ವಕ ವಾಗಿ "ಬಾ " ಎನ್ನಲಾಗಿತ್ತು) ಆದಾಗ್ಯೂ, ಆ ಪ್ರಾಂತ್ಯದಲ್ಲಿದ್ದ ಸಂಪ್ರದಾಯದ ಪ್ರಕಾರ, ಹರೆಯದವಳಾದ ವಧು ತನ್ನ ಗಂಡನಿಂದ ದೂರವಿದ್ದು, ತನ್ನ ತವರುಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುವುದು ರೂಢಿಯಾಗಿತ್ತು. ೧೮೮೫ರಲ್ಲಿ, ಗಾಂಧಿಯವರು ೧೫ ವರ್ಷದವರಾಗಿದ್ದಾಗ, ದಂಪತಿಗಳಿಗೆ ಮೊದಲ ಸಂತಾನವಾಯಿತು. ಆದರೆ ಅದು ಕಲವೇ ದಿನಗಳವರೆಗೆ ಮಾತ್ರ ಬದುಕುಳಿಯಲು ಸಾಧ್ಯವಾಯಿತು; ಗಾಂಧಿಯವರ ತಂದೆ ಕರಮ್‌ಚಂದ್‌‌ ಗಾಂಧಿಯವರು ಆದೇ ವರ್ಷದ ಆರಂಭದನಲ್ಲಿ ನಿಧನರಾಗಿದ್ದರು. ಮೋಹನ್‌ದಾಸ್ ಮತ್ತು ಕಸ್ತೂರಬಾ ಇನ್ನೂ ನಾಲ್ಕು ಮಂದಿ ಮಕ್ಕಳನ್ನು ಹೊಂದಿದ್ದರು - ಎಲ್ಲರೂ ಗಂಡು ಮಕ್ಕಳೇ: ೧೮೮೮ರಲ್ಲಿ ಜನಿಸಿದ ಹರಿಲಾಲ್‌ ; ೧೮೯೨ರಲ್ಲಿ ಜನಿಸಿದ ಮಣಿಲಾಲ್‌; ೧೮೯೭ರಲ್ಲಿ ಜನಿಸಿದ ರಾಮ್‌ದಾಸ್‌; ಮತ್ತು ೧೯೦೦ರಲ್ಲಿ ಜನಿಸಿದ ದೇವದಾಸ್‌. ಪೋರಬಂದರಿನ ಮಾಧ್ಯಮಿಕ ಶಾಲೆ ಮತ್ತು ರಾಜ್‌ಕೋಟ್‌ನ ಪ್ರೌಢಶಾಲೆಯಲ್ಲಿ ಗಾಂಧಿಯವರು ಶೈಕ್ಷಣಿಕವಾಗಿ ಸರಾಸರಿ ಮಟ್ಟದ ವಿದ್ಯಾರ್ಥಿಯಾಗುಳಿದಿದ್ದರು. ಗುಜರಾತ್‌ನ ಭಾವನಗರ್‌ನಲ್ಲಿರುವ ಸಮಲ್‌ದಾಸ್ ಕಾಲೇಜಿಗೆ ಸೇರುವುದಕ್ಕಾಗಿ ಅವರು ತಮ್ಮ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಸ್ವಲ್ಪ ಮಟ್ಟಿಗಿನ ಪ್ರಯಾಸದೊಂದಿಗೆ ಉತ್ತೀರ್ಣರಾದರು. ಅಲ್ಲಿದ್ದಾಗ ಅವರು ಅಸಂತುಷ್ಟವಾಗಿದ್ದರು , ಇದರ ಭಾಗಶ: ಕಾರಣ ಅವರ ಕುಟುಂಬವು ಅವರು ಒಬ್ಬ ನ್ಯಾಯವಾದಿ (ಬ್ಯಾರಿಸ್ಟರ್‌) ಅಗಲೆಂದು ಇಚ್ಛಿಸಿತ್ತು. ೪ ಸೆಪ್ಟೆಂಬರ್ ೧೮೮೮ರಂದು ತಮ್ಮ ೧೯ನೆಯ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಉಳಿದಿರುವಾಗ, ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು [[ಲಂಡನ್‌|ಲಂಡನ್‌ಗೆ]] ಪ್ರಯಾಣಿಸಿದರು. ತಾವು ವಿದೇಶಕ್ಕೆ ಹೋದ ಮೇಲೆ ಮಾಂಸ, ಮದ್ಯ ಮತ್ತು ಕಾಮದಾಹಗಳಿಂದ ದೂರವಿರಬೇಕೆಂಬ ಹಿಂದೂ ಆಚಾರ ಸೂತ್ರಗಳನ್ನು ಪಾಲಿಸುವುದಾಗಿ ಜೈನ್ ಸನ್ಯಾಸಿ ಬೆಚಾರ್ಜೀ ಅವರ ಸನ್ನಿಧಿಯಲ್ಲಿ ಅವರ ತಾಯಿಗೆ ಪ್ರಮಾಣ ಮಾಡಿದ್ದು ಅವರ ಲಂಡನ್‌ ವಾಸದ ಮೇಲೆ ಪ್ರಭಾವ ಬೀರಿತ್ತು. ಗಾಂಧಿಯವರು ನೃತ್ಯ ತರಬೇತಿಯಂತಹ "ಇಂಗ್ಲಿಷ್" ಸಂಪ್ರದಾಯಗಳನ್ನು ಅಳವಡಿಸಿಕೊಳ್ಳುವ ಪ್ರಯೋಗವನ್ನು ಮಾಡಿದರೂ ಸಹ, ತಮ್ಮ ವಾಸಗೃಹದ ಒಡತಿಯು ಬಡಿಸಿದ ಸಪ್ಪೆ ಸಸ್ಯಾಹಾರಿ ಆಹಾರವನ್ನು ಸಹಿಸಿಕೊಳ್ಳಲಾಗಲಿಲ್ಲ; ಅವರು ಲಂಡನ್‌ನ ಕೆಲವೇ ಸಸ್ಯಾಹಾರಿ ಭೋಜನಾಮಂದಿರಗಳಲ್ಲಿ ಒಂದು ಲಭಿಸುವವರೆಗೂ ಸದಾ ಹಸಿವೆಯಲ್ಲಿದ್ದರು. ಸಾಲ್ಟ್‌ರವರ ಗ್ರಂಥದಿಂದ ಪ್ರಭಾವಿತರಾಗಿ, ಅವರು ಸಸ್ಯಾಹಾರಿ ಸಂಘಕ್ಕೆ ಸೇರ್ಪಡೆಯಾಗಿ, ಅದರ ಕಾರ್ಯಕಾರೀ ಸಮಿತಿಗೆ ಚುನಾಯಿತರಾಗಿ , ಆ ನಂತರ ಸ್ಥಳೀಯ ಬೇಯ್ಸ್‌ವಾಟರ್ ಶಾಖೆಯನ್ನು ಸ್ಥಾಪಿಸಿದರು. ಅವರು ಭೇಟಿಯಾದ ಕೆಲವು ಸಸ್ಯಾಹಾರಿಗಳು ಥಿಯೋಸಾಫಿಕಲ್ ಸೊಸೈಟಿಯ ಸದಸ್ಯರಾಗಿದ್ದರು. ಇದು ೧೮೭೫ರಲ್ಲಿ ಸ್ಥಾಪಿತಗೊಂಡಿದ್ದು, ವಿಶ್ವಭ್ರಾತೃತ್ವವನ್ನು ಉತ್ತೇಜಿಸುವ ಮತ್ತು ಬೌದ್ಧ ಹಾಗೂ ಹಿಂದೂ ಸಾಹಿತ್ಯಗಳ ಅಧ್ಯಯನ ಮಾಡುವ ಉದ್ದೇಶವನ್ನು ಹೊಂದಿತ್ತು .ಭಗವದ್ಗೀತೆ ಯ ಮೂಲ ಹಾಗೂ ಅನುವಾದಗಳೆರಡನ್ನೂ ಪಠಿಸಲು ತಮ್ಮೊಂದಿಗೆ ಸೇರಿರೆಂದು ಅವರು ಗಾಂಧಿಯವರನ್ನು ಪ್ರೇರೇಪಿಸಿದರು. ಅದುವರೆಗೂ ಧರ್ಮದಲ್ಲಿ ನಿರ್ದಿಷ್ಟವಾದ ಆಸಕ್ತಿ ತೋರದಿದ್ದ ಗಾಂಧಿಯವರು, ಧಾರ್ಮಿಕ ಚಿಂತನೆಯಲ್ಲಿ ಆಸಕ್ತರಾಗಿ ಹಿಂದೂ ಮತ್ತು ಕ್ರೈಸ್ತ ಮತಗ್ರಂಥಗಳೆರಡನ್ನೂ ಅಧ್ಯಯನ ಮಾಡಲಾರಂಭಿಸಿದರು. ೧೦ ಜೂನ್ ೧೮೯೧ ರಂದು ಗಾಂಧಿಯವರನ್ನು ವಕೀಲವೃತ್ತಿಗೆ ಕರೆಯಲಾಯಿತು. ಹಾಗಾಗಿ, ಅವರು ಲಂಡನ್‌ನಿಂದ ಭಾರತಕ್ಕೆ ೧೨ ಜೂನ್‌ ೧೮೯೧ರಂದು ಮರಳಿದರು. ತಾವು ಲಂಡನ್‌ನಲ್ಲಿದ್ದಾಗ ತಮ್ಮ ತಾಯಿ ನಿಧನರಾಗಿದ್ದರು ಎಂಬುದು ಆಗ ಅವರಿಗೆ ತಿಳಿದುಬಂದಿತು. ಏಕೆಂದರೆ ಅವರ ಕುಟುಂಬವು ಈ ಸಮಾಚಾರವನ್ನು ಅವರಿಗೆ ತಿಳಿಸಿರಲಿಲ್ಲ. ಮುಂಬಯಿಯಲ್ಲಿ ವಕೀಲ ವೃತ್ತಿಯನ್ನು ಆರಂಭಿಸುವ ಅವರ ಯತ್ನಗಳು ವಿಫಲವಾದವು. ಆ ನಂತರ, ಒಬ್ಬ ಪ್ರೌಢಶಾಲಾ ಅಧ್ಯಾಪಕರ ಅರೆಕಾಲಿಕ ಹುದ್ದೆಗೆ ಅರ್ಜಿ ಸಲ್ಲಿಸಿ ಅದು ತಿರಸ್ಕೃತಗೊಂಡ ನಂತರ, ಅವರು ರಾಜ್‌ಕೋಟ್‌ಗೆ ವಾಪಸಾಗಿ, ಕಕ್ಷಿಗಾರರಿಗಾಗಿ ಅರ್ಜಿಗಳ ಕರಡುಗಳನ್ನು ತಯಾರಿಸುವ ಸರಳ ಜೀವನವನ್ನು ನಡೆಸುತ್ತಿದ್ದರು. ಆದರೆ ಒಬ್ಬ ಬ್ರಿಟಿಷ್ ಅಧಿಕಾರಿಯಿಂದಾಗಿ ತೊಡಕಿಗೆ ಸಿಕ್ಕಿಕೊಂಡ ಕಾರಣ ಗಾಂಧಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಬೇಕಾಯಿತು. ಇದು ತಮ್ಮ ಹಿರಿಯ ಅಣ್ಣನ ಪರವಾಗಿ ಪ್ರಭಾವ ಬೀರಲು ಮಾಡಿದ ವಿಫಲ ಯತ್ನ ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಅವರು ಈ ಘಟನೆಯನ್ನು ಬಣ್ಣಿಸಿದ್ದಾರೆ. ಇಂತಹ ವಾತಾವರಣದಲ್ಲಿ, ಏಪ್ರಿಲ್ ೧೮೯೩ರಲ್ಲಿ ಅವರು ಭಾರತೀಯ ಸಂಸ್ಥೆಯಾದ ದಾದಾ ಅಬ್ದುಲ್ಲಾ ಅಂಡ್ ಕಂಪೆನಿಯಿಂದ, ಆಗ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿದ್ದ ದಕ್ಷಿಣ ಆಫ್ರಿಕಾದ ನೇಟಲ್ ಕಾಲೊನಿಯಲ್ಲಿನ ಹುದ್ದೆಯೊಂದಕ್ಕೆ ನೀಡಲಾದ ಒಂದು ವರ್ಷ ಅವಧಿಯ ಗುತ್ತಿಗೆಯನ್ನು ಸ್ವೀಕರಿಸಿದರು, ಮಹಾತ್ಮ ಗಾಂಧಿ ಅವರ ಧ್ಯೇಯಗಳು ಅಹಿಂಸೆ ಅಥವಾ ಸಂಪೂರ್ಣ ಅಹಿಂಸೆಯ ಮೇಲೆ ದೃಢವಾಗಿ ರೂಪಿಸಲ್ಪಟ್ಟ ಸಾಮೂಹಿಕ ಅವಿಧೇಯತೆಯ ಮೂಲಕ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹ ದ ಪರಿಕಲ್ಪನೆಗೆ ಅವರು ಪಥ (ದಾರಿ)ನಿರ್ಮಾಪಕರಾಗಿದ್ದು, ಅದು ಭಾರತವನ್ನು ಸ್ವಾತಂತ್ರ್ಯದತ್ತ ಒಯ್ದಿತು ಹಾಗೂ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು. ರಾಷ್ಟ್ರಪಿತ ಗೌರವ ಗಾಂಧಿಯವರು ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದೇ ಚಿರಪರಿಚಿತರು (ಸಂಸ್ಕೃತ: महात्मा ಮಹಾತ್ಮ ಅಥವಾ ಮಹಾನ್ ಆತ್ಮ , ಎಂಬ ಗೌರವ ಸೂಚಕ ಪದವನ್ನು ಅವರಿಗೆ ಮೊದಲು ನೀಡಿದ್ದು ರವೀಂದ್ರನಾಥ ಠಾಗೂರರು). ಭಾರತದಲ್ಲೂ ಅವರು ಬಾಪು ಎಂದೇ ಚಿರಪರಿಚಿತರು (ಗುಜರಾತಿ: બાપુ ಬಾಪು ಅಥವಾ 'ತಂದೆ'). ಮೊದಲ ಬಾರಿಗೆ ಸುಭಾಷ್ ಚಂದ್ರಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ಭಾರತ ದಲ್ಲಿ ಅವರನ್ನು ರಾಷ್ಟ್ರಪಿತ ಎಂದು ಅಧಿಕೃತವಾಗಿ ಗೌರವಿಸ ಲಾಗಿದ್ದು ಅವರ ಜನ್ಮದಿನವಾದ ಅಕ್ಟೋಬರ್ ೨ನ್ನು ಗಾಂಧಿ ಜಯಂತಿ ಎಂಬ ಸ್ಮರಣೀಯ ದಿನವನ್ನಾಗಿಸಿ ರಾಷ್ಟ್ರೀಯ ರಜಾ ದಿನವನ್ನಾಗಿಸಲಾಗಿದೆ ಮತ್ತು ವಿಶ್ವಾದ್ಯಂತ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.(Netaji Subhas Chandra Bose, who in his address on Singapore Radio on July 6, 1944 has addressed Mahatma Gandhi as Father of the Nation. Thereafter on April 28, 1947 Gandhi was referred with the same title by Sarojini Naidu at a conference. ) 10-year-old's RTI on 'Father of the Nation' title for Gandhi;India | Indo-Asian News Service | Updated: April 03, 2012 ನಾಗರಿಕ ಹಕ್ಕುಗಳಿಗಾಗಿ ಹೋರಾಟ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ವಲಸಿಗ ವಕೀಲರಾಗಿದ್ದಾಗ ಅಲ್ಲಿ ವಾಸವಾಗಿದ್ದ ಭಾರತೀಯ ಸಮುದಾಯವು ನಾಗರಿಕ ಹಕ್ಕುಗಳಿಗಾಗಿ ಹೋರಾಟ ನಡೆ ಸುತ್ತಿದ್ದ ಅವಧಿಯಲ್ಲಿ ಅಹಿಂಸಾತ್ಮಕ ನಾಗರಿಕ ಅವಿಧೇಯತೆಯ ಆಂದೋಲ ನವನ್ನು ಮೊದಲ ಬಾರಿಗೆ ಪ್ರಯೋಗಿಸಿದರು. ೧೯೧೫ರಲ್ಲಿ ಭಾರತಕ್ಕೆ ವಾಪಸಾದ ಬಳಿಕ, ಅತಿಯಾದ ಜಮೀನು ತೆರಿಗೆ ಮತ್ತು ತಾರತಮ್ಯಗಳಿಗೆ ಸಂಬಂಧಿಸಿದಂತೆ ರೈತರ, ಬೇಸಾಯಗಾರರ ಮತ್ತು ನಗರ ಪ್ರದೇಶದ ಕಾರ್ಮಿಕರ ಪ್ರತಿಭಟನೆಗಳನ್ನು ಅವರು ಸಂಘಟಿಸಿದರು. ೧೯೨೧ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕತ್ವ ವಹಿಸಿದ ಬಳಿಕ, ಬಡತನದ ನಿವಾರಣೆ, ಮಹಿಳಾ ಹಕ್ಕುಗಳ ವಿಸ್ತರಣೆ, ಧಾರ್ಮಿಕ ಮತ್ತು ಜನಾಂಗೀಯ ಸೌಹಾರ್ದ, ಅಸ್ಪೃಶ್ಯತೆಯ ಅಂತ್ಯ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಹೆಚ್ಚಿಸಲು ಹಮ್ಮಿಕೊಳ್ಳಲಾದ ರಾಷ್ಟ್ರವ್ಯಾಪಿ ಚಳುವಳಿಗಳ ನೇತೃತ್ವವನ್ನು ಗಾಂಧಿಯವರು ವಹಿಸಿಕೊಂಡರು. ಇವೆಲ್ಲಕ್ಕಿಂತಲೂ ಹೆಚ್ಚಾಗಿ, ಸ್ವರಾಜ್‌ ಅಥವಾ ವಿದೇಶೀ ಹಿಡಿತದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸುವತ್ತ ಅವರು ಗುರಿಯಿಟ್ಟರು. ಬ್ರಿಟಿಷರು ಹೇರಿದ್ದ ಉಪ್ಪಿನ ತೆರಿಗೆಯನ್ನು ವಿರೋಧಿಸಲು ಹಮ್ಮಿಕೊಂಡಿದ್ದ ಅಸಹಕಾರ ಚಳವಳಿಯಲ್ಲಿ ತಮ್ಮ ಅನುಯಾಯಿಗಳ ಮುಂದಾಳತ್ವವನ್ನು ವಹಿಸಿದ್ದ ಗಾಂಧಿಯವರು ೧೯೩೦ರಲ್ಲಿ ದಂಡಿ ಉಪ್ಪಿನ ಯಾತ್ರೆಯನ್ನು ನಡೆಸಿದರು. ಆನಂತರ ಅವರು ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯನ್ನು ನಡೆಸಿದರು. ಗಾಂಧಿಯವರು ದಕ್ಷಿಣ ಆಫ್ರಿಕಾ ಹಾಗೂ ಭಾರತದಲ್ಲಿ ಹಲವು ವರ್ಷಗಳ ಕಾಲ ಕಾರಾಗೃಹ ವಾಸದಲ್ಲಿದ್ದರು. ಅಹಿಂಸೆ ಯ ಪರಿಪಾಲಕ ರಾದ ಅವರು ಸತ್ಯವನ್ನೇ ನುಡಿಯಲು ಪ್ರಮಾಣ ಮಾಡಿ ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು. ಸ್ವತಂತ್ರವಾದ ಗೃಹ ಸಮುದಾಯವೊಂದರಲ್ಲಿ ನಿರಾಡಂಬರವಾದ ಜೀವನ ನಡೆಸಿದ ಗಾಂಧಿಯವರು ಚರಖಾ ದ ಮೂಲಕ ತಾವೇ ತೆಗೆದ ನೂಲಿನಿಂದ ನೇಯ್ದ ಸಾಂಪ್ರದಾಯಿಕ ಭಾರತೀಯ ಧೋತಿ ಮತ್ತು ಶಾಲನ್ನು ತೊಡುತ್ತಿದ್ದರು. ಸರಳ ಸಸ್ಯಾಹಾರವನ್ನು ಸೇವಿಸುತ್ತಿದ್ದ ಅವರು ಸ್ವಶುದ್ಧೀಕರಣ ಹಾಗೂ ಸಾಮಾಜಿಕ ಪ್ರತಿಭಟನೆಗಳೆರಡರ ಸಂಕೇತವಾಗಿ ದೀರ್ಘಾವಧಿಯ ಉಪವಾಸಗಳನ್ನು ಕೈಗೊಳ್ಳುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಹಕ್ಕುಗಳ ಆಂದೋಲನ (೧೮೯೩–೧೯೧೪) left|thumb|ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ (೧೮೯೫) ದಕ್ಷಿಣ ಆಫ್ರಿಕಾದಲ್ಲಿ, ಭಾರತೀಯರತ್ತ ತೋರಲಾಗಿದ್ದ ತಾರತಮ್ಯವನ್ನು ಗಾಂಧಿಯವರೂ ಸಹ ಎದುರಿಸಬೇಕಾಯಿತು. ಅವರು ಕ್ರಮಬದ್ಧವಾಗಿದ್ದ ಪ್ರಥಮ ದರ್ಜೆಯ ಚೀಟಿಯನ್ನು ಹೊಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಥಮ ದರ್ಜೆಯ ಡಬ್ಬಿಯಿಂದ ಮೂರನೆಯ ದರ್ಜೆಗೆ ಸ್ಥಳಾಂತರ ಗೊಳ್ಳಲು ನಿರಾಕರಿಸಿದ್ದಕ್ಕೆ ಪೀಟರ್‌ಮೆರಿಟ್ಜ್‌ಬ ರ್ಗ್‌ನಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಅಲ್ಲಿಂದ ಮುಂದಕ್ಕೆ ಕುದುರೆಗಾಡಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಐರೋಪ್ಯ ಪ್ರಯಾಣಿಕರಿಗೆ ಸ್ಥಳಾವಕಾಶ ನೀಡುವುದಕ್ಕೋಸ್ಕರ, ತಾವು ಮೆಟ್ಟಿಲುಗಳ ಮೇಲೆ ನಿಂತು ಪ್ರಯಾಣಿಸಲು ನಿರಾಕರಿಸಿದ್ದಕ್ಕೆ ಚಾಲಕನು ಗಾಂಧಿಯವರ ಮೇಲೆ ಹಲ್ಲೆ ನಡೆಸಿದನು. ಹಲವು ಹೊಟೇಲುಗಳಲ್ಲಿ ಪ್ರವೇಶ ನಿರಾಕರಣೆಯೂ ಸೇರಿದಂತೆ ಅವರು ಪ್ರಯಾಣದಲ್ಲಿ ಇನ್ನೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಇನ್ನೊಂದು ಘಟನೆಯಲ್ಲಿ, ಡರ್ಬನ್‌ ನ್ಯಾಯಾಲಯವೊಂದರ ದಂಡಾಧಿಕಾರಿಯೊಬ್ಬರು ತಮ್ಮ ಪೇಟವನ್ನು ತೆಗೆಯಲು ಗಾಂಧಿಯವರಿಗೆ ಆದೇಶಿಸಿದರೂ ಅವರು ನಿರಾಕರಿಸಿದರು. ಇಂತಹ ಘಟನೆಗಳು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ನೀಡಿ, ಸಾಮಾಜಿಕ ಅನ್ಯಾಯದ ವಿರುದ್ಧ ಅವರನ್ನು ಜಾಗ್ರತಗೊಳಿಸಿ, ಅವರ ಆ ನಂತರದ ಸಾಮಾಜಿಕ ಕ್ರಿಯಾಸಿದ್ಧಾಂತದ ಮೇಲೆ ಪ್ರಭಾವ ಬೀರಿದವು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ವರ್ಣಭೇದ ನೀತಿ, ಪೂರ್ವಾಗ್ರಹ ಮತ್ತು ಅನ್ಯಾಯಗಳು ನಡೆಯುತ್ತಿದ್ದನ್ನು ಸ್ವತಃ ಅನುಭವಿಸುವ ಮೂಲಕ ಗಾಂಧಿಯವರು ಬ್ರಿಟಿಷ್ ಸಾಮ್ರಾಜ್ಯದಲ್ಲಿ ತಮ್ಮ ಜನರ ಸ್ಥಾನಮಾನಗಳನ್ನು ಮತ್ತು ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರಿಗೆ ಮತದಾನದ ಹಕ್ಕನ್ನು ನಿರಾಕರಿಸುವ ಮಸೂದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರಿಗೆ ನೆರವಾಗಲು ಗಾಂಧಿಯವರು ಅಲ್ಲಿನ ತಮ್ಮ ಉಳಿಯುವಿಕೆಯ ಅವಧಿಯನ್ನು ವಿಸ್ತರಿಸಿದರು. ಮಸೂದೆಯ ಅಂಗೀಕಾರವನ್ನು ತಡೆಯಲು ಅವರು ವಿಫಲರಾದರೂ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಕುಂದುಕೊರತೆಗಳತ್ತ ಗಮನ ಸೆಳೆಯುವಲ್ಲಿ ಅವರ ಚಳುವಳಿಯು ಯಶಸ್ವಿಯಾಯಿತು. ೧೮೯೪ರಲ್ಲಿ ನೇಟಲ್ ಇಂಡಿಯನ್ ಕಾಂಗ್ರೆಸ್‌‌ನ ಸ್ಥಾಪನೆಯಲ್ಲಿ ಸಹಾಯ ಮಾಡಿದ ಅವರು, ಈ ಸಂಘಟನೆಯ ಮೂಲಕ ದಕ್ಷಿಣ ಆಫ್ರಿಕಾದಲ್ಲಿರುವ ಭಾರತೀಯ ಸಮುದಾಯವನ್ನು ಏಕರೂಪವಾದ ರಾಜಕೀಯ ಶಕ್ತಿಯಾಗಿ ಮಾರ್ಪಾಡು ಮಾಡಿದರು. ಜನವರಿ ೧೮೯೭ರಲ್ಲಿ ಗಾಂಧಿಯವರು ಡರ್ಬನ್‌ಗೆ ಆಗಮಿಸಿದಾಗ ಬಿಳಿ ಮೂಲನಿವಾಸಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು. ಆಗ ಓರ್ವ ಆರಕ್ಷಕ ಅಧೀಕ್ಷಕನ ಪತ್ನಿಯ ಯತ್ನಗಳ ಫಲವಾಗಿಯೇ ಅವರು ಪಾರಾಗಲು ಸಾಧ್ಯವಾಯಿತು. ಆದಾಗ್ಯೂ, ವ್ಯಕ್ತಿಯೊಬ್ಬನು ಮಾಡಿದ ತಪ್ಪಿಗಾಗಿ ನ್ಯಾಯಾಲಯದಲ್ಲಿ ಪರಿಹಾರವನ್ನು ಕೇಳದಿರುವುದು ತಮ್ಮ ತತ್ವಗಳಲ್ಲೊಂದು ಎಂದು ಹೇಳಿದ ಅವರು ಆ ಗುಂಪಿನ ಯಾವುದೇ ಸದಸ್ಯನ ವಿರುದ್ಧವೂ ಮೊಕದ್ದಮೆ ಹೂಡಲು ನಿರಾಕರಿಸಿದರು. ವಸಾಹತಿನಲ್ಲಿರುವ ಭಾರತೀಯ ಸಮುದಾಯದ ನೋಂದಣಿಯನ್ನು ಕಡ್ಡಾಯಗೊಳಿಸುವ ಒಂದು ಹೊಸ ಕಾಯಿದೆಯನ್ನು ಟ್ರಾನ್ಸ್‌ವಾಲ್‌ ಸರ್ಕಾರವು ೧೯೦೬ರಲ್ಲಿ ಪ್ರಕಟಿಸಿತು. ಅದೇ ವರ್ಷದ ಸೆಪ್ಟೆಂಬರ್‌ ೧೧ ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಒಂದು ಸಾಮೂಹಿಕ ಪ್ರತಿಭಟನಾ ಸಭೆಯಲ್ಲಿ, ಗಾಂಧಿಯವರು ಇನ್ನೂ ವಿಕಸನಗೊಳ್ಳುತ್ತಿದ್ದ ತಮ್ಮ ಸತ್ಯಾಗ್ರಹ (ಸತ್ಯಕ್ಕಾಗಿ ನಿಷ್ಠೆ), ಅಥವಾ ಅಹಿಂಸಾತ್ಮಕ ಪ್ರತಿಭಟನೆಯ ಕ್ರಮಶಾಸ್ತ್ರವನ್ನು ಮೊದಲ ಬಾರಿಗೆ ಅಳವಡಿಸಿ, ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟಿಸುವ ಬದಲಿಗೆ ಈ ಹೊಸ ಕಾನೂನನ್ನು ಧಿಕ್ಕರಿಸಿ ಅದಕ್ಕೆ ದೊರೆಯುವ ಶಿಕ್ಷೆಯನ್ನನುಭವಿಸಿರೆಂದು ತಮ್ಮ ಸಹ-ಭಾರತೀಯರಿಗೆ ಕರೆ ನೀಡಿದರು. ಈ ರಣನೀತಿಯನ್ನು ಅಳವಡಿಸಿಕೊಂಡ ಫಲವಾಗಿ, ಪ್ರತಿಭಟನೆ, ನೋಂದಾಯಿಸಲು ನಿರಾಕರಣೆ, ತಮ್ಮ ನೋಂದಣಿ ಪತ್ರಗಳ ದಹನ ಅಥವಾ ಇತರ ಅಹಿಂಸಾತ್ಮಕ ಪ್ರತಿರೋಧಗಳನ್ನು ಒಳಗೊಂಡ ಏಳು ವರ್ಷಗಳ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಗಾಂಧಿಯವರೂ ಸೇರಿದಂತೆ ಸಾವಿರಾರು ಭಾರತೀಯರು ಕಾರಾಗೃಹ ಸೇರಿದರು, ಹೊಡೆತಗಳನ್ನು ತಿಂದರು, ಅಥವಾ ಗುಂಡೇಟಿಗೀಡಾದರು. ಸರ್ಕಾರವು ಭಾರತೀಯ ಪ್ರತಿಭಟನಾಕಾರರನ್ನು ಸದೆಬಡಿಯುವುದರಲ್ಲಿ ಯಶಸ್ವಿಯಾದರೂ, ಭಾರತೀಯ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಕ್ಷಿಣ ಆಫ್ರಿಕಾದ ಸರ್ಕಾರವು ಬಳಸಿದ ಕಟುವಾದ ಕ್ರಮಗಳ ವಿರುದ್ಧ ಭುಗಿಲೆದ್ದ ಸಾರ್ವಜನಿಕ ಪ್ರತಿಭಟನೆಯು ಅಂತಿಮವಾಗಿ ದಕ್ಷಿಣ ಆಫ್ರಿಕಾದ ಜನರಲ್ ಜೆನ್ ಕ್ರಿಶ್ಚಿಯಾನ್ ಸ್ಮಟ್ಸ್‌ ಅವರು ಗಾಂಧಿಯವರೊಂದಿಗೆ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸಿತು. ಗಾಂಧಿಯವರ ಆಲೋಚನೆಗಳು ಆಕಾರ ಪಡೆದು ಸತ್ಯಾಗ್ರಹ ೧೯೦೬ರ ಜುಲು ಸಮರದಲ್ಲಿ ಪಾತ್ರ ೧೯೦೬ರಲ್ಲಿ, ಬ್ರಿಟಿಷ್ ಆಡಳಿತವು ಹೊಸ ತಲೆಗಂದಾಯವನ್ನು ಜಾರಿಗೊಳಿಸಿದ ನಂತರ, ದಕ್ಷಿಣ ಆಫ್ರಿಕಾದಲ್ಲಿನ ಜುಲು ಜನಾಂಗದವರು ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಬ್ರಿಟಿಷರು ಜುಲುಗಳ ವಿರುದ್ಧ ಸಮರ ಸಾರಿದರು. ಭಾರತೀಯರನ್ನು ನೇಮಿಸಿಕೊಳ್ಳುವಂತೆ ಗಾಂಧಿಯವರು ಬ್ರಿಟಿಷ್ ಆಡಳಿತವನ್ನು ಸಕ್ರಿಯರಾಗಿ ಪ್ರೇರೇಪಿಸಿದರು. ಭಾರತೀಯರ ಪೂರ್ಣಪ್ರಮಾಣದ ಪೌರತ್ವದ ಬೇಡಿಕೆಯನ್ನು ಕಾನೂನು ಸಮ್ಮತವಾಗಿಸುವ ನಿಟ್ಟಿನಲ್ಲಿ ಭಾರತೀಯರು ಯುದ್ಧದ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ನೀಡಬೇಕೆಂದು ಅವರು ವಾದಿಸಿದರು. ಆದರೆ, ಬ್ರಿಟಿಷ್ ಆಡಳಿತವು ಭಾರತೀಯರನ್ನು ಸೇನಾ ಅಧಿಕಾರಿಗಳನ್ನಾಗಿ ನೇಮಿಸಿಕೊಳ್ಳಲು ನಿರಾಕರಿಸಿತು. ಆದಾಗ್ಯೂ, ಗಾಯಗೊಂಡಿರುವ ಬ್ರಿಟಿಷ್ ಸೈನಿಕರಿಗೆ ಶುಶ್ರೂಷೆ ಮಾಡುವ ಡೋಲಿವಾಹಕರಾಗಿ ಕೆಲಸ ಮಾಡುವ ಅವಕಾಶವನ್ನು ಭಾರತೀಯ ಸ್ವಯಂಸೇವಕರ ತುಕಡಿಯೊಂದಕ್ಕೆ ನೀಡಬೇಕೆಂಬ ಗಾಂಧಿಯವರ ಪ್ರಸ್ತಾವವನ್ನು ಬ್ರಿಟಿಷ್ ಆಡಳಿತವು ಪುರಸ್ಕರಿಸಿತು. ಈ ತುಕಡಿಯು ಗಾಂಧಿಯವರ ನಿಯಂತ್ರಣಲ್ಲಿತ್ತು. ೧೯೦೬ರ ಜುಲೈ ೨೧ರಂದು ಇಂಡಿಯನ್ ಒಪಿನಿಯನ್‌ ನಲ್ಲಿ ಗಾಂಧಿಯವರು ಹೀಗೆ ಬರೆದರು: "ಸ್ಥಳೀಯರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸ್ಥಳೀಯ ಸರ್ಕಾರದ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ರಚಿಸಲಾಗಿದ್ದ ಈ ತುಕಡಿಯಲ್ಲಿ ಇಪ್ಪತ್ಮೂರು ಮಂದಿ ಭಾರತೀಯರಿದ್ದರು." ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol ೫ ದಾಖಲೆ#೩೯೩ ಗಾಂಧಿಯವರ: ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿಯಿಂದ p೧೦೬ ಇಂಡಿಯನ್ ಒಪಿನಿಯನ್‌ ನಲ್ಲಿನ ತಮ್ಮ ಅಂಕಣಗಳ ಮೂಲಕ, ಯುದ್ಧಕ್ಕೆ ಸೇರಿರೆಂದು ಗಾಂಧಿಯವರು ದಕ್ಷಿಣ ಆಫ್ರಿಕಾಲ್ಲಿರುವ ಭಾರತೀಯ ಜನಾಂಗವನ್ನು ಪ್ರೇರೇಪಿಸಿದರು: “ಮೀಸಲು ಪಡೆ ವ್ಯರ್ಥವಾಗುತ್ತಿದೆಯೆಂದು ಸರ್ಕಾರಕ್ಕೆ ಅನಿಸಿದಲ್ಲಿ ನೈಜ ಸಮರ ಪರಿಣತಿಯನ್ನು ಪಡೆಯುವುದಕ್ಕಾಗಿ ಆಳವಾದ ತರಬೇತಿಯ ಅವಕಾಶವನ್ನು ಭಾರತೀಯರಿಗೆ ಕೊಡಲು ಮೀಸಲು ಪಡೆಯನ್ನು ಸರ್ಕಾರವು ಬಳಸಬಹುದು". ಗಾಂಧಿಯವರ ಅಭಿಪ್ರಾಯದಲ್ಲಿ, ೧೯೦೬ರ ಕರಡು ಅಧಿಶಾಸನವು ಭಾರತೀಯರ ಸ್ಥಾನಮಾನವನ್ನು ಸ್ಥಳೀಯರಿಗಿಂತಲೂ ಕೀಳುಮಟ್ಟಕ್ಕೆ ಇಳಿಸಿತ್ತು. ಆದ್ದರಿಂದ,"ಕಾಫಿರ್‌ರ" ಜನಾಂಗದ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಾಗ್ರಹ ದ ಹಾದಿಯನ್ನು ಅನುಸರಿಸಿ ಅಧಿಶಾಸನವನ್ನು ವಿರೋಧಿಸಿರೆಂದು ಅವರು ಭಾರತೀಯರನ್ನು ಆಗ್ರಹಿಸಿದರು. ಅವರದೇ ಮಾತುಗಳಲ್ಲಿ ಹೇಳುವುದಾದರೆ, "ನಮಗಿಂತಲೂ ಹಿಂದುಳಿದಿರುವ ಬೆರಕೆ ಜನಾಂಗದವರು ಹಾಗೂ ಕಾಫಿರ್‌ ಜನಾಂಗದವರು ಸರ್ಕಾರಕ್ಕೆ ಪ್ರತಿರೋಧವನ್ನು ಒಡ್ಡಿದ್ದಾರೆ. ಅನುಮೋದನೆಗೊಂಡ ಕಾನೂನು ಅವರಿಗೂ ಸಹ ಅನ್ವಯಿಸುತ್ತದೆ, ಆದರೆ ಅವರು ಅದನ್ನು ಪುರಸ್ಕರಿಸುವುದಿಲ್ಲ." ಕಲೆಕ್ಟೆಡ್ ವರ್ಕ್ಸ್ ಆಫ್‌ ಮಹಾತ್ಮ ಗಾಂಧಿ VOL ೫ p ೪೧೦ ೧೯೨೭ರಲ್ಲಿ ಗಾಂಧಿಯವರು ಈ ಘಟನೆಯ ಬಗ್ಗೆ ಹೀಗೆ ಬರೆದರು: "(ಜುಲು) 'ದಂಗೆ'ಯಷ್ಟು ಸ್ಪಷ್ಟವಾಗಿ ಬೋಯೆರ್ ಯುದ್ಧವು ನನಗೆ ಯುದ್ಧದ ಭೀತಿಯನ್ನೇನೂ ಹೊತ್ತು ತರಲಿಲ್ಲ. ಇದು ಯುದ್ಧವೇ ಆಗಿರಲಿಲ್ಲ, ಬದಲಿಗೆ ಇದೊಂದು ಮಾನವ ಬೇಟೆಯೇ ಆಗಿತ್ತು. ಇದು ನನ್ನೊಬ್ಬನ ಅಭಿಪ್ರಾಯ ಮಾತ್ರವಲ್ಲ, ನನ್ನೊಂದಿಗೆ ಸಂವಾದ ಮಾಡಿದ ಅನೇಕ ಇಂಗ್ಲಿಷರ ಅಭಿಪ್ರಾಯ ಕೂಡಾ." [48] ^ ಗಾಂಧಿ: ಆನ್ ಆಟೊಬಯೊಗ್ರಫಿ: ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌, ಟ್ರಾನ್ಸ್‌. ಮಹಾದೇವ್ ದೇಸಾಯಿ, (ಬೋಸ್ಟನ್, ಬೆಕನ್ ಪ್ರೆಸ್, ೧೯೯೩) p೩೧೩ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ (೧೯೧೬–೧೯೪೫) ಗಾಂಧಿಯವರು ಭಾರತದಲ್ಲಿ ವಾಸಿಸಲು ೧೯೧೫ರಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಗಳಲ್ಲಿ ಮಾತನಾಡಿದರು, ಆದರೆ ಆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದ ಗೌರವಾನ್ವಿತ ನಾಯಕರಾದ ಗೋಪಾಲಕೃಷ್ಣ ಗೋಖಲೆಯವರಿಂದ ಗಾಂಧಿಯವರಿಗೆ ಭಾರತೀಯ ಸಮಸ್ಯೆಗಳು, ರಾಜಕೀಯ ಮತ್ತು ಭಾರತೀಯ ಜನತೆಯ ಕುರಿತಾದ ಪ್ರಾಥಮಿಕ ಪರಿಚಯವಾಯಿತು. ಚಂಪಾರಣ್ ಮತ್ತು ಖೇಡಾ right|thumb|೧೯೧೮ ರಲ್ಲಿ, ಖೇಡಾ ಮತ್ತು ಚಂಪಾರಣ್ ಸತ್ಯಾಗ್ರಹಗಳ ಸಮಯದಲ್ಲಿ ಗಾಂಧಿಯವರು|link=Special:FilePath/Gandhi_Kheda_1917.jpg ಗಾಂಧಿಯವರ ಮೊದಲ ಪ್ರಮುಖ ಸಾಧನೆಗಳು ೧೯೧೮ರಲ್ಲಿ ಚಂಪಾರಣ್‌‌ ಚಳವಳಿ ಮತ್ತು ಖೇಡಾ ಸತ್ಯಾಗ್ರಹ ದೊಂದಿಗೆ ಪ್ರಾರಂಭವಾದವು. ಆದರೂ, ಅವರ ಬದುಕಿಗೆ ಅಗತ್ಯವಾದ ಆಹಾರ ಬೆಳೆಗಳ ಬದಲಿಗೆ ಇಂಡಿಗೋ ಮತ್ತು ಇತರ ವಾಣಿಜ್ಯ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಖೇಡಾ ಸತ್ಯಾಗ್ರಹದಲ್ಲಿ ಸೇರಿದ್ದವು. ಜಮೀನುದಾರರ (ಬಹುತೇಕವಾಗಿ ಬ್ರಿಟಿಷರ) ಖಾಸಗಿ ಸೇನೆಯಿಂದ ನಿಗ್ರಹಿಸಲ್ಪಡುತ್ತಿದ್ದ ಅವರಿಗೆ ಬಹಳ ಕಡಿಮೆ ಪರಿಹಾರ ಧನವನ್ನು ನೀಡಲಾಗುತ್ತಿತ್ತು. ಹೀಗಾಗಿ ಅವರು ತೀವ್ರ ಬಡತನದಲ್ಲಿ ಸಿಲುಕಿದ್ದರು. ಹಳ್ಳಿಗಳು ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ಸ್ಥಿತಿಯಲ್ಲಿದ್ದವು; ಮತ್ತು ಕುಡಿತ, ಅಸ್ಪೃಶ್ಯತೆ ಹಾಗೂ ಬುರ್ಖಾ ಪದ್ಧತಿಗಳು ಅತಿರೇಕವಾಗಿದ್ದವು. ಇಂಥಾ ವಿನಾಶಕಾರಿ ಕ್ಷಾಮದ ಹಿಂಸೆಯ ಸನ್ನಿವೇಶ ದಲ್ಲಿಯೂ ಬ್ರಿಟಿಷ್ ಆಡಳಿತವು ತೆರಿಗೆಯೊಂದನ್ನು ವಿಧಿಸಿದ್ದೇ ಅಲ್ಲದೇ ಅದನ್ನು ಹೆಚ್ಚಿಸುತ್ತಲೇ ಹೋಯಿತು. ಪರಿಸ್ಥಿತಿಯು ಹತಾಶೆಯಿಂದ ಕೂಡಿತ್ತು. ಗುಜರಾತ್‌ನ ಖೇಡಾದಲ್ಲಿಯೂ ಸಹ ಇದೇ ಸಮಸ್ಯೆಯಿತ್ತು. ಆ ಪ್ರಾಂತ್ಯದಿಂದ ತಮ್ಮ ನುರಿತ ಬೆಂಬಲಿಗರು ಹಾಗೂ ಹೊಸ ಸ್ವಯಂಸೇವಕರ ಪಡೆಯನ್ನು ಸಂಘಟಿಸಿದ ಗಾಂಧಿಯವರು ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿದರು. ಹದಗೆಟ್ಟ ಬದುಕಿನ ಸಾರ್ವತ್ರಿಕ ಪರಿಸ್ಥಿತಿಯೂ ಸೇರಿದಂತೆ ಸಂಕಟ ಸನ್ನಿವೇಶದ ಘೋರ ಮತ್ತು ಭಯಾನಕ ಅಧ್ಯಾಯಗಳನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ವಿಸ್ತೃತ ಅಧ್ಯಯನ ಮತ್ತು ಸಮೀಕ್ಷೆಯನ್ನು ಅವರು ನಡೆಸಿದರು. ಹಳ್ಳಿಗರ ಆತ್ಮವಿಶ್ವಾಸದ ಬುನಾದಿಯ ಮೇಲೆ ಹಳ್ಳಿಗಳ ಶುದ್ಧೀಕರಣ, ಶಾಲೆಗಳು ಹಾಗೂ ಆಸ್ಪತ್ರೆಗಳ ನಿರ್ಮಾಣದ ನೇತೃತ್ವವನ್ನು ವಹಿಸಲು ಮುಂದಾದ ಅವರು, ಮೇಲೆ ತಿಳಿಸಲಾದ ಅನೇಕ ಸಾಮಾಜಿಕ ಪಿಡುಗುಗಳನ್ನು ಮಾಡದಂತಿರುವ ಹಾಗೂ ಖಂಡಿಸುವ ನಿಟ್ಟಿನಲ್ಲಿ ಹಳ್ಳಿಗರಲ್ಲಿ ನಾಯಕತ್ವದ ಗುಣವನ್ನು ಬೆಳೆಸುವೆಡೆಗೆ ಪ್ರೋತ್ಸಾಹಿಸಿದರು. ಆದರೆ, ಕ್ಷೋಭೆಯನ್ನು ಸೃಷ್ಟಿಸಿದ ಆಪಾದನೆಯ ಮೇರೆಗೆ ಪೊಲೀಸರಿಂದ ಅವರು ಬಂಧನಕ್ಕೊಳಗಾಗಿ ಆ ಪ್ರಾಂತ್ಯದಿಂದ ಹೊರಹೋಗುವಂತೆ ಆದೇಶಿಸಲ್ಪಟ್ಟಾಗಲೇ ಅವರ ವ್ಯಕ್ತಿತ್ವದ ಪ್ರಮುಖ ಪ್ರಭಾವ ಹೊರಬಿದ್ದಿತು. *ನೂರಾರು, ಸಾವಿರಾರು ಜನರು ಕಾರಾಗೃಹ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಗಳ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿ, ಅವರ ಬಿಡುಗಡೆಯಾಗಬೇಕೆಂದು ಒತ್ತಾಯಿಸಿದರು. ನ್ಯಾಯಾಲಯವು ಒಲ್ಲದ ಮನಸ್ಸಿನೊಂದಿಗೆ ಗಾಂಧಿಯವರನ್ನು ಬಿಡುಗಡೆ ಮಾಡಿತು. ಜಮೀನುದಾರರ ವಿರುದ್ಧ ಗಾಂಧಿಯವರು ಸುಸಂಘಟಿತ ಪ್ರತಿಭಟನೆಗಳನ್ನು ನಡೆಸಿದ ಫಲವಾಗಿ, ಬ್ರಿಟಿಷ್ ಸರ್ಕಾರದ ಮಾರ್ಗದರ್ಶನದೊಂದಿಗೆ ಜಮೀನುದಾರರು ಒಂದು ಕರಾರಿಗೆ ಸಹಿ ಹಾಕಿದರು. ಇದರನ್ವಯ ಆ ವಲಯದ ಬಡ ರೈತರಿಗೆ ಹೆಚ್ಚಿನ ಪರಿಹಾರ ಧನ ಮತ್ತು ಬೇಸಾಯದ ಮೇಲಣ ನಿಯಂತ್ರಣ ನೀಡಿ, ಕ್ಷಾಮದ ಅಂತ್ಯದವರೆಗೂ ಕಂದಾಯಗಳ ಹೆಚ್ಚಳ ಮತ್ತು ಅವುಗಳ ವಸೂಲಿಯನ್ನು ರದ್ದುಗೊಳಿಸಲಾಯಿತು. ಈ ಚಳುವಳಿ ನಡೆಯುತ್ತಿದ್ದ ವೇಳೆ, ಜನರು ಗಾಂಧಿಯವರನ್ನು ಬಾಪು (ಅಪ್ಪ) ಮತ್ತು ಮಹಾತ್ಮ (ಮಹಾನ್ ಆತ್ಮ) ಎಂದು ಕರೆದರು. ಖೇಡಾದಲ್ಲಿ ಬ್ರಿಟಿಷ್‌ ಆಡಳಿತದೊಂದಿಗಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್‌ ಅವರು ರೈತರನ್ನು ಪ್ರತಿನಿಧಿಸಿದರು. ಬ್ರಿಟಿಷ್ ಆಡಳಿತವು ಕಂದಾಯ ವಸೂಲಿಯನ್ನು ರದ್ದುಗೊಳಿಸಿ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಿತು. ಇದರ ಫಲವಾಗಿ, ಗಾಂಧಿಯವರ ಪ್ರಭಾವ ರಾಷ್ಟ್ರದೆಲ್ಲೆಡೆ ಹಬ್ಬಿತು. ಅಸಹಕಾರ ಅಂದೋಲನ ಬ್ರಿಟಿಷ್‌ರ ವಿರುದ್ಧದ ಹೋರಾಟದಲ್ಲಿ ಗಾಂಧಿಯವರು ಅಸಹಕಾರ, ಅಹಿಂಸೆ ಮತ್ತು ಶಾಂತಿಯುತ ಪ್ರತಿರೋಧವನ್ನು ತಮ್ಮ ಶಸ್ತ್ರಗಳನ್ನಾಗಿ ಬಳಸಿದರು. ಪಂಜಾಬ್‌ನಲ್ಲಿ, ಬ್ರಿಟಿಷ್ ಪಡೆಗಳು ಮಾಡಿದ ನಾಗರಿಕರ ಜಲಿಯನ್‌ವಾಲಾ ಬಾಗ್‌ ಹತ್ಯಾಕಾಂಡವು (ಇದಕ್ಕೆ ಅಮೃತಸರ ಹತ್ಯಾಕಾಂಡ ಎಂದೂ ಹೆಸರಿದೆ) ರಾಷ್ಟ್ರಕ್ಕೆ ತೀವ್ರವಾದ ಪೆಟ್ಟು ನೀಡಿತು. ಇದರಿಂದಾಗಿ ಸಾರ್ವಜನಿಕರ ಸಿಟ್ಟು ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾದವು. ಗಾಂಧಿಯವರು ಬ್ರಿಟಿಷ್‌ ಆಡಳಿತದ ಕೃತ್ಯ ಹಾಗೂ ಭಾರತೀಯರ ಸೇಡಿನ ಹಿಂಸಾಚಾರಗಳೆರಡನ್ನೂ ಖಂಡಿಸಿದರು. ಗಾಂಧಿಯವರು ಹಿಂಸಾಚಾರದ ಘಟನೆಯನ್ನು ಖಂಡಿಸಿ, ಹಲ್ಲೆಗೀಡಾದ ಬ್ರಿಟಿಷ್ ನಾಗರಿಕರಿಗೆ ಸಂತಾಪ ಸೂಚಿಸುವ ನಿರ್ಣಯವನ್ನು ಬರೆದಿದ್ದರು. ಮೊದಲು ಇದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ತತ್ವಗಳ ಪ್ರಕಾರ ಎಲ್ಲಾ ರೀತಿಯ ಹಿಂಸಾಚಾರವೂ ಕೆಟ್ಟದು ಮತ್ತು ಎಂದಿಗೂ ಸಮರ್ಥಿಸಿಕೊಳ್ಳಲಾಗದು ಎಂದು ಗಾಂಧಿಯವರು ಭಾವುಕವಾಗಿ ಭಾಷಣ ಮಾಡಿದಾಗ ಈ ನಿರ್ಣಯವನ್ನು ಅಂಗೀಕರಿಸಲಾಯಿತು.R. *ಗಾಂಧಿ, ಪಟೇಲ್‌: ಎ ಲೈಫ್‌ , p. ೮೨. ಆದರೆ ಹತ್ಯಾಕಾಂಡ ಮತ್ತು ಸೇಡಿನ ಹಿಂಸಾಚಾರದ ನಂತರವಷ್ಟೇ ಸಂಪೂರ್ಣ ಸ್ವ-ಸರ್ಕಾರ ಮತ್ತು ಭಾರತ ಸರ್ಕಾರದ ಎಲ್ಲಾ ಸಂಸ್ಥಾನಗಳ ನಿಯಂತ್ರಣ ಪಡೆಯುವತ್ತ, ಕ್ರಮೇಣ ಸ್ವರಾಜ್‌ ಅಥವಾ ಸಂಪೂರ್ಣ ಸ್ವತಂತ್ರ, ಅಧ್ಯಾತ್ಮಿಕ ಮತ್ತು ರಾಜಕೀಯ ಸ್ವಾತಂತ್ರ್ಯವಾಗಿ ಪರಿಪೂರ್ಣವಾಗಿಸುವತ್ತ ಗಾಂಧಿಯವರ ಮನವು ಕೇಂದ್ರೀಕೃತಗೊಂಡಿತು. ೧೯೨೧ ಡಿಸೆಂಬರ ತಿಂಗಳಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪರವಾಗಿ ಕಾರ್ಯಕಾರೀ ಅಧಿಕಾರವನ್ನು ಗಾಂಧಿಯವರಿಗೆ ನೀಡಲಾಯಿತು. ಅವರ ನಾಯಕತ್ವದಲ್ಲಿ, ಸ್ವರಾಜ್‌ ಎಂಬ ಗುರಿಯಿಟ್ಟುಕೊಂಡ ಕಾಂಗ್ರೆಸ್‌ ಹೊಸ ಸಂವಿಧಾನ ದೊಂದಿಗೆ ಪುನಸ್ಸಂಘಟಿತವಾಯಿತು. ಸಾಂಕೇತಿಕ ಶುಲ್ಕ ಪಾವತಿ ಮಾಡಲು ಸಿದ್ಧವಿದ್ದ ಯಾರಿಗಾದರೂ ಪಕ್ಷದ ಸದಸ್ಯತ್ವ ಲಭ್ಯವಿತ್ತು. ಶಿಸ್ತಿನಲ್ಲಿ ಸುಧಾರಣೆ ತರಲು ಸಮಿತಿಗಳ ಶ್ರೇಣಿ ವ್ಯವಸ್ಥೆಯನ್ನು ಸ್ಥಾಪಿಸಿದ್ದರಿಂದಾಗಿ, ಒಂದು ಉತ್ಕೃಷ್ಟ ಸಂಘಟನೆಯಂತಿದ್ದ ಪಕ್ಷವು ಇಡೀ ರಾಷ್ಟ್ರದಲ್ಲೇ ಜನಪ್ರಿಯತೆ ಗಳಿಸುವ ಪಕ್ಷವಾಗಿ ಮಾರ್ಪಾಡಾಯಿತು. ವಿದೇಶೀ ಉತ್ಪಾದನೆಗಳು, ಅದರಲ್ಲೂ ವಿಶೇಷವಾಗಿ ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವಂತಹ "ಸ್ವದೇಶಿ" ನೀತಿಯನ್ನು ತೊಡಗಿಸಲು ಗಾಂಧಿಯವರು ತಮ್ಮ ಅಹಿಂಸಾ ತತ್ವದ ವೇದಿಕೆಯನ್ನು ವಿಸ್ತರಿಸಿದರು. ಇದಕ್ಕೆ ಸಂಬಂಧಿಸಿದಂತೆ, ಎಲ್ಲಾ ಭಾರತೀಯರು, ಬ್ರಿಟಿಷ್-ಉತ್ಪಾದಿತ ಜವಳಿಗಳ ಬದಲಿಗೆ ಮನೆಯಲ್ಲಿ ನೂತ ಖಾದಿ ಉಡುಪನ್ನೇ ಧರಿಸಬೇಕೆಂದು ಸಮರ್ಥಿಸಿದರು. ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲವನ್ನು ಸೂಚಿಸಲು, ಎಲ್ಲಾ ಭಾರತೀಯ ಪುರುಷರು-ಸ್ತ್ರೀಯರು, ಅವರು ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ, ಪ್ರತಿದಿನವೂ ಸ್ವಲ್ಪ ಸಮಯ ಖಾದಿ ಯನ್ನು ನೂಲಲು ಗಾಂಧಿಯವರು ಪ್ರೇರೇಪಿಸಿದರು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೮೯. 'ಇಂತಹ ಚಟುವಟಿಕೆಗಳು ಮಹಿಳೆಯರಿಗಾಗಿ ಗೌರವಾರ್ಹ ಚಟುವಟಿಕೆಗಳಲ್ಲ' ಎಂದು ಹೆಚ್ಚಿನವರು ತಿಳಿದುಕೊಂಡಿದ್ದ ಸಮಯದಲ್ಲಿ ಈ ಆಂದೋಲನದಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲು ಹಾಗೂ ಒಲ್ಲದವರು ಮತ್ತು ಮಹತ್ವಾಕಾಂಕ್ಷಿಗಳನ್ನು ನಿರ್ಮಲಗೊಳಿಸಲು ಇದು ಒಂದು ರಣನೀತಿ ಯಾಗಿತ್ತು. ಬ್ರಿಟಿಷ್ ಉತ್ಪಾದನೆಗಳನ್ನು ಬಹಿಷ್ಕರಿಸುವುದರೊಂದಿಗೆ, ಬ್ರಿಟಿಷ್ ವಿದ್ಯಾ ಸಂಸ್ಥೆಗಳನ್ನು ಮತ್ತು ನ್ಯಾಯಾಲಯಗಳನ್ನು ಬಹಿಷ್ಕರಿಸಿ, ಸರ್ಕಾರೀ ನೌಕರಿಗಳಿಗೆ ರಾಜೀನಾಮೆ ನೀಡಿ ಮತ್ತು ಬ್ರಿಟಿಷ್ ಬಿರುದುಗಳು ಹಾಗೂ ಗೌರವಗಳನ್ನು ತ್ಯಜಿಸಿ ರೆಂದು ಗಾಂಧಿಯವರು ಜನರನ್ನು ಆಗ್ರಹಪಡಿಸಿದರು. ಭಾರತೀಯ ಸಮುದಾಯದ ಎಲ್ಲಾ ಸ್ತರಗಳ ಉತ್ಸಾಹ ಹಾಗೂ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದ "ಅಸಹಕಾರ ಆಂದೋಲನ"ವು ವ್ಯಾಪಕ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿತು. ಆದಾಗ್ಯೂ, ಆಂದೋಲನವು ತನ್ನ ಉತ್ತುಂಗವನ್ನು ತಲುಪುವಷ್ಟರಲ್ಲಿಯೇ, ಉತ್ತರ ಪ್ರದೇಶದ ಚೌರಿ ಚೌರಾ ಪಟ್ಟಣದಲ್ಲಿ ೧೯೨೨ರ ಫೆಬ್ರುವರಿ ತಿಂಗಳಲ್ಲಿ ನಡೆದ ಒಂದು ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ ಅದು ಹಠಾತ್ತಾಗಿ ಕೊನೆಗೊಂಡಿತು. ಆಂದೋಲನವು ಹಿಂಸಾಚಾರದತ್ತ ತಿರುವು ಪಡೆದುಕೊಳ್ಳಲಿದೆಯೆಂದು ಆತಂಕಗೊಂಡು ಹಾಗೂ ಇದು ತಮ್ಮ ಕಾರ್ಯವನ್ನೆಲ್ಲಾ ವ್ಯರ್ಥಗೊಳಿಸಬಹುದೆಂದು ಮನಗಂಡ ಗಾಂಧಿಯವರು, ಸಾಮೂಹಿಕ ನಾಗರಿಕ ಅವಿಧೇಯತಾ ಆಂದೋಲನವನ್ನು ಹಿಂದೆಗೆದುಕೊಂಡರು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೧೦೫. ೧೯೨೨ರ ಮಾರ್ಚ್ ೧೦ರಂದು ಗಾಂಧಿಯವರನ್ನು ಬಂಧಿಸಿ, ಶಾಂತಿಭಂಗ ಮಾಡಿದರೆಂಬ ಆಪಾದನೆಯನ್ನು ಅವರ ಮೇಲೆ ಹೊರಿಸಿ, ಆರು ವರ್ಷದ ಕಾರಾಗೃಹ ಸಜೆ ವಿಧಿಸಲಾಯಿತು. ಅವರು ೧೯೨೨ರ ಮಾರ್ಚ್ ೧೮ರಂದು ತಮ್ಮ ಸಜೆಯನ್ನು ಆರಂಭಗೊಳಿಸಿದರು. ಸಜೆಯಲ್ಲಿ ಕೇವಲ ಎರಡು ವರ್ಷಗಳನ್ನು ಪೂರೈಸಿದ್ದಾಗ ಕರುಳುವಾಳ ರೋಗದ ಒಂದು ಶಸ್ತ್ರಚಿಕಿತ್ಸೆಗಾಗಿ ೧೯೨೪ರ ಫೆಬ್ರವರಿ ತಿಂಗಳಲ್ಲಿ ಅವರನ್ನು ಬಿಡುಗಡೆಗೊಳಿಸಲಾಯಿತು. ಗಾಂಧಿಯವರ ಒಗ್ಗೂಡಿಸುವಂತಹ ವ್ಯಕ್ತಿತ್ವದ ಅನುಪಸ್ಥಿತಿಯಲ್ಲಿ, ಅವರ ಕಾರಾಗೃಹವಾಸದ ವರ್ಷಗಳ ಅವಧಿಯಲ್ಲಿ ಸೀಳಲು ಪ್ರಾರಂಭಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಎರಡು ಬಣಗಳಾಗಿ ಒಡೆಯಿತು. ಒಂದೆಡೆ ಚಿತ್ತರಂಜನ್‌ ದಾಸ್‌ ಮತ್ತು ಮೋತಿಲಾಲ್‌ ನೆಹರೂ ನೇತೃತ್ವದ ಬಣವು ಶಾಸನ ಸಭೆಯಲ್ಲಿ ಭಾಗವಹಿಸುವ ಒಲವನ್ನು ತೋರಿದರೆ; ಇನ್ನೊಂದೆಡೆ ಚಕ್ರವರ್ತಿ ರಾಜಗೋಪಾಲಾಚಾರಿ ಮತ್ತು ಸರ್ದಾರ್‌ ವಲ್ಲಭ್‌ಭಾಯಿ ಪಟೇಲ್‌ ನೇತೃತ್ವದ ಇನ್ನೊಂದು ಬಣವು ಈ ಪ್ರಸ್ತಾಪವನ್ನು ವಿರೋಧಿಸಿತು. ಇದಕ್ಕಿಂತಲೂ ಹೆಚ್ಚಾಗಿ, ಅಹಿಂಸಾ ಆಂದೋಲನದ ಉತ್ತುಂಗದಲ್ಲಿ ಸದೃಢವಾಗಿದ್ದ ಹಿಂದೂ-ಮುಸ್ಲಿಮ್‌ರ ನಡುವಿನ ಸಹಕಾರ ಭಾವವು ಮುರಿದು ಬೀಳುತ್ತಿತ್ತು. ೧೯೨೪ರ ಶರತ್ಕಾಲದಲ್ಲಿ ಕೈಗೊಂಡ ಮೂರು ವಾರಗಳ ಉಪವಾಸವೂ ಸೇರಿದಂತೆ, ಹಲವಾರು ರೀತಿಯಲ್ಲಿ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಗಾಂಧಿಯವರು ಯತ್ನಿಸಿದರು, ಆದರೂ ಇದರ ಯಶಸ್ಸು ಸೀಮಿತ ಮಟ್ಟದ್ದಾಗಿತ್ತು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೧೩೧. ಸ್ವರಾಜ್ ಮತ್ತು ಉಪ್ಪಿನ ಸತ್ಯಾಗ್ರಹ (ಉಪ್ಪಿನ ದಂಡಯಾತ್ರೆ) thumb|5 ಏಪ್ರಿಲ್‌ ೧೯೩೦ರಂದು ದಂಡಿಯಲ್ಲಿ ಗಾಂಧಿ, ಉಪ್ಪಿನ ಸಂಚಲನದ ಕೊನೆಗೆ thumb|left|7 ಏಪ್ರಿಲ್‌ 1939ರಂದು ಬಾಂಬೆಯ ಬಿರ್ಲಾ ಹೌಸ್‌ನಲ್ಲಿ ಮಹಾದೇವ್‌ ದೇಸಾಯಿಯವರು (ಎಡ) ವೈಸರಾಯ್‌ರಿಂದ ಗಾಂಧಿಯವರಿಗೆ ಬಂದ ಪತ್ರವನ್ನು ಓದಿದರು. ೧೯೨೦ರ ದಶಕದ ಬಹುಪಾಲು ಗಾಂಧಿಯವರು ಸಕ್ರಿಯ ರಾಜಕಾರಣದಿಂದ ಮತ್ತು ಲೋಕಪ್ರಸಿದ್ಧಿಯಿಂದ ದೂರ ಉಳಿದು, ಸ್ವರಾಜ್‌ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಡುವಿನ ಒಡಕನ್ನು ಸರಿಪಡಿಸಲು ಹಾಗೂ ಅಸ್ಪೃಶ್ಯತೆ, ಮದ್ಯಪಾನ, ಅಜ್ಞಾನ ಮತ್ತು ಬಡತನದ ವಿರುದ್ಧದ ಅಭಿಯಾನವನ್ನು ಮುಂದುವರೆಸಲು ಇಚ್ಛಿಸಿದರು. ಅವರು ೧೯೨೮ರಲ್ಲಿ ಮುಂಚೂಣಿಗೆ ಮರಳಿ ಬಂದರು. ಇದರ ಹಿಂದಿನ ವರ್ಷ, ಬ್ರಿಟಿಷ್ ಸರ್ಕಾರವು ಸರ್ ಜಾನ್‌ ಸೈಮನ್‌ ನೇತೃತ್ವದ ಒಂದು ಹೊಸ ಸಾಂವಿಧಾನಿಕ ಸುಧಾರಣಾ ಆಯೋಗವನ್ನು ನೇಮಿಸಿತ್ತು. ಆದರೆ ಇದರಲ್ಲಿ ಒಬ್ಬ ಭಾರತೀಯ ಸದಸ್ಯನೂ ಇರಲಿಲ್ಲ. ಇದರ ಪರಿಣಾಮವಾಗಿ ಭಾರತೀಯ ರಾಜಕೀಯ ಪಕ್ಷಗಳು ಆಯೋಗವನ್ನು ಬಹಿಷ್ಕರಿಸಿದವು. ೧೯೨೮ರ ಡಿಸೆಂಬರ್ ತಿಂಗಳಲ್ಲಿ ನಡೆದ ಕೋಲ್ಕತ್ತಾ ಸಭೆಯಲ್ಲಿ, 'ಬ್ರಿಟಿಷ್ ಸರ್ಕಾರವು ಭಾರತಕ್ಕೆ ಪರಮಾಧಿಕಾರವನ್ನು ನೀಡಲಿ, ಅಥವಾ, ದೇಶದ ಸಂಪೂರ್ಣ ಸ್ವಾತಂತ್ರ್ಯವನ್ನು ಗುರಿಯಾಗಿಟ್ಟು ಕೊಂಡಿರುವ ಅಸಹಕಾರದ ಹೊಸ ಆಂದೋಲನವನ್ನು ಎದುರಿಸಲಿ' ಎಂಬ ನಿರ್ಣಯವನ್ನು ಗಾಂಧಿಯವರು ಮಂಡಿಸಿದರು. ತತ್‌ಕ್ಷಣದ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿದ ಯುವ ನಾಯಕರಾದ ಸುಭಾಷ್ ಚಂದ್ರ ಬೋಸ್‌ ಮತ್ತು ಜವಾಹರ್‌ ಲಾಲ್‌ ನೆಹರೂ ಅವರ ಅಭಿಪ್ರಾಯದ ಬಲಾಬಲವನ್ನು ನಿರ್ಣಯಿಸಿದ ರಲ್ಲದೆ, ಸ್ವಾತಂತ್ರ್ಯಕ್ಕಾಗಿ ತಮ್ಮದೇ ಆದ ಕರೆಗಾಗಿ ಎರಡು ವರ್ಷಗಳ ನಿರೀಕ್ಷೆಯನ್ನು ಒಂದು ವರ್ಷಕ್ಕೆ ಮೊಟಕುಗೊಳಿಸಿದರು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೧೭೨. ಬ್ರಿಟಿಷ್‌ರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ೧೯೨೯ರ ಡಿಸೆಂಬರ ೩೧ರಂದು, ಲಾಹೋರಿನಲ್ಲಿ ಭಾರತದ ಧ್ವಜವನ್ನು ಹಾರಿಸಲಾಯಿತು. ಲಾಹೋರಿನಲ್ಲಿ ಸಭೆ ಸೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ೧೯೩೦ರ ಜನವರಿ ೨೬ರಂದು, ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಿತು. ಇತರ ಪ್ರತಿಯೊಂದು ಭಾರತೀಯ ಸಂಘಟನೆಯೂ ಈ ದಿನವನ್ನು ಆಚರಿಸಿತು. ೧೯೩೦ರ ಮಾರ್ಚ್‌ ತಿಂಗಳಲ್ಲಿ, ಬ್ರಿಟಿಷ್ ಸರ್ಕಾರವು ವಿಧಿಸಿದ ಉಪ್ಪು ತೆರಿಗೆಯನ್ನು ವಿರೋಧಿಸಿ ಹೊಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ತಾವೇ ಉಪ್ಪನ್ನು ತಯಾರಿಸುವ ಉದ್ದೇಶದಿಂದ, ಮಾರ್ಚ್‌ ೧೨ರಂದು ಅಹ್ಮದಾಬಾದ್‌ನಿಂದ ಪಾದಯಾತ್ರೆ ಆರಂಭಿಸಿ ೪೦೦ ಕಿಲೋಮೀಟರ್‌ (೨೪೮ ಮೈಲ್‌ಗಳು)ಗಳಷ್ಟು ದೂರ ನಡೆದು, ಏಪ್ರಿಲ್‌ ೬ರಂದು ದಂಡಿ ತಲುಪಿದ್ದು, ಇದರ ಪ್ರಮುಖಾಂಶವಾಗಿತ್ತು. ಸಮುದ್ರದತ್ತ ಸಾಗಿದ ಈ ದಂಡಯಾತ್ರೆಯಲ್ಲಿ ಸಾವಿರಾರು ಭಾರತೀಯರು ಗಾಂಧಿಯವರ ಜತೆಗೂಡಿದರು. ಭಾರತದ ಮೇಲಿನ ಬ್ರಿಟಿಷ್‌ರ ಹಿಡಿತವನ್ನು ಬುಡಮೇಲುಗೊಳಿಸುವಲ್ಲಿನ ಗಾಂಧಿಯವರ ಈ ಆಂದೋಲನವು ಯಶಸ್ವೀ ಆಂದೋಲನಗಳಲ್ಲಿ ಒಂದಾಗಿದ್ದು, ೬೦,೦೦೦ಕ್ಕೂ ಹೆಚ್ಚು ಜನರನ್ನು ಬಂಧಿಸುವುದರ ಮೂಲಕ ಬ್ರಿಟಿಷ್ ಸರ್ಕಾರವು ಇದಕ್ಕೆ ಪ್ರತಿಕ್ರಿಯೆ ನೀಡಿತು. ಲಾರ್ಡ್ ಎಡ್ವರ್ಡ್‌ ಇರ್ವಿನ್‌ರ ಪ್ರಾತಿನಿಧ್ಯದೊಂದಿಗೆ ಬ್ರಿಟಿಷ್‌ ಸರ್ಕಾರವು ಗಾಂಧಿಯವರೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿತು. ೧೯೩೧ರ ಮಾರ್ಚ್‌ ತಿಂಗಳಲ್ಲಿ ಗಾಂಧಿ-ಇರ್ವಿನ್‌ ಒಪ್ಪಂದ ಕ್ಕೆ ಸಹಿ ಹಾಕಲಾಯಿತು. ನಾಗರಿಕ ಅಸಹಕಾರ ಆಂದೋಲನವನ್ನು ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಎಲ್ಲಾ ರಾಜಕೀಯ ಬಂಧಿತರನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು. ಈ ಒಪ್ಪಂದದ ಫಲವಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಕೈಕ ಪ್ರತಿನಿಧಿಯಾಗಿ ಗಾಂಧಿಯವರನ್ನು ಲಂಡನ್‌ನಲ್ಲಿನ ದುಂಡುಮೇಜಿನ ಸಮ್ಮೇಳನಕ್ಕೆ ಹಾಜರಾಗಲು ಆಮಂತ್ರಿಸಲಾಯಿತು. ಈ ಸಮ್ಮೇಳನವು ಅಧಿಕಾರವನ್ನು ಹಸ್ತಾಂತರಗೊಳಿಸುವ ಬದಲಿಗೆ ಭಾರತದ ರಾಜಕುಮಾರರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ಕೇಂದ್ರೀಕೃತವಾದದ್ದು ಗಾಂಧಿಯವರಿಗೆ ನಿರಾಶೆಯುಂಟುಮಾಡಿತು. ಇದಕ್ಕಿಂತಲೂ ಹೆಚ್ಚಾಗಿ, ಲಾರ್ಡ್ ಇರ್ವಿನ್‌ರ ಉತ್ತರಾಧಿಕಾರಿಯಾದ ಲಾರ್ಡ್ ವಿಲಿಂಗ್ಡನ್‌ ರಾಷ್ಟ್ರವಾದಿಗಳ ಚಲನವಲನಗಳನ್ನು ನಿಯಂತ್ರಿಸುವ ಅಭಿಯಾನವನ್ನು ಆರಂಭಿಸಿದರು. ಗಾಂಧಿಯವರನ್ನು ಪುನ: ಬಂಧಿಸಲಾಯಿತು. ತಮ್ಮ ಅನುಯಾಯಿಗಳಿಂದ ಅವರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಟ್ಟು ಅವರ ಪ್ರಭಾವನ್ನು ಕಡಿಮೆಗೊಳಿಸಲು ಬ್ರಿಟಿಷ್ ಸರ್ಕಾರವು ಹವಣಿಸಿತು. ಆದರೆ, ಈ ತಂತ್ರವು ಸಫಲವಾಗಲಿಲ್ಲ. ೧೯೩೨ರಲ್ಲಿ, ದಲಿತ ನಾಯಕ ಬಿ. ಆರ್‌. ಅಂಬೇಡ್ಕರ್‌ರವರ ಚಳುವಳಿಯ ಫಲವಾಗಿ, ಸರ್ಕಾರವು ಹೊಸ ಸಂವಿಧಾನದಡಿ ಅಸ್ಪೃಶ್ಯರಿಗಾಗಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ನೀಡಿತು. ಇದನ್ನು ಪ್ರತಿಭಟಿಸಿ ಗಾಂಧಿಯವರು ಸೆಪ್ಟೆಂಬರ್ ೧೯೩೨ರಲ್ಲಿ ಆರು ದಿನಗಳ ಉಪವಾಸವನ್ನು ಕೈಗೊಂಡ ಫಲವಾಗಿ, ದಲಿತ ಕ್ರಿಕೆಟ್ ಪಟುವಾಗಿದ್ದು ರಾಜಕೀಯ ಮುಖಂಡರಾಗಿ ಬದಲಾದ ಪಾಲ್ವಂಕರ್‌ ಬಾಲೂ ಅವರು ಮಧ್ಯಸ್ಥಿಕೆ ವಹಿಸಿದ ಮಾತುಕತೆಗಳ ಮೂಲಕ ಸರ್ಕಾರವು ಇನ್ನಷ್ಟು ಸಮದರ್ಶಿಯಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಮಾಡಿತು. *ಇದು 'ಹರಿಜನ್‌' ಅಥವಾ 'ದೇವರ ಮಕ್ಕಳು' ಎಂದು ಮರುನಾಮಕರಣ ಮಾಡಿದ ಅಸ್ಪೃಶ್ಯರ ಜೀವನಗಳನ್ನು ಉತ್ತಮಗೊಳಿಸುವ ಗಾಂಧಿಯವರ ಒಂದು ಹೊಸ ಅಭಿಯಾನದ ಆರಂಭವಾಗಿತ್ತು. ಹರಿಜನ್‌ ಅಭಿಯಾನವನ್ನು ಬೆಂಬಲಿಸಲು ಗಾಂಧಿಯವರು ೧೯೩೩ರ ಮೇ ೮ರಂದು ೨೧ ದಿನಗಳ ಸ್ವಶುದ್ಧೀಕರಣದ ಉಪವಾಸವನ್ನು ಆರಂಭಿಸಿದರು.R. ಗಾಂಧಿ, ಪಟೇಲ್‌: ಎ ಲೈಫ್‌ , pp. ೨೩೦–೩೨. ಆದಾಗ್ಯೂ, ಈ ಹೊಸ ಆಭಿಯಾನವು ದಲಿತ ಸಮುದಾಯದೊಳಗೆ ಸಾರ್ವತ್ರಿಕವಾಗಿ ಸ್ವೀಕೃತವಾಗಲಿಲ್ಲ. ಪ್ರಮುಖ ಮುಖಂಡರಾದ ಬಿ. ಆರ್‌. ಅಂಬೇಡ್ಕರ್‌ ರವರು ಗಾಂಧಿಯವರು ಬಳಸಿದ ಹರಿಜನ್‌ ಪದವನ್ನು ಖಂಡಿಸಿದರು. ಇದು ದಲಿತರು ಸಾಮಾಜಿಕವಾಗಿ ಅಪಕ್ವವಾಗಿದ್ದಾರೆಂದು ಬಿಂಬಿಸುತ್ತದೆ; ಹಾಗೂ, ಸವಲತ್ತುಗಳುಳ್ಳ ಜಾತೀಯ ಭಾರತೀಯರು ಇದರಲ್ಲಿ ಪಿತೃಪ್ರಾಯತಾವಾದದ ಪಾತ್ರವನ್ನು ವಹಿಸಿದ್ದಾರೆಂಬುದು ಇದರ ಪ್ರಮುಖ ಕಾರಣವಾಗಿತ್ತು. ಗಾಂಧಿಯವರು ದಲಿತರ ರಾಜಕೀಯ ಹಕ್ಕುಗಳನ್ನು ಶಿಥಿಲಗೊಳಿಸುತ್ತಿದ್ದಾರೆ ಎಂಬುದು ಅಂಬೇಡ್ಕರ್ ಮತ್ತು ಅವರ ಸಹಯೋಗಿಗಳ ಅಭಿಪ್ರಾಯವಾಗಿತ್ತು. ತಾವು ವೈಶ್ಯ ಜಾತಿಯಲ್ಲಿ ಜನಿಸಿದ್ದರೂ, ಅಂಬೇಡ್ಕರ್‌ರಂತಹ ದಲಿತ ಕ್ರಿಯಾವಾದಿಗಳು ಲಭ್ಯವಿದ್ದರೂ ಸಹ ತಾವು ದಲಿತರ ಪರವಾಗಿ ಮಾತನಾಡಬಲ್ಲೆವು ಎಂದು ಗಾಂಧಿಯವರು ಸಮರ್ಥಿಸಿದ್ದರು. ೧೯೩೪ರ ಬೇಸಿಗೆಯಲ್ಲಿ, ಅವರ ಪ್ರಾಣಹತ್ಯೆಯ ಮೂರು ವಿಫಲ ಯತ್ನಗಳು ನಡೆದಿದ್ದವು. ಚುನಾವಣೆಗಳಲ್ಲಿ ಸ್ಪರ್ಧಿಸಿ ಒಕ್ಕೂಟ ಯೋಜನೆಯಡಿ ಅಧಿಕಾರವನ್ನು ಸ್ವೀಕರಿಸಲು ಕಾಂಗ್ರೆಸ್‌ ಪಕ್ಷವು ನಿರ್ಧರಿಸಿದಾಗ, ಗಾಂಧಿಯವರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. ಅವರು ಪಕ್ಷದ ನಡೆಗೆ ಅಸಮ್ಮತಿಯನ್ನು ಸೂಚಿಸಲಿಲ್ಲವಾದರೂ, ಒಂದು ವೇಳೆ ತಾವು ರಾಜೀನಾಮೆ ನೀಡಿದಲ್ಲಿ, ಭಾರತೀಯರೊಂದಿಗಿನ ತಮ್ಮ ಜನಪ್ರಿಯತೆಯ ಕಾರಣದಿಂದಾಗಿ ಸಮುದಾಯ ಸ್ವಾಮ್ಯವಾದಿಗಳು (ಕಮ್ಯೂನಿಸ್ಟರು), ಸಮಾಜವಾದಿಗಳು, ಕಾರ್ಮಿಕ ಸಂಘದವರು (ಟ್ರೇಡ್‌ ಯುನಿಯನ್‌ನವರು), ವಿದ್ಯಾರ್ಥಿಗಳು, ಧಾರ್ಮಿಕ ಸಂಪ್ರದಾಯವಾದಿಗಳಿಂದ ಮೊದಲ್ಗೊಂಡು ವ್ಯವಹಾರ ಪರವಾದ ಗಾಢ ನಂಬುಗೆಗಳನ್ನು ಹೊಂದಿರುವವರ ತನಕ ಅನೇಕ ಸ್ತರದ ಸದಸ್ಯರನ್ನು ಒಳಗೊಂಡಿರುವ ಪಕ್ಷದ ಸದಸ್ಯತ್ವದ ಸಂಖ್ಯೆಯಲ್ಲಿ ಕುಸಿತವುಂಟಾಗಬಹುದು ಹಾಗೂ ತಂತಮ್ಮ ಕೂಗುಗಳಿಗೆ ಓಗೊಡುವಂತೆ ಈ ವಿವಿಧ ಧ್ವನಿಗಳಿಗೆ ಅವಕಾಶ ನೀಡಬೇಕಾಗಿ ಬರಬಹುದು ಎಂದು ಗಾಂಧಿಯವರು ಭಾವಿಸಿದರು. ಬ್ರಿಟಿಷ್ ಸರ್ಕಾರದೊಂದಿಗೆ ತಾತ್ಕಾಲಿಕ ರಾಜಕೀಯ ಹೊಂದಾಣಿಕೆಯನ್ನು ಮಾಡಿಕೊಂಡ ಪಕ್ಷವೊಂದರ ನಾಯಕತ್ವ ವಹಿಸಿ, ಬ್ರಿಟಿಷ್ ಸರ್ಕಾರದ ಪ್ರಚಾರಕ್ಕೆ ಗುರಿಯಾಗುವುದನ್ನೂ ಸಹ ಗಾಂಧಿಯವರು ಬಯಸಿರಲಿಲ್ಲ.R. ಗಾಂಧಿ, ಪಟೇಲ್‌: ಎ ಲೈಫ್‌ , p. ೨೪೬. ೧೯೩೬ರಲ್ಲಿ ನೆಹರೂ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಗಾಂಧಿಯವರು ಮುಂಚೂಣಿಗೆ ಮರಳಿದರು. ಭಾರತದ ಭವಿಷ್ಯದ ಬಗೆಗಿನ ಊಹಾಪೋಹಗಳಿಗಿಂತಲೂ ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಡುವತ್ತ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಲು ಗಾಂಧಿಯವರು ಇಚ್ಛಿಸಿದರಾದರೂ, ಪಕ್ಷವು ಸಮಾಜವಾದವನ್ನು ತನ್ನ ಧ್ಯೇಯವನ್ನಾಗಿ ಮಾಡಿಕೊಳ್ಳುವುದನ್ನು ಅವರು ತಡೆಯಲಿಲ್ಲ. ೧೯೩೮ರಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾಯಿತರಾಗಿದ್ದ ಸುಭಾಷ್ ಬೋಸ್‌‌ರೊಂದಿಗೆ ಗಾಂಧಿಯವರ ಘರ್ಷಣೆಯಾಗಿತ್ತು. ಬೋಸ್‌ರಲ್ಲಿನ ಪ್ರಜಾಪ್ರಭುತ್ವದೆಡೆಗಿನ ಬದ್ಧತೆಯ ಅಭಾವ ಮತ್ತು ಅಹಿಂಸೆಯಲ್ಲಿನ ಅವಿಶ್ವಾಸವು ಗಾಂಧಿ ಹಾಗೂ ಬೋಸ್‌ರ ನಡುವಿನ ಘರ್ಷಣೆಯ ಪ್ರಮುಖ ಅಂಶಗಳಾಗಿದ್ದವು.ಗಾಂಧಿಯವರ ಟೀಕಾಪ್ರಹಾರವಿದ್ದರೂ ಸಹ ಬೋಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಎರಡನೆಯ ಅವಧಿಗೆ ಚುನಾಯಿತ ರಾದರು; ಆದರೆ, ಗಾಂಧಿಯ ತತ್ವಗಳನ್ನು ಪರಿತ್ಯಜಿಸಿದ ಬೋಸ್‌ರ ಕ್ರಮವನ್ನು ವಿರೋಧಿಸಿ, ರಾಷ್ಟ್ರಾದ್ಯಂತ ಪಕ್ಷದ ಮುಖಂಡರು ಸಾಮೂಹಿಕವಾಗಿ ತಮ್ಮ-ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದಾಗ, ಬೋಸ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದರು.R. ಗಾಂಧಿ, ಪಟೇಲ್‌: ಎ ಲೈಫ್‌ , pp. ೨೭೭–೮೧. ಎರಡನೆಯ ವಿಶ್ವ ಸಮರ ಮತ್ತು 'ಕ್ವಿಟ್ ಇಂಡಿಯಾ ಆಂದೋಲನ' left|thumb|ಗಾಂಧಿಯವರ ಕೈಬರಹವನ್ನು, ಸಬರಮತಿ ಆಶ್ರಮದಲ್ಲಿರುವ ಪುಸ್ತಕದಲ್ಲಿ ಸಂಗ್ರಹಿಸಿಡಲಾಗಿದೆ. ನಾಜಿ ಜರ್ಮನಿ ಪೋಲೆಂಡ್‌ನ ಮೇಲೆ ಅತಿಕ್ರಮಣ ನಡೆಸಿದಾಗ ೧೯೩೯ರಲ್ಲಿ ಎರಡನೆಯ ವಿಶ್ವ ಸಮರವು ನಡೆಯಿತು. ಮೊದಲಿಗೆ, ಮಹಾಯುದ್ಧದಲ್ಲಿ ಬ್ರಿಟಿಷ್ ಸರ್ಕಾರದ ಕಾರ್ಯಾಚರಣೆಗೆ ಅಹಿಂಸಾತ್ಮಕ ನೈತಿಕ ಬೆಂಬಲವನ್ನು ನೀಡಲು ಗಾಂಧಿಯವರು ಒಲವು ತೋರಿದರೂ, ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸದೆ ಏಕಾಏಕಿಯಾಗಿ ಭಾರತವನ್ನು ಯುದ್ಧದಲ್ಲಿ ಸೇರಿಸಿಕೊಂಡ ಬಗ್ಗೆ ಇತರ ಕಾಂಗ್ರೆಸ್‌ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಕಾಂಗ್ರೆಸ್ಸಿಗರೂ ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು.R. ಗಾಂಧಿ, ಪಟೇಲ್‌: ಎ ಲೈಫ್‌ , pp. ೨೮೩–೮೬. ದೀರ್ಘಕಾಲದ ಚರ್ಚೆಗಳ ನಂತರ, 'ಭಾರತಕ್ಕೇ ಸ್ವಾತಂತ್ರ್ಯ ನಿರಾಕರಿಸಿದ್ದಾಗ, ಪ್ರಜಾಪ್ರಭುತ್ವಕ್ಕಾಗಿ ಎಂದು ನೆಪಹೂಡಿ ನಡೆಸಲಾದ ಯುದ್ಧಕ್ಕೆ ರಾಷ್ಟ್ರವು ಎಂದಿಗೂ ಸಹಭಾಗಿಯಾಗಲಾಗದು' ಎಂದು ಗಾಂಧಿಯವರು ಘೋಷಿಸಿದರು. ಯುದ್ಧವು ಮುನ್ನಡೆದಾಗ, ಬ್ರಿಟಿಷ್ ಆಡಳಿತವು ಭಾರತ ಬಿಟ್ಟು ತೊಲಗಲಿ (ಕ್ವಿಟ್ ಇಂಡಿಯಾ) ಎಂಬ ನಿರ್ಣಯವನ್ನು ಸಿದ್ಧಪಡಿಸಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಬೇಡಿಕೆಯನ್ನು ತೀವ್ರಗೊಳಿಸಿದರು. ಇದು ಬ್ರಿಟಿಷ್‌ ಆಡಳಿತವು ಭಾರತದ ಗಡಿಯನ್ನು ಬಿಟ್ಟು ಹೋಗುವಂತೆ ಮಾಡಲು ಗಾಂಧಿಯವರ ಮತ್ತು ಕಾಂಗ್ರೆಸ್‌ನ ಅತ್ಯಂತ ನಿರ್ಣಾಯಕ ದಂಗೆಯಾಗಿತ್ತು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೩೦೯. ಗಾಂಧಿಯವರು ಕೆಲವು ಕಾಂಗ್ರೆಸ್‌ ಪಕ್ಷದ ಸದಸ್ಯರು ಹಾಗೂ ಬ್ರಿಟಿಷ್‌-ಪರ ಮತ್ತು ಬ್ರಿಟಿಷ್‌-ವಿರೋಧೀ ಬಣಗಳುಳ್ಳ ಇತರ ಭಾರತೀಯ ರಾಜಕೀಯ ಗುಂಪುಗಳಿಂದ ಟೀಕಾಪ್ರಹಾರಕ್ಕೆ ಒಳಗಾದರು. ದುರುಳ ನಾಜಿತ್ವದ ವಿರುದ್ಧ ಹೋರಾಡುತ್ತಿರುವ ಬ್ರಿಟನ್‌ನನ್ನು ವಿರೋಧಿಸುವುದು ಅನೈತಿಕ ಎಂದು ಕೆಲವರು ಟೀಕಿಸಿದರೆ, ಗಾಂಧಿಯವರ ಬ್ರಿಟನ್‌-ವಿರೋಧದ ತೀವ್ರತೆ ಸಾಲದು ಎಂದು ಇನ್ನೂ ಕೆಲವರು ಅಭಿಪ್ರಾಯಪಟ್ಟರು. ಅಭೂತಪೂರ್ವ ಪ್ರಮಾಣದಲ್ಲಿ ನಡೆದಂತಹ ಸಾಮೂಹಿಕ ಬಂಧನಗಳು ಮತ್ತು ಹಿಂಸಾಚಾರದ ಘಟನೆಗಳನ್ನೊಳಗೊಂಡ ಕ್ವಿಟ್ ಇಂಡಿಯಾ ಚಳುವಳಿಯು ಹೋರಾಟದ ಇತಿಹಾಸದಲ್ಲಿಯೇ ಅತ್ಯಂತ ಬಲವತ್ತಾದ ಆಂದೋಲನವಾಯಿತು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೩೧೮. ಪೊಲೀಸರ ಗುಂಡೇಟಿನಿಂದ ಸಾವಿರಾರು ಮಂದಿ ಸ್ವಾತಂತ್ರ್ಯ ಯೋಧರು ಹತರಾದರು ಅಥವಾ ಗಾಯಗೊಂಡರು, ಹಾಗೂ ಲಕ್ಷಗಟ್ಟಲೆ ಜನರು ಬಂಧಿತರಾದರು. ಭಾರತಕ್ಕೆ ಕೂಡಲೇ ಸ್ವಾತಂತ್ರ್ಯ ನೀಡದಿದ್ದಲ್ಲಿ, ಯುದ್ಧದ ಕಾರ್ಯಾಚರಣೆಗೆ ಬೆಂಬಲವನ್ನು ನೀಡಲಾರೆವೆಂದು ಗಾಂಧಿಯವರು ಮತ್ತು ಅವರ ಬೆಂಬಲಿಗರು ಖಡಾಖಂಡಿತವಾಗಿ ಹೇಳಿದರು. ತಮ್ಮ ಸುತ್ತಲಿನ "ಆದೇಶಿತ ಅರಾಜಕತೆ" ಯು "ನೈಜ ಅರಾಜಕತೆಗಿಂತಲೂ ಕೆಟ್ಟದು" ಎಂದು ಹೇಳಿ, ಕೆಲವು ಹಿಂಸಾಚಾರದ ಕೃತ್ಯಗಳನ್ನು ಎಸಗಿದರೂ ಸಹ ಈ ಬಾರಿ ಆಂದೋಲನವನ್ನು ಸ್ಥಗಿತಗೊಳಿಸಲಾರೆವು ಎಂಬ ಸ್ಪಷ್ಟೀಕರಣವನ್ನೂ ನೀಡಿದರು. ಆತ್ಯಂತಿಕ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ಮತ್ತು ಕರೊ ಯಾ ಮರೊ ("ಮಾಡು ಇಲ್ಲವೇ ಮಡಿ") ತತ್ವಗಳ ಮೂಲಕ ಶಿಸ್ತು ಪಾಲಿಸಲು ಅವರು ಎಲ್ಲ ಕಾಂಗ್ರೆಸ್ಸಿಗರಿಗೆ ಮತ್ತು ಭಾರತೀಯರಿಗೆ ಕರೆ ನೀಡಿದರು. ಪುಣೆಯ ಆಗಾಖಾನ್ ಪ್ಯಾಲೇಸ್ ನಲ್ಲಿ 'ಕಸ್ತೂರ ಬಾ' ಕೊನೆಯುಸಿರೆಳೆದರು left|thumb|'ಆಗಾಖಾನ್ ಪ್ಯಾಲೇಸ್ ನ ಆಂಗಣದಲ್ಲೇ ಕಸ್ತುರ್ ಬಾ ರವರ ಸಮಾಧಿ'|link=Special:FilePath/Kba.121-1.JPG ೧೯೪೨ರ ಆಗಸ್ಟ್ ೯ರಂದು, ಗಾಂಧಿಯವರನ್ನು ಮತ್ತು ಇಡೀ ಕಾಂಗ್ರೆಸ್‌ ಕಾರ್ಯಕಾರೀ ಸಮಿತಿಯನ್ನು ಬ್ರಿಟಿಷ್‌ರು ಮುಂಬಯಿಯಲ್ಲಿ ಬಂಧಿಸಿದರು. ಪುಣೆಯಲ್ಲಿನ ಅಗಾ ಖಾನ್ ಅರಮನೆಯಲ್ಲಿ ಗಾಂಧಿ ಮತ್ತು 'ಕಸ್ತೂರ ಬಾ' ರವರನ್ನು ಎರಡು ವರ್ಷಗಳ ಕಾಲ ಗೃಹ ಬಂದಿಯಾಗಿ ಇರಿಸಲಾಗಿತ್ತು. ಇಲ್ಲಿಯೇ ಗಾಂಧಿಯವರ ವೈಯಕ್ತಿಕ ಜೀವನದಲ್ಲಿ ಎರಡು ದೊಡ್ಡ ಆಘಾತಗಳುಂಟಾದವು. ಅವರ ಆಪ್ತ ಕಾರ್ಯದರ್ಶಿಯಾಗಿದ್ದ ೫೦ ವರ್ಷ ವಯಸ್ಸಿನ ಮಹದೇವ್‌ ದೇಸಾಯಿ ಆರು ದಿನಗಳ ನಂತರ ಹೃದಯಾಘಾತದಿಂದ ಮೃತರಾದರು, ೧೮ ತಿಂಗಳುಗಳ ಕಾಲ ಅಲ್ಲಿಯೇ ಗೃಹ ಕೈದಿಯಾಗಿದ್ದ 'ಕಸ್ತೂರಬಾ' ರವರು ೧೯೪೪ರ ಫೆಬ್ರುವರಿ ೨೨ರಂದು, ಮಹಾತ್ಮಾಗಾಂಧಿಯವರ ತೊಡೆಯ ಮೇಲೆ ಮಲಗಿದ್ದಂತೆಯೆ ಚಿರನಿದ್ರೆ ಗೈದರು; ಇದಾದ ಆರು ವಾರಗಳ ನಂತರ ಗಾಂಧಿಯವರು ಮಲೇರಿಯಾ ಜ್ವರಕ್ಕೆ ತುತ್ತಾದರು. ಯುದ್ಧ ಮುಗಿಯುವ ಮುಂಚೆಯೇ, ೧೯೪೪ರ ಮೇ ೬ರಂದು, ಕ್ಷೀಣಿಸುತ್ತಿದ ಆರೋಗ್ಯ ಮತ್ತು ಆವಶ್ಯ ಶಸ್ತ್ರಚಿಕಿತ್ಸೆಗಾಗಿ ಗಾಂಧಿಯವರನ್ನು ಬಿಡುಗಡೆಗೊಳಿಸಲಾಯಿತು; ಗಾಂಧಿಯವರು ಕಾರಾಗೃಹದಲ್ಲಿಯೇ ಸತ್ತು ರಾಷ್ಟ್ರವನ್ನು ಕುಪಿತಗೊಳಿಸುವುದು ಬ್ರಿಟಿಷ್ ಸರ್ಕಾರಕ್ಕೆ ಬೇಕಾಗಿರಲಿಲ್ಲ. ಕ್ವಿಟ್ ಇಂಡಿಯಾ ಆಂದೋಲನವು ತನ್ನ ಧ್ಯೇಯದಲ್ಲಿ ನಿಯಮಿತ ಯಶಸ್ಸು ಕಂಡಿತ್ತಾದರೂ, ಈ ಆಂದೋಲನದ ಹತ್ತಿಕ್ಕುವಿಕೆಯು ೧೯೪೩ರ ಅಂತ್ಯದಲ್ಲಿ ಭಾರತಕ್ಕೆ ಸುವ್ಯವಸ್ಥೆಯನ್ನು ತಂದಿತ್ತಿತು. ಯುದ್ಧದ ಅಂತ್ಯದಲ್ಲಿ, ಆಡಳಿತವನ್ನು ಭಾರತೀಯರಿಗೆ ಹಸ್ತಾಂತರಿಸಲಾಗುವುದೆಂದು ಬ್ರಿಟಿಷರು ಸ್ಪಷ್ಟ ಸೂಚನೆಗಳನ್ನು ನೀಡಿದರು. ಈ ಹಂತದಲ್ಲಿ ಗಾಂಧಿಯವರು ಹೋರಾಟವನ್ನು ಹಿಂದೆಗೆದುಕೊಂಡ ಫಲವಾಗಿ, ಕಾಂಗ್ರೆಸ್ ನಾಯಕತ್ವವೂ ಸೇರಿದಂತೆ ಸುಮಾರು ೧೦೦,೦೦೦ ರಾಜಕೀಯ ಬಂಧಿತರು ಬಿಡುಗಡೆಗೊಂಡರು. ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ವಿಭಜನೆ ೧೯೪೬ರಲ್ಲಿ ಬ್ರಿಟಿಷ್ ಸಂಪುಟ ನಿಯೋಗ‌ದ ಪ್ರಸ್ತಾಪಗಳನ್ನು ತಿರಿಸ್ಕರಿಸಿರೆಂದು ಗಾಂಧಿಯವರು ಕಾಂಗ್ರೆಸ್‌ಗೆ ಕರೆ ನೀಡಿದರು, ಏಕೆಂದರೆ, ಮುಸ್ಲಿಮರು ಬಹುಸಂಖ್ಯೆಯಲ್ಲಿದ್ದ ರಾಜ್ಯಗಳಿಗಾಗಿ ಪ್ರಸ್ತಾಪಿಸಲಾದ ಗುಂಪುಗೂಡಿಕೆ ಯು ವಿಭಜನೆಗೆ ನಾಂದಿಯಾಗುತ್ತದೆಂದು ಗಾಂಧಿಯವರು ಅನುಮಾನಿಸಿದ್ದರು. ಆದಾಗ್ಯೂ, ಗಾಂಧಿಯವರ ಸಲಹೆಯಿಂದ (ಆದರೆ ಅವರ ನಾಯಕತ್ವದಿಂದಲ್ಲ) ಕಾಂಗ್ರೆಸ್ ಭಿನ್ನವಾಗಿ ನಡೆದುಕೊಂಡ ಕೆಲವೇ ಸಂದರ್ಭಗಳಲ್ಲಿ ಇದೂ ಒಂದಾಗಿತ್ತು. ಏಕೆಂದರೆ, ಒಂದು ವೇಳೆ ಕಾಂಗ್ರೆಸ್‌ ಪ್ರಸ್ತಾಪವನ್ನು ಅಂಗೀಕರಿಸದಿದ್ದಲ್ಲಿ, ಸರ್ಕಾರದ ನಿಯಂತ್ರಣವು ಮುಸ್ಲಿಮ್‌ ಲೀಗ್‌ಗೆ ಹೋಗಬಹುದು ಎಂದು ನೆಹರೂ ಮತ್ತು ಪಟೇಲ್‌ರಿಗೆ ಗೊತ್ತಿತ್ತು. ೧೯೪೬ರಿಂದ ೧೯೪೮ರ ವರೆಗೆ, ಹಿಂಸಾಚಾರದ ಘಟನೆಗಳಲ್ಲಿ ೫,೦೦೦ಕ್ಕಿಂತಲೂ ಹೆಚ್ಚು ಜನರು ಹತರಾದರು. ಭಾರತವು ಎರಡು ರಾಷ್ಟ್ರಗಳಾಗಿ ವಿಭಜನೆಯಾಗುವ ಯಾವುದೇ ಪ್ರಸ್ತಾಪವನ್ನು ಗಾಂಧಿಯವರು ಬಲವಾಗಿ ವಿರೋಧಿಸಿದರು. ಭಾರತದಲ್ಲಿ ಇದುವರೆಗೂ ಹಿಂದೂ ಮತ್ತು ಸಿಖ್ಖರೊಂದಿಗೆ ಜೊತೆಗೂಡಿ ವಾಸಿಸುತ್ತಿದ್ದ ಮುಸ್ಲಿಮರಲ್ಲಿ ಬಹುಪಾಲು ಜನರು ವಿಭಜನೆಯ ಪರ ನಿಂತರು. ಇದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮ್‌ ಲೀಗ್‌ ಪಕ್ಷದ ಮುಖಂಡರಾದ ಮಹಮದ್‌ ಅಲಿ ಜಿನ್ನಾ ಪಶ್ಚಿಮ ಪಂಜಾಬ್‌, ಸಿಂಧ್‌, ವಾಯುವ್ಯ ಸೀಮಾಂತ ಪ್ರಾಂತ್ಯ ಮತ್ತು ಪೂರ್ವ ಬಂಗಾಳ ವಲಯಗಳಲ್ಲಿ ಅಪಾರ ಬೆಂಬಲವನ್ನು ಗಳಿಸಿದ್ದರು. ಹಿಂದೂ-ಮುಸ್ಲಿಮ್‌ ನಡುವಿನ ವ್ಯಾಪಕ ನಾಗರಿಕ ಘರ್ಷಣೆಯನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ವಿಭಜನಾ ಯೋಜನೆಯನ್ನು ಕಾಂಗ್ರೆಸ್‌ ನಾಯಕತ್ವವು ಅಂಗೀಕರಿಸಿತು. ಗಾಂಧಿಯವರು ತಮ್ಮ ಅಂತರಾಳದಿಂದ ವಿಭಜನೆಯನ್ನು ವಿರೋಧಿಸುವರೆಂದು ಕಾಂಗ್ರೆಸ್‌ ಮುಖಂಡರಿಗೆ ಗೊತ್ತಿತ್ತು, ಹಾಗೂ ಅವರ ಒಪ್ಪಿಗೆಯಿಲ್ಲದೆ ಪಕ್ಷವು ವಿಭಜನೆಯ ಪ್ರಸ್ತಾಪದೊಂದಿಗೆ ಮುನ್ನಡೆಯಲು ಅಸಾಧ್ಯವೆಂದು ತಿಳಿದಿತ್ತು, ಏಕೆಂದರೆ ಪಕ್ಷದಲ್ಲಿ ಮತ್ತು ಭಾರತದಾದ್ಯಂತ ಅವರಿಗೆ ಸದೃಢ ಬೆಂಬಲವಿತ್ತು. ವಿಭಜನೆಯೊಂದೇ ದಾರಿಯೆಂದು ಗಾಂಧಿಯವರ ನಿಕಟ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು, ಹಾಗೂ ನಾಗರಿಕ ಸಮರವನ್ನು ತಡೆಗಟ್ಟಲು ಇದೊಂದೇ ದಾರಿಯೆಂದು ಗಾಂಧಿಯವರಿಗೆ ಮನಗಾಣಿಸಲು ಸರ್ದಾರ್ ಪಟೇಲ್‌ರು ಪ್ರಯತ್ನಿಸಿದರು. ಜರ್ಜರಿತರಾದ ಗಾಂಧಿಯವರು ಒಪ್ಪಿಗೆ ಸೂಚಿಸಿದರು. ಉತ್ತರ ಭಾರತ ಹಾಗೂ ಬಂಗಾಳ ಪ್ರಾಂತ್ಯದಲ್ಲಿ ಉದ್ರೇಕವನ್ನು ಶಮನಗೊಳಿಸಲು, ಗಾಂಧಿಯವರು ಮುಸ್ಲಿಮ್‌ ಮತ್ತು ಹಿಂದೂ ಮುಖಂಡರೊಂದಿಗೆ ವಿಸ್ತೃತವಾದ ಚರ್ಚೆಗಳನ್ನು ನಡೆಸಿದರು. ೧೯೪೭ರಲ್ಲಿ ಭಾರತ-ಪಾಕಿಸ್ತಾನ ಯುದ್ಧವು ನಡೆದಿದ್ದರೂ ಸಹ, ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಪಾಕಿಸ್ತಾನಕ್ಕೆ ಕೊಡಬೇಕಾದ ೫೫ ಕೋಟಿ (೫೫೦ಮಿಲಿಯನ್‌ ಭಾರತೀಯ ರೂಪಾಯಿಗಳು) ರೂಪಾಯಿಗಳಷ್ಟು ಹಣವನ್ನು ನೀಡಲು ನಿರಾಕರಿಸಿದಾಗ ಗಾಂಧಿಯವರು ತೀವ್ರವಾಗಿ ಅಸಮಾಧಾನಗೊಂಡರು. ಪಾಕಿಸ್ತಾನವು ಹಣವನ್ನು ಭಾರತದ ವಿರುದ್ಧದ ಯುದ್ಧಕ್ಕಾಗಿ ಬಳಸುತ್ತದೆಂದು ಸರ್ದಾರ್‌ ಪಟೇಲ್‌ರಂತಹ ಮುಖಂಡರು ಆತಂಕ ವ್ಯಕ್ತಪಡಿಸಿದರು. *ಮುಸ್ಲಿಮ್‌ ಮತ್ತು ಹಿಂದೂ ಮುಖಂಡರು ಪರಸ್ಪರ ಸೌಹಾರ್ದದತ್ತ ಬರಲು ಸಾಧ್ಯವಾಗದೆ ಹತಾಶೆಯನ್ನು ವ್ಯಕ್ತಪಡಿಸಿದಾಗ, ಹಾಗೂ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಬೇಕೆಂಬ ಕೂಗುಗಳು ತಿರುಗಿ ಎದ್ದಾಗ ಗಾಂಧಿಯವರು ಇನ್ನಷ್ಟು ಜರ್ಜರಿತರಾದರು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೪೬೨. ಎಲ್ಲಾ ಕೋಮು ಗಲಭೆಗಳನ್ನು ನಿಲ್ಲಿಸಬೇಕು. ಪಾಕಿಸ್ತಾನಕ್ಕೆ ೫೫೦ ಮಿಲಿಯನ್ ರೂಪಾಯಿಗಳನ್ನು ವಿಭಜನಾ ಸಮಿತಿಯು ರಚಿಸಿದ ಒಪ್ಪಂದದಂತೆ ಸರ್ಕಾರವು ಸಂದಾಯ ಮಾಡಬೇಕಂಬ ಹಠಹಿಡಿದು ದಿಲ್ಲಿಯಲ್ಲಿ ಅವರು ಅಮರಣಾಂತ ಉಪವಾಸವನ್ನು ಶುರುಗೊಳಿಸಿದರು. ಪಾಕಿಸ್ತಾನದಲ್ಲಿನ ಅಸ್ಥಿರತೆ ಮತ್ತು ಅಭದ್ರತೆಯು ಭಾರತದ ವಿರುದ್ಧದ ಕೋಪವನ್ನು ಹೆಚ್ಚಿಸಿ, ಗಡಿಯಲ್ಲಿ ಹಿಂಸಾಚಾರದ ಘಟನೆಗಳು ಹಬ್ಬಬಹುದೆಂದು ಗಾಂಧಿಯವರು ಆತಂಕ ವ್ಯಕ್ತಪಡಿಸಿದರು. ಹಿಂದೂಗಳು ಮತ್ತು ಮುಸ್ಲಿಮರು ತಮ್ಮ ಶತ್ರುತ್ವವನ್ನು ಮುಂದುವರೆಸಿ ಇದು ವ್ಯಾಪಕ ನಾಗರಿಕ ಸಮರಕ್ಕೆ ಆಸ್ಪದ ಕೊಡಬಹುದೆಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು. ತಮ್ಮ ಜೀವಾವಧಿ ಸಹೋದ್ಯೋಗಿಗಳೊಂದಿಗಿನ ಭಾವಪೂರ್ಣ ಚರ್ಚೆಗಳ ನಂತರ ಗಾಂಧಿಯವರು ತಮ್ಮ ನಿರ್ಧಾರವನ್ನು ಸಡಿಲಿಸಲು ನಿರಾಕರಿಸಿದರು. ಇದರ ಫಲವಾಗಿ ಸರ್ಕಾರವು ತಮ್ಮ ನೀತಿಯನ್ನು ರದ್ದುಗೊಳಿಸಿ ಪಾಕಿಸ್ತಾನಕ್ಕೆ ಹಣಸಂದಾಯವನ್ನು ಮಾಡಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಹಿಂದೂ ಮಹಾಸಭಾ ಸೇರಿದಂತೆ ಹಿಂದೂ, ಮುಸ್ಲಿಮ್‌ ಮತ್ತು ಸಿಖ್ ಸಮುದಾಯದ ಮುಖಂಡರು ತಾವು ಹಿಂಸಾಚಾರವನ್ನು ತ್ಯಜಿಸಿ ಶಾಂತಿಗಾಗಿ ಕರೆ ನೀಡುವುದಾಗಿ ಗಾಂಧಿಯವರಿಗೆ ಭರವಸೆ ನೀಡಿದರು. ಆಗ ಗಾಂಧಿಯವರು ಮೂಸಂಬಿ ರಸ ಕುಡಿಯುವುದರ ಮೂಲಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದರು.R. ಗಾಂಧಿ, ಪಟೇಲ್‌: ಎ ಲೈಫ್‌ , pp. ೪೬೪–೬೬. ಹತ್ಯೆ Assassination of Mohandas Karamchand Gandhi thumb|right|ರಾಜ್‌ಘಾಟ್: ಗಾಂಧಿಯವರ ಚಿತಾಭಸ್ಮವಿರುವ ಅಗಾ ಖಾನನ ಅರಮನೆ (ಪುಣೆ, ಭಾರತ). ಪಾಕಿಸ್ತಾನಕ್ಕೆ ಹಣದ ಸಂದಾಯ ಮಾಡಲು ಒತ್ತಾಯಿಸಿ, ಭಾರತವನ್ನು ದುರ್ಬಲಗೊಳಿಸಿದಕ್ಕೆ ಗಾಂಧಿಯವರೇ ಹೊಣೆ ಎಂದು ಆತನು ಹೇಳಿದ್ದನು.R. ಗಾಂಧಿ, ಪಟೇಲ್‌: ಎ ಲೈಫ್‌ , p. ೪೭೨. ಗೋಡ್ಸೆ ಮತ್ತು ಆತನ ಸಹಚರ ನಾರಾಯಣ್ ಆಪ್ಟೆ - ಇವರಿಬ್ಬರ ಮೇಲಿನ ಆರೋಪವನ್ನು ಸಾಬೀತುಪಡಿಸಲಾಗಿ, ೧೯೪೯ರ ನವೆಂಬರ್ ೧೫ರಂದು ಅವರನ್ನು ಗಲ್ಲಿಗೇರಿಸಲಾಯಿತು. ಹೊಸದಿಲ್ಲಿಯ ರಾಜ್‌ ಘಾಟ್‌ನಲ್ಲಿರುವ ಗಾಂಧಿಯವರ ಸ್ಮಾರಕ (ಅಥವಾ ಸಮಾಧಿ) ಯ ಶಿಲಾಲೇಖನದಲ್ಲಿ "ಹೇ ರಾಮ್‌" ಎಂಬ ಉಚ್ಚರಣೆಯಿದೆ. (ದೇವನಾಗರಿ: हे ! राम ಅಥವಾ, ಹೇ , ) ಅನುವಾದ ಮಾಡಿದಾಗ "ಓ ದೇವರೇ" ಎಂದಾಗುವುದು. ತಾವು ಗುಂಡೇಟಿಗೀಡಾದಾಗ ಗಾಂಧಿಯವರ ಕೊನೆಯ ಮಾತುಗಳೆಂದು ಬಹುಮಟ್ಟಿಗೆ ನಂಬಲಾಗಿದ್ದರೂ, ಈ ಹೇಳಿಕೆಯ ನಿಖರತೆಯು ವಿವಾದಗ್ರಸ್ಥವಾಗಿದೆ.ವಿನಯ್ ಲಾಲ್. ‘ಹೇ ರಾಮ್‌’: ದಿ ಪೊಲಿಟಿಕ್ಸ್ ಆಫ್ ಗಾಂಧಿ’s ಲಾಸ್ಟ್ ವರ್ಡ್ಸ್. ಹ್ಯೂಮನ್‌ಸ್ಕೇಪ್ ೮, no. ೧ (ಜನವರಿ ೨೦೦೧): pp. ೩೪–೩೮. ಜವಾಹರ್‌ಲಾಲ್‌ ನೆಹರೂರವರು ಬಾನುಲಿಯ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು:ಗಾಂಧಿಯವರ ಸಾವಿನ ಕುರಿತಾದ ನೆಹರೂರವರ ಭಾಷಣ. ೧೫ ಮಾರ್ಚ್‌ ೨೦೦೭ರಂದು ಪಡೆದು ಕೊಳ್ಳಲಾಯಿತು. ಗಾಂಧಿಯವರ ಚಿತಾಭಸ್ಮವನ್ನು ಕರಂಡಗಳಲ್ಲಿ ತುಂಬಿ ಸ್ಮರಣಾರ್ಥ ಸೇವೆಗಳಿಗಾಗಿ ರಾಷ್ಟ್ರಾದ್ಯಂತ ರವಾನಿಸಲಾಯಿತು. ೧೯೪೮ರ ಫೆಬ್ರುವರಿ ೧೨ರಂದು ಅಲಹಾಬಾದ್‌ನಲ್ಲಿನ ಸಂಗಮದಲ್ಲಿ ಅವರ ಚಿತಾಭಸ್ಮವನ್ನು ವಿಸರ್ಜಿಸಲಾಯಿತು, ಆದರೂ ಕೆಲವು ಕರಂಡಗಳನ್ನು ರಹಸ್ಯವಾಗಿ ಹಿಂತೆಗೆಯಲಾಯಿತು.[75] ^ "ಗಾಂಧಿಯವರ ಚಿತಾಭಸ್ಮವು ಸಮುದ್ರದಲ್ಲಿ ವಿಶ್ರಾಂತವಾಗಿರ ಬೇಕೆ ಹೊರತು, ವಸ್ತುಸಂಗ್ರಹಾಲಯದಲ್ಲಿ ಅಲ್ಲ" ದಿ ಗಾರ್ಡಿಯನ್‌, ೧೬ ಜನವರಿ ೨೦೦೮ ೧೯೯೭ರಲ್ಲಿ ತುಷಾರ್‌ ಗಾಂಧಿಯವರು ಬ್ಯಾಂಕಿನ ನೆಲಮಾಳಿಗೆಯೊಂದರಲ್ಲಿದ್ದ ಕರಂಡವನ್ನು ನ್ಯಾಯಾಲಯಗಳ ಮೂಲಕ ಪುನರ್ಪಡೆದು, ಅಲಾಹಾಬಾದ್‌ನಲ್ಲಿನ ಸಂಗಮದಲ್ಲಿ ವಿಸರ್ಜಿಸಿದರು.[78] ^ "ಗಾಂಧಿಯವರ ಚಿತಾಭಸ್ಮವು ಹರಡಿಕೊಂಡಿತು" ದಿ ಸಿನ್‌ಸಿನತ್ತಿ ಪೋಸ್ಟ್‌, ೩೦ ಜನವರಿ ೧೯೯೭ "ಕಾರಣಗಳು ಯಾರಿಗೂ ಗೊತ್ತಿಲ್ಲದಂತೆಯೇ, ಸ್ವಲ್ಪ ಪ್ರಮಾಣದ ಚಿತಾಭಸ್ಮವನ್ನು ಆಗ್ನೇಯ ನವದೆಹಲಿಯ ಕಟ್ಟಕ್ [77]ಬ್ಯಾಂಕ್‌ನ ತಿಜೋರಿಯಲ್ಲಿ ಇಡಲಾಗಿತ್ತು. ೧೯೯೫ರ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾದ ವಿಷಯದಿಂದ ಚಿತಾಭಸ್ಮವು ಬ್ಯಾಂಕಿನಲ್ಲಿದೆ ಎಂದು ಅರಿತು ತುಷಾರ್‌ ಗಾಂಧಿಯವರು ಚಿತಾಭಸ್ಮವನ್ನು ವಶಪಡಿಸಿಕೊಳ್ಳಲು ಕೋರ್ಟ್‌ನ ಮೊರೆ ಹೋದರು." ದುಬೈ-ಮೂಲದ ವರ್ತಕರೊಬ್ಬರು ಮುಂಬಯಿ ಸಂಗ್ರಹಾಲಯಕ್ಕೆ ಕಳುಹಿಸಿಕೊಟ್ಟಿದ್ದ ಇನ್ನೊಂದು ಕರಂಡದಲ್ಲಿದ್ದ ಚಿತಾಭಸ್ಮವನ್ನು ಕುಟುಂಬವು ೨೦೦೮ರ ಜನವರಿ ೩೦ರಂದು ಗಿರ್‌ಗಾಂವ್‌ ಚೌಪಟ್ಟಿಯಲ್ಲಿ ವಿಸರ್ಜಿಸಿತು. [79] ಮತ್ತೊಂದು ಕರಂಡವು (ಗಾಂಧಿಯವರನ್ನು ೧೯೪೨ರಿಂದ ೧೯೪೪ರ ವರೆಗೆ ಸೆರೆಯಲ್ಲಿಡಲಾಗಿದ್ದ) ಪುಣೆಯ ಅಗಾ ಖಾನ್‌ ಅರಮನೆಯಲ್ಲಿದೆ ಹಾಗೂ ಮಗದೊಂದು ಕರಂಡವು ಲಾಸ್‌ ಏಂಜಲೀಸ್‌ನ ಸೆಲ್ಪ್‌-ರಿಯಲೈಸೇಷನ್‌ ಫೆಲೊಷಿಪ್‌ ಲೇಕ್ ಶ್ರೈನ್‌ನಲ್ಲಿದೆ. ಈ ಚಿತಾಭಸ್ಮಗಳು ರಾಜಕೀಯವಾಗಿ ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆಯೆಂದು ಕುಟುಂಬಕ್ಕೆ ಅರಿವಿದ್ದರೂ, ಪವಿತ್ರಸ್ಥಳಗಳನ್ನು ಒಡೆಯುವ ಪರಿಸ್ಥಿತಿ ಎದುರಾಗದಿರಲಿ ಎಂದು ಅವರು ಅವುಗಳನ್ನು ಅಲ್ಲಿಂದ ತೆಗೆಯಲು ಇಚ್ಛಿಸುತ್ತಿಲ್ಲ. ಹತ್ಯೆಯ ಹಿನ್ನಲೆ:ದೇವರ ದಯೆಯಿಂದ ಏಳು ಬಾರಿ ನಾನು ಸಾವಿನ ದವಡೆಯಿಂದ ಪಾರಾಗಿ ಬಂದಿದ್ದೇನೆ. ನಾನು ಯಾರನ್ನೂ ನೋಯಿಸಿಲ್ಲ. ಯಾರನ್ನೂ ನನ್ನ ಶತ್ರು ಎಂದು ತಿಳಿದುಕೊಂಡಿಲ್ಲ. ಹೀಗಿದ್ದರೂ ಯಾಕೆ ನನ್ನ ಹತ್ಯೆಗೆ ಪ್ರಯತ್ನ ನಡೆಯುತ್ತಿದೆ ಎಂದು ಗೊತ್ತಾಗುತ್ತಿಲ್ಲ. ನಾನು ಸಾಯುವುದಿಲ್ಲ, 125 ವರ್ಷ ಬದುಕುತ್ತೇನೆ... ತಮ್ಮ ಹತ್ಯೆಗೆ ಏಳನೇ ಬಾರಿ ನಡೆದ ಪ್ರಯತ್ನ ವಿಫಲಗೊಂಡ ನಂತರ 1946ರ ಜೂನ್ 30ರಂದು ಗಾಂಧೀಜಿ ಪುಣೆಯ ಬಹಿರಂಗ ಸಭೆಯಲ್ಲಿ ನೋವು ತುಂಬಿದ್ದ ದನಿಯಲ್ಲಿ ಈ ಮಾತು ಹೇಳಿದ್ದರು.ದಿನೇಶ್ ಅಮೀನ್ ಮಟ್ಟುPublished: 30 ಜನವರಿ 2012, Updated: 02 ಅಕ್ಟೋಬರ್ 2019 ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ.ಮಹಾತ್ಮನೊಂದಿಗೆ ನಮ್ಮದು ಎಂಥ ಸಂಬಂಧ?;ನಾರಾಯಣ ಎ;d: 02 ಅಕ್ಟೋಬರ್ 2019 https://www.prajavani.net/stories/national/former-pti-journalist-now-99-669208.html ಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;Published: 03 ಅಕ್ಟೋಬರ್ 2019,] ಪ್ರಥಮವರದಿ:1948ರ ಜನವರಿ 30, ಸಂಜೆ 6.30–7ರ ಹೊತ್ತಿಗೆ ಗಾಂಧೀಜಿ ಹತ್ಯೆಯ ಸುದ್ದಿ ಬಂತು’ ಎಂದು ಈಗ ಮುಂಬೈನ ಮೀರಾ ರೋಡ್‌ ನಿವಾಸಿಯಾಗಿರುವ ವಾಲ್ಟರ್‌ ನೆನಪಿಸಿಕೊಂಡರು. ದೂರವಾಣಿಯ ಅತ್ತಕಡೆಯಲ್ಲಿ ಇದ್ದವರು ಪಿಟಿಐನ ಮುಂಬೈ ವರದಿಗಾರ ಪೋಂಕ್ಷೆ. ಸಂಜೆಯ ಪ್ರಾರ್ಥನೆಗೆ ಹೋಗುತ್ತಿದ್ದ ಗಾಂಧೀಜಿಯ ಹತ್ಯೆಯಾಯಿತು ಎಂಬ ದುರಂತ ಸುದ್ದಿಯನ್ನು ಅವರು ಹೇಳಿದ್ದರುhttps://www.prajavani.net/stories/national/former-pti-journalist-now-99-669208.htmlಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು;ಪಿಟಿಐ;d: 03 ಅಕ್ಟೋಬರ್ 2019, ಗಾಂಧಿಯವರ ತತ್ವಗಳು {| class="wikitable"- align="right" |- bgcolor="#FFFDD0" ಅಲ್ಬರ್ಟ್ ಐನ್‌ಸ್ಟೀನ್‌ನ ಒಂದು ಉದ್ಗಾರ ಹೀಗಿದೆ:– "ರಕ್ತಮಾಂಸಗಳಿಂದ ತುಂಬಿದ ಇಂಥ ವ್ಯಕ್ತಿಯೊಬ್ಬ ಎಂದಾದರೂ ಈ ಭೂಮಿಯ ಮೇಲೆ ನಡೆದಾಡಿದ್ದ ಎನ್ನುವುದನ್ನು ಮುಂದಿನ ಪೀಳಿಗೆಗಳು ನಂಬುವುದು ಕಷ್ಟ’." -ಅವರು ಹೀಗೆಂದುದು ಮಹಾತ್ಮ ಗಾಂಧೀಜಿ ಬಗ್ಗೆ. - ಗಾಂಧಿಯವರ ಬದುಕನ್ನು ನೋಡಿದ, ಓದಿದ ಅವರ ಸಂದೇಹ ಇದು.‘ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018, ಸತ್ಯ ನಿಜ ಅಥವಾ ಸತ್ಯ ದ ಪರಿಶೋಧನೆಯೆಂಬ ವಿಸ್ತೃತ ಉದ್ದೇಶಕ್ಕಾಗಿ ಗಾಂಧಿಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ತಮ್ಮ ತಪ್ಪುಗಳಿಂದಲೇ ಕಲಿತು ಹಾಗೂ ತಮ್ಮ ಮೇಲೆಯೇ ಪ್ರಯೋಗಗಳನ್ನು ಮಾಡಿಕೊಂಡು ಅವರು ಇದನ್ನು ಸಾಧಿಸಲು ಯತ್ನಿಸಿದರು. ಅವರು ತಮ್ಮ ಆತ್ಮಚರಿತ್ರೆಯನ್ನು ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ಎಂದು ಕರೆದುಕೊಂಡರು. (ನೋಡಿ - ಸಂತ ಗಾಂಧೀಜೀ) ತಮ್ಮದೇ ಆದ ಪೈಶಾಚಿಕತೆಗಳನ್ನು, ಅಂಜಿಕೆಗಳನ್ನು ಮತ್ತು ಅಭದ್ರತೆಗಳನ್ನು ನಿವಾರಿಸಿಕೊಂಡದ್ದು ತಾವು ಸೆಣಸಿದ ಅತಿ ಮುಖ್ಯ ಸಮರವಾಗಿತ್ತೆಂದು ಗಾಂಧಿಯವರು ತಿಳಿಸಿದರು. "ದೇವರೇ ಸತ್ಯ" ಎಂದು ಹೇಳುವ ಮೂಲಕ ಗಾಂಧಿಯವರು ತಮ್ಮ ನಂಬಿಕೆಗಳ ಸಾರಾಂಶವನ್ನು ಹೇಳಿದರು. ನಂತರ ಅವರು "ಸತ್ಯವೇ ದೇವರು" ಎಂದು ಆ ಹೇಳಿಕೆಯನ್ನು ಬದಲಿಸಿದರು. ಹಾಗಾಗಿ, ಗಾಂಧಿಯವರ ತತ್ವದಲ್ಲಿ, ಸತ್ಯ (ನಿಜ)ವೇ "ದೇವರು." (ನೋಡಿ - ಸಂತ ಗಾಂಧೀಜೀ) ಅಹಿಂಸಾ ಮಹಾತ್ಮ ಗಾಂಧಿಯವರು ಅಹಿಂಸೆಯ ತತ್ವದ ಸೃಷ್ಟಿಕರ್ತೃರಲ್ಲದಿದ್ದರೂ, ರಾಜಕೀಯ ಕ್ಷೇತ್ರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಅದನ್ನು ಅಳವಡಿಸುವಲ್ಲಿ ಅವರು ಮೊದಲಿಗರಾಗಿದ್ದರು. ಭಾರತೀಯ ಧಾರ್ಮಿಕ ಚಿಂತನೆಯಲ್ಲಿ ಹಿಂಸಾಚಾರವಿಲ್ಲದಿರುವಿಕೆ, (ಅಹಿಂಸೆ ) ಮತ್ತು ಪ್ರತಿರೋಧವಿಲ್ಲದಿರುವಿಕೆಯು ಸುದೀರ್ಘ ಇತಿಹಾಸವನ್ನು ಹೊಂದಿದೆ. ಹಾಗಾಗಿ, ಹಿಂದು, ಬೌದ್ಧ, ಜೈನ್‌, ಯಹೂದಿ ಮತ್ತು ಕ್ರಿಶ್ಚಿಯನ್ ಪ್ರಸಂಗಗಳಲ್ಲಿ ಪುನರುಜ್ಜೀವನಗಳನ್ನು ಕಂಡಿವೆ. ಗಾಂಧಿಯವರು ಈ ತತ್ವ ಮತ್ತು ಜೀವನ ರೀತಿಯನ್ನು ತಮ್ಮ ಆತ್ಮಚರಿತ್ರೆಯಾದ ದಿ ಸ್ಟೋರಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿಥ್ ಟ್ರುತ್ ನಲ್ಲಿ ವಿವರಿಸಿದ್ದಾರೆ. ಅವರು ಈ ರೀತಿ ಹೇಳಿದಂತೆ ಉಲ್ಲೇಖಿಸಲಾಗಿದೆ: "ನಾನು ಹತಾಶ ಸ್ಥಿತಿಯಲ್ಲಿದ್ದಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೇಮದ ಮಾರ್ಗವೇ ಗೆದ್ದಿದೆ ಎಂಬುದನ್ನು ನಾನು ನೆನಪಿಸಿಕೊಳ್ಳುವೆ. ಪ್ರಜಾಪೀಡಕರು ಮತ್ತು ಕೊಲೆಗಾರರು ಒಮ್ಮೆ ಅಜೇಯರಾಗಿರುವಂತೆ ಕಾಣುತ್ತಾರಾದರೂ, ಅಂತಿಮವಾಗಿ, ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ; ಯಾವಾಗಲೂ ಈ ಕುರಿತು ಯೋಚಿಸಿ" "ಸರ್ವಾಧಿಕಾರಶಾಹಿಯ ಪದ್ಧತಿಯ ಹೆಸರಿನಡಿ ಅಥವಾ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ಬದ ಆರ್ಷನಾಮಗಳಡಿ ಹುಚ್ಚುಗೊಳಿಸುವಂತಹ ಸರ್ವನಾಶವು ನಡೆಯುತ್ತಿದ್ದಾಗ, ಮೃತರಿಗೆ, ಅನಾಥರಿಗೆ ಮತ್ತು ಸೂರಿಲ್ಲದವರಿಗೆ ಯಾವ ವ್ಯತ್ಯಾಸ ಕಂಡು ಬರುತ್ತದೆ?" "ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತಲೇ ಹೋದರೆ ಇಡೀ ಪ್ರಪಂಚವೇ ನಾಶವಾಗುವುದು." "ನಾನು ಪ್ರಾಣ ತೆರಲು ಸಿದ್ಧಲಿರಲಿಕ್ಕೆ ಹಲವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿದ್ಧನಿರಲಿಕ್ಕೆ ಯಾವ ಕಾರಣವೂ ಇಲ್ಲ." ಸರ್ಕಾರ, ಪೊಲೀಸ್‌ ಮತ್ತು ಸೇನೆಗಳೆಲ್ಲವೂ ಅಹಿಂಸಾತ್ಮಕವಾಗಿರುವಂತಹ ಪ್ರಪಂಚವನ್ನು ಚಿತ್ರಿಸಿಕೊಳ್ಳುವಲ್ಲಿ ಈ ತತ್ವಗಳನ್ನು ಅಳವಡಿಸುವ ಉದ್ದೇಶದಲ್ಲಿ, ಅವುಗಳನ್ನು ತಾರ್ಕಿಕತೆಯ ಕಟ್ಟಕಡೆಯ ತನಕ ಒಯ್ಯಲು ಗಾಂಧಿಯವರು ಹಿಂಜರಿಯಲಿಲ್ಲ. ಕೆಳಗಿನ ಉಲ್ಲೇಖನಗಳನ್ನು "ಫಾರ್ ಪೆಸಿಫಿಸ್ಟ್ಸ್" ಎಂಬ ಪುಸ್ತಕದಿಂದ ಆಯ್ಕೆ ಮಾಡಲಾಗಿದೆ.ಭರತನ್‌ ಕುಮಾರಪ್ಪ, M.K. ಗಾಂಧಿಯವರ "ಫಾರ್‌ ಪ್ಯಾಸಿಫಿಸ್ಟ್ಸ್‌"ನ ಸಂಪಾದಕರು, ನವಜೀವನ್‌ ಪಬ್ಲಿಷಿಂಗ್‌ ಹೌಸ್‌, ಅಹಮದಾಬಾದ್‌, ಭಾರತ, ೧೯೪೯. ಯುದ್ಧದ ವಿಜ್ಞಾನವು ಒಬ್ಬನನ್ನು ಸ್ಪಷ್ಟವಾಗಿ, ಸರಳವಾಗಿ, ಸರ್ವಾಧಿಕಾರದತ್ತ ಒಯ್ಯುತ್ತದೆ. ಅಹಿಂಸೆಯ ವಿಜ್ಞಾನವೊಂದೇ ಒಬ್ಬನನ್ನು ಶುದ್ಧ ಪ್ರಜಾಪ್ರಭುತ್ವದತ್ತ ಒಯ್ಯಬಲ್ಲದು... ಶಿಕ್ಷೆಯ ಭೀತಿಯಿಂದ ಹುಟ್ಟುವ ಅಧಿಕಾರಕ್ಕಿಂತಲೂ, ಪ್ರೇಮದ ಆಧಾರದ ಮೇಲಿರುವ ಅಧಿಕಾರವು ಸಾವಿರಪಟ್ಟು ಪರಿಣಾಮಕಾರಿಯಾಗಿದೆ... ಅಹಿಂಸೆಯನ್ನು ಕೇವಲ ವ್ಯಕ್ತಿಗಳು ಮಾತ್ರ ಆಚರಿಸಲು ಸಾಧ್ಯ, ವ್ಯಕ್ತಿಗಳು ತುಂಬಿರುವಂತಹ ರಾಷ್ಟ್ರಗಳಿಂದ ಎಂದಿಗೂ ಸಾಧ್ಯವಿಲ್ಲ ಎಂಬುದು ಪಾಷಂಡಿತನವಾಗುತ್ತದೆ... ಅಹಿಂಸೆಯನ್ನು ಆಧರಿಸಿರುವ ಪ್ರಜಾಪ್ರಭುತ್ವವೇ ಪರಿಶುದ್ಧ ಅರಾಜಕತೆಗಿರುವ ಸನಿಹದ ಮಾರ್ಗವಾಗಬಲ್ಲದು... ಸಂಪೂರ್ಣ ಅಹಿಂಸೆಯ ಆಧಾರದ ಮೇಲೆ ಸಂಘಟಿಸಲ್ಪಡುವ ಮತ್ತು ನಡೆಯುವ ಸಮಾಜವು ಪರಿಶುದ್ಧ ಅರಾಜಕತೆಯಾಗುವುದು. ಅಹಿಂಸಾತ್ಮಕ ಸನ್ನಿವೇಶದಲ್ಲಿಯೂ ಸಹ ಪೊಲೀಸ್ ದಂಡಿನ ಆವಶ್ಯಕತೆಯಿದೆಯೆಂಬುದನ್ನು ನಾನು ಒಪ್ಪಿಕೊಂಡಿರುವೆ... ಅಹಿಂಸೆಯನ್ನು ನಂಬಿದವರು ಪೊಲೀಸ್‌ ಪಡೆಗಳಲ್ಲಿ ಸೇರಿರುತ್ತಾರೆ. ಜನರು ಸಹಜ ಪ್ರವೃತ್ತಿಯಿಂದ ಅವರಿಗೆ ಎಲ್ಲಾ ಸಹಾಯವನ್ನು ನೀಡಿ, ಪರಸ್ಪರ ಸಹಕಾರದಿಂದ ಅವರು ಕಡಿಮೆಗೊಳ್ಳುತ್ತಲಿರುವ ಗಲಾಟೆಗಳನ್ನು ಸುಲಭವಾಗಿ ಹತ್ತಿಕ್ಕುತ್ತಾರೆ... ಅಹಿಂಸಾತ್ಮಕ ಸನ್ನಿವೇಶದಲ್ಲಿ ಶ್ರಮಿಕ ಮತ್ತು ಬಂಡವಾಳಶಾಹಿಗಳ ನಡುವಿನ ಹಿಂಸಾತ್ಮಕ ಜಗಳಗಳು ಹಾಗೂ ಮುಷ್ಕರಗಳು ಬಹಳ ವಿರಳವಾಗಿರುತ್ತವೆ, ಏಕೆಂದರೆ ಅಹಿಂಸಾತ್ಮಕ ಬಹುಮತದ ಪ್ರಭಾವವು ಹೆಚ್ಚಾಗಿದ್ದು ಸಮಾಜದಲ್ಲಿರುವ ತಾತ್ವಿಕ ಘಟಕಗಳಿಗೆ ಗೌರವ ಸೂಚಿಸಬಲ್ಲುದಾಗಿದೆ. ಇದೇ ರೀತಿ, ಕೋಮುಗಲಭೆಗಳಿಗೆ ಯಾವುದೇ ಅವಕಾಶವಿರುವುದಿಲ್ಲ... ಗಲಾಟೆಯ ಸಮಯದಲ್ಲಿ ಹಾಗೂ ಶಾಂತಿಯುತ ವಾತಾವರಣದಲ್ಲಿ ಅಹಿಂಸಾತ್ಮಕ ಸೇನೆಯು ಸಶಸ್ತ್ರ ಸೇನೆಗಿಂತ ಭಿನ್ನವಾಗಿ ವರ್ತಿಸುವುದು. ಕಚ್ಚಾಡುತ್ತಿರುವ ಸಮುದಾಯಗಳನ್ನು ಒಟ್ಟಿಗೆ ತಂದು, ಶಾಂತಿಯುತ ಪ್ರಚಾರವನ್ನು ಕೈಗೊಂಡು, ಅವರ ಪ್ರದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಸಂಪರ್ಕದಲ್ಲಿರಿಸುವಂತಹ ಚಟುವಟಿಕೆಗಳಲ್ಲಿ ತೊಡಗುವುದು ಅವರ ಕರ್ತವ್ಯವಾಗಿರುತ್ತದೆ. ಇಂತಹ ಸೇನೆಯು ಯಾವುದೇ ತುರ್ತಿನ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಿರಬೇಕು, ಮತ್ತು ಉದ್ರಿಕ್ತ ಗುಂಪುಗಳನ್ನು ಹತ್ತಿಕ್ಕಲು, ಸಾಕಷ್ಟು ಸಂಖ್ಯೆಗಳಲ್ಲಿ ಬಂದು, ತಮ್ಮ ಜೀವಗಳನ್ನು ಅಪಾಯಕ್ಕೆ ಒಡ್ಡಲೂ ಸಿದ್ಧವಿರಬೇಕು... ಪ್ರತಿಯೊಂದು ಹಳ್ಳಿಯಲ್ಲಿ ಮತ್ತು ನಗರಗಳಲ್ಲಿನ ಕಟ್ಟಡಗಳ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಸತ್ಯಾಗ್ರಹ (ಸತ್ಯ ಪಡೆ) ದಳಗಳನ್ನು ಸಂಘಟಿಸಬಹುದಾಗಿದೆ. [ಅಹಿಂಸಾತ್ಮಕ ಸಮಾಜವು ಹೊರಗಿನಿಂದ ಹಲ್ಲೆಗೊಳಗಾಗಿದ್ದಲ್ಲಿ,] ಅಹಿಂಸೆಯತ್ತ ಎರಡು ಮಾರ್ಗಗಳಿವೆ. ಒಡೆತನವನ್ನು ಬಿಟ್ಟುಕೊಡುವುದು, ಆದರೆ ಅಕ್ರಮಣಕಾರನೊಂದಿಗೆ ಸಹಕರಿಸದಿರುವುದು... ಶರಣಾಗತಿಗಿಂತ ಸಾವಿಗೇ ಆದ್ಯತೆ ನೀಡುವುದು. ಎರಡನೆಯ ಮಾರ್ಗವೆಂದರೆ, ಅಹಿಂಸಾತ್ಮಕ ಮಾರ್ಗಗಳಲ್ಲಿ ತರಬೇತಿ ಪಡೆದ ಜನರ ಅಹಿಂಸಾತ್ಮಕ ಪ್ರತಿರೋಧ... ಅಕ್ರಮಣಕಾರನ ಇಚ್ಛೆಗೆ ತಲೆಬಾಗುವ ಬದಲಿಗೆ, ಅಗಣಿತ ಪಂಕ್ತಿಗಳಲ್ಲಿ ಗಂಡಸರು ಮತ್ತು ಹೆಂಗಸರು ಸುಮ್ಮನೆ ಸಾವನ್ನಪುವ ಅನಿರೀಕ್ಷಿತ ದೃಶ್ಯವನ್ನು ನೋಡಿ ಅವನ ಮತ್ತು ಅವನ ಸೈನಿಕರ ಮನವು ಕರಗಬೇಕು... ಅಹಿಂಸೆಯನ್ನು ತನ್ನ ಅಂತಿಮ ನೀತಿಯಾಗಿ ಮಾಡಿಕೊಂಡಿರುವಂತಹ ರಾಷ್ಟ್ರ ಅಥವಾ ಗುಂಪನ್ನು ಒಂದು ಅಣುಬಾಂಬ್ ಕೂಡ ಗುಲಾಮತನಕ್ಕೆ ಒಡ್ಡಲು ಶಕ್ಯವಾಗದು... ಆ ರಾಷ್ಟ್ರದಲ್ಲಿ ಅಹಿಂಸೆಯ ಮಟ್ಟವು ಹೀಗೆ ಬಂದು ಹಾಗೆ ಹೋಗುವಂತಿದ್ದರೂ ಸಹ, ಅದು ಸಾರ್ವತ್ರಿಕ ಮರ್ಯಾದೆಯನ್ನು ಸಂಪಾದಿಸುವಷ್ಟು ಉನ್ನತಿಗೆ ಏರಿರುತ್ತದೆ. ಈ ಅಭಿಪ್ರಾಯಕ್ಕೆ ಅನುಗುಣವಾಗಿ, ೧೯೪೦ರಲ್ಲಿ ನಾಜಿ ಜರ್ಮೆನಿಯು ಬ್ರಿಟಿಷ್ ದ್ವೀಪಗಳ ಮೇಲೆ ಅಕ್ರಮಣ ಮಾಡುವುದು ಸನ್ನಿಹಿತವಾದಾಗ, ಗಾಂಧಿಯವರು ಬ್ರಿಟಿಷ್‌ ಜನತೆಗೆ ಕೆಳಕಂಡ ಸಲಹೆಯನ್ನು ನೀಡಿದರು (ಶಾಂತಿ ಮತ್ತು ಯುದ್ಧಗಳಲ್ಲಿ ಅಹಿಂಸೆ ): "ನಿಮ್ಮನ್ನು ಅಥವಾ ಮಾನವಕುಲವನ್ನು ರಕ್ಷಿಸಲು ಯೋಗ್ಯವಲ್ಲದ ಶಸ್ತ್ರಗಳನ್ನು ನೀವು ಕೆಳಗಿರಿಸಬೇಕು ಎಂದು ನಾನು ಇಚ್ಛಿಸುವೆ. ನಿಮ್ಮ ಸ್ವತ್ತು ಎನ್ನಲಾದ ರಾಷ್ಟ್ರಗಳಿಂದ ಏನು ಬೇಕಾದರೂ ತೆಗೆದುಕೊಂಡು ಹೋಗಿರೆಂದು ನೀವು ಶ್ರೀಯುತ ಹಿಟ್ಲರ್ ಮತ್ತು ಮುಸೊಲಿನಿಯವರನ್ನು ಆಮಂತ್ರಿಸುತ್ತೀರಿ... ಈ ಮಹಾಶಯರು ನಿಮ್ಮ ಮನೆಗಳನ್ನು ಆಕ್ರಮಿಸಲು ಇಚ್ಛಿಸಿದಲ್ಲಿ, ನೀವು ಅವುಗಳನ್ನು ತೊರೆಯುತ್ತೀರಿ. ಅವರು ನಿಮಗೆ ಮುಕ್ತ ಹಾದಿ ನೀಡದಿದ್ದಲ್ಲಿ, ನೀವೇ ಸ್ವತ: - ಗಂಡು, ಹೆಣ್ಣು ಮತ್ತು ಮಕ್ಕಳೆಲ್ಲರೂ - ಹತ್ಯೆಗೀಡಾಗಲು ಅನುವು ಮಾಡಿಕೊಳ್ಳುವಿರಿ, ಆದರೆ ನೀವು ಎಂದಿಗೂ ಅವರಿಗೆ ಸ್ವಾಮಿನಿಷ್ಠೆ ತೋರಿಸಲು ಒಪ್ಪುವುದಿಲ್ಲ." ಯುದ್ಧದ ಆ ನಂತರ, ೧೯೪೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ತೀವ್ರತೆಯ ಇನ್ನೊಂದು ಅಭಿಪ್ರಾಯವನ್ನು ಅವರು ನೀಡಿದರು: "ಯಹೂದ್ಯರು ಕಸಾಯಿಯ ಕತ್ತಿಗೆ ತಮ್ಮನ್ನು ಒಡ್ಡಿಕೊಳ್ಳಬೇಕಿತ್ತು. ಅವರು ಕಡಿದಾದ ಬಂಡೆಗಳಿಂದ ಸಮುದ್ರದೊಳಗೆ ಧುಮುಕಬೇಕಿತ್ತು." ಆದಾಗ್ಯೂ, ಈ ಮಟ್ಟದ ಅಹಿಂಸೆಗೆ ಅಸಾಮಾನ್ಯ ನಂಬಿಕೆ ಮತ್ತು ಧೈರ್ಯಗಳ ಅಗತ್ಯವಿದ್ದು, ಇವುಗಳು ಎಲ್ಲರಲ್ಲಿಯೂ ಇರುವುದಿಲ್ಲ ಎಂಬುದು ಗಾಂಧಿಯವರಿಗೆ ಗೊತ್ತಿತ್ತು. ಆದ್ದರಿಂದ, ರಣಹೇಡಿತನವನ್ನು ಮುಚ್ಚಿಡಲು ಬಳಸುವವರಾದಲ್ಲಿ, ಪ್ರತಿಯೊಬ್ಬರೂ ಅಹಿಂಸೆಯನ್ನು ನೆಚ್ಚಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು: "ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಹೆದರಿದವರು ಅಥವಾ ಪ್ರತಿರೋಧವನ್ನು ಒಡ್ಡಲು ಅಶಕ್ತರಾದವರನ್ನು ತಮ್ಮ ಸತ್ಯಾಗ್ರಹ ಆಂದೋಲನದೆಡೆ ಆಕರ್ಷಿಸಲು ಗಾಂಧಿಯವರು ಇಚ್ಛಿಸುತ್ತಿರಲಿಲ್ಲ. 'ರಣಹೇಡಿತನ ಮತ್ತು ಹಿಂಸಾಚಾರದ ನಡುವೆ ಕೇವಲ ಒಂದೇ ಆಯ್ಕೆಯಿದ್ದಲ್ಲಿ, ನಾನು ಹಿಂಸಾಚಾರವನ್ನೇ ಆಯ್ಕೆ ಮಾಡಲು ಸಲಹೆ ನೀಡುವೆ ಎಂದು ನಂಬಿರುವೆ' ಎಂದು ಅವರು ಬರೆದಿದ್ದರು."ಬಂಡ್ಯುರಾಂಟ್, p. ೨೮. "ಅಹಿಂಸೆಯ ವಿಚಾರದಲ್ಲಿ, ಅವರಿಗೆ ಅಹಿಂಸೆಗಿಂತಲೂ ಹಚ್ಚು ಶಕ್ತಿಯುಳ್ಳದ್ದು ಎದುರಾಗಿ, ಆ ಶಕ್ತಿಯ ಬಳಕೆಯಲ್ಲಿ ಅವರು ಹೆಚ್ಚು ಪರಿಣಿತರಾಗಿದ್ದಲ್ಲಿ, ಅವರು ಅಹಿಂಸೆಯನ್ನು ತ್ಯಜಿಸಿ, ಅವರು ಮುಂಚೆ ಕೈಯಲ್ಲಿ ಹಿಡಿದಿದ್ದ ಶಸ್ತ್ರಗಳನ್ನು ಪುನ: ಎತ್ತಿಕೊಳ್ಳಬಹುದು ಎಂದು ಪ್ರತಿಯೊಂದು ಸಭೆಯಲ್ಲಿಯೂ ನಾನು ಎಚ್ಚರಿಕೆಯನ್ನು ಪುನರುಚ್ಚರಿಸಿದ್ದೆ. ಹಿಂದೊಮ್ಮೆ ಮಹಾನ್‌ ಧೈರ್ಯಶಾಲಿಗಳಾಗಿದ್ದು ಬಾದಶಾಹ್‌ ಖಾನ್‌ರ ಪ್ರಭಾವದಿಂದಾಗಿ ರಣಹೇಡಿಗಳಾಗಿ ಬದಲಾದ ಅಥವಾ ಹಾಗೆ ಮಾಡಲ್ಪಟ್ಟ ಖುದಾಯಿ ಖಿದ್ಮತ್‌ಗಾರ್‌ಗಳಿಗೆ ಸಂಬಂಧಿಸಿ ಇದನ್ನು ಹೇಳಲೇಬಾರದು. ಅವರ ಧೈರ್ಯವು ಅವರು ಉತ್ತಮ ಗುರಿಗಾರರಾಗಿರುವುದರಲ್ಲಿ ಇಲ್ಲ, ಸಾವನ್ನು ಆಹ್ವಾನಿಸಿ ಗುಂಡುಗಳಿಗೆ ಎದೆಯೊಡ್ಡಲು ಸದಾ ಸಿದ್ಧರಿರುವುದರಲ್ಲಿದೆ.ಬಂಡ್ಯುರಾಂಟ್, p. ೧೩೯. ಸಸ್ಯಾಹಾರ ತತ್ವ ಬಾಲಕನಾಗಿದ್ದಾಗ ಗಾಂಧಿಯವರು ಪ್ರಾಯೋಗಿಕವಾಗಿ ಮಾಂಸಾಹಾರ ಸೇವಿಸುತ್ತಿದ್ದರು. ಭಾಗಶ: ತಮ್ಮ ಅಂತರ್ಗತ ಕುತೂಹಲ ಮತ್ತು ಅವರ ಸ್ನೇಹಿತ ಮತ್ತು ಪೀರ್ ಶೇಕ್ ಮಹ್ತಾಬ್‌ನ ಒತ್ತಾಯವೇ ಇದಕ್ಕೆ ಕಾರಣ. ಭಾರತದಲ್ಲಿ, ಸಸ್ಯಾಹಾರದ ಕಲ್ಪನೆಯು ಹಿಂದೂ ಮತ್ತು ಜೈನ್ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಮತ್ತು ಅವರ ಹುಟ್ಟೂರಿನ ರಾಜ್ಯವಾದ ಗುಜರಾತ್‌ನಲ್ಲಿ ಬಹುಪಟ್ಟು ಹಿಂದುಗಳು ಸಸ್ಯಾಹಾರಿಗಳಾಗಿದ್ದರು ಮತ್ತು ಬಹುಶ: ಎಲ್ಲಾ ಜೈನರೂ ಸಸ್ಯಾಹಾರಿಗಳಾಗಿದ್ದಾರೆ.ಲೇಯ್ಡ್‌ಲಾ, ಜೇಮ್ಸ್‌: ಸಿರಿತನ ಮತ್ತು ತ್ಯಾಗ. ಜೈನರಲ್ಲಿ ಧರ್ಮ, ಆರ್ಥಿಕತೆ, ಮತ್ತು ಸಮಾಜ, ಆಕ್ಸ್‌ಫರ್ಡ್‌ ೧೯೯೫, p. ೧೬೬-೧೬೯.ಜೈನ ಸಮುದಾಯ: ತತ್ವಗಳು ಮತ್ತು ಆಚರಣೆಯ ನಡುವೆ ಕೆಲವು ವ್ಯತ್ಯಾಸಗಳು . ಫೆಬ್ರವರಿ ೧೪, ೨೦೦೯ರಂದು ಪಡೆದುಕೊಳ್ಳಲಾಯಿತು. ಗಾಂಧಿ ಕುಟುಂಬವೂ ಸಹ ಇದಕ್ಕೆ ಹೊರತಾಗಿರಲಿಲ್ಲ. ಲಂಡನ್‌ನಲ್ಲಿ ವ್ಯಾಸಂಗಕ್ಕೆ ಹೊರಡುವ ಮುಂಚೆ, ತಾವು ಮಾಂಸಾಹಾರ, ಮದ್ಯ ಮತ್ತು ಸ್ವಚ್ಛಂದ ಸಂಭೋಗದಲ್ಲಿ ತೊಡಗುವುದಿಲ್ಲವೆಂದು ಗಾಂಧಿಯವರು ತಮ್ಮ ತಾಯಿ ಪುತಲೀಬಾಯಿ ಮತ್ತು ತಮ್ಮ ಚಿಕ್ಕಪ್ಪ ಬೇಚಾರ್ಜೀ ಸ್ವಾಮಿಯವರಿಗೆ ಮಾತು ಕೊಟ್ಟಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದು ಪಥ್ಯಕ್ಕಿಂತಲೂ ಹೆಚ್ಚಿನ ಲಾಭವನ್ನೇ ಪಡೆದರು: ತಮ್ಮ ಜೀವಾವಧಿಯ ತತ್ವಗಳಿಗೆ ಒಂದು ನೆಲೆಯನ್ನು ಕಂಡುಕೊಂಡರು. ಗಾಂಧಿಯವರು ಪ್ರೌಢಾವಸ್ಥೆಗೆ ಬಂದಾಗ, ಅವರು ಕಟ್ಟುನಿಟ್ಟಾದ ಸಸ್ಯಾಹಾರಿಯಾದರು. ಈ ವಿಷಯದ ಬಗ್ಗೆ ದಿ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಮ್ ಎಂಬ ಪುಸ್ತಕವನ್ನು ಮತ್ತು ಹಲವು ಲೇಖನಗಳನ್ನು ಬರೆದರು, ಇವುಗಳಲ್ಲಿ ಕೆಲವನ್ನು ಲಂಡನ್‌ ಶಾಖಾಹಾರಿಗಳ ಸಂಘದ ಪ್ರಕಟಣೆಯಾದ ದಿ ವೆಜಿಟೇರಿಯನ್ ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಈ ಅವಧಿಯಲ್ಲಿ ಯುವ ಗಾಂಧಿಯವರು ಹಲವು ಮಹಾನ್ ವ್ಯಕ್ತಿಗಳಿಂದ ಪ್ರೇರಿತರಾಗಿ ಲಂಡನ್ ಶಾಖಾಹಾರಿ ಸಂಘದ ಅಧ್ಯಕ್ಷ ಡಾ. ಜೊಸಿಯಾ ಓಲ್ಡ್‌ಫೀಲ್ಡ್‌ ಅವರ ಸ್ನೇಹಿತರಾದರು. ಹೆನ್ರಿ ಸ್ಟೀಫೆನ್ಸ್ ಸಾಲ್ಟ್‌ರವರ ಕೃತಿಯನ್ನು ಓದಿ ಮೆಚ್ಚಿದ ಯುವ ಮೋಹನ್‌ದಾಸ್‌ರು ಈ ಸಸ್ಯಾಹಾರ ಪ್ರಚಾರಕರೊಂದಿಗೆ ಪತ್ರವ್ಯವಹಾರ ನಡೆಸಿದರು. ತಮ್ಮ ಲಂಡನ್‌ ವಾಸ ಮತ್ತು ಆ ನಂತರದ ಕಾಲದಲ್ಲಿ, ಗಾಂಧಿಯವರು ಸಸ್ಯಾಹಾರವನ್ನು ಸಮರ್ಥಿಸು ತ್ತಿದ್ದರು. ಗಾಂಧಿಯವರ ಪ್ರಕಾರ ಸಸ್ಯಾಹಾರಿ ಪಥ್ಯವು ಶರೀರದ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಅದು ಆರ್ಥಿಕ ದೃಷ್ಟಿಯಿಂದಲೂ ಸೂಕ್ತವೆನಿಸಿತ್ತು. ಏಕೆಂದರೆ, ಮಾಂಸಾಹಾರವು ಸಾಮಾನ್ಯವಾಗಿ ದವಸ, ತರಕಾರಿ ಹಾಗೂ ಹಣ್ಣುಗಳಿಗಿಂತ ದುಬಾರಿಯಾಗಿತ್ತು. ಇಂದಿಗೂ ದುಬಾರಿಯಾಗಿವೆ. ಜೊತೆಗೆ, ಆ ಕಾಲದಲ್ಲಿ ಹಲವು ಭಾರತೀಯರು ಕಡಿಮೆ ಆದಾಯದೊಂದಿಗೆ ಬಹಳ ದುಸ್ತರದಿಂದ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಹಾಗಾಗಿ ಸಸ್ಯಾಹಾರ ತತ್ವವನ್ನು ಅಧ್ಯಾತ್ಮಿಕತೆಯ ಪ್ರಯೋಗವಾಗಷ್ಟೇ ಅಲ್ಲ, ಪ್ರಾಯೋಗಿಕವಾಗಿಯೂ ನೋಡಲಾ ಗುತ್ತಿತ್ತು. ಅವರು ದೀರ್ಘಕಾಲ ಆಹಾರದಿಂದ ದೂರವಿರುತ್ತಿದ್ದ ಅವರು ಉಪವಾಸವನ್ನು ರಾಜಕೀಯ ಪ್ರತಿಭಟನೆಯ ರೂಪದಲ್ಲಿ ಬಳಸುತ್ತಿದ್ದರು. ತಮ್ಮ ಸಾವಿನ ತನಕ ಅಥವಾ ತಮ್ಮ ಬೇಡಿಕೆಗಳನ್ನು ಪೂರೈಸುವ ತನಕ ಅವರು ಆಹಾರವನ್ನು ನಿರಾಕರಿಸುತ್ತಿದ್ದರು. *ಸಸ್ಯಾಹಾರವು ಬ್ರಹ್ಮಚರ್ಯೆದೆಡೆಗಿನ ಅವರ ಆಳವಾದ ಬದ್ಧತೆಯ ಆರಂಭಿಕ ಹಂತವಾಗಿತ್ತು; ಬಾಯಿ ರುಚಿಯ ನಿಯಂತ್ರಣವಿಲ್ಲದೆ ಅವರು ಬ್ರಹ್ಮಚರ್ಯೆಯಲ್ಲಿ ಸಾಫಲ್ಯ ಪಡೆಯುವುದು ಕಷ್ಟಕರವಾಗುತ್ತಿತ್ತು ಎಂಬ ಅಂಶವು ಅವರ ಆತ್ಮಕಥೆಯಲ್ಲಿ ನಮೂದಿಸಲ್ಪಟ್ಟಿದೆ. ಗಾಂಧಿಯವರು ಫಲಾಹಾರಿಯಾಗಿದ್ದರು,ಗೋಖಲೆಯವರ ಚಾರಿಟಿ , ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ , M.K. ಗಾಂಧಿ. ಆದರೆ ಅವರ ವೈದ್ಯರ ಸಲಹೆಯ ಮೇರೆಗೆ ಮೇಕೆಯ ಹಾಲನ್ನು ಸೇವಿಸಲು ಪ್ರಾರಂಭಿಸಿದರು. ಅವರು ಹಸುಗಳಿಂದ ಸಂಗ್ರಹಿಸಲಾದ ಹೈನು ಉತ್ಪಾದನೆಗಳನ್ನು ಸೇವಿಸುತ್ತಿರಲಿಲ್ಲ, ಏಕೆಂದರೆ ಹಾಲು ಸಂಗ್ರಹಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಹಸುವಿಗೆ ಗಾಳಿ ಹೊಡೆಯುವ ಅಭ್ಯಾಸವು ಅವರಿಗೆ ಜಿಗುಪ್ಸೆ ತರಿಸಿತ್ತು. ಹೀಗಾಗಿ ಹಾಲು ಮಾನವನ ಸ್ವಾಭಾವಿಕ ಪಥ್ಯವಲ್ಲ ಎಂಬುದು ಅವರ ಮೊದಲಿನ ಅಭಿಪ್ರಾಯವಾಗಿತ್ತು, ಹಾಗೂ ನಿರ್ದಿಷ್ಟವಾಗಿ ಹೇಳುವುದಾದರೆ, ತಮ್ಮ ಮೃತ ತಾಯಿಗೆ ಮಾತು ಕೊಟ್ಟಿದ್ದೂ ಇದಕ್ಕೊಂದು ಕಾರಣವಾಗಿತ್ತು. ಬ್ರಹ್ಮಚರ್ಯೆ ಗಾಂಧಿಯವರು ೧೬ನೇ ವರ್ಷದವರಿದ್ದಾಗ ಅವರ ತಂದೆಯ ಆರೋಗ್ಯ ಸ್ಥಿತಿ ಹದಗೆಟ್ಟಿತು. ತಮ್ಮ ಪೋಷಕರನ್ನು ತುಂಬಾ ಆರಾಧಿಸುತ್ತಿದ್ದ ಕಾರಣ, ಎಲ್ಲ ತರಹದ ಅನಾರೋಗ್ಯ ಸಮಯಗಳಲ್ಲಿಯೂ ಅವರು ತಂದೆಯ ಜೊತೆಯಲ್ಲಿ ಇರುತ್ತಿದ್ದರು. ಆದಾಗ್ಯೂ, ಒಂದು ರಾತ್ರಿ, ಗಾಂಧಿ ಯವರ ಚಿಕ್ಕಪ್ಪನವರು ಗಾಂಧಿಯವರಿಗೆ ಸ್ವಲ್ಪ ಸಮಯ ಬಿಡುವು ಮಾಡಿಕೊಳ್ಳಲು ಅನುವು ಮಾಡಿಕೊಟ್ಟರು. ಅವರು ತಮ್ಮ ಶಯ್ಯಾಕೋಣೆಗೆ ಹೋದಾಗ ವಿಷಯಲೋಲುಪದಾಸೆಗೆ ಒಳಗಾಗಿ ತಮ್ಮ ಪತ್ನಿಯೊಂದಿಗೆ ಮೈಥುನದಲ್ಲಿ ತೊಡಗಿದರು. ಆ ನಂತರ ಸೇವಕನೊಬ್ಬನು ಬಂದು ಗಾಂಧಿಯವರ ತಂದೆಯವರು ಆಗಷ್ಟೇ ನಿಧನರಾದದ್ದನ್ನು ತಿಳಿಸಿದನು. ಗಾಂಧಿಯವರಿಗೆ ಅತೀವ ಪಾಪಪ್ರಜ್ಞೆ ಉಂಟಾಗಿ, ಸ್ವತ: ತಮ್ಮನ್ನು ತಾವು ಕ್ಷಮಿಸಲಾಗದ ಸ್ಥಿತಿಯಲ್ಲಿದ್ದರು. ಈ ಘಟನೆಯನ್ನು ಅವರು "ದುಪ್ಪಟ್ಟು ಅವಮಾನ" ಎಂದು ಉಲ್ಲೇಖಿಸಿದರು. ವಿವಾಹಿತರಾಗಿದ್ದರೂ ಸಹ, ತಮ್ಮ ೩೬ನೆಯ ವಯಸ್ಸಿನಲ್ಲಿಯೇ ಬ್ರಹ್ಮಚರ್ಯೆಯನ್ನಾಚರಿಸುವಲ್ಲಿ ಈ ಘಟನೆಯು ಗಾಂಧಿಯವರ ಮೇಲೆ ಬಹಳಷ್ಟು ಪ್ರಭಾವ ಬೀರಿತು. ಸಂಭೋಗತ್ಯಾಗ ಮತ್ತು ಸಂನ್ಯಾಸದೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿರುವ ಆಧ್ಯಾತ್ಮಿಕ ಮತ್ತು ಕಾರ್ಯರೂಪದ ಶುದ್ಧತೆಗಳನ್ನೊಳಗೊಂಡ ಬ್ರಹ್ಮಚರ್ಯೆಯ ತತ್ವದಿಂದ ಅವರ ಈ ನಿರ್ಧಾರವು ಆಳವಾಗಿ ಪ್ರಭಾವಿತವಾಗಿತ್ತು. ಬ್ರಹ್ಮಚರ್ಯೆಯೇ ದೇವರ ಸನಿಹಕ್ಕೆ ಹೋಗಲು ಸೂಕ್ತ ಮಾರ್ಗ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಪ್ರಾಥಮಿಕ ಅಡಿಪಾಯ ಎಂದು ಗಾಂಧಿಯವರು ಪರಿಗಣಿಸಿದ್ದರು. ಅವರ ಆತ್ಮಚರಿತ್ರೆಯಲ್ಲಿ ಅವರ ಕಾಮುಕ ಬೇಡಿಕೆಗಳ ವಿರುದ್ಧದ ಸಮರ ಮತ್ತು ಅವರ ಬಾಲ್ಯವಧು ಕಸ್ತೂರಬಾ ರೊಂದಿಗಿನ ತೀವ್ರ ಈರ್ಷ್ಯೆಯ ಘಟನೆಗಳನ್ನು ವಿವರಿಸಿದ್ದಾರೆ. ಭೋಗಾಪೇಕ್ಷೆಗಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಯಲು ಬ್ರಹ್ಮಚಾರಿಯಾಗಿ ಉಳಿಯುವುದು ತಮ್ಮ ವೈಯಕ್ತಿಕ ಹೊಣೆ ಎಂದು ಅವರು ತಿಳಿದಿದ್ದರು. ಗಾಂಧಿಯವರ ಪ್ರಕಾರ ಬ್ರಹ್ಮಚರ್ಯೆಯ ಎಂಬುದು "ಆಲೋಚನೆ, ಮಾತು, ಕೃತಿಗಳ ಮೂಲಕ ನಡೆಸುವ ಇಂದ್ರಿಯಗಳ ನಿಗ್ರಹ"ವಾಗಿತ್ತು.[101] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ — ಆನ್ ಆಟೊಬಯೊಗ್ರಫಿ, p. ೧೭೬. ಸರಳತೆ ಸಮಾಜ ಸೇವೆಯಲ್ಲಿ ನಿರತನಾಗಿರುವ ವ್ಯಕ್ತಿಯು ಸರಳ ಜೀವನ ನಡೆಸತಕ್ಕದ್ದು, ಇದು ಬ್ರಹ್ಮಚರ್ಯೆಯತ್ತ ಒಯ್ಯುತ್ತದೆ ಎಂದು ಗಾಂಧಿಯವರು ಮನ:ಪೂರ್ವಕವಾಗಿ ನಂಬಿದ್ದರು. ಅವರು ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸುತ್ತಿದ್ದ ಪಾಶ್ಚಾತ್ಯ ಜೀವನಶೈಲಿಯನ್ನು ತ್ಯಜಿಸುವ ಮೂಲಕ ಅವರ ಸರಳತೆಯು ಆರಂಭವಾಯಿತು. ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ, ಸರಳ ಜೀವನ ಶೈಲಿಯನ್ನು ರೂಪಿಸಿಕೊಂಡು, ತಮ್ಮ ಉಡುಪುಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಅವರು, ಇದು "ತಮ್ಮನ್ನೇ ಸೊನ್ನೆಗೆ ಕುಗ್ಗಿಸಿಕೊಳ್ಳುವ" ವಿಧಾನ ಎನ್ನುತ್ತಿದ್ದರು.[102] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ — ಆನ್ ಆಟೊಬಯೊಗ್ರಫಿ, p. ೧೭೭. ಸಮುದಾಯಕ್ಕೆ ತಾವು ಸಲ್ಲಿಸಿದ್ದ ನಿಷ್ಥಾವಂತ ಸೇವೆಗೆ ಕೃತಜ್ಞತೆ ವ್ಯಕ್ತಪಡಿಸಿ ತಮ್ಮ ಜನ್ಮಸಂಬಂಧಿಗಳು ನೀಡಿದ್ದ ಉಡುಗೊರೆಗಳನ್ನು ಅವರು ಒಂದು ಸನ್ನಿವೇಶದಲ್ಲಿ ಹಿಂದಿರುಗಿಸಿದರು.[103] ^ ದಿ ಸ್ಟೋರಿ ಆಫ್ ಮೈ ಎಕ್ಸಪೆರಿಮೆಂಟ್ಸ್‌ ವಿತ್ ಟ್ರುತ್‌ — ಆನ್ ಆಟೊಬಯೊಗ್ರಫಿ, p. ೧೮೩. ಗಾಂಧಿಯವರು ಪ್ರತಿ ವಾರದಲ್ಲೂ ಒಂದು ದಿನ ಮೌನ ವ್ರತವನ್ನು ಆಚರಿಸುತ್ತಿದ್ದರು. ಮಾತನಾಡುವಿಕೆಯಿಂದ ದೂರವುಳಿಯುವ ಅಭ್ಯಾಸದಿಂದಾಗಿ ತಮ್ಮಲ್ಲಿ ಆಂತರಿಕ ಶಾಂತಿಯು ತುಂಬಿಕೊಂಡಿದೆ ಎಂದು ಅವರು ನಂಬಿದ್ದರು. ಹಿಂದೂ ತತ್ವಗಳಾದ ಮೌನ (ಸಂಸ್ಕೃತ: — ನಿಶ್ಯಬ್ದ) ಮತ್ತು ಶಾಂತಿ (ಸಂಸ್ಕೃತ: — ಶಾಂತಿ) ಗಳಿಂದ ಈ ಪ್ರಭಾವವನ್ನು ಸೆಳೆಯಲಾಗಿತ್ತು. ಅಂತಹ ದಿನಗಳಂದು ಅವರು ಕಾಗದದ ಮೇಲೆ ಬರೆಯುವುದರ ಮೂಲಕ ಇತರರೊಂದಿಗೆ ಸಂವಹನ ಮಾಡುತ್ತಿದ್ದರು. ತಮ್ಮ ೩೭ನೆಯ ವಯಸ್ಸಿನಿಂದ ಮೂರೂವರೆ ವರ್ಷಗಳವರೆಗೆ ಗಾಂಧಿಯವರು ವಾರ್ತಾಪತ್ರಿಕೆಗಳನ್ನು ಓದಲು ನಿರಾಕರಿಸುತ್ತಿದ್ದರು. ಏಕೆಂದರೆ ತಮ್ಮ ಆಂತರಿಕ ಅಶಾಂತಿಗಿಂತ ವಿಶ್ವದ ವಿದ್ಯಮಾನಗಳ ಪ್ರಕ್ಷುಬ್ಧ ಸ್ಥಿತಿಯು ತಮಗೆ ಹೆಚ್ಚು ಗೊಂದಲವನ್ನುಂಟುಮಾಡುತ್ತವೆ ಎಂಬುದು ಅವರ ಸಮರ್ಥನೆಯಾಗಿತ್ತು. ಜಾನ್ ರಸ್ಕಿನ್‌ರವರ ಅನ್‌ಟು ದಿಸ್‌ ಲಾಸ್ಟ್‌ ಕೃತಿಯನ್ನು ಓದಿದ ನಂತರ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಲು ಹಾಗೂ ಫಿನಿಕ್ಸ್ ಸೆಟ್ಲ್‌ಮೆಂಟ್‌ ಎಂಬ ಸಮುದಾಯವೊಂದನ್ನು ರೂಪಿಸಲು ಅವರು ನಿರ್ಧರಿಸಿ ದರು. ದಕ್ಷಿಣ ಆಫ್ರಿಕಾದಲ್ಲಿ ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸಿ ಭಾರತಕ್ಕೆ ಮರಳಿದ ನಂತರ ಗಾಂಧಿಯವರು ತಮ್ಮಲ್ಲಿದ್ದ ಸಂಪತ್ತು ಹಾಗೂ ಯಶಸ್ಸನ್ನು ಬಿಂಬಿಸುವಂತಹ ಪಾಶ್ಚಾತ್ಯ ಶೈಲಿಯ ಉಡುಪುಗಳನ್ನು ಧರಿಸಿವುದನ್ನು ಬಿಟ್ಟರು. ಭಾರತದಲ್ಲಿನ ಅತಿ ಬಡ ವ್ಯಕ್ತಿಯೂ ತಮ್ಮನ್ನು ಒಪ್ಪುವ ರೀತಿಯಲ್ಲಿ ಉಡುಪು ಧರಿಸಿದ ಅವರು, ತನ್ಮೂಲಕ ಮನೆಯಲ್ಲಿ ನೂತ ನೂಲಿನ ಬಟ್ಟೆ (ಖಾದಿ )ಯ ಬಳಕೆಯನ್ನು ಸಮರ್ಥಿಸಿದರು. ತಾವೇ ಸ್ವತಃ ನೂತ ನೂಲಿನಿಂದ ತಮ್ಮದೇ ಉಡುಪುಗಳನ್ನು ನೇಯುವ ಅಭ್ಯಾಸವನ್ನು ಅಳವಡಿಸಿಕೊಂಡ ಗಾಂಧಿಯವರು ಹಾಗೂ ಅವರ ಅನುಯಾಯಿಗಳು, ಇತರರೂ ಹಾಗೆಯೇ ಮಾಡುವಂತೆ ಪ್ರೇರೇಪಿಸಿದರು. ನಿರುದ್ಯೋಗದ ಕಾರಣದಿಂದಾಗಿ ಭಾರತೀಯ ಕೆಲಸಗಾರರು ಕೆಲಸವಿಲ್ಲದೆ ಕೂರಬೇಕಾಗಿ ಬರುತ್ತಿದ್ದಾಗ ಬ್ರಿಟಿಷ್ ಹಿತಾಸಕ್ತಿಗಳ ಸ್ವಾಮ್ಯತೆಯಲ್ಲಿದ್ದ ಕೈಗಾರಿಕಾ ತಯಾರಕರಿಂದ ತಮ್ಮ ಉಡುಪುಗಳನ್ನು ಆಗಾಗ್ಗೆ ಖರೀದಿಸುತ್ತಿದ್ದರು. ಭಾರತೀಯರು ತಮ್ಮ ಉಡುಪುಗಳನ್ನು ತಾವೇ ತಯಾರಿಸಿ ದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಡಳಿತಕ್ಕೆ ಆರ್ಥಿಕ ಪೆಟ್ಟು ನೀಡಬಹುದೆಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇದರ ಪರಿಣಾಮವಾಗಿ, ನೂಲುವ ರಾಟೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಧ್ವಜದಲ್ಲಿ ಅಳವಡಿಸಲಾಯಿತು. ಆ ನಂತರ, ತಮ್ಮ ಜೀವನದ ಸರಳತೆಯನ್ನು ವ್ಯಕ್ತಪಡಿಸಲು ಅವರು ತಮ್ಮ ಜೀವನವುದ್ದಕ್ಕೂ ಧೋತಿಯನ್ನು ಉಡುತ್ತಿದ್ದರು. ಧರ್ಮಶ್ರದ್ಧೆ thumb|right|ಗಾಂಧಿ ಸ್ಮೃತಿ (ನವ ದೆಹಲಿಯಲ್ಲಿ ಗಾಂಧಿಯವರು ತಮ್ಮ ಕೊನೆಯ 4 ನಾಲ್ಕು ತಿಂಗಳುಗಳು ಉಳಿದುಕೊಂಡಿದ್ದ ಮನೆಯು ಈಗ ಸ್ಮಾರಕವಾಗಿದೆ) ಹಿಂದೂ ಧರ್ಮದಲ್ಲಿ ಜನಿಸಿದ ಗಾಂಧಿಯವರು, ತಮ್ಮ ತತ್ವಗಳಲ್ಲಿ ಬಹುಪಾಲನ್ನು ಹಿಂದೂ ಧರ್ಮದಿಂದ ಪಡೆದುಕೊಂಡು, ತಮ್ಮ ಜೀವನದುದ್ದಕ್ಕೂ ಹಿಂದೂಧರ್ಮವನ್ನು ಪರಿಪಾಲಿಸಿದರು. ಓರ್ವ ಸಾಮಾನ್ಯ ಹಿಂದುವಾಗಿ, ಅವರು ಎಲ್ಲಾ ಧರ್ಮಗಳನ್ನೂ ಸಮಾನ ದೃಷ್ಟಿಯಲ್ಲಿ ಕಂಡರು, ಬೇರೊಂದು ಧರ್ಮಕ್ಕೆ ತಮ್ಮನ್ನು ಮತಾಂತರಗೊಳಿಸುವ ಎಲ್ಲ ಯತ್ನಗಳನ್ನೂ ಅವರು ತಳ್ಳಿಹಾಕಿದರು. ಅವರು ಅತ್ಯಾಸಕ್ತ ದೇವತಾಶಾಸ್ತ್ರಜ್ಞರಾಗಿದ್ದು ಎಲ್ಲಾ ಪ್ರಮುಖ ಧರ್ಮಗಳ ಬಗ್ಗೆಯೂ ವಿಸ್ತೃತವಾಗಿ ಓದಿದ್ದರು. ಹಿಂದೂ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳು ಹೀಗಿದ್ದವು: ನನಗೆ ತಿಳಿದಿರುವಂತೆ ಹಿಂದೂ ಧರ್ಮವು ನನ್ನ ಆತ್ಮಕ್ಕೆ ತೃಪ್ತಿ ನೀಡಿ, ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ...ಸಂಶಯಗಳು ನನ್ನನ್ನು ಕಾಡಿದಾಗ, ನಿರಾಶೆಗಳು ನನ್ನತ್ತ ದುರುಗುಟ್ಟಿ ನೋಡಿದಾಗ ಮತ್ತು ಕ್ಷಿತಿಜದಲ್ಲಿ ಬೆಳಕಿನ ಒಂದೇ ಒಂದು ಕಿರಣವನ್ನೂ ನಾನು ಕಾಣದಾದಾಗ, ನಾನು ಭಗವದ್ಗೀತೆ ಯ ಮೊರೆ ಹೋಗಿ, ನನಗೆ ಸಾಂತ್ವನ ನೀಡುವ ಒಂದು ಪಂಕ್ತಿಯನ್ನು ಕಂಡು, ತಡೆಯಲಾಗದಂತಹ ದುಃಖದ ನಡುವೆಯೂ ಮುಗುಳ್ನಗಲಾರಂಭಿಸುವೆ. ನನ್ನ ಜೀವನದ ತುಂಬ ದುರಂತಗಳೇ ತುಂಬಿಕೊಂಡಿವೆ. ಒಂದು ವೇಳೆ ಗೋಚರಿಸುವ ಮತ್ತು ಅಳಿಸಲಾಗದ ಯಾವುದೇ ಪರಿಣಾಮವನ್ನು ನನ್ನಲ್ಲಿ ಅವು ಉಳಿಸಿಲ್ಲವಾದಲ್ಲಿ ಅದಕ್ಕೆ ಭಗವದ್ಗೀತೆಯಲ್ಲಿನ ಉಪದೇಶಗಳೇ ಕಾರಣ." ಗಾಂಧಿಯವರು ಭಗವದ್ಗೀತೆ ಯ ಕುರಿತು ಗುಜರಾತಿಯಲ್ಲಿ ಒಂದು ವ್ಯಾಖ್ಯಾನವನ್ನು ಬರೆದರು. ಗುಜರಾತಿ ಭಾಷೆಯಲ್ಲಿದ್ದ ಹಸ್ತಪ್ರತಿಯನ್ನು ಮಹದೇವ್ ದೇಸಾಯಿಯವರು ಆಂಗ್ಲಭಾಷೆ‌ಗೆ ಭಾಷಾಂತರಿಸಿ ಹೆಚ್ಚುವರಿ ಪ್ರಸ್ತಾವನೆ ಮತ್ತು ವ್ಯಾಖ್ಯಾನಗಳನ್ನು ಸೇರಿಸಿದರು. ಗಾಂಧಿಯವರ ಮುನ್ನುಡಿಯೊಂದಿಗೆ ಅದು ೧೯೪೬ರಲ್ಲಿ ಪ್ರಕಟಗೊಂಡಿತು.[106] ^ ದೇಸಾಯಿ, ಮಹಾದೇವ್‌. ದಿ ಗಾಸ್ಪೆಲ್‌ ಆಫ್ ಸೆಲ್ಫ‌ಲೆಸ್ ಆಕ್ಷನ್‌, ಅಥವಾ, ದಿ ಗೀತ ಅಕಾರ್ಡಿಂಗ್‌ ಟು ಗಾಂಧಿ. (ನವಜೀವನ್‌ ಪಬ್ಲಿಷಿಂಗ್‌ ಹೌಸ್‌: ಅಹಮದಾಬಾದ್‌: ಪ್ರಥಮ ಆವೃತ್ತಿ ೧೯೪೬). ಬೇರೆಯ ಆವೃತ್ತಿಗಳು: ೧೯೪೮, ೧೯೫೧, ೧೯೫೬.[107] ^ ದೇಸಾಯಿಯವರ ಸೇರಿಸಿರುವ ಕೆಲವು ಅಭಿಪ್ರಾಯಗಳನ್ನು ಬಿಟ್ಟು, ಒಂದು ಸಣ್ಣ ಆವೃತ್ತಿ ಪ್ರಕಟವಾಯಿತು: ಅನಾಸಕ್ತಿಯೋಗ: ದಿ ಗಾಸ್ಪೆಲ್‌ ಆಫ್ ಸೆಲ್ಫ‌ಲೆಸ್ ಆಕ್ಷನ್‌. ಜಿಮ್‌ ರಂಕಿನ್‌, ಸಂಪಾದಕರು. ಲೇಖಕರನ್ನು M.K. ಗಾಂಧಿ ಎಂದು ಪಟ್ಟಿ ಮಾಡಲಾಗಿದೆ; ಮಹಾದೇವ್‌ ದೇಸಾಯಿ, ಅನುವಾದಕ. (ಡ್ರೈ ಬೋನ್ಸ್‌ ಪ್ರೆಸ್‌, ಸ್ಯಾನ್ ಫ್ರಾನ್ಸಿಸ್ಕೊ, ೧೯೯೮) ISBN ೧-೮೮೩೯೩೮-೪೭-೩. ಪ್ರತಿಯೊಂದು ಧರ್ಮದ ತಿರುಳಲ್ಲಿಯೂ ಸತ್ಯ ಮತ್ತು ಪ್ರೀತಿ (ಸಹಾನುಭೂತಿ, ಅಹಿಂಸೆ ಮತ್ತು ಸನ್ಮಾರ್ಗ ಸೂತ್ರ) ಇರುತ್ತವೆಂದು ಗಾಂಧಿಯವರು ನಂಬಿದ್ದರು. ತಮ್ಮ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳಲ್ಲಿನ ಆಷಾಢಭೂತಿತನ, ದುರಾಚಾರ ಹಾಗೂ ಮತತತ್ವಗಳನ್ನು ಅವರು ಪ್ರಶ್ನಿಸಿದರು ಮತ್ತು ಧರ್ಮದಲ್ಲಿನ ಸಾಮಾಜಿಕ ಸುಧಾರಣೆಗೆ ಸಂಬಂಧಿಸಿ ಅವರು ಓರ್ವ ದಣಿವರಿಯದ ಸಮರ್ಥಕರಾಗಿದ್ದರು. ವಿವಿಧ ಧರ್ಮಗಳ ಬಗ್ಗೆ ಅವರ ಕೆಲ ಟಿಪ್ಪಣಿಗಳು ಹೀಗಿವೆ: "ನಾನು ಕ್ರೈಸ್ತ ಧರ್ಮವನ್ನು ಪರಿಪೂರ್ಣವೆಂದಾಗಲೀ ಅಥವಾ ಮಹೋನ್ನತ ಧರ್ಮವೆಂದಾಗಲೀ ಒಪ್ಪಲು ಸಾಧ್ಯವಾಗದಿದ್ದಲ್ಲಿ, ಅದೇ ರೀತಿಯಲ್ಲಿ ಹಿಂದೂ ಧರ್ಮವೂ ನನ್ನ ಮನವೊಪ್ಪಿಸಲಾರದು.ಹಿಂದೂ ಧರ್ಮದಲ್ಲಿನ ದೋಷಗಳು ತುರ್ತಾಗಿ ನನಗೆ ಎದ್ದು ಕಾಣುತ್ತಿದ್ದವು. ಅಸ್ಪೃಶ್ಯತೆಯು ಹಿಂದೂ ಧರ್ಮದ ಒಂದು ಭಾಗವಾಗಿರಬಹುದಾಗಿದ್ದಲ್ಲಿ ಅದೊಂದು ಕೊಳೆತ ಭಾಗ ಅಥವಾ ದುರ್ಮಾಂಸವಾಗಿರಬಹುದು. ಒಳಪಂಗಡ ಮತ್ತು ಜಾತಿಗಳ ಬಾಹುಳ್ಯದ ಮೂಲೋದ್ದೇಶ ವನ್ನು ನನಗೆ ಅರ್ಥಮಾಡಿಕೊಳ್ಳಲಾಗಿಲ್ಲ. ವೇದಗಳು ದೇವರ ಸ್ಪೂರ್ತಿಯುತ ವಚನಗಳು ಎಂದು ಹೇಳುವುದರ ಅರ್ಥವೇನಿತ್ತು? ಒಂದು ವೇಳೆ ಪ್ರೇರಿತವಾಗಿದ್ದಲ್ಲಿ, ಬೈಬಲ್‌ ಮತ್ತು ಕೊರಾನ್ ಸಹ ಯಾಕಾಗಿರಬಾರದು? ಕ್ರಿಶ್ಚಿಯನ್ ಸ್ನೇಹಿತರಂತೆಯೇ ಮುಸ್ಲಿಮ್‌ ಸ್ನೇಹಿತರೂ ಸಹ ನನ್ನನ್ನು ಮತಾಂತರಗೊಳಿಸಲು ಯತ್ನಿಸಿದರು. ಇಸ್ಲಾಮ್‌ ಧರ್ಮವನ್ನು ಅಧ್ಯಯನ ಮಾಡಲು ಅಬ್ದುಲ್ಲಾ ಸೇಠ್‌ ನನಗೆ ಒತ್ತಾಯಿಸುತ್ತಲೇ ಇರುತ್ತಿದ್ದ ಮತ್ತು ಅದರ ವಿಶಿಷ್ಟ ಗುಣಗಳ ಬಗ್ಗೆ ಹೇಳಲು ಅವನ ಬಳಿ ಏನಾದರೊಂದು ಇರುತ್ತಿತ್ತು." (ಮೂಲ: ಅವರ ಆತ್ಮಚರಿತ್ರೆ) "ನಾವು ನೈತಿಕ ಆಧಾರವನ್ನು ಕಳೆದುಕೊಂಡಕೂಡಲೇ ನಮ್ಮ ಧಾರ್ಮಿಕತೆ ಕೊನೆಗೊಂಡಂತೆಯೇ."ನೈತಿಕತೆಯನ್ನು ಮೀರಿಸುವಂಥಾದ್ದು ಧರ್ಮದಲ್ಲಿ ಏನೂ ಇಲ್ಲ. ಉದಾಹರಣೆಗೆ, ಮಾನವನು ಸುಳ್ಳನಾಗಿ, ಕ್ರೂರಿಯಾಗಿ ಅಥವಾ ಅಸಂಯಮಿಯಾಗಿದ್ದುಕೊಂಡು, ದೇವರು ತನ್ನೊಂದಿಗಿದ್ದಾನೆಂದು ಹೇಳಿಕೊಳ್ಳಲಾಗದು." "ಮಹಮ್ಮದ್‌ರ ನುಡಿಗಳು ಕೇವಲ ಮುಸ್ಲಿಮರಿಗೆ ಮಾತ್ರವೇ ಅಲ್ಲದೇ ಇಡೀ ಮಾನವ ಕುಲಕ್ಕೇ ಬುದ್ಧಿವಂತಿಕೆಯ ನಿಧಿಯಾಗಿವೆ." "ನಿಮ್ಮ ಕ್ರಿಸ್ತನನ್ನು ನಾನು ಇಷ್ಟಪಡುವೆ, ಆದರೆ ನಿಮ್ಮ ಕ್ರಿಶ್ಚಿಯನ್ನರನ್ನು ನಾನು ಇಷ್ಟಪಡುವುದಿಲ್ಲ." ಅವರ ಜೀವನದ ಆ ನಂತರದ ಹಂತದಲ್ಲಿ, ತಾವು ಹಿಂದೂ ಧರ್ಮದವರೇ ಎಂದು ಅವರನ್ನು ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ: "ಹೌದು. ನಾನೊಬ್ಬ ಹಿಂದು. ನಾನು ಒಬ್ಬ ಕ್ರೈಸ್ತ, ಒಬ್ಬ ಮುಸ್ಲಿಮ್‌, ಒಬ್ಬ ಬೌದ್ಧ ಮತ್ತು ಒಬ್ಬ ಯಹೂದಿ ಸಹ." ( ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.)(ಇಂಗ್ಲಿಷ್ ತಾಣ ನೋಡಿ) ಪರಸ್ಪರ ಗೌರವಾದರವಿದ್ದರೂ ಸಹ, ಗಾಂಧಿಯವರು ಮತ್ತು ರವೀಂದ್ರನಾಥ್ ಟ್ಯಾಗೂರ್‌ರು ಒಂದಕ್ಕಿಂತಲೂ ಹೆಚ್ವು ಬಾರಿ ಸುದೀರ್ಘ ಚರ್ಚೆಗಳಲ್ಲಿ ಭಾಗಿಯಾಗಿದ್ದರು. ಈ ಚರ್ಚೆಗಳು ಅಂದಿನ ಇಬ್ಬರು ಅತ್ಯಂತ ಪ್ರಖ್ಯಾತ ಭಾರತೀಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳಿಗೆ ಉದಾಹರಣೆಯಾಗಿವೆ. ೧೯೩೪ರ ಜನವರಿ ೧೫ರಂದು ಬಿಹಾರದಲ್ಲಿ ಭೂಕಂಪವೊಂದು ಸಂಭವಿಸಿ ಬೃಹತ್ ಪ್ರಮಾಣದ ನಷ್ಟ ಹಾಗೂ ಪ್ರಾಣಹಾನಿಯನ್ನು ಉಂಟುಮಾಡಿತು. ಅಸ್ಪೃಶ್ಯರನ್ನು ತಮ್ಮ ದೇವಾಲಯಗಳೊಳಗೆ ಬಿಟ್ಟುಕೊಳ್ಳದಿರುವ ಮೂಲಕ ಮೇಲು ಜಾತಿಯ ಹಿಂದೂಗಳು ಮಾಡಿದ ಪಾಪದ ಫಲವಿದು ಎಂದು ಗಾಂಧಿಯವರು ಇದನ್ನು ಸಮರ್ಥಿಸಿದರು (ಅಸ್ಪೃಶ್ಯರನ್ನು ಹರಿಜನರು, ಕೃಷ್ಣನ ಜನರು ಎಂದು ಉಲ್ಲೇಖಿಸುವ ಮೂಲಕ ಅಸ್ಪೃಶ್ಯರ ಭವಿತವ್ಯವನ್ನು ಸುಧಾರಿಸುವ ಉದ್ದೇಶಕ್ಕೆ ಗಾಂಧಿಯವರು ಬದ್ಧರಾಗಿದ್ದರು). ಅಸ್ಪೃಶ್ಯತೆಯ ಪದ್ಧತಿಯು ಅದೆಷ್ಟೇ ಅಸಂಗತವಾಗಿರಲಿ, ಭೂಕಂಪವು ಕೇವಲ ನೈಸರ್ಗಿಕ ಶಕ್ತಿಗಳಿಂದ ಮಾತ್ರ ಆಗಬಲ್ಲದೇ ಹೊರತು, ನೈತಿಕತೆಯ ಕಾರಣಗಳಿಂದಲ್ಲ ಎಂದು ಹೇಳಿದ ಟ್ಯಾಗೂರ್‌ರು ಗಾಂಧಿಯವರ ನಿಲುವನ್ನು ಭಾವೋದ್ವೇಗದಿಂದ ವಿರೋಧಿಸಿದರು. ಬರಹಗಳು thumb|ಗಾಂಧಿಯವರು ಯಂಗ್ ಇಂಡಿಯಾ ಎಂಬ ಪತ್ರಿಕೆಯನ್ನು ಪ್ರಕಟಿಸಿದರು ಗಾಂಧಿಯವರು ಓರ್ವ ಸಮೃದ್ಧ ಬರಹಗಾರರಾಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್‌ ಪತ್ರಿಕೆ, ಭಾರತಕ್ಕೆ ಮರಳಿದ ನಂತರ ಗುಜರಾತಿ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಹರಿಜನ್‌ ಪತ್ರಿಕೆ, ಆಂಗ್ಲಭಾಷೆಯಲ್ಲಿ ಯಂಗ್ ಇಂಡಿಯಾ ಪತ್ರಿಕೆ ಮತ್ತು ನವಜೀವನ್‌‌‌ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ದಶಕಗಳ ಕಾಲ ಅವರು ಸಂಪಾದಕರಾಗಿದ್ದರು. ಕಾಲಾನಂತರದಲ್ಲಿ ನವಜೀವನ್‌ ಪತ್ರಿಕೆಯು ಹಿಂದಿಯಲ್ಲಿಯೂ ಪ್ರಕಟಗೊಂಡಿತು.V.N. ನಾರಾಯಣನ್‌‌ರವರ ಪೀರ್‌ಲೆಸ್ಸ್ ಕಮ್ಯುನಿಕೇಟರ್‌ . ಲೈಫ್ ಪಾಸಿಟೀವ್‌ ಪ್ಲಸ್‌, ಅಕ್ಟೊಬರ್‌–ಡಿಸೆಂಬರ್‌ ೨೦೦೨ ಇದರ ಜೊತೆಗೆ, ಅವರು ಹೆಚ್ಚೂ ಕಡಿಮೆ ಪ್ರತಿ ದಿನವೂ ವ್ಯಕ್ತಿಗಳಿಗೆ ಹಾಗೂ ವೃತ್ತಪತ್ರಿಕೆಗಳಿಗೆ ನಿಯಮಿತವಾಗಿ ಪತ್ರ ಬರೆಯುತ್ತಿದ್ದರು. ತಮ್ಮ ಆತ್ಮಚರಿತ್ರೆಯಾದ ಆನ್‌ ಆಟೋಬಯೊಗ್ರಫಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿತ್‌ ಟ್ರೂತ್‌ ಸೇರಿದಂತೆ ಇನ್ನೂ ಕೆಲವು ಪುಸ್ತಕಗಳನ್ನೂ ಗಾಂಧಿಯವರು ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಹೋರಾಟದ ಕುರಿತಾದ ಸತ್ಯಾಗ್ರಹ ಇನ್‌ ಸೌತ್‌ ಆಫ್ರಿಕಾ ಎಂಬ ಪುಸ್ತಕ, ಹಿಂದ್ ಸ್ವರಾಜ್ ಆರ್‌ ಇಂಡಿಯನ್‌ ಹೋಮ್‌ ರೂಲ್‌ ಎಂಬ ರಾಜಕೀಯ ಕಿರುಹೊತ್ತಿಗೆ ಅವುಗಳಲ್ಲಿ ಸೇರಿದ್ದು, ಜಾನ್‌ ರಸ್ಕಿನ್‌ರವರ ಅನ್‌ಟು ದಿಸ್ ಲಾಸ್ಟ್ ನ್ನು ಕೃತಿಯನ್ನು ಗುಜರಾತಿ ಭಾಷೆಗೆ ಭಾವಾನುವಾದ ಮಾಡಿದ್ದಾರೆ. ಈ ಕೊನೆಯ ಪ್ರಬಂಧವನ್ನು ಅರ್ಥಶಾಸ್ತ್ರದ ಕುರಿತಾದ ಅವರ ಪಠ್ಯಕ್ರಮ ಎಂದು ಪರಿಗಣಿಸಬಹುದು. ಅವರು ಸಸ್ಯಾಹಾರ ಪದ್ಧತಿ, ಆಹಾರ ಕ್ರಮ ಮತ್ತು ಆರೋಗ್ಯ, ಧರ್ಮ, ಸಮಾಜ ಸುಧಾರಣೆಗಳು ಇತ್ಯಾದಿ ವಿಷಯಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಗಾಂಧಿಯವರು ಸಾಮಾನ್ಯವಾಗಿ ಗುಜರಾತಿಯಲ್ಲಿ ಬರೆಯುತ್ತಿದ್ದರೂ ಸಹ, ಹಿಂದಿ ಮತ್ತು ಆಂಗ್ಲ ಭಾಷೆಗಳಿಗೆ ಭಾಷಾಂತರವಾಗಿದ್ದ ತಮ್ಮ ಪುಸ್ತಕಗಳನ್ನು ಪರಿಷ್ಕರಿಸುತ್ತಿದ್ದರು. ೧೯೬೦ನೇ ಇಸವಿಯಲ್ಲಿ ಭಾರತ ಸರ್ಕಾರವು ಗಾಂಧಿಯವರ ಸಂಪೂರ್ಣ ಕೃತಿಗಳನ್ನು ದಿ ಕಲೆಕ್ಟೆದ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಕಟಿಸಿತ್ತು. ಈ ಬರಹಗಳು ಸುಮಾರು ೫೦,೦೦೦ ಪುಟಗಳನ್ನು ಒಳಗೊಂಡಿದ್ದು ಅವುಗಳನ್ನು ಸುಮಾರು ನೂರು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಆದರೆ, ರಾಜಕೀಯ ದುರುದ್ದೇಶಗಳಿಗಾಗಿ ಸರ್ಕಾರವು ಕೃತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿದೆ ಎಂದು ಗಾಂಧಿಯವರ ಅನುಯಾಯಿಗಳು ವಾದಿಸಿದ್ದರಿಂದಾಗಿ ೨೦೦೦ನೇ ಇಸವಿಯಲ್ಲಿ ಅವರ ಸಂಪೂರ್ಣ ಕೃತಿಗಳ ಪರಿಷ್ಕೃತ ಆವೃತ್ತಿಯು ವಿವಾದದ ಕಿಡಿಯನ್ನು ಹೊತ್ತಿಸಿದ್ದವು. ನಂತರ ಭಾರತ ಸರ್ಕಾರವು ಪರಿಷ್ಕೃತ ಆವೃತ್ತಿಯನ್ನು ಹಿಂಪಡೆಯಿತು.ಕಲೆಕ್ಟೆಡ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ (CWMG) ವಿವಾದ (ಗಾಂಧಿಸರ್ವ್) ಗಾಂಧಿಯವರ ಬಗ್ಗೆ ಪುಸ್ತಕಗಳು ಹಲವು ಜೀವನಚರಿತ್ರಕಾರರು ಗಾಂಧಿಯವರ ಜೀವನವನ್ನು ವಿವರಿಸುವ ಕೆಲಸವನ್ನು ಕೈಗೊಂಡಿದ್ದಾರೆ. ಅವುಗಳಲ್ಲಿ, ಎರಡು ಕೃತಿಗಳು ಪ್ರಸಿದ್ಧವಾಗಿವೆ: ಎಂಟು ಸಂಪುಟಗಳಲ್ಲಿರುವ, D. G. ತೆಂಡೂಲ್ಕರ್‌ರವರ ಮಹಾತ್ಮ. ಲೈಫ್‌ ಆಫ್‌ ಮೋಹನ್‌ದಾಸ್‌ ಕರಮ್‌ಚಂದ್‌ ಗಾಂಧಿ ಮತ್ತು ೧೦ ಸಂಪುಟಗಳಲ್ಲಿರುವ, ಪ್ಯಾರೇಲಾಲ್‌ ಮತ್ತು ಸುಶೀಲಾ ನಾಯರ್‌ರವರ ಮಹಾತ್ಮ ಗಾಂಧಿ .US ಸೇನಾದಳದ ಕರ್ನಲ್‌ G. B. ಸಿಂಗ್‌ ಗಾಂಧಿ: ಬಿಹೈಂಡ್‌ ದಿ ಮಾಸ್ಕ್‌ ಆಫ್‌ ಡಿವೈನಿಟಿ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈಗಿರುವ ಗಾಂಧಿಯವರ ಕುರಿತಾದ ಬಹುಪಾಲು ಸಾಹಿತ್ಯ ಕೃತಿಗಳು ಗಾಂಧಿಯವರು ಬರೆದ ಆತ್ಮಚರಿತ್ರೆಯಲ್ಲಿರುವ ವಿಚಾರಗಳನ್ನೇ ಹೇಳುತ್ತವೆಯೇ ಹೊರತು, ಗಾಂಧಿಯವರ ನಡೆ-ನುಡಿಗಳ ಕುರಿತಾದ ವಿಮರ್ಶಾತ್ಮಕ ಅವಲೋಕನವು ಅವುಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿದೆ ಎಂಬುದಾಗಿ G. B. ಸಿಂಗ್‌‌ರವರು ಈ ಪುಸ್ತಕದಲ್ಲಿ ವಾದಿಸುತ್ತಾರೆ. ಗಾಂಧಿಯವರ ಸ್ವಂತ ಮಾತುಗಳು, ಪತ್ರಗಳು ಮತ್ತು ಸುದ್ದಿ ಪತ್ರಿಕೆಗಳ ಅಂಕಣಗಳು ಮತ್ತು ಅವರ ನಡೆಗಳನ್ನು ಆಧರಿಸಿ ರೂಪಿಸಿದ ತಮ್ಮ ಪ್ರೌಢ ಪ್ರಬಂಧದಲ್ಲಿ, ಆಫ್ರಿಕಾದ ಮೂಲನಿವಾಸಿ ಕಪ್ಪುಜನಗಳು ಮತ್ತು ಕಾಲಾನಂತರದಲ್ಲಿ ಭಾರತದಲ್ಲಿನ ಬಿಳಿಯ ಬ್ರಿಟಿಷರ ವಿರುದ್ಧ ಗಾಂಧಿಯವರು ವರ್ಣಭೇದವನ್ನು ತೋರುತ್ತಿದ್ದರು ಎಂದು ಸಿಂಗ್‌ ಪ್ರತಿಪಾದಿಸುತ್ತಾರೆ. ಕಾಲಾನಂತರ ಡಾ. ಟಿಮ್‌ ವಾಟ್ಸನ್‌ರವರ ಜೊತೆಗೂಡಿ ಸಿಂಗ್‌ರವರು ರಚಿಸಿದ ಗಾಂಧಿ ಅಂಡರ್ ಕ್ರಾಸ್ ಎಗ್ಸಾಮಿನೇಷನ್‌ (೨೦೦೮) ಎಂಬ ಕೃತಿಯು, ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರಸಿದ್ಧ ರೈಲು ಘಟನೆಯನ್ನು ಗಾಂಧಿಯವರು ಸ್ವತಃ ಹಲವು ಸನ್ನಿವೇಶಗಳಲ್ಲಿ ವಿವಿಧ ರೀತಿಯಲ್ಲಿ ವಿವರಿಸಿದ್ದು, ಸದರಿ ಘಟನೆಯು ಇಂದು ಅರ್ಥೈಸಿಕೊಂಡಿರುವಂತೆ ನಡೆಯಲೇ ಇಲ್ಲ ಎಂದು ವಾದಿಸುತ್ತದೆ. ಅನುಯಾಯಿಗಳು ಮತ್ತು ಪ್ರಭಾವ ಪ್ರಮುಖ ನಾಯಕರು ಮತ್ತು ರಾಜಕೀಯ ಆಂದೋಲನಗಳ ಮೇಲೆ ಗಾಂಧಿಯವರು ಪ್ರಭಾವ ಭೀರಿದರು. ಮಾರ್ಟಿನ್‌ ಲೂಥರ್ ಕಿಂಗ್‌ ಹಾಗೂ ಜೇಮ್ಸ್‌ ಲಾಸನ್‌ರವರುಗಳೂ ಸೇರಿದಂತೆ, ಸಂಯುಕ್ತ ಸಂಸ್ಥಾನಗಳಲ್ಲಿನ ನಾಗರಿಕ ಹಕ್ಕುಗಳ ಚಳವಳಿಯ ನಾಯಕರುಗಳು ಅಹಿಂಸೆಯ ಕುರಿತಾದ ತಮ್ಮದೇ ಸ್ವಂತ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸುವಾಗ ಗಾಂಧಿಯವರ ಬರಹಗಳಿಂದ ಪ್ರೇರಿತರಾಗಿದ್ದರು.ಗಾಂಧಿಯ ಸ್ಮಾರಕ ವೀಕ್ಷಣೆಗೆ ತಂದೆಯಂತೆ ರಾಜ ಪ್ರಯಾಣ ಬೆಳೆಸಿದ ಪ್ರತ್ಯೇಕತಾ ನೀತಿ ವಿರೋಧಿಸುವ ತೀವ್ರವಾದಿ ಮತ್ತು ದಕ್ಷಿಣ ಆಫ್ರಿಕಾದ ಹಿಂದಿನ ಅಧ್ಯಕ್ಷರಾದ ನೆಲ್ಸನ್‌‌ ಮಂಡೇಲಾರವರು ಗಾಂಧಿಯವರಿಂದ ಪ್ರಭಾವಿತರಾದರು.ನೆಲ್ಸನ್‌‌ ಮಂಡೇಲಾ, ಪವಿತ್ರ ಯೋಧ: ದಕ್ಷಿಣ ಆಫ್ರಿಕಾದ ವಿಮೋಚಕರು ಪ್ರಾರಂಭಿಕ ಸ್ಥಿತಿಯಲ್ಲಿ ಇದ್ದ ಭಾರತ ವಿಮೋಚಕರ ಕೆಲಸಗಳನ್ನು ನೋಡುತ್ತಿದ್ದರು , ಟೈಮ್‌ ನಿಯತಕಾಲಿಕ , ೩ ಜನವರಿ ೨೦೦೦. ಇನ್ನುಳಿದ ಇತರರೆಂದರೆ, ಖಾನ್‌ ಅಬ್ಧುಲ್ ಗಫರ್ ಖಾನ್‌, ಸ್ಟೀವ್‌ ಬಿಕೊ, ಆಂಗ್‌ ಸಾನ್‌ ಸೂ ಕಿ ಮತ್ತು ಫರ್ಡಿನೆಂಡ್‌ ಮಾರ್ಕೊಸ್‌ರ ಸರ್ವಾಧಿಕಾರದ ಸಮಯದಲ್ಲಿ ಫಿಲಿಪೀನ್‌ ದೇಶದ ವಿರೋಧಪಕ್ಷದ ನಾಯಕರಾಗಿದ್ದ ಬಿನೈನೋ ಅಕ್ವಿನೊ, Jr. ಗಾಂಧಿಯವರ ಜೀವನ ಮತ್ತು ಬೋಧನೆಗಳಿಂದ ಹಲವರು ಪ್ರೇರಿತರಾಗಿದ್ದು, ಅವರು ಗಾಂಧಿಯವರನ್ನು ತಮ್ಮ ಮಾರ್ಗದರ್ಶಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಇಲ್ಲವೇ ಗಾಂಧಿಯವರ ಚಿಂತನೆಗಳನ್ನು ಹರಡಲು ತಮ್ಮ ಜೀವನವನ್ನು ಅರ್ಪಿಸಿಕೊಂಡಿದ್ದಾರೆ. ಯುರೋಪ್‌ನಲ್ಲಿ, ೧೯೨೪ ರಲ್ಲಿ ಬಂದ ಮಹಾತ್ಮ ಗಾಂಧಿ ಎಂಬ ತಮ್ಮ ಪುಸ್ತಕದಲ್ಲಿ ಗಾಂಧಿಯವರ ಬಗ್ಗೆ ಮೊದಲ ಬಾರಿಗೆ ಚರ್ಚಿಸಿದವರಲ್ಲಿ ರೊಮೈನ್‌ ರೋಲೆಂಡ್ ಮೊದಲಿಗರು. ಬ್ರೆಜಿಲ್‌ ದೇಶದ ಅರಾಜಕತಾವಾದಿ ಮತ್ತು ಸ್ತ್ರೀಸಮಾನತಾ ವಾದಿಯಾದ ಮರಿಯಾ ಲಾಸೆರ್ಡ ಡಿ ಮೌರಾರವರು ಶಾಂತಿಧೋರಣೆಯ ಕುರಿತಾದ ತಮ್ಮ ಕೃತಿಯಲ್ಲಿ ಗಾಂಧಿಯವರ ಬಗ್ಗೆ ಬರೆದಿದ್ದಾರೆ. ೧೯೩೧ರಲ್ಲಿ, ಯುರೋಪಿನ ಪ್ರಖ್ಯಾತ ಭೌತಶಾಸ್ತ್ರಜ್ಞ ಆಲ್ಭರ್ಟ್‌ ಐನ್‌ಸ್ಟೈನ್‌ರವರು ತಾವು ಬರೆದ ಪತ್ರಗಳನ್ನು ಗಾಂಧಿಯೊಂದಿಗೆ ವಿನಿಮಯ ಮಾಡಿಕೊಂಡರು, ಮತ್ತು ನಂತರದ ಅವರ ಕುರಿತಾದ ತಮ್ಮ ಬರಹವೊಂದರಲ್ಲಿ ಅವರನ್ನು "ಮುಂದಿನ ಪೀಳಿಗೆಗಾಗಿರುವ ಓರ್ವ ಮಾದರಿ ವ್ಯಕ್ತಿ" ಎಂದು ಅವರು ಬಣ್ಣಿಸಿದರು. ಲಂಜಾ ಡೆಲ್ ವಾಸ್ಟೊರವರು ಗಾಂಧಿಯವರ ಜೊತೆ ಬಾಳುವ ಇಚ್ಛೆಯಿಂದ ೧೯೩೬ರಲ್ಲಿ ಭಾರತಕ್ಕೆ ಹೋದರು. ನಂತರ ಅವರು ಯುರೋಪ್‌‌ಗೆ ಹಿಂದಿರುಗಿ ಗಾಂಧಿಯವರ ತತ್ವಗಳನ್ನು ಬೋಧಿಸಿದರು ಮತ್ತು (ಗಾಂಧಿಯ ಆಶ್ರಮಗಳನ್ನು ಮಾದರಿಯಾಗಿ ಇಟ್ಟುಕೊಂಡು) ೧೯೪೮ರಲ್ಲಿ ಆರ್ಕ್‌ನ‌ ಸಮುದಾಯ‌‌ವನ್ನು ಸ್ಥಾಪಿಸಿದರು. ಬ್ರಿಟಿಷ್ ಅಡ್ಮಿರೆಲ್‌ನ ಓರ್ವರ ಮಗಳಾದ ಮೆಡೆಲೀನ್‌ ಸ್ಲೇಡ್‌ರವರು ("ಮೀರಾಬೆನ್" ಎಂದೇ ಪ್ರಖ್ಯಾತರು) ತಮ್ಮ ಪ್ರೌಢ ಜೀವನದ ಬಹುಪಾಲು ಕಾಲವನ್ನು ಭಾರತದಲ್ಲಿ ಗಾಂಧಿಯವರ ಅನುಯಾಯಿಯಂತೆ ಕಳೆದರು. ಇದರೊಂದಿಗೆ, ಬ್ರಿಟಿಷ್ ಸಂಗೀತಗಾರ ಜಾನ್‌ ಲೆನ್ನನ್‌ರವರು ಅಹಿಂಸಾವಾದದ ಬಗೆಗಿನ ತಮ್ಮ ವಿಚಾರ ಮಂಡಿಸುವಾಗ ಗಾಂಧಿಯವರ ಕುರಿತು ಉಲ್ಲೇಖಿಸಿದರು.ಲೆನ್ನನ್ ಚಿರಾಯು . rollingstone.com ನಿಂದ. ೨೦ ಮೇ ೨೦೦೭ರಂದು ಪಡೆದುಕೊಳ್ಳಲಾಯಿತು. ೨೦೦೭ರಲ್ಲಿ ನಡೆದ ಕೇನ್ಸ್‌ ಲಯನ್ಸ್‌ ಅಂತಾರಾಷ್ಟ್ರೀಯ ಜಾಹೀರಾತು ಉತ್ಸವದಲ್ಲಿ , U.S.ನ ಹಿಂದಿನ ಉಪಾಧ್ಯಕ್ಷ ಮತ್ತು ಪರಿಸರವಾದಿಯಾದ ಅಲ್‌ ಗೋರ್‌ ರವರು ಗಾಂಧಿಯವರು ತಮ್ಮ ಮೇಲೆ ಹೇಗೆ ಪ್ರಭಾವ ಬೀರಿದರೆಂದು ಹೇಳಿದರು.ಗಾಂಧಿಗಿರಿ ಮತ್ತು ಗ್ರೀನ್‌ ಲಯನ್‌ನಿಂದ, ಅಲ್ ಜಾರ್‌ ಕೇನ್ಸ್‌‌ನಲ್ಲಿ ಹೃದಯಗಳನ್ನು ಗೆದ್ದನು . exchange೪media.com ನಿಂದ ತೆಗೆದುಕೊಂಡಿದ್ದು ೨೩ ಜೂನ್ ೨೦೦೭ರಂದು ಪಡೆದುಕೊಳ್ಳಲಾಯಿತು. ಕೊನೆಯದಾಗಿ, ಸಂಯುಕ್ತ ಸಂಸ್ಥಾನಗಳ ಅಧ್ಯಕ್ಷರಾಗುವುದಕ್ಕೂ ಮುಂಚೆ , ಆಗಿನ ಸೆನೆಟರ್‌ ಆಗಿದ್ದ ಬರಾಕ್ ಒಬಾಮರವರು ಈ ರೀತಿ ಹೇಳಿದರು: ನನ್ನ ಜೀವನದಾದ್ಯಂತ, ನಾನು ಯಾವಾಗಲೂ ಮಹಾತ್ಮ ಗಾಂಧಿಯವರನ್ನು ಒಂದು ಸ್ಪೂರ್ತಿಯಂತೆ ಕಂಡಿದ್ದೇನೆ. ಏಕೆಂದರೆ ಸಾಮಾನ್ಯ ಜನರು ಒಗ್ಗೂಡಿ ಅಸಾಮಾನ್ಯ ಕೆಲಸಗಳನ್ನು ಮಾಡಿದಾಗ ಕಂಡುಬರುವ ಒಂದು ರೀತಿಯ ಪರಿವರ್ತನೆಯ ಬದಲಾವಣೆಯನ್ನು ತರಿಸುವಂತಹ ಪ್ರೇರಕ ಶಕ್ತಿಯು ಅವರಲ್ಲಿ ಮೈಗೂಡಿಕೊಂಡಿದೆ. ಆದ್ದರಿಂದಲೇ, ನಿಜವಾದ ಫಲಿತಾಂಶಗಳು ಕೇವಲ ವಾಷಿಂಗ್ಟನ್‌ನಿಂದ ಮಾತ್ರವೇ ಬರುವುದಿಲ್ಲ, ಜನರಿಂದ ಅವು ಬರುತ್ತವೆ ಎಂಬುದನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರವೇ ನಾನು ನನ್ನ ಸೆನೇಟ್‌ ಕಚೇರಿಯಲ್ಲಿ ಅವರ ಭಾವಚಿತ್ರವನ್ನು ನೇತುಹಾಕಿಕೊಂಡಿರುವೆ. ಪರಂಪರೆ right|thumb|ದಕ್ಷಿಣ ಆಫ್ರಿಕಾದ ಪೈಟೆರ್ಮರಿಟ್ಜ್‌ಬರ್ಗ್ ಡೌನ್‌ಟೌನ್‌ನ ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿಯವರ ಶತಮಾನೋತ್ಸವದ ಸ್ಮಾರಕ ಪ್ರತಿಮೆಯಿದೆ. thumb|left|ನವದೆಹಲಿಯ ಗಾಂಧಿ ಸ್ಮೃತಿ ಬಳಿಯಿರುವ ಹುತಾತ್ಮರ ಸ್ತಂಭವಿರುವ ಸ್ಥಳದಲ್ಲಿ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು. thumb|left|1948ರಂದು ಭಾರತದ ನವದೆಹಲಿಯಲ್ಲಿರುವ ರಾಜ್‌ಘಾಟ್‌ನಲ್ಲಿ ಗಾಂಧಿಯವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. thumb|right|ವೈಕಿಕಿಯಲ್ಲಿ ಗಾಂಧಿಯವರ ಪ್ರತಿಮೆ, ಹೊನೊಲುಲು, ಹೊಹಾವೊ, ಹವಾಯಿ.ಮೇ 16, 2007.|link=Special:FilePath/200705_gandhiWaikiki.jpg thumb|right|ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್‌ಕಡೆರೊ ನೈಬರ್‌ಹುಡ್, 1 ಫೆರ್ರಿ ಕಟ್ಟಡಫೆರ್ರಿ ಕಟ್ಟಡದ ಪಾರ್ಕಿಂಗ್ ಪ್ರದೇಶ, ಸ್ಯಾನ್ ಫ್ರಾನ್ಸಿಸ್ಕೊ, CA 94199 USA|link=Special:FilePath/San_francisco_Gandhi.jpg ಗಾಂಧಿಯವರ ಜನ್ಮದಿನವಾದ ಅಕ್ಟೋಬರ್‌ ೨ಅನ್ನು ಭಾರತದಲ್ಲಿ ರಾಷ್ಟ್ರೀಯ ರಜಾದಿನವೆಂದು ಘೋಷಣೆ ಮಾಡಿ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. "ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ"ಯು "ಸರ್ವಾನುಮತದಿಂದ ಅಂಗೀಕರಿಸಿದ" ನಿರ್ಣಯವೊಂದನ್ನು ಕೈಗೊಂಡು, ಅಕ್ಟೋಬರ್‌ ೨ನ್ನು "ಅಂತಾರಾಷ್ಟ್ರೀಯ ಅಹಿಂಸಾ ದಿನ"ವೆಂದು ಘೋಷಿಸಿದೆ ಎಂದು ೨೦೦೭ರ ಜೂನ್ ೧೫ರಂದು ಪ್ರಕಟಿಸಲಾಯಿತು. ಭಾರತ ರಾಷ್ಟ್ರದ ಸೇವೆಗಾಗಿ ತಮ್ಮ ಜೀವವನ್ನೇ ಬಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸಲು, ಅವರ ಹತ್ಯೆಯ ದಿನವಾದ ಜನವರಿ ೩೦ನ್ನು ಭಾರತದಲ್ಲಿ ಹುತಾತ್ಮರ ದಿನವೆಂದು ಆಚರಿಸಲಾಗುತ್ತಿದೆ. ಗಾಂಧಿಯವರ ಹೆಸರಿನ ಜೊತೆಗಿರುವ ಮಹಾತ್ಮ ಎಂಬ ಪದವು ನಾಮಕರಣದ ಹೆಸರು ಎಂದು ಪಾಶ್ಚಿಮಾತ್ಯರು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದನ್ನು ಸಂಸ್ಕೃತ ಪದಗಳಿಂದ ಆಯ್ದುಕೊಳ್ಳಲಾಗಿದ್ದು ಮಹಾ ಎಂದರೆ ಉನ್ನತ ಹಾಗೂ ಆತ್ಮ ಎಂದರೆ ಆತ್ಮ ಎಂಬ ಅರ್ಥವಿದೆ. ದತ್ತ ಹಾಗೂ ರಾಬಿನ್‌ಸನ್‌ರವರ ರವೀಂದ್ರನಾಥ್‌ ಟ್ಯಾಗೂರ್‌: ಆನ್‌ ಆಂಥಾಲಜಿ ಕೃತಿಯಂತಹ ಬಹುತೇಕ ಮೂಲಗಳು ಗಾಂಧಿಯವರಿಗೆ ಮಹಾತ್ಮ ಎಂಬ ಬಿರುದನ್ನು ಮೊದಲು ನೀಡಿದ್ದು ರವೀಂದ್ರನಾಥ್ ಟ್ಯಾಗೂರ್‌ರು ಎಂದು ಹೇಳುತ್ತವೆ. [134] ನೌತಮ್‌ಲಾಲ್‌ ಭಗವಾನ್‌ಜಿ ಮೆಹತಾರವರು ೧೯೧೫ರ ಜನವರಿ ೨೧ರಂದು ಗಾಂಧಿಯವರಿಗೆ ಈ ಬಿರುದನ್ನು ನೀಡಿದರು ಎಂದು ಇತರ ಮೂಲಗಳು ಹೇಳುತ್ತವೆ. [136] ಅದೇನೇ ಇದ್ದರೂ, ಆ ಗೌರವಕ್ಕೆ ತಾನು ಪಾತ್ರನಾಗಿರುವೆ ಎಂದು ತಮಗೆಂದೂ ಅನಿಸಿಲ್ಲ ಎಂದು ಗಾಂಧಿಯವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ.M.K. ಗಾಂಧಿ: ಆನ್ ಆಟೊಬಯೊಗ್ರಫಿ . ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು. ಮನ್‌ಪತ್ರ ದ ಪ್ರಕಾರ, ನ್ಯಾಯ ಮತ್ತು ಸತ್ಯಗಳನ್ನು ಸ್ಪಷ್ಟವಾಗಿ ತೋರಿಸುವಲ್ಲಿನ ಗಾಂಧಿಯವರ ಪ್ರಶಂಸಾತ್ಮಕ ತ್ಯಾಗಕ್ಕೆ ಪ್ರತಿಕ್ರಿಯೆಯಾಗಿ ಮಹಾತ್ಮ ಎಂಬ ಹೆಸರನ್ನು ಅವರಿಗೆ ನೀಡಲಾಗಿದೆ.[138] ^ ಮೋಹನ್‌ದಾಸ್‌ ಕೆ. ಗಾಂಧಿ ಯನ್ನು ಹೇಗೆ ಮತ್ತು ಯಾವಾಗ "ಮಹಾತ್ಮ" ಎಂದು ಕರೆಯಲ್ಪಟ್ಟರು ಎಂಬುದಕ್ಕೆ ಸಾಕ್ಷ್ಯ ಸಂಗ್ರಹಣೆ ಮಾಡಲಾಗುತ್ತಿದೆ . ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು. ೧೯೩೦ರಲ್ಲಿ ಟೈಮ್‌ ನಿಯತಕಾಲಿಕವು ಗಾಂಧಿಯವರನ್ನು ವರ್ಷದ ವ್ಯಕ್ತಿ ಎಂದು ಬಣ್ಣಿಸಿದೆ. ೧೯೯೯ನೇ ಇಸವಿಯ ಕೊನೆಯಲ್ಲಿ ನಡೆದ "ಶತಮಾನದ ಮನುಷ್ಯ"ರಿಗೆ ಸಂಬಂಧಿಸಿ ನಡೆದ ಸಮೀಕ್ಷೆಯಲ್ಲಿ, ಗಾಂಧಿಯವರು ಆಲ್ಭರ್ಟ್‌ ಐನ್‌ಸ್ಟೈನ್‌ರ ನಂತರದ ಸ್ಥಾನ ಅಂದರೆ [140]ರನ್ನರ್‌-ಅಪ್‌ ಸ್ಥಾನದಲ್ಲಿದ್ದರು. ೦}ದಲೈ ಲಾಮ, ಲೆಕ್‌ ವಲೇಸಾ, Dr. ಮಾರ್ಟಿನ್‌ ಲೂಥರ್‌ ಕಿಂಗ್, Jr., ಸೀಜರ್‌ ಚವೆಜ್‌, ಆಂಗ್‌ ಸಾನ್‌ ಸೂ ಕಿ, ಬೆನೈನೊ ಅಕ್ವಿನೊ Jr., ದೆಸ್ಮಡ್‌ ಟುಟು, ಮತ್ತು ನೆಲ್ಸನ್‌‌ ಮಂಡೇಲಾರವರನ್ನು ಗಾಂಧಿಯವರ ಮಕ್ಕಳು ಮತ್ತು ಅಹಿಂಸಾ ಮಾರ್ಗಕ್ಕೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳು ಎಂದು ಟೈಮ್‌ ನಿಯತಕಾಲಿಕವು ಹೆಸರಿಸಿದೆ. [141] ಶ್ರೇಷ್ಠ ಸಮಾಜ ಸೇವಕರು, ವಿಶ್ವ ನಾಯಕರು ಹಾಗೂ ನಾಗರಿಕರಿಗೆ ಭಾರತ ಸರ್ಕಾರವು ವರ್ಷದ ಮಹಾತ್ಮ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದ ಭಾರತೀಯರಲ್ಲದ ಪ್ರಸಿದ್ಧ ವ್ಯಕ್ತಿಗಳಲ್ಲಿ, ವರ್ಣಭೇದ ನೀತಿ ಮತ್ತು ಪ್ರತ್ಯೇಕತಾ ನೀತಿಯನ್ನು ತೊಡೆದುಹಾಕಲು ಹೋರಾಡಿದ ದಕ್ಷಿಣ ಆಫ್ರಿಕಾದ ನಾಯಕರಾದ ನೆಲ್ಸನ್‌ ಮಂಡೇಲಾರವರು ಒಬ್ಬರು. ೧೯೯೬ರಲ್ಲಿ, ಭಾರತ ಸರ್ಕಾರವು ೫, ೧೦, ೨೦, ೫೦, ೧೦೦, ೫೦೦ ಮತ್ತು ೧೦೦೦ ಮುಖಬೆಲೆಯ ರೂಪಾಯಿಗಳಲ್ಲಿನ ಚಲಾವಣಾ ನೋಟುಗಳ ಮಹಾತ್ಮ ಗಾಂಧಿ ಸರಣಿಯನ್ನು ಜಾರಿಗೆ ತಂದಿತು. ಇಂದು, ಭಾರತದಲ್ಲಿ ಚಲಾವಣೆಯಲ್ಲಿರುವ ಎಲ್ಲಾ ರೀತಿಯ ಹಣದ ನೋಟುಗಳಲ್ಲಿಯೂ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಕಾಣಬಹುದಾಗಿದೆ. ೧೯೬೯ರಲ್ಲಿ, ಮಹಾತ್ಮ ಗಾಂಧಿಯ ಶತಮಾನೋತ್ಸವದ ಜ್ಞಾಪಕಾರ್ಥವಾಗಿ ಅವರ ಶ್ರೇಣಿಯ ಅಂಚೆಚೀಟಿ‌ಗಳನ್ನು ಯುನೈಟೆಡ್ ಕಿಂಗ್‌ಡಂ ಹೊರತಂದಿತು. ಯುನೈಟೆಡ್ ಕಿಂಗ್‌ಡಂನಲ್ಲಿ, ಗಾಂಧಿಯವರ ಹಲವು ಪ್ರಮುಖ ಪ್ರತಿಮೆಗಳಿದ್ದು, ಲಂಡನ್‌‌ನಲ್ಲಿ ಮುಖ್ಯವಾಗಿ ಅವರು ಕಾನೂನು ವಿದ್ಯಾಭ್ಯಾಸ ನಡೆಸಿದ ಯೂನಿವರ್ಸಿಟಿ ಕಾಲೇಜ್ ಲಂಡನ್‌‌ ಸಮೀಪವಿರುವ ತವಿಸ್‌ಸ್ಟಾಕ್ ಸ್ಕ್ವೇರ್‌‌‌ನಲ್ಲಿ ಕಾಣಬಹುದಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಜನವರಿ ೩೦ರ ದಿನವನ್ನು "ರಾಷ್ಟ್ತೀಯ ಗಾಂಧಿ ಸ್ಮರಣದಿನ"ವನ್ನಾಗಿ ಆಚರಿಸಲಾಗುತ್ತದೆ. ಸಂಯುಕ್ತ ಸಂಸ್ಥಾನದಲ್ಲಿ, ನ್ಯೂಯಾರ್ಕ್ ನಗರದಲ್ಲಿನ ಯೂನಿಯನ್ ಸ್ಕ್ವೇರ್ ಉದ್ಯಾನವನದ ಹೊರಭಾಗದಲ್ಲಿ, ಅಟ್ಲಾಂಟದಲ್ಲಿನ ಮಾರ್ಟಿನ್‌ ಲೂಥರ್‌ ಕಿಂಗ್, Jr. ನ್ಯಾಷನಲ್ ಹಿಸ್ಟಾರಿಕ್ ಸೈಟ್‌ನಲ್ಲಿ, ಮತ್ತು ವಾಷಿಂಗ್ಟನ್‌‌, D.C.ಯಲ್ಲಿನ ಮಸಾಚ್ಯುಸೆಟ್ಸ್‌‌ನ ಬೀದಿಯಲ್ಲಿ , ಭಾರತೀಯ ರಾಯಭಾರ ಕಚೇರಿಯ ಸಮೀಪದಲ್ಲಿ ಗಾಂಧಿಯವರ ಪ್ರತಿಮೆಗಳನ್ನು ಕಾಣಬಹುದಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೊದ ಎಂಬರ್‌ಕೆಡೆರೊ ಹತ್ತಿರದಲ್ಲಿಯೂ ಗಾಂಧಿ ಪ್ರತಿಮೆಯಿದೆ. ೧೮೯೩ರಲ್ಲಿ ಗಾಂಧಿಯವರನ್ನು ಪ್ರಥಮ ದರ್ಜೆ ರೈಲಿನಿಂದ ಹೊರನೂಕಿದ ಘಟನೆಯ ನಗರವಾದ ದಕ್ಷಿಣ ಆಫ್ರಿಕಾದ ಪೀಟರ್‌ಮೆರಿಟ್ಜ್‌ಬರ್ಗ್‌ನಲ್ಲಿ, ಈಗ ಅವರ ಸ್ಮರಣಾರ್ಥ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಲಂಡನ್‌, ನ್ಯೂ ಯಾರ್ಕ್, ಮತ್ತು ಪ್ರಪಂಚದಾದ್ಯಂತ ಇರುವ ಇತರೆ ನಗರಗಳಲ್ಲಿರುವ ಮೇಡಮ್‌ ಟುಸ್ಸಾಡ್ಸ್‌ನ ಮೇಣದ ವಸ್ತು ಪ್ರದರ್ಶನಾಲಯದಲ್ಲಿ ಗಾಂಧಿಯವರ ಮೇಣದ ಪ್ರತಿಮೆಗಳಿವೆ. ಅಮೆರಿಕನ್‌ ಫ್ರೆಂಡ್ಸ್‌ ಸರ್ವೀಸ್‌ ಕಮಿಟಿಯಿಂದ ಮೊತ್ತ ಮೊದಲ ಬಾರಿಗೆ ನಾಮ ನಿರ್ದೇಶನಗೊಂಡಿದ್ದೂ ಸೇರಿದಂತೆ, ೧೯೩೭ರಿಂದ ೧೯೪೮ರ ನಡುವೆ ಗಾಂಧಿಯವರು ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಐದು ಬಾರಿ ನಾಮ ನಿರ್ದೇಶನಗೊಂಡರೂ ಸಹ ಅವರು ಆ ಪ್ರಶಸ್ತಿಯನ್ನು ಎಂದಿಗೂ ಸ್ವೀಕರಿಸಲಿಲ್ಲ.AFSCಯ ಹಿಂದಿನ ಸಾಲಿನ ನೋಬೆಲ್‌ ನಾಮನಿರ್ದೇಶನಗಳು . ದಶಕಗಳ ತರುವಾಯ, ನೋಬೆಲ್ ಸಮಿತಿಯು ರಾಷ್ಟ್ರೀಯತಾ ಅಭಿಪ್ರಾಯದಂತೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಕ್ಕಾಗಿ ಕ್ಷಮೆ ಕೋರಿ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿತು. ೧೯೪೮ರಲ್ಲಿ ಮಹಾತ್ಮ ಗಾಂಧಿಯವರು ಪ್ರಶಸ್ತಿಯನ್ನು ಸ್ವೀಕರಿಸುವ ಸಂದರ್ಭ ಬಂದಿತ್ತಾದರೂ, ಆದೇ ಸಮಯದಲ್ಲಿ ಅವರನ್ನು ಹತ್ಯೆಯಾದ್ದರಿಂದ ಆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೊಸದಾಗಿ ಸೃಷ್ಟಿಸಲಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹುಟ್ಟಿಕೊಂಡ ಯುದ್ಧವೂ ಆ ವರ್ಷದ ಹೆಚ್ಚುವರಿ ಸಂಕೀರ್ಣ ಅಂಶವಾಯಿತೆನ್ನಬಹುದು.ಅಮಿತ್‌ ಬರೂಹ. "ಗಾಂಧಿ ನೋಬೆಲ್‌‌ ಪ್ರಶಸ್ತಿಯನ್ನು ಸ್ವೀಕರಿಸದಿರುವುದು ಅತಿ ದೊಡ್ಡ ಲೊಪವಾಯಿತು" . ೨೦೦೬ರ ದ ಹಿಂದು ವಿನಲ್ಲಿದ್ದ. ೧೭ ಅಕ್ಟೊಬರ್‌ ೨೦೦೬ರಂದು ಪಡೆದುಕೊಳ್ಳಲಾಯಿತು. ಗಾಂಧಿಯವರ ಹತ್ಯೆಯಾದ ವರ್ಷವಾದ ೧೯೪೮ರಲ್ಲಿ , "ಯೋಗ್ಯ ಜೀವಂತ ಅಭ್ಯರ್ಥಿ ಇರದಿದ್ದ" ಕಾರಣ ಆ ವರ್ಷ ಯಾರಿಗೂ ಪ್ರಶಸ್ತಿಯನ್ನು ನೀಡಲಿಲ್ಲ. ೧೯೮೯ರಲ್ಲಿ ದಲೈ ಲಾಮರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂದರ್ಭದಲ್ಲಿ, ಸಮಿತಿಯ ಅಧ್ಯಕ್ಷರು "ಇದು ಮಹಾತ್ಮ ಗಾಂಧಿ ಸ್ಮರಣಾರ್ಥ ಉಡುಗೊರೆಯ ಒಂದು ಭಾಗವಾಗಿದೆ" ಎಂದು ಹೇಳಿದರು.ಒಯ್‌ವಿಂದ್‌ ಟನ್ನೆಸ್ಸನ್‌. ಮಹಾತ್ಮ ಗಾಂಧಿ, ದಿ ಮಿಸ್ಸಿಂಗ್‌ ಲಿಟರೇಚರ್‌. ನೋಬೆಲ್‌ ಎ-ಮ್ಯೂಸಿಯಮ್‌ ಪೀಸ್‌ ಸಂಪಾದಕರು, ೧೯೯೮–೨೦೦೦. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು. ೧೯೪೮ರ ಜನವರಿ ೩೦ರಂದು ಗಾಂಧಿಯವರು ಹತ್ಯೆಗೀಡಾದ ಸ್ಥಳವಾದ ಘನಶ್ಯಾಮ್‌ ದಾಸ್‌ ಬಿರ್ಲಾರವರ ಮನೆಯಾದ ಬಿರ್ಲಾ ಭವನ ಅಥವಾ ಬಿರ್ಲಾ ಹೌಸ್‌ನ್ನು , ೧೯೭೧ರಲ್ಲಿ ಭಾರತ ಸರ್ಕಾರವು ವಶಪಡಿಸಿಕೊಂಡು, ಗಾಂಧಿ ಸ್ಮೃತಿ ಅಥವಾ "ಗಾಂಧಿ ಸ್ಮರಣೆ"ಗೆಂದು ೧೯೭೩ರಲ್ಲಿ ಸಾರ್ವಜನಿಕರಿಗೆ ತೆರೆಯಿತು. ಮಹಾತ್ಮ ಗಾಂಧಿಯವರು ತಮ್ಮ ಜೀವನದ ಕಡೆಯ ನಾಲ್ಕು ತಿಂಗಳುಗಳನ್ನು ಕಳೆದ ಕೋಣೆ ಹಾಗೂ ತಮ್ಮ ರಾತ್ರಿಯ ಸಾರ್ವಜನಿಕ ನಡಿಗೆಯ ಸಮಯದಲ್ಲಿ ಗುಂಡೇಟಿಗೀಡಾದ ಭೂಮಿಯನ್ನು ಸರ್ಕಾರವು ಕಾಪಾಡುತ್ತಿದೆ. ಹುತಾತ್ಮರ ಸ್ಥಂಭವೊಂದನ್ನು ಮೋಹನ್‌ದಾಸ್‌ ಗಾಂಧಿಯವರನ್ನು ಹತ್ಯೆ ಮಾಡಿದ ಸ್ಥಳವನ್ನಾಗಿ ಈಗ ಗುರುತಿಸಲಾಗುತ್ತದೆ. ಪ್ರತೀ ವರ್ಷ ಜನವರಿ ೩೦ರಂದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನದ ವಾರ್ಷಿಕ ಪುಣ್ಯತಿಥಿಯಂದು ಹಲವು ದೇಶಗಳ ಶಾಲೆಗಳಲ್ಲಿ ಅಹಿಂಸೆ ಮತ್ತು ಶಾಂತಿಯ ಶಾಲಾದಿನವೆಂದು (DENIP) ಆಚರಿಸುತ್ತಾರೆ, ಇದನ್ನು ಸ್ಪೇಯ್ನ್‌‌ನಲ್ಲಿ ೧೯೬೪ರಂದು ಪ್ರಾರಂಭಿಸಲಾಯಿತು. ದಕ್ಷಿಣ ಭೂಗೋಳದಲ್ಲಿರುವ ರಾಷ್ಟ್ರಗಳ ಶಾಲಾ ಕ್ಯಾಲೆಂಡರ್‌ನಲ್ಲಿ, ಇದನ್ನು ಮಾರ್ಚ್ ೩೦ರಂದು ಅಥವಾ ಆಸುಪಾಸಿನ ದಿನಗಳಲ್ಲಿ ಆಚರಿಸಲಾಗುತ್ತದೆ. ಆದರ್ಶಗಳು ಹಾಗೂ ಮೌಲ್ಯಗಳು ಗಾಂಧಿಯವರು ಪಾಲಿಸುತ್ತಿದ್ದ ಅಹಿಂಸಾತತ್ವವು ಶಾಂತಿ ಧೋರಣೆಯನ್ನು ಸೂಚಿಸುವುದರಿಂದಾಗಿ ಇದು ಎಲ್ಲ ರಾಜಕೀಯ ಸಮುದಾಯದಾದ್ಯಂತ ಬರುವ ಟೀಕೆಯ ಮೂಲವಾಗಿದೆ. ವಿಭಜನೆಯ ಪರಿಕಲ್ಪನೆ ಧಾರ್ಮಿಕ ಒಗ್ಗಟ್ಟಿಗೆ ಸಂಬಂಧಪಟ್ಟಿರುವ ತಮ್ಮ ದೃಷ್ಟಿಕೋನಕ್ಕೆ ವಿಭಜನೆಯ ಪರಿಕಲ್ಪನೆಯು ವಿರುದ್ಧವಾಗಿದ್ದರಿಂದ ಗಾಂಧಿಯವರು ನಿಯಮದಂತೆ ಈ ಪರಿಕಲ್ಪನೆಯನ್ನು ವಿರೋಧಿಸಿದರು.ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌‌‌. , ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) pp. ೧೦೬–೧೦೮. ಪಾಕಿಸ್ತಾನವನ್ನು ಸೃಷ್ಟಿಸುವುದಕ್ಕಾಗಿ ಭಾರತದ ವಿಭಜನೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಸಂಬಂಧಿಸಿ ೧೯೪೬ರ ಅಕ್ಟೋಬರ್ ೬ರಂದು ಹರಿಜನ್ ಪತ್ರಿಕೆಯಲ್ಲಿ ಅವರು ಹೀಗೆ ಬರೆದರು: ಮುಸ್ಲಿಂ ಲೀಗ್‌ನಿಂದ ಪ್ರಸ್ತಾಪಿಸಲ್ಪಟ್ಟಿರುವ ಬೇಡಿಕೆಯು[ಪಾಕಿಸ್ತಾನಕ್ಕಾಗಿ ಮಾಡಿರುವ ಬೇಡಿಕೆಯು) ಇಸ್ಲಾಂ ನೀತಿಯಿಂದ ಹೊರತಾಗಿದೆಯಾದ್ದರಿಂದ ಇದನ್ನು ಪಾಪವೆಂದು ಕರೆಯಲು ನಾನು ಹಿಂಜರಿಯುವುದಿಲ್ಲ. ಮನುಕುಲದ ಒಗ್ಗಟ್ಟು ಹಾಗೂ ಭ್ರಾತೃತ್ವದ ಸಂಕೇತವಾಗಿ ಇಸ್ಲಾಂ ನಿಲ್ಲುತ್ತದೆ ಯೇ ಹೊರತು, ಮಾನವ ಕುಟುಂಬದ ಐಕಮತ್ಯವನ್ನು ಒಡೆದುಹಾಕುವುದಕ್ಕಲ್ಲ. ಆದ್ದರಿಂದ, ಭಾರತವನ್ನು ವಿಭಜಿಸಿ ಸಂಭವನೀಯ ಯುದ್ಧ ಗುಂಪುಗಳಾಗಿ ಮಾಡಲು ಯಾರು ಪ್ರಯತ್ನ ಮಾಡುತ್ತಾರೋ ಅಂತಹವರು ಭಾರತ ಮತ್ತು ಇಸ್ಲಾಮ್‌‌ ಎರಡಕ್ಕೂ ಬದ್ಧ ವೈರಿಗಳು. ಅವರು ನನ್ನನ್ನು ತುಂಡುತುಂಡಾಗಿ ಕತ್ತರಿಸಬಹುದು, ಆದರೆ ನಾನು ತಪ್ಪು ಎಂದು ಪರಿಗಣಿಸಿರುವ ಒಂದು ಕೆಲಸದಲ್ಲಿ ನಾನು ತೊಡಗಿಕೊಳ್ಳುವಂತೆ ಅವರು ಮಾಡಲಾರರು[...] ಬಿರುಸಾದ ಮಾತುಗಳ ನಡುವೆಯೂ ನಮ್ಮೆಲ್ಲಾ ಮುಸ್ಲಿಮರೊಂದಿಗೆ ಸ್ನೇಹದಿಂದ ನಡೆದುಕೊಳ್ಳುವುದು ಹಾಗೂ ನಮ್ಮ ಪ್ರೀತಿಯಲ್ಲಿ ಅವರನ್ನು ಗಟ್ಟಿಯಾಗಿ ಬಂಧಿಸಿಟ್ಟುಕೊಳ್ಳುವುದನ್ನು ನಾವು ಬಿಡಬಾರದು.ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌. ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) pp. ೩೦೮–೯. ಆದರೂ, ಪಾಕಿಸ್ತಾನದ ವಿಷಯಕ್ಕೆ ಸಂಬಂಧಿಸಿದಂತೆ ಜಿನ್ನಾರೊಂದಿಗಿನ ಗಾಂಧಿಯವರ ಸುದೀರ್ಘ ಪತ್ರ ವ್ಯವಹಾರದ ಕುರಿತು ಹೋಮರ್ ಜಾಕ್‌ರವರು ಒಂದಷ್ಟು ಟಿಪ್ಪಣಿಗಳನ್ನು ನೀಡುತ್ತಾರೆ: "ಭಾರತದ ವಿಭಜನೆಯನ್ನು ಗಾಂಧಿಯವರು ವೈಯಕ್ತಿಕವಾಗಿ ವಿರೋಧಿಸಿದ್ದರೂ ಸಹ ಅವರೊಂದು ಒಪ್ಪಂದವನ್ನು ಪ್ರಸ್ತಾಪಿಸಿದ್ದರು. ತಾತ್ಕಾಲಿಕ ಸರ್ಕಾರವೊಂದರ ಅಡಿಯಲ್ಲಿ ಸ್ವಾತಂತ್ರ್ಯವನ್ನು ಗಳಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ಗಳು ಸಹಕರಿಸಬೇಕು. ಅದಾದ ನಂತರ ಮುಸ್ಲಿಮರ ಬಾಹುಳ್ಯವನ್ನು ಹೊಂದಿರುವ ಜಿಲ್ಲೆಗಳಲ್ಲಿನ ಜನಮತದ ಆಧಾರದ ಮೇಲೆ ವಿಭಜನೆಯ ಪ್ರಶ್ನೆಯನ್ನು ನಿರ್ಧರಿಸಬಹುದು ಎಂಬುದು ಆ ಒಪ್ಪಂದದಲ್ಲಿತ್ತು." . ಜಾಕ್, ಹೋಮರ್ PR11&dq=The+Gandhi +Reader :+A+Sourcebook+of+His+Life+and+Writings&sig=mu7B1to2ve7qqIYNmXQMd5jifsY ದಿ ಗಾಂಧಿ ರೀಡರ್‌‌ , p. ೪೧೮. ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧಿಯವರ ಈ ದ್ವಂದ್ವ ನಿಲುವುಗಳು ಹಿಂದುಗಳು ಮತ್ತು ಮುಸ್ಲಿಮರಿಂದ ಟೀಕೆಗೊಳಗಾದವು. ಮುಸ್ಲಿಮರ ರಾಜಕೀಯ ಹಕ್ಕುಗಳನ್ನು ಗಾಂಧಿಯವರು ಹಾಳುಮಾಡಿದರು ಎಂಬ ಕಾರಣವನ್ನು ಮುಂದೊಡ್ಡಿ ಮಹಮ್ಮದ್ ಆಲಿ ಜಿನ್ನಾ ಹಾಗೂ ಇತರ ಸಮಕಾಲೀನ ಪಾಕಿಸ್ತಾನೀಯರು ಗಾಂಧಿಯವರನ್ನು ಖಂಡಿಸಿದರು. ರಾಜಕೀಯವಾಗಿ ಮುಸ್ಲಿಮರನ್ನು ಬೆಂಬಲಿಸುತ್ತಿರುವುದಕ್ಕೆ ಮತ್ತು ಹಿಂದೂಗಳ ವಿರುದ್ಧ ಮುಸ್ಲಿಮರು ಮಾಡುತ್ತಿರುವ ದುಷ್ಕೃತ್ಯಗಳಿಗೆ ಜಾಣಕುರುಡಾಗಿರುವುದನ್ನು ಕಂಡು, ಹಾಗೂ ಪಾಕಿಸ್ತಾನದ ಸೃಷ್ಟಿಗೆ ಅನುವು ಮಾಡಿಕೊಟ್ಟ ರೀತಿಗೆ ("ಭಾರತದ ವಿಭಜನೆಗೆ ಮುಂಚೆ ನನ್ನ ದೇಹವನ್ನು ತುಂಡು ತುಂಡಾಗಿ ಕತ್ತರಿಸಬೇಕು ಎಂದು ಸಾರ್ವಜನಿಕವಾಗಿ ಅವರೇ ಘೋಷಿಸಿದರೂ ವಿಭಜನೆಗೆ ಅನುವು ಮಾಡಿಕೊಟ್ಟಿರುವುದಕ್ಕೆ") ವಿನಾಯಕ್‌ ದಾಮೋದರ್‌ ಸಾವರ್ಕರ್‌ ಮತ್ತು ಅವರ ಜೊತೆಗಾರರು ಗಾಂಧಿಯವರನ್ನು ಖಂಡಿಸಿದರು. [148] ಇದು ರಾಜಕೀಯ ಚರ್ಚಾವಿಷಯವಾಗಿ ಮುಂದುವರೆಯಿತು: ಪಾಕಿಸ್ತಾನಿ-ಅಮೆರಿಕನ್‌ ಇತಿಹಾಸಗಾರ್ತಿಯಾದ ಆಯೆಷಾ ಜಲಾಲ್‌ರಂತಹ ಕೆಲವರು, ಮುಸ್ಲಿಂ ಲೀಗ್‌ನೊಂದಿಗೆ ಅಧಿಕಾರವನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿ ಗಾಂಧಿಯವರು ಹಾಗೂ ಕಾಂಗ್ರೆಸ್‌ ತೋರಿಸಿದ ಅಸಮ್ಮತಿಯಿಂದಾಗಿ ವಿಭಜನೆಯ ಕಾರ್ಯವು ತೀವ್ರಗೊಂಡಿತು ಎಂದು ವಾದಿಸುತ್ತಾರೆ. ಹಿಂದೂ ರಾಷ್ಟ್ರೀಯವಾದಿ ರಾಜಕಾರಣಿಯಾದ ಪ್ರವೀಣ್‌ ತೊಗಾಡಿಯಾರಂತಹ ಇತರರೂ ಸಹ ಈ ವಿಷಯಕ್ಕೆ ಸಂಬಂಧಿಸಿ ಗಾಂಧಿಯವರ ನಾಯಕತ್ವ ಹಾಗೂ ನಡೆಗಳನ್ನು ಟೀಕಿಸಿ, ಈ ವಿಷಯದಲ್ಲಿ ಕಂಡುಬಂದ ಅತಿಯಾದ ದುರ್ಬಲತೆಯೇ ಭಾರತದ ವಿಭಜನೆಗೆ ಕಾರಣವಾಯಿತು ಎಂದಿದ್ದಾರೆ. ಇಸ್ರೇಲ್‌ನ್ನು ಸೃಷ್ಟಿಸುವುದಕ್ಕಾಗಿ ಪ್ಯಾಲೆಸ್ತೇನ್‌ನ ವಿಭಜನೆ ಮಾಡುವ ವಿಷಯಕ್ಕೆ ಪ್ರತಿಕ್ರಿಯೆಯಾಗಿ ೧೯೩೦ ಅಂತ್ಯದಲ್ಲಿ ಗಾಂಧಿಯವರು ವಿಭಜನೆಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದರು. ಈ ಕುರಿತು ೧೯೩೮ರ ಅಕ್ಟೊಬರ್‌ ೨೬ರಂದು ಹರಿಜನ್‌ ಪತ್ರಿಕೆಯಲ್ಲಿ ಅವರು ಈ ರೀತಿ ಹೇಳಿದ್ದಾರೆ: ಪ್ಯಾಲೆಸ್ತೇನ್‌‌ನಲ್ಲಿನ ಅರಬ್‌-ಯಹೂದ್ಯರ ಪ್ರಶ್ನೆಗೆ ಮತ್ತು ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಗೆ ಸಂಬಂಧಿಸಿದಂತೆ ನನ್ನ ನಿರ್ಧಾರಗಳನ್ನು ತಿಳಿಸಬೇಕೆಂದು ನನಗೆ ಹಲವು ಪತ್ರಗಳು ಬಂದಿವೆ. ಈ ತರಹದ ತುಂಬಾ ಕ್ಲಿಷ್ಟಕರ ಪ್ರಶ್ನೆಗೆ ಹಿಂಜರಿಕೆಯಿಂದಲೇ ನನ್ನ ನಿರ್ಧಾರಗಳನ್ನು ತಿಳಿಸಬೇಕಾಗಿ ಬಂದಿದೆ.ಯಹೂದ್ಯರ ಬಗ್ಗೆ ನನ್ನೆಲ್ಲಾ ಸಹಾನುಭೂತಿಗಳಿವೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರಲ್ಲಿ ಕೆಲವರು ಜೀವನದುದ್ದಕ್ಕೂ ಸ್ನೇಹಿತರಾಗಿ ಉಳಿದುಕೊಂಡಿದ್ದಾರೆ. ಜೀವನಪರ್ಯಂತ ಅವರು ಅನುಭವಿಸಿರುವ ಕಷ್ಟಕೋಟಲೆಗಳನ್ನು ಈ ಗೆಳೆಯರ ಮೂಲಕ ನಾನು ಹೆಚ್ಚಿನ ರೀತಿಯಲ್ಲಿ ಅರಿತುಕೊಂಡಿರುವೆ. ಅವರು ಕ್ರೈಸ್ತ ಮತದಲ್ಲಿಯೇ ಇದ್ದರೂ ಅಸ್ಪೃಶ್ಯರಾಗಿದ್ದರು[...] ಆದರೆ ನನ್ನ ಈ ಸಹಾನುಭೂತಿಯು ನ್ಯಾಯ ಒದಗಿಸಲು ಮಾಡಬೇಕಾದ ಅಗತ್ಯ ಕ್ರಮಗಳನ್ನು ಮಾಡುವಲ್ಲಿ ನನ್ನನ್ನು ಕುರುಡಾಗಿಸಿಲ್ಲ. ತಮ್ಮ ಸ್ವಂತ ರಾಷ್ಟ್ರಕ್ಕಾಗಿ ಯಹೂದ್ಯರು ಮಾಡಿದ ಕೂಗು ನನಗೆ ಅಷ್ಟಾಗಿ ಮನಮುಟ್ಟಲಿಲ್ಲ. ಈ ಅನ್ವೇಷಣೆಗೆ ಮತ್ತು ಪ್ಯಾಲೆಸ್ತೇನ್‌ಗೆ ಹಿಂದಿರುಗುವುದಕ್ಕೆ ಸಂಬಂಧಿಸಿದ ಯಹೂದ್ಯರ ಹಾತೊರೆಯುವಿಕೆಗೆ ಬೈಬಲ್‌ನಲ್ಲಿಯೇ ಅನುಮೋದನೆಯಿದೆ. ಈ ಭೂಮಿಯಲ್ಲಿರುವ ಬೇರೆ ಜನಗಳ ತರಹ, ತಾವು ಹುಟ್ಟಿದ, ಜೀವನೋಪಾಯಕ್ಕಾಗಿ ದುಡಿದ ದೇಶವನ್ನೇ ತಮ್ಮ ಸ್ವಂತ ಮನೆಯೆಂದು ಅವರೇಕೆ ಭಾವಿಸಬಾರದು?ಇಂಗ್ಲೆಂಡ್‌ ಆಂಗ್ಲರಿಗೆ ಅಥವಾ ಫ್ರಾನ್ಸ್‌ ಫ್ರೆಂಚರಿಗೆ ಸೇರಿರುವಂತೆಯೇ ಪ್ಯಾಲೆಸ್ತೇನ್‌ ಅರಬರಿಗೆ ಸೇರಿದೆ. ಯಹೂದ್ಯರನ್ನು ಅರಬರ ಮೇಲೆ ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಪ್ಯಾಲೆಸ್ತೇನ್‌ನಲ್ಲಿ ನಡೆಯುತ್ತಿರುವ‌ ಘಟನೆಗಳಿಗೆ ಯಾವುದೇ ನೀತಿಸಂಹಿತೆ ಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ.ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌. , ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) pp. ೨೮೬-೨೮೮. ಹಿಂಸಾತ್ಮಕ ಪ್ರತಿಭಟನೆಯ ತಿರಸ್ಕರಣೆ ಅತಿಹೆಚ್ಚಿನ ಹಿಂಸಾತ್ಮಕ ಮಾರ್ಗಗಳಿಂದ ಸ್ವಾತಂತ್ರ್ಯವನ್ನು ಗಳಿಸಲು ಪ್ರಯತ್ನ ಪಟ್ಟವರ ಬಗ್ಗೆ ಗಾಂಧಿಯವರು ಮಾಡಿದ ಟೀಕೆಗಳಿಗಾಗಿ ಅವರೂ ಸಹ ಒಂದಷ್ಟು ರಾಜಕೀಯ ಟೀಕೆಗಳಿಗೆ ಗುರಿಯಾಗಬೇಕಾಯಿತು. ಭಗತ್‌ ಸಿಂಗ್‌, ಸುಖ್‌ದೇವ್‌, ಉಧಮ್‌ ಸಿಂಗ್‌ ಮತ್ತು ರಾಜ್‌ಗುರುರವರನ್ನು ನೇಣಿಗೆ ಹಾಕುವುದನ್ನು ಪ್ರತಿಭಟಿಸಲು ಅವರು ನಿರಾಕರಿಸಿದ್ದು ಕೆಲವು ಪಕ್ಷಗಳಿಂದ ಬಂದ ಖಂಡನೆಯ ಮೂಲವಾಯಿತು.ಮಹಾತ್ಮ ಗಾಂಧಿ ಆನ್‌ ಭಗತ್‌ ಸಿಂಗ್‌.ಗಾಂಧಿ — 'ಮಹಾತ್ಮ' ಆರ್‌ ಫ್ಲಾಡ್‌ ಜೀನೀಯಸ್‌?. ಆ ಟೀಕೆಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ್ದು ಹೀಗೆ: "ಒಂದು ಕಾಲದಲ್ಲಿ ಜನ ನನ್ನ ಮಾತನ್ನು ಕೇಳುತ್ತಿದ್ದರು. ಏಕೆಂದರೆ ಅವರ ಬಳಿ ಆಯುಧಗಳೇ ಇಲ್ಲದಿದ್ದಾಗ ಬ್ರಿಟಿಷರ ವಿರುದ್ದ ಯಾವುದೇ ಶಸ್ತ್ರಗಳಿಲ್ಲದೆಯೇ ಹೋರಾಡುವುದು ಹೇಗೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೆ...ಆದರೆ ಈಗ ನನ್ನ ಅಹಿಂಸಾ ತತ್ವಗಳಿಂದ ಅವರಿಗೆ [ಹಿಂದು–ಮುಸ್ಲಿಮ್‌ ದಂಗೆಕೋರರಿಗೆ] ಪ್ರಯೋಜನವಿಲ್ಲ ಎಂಬುದನ್ನು ಇಂದು ನಾನು ಕೇಳ್ಪಟ್ಟಿರುವೆ. ಆದ್ದರಿಂದ, ಜನರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಬೇಕು."ಪುನರ್‌ಮುದ್ರಿತವಾದ ದಿ ಎಸ್ಸೆನ್ಷಿಯಲ್ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌. , ಲ್ಯೂಯಿಸ್‌ ಫಿಷರ್, ed., ೨೦೦೨ (ಪುನರ್‌ಮುದ್ರಿತ ಆವೃತ್ತಿ) p. ೩೧೧. ಹೋಮರ್ ಜಾಕ್‌ನ ದಿ ಗಾಂಧಿ ರೀಡರ್: ಎ ಸೋರ್ಸ್‌ಬುಕ್‌ ಆಫ್‌ ಹಿಸ್‌ ಲೈಫ್‌ ಅಂಡ್‌ ರೈಟಿಂಗ್ಸ್‌ ಎಂಬ ಪುಸ್ತಕದಲ್ಲಿ ಮರು ಮುದ್ರಣಗೊಂಡ ಅಸಂಖ್ಯಾತ ಲೇಖನಗಳಲ್ಲಿ ಅವರು ತಮ್ಮ ವಾದಸರಣಿಯನ್ನು ಮುಂದುವರಿಸಿದರು. ಪ್ರಥಮವಾಗಿ, ೧೯೩೮ರಲ್ಲಿ ಬರೆಯಲಾದ "ಜಿಯೋನಿಸ್ಮ್‌ ಅಂಡ್ ಆಂಟಿ-ಸೆಮಿಟಿಸ್ಮ್‌,"ಎಂಬ ಲೇಖನದಲ್ಲಿ, ೧೯೩೦ರ ಸತ್ಯಾಗ್ರಹದ ಸನ್ನಿವೇಶದಲ್ಲಿ ನಡೆದ ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಯ ಕುರಿತು ಗಾಂಧಿಯವರು ಟಿಪ್ಪಣಿಯನ್ನು ಬರೆದಿದ್ದಾರೆ. ಯಹೂದ್ಯರು ಜರ್ಮನಿಯಲ್ಲಿ ಎದುರಿಸಿದ ಕಷ್ಟಕೋಟಲೆಗಳನ್ನು ಎದುರಿಸುವಲ್ಲಿ ಅಹಿಂಸಾ ಮಾರ್ಗವನ್ನು ಒಂದು ವಿಧಾನವನ್ನಾಗಿ ಅವರು ತೋರಿಸಿಕೊಟ್ಟಿದ್ದು, ಅದರ ಕುರಿತು ಈ ರೀತಿ ಹೇಳುತ್ತಾರೆ, ನಾನೇನಾದರೂ ಯಹೂದ್ಯನಾಗಿದ್ದು ಜರ್ಮನಿಯಲ್ಲಿ ಹುಟ್ಟಿ ಜೀವನೋಪಾಯವನ್ನು ಅಲ್ಲಿಯೇ ಗಳಿಸಿದ್ದೇ ಆಗಿದ್ದರೆ, ಅತಿ ಎತ್ತರದ ಯಹೂದ್ಯೇತರ ಜರ್ಮನ್‌ ದೈತ್ಯನಂತೆಯೇ ಜರ್ಮನಿಯನ್ನು ನನ್ನ ಮನೆಯೆಂದು ಸಮರ್ಥಿಸುತ್ತಿದ್ದೆ ಮತ್ತು ನನ್ನನ್ನು ಗುಂಡಿಟ್ಟು ಕೊಲ್ಲುವಂತೆ ಅಥವಾ ಕತ್ತಲ ಕೋಣೆಯಲ್ಲಿ ಬಂಧಿಸಿಡುವಂತೆ ಸವಾಲೆಯೆಸುತ್ತಿದ್ದೆನೇ ವಿನಃ, ತಾರತಮ್ಯ ನೀತಿಗೆ ನನ್ನನ್ನು ಒಪ್ಪಿಸಿಕೊಳ್ಳಲು ಅಥವಾ ಬಹಿಷ್ಕಾರಕ್ಕೆ ಒಳಗಾಗಲು ನಾನು ತಿರಸ್ಕರಿಸುತ್ತಿದ್ದೆ. ಇದನ್ನು ನಾನು ಮಾಡುವುದಕ್ಕಾಗಿ ಸಾರ್ವಜನಿಕ ಪ್ರತಿರೋಧದಲ್ಲಿ ಯಹೂದ್ಯರು ಬಂದು ನನ್ನನ್ನು ಸೇರಬೇಕು ಎಂದು ನಾನು ಕಾಯುವ ಅವಶ್ಯಕತೆಯಲ್ಲ. ಆದರೆ ಅಂತ್ಯದಲ್ಲಿ ಉಳಿದವರೂ ಸಹ ನನ್ನ ಉದಾಹರಣೆಯನ್ನೇ ಅನುಸರಿಸುತ್ತಾರೆ ಎಂಬ ಆತ್ಮವಿಶ್ವಾಸ ಹೊಂದಿರುತ್ತಿದ್ದೆ. ಯಾವುದೇ ಒಬ್ಬ ಯಹೂದ್ಯ ಅಥವಾ ಎಲ್ಲ ಯಹೂದ್ಯರು ಇಲ್ಲಿ ನೀಡಿರುವ ಸಲಹೆಯನ್ನು ಒಪ್ಪಿಕೊಂಡಿದ್ದೇ ಆಗಿದ್ದಲ್ಲಿ, ಆತ ಅಥವಾ ಅವರು ಈಗಿನದ್ದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿರಲಾರರು. ಸ್ವ ಇಚ್ಛೆಯಿಂದ ಅನುಭವಿಸುವ ಕಷ್ಟವು ಅವರಿಗೆ ಆಂತರಿಕ ಬಲ ಮತ್ತು ಸಂತೋಷವನ್ನು ಕೊಡುತ್ತದೆ. *ಇಂತಹ ಹಗೆತನಗಳ ಘೋಷಣೆಗೆ ತನ್ನ ಪ್ರಥಮ ಉತ್ತರವೆಂಬ ರೀತಿಯಲ್ಲಿ ಹಿಟ್ಲರ್‌‌ನ ಉದ್ದೇಶಪೂರ್ವಕ ಹಿಂಸಾಚಾರವು ಯಹೂದ್ಯರ ಸಾಮೂಹಿಕ ಮಾರಣಹೋಮದಲ್ಲಿ ಕೂಡ ಕೊನೆಗೊಳ್ಳಬಹುದು. ಆದರೆ ಸ್ವ ಇಚ್ಛೆಯ ಬಳಲಿಕೆಗೆ ಯುಹೂದಿಗಳ ಮನಸ್ಸು ಸಿದ್ಧವಾಗುವುದಾದರೆ, ನಾನು ಕಲ್ಪಿಸಿಕೊಂಡ ಮಾರಣಹೋಮವು ಕೂಡಾ ಕೃತಜ್ಞತೆ ಅರ್ಪಿಸುವ ದಿನವಾಗಿ ಬದಲಾಗಬಹುದು ಮತ್ತು ಪ್ರಜಾಪೀಡಕನ ಕೈಗಳಿಂದಲೂ ವರ್ಣಭೇದ ಪದ್ಧತಿಯನ್ನು ಜೆಹೊವಾ ದೇವನು ವಿಮೋಚನೆಗೊಳಿಸಿದಕ್ಕೆ ಸಂತೋಷವನ್ನು ಹೊಂದಬಹುದು. ದೇವರನ್ನು ಕಂಡು ಭಯಪಡುವವರಿಗೆ ಸಾವೆಂದರೆ ಏನೂ ಭಯವಿಲ್ಲ.ಜಾಕ್, ಹೋಮರ್. ದಿ ಗಾಂಧಿ ರೀಡರ್‌ , pp. ೩೧೯–೨೦. ಗಾಂಧಿಯವರ ಈ ಮಾತುಗಳು ವ್ಯಾಪಕ ಟೀಕೆಗೊಳಗಾದವು ಮತ್ತು "ಯಹೂದ್ಯರ ಕುರಿತಾದ ಪ್ರಶ್ನೆಗಳು" ಎಂಬ ಲೇಖನದಲ್ಲಿ ಈ ಕುರಿತು ಅವರು ಹೀಗೆ ಪ್ರತಿಕ್ರಿಯಿಸಿದರು: "ಯಹೂದ್ಯರಿಗೆ ನಾನು ಮಾಡಿರುವ ಮನವಿಯನ್ನು ಟೀಕಿಸಿರುವ ವೃತ್ತಪತ್ರಿಕೆಗಳ ಎರಡು ಸುದ್ದಿ ತುಣುಕುಗಳನ್ನು ನನ್ನ ಸ್ನೇಹಿತರು ನನಗೆ ಕಳಿಸಿದ್ದಾರೆ. ಯಹೂದ್ಯರ ಮೇಲೆ ನಡೆದಿರುವ ಅಪಚಾರಗಳ ವಿರುದ್ಧ ಅಹಿಂಸೆಯನ್ನು ಪರಿಹಾರವಾಗಿ ಪ್ರಸ್ತುತಪಡಿಸಿರುವುದಕ್ಕಾಗಿ ಈ ಎರಡು ಟೀಕಾಕಾರರು ನಾನು ಹೊಸದೇನನ್ನೂ ಸಲಹೆ ನೀಡಿಲ್ಲ ಎಂದು ಸೂಚಿಸಿದ್ದಾರೆ. ಹೃದಯದಲ್ಲಿ ಅಡಕವಾಗಿರುವ ಹಿಂಸೆಯನ್ನು ಬಿಟ್ಟುಬಿಡುವ ಬಗ್ಗೆ ಮತ್ತು ತನ್ಮೂಲಕ ಉದ್ಭವವಾಗುವ ಶಕ್ತಿಯನ್ನು ನಿರಂತರವಾಗಿ ಅಭ್ಯಾಸ ಮಾಡುವ ಬಗ್ಗೆ ನಾನು ಕೋರಿಕೊಂಡಿರುವೆ ಜಾಕ್, ಹೋಮರ್. ದಿ ಗಾಂಧಿ ರೀಡರ್‌ , p. ೩೨೨. ಯಹೂದ್ಯರು ಎದುರಿಸುತ್ತಿರುವ ನೆತ್ತಿಯ ಮೇಲೆ ತೂಗುತ್ತಿರುವ ಸಾಮೂಹಿಕ ಬಲಿಗೆ ಸಂಬಂಧಿಸಿ ಗಾಂಧಿಯವರು ನೀಡಿದ ಹೇಳಿಕೆಗಳು ಅಸಂಖ್ಯಾತ ಟೀಕಾಕಾರರಿಂದ ಟೀಕೆಗೆ ಒಳಗಾಯಿತು.ಡೇವಿಡ್‌ ಲ್ಯೂಯಿಸ್ ಷೆಫರ್‌. ವಾಟ್‌ ಡಿಡ್ ಗಾಂಧಿ ಡು? . ನ್ಯಾಷಿನಲ್ ರಿವ್ಯೂವ್‌ , ೨೮ ಏಪ್ರಿಲ್‌ ೨೦೦೩. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು; ರಿಚರ್ಡ್‌ ಗ್ರೆನಿಯೆರ್‌. "ದಿ ಗಾಂಧಿ ನೋಬಡಿ ನೋಸ್‌" . ಕಮೆಂಟರಿ ನಿಯತಕಾಲಿಕ . ಮಾರ್ಚ್‌ ೧೯೮೩. ೨೧ ಮಾರ್ಚ್‌ ೨೦೦೬ರಂದು ಪಡೆದುಕೊಳ್ಳಲಾಯಿತು. ೧೯೩೯ರ ಫೆಬ್ರವರಿ ೨೪ರಂದು ಮಾರ್ಟಿನ್‌ ಬುಬರ್‌ರವರು ಗಾಂಧಿಯವರಿಗೆ ತೀಕ್ಷ್ನ ಟೀಕೆಯನ್ನು ಒಳಗೊಂಡ ಮುಕ್ತ ಪತ್ರವೊಂದನ್ನು ಬರೆದರು. ಬುಬರ್‌ನ ಪ್ರತಿಪಾದನೆಯಂತೆ, ಬ್ರಿಟಿಷ್‌ರು ಭಾರತೀಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಹಾಗೂ ನಾಜಿಗಳು ಯಹೂದ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿ ಎರಡನ್ನೂ ಒಂದಕ್ಕೊಂದು ಹೋಲಿಸಿ ನೋಡಿದರೆ ತುಂಬಾ ವಿರುದ್ದವಾಗಿದ್ದವು; ಮಿಗಿಲಾಗಿ, ಭಾರತೀಯರು ಶೋಷಣೆಗೆ ಒಳಗಾದ ಸಂದರ್ಭದಲ್ಲಿ, ಗಾಂಧಿಯವರು ಸಹ ಅಪರೂಪಕ್ಕೊಮ್ಮೆ, ಬಲಪ್ರಯೊಗವನ್ನು ಬೆಂಬಲಿಸುತ್ತಿದ್ದರು.ಹರ್ಟ್ಜ್‌ಬರ್ಗ್, ಆರ್ಥರ್‌. ದಿ ಜಿಯೋನಿಸ್ಟ್‌ ಐಡಿಯಾ. PA: ಜ್ಯೂಯಿಷ್ ಪಬ್ಲಿಕೇಶನ್ಸ್‌ ಸೊಸೈಟಿ, ೧೯೯೭, pp. ೪೬೩-೪೬೪.; ಇದನ್ನೂ ನೋಡಿ ಗೊರ್ಡನ್ ಬ್ರೌನ್, ಹೈಮ್‌. "ಎ ರಿಜೆಕ್ಷನ್‌ ಆಫ್‌ ಸ್ಪಿರಿಚ್ಯುಯಲ್‌ ಇಂಪೀರಿಯಲಿಸ್ಮ್‌: ರಿಫ್ಲೆಕ್ಷನ್ಸ್‌ ಆನ್‌ ಬರ್ಬರ್‌'ಸ್‌ ಲೆಟರ್‌ ಟು ಗಾಂಧಿ." ಜರ್ನಲ್‌ ಆಫ್‌ ಎಕನಾಮಿಕಲ್‌ ಸ್ಟಡೀಸ್‌ , ೨೨ ಜೂನ್ ೧೯೯೯. ೧೯೩೦ರಲ್ಲಿನ ಜರ್ಮನಿಯಲ್ಲಿರುವ ಯಹೂದ್ಯರ ಶೋಷಣೆಗೆ ಸಂಬಂಧಿಸಿ ಸತ್ಯಾಗ್ರಹದ ವಿಷಯಕ್ಕೆ ಸಂಬಂಧಿಸಿದಂತೆ ಗಾಂಧಿಯವರು ವ್ಯಾಖ್ಯೆ ಬರೆದಿದ್ದಾರೆ. ಮೇಲೆ ತಿಳಿಸಿರುವಂತೆ ನಾಜಿಗಳಿಂದ ಯಹೂದ್ಯರ ಶೋಷಣೆಗೆ ಸಂಬಂಧಿಸಿ ನವೆಂಬರ್ ೧೯೩೮ರ ಲೇಖನದಲ್ಲಿ ಅವರು ಇದಕ್ಕೆಲ್ಲ ಅಹಿಂಸೆಯೇ ಮಾರ್ಗವೆಂದು ಹೇಳಿದ್ದಾರೆ: ಜರ್ಮನ್‌ರಿಂದಾಗುತ್ತಿರುವ ಯಹೂದ್ಯರ ಶೋಷಣೆಯಂತಹ ಘಟನೆಗೆ ಇತಿಹಾಸದಲ್ಲಿ ಮತ್ತಾವ ಸಮಾನ ಘಟನೆಯೂ ಕಾಣಸಿಗುವುದಿಲ್ಲ. ಹಿಂದಿದ್ದ ಪ್ರಜಾಪೀಡಕರುಗಳೂ ಸಹ ಹಿಟ್ಲರ್‌ನ ಹಾಗೆ ಹುಚ್ಚು ಹಿಡಿದವರಂತೆ ವರ್ತಿಸಿರಲಿಲ್ಲ. ಧಾರ್ಮಿಕತೆ ದುರಭಿಮಾನದಿಂದ ಅವನು ಆ ರೀತಿಯ ಕೆಲಸಗಳನ್ನು ಮಾಡಿದ. ಏಕೆಂದರೆ, ಪ್ರತ್ಯೇಕವಾದ ಮತ್ತು ಉಗ್ರ ರಾಷ್ಟ್ರೀಯತೆಯನ್ನು ಹೊಂದಿರುವ ಹೊಸ ಧರ್ಮವೊಂದನ್ನು ಆತ ಪ್ರತಿಪಾದಿಸುತ್ತಿದ್ದು, ಅದರ ಹೆಸರಿನಲ್ಲಿ ಯಾವುದೇ ಅಮಾನವೀಯತೆಯೂ ಮಾನವೀಯತೆಯ ಕೆಲಸವಾಗಿ ಬದಲಾಗಿ ಇಲ್ಲಿ ಮತ್ತು ಇನ್ನು ಮುಂದೆ ಪುರಸ್ಕೃತಗೊಳ್ಳುತ್ತದೆ. ನಿಸ್ಸಂಶಯವಾಗಿ ಹುಚ್ಚನಾಗಿರುವ ಆದರೆ ತುಂಬಾ ಧೈರ್ಯಶಾಲಿಯಾದ ಯುವಕನೋರ್ವನ ಅಪರಾಧವನ್ನು ಅವನ ಸಮಗ್ರ ಜನಾಂಗವು ನಂಬಲಸಾಧ್ಯವಾದ ಉಗ್ರತೆಯೊಂದಿಗೆ ಅನುಸರಿಸುತ್ತದೆ. ಮಾನವೀಯತೆಯ ಹೆಸರಿನಲ್ಲಿ ಮತ್ತು ಮಾನವೀಯತೆಗಾಗಿ ಅಲ್ಲೇನಾದರೂ ಸಮರ್ಥನೀಯ ಯುದ್ಧವಿರಲು ಸಾಧ್ಯವಾಗುವುದಾದರೆ, ಸ್ವೇಚ್ಛಾಚಾರದ ರೀತಿಯಲ್ಲಿ ಒಂದು ಸಂಪೂರ್ಣ ಜನಾಂಗವನ್ನು ಶೋಷಿಸುವುದನ್ನು ತಡೆಗಟ್ಟಲು ಜರ್ಮನಿಯ ವಿರುದ್ಧದ ಯುದ್ಧ ಮಾಡಿದರೆ ಅದಕ್ಕೆ ಸಂಪೂರ್ಣ ಸಮರ್ಥನೆ ಸಿಗುತ್ತದೆ. ಆದರೆ ನನಗೆ ಯಾವುದೇ ರೀತಿಯ ಕದನಗಳಲ್ಲಿಯೂ ನಂಬಿಕೆಯಿಲ್ಲ. ಆದ್ದರಿಂದ ಆ ರೀತಿಯ ಕದನದ ಸಾಧಕ-ಬಾಧಕಗಳ ಕುರಿತಾದ ಚರ್ಚೆಯು ನನ್ನ ವ್ಯಾಪ್ತಿ ಅಥವಾ ವಲಯದಿಂದ ಆಚೆಯಿದೆ. ಆದರೆ ಒಂದು ವೇಳೆ ಜರ್ಮನಿಯ ವಿರುದ್ದ ಕದನ ನಡೆಯದಿದ್ದರೆ, ಅದೂ ಕೂಡ ಯಹೂದ್ಯರ ವಿರುದ್ದ ಮಾಡಿದ ಒಂದು ಘೋರ ಕೃತ್ಯವೇ ಆಗುತ್ತದೆ, ಜರ್ಮನಿಯ ಜೊತೆಗಿನ ಬಾಂಧವ್ಯ ಇಲ್ಲದಂತಾಗುತ್ತದೆ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರ ಇರುವ ಒಂದು ದೇಶ ಮತ್ತು ಇವೆರಡಕ್ಕೂ ಶತ್ರುವಾಗಿರುವ ಇನ್ನೊಂದು ದೇಶದ ನಡುವೆ ಹೇಗೆ ಬಾಂಧವ್ಯ ಬೆಳೆಯುವುದಕ್ಕೆ ಸಾಧ್ಯ?" ಜಾಕ್, ಹೋಮರ್. ದಿ ಗಾಂಧಿ ರೀಡರ್‌ , ಹರಿಜನ್‌ , ೨೬ ನವೆಂಬರ್ ೧೯೩೮, pp. ೩೧೭–೩೧೮.ಮೋಹನ್‌ದಾಸ್‌K. ಗಾಂಧಿ. ಎ ನಾನ್ ವಯೊಲೆಂಟ್ ಲುಕ್ ಅಟ್ ಕಾನ್‌ಫ್ಲಿಕ್ಟ್ & ವಯೊಲೆನ್ಸ್‌ ೨೬ ನವೆಂಬರ್ ೧೯೩೮ರ ಹರಿಜನ್‌‌ ನಲ್ಲಿ ಪ್ರಕಟವಾಯಿತು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಲೇಖನಗಳು ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಬರೆದ ಕೆಲವು ಲೇಖನಗಳು ವಿವಾದಾತ್ಮಕವಾಗಿವೆ. ೭ ಮಾರ್ಚ್‌ ೧೯೦೮ರಂದು, ಗಾಂಧಿಯವರು ದಕ್ಷಿಣ ಆಫ್ರಿಕಾದ ಜೈಲಿನಲ್ಲಿದ್ದಾಗ ಇಂಡಿಯನ್‌ ಒಪೀನಿಯನ್‌ ನಲ್ಲಿ ಹೀಗೆ ಬರೆದಿದ್ದಾರೆ: "ಕಾಫೀರ ಬುಟಕಟ್ಟಿನವರು ನಿಯಮದಂತೆ ಅನಾಗರಿಕರು - ಈ ಖೈದಿಗಳು ಹೆಚ್ಚು ಕಡಿಮೆ ಅವರಂತೆಯೇ. ಅವರೆಲ್ಲರೂ ತಂಟೆಕೋರರು, ಕೊಳಕು ಜನಗಳು, ಮತ್ತು ಹೆಚ್ಚೂ ಕಡಿಮೆ ಪ್ರಾಣಿಗಳಂತೆಯೇ ವಾಸಿಸುತ್ತಾರೆ." ೧೯೦೩ರಲ್ಲಿ ವಲಸೆ ವಿಷಯದ ಬಗ್ಗೆ ಬರೆಯುತ್ತಿರಬೇಕಾದರೆ , ಗಾಂಧಿಯವರು ಹೀಗೆ ಉಲ್ಲೇಖಿಸಿದ್ದಾರೆ: "ಜನಾಂಗದ ಶುದ್ಧತೆ ಬಗ್ಗೆ ನಾವು ತುಂಬಾ ನಂಬಿಕೊಳ್ಳುತ್ತೇವೆ. ಅವರು ನಮ್ಮದೇ ರೀತಿಯಲ್ಲಿ ಯೋಚಿಸುತ್ತಾರೆ ಎಂಬುದು ನಮ್ಮ ಭಾವನೆ... ದಕ್ಷಿಣ ಆಫ್ರಿಕಾದಲ್ಲಿರುವ ಬಿಳಿಯರು ಪ್ರಧಾನ ಜನಾಂಗದವರಾಗಿರಲೇಬೇಕು ಎಂದು ನಾವು ಭಾವಿಸುತ್ತೇವೆ." [164] ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಕರಿಯರ ಜೊತೆ ಭಾರತೀಯರನ್ನು ಸೇರಿಸಿ ಸಾಮಾಜಿಕ ವರ್ಗೀಕರಣ ಮಾಡಿರುವುದನ್ನು ಅನೇಕ ಬಾರಿ ವಿರೋಧಿಸಿದ್ದೇ ಅಲ್ಲದೆ, " ಕಾಫೀರರಿಗೆ ಹೋಲಿಸಿದರೆ ನಾವುಗಳು ನಿಸ್ಸಂದೇಹವಾಗಿ ಎಷ್ಟೋ ಪಟ್ಟು ಉತ್ತಮರು" ಎಂದು ಹೇಳಿದ್ದಾರೆ. [166] ಗಾಂಧಿಯವರ ಕಾಲದಲ್ಲಿ ಕಾಫೀರ ಪದಕ್ಕೆ ಬೇರೆಯೇ ಅರ್ಥವಿತ್ತು, ಪ್ರಸ್ತುತ ಬಳಕೆಯಲ್ಲಿರುವಂತೆ ಇರಲಿಲ್ಲ. ಆದರೆ ಅದು ಪ್ರಯೋಜನಕಾರಿಯಾಗಿರಲಿಲ್ಲ. ಈ ರೀತಿಯ ಹೇಳಿಕೆ ನೀಡಿದ್ದರಿಂದಾಗಿ ಗಾಂಧಿಯವರನ್ನು ವರ್ಣಭೇಧ ಮಾಡುತ್ತಾರೆ ಎಂದು ಧೂಷಿಸಲಾಯಿತು.[167] ^ ರೊರಿ ಕ್ಯಾರ್ರಲ್, "ಗಾಂಧಿ ಬ್ರಾಂಡೆಡ್‌ ರೇಸಿಸ್ಟ್‌ ಆಸ್ ಜೊಹಾನ್ಸ್‌ಬರ್ಗ್‌ ಹಾನರ್ಸ್‌ ಫ್ರೀಡಂ ಫೈಟರ್‌", ದಿ ಗಾರ್ಡಿಯನ್‌ , ೧೭ ಅಕ್ಟೊಬರ್‌ ೨೦೦೩. ದಕ್ಷಿಣ ಆಫ್ರಿಕಾ ಇತಿಹಾಸಜ್ಞರಾದ ಇಬ್ಬರು ಪ್ರೊಫೆಸರ್‌‌ಗಳು, ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ಪರೀಕ್ಷಿಸಿ ತಮ್ಮ ಪುಸ್ತಕವಾದ ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪. ಬರೆದಿದ್ದಾರೆ. (ನವ ದೆಹಲಿ: ಮನೋಹರ್‌, ೨೦೦೫). [169] ಅಧ್ಯಾಯ ೧ರಲ್ಲಿ ಅವರು ಒತ್ತಿ ಹೇಳಿದ್ದಾರೆ, "ವಸಾಹತು ದೇಶದಲ್ಲಿ ಗಾಂಧಿ, ಆಫ್ರಿಕನ್ನರು ಮತ್ತು ಭಾರತೀಯರು" "ಬಿಳಿಯರ ಆಳ್ವಿಕೆ"ಯಡಿ ಭಾರತೀಯ ಸಮುದಾಯಗಳು ಮತ್ತು ಆಫ್ರಿಕನ್ನರ ನಡುವಿನ ಸಂಬಂಧ ಮತ್ತು ವರ್ಣಬೇಧಕ್ಕೆ ಕಾರಣವಾದ ನಿಯಮಗಳು(ಮತ್ತು ಅವರು ವಾದಿಸುವಂತೆ, ಈ ಸಮುದಾಯಗಳ ನಡುವಿನ ಅನಿವಾರ್ಯ ತಿಕ್ಕಾಟಗಳು). ಈ ಸಂಬಂಧಗಳ ಬಗ್ಗೆ ಇತಿಹಾಜ್ಞರು ಹೀಗೆ ಹೇಳುತ್ತಾರೆ, "೧೮೯೦ರಲ್ಲಿ ಪ್ರಚಲಿತದಲ್ಲಿದ್ದ ವರ್ಣಬೇಧ ನೀತಿ ಕುರಿತ ಚಿಂತನೆಗಳ ಪ್ರಭಾವಕ್ಕೆ ತರುಣ ಗಾಂಧಿಯವರು ಒಳಗಾದರು." ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೪೪ ಅದೇ ಸಮಯದಲ್ಲಿ, ಅವರೇ ಹೇಳುವಂತೆ, "ಜೈಲಿನಲ್ಲಿ ಗಾಂಧಿಯವರಿಗಾದ ಅನುಭವಗಳು ಅವರನ್ನು ಮತ್ತಷ್ಟು ಸೂಕ್ಷ್ಮ ಸಂವೇದನೆಗೆ ಒಳಪಡಿಸಿದಂತಿವೆ..ನಂತರದ ದಿನಗಳಲ್ಲಿ ಗಾಂಧಿಯವರು ಪಕ್ವವಾದರು; ವರ್ಗೀಕರಣಗಳ ಅಭಿವ್ಯಕ್ತಿಯಲ್ಲಿ ಮತ್ತು ಆಫ್ರಿಕನ್ನರ ವಿರುದ್ಧ ಇದ್ದ ಪೂರ್ವಗ್ರಹಗಳು ಕಡಿಮೆಯಾದವೆಂದೇ ಹೇಳಬಹುದು, ಮತ್ತು ಸಾಮಾನ್ಯ ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಿದರು. ಜೊಹಾನ್ಸ್‌ಬರ್ಗ್‌ ಜೈಲಿನಲ್ಲಿದ್ದಾಗ ಅವರ ಋಣಾತ್ಮಕ ದೃಷ್ಟಿಕೋನಗಳು ಕೇವಲ ಒರಟು ಆಫ್ರಿಕನ್‌ ಖೈದಿಗಳಿಗೇ ಸೀಮಿತವಾಗಿತ್ತೇ ಹೊರತು ಸಾಮಾನ್ಯ ಆಫ್ರಿಕನ್ನರಿಗಲ್ಲ." ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೪೫ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರಾದ ನೆಲ್ಸನ್‌‌ ಮಂಡೇಲಾರವರು ಗಾಂಧಿಯವರ ಅನುಯಾಯಿ. [172] ೨೦೦೩ರಲ್ಲಿ ಜೊಹಾನ್ಸ್‌ಬರ್ಗ್‌‌ನಲ್ಲಿ ಗಾಂಧಿಯವರ ಪ್ರತಿಮೆ ಅನಾವರಣಗೊಳಿಸುವುದನ್ನು ತಡೆಯಲು ಕೆಲವರು ಗಾಂಧಿಯವರ ವಿಮರ್ಶೆಗಳನ್ನು ಮುಂದಿಟ್ಟುಕೊಂಡು ನಡೆಸಿದ ಪ್ರಯತ್ನಗಳನ್ನು ಮಂಡೇಲಾರವರು ನಿಲ್ಲಿಸಿದರು. [173] ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದ ಘಟನೆಗಳ ಕುರಿತು ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪. ಪುಸ್ತಕದ ಉಪ ಸಂಹಾರದಲ್ಲಿ ಭನ್ನ ಮತ್ತು ವಹೀದ್‌‌ರವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಯ ಸ್ವತ್ತು," ಎಂಬ ವಿಭಾಗದಲ್ಲಿ "ಬಿಳಿಯರ ಆಡಳಿತಕ್ಕೆ ಅಂತ್ಯ ಹಾಡಲು ದಕ್ಷಿಣ ಆಫ್ರಿಕಾದ ಚಳುವಳಿಗಾರರ ಮುಂದಿನ ಪೀಳಿಗೆಗೆ ಗಾಂಧಿ ಸ್ಪೂರ್ತಿ ನೀಡಿದರು". ಎಂದು ಅವರು ಬರೆದಿದ್ದಾರೆ.ಇದು ೦}ನೆಲ್ಸನ್‌‌ ಮಂಡೇಲಾರವರನ್ನು ಗಾಂಧಿಯವರೊಂದಿಗೆ ಸೇರಿಸಿತು... ಒಂದು ಅರ್ಥದಲ್ಲಿ ಗಾಂಧಿಯವರು ಆರಂಭಿಸಿದ್ದನ್ನು ಮಂಡೇಲಾರವರು ಕೊನೆಗೊಳಿಸಿದರು ಎಂದೇ ಹೇಳಬಹುದು." ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೧೪೯ ಈ ಇತಿಹಾಜ್ಞರು ಗಾಂಧಿ ಪ್ರತಿಮೆ ಅನಾವರಣಗೊಳ್ಳುವ ಸಂದರ್ಭದಲ್ಲಿ ಎದ್ದ ವಿವಾದಗಳನ್ನು ಉಲ್ಲೇಖಿಸುತ್ತಾ ಮುಂದುವರೆಯುತ್ತಾರೆ.ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: pp.೧೫೦–೧ ವರ್ಣಬೇಧ ನೀತಿಯಿಂದ ಹೊರಬಂದ ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಉದ್ದೇಶಗಳಿಗಾಗಿ ತಮ್ಮ ಗಾಂಧಿಯನ್ನು ಕಂಡುಕೊಳ್ಳಲು ಹೊರಟವರು. ಅವರ ಕುರಿತ ಕೆಲವು ಸತ್ಯಗಳನ್ನು ಕಡೆಗಣಿಸಿದ್ದರಿಂದಾಗಿ ಅವರ ಉದ್ದೇಶಗಳು ಈಡೇರಲಿಲ್ಲ; ಗಾಂಧಿಯವರನ್ನು ಅತ್ಯಂತ ಸರಳವಾಗಿ ಜನಾಂಗೀಯವಾದಿ ಎಂದು ದೂಷಿಸುವ ಮಂದಿ ಒಟ್ಟು ಅಸ್ಪಷ್ಟತೆಯಲ್ಲಿ ಸಮಾನ ದೋಷಿಗಳಾಗಿದ್ದಾರೆ.ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, ೧೮೯೩–೧೯೧೪.. ಸುರೇಂದ್ರ ಭನ ಮತ್ತು ಗೂಲಮ್‌ ವಹೀದ್, ೨೦೦೫: p.೧೫೧ ಅರಾಜಕತಾವಾದ ಗಾಂಧಿಯವರು ಓರ್ವ ಸ್ವ-ವರ್ಣಿತ ದಾರ್ಶನಿಕ ಅರಾಜಕತಾವಾದಿಯಾಗಿದ್ದು,ಸ್ನೋ‌, ಎಡ್ಜರ್‌. ದಿ ಮೆಸ್ಸೇಜ್‌ ಆಫ್ ಗಾಂಧಿ . SEP, ಮಾರ್ಚ್‌ ೨೭, ೧೯೪೮. "ಮಾರ್ಕ್ಸ್‌ನಂತೆ, ಗಾಂಧಿಯವರು ರಾಜ್ಯವನ್ನು ವಿರೋಧಿಸಿ ನಿರ್ಮುಲನೆ ಮಾಡಲು ಆಶಿಸಿದ್ದಾರೆ, ಮತ್ತು ಅವರು ನನಗೆ ತಮ್ಮನ್ನು ತಾವು 'ಸ್ಥಿತಪ್ರಜ್ಞೆಯ ಕ್ರಾಂತಿಕಾರಿ' ಎಂದು ಪರಿಗಣಿಸುವುದಾಗಿ ಹೇಳಿದ್ದಾರೆ."ಗಾಂಧಿಯವರ ಮತ್ತು ಗಾಂಧಿ ಕುರಿತಾದ ಲೇಖನಗಳನ್ನು, ೭ ಜೂನ್ ೨೦೦೮ರಂದು ಪಡೆದುಕೊಳ್ಳಲಾಯಿತು. ಸರ್ಕಾರಿ ಶಾಸನದ ಕೈಗೊಂಬೆಯಾಗಿರದ ಭಾರತದ ನಿರ್ಮಾಣ ಅವರ ಕನಸಾಗಿತ್ತು.ಜೇಸುದಾಸನ್, ಇಗ್ನೇಷಿಯಸ್‌. ಅ ಗಾಂಧಿಯನ್ ಥಿಯಾಲಜಿ ಆಫ್ ಲಿಬರೇಷನ್. ಗುಜರಾತ್‌ ಸಾಹಿತ್ಯ ಪ್ರಕಾಶ್: ಆನಂದ ಭಾರತ, ೧೯೮೭, pp ೨೩೬–೨೩೭ ಅವರು ಒಂದು ಬಾರಿ ಹೀಗೆ ಹೇಳಿದ್ದಾರೆ "ಆದರ್ಶಪ್ರಾಯ ಅಹಿಂಸಾತ್ಮಕ ರಾಜ್ಯವೆಂದರೆ ವ್ಯವಸ್ಥಿತ ಅರಾಜಕತೆ." BG ಖೆರ್ ಮತ್ತು ಬೇರೆಯವರ ಜೊತೆಗಿನ ಸಂವಾದದಂತೆ, ಆಗಸ್ಟ್ ೧೫, ೧೯೪೦. ಗಾಂಧಿಯವರು ಚಿಂತನೆಗಳ ಖಜಾನೆ (೧೯೪೨), ದೀವಾನ್ ರಾಮ್ ಪ್ರಕಾಶ್‌ರವರಿಂದ ಪರಿಷ್ಕರಣೆಯಾಗಿದೆ, p. ೬೭ ಹಾಗೂ ಕಲೆಕ್ಟೆಡ್‌ ವರ್ಕ್ಸ್ ಆಫ್ ಮಹಾತ್ಮ ಗಾಂಧಿ Vol. ೭೯ (PDF), p. ೧೨೨ ರಾಜಕೀಯ ವ್ಯವಸ್ಥೆಗಳು ಒಟ್ಟಾರೆಯಾಗಿ ಶ್ರೇಣಿ ವ್ಯವಸ್ಠೆಯಿಂದ ಕೂಡಿರುವಾಗ, ವ್ಯಕ್ತಿಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಅಧಿಕಾರದ ಪ್ರತಿ ಸ್ತರದಲ್ಲಿ, ಮೇಲಿನ ಸ್ತರದ ಅಧಿಕಾರ ಕೆಳಗಿನ ಸ್ತರಕ್ಕಿಂತ ಹಂತ ಹಂತವಾಗಿ ಹೆಚ್ಚುತ್ತಾ ಹೋಗುತ್ತದೆ. ಆದರೆ ಸಮಾಜ ಇದಕ್ಕೆ ವಿರುದ್ಧವಾಗಿರಬೇಕು ಎಂಬುದು ಗಾಂಧಿಯವರ ಆಶಯವಾಗಿತ್ತು, ಈ ವ್ಯವಸ್ಥೆಯಲ್ಲಿ ವ್ಯಕ್ತಿವರೆಗೆ(ಕೆಳಮಟ್ಟದವರೆಗೆ) ಒಪ್ಪಿಗೆ ಸಿಗದೆ ಏನನ್ನೂ ಮಾಡುವಂತಿಲ್ಲ. ಅವರ ಕಲ್ಪನೆಯಲ್ಲಿ ದೇಶದ ನಿಜವಾದ ಸ್ವಯಮಾಡಳಿತ ಎಂದರೆ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವೇ ಆಳಿಕೊಳ್ಳುವುದು ಮತ್ತು ಅಲ್ಲಿ ಯಾವುದೇ ರಾಜ್ಯವೂ ಪ್ರಜೆಗಳ ಮೇಲೆ ತನ್ನ ಕಾನೂನನ್ನು ಹೇರದಿರುವ ಸ್ಥಿತಿ.ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್‌ಟಾಯ್‌ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್‌: ಲಾಂಗ್ ಬೀಚ್, ೧೯೮೭, pp ೧೩ಮೂರ್ತಿ, ಶ್ರೀನಿವಾಸ್.ಮಹಾತ್ಮ ಗಾಂಧಿ ಮತ್ತು ಲಿಯೋ ಟಾಲ್ಸ್‌ಟಾಯ್‌ ಪತ್ರಗಳು. ಲಾಂಗ್ ಬೀಚ್ ಪಬ್ಲಿಕೇಶನ್ಸ್‌: ಲಾಂಗ್ ಬೀಚ್, ೧೯೮೭, pp ೧೮೯. ಇದನ್ನು ಕಾಲ ಕ್ರಮೇಣವಾಗಿ ಅಹಿಂಸಾತ್ಮಕ ಹೋರಾಟ ಸಂಧಾನದಿಂದ ಸಾಧಿಸಬಹುದು, ಮತ್ತು ಅಧಿಕಾರ ಶ್ರೇಣಿ ವ್ಯವಸ್ಥೆಯ ಅಧಿಕಾರಿಗಳ ಸ್ತರಗಳಿಂದ ಕಳಚಿಕೊಂಡು, ಕಟ್ಟಕಡೆಯ ವ್ಯಕ್ತಿಗೂ ಸೇರಬೇಕು, ಇದು ಅಹಿಂಸಾತ್ಮಕ ನೈತಿಕತೆಯನ್ನು ಸಾಕಾರಗೊಳಿಸುವಲ್ಲಿ ನೆರವಾಗುತ್ತದೆ. ಮೇಲ್ಮಟ್ಟದ ಅಧಿಕಾರಿಗಳು ಹಕ್ಕುಗಳನ್ನು ಹೇರುವ ವ್ಯವಸ್ಧೆಯ ಬದಲು, ಪ್ರಜೆಗಳು ಪರಸ್ಪರ ಜವಾಬ್ದಾರಿಯುತವಾಗಿ ಸ್ವಯಮಾಡಳಿತವನ್ನು ನಡೆಸುವಂತಿರಬೇಕು ಎಂದು ಗಾಂಧಿಯವರು ಆಶಿಸಿದ್ದರು. ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಹಿಂತಿರುಗುತ್ತಿದ್ದಾಗ, ವಿಶ್ವ ಮಾನವ ಹಕ್ಕುಗಳಿಗೆ ಸಂವಿಧಾನ ಬರೆಯುವ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಅವರಿಗೆ ಪತ್ರ ಬಂದಿತ್ತು. ಪತ್ರಕ್ಕೆ ಅವರು ಪ್ರತಿಕ್ರಿಯಿಸಿದ್ದು ಹೀಗೆ, "ನನ್ನ ಅನುಭವದಲ್ಲಿ ಹೇಳುವುದಾದರೆ, ಮಾನವ ಕರ್ತವ್ಯಗಳ ಕುರಿತು ಲಿಖಿತ ಸಂವಿಧಾನವನ್ನು ಹೊಂದುವುದು ಇನ್ನೂ ಮುಖ್ಯ".ಈಸ್ವರನ್, ಏಕನಾಥ್. ಗಾಂಧಿ, ದಿ ಮ್ಯಾನ್ . ನೀಲಗಿರಿ ಪ್ರೆಸ್‌, ೧೯೯೮. Pg. ೩೩. ಗಾಂಧಿಯವರ ಕಲ್ಪನೆಯಂತೆ ಮುಕ್ತ ಭಾರತವೆಂದರೆ ಸ್ವಸಂತೃಪ್ತ ಸಣ್ಣ ಸಮುದಾಯಗಳು ಸಾವಿರಾರು ಸಂಖ್ಯೆಯಲ್ಲಿ ಇರುವುದು ಮತ್ತು (ಟಾಲ್ಸ್‌ಟಾಯ್‌‌ರವರು ಹೇಳಿರಬಹುದಾದ) ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮನ್ನು ತಾವೇ ಆಳಿಕೊಳ್ಳುವುದು. ಹಾಗೆಂದ ಮಾತ್ರಕ್ಕೆ, ಬ್ರಿಟೀಷರು ಸ್ಥಾಪಿಸಿದ ಆಡಳಿತ ವ್ಯವಸ್ಥೆಯನ್ನು ಯಥಾವತ್ತಾಗಿ ಭಾರತೀಯರ ಕೈಗೆ ವರ್ಗಾಯಿಸುವುದು ಎಂಬರ್ಥವಲ್ಲ. ಹಾಗೆ ಮಾಡಿದಲ್ಲಿ ೦}ಹಿಂದೂಸ್ತಾನವನ್ನು ಇಂಗ್ಲೀಸ್ತಾನವನ್ನಾಗಿ ಮಾಡಿದಂತಾಗುತ್ತದೆ.ಭಟ್ಟಾಚಾರ್ಯ, ಭುದ್ಧದೇವ. ಎವಲ್ಯೂಷನ್ ಆಫ್ ದ ಪೊಲಿಟಿಕಲ್ ಫಿಲಾಸಫಿ ಆಫ್ ಗಾಂಧಿ. ಕಲ್ಕತ್ತಾ ಬುಕ್ ಹೌಸ್: ಕಲ್ಕತ್ತಾ, ೧೯೬೯, pp ೪೭೯ ಬ್ರಿಟಿಷ್ ಮಾದರಿಯ ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲದ್ದರಿಂದಅಧ್ಯಾಯ VI ಹಿಂದ್‌ ಸ್ವರಾಜ್‌ by M.K. ಗಾಂಧಿ, ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಬರ್ಖಾಸ್ತುಗೊಳಿಸಿ ಭಾರತದಲ್ಲಿ ನೇರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದು ಬಯಸಿದ್ದರು. ಪ್ರಸಿದ್ದ ಸಂಸ್ಕೃತಿಗಳಲ್ಲಿನ ವರ್ಣನೆ ಮಹಾತ್ಮ ಗಾಂಧಿಯವರನ್ನು ಚಲನಚಿತ್ರ, ಸಾಹಿತ್ಯ, ಮತ್ತು ರಂಗ ಕೃತಿಗಳಲ್ಲಿ ವರ್ಣಿಸಲಾಗಿದೆ. ಬೆನ್‌ ಕಿಂಗ್ಸ್‌ಲಿಯವರು ೧೯೮೨ರ ಗಾಂಧಿ ಎಂಬ ಚಲನಚಿತ್ರದಲ್ಲಿ ಗಾಂಧಿ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ೨೦೦೬ರಲ್ಲಿ ಬಾಲಿವುಡ್‌‌ನಲ್ಲಿ ನಿರ್ಮಿತವಾದ ಲಗೇ ರಹೋ ಮುನ್ನಾ ಭಾಯಿ ಚಲನಚಿತ್ರದಲ್ಲಿ ಗಾಂಧಿಯವರು ಕೂಡಾ ಕೇಂದ್ರ ಬಿಂದುವಾಗಿದ್ದಾರೆ. ೨೦೦೭ರಲ್ಲಿ ಬಂದ ಗಾಂಧಿ, ಮೈ ಫಾದರ್‌ ಚಲನಚಿತ್ರದಲ್ಲಿ ಗಾಂಧಿಯವರು ಮತ್ತು ಅವರ ಮಗ ಹರಿಲಾಲ್‌ರ ನಡುವಿನ‌ ಸಂಬಂಧವನ್ನು ತೋರಿಸಲಾಗಿದೆ. The ೧೯೯೬ರ ಚಲನಚಿತ್ರವಾದ, ದ ಮೇಕಿಂಗ್‌ ಆಫ್‌ ದ ಮಹಾತ್ಮ ದಲ್ಲಿ, ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಕಳೆದ ೨೧ ವರ್ಷಗಳನ್ನು ದಾಖಲಿಸಲಾಗಿದೆ. ಶ್ರೀಕಾಂತ್‌ರವರು ತಮ್ಮ ಮುಂಬರಲಿರುವ ಮಹಾತ್ಮ ಚಲನಚಿತ್ರದ ಕುರಿತು ಇತ್ತೀಚೆಗಷ್ಟೇ ಪ್ರಕಟಣೆಯನ್ನು ನೀಡಿದ್ದು, ಅದು ಕೃಷ್ಣ ವಂಶಿಯವರ ನಿರ್ದೇಶನದಲ್ಲಿ ಮೂಡಿಬರಲಿದೆ. ಸಂತ ಗಾಂಧೀಜಿ ಗಾಂಧೀಜಿಯವರು ಸಂತರಾಗಿ , ಅಧ್ಯಾತ್ಮ ಸಾಧಕರಾಗಿ, ಯೋಗಿಯಾಗಿ ಬೆಳೆದ ಬಗೆ ಅಥವಾ ಆ ದೃಷ್ಟಿಕೋನದಿಂದ ನೋಡಿದಾಗ, ಅವರ ಇನ್ನೊಂದು ಮಗ್ಗಲು / ವ್ಯಕ್ತಿತ್ವ ನಮಗೆ ಗೋಚರವಾಗುವುದು. ಅದರ ಅಲ್ಪ ಪರಿಚಯವನ್ನು ಇಲ್ಲಿ ಕೊಡಲು ಪ್ರಯತ್ನಿಸಿದೆ ಗಾಂಧೀಜಿಯವರ ಬಹುಮುಖ ವ್ಯಕ್ತಿತ್ವ ಗಾಂಧೀಜಿ ಯಾರು? ಎಂಬ ಪ್ರಶ್ನೆಗೆ ಹಲವು ಉತ್ತರಗಳನ್ನು ಕೊಡಬಹುದು. ಗುಜರಾತಿನ ಕರಮಚಂದ್ ಮತ್ತು ಪುತಲೀಬಾಯಿಯವರ ಮಗ, ಅಹಿಂಸಾ ಮಾರ್ಗದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು, ಮಹಾತ್ಮಾ ಗಾಂಧಿ ಅಥವಾ ಮೋಹನ ದಾಸ ಕರಮಚಂದ ಗಾಂಧಿ, ರಾಷ್ಟ್ರ ಪಿತ ಗಾಂಧಿ, ಒಬ್ಬ ಪ್ರಕೃತಿ ಚಿಕಿತ್ಸೆಯ ಪ್ರಯೋಗ ಕಾರ, ಸಸ್ಯ ಆಹಾರದ ಪ್ರಯೋಗಕಾರ, ನಯೀತಾಲಿಂ ವಿದ್ಯಾಭ್ಯಾಸ ಪದ್ದತಿಯ ಪ್ರಯೋಜಕ, ಅಸಾಧಾರಣ ಚಾಣಾಕ್ಷ ರಾಜಕಾರಣಿ, ಸತ್ಯ ಮತ್ತು ಅಹಿಂಸೆಯ ಮೇಲೆ ಜೀವನವಿಡೀ ಪ್ರಯೋಗ ಮಾಡಿದ ಸಾಧಕ - ಹರಿಕಾರ, ಆತ್ಮ ಸಾಧಕ. ಅಪ್ಪಟ ಕರ್ಮಯೋಗಿ ; ಆದರೆ ಇದಾವುದೂ ಗಾಂಧೀಜಿ ಯಾರು ಎಂಬ ಪ್ರಶ್ನೆಗೆ ಪೂರ್ಣವಾದ ಉತ್ತರವಾಗುವುದಿಲ್ಲ. ಏಕೆಂದರೆ ಈ ಉತ್ತರಗಳು ಅವರ ಬಹುಮುಖ ವ್ಯಕ್ತಿತ್ವ, ಸಾಧನೆ, ಪ್ರಯೋಗಗಳನ್ನಾಗಲೀ, ಅವರ ಅಂತಃಸತ್ವವನ್ನಾಗಲೀ, ಅವರ ನಿಜವಾದ ಅಧ್ಯಾತ್ಮಿಕ ವ್ಯಕ್ತಿತ್ವವನ್ನಾಗಲೀ ವಿವರಿಸಲಾರವು. ಆರಂಭಿಕ ಜೀವನ ಭಾರತದಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಗ್ಲೆಂಡಿಗೆ ಕಾನೂನು ಪದವಿ ಪಡೆಯಲು ಹೋದ ಮೋಹನ ದಾಸ ಗಾಂಧಿ ಪಾಶ್ಚಿಮಾತ್ಯ ಪದ್ಧತಿಗೆ ಮನಸೋತರು. ಆದರೆ ಅವರ ಪೂರ್ವ ಸಂಸ್ಕಾರದಿಂದ ಸ್ವಲ್ಪದರಲ್ಲಿಯೇ ಎಚ್ಚೆತ್ತರು. ಅವರು ಬೈಬಲ್ ಬೋಧನೆಗಳಲ್ಲಿ ಬಡವರ ಬಗ್ಗೆ , ದಲಿತರ ಬಗ್ಗೆ ಅವನ ಕಳಕಳಿಯನ್ನು ಓದಿ ಅದರ ಪ್ರಭಾವಕ್ಕೊಳಗಾದರು. ಆಕಸ್ಮಿಕವಾಗಿ ಅವರು ಇಂಗ್ಲಿಷ್ ಭಾಷೆಗೆ ತರ್ಜುಮೆಗೊಂಡ ಭಗವದ್ಗೀತೆಯನ್ನು ಓದಿದರು. ಅಂದಿನಿಂದಲೇ ಅದು ಅವರನ್ನು ಸೆಳೆಯಿತು. ಗೀತೆ ಅವರ ಕೊನೆಯ ಉಸಿರು ಇರುವವರೆಗೂ ಅವರ ಜೀವನದ ಮಾರ್ಗದರ್ಶನದ ಗ್ರಂಥವಾಯಿತು, ಆವರ ತಂದೆ ತಾಯಿಯಿಂದ ಬಂದ ಭಕ್ತಿ, ರಾಮ ನಾಮ ಅವರ ಜೀವನದ ಉಸಿರಾಯಿತು. ಗಾಂಧೀಜೀಯವರೇ ಹೇಳಿದಂತೆ ಅವರ ಜೀವನ ಕ್ರಮವನ್ನೇ ಬದಲು ಮಾಡಿದ ಗ್ರಂಥ,ಜಾನ್ ರಸ್ಕಿನ್ನನ ಅನ್ ಟು ದಿ ಲಾಸ್ಟ್. ಜೋಹಾನ್ಸ ಬರ್ಗ್ ನಿಂದ ಡರ್ಬಿನ್ನಿಗೆ ರೈಲಿನಲ್ಲಿ ಪ್ರಯಾಣ ಮಾಡುವಾಗ ಓದಿದ ಪುಸ್ತಕ. ಅವರ ಮಾತಿನಲ್ಲೇ ಹೇಳುವುದಾದರೆ, 'ನಾನು ಆ ದಿನ ರಾತ್ರಿ ನಿದ್ದೆ ಮಾಡಲಾಗಲಿಲ್ಲ. ನಾನು, ನನ್ನ ಜೀವನವನ್ನು ಆ ಪುಸ್ತಕದಲ್ಲಿ ಹೇಳಿದ ಆದರ್ಶಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದೆ'. ಆ ಗ್ರಂಥದಲ್ಲಿ ಹೇಳಿದ ಆದರ್ಶಗಳು ಮೂರು: ಒಬ್ಬ ವ್ಯಕ್ತಿಯ ಹಿತ, ಎಲ್ಲಾ ಜನರ ಹಿತದಲ್ಲಿದೆ. ಒಬ್ಬ ಲಾಯರನ ಉದ್ಯೋಗವಾಗಲಿ, ಒಬ್ಬ ಕ್ಷೌರಿಕನ ಉದೋಗವಾಗಲೀ ಸಮಾನ ಗೌರವ ಉಳ್ಳದ್ದು. ರೈತನ ಮತ್ತು ಕಾರ್ಮಿಕನ ಉದ್ಯೋಗಗಳು ಶ್ರೇಷ್ಠವಾದವು. ದಕ್ಷಿಣ ಆಫ್ರಿಕಾದಲ್ಲಿ ಹಣ ಸಂಪಾದನೆಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋದ ಅವರ ಜೀವನ ಕ್ರಮ ಬದಲಾಗಿ,ಅವರೊಬ್ಬ ಸಮಾಜ ಸೇವಕರಾಗಿ, ಸತ್ಯಾಗ್ರಹಿಯಾಗಿ, ಪ್ರಾಮಾಣಿಕ ಲಾಯರಾಗಿ ಕೆಲಸಮಾಡಿದ್ದನ್ನು ಕೇಳಿದ್ದೇವೆ. ಟಾಲಸ್ಟಾಯ್ ಫಾರಂ ಅಥವಾ ಫೀನಿಕ್ಷ್ ಆಶ್ರಮ ಸ್ಥಾಪಿಸಿ,ಅಲ್ಲಿ ಗೃಹ ಕೈಗಾರಿಕೆ ಮತ್ತು ಶಿಕ್ಷಣವನ್ನು ಜೊತೆ ಜೊತೆಯಾಗಿ ಪ್ರಯೋಗ ಮಾಡಿ , ಮೂಲ ಶಿಕ್ಷಣ ಸಿದ್ಧಾಂತವನ್ನು (ಬೇಸಿಕ್ ಎಜುಕೇಶನ್) ರೂಪಿಸಿದರು. ತಮ್ಮ ಆದಾಯವನ್ನೆಲ್ಲಾ ಸಮಾಜ ಸೇವೆಗೆ ತ್ಯಾಗ ಮಾಡಿದರು. ಅಂದಿನ ಕಾಲದಲ್ಲಿ ಅವರ ವಾರ್ಷಿಕ ಆದಾಯ ಸುಮಾರು ಅರವತ್ತು ಸಾವಿರ ರೂಪಾಯಿಗೂ ಹೆಚ್ಚು (೧೮೯೩-೧೯೧೫). ಸತ್ಯಾನ್ವೇಷಣೆ ಇವೆಲ್ಲಕ್ಕಿಂತ ಹೆಚ್ಚಾಗಿ ಅವರು, ಅಂತರಂಗದಲ್ಲಿ ಸತ್ಯಾನ್ವೇಶಣೆಗಾಗಿ ಮಾಡಿದ ಸಾಧನೆ ಪ್ರಯೋಗಗಳು ಅಷ್ಟಾಗಿ ಜನರ ಗಮನ ಸೆಳೆದಿಲ್ಲ. ಅವರೂ ಆ ಕುರಿತು ಹೆಚ್ಚಾಗಿ ಬರೆದಿಲ್ಲ. ಅವರ ಅಂತರಂಗ ಸಾಧನೆಗಳನ್ನು ಕಂಡು ಬರೆದವರು ವಿರಳ. ಆದರೆ ಅವರು ತಮ್ಮ ಆತ್ಮ ಚರಿತ್ರೆಗೆ ಸತ್ಯಾನ್ವೇಷಣೆಯ ಪ್ರಯೋಗಗಳು, ಎಂದು ಹೆಸರಿಸಿದ್ದಾರೆ. ಅವರು ನಂಬಿದ ದೇವರು ಸತ್ಯ. ಸತ್ಯ ವೆಂದರೆ ಉಪನಿಷತ್ತು , ಗೀತೆಯಲ್ಲಿ ಹೇಳಿದ ಸತ್ ಅರ್ಥಾತ್ ಈ ವಿಶ್ವವನ್ನು ಆವರಿಸಿರುವ - ನಡೆಸುವ ಚೇತನ. ಅದರ ಸಾಕಾರ ಮೂರ್ತಿ ಅಥವಾ ಶಬ್ದರೂಪವೇ ಅವರು ನಂಬಿದ ಶ್ರೀ ರಾಮ ತಾರಕ ಮಂತ್ರ. ಅವರು ಗೀತೆ ಮೊದಲಾದ ಅನೇಕ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ , ಜಪ, ಧ್ಯಾನ, ಪ್ರಾರ್ಥನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಅವರು ತಮ್ಮ ಪತ್ನಿಯನ್ನು ಒಪ್ಪಿಸಿಕೊಂಡು,ಬ್ರಹ್ಮಚರ್ಯವನ್ನು ಪಾಲಿಸುತ್ತಾ, ರಾತ್ರಿಯಲ್ಲಿ ಧ್ಯಾನ ಜಪಗಳ ಸಾಧನೆ ನಡೆಸಿದರು. ಅವರ ಆತ್ಮ ಕಥೆಯಲ್ಲಿ ಆ ವಿಚಾರ ಸ್ವಲ್ಪ ಬಂದಿದೆ. ಅವರ ಶೋಧನೆ ಸಾಧನೆಗಳು, ವಿಶ್ವ ಚೇತನವಾದ ಪರಬ್ರಹ್ಮವಸ್ತುವೆಂದು ಕರೆಯಲ್ಪಡುವ ಆ ಸತ್ಯವೇ ಆಗಿತ್ತು. ಅವರು ಧರ್ಮ,ಧ್ಯಾನ, ಸಾಧನೆಗಳಲ್ಲಿ ಅನುಮಾನ, ತೊಡಕು ಉಂಟಾದಾಗ ತಮ್ಮ ಧಾರ್ಮಿಕ ಗುರುವೆಂದು ನಂಬಿದ ಅವರ ಮಿತ್ರರೂ, ಜ್ಞಾನಿಯೂ ಆದ ಬೊಂಬಾಯಿನ (ರಾಜಕೋಟೆ ಯವರು) ರಾಯಚಂದ ಭಾಯಿಯವರಿಂದ ಪತ್ರ ಮುಖೇನ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು. ಶ್ರೀಮದ್ ರಾಯ್ ಚಂದಭಾಯಿ ಯವರ ಮಾರ್ಗದರ್ಶನ ಗಾಂಧೀಜಿ ಸಮಾಜ ಸೇವೆಯ ಜೊತೆ ಜೊತೆಯಲ್ಲಿಯೇ ತೀವ್ರ ತರ ಅದ್ಯಾತ್ಮಕ ಸಾಧನೆಯಲ್ಲಿ ತೊಡಗಿದ್ದರು. ಗೀತೆ ಅವರ ಕೈಗನ್ನಡಿಯಾಗಿದ್ದರೆ, ಶ್ರೀಮದ್ ರಾಯ್ ಚಂದಭಾಯಿಯವರು ಅವರ ಅದ್ಯಾತ್ಮಿಕ ಗುರುಗಳೂ ಮಿತ್ರರೂ ಆಗಿದ್ದರು. ಗಾಂಧೀಜಿಯವರ ಕ್ರಿಶ್ಚಿಯನ್ ಮಿತ್ರರು ಅವರಿಗೆ ಕ್ರಿಶ್ಚಿಯಯನ್ ಧರ್ಮದಲ್ಲಿರುವ ಆನೇಕ ಉತ್ತಮ ಆದರ್ಶ ಗುಣಗಳಾದ ದಾನ-ಧರ್ಮ, ಬ್ರಹ್ಮಚರ್ಯ ಮಹತ್ವ, ದೇವನಲ್ಲಿ ಮತ್ತು ದೇವದೂತನಲ್ಲಿ ಅಚಲ ನಂಬುಗೆಯ ಮನಸ್ಥಿತಿ ಮೊದಲಾದ ವಿಷಯಗಳನ್ನು ಹೇಳಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಲು ಗಾಂಧೀಜೀ ಯವರನ್ನು ಒತ್ತಾಯಿಸಿದಾಗ ಅವರಿಗೆ ನೆನಪಾದುದು ಜ್ಞಾನಿಯೂ ವಿದ್ವಾಂಸರೂ ಇವರ ಮಿತ್ರರೂ ಅಧ್ಯಾತ್ಮ ಗುರುಗಳೂ ಆದ ಶ್ರೀ ರಾಯ್‌ಚಂದಭಾಯಿ ಯವರು. ಗಾಂಧೀಜೀಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವ ಮೊದಲು ತಾವು ಇರುವ ಹಿಂದೂ ಧರ್ಮ ದಲ್ಲಿ ಏನಾದೂ ಕೊರತೆ ಇದೆಯೇ ಅದು ಎಲ್ಲಾ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವುದೇ, ಎಂದು ತಿಳಿಯಬೇಕಿತ್ತು. ಅದಕ್ಕಾಗಿ ಅವರು ಶ್ರೀ ರಾಜಚಂದಭಾಯಿಯವರಿಗೆ ಒಂದು ಪತ್ರ ಬರೆದು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಗಾಂಧೀಜೀಯವರು ಹೇಳುತ್ತಾರೆ , " ಶ್ರೀಮದ್ ರವರ ಉತ್ತರ ಅತ್ಯಂತ ತಾರ್ಕಿಕವೂ, ಮನಸ್ಸಿಗೆ ಒಪ್ಪುವಂತಹದೂ ಆಗಿತ್ತು". "ನನ್ನ ಎಲ್ಲಾ ಸಂಶಯ ಗಳೂ ನಿವಾರಣೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರುವುದರಿಂದ ಬಿಡುಗಡೆಗೊಂಡೆ ಎಂದಿದ್ದಾರೆ. ಆ ನಂತರ ಶ್ರೀ ರಾಜಚಂದಭಾಯಿಬಗ್ಗೆ ನನಗೆ ಇನ್ನೂ ಹೆಚ್ಚಿನ ಗೌರವ ಬೆಳೆಯಿತು ಮತ್ತು ಅವರನ್ನು ಆ ನಂತರ ನನ್ನ ಧಾರ್ಮಿಕ ಮಾರ್ಗದರ್ಶಕರೆಂದು ಅವರು ಬದುಕಿರುವವರೆಗೂ ಭಾವಿಸಿ ದ್ದೆ", ಎಂದಿದ್ದಾರೆ. ಶ್ರೀ ರಾಯ್‌ಚಂದಭಾಯಿ - ಪರಿಚಯ ಶ್ರೀ ರಾಯ್‌ಚಂದಭಾಯಿ : (೯-೧೧-೧೮೬೭ ;: ೯-೪-೧೯೦೧); ಶ್ರೀ ರಾಯ್ ಚಂದ್ ಭಾಯಿ ಯವರ ಪೂರ್ಣ ಹೆಸರು, ರಾಜ್ ಚಂದ್ ಭಾಯಿ, ರಾವ್‌ಜೀ ಭಾಯಿ ಮೆಹ್ತಾ. ಅವರನ್ನು ಅವರ ಭಕ್ತರು ಶ್ರೀಮದ್ ರಾಜ್ ಚಂದ್ರ ಎಂದು ಕರೆಯುತ್ತಿದ್ದರು. ಅವರು ಭಗವಾನ್ ಮಹಾವೀರರ ಉಪದೇಶಗಳನ್ನು ವಿವರಿಸುತ್ತಿದ್ದ ಬಗೆಯನ್ನು ಮೆಚ್ಚಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆವರ ಆ ಉಪದೇಶಗಳ ಅರ್ಥವಿವರಣೆ ಅತ್ಯಂತ ಆಳವಾದ ಜ್ಞಾನದಿಂದ ಕೂಡಿರುತ್ತಿತ್ತು. ಅವರು ಜೈನರಾದರೂ ಶ್ರೀಕೃಷ್ಣನ ಭಕ್ತರಾಗಿದ್ದರು.. ಅವರು ಯಾವಾಗಲೂ ಜ್ಞಾನಿಯ ಉನ್ನತ ಸ್ಥಿತಿಯಲ್ಲಿರುತ್ತಿದ್ದರು; ಮಹಾ ಮೇಧಾವಿಯೂ , ಸಾಹಿತ್ಯ-ಭಾಷಾ ವಿದ್ವಾಂಸರೂ ಆಗಿದ್ದರು. ಅವರು ಗುಜರಾತಿನ ವವಾನಿಯಾ ಬಂದರಿನಲ್ಲಿ ೯-೧೧-೧೮೬೭ ರಲ್ಲಿ ಜನಿಸಿದರು; ರಾಜಕೋಟೆಯಲ್ಲಿ ದಿ.೯-೪-೧೯೦೧ರಲಿ ದೇಹತ್ಯಾಗ ಮಾಡಿದರು. ಅವರು ಗಾಂಧೀಜಿಯ ಧಾರ್ಮಿಕ ಮಾರ್ಗದರ್ಶಿ, ಸಹಾಯಕರಾಗಿ ಪ್ರಸಿದ್ಧರು. ಅವರು ಗಾಂಧೀಜೀಯ ಸ್ನೇಹಿತರೂ ಆಗಿದ್ದರು. ಗಾಂಧೀಜಿ ಮತ್ತು ಶ್ರೀಮದ್ ಅವರ ಮಧ್ಯೆ ಅವರ (ಶ್ರೀಮದ್ )ಅಂತ್ಯ ಕಾಲದವರೆಗೂ (೧೯೦೧), ಪತ್ರ ವ್ಯವಹಾರ ನೆಡೆಯುತ್ತಿದ್ದಿತು. *ಗಾಂಧೀಜಿಯವರು, ನಾನು ಧಾರ್ಮಿಕ ತತ್ವದ ಅಮೃತವನ್ನು ನನ್ನ ಹೃದಯ ತುಂಬುವಷ್ಟು ಕುಡಿದಿದ್ದೇನೆ ಅದನ್ನು ನನಗೆ ಕರುಣಿಸಿ ಕೊಟ್ಟವರು ಶ್ರೀಮದ್ ರಾಜ್ ಚಂದ್ ಭಾಯಿ, ಎಂದಿದ್ದಾರೆ.(ಹೆಚ್ಚಿನ ವಿವರಕ್ಕೆ, ವಿಕಿಪೀಡಿಯಾ ಇಂಗ್ಲಿಷ್ ವಿಬಾಗದ, ಶ್ರೀಮದ್ ರಾಜ್ ಚಂದ್ ಭಾಯಿ, ತಾಣಕ್ಕೆ ಹೋಗಿ ನೋಡಿ)ಗಾಂಧೀಜೀ ಅವರ ಬಹಿರಂಗ ಜೀವನದ ನಡವಳಿಕೆಯಲ್ಲಿ ಅಹಿಂಸೆ ಮತ್ತು ಸತ್ಯದ ಮಾರ್ಗ ಅವರು ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವುದಕ್ಕೆ ಸಾಧನವಾಗಿತ್ತು. ಅದು ರಾಜಕೀಯವಿರಲಿ, ಸಮಾಜ ಸೇವೆ ಇರಲಿ, ಶಿಕ್ಷಣದ ಪ್ರಯೋಗವಿರಲಿ, ತಮ್ಮ ಅಂತರಂಗದ ಸಾಧನೆಗೆ ವಿರೋಧವುಂಟಾಗದಂತೆ ಅಹಿಂಸೆ ಮತ್ತು ಸತ್ಯದ ಮಾರ್ಗವನ್ನು ಅನುಸರಿಸಿದ್ದರು. ಗಾಂಧೀಜೀ ಅವರ ಆತ್ಮ ಶಕ್ತಿ ಗಾಂಧೀಜೀ ಅವರ ನಿರ್ಭಯತೆ, ಅಗಾಧ ಆತ್ಮ ಶಕ್ತಿ, ಅಸಾಧಾರಣ ಸಂಕಲ್ಪ ಶಕ್ತಿಗಳು ಈ ಅಧ್ಯಾತ್ಮ ಸಾಧನೆಯ ಫಲ ಎಂಬುದರಲ್ಲಿ ಸಂಶಯವಿಲ್ಲ. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತದ ಅಂದಿನ ನಲವತ್ತು ಕೋಟಿ ಜನರ, ವಿದ್ಯಾವಂತರ, ಅವಿದ್ಯಾವಂತರ, ಹೆಂಗಸರ,ಮಕ್ಕಳ, ಹೃದಯವನ್ನು ತಟ್ಟಿದ, ಮಿಡಿದ ವ್ಯಕ್ತಿ; ಇಂಥವರು ಜಗತ್ತಿನ ಇತಿಹಾಸದಲ್ಲಿ ಸಿಗಲಾರರು; ಮುಂದೆ ಸಿಗುವರೆಂಬ ಭರವಸೆಯೂ ಇಲ್ಲ. ವಿವೇಕಾನಂದರ ನಂತರ ಬಂದ ಮಹಾಯೋಗಿ ಪರಮಹಂಸ ಯೋಗಾನಂದರು, ಗಾಂಧೀಜೀಯ ಆತ್ಮ ಪ್ರಭೆಯು (ಅವುರಾ) ಅವರ ದೇಹದಿಂದ ಬಹು ದೂರದ ವರೆಗೆ ಅಲೆ ಅಲೆಯಾಗಿ ಪಸರಿಸುತ್ತಿರವುದನ್ನು ತಮ್ಮ ಯೋಗ ದೃಷ್ಟಿಯಲ್ಲಿ ಕಂಡುದಾಗಿ ಹೇಳಿದ್ದಾರೆ. (ಯೋಗಾನಂದರ ಆತ್ಮ ಚರಿತ್ರೆ). ಅವರು, ಗಾಂಧೀಜೀ ತಮ್ಮ ದೇಹ ಭಾವ ಮತ್ತು ಪಂಚೇಂದ್ರಿಯಗಳಿಂದ ತಮ್ಮ ಚಿತ್ತವನ್ನು ಸುಲಭವಾಗಿ ಕಳಚಿಕೊಳ್ಳಬಲ್ಲವರಾಗಿದ್ದುದನ್ನು ತಿಳಿಸಿದ್ದಾರೆ. ಅವರು(ಗಾಂಧೀಜಿ) ತಮ್ಮ ಅಪೆಂಡಿಸೈಟಿಸ್ ಆಪರೇಶನ್ ಸಮಯದಲ್ಲಿ ಅರವಳಿಕೆ (ಅನಿಸ್ತೀಶಿಯ) ತೆಗೆದುಕೊಳ್ಳದೆ, ಅದೇ ಸಮಯದಲ್ಲಿ ಪಕ್ಕದಲ್ಲಿದ್ದವರೊಡನೆ ಮಾತಾಡುತ್ತಿದ್ದುದನ್ನು ಉದಾಹರಿಸಿದ್ದಾರೆ. ಗಾಂಧೀಜೀ ತಮ್ಮ ತೀರ್ಮಾನಗಳನ್ನು ತಾರ್ಕಿಕವಾಗಿ ವಿವರಿಸಲು ಅಸಾಧ್ಯವಾದಾಗ,ತಮ್ಮ ಅಂತರಂಗದ ವಾಣಿ ಯ ಅನುಸಾರವಾಗಿ ನಡೆಯುತ್ತಿದುದಾಗಿ ಹೇಳತ್ತಿದ್ದರು. *ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಅವರನ್ನು ಹತ್ಯೆ ಗೈದವರು ಗಾಂಧೀಜೀಯ ವ್ಯಕ್ತಿತ್ವಕ್ಕೆ ಹೋಲಿಸಿದಾಗ ಅತ್ಯಂತ ಕುಬ್ಜರು, ಅಲ್ಪರು. ಹತ್ಯೆ ಗೈದವರ ವ್ಯಕ್ತಿತ್ವ ಶೂನ್ಯವಾಗುತ್ತದೆ. ಒಬ್ಬ ಸಂತನ ಹತ್ಯೆಯನ್ನು ಸಮರ್ಥಿಸಿಕೊಳ್ಳವುದು ಅಲ್ಪತನವಾಗುವುದು. ಅವರ ಹತ್ಯೆಯಾದಾಗ ವ್ಯಾಟಿಕನ್ ಪೋಪರು ತಾವು ಒಬ್ಬ ಕ್ರೈಸ್ತ ಸಂತನನ್ನು ಕಳೆದುಕೊಂಡಷ್ಟೇ ದುಃಖವಾಗಿದೆ ಎಂದರು. ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟಿನ್ ರಕ್ತ ಮಾಂಸಗಳಿಂದ ಕೂಡಿದ ಇಂಥ ಒಬ್ಬ ವ್ಯಕ್ತಿ ಈ ಭೂಮಿಯ ಮೇಲೆ ನೆಡೆದಾಡಿದ್ದರೆಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹುದು, ಎಂದರು. ಅಹಿಂಸೆ, ಶಾಂತಿ ಮತ್ತು ದೈವಿಕ ಪ್ರೇಮದ ಸಿದ್ಧಿ ಅವರ ಗುರಿ. ದ್ವೇಷವೇ ಇಲ್ಲದ ಜಗತ್ತು ಅವರ ಕನಸು. ಸರ್ವತ್ರ ಪ್ರೇಮ ಅವರ ಬದುಕು. ತಮ್ಮಂತೆ ಇತರರೂ ಸರ್ವತ್ರ ಪ್ರೇಮವನ್ನು ತೋರಬೇಕೆಂಬ ಅವರ ಬಯಕೆ ಮತ್ತು ಒತ್ತಾಸೆ ಅವರ ಜೀವಕ್ಕೆ ಮುಳುವಾಯಿತು. ಆದರೆ, ಅವರ ಆದರ್ಶ, ರಾಮರಾಜ್ಯದ ಕನಸು, ಸ್ವಯಂ ಪೂರ್ಣ ಗ್ರಾಮ ರಾಜ್ಯದ ಆರ್ಥಿಕ ಸಿದ್ದಾಂತ, ಪ್ರಸ್ತುತ ಮತ್ತು ಸದಾ ಜೀವಂತ. ಸಂತರ ದೇಹಕ್ಕೆ ಅಳಿವಿದ್ದರೂ, ಅವರ ಆದರ್ಶ, ಸಂಕಲ್ಪಗಳಿಗೆ ಸಾವಿಲ್ಲ. ಓಂ ಶಾಂತಿಃ ಶಾಂತಿಃ ಶಾಂತಿಃ || An Autobiography Of A Yogi - Paramahamsa Yogananda. ಇವನ್ನೂ ನೋಡಿ ಗಾಂಧಿ ಸ್ಮರಣಾರ್ಥ ಅಂತರರಾಷ್ಟ್ರೀಯ ಪ್ರತಿಷ್ಠಾನ ಗಾಂಧಿ ಜಯಂತಿ ಗಾಂಧಿ ಶಾಂತಿ ಪ್ರಶಸ್ತಿ ಕನ್ನಡ ನೆಲದಲ್ಲಿ ಗಾಂಧಿ ಗಾಂಧೀಜಿಯವರ ಆರೋಗ್ಯದ ತೊಂದರೆ:ರಕ್ತದೊತ್ತಡ ಹೆಚ್ಚಿಸಿತ್ತು ಬೋಸ್‌ ಜೊತೆಗಿನ ತಿಕ್ಕಾಟ;; ಐಸಿಎಂಆರ್‌ನಿಂದ ಗಾಂಧೀಜಿ ಆರೋಗ್ಯ ಕುರಿತ ದಾಖಲೆಗಳು ಬಹಿರಂಗ ;ಪ್ರಜಾವಾಣಿ ;d: 26 ಮಾರ್ಚ್ 2019 ಹೆಚ್ಚಿನ ಓದಿಗೆ ಗಾಂಧಿ ಹತ್ಯೆ ಸಂಚಿನ ವಿವರಗಳು ಹತ್ಯೆಯ ಹತ್ತು ದಿನಗಳ ಮೊದಲೇ ಅಂದಿನ ಸರ್ಕಾರಕ್ಕೆ ತಿಳಿದಿತ್ತು. 1948ರ ಜನವರಿ 20ರಂದು ಗಾಂಧಿ ಹತ್ಯೆಯ ಯತ್ನ ವಿಫಲವಾಗಿತ್ತು. ಮಹಾತ್ಮನನ್ನು ಕೊಲ್ಲುವ ಐದನೆಯ ವಿಫಲ ಯತ್ನ ನಡೆದಿತ್ತು. 1934ರಲ್ಲಿ ಅಸ್ಪೃಶ್ಯತೆಯ ವಿರುದ್ಧ ದೇಶವ್ಯಾಪಿ ಪ್ರವಾಸದ ಅಂಗವಾಗಿ ಪುಣೆಗೆ ತೆರಳಿದ್ದರು ಗಾಂಧೀಜಿ. ಭಾಷಣ ಮಾಡುವ ಮುನ್ನ ಅವರ ಕಾರಿನತ್ತ ತೂರಿ ಬಂದಿತ್ತು ಬಾಂಬು. ಪೊಲೀಸ್ ಕಾನ್‌ಸ್ಟೆಬಲ್‌ಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಂಧಿ ಹತ್ಯೆಯ ಮೂಲ ಕಾರಣ ಎಂದು ಹೇಳಲಾಗುವ ದೇಶವಿಭಜನೆಯ ಪ್ರಶ್ನೆಯಾಗಲೀ, ಪಾಕಿಸ್ತಾನಕ್ಕೆ ₹ 55 ಕೋಟಿ ನೀಡುವ ವಿಚಾರವಾಗಲೀ ಆಗ ಇರಲಿಲ್ಲ. ಡಿ. ಉಮಾಪತಿ;ನಾಥೂರಾಮನನ್ನು ತಡೆದು ನಿಲ್ಲಿಸಬಹುದಿತ್ತು;23 Jan, 2017 ರಾಮಚಂದ್ರ ಗುಹಾ;ಕೋಮು ಸಂಘರ್ಷ: ಗಾಂಧಿವಾದಿ ದೃಷ್ಟಿಕೋನ;3 Mar, 2017 ರಾಮಚಂದ್ರ ಗುಹಾ;ಪಶ್ಚಿಮದ ಚಿಂತನೆಯಿಂದ ಸುಧಾರಕನಾದ ಗಾಂಧಿ;12 May, 2017 ಸುದೀರ್ಘ ಕಥನ: ‘ಗಾಂಧಿ@150’ ಕರುನಾಡಲ್ಲಿ ಮಹಾತ್ಮನ ಹೆಜ್ಜೆ;02 ಅಕ್ಟೋಬರ್ 2018, ‘ಗಾಂಧಿ–150’ ವಿಶೇಷ;‘ಮಹಾತ್ಮ ಗಾಂಧೀಜಿ ಹಚ್ಚಿದ ಬೆಳಕಲ್ಲಿ...’: ಎಚ್.ಡಿ. ಕುಮಾರಸ್ವಾಮಿ ಲೇಖನ;ಎಚ್.ಡಿ. ಕುಮಾರಸ್ವಾಮಿ; 02 ಅಕ್ಟೋಬರ್ 2018, ‘ಗಾಂಧಿ–150’ ವಿಶೇಷ;ಬೇಕಾಗಿದ್ದಾನೆ: ಗಾಂಧಿಯ ಹೆಗಲೇರಿದ ಗಾಂಧಿ;ಡಾ. ಸಿದ್ದನಗೌಡ ಪಾಟೀಲ; 02 ಅಕ್ಟೋಬರ್ 2018 ಗಾಂಧಿ–150’ ವಿಶೇಷ;ಮಹಾತ್ಮನ ಮರೆತು ಭಾರತ ಬೆಳಗಬಹುದೆ?;ಡಾ. ರೋಹಿಣಾಕ್ಷ ಶಿರ್ಲಾಲು;02 ಅಕ್ಟೋಬರ್ 2018 ಭದ್ರತೆಗೆ ಗಾಂಧಿ ಒಪ್ಪಿದ್ದರೆ ಹತ್ಯೆ ತಪ್ಪಿಸಬಹುದಿತ್ತು: ಕಲ್ಯಾಣಮ್‌;ಪಿಟಿಐ;30 ಜನವರಿ 2019, ಮಹಾತ್ಮನ ಮರೆತು ಭಾರತ ಬೆಳಗಬಹುದೇ?; ಡಾ> ರೋಹಿಣಾಕ್ಷ ಶೀರ್ಲಾಲು;೨-೧೦-೨೦೧೮ ಆಧಾರ ಗಾಂಧೀಜೀಯವರ ಆತ್ಮ ಚರಿತ್ರೆ - ಸತ್ಯಶೋಧನೆ ( ಅನುವಾದ- ಬೆಟಗೇರಿ ಕೃಷ್ಣ ಶರ್ಮ ) An Autobiography Of A Yogi - Paramahamsa Yogananda. ವಿಕಿಪೀಡಿಯಾದ - ಶ್ರೀಮದ್ ರಾಯಚಂದ್ ಭಾಯಿ ಯವರ ತಾಣಗಳು ಯೋಗಿ "ಶ್ರೀಮದ್ ರಾಯಚಂದ್ ಭಾಯಿ ಯವರ ಸ್ವಂತ ಅಂತರ್ ಜಾಲ ತಾಣಗಳು. http://www.cs.colostate.edu/~malaiya/rajchandra.html ಗಾಂಧೀಜಿಯವರ ಲೇಖನಗಳು. The Last Phase part 1 and 2: By Pyarelal Unto The Last (Ruskin) - By Gandhiji http://en.wikipedia.org/wiki/Shrimad_Rajchandra ಟಿಪ್ಪಣಿಗಳು ಹೆಚ್ಚುವರಿ ಓದಿಗಾಗಿ ಭನ್ನ,ಸುರೇಂದ್ರ ಮತ್ತು ಗೂಲಮ್‌ ವಹೀದ್. ದಿ ಮೇಕಿಂಗ್ ಆಫ್ ಪೊಲಿಟಿಕಲ್ ರಿಫಾರ್ಮರ್: ಗಾಂಧಿ ಇನ್‌ ಸೌತ್‌ ಆಫ್ರಿಕಾ, 1893–1914.. ನವ ದೆಹಲಿ: ಮನೋಹರ್‌, 2005. ಬಂಡ್ಯುರಾಂಟ್, ಜಾನ್‌ V. ಕಂಕ್ವೆಸ್ಟ್‌ ಆಫ್‌ ವಯೊಲೆನ್ಸ್‌: ದಿ ಗಾಂಧಿಯನ್‌ ಫಿಲಾಸಫಿ ಆಫ್‌ ಕಾನ್‌ಫ್ಲಿಕ್ಟ್‌ . ಪ್ರಿನ್ಸ್‌ಟನ್‌ UP, 1988 ISBN 0-691-02281-X ಚರ್ನಸ್‌, ಇರಾ. ಅಮೆರಿಕನ್‌ ನಾನ್‌ವಯಲೆನ್ಸ್‌: ದಿ ಹಿಸ್ಟರಿ ಆಫ್ ಆನ್ ಐಡಿಯಾ , ಅಧ್ಯಾಯ 7. ISBN 1-57075-547-7 ಚಧಾ, ಯೊಗೇಶ್. ಗಾಂಧಿ: ಎ ಲೈಫ್‌. ISBN 0-471-35062-1 ಡಾಲ್ಟನ್‌, ಡೆನ್ನಿಸ್‌ (ed). ಮಹಾತ್ಮ ಗಾಂಧಿ: ಸೆಲೆಕ್ಟೆಡ್ ಪೊಲಿಟಿಕಲ್‌ ರೈಟಿಂಗ್ಸ್‌ . ಇಂಡಿಯನಾಪೊಲಿಸ್‌/ಕೇಂಬ್ರಿಡ್ಜ್‌: ಹ್ಯಾಕೆಟ್ಟ್‌ ಪಬ್ಲಿಕೇಶನ್ ಕಂಪನಿ, 1996. ISBN 0-87220-330-1 ಈಸ್ವರನ್‌, ಏಕನಾಥ್‌. ಗಾಂಧಿ ದಿ ಮ್ಯಾನ್‌ . ISBN 0-915132-96-6 ಫಿಷರ್‌, ಲ್ಯೂಯಿಸ್‌. ದಿ ಎಸೆನ್ಷಿಯಲ್‌‌ ಗಾಂಧಿ: ಆನ್‌ ಆಂಥಾಲಜಿ ಆಫ್‌‍ ಹಿಸ್‌ ರೈಟಿಂಗ್ಸ್‌ ಆನ್‌ ಹಿಸ್‌ ಲೈಫ್, ವರ್ಕ್‌, ಅಂಡ್‌ ಐಡಿಯಾಸ್‌ . ವಿಂಟೇಜ್‌: ನ್ಯೂ ಯಾರ್ಕ್, 2002. (ಪುನರ್ಮುದ್ರಣ ಆವೃತ್ತಿ) ISBN 1-4000-3050-1 ಫಿಷರ್ಲ್ಯೂಯಿಸ್‌. ದಿ ಲೈಫ್‌ ಆಫ್‌ ಮಹಾತ್ಮ ಗಾಂಧಿ . ಹಾರ್ಪರ್ & ರೊ, ನ್ಯೂ ಯಾರ್ಕ್, 1950. ISBB 0-06-091038-0 (1983 pbk.) ಗಾಂಧಿ, M.K. ಸತ್ಯಾಗ್ರಹ ಇನ್ ಸೌತ್‌ ಆಫ್ರಿಕಾ ಗಾಂಧಿ, M.K. ದಿ ಗಾಂಧಿ ರೀಡರ್‌: ಎ ಸೋರ್ಸ್‌ಬುಕ್ ಆಫ್‌ ಹಿಸ್‌ ಲೈಫ್‌ ಅಂಡ್‌ ರೈಟಿಂಗ್ಸ್‌ . ಹೋಮರ್‌ ಜಾಕ್‌ (ed.) ಗ್ರೋವ್‌ ಪ್ರೆಸ್‌, ನ್ಯೂ ಯಾರ್ಕ್, 1956. ಗಾಂಧಿ, ಮಹಾತ್ಮ. ದಿ ಕಲೆಕ್ಟೆಡ್‌ ವರ್ಕ್ಸ್‌ ಆಫ್‌ ಮಹಾತ್ಮ ಗಾಂಧಿ. ನವ ದೆಹಲಿ: ಪ್ರಕಟಣಾ ವಿಭಾಗ, ಮಾಹಿತಿ ಮತ್ತು ಪ್ರಸರಣಾ ಇಲಾಖೆ, ಭಾರತ ಸರ್ಕಾರ, 1994. ಗಾಂಧಿ, ರಾಜ್‌ಮೋಹನ್‌. ಪಟೇಲ್‌: ಎ ಲೈಫ್‌ . ನವಜೀವನ್‌ ಪಬ್ಲಿಷಿಂಗ್ ಹೌಸ್, 1990 ISBN 81-7229-138-8 ಗ್ರೈನೆರ್, ರಿಚರ್ಡ್‌. ದಿ ಗಾಂಧಿ ನೋಬಡಿ ನೋಸ್ . ವಿಮರ್ಶೆ, ಮಾರ್ಚ್‌ 1983 ಗೊರ್ಡನ್‌, ಹೈಮ್. ಎ ರಿಜೆಕ್ಷನ್‌ ಆಫ್‌ ಸ್ಪಿರಿಚ್ಯುಯಲ್‌ ಇಂಪೀರಿಯಲಿಸಮ್‌: ರಿಫ್ಲೆಕ್ಷನ್ಸ್‌ ಆನ್‌ ಬರ್ಬರ್‌'ಸ್‌ ಲೆಟರ್‌ ಟು ಗಾಂಧಿ. ಜರ್ನಲ್‌ ಆಫ್‌ ಎಕನಾಮಿಕಲ್‌ ಸ್ಟಡೀಸ್‌,. , 22 ಜೂನ್‌ 1999. ಹಂಟ್, ಜೇಮ್ಸ್‌ D. ಗಾಂಧಿ ಇನ್ ಲಂಡನ್‌ . ನವ ದೆಹಲಿ: ಪ್ರೊಮಿಲ್ಲ & Co., ಪಬ್ಲಿಶರ್ಸ್‌, 1978. ಮನ್ನ್‌, ಬರ್ನಾರ್ಡ್, ದಿ ಪೆಡೊಲಾಜಿಕಲ್‌ ಅಂಡ್‌ ಪೊಲಿಟಿಕಲ್‌ ಕಾನ್ಸೆಪ್ಟ್ಸ್ ಆಫ್ ಮಹಾತ್ಮ ಗಾಂಧಿ ಅಂಡ್ ಪೌಲ್ ಫ್ರೈಯರೆ. In: ಕ್ಲಾಬೆನ್‌, B. (Ed.) ಇಂಟರ್‌ನ್ಯಾಷಿನಲ್ ಸ್ಟಡೀಸ್ ಇನ್ ಪೊಲಿಟಿಕಲ್ ಸೋಷಿಯಲೈಸೇಶನ್ ಅಂಡ್ ಎಜುಕೇಶನ್. Bd. 8. ಹ್ಯಾಮ್‌ಬರ್ಗ್ 1996. ISBN 3-926952-97-0 ರ್ಯುಹೆ, ಪೀಟರ್. ಗಾಂಧಿ:ಎ ಪೊಟೊಬಯಾಗ್ರಫಿ. ISBN 0-7148-9279-3 ಶಾರ್ಪ್, ಜೀನ್. ಗಾಂಧಿ ಆಸ್ ಎ ಪೊಲಿಟಿಕಲ್‌ ಸ್ಟ್ರಾಟಜಿಸ್ಟ್ , ವಿತ್ ಎಸ್ಸೇಸ್‌ ಆನ್ ಎಥಿಕ್ಸ್‌ ಅಂಡ್ ಪೊಲಿಟಿಕ್ಸ್‌ . ಬೋಸ್ಟನ್‌: ಎಕ್ಸ್‌ಟೆಂಡಿಂಗ್ ಹೊರೈಜನ್ ಬುಕ್ಸ್, 1979. ಸಿಂಗ್‌, Col. G. B. ಗಾಂಧಿ ಬಿಹೈಂಡ್ ದಿ ಮಾಸ್ಕ್ ಆಫ್ ಡಿವಿನಿಟಿ . ಪ್ರೊಮೆಥಿಯಸ್ ಬುಕ್ಸ್, 2004. ISBN 978-1573929981 ಸಿಂಗ್‌, Col. G. B. ಮತ್ತು ವ್ಯಾಟ್ಸನ್‌, Dr. ಟಿಮ್‌ ಗಾಂಧಿ ಅಂಡರ್ ಕ್ರಾಸ್ ಎಕ್ಸಾಮಿನೇಷನ್ , ಸವರನ್ ಸ್ಟಾರ್ ಪಬ್ಲಿಶಿಂಗ್, 2008. ISBN 0981499201 ಸೋಫ್ರಿ, ಜಿಯನ್ನಿ. ಗಾಂಧಿ ಅಂಡ್ ಭಾರತ: ಎ ಸೆಂಚುರಿ ಇನ್ ಫೋಕಸ್. (1995) ISBN 1-900624-12-5 ಹೊರಗಿನ ಕೊಂಡಿಗಳು ವಿಕಿಸೋರ್ಸ್‌ನಲ್ಲಿ ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ Gandhi's biography from Stanford's King Encyclopedia ಗಾಂಧಿ- ದಿ ಯೂನಿವರ್ಸಲ್ ಗುರು ಗಾಂಧಿ ಸ್ಮೃತಿ — ಭಾರತ ಸರ್ಕಾರದ ಜಾಲತಾಣ ಮಹಾತ್ಮ ಗಾಂಧಿ ಸುದ್ದಿ ಸಂಶೋಧನೆ ಮತ್ತು ಮಾಧ್ಯಮ ಸೇವೆ ಮಹಾತ್ಮ ಗಾಂಧಿ ಎ ವೋಟರಿ ಆಫ್ ಸಸ್ಟೈನಬಲ್ ಲಿವಿಂಗ್ ಮಾಣಿ ಭವನ ಗಾಂಧಿ ಸಂಗ್ರಹಾಲಯ ಗಾಂಧಿ ಮ್ಯೂಸಿಯಂ & ಲೈಬ್ರರಿ ಗಾಂಧಿ ಪುಸ್ತಕ ಕೇಂದ್ರ ಮಹಾತ್ಮ ಗಾಂಧಿಯವರ ಕೆಲಸಗಳು ಅಮೆರಿಕದ ಸೊಕಾ ವಿಶ್ವವಿದ್ಯಾನಿಲಯದಲ್ಲಿನ ಗಾಂಧಿ ಸಭಾಂಗಣ ಮತ್ತು ಪ್ರತಿಮೆ ಗಾಂಧಿಯವರು ಶ್ರೀ ಲಂಕಾದ ಗೌರವಾನ್ವಿತ ಅಥಿತಿಯಾಗಿದ್ದರು ವರ್ಗ:ಸ್ವಾತಂತ್ರ್ಯ ಹೋರಾಟಗಾರರು ವರ್ಗ:ಭಾರತದ ಗಣ್ಯರು ವರ್ಗ:ಭಾರತೀಯ ಇತಿಹಾಸದ ಪ್ರಮುಖರು ವರ್ಗ:೧೮೬೯ ಜನನ ವರ್ಗ:೧೯೪೮ ನಿಧನ ವರ್ಗ:20ನೇ-ಶತಮಾನದ ತತ್ವ ಜ್ಞಾನಿಗಳು ವರ್ಗ:ಕೋರ್ಟ್‌ ಕಾನೂನು ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಪ್ರವಾಸಿಗೃಹ ವರ್ಗ:ಲಂಡನ್‌‌ನ ಯೂನಿವರ್ಸಿಟಿ ಕಾಲೇಜ್ ಹಳೇ ವಿದ್ಯಾರ್ಥಿಗಳ ಸಂಘ ವರ್ಗ:ಬಡತನ ವಿರೋಧಿ ಕ್ರಾಂತಿವಾದಿಗಳು ವರ್ಗ:ಆತ್ಮನಿಗ್ರಹಿಗಳು ವರ್ಗ:ಕೊಲ್ಲಲ್ಪಟ್ಟ ಭಾರತೀಯ ರಾಜಕಾರಣಿಗಳು ವರ್ಗ:ಭಾರತದಲ್ಲಿ ಶಸ್ತ್ರಗಳಿಂದ ಸಂಭವಿಸಿದ ಸಾವುಗಳು ವರ್ಗ:ದಕ್ಷಿಣ ಆಫ್ರಿಕಾದಲ್ಲಿರುವ ವಿದೇಶೀಯರು ವರ್ಗ:ಗಾಂಧಿ ತತ್ವ ಅನುಯಾಯಿಗಳು ವರ್ಗ:ಗುಜರಾತಿ ಜನತೆ ವರ್ಗ:ಹಿಂದು ಶಾಂತಿವಾದಿಗಳು ವರ್ಗ:ಭಾರತೀಯ ಕ್ರಾಂತಿಕಾರಿಗಳು ವರ್ಗ:ಭಾರತೀಯ ಕದನ ವಿರೋಧಿ ಪ್ರತಿಪಾದಕರು ವರ್ಗ:ಭಾರತೀಯ ಆತ್ಮಕತೆಗಾರರು ವರ್ಗ:ಭಾರತೀಯ ಹಿಂದುಗಳು ವರ್ಗ:ಭಾರತೀಯ ಮಾನವ ಹಕ್ಕುಗಳ ಪ್ರತಿಪಾದಕರು ವರ್ಗ:ಯುನೈಟೆಡ್ ಕಿಂಗ್‌ಡಮ್‌‌ನಲ್ಲಿ ಭಾರತೀಯ ಶಾಂತಿವಾದಿಗಳು ವರ್ಗ:ಭಾರತೀಯ ಮಾನವತಾವಾದಿಗಳು ವರ್ಗ:ಭಾರತೀಯ ಸ್ವಾತಂತ್ರ್ಯ ಪ್ರತಿಪಾದಕರು ವರ್ಗ:ಭಾರತೀಯ ಚರಿತ್ರಕಾರರು ವರ್ಗ:ಹತ್ಯೆಗೀಡಾದ ಭಾರತೀಯರು ವರ್ಗ:ಭಾರತೀಯ ಶಾಂತಿವಾದಿಗಳು ವರ್ಗ:ಭಾರತೀಯ ತತ್ವ ಜ್ಞಾನಿಗಳು ವರ್ಗ:ಭಾರತೀಯ ರಾಜಕಾರಣಿಗಳು ವರ್ಗ:ಭಾರತೀಯ ಸಮಾಜವಾದಿಗಳು ವರ್ಗ:ಕಂದಾಯ ವಿರೋಧಿ ಭಾರತೀಯರು ವರ್ಗ:ಭಾರತೀಯ ಸಸ್ಯಾಹಾರಿಗಳು ವರ್ಗ:ಮೋಹನ್‌‌‌ದಾಸ್‌ ಕರಮ್‌ಚಂದ್‌ ಗಾಂಧಿ ವರ್ಗ:ಹತ್ಯೆಗೀಡಾದ ಕ್ರಾಂತಿಕಾರಿಗಳು ವರ್ಗ:ದಕ್ಷಿಣ ಆಫ್ರಿಕನ್ನರಲ್ಲದ ವರ್ಣಭೇಧ ನೀತಿ ವಿರೋಧಿ ಪ್ರತಿಪಾದಕರು ವರ್ಗ:ಅಹಿಂಸಾ ತತ್ವ ಪ್ರತಿಪಾದಕರು ವರ್ಗ:ಭಾರತದಲ್ಲಿ ಹತ್ಯೆಗೀಡಾದ ಜನರು ವರ್ಗ:ಬ್ರಿಟಿಷ್ ಭಾರತದ ಜನರು ವರ್ಗ:ಎರಡನೇ ಬೋಯರ್‌ ಕದನದ ಜನರು ವರ್ಗ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು ವರ್ಗ:ಕೈಸರ್‌-ಇ-ಹಿಂದ್‌ ಪದಕವನ್ನು ಸ್ವೀಕರಿಸಿದವರು ವರ್ಗ:ಅಹಿಂಸಾವಾದದ ಅಥವಾ ಅಹಿಂಸೆಯನ್ನು ವಿರೋಧಿಸುವ ವಿದ್ವಾಂಸರು ಮತ್ತು ನಾಯಕರು ವರ್ಗ:ಟೈಮ್‌ ನಿಯತಕಾಲಿಕ ವರ್ಷದ ಪುರುಷರು ವರ್ಗ:ಟಾಲ್ಸ್‌ಟಾಯ್‌ ಅನುಯಾಯಿಗಳು ವರ್ಗ:ಭಾರತೀಯ ಶಾಲೆ ಮತ್ತು ಕಾಲೇಜುಗಳ ಸಂಸ್ಥಾಪಕರು ವರ್ಗ:ಭಾರತದ ಇತಿಹಾಸ
ತಾಜ್ ಮಹಲ್
https://kn.wikipedia.org/wiki/ತಾಜ್_ಮಹಲ್
thumb|300px|ತಾಜ್‌ ಮಹಲ್‌ ಭವ್ಯ ಸಮಾಧಿ ತಾಜ್‌ ಮಹಲ್‌ (; ಹಿಂದಿ: ताज महल ; ಪರ್ಷಿಯನ್‌/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್‌‌ ಚಕ್ರವರ್ತಿ ಷಹ ಜಹಾನ್‌‌ ತನ್ನ ಮೆಚ್ಚಿನ ಪತ್ನಿ ಮಮ್ತಾಜ್‌ ಮಹಲ್‌ಳ ನೆನಪಿಗಾಗಿ ಕಟ್ಟಿಸಿದನು. ಪರ್ಷಿಯನ್‌, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್‌‌ ವಾಸ್ತುಶೈಲಿಗೆ ತಾಜ್‌ ಮಹಲ್‌ ("ತಾಜ್‌" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.ಲೆಸ್ಲಿ‌ ಎ. ಡುಟೆಂಪಲ್‌, "ದಿ ತಾಜ್‌ ಮಹಲ್‌", ಲರ್ನರ್‌ ಪಬ್ಲಿಶಿಂಗ್‌ ಗ್ರೂಪ್‌ (ಮಾರ್ಚ್‌ 2೨೦೦೩). ಪು. ೨೬: "ತಾಜ್‌ ಮಹಲ್‌ ಮೊಘಲ್‌ ವಾಸ್ತುಶಿಲ್ಪಕ್ಕೆ ಅದ್ಭುತ ಉದಾಹರಣೆಯಾಗಿದೆ. ಇದು ಮುಸ್ಲಿಂ, ಹಿಂದೂ ಮತ್ತು ಪರ್ಷಿಯನ್‌ ಶೈಲಿಗಳ ಮಿಶ್ರಣವಾಗಿದೆ" ೧೯೮೩ರಲ್ಲಿ ತಾಜ್‌ ಮಹಲ್‌ UNESCOದ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿತು ಮತ್ತು ಇದನ್ನು "ಭಾರತದಲ್ಲಿರುವ ಮೊಘಲರ ಕಲೆಯ ಅನರ್ಘ್ಯ ರತ್ನ ಮತ್ತು ಜಾಗತಿಕವಾಗಿ ಮೆಚ್ಚುಗೆಯನ್ನು ಪಡೆದ ವಿಶ್ವ ಪರಂಪರೆಯ ಮೇರುಕೃತಿಗಳಲ್ಲಿ ಒಂದು" ಎಂದು ಉಲ್ಲೇಖಿಸಲಾಗಿದೆ. ತಾಜ್‌ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು, ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ. ಈ ಕಟ್ಟಡದ ನಿರ್ಮಾಣ ಕಾರ್ಯವು ೧೬೩೨ರಲ್ಲಿ ಪ್ರಾರಂಭವಾಗಿ, ಸರಿಸುಮಾರು ೧೬೫೩ರ ಹೊತ್ತಿಗೆ ಪೂರ್ಣಗೊಂಡಿತು.ಈ ಸಮಾಧಿಯು ೧೭-ಹೆಕ್ಟೇರ್ (೪೨-ಎಕರೆ)ಸಂಕೀರ್ಣದ ಕೇಂದ್ರವಾಗಿದೆ, ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು.ಟಿಲ್ಲಿಟ್ಸನ್‌, ಜಿ.ಎಚ್‌.ಆರ್‌. (೧೯೯೦). ಆರ್ಕಿಟೆಕ್ಚರಲ್‌ ಗೈಡ್‌ ಟೂ ಮೊಘಲ್‌‌ ಇಂಡಿಯಾ, ಕ್ರೋನಿಕಲ್‌ ಬುಕ್ಸ್‌‌. ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್‌ ಉಲ್‌-ಕರೀಮ್‌ ಮಾಮುರ್‌ ಖಾನ್‌, ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು.ಆಗ್ರಾದ ತಾಜ್‌ ಮಹಲ್‌ನ ಇತಿಹಾಸ, ಪರಿಷ್ಕರಿತ ಆವೃತ್ತಿ: ೨೦ ಜನವರಿ 2009. ಅವರಲ್ಲಿ ಲಾಹೋರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ.UNESCO ಸಲಹೆ ಮಂಡಳಿ ಪರಿಶೀಲನೆ. ವಾಸ್ತುಶಿಲ್ಪ ಸಮಾಧಿ ಸಮಾಧಿಯು ಸಂಕೀರ್ಣದ ಕೇಂದ್ರ ಆಕರ್ಷಣೆಯಾಗಿದೆ. ಈ ದೊಡ್ಡ ಬಿಳಿ ಅಮೃತಶಿಲೆ ಕಟ್ಟಡವು ಚೌಕಾಕಾರದ ಪೀಠದ ಮೇಲೆ ನಿಂತಿದೆ ಮತ್ತು ಇದು ದೊಡ್ಡ ಗುಮ್ಮಟ ಮತ್ತು ಚಾವಣಿಯ ಶಿಖರದಿಂದ ಚಾವಣಿಯನ್ನು ಹೊಂದಿರುವ ಐವಾನ್‌‌ನೊಂದಿಗೆ (ಕಮಾನು-ಆಕಾರದ ಬಾಗಿಲು ದಾರಿ) ಸುಸಂಗತವಾಗಿರುವ ಕಟ್ಟಡಗಳಿಂದ ಒಳಗೊಂಡಿದೆ. ಹೆಚ್ಚಿನ ಮೊಘಲ್‌‌ ಸಮಾಧಿಗಳಂತೆ, ಇದರ ಮೂಲ ಅಂಶಗಳು ಕೂಡ ಪರ್ಷಿಯನ್‌ ಶೈಲಿಯದ್ದು. thumb|ಯಮುನಾ ನದಿಯ ದಡದಿಂದ ನೋಡಿದ ತಾಜ್‌ ಮಹಲ್‌ ಇದರ ಅಡಿಪಾಯದ ರಚನೆಯು ಮೂಲಭೂತವಾಗಿ ನಯಗೊಳಿಸಿದ ಮೂಲೆಗಳೊಂದಿಗೆ ದೊಡ್ಡ, ಬಹು-ಕೋಣೆ ಹೊಂದಿರುವ ಘನವಾಗಿದೆ ಮತ್ತು ನಾಲ್ಕು ಕಡೆಗಳಲ್ಲಿಯೂ ಸರಿಸುಮಾರು 55 ಮೀಟರ್‌ಗಳ ಅಸಮ ಅಷ್ಟಭುಜಗಳಿಂದ ರಚಿತವಾಗಿದೆ. ಪ್ರತಿ ಕಡೆಗಳಲ್ಲಿ ಭಾರಿ ಪಿಸ್ತಾಕ್‌ ಅಥವಾ ಕಮಾನು ದಾರಿ ಮತ್ತು ಎರಡು ಕಡೆಯಲ್ಲಿ ಬಣವೆಯಂತಿರುವ ಎರಡು ಸಮಾನ ಆಕಾರದ, ಕಮಾನಿನ ಮೊಗಸಾಲೆಗಳೊಂದಿಗೆ ಐವಾನ್‌ನ್ನು ರಚಿಸಲಾಗಿದೆ. ಬಣವೆಯಂತೆ ಮಾಡಿದ ಪಿಸ್ತಾಕ್‌ಗಳ ಈ ಕಲಾಕೃತಿ ನಯಗೊಳಿಸಿದ ಮೂಲೆ ಪ್ರದೇಶಗಳಲ್ಲಿ ಪ್ರತಿಕೃತಿಸುವುದು, ಕಟ್ಟಡದ ಎಲ್ಲಾ ಕಡೆಗಳಲ್ಲಿ ಹೊಂದಿಕೊಳ್ಳುವಂತೆ ಪೂರ್ಣವಾಗಿ ವಿನ್ಯಾಸವನ್ನು ಮಾಡಲಾಗಿದೆ. ನಾಲ್ಕು ಮಿನರೆಟ್ಟುಗಳಿಂದ ಸಮಾಧಿಯನ್ನು ರಚಿಸಲಾಗಿದೆ. ಅದರಲ್ಲಿ ಒಂದೊಂದು ನಯಗೊಳಿಸಿದ ಮೂಲೆಗಳ ಮುಖಮಾಡಿರುವ ಪೀಠದ ಪ್ರತಿ ಮೂಲೆಗಳಲ್ಲಿರುವುದು. ಮಹಲಿನ ಮುಖ್ಯ ಕೋಣೆಯಲ್ಲಿ ನಕಲಿ ಶಿಲೆಗಳಿಂದ ಅಲಂಕೃತವಾದ ಮಮ್ತಾಜ್‌ ಮಹಲ್‌ ಮತ್ತು ಷಹ ಜಹಾನ್‌‌‌ರ ಶಿಲಾಶವ ಪೆಟ್ಟಿಗೆಯಿದೆ. ನೈಜ ಸಮಾಧಿಗಳು ಕೆಳಮಟ್ಟದಲ್ಲಿವೆ. ಸಮಾಧಿಯನ್ನು ಸುತ್ತುವರಿದಿರುವ ಅಮೃತಶಿಲೆಯ ಈ ಮಹಲ್‌ ನಯನ ಮನೋಹರವಾಗಿದೆ.ಮಹಲ್‌ ಸುಮಾರು ೩೫ ಮೀಟರ್‌ಗಳಷ್ಟು ಎತ್ತರವಾಗಿದೆ. ಇದು ಸರಿಸುಮಾರು ಅಡಿಪಾಯದ ಉದ್ದದಷ್ಟೇ ಇದೆ. ಸುಮಾರು ೭ ಮೀಟರ್‌ಗಳಷ್ಟು ಎತ್ತರದ ಸಿಲಿಂಡರ್ ಆಕಾರದ "ಡ್ರಮ್‌"ನ ಮೇಲೆ ಕುಳಿತಂತೆ ಕಾಣುತ್ತದೆ. ಇದರ ಆಕಾರದ ಕಾರಣದಿಂದ, ಈ ಗುಮ್ಮಟವನ್ನು ಈರುಳ್ಳಿ ಗುಮ್ಮಟ ಅಥವಾ ಅಮೃದ್‌ (ಸೀಬೆಹಣ್ಣಿನಾಕಾರದ ಗುಮ್ಮಟ) ಎಂದು ಕೆಲವೊಮ್ಮೆ ಕರೆಯಲಾಗುವುದು. ಇದರ ತುದಿಯನ್ನು ಕಮಲದ ಆಕಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸಹ ಮಹಲಿನ ಎತ್ತರವನ್ನು ಎದ್ದು ಕಾಣಿಸುವಂತೆ ಮಾಡುತ್ತದೆ. ಪ್ರಧಾನ ಗುಮ್ಮಟದ ಈರುಳ್ಳಿ ಆಕಾರವನ್ನು ಪ್ರತಿಕೃತಿಸುವ, ಪ್ರತಿ ಮೂಲೆಗಳಲ್ಲಿರುವ ನಾಲ್ಕು ಚಿಕ್ಕ ಗುಮ್ಮಟಾಕಾರದ ಛತ್ರಿಗಳನ್ನು (ಕಿಯೊಸ್ಕ್‌ಗಳು) ಮುಖ್ಯ ಗುಮ್ಮಟದ ಆಕಾರದಲ್ಲೇ ನಿರ್ಮಿಸಲಾಗಿದೆ. ಅವುಗಳ ದುಂಡುಕಂಬಗಳ ಪೀಠಕ್ಕೂ ಕಂಬಕ್ಕೂ ನಡುವಿನ ಭಾಗವು ಸಮಾಧಿಯ ಚಾವಣಿಯ ಸುತ್ತಲು ತೆರೆದಿರುತ್ತದೆ. ಇದು ಒಳಾಂಗಣಕ್ಕೆ ಬೆಳಕನ್ನು ಒದಗಿಸುತ್ತದೆ. ಎತ್ತರದ ಅಲಂಕಾರಿಕ ಶೃಂಗಗಳು (ಗುಲ್ಡಾಸ್ತಾಗಳು ) ಮೂಲ ಗೋಡೆಗಳ ಅಂಚುಗಳಲ್ಲಿ ವ್ಯಾಪಿಸಿವೆ ಮತ್ತು ಇವುಗಳು ಗುಮ್ಮಟದ ಎತ್ತರ ನೋಡುವುದಕ್ಕೆ ಎದ್ದು ಕಾಣುವಂತೆ ಮಾಡುತ್ತದೆ. ಕಮಲ ಕಲಾಕೃತಿಯು ಛತ್ರಿಗಳು ಮತ್ತು ಗುಲ್ಡಸ್ತಾಗಳೆರಡರಲ್ಲು ಪುರಾವರ್ತನೆಗೊಂಡಿದೆ. ಚಿನ್ನದ ಲೇಪನವನ್ನು ಹೊಂದಿರುವ ಗುಮ್ಮಟ ಮತ್ತು ಛತ್ರಿಗಳು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಮಿಶ್ರಣವಾಗಿವೆ. ಪ್ರಮುಖ ಗೋಪುರವು ಮೂಲತಃ ಚಿನ್ನದಿಂದ ಮಾಡಲ್ಪಟ್ಟಿದೆ, ಆದರೆ ೧೯ನೇ ಶತಮಾನದಲ್ಲಿ ಕಂಚಿನ ಲೇಪಿತ ಗೋಪುರದೊಂದಿಗೆ ಬದಲಿಸಲಾಯಿತು. ಈ ವೈಶಿಷ್ಟ್ಯವು ಸಾಂಪ್ರದಾಯಿಕ ಪರ್ಷಿಯನ್‌ ಮತ್ತು ಹಿಂದೂ ಅಲಂಕಾರಿಕ ಅಂಶಗಳ ಸಂಮಿಶ್ರಣದ ಒಂದು ಉತ್ತಮ ಉದಾಹರಣೆಯಾಗಿದೆ. ಗೋಪುರದ ತುದಿಯಲ್ಲಿ ಚಂದ್ರನ ಆಕೃತಿಯಿದೆ. ಅದರ ಸ್ವರ್ಗಾಭಿಮುಖವಾಗಿ ಮುಖಮಾಡಿರುವ ಈ ಶೃಂಗವು ಅಪ್ಪಟ ಮುಸ್ಲಿಂ ಕಲಾಕೃತಿಯ ಪ್ರಧಾನ ಅಂಶ. ಪ್ರಮುಖ ಗೋಪುರದ ತುದಿಯಲ್ಲಿ ಚಂದ್ರನಿರುವ ಕಾರಣ, ಚಂದ್ರನ ಶೃಂಗಗಳು ಮತ್ತು ಗೋಪುರದ ತುದಿ ಸೇರಿ ಶಿವನ ಸಾಂಪ್ರದಾಯಿಕ ಹಿಂದೂ ಚಿಹ್ನೆಯಾದ ತ್ರಿಶೂಲ ಆಕಾರದಂತೆ ಕಾಣುವುದು. ಸುಮಾರು ೪೦ ಮೀಟರ್‌ಗಳಿಗಿಂತ ಹೆಚ್ಚು ಉದ್ದವಿರುವ ಪ್ರತಿ ಮಿನರೆಟ್ಟುಗಳು ವಿನ್ಯಾಸಕಾರನ ಭವ್ಯತೆಯನ್ನು ಪ್ರದರ್ಶಿಸುತ್ತವೆ. ಪ್ರಾರ್ಥನೆಗಾಗಿ ಮಹಮ್ಮದೀಯ ಘೋಷಕರು ಮುಸ್ಲಿಂ ಬಾಂಧವರನ್ನು ಕರೆಯುವ ಕಾರ್ಯಕ್ಕಾಗಿ ಮಿನರೆಟ್ಟುಗಳನ್ನು ಮಸೀದಿಗಳ ಸಾಂಪ್ರದಾಯಿಕ ಅಂಶದಂತೆ ವಿನ್ಯಾಸಗೊಳಿಸಲಾಗಿದೆ. ಪ್ರತಿ ಮಿನರೆಟ್ಟುಗಳನ್ನು ಕೆಲಸ ಮಾಡುವ ಎರಡು ಮೊಗಸಾಲೆಗಳಿಂದ ಮೂರು ಸಮ ಭಾಗಗಳಾಗಿ ವಿಗಂಡಿಸಲಾಗಿದ್ದು ಇವು ಗೋಪುರವನ್ನು ಸುತ್ತುವರಿದಿವೆ. ಗೋಪುರದ ಮೇಲೆ ಕೊನೆಯ ಮೊಗಸಾಲೆಯಿದ್ದು, ಇದು ಸಮಾಧಿಯ ವಿನ್ಯಾಸವನ್ನು ಹೋಲುವ ಛತ್ರಿಯಿಂದ ಸುತ್ತುವರಿಯಲ್ಪಟ್ಟಿದೆ. ಗೋಪುರದ ತುದಿಯಲ್ಲಿರುವ ಎಲ್ಲಾ ಛತ್ರಿಗಳು ಕಮಲದ ವಿನ್ಯಾಸದ ಅಲಂಕಾರಿಕ ಅಂಶದಿಂದ ಕೂಡಿವೆ. ಮಿನರೆಟ್ಟುಗಳನ್ನು ಪೀಠದಿಂದ ಸ್ವಲ್ಪ ಹೊರಕ್ಕೆ ನಿರ್ಮಿಸಲಾಗಿದೆ. ಆದ್ದರಿಂದ, ಒಂದು ವೇಳೆ ಕುಸಿತದ ಸಮಯದಲ್ಲಿ, (ಆ ಕಾಲದಲ್ಲಿ ದೊಡ್ಡ ಕಟ್ಟಡಗಳ ನಿರ್ಮಾಣದಲ್ಲಿರುವ ಸಾಮಾನ್ಯ ಅಂಶವಾಗಿದೆ) ಗೋಪುರದ ವಸ್ತುಗಳು ಸಮಾಧಿಯಿಂದ ದೂರ ಬೀಳಲೆಂದು ಹೀಗೆ ಮಾಡಲಾಗಿದೆ. ಹೊರಾಂಗಣ ಅಲಂಕಾರ thumb|100px|ದೊಡ್ಡ ಪಿಸ್ತಾಕ್‌ನಲ್ಲಿರುವ ಸುಂದರ ಬರಹಗಾರಿಕೆ ತಾಜ್‌ ಮಹಲ್‌ನ ಹೊರಾಂಗಣ ಅಲಂಕಾರ ಮೊಘಲ್‌ ವಾಸ್ತುಶಿಲ್ಪದಲ್ಲಿರುವ ಉತ್ತಮ ಅಂಶಗಳಿಂದ ಕೂಡಿದೆ. ಆ ಮೇಲ್ಮೈ ಅಲಂಕಾರಗಳ ಬದಲಾವಣೆಗಳು ಪ್ರಮಾಣಾನುಗುಣವಾಗಿ ನಾಜೂಕುಗೊಳಿಸಲಾಗಿದೆ. ಕಟ್ಟಡದ ಅಲಂಕಾರಿಕ ಅಂಶಗಳನ್ನು ಬಣ್ಣ ಬಳಿಯುವುದು, ಗಾರೆ ಮಾಡುವುದು, ಕಲ್ಲು ಕೆತ್ತನೆ, ಅಥವಾ ಕೆತ್ತನೆಯಿಂದ ಮಾಡಲಾಗಿದೆ. ಮಾನವ ವರ್ಗೀಕರಣಗಳ ವಿರುದ್ಧ ಮುಸ್ಲಿಂ ಧರ್ಮದ ನಿಷೇಧವನ್ನು ಈ ಸಾಲುಗಳಲ್ಲಿ ಬರೆಯಲಾಗಿದ್ದು, ಇಲ್ಲಿ ಚಿತ್ರಿಸಲಾಗಿರುವ ಅಂಶಗಳನ್ನು ಅಲಂಕಾರಿಕ ಅಂಶಗಳು ಸುಂದರ ಬರಹಗಾರಿಕೆ, ಅಮೂರ್ತ ಪ್ರಕಾರಗಳು ಅಥವಾ ಸಸ್ಯಕ ಕಲಾಕೃತಿಗಳಾಗಿ ವಿಂಗಡಿಸಲಾಗಿದೆ. ಸಂಕೀರ್ಣದಾದ್ಯಂತ ಖುರಾನ್‌ನ ಪಠ್ಯಭಾಗವನ್ನು ಅಲಂಕಾರಿಕ ಅಂಶಗಳಾಗಿ ಬಳಸಲಾಗಿದೆ. ಈ ಪಠ್ಯಭಾಗಗಳನ್ನು ಅಮಾನತ್‌ ಖಾನ್‌‌ರವರು ಆರಿಸಿದ್ದರು ಎಂದು ಇತ್ತೀಚಿನ ವಿದ್ವಾಂಸರು ಹೇಳುತ್ತಾರೆ.ತಾಜ್‌ ಮಹಲ್‌ ಸುಂದರ ಬರಹಗಾರಿಕೆ - ಆಗ್ರಾದ ತಾಜ್‌ ಮಹಲ್‌ ಸುಂದರ ಲಿಪಿಗಾರಿಕೆ - ತಾಜ್‌ ಮಹಲ್‌ ಕೆತ್ತನೆಗಳು ಮತ್ತು ಸುಂದರ ಲಿಪಿಗಾರಿಕೆ. ನ್ಯಾಯದ ಪರಿಕಲ್ಪನೆಯನ್ನು ಪಠ್ಯವು ಉಲ್ಲೇಖಿಸುತ್ತದೆ. ಅವು ಈ ಕೆಳಗಿನವುಗಳನ್ನು ಒಳಗೊಂಡಿದೆ: ಸುರಾ 91 – ಸೂರ್ಯ ಸುರಾ 112 – ನಂಬಿಕೆಯ ಶುದ್ಧತೆ ಸುರಾ 89 – ಬೆಳಗು ಸುರಾ 93 – ಮುಂಜಾನೆಯ ಬೆಳಕು ಸುರಾ 95 – ಅಂಜೂರ ಸುರಾ 94 – ಸಮಾಧಾನ ಸುರಾ 36 – ಯಾ ಸಿನ್‌ ಸುರಾ 81 – ಅಂತ್ಯ ಸುರಾ 82 – ಬೇರೆ ಬೇರೆಯಾಗಿ ಪ್ರತ್ಯೇಕಿಸುವುದು ಸುರಾ 84 – ಬೇರೆ ಬೇರೆಯಾಗಿ ಭೇದಿಸುವುದು ಸುರಾ 98 – ಪುರಾವೆ ಸುರಾ 67 – ಒಡೆತನ ಸುರಾ 48 – ಜಯ ಸುರಾ 77 – ಮುಂದಕ್ಕೆ ಕಳುಹಿಸಿದವು ಸುರಾ 39 – ಸಮುದಾಯಗಳು ಮಹಾದ್ವಾರದಲ್ಲಿ ಸುಂದರ ಬರವಣಿಗೆಯಲ್ಲಿ ಹೀಗೆ ಬರೆಯಲಾಗಿದೆ "ಓ ಆತ್ಮವೇ, ನಿಮ್ಮ ಕಲೆಯು ವಿಶ್ರಾಂತಿಯಲ್ಲಿದೆ. ನೀವು ದೇವರೊಂದಿಗೆ ಶಾಂತಿಯನ್ನು ಹೊಂದುವಿರಿ, ಮತ್ತು ದೇವರು ನಿಮ್ಮೊಂದಿಗೆ ಶಾಂತಿಯನ್ನು ಹೊಂದುವರು." ಕೊಚ್‌, ಪು. 100. 1609ರಲ್ಲಿ ಭಾರತಕ್ಕೆ ಇರಾನ್‌ನ ಸಿರಾಜ್‌ನಿಂದ ಬಂದಿರುವ ಪರ್ಷಿಯನ್‌ ಸುಂದರ ಬರಹಗಾರ ಅಬ್ದ್‌ ಉಲ್‌-ಹಕ್‌ರವರಿಂದ ಈ ಸುಂದರ ಲಿಪಿಗಾರಿಕೆಯನ್ನು ರಚಿಸಲಾಗಿದೆ. ಷಹ ಜಹಾನ್‌‌ ಅಬ್ದ್‌ ಉಲ್‌-ಹಕ್‌ರ "ವಿಸ್ಮಯಗೊಳಿಸುವ ಕಲಾರಸಿಕತೆ"ಗಾಗಿ ಕೊಡುಗೆಯಾಗಿ "ಅಮನಾತ್‌ ಖಾನ್‌" ಎಂಬ ಹೆಸರನ್ನು ನೀಡಿದನು. ಒಳ ಗುಮ್ಮಟದ ತಳ ಭಾಗದಲ್ಲಿ ಖುರಾನ್‌ನ ಸಾಲುಗಳ ಪಕ್ಕದಲ್ಲಿ "ಅಲ್ಪ ಜೀವಿ ಅಮನಾತ್‌ ಖಾನ್‌ ಸಿರಾಜಿರವರಿಂದ ಬರೆಯಲಾಗಿದೆ" ಎಂದು ಕೆತ್ತಲಾಗಿದೆ.http.//www.pbs.org/treasuresoftheworld/taj_mahal/tlevel_2/t4visit_3calligrap.y.html pbs.org. ಸುಂದರ ಬರಹಗಾರಿಕೆಗಳಲ್ಲಿ ಹೆಚ್ಚಿನವುಗಳನ್ನು ಪುಷ್ಪಿತ ಥುಲುತ್‌ ಲಿಪಿಯಲ್ಲಿ ಬರೆಯಲಾಗಿದೆ. ಇದನ್ನು ಕೆಂಪು ಅಥವಾ ಕಪ್ಪು ಅಮೃತಶಿಲೆಯಿಂದ ಮಾಡಲಾಗಿದೆ ಮತ್ತು ಬಿಳಿ ಅಮೃತಶಿಲೆ ಫಲಕಗಳಲ್ಲಿ ಕೆತ್ತಲಾಗಿದೆ. ಮೇಲಿನ ಫಲಕಗಳನ್ನು ಕೆಳಗಿನಿಂದ ನೋಡಿದಾಗ ಒರೆಯಾಗಿ ಕಾಣುವುದನ್ನು ಕಡಿಮೆ ಮಾಡುವುದಕ್ಕಾಗಿ ಸ್ವಲ್ಪ ದೊಡ್ಡಕ್ಷರದಲ್ಲಿ ಬರೆಯಲಾಗಿದೆ. ಸ್ಮಾರಕ ಸಮಾಧಿಗಳಲ್ಲಿ ಅಮೃತಶಿಲೆಯಲ್ಲಿ ಕಂಡುಬರುವ ಸುಂದರ ಬರಹಗಳು ನಿರ್ದಿಷ್ಟವಾಗಿ ವಿವರವಾಗಿವೆ ಮತ್ತು ಸೂಕ್ಷ್ಮವಾಗಿವೆ. ಅಮೂರ್ತ ಆಕೃತಿಗಳನ್ನು ಉದ್ದಕ್ಕೂ ಬಳಸಲಾಗಿದೆ. ಅದರಲ್ಲೂ ವಿಶೇಷವಾಗಿ ಕಟ್ಟಡ ಪೀಠ, ಮಿನರೆಟ್ಟುಗಳು, ದ್ವಾರ, ಮಸೀದಿ, ಜವಾಬ್‌ಗಳಲ್ಲಿ ಮತ್ತು ಸಮಾಧಿಯ ಮೇಲ್ಮೈ ಮೇಲೆ ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ. ಮರಳುಕಲ್ಲಿನ ಕಟ್ಟಡಗಳಲ್ಲಿನ ಗುಮ್ಮಟಗಳು ಮತ್ತು ಕಮಾನುಗಳನ್ನು ವಿಸ್ತಾರವಾದ ಜ್ಯಾಮಿತಿಯ ಪ್ರಕಾರಗಳಲ್ಲಿ ರಚಿಸಲು ಕೆತ್ತಿದ ಚಿತ್ರಕಲೆಯ ಜಾಲರ ವಿನ್ಯಾಸದೊಂದಿಗೆ ಮಾಡಲಾಗಿದೆ. ಹೆರಿಂಗ್‌ಬೋನಿನ ಮೂಳೆ ಕೆತ್ತನೆಯು ಹಲವು ಜೋಡಣೆಗಳ ನಡುವಿನ ಜಾಗವನ್ನು ಸೂಚಿಸುತ್ತದೆ. ಬಿಳಿ ಕೆತ್ತನೆಗಳನ್ನು ಮರಳುಶಿಲೆಯ ಕಟ್ಟಡಗಳಲ್ಲಿ ಬಳಸಲಾಗಿದೆ ಮತ್ತು ಬಿಳಿ ಅಮೃತಶಿಲೆಗಳಲ್ಲಿ ತಿಳಿಗಪ್ಪು ಮತ್ತು ಕಪ್ಪು ಕೆತ್ತನೆಗಳನ್ನು ಬಿಡಿಸಲಾಗಿದೆ. ಅಮೃತಶಿಲೆ ಕಟ್ಟಡಗಳ ಗಾರೆ ಮಾಡಿದ ಪ್ರದೇಶಗಳಲ್ಲಿ ಹೊಳಪಿನ ಬಣ್ಣವನ್ನು ಬಳಿಯಲಾಗಿದೆ ಮತ್ತು ಗಮನಾರ್ಹ ಸಂಕೀರ್ಣತೆಯ ಜ್ಯಾಮಿತಿಯ ಆಕೃತಿಗಳನ್ನು ರಚಿಸಲಾಗಿದೆ. ಮಹಡಿಗಳು ಮತ್ತು ಕಾಲುದಾರಿಗಳಲ್ಲಿ ಹೊಳಪಿನ ತಬಲದಂತಹ ಆಕಾರಗಳಲ್ಲಿ ಹೆಂಚುಗಳು ಅಥವಾ ದಿಮ್ಮಿಗಳನ್ನು ಬಳಸಲಾಗಿದೆ. ಸಮಾಧಿಯ ಕೆಳಗೋಡೆಗಳಲ್ಲಿ ಹೂವುಗಳು ಮತ್ತು ದ್ರಾಕ್ಷಿ ಬಳ್ಳಿಯ ಚಿತ್ರಣಗಳನ್ನು ನೈಜ ಲೋಹದ ಉಬ್ಬುಗಳೊಂದಿಗೆ ಶ್ವೇತ ಅಮೃತಶಿಲೆ ನಡುದಿಂಡುಗಳನ್ನು ಕೆತ್ತಲಾಗಿದೆ. ಕೆತ್ತನೆಗಳ ಅಂದವಾದ ಶಿಲ್ಪಶೈಲಿ ಮತ್ತು ನಡುದಿಂಡುಗಳ ಅಂಚುಗಳನ್ನು ಎತ್ತಿತೋರಿಸಲು ಅಮೃತಶಿಲೆಯನ್ನು ನಯಗೊಳಿಸಲಾಗಿದೆ ಮತ್ತು ಕಮಾನುದಾರಿಯ ಮೂಲೆಗಟ್ಟುಗಳನ್ನು ಹೆಚ್ಚಾಗಿ ಜ್ಯಾಮಿತಿಯ ದ್ರಾಕ್ಷಿ ಬಳ್ಳಿಗಳು, ಹೂಗಳು ಮತ್ತು ಹಣ್ಣುಗಳಿಂದ ಕೂಡಿದ ಸೊಗಸಾದ ಪಿಯೆತ್ರಾ ದುರಾ ಕೆತ್ತನೆಗಳೊಂದಿಗೆ ಅಲಂಕರಿಸಲಾಗಿದೆ. ಹಳದಿ ಅಮೃತಶಿಲೆ, ಜ್ಯಾಸ್ಪರ್‌ ಮತ್ತು ಜೇಡ್‌ ಕಲ್ಲುಗಳ ಕೆತ್ತನೆಗಳನ್ನು ನಯಗೊಳಿಸಲಾಗಿದೆ ಮತ್ತು ಅವುಗಳನ್ನು ಗೋಡೆಗಳ ಮೇಲ್ಮೈಗೆ ಸರಿಹೊಂದುವಂತೆ ಮಟ್ಟ ಮಾಡಲಾಗಿದೆ. ಒಳಾಂಗಣ ಅಲಂಕಾರ thumb|right|ಸ್ಮಾರಕ ಸಮಾಧಿಗಳ ಸುತ್ತಲಿರುವ ಜಲಿ ಪರದೆ thumb|right|ಷಹ ಜಹಾನ್‌‌ ಮತ್ತು ಮಮ್ತಾಜ್‌ ಮಹಲ್‌ ಸಮಾಧಿ thumb|right|ಸ್ಮಾರಕ ಸಮಾಧಿಗಳು, ತಾಜ್‌ ಮಹಲ್‌ನ ಒಳಾಂಗಣ ತಾಜ್‌ ಮಹಲ್‌ನ ಒಳಭಾಗದ ಮೆಟ್ಟಿಲುಗಳ ಅಂದವು ಸಾಂಪ್ರದಾಯಿಕ ಅಲಂಕಾರಿಕ ಅಂಶಗಳಿಗಿಂತ ಭಿನ್ನವಾಗಿದೆ. ಇಲ್ಲಿ ಕೆತ್ತನೆ ಕೆಲಸವು ಪಿಯೆತ್ರಾ ದುರಾ ಶೈಲಿಯಲ್ಲಿಲ್ಲ; ಬದಲಿಗೆ ಅತ್ಯಮೂಲ್ಯ ಮತ್ತು ಅಮೂಲ್ಯ ಶಿಲಾಲಿಖಿತರತ್ನಗಳಿಂದ ಕೂಡಿದೆ. ಒಳ ಕೋಣೆಯು ಅಷ್ಟಭುಜಾಕೃತಿಯಲ್ಲಿದ್ದು, ಎಲ್ಲ ಕಡೆಯಿಂದಲೂ ಪ್ರವೇಶಿಸಬಹುದಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಆದರೂ ದಕ್ಷಿಣದ ಉದ್ಯಾನಕ್ಕೆ ಮುಖಮಾಡಿರುವ ದ್ವಾರವನ್ನು ಮಾತ್ರ ಬಳಸಲಾಗುತ್ತಿದೆ. ಒಳ ಗೋಡೆಗಳು ಸುಮಾರು ೨೫ ಮೀಟರ್‌ಗಳಷ್ಟು ಎತ್ತರವಾಗಿದೆ ಮತ್ತು ಸೂರ್ಯ ಕಲಾಕೃತಿಯೊಂದಿಗೆ ಅಲಂಕೃತಗೊಂಡ "ನಕಲಿ" ಒಳ ಗುಮ್ಮಟ ಮಹಲಿನ ಮೇಲ್ಭಾಗದಲ್ಲಿದೆ. ಎಂಟು ಪಿಸ್ತಾಕ್ ಕಮಾನುಗಳು ನೆಲ ಮಟ್ಟದಲ್ಲಿರುವ ಜಾಗವನ್ನು ರೂಪಿಸಿವೆ ಮತ್ತು ಅದರ ಹೊರಗೆ ಪ್ರತಿ ಕೆಳ ಪಿಸ್ತಾಕ್‌ ಸುಮಾರು ಗೋಡೆಯ ಮಧ್ಯ ಭಾಗದಲ್ಲಿ ಎರಡನೆಯ ಪಿಸ್ತಾಕ್‌ನಿಂದ ಮೇಲ್ಭಾಗವನ್ನು ಹೊಂದಿರುತ್ತದೆ. ಮೇಲ್ಭಾಗದ ನಾಲ್ಕು ಕೇಂದ್ರ ಕಮಾನುಗಳು ಮೊಗಸಾಲೆ ಅಥವಾ ವೀಕ್ಷಣಾ ಪ್ರದೇಶವಾಗಿವೆ ಮತ್ತು ಪ್ರತಿ ಮೊಗಸಾಲೆಯ ಬಾಹ್ಯ ಕಿಟಕಿಗಳು ಜಟಿಲ ಪರದೆ ಅಥವಾ ಅಮೃತಶಿಲೆನಿಂದ ಕತ್ತರಿಸಿದ ಜಲಿ ಯನ್ನು ಹೊಂದಿವೆ. ಹೆಚ್ಚುವರಿಯಾಗಿ, ಮೊಲೆಗಳಲ್ಲಿರುವ ಛತ್ರಿಗಳಿಂದ ಸುತ್ತುವರಿದ ತೆರದ ಚಾವಣಿಗಳ ಮೂಲಕ ಮೊಗಸಾಲೆಯ ಕಿಟಕಿಗಳಿಂದ ಬರುವ ಬೆಳಕು ಒಳಾಂಗಣವನ್ನು ಪ್ರವೇಶಿಸುತ್ತದೆ. ಪ್ರತಿ ಕೋಣೆಯ ಗೋಡೆಯನ್ನು ಸಂಕೀರ್ಣದ ಹೊರಾಂಗಣದಾದ್ಯಂತ ಕಂಡುಬರುವ ಲೋಹದ ಉಬ್ಬುಗಳು, ಜಟಿಲ ಶಿಲಾಲಿಖಿತ ಕೆತ್ತನೆ ಮತ್ತು ನಯಗೊಳಿಸಿದ ಸುಂದರ ಬರಹದ ಫಲಕಗಳು, ವಿನ್ಯಾಸ ಅಂಶಗಳನ್ನು ವರ್ಣರಂಜಿತ ಶಿಲ್ಪಶೈಲಿಯಿಂದ ಪ್ರತಿಫಲಿಸುವಂತೆ ಉತ್ತಮವಾಗಿ ಅಲಂಕರಿಸಲಾಗಿದೆ. ಜಟಿಲ ಕೊರೆಯವ ಕೆಲಸದ ಮೂಲಕ ಕೆತ್ತಿದ ಎಂಟು ಅಮೃತಶಿಲೆ ಫಲಕಗಳಿಂದ ಮಾಡಿದ ಸ್ಮಾರಕ ಸಮಾಧಿಗಳು ಅಷ್ಟಭುಜಾಕೃತಿ ಅಮೃತಶಿಲೆ ಪರದೆ ಅಥವಾ ಜಲಿ ಯ ಅಂಚುಗಳನ್ನು ಹೊಂದಿವೆ. ಉಳಿದ ಮೇಲ್ಮೈಗಳನ್ನು ಬೆಲೆಬಾಳುವ ಕಲ್ಲುಗಳಲ್ಲಿ ಜೋಡಿ ದ್ರಾಕ್ಷಿ ಬಳ್ಳಿಗಳು, ಹಣ್ಣುಗಳು ಮತ್ತು ಹೂಗಳನ್ನು ಕೆತ್ತುವುದರೊಂದಿಗೆ ಅತ್ಯಂತ ಸೂಕ್ಷ್ಮ ಶಿಲ್ಪಶೈಲಿಯಲ್ಲಿ ಕೆತ್ತಲಾಗಿದೆ. ಮುಸ್ಲಿಂ ಸಂಪ್ರದಾಯವು ಸಮಾಧಿಯ ಹೆಚ್ಚಿನ ಅಲಂಕಾರವನ್ನು ನಿಷೇಧಿಸುತ್ತದೆ. ಹಾಗಾಗಿ ಮಮ್ತಾಜ್‌ ಮತ್ತು ಷಹ ಜಹಾನ್‌‌ರವರ ಮುಖಗಳನ್ನು ಬಲ ಭಾಗ ಮತ್ತು ಮೆಕ್ಕಾದ ಕಡೆಗೆ ತಿರುಗಿಸುವುದರೊಂದಿಗೆ ಒಳಕೋಣೆಯ ಕೆಳಗೆ ಸರಳ ರಹಸ್ಯ ಜಾಗದಲ್ಲಿರಿಸಲಾಗಿದೆ. ಮಮ್ತಾಜ್‌ ಮಹಲ್‌ಳ ಸ್ಮಾರಕ ಸಮಾಧಿಯನ್ನು ಒಳ ಕೋಣೆಯ ಸರಿಯಾದ ಕೇಂದ್ರ ಭಾಗದಲ್ಲಿ ೨.೫ ಮೀಟರ್‌ಗಳಿಂದ ೧.೫ ಮೀಟರ್‌ಗಳಷ್ಟು ಉದ್ದದ ಚೌಕಾಕಾರದ ಅಮೃತಶಿಲೆ ತಳಹದಿಯಲ್ಲಿ ನಿರ್ಮಿಸಲಾಗಿದೆ. ಅಡಿಪಾಯ ಮತ್ತು ಶವಪೆಟ್ಟಿಗೆಯನ್ನು ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳೊಂದಿಗೆ ನಯವಾಗಿ ಕೆತ್ತಲಾಗಿದೆ. ಶವಪೆಟ್ಟಿಗೆಯಲ್ಲಿರುವ ಸುಂದರ ಬರಹಗಳು ಮಮ್ತಾಜ್‌ಳ ಕುರಿತು ತಿಳಿಸುವುದು ಮತ್ತು ಹೊಗಳುವುದು. ಶವಪೆಟ್ಟಿಗೆಯ ಮುಚ್ಚಳದ ಮೇಲಿರುವ ಎತ್ತರಿಸಲಾದ ಆಯತಾಕಾರದ ಹಲಗೆಯು ಬರವಣಿಗೆ ಪೀಠವನ್ನು ಸೂಚಿಸುತ್ತದೆ. ಷಹ ಜಹಾನ್‌‌ನ ಸ್ಮಾರಕ ಸಮಾಧಿಯು ಮಮ್ತಾಜ್‌ಳ ಸಮಾಧಿಯ ಪಕ್ಕ ಪಶ್ಚಿಮ ದಿಕ್ಕಿನಲ್ಲಿದೆ ಮತ್ತು ಅದು ಮಾತ್ರ ಪೂರ್ಣ ಸಂಕೀರ್ಣದಲ್ಲಿ ವಿಷಮಪಾರ್ಶ್ವದ ಅಂಶವಾಗಿ ಗೋಚರಿಸುವುದು. ಅವನ ಸ್ಮಾರಕ ಸಮಾಧಿಯು ಅವನ ಹೆಂಡತಿಯ ಸಮಾಧಿಗಿಂತ ದೊಡ್ಡದಾಗಿದೆ, ಆದರೆ ಒಂದೇ ಸಮನಾದ ಅಂಶಗಳನ್ನು ಪ್ರತಿಫಲಿಸುವುದು. ಇದು ಎತ್ತರವಾದ ಅಡಿಪಾಯದ ಮೇಲಿರುವ ದೊಡ್ಡದಾದ ಶವಪೆಟ್ಟಿಗೆಯಾಗಿದೆ. ಇದನ್ನು ವಿಸ್ಮಯಗೊಳಿಸುವ ನಿಖರತೆಯೊಂದಿಗೆ ಶಿಲಾಲಿಖಿತದಿಂದ ಅಲಂಕರಿಸಲಾಗಿದೆ ಮತ್ತು ಸುಂದರ ಬರಹಗಳಿಂದ ಬರೆದ ಬರಹವು ಅವನ ಗುರುತು ತಿಳಿಸುವುದು. ಶವಪೆಟ್ಟಿಗೆ ಮುಚ್ಚಳದ ಮೇಲೆ ಚಿಕ್ಕ ಲೇಖನಿ ಪೆಟ್ಟಿಗೆಯ ಸಾಂಪ್ರದಾಯಿಕ ಶಿಲ್ಪಾಕೃತಿಯಂತಿದೆ. ಲೇಖನಿ ಪೆಟ್ಟಿಗೆ ಮತ್ತು ಬರವಣಿಗೆ ಪೆಟ್ಟಿಗೆಗಳು ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಶವಪೆಟ್ಟಿಗೆಯನ್ನು ಅಲಂಕರಿಸುವ ಸಾಂಪ್ರದಾಯಿಕ ಮೊಘಲ್‌‌ ಶವಸಂಸ್ಕಾರ ಚಿಹ್ನೆಗಳಾಗಿವೆ. "ಮಮ್ತಾಜ್‌ಳ ಶ್ರೇಷ್ಠತೆ, ಭವ್ಯತೆ, ಗಾಂಭೀರ್ಯತೆ, ಅನನ್ಯತೆ, ಚಿರಂತನ, ಮತ್ತು ವೈಭವತೆ..." ಗುಣಗಳು ಸೇರಿದಂತೆ ದೇವರ ತೊಂಬತ್ತೊಬತ್ತು ಹೆಸರುಗಳನ್ನು ಮಮ್ತಾಜ್‌ ಮಹಲ್‌ಳ ನೈಜ ಸಮಾಧಿಯ ಪಾರ್ಶ್ವಗಳಲ್ಲಿ ಕೆತ್ತಲಾಗಿರುವ ಸುಂದರ ಬರಹಗಳಲ್ಲಿ ಕಾಣಬಹುದು'' . ಷಹ ಜಹಾನ್‌‌ನ ಸಮಾಧಿಯಲ್ಲಿ "ಅವನು ಹಿಜಿರಾ ವರ್ಷದ ರಜಾಬ್‌ ತಿಂಗಳ ಇಪ್ಪತ್ತಾರರ ರಾತ್ರಿ ಈ ಪ್ರಪಂಚದಿಂದ ಪರಲೋಕದ ಭೋಜನ ಭವನಕ್ಕೆ ಪ್ರಯಾಣಿಸಿದರು" ಎಂದು ಸುಂದರ ಬರಹಗಳಲ್ಲಿ ಕೆತ್ತಲಾಗಿದೆ. ಉದ್ಯಾನ thumb|right|ಪ್ರತಿಫಲನ ಕೊಳ ಕಾಲುದಾರಿಗಳು ಸಂಕೀರ್ಣವು 300 ಮೀಟರ್‌ ಉದ್ದವಾದ ಛಾರ್ಬಾಘ್‌ ಅಥವಾ ಮೊಘಲ್‌‌ ಉದ್ಯಾನವನ್ನು ಒಳಗೊಂಡಿದೆ. ಉದ್ಯಾನದಲ್ಲಿ ಎತ್ತರಿಸಿದ ಹಾದಿಗಳನ್ನು ನಿರ್ಮಿಸಲಾಗಿದ್ದು ನಾಲ್ಕು ಕಾಲು ಭಾಗದಲ್ಲಿ ಪ್ರತಿಯೊಂದನ್ನು ೧೬ ಕೆಳ ಹೂದೋಟಗಳು ಅಥವಾ ಹೂಹಾಸುಗಳಾಗಿ ವಿಂಗಡಿಸಲಾಗಿದೆ. ಉದ್ಯಾನದ ಕೇಂದ್ರದಲ್ಲಿ ಎತ್ತರದ ಅಮೃತಶಿಲೆಯ ನೀರಿನ ತೊಟ್ಟಿ ಇದೆ. ಸಮಾಧಿ ಮತ್ತು ದ್ವಾರದ ನಡುವಿನ ಮಧ್ಯದಾರಿಯಲ್ಲಿ ಉತ್ತರ-ದಕ್ಷಿಣ ಅಕ್ಷದಲ್ಲಿ ಪ್ರತಿಫಲಿಸುವ ಕೊಳವು ಭವ್ಯ ಸಮಾಧಿಯ ಬಿಂಬವನ್ನು ಪ್ರತಿಫಲಿಸುತ್ತದೆ. ಮಹಮ್ಮದ್‌ರಿಗೆ ವಚನವಿತ್ತಂತೆ "ಸಿರಿವಂತಿಕೆಯ" ಸೂಚಕವಾಗಿ ಕಟ್ಟಿರುವ ಅಮೃತಶಿಲೆಯ ನೀರಿನ ತೊಟ್ಟಿಯನ್ನು ಅಲ್‌ ಹವ್ದ್‌ ಅಲ್‌-ಕವ್ತಾರ್‌ ಎಂದು ಕರೆಯಲಾಗುತ್ತದೆ. ಉದ್ಯಾನದ ಇನ್ನೊಂದೆಡೆ ಸಾಲುಮರಗಳು ಮತ್ತು ನೀರಿನ ಕಾರಂಜಿಗಳಿವೆ.http.//www.taj-mahal-travel-tours.com/garden-of-taj-mahal.html taj-mahal-travel-tours.com. ಭಾರತಕ್ಕೆ ಮೊದಲ ಮೊಘಲ್‌‌ ಚರ್ಕವರ್ತಿ ಬಾಬರ್‌ ಪರ್ಷಿಯನ್ ಉದ್ಯಾನಗಳಿಂದ ಪ್ರೇರೇಪಿತನಾಗಿ ಛಾರ್ಬಾಘ್‌ ಉದ್ಯಾನವನ್ನು ಪರಿಚಯಿಸಿದನು.ಇದು ಜನ್ನಾದ (ಸ್ವರ್ಗ)ದಲ್ಲಿ ಹರಿಯುವ ನಾಲ್ಕು ನದಿಗಳನ್ನು ಸೂಚಿಸುತ್ತದೆ. ಮತ್ತು ಪರ್ಷಿಯಾದ ಪ್ಯಾರಿಡೇಜಾ ಎಂದರೆ ಸ್ವರ್ಗ ಉದ್ಯಾನದಿಂದ ಸೃಷ್ಟಿಯಾದ 'ಗೋಡೆಗಳ ಉದ್ಯಾನ'ವನ್ನು ಬಿಂಬಿಸುತ್ತದೆ. ಮೊಘಲ್‌‌ ಅವಧಿಯ ಮುಸ್ಲಿಂ ಧರ್ಮದ ಆಧ್ಯಾತ್ಮಿಕತೆಯಲ್ಲಿ, ಉದ್ಯಾನದ ಕೇಂದ್ರದಲ್ಲಿರುವ ಕಾರಂಜಿ ಅಥವಾ ಬೆಟ್ಟದಿಂದ ಹರಿಯುವ ನಾಲ್ಕು ನದಿಗಳು ಉತ್ತರ, ದಕ್ಷಿಣ, ಪಶ್ಚಿಮ ಮತ್ತು ಪೂರ್ವಕ್ಕೆ ಉದ್ಯಾನವನ್ನು ಬೇರ್ಪಡಿಸುವುದರೊಂದಿಗೆ ಶ್ರೀಮಂತಿಕೆಯ ಮಾದರಿ ಉದ್ಯಾನದಂತೆ ಸ್ವರ್ಗವನ್ನು ವಿವರಿಸಲಾಗಿದೆ. ಹೆಚ್ಚಿನ ಮೊಘಲ್‌‌ ಛಾರ್ಬಾಘ್‌ಗಳು ಮಧ್ಯಭಾಗದಲ್ಲಿ ಸಮಾಧಿ ಅಥವಾ ಉದ್ಯಾನಗೃಹವನ್ನು ಹೊಂದಿದ್ದು ಆಯತಾಕಾರದಲ್ಲಿರುತ್ತವೆ. ಅವುಗಳಲ್ಲಿ ತಾಜ್‌ ಮಹಲ್‌ ಉದ್ಯಾನವು ಅಸಾಮಾನ್ಯವಾದದ್ದು. ಪ್ರಧಾನ ಭಾಗವಾಗಿರುವ ಸಮಾಧಿಯು ಉದ್ಯಾನದ ಕೊನೆಯ ಭಾಗದಲ್ಲಿದೆ. ಯಮುನಾ ನದಿಯ ಇನ್ನೊಂದು ಬದಿಯಲ್ಲಿ ಮಹ್ತಾಬ್‌ ಬಾಘ್‌ ಅಥವಾ "ಬೆಳದಿಂಗಳ ಉದ್ಯಾನ"ದ ಆವಿಷ್ಕಾರದೊಂದಿಗೆ, ಭಾರತೀಯ ಪುರಾತತ್ವ ಸಂಸ್ಥೆ ತನ್ನ ವರದಿಯಲ್ಲಿ ಯಮುನಾ ನದಿ ಸ್ವರ್ಗದ ನದಿಗಳಲ್ಲಿ ಒಂದಾಗಿರುವಂತೆ ಕಾಣಬೇಕೆಂಬ ಆಶಯದೊಂದಿಗೆ ಉದ್ಯಾನದ ವಿನ್ಯಾಸದೊಂದಿಗೆ ಅದನ್ನು ಸೇರಿಸಲಾಗಿತ್ತು ಎಂದು ಹೇಳಿದೆ.. ಈ ಉದ್ಯಾನ ಶಾಲಿಮರ್‌ ಉದ್ಯಾನಗಳಂತೆ ಅದೇ ರೀತಿಯ ವಿನ್ಯಾಸ ಮತ್ತು ವಾಸ್ತು ಲಕ್ಷಣಗಳನ್ನು ಹೊಂದಿರುವುದರಿಂದ ಅದೇ ವಾಸ್ತುಶಿಲ್ಪಿ ಅಲಿ ಮರ್ದಾನ್‌ರವರು ಈ ಉದ್ಯಾನವನ್ನೂ ವಿನ್ಯಾಸಗೊಳಿರಬಹುದೆಂದು ಹೇಳಲಾಗಿದೆ.ಪು 318. ಆರಂಭಿಕ ದಿನಗಳಲ್ಲಿ ಉದ್ಯಾನವು ಹೇರಳ ಪ್ರಮಾಣದ ಗುಲಾಬಿಗಳು, ನೈದಿಲೆಗಳು, ಮತ್ತು ಹಣ್ಣಿನ ಮರಗಳು ಸೇರಿದಂತೆ ಅನೇಕ ಸಸ್ಯವರ್ಗಗಳಿಂದ ಕೂಡಿತ್ತು.ಜೆರ್ರಿ ಕ್ಯಾಮರಿಲ್ಲೊ ಡುನ್ನ್‌ ಜ್ಯುನಿಯರ್‌ರವರಿಂದ ತಾಜ್‌. ಮೊಘಲ್‌‌ ಸಾಮ್ರಾಜ್ಯ ಪತನವಾಗುತ್ತಾ ಹೋದಂತೆ ಈ ಉದ್ಯಾನದ ನಿರ್ವಹಣೆ ಕಳೆಗುಂದುತ್ತಾ ಹೋಯಿತು. ನಂತರ ಬ್ರಿಟಿಷ್‌ ಆಳ್ವಿಕೆಯ ಸಮಯದಲ್ಲಿ ತಾಜ್‌ ಮಹಲ್‌ ನಿರ್ವಹಣೆಯನ್ನು ಅವರು ವಹಿಸಿಕೊಂಡ ಮೇಲೆ, ಅವರು ಲಂಡನ್‌ನ ಹುಲ್ಲು ಹಾಸುಗಳನ್ನು ಬಳಸಿ ಉದ್ಯಾನದ ಮೇಲ್ಮೈಯನ್ನು ಬದಲಾಯಿಸಿದರು.ಕೊಚ್‌, ಪು. 139. ನೆರೆಹೊರೆಯ ಕಟ್ಟಡಗಳು thumb|ಮಹಾದ್ವಾರ (ದರ್ವಾಜಾ-ಇ ರೌಜಾ)—ತಾಜ್‌ ಮಹಲ್‌‌ಗೆ ಮಹಾದ್ವಾರ ತಾಜ್‌ ಮಹಲ್‌ ಸಂಕೀರ್ಣದ ಮೂರು ಕಡೆಯಲ್ಲಿ ದಂತಾಕೃತಿಯಿಂದ ಕೂಡಿದ ಕೆಂಪು ಮರಳುಕಲ್ಲುಗಳಿಂದ ಕೋಟೆಯನ್ನು ನಿರ್ಮಿಸಲಾಗಿದ್ದು ಇದು ನದಿಗೆ ಎದುರು ದಿಕ್ಕಿನಲ್ಲಿ ತೆರೆದುಕೊಂಡಿದೆ. ಕೋಟೆಯ ಹೊರಗೆ ಷಹ ಜಹಾನ್‌ನ ಇತರ ಪತ್ನಿಯರು ಮತ್ತು ಮಮ್ತಾಜ್‌ನ ಮೆಚ್ಚಿನ ಸೇವಕನ ದೊಡ್ಡದಾದ ಸಮಾಧಿ ಸೇರಿದಂತೆ ಇತರ ಹಲವು ಭವ್ಯ ಸಮಾಧಿಗಳಿವೆ. ಕೆಂಪು ಮರಳುಕಲ್ಲುಗಳಿಂದ ಕಟ್ಟಲಾದ ಈ ಸಮಾಧಿಗಳು ಆ ಕಾಲದ ಚಿಕ್ಕ ಮೊಘಲ್‌‌ ಸಮಾಧಿಗಳ ಮಾದರಿಗಳಾಗಿದ್ದವು. ಉದ್ಯಾನಕ್ಕೆ ಮುಖಮಾಡಿರುವ ಒಳಗೋಡೆಯ ಮುಂಭಾಗದಲ್ಲಿ ಎತ್ತರದ ಕಮಾನುಗಳನ್ನು ನಿರ್ಮಿಸಲಾಗಿದೆ. ಇದು ಹಿಂದೂ ದೇವಾಲಯಗಳ ಅಪ್ಪಟ ವಾಸ್ತು ಶೈಲಿಯಲ್ಲಿದೆ. ನಂತರ ಈ ಶೈಲಿಯನ್ನು ಮೊಘಲ್‌‌ ಮಸೀದಿಗಳ ನಿರ್ಮಾಣಗಳಲ್ಲಿ ಅಳವಡಿಸಿಕೊಳ್ಳಲಾಯಿತು. ಈಗ ವಸ್ತುಸಂಗ್ರಹಾಲಯದಂತೆ ಬಳಸಲಾಗುತ್ತಿರುವ ಗುಮ್ಮಟಾಕಾರದ ಛತ್ರಿಗಳು ಮತ್ತು ಸಂಗೀತ ಕೋಣೆ ಯಂತಿರುವ ವೀಕ್ಷಣಾ ಪ್ರದೇಶಗಳು ಅಥವಾ ವೀಕ್ಷಣಾ ಗೋಪುರಗಳಂತಹ ಚಿಕ್ಕ ಕಟ್ಟಡಗಳಿಂದ ಕೋಟೆಯನ್ನು ವಿಭಿನ್ನವಾಗಿ ಕಟ್ಟಲಾಗಿದೆ. ಮುಖ್ಯದ್ವಾರ (ದರ್ವಾಜಾ ) ಸ್ಮಾರಕವಾಗಿದ್ದು, ಇದನ್ನು ಅಮೃತಶಿಲೆಯಿಂದ ಕಟ್ಟಲಾಗಿದೆ. ಆರಂಭಿಕ ಮೊಘಲ್‌‌ ಚರ್ಕವರ್ತಿಗಳ ವಾಸ್ತುಶಿಲ್ಪದ ಸ್ಮರಣಾರ್ಥವಾಗಿ ಈ ಸ್ಮಾರಕ ಕಟ್ಟಡಲಾಗಿದೆ. ಈ ಕಮಾನುದಾರಿಯು ಸಮಾಧಿಯ ಕಮಾನುದಾರಿಯ ರಚನೆಯನ್ನು ಹೋಲುತ್ತವೆ. ಮತ್ತು ಇದರ ಪಿಸ್ತಾಕ್‌ ಕಮಾನುಗಳನ್ನು ಸಮಾಧಿಯಲ್ಲಿರುವಂತೆ ಸುಂದರ ಬರಹಗಳಲ್ಲಿ ಅಲಂಕರಿಸಲಾಗಿದೆ. ಇದು ಪುಷ್ಪಾಕೃತಿಯ ಕಲಾಕೃತಿಗಳೊಂದಿಗೆ ಲೋಹದ ಉಬ್ಬುಗಳು ಮತ್ತು ಪಿಯೆತ್ರಾ ದುರಾದ ಕೆತ್ತನೆಗಳನ್ನು ಒಳಗೊಂಡಿದೆ. ಕಮಾನಿನ ಆಕಾರದ ಚಾವಣಿಗಳು ಮತ್ತು ಗೋಡೆಗಳು ಸಂಕೀರ್ಣದ ಇತರ ಮರಳುಕಲ್ಲಿನ ಕಟ್ಟಡಗಳಲ್ಲಿ ಕಂಡುಬರುವಂತೆ ಜಟಿಲವಾದ ಜ್ಯಾಮಿತಿಯ ವಿನ್ಯಾಸಗಳನ್ನು ಹೊಂದಿವೆ. left|140px|thumb|ತಾಜ್‌ ಮಹಲ್‌ ಮಸೀದಿ ಒಳಾಂಗಣದಲ್ಲಿ ಕಮಾನುಗಳು thumb|right|ತಾಜ್‌ ಮಹಲ್‌ ಮಸೀದಿ ಅಥವಾ ಮಜೀದ್‌ ಸಮಾಧಿಯ ಕಡೆ ತೆರೆದುಕೊಂಡಿರುವ ಎರಡು ಭವ್ಯ ಮರಳುಕಲ್ಲಿನ ಕಟ್ಟಡಗಳು ಸಂಕೀರ್ಣದ ಕೊನೆಯ ಭಾಗದಲ್ಲಿವೆ. ಅವುಗಳ ಹಿಂಭಾಗವು ಪೂರ್ವ ಮತ್ತು ಪಶ್ಚಿಮ ಗೋಡೆಗಳಿಗೆ ಸಮಾನಾಂತರವಾಗಿದ್ದು ಎರಡು ಕಟ್ಟಡಗಳು ಕರಾರುವಕ್ಕಾಗಿ ಒಂದನ್ನೊಂದು ಹೋಲುತ್ತವೆ. ಪಶ್ಚಿಮದಲ್ಲಿರುವ ಕಟ್ಟಡವು ಮಸೀದಿಯಾಗಿದ್ದು ಇನ್ನೊಂದು ಕಟ್ಟಡವು ಜವಾಬ್‌ (ಉತ್ತರ) ಆಗಿದೆ. ವಾಸ್ತುಶೈಲಿಯನ್ನು ಸರಿದೂಗಿಸುವುದಕ್ಕಾಗಿ ಈ ಕಟ್ಟಡ ಕಟ್ಟಲಾಗಿತ್ತು. ಇದನ್ನು ಅತಿಥಿಗೃಹವಾಗಿ ಬಳಸಿರಬಹುದು. ಈ ಎರಡು ಕಟ್ಟಡಗಳ ನಡುವೆ ಜವಾಬ್‌ ನಲ್ಲಿರುವ ಮಿರಾಬ್‌ ನ (ಮೆಕ್ಕಾಕ್ಕೆ ಮುಖಮಾಡಿರುವ ಮಸೀದಿಯ ಗೋಡೆಗಳಲ್ಲಿರುವ ಗೂಡು) ಕೊರತೆಯೂ ಸೇರಿದಂತೆ ಅಸಮಾನತೆಯಿದೆ ಮತ್ತು ಜವಾಬ್‌‌ ನ ಮಹಡಿಗಳು ಜ್ಯಾಮಿತಿಯ ವಿನ್ಯಾಸದಲ್ಲಿ ರಚನೆಯಾಗಿವೆ. ಇದೇ ವೇಳೆ ಮಸೀದಿಯ ಮಹಡಿಗಳಲ್ಲಿ 569 ಪ್ರಾರ್ಥನೆ ಹಾಸುಗಳನ್ನು ಭಿನ್ನವಾಗಿ ಕಪ್ಪು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಮಸೀದಿಯ ದೊಡ್ಡ ಸಭಾಂಗಣದ ಮೂಲ ವಿನ್ಯಾಸವು ಷಹ ಜಹಾನ್‌ನು ಕಟ್ಟಿದ ಇತರ ಕಟ್ಟಡಗಳಂತೆ ವಿಶೇಷವಾಗಿ ದೆಹಲಿಯ ಮಸೀದ್‌-ಜಹಾನ್‌ ನುಮಾ ಅಥವಾ ಜಮಾ ಮಸೀದಿಯಂತೆ ಮೂರು ಗುಮ್ಮಟಗಳನ್ನು ಹೊಂದಿದೆ‌. ಈ ಕಾಲದ ಮೊಘಲ್‌ ಮಸೀದಿಗಳು ಪ್ರಾರ್ಥನಾ ಮಂದಿರವನ್ನು ಒಂದು ಮುಖ್ಯ ಪ್ರಾರ್ಥನಾ ಸ್ಥಳ ಮತ್ತು ಎರಡೂ ಬದಿಯಲ್ಲಿ ಚಿಕ್ಕ ಪ್ರಾರ್ಥನಾ ಸ್ಥಳಗಳಂತೆ ಮೂರು ಮುಖ್ಯ ಭಾಗಗಳಾಗಿ ವಿಭಾಗಿಸುತ್ತವೆ. ತಾಜ್‌ ಮಹಲ್‌ನಲ್ಲಿ‌ ಪ್ರತಿ ಪ್ರಾರ್ಥನಾ ಸ್ಥಳದಲ್ಲಿ ದೊಡ್ಡದಾದ ಕಮಾನಿನಂತಹ ಗುಮ್ಮಟಕಾರದ ರಚನೆಯಿದೆ. ಈ ನೆರೆಹೊರೆಯ ಕಟ್ಟಡಗಳ ನಿರ್ಮಾಣ ಕಾರ್ಯ ೧೬೪೩ರಲ್ಲಿ ಪೂರ್ಣಗೊಂಡಿತು. ನಿರ್ಮಾಣ thumb|upright|ತಾಜ್‌ ಮಹಲ್‌ ಭೂಮಹಡಿ ವಿನ್ಯಾಸ ತಾಜ್‌ ಮಹಲ್‌ನ್ನು ಕೋಟೆಯ ನಗರ ಆಗ್ರಾದ ದಕ್ಷಿಣ ಭಾಗದಲ್ಲಿರುವ ಭೂಪ್ರದೇಶದಲ್ಲಿ ಕಟ್ಟಲಾಗಿದೆ. ತಾಜ್‌ ಮಹಲ್‌ ಕಟ್ಟಿದ್ದ ಸ್ಥಳಕ್ಕೆ ಪ್ರತಿಯಾಗಿ ಆಗ್ರಾದ ಕೇಂದ್ರ ಭಾಗದಲ್ಲಿದ್ದ ದೊಡ್ಡ ಅರಮನೆಯೊಂದನ್ನು ಷಹ ಜಹಾನ್‌ನು ಮಹರಾಜ ಜೈ ಸಿಂಗ್‌ರವರಿಗೆ ಕೊಡುಗೆಯಾಗಿ ನೀಡಿದನು.ಛಘ್ತೈ ಲೆ ತಾಜ್‌ ಮಹಲ್‌ p.೪; ಲಹವ್ರಿ ಬಾದ್‌ಷಾಹ್ ನಾಮ್‌ ಸಂ.೧ ಪು. ೪೦೩. ಸುಮಾರು ಮೂರು ಎಕರೆಗಳಷ್ಟು ಪ್ರದೇಶದಲ್ಲಿ ಭೂಶೋಧನೆ ಮಾಡಲಾಯಿತು. ನೀರು ಜಿನುಗುವುದನ್ನು ಕಡಿಮೆ ಮಾಡಲು ಕಸವನ್ನು ತುಂಬಿ ಮಣ್ಣನ್ನು ಹಾಕಲಾಯಿತು ಮತ್ತು ನದಿ ದಡದಿಂದ ಮೇಲಿನ ೫೦ ಮೀಟರ್‌ಗಳಷ್ಟು ಎತ್ತರದ ಪ್ರದೇಶವನ್ನು ಸಮತಟ್ಟು ಮಾಡಲಾಯಿತು.ಸಮಾಧಿ ಸ್ಥಳದಲ್ಲಿ ಹಿಂದೆ ಬಾವಿಗಳನ್ನು ತೋಡಲಾಗಿದ್ದು ಪಾದಾಧಾರಕಲ್ಲು ಮತ್ತು ಹೆಂಟೆಗಳಿಂದ ತುಂಬಿಸಲಾಗಿತ್ತು. ಬಲಿಷ್ಠ ಬಿದಿರಿನ ಬದಲು ದೊಡ್ಡ ಇಟ್ಟಿಗೆಯನ್ನು ಬಳಸಿ ಕೆಲಸಗಾರರು ಕಟ್ಟಿದ ಹಂಗಾಮಿ ಕಟ್ಟಡವು ಸಮಾಧಿಯನ್ನು ಹೋಲುತ್ತದೆ. ಈ ಹಂಗಾಮಿ ಕಟ್ಟಡವು ಎಷ್ಟು ದೊಡ್ಡದಾಗಿದೆ ಎಂದರೆ ಕೆಲಸಗಾರರ ಇದನ್ನು ಕಿತ್ತುಹಾಕಲು ವರ್ಷಗಳೇ ಬೇಕಾಗಬಹುದು. ದಂತಕತೆಯ ಪ್ರಕಾರ, ಹಂಗಾಮಿ ಕಟ್ಟಡದಿಂದ ಇಟ್ಟಿಗೆಗಳನ್ನು ಯಾರಾದರೂ ಕೀಳಬಹುದೆಂದು ಭಾವಿಸಿ ಅದನ್ನು ಕೀಳಲು ಷಹ ಜಹಾನ್‌ ‌ಆಜ್ಞಾಪಿಸಿದ್ದ. ಆದ್ದರಿಂದ ಒಂದೇ ರಾತ್ರಿಯಲ್ಲಿ ರೈತರಿಂದ ಅದನ್ನು ಕಿತ್ತುಹಾಕಲಾಯಿತು. ನಿರ್ಮಾಣ ಸ್ಥಳಕ್ಕೆ ಅಮೃತಶಿಲೆ ಮತ್ತು ವಸ್ತುಗಳನ್ನು ಸಾಗಿಸಲು ಹದಿನೈದು ಕಿಲೋಮೀಟರ್‌ಗಳ ಉದ್ದದ ಜಲ್ಲಿಯಿಂದ ಹದಗೊಳಿಸಿದ ರಸ್ತೆಯನ್ನು ಮಾಡಲಾಗಿತ್ತು ಮತ್ತು ಅದರಲ್ಲಿ ಇಪ್ಪತ್ತು ಅಥವಾ ಮೂವತ್ತು ಎತ್ತುಗಳಿಂದ ಎಳೆಯಲ್ಡಡುತ್ತಿದ್ದ ವಿಶೇಷವಾಗಿ ನಿರ್ಮಿಸಿದ ಬಂಡಿಗಳಲ್ಲಿ ದಿಮ್ಮಿಗಳನ್ನು ಸಾಗಿಸಲಾಗುತ್ತಿತ್ತು. ದೊಡ್ಡ ಕಂಬ ಮತ್ತು ತೊಲೆ ಬೇಕಾದ ಸ್ಥಾನಕ್ಕೆ ದಿಮ್ಮಿಗಳನ್ನು ಏರಿಸಲು ರಾಟೆ ವ್ಯವಸ್ಥೆಯನ್ನು ಬಳಸಲಾಗಿತ್ತು. ಪುರ್ಸ್‌ ನ ಉಪನದಿಗಳಿಂದ ನೀರನ್ನು ಹಗ್ಗ ಮತ್ತು ಬಕೆಟ್‌ನ್ನು ಬಳಸಿ ಪ್ರಾಣಿಗಳ ಸಹಾಯದಿಂದ ಎತ್ತಲಾಗುತ್ತಿತ್ತು ಮತ್ತು ಅದನ್ನು ದೊಡ್ಡ ಸಂಗ್ರಹ ತೊಟ್ಟಿಗೆ ತುಂಬಿ, ದೊಡ್ಡ ವಿತರಣಾ ತೊಟ್ಟಿಗೆ ಏರಿಸಲಾಗುತ್ತಿತ್ತು. ಅದರಿಂದ ನೀರನ್ನು ಮೂರು ಉಪ ತೊಟ್ಟಿಗಳಿಗೆ ಹಾಯಿಸಿ, ನಂತರ ಅಲ್ಲಿಂದ ಕೊಳವೆಯ ಮುಖಾಂತರ ಸಂಕೀರ್ಣಕ್ಕೆ ತಲುಪಿಸಲಾಗುತ್ತಿತ್ತು. ಪೀಠ ಮತ್ತು ಸಮಾಧಿಯ ನಿರ್ಮಾಣವನ್ನು ಪೂರ್ಣಗೊಳಿಸಲು ಸುಮಾರು ೧೨ ವರ್ಷ ತೆಗೆದುಕೊಳ್ಳಲಾಗಿತ್ತು. ಸಂಕೀರ್ಣದ ಇನ್ನುಳಿದ ಭಾಗವನ್ನು ಎಂದರೆ ಕ್ರಮವಾಗಿ ಮಸೀದಿಗಳು, ಜವಾಬ್‌ ಮತ್ತು ದ್ವಾರಬಾಗಿಲು ಕಟ್ಟಲು ಮತ್ತೆ ೧೦ ವರ್ಷಗಳ ಸಮಯ ಹಿಡಿಯಿತು. ಸಂಕೀರ್ಣದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ, ಕಟ್ಟಡ "ಪೂರ್ಣಗೊಳ್ಳುವ" ವಿಚಾರದಲ್ಲಿ ವ್ಯತ್ಯಾಸಗಳಿದ್ದ ಕಾರಣ ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವ ದಿನಾಂಕದಲ್ಲೂ ಒಮ್ಮತವಿರಲಿಲ್ಲ. ಇದಕ್ಕೆ ಉದಾಹರಣೆ ಎಂದರೆ, ಭವ್ಯ ಸಮಾಧಿಯು ೧೬೪೩ರಲ್ಲಿ ಪೂರ್ಣಗೊಂಡಿತು, ಆದರೆ ಸಂಕೀರ್ಣದ ಉಳಿದ ಭಾಗದ ನಿರ್ಮಾಣ ಕಾರ್ಯ ಬಾಕಿ ಇದ್ದು ಕೆಲಸ ಮುಂದುವರಿಯಿತು. ಎಲ್ಲ ಸಮಯದಲ್ಲೂ ಅಂದಾಜು ವೆಚ್ಚವವನ್ನು ಕರಾರುವಕ್ಕಾಗಿ ಲೆಕ್ಕ ಹಾಕುವುದು ಕಷ್ಟವಾದ್ದರಿಂದ ಅಂದಾಜು ನಿರ್ಮಾಣದ ವೆಚ್ಚ ಬದಲಾಗುತ್ತಿತ್ತು. ಆ ಕಾಲದಲ್ಲೇ ಒಟ್ಟು ವೆಚ್ಚವನ್ನು ಸುಮಾರು ೩೨ ದಶಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು.ಡಾ. ಎ. ಜಾಹೂರ್‌ ಮತ್ತು ಡಾ. ಜೆಡ್‌. ಹಕ್‌. ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾರತ ಮತ್ತು ಏಷ್ಯಾದ್ಯಂತದ ದೊರೆಯುವ ಹಲವು ವಸ್ತುಗಳನ್ನು ಬಳಸಿ ನಿರ್ಮಿಸಲಾಯಿತು ಮತ್ತು ಸುಮಾರು ೧,೦೦೦ ಆನೆಗಳನ್ನು ಕಟ್ಟಡ ನಿರ್ಮಾಣದಲ್ಲಿ ವಸ್ತುಗಳ ಸಾಗಣಿಕೆಗಾಗಿ ಬಳಸಲಾಯಿತು. ರಾಜಸ್ಥಾನದಿಂದ ಪಾರದರ್ಶಕವಾದ ಬಿಳಿ ಅಮೃತಶಿಲೆಯನ್ನು, ಪಂಜಾಬ್‌ನಿಂದ ಜ್ಯಾಸ್ಪರ್‌ನ್ನು, ಚೀನಾದಿಂದ ಜೇಡ್‌ ಮತ್ತು ಸ್ಪಟಿಕವನ್ನು ತರಿಸಲಾಗಿತ್ತು. ಟಿಬೆಟ್‌ನಿಂದ ವೈಡೂರ್ಯ, ಅಫ್ಘಾನಿಸ್ಥಾನದಿಂದ ಲ್ಯಾಪಿಸ್‌ ಲಜುಲಿ, ಶ್ರೀಲಂಕಾದಿಂದ ನೀಲಮಣಿ ಮತ್ತು ಅರೇಬಿಯಾದಿಂದ ಕ್ಯಾಲ್ಸಡೆನಿಯನ್ನು ತರಿಸಿಕೊಂಡು ಅದನ್ನು ನಿರ್ಮಾಣದಲ್ಲಿ ಬಳಸಿಕೊಳ್ಳಲಾಗಿತ್ತು. ಒಟ್ಟಾಗಿ ಇಪ್ಪತ್ತೆಂಟು ವಿಧಗಳ ಅತ್ಯಮೂಲ್ಯ ಮತ್ತು ಅಮೂಲ್ಯ ರತ್ನಗಳನ್ನು ಬಿಳಿ ಅಮೃತಶಿಲೆಯಲ್ಲಿ ಕೊರೆದು ಇಡಲಾಯಿತು. thumb|upright|ಸ್ಮಿಥ್ಸೊನಿಯನ್‌ ಸಂಸ್ಥೆಯಿಂದ ತಾಜ್‌ ಮಹಲ್‌ನ ಕಲೆಗಾರರ ಅನಿಸಿಕೆ ಉತ್ತರ ಭಾರತದಾದ್ಯಂತ ಇಪ್ಪತ್ತು ಸಾವಿರ ಕಾರ್ಮಿಕರನ್ನು ಕಟ್ಟಡ ಕೆಲಸದಲ್ಲಿ ಬಳಸಿಕೊಳ್ಳಲಾಗಿತ್ತು. ಬುಖಾರದಿಂದ ಶಿಲ್ಪಿಗಳು, ಸಿರಿಯಾ ಮತ್ತು ಪರ್ಷಿಯಾದಿಂದ ಸುಂದರ ಲಿಪಿಗಾರರು, ದಕ್ಷಿಣ ಭಾರತದಿಂದ ವಾಸ್ತುಶಿಲ್ಪಿಗಳು, ಬಲೂಚಿಸ್ತಾನದಿಂದ ಕಲ್ಲುಕಡೆಯುವವರು, ಕಟ್ಟಡದ ಗೋಪುರ ಕಟ್ಟುವುದರಲ್ಲಿ ಪರಿಣಿತರು, ಅಮೃತಶಿಲೆಯಲ್ಲಿ ಹೂಗಳನ್ನು ಕೆತ್ತುವವರು ಕ್ರಿಯಾತ್ಮಕ ಘಟಕವನ್ನು ರಚಿಸಿದ ಮೂವತ್ತೇಳು ಜನರಲ್ಲಿದ್ದಾರೆ. ಈ ಕೆಳಗಿನವರು ತಾಜ್‌ ಮಹಲ್‌ ನಿರ್ಮಾಣದಲ್ಲಿ ಭಾಗಿಯಾದ ಕೆಲವು ನಿರ್ಮಾಪಕರಾಗಿದ್ದಾರೆ: ಇಸ್ಮಾಯಿಲ್‌ ಅಫಾಂದಿನು (a.ka. ಇಸ್ಮಾಯಿಲ್ ‌ಖಾನ್‌) ಒಟ್ಟೊಮಾನ್‌ ಸಾಮ್ರಾಜ್ಯದವನಾದ ಇವರು - ಮುಖ್ಯ ಗುಮ್ಮಟದ ವಿನ್ಯಾಸಕರಾಗಿದ್ದಾರೆ.ರವರು ತಾಜ್‌ ಮಹಲ್‌ನ್ನು ವಿನ್ಯಾಸಗೊಳಿಸಿದರು. ಒಟ್ಟೊಮಾನ್‌ ಸಾಮ್ರಾಜ್ಯದ ಕೊಕ ಮಿಮರ್‌ ಸಿನಾನ್‌ ಅಘರಿಂದ ತರಬೇತಿ ಪಡೆದ ಪರ್ಷಿಯಾದ ಉಸ್ತಾದ್ ಇಸಾ ಮತ್ತು ಇಸಾ ಮಹಮ್ಮದ್‌ ಎಫ್ಫಿಂದಿರವರು ವಾಸ್ತುಶಿಲ್ಪ ವಿನ್ಯಾಸದಲ್ಲಿ ಪ್ರಮುಖ ಪಾತ್ರವನ್ನು ಆಗಾಗ್ಗೆ ನಿರ್ವಹಿಸಿದ್ದಾರೆ.ವಿಲಿಯಂ ಜೆ. ಹೆನ್ನೆಸ್ಸಿ, Ph.D., ನಿರ್ದೇಶಕರು, ಯುನಿವ್‌. ಆಫ್‌ ಮಿಚಿಗನ್‌ ಮ್ಯೂಸಿಯಂ ಆಫ್‌ ಆರ್ಟ್‌. IBM ೧೯೯೯ ವರ್ಡ್‌ ಬುಕ್‌.ಮಾರ್ವಿನ್‌ ಟ್ರ್ಯಾಕ್ಟೆನ್‌ಬರ್ಗ್‌ ಮತ್ತು ಇಸಾಬೆಲ್ಲಾ ಹೈಮಾನ್‌. ಪೂರ್ವ ಇತಿಹಾಸ ಮತ್ತು ಆಧುನಿಕತೆಯ ನಂತರದ ವಾಸ್ತುಶಿಲ್ಪ. ಪು. ೨೨೩. ಪರ್ಷಿಯಾದ ಬನಾರಸ್‌‌‌ನಿಂದ ಬಂದಿರುವ 'ಪುರು'ರವರು ವಾಸ್ತುಶಿಲ್ಪವನ್ನು ಪರಿಶೀಲಿಸಿದ್ದಾರೆಂದು ಉಲ್ಲೇಖಿಸಲಾಗಿದೆ.ISBN ೯೬೪-೭೪೬೩-೩೯-2೨. ಲಹೋರ್‌ ಮೂಲದ ಖಾಜಿಮ್‌ ಖಾನ್‌ರವರು ಬಲಿಷ್ಠ ಚಿನ್ನದ ಗೋಪುರವನ್ನು ವಿನ್ಯಾಸಗೊಳಿಸಿದರು. ದೆಹಲಿಯಿಂದ ಬಂದಿರುವ ಶಿಲ್ಪಿ ಚಿರಾಂಜಿಲಾಲ್‌ರವರು ಪ್ರಮುಖ ಶಿಲ್ಪಿ ಮತ್ತು ಮೊಸಾಯಿಕ್‌ ಚಿತ್ರಕಾರರಾಗಿದ್ದರು. ಇರಾನ್‌ನ ಸಿರಾಜ್‌ನಿಂದ ಬಂದಿರುವ ಅಮಾನತ್‌ ಖಾನ್‌ರವರು ಮುಖ್ಯ ಸುಂದರ ಬರಹಗಾರರಾಗಿದ್ದರು.10877 . ಮಹಮ್ಮದ್‌ ಹನಿಫ್‌ರವರು ಕಲ್ಲುಕಡಿಯುವವರ ಮೇಲ್ವಿಚಾರಕರಾಗಿದ್ದರು. ಸಿರಾಜ್‌ನ ಮಿರ್‌ ಅಬ್ದುಲ್‌ ಕರೀಮ್‌ ಮತ್ತು ಮುಕ್ಕರಿಮತ್‌ ಖಾನ್‌ರವರು ದೈನಂದಿನ ನಿರ್ಮಾಣಕ್ಕೆ ಬೇಕಾದ ಹಣಕಾಸು ಮತ್ತು ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು. ಇತಿಹಾಸ thumb|left|ಸ್ಯಾಮ್ಯುಲ್‌ ಬೌರ್ನೆರವರಿಂದ ತಾಜ್‌ ಮಹಲ್‌, ೧೮೬೦. thumb|left|ರಕ್ಷಣಾತ್ಮಕ ಯುದ್ಧದ ಸಮಯದ ಹಂಗಾಮಿ ಕಟ್ಟಡ ತಾಜ್‌ ಮಹಲ್‌ನ ನಿರ್ಮಾಣವು ಪೂರ್ಣಗೊಂಡ ಕೆಲವೇ ದಿನಗಳ ನಂತರ, ಷಹ ಜಹಾನ್‌‌ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೆ ಒಳಗಾದನು ಮತ್ತು ಅವನನ್ನು ಆಗ್ರಾ ಬಂದರಿನ ಬಳಿ ಗೃಹ ಬಂಧನದಲ್ಲಿಡಲಾಯಿತು. ಷಹ ಜಹಾನ್‌‌ನ ಮರಣದ ನಂತರ, ಅವನ ಹೆಂಡತಿಯ ಸಮಾಧಿಯ ಪಕ್ಕದಲ್ಲಿ ಔರಂಗಜೇಬ್‌ ಷಹ ಜಹಾನ್‌‌ನನ್ನು ಮಣ್ಣು ಮಾಡಿದನು.ಗ್ಯಾಸ್ಕೊಯಿನ್‌, ಬಾಂಬರ್‌ (೧೯೭೧). ದಿ ಗ್ರೇಟ್‌ ಮೊಘಲ್ಸ್‌. ನ್ಯೂಯಾರ್ಕ್‌:ಹಾರ್ಪರ್‌ ಮತ್ತು ರೊವ್‌. ಪು. ೨೪೩. ೧೯ನೇ ಶತಮಾನ ಅಂತ್ಯದ ವೇಳೆಗೆ, ದುರಸ್ತಿ ಮಾಡದ ಕಾರಣ ಕಟ್ಟಡದ ಕೆಲವು ಭಾಗಗಳು ಕುಸಿದು ಬಿದ್ದವು. ೧೮೫೭ರ ಭಾರತದ ಸ್ವಾತಂತ್ರ್ಯ ದಂಗೆಯ ಸಮಯದಲ್ಲಿ, ಬ್ರಿಟಿಷ್‌ ಸೈನಿಕರು ಮತ್ತು ಸರಕಾರಿ ಅಧಿಕಾರಿಗಳು ತಾಜ್‌ ಮಹಲ್‌ನ ಗೋಡೆಗಳಿಂದ ಅಮೂಲ್ಯ ರತ್ನಗಳು ಮತ್ತು ಲ್ಯಾಪಿಸ್‌ ಲಜುಲಿಯನ್ನು ಮೋಸದಿಂದ ತೆಗೆದುಕೊಂಡು ಹೋದರು. ಇದರಿಂದ ತಾಜ್‌ ಮಹಲ್‌ನ ಅಂದ ಹಾಳಾಯಿತು. ೧೯ನೇ ಶತಮಾನದ ಕೊನೆಯಲ್ಲಿ, ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌‌ ಭಾರಿ ಪ್ರಮಾಣದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಆದೇಶಿಸಿದನು. ಅದು ೧೯೦೮ರಲ್ಲಿ ಪೂರ್ಣಗೊಂಡಿತು.ಲಾರ್ಡ್‌ ಕರ್ಜೋನ್‌ನ ಹಿತ್ತಾಳೆ ದೀಪ .ಯಾಪ್‌, ಪೀಟರ್‌ (೧೯೮೩). ಪ್ರವಾಸಿಗರ ಉಲ್ಲೇಖಗಳ ನಿಘಂಟು. ಲಂಡನ್‌:ರೂಟ್‌ಲೆಡ್ಜ್‌ ಕೆಗನ್‌ ಮತ್ತು ಪೌಲ್‌. ಪು. ೪೬೦. ಅವನು ಕೈರೊ ಮಸೀದಿಯಲ್ಲಿರುವ ದೊಡ್ಡ ದೀಪದ ಮಾದರಿಯ ದೀಪವನ್ನು ಒಳಾಂಗಣ ಕೋಣೆಯಲ್ಲಿರಿಸಲು ಆದೇಶಿಸಿದನು. ಈ ಸಮಯದಲ್ಲಿ ಉದ್ಯಾನವನ್ನು ಇಂದಿಗೂ ಇರುವ ಬ್ರಿಟಿಷ್‌-ಶೈಲಿಯ ಹುಲ್ಲುಹಾಸುಗಳೊಂದಿಗೆ ಹೊಸದಾಗಿ ರೂಪಿಸಲಾಯಿತು. ೧೯೪೨ರಲ್ಲಿ ಸರಕಾರವು ಜರ್ಮನ್‌ ಲುಫ್ಟಪಾಫ್ಪೆಯ ವಾಯು ದಾಳಿ ಮತ್ತು ನಂತರದ ದಿನಗಳಲ್ಲಿ ಜಪಾನಿನ ವಾಯು ಪಡೆಯ ದಾಳಿಯನ್ನು ನಿರೀಕ್ಷಿಸಿ ಹಂಗಾಮಿ ಕಟ್ಟಡವನ್ನು ಸ್ಥಾಪಿಸಿತು. ೧೯೬೫ ಮತ್ತು ೧೯೭೧ರ ಭಾರತ-ಪಾಕಿಸ್ತಾನ ಯುದ್ಧಗಳ ಸಮಯದಲ್ಲಿ, ಯುದ್ದ ವಿಮಾನಗಳ ಚಾಲಕರನ್ನು ದಾರಿ ತಪ್ಪಿಸಲು ಮತ್ತೆ ಹಂಗಾಮಿ ಕಟ್ಟಡಗಳನ್ನು ಕಟ್ಟಲಾಗಿತ್ತು.ತಾಜ್‌ ಮಹಲ್‌ 'ಮರೆಮಾಡಲಾಗಿದೆ'.ಭಾರತದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳು ವಿರೋಧಿಸಿದ ಮಥುರಾ ತೈಲ ಸಂಸ್ಕರಣೆ ಕೇಂದ್ರದಿಂದತಾಜ್‌ ಮಹಲ್‌ನ ಮೇಲೆ ತೈಲ ಸಂಸ್ಕರಣಾ ಪರಿಣಾಮ‌ . ಉಂಟಾಗುತ್ತಿರುವ ಅಮ್ಲ ಮಳೆಆಮ್ಲ ಮಳೆ ಮತ್ತು ತಾಜ್‌ ಮಹಲ್‌. ಸೇರಿದಂತೆ ಯಮುನಾ ನದಿಯಲ್ಲಿ ಉಂಟಾಗುತ್ತಿರುವ ಪರಿಸರ ಮಾಲಿನ್ಯವು ತಾಜ್‌ ಮಹಲ್‌ಗಿರುವ ತೀರಾ ಇತ್ತೀಚಿನ ಅಪಾಯಗಳು. ಮಾಲಿನ್ಯವು ತಾಜ್‌ ಮಹಲ್‌ನ ಬಣ್ಣವನ್ನು ಹಳದಿಯಾಗಿಸಿದೆ. ಮಾಲಿನ್ಯವನ್ನು ನಿಯಂತ್ರಿಸಲು, ಸ್ಮಾರಕದ ಸುತ್ತಮುತ್ತ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಮಾನಕವನ್ನು ಅಳವಡಿಸಿರುವ 10,400 ಘನ ಕಿಲೋಮೀಟರ್‌ (೪,೪೦೫ ಘನ ಮೈಲಿ) ಪ್ರದೇಶದಲ್ಲಿ ಭಾರತ ಸರಕಾರವು ತಾಜ್‌ ವಿಷಮ ಚತುರ್ಭುಜ ವಲಯವನ್ನು (TTZ) ಸ್ಥಾಪಿಸಿದೆ.http.//www.unesco.org/courier/2000_07/uk/signe.htm ೧೯೮೩ರಲ್ಲಿ ತಾಜ್‌ ಮಹಲ್‌ನ್ನು UNESCO ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಮಾನ್ಯ ಮಾಡಿತು.ತಾಜ್‌ ಮಹಲ್‌ ವಿಶ್ವ ಪಾರಂಪರಿಕ ತಾಣ ಪು.. ಪ್ರವಾಸೋದ್ಯಮ thumb|೨೦೦೦ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಅವರ ಪತ್ನಿ ಲ್ಯುಡ್ಮಿಲಾ ಪುಟಿನ್‌ರವರು ತಾಜ್‌ ಮಹಲ್‌ಗೆ ಭೇಟಿ ನೀಡಿದ್ದರು. ವಾರ್ಷಿಕವಾಗಿ ತಾಜ್‌ ಮಹಲ್‌ಗೆ ೨ ರಿಂದ ೪ ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇವರಲ್ಲಿ ೨೦೦,೦೦೦ಕ್ಕಿಂತ ಹೆಚ್ಚು ಜನರು ವಿದೇಶದಿಂದ ಬಂದವರಾಗಿರುತ್ತಾರೆ. ಹೆಚ್ಚಿನ ಪ್ರವಾಸಿಗರು ಚಳಿಗಾಲವಾದ ಅಕ್ಟೋಬರ್‌, ನವೆಂಬರ್ ಮತ್ತು ಫೆಬ್ರುವರಿ ತಿಂಗಳುಗಳಲ್ಲಿ ಭೇಟಿ ನೀಡುತ್ತಾರೆ. ಸಂಕೀರ್ಣದ ಸಮೀಪ ಮಾಲಿನ್ಯಕಾರಕ ವಾಹನಗಳನ್ನು ನಿಷೇಧಿಸಲಾಗಿದೆ. ಪ್ರವಾಸಿಗರು ವಾಹನ ನಿಲುಗಡೆ ಪ್ರದೇಶದಿಂದ ನಡೆದುಕೊಂಡು ಹೋಗಬೇಕು ಇಲ್ಲವೇ ವಿದ್ಯುತ್‌ ಬಸ್ಸನ್ನು ಹತ್ತಿ ಪ್ರಯಾಣಿಸಬೇಕು. ಖವಾಸ್‌ಪುರಾಸ್‌‌ನ್ನು (ಉತ್ತರ ಬೀದಿ) ಪ್ರಸ್ತುತವಾಗಿ ಹೊಸ ಪ್ರವಾಸಿ ಕೇಂದ್ರದಂತೆ ಬಳಸುವುದಕ್ಕಾಗಿ ನವೀಕರಿಸಲಾಗಿದೆ.ಕೊಚ್‌, ಪು. ೧೨೦.ಕೊಚ್‌, ಪು. ೨೫೪. ತಾಜ್‌ನ ದಕ್ಷಿಣ ಭಾಗದಲ್ಲಿರುವ ಚಿಕ್ಕ ಪಟ್ಟಣವನ್ನು ತಾಜ್‌ ಘಂಜಿ ಅಥವಾ ಮಮ್ತಾಜಾಬಾದ್‌ ಎಂದು ಕರೆಯುತ್ತಾರೆ. ಮೂಲತಃ ಇದನ್ನು ಪ್ರವಾಸಿಗರು ಮತ್ತು ಕೆಲಸಗಾರರ ಅವಶ್ಯಕತೆಗಳನ್ನು ಪೂರೈಸಲು ತಂಗುದಾಣ, ಬೀದಿ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಇಲ್ಲಿ ನಿರ್ಮಿಸಲಾಗಿತ್ತು.ಕೊಚ್‌, ಪು. 201-208. ವಿಶ್ವದಾದ್ಯಂತ ಇರುವ ಶಿಫಾರಸು ಮಾಡಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ತಾಜ್‌ ಮಹಲ್ ಸೇರಿದೆ. ಅಲ್ಲದೆ, ಇತ್ತೀಚೆಗೆ ನೆಡೆದ ಚುನಾವಣೆಯಲ್ಲಿ 100 ದಶಲಕ್ಷ ಮತಗಳೊಂದಿಗೆ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿರುವುದು ಸೇರಿದಂತೆ ಆಧುನಿಕ ಜಗತ್ತಿನ ಏಳು ಅದ್ಭುತಗಳ ಪಟ್ಟಿಗಳಲ್ಲೂ ಕೂಡ ಸೇರಿದೆ‌. ತಾಜ್‌ ಮಹಲ್‌ನ ಆವರಣ ಪ್ರತಿ ಶುಕ್ರವಾರದ 12 ರಿಂದ 2 ಗಂಟೆಗಳವರೆಗೆ ಪ್ರಾರ್ಥನೆಗೆಂದು ತೆರೆಯುವ ಕಾರಣ ಶುಕ್ರವಾರವನ್ನು ಹೊರತುಪಡಿಸಿ ವಾರಾಂತ್ಯದ ದಿನಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 7ಗಂಟೆಯವ ಪ್ರವಾಸಿಗರಿಗೆ ತೆರೆದಿರುತ್ತದೆ. ಸಂಕೀರ್ಣವು http.//asi.nic.in/asi_monu_whs_agratajmahal_night.asp ಶುಕ್ರವಾರಗಳು ಮತ್ತು ರಂಜಾನ್‌ ತಿಂಗಳನ್ನು ಹೊರತುಪಡಿಸಿ, ಹುಣ್ಣಿಮೆ ಹಾಗೂ ಹುಣ್ಣೆಮೆಯ ಹಿಂದಿನ ಮತ್ತು ನಂತರ ಎರಡು ದಿನ ತಾಜ್‌ ಮಹಲ್‌ನ ರಾತ್ರಿ ವೀಕ್ಷಣೆಗೆಂದೇ ಪ್ರವಾಸಿಗರಿಗೆ ಪ್ರವೇಶ ತೆರೆದಿರಲಾಗಿರುತ್ತದೆ. ಭದ್ರತಾ ಕಾರಣಗಳಿಗಾಗಿ DNA - ಭಾರತ ತಾಜ್‌ನತ್ತ ಸಾಗುತ್ತಿದೆಯೆ? ಇದನ್ನು ನೀವೆಲ್ಲರೂ ಕೊಂಡೊಯ್ಯಬಹುದು - ದೈನಂದಿನ ಸುದ್ದಿ ಮತ್ತು ವಿಶ್ಲೇಷಣೆ. ಪಾರದರ್ಶಕ ಬಾಟಲುಗಳಲ್ಲಿ ನೀರು, ಚಿಕ್ಕ ವೀಡಿಯೊ ಕ್ಯಾಮರಾಗಳು, ಸ್ಟಿಲ್‌ ಕ್ಯಾಮರಾಗಳು, ಸಂಚಾರಿ ದೂರವಾಣಿಗಳು ಮತ್ತು ಮಹಿಳೆಯರ ಚಿಕ್ಕ ಪರ್ಸುಗಳಂತಹ ಐದು ವಸ್ತುಗಳನ್ನು ಮಾತ್ರ ತಾಜ್‌ ಮಹಲ್‌ನೊಳಗೆ ಅನುಮತಿಸಲಾಗಿದೆ. ನಂಬಿಕೆಗಳು ತಾಜ್ ಮಹಲ್ ನಿರ್ಮಾಣವಾದಾಗಿನಿಂದಲೂ ಬೆರಗುಗೊಳಿಸುವಂತಿದ್ದು, ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ಅತೀತವಾಗಿದೆ, ಅಷ್ಟೆ ಅಲ್ಲದೆ ಸ್ಮಾರಕ ಕುರಿತ ತಾರ್ಕಿಕ ನಿಷ್ಕರ್ಷೆಗಳ ಮೇಲೆ ವೈಯಕ್ತಿಕ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು ನಿರಂತರವಾಗಿ ಮೇಲುಗೈ ಸಾಧಿಸಿವೆ.ಕೊಚ್‌, ಪು. 231. right|thumb|upright|ಜೀನ್‌-ಬಪ್ಟಿಸ್ಟೆ ಟ್ಯಾವೆರ್ನಿಯರ್‌ರವರು ತಾಜ್‌ ಮಹಲ್‌ಗೆ ಭೇಟಿ ನೀಡಿದ ಮೊದಲ ವೀದೇಶಿ ಪ್ರವಾಸಿಗ ಯಮುನಾ ನದಿಯುದ್ದಕ್ಕೂ ಕಪ್ಪು ಅಮೃತಶಿಲೆಯಲ್ಲಿ ಭವ್ಯ ಸಮಾಧಿಯನ್ನು ನಿರ್ಮಿಸಲು ಷಹ ಜಹಾನ್‌‌ ಯೋಜನೆ ರೂಪಿಸಿದ್ದನು ಎಂಬುದನ್ನು ಐತಿಹಾಸಿಕ ಕಾಲದಿಂದಲೇ ಚಾಲ್ತಿಯಲ್ಲಿರುವ ನಂಬಿಕೆಗಳು ಹೇಳುತ್ತವೆ.ಆಶರ್‌, ಪು. ೨೧೦. ೧೬೬೫ರಲ್ಲಿ ಆಗ್ರಾಕ್ಕೆ ಭೇಟಿ ನೀಡಿದ ಯೂರೋಪಿಯನ್ ಪ್ರವಾಸಿಗ ಜೀನ್‌-ಬಾಪ್ಟಿಸ್ಟ್‌ ಟ್ಯಾವೆರ್ನಿಯರ್‌ನ ಕಾಲ್ಪನಿಕ ಬರಹಗಳಲ್ಲಿ ಈ ಕುರಿತು ಪ್ರಸ್ತಾಪ ಮಾಡಲಾಗಿದೆ.ಸಮಾಧಿಯ ನಿರ್ಮಾಣ ಸಾಧ್ಯವಾಗುವುದಕ್ಕಿಂತ ಮೊದಲೇ ಷಹ ಜಹಾನ್ ತನ್ನ ಮಗ ಔರಂಗಜೇಬ್‌ನಿಂದ ಪದಚ್ಯುತಿಗೊಂಡ ಎಂದು ಹೇಳಲಾಗಿದೆ. ಮಹ್ತಾಬ್‌ ಬಾಘ್‌ ನಬೆಳದಿಂಗಳ ಉದ್ಯಾನ ದಲ್ಲಿ ನದಿಯುದ್ದಕ್ಕೂ ಇರುವ ಕಪ್ಪು ಅಮೃತಶಿಲೆಯ ಅವಶೇಷಗಳು ಈ ದಂತಕತೆಯನ್ನು ಪುಷ್ಟೀಕರಿಸುವಂತಿವೆ.ಆದಾಗ್ಯೂ, ೧೯೯೦ರಲ್ಲಿ ಕೈಗೊಂಡ ಉತ್ಖನನಗಳು ಬಿಳಿ ಕಲ್ಲುಗಳು ಬಣ್ಣ ಕಳೆದುಕೊಂಡು ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ಕಂಡು ಹಿಡಿದಿವೆ.ಕೊಚ್‌, ಪು. ೨೪೯. ೨೦೦೬ರಲ್ಲಿ ಪ್ರಾಕ್ತನ ವಿಮರ್ಶಕರು ಬೆಳದಿಂಗಳದ ಉದ್ಯಾನದಲ್ಲಿರುವ ಕೊಳದ ಒಂದು ಭಾಗವನ್ನು ಪುನರ್‌ನಿರ್ಮಿಸಿ ಕಪ್ಪು ಭವ್ಯ ಸಮಾಧಿಯ ಮೂಲದ ಬಗ್ಗೆ ಹೆಚ್ಚು ನಂಬಲಾರ್ಹ ವಾದವನ್ನು ಮಂಡಿಸಿದರು. ಷಹ ಜಹಾನ್‌‌ನ ಯೋಚನಾ ಲಹರಿಗಳಿಗೆ ಅನುರೂಪವಾಗಿಸಿ ಮತ್ತು ಕೊಳವನ್ನು ಸ್ಥಳಕ್ಕೆ ತಕ್ಕಂತೆ ಹೊಂದಿಸಿಕೊಂಡು ಬಿಳಿ ಭವ್ಯ ಸಮಾಧಿಯ ಕಪ್ಪು ಪ್ರತಿಫಲನವನ್ನು ಸ್ಪಷ್ಟವಾಗಿ ನೋಡಬಹುದು.ಸೈನಿಕರ ಸಾಮ್ರಾಜ್ಯ: ಭಾರತದ ಮೊಘಲ್‌‌ರು(೨೦೦೬) A+E ದೂರದರ್ಶನ ಜಾಲ. ಸಮಾಧಿಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ವಾಸ್ತುಶಿಲ್ಪಿಗಳು ಮತ್ತು ಕುಶಲಕಾರ್ಮಿಕರನ್ನು ಷಹ ಜಹಾನ್ ಅಂಗವಿಚ್ಛೇದನಗೊಳಿಸಿದ್ದು, ಊನಗೊಳಿಸಿ ಪೀಡಿಸಿದ್ದು ಮತ್ತು ಇದರಿಂದಾಗಿ ಮರಣಗಳು ಸಂಭವಿಸಿದ ಬಗ್ಗೆ ಭಯಾನಕ ವಿವರಗಳಿವೆ. ಆದರೆ ಈ ವಿವರಗಳನ್ನು ಖಚಿತಪಡಿಸುವ ಯಾವುದೇ ಸಾಕ್ಷಿಗಳು ಇಲ್ಲ. ಇದೇ ತೆರನಾದ ವಿನ್ಯಾಸದ ಇನ್ನಾವುದೇ ನಿರ್ಮಾಣದಲ್ಲಿ ಭಾಗಿಯಾಗುವುದಿಲ್ಲ ಎಂಬ ಒಪ್ಪಂದಕ್ಕೆ ಸಮಾಧಿ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರಿಂದ ಸಹಿ ಹಾಕಿಸಿಕೊಳ್ಳಲಾಗಿತ್ತು ಎಂದೂ ಕೆಲವು ಕಥೆಗಳು ಹೇಳುತ್ತವೆ. ಇತರೆ ಹಲವು ಜನಪ್ರಿಯ ಕಟ್ಟಡಗಳ ಬಗ್ಗೆಯೂ ಇದೇ ತೆರನಾದ ಹೇಳಿಕೆಗಳಿವೆ.ಕೊಚ್‌, ಪು. ೨೩೯. ೧೮೩೦ರಲ್ಲಿ ಭಾರತದ ಗವರ್ನರ್‌ ಜನರಲ್‌ ಆಗಿದ್ದ ಲಾರ್ಡ್‌ ವಿಲಿಯಂ ಬೆಂಟಿಂಕ್‌ರವರು ತಾಜ್‌ ಮಹಲ್‌ ಕೆಡವಿ, ಅದರಲ್ಲಿರುವ ಅಮೃತಶಿಲೆಯನ್ನು ಹರಾಜು ಹಾಕಲು ಯೋಜಿಸಿದ್ದರು ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ, ಆಗ್ರಾ ಕೋಟೆಯ ನಿರ್ಮಾಣದ ವೇಳೆ ತ್ಯಜಿಸಲಾದ ಅಮೃತಶಿಲೆಯ ಮಾರಾಟದಿಂದ ನಿಧಿ-ಸಂಗ್ರಹಿಸಲು ಬೆಂಟೆಂಕ್‌ ಉದ್ದೇಶಿಸಿದ್ದೇ ಮೇಲಿನ ಕಥೆಯ ಹುಟ್ಟಿಗೆ ಮೂಲ ಕಾರಣ ಎಂದು ಬೆಂಟಿಂಕ್‌ರ ಜೀವನ ಚರಿತ್ರೆಕಾರ ಜಾನ್‌ ರೊಸ್ಸೆಲ್ಲಿ ಹೇಳಿದ್ದಾರೆ.ರೊಸ್ಸೆಲ್ಲಿ, ಜೆ., ಲಾರ್ಡ್‌ ವಿಲಿಯಂ ಬೆಂಟಿಂಕ್‌ ಉದಾರ ಚರ್ಕವರ್ತಿಯ ನಿರ್ಮಾಣ, ೧೭೭೪೫-೧೮೩೯ , ಸಸ್ಸೆಕ್ಸ್‌ ವಿಶ್ವವಿದ್ಯಾಲಯ ಮುದ್ರಣಾಲಯಕ್ಕಾಗಿ ಲಂಡನ್‌ ಚಾಟ್ಟೊ ವಿಂಡಸ್‌ ೧೯೭೪, ಪು. ೨೮೩. ತಾಜ್‌ ಮಹಲ್‌ನ್ನು ಕಟ್ಟಿಸಿದ್ದು ಹಿಂದೂ ರಾಜ ಎಂದು ತಿಳಿಸಿ ಪಿ.ಎನ್‌. ಓಕ್‌ರವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸರ್ವೋಚ್ಛ ನ್ಯಾಯಾಲಯ ೨೦೦೦ರಲ್ಲಿ ತಿರಸ್ಕರಿಸಿತು.ಓಕ್‌ರ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತು . ಭಾರತಕ್ಕೆ ಮುಸ್ಲಿಮರು ಆಕ್ರಮಣ ನಡೆಸುವುದಕ್ಕೂ ಮುಂಚೆಯಿದ್ದ, ಈಗ ಮುಸಲ್ಮಾನ ಸುಲ್ತಾನರಿಗೆ ಸೇರಿದ್ದು ಎನ್ನಲಾಗುವ ದೇಶದ ಇತರ ಐತಿಹಾಸಿಕ ಕಟ್ಟಡಗಳ ಜೊತೆಗೆ ತಾಜ್‌ ಗುರುತಿಸಿಕೊಂಡಿರುವ ಕಾರಣ, ಅದು ಹಿಂದೂ ಶಿವ ದೇವಾಲಯ ಮೂಲವನ್ನು ಹೊಂದಿದೆ ಎಂಬುದು ಓಕ್‌ರವರ ವಾದ. ರವೀಂದ್ರನಾಥ್‌ ಟಾಗೋರ್‌ರವರು ಈ ಸಮಾಧಿಯನ್ನು "ವನ್‌ ಟಿಯರ್‌‌-ಡ್ರಾಪ್‌...ಅಪಾನ್‌ ದಿ ಚಿಕ್‌ ಆಫ್‌ ಟೈಮ್‌"'' ಎಂದು ವರ್ಣಿಸಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ಸ್ಮಾರಕ ಸಮಾಧಿಯ ಮೇಲೆ ನೀರಿನ ಹನಿ ಬಿದ್ದಂತೆ ಎಂದು ಹೆಚ್ಚು ಕಾವ್ಯಾತ್ಮಕವಾಗಿ ಬಣ್ಣಿಸಲಾಗಿದೆ. ಶಿಖರಾಗ್ರದಲ್ಲಿರುವ ಛಾಯಾರೇಖಾಕೃತಿಯನ್ನು ಹೊಡೆದಲ್ಲಿ, ಅದು ನೀರನ್ನು ಹೊರಸೂಸುತ್ತದೆ ಎಂಬ ನಂಬಿಕೆಯೂ ಇದೆ. ಆದರೆ ಈವೆರೆಗೂ, ಛಾಯಾರೇಖಾಕೃತಿಯು ಬಳೆಗಳ ತುಂಡುಗಳಿಂದ ಸುತ್ತುವರಿದಿರುವುದನ್ನು ಮಾತ್ರ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಕೊಚ್‌, ಪು. ೨೪೦. ಪ್ರತಿಕೃತಿಗಳು ಬಾಂಗ್ಲಾದೇಶದ ತಾಜ್‌ ಮಹಲ್‌ , ಮಹಾರಾಷ್ಟ್ರದ ಔರಂಗಬಾದ್‌ನಲ್ಲಿರುವ ಬೀಬಿ ಕಾ ಮಕ್ಬಾರ, ಮತ್ತು ವಿಸ್ಕೊನ್ಸಿನ್‌ನ ಮಿಲ್ವೌಕಿನಲ್ಲಿರುವ ತ್ರಿಪೊಲಿ ಶ್ರಿನ್‌ ದೇವಾಲಯ ತಾಜ್‌ ಮಹಲ್‌ ಮಾದರಿಯ ಕಟ್ಟಡಗಳಾಗಿವೆ. ಇದನ್ನು ನೋಡಿರಿ ಪರ್ಷಿಯನ್‌ ವಾಸ್ತುಶಿಲ್ಪ ಹುಮಾಯೂನ್‌ರ ಸಮಾಧಿ ಆಗ್ರಾ ಕೋಟೆ ಫತೆಪುರ್‌ ಸಿಕ್ರಿ ಇತ್ಮಾದ್‌-ಉದ್‌-ದುಲ್ಹಾ ಭಾರತದ ವಾಸ್ತುಶಿಲ್ಪ ಟಿಪ್ಪಣಿಗಳು ಆಕರಗಳು ಆಶರ್‌, ಕ್ಯಾಥರಿನ್‌ ಬಿ. ಆರ್ಕಿಟೆಕ್ಚರ್‌ ಆಫ್ ಮುಘಲ್‌‌ ಇಂಡಿಯಾ ನ್ಯೂ ಕ್ಯಾಂಬ್ರಿಡ್ಜ್‌ ಭಾರತದ ಇತಿಹಾಸ ಸಂ.೪ (ಕ್ಯಾಂಬ್ರಿಡ್ಜ್‌ ವಿಶ್ವವಿದ್ಯಾಲಯ ಮುದ್ರಣಾಲಯ) ೧೯೯೨ ISBN 0-೫೨೧-೨೬೭೨೮-೫. ಬೆರ್ನಿಯರ್‌, ಫ್ರ್ಯಾಂಕೊಯಿ ಟ್ರಾವೆಲ್ಸ್‌ ಇನ್‌ ದ ಮೊಘಲ್‌ ಎಂಪಾಯರ್‌ A.D. ೧೬೫೨-೧೬೬೮ (ವೆಬ್‌ಮಿನಿಸ್ಟರ್‌: ಆರ್ಕಿಬಾಲ್ಡ್‌ ಕಾನ್‌ಸ್ಟೇಬಲ್‌ & ಕಂ.) ೧೮೯೧. ಕ್ಯಾರ್ರೆಲ್‌, ಡೇವಿಡ್‌ (೧೯೭೧). ದಿ ತಾಜ್‌ ಮಹಲ್‌ , ನ್ಯೂಸೀಕ್‌ ಬುಕ್ಸ್‌ ISBN 0-೮೮೫೫೨-೦೨೪-೮. ಛಘ್ತೈ, ಮಹಮದ್‌ ಅಬ್ದುಲ್ಲಾ ಲೆ ತಾಜ್‌ ಮಹಲ್‌ ಆಗ್ರಾ (ಇಂಡೆ). ಹಿಸ್ಟರಿ ಎಟ್‌ ಡೀಸ್ಕ್ರಿಪ್‌ಶನ್ (ಬ್ರುಸ್ಸೆಲ್ಸ್‌: ಎಡಿಶನ್ಸ್‌ ಡೆ ಲಾ ಕನ್ನೈಶನ್ಸ್‌) ೧೯೩೮. ಕೊಪಲ್ಸ್‌ಸ್ಟೋನ್‌, ಟ್ರೆವಿನ್‌. (ed). (೧೯೬೩). ವರ್ಡ್‌ ಆರ್ಕಿಟೆಕ್ಚರ್‌ ‌— ಆನ್‌ ಇಲ್ಯುಸ್ಟ್ರೇಟೆಡ್‌ ಹಿಸ್ಟರಿ. ಹಮ್ಲಿನ್‌, ಲಂಡನ್‌. ಗ್ಯಾಸ್ಕೊಯಿಜ್ನ್‌, ಬಾಂಬರ್‌ (೧೯೭೧). ದಿ ಗ್ರೇಟ್‌ ಮೊಘಲ್ಸ್‌ , ಹಾರ್ಪರ್‌ ಮತ್ತು ರೊವ್‌. ಹಾವೆಲ್‌, ಇ.ಬಿ. (೧೯೧೩). ಇಂಡಿಯನ್‌ ಆರ್ಕಿಟೆಕ್ಚರ್‌: ಇಟ್ಸ್‌ ಸೈಕೊಲಜಿ, ಸ್ಟ್ರಕ್ಚರ್‌ ಆಂಡ್‌ ಹಿಸ್ಟರಿ , ಜಾನ್‌ ಮುರ್ರೆ. ಕಾಂಬೊ, ಮಹಮದ್‌ ಸಾಲಿಹ್‌ ಅಮಲ್‌-ಈ-ಸಾಲಿಹ್‌ ಆರ್‌ ಷಹ ಜಹಾನ್‌‌ ನಾಮಹ್ Ed. ಗುಲಾಮ್‌ ಯಾಜ್ದಾನಿ (ಕಲ್ಕತ್ತಾ: ಬ್ಯಾಪ್ಟಿಸ್ಟ್‌ ಮಿಷನ್‌ ಮುದ್ರಣಾಲಯ) ಸಂ.I ೧೯೨೩. Vol. II ೧೯೨೭. ಲಾಹವ್ರಿ, 'ಅಬ್ದ್‌ ಅಲ್‌-ಹಮಿದ್‌ ಬಾದಷಹ ನಾಮಹ್ Ed. ಮೇಜರ್‌ ಡಬ್ಲ್ಯೂ.ಎನ್‌. ಲೀಸ್‌ರ ಮೇಲ್ವಿಚಾರಣೆಯಲ್ಲಿ ಮೌಲಾವಿಸ್‌ ಕಬೀರ್‌ ಅಲ್‌-ದಿನ್‌ ಅಹಮದ್‌ ಮತ್ತು 'ಅಬ್ದ್‌ ಅಲ್‌-ರಹೀಮ್‌. (ಕಲ್ಕತ್ತಾ: ಕಾಲೇಜ್‌ ಮುದ್ರಣಾಲಯ) ಸಂ. I ೧೮೬೭ ಸಂ. II ೧೮೬೮. ಲಾಲ್‌, ಜಾನ್‌ (೧೯೯೨). ತಾಜ್‌ ಮಹಲ್‌ , ಟೈಗರ್‌ ಅಂತರಾಷ್ಟ್ರೀಯ ಮುದ್ರಣಾಲಯ. ರೋತ್‌ಫಾರ್ಡ್‌, Ed (೧೯೯೮). ಇನ್‌ ದಿ ಲ್ಯಾಂಡ್ ಆಫ್‌ ತಾಜ್‌ ಮಹಲ್‌ , ಹೆನ್ರಿ ಹಾಲ್ಟ್‌ ISBN 0-8050-5299-2. ಸಕ್ಸೆನಾ, ಬನರ್ಸಿ ಪ್ರಸಾದ್‌ ಹಿಸ್ಟರಿ ಆಫ್‌ ಷಹಜಹಾನ್‌ ಆಫ್‌ ದೆಹಲಿ (ಅಲಹಾಬಾದ್‌: ದಿ ಇಂಡಿಯನ್‌ ಪ್ರೆಸ್‌ ಲಿ.) ೧೯೯೨. ಸ್ಟಾಲ್‌, ಬಿ (೧೯೯೫). ಆಗ್ರಾ ಆಂಡ್‌ ಫತೆಪುರ್‌ ಸಿಕ್ರಿ , ಮಿಲೆನಿಯಮ್‌. ಸ್ಟೀರ್ಲಿನ್‌, ಹೆನ್ರಿ [ಸಂಪಾದಕ] ಮತ್ತು ವೊಲ್ವಾಸೆನ್‌, ಆಂಡ್ರೀಸ್ (೧೯೯೫). ಆರ್ಕಿಟೆಕ್ಚರ್‌ ಆಫ್‌ ವರ್ಡ್‌: ಇಸ್ಲಾಮಿಕ್‌ ಇಂಡಿಯಾ, ತಾಚೆನ್‌ . ಟಿಲಿಟ್ಸನ್‌, ಜಿ.ಎಚ್‌.ಆರ್‌. (೧೯೯೦). ಆರ್ಕಿಟೆಕ್ಚರಲ್‌ ಗೈಡ್‌ ಟೂ ಮೊಘಲ್‌‌ ಇಂಡಿಯಾ , ಕ್ರೋನಿಕಲ್‌ ಬುಕ್ಸ್‌‌. ತಾಜ್ ಮಹಲ್ ಅಥವಾ ತೇಜೋ ಮಹಲ್ (www.ontipremi.blogspot.com) ಹೊರಗಿನ ಕೊಂಡಿಗಳು ಭಾರತದ ಪುರಾತತ್ವ ಸಂಸ್ಥೆ ವರದಿ ಭಾರತ ಸರಕಾರ - ವಿವರ ತಾಜ್‌ ಮಹಲ್‌ನ ಫೋಟೋಸಿಂಥ್‌ ವೀಕ್ಷಣೆ (ಫೋಟೋಸಿಂಥ್‌ನ ಅಗತ್ಯವಿದೆ) ವರ್ಗ:ಭಾರತದ ಸ್ಮಾರಕಗಳು ಮತ್ತು ಸ್ಮರಣಿಕೆಗಳು ವರ್ಗ:ಮೊಘಲ್‌‌ ವಾಸ್ತುಶಿಲ್ಪ ವರ್ಗ:ಮುಸ್ಲಿಂ ವಾಸ್ತುಶಿಲ್ಪ ವರ್ಗ:ಭಾರತೀಯ ವಾಸ್ತುಶಿಲ್ಪ ವರ್ಗ:ಆಗ್ರಾ ವರ್ಗ:ಗುಮ್ಮಟಗಳು ವರ್ಗ:ತಾಜ್‌ ಮಹಲ್‌ ವರ್ಗ:ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ ವರ್ಗ:ಆಗ್ರಾದಲ್ಲಿ ಪ್ರವಾಸೋದ್ಯಮ ವರ್ಗ:ಆಗ್ರಾದಲ್ಲಿರುವ ಕಟ್ಟಡಗಳು ಮತ್ತು ನಿರ್ಮಾಣಗಳು ವರ್ಗ:ಪ್ರವಾಸಿ ತಾಣಗಳು ವರ್ಗ:ವಾಸ್ತುಶಿಲ್ಪ ವರ್ಗ:ಉತ್ತರ ಪ್ರದೇಶ
ಹಿ೦ದಿ
https://kn.wikipedia.org/wiki/ಹಿ೦ದಿ
REDIRECT ಹಿಂದಿ ಭಾಷೆ
ಯೇಸು ಕ್ರಿಸ್ತ
https://kn.wikipedia.org/wiki/ಯೇಸು_ಕ್ರಿಸ್ತ
ಯೇಸು ಪದದ ನಿಷ್ಪತ್ತಿ 'ಯೇಸು' ಅಥವಾ 'ಜೀಸಸ್' ಪದವು ಗ್ರೀಕ್‌ನ ವ್ಯುತ್ಪನ್ನವಾದ ಪದವೆಂದು ತಜ್ಞರು ಹೇಳುತ್ತಾರೆ. 'ದೇವರೇ ಮೋಕ್ಷ' ಎಂಬುದು ತಜ್ಞರ ಅಭಿಪ್ರಾಯ. 'ಕ್ರಿಸ್ತ'ನ ಅರ್ಥ 'ರಕ್ಷಕ'. ಈ ಅರ್ಥದಲ್ಲಿ ಯೇಸು ಕ್ರಿಸ್ತ (ಜೀಸಸ್ ಕ್ರೈಸ್ಟ್) ಎಂಬ ಹೆಸರು ಉಪಯೋಗವಾಗುತ್ತದೆ. ಇಸ್ಲಾಮ್ ಧರ್ಮವು ಯೇಸುವನ್ನು ದೇವಕುಮಾರನೆಂದು ಹೇಳುವುದಿಲ್ಲ. ಬದಲಾಗಿ ಕ್ರಿಸ್ತನನ್ನು ಒಬ್ಬ ಮುಖ್ಯ ಪ್ರವಾದಿ ಎಂದು ಹೇಳುತ್ತದೆ. ಜನನ, ಜೀವನ ಯೇಸು ಹುಟ್ಟಿದ್ದು ಬೆತ್ಲೆಹೆಮ್‌ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ ಸಂತ ಜೋಸೆಫ್ ಒಬ್ಬ ಬಡಗಿ. ತಾಯಿ ಸಂತ ಮೇರಿ. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭಧರಿಸಿ ಪರಿಶುದ್ಧ ಜೀವನ ನಡೆಸುತ್ತಾಳೆ. ಯಾವುದೇ ದೇಹ ಸಂಪರ್ಕವಿಲ್ಲದೆ ದೇವರ ಅನುಗ್ರಹದಿಂದ,ಪವಿತ್ರವಾದ ಆತ್ಮದಿಂದ, ಮೇರಿಯು ಯೇಸುವಿಗೆ ಜನ್ಮ ನೀಡಿದ್ದಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಪುಟ್ಟ ಯೇಸುವಿನ ಜನನವಾಗುತ್ತದೆ. ಯೇಸು ಭೂಮಿ ಮೇಲೆ ಜನ್ಮ ಪಡೆದಾಗ ಆಕಾಶದಲ್ಲಿ ಒಂದು ದೊಡ್ಡ ನಕ್ಷತ್ರ ಕಾಣಿಸಿಕೊಂಡಿತು. ಇವತ್ತಿಗೂ ಮುಂಜಾನೆ, ಸಾಯಂಕಾಲ ಆಕಾಶದಲ್ಲಿ ಚುಕ್ಕೆ ಕಾಣಿಸುತ್ತದೆ. ಧರ್ಮಗ್ರಂಥ ಯೇಸುವಿನ ಜೀವನ ವೃತ್ತಾಂತ ಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ ಬೈಬಲ್‌ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. ಹಳೇ ಒಡಂಬಡಿಕೆ ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು. ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಉಲ್ಲೇಖಿಸಲ್ಪಟ್ಟಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ ಏಸುವನ್ನು ಶಿಲುಬೆಗೆ ಏರಿಸಲಾಗುತ್ತದೆ. ಯೇಸು ಶಿಲುಬೆಗೆ ಏರಿದ ದಿನವನ್ನು 'ಗುಡ್‍ಫ್ರೈಡೇ' ಎನ್ನುತ್ತಾರೆ. ಶಿಲುಬೆಗೆ ಏರುವ ಸಂದರ್ಭದಲ್ಲಿ ಏಸು ಸಾಮಾನ್ಯ ಮನುಷ್ಯರಂತೆ ಎಲ್ಲಾ ಕಷ್ಟಗಳಿಗೂ ತಮ್ಮ ದೇಹವನ್ನು ಒಡ್ಡುತ್ತಾರೆ. ಭಾರವಾದ ಶಿಲುಬೆಯನ್ನು ಹೊತ್ತು, ಮುಳ್ಳಿನ ಕಿರೀಟವನ್ನು ಧರಿಸಿ, ಅರಿಷಡ್ವರ್ಗಗಳನ್ನು ಗೆದ್ದು, ಶಿಲುಬೆಗೆ ಏರುವಾಗಲೂ 'ದೇವರೇ ಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲ. ಹಾಗಾಗಿ ಅವರನ್ನು ಕ್ಷಮಿಸು' ಎಂದು, ದೇವರಲ್ಲಿ ತಮ್ಮನ್ನು ಶಿಲುಬೆಗೆ ಏರಿಸಿದವರಿಗೂ ಕ್ಷಮಾದಾನ ನೀಡುತ್ತಾರೆ. ಹಾಗೂ ಶಿಲುಬೆಯ ಮೇಲೆ ಇದ್ದಾಗ ಕೊನೆಯಲ್ಲಿ ಏಳು ಶಬ್ದಗಳನ್ನು, ನುಡಿದು ತಮ್ಮ ಪ್ರಾಣವನ್ನು ದೇವರಿಗೆ ಅರ್ಪಿಸುತ್ತಾರೆ. ಆಮೇಲೆ ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಆ ದಿನವನ್ನು 'ಈಸ್ಟರ್ ಡೇ' ಎಂದು ಕರೆಯುತ್ತಾರೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ (ನ್ಯೂ ಟೆಸ್ಟಮೆಂಟ್) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ. ಏಳನೆಯ ಶತಮಾನದಿಂದೀಚೆಗೆ ಯೇಸುಕ್ರಿಸ್ತನ ಆಳೆತ್ತರದ ಪ್ರತಿಮೆಗಳನ್ನು ಮಾಡಿ ಮೆರುಗಿನ ವಸ್ತ್ರಗಳಿಂದ ಅಲಂಕರಿಸಿ, ಶಿಲುಬೆಯ ಬದಿಯಲ್ಲಿ ನಿಲ್ಲಿಸುವ ಪರಿಪಾಠ ಮೊದಲಾಯಿತು. ಕ್ರಮೇಣ ಯೇಸುಕ್ರಿಸ್ತನ ಯಾತನೆ ಮತ್ತು ಸಾವನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಲುವಾಗಿ ಯೇಸುಕ್ರಿಸ್ತನ ದೇಹವನ್ನು ನೈಜತೆಗೆ ಅತ್ಯಂತ ಹತ್ತಿರವಾಗಿ ರೂಪಿಸುವ ಪದ್ಧತಿ ಬೆಳೆದುಬಂತು ಯೇಸು ಮರಣದ ಮೇಲೆ ವಿಜಯ ಸಾಧಿಸಿದ ನಂತರ.40 ದಿನಗಳ ವರೆಗೆ ದೇವರ ವಾಕ್ಯಗಳನ್ನು ಜನರಿಗೆ ಹೇಳಿ,"ನಾನು ಮತ್ತೇ ಬರುತ್ತೇನೆ" ಎಂದು ಜನರಿಗೆ ವಾಗ್ದಾನ ನೀಡಿದರು. ಜನರಿಗೆ ಬರುವ ಚಿಹ್ನೆಗಳನ್ನು ನೀಡಿದರು. ಅವು ಯಾವವು ಅಂದರೆ ದೇಶ ದೇಶಗಳ ಮೇಲೆ ಯುದ್ಧ, ರಾಜ್ಯ ರಾಜ್ಯಗಳ ನಡುವೆ ಉಗ್ರ ಹೊರಾಟ ಆಗುತ್ತವೆ, ಎಲ್ಲಾಕಡೆ ತಾಳಲಾರದ ಭಷ್ಟಾಚಾರ, ಅನ್ಯಾಯ, ನಡೆಯುತ್ತವೆ ಹಾಗೂ ಎಲ್ಲಾ ಜನರಿಗೆ ದೇವರ ವಾಕ್ಯವು ಗೊತ್ತಾಗಬೇಕು. ಆವಾಗ ಮತ್ತೆ ಪುನಃ ನಾನು ಬರುತ್ತೇನೆ ಎಂದು ಯೇಸು ಹೇಳಿದರು. ಯೇಸುವಿನ ಸಿದ್ಧಾಂತ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಢ್ಯ, ಶೋಷಣೆ, ಕಂದಾಚಾರಗಳ ವಿರುದ್ಧ ಹಾಗೂ ಮಾನವತೆಯಿಲ್ಲದ ವಿರುದ್ಧ. ಯೇಸುಕ್ರಿಸ್ತರು ಅಂದು ಪ್ರಚಲಿತವಾಗಿದ್ದ 'ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು' ಎಂಬ ಮೃಗೀಯ ಅಥವಾ ಪ್ರತೀಕಾರದ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಂಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿರು. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತರು ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಯೇಸು ಆ ಸ್ತ್ರೀಯನ್ನುನೋಡಿ ಜನರಿಗೆ ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲು ಎಸೆಯಲಿ ಎಂದು ಹೇಳಿದಾಗ ಅವರಲ್ಲಿ ಎಲ್ಲರೂ ಅವಳನ್ನು ಬಿಟ್ಟು ಹೊರಟುಹೋದರು. ಅದರರ್ಥ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೈವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು. ನಿನ್ನ ನೆರೆಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮನಿಂದ, ಹಾಗೂ ಸತ್ಯದಿಂದ ಆರಾಧಿಸು. ಜಾರ್ಜ್ ಮತ್ತು ಗಾಡ್ ಸನ್ ಮೂನ್ ಅವನನ್ನು ಉಳಿಸಿದ ಜೀಸಸ್ ಅವನನ್ನು ಜಾರ್ಜ್ ಪುನರುತ್ಥಾನ ಮತ್ತು ಧನ್ಯವಾದಗಳು ಗಿಯಾರ್ಗಿಯೊ ನಾವು ಧನ್ಯವಾದಗಳು ಭೂಮಿಯ ಮೇಲೆ ನಮ್ಮ ದಿನಗಳ ಉಳಿದ ಕಾಲ. thumb|upright|12-year-old Jesus found in the temple depicted by James Tissot thumb|upright|Trevisani's depiction of the baptism of Jesus, with the Holy Spirit descending from Heaven as a dove thumb|A painting of Jesus' final entry into Jerusalem, by Jean-Léon Gérôme, 1897|alt=Jesus, riding a donkey colt, rides towards Jerusalem. A large crowd greets him outside the walls. thumb|left|"Adoration of the Shepherds" by Gerard van Honthorst, 1622|alt=A Nativity scene; men and animals surround Mary and newborn Jesus, who are covered in light thumb|right|The Transfiguration of Jesus, depicted by Carl Bloch Notes Explanatory Citations BIBLE ವರ್ಗ:ಕ್ರೈಸ್ತ ಧರ್ಮ
ಜೀಸಸ್
https://kn.wikipedia.org/wiki/ಜೀಸಸ್
REDIRECT ಯೇಸು ಕ್ರಿಸ್ತ
ಯೇಸು ಕ್ರಿಸ್ತ‌
https://kn.wikipedia.org/wiki/ಯೇಸು_ಕ್ರಿಸ್ತ‌
REDIRECT ಯೇಸು ಕ್ರಿಸ್ತ
ವಿದ್ಯುಚ್ಛಾಸ್ತ್ರ
https://kn.wikipedia.org/wiki/ವಿದ್ಯುಚ್ಛಾಸ್ತ್ರ
thumb|right|150px|ವಿದ್ಯುನ್ಮಾನ ಶಾಸ್ತ್ರದ ಒಂದು ಕೊಡುಗೆ - ವಿದ್ಯುತ್ ಪರಿವರ್ತಕ ವಿದ್ಯುಚ್ಛಾಸ್ತ್ರ ವಿದ್ಯುತ್ ಬಗ್ಗೆ ಅಧ್ಯಯನ ನಡೆಸಲಾಗುವ ಯಂತ್ರಶಾಸ್ತ್ರದ ಒಂದು ಪ್ರಕಾರ. ಕೆಲವು ಬಾರಿ ಋಣವಿದ್ಯುತ್ಕಣ ಪ್ರವಹಗಳನ್ನು ಅಭ್ಯಸಿಸುವ ವಿದ್ಯುನ್ಮಾನ ಶಾಸ್ತ್ರವನ್ನೂ ಕೂಡ ಇದೇ ಪ್ರಕಾರದಲ್ಲಿ ಸೇರಿಸಲಾಗುತ್ತದೆ. * ವರ್ಗ:ಭೌತಶಾಸ್ತ್ರ ವರ್ಗ:ತಂತ್ರಜ್ಞಾನ ವರ್ಗ:ಯಂತ್ರವಿಜ್ಞಾನ
ಎಂ.ಎಸ್.ಸುಬ್ಬುಲಕ್ಷ್ಮಿ
https://kn.wikipedia.org/wiki/ಎಂ.ಎಸ್.ಸುಬ್ಬುಲಕ್ಷ್ಮಿ
ಮಧುರೈ ಷಣ್ಮುಖವಡಿವು ಸುಬ್ಬುಲಕ್ಷ್ಮಿ (ಜನಪ್ರಿಯವಾಗಿ ಎಂ.ಎಸ್., ಅಥವಾ ಎಂ.ಎಸ್.ಎಸ್., ಎಮ್ಮೆಸ್ಸಮ್ಮ), (ಸೆಪ್ಟೆಂಬರ್ ೧೬, ೧೯೧೬ - ಡಿಸೆಂಬರ್ ೧೧, ೨೦೦೪) ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಜೀವನ ೧೯೧೬ ರಲ್ಲಿ ಮಧುರೈ ಪಟ್ಟಣದಲ್ಲಿ ಹುಟ್ಟಿದರು. ವಿವಾಹ ೧೯೩೬ ರಲ್ಲಿ 'ಸದಾಶಿವಂ ಅಯ್ಯರ್' ಎಂಬ ಸ್ವಾತಂತ್ರ್ಯ ಹೋರಾಟಗಾರರನ್ನು ಭೇಟಿಯಾದರು. ೧೯೪೦ ರಲ್ಲಿ ಇಬ್ಬರೂ ವಿವಾಹವಾದರು. ನಿಧನ ಡಿಸೆಂಬರ್ ೨, ೨೦೦೪ ರಂದು ಅಸ್ವಸ್ಥರಾದ ಎಂ.ಎಸ್. ಡಿಸೆಂಬರ್ ೧೧ ರಂದು ದಿವಂಗತರಾದರು. Tributes to MS ಸಂಗೀತಗಾರ್ತಿಯಾಗಿ ಎಂ ಎಸ್ ೧೦ ವರ್ಷದವರಾಗಿದ್ದಾಗಲೆ ಅವರ ಮೊದಲ ಧ್ವನಿ-ಮುದ್ರಣ ಹೊರಬಂದಿತು. ನಂತರ ಸೆಮ್ಮಂಗುಡಿ ಶ್ರೀನಿವಾಸ ಐಯರ್ ಅವರಿಂದ ಕರ್ನಾಟಕ ಸಂಗೀತ ಹಾಗೂ ಪಂಡಿತ್ ನಾರಾಯಣ್ ರಾವ್ ವ್ಯಾಸ್ ಅವರಿಂದ ಹಿಂದುಸ್ಥಾನಿ ಸಂಗೀತ ಕಲಿತುಕೊಂಡರು. ೧೭ನೇ ವಯಸ್ಸಿನಲ್ಲಿ ಮದರಾಸು ಸಂಗೀತ ಅಕಾಡೆಮಿಯಲ್ಲಿ ಪ್ರಥಮ ಸಂಗೀತ ಕಛೇರಿಯನ್ನು ನೀಡಿದ ಎಂ ಎಸ್, ಇಲ್ಲಿಯವರೆಗೆ ಅನೇಕ ಭಾಷೆಗಳಲ್ಲಿ ಎಣಿಕೆಗೆ ಸಿಕ್ಕದಷ್ಟು ಹಾಡುಗಳನ್ನು ಹಾಡಿದ್ದಾರೆ (ಮುಖ್ಯವಾಗಿ ತಮಿಳು, ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಮಲಯಾಳಂ, ತೆಲುಗು, ಸಂಸ್ಕೃತ). ಸ್ವಲ್ಪ ಕಾಲ ಚಿತ್ರರಂಗದಲ್ಲೂ ಕೈಯಾಡಿಸಿದ ಎಂ ಎಸ್, ೧೯೪೫ ರಲ್ಲಿ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಮೀರಾ ಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ್ದರು.೭೨ ರಾಗಗಳೂ ಅವರ ನಾಲಿಗೆಯಲ್ಲಿ ನರ್ತನ ಮಾಡಿವೆ. ಸುಬ್ಬುಲಕ್ಷ್ಮಿಯವರು ಕಳೆದ ಐದು ದಶಕಗಳಲ್ಲಿ ಭಾರತದಾದ್ಯಂತ ಕಛೇರಿಗಳನ್ನು ನಡೆಸಿದ್ದಾರೆ. ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಅನೇಕ ಬಾರಿ ವಿದೇಶಗಳಲ್ಲಿ ಸಂಗೀತೋತ್ಸವಗಳ ಮೂಲಕ ಭಾರತವನ್ನು ಪ್ರತಿನಿಧಿಸಿದ್ದಾರೆ. ೧೯೯೭ ರಲ್ಲಿ ಅವರ ಪತಿಯ ಮರಣದ ನಂತರ ಎಂ ಎಸ್ ಅವರು ಸಾರ್ವಜನಿಕ ಕಛೇರಿಗಳನ್ನು ನೀಡುವುದನ್ನು ನಿಲ್ಲಿಸಿದರು. ಪ್ರಶಸ್ತಿ-ಗೌರವ ಪ್ರಪಂಚದಾದ್ಯಂತ ಕೇಳುಗರನ್ನು ಆಕರ್ಷಿಸಿದ 'ಎಂ ಎಸ್' ಅವರಿಗೆ ಬಂದಿರುವ ಪ್ರಶಂಸೆಗಳು ಅಪಾರ. ಅವರ "ಹರಿ ತುಮ್ ಹರೋ ಜನ್ ಕೀ ಭೀರ್" ಎಂಬ ಮೀರಾ-ಭಜನೆಯನ್ನು ಕೇಳಿದ ಮಹಾತ್ಮ ಗಾಂಧಿ "ಆ ಭಜನೆ ಕೇವಲ ಅವರಿಗಾಗಿಯೇ ಮಾಡಿಸಿದ್ದು, ಇನ್ನಾರಿಗೂ ಅಲ್ಲ" ಎಂದು ಹೇಳಿದ್ದರು! ಭಾರತೀಯ ಸಂಗೀತಗಾರರೊಬ್ಬರಿಗೆ ದೊರಕಬಹುದಾದ ಪ್ರಶಸ್ತಿಗಳೆಲ್ಲವೂ ಎಂ.ಎಸ್ ಅವರಿಗೆ ದೊರಕಿವೆ: Hindu, M.S.' recreated, By T. Ramakrishnan ಎಮ್.ಎಫ್.ಹುಸೇನ್ ರವರ ಕೃತಿ' ಸುಬ್ಬುಲಕ್ಷ್ಮಿ ಅವರು 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ವಿಶ್ವಸಂಸ್ಥೆಯು ವಿಶೇಷ ಅಂಚೆ ಚೀಟಿ ಹೊರ ತರಲು ಮುಂದಾಗಿದೆ. ಪದ್ಮಭೂಷಣ (೧೯೫೪) ಸಂಗೀತ ಕಲಾನಿಧಿ (೧೯೬೮)-ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ, ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ (೧೯೭೪), ಪದ್ಮ ವಿಭೂಷಣ (೧೯೭೫), ಕಾಳಿದಾಸ ಸಮ್ಮಾನ (೧೯೮೮), ರಾಷ್ಟ್ರೀಯ ಐಕ್ಯತೆಗಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿ (೧೯೯೦), ಭಾರತ ರತ್ನ (೧೯೯೮), ಉಲ್ಲೇಖಗಳು ಬಾಹ್ಯ ಸಂಪರ್ಕಗಳು 'Her music', 'ಎಮ್ಮೆಸ್ಸಮ್ಮನವರ ಹಾಡುಗಾರಿಕೆ, ಉಪನ್ಯಾಸಗಳು,ಮತ್ತು ಸಂದರ್ಶನಗಳು' ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ಶಾಸ್ತ್ರೀಯ ಸಂಗೀತಗಾರರು ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ವೀಣೆ ಶೇಷಣ್ಣ
https://kn.wikipedia.org/wiki/ವೀಣೆ_ಶೇಷಣ್ಣ
thumb|250px|* 'ವೀಣೆ ಶೇಷಣ್ಣವನವರು' 'ವೀಣೆ ಶೇಷಣ್ಣ' ನವರು, (೧೮೫೨-೧೯೨೬) ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು. ಇವರು ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ವೈಣಿಕರಾಗಿದ್ದರು. ವೀಣೆ ಶೇಷಣ್ಣನವರ ತಂದೆ, ’ಬಕ್ಷಿ ಚಿಕ್ಕರಾಮಪ್ಪ’ನವರೂ ಸಹ 'ಮುಮ್ಮಡಿ ಕೃಷ್ಣರಾಜ ಒಡೆಯರು' ಅರಸರಾಗಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನದ 'ಆಸ್ಥಾನ ವಿದ್ವಾಂಸ'ರಾಗಿದ್ದರು. ಅವರಿಂದ ಮತ್ತು ಮೈಸೂರು 'ಸದಾಶಿವರಾಯ'ರಿಂದ ಸಂಗೀತವನ್ನು ಕಲಿತ 'ಶೇಷಣ್ಣ'ನವರು ವೀಣೆ ನುಡಿಸುವುದರಲ್ಲಿ ಪರಿಣಿತಿಯನ್ನು ಪಡೆದರು. ವೀಣೆ ಮಾತ್ರವಲ್ಲದೆ 'ಪಿಯಾನೊ', 'ಪಿಟೀಲು', 'ಸಿತಾರ್' ಮೊದಲಾದ ವಾದ್ಯಗಳನ್ನೂ ನುಡಿಸುತ್ತಿದ್ದ ಶೇಷಣ್ಣನವರು ಕೆಲವು ರಚನೆಗಳನ್ನೂ ರಚಿಸಿದ್ದಾರೆ. thumb|right|250px|'ಬಲಗಡೆ ವೀಣೆ ಶೇಷಣ್ಣನವರು', ಮತ್ತು 'ವೀಣೆಸುಬ್ಬಣ್ಣನವರು', ಸನ್, ೧೯ಂ೨ ರಲ್ಲಿ. 'ಶೇಷಣ್ಣ'ನವರು ಹೋದೆಡೆಯೆಲ್ಲಾ ರಾಜಮರ್ಯಾದೆ ಸ್ವಾತಂತ್ರ್ಯಪೂರ್ವ ಭಾರತದ ಅನೇಕ ಅರಸರು ಇವರನ್ನು ಸನ್ಮಾನಿಸಿದ್ದರು. ಬರೋಡದ ಮಹಾರಾಜರು ಬರೋಡದಲ್ಲಿ ನಡೆದ ಸಂಗೀತ ಉತ್ಸವದಲ್ಲಿ ವೀಣೆ ಶೇಷಣ್ಣನವರನ್ನು ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿದ್ದರಂತೆ. 'ವಿಕ್ಟೋರಿಯ ರಾಣಿ'ಯ ಮರಣಾನಂತರ ಗದ್ದುಗೆಗೆ ಬಂದ, ಇಂಗ್ಲೆಂಡಿನ ಅಂದಿನ ರಾಜ, ಐದನೇ ಜಾರ್ಜ್ (George V), ದೆಹಲಿಯಲ್ಲಿ ಆಯೋಜಿಸಿದ ಅವರ ದರ್ಬಾರ್ ಸಮಯದಲ್ಲಿ ಶೇಷಣ್ಣನವರ ಸಂಗೀತ-ಕಛೇರಿಯನ್ನು ಕೇಳಿ, ಸಂಪ್ರೀತರಾಗಿ ಅವರ ಒಂದು 'ತೈಲ ಚಿತ್ರ'ವನ್ನು ತಮ್ಮ ಅರಮನೆಯಲ್ಲಿ ಇಟ್ಟುಕೊಳ್ಳಲು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆ'ಗೆ ತೆಗೆದುಕೊಂಡು ಹೋಗಿದ್ದರಂತೆ. ೧೯೨೪ ರ, 'ಬೆಳಗಾವಿಯ ಕಾಂಗ್ರೆಸ್ ಅಧಿವೇಶನ'ದಲ್ಲಿ 'ಮಹಾತ್ಮ ಗಾಂಧಿ'ಯವರು, ಮತ್ತು ಅವರ ಜೊತೆಗಾರರು, ತಮ್ಮ ಇತರ ಕೆಲಸಗಳನ್ನು ಮುಂದೂಡಿ, ಹಲವು ತಾಸುಗಳ ಕಾಲ ಮಂತ್ರಮುಘ್ದರಾಗಿ, ಶೇಷಣ್ಣನವರ ಕಛೇರಿಯನ್ನೇ ಕೇಳುತ್ತಾ ಕುಳಿತಿದ್ದರಂತೆ. ತಮ್ಮ ಭಾವಪೂರ್ಣ ವೀಣಾವಾದನದ ವಿಶಿಷ್ಟ ವೈಖರಿಯಿಂದ ಹಾಗೂ ತಮ್ಮದೇ ಆದ ವಿಶೇಷ ಪ್ರತಿಭೆಯಿಂದ ಮೈಸೂರಿಗೆ, ಕರ್ನಾಟಕಕ್ಕೆ, ಕಲಾಪ್ರಪಂಚದಲ್ಲೇ ಅತ್ಯುನ್ನತವಾದ ಸ್ಥಾನವನ್ನು ಗಳಿಸಿಕೊಟ್ಟು ’ವೀಣೆಯ ಬೆಡಗಿದು ಮೈಸೂರು,’ ಎಂದು ಮೈಸೂರನ್ನು ಗುರುತಿಸುವಂತೆ ಮಾಡಿದವರು, ’ವೀಣೆ ಶೇಷಣ್ಣನವರು.” ದ ಕಿಂಗ್ ಆಫ್ ವೀಣಾ ಪ್ಲೇಯರ್ ಪಾಶ್ಚಾತ್ಯ ಸಂಗೀತ ವಿದ್ವಾಂಸರು, ಶೇಷಣ್ಣನವರನ್ನು ’ದ ಕಿಂಗ್ ಆಫ್ ವೀಣಾ ಪ್ಲೇಯರ್’ ಎಂದು ಕರೆದು ಗೌರವಿಸಿದ್ದಾರೆ. ಶೇಷಣ್ಣನವರಿಗೆ ವೀಣೆ ಒಂದು ವಾದ್ಯವಷ್ಟೆ ಆಗಿರದೆ ’ನಾದದೇವಿಯನ್ನು ಔಪಾಸಿಸುವ ಸಾಧನೆಯಾಗಿತ್ತು’. ಸಂಗೀತ ವಿದ್ಯಾನಿಧಿಯೇ ಆಗಿದ್ದ ಶೇಷಣ್ಣನವರು, ಪ್ರತಿದಿನ ೮ ಗಂಟೆಗಳ ಅವಿರತ ಸಾಧನೆ ಮಾಡುತ್ತಿದ್ದು, ಅವರ ಏಕಾಗ್ರತೆ, ಕಲಾಪ್ರೇಮ ಆದರ್ಶ ಪ್ರಾಯವಾದುವು. 'ಮೈಸೂರು ಸದಾಶಿವರಾಯ'ರಲ್ಲಿ ಗಾಯನವನ್ನು ಅಭ್ಯಾಸಮಾಡಿದುದರಿಂದ ಶೇಷಣ್ಣನವರು ನೇರ 'ತ್ಯಾಗರಾಜ ಶಿಷ್ಯಪರಂಪರೆ'ಗೆ ಸೇರಿದಂತಾಯಿತು. 'ಭೈರವಿ ವರ್ಣ'ದ (ವೀರಿ ಬೋಣಿ) ಕರ್ತ, 'ಆದಿ ಅಪ್ಪೈಯ್ಯ' ನವರ ವಂಶಸ್ಥರೂ, ಈ ವಂಶದ ೨೪ ನೆಯ ಕುಡಿಯೂ ಆಗಿದ್ದಾರೆ. 'ಶೇಷಣ್ಣನವರ ದರ್ಬಾರ್ ಉಡುಪು' 'ಅಸ್ಥಾನದ ಪೋಷಾಕಿ' ನಲ್ಲಿ ಶೇಷಣ್ಣನವರು ಅದ್ಭುತವಾಗಿ ಕಾಣಿಸುತ್ತಿದ್ದರು. ಅತ್ಯಂತ ಗೆಲುವಿನ ಹಾಗೂ ಗೌರವಾನ್ವಿತ, ಆಕರ್ಷಕ ವ್ಯಕ್ತಿತ್ವ ಅವರದು.ಬೇರೆಯವರಿಗೆ ಹೋಲಿಸಿದರೆ ಅತಿ ಸರಳವೂ ಆಡಂಬರವಿಲ್ಲದ ಉಡುಪಾಗಿತ್ತು. ಆಗಿನಕಾಲದ ಪೋಷಾಕಿನ ಪದ್ಧತಿಯಂತೆ, ಕೊಕ್ಕರೆ ಬಿಳುಪಿನ ಕಚ್ಚೆ ಪಂಚೆ, ಉದ್ದವಾದ ಕಪ್ಪು ಕೋಟಿನ ಮೇಲೆ ಬಿಳಿಯ ಮಡಿಸಿದ ಅಂಗವಸ್ತ್ರ, ಹಾಗೂ ಬಿಳಿಯ ಪೇಟ ಧರಿಸುತ್ತಿದ್ದರು. ದಟ್ಟವಾದ ಮೀಸೆ, ವಿಶಾಲವಾದ ಹಣೆಯ ಮೇಲೆ ನಾಮ ಹಾಗೂ ಅಕ್ಷತೆ ರಂಜಿಸುತ್ತಿತ್ತು. ಕುತ್ತಿಗೆಯನ್ನು ಯಾವಾಗಲೂ ಎತ್ತರದಲ್ಲಿ ಇಟ್ಟುಕೊಂಡೇ ನಡೆಯುತ್ತಿದ್ದ, ಹೊಳಪಿನ ಕಣ್ಣುಗಳ, ಅಷ್ಟೇನೂ ಭರ್ಜರಿ ಆಳಲ್ಲದಿದ್ದರೂ ದೂರದಿಂದಲೇ ಕಂಡುಹಿಡಿಯಬಹುದಾದ ಪ್ರಭಾವೀ ವ್ಯಕ್ತಿತ್ವ. ವೀಣೆನುಡಿಸಲೋಸ್ಕರವೇ ದೇವರು ದಯಪಾಲಿಸಬಹುದಾದ ಉದ್ದವಾದ ಬೆರಳುಗಳು, ಅವರ ಇರುವಿಕೆಯಿಂದ ಸಭಾಂಗಣದ ಮಹತ್ವ ಉಜ್ವಲವಾಗಿರುತ್ತಿತ್ತು. ವೀಣೆನುಡಿಸಲು ಕುಳಿತರೆಂದರೆ ಯೋಗಿಯನ್ನು ಮೀರಿಸುವ 'ತಪಶ್ಚರ್ಯೆ' ಅವರ ಮುಖದಮೇಲೆ ಪ್ರಖರವಾಗಿ ಕಾಣಿಸುತ್ತಿತ್ತು. ತಮ್ಮ ೨೬ ವರ್ಷಗಳ ವಯಸ್ಸಿನಲ್ಲಿಯೇ, ದಕ್ಷಿಣ ಭಾರತದ ರಾಜಮಹಲ್ ಗಳಲ್ಲಿ ಮಠಗಳಲ್ಲಿ, ಜಮೀನ್ದಾರದ ಗೃಹಗಳಲ್ಲಿ, ಹಾಗೂ ಅವರ ವಾದ್ಯಸಂಗೀತಾಭಿಲಾಶಿಗಳ ಸಮ್ಮುಖದಲ್ಲಿ ನಡೆಸಿಕೊಟ್ಟಿದ್ದರು. ಆ ಸಮಯದಲ್ಲಿ ಈಗಿನಂತೆ 'ಸಾರ್ವಜನಿಕ ಸಭೆ'ಗಳಲ್ಲಿ ಇಂತಹ 'ಸಂಗೀತ ವಾದ್ಯ ಕಾರ್ಯಕ್ರಮಗಳು' ಇರಲೇ ಇಲ್ಲ. ಶೇಷಣ್ಣನವರ ಮನೆತನದ ಪರಿಚಯ ಶೇಷಣ್ಣನವರ ತಂದೆಯವರು, 'ಚಿಕ್ಕರಾಮಯ್ಯನವರು', ಅವರು 'ಮಾಧ್ವ ಬ್ರಾಹ್ಮಣರು', ಹಾಗೂ 'ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವಿದ್ವಾಂಸರಾಗಿದ್ದರು'. ಅವರಿಗೆ 'ವೀಣಾಭಕ್ಷಿ ಚಿಕ್ಕರಾಮಪ್ಪ'ನವರೆಂದೇ ಹೆಸರಾಗಿತ್ತು. 'ತಾಯಿ'ಯವರೂ ಸಂಗೀತ ವಂಶಜರೇ. ಸುಮಾರು ೧ಂ ನೇ ವಯಸ್ಸಿನಲ್ಲೇ 'ಮುಮ್ಮಡಿ ಕೃಷ್ಣರಾಜವೊಡೆಯರ ಮುಂದೆ ’ಪಲ್ಲವಿ’ಯನ್ನು ಹಾಡಿ ಸನ್ಮಾನಿತರಾಗಿದ್ದರು. ಪ್ರಾರಂಭದಲ್ಲಿ ತಂದೆಯವರಿಂದ ಸಂಗೀತ ಪಾಠ ನಡೆಯುತ್ತಿತ್ತು. ಆದರೆ, ವಿಧಿವಶಾತ್ ಶೇಷಣ್ಣನವರ ೧೩ ನೆ ವಯಸ್ಸಿನಲ್ಲಿಯೇ ತಂದೆಯವರು ಮರಣಹೊಂದಿದರು. ಆನಂತರ ಸಂಗೀತಾಭ್ಯಾಸವನ್ನು ನಿಲ್ಲಿಸದೆ, 'ವೀಣಾ ಸುಬ್ಬಣ್ಣನವರ ತಂದೆ', 'ದೊಡ್ಡ ಶೇಷಣ್ಣನವರಲ್ಲಿ ಮುಂದುವರೆಸಿದರು. ’ಅಕ್ಕ ವೆಂಕಮ್ಮನವರು’ ತಮ್ಮನ ಸಂಗೀತಾಭ್ಯಾಸಕ್ಕೆ ವಿಶೇಷ ಕಾಳಜಿ ವಹಿಸಿ ಸಹಕಾರ ಕೊಟ್ಟರು. ಶೇಷಣ್ಣನವರಿಗೆ ದೈವದತ್ತವಾಗಿ ಸಂಗೀತ-ಕಲೆ ಒಲಿದಿತ್ತು. ಸತತವಾಗಿ ಸಾಧನೆಮಾಡಿ ಅವರು ತಮ್ಮದೇ ಅದ ಸ್ವತಂತ್ರ ವೀಣಾಶೈಲಿಯನ್ನು ರೂಪಿಸಿಕೊಂಡರು. ವೀಣೆಯನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡು ಹಲವಾರು ಪ್ರಯೋಗಗಳನ್ನು ಮಾಡುತ್ತಿದ್ದರು. ಎಂಥವರನ್ನೂ ಮರುಳುಮಾಡುವ ಮೋಡಿಗೊಳಿಸುವ ಸನ್ಮೋಹನಾಸ್ತ್ರ ಬೀರುವ ಅಧ್ಬುತ ಸಂಗೀತ ಅವರದು. 'ಮನೋಧರ್ಮ ಸಂಗೀತ'ವೇ ಅವರ ಕಛೇರಿಯ ಪ್ರಮುಖಭಾಗವಾಗಿರುತ್ತಿತ್ತು. ಕೆಲವೇ ಆಯ್ದ ಕೀರ್ತನೆಗಳನ್ನು ತೆಗೆದುಕೊಂಡು ಅದ್ಭುತವಾಗಿ ನುಡಿಸುತ್ತಿದ್ದರು. ’ತಿಲ್ಲಾನ’ ’ಜಾವಳಿಗಳು’ ಕಛೇರಿಯ ಅಂತ್ಯದಲ್ಲಿ ನುಡಿಸಲ್ಪಡುತ್ತಿದ್ದವು. ರಸಿಕರಿಗೆ ಅವುಗಳ ಆಕರ್ಷಣೆ ಹೆಚ್ಚಾಗಿತ್ತು. ’ತಾನ ಪ್ರಸ್ತುತಿ’ಯಲ್ಲಿ ಎತ್ತಿದ ಕೈ. ತಮ್ಮ ಜೀವಮಾದದಲ್ಲಿ ಎಂದೂ ಅವರು ಅಹಂಭಾವದಿಂದ ನಡೆದುಕೊಂಡ ಕ್ಷಣಗಳಿರಲಿಲ್ಲ. ’ನಾದಾನು ಸಂಧಾನದ ಉದ್ಘಾರ’ಳೆಂಬ, ’ಭಲೆ’, ’ಆಹಾ’, ’ಭೇಷ್’ ಇತ್ಯಾದಿ ಪದಗಳು ಅವರಿಗೆ ಅರಿವಿಲ್ಲದೆ ಮೂಡಿಬರುತ್ತಿದ್ದವು. ಸುಮಾರು ೨ಂ ವಾದ್ಯಗಳನ್ನು ಸುಲಲಿತವಾಗಿ ನುಡಿಸಬಲ್ಲವರಾಗಿದ್ದ ಶೇಷಣ್ಣನವರು ಪಿಟೀಲು, ಪಿಯಾನೋ, ಸ್ವರಬತ್, ಜಲತರಂಗ, ನಾಗಸ್ವರ, ಹಾರ್ಮೋನಿಯಮ್, ಮಯೂರ ವಾದ್ಯ, ಮೃದಂಗ, ಇತ್ಯಾದಿಗಳನ್ನು ನುಡಿಸುತ್ತಿದ್ದರು. ಹಲವು ವೇಳೆ ಯಾವುದಾದರೂ ಸಂಗೀತ ಕಛೇರಿಯಲ್ಲಿ ವೈಲಿನ್ ಪಕ್ಕವಾದ್ಯದವರು ಬರದಿದ್ದಾಗ, ವೈಲಿನ್ನನ್ನು ತಾವೇ ನುಡಿಸಿ ಸಹಕರಿಸಿದ ಸನ್ನಿವೇಶಗಳಿವೆ. ’ವೈಣಿಖ ಶಿಖಾಮಣಿ' ಬಿರುದು 'ಮುಮ್ಮಡಿ ಕೃಷ್ಣರಾಜ ಒಡೆಯರು 'ಪಟ್ಟಕ್ಕೆ ಬಂದ ಸಮಯದಲ್ಲೇ ವೈಣಿಕ ಶೇಷಣ್ಣನವರ ವೀಣಾವಾದನದ ಮಾಧುರ್ಯದಿಂದ ಪ್ರಭಾವಿತರಾಗಿದ್ದ ಮಹಾರಾಜರು, ’ವೈಣಿಖ ಶಿಖಾಮಣಿ' ಬಿರುದನ್ನು ದಯಪಾಲಿಸಿದ್ದರು. 'ಜಯಚಾಮರಾಜ ವೊಡೆಯರು', 'ಶೇಷಣ್ಣ'ನವರನ್ನು ತಮ್ಮ ಅರಮನೆಯ 'ಆಸ್ಥಾನವಿದ್ವಾಂಸ'ರ ನ್ನಾಗಿ ನೇಮಿಸಿದರು.'ಸುಬ್ಬಣ್ಣನವರ ಗಾಯನ', 'ಶೇಷಣ್ಣನವರ ವೀಣೆ', 'ಮಹಾರಾಜರ ಪಿಟೀಲು,' 'ಅಪರೂಪದ ಭಾವಾನು ಸಂಧನ'ದ 'ಸಂಗೀತ ಮೇಳ'ವಾಗಿತ್ತೆಂದು ನೆನೆಸುತ್ತಿದ್ದರು. ಮೈಸೂರು ಸಂಸ್ಥಾನದ ಅರಸರ ಪ್ರತಿಷ್ಠೆ ಮತ್ತು ಭಾಗ್ಯದ ಸಂಕೇತವಾಗಿ ಶೇಷಣ್ಣನವರ ಸಂಗೀತ ಪರಿಗಣಿಸಲ್ಪಟ್ಟಿತ್ತು. 'ರಾಮನಾಥ ಪುರಂ ಭಾಸ್ಕರ ಸೇತುಪತಿ ಮಹಾರಾಜರು' ನವರಾತ್ರಿ ಮೊದಲ ದಿನದಲ್ಲಿ ಏರ್ಪಡಿಸಿದ್ದ ಶೇಷಣ್ಣನವರ ವೀಣೆಯನ್ನು ಸತತ ಕೇಳಬೇಕೆಂದು ವಿನಂತಿಸಿದರು. ಇಡೀ ನವರಾತ್ರಿ ಹಬ್ಬ ಅರಮನೆಯಲ್ಲಿ 'ವೀಣಾಮೃತ ಸುಧೆ'ಯನ್ನು ಹರಿಸಿದ ಶೇಷಣ್ಣನವರಿಗೆ ’ಕನಕಾಭಿಶೇಕ’ಮಾಡಿಸಿ ಅಂಬಾರಿಯಮೇಲೆ ಮೆರವಣಿಗೆ ಮಾಡಿಸಿದರಂತೆ. ಅನಂತರ, ಪ್ರತಿವರ್ಷವೂ ಇದೇ ತರಹದ ಸಂಗೀತೋತ್ಸವ ಇದ್ದೇ ಇರುತ್ತಿತ್ತು. ಬರೋಡಾ ಸಂಸ್ಥಾನದಲ್ಲಿ 'ಸಯ್ಯಾಜಿರಾವ್ ಗಾಯಕವಾಡ್ 'ರವರು, ಮತ್ತು ಅವರ ಮಹಾರಾಣಿಯವರು ಸತತ ಮೂರು ದಿನಗಳ ವೀಣಾವಾದನವನ್ನು ಏರ್ಪಡಿಸಿ, ಸಕಲ ರಾಜಮರ್ಯಾದೆಗಳೊಂದಿಗೆ ಸನ್ಮಾನಿಸಿ ರಾಣಿಯವರು ಸ್ವತಃ ಬಳಸುತ್ತಿದ್ದ ಮೇನೆಯನ್ನು ಬಹುಮಾನವಾಗಿ ನೀಡಿದರು. ಶೇಷಣ್ಣನವರು ಮೈಸೂರಿಗೆ ವಾಪಸ್ ಬಂದಾಗ ಒಡೆಯರೂ ಹೆಮ್ಮೆಯಿಂದ ಬೀಗಿಹೋಗಿ ಮೈಸೂರಿನಲ್ಲೂ 'ರಾಜಲಾಂಛನ'ದಲ್ಲಿ ವಿಶೇಷವಾಗಿ ಸತ್ಕಾರನೀಡಿದರು. ಮಹಾರಾಜರು, ಶೇಷಣ್ಣನವರಿಗೆ, ಮೇನೆಯಲ್ಲಿ ಉಪಾಸೀನರಾಗಬೇಕೆಂದು ಕೊಂಡಾಗ ಸುತರಾಂ ಒಪ್ಪದೆ, ’ನಾನು ಕಲಾವಿದನಷ್ಟೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ವೀಣೆಯನ್ನು ನುಡಿಸಿದ್ದೇನೆ. ವೀಣೆಯ ಸಾಮರ್ಥ್ಯಕ್ಕೆ ನಾನು ನುಡಿಸಬಲ್ಲೆನೇ’ ಎಂದು ಹೇಳಿ ವೀಣೆಯನ್ನು ಮೇನೆಯ ಪಲ್ಲಕ್ಕಿಯಲ್ಲಿ ಇಟ್ಟು ಮುಂದೆ ತಾವು ವಿನೀತರಾಗಿ ನಡೆದರಂತೆ. ತಂಜಾವೂರಿನಕೃಷ್ಣಸ್ವಾಮಿ ನಾಯಕರ ಮನೆಯಲ್ಲಿ ನಡೆದ ಒಂದು 'ಸಂಗೀತ ಗೋಷ್ಠಿ'ಯಲ್ಲಿ ಶೇಷಣ್ಣನವರೊಂದಿಗೆ ಮಹಾವೈದ್ಯನಾಥ ಅಯ್ಯರ್, ಶರಭಶಾಸ್ತ್ರಿ, ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಮೊದಲಾದ ವಿದ್ವಾಂಸರುಗಳ ಕಲಾ ವಿನಿಕೆಯಲ್ಲಿ ಪರಸ್ಪರ ಅವರುಗಳಲ್ಲೇ ತೀರ್ಮಾನವಾಗುವ 'ಶ್ರೇಷ್ಟ ವಿದ್ವಾಂಸರಿಗೆ' ಅತ್ಯಂತ ಬೆಲೆ ಬಾಳುವ ’ಸೀಮೇಕಮಲದ ಉಂಗುರ’, ಬಹುಮಾನವಾಗಿತ್ತು. ಕಛೇರಿಯ ಕೊನೆಯಲ್ಲಿ 'ಮಹಾವೈದ್ಯನಾಥ ಅಯ್ಯರ್' ಮಾತನಾಡಿ, ವೀಣೆ ಶೇಷಣ್ಣನವರದ್ದು ಊಹೆಗೆ ನಿಲುಕದ ಮನೋಧರ್ಮ ಆ ನಾದ ಮಾಧುರ್ಯಕ್ಕೆ ನಾವೆಲ್ಲಾ ಮನಸೋತಿದ್ದೇವೆ. ಇಂದಿನ ಬಹುಮಾನ ನಿಷ್ಪಕ್ಷಪಾತವಾಗಿ ಅವರಿಗೇ ಸಲ್ಲಬೇಕು. ಬರೋಡ ರಾಜದಂಪತಿಗಳಿಗೆ, 'ಆಧುನಿಕ ಸಂಗೀತದ ರಸದೌತಣ' ಬರೋಡಾದ ಮಹಾರಾಜರು ಒಮ್ಮೆ ಮೈಸೂರಿನ ದರ್ಬಾರಿಗೆ ಅತಿಥಿಯಾಗಿ ಬಂದಾಗ, ಶೇಷಣ್ಣನವರ ಸಂಗೀತವನ್ನು ದರ್ಬಾರಿನಲ್ಲಿ ಕೇಳಿದ್ದಲ್ಲದೆ ಮತ್ತೆ, ತಮ್ಮ ವಿಶ್ರಾಂತಿಯ ಸಮಯದಲ್ಲಿ ಅವರ ಸಂಗೀತವನ್ನು ಪುನಃ ಕೇಳಲು ಅಪೇಕ್ಷಿಸಿದರು. ಅವರ ಮನಸ್ಸಿಗೆ ಮುದವಾಗುವಂತ ಕರ್ನಾಟಕ, ಪಾಶ್ಚಾತ್ಯ, ಹಿಂದೂಸ್ಥಾನಿ ಸಂಗೀತಗಳ ಮಿಶ್ರಣಮಾಡಿ ಪ್ರಸ್ತುತಪಡಿಸಿದರಂತೆ. ಆ ಸಮಯದಲ್ಲಿ ಮಹಾರಾಜರು ಇರಲಿಲ್ಲ. ಅವರು ವಾಪಸ್ ಬಂದಮೇಲೆ, ವಿಷಯಗಳನ್ನು ಕೇಳಿ ತಿಳಿದುಕೊಂಡು ಹೆಮ್ಮೆಪಟ್ಟು ಆಸ್ಥಾನಕ್ಕೆ ಕರೆಸಿದರಂತೆ. ಹೆದರಿಕೆಯಿಂದ ಭೇಟಿಮಾಡಿದ ಶೇಷಣ್ಣನವರು ವಿವರಿಸುವ ಮೊದಲೇ ಮಹಾರಾಜರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಶೇಷಣ್ಣನವರ ಸಮಯಸ್ಪೂರ್ಥಿಯನ್ನು ಕೊಂಡಾಡಿದರಂತೆ. 'ಬೆಳಗಾಂ ಕಾಂಗ್ರೆಸ್ ಅಧಿವೇಶನದಲ್ಲಿ' ಸನ್, ೧೯೨೪ ರಲ್ಲಿ 'ಮಹಾತ್ಮ ಗಾಂಧಿ'ಯವರ ಅಧ್ಯಕ್ಷತೆಯಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಶೇಷಣ್ಣ ನವರ ವೀಣಾವಾದನದ ಏರ್ಪಾಡಾಗಿತ್ತು. ಆಗಲೇ ೭೩ ವರ್ಷ ಪ್ರಾಯದ, ಅಷ್ಟೇನೂ ಆರೋಗ್ಯ ಸರಿಯಿರದ ಶೇಷಣ್ಣನವರು, ಪೂರ್ವ ನಿಯೋಜಿತ ವ್ಯವಸ್ಥೆಯಂತೆ, ಕೇವಲ ಅರ್ಧಗಂಟೆಯ ವಿನಿಕೆಯ ಕಾರ್ಯಕ್ರಮಕ್ಕೆ ಒಪ್ಪಿಗೆನೀಡಿದ್ದರು. ಒಂದುಗಂಟೆಯಾದರೂ ಸಂಗೀತ ರಸಿಕರು ಮಿಸುಕಾಡದೆ ಕುಳಿತಿದ್ದರು. ಗಾಂಧೀಜಿಯವರ ಜೊತೆ, ಸಂಗೀತದಲ್ಲಿ ಭಾಗವಹಿಸಿದ್ದವರು, 'ಸರೋಜಿನಿನಾಯಿಡು', 'ಜವಹರಲಾಲ್ ನೆಹರು', ಮೋತೀಲಾಲ್ ನೆಹರು, ಮದನ ಮೋಹನ ಮಾಳವೀಯ, ಲಾಲಾ ಲಜಪತ್ ರಾಯ್, ರಾಜೇಂದ್ರ ಪ್ರಸಾದ್, ಮೊದಲಾದ ನಾಯಕರೂ ತುಟಿಪಿಟಕ್ಕನ್ನದೆ ನಾದ-ಸಾಗರದಲ್ಲಿ ತೇಲುತ್ತಿದ್ದರು. ಹಾಗೆ ಅವರನ್ನೆಲ್ಲಾ ಮೋಡಿಮಾಡಿ ಒಂದು ವಿಕ್ರಮವನ್ನೇ ಸಾಧಿಸಿದರು, ಶೇಷಣ್ಣನವರು. ಸೋಮವಾರವಾದ್ದರಿಂದ ಬಾಪೂಜಿಯವರಿಗೆ, ಮೌನವ್ರತವಿತ್ತು. ಕಛೇರಿಯು ಸಾಗಿಯೇ ಇತ್ತು. ಗಾಂಧೀಜಿಯವರ ಆಪ್ತಕಾರ್ಯದರ್ಶಿಯವರು ಒಂದು ಚೀಟಿಯಲ್ಲಿ ಬರೆದು, 'ಇನ್ನು ನಾವು ಹೋಗೋಣವೇ 'ಎಂದಾಗ, ಬಾಪು, ಕಾಗದ ಹಿಂದೆ ಬರೆದ ಟಿಪ್ಪಣಿ, ಇಂದಿಗೂ ನೆನೆಯಲು ಯೋಗ್ಯವಾಗಿದೆ. ’ಹೊತ್ತು ಮೀರಿಯೇ ಹೋದರೂ ಪ್ರಮಾದವೇನಿಲ್ಲ, ಆಗಲಂತೆ ಬಿಡಿ.’ ಸುದೀರ್ಘಕಾಲದ ಕಛೇರಿಯ ಬಳಿಕ ಗಾಂಧೀಜಿಯೇ ಕಡುಕಾಲನಿಯಮಿಯೂ ಕಟು ವ್ರತಾಚರಣಿಯೂ ಆಗಿದ್ದ ಬಾಪುರವರು, ಮೌನವನ್ನು ಮುರಿದು ಉದ್ಧರಿಸಿಯೇ ಬಿಟ್ಟರು. "ಇದು ದೇವಗಾನ. ಇದನ್ನು ಕೇಳಿದ ನಾವೇ ಧನ್ಯರು. ಇಷ್ಟನ್ನು ಹೇಳದೇ ಹೇಗೆ ಮೌನಾಚರಣೆ ವಹಿಸಲಿ". ಅದೇರೀತಿ, ಮಹಾತ್ಮರ ಮುಂದೆ ವೀಣೆ ನುಡಿಸುವ ಶೇಷಣ್ಣನವರ ಮಹದಾಶೆ ನೆರವೇರಿತು ಕೂಡ. ೨ಂ ನೆಯ ಶತಮಾನದ ವೈಣಿಕ ಶಿಖಾಮಣಿ, ಹಾಗೂ ವಾಗ್ಗೇಯ ಕಾರ 'ವೀಣೆ ಶೇಷಣ್ಣ' ನವರು ೨ಂ ನೇ ಶತಮಾನದ 'ವಾಗ್ಗೇಯಕಾರರೂ ಹೌದು'. ಅನೇಕ ಕೃತಿಗಳನ್ನೂ ಸ್ವರಜತಿಗಳನ್ನೂ ವರ್ಣಗಳನ್ನೂ ತಿಲ್ಲಾನಗಳನ್ನೂ ರಚಿಸಿದ್ದಾರೆ. ಒಟ್ಟಾರೆ ೫೩ ಕ್ಕೂ ಹೆಚ್ಚು ರಚನೆಗಳನ್ನು ರಚಿಸಿದ್ದಾರೆ. ವರ್ಣಗಳು ವಿದ್ವತ್ಪೂರ್ಣವಾಗಿದ್ದು, ಖಂಡದೃವ, ಮಿಶ್ರತ್ರಿಪುಟ, ಖಂಡ, ತ್ರಿಪುಟದಂತಹ ತಾಳಗಳಲ್ಲಿದ್ದು ೨ ರಾಗಮಾಲಿಕಾ ವರ್ಣಗಳು ೧೪, ೧೮ ರಾಗಗಳನ್ನು ಹೊಂದಿವೆ. 'ಶೇಷ ಅಂಕಿತ'ದಲ್ಲಿ ರಚನೆಗಳನ್ನು ಮಾಡಿದ್ದು ಕೆಲವು ಮಾತ್ರ 'ಜಯಚಾಮರಾಜ ಒಡೆಯರ್ 'ಮತ್ತು 'ಕೃಷ್ಣರಾಜ ಒಡೆಯರ್ 'ನಾಮಾಂಕಿತದಲ್ಲಿದೆ. ಅವರ 'ತಿಲ್ಲಾನಗಳು' ಬಹು ಆಕರ್ಷಣೀಯವಾಗಿ ಹೆಣೆದಿರುವಂತವು. 'ರಾಲ್ಲಪಲ್ಲಿ ಅನಂತರಾಮ ಶರ್ಮ', ಹಾಗೂ 'ವಾಸುದೇವಾಚಾರ್ಯರು' ಅವರ ಕೃತಿಗಳನ್ನು ಶ್ಲಾಘಿಸಿದ್ದಾರೆ. ಶೇಷಣ್ಣ ನವರ ಎಲ್ಲಾ ರಚನೆಗಳನ್ನೂ 'ಮೈಸೂರಿನ ಸಂಗೀತ ಕಲಾವರ್ಧಿನೀ ಸಭಾ'ದವರು ಪ್ರಕಟಿಸಿದ್ದಾರೆ. 'ಮೈಸೂರು ವಾಗ್ಗೇಯಕಾರರು' ಶೀರ್ಷಿಕೆಯಡಿಯಲ್ಲಿ 'ವಿದುಷಿ. ಎಂ ಎಸ್ ಶೀಲಾ'ರವರ 'ಹಂಸಧ್ವನಿ ಸಂಸ್ಥೆ'ಯಿಂದ ಹೊರಬಂದ ಅನೇಕ ಸಿ.ಡಿ ಗಳಲ್ಲಿ 'ವೀಣೆ ಶೇಷಣ್ಣ'ನವರ ರಚನೆಗಳೂ ಇದ್ದು ಇದನ್ನೂ ’'ಗುರು ಶೀಲಾ'” ರವರೇ ಹಾಡಿದ್ದಾರೆ. ಬ್ರಿಟಿಷ್ ಸಾಮ್ರಾಟ, ೫ನೇ ಜಾರ್ಜ್, ವೀಣಾವಾದನದಿಂದ ಪ್ರಭಾವಿತ 'ಬ್ರಿಟಿಷ್ ಚಕ್ರವರ್ತಿ, ೫ ನೇ ಜಾರ್ಜ್ ಪಟ್ಟಾಭಿಷೇಕ,' 'ದೆಹಲಿ'ಯಲ್ಲಿ ನಡೆದಾಗ, 'ಶೇಷಣ್ಣನವರ ವೀಣಾವಾದನದ ಕಛೇರಿ,' ಇತ್ತು. ಅದ್ಭುತವೂ ಸೋಜಿಗವೂ ಎನ್ನಿಸಿದ ಈ ವೀಣಾವಾದನದ ಮಾಧುರ್ಯದಿಂದ ಚಕ್ರವರ್ತಿಯವರು ಪ್ರಭಾವಿತರಾಗಿ, ಆ ಸವಿನೆನಪಿಗೆ 'ಶೇಷಣ್ಣನವರ ತೈಲ-ಚಿತ್ರವನ್ನು 'ಲಂಡನ್ ನ ಬಕಿಂಗ್ ಹ್ಯಾಂ ಅರಮನೆಯ ಕಲಾಮಂದಿರ' ದಲ್ಲಿ ಕೊಂಡೊಯ್ದು, ಇರಿಸಿದ್ದಾರೆ. ಶೇಷಣ್ಣನವರ ಶಿಷ್ಯವೃಂದ ಶೇಷಣ್ಣನವರು ’ಮೈಸೂರು ವೀಣಾ ಪರಂಪರೆ ’ಗೆ, ದೊಡ್ಡ ” ಸಂಗೀತ ಶಾಸ್ತ್ರದಲ್ಲಿ ನಿಷ್ಣಾತ ಶಿಷ್ಯವೃಂದ" ವನ್ನೇ ತಮ್ಮ ಅನುಪಮ ಕೊಡುಗೆಯಾಗಿ ಸಲ್ಲಿಸಿದ್ದಾರೆ. ಅವರಲ್ಲಿ ಪ್ರಮುಖರು, ವೀಣಾ ವೆಂಕಟಗಿರಿಯಪ್ಪ ಶರ್ಮಾದೇವಿ ಸುಬ್ರಹ್ಮಣ್ಯ ಶಾಸ್ತ್ರಿ, ಭೈರವಿ, ಲಕ್ಷ್ಮೀನಾರಣಪ್ಪ, ಕಲಾವಿದ ವೆಂಕಟಪ್ಪ, ನಾರಾಯಣ ಅಯ್ಯರ್, ಎ,ಎಸ್. ಚಂದ್ರಶೇಖರಯ್ಯ, ಎಂ.ಎಸ್. ಭೀಮರಾವ್, ತಿರುಮಲೆ ರಾಜಮ್ಮ, ಸ್ವರಮೂರ್ತಿ ವಿ.ಎನ್.ರಾವ್ ಮೊದಲಾದವರು. ಇವರ ಶಿಷ್ಯರಾಗಿದ್ದು, ಬಿಡಾರಂ ಕೃಷ್ಣಪ್ಪನವರು, ಸುಬ್ಬಣ್ಣನವರು ಮೈಸೂರು ವಾಸುದೇವಚಾರ್ಯರು ಶೇಷಣ್ಣನವರನ್ನು ಗುರುಗಳಂತೆಯೇ ಭಾವಿಸಿದ್ದರು. ಜಲತರಂಗ-ವಾದನದ ಸಂಗೀತ ಕಾರ್ಯಕ್ರಮ' ಒಮ್ಮೆ ಉತ್ತರಭಾರತದಿಂದ ಒಬ್ಬ 'ಜಲತರಂಗ ವಾದ್ಯದ ಸಂಗೀತಗಾರರು', 'ಮೈಸೂರು ಆಸ್ಥಾನ'ದಲ್ಲಿ ಒಂದು ಸುಂದರವಾದ ಕಾರ್ಯಕ್ರಮ ಕೊಟ್ಟರು. ಪ್ರಭುಗಳು ಸಂತೋಷಗೊಂಡಿದ್ದಲ್ಲದೆ ಅತ್ಯಂತ ಪ್ರಭಾವಿತರಾಗಿದ್ದರು. ಶೋತೃಗಳ ಸಾಲಿನಲ್ಲಿ ಕುಳಿತು ಸಂಗೀತವನ್ನು ಆಲಿಸುತ್ತಿದ್ದ 'ಶೇಷಣ್ಣ'ನವರು, ಕಾರ್ಯಕ್ರಮ ಮುಗಿದನಂತರ ಅರಸರನ್ನು ಭೆಟ್ಟಿಮಾಡಿ, 'ಜಲತರಂಗವಾದ್ಯ'ದ ಪರಿಕರಗಳನ್ನು ರಾತ್ರಿ, ತಮ್ಮ ಹತ್ತಿರ ಇಟ್ಟುಕೊಳ್ಳಲು ಅನುಮತಿ ಕೋರಿದರು. 'ಸಂಗೀತ'ದಲ್ಲಿ ಎಷ್ಟು ಸಮರ್ಪಣಾಭಾವವಿತ್ತೆಂದರೆ, ರಾತ್ರಿಯೆಲ್ಲಾ ಸಾಧನೆಮಾಡಿ ಮಾರನೆಯ ದಿನ ರಾತ್ರಿ ಮಹಾರಾಜರ ಮುಂದೆ 'ಜಲತರಂಗ ವಾದನ ದ ಕಛೇರಿ' ಕೊಟ್ಟರು. ಕಾರ್ಯಕ್ರಮ ಮುಗಿದ ಮೇಲೆ ಆ ಸಂಗೀತಕಾರರು, ಮಂಚದಮೇಲೆ ಬಂದು 'ಶೇಷಣ್ಣ'ನವರನ್ನು ಅಭಿನಂದಿಸಿದರಂತೆ. ಈ ಸಂಗತಿ, ಅವರ 'ಆಸಕ್ತಿ' ಮತ್ತು ಹೊಸದನ್ನು ಕಲಿತುಕೊಳ್ಳುವ 'ಅಸ್ತೆ'ಯನ್ನು ದರ್ಶಾಯಿಸುತ್ತದೆ. ಮೈಸೂರು ಶೈಲಿಯ ವೀಣೆನುಡಿಸುವ ಪದ್ಧತಿ ಈಗಿನ ವೀಣೆ ನುಡಿಸುವ 'ಮೈಸೂರು ಶೈಲಿ', ಪ್ರಖ್ಯಾತವಾಗಿದೆ. ಇದನ್ನು ಪ್ರಸಿದ್ಧಿಪಡಿಸಿದವರು, ಶೇಷಣ್ಣನವರೇ. ಆದರೆ ಇದಕ್ಕೆ ಮೊದಲು ಸಿತಾರಿನಂತ ವೀಣೆಯ ಬುರುಡೆಯನ್ನು ತೊಡೆಗೆ ಒತ್ತಿಕೊಂಡು ನುಡಿಸುವ ಪದ್ಧತಿಯಿತ್ತು. ಆದರೆ ಶೇಷಣ್ಣನವರು, ಪದ್ಮಾಸನದಲ್ಲಿ ಕುಳಿತು, ಈಗಿನ ತರಹ ವೀಣೆಯನ್ನು ತಮ್ಮ ಎರದೂ ತೊಡೆಗಳ ಮೇಲೆ ಇಟ್ಟುಕೊಂಡು ನುಡಿಸುವ ಪರಿಪಾಠವನ್ನು ಜಾರಿಗೆ ತಂದರು. ತಮ್ಮ ಎರಡು ಬೆರಳುಗಳಿಂದ ತಂತಿಗಳನ್ನು ಮೀಟುವುದರ ಜೊತೆಗೆ, ಎರಡೂ ತಂತಿಗಳು ಒಂದಕ್ಕೊಂದು ತಗುಲದಂತೆ ಏರ್ಪಾಟು ಮಾಡಿಕೊಳ್ಳುವ ಪದ್ಧತಿಯೂ ಅವರದೇ. ಗುಣಕ್ಕೆ ಮತ್ಸರವಿಲ್ಲವೆನ್ನುವ ಹೇಳಿಕೆಯ ಪ್ರತಿಪಾದಕ ಹೊರನಾಡಿನಿಂದ ಬಂದ ಕಲಾವಿದರು, ಮೈಸೂರು ದರ್ಬಾರಿನಲ್ಲಿ ’ವಿನಿಕೆ”ಮಾಡಬೇಕಾಗಿದ್ದರೆ, ಮೊದಲು ಶೇಷಣ್ಣನವರರಿಗೆ ತೃಪ್ತಿ ದೊರೆತರೆ ಮಾತ್ರ, ಎಂಬ ಮಹಾರಾಜರ ಕಟ್ಟಪ್ಪಣೆ ಇತ್ತು. ಶೇಷಣ್ಣನವರು 'ವಿದ್ಯಾಪಕ್ಷಪಾತಿಗಳು,' 'ಅರ್ಹರಾದ ಕಲಾವಿದರ'ನ್ನು ಅತ್ಯಂತ ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ’ಗುಣಕ್ಕೆ ಮತ್ಸರವಿಲ್ಲ’ ಎನ್ನುವ ಹೇಳಿಕೆಯ ಪ್ರತಿಪಾದಕರಾಗಿದ್ದರು. ಶೇಷಣ್ಣನವರ ಮನೆ, " ನಾದದೇವಿಯ ಔಪಾಸನೆಯ ತಾಣ ”ವಾಗಿತ್ತು. ಪ್ರತಿದಿನವೂ ಶೇಷಣ್ಣನವರ ಮನೆಯಲ್ಲಿ 'ವಿದ್ವಾಂಸರ ಗೋಷ್ಟಿ ಕಛೇರಿಗಳು' ನಡೆದಿರುತ್ತಿತ್ತು. ಇದಲ್ಲದೆ, ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿ ಹಬ್ಬಗಳಲ್ಲಿ ೧ಂ ದಿನಗಳು, ವಿಶೇಷವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತ ತಮ್ಮ ಮನೆಯ ಮಹಡಿಯ ಮೇಲೆ ವೀಣಾಸಂಗೀತದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅರಮನೆಯಲ್ಲಿ ಹೋಗಲಾರದ ಶ್ರೋತೃಗಳಿಗೆ ಈ ಸೌಲಭ್ಯ ಮುದನೀಡಿತ್ತು. ಶೇಷಣ್ಣನವರು ತಮ್ಮ ಅಂತ್ಯದದಿನಗಳಲ್ಲಿ "ನನಗೆ ಸಾವಿನ ಭಯವಿಲ್ಲ ; ಆದರೆ, ಈ ವೀಣೆಯನ್ನು ಬಿಟ್ಟು ನಾನೊಬ್ಬನೆ ಹೋಗಬೇಕಲ್ಲಾ ಎನ್ನುವ ಸಂಕಟ," ಎನ್ನುತ್ತಿದ್ದರು. ನಿಧನ ’ವೀಣೆ ಶೇಷಣ್ಣ"ನವರು”, ಜುಲೈ, ೨೫, ೧೯೨೬ ರಂದು ನಿಧನರಾದರು. ಉಲ್ಲೇಖಗಳು ಲೇಖನ-' ಮಹಾನ್ ಕಲಾವಿದ ವೀಣೆ ಶೇಷಣ್ಣ -’ವಿದುಷಿ. ’ಶ್ಯಾಮಲಾ ಪ್ರಕಾಶ್’, ಅಂಕಣ, ’ನಾದೋಪಾಸನ’, ’ಸ್ನೇಹ ಸಂಬಂಧ,’ ಮಾಸಪತ್ರಿಕೆ, ಕರ್ನಾಟಕ ಸಂಘ, ಮುಂಬಯಿ, ಸೆಪ್ಟೆಂಬರ್, ೨ಂ೧ಂ, ಪುಟ-೧೭. ಇದರಲ್ಲಿ ದಾಖಲಿಸಿದ ಅಪರೂಪದ ವಿಚಾರವೊಂದು ಇಲ್ಲಿ ಉದ್ಧರಿಸಲು ಉಪಯುಕ್ತವಾದದ್ದು. 'ವೀಣೆ ಶೇಷಣ್ಣನವರ ಅಪಾರ ಕನ್ನಡದ ಶ್ರೋತೃಗಳು ಹಿಗ್ಗುವ ವಿಚಾರ. ಈ ಲೇಖನದ ಮೇಲ್ಪದರದಲ್ಲಿ ದರ್ಶಾಯಿಸಿರುವ 'ವೀಣೆ ಮಾಂತ್ರಿಕ ಶೇಷಣ್ಣನವರ ಭಾವಚಿತ್ರ', ಮುಂಬಯಿನ ಮಾಹೀಮ್ ನಲ್ಲಿರುವ 'ಕರ್ನಾಟಕ ಸಂಘ'ದಲ್ಲಿ ಸನ್, ೧೯೭೮ ರಲ್ಲಿ ಅನಾವರಣಗೊಂಡಿತ್ತು. ಅಂದು ಜರುಗಿದ 'ಕನ್ನಡ ಕಾರ್ಯಕ್ರಮ'ದಲ್ಲಿ ವೀಣೆ ಶೇಷಣ್ಣನವರ ಮರಿಮಗ, 'ಶ್ರೀ, ಮೈಸೂರು, ವಿ. ಸುಬ್ರಹ್ಮಣ್ಯಂರವರು, ಉಪಸ್ಥಿತರಿದ್ದರಂತೆ. ಸುಬ್ರಹ್ಮಮಣ್ಯಂರವರು, ವಿದ್ವಾಂಸರೂ, ಸುಪ್ರಸಿದ್ಧ ಸಂಗೀತ ವಿಮರ್ಶಕರೂ, ಹಾಗೂ ಹಿರಿಯ ಲೇಖಕರೂ, ಆಗಿದ್ದಾರೆ. ತಮ್ಮ ಹಿರಿಯ 'ತಾತಶ್ರೀ'ಗಳ ೩೨ ವರ್ಷಗಳ ಹಿಂದಿನ ಅಪರೂಪದ ಚಿತ್ರದ ಪ್ರತಿಯನ್ನು ಈಗ ಪಡೆಯಲು ಅವರು ಇಚ್ಛಿಸಿದರಂತೆ. ಹೀಗಾಗಿ, 'ಕರ್ನಾಟಕ ಸಂಘದ ಪದಾಧಿಕಾರಿಗಳು' ಆ ಚಿತ್ರವನ್ನು ಹುಡುಕಿ, ಕಳುಹಿಸಿರುತ್ತಾರೆ. ವಿಷಯಸಂಗ್ರಹ ಮೂಲಗಳು 'ಮೈಸೂರು ಸುಬ್ರಹ್ಮಣ್ಯಂ', 'ಡಾ ವಿ. ಎಸ್. ಸಂಪತ್ಕುಮಾರಾಚಾರ್ಯ', 'ಪ್ರೊ. ವಿ. ರಾಮರತ್ನಂ', 'ಮೈಸೂರು ಎ. ರಾಜಾರಾವ್' ರವರ, ಲೇಖನಗಳು, ’ಸಂಗೀತ ಸಮಯ’-'ಎಸ್. ಕೃಷ್ಣ ಮೂರ್ತಿ'. ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವರ್ಗ:ಕಲಾವಿದರು
ಬಿ ವಿ ಕಾರಂತ
https://kn.wikipedia.org/wiki/ಬಿ_ವಿ_ಕಾರಂತ
REDIRECT ಬಿ. ವಿ. ಕಾರಂತ್
ಭಾರತೀಯ ಸಶಸ್ತ್ರ ಪಡೆ
https://kn.wikipedia.org/wiki/ಭಾರತೀಯ_ಸಶಸ್ತ್ರ_ಪಡೆ
ಭಾರತೀಯ ಸಶಸ್ತ್ರ ಪಡೆ ಭಾರತದ ಗಣರಾಜ್ಯದ ಮಿಲಿಟರಿ ಪಡೆಗಳಾಗಿವೆ. ಇದು ಮೂರುವೃತ್ತಿಪರ ಸಮವಸ್ತ್ರ ಸೇವೆಗಳನ್ನು ಒಳಗೊಂಡಿದೆ: ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆ. ಹೆಚ್ಚುವರಿಯಾಗಿ, ಭಾರತೀಯ ಸಶಸ್ತ್ರ ಪಡೆಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಅರೆಸೈನಿಕ ಸಂಸ್ಥೆಗಳು (ಅಸ್ಸಾಂ ರೈಫಲ್ಸ್, ಮತ್ತು ವಿಶೇಷ ಗಡಿನಾಡು ಪಡೆ) ಮತ್ತು ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್, ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಮತ್ತು ವಿವಿಧ ಅಂತರ್-ಸೇವಾ ಆಜ್ಞೆಗಳು ಮತ್ತು ಸಂಸ್ಥೆಗಳು ಬೆಂಬಲಿಸುತ್ತವೆ. ಸಂಯೋಜಿತ ರಕ್ಷಣಾ ಸಿಬ್ಬಂದಿ. ಭಾರತದ ರಾಷ್ಟ್ರಪತಿಗಳು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್. ಭಾರತೀಯ ಸಶಸ್ತ್ರ ಪಡೆಗಳು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ (ಎಂಒಡಿ) ನಿರ್ವಹಣೆಯಲ್ಲಿದೆ. ೧.೪ ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಸಿಬ್ಬಂದಿಯೊಂದಿಗೆ, ಇದು ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಪಡೆ ಮತ್ತು ವಿಶ್ವದ ಅತಿದೊಡ್ಡ ಸ್ವಯಂಸೇವಕ ಸೈನ್ಯವನ್ನು ಹೊಂದಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ರಕ್ಷಣಾ ಬಜೆಟ್ ಅನ್ನು ಸಹ ಹೊಂದಿದೆ. ೨೦೧೫ರ ಕ್ರೆಡಿಟ್ ಸ್ಯೂಸ್ ವರದಿಯ ಪ್ರಕಾರ, ಭಾರತೀಯ ಸಶಸ್ತ್ರ ಪಡೆ ವಿಶ್ವದ ಐದನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ. thumb|right|200px|ಗಣರಾಜ್ಯ ದಿನಾಚರಣೆ thumb|right|200px|ವೈಮಾನಿಕ ಪ್ರದರ್ಶನ ಇತಿಹಾಸ ಹಲವಾರು ಸಹಸ್ರಮಾನಗಳಷ್ಟು ಹಳೆಯದಾದ ಮಿಲಿಟರಿ ಇತಿಹಾಸವನ್ನು ಭಾರತ ಹೊಂದಿದೆ. ಸೈನ್ಯದ ಮೊದಲ ಉಲ್ಲೇಖವು ವೇದಗಳ ಜೊತೆಗೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳಲ್ಲಿ ಕಂಡುಬರುತ್ತದೆ. ಬಿಲ್ಲುಗಾರಿಕೆ ಕುರಿತಾದ ಶಾಸ್ತ್ರೀಯ ಭಾರತೀಯ ಪಠ್ಯಗಳನ್ನು ಮತ್ತು ಸಾಮಾನ್ಯವಾಗಿ ಸಮರ ಕಲೆಗಳನ್ನು ಧನುರ್ವೇದ ಎಂದು ಕರೆಯಲಾಗುತ್ತದೆ. ಭಾರತೀಯ ಸಶಸ್ತ್ರ ಪಡೆಯ ಅಂಗಗಳು ಭಾರತೀಯ ಸಶಸ್ತ್ರ ಪಡೆ ಮೂರು ಮುಖ್ಯ ಅಂಗಗಳಿವೆ: ಭಾರತೀಯ ಭೂಸೇನೆ ಭಾರತೀಯ ವಾಯುಸೇನೆ ಭಾರತೀಯ ನೌಕಾಸೇನೆ ಇವುಗಳೊಂದಿಗೆ ಭಾರತೀಯ ಸೈನ್ಯದ ಅಂಗಗಳಾಗಿ ಅಥವಾ ಇವುಗಳ ಜೊತೆ ಕೆಲಸ ಮಾಡುವ ಅಂಗಗಳು ಸಹ ಸೇರಿವೆ: ಗಡಿ ರಕ್ಷಣಾ ದಳ (ಬಿಎಸ್‍ಎಫ್) ಅಸ್ಸಾಮ್ ರೈಫಲ್ಸ್ ರಾಷ್ಟ್ರೀಯ ರೈಫಲ್ಸ್ ಇತ್ತೀಚೆಗೆ (ಸಪ್ಟಂಬರ್ ೨೦೦೩ ರಲ್ಲಿ) ಸೇರಿಸಲ್ಪಟ್ಟ ಒಂದು ಅಂಗವೆಂದರೆ ಅಣುಶಕ್ತಿ ನಿರ್ವಹಣಾ ವಿಭಾಗ. ಭಾರತೀಯ ಸೇನೆಯ ಅತ್ಯುನ್ನತ ಕಮಾಂಡರ್ ಭಾರತೀಯ ಸೇನೆಯ ಅಂತಿಮ ಕಮಾಂಡರ್ ಯಾವಾಗಲೂ ಭಾರತದ ರಾಷ್ಟ್ರಪತಿ. ಇತರೆ ಭಾರತೀಯ ಸೇನೆಯ ವತಿಯಿಂದ ಕೊಡಲ್ಪಡುವ ಅತ್ಯುಚ್ಚ ಪ್ರಶಸ್ತಿ ಪರಮ ವೀರ ಚಕ್ರ. ಸಶಸ್ತ್ರ ಪಡೆಗಳ ಮೂರು ಮುಖ್ಯಸ್ಥರು ೯-೧೧-೨೦೧೬: ಸೇನಾ ಮುಖ್ಯಸ್ಥ ದಲಬಿರ್ ಸಿಂಗ್ ನೌಕಾದಳದ ಮುಖ್ಯಸ್ಥ ಸುನಿಲ್ ಲಂಬ ಮತ್ತು ಭಾರತೀಯ ವಾಯುಪಡೆಯ ಉಪ ಮುಖ್ಯ ಬಿಎಸ್ ಧನೊಅ ಭೂ ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರ 31 Dec, 2016 ಜನರಲ್‌ ಬಿಪಿನ್‌ ರಾವತ್‌ ಅವರು ಸೇನಾ ಪಡೆಯ 27ನೇ ಮುಖ್ಯಸ್ಥರಾಗಿ ಶನಿವಾರ ಅಧಿಕಾರಿ ವಹಿಸಿಕೊಂಡರು. ಸೇನಾ ಪಡೆ ಮುಖ್ಯಸ್ಥ ಜನರಲ್‌ ದಲ್ಬೀರ್‌ ಸಿಂಗ್‌ ಸುಹಾಗ್‌ ಅವರ ಅಧಿಕಾರಾವಧಿ ಡಿಸೆಂಬರ್‌ 31ರಂದು ಕೊನೆಗೊಂಡಿದ್ದು, ಬಿಪಿನ್‌ ರಾವತ್‌ ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು. 1978ರಲ್ಲಿ ರಾವತ್‌ ಅವರು ಗೋರ್ಖಾ ರೈಫಲ್ಸ್ ಪಡೆಗೆ ನೇಮಕಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ಪ್ರಾರಂಭಿಸಿದರು.ಸೇನಾ ಮುಖ್ಯಸ್ಥರಾಗಿ ಬಿಪಿನ್‌ ರಾವತ್‌ ಅಧಿಕಾರ ಸ್ವೀಕಾರ ವಾಯುಪಡೆಯ ಮುಖ್ಯಸ್ಥರಾಗಿ ಬೀರೇಂದರ್ ಸಿಂಗ್ ಧನೋವಾ ಸಹ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 27ನೇ ಮುಖ್ಯಸ್ಥರಾಗಿದ್ದರೆ, ಧನೋವಾ ಅವರು ವಾಯುಪಡೆಯ 25ನೇ ಮುಖ್ಯಸ್ಥರಾಗಿದ್ದಾರೆ. ಭೂ ಸೇನಾ ಮುಖ್ಯಸ್ಥರಾಗಿ ಮುಕುಂದ್ ನರವಣೆ ಅಧಿಕಾರ ಸ್ವೀಕಾರ 2019 ಡಿಸೆಂಬರ್‌ 31 ರಂದು ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ರಾವತ್‌ ಅವರಿಂದ ಮಂಗಳವಾರ ಅಧಿಕಾರ ವಹಿಸಿಕೊಂಡರು.ಭಾರತ ರಕ್ಷಣಾ ಸಚಿವಾಲಯದ ಪ್ರಕಟಣೆ ಪ್ರಜಾವಾಣಿ d: 31 ಡಿಸೆಂಬರ್ 2019;ಲೆಫ್ಟಿನೆಂಟ್ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕಾರ ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ ಸೃಷ್ಠಿ ಮತ್ತು ನೇಮಕ ಭಾರತದ ‘ರಕ್ಷಣಾ ಪಡೆಗಳ ಮುಖ್ಯಸ್ಥ-(ಬಿಪಿನ್ ರಾವತ್) ದಿ. 30-12-2019 ರಂದು ಹೊಸದಾಗಿ ರಚನೆಯಾಗಿರುವ ‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್- Chief of Defence Staff,) ಹುದ್ದೆಗೆ ಹಾಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಲಾಗಿದೆ. ಅವರು ಹಾಲಿ ನಿರ್ವಹಿಸುತ್ತಿರುವ ಭೂ ಸೇನಾ ಮುಖ್ಯಸ್ಥ ಸೇವೆಯಿಂದ ನಿವೃತ್ತಿಯಾಗಲು ಒಂದು ದಿನ ಬಾಕಿ ಇರುವಾಗಲೇ ರಾವತ್ ಅವರನ್ನು ನೂತನ ಹುದ್ದೆಗೆ ನೇಮಕಮಾಡಲಾಗಿದೆ. ಸಿಡಿಎಸ್ ಮುಖ್ಯಸ್ಥರ ನಿವೃತ್ತಿ ವಯಸ್ಸು 65 ವರ್ಷ ಎಂದು ದಿ.29-12-2019 ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಅವರು 2019 ಡಿಸೆಂಬರ್‌ 31ರಂದು ೬೨ ನೇ ವಯಸ್ಸಿಗೆ ನಿವೃತ್ತರಾದ ನಂತರವೂ ‘ರಕ್ಷಣಾ ಪಡೆಗಳ ಮುಖ್ಯಸ್ಥ’ರಾಗಿ ಮೂರು ವರ್ಷ ಮುಂದುವರೆಯುವರು. ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;d-30 ಡಿಸೆಂಬರ್ 2019 ಸಿಡಿಎಸ್ ಕರ್ತವ್ಯಗಳು 2019 ಡಿಸೆಂಬರ್‌ 31ರಿಂದ ಜಾರಿಗೆ ಬರುವಂತೆ ರಾವತ್‌ ಅವರನ್ನು ಸಿಡಿಎಸ್‌ ಆಗಿ ನೇಮಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ರಾವತ್‌ ಅವರು ಸೇನೆಗೆ 1978ರ ಡಿಸೆಂಬರ್‌ನಲ್ಲಿ ಸೇರ್ಪಡೆಯಾಗಿದ್ದರು. ಸೇನಾ ಮುಖ್ಯಸ್ಥರಾಗಿ 2017ರ ಜನವರಿ 1ರಿಂದ ಅವರು ಕಾರ್ಯನಿರ್ವಹಿಸುತ್ತಿದ್ದರು; ರಾವತ್‌ ಅವರಿಗೆ ಮೂರೂ ಪಡೆಗಳ ಮುಖ್ಯಸ್ಥರು ಹೊಂದಿರುವ ಶ್ರೇಣಿಯೇ ಇರುತ್ತದೆ. ಆದರೆ, ಸಮಾನರಲ್ಲಿ ಪ್ರಥಮರು ಎಂಬುದು ಸಿಡಿಎಸ್‌ ಹುದ್ದೆಯ ಹೆಚ್ಚುಗಾರಿಕೆ.. ರ್‍ಯಾಂಕ್‌ ಮೂರೂ ಪಡೆಗಳ ಮುಖ್ಯಸ್ಥರಂತೆ ರಕ್ಷಣಾ ಪಡೆಗಳ ಮುಖ್ಯಸ್ಥರೂ ‘ನಾಲ್ಕು ಸ್ಟಾರ್‌’ ಅಧಿಕಾರಿ ಎನಿಸುವರು. ಅದೇ ವೇತನಶ್ರೇಣಿ ಅದೇ. ಆದರೆ ಇವರು ಸಮಾನರಲ್ಲಿ ಮೊದಲಿಗರಾಗಿರುತ್ತಾರೆ. ಸೇನಾ ಪಡೆಯ ಮುಖ್ಯಸ್ಥರು ಆ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದಾಗ ಅಥವಾ 62 ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುತ್ತಿದ್ದರು. ಈ ನಿಯಮಕ್ಕೆ ತಿದ್ದುಪಡಿ ಮಾಡಿರುವ ಸರ್ಕಾರವು ಸಿಡಿಎಸ್‌ ನಿವೃತ್ತಿ ವಯಸ್ಸನ್ನು ಮಾತ್ರ 65 ವರ್ಷಕ್ಕೆ ಹೆಚ್ಚಿಸಿದೆ. ‘ಮೂರು ಪಡೆಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ನಿವಾರಿಸಿ, ಸಮನ್ವಯ ರೂಪಿಸುವ ಮೂಲಕ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗುವಂತೆ ಸರ್ಕಾರಕ್ಕೆ ಸಲಹೆ ನೀಡಲು ಸಿಡಿಎಸ್‌ ಅಗತ್ಯ’ ಎಂದು ಸೇನೆಯ ನಿವೃತ್ತ ಅಧಿಕಾರಿಗಳು ಹೇಳುತ್ತಾರೆ. ರಕ್ಷಣಾ ನೀತಿ ರೂಪಿಸುವುದು, ಮೂರೂ ಪಡೆಗಳ ಬಜೆಟ್‌ ರೂಪಿಸುವುದು, ಶಸ್ತ್ರಾಸ್ತ್ರ ಖರೀದಿ, ತರಬೇತಿ, ಸೇನಾ ಕಾರ್ಯಾಚರಣೆಗಳನ್ನು ಯೋಜಿಸುವುದು, ಮೊದಲಾದ ವಿಚಾರಗಳಲ್ಲಿ ಮೂರೂ ಪಡೆಗಳಲ್ಲಿ ಸಮನ್ವಯ ಸಾಧಿಸುವುದಕ್ಕೆ ಇದು ಅನುಕೂಲ ಎಂದು ನಿವೃತ್ತ ಅಧಿಕಾರಿಗಳು ‘ರಕ್ಷಣಾ ಪಡೆಗಳ ಮುಖ್ಯಸ್ಥರು ಹೇಳುತ್ತಾರೆ. ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕ;ಏಜೆನ್ಸಿಸ್ Updated: 31 ಡಿಸೆಂಬರ್ 2019, ಸೇನೆಗೆ ಬಲ ಪೂರಕ ಡ್ರೋನ್ ಒಪ್ಪಂದ 28 Jun, 2017 ಮೋದಿ ಮತ್ತು ಡೊನಾಲ್ಡ್ ಟ್ರಂಪ್ -ರಕ್ಷಣಾ ಸಹಕಾರ : ಕಡಲ ಕಣ್ಗಾವಲಿಗೆ ೨೨ - ರೂ.೧೨,೯೦೦ ರಿಂದ ೧೯,೩೫೦ ರ ಪ್ರಿಡೇಟರ್ ಡ್ರೋನ್ಭಾ ಭಾರತಕ್ಕೆ ಕರಾವಳಿ ಕಣ್ಗಾವಲು ಡ್ರೋನ್‌ಗಳ ಮಾರಾಟಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದೆ. ಎರಡೂ ದೇಶಗಳ ಮಧ್ಯೆ ರಕ್ಷಣಾ ಮತ್ತು ಭದ್ರತಾ ಸಹಕಾರ ಏರ್ಪಟ್ಟಿದೆ. ಪಿಟಿಐ;ರಕ್ಷಣಾ ಸಹಕಾರ ಹೆಚ್ಚಳಕ್ಕೆ ಇಂಗಿತ: ಕಡಲ ಕಣ್ಗಾವಲು ಹೆಚ್ಚಿಸಲಿರುವ ಪ್ರಿಡೇಟರ್ ಡ್ರೋನ್ ಸೇನಾ ಸಲಕರಣೆ ಖರೀದಿ ರಕ್ಷಣಾ ಸಚಿವಾಲಯವು Rs.3,000 ಕೋಟಿ ಮೊತ್ತದ ಸೇನಾ ಸಲಕರಣೆಗಳಾದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಮತ್ತು ಶಸ್ತ್ರಸಜ್ಜಿತ ರಕ್ಷಣಾ ವಾಹನಗಳು ಸೇರಿವೆ. ಭಾರತೀಯ ಭೂ ಸೇನೆಯ ಅರ್ಜುನ ಟ್ಯಾಂಕ್‌ಗಳ ನೆರವಿಗೆಂದು ಅರ್ಮರ್ಡ್ ರಿಕವರಿ ವೆಹಿಕಲ್–ಎಆರ್‌ವಿಗಳನ್ನು (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಖರೀದಿಸಸುವುದು. ಅರ್ಜುನ ಟ್ಯಾಂಕ್‌ಗಳು ಕೆಟ್ಟು ನಿಂತಾಗ, ದುರ್ಗಮ ಸ್ಥಳದಲ್ಲಿ ಸಿಲುಕಿದಾಗ ಅವನ್ನು ಅಲ್ಲಿಂದ ಹೊರಗೆ ತರುವ ಎಆರ್‌ವಿಗಳನ್ನು ಖರೀದಿಸಲು ಉದ್ದೇಶಿಸಿರುವ ಎಆರ್‌ವಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಿಡಿಸಿದೆ. ಈ ವಾಹನಗಳನ್ನು ಭಾರತ್ ಅರ್ಥ ಮೂವರ್ಸ್‌ ಲಿಮಿಟೆಡ್ ತಯಾರಿಸುತ್ತದೆ. ಸಾಮರ್ಥ್ಯ* 20 ಟನ್ ಎಳೆಯುವ ಸಾಮರ್ಥ್ಯ* 8 ಟನ್ ಭಾರ ಎತ್ತುವ ಸಾಮರ್ಥ್ಯ; ಕ್ಷಿಪಣಿಯ ವಿಶೇಷತೆಗಳು;* ಈ ಕ್ಷಿಪಣಿಯ ಗರಿಷ್ಠ ವೇಗ-3,700 ಕಿ.ಮೀ. ಇದು ಜಗತ್ತಿನ ಅತ್ಯಂತ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆ ಹೊಂದಿದೆ; * 290 ಕಿ.ಮೀ. ಈ ಕ್ಷಿಪಣಿಯ ದಾಳಿ ವ್ಯಾಪ್ತಿ ಹೋದಿದೆ;* 200 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುವುದು. Rs.3,000 ಕೋಟಿ ಮೊತ್ತದ ಸೇನಾ ಸಲಕರಣೆ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ;01 ಡಿಸೆಂಬರ್ 2018, ಸೇನೆಗೆ ೨೦೨೦ - ೨೧ ರ ಅಂದಾಜು ಬಜೆಟ್ ರಕ್ಷಣಾ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದಲ್ಲಿ ಮೂರು ವಿಭಾಗಗಳಿಗೆ ದೊರೆಯುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಭೂ ಸೇನೆ, ವಾಯು ಪಡೆಗಳ ಅಭಿವೃದ್ಧಿಗೆ ಮತ್ತು ಬಹು ವಿಸ್ತಾರವಾದ ಸಾಗರ ಗಡಿ ಹೊಂದಿರುವ ಭಾರತದ ನೌಕಾಪಡೆಯ ಬಲವೃದ್ಧಿ ಹೆಚ್ಚು ಅನುದಾನ ಅಗತ್ಯ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ರಕ್ಷಣಾ ವಲಯಕ್ಕೆ 2020–21ನೇ ಸಾಲಿನ ಬಜೆಟ್‌ನಲ್ಲಿ ರೋ.3.37 ಲಕ್ಷ ಕೋಟಿ ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಪ್ರಕಟಿಸಿದರು.ಆಧುನೀಕರಣ, ಶಸ್ತ್ರಾಸ್ತ್ರಗಳ ಖರೀದಿಗಾಗಿ ಈ ಬಜೆಟ್‌ನಲ್ಲಿ ರೂ.1.13 ಲಕ್ಷ ಕೋಟಿ ತೆಗೆದಿರಿಸಲಾಗಿದೆ. ನಿವೃತ್ತಿ ವೇತನಕ್ಕೆ ರೂ.1.33 ಲಕ್ಷ ಕೋಟಿ ತೆಗೆದಿರಿಸಲಾಗಿದೆ; ರಕ್ಷಣಾ ಕ್ಷೇತ್ರಕ್ಕೆ ಒಟ್ಟು ಜಿಡಿಪಿಯ- ಶೇ 1.5ರಷ್ಟಿದೆ. ಆಧುನೀಕರಣಕ್ಕೆ ಜಿಡಿಪಿಯ ಶೇ 2.5ರಷ್ಟು ಮೊತ್ತವನ್ನು ತೆಗೆದಿರಿಸಬೇಕು ಎಂಬುದು ತಜ್ಞರ ಅಭಿಪ್ರಾಯ.ಬಜೆಟ್‌ 2020 | ರಕ್ಷಣಾ ವಲಯಕ್ಕೆ ₹3.37 ಲಕ್ಷ ಕೋಟಿ;ಪಿಟಿಐ d: 02 ಫೆಬ್ರವರಿ 2020, ಭಾರತಕ್ಕಿಂತಲೂ ಚೀನಾ, ಪಾಕಿಸ್ತಾನ ಮುಂದಿವೆ: ಕಳೆದ ವರ್ಷದ 2019-20 ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ.3 ಲಕ್ಷ ಕೋಟಿ ಅನುದಾನ ನೀಡಿದ್ದರೂ ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಹೋಲಿಸಿದರೆ ಅದು ಕಡಿಮೆ. ಭಾರತದ ರಕ್ಷಣಾ ಅನುದಾನ ದೇಶದ ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಇದೆ. ಆದರೆ ಪಾಕಿಸ್ತಾನವು ಜಿಡಿಪಿಯ ಶೇ 3.5 ಮತ್ತು ಹೆಚ್ಚು ಆದಾಯವಿರುವ ಚೀನಾವು ಜಿಡಿಪಿಯ ಶೇ 3ರರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿವೆ. ಭಾರತದಲ್ಲಿ 1,000 ಮಂದಿಗೆ ಒಬ್ಬನಂತೆ ಯೋಧರಿದ್ದರೆ ಪಾಕಿಸ್ತಾನದಲ್ಲಿ ಸರಾಸರ 4.25 ಜನಕ್ಕೆ ಒಬ್ಬಯೋಧ, ಮತ್ತು ಚೀನಾದಲ್ಲಿ 2.23ರಂತೆ(ಜನಕ್ಕೆ) ಒಬ್ಬ ಯೋಧರಿದ್ದಾರೆ.[https://www.prajavani.net/business/budget/union-budget-expectations-from-defence-sector-indian-army-iaf-navvy-701233.htmlಬಜೆಟ್‌ 2020: ರಕ್ಷಣಾ ಕ್ಷೇತ್ರಕ್ಕೆ ಸಾಕಾಗ್ತಿಲ್ಲ ಅನುದಾನ, ದೇಶದ ಭದ್ರತೆಗೇ ಆತಂಕ ಪ್ರಜಾವಾಣಿ ವೆಬ್‌ ಡೆಸ್ಕ್ Updated: 28 ಜನವರಿ 2020,] ನೋಡಿ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ 2008ರ ಮುಂಬಯಿ ದಾಳಿ ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ ಭಾರತೀಯ ವಾಯುಸೇನೆ ಭಾರತೀಯ ವಾಯುಸೇನೆ ಉರಿಯಲ್ಲಿ ಭಯೋತ್ಪಾದಕರ ದಾಳಿ ೨೦೧೬ ಭಯೋತ್ಪಾದನೆ ಅರ್ಜುನ ಕದನ ಟ್ಯಾಂಕ್ ರಾಷ್ಟ್ರೀಯ ಭದ್ರತೆ ರಕ್ಷಣಾ ಸಾಮಗ್ರಿ ರಪ್ತು ಯೋಜನೆ 2025ರ ವೇಳೆಗೆ ದೇಶದಲ್ಲಿ ಉತ್ಪಾದಿಸಿದ ರೂ.35 ಸಾವಿರ ಕೋಟಿಯಷ್ಟು ಮೌಲ್ಯದ ರಕ್ಷಣಾ ಸಾಮಗ್ರಿಯನ್ನು ರಫ್ತು ಮಾಡುವ ಯೋಜನೆ. ರಕ್ಷಣಾ ಸಾಮಗ್ರಿಗಳ ರಫ್ತು ಕ್ಷೇತ್ರದಲ್ಲಿ 2020ರಲ್ಲಿ 24ನೇ ಸ್ಥಾನದಲ್ಲಿ ಭಾರತದ ಇದೆ. ಅದನ್ನು ಉತ್ತಮಪಡಿಸುವ ಯೋಜನೆಗಳ ರೂಪುರೇಷೆ;ಲಖನೌದಲ್ಲಿ ಡಿಫೆನ್ಸ್ ಎಕ್ಸ್‌ಪೊ ಮತ್ತು 2020:ಭಾರತದ ಗುರಿ;d: 06 ಫೆಬ್ರವರಿ 2020} ಪೂರಕ ಮಾಹಿತಿ ಎಸ್‌–400 ಕ್ಷಿಪಣಿ:ರಷ್ಯಾದಿಂದ ಎಸ್‌–400 ಕ್ಷಿಪಣಿ ಖರೀದಿಗೆ ಭಾರತ ಒಲವು, ಅಮೆರಿಕ ಅಸಮಾಧಾನ;29 May, 2018 & ರಷ್ಯಾದೊಂದಿಗೆ ಭಾರತ ಒಪ್ಪಂದ ರಕ್ಷಣಾ ಸಾಮರ್ಥ್ಯ ಹೆಚ್ಚಿಸಲಿದೆ ಎಸ್‌–400 ಟ್ರಯಂಪ್;30 May, 2018 ವಾಯುದಾಳಿ ನಿಷ್ಕ್ರಿಯಕ್ಕೆ ಆಗಸದಲ್ಲೇ ಗುರಾಣಿ;;: 05 ಅಕ್ಟೋಬರ್ 2018 ಆಭಿಪ್ರಾಯಗಳು-ಸಲಹೆಗಳು ಸೇನೆಯ ಹೊಟ್ಟೆ ಗಟ್ಟಿ ಮಾಡಿ!(8Oct,2016):ಕ್ಯಾ.ಜಿ.ಆರ್ ಗೋಪಿನಾಥ್: ಶತ್ರು ಪಾಳಯದೊಳಗೇ ನುಗ್ಗುವ ವಿಶೇಷ ಪಡೆ;8 Oct, 2016; ಬಾಹ್ಯ ಸಂಪರ್ಕಗಳು Bharat Rakshak - ಭಾರತೀಯ ಸೇನೆಗೆ ಸಂಬಂಧಪಟ್ಟ ಅನೇಕ ಲೇಖನಗಳಿವೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಎಸ್‌–400 ವಾಯುಪ್ರದೇಶ ರಕ್ಷಣಾ ಕ್ಷಿಪಣಿಗಳ ಖರೀದಿಗೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಸುಮಾರು ₹40 ಸಾವಿರ ಕೋಟಿ ಮೊತ್ತದ ಈ ಒಪ್ಪಂದಸುದೀರ್ಘ ಕಥನ: ಆಗಸ–ಸಾಗರ ರಕ್ಷಣೆಗೆ ರಷ್ಯಾ ಸಹಯೋಗ;05 ಅಕ್ಟೋಬರ್ 2018 ಉಲ್ಲೇಖ ವರ್ಗ:ಭಾರತೀಯ ಸೈನ್ಯ ವರ್ಗ:ಭಾರತ
ಭಾರತೀಯ ಸೇನೆ
https://kn.wikipedia.org/wiki/ಭಾರತೀಯ_ಸೇನೆ
REDIRECT ಭಾರತೀಯ ಭೂಸೇನೆ
ಭಾರತೀಯ ವಾಯುಸೇನೆ
https://kn.wikipedia.org/wiki/ಭಾರತೀಯ_ವಾಯುಸೇನೆ
ಭಾರತೀಯ ವಾಯುಸೇನೆ ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ಇದನ್ನು ಸ್ಥಾಪಿಸಿದ್ದು ಅಕ್ಟೋಬರ್ ೮, ೧೯೩೨ ರಂದು. ಚರಿತ್ರೆ ೧೯೩೨ ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ. ಮೊದಲ ಪೈಲಟ್ ಗಳು ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್‍ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇಂದ್ರ ಸಿಂಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿಂಗ್. ೧೯೩೩ ರಲ್ಲಿ ಸೇರಿದ ಈ ಐವರಲ್ಲಿ ಭೂಪೇಂದ್ರ ಸಿಂಗ್ ಮತ್ತು ಅಮರ್ಜೀತ್ ಸಿಂಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಎ ಬಿ ಅವನ್ ಭಾರತದ ವಿಂಗಡಣೆಯ ನಂತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮುಂದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು. ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್‍ಗಳು ವಾಯುಸೇನೆಯನ್ನು ಸೇರಿದರು. ಎರಡನೇ ಮಹಾಯುದ್ಧ ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ೨ ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು. ೧೯೪೭-೪೮ ಕಾಶ್ಮೀರ ಯುದ್ಧ ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿಂದ ಸಹಾಯ ಪಡೆದ ಪಠಾಣರ ದಳವೊಂದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿಂಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸಂಬರ್ ೩೧, ೧೯೪೮ ರಲ್ಲಿ ಈ ಯುದ್ಧ ಕೊನೆಗೊಂಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸಂದರ್ಭ ಈ ಯುದ್ಧದಲ್ಲಿ ಉಂಟಾಗಲಿಲ್ಲ. ೧೯೬೧ ಕಾಂಗೋ ಜೂನ್ ೩೦, ೧೯೬೦ ರಲ್ಲಿ ಕಾಂಗೋ ದೇಶದ ಮೇಲಿನ ಬೆಲ್ಜಿಯಮ್ ನ ಆಡಳಿತ ಹಠಾತ್ತಾಗಿ ಕೊನೆಗೊಂಡಿತು. ಆಗ ಅಲ್ಲಿ ಶಾಂತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಈ ಕಾಲದಲ್ಲಿ ಉಪಯೋಗಿತವಾಯಿತು. ವಾಯು ಸೇನೆ ಮುಖ್ಯಸ್ಥರು 31 Dec, 2016 ವಾಯುಪಡೆಯ ಮುಖ್ಯಸ್ಥರಾಗಿ ರಾಕೇಶ್ ಸಿಂಗ್ ಭಾದೌಇರ ಅವರು 30 sep, 2019 ಶನಿವಾರ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 28ನೇ ಮುಖ್ಯಸ್ಥರಾಗಿದ್ದರೆ, ರಾಕೇಶ್ ಸಿಂಗ್ ಭಾದೌಇರ ಅವರು ವಾಯುಪಡೆಯ/ಮುಖ್ಯಸ್ಥರಾಗಿದ್ದಾರೆhttpwww.prajavani.net/news/article/2016/12/31/462862.html ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ;ಪಿಟಿಐ;1 Jan, 2017] ೧೯೬೨ ಭಾರತ-ಚೀನಾ ಯುದ್ಧ ೧೯೬೫ ಭಾರತ-ಪಾಕಿಸ್ತಾನ ಯುದ್ಧ ೧೯೭೧ ಭಾರತ ಪಾಕಿಸ್ತಾನ ಯುದ್ಧ ವಾಯುಸೇನೆಯ ವಿಮಾನಗಳು 360px|right|thumb|ತೇಜಸ್ -HAL Tejas ಬಾಂಬರ್ ಗಳು ಲಿಬರೇಟರ್ ಕೆನ್‍ಬೆರ್ರಾ ಫೈಟರ್ ಗಳು ಸುಖೋಯಿ Su-30MKI ಮಿರಾಜ್ 2000H ಜಾಗ್ವಾರ್ IS ಜಾಗ್ವಾರ್ IM ಮಿಗ್-೨೯ (Fulcrum) ಮಿಗ್-೨೭ ML (Flogger) ಮಿಗ್-೨೫ U (Foxbat) ಮಿಗ್-೨೫ R (Foxbat) ಮಿಗ್-೨೩ MF (Flogger) ಮಿಗ್-೨೩ BN (Flogger) ಮಿಗ್-೨೧ Bison (Fishbed) ಮಿಗ್-೨೧ Bis (Fishbed) ಮಿಗ್-೨೧ M (Fishbed) ಮಿಗ್-೨೧ MF(Fishbed) ಮಿಗ್-೨೧ FL(Fishbed) ಮಿಗ್-೨೧ PF(Fishbed) ಮಿಗ್-೨೧ F-13(Fishbed) ಕಳೆದ 40 ವರ್ಷಗಳಲ್ಲಿ ಮಿಗ್‌–21 ಯುದ್ಧ ವಿಮಾನಗಳು ಹಲವು ಬಾರಿ ಪತನಗೊಂಡಿವೆ. ಭಾರತ 872 ಮಿಗ್‌ ವಿಮಾನಗಳಲ್ಲಿ ಅರ್ಧದಷ್ಟು ಕಳೆದುಕೊಂಡಿದೆ. 1973–74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌–21 ಯುದ್ಧ ವಿಮಾನ ಸೇರ್ಪಡೆಯಾಯಿತು. 2006ರಲ್ಲಿ ಕನಿಷ್ಠ 110 ಮಿಗ್‌–21 ಯುದ್ಧ ವಿಮಾನಗಳನ್ನು ಆಧುನೀಕರಿಸಲಾಯಿತು. ಮಿಗ್‌–21 ಬೈಸನ್‌ ಹೆಸರಿನ ಅವುಗಳು ಅಧಿಕ ಸಾಮರ್ಥ್ಯದ ರಡಾರ್‌, ಉತ್ತಮಗೊಳಿಸಿದ ಎಲೆಕ್ಟ್ರಾನಿಕ್‌ ವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯನ್ನು ಒಳಗೊಂಡಿವೆ. ಭಾರತೀಯ ವಾಯುಪಡೆ;44 ವರ್ಷ ಹಳೆಯ ಮಿಗ್‌ ಯುದ್ಧ ವಿಮಾನ; ಅಷ್ಟು ವರ್ಷದ ಕಾರನ್ನೂ ಯಾರೂ ಬಳಸಲ್ಲ–ಧನೋಆ;d: 20 ಆಗಸ್ಟ್ 2019 ಹೆಲಿಕಾಪ್ಟರ್ ಗಳು HAL ಧ್ರುವ HAL ಚೀತಾ HAL ಚೇತಕ್ ತರಬೇತಿ ವಿಮಾನಗಳು BAE Hawk HAL HJT-16 ("ಕಿರಣ್") HAL HPT-32 ("ದೀಪಕ್") ಬರಲಿರುವ ವಿಮಾನಗಳು HAL ತೇಜಸ್ (ಹಗುರ ಯುದ್ಧ ವಿಮಾನ) HAL ಹೆಚ್-ಜೆ-ಟಿ ೩೬ (ತರಬೇತಿ ವಿಮಾನ) ಮಿಗ್–21 ಯುದ್ಧ ವಿಮಾನ ಅಪಘಾತ 320px|right|thumb|ಮಿಗ್ 21 ಎಂ.ಎಫ್ ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್‌ ಜೆಟ್‌ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ ಕಾರ್ಗಿಲ್‌ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್ ರಷ್ಯಾದ ಮಿಗ್‌–21 ವಿಮಾನಕ್ಕೆ ಅಗ್ರ ಸ್ಥಾನ. 1955ರಲ್ಲಿ ತಯಾರಾದ ಈ ವಿಮಾನ ಈಗಲೂ ಬೇರೆ ಬೇರೆ ರಾಷ್ಟ್ರಗಳ ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಭಾರತೀಯ ವಾಯುಪಡೆಯಲ್ಲೂ ಮಿಗ್‌–21 ತುಕಡಿಗಳಿವೆ. ನಿವೃತ್ತಿಯ ಅಂಚಿನಲ್ಲಿರುವ ಈ ವಿಮಾನಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿವೆ. ಅವಧಿ ಮುಗಿದ ನಂತರವೂ ಅವನ್ನು ಬಳಸುತ್ತಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ 320px|right|thumb|ಯುದ್ಧವಿಮಾನ ಎಂ.ಎಫ್ ಬೈಸನ್ (Sheeju mig21) ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್‌ ಜೆಟ್‌ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ *ಕಾರ್ಗಿಲ್‌ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. 1990ರ ದಶಕದಲ್ಲೇ ಇವುಗಳನ್ನು ಸೇವೆಯಿಂದ ನಿವೃತ್ತಿಗೊಳಿಸಬೇಕಾಗಿತ್ತು. ಆದರೆ ಇವುಗಳಿಗೆ ಸರಿಸಮನಾದ ಯುದ್ಧ ವಿಮಾನ ವಾಯುಪಡೆಯಲ್ಲಿ ಇಲ್ಲದ ಕಾರಣ ಇವುಗಳ ಸೇವೆಯನ್ನು ಮುಂದುವರೆಸಲಾಗಿದೆ. ಮಿಗ್‌–21 ಎಂಎಫ್‌ ಮತ್ತು ಮಿಗ್ –21 ಬಿಸನ್‌ ಎಂಬ ಎರಡು ಅವತರಣಿಕೆಯ ವಿಮಾನಗಳು ಸೇವೆಯಲ್ಲಿದ್ದವು. ಈಗ ಎಂಎಫ್‌ ಸರಣಿಯ ವಿಮಾನಗಳನ್ನು ನಿವೃತ್ತಿ ಮಾಡಲಾಗಿದೆ. ಎಚ್‌ಎಎಲ್‌ ತಯಾರಿಸಿದ ಎಚ್ಎಎಲ್ ತೇಜಸ್ ಲಘು ಯುದ್ಧ ವಿಮಾನಗಳು ಸೇವೆಗೆ ಲಭ್ಯವಾದ ನಂತರ ಬಿಸನ್‌ ಸರಣಿಯ ಮಿಗ್‌–21ಗಳನ್ನೂ ಸೇವೆಯಿಂದ ನಿವೃತ್ತಿಗೊಳಿಸಲಾಗುತ್ತದೆ.ಶ್ರೀನಗರ: (ತಾಂತ್ರಿಕ ಸಮಸ್ಯೆಯಿಂದ ಮಿಗ್–21 ಯುದ್ಧ ವಿಮಾನವು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ 20 Sep, 2016 ನಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಫೈಲಟ್ ಸೇರಿದಂತೆ ಯಾರಿಗೂ ಅಪಾಯ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿವರ ತಯಾರಿಕಾ ಸಂಸ್ಥೆ: ಸೋವಿಯತ್‌ ಒಕ್ಕೂಟದ ಮಿಕೊಯಾನ್ ಗೌರೆವಿಚ್ ತಾಂತ್ರಿಕ ವಿವರ 15.7 ಮೀಟರ್ ಉದ್ದ 4.5 ಮೀಟರ್ ಎತ್ತರ 7.15 ಮೀಟರ್ ರೆಕ್ಕೆಗಳ ಅಗಲ 6,050 ಕೆ.ಜಿ ಖಾಲಿ ತೂಕ 10,050 ಕೆ.ಜಿ ಭರ್ತಿ ತೂಕ 14 ಸಾವಿರಕ್ಕಿಂತ ಹೆಚ್ಚು ವಿಮಾನ ತಯಾರಿ 2,050 ಕಿ.ಮೀ ವೇಗ 54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ 54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಸೇರ್ಪಡೆ ಮತ್ತು ಸೇವೆಯಿಂದ ನಿವೃತ್ತಿ 1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌ ಯುದ್ಧವಿಮಾನಗಳ ಸೇರ್ಪಡೆ 872 ಮಿಗ್–21 ಎಂಎಫ್‌ ಮತ್ತು ಮಿಗ್‌–21 ಬಿಸನ್‌ ವಿಮಾನಗಳ ಸಂಖ್ಯೆ 485 ಈವರೆಗೆ ಪತನವಾಗಿರುವ ಎರಡೂ ಅವತರಣಿಕೆಯ ವಿಮಾನಗಳ ಸಂಖ್ಯೆ 171 ಪತನಗಳಲ್ಲಿ ಮೃತಪಟ್ಟಿರುವ ಪೈಲಟ್‌ಗಳ ಸಂಖ್ಯೆ 2013ರ ಡಿಸೆಂಬರ್‌ ಮಿಗ್‌–21 ಎಂಎಫ್‌ ವಿಮಾನಗಳು ಸೇವೆಯಿಂದ ನಿವೃತ್ತಿ 8 ಪತನ ಸಂಬಂಧಿ ಘಟನೆಗಳಲ್ಲಿ ಮೃತಪಟ್ಟ ತುರ್ತು ಸೇವೆಗಳ ಸಿಬ್ಬಂದಿ 40 ಪತನಗಳಲ್ಲಿ ಮೃತಪಟ್ಟ ನಾಗರಿಕರು 150 ಈಗ ಸೇವೆಯಲ್ಲಿರುವ ಮಿಗ್–21 ಬಿಸನ್ ವಿಮಾನಗಳ ಸಂಖ್ಯೆ 2022‌ ಮಿಗ್‌–21 ವಿಮಾನಗಳು ಸಂಪೂರ್ಣವಾಗಿ ಸೇವೆಯಿಂದ ನಿವೃತ್ತಿಯಾ ಗಲಿವೆ ಮತ್ತೆ ಮಿಗ್–21 ಯುದ್ಧ ವಿಮಾನ ಅಪಘಾತ ರಫೆಲ್ ಜೆಟ್ ಒಪ್ಪಂದ ವಿಶೇಷ ಲೇಖನ:ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ 320px|right|thumb|ದಸ್ಸಾಲ್ಟ ರಾಫೇಲ್ ಯುದ್ಧವಿಮಾನ ೨೦೧೧ರ ಪ್ರದರ್ಶನದಲ್ಲಿ (at Aero India 2011 -8th edition of Aero India) ಫೇಲ್ ಯುದ್ಧ ವಿಮಾನಗಳ ಖರೀದಿಗೆ ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್‌ ದಿ.23 Sep 2016:ಶುಕ್ರವಾರ ಸಹಿ ಮಾಡಿದವು. ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಈ ಯುದ್ಧ ವಿಮಾನ, ಭಾರತೀಯ ವಾಯುಪಡೆಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವ ಜೀನ್ ಯವೆಸ್‌ ಲೆ ಡ್ರಿಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. 16 ತಿಂಗಳ ಹಿಂದೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು. ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಿದ್ದಾರೆ. ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದ್ದು, ಒಪ್ಪಂದ ಪ್ರಕ್ರಿಯೆಯಲ್ಲಿ ರಾಫೆಲ್ ಜೆಟ್ ತಯಾರಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸೇರಿದಂತೆ ಫ್ರೆಂಚ್ ನ ಹಲವು ಸಂಸ್ಥೆಗಳ ಸಿಇಒ ಗಳು ಭಾಗಿಯಾಗಲಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದ ನಡೆದ 36 ತಿಂಗಳಲ್ಲಿ ರಾಫೆಲ್ ಜೆಟ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ. ಆರಂಭಿಕ ಯೋಜನೆ 126 ಜೆಟ್ ಖರೀದಿಸುವುದಿದ್ದರೂ, ಭಾರತವು ಅದನ್ನು 36 ಜೆಟ್ ಗಳನ್ನು, ಅದೂ ಸಿದ್ಧ ಸ್ಥಿತಿಯಲ್ಲಿ ಕೊಳ್ಳುವ ತೀರ್ಮಾನಕ್ಕೆ ಬಂದು ಮುಟ್ಟಿತು. ಹೀಗಾಗಿ ಜೆಟ್ ವಿಮಾನದ ದರ ಮೊದಲು ಒಪ್ಪಿದ್ದಕ್ಕಿಂತ ಹೆಚ್ಚೇ ಆಗಿದೆ.All you need to know about the Rafale deal DEEPALAKSHMI K. ಈ ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರ ಕ್ಷಿಪಣಿಗಳಿಗಿಂತ ಮೂರುಪಟ್ಟಿ ಕಡಿಮೆ ಇದೆ. ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಜನವರಿ ತಿಂಗಳಲ್ಲಿ ಪ್ರಾನ್ಸ್ ಮತ್ತು ಭಾರತ ಸರ್ಕಾರಗಳು ಹಣಕಾಸು ವಿಚಾರ ಹೊರತುಪಡಿಸಿ ಸಹಿ ಹಾಕಿದ್ದವು.ರಫೆಲ್ ಜೆಟ್ ಒಪ್ಪಂದಕ್ಕೆ ಇಂದು ಸಹಿ ರಫೇಲ್‌ ಜೆಟ್‌- ಮೊದಲ ಕಂತು ಆಗಮನ Dassault Rafale ಫ್ರಾನ್ಸ್ ಮತ್ತು ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ೨೯-೭-೨೦೨೦ ಬುಧವಾರ ಬಂದಿವೆ. ಈ ಹಿಂದೆ ಒಂದು ವಿಮಾನ ಬಂದಿತ್ತ. ಆ ಮೂಲಕ ಭಾರತದ ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚು ಮಾಡಿವೆ. ಪ್ರಾನ್ಸ್‌ ದೇಶದ ಪ್ರಮುಖ ವಾಯುಯಾನ ಕಂಪನಿ ರಫೇಲ್‌ನಿಂದ 36 ಯುದ್ಧವಿಮಾನಗಳನ್ನು ಖರೀದಿಸಲು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2016ರ ಸೆಪ್ಟೆಂಬರ್‌ನಲ್ಲಿ ರೂ.59,000 ಕೋಟಿ ಮೊತ್ತದ ವ್ಯವಹಾರ ಒಪ್ಪಂದ ಮಾಡಿಕೊಂಡಿತ್ತು.ರಫೇಲ್‌ ಜೆಟ್‌ ಭಾರತ ಸೈನ್ಯದ ಪರಾಕ್ರಮ ಹೆಚ್ಚಿಸಿದ ಯುದ್ದ ವಿಮಾನಗಳ ಚಿತ್ರ ಸಹಿತ ಮಾಹಿತಿ; d: 30 ಜುಲೈ 2020, ಭಾರತದ ಅಗತ್ಯ ವಾಯುಪಡೆಯ ಉನ್ನತ ಅಧಿಕಾರಿಗಳು ಇಂದು ಭಾತರದ ಉತ್ತರ ಮತ್ತು ಪಶ್ಚಿಮ ಗಡಿ ರಕ್ಷಿಸಲು (ಪಾಕಿಸ್ತಾನ ಮತ್ತು ಚೀನಾ-ಗಡಿ) ಕನಿಷ್ಠ 42 ವಿಮಾನದಳ ತುಕಡಿಗಳು ಅಗತ್ಯವಿದೆ ಎಂದು ಹೇಳುತ್ತಾರೆ. ಇದು ಪ್ರಸ್ತುತ ಸುಮಾರು 32 ವಿಮಾನದಳ ತುಕಡಿಗಳನ್ನು ಒಳಗೊಂಡಿದೆ, ಪ್ರತಯೊಂದರಲ್ಲಿ 18 ವಿಮಾನಗಳಿವೆ, ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಿಗೆ ಕಳೆದ ವರ್ಷ, ಪರಮಾಣು ಶಸ್ತ್ರಸಜ್ಜಿತ ನೆರೆಯ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ ಸರಿಸಮಾನವಾಗಿ ಭಾರತ ತಂಡದ ತುಕಡಿಗಳು 2022ರ ಹೊತ್ತಿಗೆ ಕೇವಲ 25ತುಕಡಿಗೆ ಇಳಿಯಬಹುದೆಂದು ಎಚ್ಚರಿಸಿದ್ದಾರೆ.ಆದರೆ ನಿಜವಾದ ಕಾಳಜಿ ಚೀನಾ, ಪಾಕಿಸ್ತಾನದ ಮಿತ್ರರಾಷ್ಟ್ರ; ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಿಂತ ಹೆಚ್ಚು.2022ರ ಹೊತ್ತಿಗೆ ಕೇವಲ 25ತುಕಡಿಗೆ ಇಳಿಯಬಹುದು ವಾಯು ಪಡೆಯ ಮುಖ್ಯಸ್ತರ ನೇಮಕ 18 Dec, 2016 ಏರ್‌ ಚೀಫ್‌ ಮಾರ್ಷಲ್‌ ರಾಕೇಶ್ ಸಿಂಗ್ ಭಾದೌಇರ ಅವರನ್ನು ವಾಯು ಪಡೆಯ (ಐಎಎಫ್‌) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ವಾಯುಪಡೆಯ ಮುಖ್ಯಸ್ಥರಾದ ಧನೋವಾ ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದು, ರಾಕೇಶ್ ಸಿಂಗ್ ಭಾದೌಇರ ಅವರು ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಲೆ.ಜ. ರಾವತ್‌ ಸೇನಾ ಪಡೆ, ಧನೋವಾ ವಾಯುಪಡೆ ಮುಖ್ಯಸ್ಥ;;ಪಿಟಿಐ;30 ಸೆಪ್ಟೆಂಬರ್ , 2019 ಇವನ್ನೂ ನೋಡಿ ಭಾರತ ಭಾರತೀಯ ಸೈನ್ಯ ಭಾರತೀಯ ಭೂಸೇನೆ ಭಾರತೀಯ ವಾಯುಸೇನೆ ಭಾರತೀಯ ನೌಕಾಸೇನೆ ಭಾರತೀಯ ಸೈನ್ಯ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ ಭಾರತದಲ್ಲಿ ಕ್ಷಿಪಣಿ ವ್ವಸ್ಥೆ mega Rafale fighter deal Why Rafale is a Big Mistake- All you need to know about the Rafale deal ಆಗಸ್ಟಾ ವೆಸ್ಟ್‌ಲೆಂಡ್ ಹೆಲಿಕಾಪ್ಟರ್‌ ಬಾಹ್ಯ ಸಂಪರ್ಕಗಳು ಅಧಿಕೃತ ತಾಣ ವಾಯುಸೇನೆಯ ಬಗ್ಗೆ ಮಾಹಿತಿ ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್) :ಅಭಿಪ್ರಾಯಗಳು;8 Oct, 2016 ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್);ಸೇನೆಯ ಹೊಟ್ಟೆ ಗಟ್ಟಿ ಮಾಡಿ!;8 Oct, 2016; ಉಲ್ಲೇಖ ವರ್ಗ:ಭಾರತ ವರ್ಗ:ಸಮಾಜ
ಪಂ. ಜವಾಹರಲಾಲ್ ನೆಹರು
https://kn.wikipedia.org/wiki/ಪಂ._ಜವಾಹರಲಾಲ್_ನೆಹರು
Redirect ಜವಾಹರ‌ಲಾಲ್ ನೆಹರು
ಋಣವಿದ್ಯುತ್ಕಣ
https://kn.wikipedia.org/wiki/ಋಣವಿದ್ಯುತ್ಕಣ
REDIRECT ಎಲೆಕ್ಟ್ರಾನ್
ರಾಮಕೃಷ್ಣ ಪರಮಹಂಸ
https://kn.wikipedia.org/wiki/ರಾಮಕೃಷ್ಣ_ಪರಮಹಂಸ
thumb|ಶ್ರೀ ರಾಮಕೃಷ್ಣ ಪರಮಹಂಸ ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ ೧೮, ೧೮೩೬ - ಆಗಸ್ಟ್ ೧೬, ೧೮೮೬) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.ಇವರ ಮೊದಲ ಹೆಸರು "ಗಧಾದರ". "ನಮನ" ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು. ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು "ಅವಿದ್ಯಾಮಾಯೆ" ಮತ್ತು "ವಿದ್ಯಾಮಾಯೆ" ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. "ಅವಿದ್ಯಾಮಾಯೆ" ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು. ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ "ಏಕಮ್ ಸದ್ವಿಪ್ರಾಃ ಬಹುಧಾ ವದಂತಿ" (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್ ಧರ್ಮ, ಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತಂತ್ರ ಮಾರ್ಗಗಳು). ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ: ಎಲ್ಲ ಅಸ್ತಿತ್ವದ ಏಕತೆ ಮಾನವರಲ್ಲಿಯೂ ಇರುವ ದೈವತ್ವ ದೇವರ ಏಕತೆ ಎಲ್ಲ ಧರ್ಮಗಳ ಸಾಮರಸ್ಯ ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು. ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ, ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, "ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ" ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು. ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ. ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು. ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು. ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು. ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು. ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು. ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು. ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು. ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು. ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು. ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು. ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು. ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ. ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ" ಎಂದರು. ಇದನ್ನು ಕೇಳಿ ದುರ್ಗಾದಾಸನು "ನೋಡೋಣ, ಹೇಗೆ ಮಾಡುವೆಯೊ" ಎಂದನು. ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, "ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ?" ಎಂದು ಕೇಳಿದಳು. ದುರ್ಗಾದಾಸನು, "ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು" ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ "ಅಣ್ಣ, ಬರುತ್ತೀನಿ" ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು. ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, "ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು" ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು. ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ. ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, "ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ" ಎಂದರು. ಹೃದಯನು, "ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು" ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು. ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು. ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು. ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು. ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : "ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ." ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : "ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ." ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು. ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ "ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ?" ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು. ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: "ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು" ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು. ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು. ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ "ದೇವರೂ ಕೂಡ ನಿಯಮವನ್ನು ಮೀರಲಾರ" ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು "ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ಅವನ ಇಚ್ಛೆಯಾದರೆ ಬಿಡದೆ ಏನು?" ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, "ನೋಡು ದೇವರಿಗೆ ಯಾವುದು ಅಸಾಧ್ಯ?" ಎಂದರು. ಮಥುರನು, "ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ!" ಎಂದು ತೆಪ್ಪಗಾದನು. ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, "ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ" ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, "ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ?" ಎಂದರು. ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು. ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ. ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು. ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು. ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ." ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. "ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ" ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ. ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು. ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು. ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು. ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು. ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು. ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು. ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು. ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು. ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು. ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ. ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು. ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು "ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ" ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, "ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು" ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ "ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ" ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು. ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು. ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು. ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು. ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು. ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು. ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . "ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ" ಎನ್ನುತ್ತಿದ್ದರು. ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, "ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು" ಎಂದರು. ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು "ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು" ಎಂದರು. ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು. ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು. ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. "ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು" ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, "ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು. ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು. ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. "ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ !" ಎನ್ನುತ್ತಿದ್ದರು. ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು. ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು ಕ್ರಿ. ಶ. 1875ನೇ ಇಸವಿಯ ಸಮಯ. ಗಂಗಾನದಿಯ ತೀರದಲ್ಲಿ ದಕ್ಷಿಣೇಶ್ವರವೆಂಬ ಒಂದು ಪ್ರದೇಶ. ಅಲ್ಲಿ ಭವತಾರಿಣಿ ಜಗನ್ಮಾತೆಯ ಒಂದು ಸುಂದರ ದೇವಾಲಯ. ದೇವಸ್ಥಾನದ ಹೊರಗೆ ದಟ್ಟವಾದ ಕಾಡು ಇತ್ತು. ಸಹಸ್ರಾರು ಹಕ್ಕಿಗಳು ಸಂಜೆ ಮರದ ಮೇಲೆ ಕುಳಿತುಕೊಂಡು ವಿಧವಿಧವಾದ ಗಾನನೈವೇದ್ಯವನ್ನು ಜಗನ್ಮಾತೆಗೆ ಅರ್ಪಿಸುತ್ತಿವೆ. ಪಡವಲಂಚಿನಲ್ಲಿ ಸೂರ್ಯ ಸಂಜೆ ಓಕುಳಿಯ ಚೆಲ್ಲಿ ಮುಗಿಲಿನ ಅಂಚಿನ ಹಿಂದೆ ಮರೆಯಾಗುತ್ತಿರುವನು. ಆ ಸಮಯದಲ್ಲಿ ಸುಮಾರು ಇಪ್ಪತ್ತು ವರುಷದ ಯುವಕ ಮುಳುಗುತ್ತಿರುವ ರವಿಯನ್ನು ನೋಡಿ ನಿಟ್ಟುಸಿರುಬಿಡುವನು. 'ಅಯ್ಯೋ, ನನ್ನ ಜೀವನದಲ್ಲಿ ಆಗಲೇ ಒಂದು ದಿನ ಹೋಯಿತು. ಇನ್ನೂ ತಾಯಿ ಕಾಣಲಿಲ್ಲ' ಎಂದು ಕಂಬನಿದುಂಬಿ ಅಳುವನು. ನೆಲದ ಮೇಲೆ ಬಿದ್ದು ಹೊರಳಾಡುವನು. ನದಿಗೆ ಬಂದವರು ಹಿಂತಿರುಗಿ ಹೋಗುವಾಗ ಈ ದೃಶ್ಯವನ್ನು ನೋಡಿ, "ಅಯ್ಯೊ ಪಾಪ, ಹುಡುಗ ಹೆತ್ತ ತಾಯಿಗಾಗಿ ಅಳುತ್ತಿರುವನೇನೋ" ಎಂದು ಸಹಾನುಭೂತಿ ತೋರಿ ಮುಂದೆ ಸಾಗುವರು. ಎಳೆ ಮಗು ಮರೆಯಾದ ತಾಯಿಗಾಗಿ ಎಷ್ಟು ಅಳುವುದೊ ಅಷ್ಟು ಅತ್ತನು ಆ ಯುವಕ ಜಗನ್ಮಾತೆಗಾಗಿ. ಸಂದೇಹಾಸ್ಪದವಾದ, ಕಣ್ಣಿಗೆ ಕಾಣದ ದೇವರಿಗಾಗಿ ಅಷ್ಟು ವ್ಯಥೆಪಟ್ಟವರು ಅಪರೂಪ, ಧಾರ್ಮಿಕ ಜೀವನದಲ್ಲಿ. ಕೊನೆಗೆ ನಿರಾಶನಾಗಿ ಗರ್ಭಗುಡಿಯಲ್ಲಿದ್ದ ಬಲಿಕೊಡುವ ಖಡ್ಗವನ್ನು ತೆಗೆದುಕೊಂಡನು. ಅದರಿಂದ ದೇವರೆದುರಿಗೆ ತನ್ನ ರುಂಡವನ್ನು ಈಡಾಡುವುದರಲ್ಲಿದ್ದನು. ತಕ್ಷಣ ದೇವಿ ಪ್ರತ್ಯಕ್ಷಳಾದಳು. ಯುವಕನ ಮನಸ್ಸು ಪ್ರಪಂಚವನ್ನು ತೊರೆದು ಅವರ್ಣನೀಯ ಆನಂದದಲ್ಲಿ ತಲ್ಲೀನವಾಯಿತು. ದೇವರು ಪರೀಕ್ಷಿಸುವನು. ಅವನು ನಮ್ಮ ಸರ್ವಸ್ವವನ್ನೂ ತೆತ್ತಲ್ಲದೆ ಬರುವುದಿಲ್ಲ. ನಮ್ಮೆಲ್ಲವನ್ನೂ ದೇವರಿಗೆ ಕೊಟ್ಟರೆ ದೇವರು ತನ್ನ ಎಲ್ಲವನ್ನೂ ಭಕ್ತನಿಗೆ ಕೊಡುವನು. ತನ್ನ ಇಡೀ ಜೀವನವನ್ನು ನಿವೇದಿಸಿ, ಜಗನ್ಮಾತೆಯನ್ನು ಪಡೆದುಕೊಂಡನು. ಈ ವ್ಯಕ್ತಿಯೇ ಮುಂದೆ ಜಗದ್ವಂದ್ಯ ಶ್ರೀರಾಮಕೃಷ್ಣ ಪರಮಹಂಸರಾದುದು. ಸ್ವಾಮಿ ವಿವೇಕಾನಂದರು ಹೇಳಿರುವಂತೆ ಶ್ರೀರಾಮಕೃಷ್ಣರ ಜೀವನ ವೇದ ವೇದಾಂತಗಳಿಗೆ ಬರೆದಿರುವ ಸಚೇತನ ಭಾಷ್ಯ. ಮೂವತ್ತು ಕೋಟಿ ಭಾರತೀಯರ ಎರಡು ಸಾವಿರ ವರುಷಗಳ ಜೀವನವನ್ನು ಇವರು ತಮ್ಮ ಒಂದು ಜೀವನದಲ್ಲಿ ಅಳವಡಿಸಿಕೊಂಡಿರುವರು. ಇವರ ಜೀವನ ದ್ವೈತ ಅದ್ವೈತ ವಿಶಿಷ್ಟಾದ್ವೈತಗಳ ತ್ರಿವೇಣಿ. ಭಗವಂತನನ್ನು ಹಲವಾರು ಭಾವಗಳಲ್ಲಿ ಕಂಡು ಪ್ರೀತಿಸಿದರು. ಜ್ಞಾನ, ಭಕ್ತಿ, ಯೋಗ ಇಲ್ಲಿ ಸಂಧಿಸಿವೆ. ಇವರ ಜೀವನ ಒಂದು ದೊಡ್ಡ ವಿಶ್ವಧರ್ಮ ಸಮ್ಮೇಳನ. ಹೊರಗೆ ನೋಡುವುದಕ್ಕೆ ಎಳೆನಗೆ ಸದಾ ಇವರ ಮುಖದಲ್ಲಿ ಚಿಮ್ಮುತ್ತಿದೆ. ಅದರ ಹಿಂದೆ ರೋಮಾಂಚಕಾರಿಯಾದ ಆಧ್ಯಾತ್ಮಿಕ ಘಟನಾವಳಿ ತುಂಬಿ ತುಳುಕಾಡುತ್ತಿದೆ. ಇವರು ಘನ ವಿದ್ವಾಂಸರ ಗುಂಪಿಗೆ ಸೇರಿದವರಲ್ಲ, ದೊಡ್ಡ ವಾಗ್ಮಿಗಳಲ್ಲ. ಉಪನ್ಯಾಸ ಕೊಡುವುದಕ್ಕೆ ಎಲ್ಲೂ ಹೊರಗೆ ಹೋಗಲಿಲ್ಲ. ತಮ್ಮ ಬಾಳನ್ನೆಲ್ಲ ಬಹುಪಾಲು ದಕ್ಷಿಣೇಶ್ವರ ದೇವಾಲಯದ ವಲಯದಲ್ಲಿ ಕಳೆದರು. ಅದರೂ ಅಪರೂಪವಾಗಿ ಅರಳಿದ ಸಹಸ್ರದಳ ಕಮಲವಿದು. ಇಡೀ ಬದ್ಧಜೀವಿಗಳ ಉದ್ಧಾರಕ್ಕೆ ಬೇಕಾಗುವ ಧರ್ಮಾಮೃತ ಅಲ್ಲಿ ಹುದುಗಿತ್ತು. ಹಲವಾರು ಕಡೆಯಿಂದ ದುಂಬಿಗಳು ಬಂದವು. ಮಕರಂದವನ್ನು ಹೀರಿ ತೃಪ್ತರಾದವು. ಅದನ್ನು ಉಳಿದವರಿಗೆಲ್ಲ ಹಂಚಿ ಧನ್ಯರಾದವು, ಪಾಶ್ಚಾತ್ಯ ದೇಶಗಳಿಗೂ ಹಂಚಿ ಭರತಖಂಡಕ್ಕೆ ಮಾನ್ಯತೆ ತಂದವು. ಚಿರಾಯುವಾದ ಭಾರತಮಾತೆಯ ಶ್ರೇಷ್ಠತಮ ಪುತ್ರರಲ್ಲಿ ಶ್ರೀರಾಮಕೃಷ್ಣ ಪರಮಹಂಸರೊಬ್ಬರು. ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯಲ್ಲಿ ಕಾಮಾರಪುಕುರವೆಂಬ ಸಣ್ಣದೊಂದು ಗ್ರಾಮ. ಅದು ಕಲ್ಕತ್ತೆಯಿಂದ ಸುಮಾರು ಅರವತ್ತು ಮೈಲಿ ದೂರದಲ್ಲಿದೆ. ಈಗಿನ ಕಾಲದ ವಾಹನ ಸೌಕರ್ಯಗಳಾವುವೂ ಅಲ್ಲಿಗೆ ಇನ್ನೂ ಬಂದಿರಲಿಲ್ಲ. ಹತ್ತಿರದ ರೈಲ್ವೆ ಸ್ಟೇಷನ್ನಿಗೆ ಸುಮಾರು ಇಪ್ಪತ್ತೈದು ಮೈಲಿ. ಹಳ್ಳಿ ಸಣ್ಣದು. ಆದರೂ ಜನರು ನೆಮ್ಮದಿಯಾಗಿದ್ದರು. ಸುತ್ತಮುತ್ತಲೂ ಕಮಲ ಪುಷ್ಕರಣಿ ತೋಪು ಇವುಗಳ ಹಿಂದೆ ಹಸಿರು ಗದ್ದೆಯ ಬಯಲು. ಅಲ್ಲಿ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿಯರಿಂದ ಕೂಡಿದ ಒಂದು ಬ್ರಾಹ್ಮಣ ಕುಟುಂಬವಿತ್ತು. ಬಡವರಾದರೂ ದೊಡ್ಡ ದೈವಭಕ್ತರು. ಯಾವ ಅಧಿಕಾರವೂ ಇವರಿಗೆ ಇಲ್ಲದೆ ಇದ್ದರೂ ಜನರು ಇವರ ಜೀವನಗಾಂಭೀರ್ಯದೆದುರಿಗೆ ತಗ್ಗಿ ನಡೆಯುತ್ತಿದ್ದರು. ಭಕ್ತರು, ಪರೋಪಕಾರಿಗಳು ಎಂದು ಪ್ರಖ್ಯಾತರಾಗಿದ್ದರು. ಇವರಿಗೆ ಕ್ರಿ. ಶ. 1836ನೇ ಫೆಬ್ರವರಿ 18ನೇ ದಿನ ಹುಟ್ಟಿದ ನಾಲ್ಕನೆಯ ಮಗನೇ ಶ್ರೀರಾಮಕೃಷ್ಣ. ಮಗು ಹುಟ್ಟಿದಾಗ ಗದಾಧರನೆಂದು ನಾಮಕರಣ ಮಾಡಿದರು. ಮನೆಯಲ್ಲಿ ಗದಾಯ್ ಎಂದು ಕರೆಯುತ್ತಿದ್ದರು. ಕ್ರಮೇಣ ಶ್ರೀರಾಮಕೃಷ್ಣ ಎಂಬ ಹೆಸರು ಅವರಿಗೆ ಸೇರಿ, ನಂತರ, ಇದೇ ಪ್ರಖ್ಯಾತವಾಗಿ ನಿಂತಿತು. ಮಗುವು ಮನೆಯವರಿಗೆ ಮಾತ್ರ ಮುದ್ದಾಗಿ ಇರಲಿಲ್ಲ. ಇಡೀ ಹಳ್ಳಿಯೇ ಆ ಮಗುವನ್ನು ನೋಡಿ ಸಂತೊಭೀಷಗೊಂಡಿತು. ಅದು ಎಲ್ಲರಿಗೂ ಬೇಕಾದ ಮಗುವಾಯಿತು. ಮಗುವಿಗೆ ಸುಮಾರು ಐದು ಆರನೆ ವರುಷ ತುಂಬುವ ಹೊತ್ತಿಗೆ, ದೇವದೇವಿಯರ ಹಲವು ಸ್ತೋತ್ರಗಳು, ರಾಮಾಯಣ ಮಹಾಭಾರತದ ಕಥೆಗಳು ಇವನ್ನು ಕಲಿತುಕೊಂಡಿತು. ಬಾಲ್ಯದಿಂದಲೂ ಅವರಲ್ಲಿ ಕೆಲವು ಒಳ್ಳೆ ಸ್ವಭಾವಗಳು ಬಹಳ ಚೆನ್ನಾಗಿ ರೂಪುಗೊಂಡಿದ್ದವು. ಸ್ವಲ್ಪವೂ ಅಂಜಿಕೆ ಸ್ವಭಾವದವರಲ್ಲ. ಉಳಿದ ಮಕ್ಕಳು ಎಲ್ಲಿಗೆ ಹೋಗಲು ಅಂಜುತ್ತಿದ್ದರೋ ಅಲ್ಲಿಗೆ ಅವರು ಧೈರ್ಯವಾಗಿ ಹೋಗುತ್ತಿದ್ದರು. ಸಾಧಾರಣವಾಗಿ ಎಂತಹವನಿಗಾದರೂ ಸ್ಮಶಾನ ಸ್ವಲ್ವ ಅಂಜಿಕೆ ತರುವ ಸ್ಥಳ. ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು. ಯಾರೂ ಇವರಿಗೆ ಇಚ್ಛೆ ಇಲ್ಲದುದನ್ನು ಕೋಪ ತೋರಿ ಅಥವಾ ಗದರಿಸಿ ಮಾಡಿಸುವುದಕ್ಕೆ ಆಗುತ್ತಿರಲಿಲ್ಲ. ಯಾರಿಗಾದರೂ ಒಮ್ಮೆ ಮಾತು ಕೊಟ್ಟರೆ ಸಾಕು, ಏನಾದರೂ ಆಗಲಿ ಅದನ್ನು ನಡೆಸಿಕೊಡುತ್ತಿದ್ದರು. ಉಪನಯನದ ಸಮಯದಲ್ಲಿ ಮೊದಲ ಭಿಕ್ಷೆಯನ್ನು ಅವರ ಕುಲಕ್ಕೆ ಸೇರಿದ ಹಿರಿಯರಿಂದ ತೆಗೆದುಕೊಳ್ಳುವುದು ರೂಢಿ. ಬಾಲ್ಯದಿಂದಲೂ ಧನಿ ಎಂಬುವ ಅಕ್ಕಸಾಲಿಗ ಹೆಂಗಸು ಇವರನ್ನು ಪ್ರೀತಿಸುತ್ತಿದ್ದಳು. ಅವಳು ಒಂದು ದಿನ ಮಗುವಿನೊಡನೆ ಉಪನಯನದ ಸಮಯದಲ್ಲಿ ತನ್ನಿಂದ ಭಿಕ್ಷೆಯನ್ನು ತೆಗೆದುಕೊಳ್ಳಬೇಕೆಂದು ಬೇಡಿಕೊಂಡಳು. ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಿಗೆ ಇತ್ತರು. ಇವರಿಗೆ ಒಂಭತ್ತು ವರುಷದ ಸಮಯಕ್ಕೆ ಉಪನಯನವಾಯಿತು. ಆ ಸಮಯದಲ್ಲಿ ಆಕೆಯಿಂದ ಭಿಕ್ಷೆ ತೆಗೆದುಕೊಳ್ಳದಂತೆ ಯಾರು ಎಷ್ಟು ಹೇಳಿದರೂ ಕೇಳಲಿಲ್ಲ. ಕೊನೆಗೂ ಧನಿ ಎಂಬ ಅಕ್ಕಸಾಲಿಗಳಿಂದ ಮೊದಲ ಭಿಕ್ಷೆಯನ್ನು ಸ್ವೀಕರಿಸಿದರು. ಸಾಧಾರಣವಾಗಿ ಆ ವಯಸ್ಸಿನಲ್ಲಿ ಮಕ್ಕಳು ದೊಡ್ಡವರು ಹೇಳಿದಂತೆ ಕೇಳುವುದು ಸ್ವಭಾವ. ಇಂತಹ ವಯಸ್ಸಿನಲ್ಲಿಯೇ ಅವರ ಜೀವನದಲ್ಲಿ ಸತ್ಯಕ್ಕಾಗಿ ಏನನ್ನಾದರೂ ಸಹಿಸುವ ಶಕ್ತಿಯನ್ನು ನೋಡುತ್ತೇವೆ. ನಿಜವಾದ ಪ್ರೀತಿಯ ಎದುರಿಗೆ ಸಂಪ್ರದಾಯದ ಆಚಾರವನ್ನೆಲ್ಲ ಕಿತ್ತೊಗೆದರು. ಶ್ರೀರಾಮಕೃಷ್ಣರನ್ನು ಹಳ್ಳಿಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಓದುವುದು ಬರೆಯುವುದರಲ್ಲಿ ಸ್ವಲ್ಪ ಆಸಕ್ತಿ ತೋರಿದರೂ ಗಣಿತ ತಲೆಗೆ ಹತ್ತಲಿಲ್ಲ. ಶಾಲೆಯೊಳಗೆ ಕುಳಿತು ಓದುವುದಕ್ಕಿಂತ ಹತ್ತಿರವಿದ್ದ ತೋಪಿನಲ್ಲಿ ಆಡುವುದರಲ್ಲಿ ಇವರಿಗೆ ಆಸಕ್ತಿ. ಕೆಲವು ವೇಳೆ ಶಾಲಾ ಉಪಾಧ್ಯಾಯರು ಬರುವುದು ತಡವಾದರೆ ಹುಡುಗರೊಂದಿಗೆ ಹತ್ತಿರವಿರುವ ತೋಪಿಗೆ ಹೋಗಿ ಅವರು ನೋಡಿದ್ದ ಬಯಲಾಟವನ್ನು ಆಡುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಹಾಡು ನಟನೆ ಇವುಗಳನ್ನು ಅಭಿನಯಿಸುವುದರಲ್ಲಿ ತುಂಬಾ ಪಾಂಡಿತ್ಯವನ್ನು ತೋರಿದರು. ಪ್ರಚಂಡ ಜ್ಞಾಪಕಶಕ್ತಿ ಇವರಲ್ಲಿತ್ತು. ಹಾಡನ್ನು ಒಂದು ಸಲ ಕೇಳಿದರೆ ಸಾಕು, ಅದನ್ನು ನೆನಪಿನಲ್ಲಿಡುತ್ತಿದ್ದರು. ಅದರಂತೆ ಅಭಿನಯಿಸುತ್ತಿದ್ದರು. ಶ್ರೀರಾಮಕೃಷ್ಣರು ಹುಟ್ಟು ಕಲೋಪಾಸಕರು. ಬಾಹ್ಯಪ್ರಪಂಚದ ಮನಸೆಳೆವ ಬಣ್ಣ, ಆಕಾರ, ಭಾವ, ಧ್ವನಿ ಇವುಗಳೆಲ್ಲಾ ಇಂದ್ರಿಯಾತೀತ ಪ್ರಪಂಚದೆಡೆಗೆ ಇವರನ್ನು ಬೀಸಿ ಕರೆಯುತ್ತಿದ್ದವು. ಶ್ರೀರಾಮಕೃಷ್ಣರಿಗೆ ಆರೇಳು ವರುಷದ ಸಮಯ. ಆಗ ಒಂದು ದಿನ ಹಸುರು ಗದ್ದೆಯ ಬಯಲಿನಲ್ಲಿ ನಡೆಯುತ್ತಿದ್ದರು. ಕೈಯಲ್ಲಿದ್ದ ಒಂದು ಸಣ್ಣ ಬುಟ್ಟಿಯಲ್ಲಿ ಪುರಿ ಇತ್ತು. ಅದನ್ನು ತಿನ್ನುತ್ತ ಸುತ್ತಲೂ ನೋಡುತ್ತ ಹೋಗುತ್ತಿದ್ದರು. ಸುತ್ತಲೂ ಹಸಿರು ಗದ್ದೆ, ಮೇಲೆ ಮೋಡ ಕವಿದಿತ್ತು . ಅದು ಕ್ರಮೇಣ ವಿಸ್ತಾರವಾಗಿ ಆಕಾಶವನ್ನೆಲ್ಲಾ ವ್ಯಾಪಿಸಿತು. ಅದರ ಕಳಗೆ ಬಕಪಕ್ಷಿಯ ಸಾಲು ಹಾರಿಹೋಗುತ್ತಿತ್ತು. ಈ ಬಣ್ಣಗಳ ವೈವಿಧ್ಯತೆಯನ್ನು ನೋಡಿದಾಗ ಅವರ ಮನಸ್ಸಿಗೆ ಯಾವ ಇಂದ್ರಿಯಾತೀತ ಸತ್ಯ ಹೊಳೆಯಿತೋ ತಿಳಿಯದು, ಸಂಪೂರ್ಣ ತನ್ಮಯರಾಗಿ ಬಾಹ್ಯಪ್ರಪಂಚವನ್ನು ಮರೆತುಬಿಟ್ಟರು. ಹತ್ತಿರವಿದ್ದವರು ಅವರನ್ನು ಮನೆಗೆ ಕರೆದುಕೊಂಡು ಬಂದರು. ಸ್ವಲ್ವ ಹೊತ್ತಾದ ಮೇಲೆಯೇ ಅವರಿಗೆ ಬಾಹ್ಯಪ್ರಜ್ಞೆ ಬಂದುದು. ಆಗ ತಮ್ಮ ಮನಸ್ಸು ಇಂದ್ರಿಯಾತೀತ ಪ್ರಪಂಚದಲ್ಲಿ ಅವರ್ಣನೀಯ ಅನಂದದಲ್ಲಿ ತಲ್ಲೀನವಾಗಿತ್ತು ಎಂದರು. ಒಂದು ಶಿವರಾತ್ರಿಯ ದಿನ. ಅಂದು ಜಾಗರಣೆ ಮಾಡಿ ಶಿವಪೂಜೆ ಮಾಡಬೇಕೆಂದು ಅಣಿಯಾಗಿತ್ತು. ಅಂದು ಊರಿನಲ್ಲಿ ಎಲ್ಲರ ಜಾಗರಣೆಗೆಂದು ಬಯಲುನಾಟಕ ಒಂವನ್ನು ಆಡಲು ಕೆಲವರು ಅಣಿಯಾಗುತ್ತಿದ್ದರು. ರಾತ್ರಿಯಾಯಿತು. ನಾಟಕ ಆರಂಭವಾಗುವ ಸಮಯ ಬಂದರೂ ಶಿವನ ಪಾತ್ರಧಾರಿ ಬರಲಿಲ್ಲ. ವಿಚಾರಿಸಿದಾಗ ಅವನಿಗೆ ಅನಾರೋಗ್ಯವೆಂದು ತಿಳಿದುಬಂದಿತು. ಆಗ ಸ್ನೇಹಿತರು ಬಂದು ಶ್ರೀರಾಮಕೃಷ್ಣರನ್ನು ಶಿವನ ಪಾತ್ರವನ್ನು ವಹಿಸಿಕೊಳ್ಳಬೇಕೆಂದು ಕೇಳಿಕೊಂಡರು. ಅವರು ಮೊದಲು ಒಪ್ಪಲಿಲ್ಲ. ಪೂಜೆ ಜಾಗರಣೆಯಲ್ಲಿ ಮನೆಯಲ್ಲೆ ಕಾಲ ಕಳೆಯಬೇಕೆಂದಿರುವೆ ಎಂದರು. ಬಂದವರು, ಪಾತ್ರ ಮಾಡಿದರೂ ಶಿವನನ್ನು ಕುರಿತು ಚಿಂತಿಸುತ್ತಲೇ ಇರಬೇಕಾಗುವುದು; ಅದರಿಂದ ನೀನು ಶಿವನ ಧ್ಯಾನವನ್ನು ಮಾಡಿದಂತೆಯೆ, ಎಂದು ಸಮಾಧಾನ ಹೇಳಿದ ಮೇಲೆ ಒಪ್ಪಿಕೊಂಡರು. ಶಿವನಂತೆ ಭಸ್ಮ ಬಳಿದುಕೊಂಡು ಜಟಾಧಾರಿಯಾಗಿ ರಂಗಭೂಮಿಯ ಮೇಲೆ ಬಂದು ನಿಂತರು. ರಾಮಕೃಷ್ಣರು ತಾನು ನಟಿಸುತ್ತಿರುವೆನು ಎಂಬುದನ್ನು ಮರೆತು ಶಿವಧ್ಯಾನದಲ್ಲಿ ತಲ್ಲೀನರಾದರು. ಕಣ್ಣಿನಿಂದ ಆನಂದಬಾಷ್ಪ ಸುರಿಯತೊಡಗಿತು. ಬಾಹ್ಯಪ್ರಪಂಚದ ಅರಿವನ್ನು ಮರೆತರು. ನೆರೆದ ಪ್ರೇಕ್ಷಕ ವೃಂದಕ್ಕೆ ಶಿವನ ಪಾತ್ರಧಾರಿ ಕಾಣಲಿಲ್ಲ. ಶಿವನಲ್ಲಿ ಐಕ್ಯನಾದ ಶಿವಭಕ್ತನು ಕಂಡನು. ಪಾತ್ರಮಾಡಲು ಇವರಿಂದ ಆಗಲಿಲ್ಲ. ಹತ್ತಿರವಿದ್ದವರು ಹಾಗೆಯೇ ಇವರನ್ನು ಮನೆಗೆ ಕರೆದುಕೊಂಡು ಹೋದರು. ಮಾರನೇ ದಿನವೇ ಇವರಿಗೆ ಜನರ ಅರಿವುಂಟಾಗಿದ್ದು. ಮತ್ತೊಂದು ದಿನ ಮೂರು ಮೈಲಿಗಳ ದೂರದಲ್ಲಿದ್ದ ವಿಶಾಲಾಕ್ಷಿಯ ದೇವಸ್ಥಾನಕ್ಕೆ ಕೆಲವು ಹೆಂಗಸರೊಂದಿಗೆ ಹೋಗುತ್ತಿದ್ದರು. ನಡೆದುಕೊಂಡು ಹೋಗುತ್ತಿರುವಾಗ ದೇವಿಗೆ ಸಂಬಂಧಪಟ್ಟ ಹಲವು ಹಾಡುಗಳನ್ನು ಜೊತೆಯವರು ಹೇಳುತ್ತಿದ್ದರು. ತಕ್ಷಣವೇ ಶ್ರೀರಾಮಕೃಷ್ಣರು ಸ್ಥಿರವಾಗಿ ನಿಂತರು. ಕಣ್ಣಿನಲ್ಲಿ ಅಶ್ರುಧಾರೆ ಹರಿಯತೊಡಗಿತು. ಪ್ರಪಂಚದ ಅರಿವೇ ಇವರಿಗೆ ಇರಲಿಲ್ಲ. ಹತ್ತಿರವಿದ್ದ ಹೆಂಗಸರು ಎಷ್ಟು ಶೈತ್ಯೋಪಚಾರ ಮಾಡಿದರೂ ಇವರಿಗೆ ಪ್ರಜ್ಞೆ ಬರಲಿಲ್ಲ. ಕೆಲವರು ದೇವರ ಹೆಸರನ್ನು ಇವರ ಕಿವಿಯಲ್ಲಿ ಹೇಳಿದಾಗ ಬಾಹ್ಯಪ್ರಪಂಚದ ಅರಿವಾಯಿತು. ಹಲವು ದೇವದೇವಿಯರ ವಿಗ್ರಹವನ್ನು ತಾವೇ ಮಾಡಿ ಪೂಜಿಸುತ್ತಿದ್ದರು. ಶ್ರೀರಾಮಕೃಷ್ಣರ ಏಳನೇ ವಯಸ್ಸಿನಲ್ಲಿ ಅವರ ತಂದೆ ಕಾಲವಾದರು. ಅವರು ಮೊದಲ ಬಾರಿ ತಮ್ಮ ಹತ್ತಿರದವರ ಸಾವನ್ನು ನೋಡಬೇಕಾಯಿತು. ಮೊದಲೆ ಅಂತರ್ಮುಖಿ ಸ್ವಭಾವ ಅವರದು. ಈ ದಾರುಣ ಪೆಟ್ಟು ತಾಕಿದಾಗ ಜಗತ್ತು ನಶ್ವರವೆಂಬ ಭಾವನೆ ಚಿರಮುದ್ರಿತವಾಯಿತು. ಅವರ ತಾಯಿಗೆ ಪತಿಯ ಅಗಲಿಕೆ ದಾರುಣ ವ್ಯಥೆಯನ್ನುಂಟು ಮಾಡಿತು. ಅವರು ಇದನ್ನೂ ಕಣ್ಣಾರೆ ನೋಡಬೇಕಾಯಿತು. ಸಾಧ್ಯವಾದಮಟ್ಚಿಗೆ ಯಾವಾಗಲೂ ತಾಯಿಯ ಹತ್ತಿರವಿರುತ್ತ ಕೈಲಾದಮಟ್ಟಿಗೆ ಅವರಿಗೆ ಸಂತೋಷವನ್ನುಂಟು ಮಾಡಲು ಯತ್ನಿಸಿದರು. ಕಲ್ಕತ್ತೆಯಿಂದ ಪೂರಿಗೆ ಹೋಗುವ ದಾರಿಯಲ್ಲಿ ಕಾಮಾರಪುಕುರವಿತ್ತು. ಅನೇಕ ಯಾತ್ರಿಕರು ಅಲ್ಲಿ ತಂಗಿ ಹೋಗುತ್ತಿದ್ದರು. ಶ್ರೀರಾಮಕೃಷ್ಣರ ಮನೆಯ ಹತ್ತಿರವೇ ಅನೇಕ ಸಾಧುಸಂತರು ಇಳಿದುಕೊಳ್ಳುತ್ತಿದ್ದ ಛತ್ರವಿತ್ತು. ಶ್ರೀರಾಮಕೃಷ್ಣರು ಅಲ್ಲಿಗೆ ಪದೇಪದೇ ಹೋಗುತ್ತಿದ್ದರು. ಸಾಧುಗಳೊಡನೆ ಮಾತನಾಡುವುದು, ಅವರು ಹೇಳುವುದನ್ನು ಭಕ್ತಿಯಿಂದ ಕೇಳುವುದು, ಅವರಿಗೆ ಸಣ್ಣಪುಟ್ಟ ಕೆಲಸದಲ್ಲಿ ನೆರವಾಗುವುದು ಮುಂತಾದುವನ್ನು ಮಾಡುತ್ತಿದ್ದರು. ಒಂದು ದಿನ ಅವರಂತಯೇ ತಾವೂ ಸಾಧುವಾಗಬೇಕೆಂದು ಬಯಸಿ ಮೈಗೆ ಬೂದಿ ಬಳಿದುಕೊಂಡು ಬಟ್ಟೆಯನ್ನು ಬೈರಾಗಿಯಂತೆ ಉಟ್ಟುಕೊಂಡು ಮನೆಗೆ ಬಂದರು. ತಾಯಿಗೆ ತಾನು ಸಾಧುವಾಗಿಬಿಟ್ಟೆ ಎಂದರು. ಇದನ್ನು ನೋಡಿ ತಾಯಿ ತಳಮಳಿಸಿದಳು. ಅವರು ಪತಿಯ ಅಗಲಿಕೆಯನ್ನು ಶ್ರೀರಾಮಕೃಷ್ಣರನ್ನು ನೋಡಿ ಮರೆತಿದ್ದರು. ಈಗ ಈ ಮಗುವೆ ಹೀಗೆ ಆಗುವನೆಂದು ಹೇಳಿದಾಗ ಎದೆ ತಲ್ಲಣಿಸಿತು. ಶ್ರೀರಾಮಕೃಷ್ಣರು ತಾಯಿ ದುಃಖಿತಳಾದುದನ್ನು ನೋಡಿ, ತಮ್ಮ ಬೈರಾಗಿ ವೇಷವನ್ನು ತೆಗೆದುಹಾಕಿದರು. ಶ್ರೀರಾಮಕೃಷ್ಣರ ಮನೆಯ ಸಮೀಪದಲ್ಲಿ ಸೀತಾನಾಥ ಪೈನಿ ಎಂಬ ಗೃಹಸ್ಥ ಭಕ್ತನಿದ್ದನು. ಆತನ ಮನೆಯಲ್ಲಿ ಹಲವಾರು ಹೆಣ್ಣುಮಕ್ಕಳು ಇದ್ದರು. ರಾಮಕೃಷ್ಣರು ಅವರ ಮನೆಗೆ ಹೋಗಿ ಅನೇಕ ವೇಳೆ ಹಾಡು ಕತೆ ಮುಂತಾದುವನ್ನು ಹೇಳಿ ಅವರನ್ನು ಸಂತೋಷ ಪಡಿಸುತ್ತಿದ್ದರು. ಆ ಮನೆಯವರು ಈ ಮಗುವಿನ ಹಾಡು ನಟನೆಗಳಿಗೆ ಮೆಚ್ಚಿ ಕೃಷ್ಣನ ವೇಷಕ್ಕೆ ಬೇಕಾಗುವ ಬಟ್ಟೆಬರೆಗಳನ್ನೂ ಒಂದು ಚಿನ್ನದ ಬಣ್ಣದ ಕೊಳಲನ್ನೂ ಇವರಿಗೆ ಕೊಟ್ವರಂತೆ. ಅವರ ಮನೆಯ ಪಕ್ಕದಲ್ಲೆ ದುರ್ಗಾದಾಸ ಪೈನಿ ಎಂಬ ಮತ್ತೊಬ್ಬನಿದ್ದನು. ಅವರ ಮನೆಯವರು ಇನ್ನೂ ಘೋಷಾ ಪದ್ಧತಿಯನ್ನು ಬಿಟ್ಟಿರಲಿಲ್ಲ. ಆತನು ಇದಕ್ಕೆ ಹೆಮ್ಮೆಪಡುತ್ತಿದ್ದನು. ತನ್ನ ಮನೆಯ ಹೆಂಗಸರನ್ನು ಪರಪುರುಷರಾರೂ ನೋಡಿಲ್ಲ; ಅವರನ್ನು ನೋಡುವುದು ಅಸಾಧ್ಯ ಎನ್ನುತ್ತಿದ್ದನು. ರಾಮಕೃಷ್ಣರು ಇದನ್ನು ಕೇಳಿ "ಮುಸುಕಲ್ಲ ಹೆಂಗಸರ ಮಾನ ಕಾಪಾಡುವುದು – ಸಂಸ್ಕೃತಿ ಮತ್ತು ಒಳ್ಳೆಯ ನಡತೆ. ಬೇಕಾದರೆ ನಾನು ನಿಮ್ಮ ಮನೆಗೆ ಪ್ರವೇಶಿಸಬಲ್ಲೆ" ಎಂದರು. ಇದನ್ನು ಕೇಳಿ ದುರ್ಗಾದಾಸನು "ನೋಡೋಣ, ಹೇಗೆ ಮಾಡುವೆಯೊ" ಎಂದನು. ಒಂದು ದಿನ ಸಂಜೆ ದುರ್ಗಾದಾಸನು ಕೆಲವರೊಂದಿಗೆ ಮಾತನಾಡುತ್ತ ಮನೆಯ ಜಗಲಿಯ ಮೇಲೆ ಕುಳಿತುಕೊಂಡಿದ್ದನು. ಒಬ್ಬ ಹುಡುಗಿ ಮುಸುಕಿನಲ್ಲಿ ಬಂದು, "ನಾನು ಹತ್ತಿರದ ಹಳ್ಳಿಯವಳು, ನೂಲನ್ನು ಮಾರುವುದಕ್ಕೆ ಬಂದೆ; ಸಂಜೆಯಾಯಿತು. ದೂರ ನಡೆದುಹೋಗಬೇಕು; ರಾತ್ರಿ ಇಲ್ಲಿ ತಂಗಿ ಹೋಗುವುದಕ್ಕೆ ಅವಕಾಶವಿದೆಯೆ?" ಎಂದು ಕೇಳಿದಳು. ದುರ್ಗಾದಾಸನು, "ಒಳಗೆ ಹೋಗಿ ಹೆಂಗಸರೊಡನೆ ಮಾತನಾಡು" ಎಂದು ಕಳುಹಿಸಿದನು. ಹುಡುಗಿ ಒಳಗೆ ಹೋದಮೇಲೆ ದುರ್ಗಾದಾಸನ ಹೆಣ್ಣುಮಕ್ಕಳು ಅಪರಿಚಿತ ಹುಡುಗಿಯನ್ನು ಆದರದಿಂದ ಬರಮಾಡಿಕೊಂಡು ತಿನ್ನುವುದಕ್ಕೆ ತಿಂಡಿ ಕೊಟ್ಟರು. ಅವರೊಡನೆ ಬಹಳ ಹೊತ್ತು ರಾತ್ರಿ ಮಾತನಾಡುತ್ತಿದ್ದಳು. ಬೀದಿಯ ಹೊರಗಡೆ ಯಾರೋ ಗದಾಯ್ ಎಂದು ಕೂಗುವುದು ಕೇಳಿತು. ಈ ಸದ್ದು ಹುಡುಗಿಯ ಕಿವಿಗೆ ಬಿದ್ದೊಡನೆಯೇ "ಅಣ್ಣ, ಬರುತ್ತೀನಿ" ಎಂದು ಕೂಗಿಕೊಂಡಳು. ಆಗ ಮನೆಯವರಿಗೆ ಗೊತ್ತಾಯಿತು. ಈ ಹುಡುಗಿ ಶ್ರೀರಾಮಕೃಷ್ಣರೇ ಎಂದು. ಎಲ್ಲರಿಗೂ ಆಶ್ಚರ್ಯವಾಯಿತು, ದುರ್ಗಾದಾಸನಿಗೆ ಮೊದಲಿಗೆ ಕೋಪ ಬಂದರೂ ಅನಂತರ ಈ ಹಾಸ್ಯದಲ್ಲಿ ಎಲ್ಲರೊಡನೆ ತಾನೂ ಭಾಗಿಯಾದನು. ತಂದೆಯ ಕಾಲಾನಂತರ ಮನೆಯ ಜವಾಬ್ದಾರಿ ಶ್ರೀರಾಮಕೃಷ್ಣರ ಹಿರಿಯ ಅಣ್ಣ ರಾಮಕುಮಾರನ ಮೇಲೆ ಬಿದ್ದಿತು. ವಿಸ್ತಾರವಾಗುತ್ತಿರುವ ಸಂಸಾರವನ್ನು ನಿರ್ವಹಿಸುವುದು ಬಹಳ ಕಷ್ಟವಾಯಿತು. ಈತನೇನೋ ದೊಡ್ಡ ವಿದ್ಯಾವಂತನಾಗಿದ್ದನು. ಆದರೆ ಆ ಹಳ್ಳಿಯಲ್ಲಿ ವಿದ್ಯೆಗೆ ಗೌರವ ಸಿಕ್ಕೀತೆ ಹೊರತು ಹಣ ಸಿಕ್ಕುವಂತಿರಲಿಲ್ಲ. ಕಲ್ಕತ್ತೆಗೆ ಹೋಗಿ ಅಲ್ಲಿ ಒಂದು ಸಂಸ್ಕೃತ ಪಾಠಶಾಲೆಯನ್ನು ತೆರೆದನು. ಶ್ರೀರಾಮಕೃಷ್ಣರು ಆಗ ಕಾಮಾರಪುಕುರದಲ್ಲೇ ಇದ್ದರು. ಆಗ ಅವರಿಗೆ ಸುಮಾರು ಹದಿನಾರು ವಯಸ್ಸು. ಹಳ್ಳಿಯಲ್ಲಿದ್ದರೆ ಹುಡುಗ ಓದುವುದಿಲ್ಲವೆಂದು ಕೆಲವು ದಿನಗಳಾದ ಮೇಲೆ ರಾಮಕುಮಾರನು ತನ್ನ ತಮ್ಮನನ್ನು ಕಲ್ಕತ್ತೆಗೆ ಕರೆಸಿಕೊಂಡನು. ಕೆಲವು ದಿನ ಹುಡುಗನನ್ನು ಹೋದದಾರಿಗೆ ಬಿಟ್ಟನು. ಹುಡುಗನಿಗೆ ಓದಿನ ಕಡೆ ಮನಸ್ಸು ಓಡುತ್ತಿರಲಿಲ್ಲ. ಒಂದು ದಿನ ತಮ್ಮನನ್ನು ಕರೆದು, "ಹೀಗೆ ಆದರೆ ಹೇಗೆ? ನಿನ್ನ ಭವಿಷ್ಯವೇನು?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ನನಗೆ ಬಟ್ಟೆ, ಹಿಟ್ಟು ಕೊಡುವ ವಿದ್ಯೆ ಬೇಡ. ಯಾವುದು ನನ್ನ ಹೃದಯಕ್ಕೆ ಬೆಳಕನ್ನು ಕೊಡಬಲ್ಲದೋ, ಯಾವುದನ್ನು ತಿಳಿದರೆ ಮನುಷ್ಯ ನಿತ್ಯ ತೃಪ್ತವಾಗುತ್ತಾನೆಯೋ ಆ ವಿದ್ಯೆ ಪಡೆಯಲು ನಾನು ಯತ್ನಿಸುವೆನು" ಎಂದರು. ಅಣ್ಣ ಅಪ್ರತಿಭನಾದನು. ತಮ್ಮನು ಸುಲಭವಾಗಿ ದಾರಿಗೆ ಬರುವಂತೆ ಕಾಣಲಿಲ್ಲ. ತಾನು ಹೋಗುತ್ತಿದ್ದ ಕೆಲವು ಮನೆಗಳಿಗೆ ಪೂಜೆಗೆ ಹೋಗು ಎಂದು ಹೇಳಿದನು. ತಮ್ಮನು ಇದನ್ನು ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಶ್ರೀರಾಮಕೃಷ್ಣರು ಇತರರ ಮನೆಗಳಿಗೆ ಹೋಗಿ ಪೂಜೆ ಮಾಡಿದರು. ಮನೆಯವರಿಗೆ ಹೊಸ ಪೂಜಾರಿಯು ಪೂಜೆ ಮಾಡುವ ರೀತಿ, ಅವರ ಭಾವ ಮುಂತಾದುವನ್ನು ನೋಡಿ ಅವರಲ್ಲಿ ಹೆಚ್ಚು ಗೌರವ ಉಂಟಾಯಿತು. ಅವಸರವಿಲ್ಲದ ಶ್ರದ್ಧಾಭಕ್ತಿಯಿಂದ ಪೂಜೆ ಮಾಡುತ್ತಿದ್ದರು. ಭಾವಪೂರ್ವಕವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಇವರನ್ನು ಕಂಡು ಎಲ್ಲ ಮನೆಯವರಿಗೂ ಪ್ರೀತಿಯುಂಟಾಯಿತು; ಕೊಡುವ ದಕ್ಷಿಣೆಯ ಆಸೆಗಲ್ಲದೆ ಕೇವಲ ಉಪಾಸನೆಗಾಗಿಯೆ ದೇವರನ್ನು ಇವರು ಪೂಜಿಸುತ್ತಿದ್ದರು ಕಲ್ಕತ್ತೆಯಲ್ಲಿ ರಾಣಿ ರಾಸಮಣಿ ಎಂಬ ದೊಡ್ಡ ದೇವೀ ಭಕ್ತೆ ಇದ್ದಳು. ಆಕೆ ತುಂಬಾ ಶ್ರೀಮಂತಳು. ಬೆಸ್ತರ ಕುಲದಿಂದ ಬಂದವಳು. ಬೇಕಾದಷ್ಟು ದುಡ್ಡು ವ್ಯಯಿಸಿ ದಕ್ಷಿಣೇಶ್ವರ ಎಂಬಲ್ಲಿ ಗಂಗಾನದಿಯ ತೀರದಲ್ಲಿ ದೊಡ್ಡದೊಂದು ಕಾಳಿಕಾ ದೇವಾಲಯವನ್ನು ಕಟ್ಟಿಸಿದಳು. ಅದನ್ನು ಪ್ರತಿಷ್ಠೆ ಮಾಡುವ ದಿನ ಬಂದಿತು. ಆದರೆ ಅಲ್ಲಿ ಪೂಜೆಮಾಡಲು ಯಾವ ಬ್ರಾಹ್ಮಣ ಪೂಜಾರಿಯೂ ಬರಲಿಲ್ಲ. ರಾಣಿ ಖಿನ್ನಳಾದಳು. ಈ ಸಮಾಚಾರ ರಾಮಕುಮಾರನಿಗೆ ಗೊತ್ತಾಯಿತು. ಆತ ಈಕೆಗೆ ಒಂದು ಉಪಾಯವನ್ನು ಸೂಚಿಸಿದನು. ಆ ದೇವಸ್ಥಾನವನ್ನು ಅದಕ್ಕೆ ಪ್ರತಿವರ್ಷವೂ ತಗಲುವ ಖರ್ಚಿನ ಸಮೇತ ಒಬ್ಬ ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟರೆ ಆ ದೇವಸ್ಥಾನದಲ್ಲಿ ಯಾವ ಬ್ರಾಹ್ಮಣ ಪೂಜಾರಿ ಬೇಕಾದರೂ ಪೂಜೆ ಮಾಡಬಹುದು ಎಂದನು. ಹಾಗೆ ಮಾಡಿದರೂ ಯಾರೂ ಪೂಜೆಗೆ ಮುಂದೆ ಬರಲಿಲ್ಲ. ಕೊನೆಗೆ ಉಪಾಯ ಹೇಳಿಕೊಟ್ಟವನೇ ಮುಂದೆ ಬರಬೇಕಾಯಿತು. ರಾಮಕುಮಾರನೇ ಅಲ್ಲಿ ಪೂಜೆಮಾಡುವುದಕ್ಕೆ ಒಪ್ಪಿಕೊಂಡನು. ಜೊತೆಗೆ ರಾಮಕೃಷ್ಣರೂ ಬಂದರು. ಕೆಲವು ವೇಳೆ ಅವರು ಅಣ್ಣನು ಪೂಜೆ ಮಾಡುವುದಕ್ಕೆ ಅಣಿಮಾಡಿಕೊಡುತ್ತಿದ್ದರು. ರಾಣಿ ರಾಸಮಣಿಯ ಹಿರಿಯ ಅಳಿಯ ಮಥುರನಾಥ ಬಿಶ್ವಾಸ್ ಎಂಬವನಿದ್ದನು. ಆತ ವಿದ್ಯಾವಂತ, ಮೇಲ್ವಿಚಾರಣೆ ನೋಡಿಕೊಳ್ಳುವುದರಲ್ಲಿ ತುಂಬಾ ನಿಪುಣ. ರಾಣಿಯ ಆಸ್ತಿಯನ್ನೆಲ್ಲ ಅವನೇ ನೋಡಿಕೊಳ್ಳುತ್ತಿದ್ದನು. ಹಲವು ವೇಳೆ ಆತ ಗುಡಿಗೆ ಬಂದಾಗ ರಾಮಕೃಷ್ಣರು ಅವನ ಕಣ್ಣಿಗೆ ಬೀಳುತ್ತಿದ್ದರು. ನೋಡಿದೊಡನೆಯೆ ಆ ಹುಡುಗನ ಮೇಲೆ ಮಥುರನಾಥನಲ್ಲಿ ಪ್ರೀತಿ ಹುಟ್ಟಿತು. ಹೇಗಾದರೂ ಮಾಡಿ ಆ ಹುಡುಗನನ್ನು ಗುಡಿಯಲ್ಲೇ ನಿಲ್ಲಿಸಬೇಕು. ಆತ ಪೂಜಾರಿಯಾದರೆ ಒಳ್ಳೆಯದಾದೀತು ಎಂದು ಭಾವಿಸಿ ವಿಚಾರಿಸಿದನು. ಆದರೆ ಶ್ರೀರಾಮಕೃಷ್ಣರು ಅದಕ್ಕೆ ಒಪ್ಪಲಿಲ್ಲ. ಕೆಲವು ಕಾಲವಾದ ಮೇಲೆ ರಾಮಕುಮಾರನು ತನ್ನ ಹಳ್ಳಿಗೆ ಹೋದನು. ಪುನಃ ಹಿಂತಿರುಗಿ ಬಂದು ದೇವಿಯ ಪೂಜೆಯನ್ನು ಮಾಡುವ ಸುಯೋಗ ಅವನಿಗೆ ಇರಲಿಲ್ಲ. ಅಲ್ಲಿಯೇ ಕಾಲವಾದನು. ಆ ಸಮಯಕ್ಕೆ ಸರಿಯಾಗಿ ಹೃದಯರಾಮನೆಂಬ ಶ್ರೀರಾಮಕೃಷ್ಣರ ನೆಂಟನೊಬ್ಬನು ದಕ್ಷಿಣೇಶ್ವರಕ್ಕೆ ಜೀವನೋಪಾಯಕ್ಕಾಗಿ ಬಂದನು. ವಯಸ್ಸಿನಲ್ಲಿ ಶ್ರೀರಾಮಕೃಷ್ಣರಿಗಿಂತ ಕೆಲವು ವರುಷ ಕಿರಿಯವನು. ಮಥುರನಾಥ ಮತ್ತೆ ಶ್ರೀರಾಮಕೃಷ್ಣರನ್ನು ಪೂಜೆ ಮಾಡುವಂತೆ ಕೇಳಿಕೊಂಡನು. ಶ್ರೀರಾಮಕೃಷ್ಣರು, "ದೇವಿಗೆ ಬೇಕಾದಷ್ಟು ಒಡವೆ ವಸ್ತ್ರಗಳನ್ನೆಲ್ಲ ಹಾಕಿರುವರು; ಅದು ಕಳೆದುಹೋದರೆ ಪೂಜಾರಿಯ ತಲೆಯ ಮೇಲೆ ಬರುವುದು. ಈ ತರದ ಜವಾಬ್ದಾರಿ ಕೆಲಸ ಬೇಡ" ಎಂದರು. ಹೃದಯನು, "ನಾನು ಜವಾಬ್ದಾರಿ ಕೆಲಸವನ್ನು ನೋಡಿಕೊಳ್ಳುತ್ತೇನೆ, ಶ್ರೀರಾಮಕೃಷ್ಣರು ಪೂಜೆ ಮಾಡಿದರೆ ಸಾಕು" ಎಂದನು. ಶ್ರೀರಾಮಕೃಷ್ಣರು ಪೂಜೆ ಮಾಡುವುದಕ್ಕೆ ಒಪ್ಪಿಕೊಂಡರು. ಶ್ರೀರಾಮಕೃಷ್ಣರ ಜೀವನದಲ್ಲಿ ಮಥುರನಾಥನು ಅತಿ ಮುಖ್ಯವಾದ ಪಾತ್ರವನ್ನು ಪಡೆದನು. ಶ್ರೀರಾಮಕೃಷ್ಣರಿಗೆ ಸಾಧನೆಯ ಸಮಯದಲ್ಲಿ ಬೇಕಾಗುವ ಸೌಕರ್ಯಗಳನ್ನೆಲ್ಲಾ ಒದಗಿಸಿದನು. ಆತ ಶ್ರೀರಾಮಕೃಷ್ಣರನ್ನು ಅತಿ ಪ್ರೀತಿಯಿಂದ ಕಾಣುತ್ತಿದ್ದನು. ತನ್ನ ಇಷ್ಟ ದೈವವೇ ಶ್ರೀರಾಮಕೃಷ್ಣರಾಗಿರುವನು ಎಂದು ಭಾವಿಸಿದನು. ದಕ್ಷಿಣೇಶ್ವರದ ಸನ್ನಿವೇಶ ಶ್ರೀರಾಮಕೃಷ್ಣರ ಜೀವನಕ್ಕೆ ಅತಿಮುಖ್ಯವಾದ ಹಿನ್ನೆಲೆಯಾಯಿತು. ಪೂಜೆಮಾಡುವುದಕ್ಕಿ ಪ್ರಾರಂಭಿಸಿದುದು ಇಲ್ಲಿ. ಅದ್ಭುತ ಸಾಧನೆ ಮಾಡಿದುದು ಇಲ್ಲಿ, ಮಹಾವ್ಯಕ್ತಿಗಳು ಇವರನ್ನು ಸಂದರ್ಶಿಸಲು ಬಂದುದು ಇಲ್ಲಿ. ಸ್ವಾಮಿ ವಿವೇಕಾನಂದರಂತಹ ಶಿಷ್ಯರನ್ನು ತರಬೇತು ಮಾಡಿದುದು ಇಲ್ಲಿ. ಶ್ರೀರಾಮಕೃಷ್ಣರ ಲೀಲಾ ನಾಟಕಕ್ಕೆ ದಕ್ಷಿಣೇಶ್ವರ ಒಂದು ರಂಗಭೂಮಿಯಾಯಿತು. ಪಾವನ ಗಂಗಾನದಿ ಮುಂದೆ ಹರಿಯುತ್ತಿದೆ. ನದಿಯಿಂದ ಬಂದೊಡನೆಯೆ ದೊಡ್ಡ ಸೋಪಾನ ಪಂಕ್ತಿ. ನಂತರ ಎಡಗಡೆ ಬಲಗಡೆ ಆರು ಆರು ಶಿವಮಂದಿರಗಳು. ಅದನ್ನು ದಾಟಿ ಹೋದರೆ ಭವ್ಯವಾದ ಕಾಳಿಕಾ ದೇವಸ್ಥಾನ. ಅದರ ಮುಂದುಗಡೆ ವಿಶಾಲವಾದ ನಾಟ್ಯಮಂದಿರ. ಮತ್ತೊಂದು ಕಡೆ ರಾಧಾಕೃಷ್ಣರ ದೇವಸ್ಥಾನ. ಸುತ್ತಲೂ ವಿಸ್ತಾರವಾದ ಅಂಗಳ. ಅದರ ಹಿಂದೆ ಪ್ರಾಕಾರದ ಸುತ್ತಲೂ ಯತ್ರಿಕರು ಬಂದರೆ ತಂಗಿಕೊಳ್ಳುವುದಕ್ಕೆ ಹಲವಾರು ಕೋಣೆಗಳು ಇವೆ. ಪ್ರಾಕಾರವನ್ನು ದಾಟಿದೊಡನೆ ಗಂಗಾನದಿಯ ತೀರದಲ್ಲಿ ಅತಿ ದಟ್ಟವಾದ ಕಾಡು, ನಿರ್ಜನ ಪ್ರದೇಶ. ಆಧ್ಯಾತ್ಮಿಕ ಸಾಧನೆಯನ್ನು ಮಾಡುವುದಕ್ಕೆ ಯೋಗ್ಯವಾದ ಸ್ಥಳ. ಪರಮಹಂಸರು ಈ ಪಾವನ ಪ್ರದೇಶವನ್ನು ತಮ್ಮ ತಪಸ್ಸಿನಿಂದ ಪಾವನತರ ಮಾಡಿದರು. ಶ್ರೀರಾಮಕೃಷ್ಣರು ಪೂಜಾಕಾರ್ಯವನ್ನು ಆರಂಭಿಸಿದರು. ಬೆಳಗ್ಗೆ ಭಕ್ತಿಯಿಂದ ಕಂಪಿಸುತ್ತ ಗುಡಿಗೆ ಹೋಗುವರು. ದೇವಿಗೆ ಅಲಂಕಾರ ಮಾಡುವರು. ಪೂಜೆ ಮಾಡುವರು, ನೈವೇದ್ಯ ಮಾಡುವರು. ಆದರೆ ಇದರಲ್ಲಿ ಶ್ರೀರಾಮಕೃಷ್ಣರ ಜೀವನ ಕೊನೆಗೊಂಡಿದ್ದರೆ ಅವರು ಒಬ್ಬ ಪೂಜಾರಿ ಮಾತ್ರ ಆಗಿರುತ್ತಿದ್ದರು, ಜಗದ್ವಂದ್ಯ ಶ್ರೀರಾಮಕೃಷ್ಣರು ಆಗುತ್ತಿರಲಿಲ್ಲ. ಶಿಲಾಮೂರ್ತಿಯಲ್ಲಿ ಚೇತನವಿದೆಯೆ? ಆಕೆ ಶಿಲ್ಪಿಗಳು ಕೊರೆದ ವಿಗ್ರಹವೋ ಅಥವಾ ಭಕ್ತರು ಕಂಡ ದರ್ಶನವೋ? ಆಕೆ ಕೇವಲ ಒಂದು ಕಲ್ಪನೆಯ ಕತೆಯೋ ಅಥವಾ ಭಕ್ತರ ಮೊರೆಯನ್ನು ಕೇಳಿ ಅವರನ್ನು ಸದಾ ಉದ್ಧಾರಮಾಡಲು ಕಾದು ಕುಳಿತಿರುವ ಮಹಾ ಶಕ್ತಿ ಚಿಲುಮೆಯೋ? ಈ ಸಮಸ್ಯೆಯನ್ನು ಪರೀಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿದರು. ಶ್ರೀರಾಮಕೃಷ್ಣರು ಎಲ್ಲ ಜನರಿಂದ ದೂರವಾದರು. ಅವರದೇ ಆದ ಪ್ರಪಂಚದಲ್ಲಿ ವಿಹರಿಸತೊಡಗಿದರು. ಜಗನ್ಮಾತೆಯನ್ನು ನೋಡಬೇಕೆಂಬ ಆಸೆ ಕಾಡುಗಿಚ್ಚಿನೋಪಾದಿ ಅವರ ಜೀವನವನ್ನೆಲ್ಲ ವ್ಯಾಪಿಸಿತು. ಹಗಲು ಪೂಜೆಮಾಡುವರು, ಕಂಬನಿದುಂಬಿ ಜಗನ್ಮಾತೆಗಾಗಿ ಅತ್ತು ಕರೆಯುವರು : "ಹೇ ತಾಯೆ ! ನೀನು ಎಲ್ಲಿರುವೆ, ಮೈದೋರು, ರಾಮಪ್ರಸಾದ ನಿನ್ನ ದರ್ಶನ ಪಡೆದು ಅನುಗ್ರಹೀತನಾದ. ನಾನೇನು ಪಾಪಿಯೇ ! ನನ್ನ ಬಳಿಗೆ ನೀನೇಕೆ ಬಾರೆ? ನನಗೆ ಸುಖ ಬೇಡ, ಐಶ್ವರ್ಯ ಬೇಡ, ಸ್ನೇಹಿತರು ಬೇಡ, ನನಗೆ ಪ್ರಪಂಚದ ಯಾವ ಭೋಗವೂ ಬೇಡ. ಹೇ ತಾಯೇ, ನಿನ್ನನ್ನು ನೋಡುವುದೊಂದೇ ನನ್ನ ಚರಮಗುರಿ." ದಿನದ ಅಂತ್ಯಸಮಯವನ್ನು ಸೂಚಿಸುವ ಘಂಟಾಧ್ವನಿಯನ್ನು ಕೇಳಿದೊಡನೆಯೆ ಉದ್ವಿಗ್ನರಾಗಿ ಅಳತೊಡಗುವರು : "ತಾಯೆ ಮತ್ತೊಂದು ದಿನ ವ್ಯರ್ಥವಾಯಿತು. ನಾನು ಇನ್ನೂ ನಿನ್ನನ್ನು ಸಂದರ್ಶಿಸಲಿಲ್ಲ. ಈ ಅಲ್ಪಜೀವನದಲ್ಲಿ ಆಗಲೇ ಒಂದು ದಿನ ಕಳೆಯಿತು. ನನಗೆ ಇನ್ನೂ ಸತ್ಯ ಸಾಕ್ಷಾತ್ಕಾರವಾಗಲಿಲ್ಲ." ಬೇಕಾದಷ್ಟು ಅತ್ತರು, ಪ್ರಾರ್ಥಿಸಿದರು, ಧ್ಯಾನಮಾಡಿದರು. ಆದರೂ ದೇವಿ ಮೈದೋರಲಿಲ್ಲ. ಒಂದು ದಿನ ಗರ್ಭಗುಡಿಯೊಳಗೆ ಇರುವಾಗ, ದೇವಿಯ ದರ್ಶನ ಪಡೆಯದ ಬಾಳು ನಿರರ್ಥಕ, ಇದು ಕೊನೆಗಾಣಲಿ ಎಂದು ಬಲಿಕೊಡುವ ಕತ್ತಿಯನ್ನು ತೆಗೆದುಕೊಂಡು ತಮ್ಮ ರುಂಡವನ್ನು ದೇವಿಯ ಅಡಿದಾವರೆಯಲ್ಲಿ ಚಂಡಾಡುವುದರಲ್ಲಿದ್ದರು. ಆಗ ಮಾಯಾ ತೆರೆ ಹಿಂದೆ ಸರಿಯಿತು. ಜಗನ್ಮಾತೆ ಪ್ರತ್ಯಕ್ಷಳಾದಳು. ಸಚ್ಚಿದಾನಂದ ಸ್ವರೂಪಿಣಿಯಲ್ಲಿ ಅವರ ಮನಸ್ಸು ತಲ್ಲೀನವಾಯಿತು. ಬಾಹ್ಯಪ್ರಪಂಚಕ್ಕೆ ಬಂದ ಮೇಲೆ ಅವರ ನಡತೆ ಸಂಪೂರ್ಣ ಬದಲಾಯಿಸಿತು. ಅವರ ಪಾಲಿಗೆ ಕಲ್ಲಿನ ವಿಗ್ರಹ ಮಾಯವಾಗಿ, ಅದೊಂದು ಸಚೇತನ ಮೂರ್ತಿಯಾಯಿತು. ಅಂದಿನಿಂದ ಪೂಜಾ ವಿಧಾನವೇ ಬೇರೆ ರೂಪು ತಾಳಿತು. ದೇವಿ ಅವರು ಕೊಟ್ಟ ನೈವೇದ್ಯವನ್ನು ಊಟ ಮಾಡುತ್ತಿದ್ದಳು. ಮಾಡಿದ ಪೂಜೆಯನ್ನು ಸ್ವೀಕರಿಸುತ್ತಿದ್ದಳು. ಬೇಡಿದ ಪಾರ್ಥನೆಯನ್ನು ಈಡೇರಿಸುತ್ತಿದ್ದಳು. ಮಗು ತಾಯಿಯೊಂದಿಗೆ ಯಾವ ರೀತಿ ಸಲಿಗೆಯಿಂದ ಇರುವುದೋ ಅದೇ ಸಲಿಗೆಯಲ್ಲಿ ಇವರು ಜಗನ್ಮಾತೆಯೊಡನೆ ವರ್ತಿಸುತ್ತಿದ್ದರು. ಜಗನ್ಮಾತೆ ಪ್ರತ್ಯಕ್ಷಳಾದ ನಂತರ ಶ್ರೀರಾಮಕೃಷ್ಣರ ಪೂಜಾ ವಿಧಾನ ಬೇರೆ ರೂಪಕ್ಕೆ ತಿರುಗಿತು. ನೈವೇದ್ಯಕ್ಕೆ ಕೊಟ್ಟದ್ದನ್ನು ಕೆಲವು ವೇಳೆ ತಾವು ಮೊದಲು ರುಚಿ ನೋಡುವರು, ನಂತರ ದೇವಿಗೆ ಅರ್ಪಣೆ ಮಾಡುತ್ತಿದ್ದರು. ಹೂವು, ಗಂಧ, ದೇವಿಗೆ ಅರ್ಪಣೆ ಮಾಡುವುದಕ್ಕೆ ಮುಂಚೆ, ಜಗನ್ಮಾತೆ ತಮ್ಮಲ್ಲಿಯೂ ಇರುವಂತೆ ಭಾಸವಾಗಿ ಅದರಿಂದ ತಮ್ಮನ್ನೇ ಅಲಂಕರಿಸಿಕೊಳ್ಳುತ್ತಿದ್ದರು. ಮಂಗಳಾರತಿಯನ್ನು ಕೆಲವು ವೇಳೆ ಬಹಳ ಹೊತ್ತು ಮಾಡುತ್ತಿದ್ದರು. ಕೆಲವು ವೇಳೆ ಬಹಳ ಬೇಗ ಪೂರೈಸುವರು. ಸಾಮಾನ್ಯ ಜನರು ಅವರನ್ನು ಹುಚ್ಚು ಪೂಜಾರಿಯೆಂದು ಕರೆಯತೊಡಗಿದರು. ಸಾಧಾರಣವಾಗಿ ಮನುಷ್ಯರು ಮತ್ತೊಬ್ಬರನ್ನು ಅಳೆಯುವ ರೀತಿಯೇ ಹೀಗೆ. ಯಾರು ತಮ್ಮಂತೆ ಇಲ್ಲವೋ ಅವರೆಲ್ಲ ಹುಚ್ಚರು. ತಮಗೆ ಮಾತ್ರ ಬುದ್ಧಿ ಸ್ಥಿಮಿತವಾಗಿರುವುದೆಂದು ಭಾವಿಸುವರು. ದೇವಸ್ಥಾನದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಮಥುರನಾಥನಿಗೂ ಈ ಸುದ್ದಿ ತಿಳಿಯಿತು. ಆತನಿಗೆ ಮೊದಲಿನಿಂದಲೂ ಶ್ರೀರಾಮಕೃಷ್ಣರ ಮೇಲೆ ಗೌರವ. ಇದನ್ನು ಕೇಳಿ ಅತಿ ವ್ಯಾಕುಲಿತನಾಗಿ ತಾನೆ ಬಂದು ಇದನ್ನು ನೋಡುವವರೆಗೂ ಯಾರೂ ಇವರಿಗೆ ತೊಂದರೆಯನ್ನು ಕೊಡಕೂಡದೆಂದು ಹೇಳಿಕಳುಹಿಸಿದನು. ಒಂದು ದಿನ ಅವನೇ ಬಂದು ಇವರ ಪೂಜಾವಿಧಾನವನ್ನು ನೋಡಿದನು. ಇದು ಹುಚ್ಚಲ್ಲ, ದೈವೋನ್ಮಾದವೆಂದು ತಿಳಿದು ಯಾರೂ ಅವರಿಗೆ ತೊಂದರೆ ಕೊಡದಂತೆ ಎಚ್ಚರಿಸಿ ಹೋದನು. ಒಂದು ದಿನ ರಾಣಿ ರಾಸಮಣಿ ಶ್ರೀರಾಮಕೃಷ್ಣರು ಪೂಜೆ ಮಾಡುತ್ತಿದ್ದಾಗ ಬಂದಳು. ಪೂಜೆಯಾದ ಮೇಲೆ ರಾಮಕೃಷ್ಣರನ್ನು ಒಂದೆರಡು ಭಕ್ತಿಯ ಹಾಡನ್ನು ಹಾಡುವಂತೆ ಕೇಳಿಕೊಂಡಳು. ಶ್ರೀರಾಮಕೃಷ್ಣರು ಹಾಡುತ್ತಿರುವಾಗ ಆಕೆಯ ಮನಸ್ಸು ಹಾಡಿನ ಮೇಲೆ ಇರಲಿಲ್ಲ. ಯಾವುದೊ ಒಂದು ಮೊಕದ್ದಮೆಯ ವಿಷಯವನ್ನು ಚಿಂತಿಸುತ್ತಿತ್ತು. ಶ್ರೀರಾಮಕೃಷ್ಣರು ಇದನ್ನು ಗ್ರಹಿಸಿ ಆಕೆಯ ಹತ್ತಿರ ಹೋಗಿ "ಇಲ್ಲಿಯೂ ಪ್ರಾಪಂಚಿಕ ಚಿಂತನೆಯೆ?" ಎಂದು ಕೆನ್ನೆಗೆ ಏಟು ಕೊಟ್ಟರು. ರಾಣಿ ರಾಸಮಣಿ ತನ್ನ ತಪ್ಪನ್ನು ಒಪ್ಪಿಕೊಂಡು ಕುಪಿತಳಾಗದೆ, ಜಗನ್ಮಾತೆಯೇ ತನಗೆ ಈ ರೀತಿ ಶಿಕ್ಷಿಸಿದಳೆಂದು ಭಾವಿಸಿದಳು. ಅದರ ಇಂತಹ ಕೆಲವು ದೃಶ್ಯಗಳನ್ನು ಕಂಡ ಇತರರು ಶ್ರೀರಾಮಕೃಷ್ಣರು ನಿಜವಾಗಿ ಹುಚ್ಚರೆಂದು ಭಾವಿಸಿದರು. ಆದರೆ ರಾಣಿಗೆ ಇವರೊಬ್ಬ ಮಹಾಭಕ್ತರೆಂದು ಗೊತ್ತಾಯಿತು. ವಜ್ರದ ವ್ಯಾಪಾರಿಗೆ ಮಾತ್ರ ವಜ್ರ ಯಾವುದು, ಗಾಜಿನ ಚೂರು ಯಾವುದು ಎಂಬುದು ಗೊತ್ತಾಗುವುದು. ರಾಣಿ ರಾಸಮಣಿ, ಮಥುರನಾಥ ಇವರಿಬ್ಬರೂ ಶ್ರೀರಾಮಕೃಷ್ಣರ ಜೀವನದಲ್ಲಿ ಮುಖ್ಯ ಪಾತ್ರವನ್ನು ಪಡೆದಿರುವರು ಎಂಬುದನ್ನು ಆಗಲೇ ತಿಳಿಸಿರುವೆವು. ಅವರಿಗೂ ರಾಮಕೃಷ್ಣರಿಗೂ ಸಂಬಂಧಪಟ್ಟ ಒಂದೆರಡು ಘಟನೆಗಳಿಂದ ಪರಮಹಂಸರ ವ್ಯಕ್ತಿತ್ವ ಇನ್ನೂ ಹೆಚ್ಚು ಪ್ರಕಾಶಕ್ಕೆ ಬರುವುದನ್ನು ನೋಡುತ್ತೇವೆ. ಒಂದು ದಿನ ರಾಧಾಕೃಷ್ಣನ ದೇವಸ್ಥಾನದಲ್ಲಿ ರಾಧಾರಮಣನ ವಿಗ್ರಹದ ಕಾಲು ಪೂಜಾರಿಯ ಅಜಾಗರೂಕತೆಯಿಂದ ಮುರಿದು ಹೋಯಿತು. ಭಿನ್ನವಾದ ವಿಗ್ರಹವನ್ನು ಪೂಜಿಸುವುದು ಅಶಾಸ್ತ್ರೀಯವೆಂದು ಪಂಡಿತರು ಸಾರಿದರು. ಇಷ್ಟು ದಿನವೂ ಪೂಜಿಸುತ್ತಿದ್ದ ಆ ವಿಗ್ರಹವನ್ನು ತೆಗೆದಿಡಲು ರಾಣಿಯ ಮನಸ್ಸು ಒಪ್ಪಲಿಲ್ಲ. ಹೀಗೆ ವ್ಯಾಕುಲದಲ್ಲಿರುವಾಗ ಶ್ರೀರಾಮಕೃಷ್ಣರು ಹೀಗೆ ಹೇಳಿದರು: "ನಿನ್ನ ಅಳಿಯ ಮಥುರನಾಥನಿಗೆ ಕಾಲು ಮುರಿದುಹೋದರೆ ಅವನನ್ನು ನೀನು ಹೊರಗೆ ಕಳುಹಿಸಿ ಬೇರೆ ಅಳಿಯನನ್ನು ಬರಮಾಡಿಕೊಳ್ಳುವೆಯಾ? ಅದರಂತೆಯೇ ವಿಗ್ರಹವನ್ನು ಸರಿಮಾಡಿ ಉಪಯೋಗಿಸಬಹುದು" ಎಂದರು. ಯಾವ ಶಾಸ್ತ್ರವೂ ಬಗೆಹರಿಸದ ಒಂದು ಸಮಸ್ಯೆಯನ್ನು ಶ್ರೀರಾಮಕೃಷ್ಣರು ಪ್ರಪಂಚದಿಂದ ಆರಿಸಿಕೊಂಡ ಒಂದು ಉಪಮಾನದ ಮೂಲಕ ಬಗೆಹರಿಸಿದರು. ಶ್ರೀರಾಮಕೃಷ್ಣರು ಪೂಜೆಗೆ ಒಂದು ದಿನ ಹೂವನ್ನು ಕೊಯ್ಯಲು ಹೋದಾಗ ಆ ಹೂವುಗಳೆಲ್ಲಾ ಆಗತಾನೇ ವಿರಾಟ್ ಸ್ವರೂಪಿ ಭಗವಂತನಿಗೆ ಅರ್ಪಿತವಾದಂತೆ ಭಾಸವಾಯಿತು. ಪ್ರತಿಯೊಂದು ಹೂವಿನ ಗಿಡವೂ ಅವನ ಕೈಯಲ್ಲಿರುವ ತುರಾಯಿಯಂತೆ ಕಂಡಿತು. ಅಂದಿನಿಂದ ಬಾಹ್ಯಪೂಜೆ ಮಾಡುವುದನ್ನು ಬಿಟ್ಟರು. ಹೃದಯನೆ ಈ ಕೆಲಸವನ್ನು ಕೈಗೊಂಡನು. ಮಥುರನಾಥನು ಒಂದು ದಿನ ಶ್ರೀರಾಮಕೃಷ್ಣರೊಡನೆ ಮಾತನಾಡುತ್ತಿದ್ದಾಗ "ದೇವರೂ ಕೂಡ ನಿಯಮವನ್ನು ಮೀರಲಾರ" ಎಂದನು. ಅಗ ಶ್ರೀರಾಮಕೃಷ್ಣರು ದೇವರಿಗೆ ಎಲ್ಲವೂ ಸಾಧ್ಯವೆಂದರು. ಮಥುರನಾಥನು "ಹಾಗಾದರೆ ಬಿಳಿ ದಾಸವಾಳದ ಹೂವು ಬಿಡುವ ಗಿಡದಲ್ಲಿ ಕೆಂಪು ಹೂವು ಬಿಡಬಲ್ಲದೆ?" ಎಂದು ಕೇಳಿದನು. ಶ್ರೀರಾಮಕೃಷ್ಣರು, "ಅವನ ಇಚ್ಛೆಯಾದರೆ ಬಿಡದೆ ಏನು?" ಎಂದರು. ಮಾರನೆದಿನ ತೋಟದಲ್ಲಿ ಹೋಗುತ್ತಿದ್ದಾಗ ಬಿಳಿ ದಾಸವಾಳದ ಗಿಡದಲ್ಲಿ ಒಂದು ಅಪರೂಪವಾಗಿ ಕೆಂಪು ದಾಸವಾಳ ಬಿಟ್ಟಿರುವುದನ್ನು ನೋಡಿದರು. ಅದನ್ನು ಮಥುರನಾಥನಿಗೆ ತೋರಿಸಿ, "ನೋಡು ದೇವರಿಗೆ ಯಾವುದು ಅಸಾಧ್ಯ?" ಎಂದರು. ಮಥುರನು, "ಅಬ್ಬ, ನಿಮ್ಮ ಹತ್ತಿರ ಮಾತನಾಡುವುದು ತುಂಬಾ ಕಷ್ಟ!" ಎಂದು ತೆಪ್ಪಗಾದನು. ಮತ್ತೊಂದು ದಿನ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ವಿಗ್ರಹದ ಮೇಲಿದ್ದ ಒಡವೆಗಳನ್ನೆಲ್ಲಾ ಅಪಹರಿಸಿದರು. ಮಥುರನು ಇದನ್ನು ಕೇಳಿ ಅತಿ ವ್ಯಾಕುಲನಾಗಿ ಶ್ರೀರಾಮಕೃಷ್ಣರ ಹತ್ತಿರ ಬಂದು, "ಏನು ದೇವರು ತನ್ನ ಮೇಲಿರುವ ಒಡವೆಗಳನ್ನು ಕೂಡ ಕಳ್ಳರಿಂದ ಕಾಪಾಡಿಕೊಳ್ಳಲಾರದೆ ಹೋದನಲ್ಲ" ಎಂದನು. ಇದನ್ನು ಕೇಳಿ ಶ್ರೀರಾಮಕೃಷ್ಣರು, "ಓ ! ಏನು ಮಾತನಾಡುವೆ. ನಿನಗೆ ಅದು ಬೆಲೆಬಾಳುವ ಒಡವೆ. ದೇವರಿಗೆ ಅದು ಮಣ್ಣಿಗೆ ಸಮಾನ. ದೇವರ ಮನೆಬಾಗಿಲನ್ನು ಕುಬೇರ ಕಾಯುತ್ತಿರುವಾಗ ನಿನ್ನ ಒಂದೆರಡು ಒಡವೆ ಮತ್ತಾರೋ ಹೊತ್ತುಕೊಂಡು ಹೋದರೆ ಅದನ್ನು ದೇವರು ಗಮನಿಸುವನೇ?" ಎಂದರು. ಸಾಧಾರಣ ಮನುಷ್ಯರು ದೇವರ ಮಹಾತ್ಮೆಯನ್ನು ಅಳೆಯುವುದು ಹೀಗೆ. ಆ ಒಡವೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಕಳ್ಳನೇನಾದರೂ ರಕ್ತಕಾರಿ ಸತ್ತಿದ್ದರೆ, ಪರವಾಗಿಲ್ಲ, ದೇವರಲ್ಲಿ ಏನೋ ಸತ್ಯವಿದೆ ಎನ್ನುವರು. ಏನೂ ಆಗದೆ ಹೋದರೆ, ಅಯ್ಯೋ ಮಹಾತ್ಮೆಯನ್ನು ಏನು ಇದೆ! ಎನ್ನುವರು. ದೇವರಿಗೆ ಸತ್ಪುರುಷ ಹೇಗೆ ಒಬ್ಬ ಮಗನೋ ಹಾಗೆಯೇ ಕಳ್ಳನೂ ಒಬ್ಬ ಮಗ ಎಂಬ ಭಾವ ಬರಬೇಕಾದರ ಜೀವ ತುಂಬಾ ಮುಂದುವರಿದಿರಬೇಕು. ಶ್ರೀರಾಮಕೃಷ್ಣರು ಅಸಾಧಾರಣ ರೀತಿಯಲ್ಲಿ ವ್ಯವಹರಿಸುತ್ತ ಇದ್ದುದು ಸಾಧಾರಣ ಜನರಿಗೆ ಗೊತ್ತಾಗಲಿಲ್ಲ. ಇವರು ಹುಚ್ಚರಾಗಿ ಹೋಗಿರುವರು ಎಂಬ ಸುದ್ದಿ ಸುತ್ತಲೂ ಹಬ್ಬಿತು. ಇದು ಕಾಮಾರಪುಕುರಕ್ಕೂ ಮುಟ್ಟಿತು. ಶ್ರೀರಾಮಕೃಷ್ಣರ ತಾಯಿ ಚಂದ್ರಮಣಿದೇವಿ 1859ರಲ್ಲಿ ಮಗನನ್ನು ಕಾಮಾರಪುಕುರಕ್ಕೆ ಕರೆಸಿಕೊಂಡರು. ಔಷಧೋಪಚಾರ, ಯಂತ್ರಮಂತ್ರಗಳೆಲ್ಲವನ್ನೂ ಮಾಡಿಸಿದರು. ಆದರೆ ಇವರ ಹುಚ್ಚು ಮಾಯವಾಗುವ ರೀತಿ ಕಾಣಲಿಲ್ಲ. ಪರಮಹಂಸರೆ ಒಂದು ಸಲ ಹಾಸ್ಯವಾಗಿ, ಬೇಕಾದರೆ ನನಗೆ ರೋಗವಿದ್ದರೆ ಗುಣಮಾಡಿ. ಆದರೆ ದೇವರ ಹುಚ್ಚನ್ನು ಮಾತ್ರ ಬಿಡಿಸಬೇಡಿ ಎಂದರು. ಯಾರೋ ಚಂದ್ರಮಣಿದೇವಿಗೆ ಮಗನಿಗೆ ಮದುವೆ ಮಾಡಿದರೆ ಹುಚ್ಚು ಬಿಟ್ಟು ಹೋಗುವುದೆಂದು ಹೇಳಿದರು. ಹೆಣ್ಣಿಗೆ ಬೇಕಾದಷ್ಟು ಹುಡುಕತೊಡಗಿದರು. ಸುಮಾರು ಮೂರು ಮೈಲಿ ದೂರದ ಜಯರಾಮಬಟಿ ಎಂಬ ಗ್ರಾಮದಲ್ಲಿ ರಾಮಚಂದ್ರ ಮುಖ್ಯೋಪಾಧ್ಯಾಯರ ಮನೆಯಲ್ಲಿ ಐದು ವರ್ಷದ ಒಂದು ಹೆಣ್ಣು ಮಗು ಸಿಕ್ಕಿತು. ಆಗ ಶ್ರೀರಾಮಕೃಷ್ಣರಿಗೆ 23 ವರ್ಷ ವಯಸ್ಸು. ವಧುವರರಿಗೆ ಅಂತರ ಹದಿನೆಂಟು ವರುಷ! ಅಂತೂ ಮದುವೆಯಾಯಿತು. ಈ ಮದುವೆಯ ಗುರಿ ಶ್ರೀರಾಮಕೃಷ್ಣರಿಗೆ ಹಿಡಿದ ದೇವರ ಹುಚ್ಚನ್ನು ಬಿಡಿಸುವುದು. ಆದರೆ ಇವರ ಭವಿಷ್ಯ ಜೀವನ, ಮದುವೆ ಮಾಡಿದ ಉದ್ದೇಶ ಸಫಲವಾಗಲಿಲ್ಲವೆಂಬುದಕ್ಕೆ ಉದಾಹರಣೆಯಾಗಿದೆ. ಮದುವೆಯಾದ ಕೆಲವು ತಿಂಗಳ ಮೇಲೆ ಶ್ರೀರಾಮಕೃಷ್ಣರು ದಕ್ಷಿಣೇಶ್ವರಕ್ಕೆ ಹಿಂದಿರುಗಿದರು. ಆಧ್ಯಾತ್ಮಿಕ ಘಟನಾವಳಿಗಳ ಮಧ್ಯದಲ್ಲಿ ಇವರ ಜೀವನ ಸಿಲುಕಿ ಸುಂಟರಗಾಳಿಯಲ್ಲಿ ಸುತ್ತುವ ತರಗಲೆಯಂತೆ ಆಯಿತು. ಧ್ಯಾನಕ್ಕೆ ಕುಳಿತರೆಂದರೆ ಶಿಲಾವಿಗ್ರಹದಂತೆ ಆಗುತ್ತಿದ್ದರು. ಇವರ ಅಚಲ ದೇಹವ ನೋಡಿ ಹಕ್ಕಿಗಳು ನಿರ್ಭಯವಾಗಿ ಅದರ ಮೇಲೆ ಕುಳಿತುಕೊಳ್ಳುತ್ತಿದ್ದವು. ಶ್ರೀರಾಮಕೃಷ್ಣರು ದೇವಿಯ ದರ್ಶನವನ್ನೇನೋ ಪಡೆದಿದ್ದರು. ಆದರೆ ಅದರಲ್ಲಿ ತೃಪ್ತರಾಗಲಿಲ್ಲ. ದೇವರನ್ನು ಎಷ್ಟೆಷ್ಟು ರೂಪಿನಲ್ಲಿ ನೋಡಲು ಸಾಧ್ಯವೊ ಅಷ್ಟು ರೂಪಿನಲ್ಲೆಲ್ಲಾ ನೋಡಲು ಬಯಸಿದರು. ಹಲವು ಭಾವಗಳ ಮೂಲಕ ಅವನನ್ನು ಪ್ರೀತಿಸಿದರು. ಹಲವು ಸಾಧನೆಗಳನ್ನು ಮಾಡಿದರು. ಹಲವು ಧರ್ಮಗಳನ್ನು ಅನುಷ್ಠಾನ ಮಾಡಿದರು. ಹಲವು ದಾರಿಗಳಲ್ಲಿ ನಡೆದು ಒಂದೇ ಸತ್ಯದೆಡೆಗೆ ಬಂದರು. ಸತ್ಯದೇಗುಲಕ್ಕೆ ಬರುವುದಕ್ಕೆ ಅನಂತ ಬಾಗಿಲುಗಳಿವೆ ಎಂಬುದು ಅವರ ಅನುಭವದ ಆಳದಿಂದ ಬಂದ ಮಾತು, ಕೇವಲ ತರ್ಕದ ಗರಡಿಯಿಂದ ಬಂದುದಲ್ಲ. ಎಲ್ಲಾ ಧರ್ಮಗಳಲ್ಲಿರುವ ಏಕಮಾತ್ರ ಸತ್ಯದ ಅನುಭವ ಇವರಿಗೆ ಕರಗತವಾದುದರಿಂದ ಇವರು ಯಾರನ್ನೂ ದೂರುತ್ತಿರಲಿಲ್ಲ. ಯಾವ ಧರ್ಮವನ್ನೂ ತಾತ್ಸಾರದಿಂದ ಕಾಣುತ್ತಿರಲಿಲ್ಲ." ಶ್ರೀರಾಮಕೃಷ್ಣರ ಸಾಧನೆಯಲ್ಲಿ ಒಂದು ವೈಶಿಷ್ಟ್ಯವನ್ನು ನೋಡುತ್ತೇವೆ. ಇವರು ಗುರುಗಳನ್ನು ಹುಡುಕಿಕೊಂಡು ಹೋಗಬೇಕಾಗಿರಲಿಲ್ಲ. ಗುರುಗಳು ಇವರಿದ್ದೆಡೆಗೆ ಬಂದರು. ಒಂದೊಂದು ಸಾಧನೆಗೂ ಆಯಾ ಪಥದಲ್ಲಿ ನುರಿತ ಗುರುವೊಬ್ಬರು ಹೇಗೋ ಇವರ ಸಮೀಪಕ್ಕೆ ಆಕರ್ಷಿಸಲ್ಪಟ್ಟು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುವರು. ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು. ಅಕೆ ಇಂತಹ ಸಾಧಕನೊಬ್ಬನು ಸಿಕ್ಕಿಯಾನೇ ಎಂದು ಹುಡುಕುತ್ತಿದ್ದಾಗ, ಶ್ರೀರಾಮಕೃಷ್ಣರು ಅವರಿಗೆ ಗೋಚರಿಸಿದರು. ವಾತ್ಸಲ್ಯಭಾವ ಸಾಧನೆಗೆ ಜಟಾಧಾರಿಯೆಂಬ ಒಬ್ಬ ರಾಮಭಕ್ತನ ಪರಿಚಯವಾಯಿತು. ಅದ್ವೈತ ಸಾಧನೆಗೆ ತೋತಾಪುರಿ ಎಂಬ ಸನ್ಯಾಸಿಯ ಸಹಾಯ ದೊರಕಿತು. ಕ್ರೈಸ್ತ ಮತ್ತು ಮಹಮ್ಮದೀಯ ಸಾಧನೆಗಳಿಗೆ ಆಯಾ ಮತದ ಅತ್ಯುತ್ತಮ ಪ್ರತಿನಿಧಿಗಳ ಸಹಾಯ ದೊರಕಿತು. ಘನ ವಿದ್ವಾಂಸರು ಇವರ ಸಮೀಪಕ್ಕೆ ಬಂದರು. ಅತಿ ಮುಂದುವರಿದ ಸಾಧಕರು ಇವರ ಸಮೀಪಕ್ಕೆ ಬಂದರು. ಎಲ್ಲರಿಂದಲೂ ಶ್ರೀರಾಮಕೃಷ್ಣರು ಕೆಲವು ವಿಷಯಗಳನ್ನು ಕಲಿತರು. "ನಾನು ಎಲ್ಲಿಯವರೆಗೂ ಬದುಕಿರುವೆನೊ ಅಲ್ಲಿಯವರೆಗೂ ಹೊಸದಾಗಿ ಕಲಿಯುತ್ತೇನೆ" ಎನ್ನುತ್ತಿದ್ದರು. ಈ ದೈನ್ಯವನ್ನು ಕೊನೆಯ ತನಕ ಶ್ರೀರಾಮಕೃಷ್ಣರಲ್ಲಿ ಕಾಣುತ್ತೇವೆ. ಶ್ರೀರಾಮಕೃಷ್ಣರು ತಮ್ಮದೇ ಆದ ಸರಳ ರೀತಿಯಲ್ಲಿ ಭಗವಂತನಿಗೂ ಭಕ್ತನಿಗೂ ಮಧ್ಯೆ ಇರುವ ತೊಡರುಗಳನ್ನು ಭೇದಿಸಲು ಮೊದಲು ಮಾಡಿದರು. ದ್ರವ್ಯದ ಮೇಲಿರುವ ಆಸೆ ಸಂಪೂರ್ಣ ತೊಲಗುವಂತೆ ಒಂದು ಕೈಯಲ್ಲಿ ರೂಪಾಯಿಯನ್ನು ಮತ್ತೊಂದು ಕೈಯಲ್ಲಿ ಮಣ್ಣನ್ನು ತೆಗೆದುಕೊಂಡು ಗಂಗಾನದಿ ತೀರದ ಮೇಲೆ ಕುಳಿತು ಹಣವನ್ನು ನೋಡಿ, ಮತ್ತೊಂದು ಕೈಯಲ್ಲಿರುವ ಮಣ್ಣಿಗಿಂತ ಇದು ಮೇಲಲ್ಲ, ಇದು ದೇವರ ಸಮೀಪಕ್ಕೆ ಕರೆದುಕೊಂಡು ಹೋಗುವುದಕ್ಕೆ ಬದಲಾಗಿ ಲೋಭಮಾರ್ಗದಲ್ಲಿ ಸಿಲುಕಿಸುವುದು ಎಂದು ತರ್ಕಿಸಿ ಎರಡನ್ನೂ ನೀರಿಗೆ ಬಿಸಾಡುತ್ತಿದ್ದರು. ಇವರು ಯಾವುದನ್ನು ಧಿಕ್ಕರಿಸಿದ್ದರೋ ಅದನ್ನು ಇವರ ಇಡೀ ದೇಹದ ಅಂಗೋಪಾಂಗಗಳು ಧಿಕ್ಕರಿಸಿದ್ದವು. ಮನಸ್ಸಿಗೆ ಅರಿವಾಗದೆ ದೇಹಕ್ಕೆ ಸೋಂಕಿದರೂ ಚೇಳು ಕುಟುಕಿದಂತೆ ಆಗಿ ಅದನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಇದರಂತೆ ಕಾಮಿನಿಯೂ ಕೂಡ. ಶ್ರೀರಾಮಕೃಷ್ಣರು ಹೆಂಗಸರನ್ನು ದೂರದೇ ಅವರನ್ನು ಕಾಮದೃಷ್ಟಿಯಿಂದ ನೋಡುವುದನ್ನು ಬಿಟ್ಟರು. ಎಲ್ಲರಲ್ಲೂ ಜಗನ್ಮಾತೆಯೇ ಹಲವು ರೂಪಿನಿಂದ ಕಾಣುತ್ತಿರುವಳೆಂದು ಇಡೀ ಸ್ತ್ರೀ ಕುಲವನ್ನೆ ಪೂಜ್ಯ ದೃಷ್ಟಿಯಿಂದ ನೋಡುತ್ತಿದ್ದರು. ಉಚ್ಚ ಬ್ರಾಹ್ಮಣ ಕುಲದಿಂದ ಬಂದವನು ತಾನೆಂಬ ಅಹಂಕಾರವನ್ನು ಅಳಿಸುವುದಕ್ಕಾಗಿ ಚಂಡಾಲನ ಮನೆಯನ್ನು ಕೂಡ ಇವರು ಗುಡಿಸಿದರು. ಮಾನವನು ಯಾವ ಯಾವ ಭಾವದ ಮೂಲಕ ಮತ್ತೊಬ್ಬ ಮಾನವನನ್ನು ಪ್ರೀತಿಸಬಹುದೊ ಆ ಭಾವಗಳೆಲ್ಲದರ ಮೂಲಕ ದೇವರನ್ನು ಪ್ರೀತಿಸಬಹುದು. ಪ್ರೀತಿಯು ಭಕ್ತ ಮತ್ತು ಭಗವಂತನನ್ನು ಬಂಧಿಸುವ ಒಂದು ಮಧುರ ಬಂಧನ. ಎಲ್ಲಿಯವರೆಗೂ ನಾವು ಮಾನವರೋ ಅಲ್ಲಿಯವರೆಗೆ ಮಾನವಸಹಜ ಪ್ರೀತಿಯ ಮೂಲಕ ಮಾತ್ರ ದೇವರನ್ನು ಪ್ರೀತಿಸಬಲ್ಲೆವು. ಇಂತಹ ಪ್ರೀತಿಯಲ್ಲಿ ಐದು ಮುಖ್ಯ ಭಾವಗಳಿವೆ. ಶಾಂತಭಾವ, ಇದರಲ್ಲಿ ದೇವರನ್ನು ತಂದೆ ಅಥವಾ ತಾಯಿಯಂತೆ ಭಾವಿಸಬಹುದು. ಜೀವನದಲ್ಲಿ ಮಗುವಿಗೆ ತಂದೆತಾಯಿಗಳಷ್ಟು ಅಭಯವನ್ನು ಕೊಡುವವರು ಮತ್ತಾರೂ ದೊರಕಲಾರರು. ಅವರಲ್ಲಿರುವಷ್ಟು ಸಲಿಗೆ ಮತ್ತಾರಲ್ಲಿಯೂ ಇರಲಾರದು. ಇಡೀ ಬ್ರಹ್ಮಾಂಡ ಅವನಿಂದ ಬಂದಿದೆ. ನಮ್ಮನ್ನು ದುಃಖ ಸಂಕಟಗಳಿಂದ ಪಾರು ಮಾಡುವ ಮಹಾಶಕ್ತಿಗಣಿಯಾಗಿರುವನು ಅವನು. ಆದಕಾರಣವೇ ಅವನನ್ನು ತಂದೆ ಅಥವಾ ತಾಯಿ ಎಂದು ಕರೆಯುವುದು. ಶ್ರೀರಾಮಕೃಷ್ಣರು ಮುಕ್ಕಾಲುಪಾಲು ತಮ್ಮ ಭವಜೀವನವನ್ನು ಕಳೆಯುತ್ತಿದ್ದುದು ಜಗನ್ಮಾತೆಯನ್ನು ನೆಚ್ಚಿಕೊಂಡಿರುವ ಮಗುವಿನಂತೆ. ದೇವರನ್ನು ಕೆಲವು ವೇಳೆ ತಂದೆಯೆಂತಲೂ ಕರೆದರು. ದಾಸ್ಯಭಾವದಲ್ಲಿ ಭಗವಂತ ಸ್ವಾಮಿಯಾಗುವನು. ಭಕ್ತ ಅವನ ಆಣತಿಯನ್ನು ಪರಿಪಾಲಿಸುವ ಪಾಲಿಸುವ ಭೃತ್ಯನಾಗುವನು. ಭಕ್ತನಿಗೆ ತನಗಾಗಿ ಏನನ್ನೂ ಸಾಧಿಸಬೇಕೆಂಬ ಆಸೆ ಇರುವುದಿಲ್ಲ. ಅವನಿಗೆ, ಸ್ವಾಮಿಯ ಹಿತ ತನ್ನ ಹಿತ, ಸ್ವಾಮಿಯ ಇಷ್ಟ ತನ್ನ ಇಷ್ಟ, ಸ್ವಾಮಿಯ ಜಯ ತನ್ನ ಜಯ. ಈ ಭೃತ್ಯಭಾವದಲ್ಲಿರಬೇಕಾದರೆ ಅಹಂಕಾರ ಸಂಪೂರ್ಣ ನಾಶವಾಗಿರಬೇಕು. ಆಗ ಮಾತ್ರ ಎಲ್ಲ ಭಗವಂತನಿಗಾಗಿ ಎಂಬ ಮಧುರಗಾನಪಲ್ಲವಿ ಅವನ ಜೀವನದಿಂದ ಹೊರಹೊಮ್ಮುವುದು. ಹನುಮಂತನು ಶ್ರೀರಾಮಚಂದ್ರನನ್ನು ನೋಡುತ್ತಿದ್ದುದು ಹೀಗೆ. ಹನುಮಂತನಿಗೆ ರಾಮ ಇಷ್ಟದೇವನಾಗುವನು. ಶ್ರೀರಾಮನ ಆಣತಿಯನ್ನು ಪರಿಪಾಲಿಸುವುದೊಂದೇ ಇವನ ಜೀವನದ ಮಹೋದ್ದೇಶ. ಅದಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆ ಎರೆಯುವನು. ವೀರಾಧಿವೀರನಾದರೂ ರಾಮಾಯಣದಲ್ಲಿ ಬರುವ ಹನುಮಂತ ನಿಗರ್ವಿ, ವಿನಯಶಾಲಿ. ಅಶೋಕವನದಲ್ಲಿ ದುಃಖದಿಂದ ಕೊರಗುತ್ತಿದ್ದ ಸೀತಾದೇವಿಯನ್ನು ನೋಡಲು ಹೋದಾಗ ಶ್ರೀರಾಮಚಂದ್ರನ ಸುದ್ದಿಯನ್ನು ಅವಳಿಗೆ ಹೇಳಿದನು. ಇನ್ನೇನು ಶ್ರೀರಾಮನು ಬೇಗ ಬರುವನು, ನಿನ್ನನ್ನು ಸೆರೆಯಿಂದ ಬಿಡಿಸುವನು' ಎಂದು ಧೈರ್ಯ ಹೇಳಿದನು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಬರುವವರ ಸಾಹಸದಲ್ಲಿ ನಂಬಿಕೆ ಇರಲಿಲ್ಲ. ಆಕೆಗೆ ಹನುಮಂತ, ಸುಗ್ರೀವನ ಸೈನ್ಯದಲ್ಲಿ ತಾನೇ ಕೊನೆಯವನೆಂದು ಹೇಳುತ್ತಾನೆ. ಯಾರು ವೀರಾಧಿವೀರನೋ, ಜಗಜಟ್ಟಿಯೋ, ಅಂತಹವನು ಹಾಗೆ ಹೇಳಿಕೊಳ್ಳಬೇಕಾದರೆ ಅಹಂಕಾರದಿಂದ ಆ ವ್ಯಕ್ತಿ ಎಷ್ಟು ಪಾರಾಗಿರುವನು ಎಂಬುದನ್ನು ಊಹಿಸಬಹುದು. ಪರಮಹಂಸರು ದಾಸ್ಯಭಾವವನ್ನು ಹನುಮಂತನಂತೆ ಅಭ್ಯಾಸ ಮಾಡಿದರು; ಗೆಡ್ಡೆ ಗೆಣಸುಗಳನ್ನು ತಿಂದು, ಮರದ ಮೇಲೆ ನೆಗೆದಾಡುತ್ತಿದ್ದರಂತೆ ಆ ಕಾಲದಲ್ಲಿ. ಶ್ರೀರಾಮ ಮತ್ತು ಸೀತಾದೇವಿಯ ದರ್ಶನವನ್ನು ಆ ಭಾವದಲ್ಲಿ ಇದ್ದಾಗ ಪಡೆದರು. ಸಖ್ಯಭಾವದಲ್ಲಿ ಭಕ್ತನಿಗೆ ಭಗವಂತನೊಡನೆ ಒಂದು ನಿಕಟತೆ ಕಾಣುವುದು. ದೊಡ್ಡವನು ಚಿಕ್ಕವನು ಎಂಬ ಭಾವ ಮಾಯವಾಗುವುದು. ಭಗವಂತನಲ್ಲಿರುವ ಶಕ್ತಿಗಾಗಿ ಸ್ನೇಹಿತ ಅವನನ್ನು ಪ್ರೀತಿಸುವುದಿಲ್ಲ. ಕೇವಲ ಪ್ರೀತಿಗಾಗಿ ಪ್ರೀತಿಸುತ್ತಾನೆ. ಅನ್ಯೋನ್ಯ ಸಲಿಗೆ ಹೆಚ್ಚುವುದು. ಕೃಷ್ಣಸುಧಾಮರ ಸಂಬಂಧ ಸಖ್ಯಭಾವಕ್ಕೆ ಉದಾಹರಣೆ. ಶ್ರೀರಾಮಕೃಷ್ಣರು ಈ ಭಾವದಲ್ಲಿಯೂ ಕೆಲವು ಕಾಲ ತಲ್ಲೀನರಾಗಿದ್ದರು. ವಾತೃಲ್ಯಭಾವದಲ್ಲಿ ಭಕ್ತ ಭಗವಂತನನ್ನು ತನ್ನ ಮಗುವೆಂದು ತಿಳಿಯುವನು. ತಾಯಿಗೆ ಮಗುವಿನ ಮೇಲೆ ಇರುವ ಪ್ರೀತಿಯಲ್ಲಿ ಸಂಪೂರ್ಣ ನಿಃಸ್ವಾರ್ಥತೆ ಕಾಣುವುದು. ಮಗುವಿನಿಂದ ತಾಯಿ ಏನನ್ನೂ ಅಪೇಕ್ಷಿಸುವುದಿಲ್ಲ. ಸದಾ ಮಗುವಿನ ಹಿತಕ್ಕೆ ತನ್ನ ನಿದ್ದೆ ಸುಖ ಎಲ್ಲವನ್ನೂ ತೆರಲು ಸಿದ್ಧಳಾಗಿರುವಳು. ಎಲ್ಲಿಯವರೆಗೂ ಲಾಭದ ಅಪೇಕ್ಷೆ ಸ್ವಲ್ವವಾದರೂ ಇದೆಯೋ, ಅಲ್ಲಿಯದರೆಗೆ ಇಂತಹ ಪ್ರೇಮ ಸಾಧ್ಯವಿಲ್ಲ. ಯಶೋಧೆ ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಕೌಸಲ್ಯೆ ರಾಮನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿದ್ದಾಗ ದೇವರನ್ನು ರಾಮಲಾಲನೆಂದು ಪ್ರೀತಿಸಿದರು. ಮಧುರಭಾವದಲ್ಲಿ ಭಕ್ತಭಗವಂತರಿಗೆ ಸತಿಪತಿಯರ ಸಂಬಂಧವಿರುವುದು. ಮಾನವ ಪ್ರೇಮದಲ್ಲೆಲ್ಲ ಅತ್ಯಂತ ನಿಕಟವಾದುದು ಸತಿಪತಿಯರದು. ಗೋಪಿಯರು ಶ್ರೀಕೃಷ್ಣನನ್ನು ಪ್ರೀತಿಸಿದ ರೀತಿ ಇದು. ಶ್ರೀರಾಮಕೃಷ್ಣರು ಈ ಭಾವದಲ್ಲಿರುವಾಗ ಹೆಂಗಸಿನಂತೆ ಸೀರೆ ಉಟ್ಟು, ಆಭರಣ ತೊಟ್ಟುಕೊಂಡು ರಾಧಾರಮಣನನ್ನು ಸೇವಿಸಿದರು. ಶ್ರೀರಾಮಕೃಷ್ಣರ ಭಾವಜೀವನ ಸರ್ವತೋಮುಖವಾದುದು. ಯಾವ ಯಾವ ಭಾವದ ಮೂಲಕ ಭಗವಂತನನ್ನು ನೋಡಬಹುದೋ ಅದರ ಮೂಲಕ ನೋಡಿದರು. ಒಂದೊಂದು ಸಲ ಒಂದೊಂದು ಭಾವದಲ್ಲಿ ತಲ್ಲೀನರಾಗುತ್ತಿದ್ದರು. ಸಗುಣೋಪಾಸನೆಯಲ್ಲಿ ಮಾತೃಭಾವಕ್ಕೆ ಅವಕಾಶವಿದೆ. ಆದರೆ ಸಗುಣವೆಂಬ ಅಲೆಗಳ ಹಿಂದೆ, ನಿರ್ಗುಣ ನಿರಾಕಾರದ ಕಡಲಿದೆ. ಶ್ರೀರಾಮಕೃಷ್ಣರು ತೋತಾಪುರಿ ಎಂಬ ಸನ್ಯಾಸಿಯಿಂದ ಅದ್ವೈತ ದೀಕ್ಷೆಯನ್ನು ಪಡೆದರು. ನಾಮರೂಪಗಳನ್ನು ಮೀರಿ, ಕಾರ್ಯಕಾರಣ ಜಗತ್ತನ್ನು ಅತಿಕ್ರಮಿಸಿ, ನಿರಾಕಾರ ಬ್ರಹ್ಮದ ಕಡಲಿಗೆ ಧುಮುಕಿ ತಲ್ಲೀನರಾದರು. ಆ ಸ್ಥಿತಿಯಲ್ಲಿಯೇ ಅವರು ಬಹುಕಾಲವಿದ್ದರು. ಕ್ರಮೇಣ ಜಗನ್ಮಯಿ ಅವರ ಮನಸ್ಸನ್ನು ಕೆಳಗಿಳಿಸಿ ಸಾಕಾರ ನಿರಾಕಾರಗಳ ಮಧ್ಯೆ ಅವರನ್ನು ಬಿಟ್ಟು, ನೀನು ಇಲ್ಲೇ ಇರು ಎಂದು ಆಜ್ಞಾಪಿಸಿದಳಂತೆ. ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದರು. ಆದರೆ ಅವರ ಭಕ್ತಿಯ ಹಿನ್ನಲೆಯಾಗಿ ಯಾವಾಗಲೂ ಜ್ಞಾನವಿರುತ್ತಿತ್ತು. ಸ್ವಾಮಿ ವಿವೇಕಾನಂದರೇ, ಶ್ರೀರಾಮಕೃಷ್ಣರು ಹೊರನೋಟಕ್ಕೆ ಭಕ್ತರು, ಒಳಗೆ ಜ್ಞಾನಿಗಳು ಎನ್ನುತ್ತಿದ್ದರು. ಹೆಚ್ಚು ಮಾನವರು ಭಾವಜೀವಿಗಳು. ಯುಕ್ತಿ ಭಾವವನ್ನು ಆಶ್ರಯಿಸಿ ಬೆಳೆಯುವುದು. ಆದಕಾರಣವೇ ಶ್ರೀರಾಮಕೃಷ್ಣರು ಭಕ್ತಿಗೆ ಹೆಚ್ಚು ಮಾನ್ಯತೆ ಕೊಟ್ಟರು. ಪರಮಹಂಸರು ಅಷ್ಟೇ ಪ್ರಾಧಾನ್ಯವನ್ನು ಕರ್ಮಯೋಗಕ್ಕೆ ಕೊಟ್ಟರು. ಒಂದು ದಿನ ಭಕ್ತನೊಬ್ಬನು ಶ್ರೀರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಬೇಕಾದಷ್ಟು ಪರರಿಗೆ ಉಪಕಾರ ಮಾಡಬೇಕೆಂದು ಹೇಳುತ್ತಿದ್ದನು. ಇದನ್ನು ಕೇಳಿ ಶ್ರೀರಾಮಕೃಷ್ಣರು "ಉಪಕಾರದ ಮಾತನ್ನು ಆಡಬೇಡ, ದೇವರೊಬ್ಬನೇ ಇತರರಿಗೆ ಉಪಕಾರ ಮಾಡಬಲ್ಲ. ಸಾಧಾರಣ ಜೀವಿಗಳು ಇತರರಿಗೆ ಸೇವೆ ಮಾತ್ರ ಮಾಡಬಲ್ಲರು. ಯಾರು ಬ್ರಹ್ಮಾಂಡವನ್ನು ಸೃಷ್ಟಿಸಿ, ಪಶುಪಕ್ಷಿ ಕ್ರಿಮಿಕೀಟಗಳಿಗೆ ಆಹಾರವನ್ನು ಒದಗಿಸಿರುವನೋ ಅವನು, ಕೆಲವರಿಗೆ ಸಹಾಯ ಮಾಡಲಾಗದೆ ಅವರಿಗೆ ನೀವು ಸಹಾಯಮಾಡಿ ಎಂದು ಹೇಳಲಿಲ್ಲ. ಉಪಕಾರವಲ್ಲ, ಸೇವೆ" ಎಂದರು. ಇದನ್ನು ಸ್ವಾಮಿ ವಿವೇಕಾನಂದರು ಆಲಿಸಿ ನಂತರ ಕೆಲವು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ, "ಇಂದು ಪರಮಹಂಸರ ಬಾಯಿಯಿಂದ ದೊಡ್ಡ ಸತ್ಯವನ್ನು ಕೇಳಿದೆ. ನಾನು ಬದುಕಿದ್ದರೆ ಇದನ್ನು ಎಲ್ಲರಿಗೂ ಬೋಧಿಸುವೆನು" ಎಂದರು. ಅನಂತರ ಅವರು ಬೋಧಿಸಿದ ಕರ್ಮಯೋಗವೆಲ್ಲ 'ಉಪಕಾರವಲ್ಲ, ಸೇವೆ' ಎಂಬ ಶ್ರೀರಾಮಕೃಷ್ಣರ ಒಂದು ಸೂತ್ರದ ಬಾಷ್ಯ ಶ್ರೀರಾಮಕೃಷ್ಣರು ಎಲ್ಲ ಸಾಧನೆಗಳನ್ನೂ ಮಾಡಿ ಸಿದ್ಧಿ ಎಂಬ ಅಮೃತವನ್ನು ತಮ್ಮ ಹೃದಯದಲ್ಲಿ ಶೇಖರಿಸಿಟ್ಟುಕೊಂಡರು. ಆದರೆ ಅಮೃತವನ್ನು ತಾವು ಮಾತ್ರ ಸವಿದು ಧನ್ಯರಾಗಬಯಸಲಿಲ್ಲ. ಜಗದ ಕಷ್ಟನಷ್ಟಗಳಲ್ಲಿ ಸಿಕ್ಕಿ ನೊಂದವರಿಗೆಲ್ಲ ಅದನ್ನು ಹಂಚಿ ಅವರನ್ನೂ ಸುಖಿಗಳನ್ನಾಗಿ ಮಾಡಬಯಸಿದರು. ಆನಂದವನ್ನು ಯಾವಾಗಲೂ ಮತ್ತೊಬ್ಬನಿಗೆ ಹಂಚಿದಾಗ ಅದು ಇಮ್ಮಡಿಸುಪುದು. ಅದಕ್ಕಾಗಿಯೆ ಪರಮಹಂಸರು ಶಿಷ್ಯರಿಗಾಗಿ ಕಾದುಕುಳಿತರು. ಶ್ರೀರಾಮಕೃಷ್ಣರ ತಪೋಶಕ್ತಿ ಹಲವು ಪಕ್ವಕ್ಕೆ ಬಂದ ಸಾಧಕರನ್ನು ತನ್ನೆಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಪ್ರತಿದಿನವೂ ಸಂಜೆ ತಮ್ಮ ಕೋಣೆಯ ಮೇಲಿನ ಮಹಡಿಗೆ ಹೋಗಿ ಕಲ್ಕತ್ತೆಯ ಕಡೆ ನೋಡುತ್ತ "ಎಲ್ಲಿ ನನ್ನ ಮಕ್ಕಳು ಇನ್ನೂ ಬರಲಿಲ್ಲವಲ್ಲಾ" ಎಂದು ದುಃಖಿಸುತ್ತಿದ್ದರು. ಜಗನ್ಮಾತೆಯನ್ನು ಕಾಣಲು ಮೊದಲು ಎಷ್ಟು ತವಕಪಟ್ಟರೋ ಅಷ್ಟೇ ತವಕಪಟ್ಟರು ಶಿಷ್ಯರ ಆಗಮನಕ್ಕಾಗಿ. ಈ ಮಹಾ ಕರೆ ಅವ್ಯಕ್ತವಾದರೂ ಹಲವು ಜೀವಿಗಳನ್ನು ಮುಟ್ಟಿ ಒಬ್ಬೊಬ್ಬರನ್ನಾಗಿ ಅವರ ಕಡೆಗೆ ಸೆಳೆಯಿತು. ಶ್ರೀರಾಮಕೃಷ್ಣರು ಒಬ್ಬ ನುರಿತ ಗುರುಗಳು, ಜಗದ ರಹಸ್ಯವನ್ನು ಆರಿತವರು. ಪ್ರತಿಯೊಂದು ವ್ಯಕ್ತಿಯಲ್ಲಿಯೂ ಒಂದು ವೈಶಿಷ್ಟ್ಯ ಇದೆ. ಅದಕ್ಕೆ ಭಂಗ ಬರದಂತೆ ತರಪೇತು ಕೊಡುತ್ತಿದ್ದರು. ಬಂದ ಶಿಷ್ಯರ ನ್ಯೂನಾತಿರೇಕಗಳನ್ನು ತಿದ್ದಿ, ಅವರೆಲ್ಲರನ್ನೂ ಭಗವಂತನ ಪೂಜೆಗೆ ಯೋಗ್ಯವಾದ ಪುಷ್ಪವನ್ನಾಗಿ ಮಾಡಿದರು. ಶ್ರೀರಾಮಕೃಷ್ಣರಿಗೆ ಶಿಷ್ಯರ ಮೇಲೆ ಇದ್ದ ಪ್ರೀತಿ ಅಸಾಧಾರಣವಾದುದು. ಮೊದಲು ಶಿಷ್ಯರ ಎದೆಗೆ ತಟ್ಟಿದ್ದು ಪರಮಹಂಸರಲ್ಲಿದ್ದ ಆಧ್ಯಾತ್ಮಿಕ ಸತ್ಯಗಳಲ್ಲ, ಅವರ ಅಪಾರ ಪ್ರೇಮ. ಆ ಪ್ರೇಮಮಹಾಸ್ತ್ರ ಎಲ್ಲರನ್ನೂ ಒಲಿಸಿಕೊಂಡಿತು. ಅವರಲ್ಲಿ ಪ್ರಖ್ಯಾತರಾದ ವಿವೇಕಾನಂದರಂತಹ ಹಲವಾರು ಶಿಷ್ಯರು ತಾವು ಪರಮಹಂಸರ ಪ್ರೇಮದ ದಾಸರೆಂದು ಹೇಳಿಕೊಳ್ಳುತ್ತಿದ್ದರು. ವಿಮರ್ಶಾತ್ಮಕ ಬುದ್ದಿ ಎಲ್ಲರಲ್ಲಿಯೂ ಬೆಳೆಯುವಂತೆ ಮಾಡುತ್ತಿದ್ದರು. ಯಾವುದನ್ನೂ ವಿಚಾರ ಮಾಡಿದಲ್ಲದೆ ಪರೀಕ್ಷಿಸಿದಲ್ಲದೆ ಒಪ್ಪಿಕೊಳ್ಳಿಬೇಡ ಎನ್ನುತ್ತಿದ್ದರು. ಅವರ ಬೋಧನೆ ಮತು ಜೀವನವನ್ನು ಹಲವರು ಶಿಷ್ಯರು ಹಲವು ರೀತಿಯಲ್ಲಿ ಪರೀಕ್ಷಿಸಿದರು. ಶಿಷ್ಯರು ತಮ್ಮನ್ನು ಪರೀಕ್ಷಿಸಿದರೆ ಕೋಪತಾಳದೆ ಆನಂದದಿಂದ ಅದನ್ನು ನೋಡುತ್ತಿದ್ದರು. ಕಾಮಕಾಂಚನತ್ಯಾಗ ಇವರ ಉಪದೇಶದ ಪಲ್ಲವಿಯಾಗಿತ್ತು. ಒಂದು ದಿನ, ನರೇಂದ್ರ (ಮುಂದೆ ಸ್ವಾಮಿ ವಿವೇಕಾನಂದರು) ಶ್ರೀರಾಮಕೃಷ್ಣರು ಹೊರಗೆ ಹೋದ ಸಮಯದಲ್ಲಿ ಒಂದು ನಾಣ್ಯವನ್ನು ಅವರ ಹಾಸಿಗೆಯ ಕೆಳಗೆ ಇಟ್ಟರು. ಶ್ರೀರಾಮಕೃಷ್ಣರು ಬಂದು ಹಾಸಿಗೆಯ ಮೇಲೆ ಕುಳಿತೊಡನೆಯೇ ಚೇಳು ಕುಟುಕಿದಂತೆ ಆಯಿತು. ಹಾಸಿಗೆಯನ್ನು ಹುಡುಕಿ ನೋಡಿದಾಗ ಒಂದು ರೂಪಾಯಿ ಬಿತ್ತು. ಪರಮಹಂಸರ ತ್ಯಾಗಬುದ್ಧಿ ಅಷ್ಟು ಆಳಕ್ಕೆ ಹೋಗಿತ್ತು. ಮತ್ತೊಬ್ಬ ಶಿಷ್ಯನು ಶ್ರೀರಾಮಕೃಷ್ಣರು ಅರ್ಧರಾತ್ರಿ ಎದ್ದು ಗಂಗಾನದಿಯ ತೀರಕ್ಕೆ ಹೋಗಿದ್ದಾಗ ಇವರು ಇಂತಹ ಅವೇಳೆಯಲಿ ಎದ್ದು ಎಲ್ಲಿಗೆ ಹೋಗುತ್ತಾರೆ? ತಮ್ಮ ಪತ್ನಿ ಶಾರದಾದೇವಿಯರ ಕೋಣೆ ಕಡೆ ಹೋಗಬಹುದೆ ! ಎಂದು ತಿಳಿಯಲು ಅಲ್ಲೇ ಹೊಂಚುಹಾಕುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ ಶ್ರೀರಾಮಕೃಷ್ಣರು ಶಾರದಾದೇವಿಯವರ ಕೋಣೆಯ ಕಡೆ ಹೋಗದೆ ಸೀದಾ ತಮ್ಮ ರೂಮಿನ ಕಡೆ ಬಂದರು. ಹೊಂಚು ಕಾಯುತ್ತಿದ್ದ ಶಿಷ್ಯ ಇವರನ್ನು ಅನುಮಾನಿಸಿದ್ದಕ್ಕಾಗಿ ನಾಚಿ ಪರಮಹಂಸರಿಗೆ ನಮಸ್ಕಾರ ಕ್ಷಮಾಪಣೆ ಕೇಳಿದನು. ಆಗ ಶ್ರೀರಾಮಕೃಷ್ಣರು ಸಾಧುವನ್ನು ಹಗಲು ಪರೀಕ್ಷೆ ಮಾಡಿದರೆ ಸಾಲದು, ರಾತ್ರಿಯೂ ಪರೀಕ್ಷಿಸಬೇಕು ಎಂದರು. ಭಕ್ತಿಯ, ಧರ್ಮದ ಹೆಸರಿನಲ್ಲಿ ಮೂರ್ಖನಾದರೆ ಅದನ್ನು ಅವರು ಸಹಿಸುತ್ತಿರಲಿಲ್ಲ. ಒಬ್ಬ ಶಿಷ್ಯನಿಗೆ ಪೇಟೆಯಿಂದ ಸಾಮಾನು ತರುವುದಕ್ಕೆ ಹೇಳಿದರು. ಆತನು ಸರಿಯಾಗಿ ಪರೀಕ್ಷೆ ಮಾಡದೆ ತಂದನು. ಆಗ ಶ್ರೀರಾಮಕೃಷ್ಣರು, ಶಿಷ್ಯರು ವ್ಯಾಪಾರಕ್ಕೆ ಅಂಗಡಿಗೆ ಹೋದರೆ ಸರಿಯಾಗಿ ಪರೀಕ್ಷೆ ಮಾಡಬೇಕು, ಅಂಗಡಿಯಲ್ಲಿ ವರ್ತಕರು ಧರ್ಮಕ್ಕಾಗಿ ಅಲ್ಲ ಇರುವುದು ಎಂದು ಬುದ್ಧಿ ಹೇಳಿದರು. ಸಾಮಾನನ್ನು ಕೊಂಡಾದ ಮೇಲೆ ಕೊಸರು ಕೇಳುವುದನ್ನು ಮರೆಯಬಾರದು ಎಂದರು. ಅಸಡ್ಡೆ, ಮರೆವು ಇವು ಯಾವ ರೂಪಿನಲ್ಲಿ ಬಂದರೂ ಅವರು ಸಹಿಸುತ್ತಿರಲಿಲ್ಲ . "ನಾನು ಮತ್ತೊಂದು ಕ್ಷಣದಲ್ಲಿ ಪ್ರಪಂಚವನ್ನು ಮರೆತು ಸಮಾಧಿಯಲ್ಲಿ ಮಗ್ನನಾಗುತ್ತೇನೆ. ಆದರೂ ಯಾವುದನ್ನೂ ಮರೆಯುವುದಿಲ್ಲ. ನಿಮಗೇಕೆ ಇಂತಹ ಮರೆವು. ಇದು ಆಧ್ಯಾತ್ಮಿಕ ಜೀವನದ ಕುರುಹಲ್ಲ" ಎನ್ನುತ್ತಿದ್ದರು. ಒಬ್ಬ ಶಿಷ್ಯನು ತುಂಬ ಮೃದು ಸ್ವಭಾವದವನು. ಒಬ್ಬರು ಗಟ್ಟಿ ಮಾತನ್ನಾಡಿದರೂ ಸಹಿಸುವುದಕ್ಕೆ ಆಗುತ್ತಿರಲಿಲ್ಲ. ಆತ ಒಂದು ದಿನ ದೋಣಿಯಲ್ಲಿ ಬರುತ್ತಿದ್ದಾಗ ಕೆಲವರು ಶ್ರೀರಾಮಕೃಷ್ಣರನ್ನು ಹಾಸ್ಯ ಮಾಡುತ್ತಿದ್ದರು. ಆತ ಇದನ್ನು ಸುಮ್ಮನೆ ಕೇಳುತ್ತಿದ್ದನು. ದಕ್ಷಿಣೇಶ್ವರಕ್ಕೆ ಬಂದ ಮೇಲೆ ಈ ಸಮಾಚಾರವನ್ನು ಶ್ರೀರಾಮಕೃಷ್ಣರಿಗೆ ಹೇಳಿದನು. ಅವರು, "ಏನು ಗುರುನಿಂದೆ ಆಗುತ್ತಿದ್ದರೂ ನೀನು ಸುಮ್ಮನೆ ಕೇಳುತ್ತಿದ್ದೆಯಾ? ಆ ಸ್ಥಳವನ್ನು ಬಿಟ್ಟಾದರೂ ಬರಬೇಕಾಗಿತ್ತು" ಎಂದರು. ಮತ್ತೊಬ್ಬ ಶಿಷ್ಯನ ಸ್ವಭಾವ ಉಗ್ರ. ಆತನ ಜೀವನ ಮಾಗುವುದಕ್ಕೆ ಸ್ವಲ್ವ ಮೃದುತ್ವ ಬರಬೇಕಾಗಿತ್ತು . ಅಂತಹ ಶಿಷ್ಯನೊಬ್ಬನು ದೋಣಿಯಲ್ಲಿ ಬರುತ್ತಿದ್ದಾಗ ಹಿಂದಿನಂತೆಯೇ ಕೆಲವರು ಶ್ರೀರಾಮಕೃಷ್ಣರನ್ನು ದೂರುತ್ತಿದ್ದರು. ಇದನ್ನು ಕೇಳಿ ತುಂಬ ಕೋಪತಾಳಿ ದೋಣಿಯ ಒಂದು ಕಡೆಗೆ ಹೋಗಿ, ನೀವು ನನ್ನ ಗುರುನಿಂದೆಯನ್ನು ನಿಲ್ಲಿಸದೆ ಇದ್ದರೆ ದೋಣಿಯನ್ನು ಮುಳುಗಿಸುತ್ತೇನೆ ಎಂದು ದೋಣಿಯನ್ನು ಅಲ್ಲಾಡಿಸತೊಡಗಿದನು. ದೋಣಿಯಲ್ಲಿದ್ದವರು ಅಂಜಿ ಸುಮ್ಮನಾದರು. ಶ್ರೀರಾಮಕೃಷ್ಣರಿಗೆ ಈ ಸಮಾಚಾರವನ್ನು ಹೇಳಿದ ಮೇಲೆ, ಅವರು "ಕೋಪದಿಂದ ನೀನು ಎಂತಹ ಅನಾಹುತ ಮಾಡುತ್ತಿದ್ದೆ, ಅವರು ಬೈದರೆ ನನಗೇನಾಯಿತು" ಎಂದರು. ಶ್ರೀರಾಮಕೃಷ್ಣರು ಪ್ರತಿಯೊಬ್ಬರ ಶೀಲವನ್ನು ಪರೀಕ್ಷಿಸಿ ಅವರಿಗೆ ತಕ್ಕ ಸಲಹೆಯನ್ನು ಕೊಡುತ್ತಿದ್ದರು. ಶ್ರೀರಾಮಕೃಷ್ಣರು ಪ್ರಪಂಚವನ್ನು ಬಿಟ್ಟ ಕೆಲವು ಸನ್ಯಾಸಿಗಳಿಗೆ ಮಾತ್ರ ಆದರ್ಶಪ್ರಾಯವಾಗಲು ಬಯಸಲಿಲ್ಲ. ಗೃಹಸ್ಥರಿಗೂ ಆದರ್ಶಪ್ರಾಯರಾಗಿದ್ದರು. ಗೃಹಸ್ಥರಿಗೂ ಸನ್ಯಾಸಿಗೆ ಸರಿಸಮನಾದ ಜೀವನವನ್ನು ನಡೆಸಲು ಸಾಧ್ಯವೆಂದು ತೋರಿರುವರು. ಶ್ರೀಶಾರದಾದೇವಿಗೆ ಹದಿನೆಂಟು ವರುಷವಾದಾಗ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಬಂದರು. ಶ್ರೀರಾಮಕೃಷ್ಣರು ಆದರದಿಂದ ಅವರನ್ನು ಬರಮಾಡಿಕೊಂಡು ಉಪಚರಿಸಿದರು. ಅಷ್ಟು ಹೊತ್ತಿಗೆ ಮಥುರನಾಥನು ತೀರಿಹೋಗಿದ್ದನು. "ಆತನಿದ್ದಿದ್ದರೆ ನಿನಗೆ ಇಲ್ಲಿ ಇಳಿದುಕೊಳ್ಳುವುದಕ್ಕೆ ಬೇಕಾದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದನು" ಎಂದರು. ಶಾಸ್ತ್ರೀಯವಾಗಿ ಶ್ರೀರಾಮಕೃಷ್ಣರು ಶ್ರೀಶಾರದಾದೇವಿಯನ್ನು ಮದುವೆಯಾಗಿದ್ದರು. ಆದಕಾರಣ ತಾವು ಯಾವುದನ್ನು ಮಾಡಬೇಕಾದರೂ ಅವರ ಒಪ್ಪಿಗೆ ಮತ್ತು ಸಹಾನುಭೂತಿ ಇಲ್ಲದೆ ಮಾಡಬಯಸಲಿಲ್ಲ. ಬಲಾತ್ಕಾರವಾಗಿ ಏನೊಂದನ್ನೂ ಅವರು ಶಾರದಾದೇವಿಯವರ ಮೇಲೆ ಹೇರಲಿಲ್ಲ. ಶ್ರೀರಾಮಕೃಷ್ಣರು ಶಾರದಾದೇವಿಯವರಿಗೆ, "ನನಗೆ ಎಲ್ಲಾ ಸ್ತ್ರೀಯರೂ ಜಗನ್ಮಾತೆಯ ಪ್ರತಿಬಿಂಬದಂತೆ ಕಾಣುವರು. ನಾನು ನಿನ್ನಲ್ಲಿಯೂ ಅದನ್ನೇ ನೋಡುತ್ತೇನೆ. ಆದರೆ ನೀನು ಇಂದ್ರಿಯ ಪ್ರಪಂಚದಲ್ಲಿ ಇರಲು ಇಚ್ಛೆಪಟ್ಟರೆ ಅದಕ್ಕೂ ನಾನು ಸಿದ್ಧನಾಗಿರುವೆ. ನಿನಗೆ ಯಾವುದು ಬೇಕು ಹೇಳು" ಎಂದರು. ಆದರೆ ಶ್ರೀಶಾರದಾದೇವಿಯವರು ಪರಮಹಂಸರಿಗೆ ತಕ್ಕ ಸತಿ. ತಾವೂ ಅವರಂತೆಯೇ ಆಗಲು ಬಯಸಿದರು, ಇದನ್ನು ಕೇಳಿ ಶ್ರೀರಾಮಕೃಷ್ಣರಿಗೆ ಅತ್ಯಾನಂದವಾಯಿತು. ಆಜನ್ಮ ಬ್ರಹ್ಮಚರ್ಯ ವ್ರತಧಾರಿಗಳಾಗಿ ಇಬ್ಬರೂ ಜಗನ್ಮಾತೆಯ ಕೆಲಸಕ್ಕೆ ಟೊಂಕಕಟ್ಚಿ ನಿಂತರು. ಎಂದು ಶ್ರೀಶಾರದಾದೇವಿಯವರು ಪ್ರಾಪಂಚಿಕ ಸುಖವನ್ನು ತೊರೆದು ತಾವು ಅವರಂತೆಯೇ ಜಗನ್ಮಾತೆಯ ಭಕ್ತರಾಗಲು ಬಯಸಿದರೋ ಅಂದಿನಿಂದಿಲೇ ಶ್ರೀರಾಮಕೃಷ್ಣರು ಸತಿಯ ಜೀವನದ ಜವಾಬ್ದಾರಿಯನ್ನೆಲ್ಲ ತೆಗೆದುಕೊಂಡರು. ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು. ಪೂಜೆ, ಜಪ, ತಪ, ಸಾಧನೆಗಳನ್ನು ಹೇಗೆ ಮಾಡಬೇಕು ಎಂಬುದರಿಂದ ಹಿಡಿದು ನಿರ್ವಿಕಲ್ಪ ಸಮಾಧಿಯವರೆಗೆ ಅವರನ್ನು ಕರೆದುಕೊಂಡು ಹೋದರು. ಶ್ರೀರಾಮಕೃಷ್ಣರ ಕೀರ್ತಿ ಹಬ್ಬುತ್ತಾ ಬಂದಿತು. ಕಲ್ಕತ್ತೆಯ ಅನೇಕ ಪ್ರಮುಖ ವ್ಯಕ್ತಿಗಳು ಇವರನ್ನು ನೋಡಲು ಬರುತ್ತಿದ್ದರು. ಕೆಲವು ವೇಳೆ ಶ್ರೀರಾಮಕೃಷ್ಣರೇ ಅವರನ್ನು ನೋಡಲು ಹೋಗುತ್ತಿದ್ದರು. ಕೇಶವಚಂದ್ರಸೇನ ಬ್ರಹ್ಮ ಸಮಾಜದ ಮುಂದಾಳು, ಪ್ರಖ್ಯಾತ ವಾಗ್ಮಿ, ಪರಮಹಂಸರ ಹತ್ತಿರದ ಭಕ್ತನಾದ. ಒಂದು ದಿನ ಶ್ರೀರಾಮಕೃಷ್ಣರೇ ಈಶ್ವರಚಂದ್ರ ವಿದ್ಯಾಸಾಗರನನ್ನು ನೋಡುವುದಕ್ಕೆ ಹೋದರು. ಘನವಿದ್ವಾಂಸನಾದ ಈಶ್ವರಚಂದ್ರ ಪರಮಹಂಸರ ಬಾಯಿಯಿಂದ ಬರುವ ಮಾತನ್ನು ಕೇಳಿದನು. ಶಾಸ್ತ್ರಗಳ ಜಟಿಲ ಸಮಸ್ಯೆಯನ್ನು ಕೂಡ ಇವರ ಮಾತು ಬಗೆಹರಿಸಬಲ್ಲದೆಂದು ತಿಳಿದನು. ಮಹರ್ಷಿ ದೇವೇಂದ್ರನಾಥ ಠಾಕೂರರನ್ನು ನೋಡಲು ಶ್ರೀರಾಮಕೃಷ್ಣರೇ ಒಂದು ದಿನ ಮಥುರನಾಥನೊಂದಿಗೆ ಹೋದರು. ದಯಾನಂದ ಸರಸ್ವತಿ ಶ್ರೀರಾಮಕೃಷ್ಣರನ್ನು ನೋಡುವುದಕ್ಕೆ ದಕ್ಷಿಣೇಶ್ವರಕ್ಕೆ ಬಂದಿದ್ದರು. ಮುಂದೆ ಪ್ರಪಂಚವನ್ನೇ ವಿಸ್ಮಯಗೊಳಿಸಿದ ಸ್ವಾಮಿ ವಿವೇಕಾನಂದ ಮುಂತಾದ ಶಿಷ್ಯರು ಆಗ ಅನಾಮಧೇಯವಾಗಿ ಬಂದು ಹೋಗುತ್ತಿದ್ದರು. ಶ್ರೀರಾಮಕೃಷ್ಣರಿಗೆ ಬಂದ ಶಿಷ್ಯರೊಡನೆ ಮಾತನಾಡಿ ಮಾತನಾಡಿ ಗಂಟಲಲ್ಲಿ ಹುಣ್ಣಾಯಿತು. ಮಾತನಾಡಬೇಡಿ ಎಂದು ವೈದ್ಯರು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಯಾರಾದರೂ ಬದ್ಧ ಜೀವಿಗಳು ಬಂದು ಇವರ ಹತ್ತಿರ ನಿಂತು ಭಗವಂತನ ವಿಷಯವನ್ನು ಎತ್ತಿದರೆ ಸಾಕು, ಯಾತನೆಯ ಗಮನವಿಲ್ಲದೆ ಮಾತನಾಡಲು ಮೊದಲು ಮಾಡುವರು. "ನನ್ನ ಮಾತಿನಿಂದ ಇತರರಿಗೆ ಶಾಂತಿ ಸಿಕ್ಕುವ ಹಾಗೆ ಇದ್ದರೆ ಇಂತಹ ಎಷ್ಟು ನೋವನ್ನಾದರೂ ಸಹಿಸುತ್ತೇನೆ. ಭವಜೀವಿಗಳ ಉದ್ಧಾರಕ್ಕೆ ಎಷ್ಟು ಜನ್ಮಗಳನ್ನಾದರೂ ಎತ್ತಲು ಸಿದ್ಧನಾಗಿರುವೆ !" ಎನ್ನುತ್ತಿದ್ದರು. ಶ್ರೀರಾಮಕೃಷ್ಣರೆಂಬ ದೇಹದ ಗೂಡಿನಲ್ಲಿ ವಾಸಿಸುತ್ತಿದ್ದ ಜೀವದ ಹಕ್ಕಿ 1886ನೇ ಇಸವಿ ಆಗಸ್ಟ್ 16ನೇ ತಾರೀಖು ಹಾರಿಹೋಯಿತು. ಅಂದಿನಿಂದ ವಿಶ್ವವಿಹಾರಿ ಆಯಿತು. ಅವರ ತಪಸ್ಸು ಸರ್ವತೋಮುಖಿವಾಗಿ ಬಹುಜನರ ಹಿತಕ್ಕೆ, ಬಹುಜನರ ಸುಖಕ್ಕೆ ಸಾಧಕವಾಯಿತು. ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಎಲ್ಲವನ್ನೂ ಪೂರ್ಣಮಾಡಿದರು, ಹಿಂದೂವಾಗಿಯೇ ಇದ್ದು ಎಲ್ಲ ಧರ್ಮಗಳ ಸಾಧನೆ ಮಾಡಬಹುದೆಂಬುದನ್ನು ತೋರಿದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯೆವೆಂಬುದು ಅವರ ಅನುಭವದ ಆಳದಿಂದ ಬಂದ ಮಾತು. ಹಿಂದೂಗಳು, ಮಹಮ್ಮದೀಯರು, ಕ್ರೈಸ್ತರು ಧರ್ಮದ ಹೆಸರಿನಲ್ಲಿ ವೈಮನಸ್ಸನ್ನು ಹರಡುವ ಬದಲು, ಶ್ರೀರಾಮಕೃಷ್ಣರಂತಹ ಒಂದು ಆದರ್ಶವಿದ್ದರೆ, ಹಿಂದೂಗಳು ಉತ್ತಮ ಹಿಂದೂಗಳಾಗುವರು, ಕ್ರೈಸ್ತರು ಉತ್ತಮ ಕ್ರೈಸ್ತರಾಗುವರು ಪ್ರಮುಖ ಶಿಷ್ಯರು ಸಂನ್ಯಾಸೀ ಭಕ್ತರು ಸ್ವಾಮಿ ವಿವೇಕಾನಂದ ಸ್ವಾಮಿ ಬ್ರಹ್ಮಾನಂದ ಸ್ವಾಮಿ ಪ್ರೇಮಾನಂದ ಸ್ವಾಮಿ ಯೋಗಾನಂದ ಸ್ವಾಮಿ ನಿರಂಜನಾನಂದ ಸ್ವಾಮಿ ಶಾರದಾನಂದ ಸ್ವಾಮಿ ಶಿವಾನಂದ ಸ್ವಾಮಿ ರಾಮಕೃಷ್ಣಾನಂದ ಸ್ವಾಮಿ ಅಭೇದಾನಂದ ಸ್ವಾಮಿ ಅಧ್ಭುತಾನಂದ ಸ್ವಾಮಿ ಅದ್ವೈತಾನಂದ ಸ್ವಾಮಿ ತ್ರಿಗುಣಾತೀತಾನಂದ ಸ್ವಾಮಿ ಅಖಂಡಾನಂದ ಸ್ವಾಮಿ ಸುಬೋಧಾನಂದ ಸ್ವಾಮಿ ವಿಜ್ಞಾನಾನಂದ ಗ್ರಹಸ್ಥ ಭಕ್ತರು ರಾಮಚಂದ್ರ ದತ್ತ ಸುರೇಂದ್ರನಾಥ ಮಿತ್ರ ಬಲರಾಮ ಬಸು ಮಹೇಂದ್ರನಾಥ ಗುಪ್ತ ನಾಗ ಮಹಾಶಯರು ಗಿರೀಶಚಂದ್ರ ಘೋಷ ಅಕ್ಷಯಕುಮಾರ ಸೇನ ದೇವೇಂದ್ರನಾಥ ಮಜುಮ್ದಾರ ಮಹಿಳಾ ಭಕ್ತರು ಗೌರಿ ಮಾ ಯೋಗಿನ್ ಮಾ ಗೋಲಾಪ್ ಮಾ ಗೋಪಾಲೇರ್‍ ಮಾ ಇವನ್ನೂ ನೋಡಿ ರಾಮಕೃಷ್ಣ ಮಿಷನ್ ಶಾರದಾದೇವಿ ವಿವೇಕಾನಂದ ಬಾಹ್ಯ ಸಂಪರ್ಕಗಳು ಶ್ರೀರಾಮಕೃಷ್ಣ ಮಠ, ಹಲಸೂರು - ಬೆಂಗಳೂರು ಶ್ರೀರಾಮಕೃಷ್ಣ ವಿದ್ಯಾಶಾಲೆ, ಮೈಸೂರು ವೇದಾಂತ ಕಾಲೇಜು / ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆ, ಮೈಸೂರು ಶ್ರೀರಾಮಕೃಷ್ಣ ರಾಮಕೃಷ್ಣ ಮಿಷನ್ ಪುಸ್ತಕಗಳು ಶ್ರೀರಾಮಕೃಷ್ಣ ವಚನವೇದ - ಮೂಲ: ಮಹೇಂದ್ರನಾಥ ಗುಪ್ತ (ಕಥಾಮೃತ) ಶ್ರೀರಾಮಕೃಷ್ಣ ಲೀಲಾಪ್ರಸಂಗ - ಸ್ವಾಮಿ ಶಾರದಾನಂದ ಯುಗಾವತಾರ ಶ್ರೀರಾಮಕೃಷ್ಣ (೧-೪) - ಸ್ವಾಮಿ ಪುರುಷೋತ್ತಮಾನಂದ ಗುರುದೇವ ಶ್ರೀರಾಮಕೃಷ್ಣ - ಕುವೆಂಪು ಶ್ರೀರಾಮಕೃಷ್ಣ ಪರಮಹಂಸರು - ಸ್ವಾಮಿ ಸೋಮನಾಥಾನಂದ ವರ್ಗ:ಭಾರತದ ಗಣ್ಯರು ವರ್ಗ:ಧರ್ಮ ವರ್ಗ:ಯೋಗಿಗಳು ಮತ್ತು ಸನ್ಯಾಸಿಗಳು ವರ್ಗ:ಅಧ್ಯಾತ್ಮ ವರ್ಗ:ಸಂತರು ವರ್ಗ:ಹಿಂದೂ ಧರ್ಮ